ಇತರ ವಿಚಾರಗಳು (ಸಂಕ್ಷಿಪ್ತವಾಗಿ)

ಆಧುನಿಕ ಗುರುಗಳು ಆಧ್ಯಾತ್ಮವು ಈ ಭೂಮಿಯ ಜೀವನದ ಉನ್ನತಿಗೆ ಸಹಾಯ ಮಾಡುವುದು ಎನ್ನುವರು. ಆದರೆ, ಹಿಂದಿನಿಂದಲೇ, ಆಧ್ಯಾತ್ಮವು ಪೂರ್ತಿಯಾಗಿ ಮರಣಾನಂತರದ ಸ್ವರ್ಗ ಅಥವಾ ಮೋಕ್ಷವನ್ನು ಪಡೆಯುವುದರ ಬಗ್ಗೆ ಹೇಳುವುದು ಎಂದು ಅರಿಯಲ್ಪಟ್ಟಿರುವುದು. ಮಾತ್ರವಲ್ಲ, ಅದನ್ನು ಗಳಿಸಲು ಮಾಡಬೇಕಾದ ಸಾಧನೆಗಳ ಬಗ್ಗೆ ಕೂಡಾ ಅದು ತಿಳಿಸಿಕೊಡುವುದು. ಅದು ಈ ಭೂಮಿಗೆ ಸಂಬಂಧಪಟ್ಟ ಜೀವನದ ಬಗ್ಗೆ ಏನೂ ಮಾತನಾಡುವುದಿಲ್ಲ, ಯಾಕೆಂದರೆ ಆಧ್ಯಾತ್ಮವು ಅದನ್ನು ತ್ಯಾಗ ಮಾಡಲು ಹೇಳುವುದು. ಹೀಗೆ, ಜೀವನವನ್ನು ತ್ಯಾಗ ಮಾಡಲು ಹೇಳುವ ಈ ಆಧ್ಯಾತ್ಮವು, ಆಧುನಿಕ ಗುರುಗಳು ಹೇಳುವಂತೆ, ಈ ಭೂಮಿಯ ಜೀವನವನ್ನು ಹೇಗೆ ಮತ್ತು ಎಷ್ಟರ ಮಟ್ಟಿಗೆ ಸಹಾಯ ಮಾಡಬಹುದು ಎಂಬುವುದೇ ಅಚ್ಚರಿಯಾಗಿದೆ!! ಹಾಗಾಗಿ, ಇದರ ಅಗತ್ಯತೆಯು ನಿತ್ಯಜೀವನದಲ್ಲಿ ಜನಸಾಮಾನ್ಯರಿಗೆ ಇಲ್ಲದಿರುವುದು. [ಇತರ ಧರ್ಮಗಳ ಮೋಕ್ಷ ರೀತಿ ಮತ್ತು ಸ್ವರ್ಗ ರೀತಿಗಳು ತಪ್ಪು ಎಂದು ಈ ಧರ್ಮ, ಪಂಥಗಳು ಪರಸ್ಪರ ವಾದಿಸಿ ಜಯಿಸಲು ಪ್ರಯತ್ನಿಸುವಾಗ, ಈ ಮೋಕ್ಷ, ಸ್ವರ್ಗಗಳು ಎಲ್ಲವೂ ‘ತಪ್ಪು’ ಎಂದು ಈ ಧರ್ಮ, ಪಂಥಗಳೇ ವಾದಮಾಡಿ ಸಾಧಿಸಿ ತೋರಿಸದಂತೆ ಆಗುವುದು ಎಂಬುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು] ಇನ್ನು, ಮಹಾಜೀವನವು ಮರಣಾನಂತರದ ಸ್ವರ್ಗ, ಮೋಕ್ಷದ ಬಗ್ಗೆ ಏನನ್ನೂ ಹೇಳುವುದಿಲ್ಲ. ಮನುಷ್ಯರು ಅವರವರ ಕೈಯಲ್ಲಿರುವ ಈ ಒಂದು ಜೀವನವನ್ನು ನೈತಿಕತೆಯ ಚೌಕಟ್ಟಿನೊಳಗೆ ಹೇಗೆ ಸುಂದರಗೊಳಿಸಬಹುದು, ಅದನ್ನು ಹೇಗೆ ಆನಂದದಲ್ಲಿ ಜೀವಿಸಬಹುದು ಮತ್ತು ಅದಕ್ಕೆ ಮಾಡಬೇಕಾಗಿರುವ ಸಾಧನೆಗಳ ಬಗ್ಗೆ ಮನೋವೈಜ್ಞಾನಿಕವಾಗಿ ತಿಳಿಸಿಕೊಡುವುದು. ಹಾಗಾಗಿ, ಆಧ್ಯಾತ್ಮದ ಸಾಧನೆಗಳು ಅವರವರ ನಂಬಿಕೆಗಳಂತೆ ಬೇರೆಬೇರೆ ಅಥವಾ ವಿರುದ್ಧ ಆಗುರುತ್ತವೆ, ಆದರೆ ಮಹಾಜೀವನದ ಸಾಧನೆಗಳು ಜಗತ್ತಿನ ಎಲ್ಲರಿಗೂ ಸೇರಿ ಒಂದೇ ರೀತಿಯದ್ದಾಗಿರುತ್ತವೆ.

