ಧರ್ಮ ಪಂಡಿತರಿಗೂ ವಿಜ್ಞಾನಿಗಳಿಗೂ ಇರುವ ವ್ಯತ್ಯಾಸ

ವಿಜ್ಞಾನಿಗಳಲ್ಲಿ ನಾಲ್ವರಿಗೆ ಒಂದೇ ವಿಷಯದ ಕುರಿತು ಬೇರೆ ಬೇರೆ ವಿಚಾರವು ಮನಸ್ಸಿಗೆ ಹೊಳೆದರೆ ಅವರೆಲ್ಲಾ ಒಟ್ಟಾಗಿ ಒಂದು ಕಡೆ ಕುಳಿತು ಆ ವಿಚಾರಗಳನ್ನೆಲ್ಲಾ ಮುಂದಿಟ್ಟು ಅವುಗಳು ಎಲ್ಲದರಿಂದ ಉತ್ತರವನ್ನು[ಸಾರ್ವತ್ರಿಕವಾದುದನ್ನು] ಹೇಗೆ ಪಡೆಯಬಹುದು ಎಂದು ಆಲೋಚಿಸುವರು ಮತ್ತು ಪಡೆಯುವರು. ಅದು ಕೊನೆಗೂ ಉಪಕರಣ, ಯಂತ್ರ ಇತ್ಯಾದಿಗಳ ರೀತಿಯಲ್ಲಿ ಜನರ ನಿತ್ಯ ಜೀವನದ ಅವಿಭಾಜ್ಯ ಭಾಗವಾಗುವುದು. ಆದರೆ ನಾಲ್ಕು ಧರ್ಮದ ಪಂಡಿತರುಗಳು ಸೇರಿದಾಗ, ಅವರು, ತಮ್ಮ ತಮ್ಮ ಧರ್ಮದ ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟು, ಸೃಷ್ಟಿಕರ್ತ ದೇವರು ಜಗತ್ತಿನ ಎಲ್ಲರಿಗೂ ಒಬ್ಬನೇ ಎಂಬ ಉತ್ತರವು ಎದುರೇ ಇದ್ದರೂ, ಆ ಕಡೆ ನೋಡದೆ, ತಮ್ಮ ತಮ್ಮ ವಿಚಾರಗಳೇ ಶ್ರೇಷ್ಠ ಎಂದು ವಾದಿಸುತ್ತಾ ಹೊಡೆದಾಡಿ ಹೊರಗೆ ಬರುವರು ಮತ್ತು ಆ ಧ್ವೇಷವನ್ನು ಸಮಾಜದ ಜನರ ನಿತ್ಯ ಜೀವನದಲ್ಲಿ ಬಿತ್ತಿ ಬಿಡುವರು!!

ಜೀವನದಲ್ಲಿ, ದೇವರು ಹೇಳುವ ಆ ಸತ್ಯದ ದಾರಿಯ ಬಗ್ಗೆ ಸಾವಿರಾರು ವರುಷಗಳಿಂದ ಮಾತನಾಡುತ್ತಾ ಬಂದವರು ಈ ಧರ್ಮ ಪಂಡಿತರುಗಳು, ಆದರೆ ಸತ್ಯವನ್ನು ಅರಿಯುವ ನಿಜವಾದ ವಿಧಾನವು ಮಾತ್ರ ವಿಜ್ಞಾನಿಗಳಲ್ಲಿ ಆಗಿಹೋಗಿದೆ ಅಷ್ಟೆ! ಸತ್ಯವನ್ನು ನಂಬಿಕೆಗಳ ಮೂಲಕ ಎಂದೂ ತೋರಿಸಿಕೊಡಲು ಯಾರಿಂದಲೂ ಸಾಧ್ಯವಿಲ್ಲ, ಈ ಅರ್ಥಹೀನ ರೀತಿಯೇ ಎಲ್ಲಾ ತೊಂದರೆಗೂ ಕಾರಣವಾಗಿರುವುದು ಎಂಬುವುದು ಒಂದು ಪರಮ ಸತ್ಯವಾಗಿದೆ. ಇಷ್ಟು ಸಾವಿರ ವರುಷಗಳ ಕೊನೆಯಲ್ಲಿಯೂ ಜಗತ್ತಿನ ಮುಂದೆ, ವಿಜ್ಞಾನಿಗಳು ಮಾಡುವಂತೆ, ಧರ್ಮ ಅಥವಾ ದೇವರ ಒಂದು ಸಾರ್ವತ್ರಿಕ ನಿರ್ವಚನೆಯನ್ನಾದರೂ ಸೃಷ್ಟಿಸಲು ಸಾಧ್ಯವಾಯಿತೇ? ಅದೂ ಇಲ್ಲ!! ಈ ನಂಬಿಕೆಗಳಿಗೆ ಒಂದು ನಿರ್ಧಿಷ್ಠ ಸತ್ಯದ ಮೂಲವೇ ಇಲ್ಲದಿರುವಾಗ, ಇನ್ನು ಏನು ಸತ್ಯದ ಬೋಧನೆ? ಎಲ್ಲಿಂದ ಸತ್ಯದ ಬೆಳಕಾಗಿರುವ ಆ ಧರ್ಮ-ಬೋಧನೆ?

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||