ಈ ಜಗತ್ತು ಆ ಪ್ರಾಚೀನ ವಾಮಾಚಾರದ ಕೈಯೊಳಗೆ ಸಿಕ್ಕಿಕೊಂಡಿರುವುದನ್ನು ನಾನು ಹಲವು ರೀತಿಯಲ್ಲಿ ತೋರಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ನಾನು ಬರೇ ತರ್ಕವನ್ನು ಉಪಯೋಗಿಸಿಲ್ಲ, ಬದಲು, ಸಾರ್ವತ್ರಿಕ ಸತ್ಯದ ಹಿನ್ನೆಲೆಯ ತರ್ಕವನ್ನು ಎಲ್ಲಾ ಕಡೆಯೂ ಉಪಯೋಗಿಸಿರುವುದು ಎಂದು ತಿಳಿಯಬೇಕು. ಆ ರೀತಿಯನ್ನೇ ಅವಲಂಭಿಸಿ ಸತ್ಯವನ್ನು ತಿಳಿಸುವ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ನಂಬಿಕೆಯವರ ವಿಷಯವೇ ಬೇರೆ, ಅವರು ಇತರ ಯಾವುದೂ ಸರಿ ಇಲ್ಲ ಎಂದೂ, ತಮ್ಮದು ಮಾತ್ರ ಸರಿ ಎಂದು ನಂಬುವವರು. ಅಲ್ಲಿ ಪ್ರಶ್ನೆಗಳಿಗೂ ಅವಕಾಶವಿಲ್ಲ ಮತ್ತು ತರ್ಕವೂ ಇಲ್ಲ. ಆದರೆ, ತಮ್ಮಲ್ಲಿ ಇರುವುದನ್ನು ಹೇಗಾದರೂ ಮಾಡಿ “ಸರಿ” ಮಾಡುವ ಆ ಮೊಂಡು ವಾದಗಳು ಮಾತ್ರ ಇರುವವು. ಅಂದರೆ, ಕೊನೆಯಲ್ಲಿ ನಂಬಿಕೆಯವನು ತನ್ನದು ಮಾತ್ರ ಸರಿ ಅಥವಾ ಹೆಚ್ಚು ಸರಿ ಎಂಬಲ್ಲಿ ತನ್ನ ವಾದವನ್ನು ನಿಲ್ಲಿಸುವನು!! ಈಗ, ಎಲ್ಲಾ ಧರ್ಮ, ಪಂಥದವರೂ ಇದೇ ರೀತಿ ವಾದ ಮಾಡುವಾಗ, ಆ “ನಿಜವಾದ ಸತ್ಯ”ವನ್ನು ಇವರು ಎಲ್ಲರೂ ಸೇರಿ ಆಲೋಚಿಸಲೂ ಸಾಧ್ಯವಾಗದ ಶೋಚನೀಯ ಸ್ಥಿತಿಗೆ ನೂಕುತ್ತಿರುವುದು ಸ್ಪಷ್ಟವಾಗುವುದು!!