 ***************

ಒಂದಕ್ಕೊಂದು ಹೋಲಿಕೆ ಮಾಡುವುದು ಮನುಷ್ಯ ಸಹಜಗುಣ. ಅದು ತಪ್ಪಲ್ಲ. ಆದರೆ ಹೋಲಿಸುವಾಗ ಎಚ್ಚರ ವಹಿಸಬೇಕಾದ ಒಂದು ಅಂಶವಿದೆ. ಅದೇನೆಂದರೆ, ಲೌಕಿಕದ ಮನುಷ್ಯ ತನಗಿಂತ ಸೌಕರ್ಯಗಳ ಭಾಗಗಳಲ್ಲಿ ಕೆಳಗಿರುವ ಜನರೊಂದಿಗೆ ಹೋಲಿಸಿ ಕೊಳ್ಳಬಹುದು. ಉದಾ: ಸಣ್ಣ ಮನೆ ಮಾತ್ರ ಇರುವವರು ಮನೆಯೇ ಇಲ್ಲದೆ ಬೀದಿ ಬದಿಯಲ್ಲಿ ಬದುಕುವವರೊಂದಿಗೆ ಹೋಲಿಸಿಕೊಳ್ಳಬಹುದು. ಆಗ ಮಾತ್ರ ಮನಸಸ್ಸು ತನ್ನಲ್ಲಿರುವುದನ್ನು ಸಂತೃಪ್ತಿಯಲ್ಲಿ ಅನುಭವಿಸುತ್ತದೆ. ಆದರೆ ತನಗಿಂತ ಮೇಲಿನ ಹಂತದ ಜನರೊಂದಿಗೆ ಹೋಲಿಸಿದಾಗ ಸಹಜವಾಗಿ ಅದು ತನಗಿಲ್ಲವಲ್ಲ ಎಂಬ ಕೊರಗುವಿಕೆಗೆ ಕಾರಣವಾ ಗಬಹುದು. ಮತ್ತೆ ಈ ಕೊರಗುವಿಕೆಯೇ ಅಲ್ಪತನ ಅಸೂಯೆ ಸ್ವಾರ್ಥ, ಕೋಪ, ಅಹಂಕಾರ ಇತ್ಯಾದಿ ಮಾನಸಿಕ ತುಮುಲಗಳಿಗೆ ಕಾರಣವಾಗುವುದು. ಇನ್ನು ನಮ್ಮನ್ನು ಮೇಲಿನ ಹಂತದ ಆದರ್ಶಗಳೊಂದಿಗೆ ಹೋಲಿಸಿದಾಗ ಅದು ಆತ್ಮಪರಿಶೋಧನೆಯ ರೀತಿಯಾಗಿ ನಮ್ಮ ವ್ಯಕ್ತಿತ್ವದಲ್ಲಿರುವ ಕೊರತೆಗಳನ್ನು ತಿದ್ದಲು ಅದು ಸಹಕಾರಿಯಾಗುತ್ತದೆ.

 ****************

ಹಾಸಿಗೆ ಹಿಡಿದವನಿಗೆ ಹಾಸಿಗೆಯಿಂದ ಏಳುವುದೇ ಸರ್ವಸ್ವವಾಗುವುದು. ಹಾಸಿಗೆಯಿಂದ ಎದ್ದವನಿಗೆ ಮೂರು ಹೊತ್ತು ಊಟವೇ ಸರ್ವಸ್ವವಾಗುವುದು. ಮೂರು ಹೊತ್ತು ಊಟ ಇದ್ದವನಿಗೆ ಒಂದು ಚಿಕ್ಕ ಮನೆಯೇ ಸರ್ವಸ್ವವಾಗುವುದು. ಒಂದು ಚಿಕ್ಕ ಮನೆ ಇದ್ದವನಿಗೆ ದೊಡ್ಡ ಮನೆ, ಕಾರುಗಳೇ ಸರ್ವಸ್ವವಾಗುವುದು. ದೊಡ್ಡ ಮನೆ, ಕಾರು ಇದ್ದವನಿಗೆ ಅಧಿಕಾರ, ಸ್ಥಾನ ಮಾನವೇ ಸರ್ವಸ್ವವಾಗುವುದು. ಅಧಿಕಾರ, ಸ್ಥಾನ ಮಾನ ಇದ್ದವನಿಗೆ ಅದಕ್ಕಿಂತಲೂ ಮೇಲೇರುವುದೇ ಸರ್ವಸ್ವವಾಗುವುದು. ಹೀಗೆ ಮತ್ತೂ ಮೇಲೇರಿದವನಿಗೆ ಇತರರು ಆ ಹಂತಕ್ಕೆ ಏರಬಾರದು ಎಂಬುವುದೇ ಸರ್ವಸ್ವವಾಗುವುದು!!

ಸಮಾಜದಲ್ಲಿ ಹೆಚ್ಚಿನವರೂ ಮೇಲು ಮೇಲಿನ ತನ್ನ ಪ್ರತಿ ಹಂತದಲ್ಲೂ, ತನ್ನ ಕೆಳಗಿನ ಹಂತದವರನ್ನು ಬಡವ ಎಂದು ತಿಳಿದೇ ಆತನೊಂದಿಗೆ ವ್ಯವಹರಿಸುವರು. ಈ ರೀತಿಯ ಜನರಿಂದ ಪ್ರೀತಿಯನ್ನು ಎಂದೂ ನಿರೀಕ್ಷಿಸಲು ಸಾಧ್ಯವಾಗದು ಎಂಬುವುದು ಒಂದು ದೊಡ್ಡ ಸತ್ಯವಾಗಿದೆ. ಯಾಕೆಂದರೆ, ನಾಳೆ ನೀವು ಎಲ್ಲಾದರೂ ಸೋತು ಅವರಿಗಿಂತ ಕೆಳಗಿನ ಹಂತಕ್ಕೆ ಹೋಗಿಬಿಟ್ಟರೆ, ಅವರ ಮೊದಲ ನಿಮ್ಮ ಮೇಲಿನ ಪ್ರೀತಿಯು, ಮೆಲ್ಲಗೆ ಬಡವನ ಮೇಲಿನ ಅಪಹಾಸ್ಯವಾಗಿ ನಿಮ್ಮನ್ನು ತಲುಪುವುದು ನಿಮಗೆ ಸ್ಪಷ್ಟ ಅನುಭವವಾಗಬಹುದು. ಇಲ್ಲಿ, ಹಣವೇ ಪ್ರೀತಿಯನ್ನು ಸೃಷ್ಟಿಸುವ ಯಂತ್ರವಾಗಿ ಕೆಲಸ ಮಾಡುವುದು!

 *****************

ಧರ್ಮ, ಪಂಥಗಳಲ್ಲಿ ಇದುವರೆಗೂ ಸಾರ್ವತ್ರಿಕ ಪ್ರೀತಿ ಬೆಳೆಸಲ್ಪಡಲಿಲ್ಲವೇ?

ಮೊದಲೇ ಎಲ್ಲರಿಗೂ ತಿಳಿದಂತೆ ಎಲ್ಲಾ ಧರ್ಮ ಪಂಥಗಳಲ್ಲೂ ಮಹಾತ್ಮರು ಜೀವಿಸಿ ಹೋಗಿರುವರು. ಅವರು ಸಾರ್ವತ್ರಿಕ ಪ್ರೀತಿಯನ್ನು ಬೆಳೆಸಿದ್ದಾರೆ. ಆದರೆ ಮೊದಲು ಹೇಳಿರುವಂತೆ ಅವರು ಬೆರೆಳೆಣಿಕೆಯಲ್ಲಿರುವರೆಂದು ಮರೆಯಬಾರದು. ಆದರೆ ಉಳಿದೆಡೆಯಲ್ಲಿ ಆ ಸಾರ್ವತ್ರಿಕ ಪ್ರೀತಿಯು, ತಮ್ಮ ತಮ್ಮ ಪಂಗಡಕ್ಕೆ ಮಾತ್ರ ಸೀಮಿತವಾಗಿಸಲ್ಪಡುವಲ್ಲಿ ನಾಶಮಾಡಲ್ಪಟ್ಟಿತು. ಅದರ ನಂತರ ಅದರ ಸ್ವರೂಪವನ್ನು ಮತ್ತೂ ಹಾಳುಮಾಡಲಾಯಿತು, ಆಗ ಅದುವೇ ತಮ್ಮದಲ್ಲದವರನ್ನು ಧ್ವೇಷಿಸುವಂತೆ ಮಾಡಿತು. ಅನಂತರ ಮತ್ತೂ ಹಾಳಾದಾಗ ಅಸಹಿಷ್ಣುತೆ ಬೆಳೆಯಲ್ಪಟ್ಟಿತು. ಕೊನೆಗೆ ಅವುಗಳು ಆ ಪರಮ ಪಾವನ ಸಾರ್ವತ್ರಿಕ ಪ್ರೀತಿಯನ್ನು ತಮ್ಮ ತಮ್ಮ ಧರ್ಮ, ಪಂಥಗಳ ಪರವಾಗಿ ಕಗ್ಗೊಲೆ ಮಾಡುವ ರಾಕ್ಷಸನನ್ನಾಗಿ ಮಾಡಿಬಿಟ್ಟವು!

