ಉತ್ತಮರನ್ನು ಅಧಮರನ್ನಾಗಿ ಮಾಡುವಲ್ಲಿ, ಆದರೆ ಆ ರಹಸ್ಯ ಕೆಲಸವು ಜನರಿಗೆ ‘ಸಹಜ’ ಎಂದು ತೋರುವ ರೀತಿಯಲ್ಲಿ ಮಾತ್ರ ಆ ಪ್ರಾಚೀನ ವಾಮಚಾರವು ಈ ಜಗತ್ತಿನಲ್ಲಿ ಬದಲಾವಣೆಯನ್ನು ತರುತ್ತಿರುವುದು. ಅದು ಅನೈತಿಕ ಕಾಮದ ಆಸೆಯನ್ನು ಹೆಚ್ಚಿಸುತ್ತಾ ಹೋಗುವುದು ಮತ್ತು ಎಲ್ಲರೂ ಇತರ ಧರ್ಮದ ದೇವರನ್ನು ಧ್ವೇಷಿಸುವಂತೆ ಮಾಡಿ, ಆ ಧ್ವೇಷ ಸಂಕಲ್ಪದ ಹಿನ್ನೆಲೆಯಲ್ಲಿ, ಈ ಜಗತ್ತಿನ ಎಲ್ಲಾ ದೇವಸಂಕಲ್ಪಗಳನ್ನು ನಾಶ[ಶಕ್ತಿಹೀನ]ಮಾಡುತ್ತಿರುವುದು. ಆ ವಾಮಾಚಾರ ಸಂಕಲ್ಪ ಲೋಕದಲ್ಲಿ ‘ದೇವರು’ ಎಂಬುವುದು ಮಾನವನ ಸದ್ಗುಣಗಳ ಒಂದು ಅತಿ ದೊಡ್ಡ ಆದರ್ಶ ಸಂಕಲ್ಪವಾಗಿ ಮಾತ್ರ ಪರಿಗಣಿಸಲ್ಪಟ್ಟಿರುವುದು. ಅಂದರೆ, ದೇವ, ದೇವತೆ, ಸೃಷ್ಟಿಕರ್ತ ದೇವರು, ಇತ್ಯಾದಿ ರೀತಿಯಲ್ಲಿ ಹಲವು ದೇವರುಗಳು ಮತ್ತು ಅವುಗಳ ಹಲವು ವಿಧಗಳ ಪುರಾಣದ ಹಿನ್ನೆಲೆಯಲ್ಲಿ ಅಲ್ಲಿ ಸಂಕಲ್ಪಿಸಲ್ಪಟ್ಟಿಲ್ಲ ಎಂದು ಅರ್ಥ. ಒಂದು ಧರ್ಮದಲ್ಲಿರುವವರು ಇತರ ಎಲ್ಲಾ ಧರ್ಮಗಳ ದೇವರನ್ನು ಸೈತಾನ ಎಂದಾಗ, ಅಲ್ಲಿ, ಆ ಪ್ರಾಚೀನ ವಾಮಾಚಾರದ ಸಂಕಲ್ಪ ರೀತಿಯ ಪ್ರಕಾರ, ನಡೆವುದು ಈ ಜಗತ್ತಿನ ಎಲ್ಲಾ ದೇವಸಂಕಲ್ಪದ ಒಟ್ಟು ಸದ್ಗುಣ ಆದರ್ಶವನ್ನು ಕೊಲ್ಲುವುದಾಗಿದೆ! ಈ ಅಂಶವನ್ನು ಸರಿಯಾಗಿ ಗಮನಿಸಬೇಕು. ಅಂದರೆ, ಜನರು ಇತರ ಧರ್ಮದ ದೇವರನ್ನು ನಿಂದಿಸುವಾಗ ಮತ್ತು ಇತರ ರೀತಿಗಳಲ್ಲಿ ಧ್ವಂಸ ಮಾಡುವಾಗ, ಅದು ತನ್ನದೇ ದೇವರನ್ನು ಹಲವು ಪಟ್ಟು ಸೈತಾನನ್ನಾಗಿ ಮಾಡುವುದಕ್ಕೆ ಸಮವಾಗುವುದು ಎಂದು ಅರ್ಥ! ಈ ಎಲ್ಲಾ ಮೋಸದ ಕೆಲಸಗಳ ಪರಿಣಾಮವಾಗಿ, ಅವುಗಳ ಪ್ರಕಾರ, ಮುಂದೆ, ಕಾಲ ಹೋದಂತೆ ಅನಿವಾರ್ಯವಾಗಿ ಧರ್ಮಗಳೆಲ್ಲವೂ ನಾಶವಾಗಲೇ ಬೇಕು, ಮತ್ತು ಧರ್ಮಗಳ ಹೆಸರುಗಳು ಮಾತ್ರ ಅಧರ್ಮ, ಅನೈತಿಕತೆಗಳನ್ನು ‘ಧರ್ಮ’ ಎಂದು ತಿಳಿಯುತ್ತಾ ಅವನ್ನು ಹೊತ್ತುಕೊಂಡಿರಬೇಕು ಎಂದಾಗಿದೆ! ಯಾವ ಧರ್ಮವೂ ಇದನ್ನು ತಪ್ಪಿಸುವ ಹಾಗಿಲ್ಲ ಮತ್ತು ಅದು ಸಾಧ್ಯವೂ ಇಲ್ಲ! ಮುಂದೆ, ಕೆಲವು ನೂರು ವರುಷಗಳ ಅಂತರದಲ್ಲಿ ಎಲ್ಲವೂ ಒಂದೇ ರೀತಿಯಲ್ಲಿ ನಾಡು ಅಥವಾ ನಗರದಲ್ಲಿ ಜೀವಿಸುವ ಕಾಡು ಜನಾಂಗವಾಗಿ ಮಾರ್ಪಡುವವು! ಇದನ್ನು ಎಲ್ಲಾ ಧರ್ಮಗಳಲ್ಲೂ ಹಲವು ಸಹಸ್ರ ವರುಷಗಳ ಮೊದಲೇ ಅವು ಸೂಚಿಸಿವೆ!! ಆದರೆ, ಅವುಗಳನ್ನು ಜಗತ್ತಿಗೆ ಸಹಜವಾಗಿ ಬರುವ ಆ ಅತ್ಯಂತ ಕೆಟ್ಟ [ಜನರಿರುವ] ಕಾಲ ಎಂದು ಎಲ್ಲಾ ಧರ್ಮಗಳು ಒಂದೇ ರೀತಿಯಲ್ಲಿ ಬಣ್ಣಿಸುವಂತೆ, ಮತ್ತು ಅದು ದೇವರದೇ ನುಡಿ ಎಂಬಂತೆ ಚಿತ್ರಿಸಿವೆ ಅಷ್ಟೆ!! ಕಾರಣವೇ ಇಲ್ಲದೆ ಕಾಲವು ಜಗತ್ತಿನ ಎಲ್ಲಾ ಜನರನ್ನು ಹೇಗೆ ಕೆಟ್ಟವರನ್ನಾಗಿ ಮಾಡುವುದು ಎಂಬ ಪ್ರಶ್ನೆಯನ್ನು ಯಾರೂ ಧರ್ಮ ನಂಬಿಕೆಯೊಳಗೆ ಹಾಕುವಹಾಗಿಲ್ಲ, ಯಾಕೆಂದರೆ, ನಂಬಿಕೆಗಳ ಪ್ರಕಾರ ಪ್ರಶ್ನೆಯನ್ನು ಯಾರೂ ಹಾಕಬಾರದು, ಮತ್ತು “ಧರ್ಮದ ಮಾತುಗಳನ್ನು ಆಳದಲ್ಲಿ ನಂಬಿ ಅದರ ವಿರುದ್ಧ ಆಲೋಚನೆಯನ್ನೂ ಮಾಡದೆ ಜೀವಿಸಿದರೆ ಮಾತ್ರ ದೇವರಿಗೆ ಸಂತೋಷವಾಗುವುದು ಮತ್ತು ಆ ವ್ಯಕ್ತಿಗೆ ಸ್ವರ್ಗಕ್ಕೆ ಹೋಗಲು ಸಾಧ್ಯವಾಗುವುದು!” ಹಲವು ಸಹಸ್ರ ವರುಷಗಳಿಂದಲೂ ಈ ಧರ್ಮಗಳು ತಮ್ಮ ಧರ್ಮಗಳ ಮುಖ್ಯ ಪಾಲನೆ ಎಂದು ಈ ರೀತಿಯನ್ನೇ ಪಾಲಿಸುತ್ತಾ ಬಂದಿರುವವು!! ಆ ಪ್ರಾಚೀನ ವಾಮಾಚಾರದ ಇರವಿನ ಬಗ್ಗೆ ಇದುವರೆಗೂ ಯಾರಿಗೂ ತಿಳಿಯದೆ ಆಗಲು ಈ ಅಂಧ ನಂಬಿಕೆಗಳು ಒಂದು ಮುಖ್ಯ ಕಾರಣವಾಗಿ ಪರಿಣಮಿಸಿದವು.
ಆ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವು ಇನ್ನೂ ಹಲವು ಕಡೆಗಳಲ್ಲಿ ನಮಗೆ ಗೋಚರವಾಗುವುದು. ಅದರಲ್ಲಿ ಒಂದು ತಿಳಿಸಬಾರದ ವಿಷಯವಾದರೂ ಅದರ ಒಂದು ಚಿಕ್ಕ ಸುಳಿವನ್ನು ಮಾತ್ರ ಇಲ್ಲಿ ಕೊಡುವೆನು. ಜಗತ್ತಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಥಾಪಕ ಸ್ಥಾನದಲ್ಲಿರುವವರು, ಅವತಾರ ಪುರುಷರು ಎಂಬವರು, ಪೂಜ್ಯನೀಯರು, ಮರದಡಿಯ ಮಹಾತ್ಮರು, ಎಂದು ಈ ವರ್ಗದ ಎಲ್ಲರನ್ನೂ ಪರೀಕ್ಷಿಸಿ ನೋಡಿರಿ, ಆಗ ತಿಳಿಯುವುದು ಅವರೆಲ್ಲರೂ ಅವರ ಕಾಲದ ಇತರ ಮಾನವರಿಂದ ಭಯಾನಕ ಮಾನಸಿಕ ಅಥವಾ ಶಾರೀರಿಕ ಹಿಂಸೆಗೆ ಒಳಗಾದವರು ಎಂದು, ಇದು ಅತ್ಯಂತ ರಹಸ್ಯಗಳಲ್ಲಿ ಒಂದಾಗಿದೆ!!