ಧೈರ್ಯಗಳಲ್ಲಿ ಹಲವು ವಿಧಗಳಿವೆ. ಈಗ, ಮೊದಲು ಭಯವನ್ನು ನೋಡುವುದಾದರೆ, ಸಾಮಾನ್ಯ ಮಾನವರಲ್ಲಿ ಶರೀರಕ್ಕೆ ಬರಬಹುದಾದ ಅಪಾಯ, ರೋಗ ಇತ್ಯಾದಿಗಳ ಕುರಿತಾದ ಭಯ, ಮತ್ತು ತನ್ನ ಸ್ಥಾನ, ಮಾನಗಳಿಗೆ ದಕ್ಕೆ ಆಗುವ ಭಯ, ಇತ್ಯಾದಿಗಳು ಮುಖ್ಯವಾಗಿವೆ. ಈ ತೊಂದರೆಗಳನ್ನು ಎದುರಿಸುವಲ್ಲಿ ಜನರು ತೋರಿಸುವ ಧೈರ್ಯವು ಒಂದು ರೀತಿಯ ಧೈರ್ಯವಾಗಿದೆ. ಇನ್ನು ದೇಶಸೇವೆಗಾಗಿ ಸೇನೆಯಲ್ಲಿ ತನ್ನ ಜೀವವನ್ನು ಕೊಡಲು ತಯಾರಾಗುವ ಧೈರ್ಯವು ಅದು ಇನ್ನೊಂದು ರೀತಿಯ ಧೈರ್ಯವಾಗಿದೆ. ಇವುಗಳು ಶರೀರಕ್ಕೆ ಸಂಬಂಧಿಸಿದ ಧೈರ್ಯಗಳಾಗಿವೆ.
ಜನರು ಸಮಾಜದಲ್ಲಿ ಜೀವಿಸುವಾಗ ಹೆಚ್ಚಿನವರೂ ತನ್ನ ಮನೆಯ ಅಥವಾ ತಮ್ಮ ಹತ್ತಿರದ ಜನರ ಆಸಕ್ತಿಗೆ ಮತ್ತು ಅವರ ಅಭಿಪ್ರಾಯದಂತೆ ನಡೆಯಲು ಬಯಸುವರು. ಅಲ್ಲಿ, ಎಲ್ಲರೂ ತಪ್ಪು ನಿರ್ಧಾರವನ್ನು ಮಾಡುತ್ತಿದ್ದಾರೆ ಎಂದು ಗೊತ್ತಿದ್ದರೂ ಅದನ್ನು ಎದುರಿಸುವಲ್ಲಿ ಭಯ ಪಡುವರು. ಆಗ ಆ ವ್ಯಕ್ತಿಯೂ ಆ ತಪ್ಪನ್ನು ಮಾಡಲು ತಯಾರಾಗುತ್ತಾನೆ!! ಆದರೆ, ಬಹಳ ಹಿಂದಿನ ಕಾಲದಿಂದಲೇ, ಕೆಲವು ಜನರು ಮಾತ್ರ ಆ ರೀತಿಯನ್ನು ಒಪ್ಪಲು ತಯಾರಾಗದೆ ಸತ್ಯಕ್ಕೆ ಬೇಕಾಗಿ ಜೀವಿಸಿದ್ದರು. ಈ ರೀತಿಯ ಜನರ ಧೈರ್ಯವು ಮತ್ತೊಂದು ರೀತಿಯಾಗಿದೆ. ಆದರೆ ಸ್ವಾರ್ಥವನ್ನು ತ್ಯಾಗಮಾಡಿ, ಸಮಾಜದ ಹಿತ ದೃಷ್ಟಿಯಿಂದ ಮತ್ತು ನೈತಿಕತೆಯ ದೃಷ್ಟಿಯಿಂದ ಅಂಥ ಜನರು ತೋರಿರುವ ಧೈರ್ಯವೇ ಸಮಾಜಕ್ಕೆ ಅತ್ಯಂತ ಉತ್ತಮ ಮತ್ತು ಅನಿವಾರ್ಯವಾದ ಧೈರ್ಯ ಎನ್ನಬಹುದು, ಯಾಕೆಂದರೆ ಉತ್ತಮ ವ್ಯಕ್ತಿತ್ವದ ಕೊಂಡಿಯು ಈ ಭೂಮಿಯಿಂದ ಎಂದೆಂದಿಗಾಗಿ ಕಳಚಿಹೋಗದಂತೆ ಇಂಥವರು ಅದನ್ನು ರಕ್ಷಿಸುತ್ತಾ ಬಂದಿದ್ದಾರೆ.
ಯಾರು ಸರಿಯಾಗಿ ಸತ್ಯವನ್ನು ತಿಳಿಯದೆ ದುಡುಕಿ ಧೈರ್ಯವನ್ನು ಪ್ರದರ್ಶಿಸುವರೋ ಅವರ ಧೈರ್ಯವು ಅವರಿಗೆ ಮಾರಕವಾಗಿ ಪರಿಣಮಿಸಲು ಸಾಧ್ಯವಿರುವ ಕಾರಣ ಆ ರೀತಿಯ ಧೈರ್ಯವು ಅನಗತ್ಯ ಮತ್ತು ಅಪಾಯಕಾರಿ ಧೈರ್ಯವಾಗುವುದು. ಆ ಪ್ರಾಚೀನ ವಾಮಾಚಾರವು ಸ್ವಾರ್ಥ, ಅನೈತಿಕತೆಯನ್ನು ಬೆಳೆಸುವಲ್ಲಿ ಜನರಿಗೆ ತುಂಬಾ ಧೈರ್ಯವನ್ನು ತುಂಬುತ್ತಾ ಇರುವುದು. ಇದು ನಿಜವಾಗಿಯೂ ಅತ್ಯಂತ ಅಪಾಯಕಾರಿಯಾಗುವುದು.