 ******************

2. ಹಲವು ಧರ್ಮಗಳಿಗೆ ಹಲವು ರೀತಿಯ ಪುರಾಣಗಳಿವೆ, ಒಬ್ಬನೇ ಸೃಷ್ಟಿಕರ್ತ ದೇವರು ಯಾಕೆ ಹೀಗೆಲ್ಲಾ ಮಾಡಿದ್ದಾನೆ?

ಒಂದು ಪ್ರಶ್ನೆಗೆ ಹಲವು ವ್ಯತ್ಯಸ್ಥ ಉತ್ತರಗಳು ಇರಲು ಸಾಧ್ಯವಿಲ್ಲ. ಇದೇ ರೀತಿ ಒಬ್ಬ ಸೃಷ್ಟಿಕರ್ತ ದೇವರು ಹಲವು ಪುರಾಣಗಳನ್ನು ಹಲವು ಕಡೆಗಳಲ್ಲಿ ಸತ್ಯವೆಂದು ತನ್ನ ಭಕ್ತರಿಗೆ ತಿಳಿಸಲೂ ಸಾಧ್ಯವಿಲ್ಲ. ಇದನ್ನರಿಯದೆ ಎಲ್ಲರೂ ತಮ್ಮ ತಮ್ಮ ಸೃಷ್ಟಿಕರ್ತ ದೇವನ ಪುರಾಣವು ಮಾತ್ರ ಸತ್ಯವೆಂದು ತಮ್ಮೊಳಗೆ ಹೊಡೆದಾಡಿಕೊಳ್ಳುತ್ತಿರುವರು. ಆದರೆ ಧರ್ಮದ ಮುಖ್ಯ ವಿಚಾರಗಳನ್ನು ಮೂಲೆಗೆ ತಳ್ಳುತ್ತಿರುವರು. ಅಷ್ಟು ಮಾತ್ರವಲ್ಲದೆ ಪ್ರತಿ ಧರ್ಮಗಳು ತಮ್ಮ ತಮ್ಮ ಧರ್ಮ ಪಂಥಗಳನ್ನು ಹೆಚ್ಚು ಹೆಚ್ಚು ವೈಜ್ಞಾನಿಕವೆಂದು ತಿಳಿಸುವುದಕ್ಕೂ ಪ್ರಯತ್ನಿಸುವವು. ಆದರೆ ಸಾರ್ವತ್ರಿಕ ಪ್ರೀತಿಯೇ ಧರ್ಮಗಳೆಲ್ಲದರ ಮೂಲ ವಿಜ್ಞಾನ ಎಂದೂ ಅದನ್ನು ಜಗತ್ತಿಗೆ ಸಾರಿ ಹೇಳದಿದ್ದಲ್ಲಿ ಆ ಧರ್ಮ ಅಥವಾ ಪಂಥವು ಬರಿಯ ಅಜ್ಞಾನ ಮಾತ್ರವಾಗಿ ಹೋಗುವುದೆಂದೂ ಅವುಗಳು ತಿಳಿಯದಾದವು! ಆದರೆ ಈಗಲೂ ಆ ಧರ್ಮಗಳು ತಮ್ಮ ತಮ್ಮ ಧರ್ಮಗಳಿಗೆ ಇತರ ಧರ್ಮೀಯರನ್ನು ಮತಾಂತರ ಮಾಡುವುದರಲ್ಲಿ ಹಗಲೂ ರಾತ್ರಿ ತಲ್ಲೀನವಾಗಿವೆ ಎಂಬುವುದನ್ನು ನೋಡುವಾಗ, ಜಗತ್ತಿನಲ್ಲಿ ನಿಜ ಧರ್ಮದ ಸ್ವರೂಪದ ತಿಳುವಳಿಕೆಯ ಅಭಾವವು ಸ್ಪಷ್ಟವಾಗಿ ಕಾಣಿಸುವುದು.

ಒಳಿತೇ ದೇವರು, ಸ್ವಾರ್ಥವು ಎಂದಿಗೂ ದೇವರ ಸ್ವಭಾವವಾಗಲು ಸಾಧ್ಯವಿಲ್ಲ. ಆದುದರಿಂದ ಸಾರ್ವತ್ರಿಕ ಪ್ರೀತಿಯೇ ಸೃಷ್ಟಿಕರ್ತನು ಬಯಸುವ ಆ ನಿಜವಾದ ಧರ್ಮವೆಂದು ಸ್ಪಷ್ಟವಾಯಿತು. ಯಾವುದೇ ಧರ್ಮವು ಅದು ನಿಜವಾದ ಧರ್ಮವಾದಲ್ಲಿ ಅದು ಈ ತತ್ವವನ್ನು ಎತ್ತಿ ಹಿಡಿಯಲೇಬೇಕಾಗುವುದು, ತಮ್ಮೊಳಗೆ ಹೊಡೆದಾಡಿಕೊಳ್ಳುವ ಪುರಾಣಗಳನ್ನಲ್ಲ. ಅಂದರೆ, ಧರ್ಮವು ಬರಿಯ ಸತ್ಯ, ಪ್ರೀತಿ, ನೀತಿಯಲ್ಲೇ ಅಡಕವಾಗಿದೆ, ಅವುಗಳಿಗೆ ಗ್ರಂಥಗಳು ಮತ್ತು ಗ್ರಂಥಾಲಯಗಳು ಬೇಕಾಗಿಲ್ಲವೆಂದು ಇದರಿಂದ ನಮಗೆ ತಿಳಿಯುವುದು. ದುರಾದೃಷ್ಟವಶಾತ್ ನಮಗೆ ಕಾಣ ಸಿಗುವ ಧರ್ಮ, ಪಂಥಗಳು ತಮ್ಮದು ಶ್ರೇಷ್ಠವೆಂದು ವಾದಿಸುವ ರೀತಿಯವುಗಳಾಗಿವೆ. ದಯವಿಟ್ಟು, ಸತ್ಯ ಸಂಧವಾಗಿ ಒಮ್ಮೆ ಎಲ್ಲರೂ ಆಲೋಚಿಸಿ ನೋಡಿರಿ, ನಿಜವಾಗಿಯೂ ಸೃಷ್ಟಿಕರ್ತ ದೇವನಿದ್ದಲ್ಲಿ, ಈ ರೀತಿಯನ್ನು ಆತನು ಒಪ್ಪುವನೇ?

