ಧರ್ಮ ಮತ್ತು ಮಾನವನ ಸ್ವಭಾವ ಶುದ್ಧಿ

ಮಾನವನ ಹುಟ್ಟಿನಿಂದಿರುವ ಸಹಜ ಸ್ವಭಾವಗಳಲ್ಲಿ ಎರಡು ತರದವುಗಳಿವೆ. ಒಂದು ಧನಾತ್ಮಕ ಸ್ವಭಾವವಾದರೆ ಇನ್ನೊಂದು ಋಣಾತ್ಮಕ ಸ್ವಭಾವವಾಗಿರುವುದು. ತಾಯಿ-ಮಗುವಿನ ಸಂಬಂಧದಲ್ಲಿ ಕಾಣಿಸುವ ನಿಸ್ವಾರ್ಥ ಪ್ರೀತಿಯು ಧನಾತ್ಮಕವಾದರೆ ಇನ್ನು ಸ್ವಾರ್ಥ ಮೂಲದಿಂದಿರುವ ದ್ವೇಷ, ಅಸೂಯೆ, ಇತ್ಯಾದಿಗಳು ಋಣಾತ್ಮಕಗಳಾಗಿವೆ. ಧರ್ಮಗಳ ಸೃಷ್ಟಿಯು, ಈ ಋಣಾತ್ಮಕ ಮೂಲದಿಂದ ಹುಟ್ಟಿ ಬರುವ ಸಹಜ ಸ್ವಭಾವದಿಂದ ಮಾನವನನ್ನು ಮೇಲೆತ್ತಿ ಆತನನ್ನು ಒಬ್ಬ ಉತ್ತಮ ಮಾನವನನ್ನಾಗಿ ಮಾಡುವುದಕ್ಕಾಗಿರುವುದು. ಮನಸ್ಸಿನೊಳಗಿನ ದಾನವನನ್ನು ತೊಲಗಿಸಿ ಅಲ್ಲಿ ಶುದ್ಧ ಮಾನವನನ್ನು ಪ್ರತಿಷ್ಠಾಪಿಸುವ ಈ ಕೆಲಸವೇ ನಿಜವಾದ ಧರ್ಮಪ್ರಚಾರದ ಕೆಲಸವಾಗಿರಬೇಕಾಗಿದೆ. ಆದರೆ ಧರ್ಮಗಳು ತಾವೇ ಸ್ವತಃ ಸ್ವಾರ್ಥವೆಂಬ ಮತಾಂತರ, ಧ್ವೇಷ, ಇತ್ಯಾದಿ ಋಣಾತ್ಮಕ ಸ್ವಭಾವಕ್ಕೆ ಬಲಿಯಾಗಿ ಹೋಗಿರುವುದು ಒಂದು ದುರಂತವಾಗಿದೆ! ಹೀಗಿರುವಾಗ, ಧರ್ಮಗಳ ಉಸಿರಾಗಿರುವ ಆ ಸಾರ್ವತ್ರಿಕ ಪ್ರೀತಿಗೆ ಧರ್ಮದೊಳಗೆ ಬಂದು ಸೇರಿಕೊಳ್ಳಲು ಯಾವದಾರಿಯೂ ಇಲ್ಲವಾಗಿಬಿಡುವುದು. ಆಗ ನಿಜವಾದ ಧರ್ಮಗಳೇ ಜಗತ್ತಿನಲ್ಲಿ ಇಲ್ಲವಾಗುವುದು. ಮಹಾತ್ಮರುಗಳು ನಿಜ ಧರ್ಮಕ್ಕಾಗಿ ಎಷ್ಟೇ ಶ್ರಮವಹಿಸಿದರೂ ಅವರ ಮಾತಿಗೆ ಯಾರೂ ಕಿವಿಗೊಡಲಿಲ್ಲ! ಎಲ್ಲರ ಶ್ರದ್ದೆಯು, ತಮ್ಮ ತಮ್ಮ ಧರ್ಮಗಳಲ್ಲಿನ ಜನಸಂಖ್ಯೆ ವರ್ಧನೆಯಲ್ಲಿ ಮಾತ್ರ ಕೇಂದ್ರೀಕೃತವಾಗಿರುವುದು!!

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||