ಈ ಜಗತ್ತನ್ನೇ ನಾಶ ಮಾಡುವ ದೆವ್ವ

ಒಂದು ಅಚ್ಚರಿ ಎಂದರೆ, “ತನ್ನದು” ಎಂಬ ಶಬ್ಧವು ಈ ಜಗತ್ತನ್ನೇ ಆಳುತ್ತಿದೆ! ಹೌದು, ತಾಯಿಗೆ ತನ್ನ ಮಗುವು ತನ್ನದಾದುದರಿಂದ ಅದರ ಮೇಲೆ ಅತಿಯಾದ ಮಮತೆ, ಆದರೆ ನೆರೆಮನೆಯಲ್ಲಿ ಇರುವ ಮಗುವಿನ ಮೇಲೆ ಇಲ್ಲ. ಇದೇ ರೀತಿ ಸಂಬಂಧ, ಜಾತಿ, ಮನೆತನ, ಧರ್ಮ, ದೇಶ ಇತ್ಯಾದಿಗಳಾಗಿವೆ. ಆದರೆ, ಅದೇ ‘ತನ್ನದು’ ಭಾವನೆಯು ತನಗೆ ಅಥವಾ ತಮಗೆ ತಮ್ಮವರಿಂದಲೇ ತೊಂದರೆಯಾಗುವಲ್ಲಿ ಹೊರಟುಹೋಗುವುದು!! ಇಷ್ಟೆ, ಇಲ್ಲಿಗೆ ಶ್ರೀ ಸಾಮಾನ್ಯರ ಈ ಭೂಮಿಯ ಲೌಕಿಕ ಜೀವನದ ವಿವರಣೆ ಮುಗಿಯಿತು!!

ಇನ್ನು ಧಾರ್ಮಿಕ ಜೀವನದ ವಿವರಣೆಯೂ ಇದೇ ‘ತನ್ನದು’ ವಿನಲ್ಲೇ ಹೂತುಹೋಗಲ್ಪಟ್ಟಿದೆ!! ಇಲ್ಲಿ ಒಂದು ಅಂಶವನ್ನು ನಾವು ಮರೆಯಬಾರದು, ಅದೇನೆಂದರೆ, ನಾವು ಮಾತಾಡುತ್ತಿರುವುದು ಮಾನವನ ಜೀವನ ಮೌಲ್ಯಗಳ ಕುರಿತಾಗಿದೆ ಅದಲ್ಲದೆ ಆತನ ಪ್ರತ್ಯೇಕ ಜಮೀನು, ಅವನದೇ ಖಾತೆಯಲ್ಲಿರುವ ಹಣದ ಬಗ್ಗೆ ಅಲ್ಲ. ನಿಜವಾಗಿ ನೋಡಿದರೆ ಧರ್ಮಕ್ಕೂ ‘ತನ್ನದು’ ಭಾವನೆಗೂ ಯಾವುದೇ ಸಂಬಂಧವಿಲ್ಲ, ಯಾಕೆಂದರೆ ಸೃಷ್ಟಿಕರ್ತ ದೇವರು ಜಗತ್ತಿಗೆ ಒಬ್ಬನೆ ಎಂದು ಎಲ್ಲಾ ಧರ್ಮಗಳೂ ಒಪ್ಪಿವೆ. ಆದರೂ ಅವು ‘ತಮ್ಮದು’ ಎಂಬುವುದನ್ನು ಅಲ್ಲಿಯೂ ಉಪಯೋಗಿಸುವವು. ಅದು ಹೇಗೆಂದರೆ ಅಕ್ಕಿಗೂ ಯಾವುದಾದರೂ ಒಂದು ಅಂಗಡಿಗೂ ಯಾರದರೂ ಸಂಬಂಧ ಕಲ್ಪಿಸಿ ಜಗತ್ತಲ್ಲಿ ಆ ಅಂಗಡಿಯಲ್ಲಿ ಮಾತ್ರ ಅಕ್ಕಿ ದೊರಕುವುದು ಎಂಬ ರೀತಿಯ ಹುಚ್ಚು ನಂಬಿಕೆಯಾಗುವುದು. ಇನ್ನು, ಪಂಥ, ಪರಂಪರೆಗಳ ಶ್ರೇಷ್ಠತೆ ಇತ್ಯಾದಿಗಳು ಇದ್ದೇ ಇವೆ, ಇಲ್ಲಿಗೆ ಸಾಮಾನ್ಯರ ಧಾರ್ಮಿಕ ಜೀವನದ ವಿವರಣೆಯೂ ಮುಗಿಯಿತು!!