 ****************

ಧರ್ಮಗಳು ಮಾನವನ ಸ್ವಭಾವ ಶುದ್ಧೀಕರಣವನ್ನು ಮಾಡಬೇಕು, ಆದರೆ ಧರ್ಮಗಳು ಬೆಳೆಯುತ್ತಾ ಬಂದರೂ ಮಾನವನ ಸ್ವಭಾವ ಶುದ್ಧೀಕರಣವು ಪಾತಾಳಕ್ಕೆ ಇಳಿಯಲು ಕಾರಣವೇನು?

ಮಾನವನ ಹುಟ್ಟಿನಿಂದಿರುವ ಸಹಜ ಸ್ವಭಾವಗಳಲ್ಲಿ ಎರಡು ತರದವುಗಳಿವೆ. ಒಂದು ಧನಾತ್ಮಕ ಸ್ವಭಾವವಾದರೆ ಇನ್ನೊಂದು ಋಣಾತ್ಮಕ ಸ್ವಭಾವವಾಗಿರುವುದು. ತಾಯಿ ಮಗುವಿನ ಸಂಬಂಧದಲ್ಲಿ ಕಾಣಿಸುವ ನಿಸ್ವಾರ್ಥ ಪ್ರೀತಿಯು ಧನಾತ್ಮಕವಾದರೆ ಇನ್ನು ಸ್ವಾರ್ಥ ಮೂಲದಿಂದಿರುವ ದ್ವೇಷ ಇತ್ಯಾದಿಗಳು ಋಣಾತ್ಮಕಗಳಾಗಿವೆ. ಧರ್ಮಗಳ ಸೃಷ್ಠಿಯು, ಈ ಋಣಾತ್ಮಕ ಮೂಲದಿಂದ ಹುಟ್ಟಿ ಬರುವ ಸಹಜ ಸ್ವಭಾವದಿಂದ ಮಾನವನನ್ನು ಮೇಲೆತ್ತಿ ಆತನನ್ನು ಒಬ್ಬ ಉತ್ತಮ ಮಾನವನನ್ನಾಗಿ ಮಾಡುವುದಕ್ಕಾಗಿರುವುದು. ಮನಸ್ಸಿನೊಳಗಿನ ದಾನವನನ್ನು ತೊಲಗಿಸಿ ಅಲ್ಲಿ ಶುದ್ಧ ಮಾನವನನ್ನು ಪ್ರತಿಷ್ಠಾಪಿಸುವ ಈ ಕೆಲಸವೇ ನಿಜವಾದ ಧರ್ಮ ಪ್ರಚಾರದ ಕೆಲಸವಾಗಿರಬೇಕಾಗಿದೆ. ಆದರೆ ಧರ್ಮಗಳು ತಾವೇ ಸ್ವತಃ ಸ್ವಾರ್ಥವೆಂಬ ಈ ಋಣಾತ್ಮಕ ಸ್ವಭಾವಕ್ಕೆ ಬಲಿಯಾಗಿ ಹೋಗಿರುವುದು ಒಂದು ದುರಂತವಾಗಿದೆ. ಹೀಗಿರುವಾಗ, ಧರ್ಮಗಳ ಉಸಿರಾಗಿರುವ ಆ ಸಾರ್ವತ್ರಿಕ ಪ್ರೀತಿಗೆ ಧರ್ಮದೊಳಗೆ ಬಂದು ಸೇರಿಕೊಳ್ಳಲು ಯಾವದಾರಿಯೂ ಇಲ್ಲವಾಗಿಬಿಡುವುದು. ಆಗ ನಿಜವಾದ ಧರ್ಮಗಳೇ ಇಲ್ಲವಾಗುವುದು. ಮಹಾತ್ಮರುಗಳು ನಿಜ ಧರ್ಮಕ್ಕಾಗಿ ಎಷ್ಟೇ ಶ್ರಮವಹಿಸಿದರೂ ಅವರ ಮಾತಿಗೆ ಯಾರೂ ಕಿವಿಗೊಡಲಿಲ್ಲ! ಎಲ್ಲರ ಶ್ರದ್ದೆಯು, ತಮ್ಮ ತಮ್ಮ ಧರ್ಮಗಳಲ್ಲಿನ ಜನಸಂಖ್ಯೆ ವರ್ಧನೆಯಲ್ಲಿ ಮಾತ್ರ ಕೇಂದ್ರೀಕೃತವಾಗಿರುವುದು!!

 **************

ಸತ್ಯವು ಪೂರ್ಣವೆಂದು ಹೇಳುತ್ತಾರಲ್ಲ, ಅದರ ಅರ್ಥವೇನು?

