ಕರ್ಮ ಸಿದ್ಧಾಂತ

ಕರ್ಮ ಸಿದ್ಧಾಂತವು, ಒಬ್ಬನ ವರ್ತಮಾನದ ಜನ್ಮದಲ್ಲಿ ಅನುಭವಿಸುವ ಕರ್ಮಗಳನ್ನು ಆತನ ಪ್ರಾರಬ್ಧಕರ್ಮ ಎಂದು ಹೇಳುವುದು. ಪ್ರಾರಬ್ಧ ಕರ್ಮ ಎಂದರೆ ಅದು ಒಬ್ಬಾತನ ಹಿಂದಿನ ಎಲ್ಲಾ ಜನ್ಮಗಳ ಸಂಚಿತ ಕರ್ಮಗಳ ಶೇಖರದಿಂದ ಈ ಜನ್ಮದಲ್ಲಿ ಅನುಭವಿಸಲೆಂದು ಪ್ರತ್ಯೇಕಿಸಿ ನೀಡಲ್ಪಟ್ಟ ಆ ಒಂದು ನಿರ್ಧಿಷ್ಟ ಪ್ರಮಾಣದ ಮಿಶ್ರ ಕರ್ಮಗಳಾಗಿವೆ. ಅಂದರೆ, ಕರ್ಮ ಸಿದ್ಧಾಂತ ಪ್ರಕಾರ ಅವುಗಳಲ್ಲಿ ಆತನ ಹಿಂದಿನ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳ ಫಲಗಳೂ ಸೇರಿ ಇರುವವು ಎಂದಾಗಿದೆ.

ಒಬ್ಬನ ಹುಟ್ಟುಗುಣವು ಆತನ ಆತ್ಮದ ಬೆಳವಣಿಗೆಯನ್ನು ಪ್ರತಿನಿಧೀಕರಿಸುವುದು. ಅಂದರೆ, ಒಬ್ಬನು ಇದೇ ಆತ್ಮೋನ್ನತಿಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೊನೆಯ ಜನ್ಮದಲ್ಲಿ ಮೋಕ್ಷವನ್ನೂ ಪಡೆವನು ಎಂದಿದೆ. ಅಂದರೆ, ಅದು ಒಂದು ಮುಖ್ಯ ಅಂಶವನ್ನು ನಮಗೆ ತಿಳಿಸುವುದು. ಅದೇನೆಂದರೆ, ಒಬ್ಬನ ಹುಟ್ಟುಗುಣವು ಉತ್ತಮ ಆಗಬೇಕಿದ್ದಲ್ಲಿ, ಆತನ ಸಂಚಿತ ಕರ್ಮಗಳ ಒಟ್ಟು ಶೇಖರದ ಬಹು ಪಾಲು ಉತ್ತಮ ಕರ್ಮವಾಗಿರಲೇಬೇಕೆಂದಾಗಿದೆ. ಅದೇ ರೀತಿ, ಹುಟ್ಟು ದುಷ್ಟಗುಣವಿರುವವರ ಸಂಚಿತ ಕರ್ಮವು ಹೆಚ್ಚು ದುಷ್ಟಕರ್ಮದಿಂದ ಕೂಡಿರಬೇಕೆಂದೂ ಅದು ಸ್ಪಷ್ಟಪಡಿಸುವುದು. ಈಗ ವೈಜ್ಞಾನಿಕವಾಗಿ ನೋಡುವಾಗ, ಸಂಚಿತ ಕರ್ಮದಲ್ಲಿ ಅತೀ ಹೆಚ್ಚು ಒಳ್ಳೆಯ ಕರ್ಮವು ಒಳಗೊಂಡಿರುವ ಆ ಅತ್ಯುತ್ತಮ ಭೂಮಿಯ ಸಂಸಾರಿ ವ್ಯಕ್ತಿ, ಅಥವಾ ಅಧ್ಯಾತ್ಮ ವ್ಯಕ್ತಿಗಳಿಗೆ ಅವರ ಪ್ರಾರಬ್ಧ ಕರ್ಮವಾಗಿ ಅತೀ ಹೆಚ್ಚು ಉತ್ತಮ ಕರ್ಮಫಲಗಳೇ ಬರಬೇಕು. ಮಿಶ್ರಕರ್ಮಗಳು