ಇನ್ನು, ನನಗೆ ತಿಳಿಸಲಿರುವ ಒಂದು ಮುಖ್ಯ ವಿಷಯವೆಂದರೆ, ಅದು ಆ ಪ್ರಾಚೀನ ವಾಮಾಚಾರದ ಪ್ರಭಾವವನ್ನು ತಡೆಗಟ್ಟಲಿರುವ ಪರಿಹಾರವಾದ “ಜಾಗತಿಕ ಒಗ್ಗಟ್ಟು, ಧರ್ಮ, ಪಂಥಗಳ ಸಾರ ಜೀವನದ ಹಿನ್ನೆಲೆಯಲ್ಲಿ” ಎಂಬ ಆಶಯದ ಕುರಿತು ಆಗಿದೆ. ಈ ಪರಿಹಾರ ಮಾರ್ಗದಲ್ಲಿ ಯಾರೂ ಅವರವರ ಧರ್ಮವನ್ನು ಬಿಡಬೇಕೆಂದಿಲ್ಲ. ಅದೇ ರೀತಿ, ಅವರವರ ಅಚಾರ ನಂಬಿಕೆಗಳನ್ನೂ ಬಿಡಬೇಕೆಂದಿಲ್ಲ. ಒಟ್ಟು ಮಾಡಬೇಕಾಗಿರುವ ಕೆಲಸ ಏನೆಂದರೆ ಆ ಪ್ರಾಚೀನ ವಾಮಾಚಾರದ ಪ್ರಭಾವದಿಂದ ಬಿಡಿಸಿಕೊಳ್ಳುವುದಕ್ಕಾಗಿ, ಜಗತ್ತಿನ ಎಲ್ಲಾ ಜನರು, ತಮ್ಮ ತಮ್ಮ ಧರ್ಮ, ಪಂಥಗಳ ಸಾರದ ಭಾಗಕ್ಕೆ ಹೆಚ್ಚು ಒತ್ತು ಕೊಡುವುದಾಗಿದೆ. ಯಾಕೆಂದರೆ ಈ ಸಾರದ ಭಾಗದಲ್ಲಿ ಎಲ್ಲಾ ಧರ್ಮ, ಪಂಥಗಳಲ್ಲೂ ಒಂದೇ ರೀತಿಯಲ್ಲಿ ಹೇಳಿರುವುದನ್ನು ನಮಗೆ ಕಾಣಬಹುದು. ಇಲ್ಲಿ ನಮಗೆ ಒಂದಾಗಿ ಕುಳಿತು ಸಾರ್ವಜನಿಕ ಸತ್ಯಚಿಂತನೆಯನ್ನು ಮಾಡಬಹುದು. ಈ ರೀತಿಯಲ್ಲಿ ಸಾರ್ವಜನಿಕ ಸತ್ಯಚಿಂತನೆಗಳು ಅಲ್ಲಲ್ಲಿ ಏರ್ಪಡಿಸಲ್ಪಡುವಾಗ ಜಗತ್ತು ತಾನಾಗಿ ಒಂದಾಗುವುದು! ಸತ್ಯಚಿಂತನೆಯ ಪ್ರತ್ಯೇಕತೆ ಎಂದರೆ ಅಲ್ಲಿ ಒಳಿತಿನ ಬಗ್ಗೆ ಮಾತಾಡುವುದಾಗಿದೆ, ಆದರೆ ಯಾವಕಾಲಕ್ಕೂ ನೋವನ್ನು ಉಂಟು ಮಾಡುವ ತರದಲ್ಲಿ ದೂಷಿಸುವ ರೀತಿ ಇಲ್ಲ. ಮನೆ, ಆಲಯಗಳಲ್ಲಿ ಈ ಸಾರದ ಜೀವನದ ಕುರಿತಾದ ಸತ್ಯಚಿಂತನೆಯ ಹೊರತಾಗಿ ಈ ಸಾರ್ವಜನಿಕ ಸತ್ಯಚಿಂತನೆಯೂ ಸೇರಿದಾಗ ಪರಿಹಾರ ಮಾರ್ಗವು ಪೂರ್ಣ ಪ್ರಮಾಣದ ಫಲವನ್ನು ಕೊಡಲು ಆರಂಭಿಸುವುದು. ಆಗ ನಿಧಾವಾಗಿ ಜಗತ್ತು ಆ ಸತ್ಯಯುಗದ ಪಾವನ ಭೂಮಿಯನ್ನು, ಸತ್ಯಚಿಂತನೆಯಿಂದ ತೊಳೆದು ಪವಿತ್ರಗೊಳಿಸಿದ ತನ್ನ ಪಾದಗಳಿಂದ ಸ್ಪರ್ಶಿಸುವುದು!
