ಧರ್ಮಗಳು ಹಲವು ಇಲ್ಲ

ಹೌದು. ಧರ್ಮವು ಆದಿಯಿಂದಲೇ ಒಂದೇ ಆಗಿ ಇದೆ. ಯಾಕೆಂದರೆ ಅವು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಆಗಿವೆ. ಇದನ್ನು ಗಟ್ಟಿಮಾಡಿಕೊಳ್ಳಲು ಒಂದು ಉದಾಹರಣಯನ್ನು ಉಪಯೋಗಿಸೋಣ, ಎಲ್ಲಾದರೂ ದೇವರುಗಳು ಸ್ವಪ್ನದಲ್ಲಿ ಬಂದು ಅಸತ್ಯ, ಧ್ವೇಷ ಕಳ್ಳತನ ನಿಮ್ಮ ಧರ್ಮ ಎಂದರೆ ಯಾರಾದರೂ ಆ ಮಾತನ್ನು ಕೇಳುವರೇ? ಇಲ್ಲ, ಆದುದರಿಂದ ಧರ್ಮವೆಂದರೆ “ದೇವರ ಹೆಸರಲ್ಲಿರುವ ಎಲ್ಲಾ ಮಾತುಗಳು” ಎಂಬ ವಾದವು ಸರಿ ಎಂದು ಹೇಳಬೇಕಾಗಿಲ್ಲ ಎಂದು ಅದು ತಿಳಿಸುವುದು. ಮತ್ತು ದೇವರ ಸ್ವಭಾವವನ್ನು ಮೀರಿ ಹೇಳುವ ಯಾವುದನ್ನೂ ನಾವು ದೇವರ ಮಾತೆಂದು ಒಪ್ಪಬೇಕಾಗಿಲ್ಲ ಎಂದೂ ಅದು ಹೇಳುವುದು. ಅಂದರೆ, ಅದು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯ ಮಾತುಗಳು ಎಂದೇ ಆಯಿತು. ಇನ್ನು, ಜನರು ಮಾಡಬೇಕಾಗಿರುವುದು, ಎಲ್ಲಾ ಧರ್ಮಗಳನ್ನು ಒಟ್ಟು ಸೇರಿಸಿ ಒಂದೇ ಮಾಡುವುದಲ್ಲ, ಬದಲು ಒಂದೇ ಆಗಿ ಆದಿಯಿಂದಲೇ ಇರುವ ಆ ಧರ್ಮವು ಎಲ್ಲಾ ಧರ್ಮಗಳಲ್ಲೂ ಎಲ್ಲಿ ಹುದುಗಿಕೊಂಡಿದೆ ಎಂದು ಪತ್ತೆ ಹಚ್ಚಿ ಅದನ್ನು ಬೆಳೆಸುವುದಾಗಿದೆ. ಆ ಒಂದು ಧರ್ಮವು ಎಲ್ಲೆಡೆ ಹುದುಗಿರುವುದನ್ನು ಕಾಣಬಯಸುವವರು, ಯಾರಿಗೂ ಸ್ವಲ್ಪವೂ ನೋವು ಆಗದ ರೀತಿಯಲ್ಲಿ, ಅದನ್ನು ಎಲ್ಲೆಡೆಯೂ ಮೇಲೆತ್ತುವ, ಆ ಪ್ರಯತ್ನವನ್ನು ಮಾತ್ರ ಮಾಡುವರು! ಜಗತ್ತಿಗೆ ಶಾಂತಿಯ ಸತ್ಯಯುಗವನ್ನು ತರುವ ಆ ಧರ್ಮದ ವಿಜಯವು ಧರ್ಮ, ಸಿದ್ಧಾಂತಗಳ ದಿಗ್ವಿಜಯಗಳಿಂದ ಬರುವುದಿಲ್ಲ, ಬದಲು ಎಲ್ಲೆಡೆಯೂ ಈ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯನ್ನು ಕಾಣುವ ಆ ಮಹಾದೃಷ್ಟಿಯ ಜಯದಿಂದ ಸಾಧ್ಯವಾಗುವುದೆಂಬುವುದನ್ನು ತಿಳಿಯಬೇಕಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||