ವರ್ತಮಾನ ಜನ್ಮಕ್ಕೆ ಬಂದೊದಗುವಾಗ ಅಲ್ಲಿ ಎಷ್ಟೇ ಹೆಚ್ಚುಕಡಿಮೆಯಾದರೂ ಅದು ಒಂದು ಚಿಕ್ಕ ವ್ಯತ್ಯಾಸವನ್ನೇ ತೋರಿಸಬಹುದಷ್ಟೆ, ಆದರೆ ಅದು ಎಂದೂ ಒಂದು ದೊಡ್ಡ ವ್ಯತ್ಯಾಸವನ್ನು ತೋರಿಸಲು ಸಾಧ್ಯವೇ ಇಲ್ಲ. ಇದು ಸಾಂದ್ರತೆಯ ನಿಯಮವಾಗಿದೆ. ಆದರೆ, ಅಷ್ಟು ಹೆಚ್ಚು ಸಾಂದ್ರತೆಯಲ್ಲಿ ಉತ್ತಮ ಕರ್ಮಗಳು ಆ ಅತ್ಯುತ್ತಮ ವ್ಯಕ್ತಿಗಳಿಗೆ ಅವರ ಸಂಚಿತ ಕರ್ಮ ಶೇಖರದಲ್ಲಿ ಇದ್ದರೂ, ಎಲ್ಲಾ ಕಾಲದಲ್ಲೂ ಈ ಜಗತ್ತಿನಲ್ಲಿ ಆ ಕರ್ಮ ನಿಯಮಕ್ಕೇ ವಿರೋಧವಾದ ರೀತಿಯಲ್ಲಿ ಉತ್ತಮರು ಹೆಚ್ಚು ತೀವ್ರವಾಗಿ ಕಷ್ಟವನ್ನು ಅವರ ಜೀವನದಲ್ಲಿ [ಪ್ರಾರಬ್ಧವಾಗಿ] ಅನುಭವಿಸುವುದನ್ನು ನಾವು ಕಾಣುವೆವು!! ಈ ವಿಪರೀತ ಆಗುಹೋಗುವಿಕೆಯ ಕಾರಣವನ್ನು ತಿಳಿಸಲು ಈ ಸಿದ್ಧಾಂತಕ್ಕೆ ಸಾಧ್ಯವಾಗುವುದಿಲ್ಲ. ಎಷ್ಟೋ ಅತ್ಯುತ್ತಮ ವ್ಯಕ್ತಿಗಳು ಜೀವನ ಪೂರ್ತಿ ಕಷ್ಟದಲ್ಲಿದ್ದು ಸತ್ತುಹೋದ ನಿದರ್ಶನಗಳೂ ಸಾಕಷ್ಟು ಇವೆ. ಇನ್ನೊಂದು ರೀತಿಯ ದೊಡ್ಡ ವ್ಯತ್ಯಾಸವನ್ನು ಚಿಕ್ಕ ಮಗು ಅಕಾಲ ಮರಣವನ್ನು ಹೊಂದುವಾಗ ನಮಗೆ ಕಾಣಬಹುದು. ಅಂದರೆ, ಅಷ್ಟು ಕಡಿಮೆ ಪ್ರಾರಬ್ಢವನ್ನು ಹೊತ್ತುಕೊಂಡು ಒಂದು ಜನ್ಮ ಬರುವಾಗ, ಆ ಕರ್ಮ ನಿಯಮವು ಇಷ್ಟಕ್ಕೂ ಏರು ಪೇರು ಆಗುವುದು ಸಾಧ್ಯವೇ ಎಂಬ ಸಂಶಯ ಬರುವುದು. ಆದುದರಿಂದ, ಯಾವ ನಿಶ್ಚಿತ ನಿಯಮವನ್ನೂ ಅನುಸರಿಸದ, ಈ ಮಾನವ ಜೀವನದ ಆಗುಹೋಗುವಿಕೆಗಳ ಮೇಲೆ ನೇರ ಕೈವಾಡವನ್ನು ಹೊಂದಿರುವುದು ಕರ್ಮಸಿದ್ಧಾಂತವಲ್ಲ, ಬದಲು ಆ ಪ್ರಾಚೀನ  ವಾಮಾಚಾರದ  ನೇರ ಕೈವಾಡವೆಂದು ತಿಳಿದುಕೊಳ್ಳಬಹುದು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||