ಈಗೀಗ ಎಲ್ಲಾ ಧರ್ಮ, ಪಂಥಗಳಲ್ಲೂ ಹೆಚ್ಚೆಚ್ಚು ಧರ್ಮಪಂಡಿತರುಗಳು ಧರ್ಮ, ಪಂಥಗಳ ಸಾರದ ಕಡೆಗೆ ಗಮನ ಹರಿಸುವುದನ್ನು ನಮಗೆ ಕಾಣಲು ಸಾಧ್ಯವಾಗುವುದು. ಆದುದರಿಂದ ಜಾಗತಿಕ ಪರಿಹಾರವೆಂಬ ಈ ಮಹಾಕಾರ್ಯವು ಅಂಥವರಿಂದಲೇ ಆರಂಭವಾಗಲಿ. ಧರ್ಮದ ಸಾರದ ಕಡೆಗೆ ಶ್ರದ್ಧೆ ಇಟ್ಟಿರುವ ಈ ಜಗತ್ತಿನ ಸರ್ವ ಧರ್ಮ, ಪಂಥಗಳ ಆ ಎಲ್ಲಾ ಧರ್ಮಪಂಡಿತರುಗಳಿಗೂ ನನ್ನ ಹೃತ್ಪೂರ್ವಕ ನಮನಗಳು.
ಈ ಮಹಾಕಾರ್ಯಕ್ಕೆ ಅಡ್ಡಿಯಾಗಿ ಬರುವ ಇನ್ನೊಂದು ರೀತಿಯ ಮನುಷ್ಯವರ್ಗವು ಎಲ್ಲಾ ಧರ್ಮ, ಪಂಥಗಳಲ್ಲೂ ಇರುವವು. ಅವೇ ಅನೈತಿಕ ಮಾರ್ಗಿಗಳ ವರ್ಗವಾಗಿದೆ!! ಈ ವರ್ಗದವರು ಈ ಜಗತ್ತಲ್ಲಿ ನೈತಿಕತೆಯು ಬೆಳೆದು ಬರುವುದನ್ನು ನೇರ ಅಥವಾ ಪರೋಕ್ಷವಾಗಿ ತಪ್ಪಿಸಲು ಪ್ರಯತ್ನಿಸುವರು!! ತಾನು ಅನೈತಿಕ ಮಾರ್ಗದಲ್ಲಿರುವಾಗ, ತಮ್ಮ ಕಿರಿಯರನ್ನೂ ಅವರದೇ ಮಟ್ಟಕ್ಕೆ ತಗ್ಗಿಸುವ ಸಮಾಜ ಘಾತಕ ಕೆಲಸವನ್ನು ಇವರು ಮಾಡುವರು. ಉದಾಹರಣೆಗೆ, ಕುಡಿತ, ಗಾಂಜಾ ಸೇವನೆ, ಇತ್ಯಾದಿ ವ್ಯಸನಗಳಿಗೆ ಸಮಾಜದಲ್ಲಿ ಇತರರೂ ಬಲಿಯಾಗುವಂತೆ ಇತರರಲ್ಲಿ ಪ್ರಲೋಭಿಸುವ ಕೆಲಸವನ್ನು ಇವರು ಮಾಡುವರು. ಅದೇ ರೀತಿಯಲ್ಲಿ, ಒಂದು ವರ್ಗ ಹೆಣ್ಣು, ಗಂಡುಗಳು ಇಂದು ಅನೈತಿಕ ಕಾಮ ವ್ಯಸನಿಗಳಾಗಿ ಅದಕ್ಕೆ ಆಂಗ್ಲ ಭಾಷೆಯ ಹೊಸ ಹೊಸ ಹೆಸರನ್ನು ಕೊಟ್ಟು, ಸಮಾಜದಲ್ಲಿ ಭಯಾನಕ ರೀತಿಯಲ್ಲಿ, ಜನರು ಅದರ ಪ್ರಲೋಭನೆ ಒಳಗಾಗುವಂತೆ ಮಾಡುವರು. ಈ ಮೇಲಿನ ಪರಿಹಾರ ಮಾರ್ಗಕ್ಕೆ ಇದರಷ್ಟು ತಡೆಯನ್ನು ಇನ್ನು ಯಾವುದೂ ಉಂಟುಮಾಡಲಾರದು!!