ಇನ್ನಿರುವುದು ಆಧ್ಯಾತ್ಮಿಕ ಜೀವನವಾಗಿದೆ. ಇಲ್ಲಿಯೂ, ಈ ಜಗತ್ತಿಗೆ ಒಂದೇ ಸೃಷ್ಟಿಕರ್ತ ದೇವರಾದರೂ, ಎಲ್ಲರೂ ಮೋಕ್ಷ ಮಾರ್ಗವನ್ನು ‘ನಮ್ಮದು’ ಎಂಬಲ್ಲಿಯೇ ತಿಳಿಸಲು ಪ್ರಯತ್ನಿಸುವರು. ಒಂದೊಂದು ಧರ್ಮಕ್ಕೂ ಅದೇ ರೀತಿ ಪಂಥಕ್ಕೂ ಅದರದೇ ಆದ ಮೋಕ್ಷ ಮಾರ್ಗಗಳಿವೆ ಈ ರೀತಿಯಲ್ಲಿ ಇಲ್ಲಿಯೂ ‘ನಮ್ಮದು’ ಮಾತ್ರ ಕೆಲಸ ಮಾಡುವುದು ಮತ್ತು ಇಲ್ಲಿಗೆ ಆಧ್ಯಾತ್ಮ ಜೀವನದ ವಿವರಣೆಯೂ ಮುಗಿಯುವುದು!! ಅಂದರೆ, ಹಲವು ಮೋಕ್ಷ ಸಿದ್ಧಾಂತಗಳು ಸಾವಿರಾರು ವರುಷಗಳಿಂದ ತಮ್ಮದು ಮಾತ್ರವೇ ಸರಿ ಎಂದು ವಾದ ಮಾಡುತ್ತಾ ಬಂದಿವೆ, ಮತ್ತು ಅವುಗಳಲ್ಲಿನ ಆ ವಾದ ಮಾಡಿ ಜಯಿಸುವ ಭಾವವು ಮೋಕ್ಷಾರ್ಥಿಗಳಿಗೆ ಎಂದಿಗೂ ಹೇಳಿದ್ದಲ್ಲ. ಅದು ಮಾನವನ ವಿಶಾಲ ಮನಸ್ಕತೆ ಅಥವಾ ಮುಕ್ತ ಭಾವವನ್ನೇ ನಾಶಪಡಿಸುವುದು!!

ಇನ್ನು, ಈ ‘ನಮ್ಮದು’ ಭಾವನೆಯು ಜಗತ್ತಿಗೆ ಕೊಟ್ಟಿರುವ ಸಂಭಾವನೆಯು ಬರೇ ಧ್ವೇಷ, ಜಗಳ, ರಕ್ತಪಾತಗಳು ಮಾತ್ರವಾಗಿರುವುದು!! ಆದರೆ, ಮಹಾತ್ಮರ ಜೀವನವು ಈ ‘ನನ್ನದು’ ಎಂಬ ಆ ಮೂಲ ಅಜ್ಞಾನವನ್ನು ತೊಡೆದು ಹಾಕುವುದರಿಂದ ಮತ್ತು ಸಾರ್ವತ್ರಿಕ ಮೌಲ್ಯಗಳ ಕುರಿತು ಮಾತ್ರ ವಿಚಾರ ಮಾಡುವುದರಿಂದ ಅವರು ಮಾತ್ರ ಈ ಜಗತ್ತಲ್ಲಿ ಜಗಳ, ರಕ್ತಪಾತಗಳನ್ನು ಎಂದೆಂದಿಗಾಗಿ ನಿಲ್ಲಿಸುವಲ್ಲಿ ಶಕ್ತರು ಎನ್ನಬಹುದು.

ಈ ಜಗತ್ತಲ್ಲಿ ಎಲ್ಲಾ ಧರ್ಮ, ಪಂಥಗಳಿಂದಲೂ ಕೋಟಿಗಟ್ಟಲೆ ಮಹಾತ್ಮರು ಸೃಷ್ಟಿಯಾಗಿ, ಈ ಜಗತ್ತನ್ನು, ರಕ್ತಪಾತಗಳಿಂದ ದೂರವಾಗಿಸಿ, ಆ ಪವಿತ್ರ ಪ್ರೀತಿಯಿಂದ ಜನರನ್ನು ಒಂದಾಗಿಸಲಿ ಎಂದು ಆಶಿಸೋಣ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||