ಹೌದು. ಸತ್ಯವು ಪೂರ್ಣವಾಗಿದೆ. ಅರ್ಧ ಸತ್ಯ, ಅಥವಾ ಕಾಲು ಸತ್ಯಗಳು ಇಲ್ಲವೆಂದೇ ಅದರ ಅರ್ಥ. ಇಲ್ಲಿ ಒಳಿತು, ಕೆಡುಕಿನಲ್ಲಿ ಒಳಿತನ್ನು ಕಂಡುಕೊಳ್ಳುವ ಸತ್ಯದ ವಿಚಾರವಾಗಿ ಮಾತ್ರ ಮಾತನಾಡುತ್ತಿರುವುದು, ಅಸ್ತಿತ್ವದ ಹಿನ್ನೆಲೆಯ ಸತ್ಯದ ವಿಚಾರವಲ್ಲವೆಂದು ತಿಳಿಯಬೇಕು. ಅಂದರೆ ಯಾರಾದರೂ ಪೂರ್ಣತೆಗಿಂತ ಕೆಳಗಿನ ಹಂತಕ್ಕೆ ಸತ್ಯವನ್ನು ತಂದರೆ, ಆಗ ಆ ಸತ್ಯವು ಅಲ್ಪಸತ್ಯವಾಗುವುದು, ಆಗ ಅದು ತನ್ನ ಹೆಸರನ್ನು ಬದಲಾಯಿಸುವುದು. ಅಲ್ಲಿ ಆದುವೇ ಸ್ವಾರ್ಥವೆಂದು ಕರೆಯಲ್ಪಡುವುದು. ಜಗತ್ತಿನಲ್ಲಿ ಧರ್ಮ, ಪಂಥಗಳೂ ಸೇರಿ ಹೆಚ್ಚಿನ ಕಡೆಗಳಲ್ಲೂ ಈ ಸ್ವಾರ್ಥದ ಅಲ್ಪ ಸತ್ಯಗಳೇ ಆ ಪೂರ್ಣಸತ್ಯದ ಬದಲು ಉಪಯೋಗಿಸಲ್ಪಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಎಲ್ಲಾ ಧರ್ಮಗಳಲ್ಲಿನ ಮಹಾತ್ಮರಲ್ಲಿ ಈ ಪೂರ್ಣಸತ್ಯವನ್ನು ನಮಗೆ ಕಾಣಲು ಸಾಧ್ಯವಾಗುವುದು. ಅವರ ಪವಿತ್ರ, ವಿಶಾಲ ಚಿಂತನೆಗಳಲ್ಲಿ ಮಾತ್ರ ಈ ಪೂರ್ಣಸತ್ಯವು ಜೀವಿಸುವವು. ಅವರ ಆ ಪೂರ್ಣಸತ್ಯದಿಂದ ಬೆಳೆದು ಬರುವ ಪೂರ್ಣಪ್ರೀತಿ ಮತ್ತು ಪೂರ್ಣಶಾಂತಿಯಿಂದ ಮಾತ್ರವೇ ಈ ಜಗತ್ತಿಗೆ ಶಾಶ್ವತ ಶಾಂತಿ ಆನಂದಗಳು ದೊರಕಲು ಸಾಧ್ಯವೆಂದು ಇದರಿಂದ ಸ್ಪಷ್ಟವಾಗುವುದು.

 *****************

3. ಧರ್ಮಪ್ರಚಾರ ಹೇಗಿರಬೇಕು?

ಸತ್ಯ, ಪ್ರೀತಿ, ನೀತಿಗಳಿಗೆ ಶ್ಲೋಕಗಳ ಅಗತ್ಯವಿದೆಯೇ? ಅಥವಾ ಗ್ರಂಥ, ಗ್ರಂಥಾಲಯಗಳ ಅಗತ್ಯವಿದೆಯೇ? ಆದರೆ ಅವುಗಳನ್ನು ಹೊರತಾಗಿರುವ ದೇವರು, ಧರ್ಮಗಳು ಇರಲು ಸಾಧ್ಯವೇ? ಇಲ್ಲ, ಇದುವೇ ಈ ಪ್ರಶ್ನೆಗಳ ಉತ್ತರ. ಅಂದರೆ ಸತ್ಯ, ಪ್ರೀತಿ, ನೀತಿ, ಇವುಗಳನ್ನು ಜೀವಿಸಿ ತೋರಿಸುವುದೇ ನಿಜವಾದ ಧರ್ಮ ಪ್ರಚಾರವಾಗಿದೆ. ಓದಿ ನೆನಪಿಟ್ಟುಕೊಂಡು ಧರ್ಮವನ್ನು ವಿವರಿಸುವುದು ಒಬ್ಬ ಪಾಪಿಗೂ ಸಾಧ್ಯವಾಗುವ ಕೆಲಸವಾಗಿದೆ. ಮಹಾತ್ಮರು ಧರ್ಮದ ನಿಜವಾದ ಪಾಲಕರು ಮತ್ತು ಪ್ರಚಾರಕರು. ಅವರು, ತಾವು ಧರ್ಮಮಾರ್ಗದಲ್ಲಿ ಜೀವಿಸಿ, ಅದನ್ನು ಜಗತ್ತಿಗೆ ಎತ್ತಿ ಹಿಡಿದಿದ್ದಾರೆ. ಆದರೆ ಇಂದು ಅಧರ್ಮ ಮಾರ್ಗದಲ್ಲಿ ಜೀವಿಸುವವರೇ ಹೆಚ್ಚಾಗಿ ಧರ್ಮ ರಕ್ಷಣೆಯ ಹೊಣೆಹೊತ್ತವರಂತೆ ಕಾಣಿಸಿಕೊಳ್ಳುವರು. ಇದು ಜಗತ್ತನ್ನು ಸರ್ವನಾಶದತ್ತ ನಡೆಸುವುದು.

 ********************

ಸೌಂದರ್ಯ ಎಂದರೇನು?

ಸೌಂದರ್ಯ ಎಂಬುವುದಕ್ಕೆ ಹಲವು ರೀತಿಯ ವಿವರಣೆಗಳಿವೆ. ಆದರೆ ಇದು ಅವುಗಳಿಂದೆಲ್ಲಾ ವ್ಯತ್ಯಸ್ಥವಾದ ಒಂದು ವಿವರಣೆಯಾಗಿರುವುದು. ಯಾವುದು ಸರಿಯಾಗಿ ವ್ಯವಸ್ಥೆಗೊಳಿಸಲ್ಪಟ್ಟಿದೆಯೋ ಅದುವೇ ಸೌಂದರ್ಯವಾಗಿದೆ. ಅಂದರೆ ಅದುವೇ ಮಾನವನಿಗೆ ಸುಂದರವಾಗಿ ಕಾಣಿಸುವುದು. ಒಬ್ಬ ವ್ಯಕ್ತಿಗೆ ಸರಿಯೆಂದು ಅಥವಾ ಸರಿಯಾಗಿ ವ್ಯವಸ್ಥೆಗೊಳಿಸಲ್ಪಟ್ಟಿದೆ ಎಂದು ತೋರದಲ್ಲಿ, ಅದು ಆ ವ್ಯಕ್ತಿಗೆ ಚಂದವಾಗಿ ಕಾಣಿಸಲಾರದು. ಪೂರ್ತಿಯಾಗದ ಕಟ್ಟಡವು ಪೂರ್ತಿಯಾದ ನಂತರದ ಕಟ್ಟಡಕ್ಕಿಂತ ಕಡಿಮೆ ಸೌಂದರ್ಯವನ್ನು ಹೊಂದಿರುವುದು. ವ್ಯವಸ್ಥೆಗೊಳಿಸಲ್ಪಟ್ಟ ಉದ್ಯಾನವು ಅವ್ಯವಸ್ಥಿತ ಉದ್ಯಾನಕ್ಕಿಂತ ಹೆಚ್ಚು ಸೌಂದರ್ಯವನ್ನು ಪಡೆದಿರುವುದು. ಯಾವುದು ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲ್ಪಟ್ಟಿದೆಯೋ ಅದುವೇ ಇತರ ವಸ್ತುಗಳು ಅಥವಾ ಜೀವಿಗಳಿಗಿಂತ ಹೆಚ್ಚು ಸೌಂದರ್ಯವನ್ನು ಪಡೆದಿರುವುದು ಎಂದು ಹೇಳಬಹುದು. ಪ್ರಕೃತಿ ಸೌಂದರ್ಯವೂ ಸೇರಿ ಎಲ್ಲಾ ಸೌಂದರ್ಯಗಳೂ ಇದೇ ರೀತಿಯಲ್ಲಿರುವವು ಎನ್ನಬಹುದು. ಕಲೆ, ಕ್ರೀಡೆಗಳಲ್ಲಿ ಈ ಸರಿಯಾಗಿ ಅಥವಾ ಉತ್ತಮವಾಗಿ ವ್ಯವಸ್ಥೆಗೊಳಿಸಲ್ಪಟ್ಟವುಗಳು ‘ನೈಪುಣ್ಯತೆ’ ಎಂಬಲ್ಲಿ ಕಾಣಿಸಿಕೊಳ್ಳುವವು. ಅಲ್ಲೆಲ್ಲಾ ಸೌಂದರ್ಯವು, ಆ ನೈಪುಣ್ಯತೆಗಳಲ್ಲಿ ಕಾಣಿಸಿಕೊಳ್ಳುವುದನ್ನು ನಮಗೆ ಕಾಣಬಹುದಾಗಿದೆ.