ನಾವು ತಿಳಿಯಬೇಕಾಗಿರುವುದು ಏನೆಂದರೆ, ಈ ಮೇಲೆ ಸೂಚಿಸಿರುವ ಪರಿಹಾರ ಮಾರ್ಗವು ಯಾರ ವ್ಯಯಕ್ತಿಕ ಸ್ವಾತಂತ್ರ್ಯವನ್ನೂ ಇಲ್ಲವಾಗಿಸುವುದಿಲ್ಲ ಎಂದಾಗಿದೆ! ಅದು ಒಬ್ಬನಿಗೆ ಆತನ ರೀತಿಯಲ್ಲಿ ಜೀವಿಸುವ ಹಕ್ಕು ಇದೆ ಎಂದೇ ಹೇಳುವುದು. ಆದರೆ, ಇಲ್ಲಿ, ಆ ವ್ಯಸನವಿರುವ ಸಹೋದರ, ಸಹೋದರಿಯರಲ್ಲಿ “ನೀವು ದಯವಿಟ್ಟು ಇತರರನ್ನು ಆ ಅನೈತಿಕ ದಾರಿಗೆ ಪ್ರಲೋಭಿಸದಿರಿ” ಎಂಬ ಒಂದು ಬೇಡಿಕೆಯನ್ನು ಮಾತ್ರವೇ ಇಟ್ಟಿದೆಯಷ್ಟೆ. ಕನಿಷ್ಠ ಪಕ್ಷ ಒಬ್ಬ ವ್ಯಕ್ತಿ ಅದನ್ನಾದರೂ ಪಾಲಿಸಿದಲ್ಲಿ, ಮುಂದೆ ಆತನದೇ ಬೆಂಕಿ-ಜೀವನವು ಆತನಿಗೆ ಹಲವು ನೋವಿನ ಪಾಠಗಳನ್ನು ಕಲಿಸುವಾಗ, ಅದರಿಂದ ಪಾರಾಗಲು ಈ ಮಹಾಜೀವನದ ಬಯಕೆ ಆತನಲ್ಲಿ ಉಂಟಾದಲ್ಲಿ, ಆತನಿಗೆ ಆ ಆನಂದದ ಮಹಾ ಜೀವನವನ್ನು ಪಡೆಯುವ ಆ ಒಂದು ಅವಕಾಶವು ಕೈತಪ್ಪಿಹೋಗಲಾರದು.
ಈ ಜಗತ್ತಲ್ಲಿ ಎಲ್ಲಾದರೂ ಯಾವ ಧರ್ಮ, ಪಂಥದಲ್ಲಾದರೂ, ಮೇಲು ಮೇಲಿನ ಆದರ್ಶ ಜೀವನವು, ಮೇಲು ಮೇಲಿನ ಮಹಾತ್ಮರ ಹಂತವಾಗುವುದು. ಅದೇ ರೀತಿ, ಮೇಲು ಮೇಲಿನ ಆದರ್ಶ’ರಹಿತ’ ಜೀವನಗಳು ಕೆಳಕೆಳಗಿನ ಮಾನವ ಜೀವನ ರೀತಿಗಳಾಗುವವು. ಈ ಹಿನ್ನೆಲೆಯಲ್ಲಿ ಒಂದೇ ತಾಯಿಯ ಮಕ್ಕಳಲ್ಲಿ ಕೆಲವರು ಮೇಲಿನ ಹಂತದ ಮಹಾತ್ಮರು ಮತ್ತು ಇನ್ನು ಕೆಲವರು ಕೆಳ ಮಟ್ಟದ ಜೀವನವನ್ನು ಅವಲಂಭಿಸುವವರು ಇರುತ್ತಾರೆ. ಉದಾಹರಣೆಗೆ, ಜಗತ್ತಿನ ಎಲ್ಲಾ ಧರ್ಮ, ಪಂಥಗಳಲ್ಲಿರುವ ಸಸ್ಯಾಹಾರಿಗಳ ಆ ಸಸ್ಯಾಹಾರ ಜೀವನವು