[ಈಗ ಮಾತನಾಡುತ್ತಿರುವುದು ಜ್ಞಾನದ ಬಗ್ಗೆ ಅಲ್ಲ, ಬದಲು ವಿಜ್ಞಾನದ ಬಗ್ಗೆ ಆಗಿದೆ.]
- ವಿಜ್ಞಾನ ಎಂದರೆ ಅಲ್ಲಿ ಒಂದು ನಿಯಮ ಅಥವಾ ವ್ಯವಸ್ಥೆ ಇರುವುದು, ಅದು ತರ್ಕಬದ್ಧವಾಗಿ ಇರುವುದು. ಅಲ್ಲಿ ನಂಬಿಕೆ ಎಂಬ ಮಾತಿಗೂ ಅವಕಾಶವಿಲ್ಲ.
- ಈ ಮೇಲಿನ ಕಾರಣದಿಂದಾಗಿ ಮಾತ್ರ ಜನರು ತಮ್ಮ ನಂಬಿಕೆಯ ಚಲಾವಣೆ ಪೂರ್ತಿ ನಿಂತು ಬಿಡುವುದೋ ಎಂಬ ಭಯದಿಂದ ಧರ್ಮದೊಳಗೆ ವಿಜ್ಞಾನವನ್ನು ತರಲು ಬಯಸದೆ ಇರುವುದು. ಯಾರಾದರೂ ತಮ್ಮ ಧರ್ಮವು ವೈಜ್ಞಾನಿಕ ಎಂದ ಕ್ಷಣದಿಂದ ಆತನು ತನ್ನ ಧರ್ಮದ ಎಲ್ಲಾ ನಂಬಿಕೆಗಳನ್ನೂ ತರ್ಕಬದ್ದವಾಗಿ ವಿವರಿಸಬೇಕಾಗುತ್ತದೆ. ಆದರೆ ಅದಕ್ಕಾಗಿ ಕಷ್ಟಪಡಬಹುದೇ ಹೊರತು ಅದು ಸಾಧ್ಯವಿಲ್ಲ.
- ಧರ್ಮದೊಳಗೆ ವೈಜ್ಞಾನಿಕ ರೀತಿ ಬೇಕು ಎಂಬಲ್ಲಿ, ನೈತಿಕವಾಗಿ ವೈಜ್ಞಾನಿಕವಾಗಿರಬೇಕು ಎಂಬುವುದು ಮುಖ್ಯವಾಗಿದೆ. ಆದಕ್ಕೆ ಮಾನವನ ಜೀವನವು ಚೆನ್ನಾಗುವಂತೆ ಮಾಡುವ ಆ ನೈತಿಕ ಆದರ್ಶಗಳ ಅನಿವಾರ್ಯತೆಯನ್ನು ವೈಜ್ಞಾನಿಕವಾಗಿ ವಿವರಿಸಬೇಕಾಗುವುದು. ಆದರೆ ಹೆಚ್ಚಿನ ಧರ್ಮಗಳಲ್ಲೂ ಈ ನೈತಿಕ ಭಾಗವು ಜಾತೀ ಶೋಷಣೆ, ಧರ್ಮಾಂಧತೆ, ಇತ್ಯಾದಿ ಭಯಾನಕ ಅಮಾನವೀಯ ವಿವರಣೆಯೊಂದಿಗಿರುವುದೇ ಅಚ್ಚರಿಯನ್ನುಂಟು ಮಾಡುವ ವಿಷಯವಾಗಿದೆ!! ಅಲ್ಲಿ ವೈಜ್ಞಾನಿಕ ರೀತಿಯಲ್ಲದ ನಂಬಿಕೆಗಳನ್ನು ಆ ವಿಕೃತ ವಿವರಣೆಗಳಿಗಾಗಿ ಉಪಯೋಗಿಸುವರು.
- ಮನೋ ವೈಜ್ಞಾನಿಕ ರೀತಿಯಲ್ಲಿ ಒಂದು ಪ್ರತ್ಯೇಕ ರೀತಿಯಾದ ತಂತ್ರ, ಮಂತ್ರ, ಯಂತ್ರಗಳನ್ನು ಅಥವಾ ಇನ್ನಾವ ವಿಧಾನವನ್ನೂ ಧರ್ಮದೊಳಗೆ ಬಳಸುವುದು ರೂಢಿಯಾಗಿದೆ. ಆದರೆ ಈ ಮನೋ ವಿಜ್ಞಾನದ ಲಾಭವನ್ನು ಪಾಪಿಗಳು, ದುಷ್ಟರೂ ನೀಚ ಕೆಲಸಕ್ಕೆ ದುರುಪಯೋಗ ಮಾಡುವುದನ್ನು ತಡೆಯಲು ಸಾಧ್ಯವಾಗಲಾರದು. ಯಾಕೆಂದರೆ ಅದು ಒಂದು ರೀತಿಯ ಮನೋ ವಿಜ್ಞಾನ, ಅದನ್ನು ಯಾರಿಗೂ ಬಳಸಬಹುದು! ಹೀಗಿರುವಾಗ, ಒಂದು ಮುಖ್ಯ ವಿಚಾರವನ್ನು ನಾವು ಗಮನದಲ್ಲಿಡಬೇಕಾಗುವುದು. ಧರ್ಮದಲ್ಲಿ ವೈಜ್ಞಾನಿಕ ರೀತಿ ಇದ್ದಲ್ಲಿ ಮಾತ್ರ ಸಾಲದು ಆದರೆ ಅದು ಸಮಾಜದಲ್ಲಿ ಸತ್ಯ, ಪ್ರೀತಿ, ನೀತಿಯ ಬೆಳವಣಿಗೆಗೆ ಸಹಾಯಕವಾಗಿ ಇರಲೇಬೇಕು ಎಂಬುವುದೇ ಆ ಮುಖ್ಯ ವಿಚಾರವಾಗಿರುವುದು. ಒಟ್ಟಿನಲ್ಲಿ, ಧರ್ಮ. ಪಂಥಗಳಲ್ಲಿನ ಎಲ್ಲಾ ವಿವರಣೆಗಳನ್ನೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಹಿನ್ನೆಲೆಯ ಆದರ್ಶಗಳೆಂದು, ಆ ವೈಜ್ಞಾನಿಕ ರೀತಿಯಲ್ಲಿ ವಿವರಿಸಲ್ಪಟ್ಟರೆ ಮಾತ್ರ ಧರ್ಮ, ಪಂಥಗಳು ಆ ಪ್ರಾಚೀನ ವಾಮಾಚಾರದ ಎಲ್ಲಾ ಅಪಾಯಗಳನ್ನೂ ಮೀರಿ, ಪೂರ್ಣ ಮತ್ತು ಪವಿತ್ರವಾಗಲು ಸಾಧ್ಯವಾಗುವುದು.