ಏನೇ ಆಗಲಿ ಒಂದು ವಿಷಯವನ್ನು ಸ್ಪಷ್ಟವಾಗಿ ನಾವು ಗಮನಿಸಬೇಕಾಗಿದೆ. ವ್ಯವಸ್ಥಿತವಲ್ಲದ್ದು ಅಥವಾ ವಕ್ರವಾಗಿದ್ದಲ್ಲಿ ಜನರು ಅದು ಸರಿಯಿಲ್ಲ ಎನ್ನುವರು, ಅದಕ್ಕೆ ಅದು ಚೆನ್ನಾಗಿಲ್ಲವೆಂದೂ ಹೇಳುವರು. ಅಂದರೆ ಯಾವುದಾದರೂ ವಕ್ರವಲ್ಲದೆ ಸರಿಯಾಗಿದ್ದಲ್ಲಿ, ಅದು ಸೌಂದರ್ಯವನ್ನು ಪಡೆಯುವುದೆಂದೂ ತಿಳಿಯುವರು.

ಸತ್ಯವು ಯಾವ ಕಾಲಕ್ಕೂ ವಕ್ರವಾಗದ ಕಾರಣ, ಸತ್ಯವು ಎಂದೆಂದಿಗೂ ಸುಂದರವಾಗಿಯೇ ಇರುವುದು. ಸತ್ಯವೇ ಪವಿತ್ರತೆಯಾಗುವುದೆಂದು ನಮಗೆ ತಿಳಿದಿದೆ. ಆದುದರಿಂದ ಪವಿತ್ರತೆಯನ್ನು ಹೊತ್ತ ಆ ಸತ್ಯಸಂಧರಾದ ಮಹಾತ್ಮರೇ ಆಧ್ಯಾತ್ಮ ಸೌಂದರ್ಯದ ನಿಧಿಗಳಾಗಿರುವರು. ಆ ಮಹಾತ್ಮರ ವಿಶಾಲ, ಪವಿತ್ರ ಆತ್ಮದ ರೀತಿಯಂತೆ ತಮ್ಮಲ್ಲೂ ಬೆಳೆಸಲು ಪ್ರಯತ್ನಿಸುವ ಆ ‘ಸತ್ಯಚಿಂತನೆ’ಯ ಕರ್ಮವು, ಈ ಜಗತ್ತಲ್ಲೇ ಅತ್ಯಂತ ಪವಿತ್ರ ಹಾಗೂ ಸೌಂದರ್ಯವನ್ನು ಪಡೆದ ಕರ್ಮವಾಗುವುದೆಂದೂ ಇದರಿಂದ ಸ್ಪಷ್ಟವಾಗುವುದು.

 ****************

ಧರ್ಮ, ಪಂಥಗಳ, ಧಾರ್ಮಿಕ ಭಾವನೆಗಳ ಲಾಭ ಜಗತ್ತಿಗೆ ಆಗಿಲ್ಲವೇ?