ಒಂದು ಮೇಲಿನ ಆದರ್ಶವಾಗಿದೆ. ಪ್ರಾಣಿಹಿಂಸೆಯಲ್ಲಿ ಆ ಪ್ರಾಣಿ ಪಡುವ ನೋವನ್ನು ಮಾನವನು ಕಡಿಮೆ ಮಾಡುವ ಒಂದು ಮೇಲಿನ ಆದರ್ಶವು ಇದಾಗಿದೆ. ಮಾಂಸಹಾರಿಗಳಿಗೆ ಮಾಂಸಹಾರಿಗಳಾಗಿ ಜೀವಿಸುವ ಪೂರ್ಣ ಸ್ವಾತಂತ್ರ್ಯವಿದೆ, ಮತ್ತು ಧರ್ಮದ ಸಾರದಲ್ಲಿ ಬದುಕುವ ಈ ಸತ್ಯಜೀವನಕ್ಕೆ ಮತ್ತು ಆ ಜಾಗತಿಕ ಪರಿಹಾರ ಕಾರ್ಯಕ್ಕೂ ಈ ಸಸ್ಯಾಹಾರವು ಒಂದು ಅನಿವಾರ್ಯವೇನೂ ಅಲ್ಲ. ಆದರೆ, ಮಿದುಳು ಇರುವ ಮತ್ತು ನೋವು ಮಾನವರಷ್ಟೇ ಪ್ರಮಾಣದಲ್ಲಿ ಅನುಭವಾಗುವ ಆ ಪ್ರಾಣಿಗಳನ್ನು ಹಿಂಸೆ ಮಾಡುವುದರೊಂದಿಗೆ ಮಾನವನ ಮನಸ್ಸಿನ ಕ್ರೌರ್ಯವನ್ನೂ ಹೆಚ್ಚಿಸಲು ಪ್ರೇರೇಪಿಸುವ ಮಾಂಸಾಹಾರ ಕ್ರಮವನ್ನು ಸಸ್ಯಾಹಾರ ಆದರ್ಶಕ್ಕೆ ಸಮ ಎಂಬ ರೀತಿಯಲ್ಲಿ ಮಾತ್ರ ವಾದಿಸಬೇಡಿ. ಅದನ್ನು ದೇವರೇ ಬಂದು ವಾದ ಮಾಡಿದರೂ ಪ್ರಯೋಜನವಾಗದು.
ಒಟ್ಟಿನಲ್ಲಿ ಹೇಳುವುದಾದರೆ, ಸರ್ವ
ಧರ್ಮ, ಪಂಥಗಳಲ್ಲೂ ಮೇಲಿನ ಆದರ್ಶ ಜೀವನದಲ್ಲಿ ಜೀವಿಸುವ ಎಲ್ಲರಿಗೂ, ಆದರ್ಶದಲ್ಲಿ ಕೆಳಗೆ ಇರುವವರು, ಆ ಮೇಲಿನ ಆದರ್ಶದ ರೀತಿಯಲ್ಲಿ ಜೀವಿಸುವುದಕ್ಕೆ
ಅವರಿಗೆ ತಡೆಯಾಗದೆ ಅವರ ರೀತಿಯಲ್ಲಿ ಜೀವಿಸಲು ಅನುವು ಮಾಡಿಕೊಟ್ಟರೆ ಸಾಕಾಗುವುದು. ಆಗ, ಅಲ್ಲಿ, ಸರ್ವರಿಗೂ ತಮಗೆ ಬೇಕಾದ ರೀತಿಯಲ್ಲಿ ಜೀವಿಸುವ ಸ್ವಾತಂತ್ರ್ಯವೂ ಇರುವುದು,
ಮತ್ತು ಅದರೊಂದಿಗೆ ಒಂದು ಮಹಾ ಸತ್ಯಯುಗಕ್ಕೆ ಇವೆಲ್ಲದರ ಮಧ್ಯೆ ಉದಯಿಸಿ ಬರಲು ಸ್ವಲ್ಪ
ಸ್ಥಳಾವಕಾಶವೂ ದೊರಕುವುದು!
ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಾನು ಕಂಡ ಆ ಅಪಾಯವನ್ನು ನಿಮ್ಮ ಮುಂದಿರಿಸಿ, ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ, ಈ ರಹಸ್ಯವನ್ನು ಕಂಡುಹಿಡಿಯುವಲ್ಲಿ, ನಾನು ಬಹಳ ದೊಡ್ಡ ಅಪಾಯವನ್ನು ಎದುರಿಸಬೇಕಾಯಿತು. ಅದು ಈಗ ಕಡಿಮೆಯಾಗಿದೆ ಆದರೂ ಪೂರ್ತಿಯಾಗಿ ಹೋಗಿಲ್ಲ. ಆದರೆ, ನನಗೆ ಆ ಸತ್ಯಗಳನ್ನು ಕೊನೆಗೂ ಜಗತ್ತಿನ ಮುಂದಿರಿಸಲು ಸಾಧ್ಯವಾದ ಆ ನೆಮ್ಮದಿ ಮಾತ್ರ ಸಾಕಾಗುವುದು. ಈ ನನ್ನ ಮಾತುಗಳನ್ನು, ಇತರರಿಗೆ, ಯಾರಾದರೂ ತಿಳಿಸಲು ಇಚ್ಛೆ ಪಡುವುದಾದರೆ, ಅವರು ಬಹಳ ಶಾಂತವಾದ ರೀತಿಯಲ್ಲಿ ಮಾತ್ರ ವಿವರಿಸಿ ತಿಳಿಸಬೇಕಾಗುವುದು. ಆದರೆ, ಕೋಪ, ಧ್ವೇಷಗಳಿಂದ ನನ್ನ ಮಾತುಗಳನ್ನು ಯಾವ ಕಾಲಕ್ಕೂ ಯಾರೂ ವಿವರಿಸಬಾರದು. ನನ್ನ ಮಾತುಗಳ ಕೆಲವೊಂದನ್ನು ಮಾತ್ರ ತೆಗೆದು ಅವರವರಿಗೆ ಸರಿಯಾಗಿ ಹೊಂದಿಸಿ ಹೇಳುವಹಾಗಿಲ್ಲ. ಯಾಕೆಂದರೆ, ಆ ಸಾರ್ವತ್ರಿಕ ಸತ್ಯದ ಆ ಸಾರ್ವತ್ರಿಕ ಪ್ರೀತಿಯು ಜನರನ್ನು ಎಂದೂ ವಿಭಜಿಸಲಾರದು, ಬದಲು, ಅದು ಮಾನವ ಹೃದಯಗಳನ್ನು ಒಂದುಗೂಡಿಸುವಲ್ಲಿ ಮಾತ್ರ ತನ್ನ ಮಾತುಗಳನ್ನು ತೊಡಗುವುದು. ನಾನು, ನನ್ನ ಕೈಲಾದ ಮಟ್ಟಿಗೆ ನನ್ನ ಆ ಮನೋಶಕ್ತಿಯ ಸಹಾಯದಿಂದ ಈ ಜಗತ್ತಿಗೆ ಒಳಿತು ಮಾಡಲು ಪ್ರಯತ್ನಿಸುವೆನು. ಆದರೆ, ಆ ಪ್ರಾಚೀನ ವಾಮಾಚಾರದ ವಿರುದ್ಧದ ಆ ಏಕೈಕ ಪರಿಹಾರವು ಇರುವುದು ಈ ಜಗತ್ತಿನ ಸರ್ವರ ಒಂದಾಗುವಿಕೆಯಲ್ಲಿ ಎಂಬುವುದನ್ನು