ಧಾರ್ಮಿಕ ಭಾವನೆ ಎಂದರೇನು? ಎಲ್ಲರ ಒಳಿತಿನ ಭಾವನೆ, ಧಾರ್ಮಿಕ ಭಾವನೆಯಾಗುವುದು. ಆದರೆ “ನನ್ನ ಅಥವಾ ನಮ್ಮ ಮಾತ್ರ ಒಳಿತು” ಎಂಬುವುದು ಧಾರ್ಮಿಕ ಅಥವಾ ಆಧ್ಯಾತ್ಮಿಕ ಭಾವನೆಯಾಗುವುದಿಲ್ಲ, ಅವು ಸ್ವಾರ್ಥ ಭಾವನೆಗಳಾಗುವವು. ನಾವು ಸ್ಪಷ್ಟವಾಗಿ ಇಲ್ಲಿ ಒಂದು ಅಂಶವನ್ನು ನೋಡೋಣ. ಇದನ್ನು ಅರಿತಲ್ಲಿ ಉಳಿದ ವಿವರಣೆಗಳ ಅಗತ್ಯವೇ ಇಲ್ಲವೆಂದು ನೀವೇ ಹೇಳುವಿರಿ. ಮಹಾತ್ಮರಲ್ಲದ ವ್ಯಕ್ತಿತ್ವಗಳಲ್ಲಿ, ಯಾವ ಧರ್ಮದ ಎಷ್ಟೇ ದೊಡ್ಡ ವ್ಯಕ್ತಿತ್ವವಾದರೂ ಅವರು ತಮ್ಮ ಧರ್ಮಗಳ ಶ್ರೇಷ್ಠತೆಯನ್ನು ಮಾತ್ರ ಎತ್ತಿ ಹಿಡಿಯಲು ಬಯಸುವರು. ದೇವರು ಜಗತ್ತಿಗೆ ಒಬ್ಬನೇ ಎಂದು ವಾದಿಸುವಾಗ, ಜಗತ್ತಿನ ಜನರೆಲ್ಲಾ ಸತ್ಯ, ಪ್ರೀತಿ, ನೀತಿಯೆಂಬ ಆ ಸೃಷ್ಟಿಕರ್ತದೇವನ ಮಕ್ಕಳು ಎಂಬಲ್ಲಿ ನಾವೆಲ್ಲಾ ಸಹೋದರ, ಸಹೋದರಿಯರಾಗುವೆವು, ಮತ್ತು ಒಂದು ಕುಟುಂಬದೊಳಗೆ ನಾವು ಹೇಗಿರಬೇಕೆಂಬ ವಿಚಾರ ಸರ್ವರಿಗೂ ತಿಳಿದಿರುವ ಹಿನ್ನೆಲೆಯಲ್ಲಿ, ಧರ್ಮವು ಬಹಳ ಸರಳವಾಗಿ ಇಷ್ಟರಲ್ಲೇ ಮುಗಿಯುವುದು. ಆದರೆ ಎಲ್ಲಾ ಧರ್ಮಗಳು ಮತ್ತು ಅವುಗಳ ಧರ್ಮಪ್ರಚಾರಗಳು ಈ ಸರಳ ಧರ್ಮಬೋಧನೆಯನ್ನು, ಹಲವು ಶ್ಲೋಕ, ಗ್ರಂಥ, ಗ್ರಂಥಾಲಯ, ನಂಬಿಕೆ, ಅಚಾರ ಇತ್ಯಾದಿಗಳ ಸಹಾಯದಿಂದ ಜನರಿಗೆ ತಿಳಿಯದಂತೆ ಮಾಡಿ ಈ ಸರಳಧರ್ಮದ ಆ ಪವಿತ್ರ ಸತ್ಯವನ್ನು ಕಷ್ಟಪಟ್ಟು “ನಾವು ಬೇರೆ, ನೀವು ಬೇರೆ” ಎಂಬಲ್ಲಿಗೆ ತರುವಲ್ಲಿ ತಮ್ಮ ತಮ್ಮ ಕೆಲಸವನ್ನು ಯಶಸ್ವಿಯಾಗಿ ಪೂರೈಸಿ ಅದನ್ನು ಬೆಳೆಸುತ್ತಾ ಬಂದಿರುವವು!! ಇದು ಧಾರ್ಮಿಕ ನಂಬಿಕೆ ಮತ್ತು ಧರ್ಮ ಪ್ರಚಾರವಾಗುವುದೇ? ಅಲ್ಲವೆಂದಾದರೆ, ಧರ್ಮಪ್ರಚಾರವು ಜಗತ್ತಲ್ಲಿ ಎಲ್ಲಿದೆ? ಬೆರೆಳೆಣಿಕೆಯ ಮಹಾತ್ಮರುಗಳನ್ನು ಬಿಟ್ಟಲ್ಲಿ, ಅದನ್ನು ಯಾರು ಮಾಡಿದ್ದಾರೆ?

ಒಳಿತಿನ ಭಾವನೆಯೇ ಪ್ರೀತಿ, ಅದುವೇ ಧಾರ್ಮಿಕ ಭಾವನೆ ಅಥವಾ ಧರ್ಮ. ಕೆಡುಕಿನ ಭಾವನೆಯೇ ದ್ವೇಷ, ಅದೇ ಅಧರ್ಮ. ಬೆರೆಳೆಣಿಕೆಯ ಮಹಾತ್ಮರು ಈ ಸಾರ್ವತ್ರಿಕ ಪ್ರೀತಿಯ ಹಿನ್ನೆಲೆಯಲ್ಲಿ ಆ ಸರಳಧರ್ಮದ ಸತ್ಯವನ್ನು ಬಿತ್ತರಿಸಲು ಪ್ರಯತ್ನಿಸಿದರು, ಆದರೆ ಉಳಿದೆಲ್ಲಾ ಜನಸಾಗರವು “ನಾವು ಬೇರೆ, ನೀವು ಬೇರೆ” ಎಂಬ ಧರ್ಮಾಂಧತೆಯ ಬೀಜವನ್ನು ಬಿತ್ತಿ, ಕೆಡುಕಿನ ಭಾವನೆಯನ್ನು ಬೆಳೆಸುವುದರ ಮೂಲಕ ಅಧರ್ಮವನ್ನೇ ಬೆಳೆಸಿ ತಂದವು. ಆದರೆ ಇದೇ ನಿಟ್ಟಿನಲ್ಲಿ, ವಿವಿಧ ಧರ್ಮಗಳು ತಮ್ಮೊಳಗಿನ ವ್ಯತ್ಯಾಸವನ್ನು ಹುಡುಕುವುದಾದರೆ, ಅವು, ಇವುಗಳ ತೀವ್ರತೆಗಳ ವ್ಯತ್ಯಾಸಗಳಲ್ಲಿ ಮಾತ್ರ ಕಾಣಿಸುವುದು ಅಷ್ಟೆ.

 *******************

ದೇವರನ್ನೇ ನಂಬದ ಧರ್ಮಗಳು ಇವೆ. ಆದರೆ ದೇವರ ಮೇಲಿನ ಭಯ ಜನರಿಗೆ ಇಲ್ಲವಾದರೆ ಜಗತ್ತು ಅಧರ್ಮದ ಕಡೆಗೆ ಸೆಳೆಯಲ್ಪಡುವುದಿಲ್ಲವೇ?

ನಾವು ನಿಜವಾಗಿಯೂ ದೇವರಿಲ್ಲದ ಧರ್ಮಗಳನ್ನು ಮತ್ತು ದೇವರನ್ನು ಭಯ ಭಕ್ತಿಯಿಂದ ಪಾಲಿಸುವ ಧರ್ಮಗಳನ್ನು ಹೋಲಿಸಿ ನೋಡಿದರೆ, ನಮಗೆ ದೇವರ ಭಯವನ್ನು ಹೊತ್ತುಕೊಂಡಿರುವ ಧರ್ಮಗಳಿಂದಲೇ ಹೆಚ್ಚು ಹಿಂಸೆ ಮಾನವರಿಗೆ ಉಂಟಾಗಿದೆ ಎಂದು ಸ್ಪಷ್ಟವಾಗುವುದು. ಆ ದೇವರ ಹೆಸರಲ್ಲಿ ಕೊಚ್ಚಿ ಕೊಚ್ಚಿ ಕೊಂದು ಹಾಕಿರುವ ಘಟನೆಗಳು ಅಷ್ಟಿಷ್ಟಲ್ಲ. ಈಗ ಹೇಳಿ ಜಗತ್ತನ್ನು ಅಧರ್ಮದ ಕಡೆಗೆ ಹೆಚ್ಚು ಕೊಂಡು ಹೋಗಿರುವುದು ಯಾವುದು?