ಮರೆಯಬಾರದು. ನನಗೆ ಧರ್ಮ, ಪಂಥ, ಪರಂಪರೆ ಎಂಬೆಲ್ಲಾ ರೀತಿಗಳನ್ನು ಸ್ವಪ್ನದಲ್ಲೂ ನೆನೆಯಲು ಸಾಧ್ಯವಾಗುವುದಿಲ್ಲ, ಯಾಕೆಂದರೆ ನನಗೆ ಅತ್ಯಂತ ಸ್ಪಷ್ಟವಾಗಿ ಇವೆಲ್ಲಾ ಆ ಪ್ರಾಚೀನ ವಾಮಾಚಾರದ ಉಪಕರಣಗಳಾಗಿಹೋಗಿವೆ ಎಂದು ತಿಳಿದಿದೆ. ನಾವು, ನಮ್ಮ ಮನೆಯಲ್ಲಿ ಒಂದು ಚಿಕ್ಕ ಆಚಾರದಲ್ಲಿ ಬಹಳ ಗಂಭೀರವಾಗಿ ಮಗ್ನವಾಗಿರುವಾಗ, ಇತ್ತ, ಅದರ ವಿರುದ್ಧ ರೀತಿಯಲ್ಲಿ, ಬಹಳ ಗಂಭೀರವಾಗಿ ಇನ್ನೊಂದು ಧರ್ಮ ಅಥವಾ ಪಂಥದ ಮನೆಯಲ್ಲಿ ಆಚರಣೆ ನಡೆಯುವುದು!! ನಿಮ್ಮ ಆಚರಣೆಯ ಮಹತ್ವವನ್ನು ಆ ವಿರುದ್ಧ ಆಚರಣೆಯ ಮನೆಯಲ್ಲಿ ಹೇಳಿದಲ್ಲಿ, ಅವರ ಆಚರಣೆಯ ಮಹತ್ವವನ್ನು ಅವರ ಬಾಯಿಯಿಂದ ನೀವು ಕೇಳಬೇಕಾಗುವುದು!! ಇಂಥ ಆಚರಣೆಗಳ ರಾಶಿಗಳೇ ಧರ್ಮ, ಪಂಥಗಳಲ್ಲಿ ತುಂಬಿರುವುದು ಅಷ್ಟೆ! ಮಹಾತ್ಮರು ಹೇಳಿರುವುದೇನೆಂದರೆ, ಮಾನವರು ತಮ್ಮ ನಂಬಿಕೆ, ಆಚರಣೆಯೇ ಸರ್ವಸ್ವವೆಂಬ ಆ ಬಾವಿಯೊಳಗಿನ ಕಪ್ಪೆಗಳಂತಾಗಿ ಭಯಾನಕ ಧ್ವೇಷ, ಹಿಂಸೆ, ರಕ್ತಪಾತಗಳಿಗೆ ಕಾರಣವಾಗಬಾರದು ಎಂದಾಗಿದೆ. ಆದುದರಿಂದ ಎಲ್ಲರೂ ಆ ಸತ್ಯಸಂಧವಾದ ಚಿಂತನೆಯ ಸಹಾಯದಿಂದ ತಮ್ಮ ತಮ್ಮ ಧರ್ಮ, ಪಂಥಗಳ ಸಾರದಲ್ಲಿ ಜೀವನವನ್ನು ನಡೆಸುವುದಾದರೆ, ಮತ್ತು ನಂಬಿಕೆ, ಆಚಾರಗಳನ್ನು ಅವರವರ ಆಯ್ಕೆಯ ತರ ಆಚರಿಸುವುದಾದರೆ, ಈ ಜಗತ್ತಿನ ಎಲ್ಲಾ, ಧರ್ಮ, ಪಂಥಗಳೂ ತಾವಾಗಿ ಶುದ್ಧೀಕರಿಸಲ್ಪಡುವವು. ಈ ರೀತಿಯಲ್ಲಿ, ಮಾನವನ ಮನ, ಮನೆ, ಹಾಗೂ ಲೋಕವು ಆ ದಿವ್ಯ ಶಾಂತಿಯಿಂದ ನಲಿದಾಡುವುವಂತಾಗುವುದು.