ತಿಳಿದೂ ತಪ್ಪು ಮಾಡುವವನು ಎಂದೆಂದಿಗೂ ಅದನ್ನು ನಿಲ್ಲಿಸಲಾರ. ಅಧರ್ಮದ ದಾರಿಯಲ್ಲಿ ನಡೆದರೆ ಆತನಿಗೆ ದೇವರಿಂದ ಬರುವ ಶಾಪ, ದೇವರು ಅತನಿಗೆ ಕಲ್ಪಿಸುವ ಘೋರ ನರಕ ಶಿಕ್ಷೆ, ಇತ್ಯಾದಿಗಳನ್ನು ಕಂಠಪಾಠ ಮಾಡಿ, ತಿಳಿದುಕೊಂಡಿರುವವರೇ ಅದಕ್ಕೆ ಎಳ್ಳಷ್ಟೂ ಹೆದರದೆ ಕೆಟ್ಟತನದ ಪರಮಾವಧಿಯಲ್ಲಿ ಜೀವಿಸಲು ಧೈರ್ಯಪಡುವುದಾದರೆ ಇನ್ನು ಈ ಜಗತ್ತಿಗೆ ಉಳಿಗಾಲವಿಲ್ಲ. ನರಕವನ್ನು ಅಷ್ಟು ಭಯಾನಕವಾಗಿ ಧರ್ಮಗಳಲ್ಲಿ ವಿವರಿಸಿದರೂ, ಕಳ್ಳತನ, ಮೋಸ, ವಂಚನೆ, ದುಶ್ಚಟ, ಶಾಲಾ ಕಾಲೇಜುಗಳಲ್ಲಿಯೂ ಸೇರಿ ಎಲ್ಲೆಡೆ ನಡೆಯುವ ವ್ಯಭಿಚಾರ ಕ್ರಿಯೆಗಳು, ಜಾತಿ ಹಿನ್ನೆಲೆಯ ಹಿಂಸೆ, ಧರ್ಮಾಂಧರ ರಕ್ತಪಾತ, ಹೀಗೆ ಎಲ್ಲಿ ನೋಡಿದರೂ ದೇವರ ಮೇಲಿನ ಭಯ ಕಾಣಿಸುವುದೇ ಇಲ್ಲ! ಆದರೆ ಅವರೆಲ್ಲರಿಗೂ ನರಕದ ಭಯಾನಕ ವಿವರಣೆ ಸ್ಪಷ್ಟವಾಗಿ ತಿಳಿದಿದೆ! ನಮಗೆ ಇದು ಚುಟುಕಾಗಿ ಮತ್ತು ಸ್ಪಷ್ಟವಾಗಿ ಒಂದು ಮುಖ್ಯ ಅಂಶವನ್ನು ತಿಳಿಸುವುದು. ಒಳಿತಿನ ಜೀವನ ದಾರಿಯನ್ನು ಅಥವಾ ಧರ್ಮವನ್ನು ನಿರ್ಣಯಿಸುವುದು ಅದು ದೇವರಲ್ಲ, ಬದಲು ದೇವತ್ವವೆಂಬ ಆದರ್ಶಗಳಾಗಿವೆ ಎಂಬ ಸತ್ಯವೇ ಈ ಪ್ರಮುಖ ಅಂಶವಾಗಿದೆ. ದೇವರಿಲ್ಲದ ಧರ್ಮಗಳಲ್ಲಿ ಇತರ ಧರ್ಮಗಳಿಗಿಂತಲೂ ಅಹಿಂಸೆಗೆ ಹೆಚ್ಚು ಒತ್ತು ಕೊಟ್ಟಿರುವುದನ್ನು ಗಮನಿಸಬಹುದು. ಇದು ನಿಜವಾಗಿಯೂ ಆ ಕರುಣಾಮಯನೆಂದು ಸಾವಿರಾರು ವರುಷಗಳಲ್ಲಿ ಹೊಗಳುತ್ತಾ ಬಂದಿರುವ ದೇವರು ಇರುವ ಧರ್ಮಗಳಲ್ಲಿ ಕಾಣಿಸಬೇಕಾಗಿತ್ತು!! ಆದರೆ ಅಲ್ಲಿ, ಹೆಚ್ಚಿನ ಕಡೆಗಳಲ್ಲೂ, ಧರ್ಮಯುದ್ಧಗಳೇ ಕಾಣಸಿಗುವುದು ನಿಜಕ್ಕೂ ಅಚ್ಚರಿ ಮೂಡಿಸುವ ವಿಷಯವಾಗಿದೆ. ಜಾಗತಿಕವಾಗಿ ಎಲ್ಲಾ ಧರ್ಮಗಳಲ್ಲೂ ಕಂಡುಬರುವ ಧzರ್ಮಾಂಧತೆಯೆಂಬ ಭೀಕರ ಬೆಂಕಿಯಿಂದ, ಮುಂದೆ ಆ ಕರುಣಾಮಯ ಸೃಷ್ಟಿಕರ್ತ ದೇವರು ಜನರನ್ನು ತನ್ನಲ್ಲಿರುವ ಕರುಣಾಮೃತವನ್ನು ಧಾರೆಯೆರೆದು ಕಾಪಾಡಬಲ್ಲ ಎಂಬ ಭರವಸೆ ಇದರಿಂದ ಸಂಪೂರ್ಣವಾಗಿಯೂ ಇಲ್ಲವಾಗುವುದು, ಮತ್ತು ಅದಕ್ಕಾಗಿ ಮಾನವನೇ ‘ಮಾನವೀಯತೆ’ ಎಂಬ ಆಯುಧದೊಂದಿಗೆ ಸ್ವತಃ ಎಚ್ಚೆತ್ತುಕೊಳ್ಳಬೇಕಾಗುವುದು ಎಂಬ ಸಂದೇಶವನ್ನೂ ಇದು ಸ್ಪಷ್ಟವಾಗಿ ರವಾನಿಸುವುದು.

 ****************

ದೇವರು ಮತ್ತು ಧರ್ಮವನ್ನು ಅತ್ಯಂತ ಚುಟುಕಾಗಿ ವಿವರಿಸುವುದೇ ಆಪತ್ತಿನಲ್ಲಿರುವ ಮಾನವನ ಉಳಿವಿಗಾಗಿರುವ ಒಂದು ಮುಖ್ಯ ಪರಿಹಾರ ಮಾರ್ಗವೆಂದು ಹೇಳುವುದಕ್ಕೆ ಕಾರಣವೇನು?

ದೇವರು ಮತ್ತು ಧರ್ಮವು ಯಾಕೆ ಚುಟುಕಾಗಿ ವಿವರಿಸಲ್ಪಡಬೇಕೆಂಬುವುದಕ್ಕೆ ಕಾರಣಗಳನ್ನು ನೋಡೋಣ. ಸೃಷ್ಟಿಕರ್ತ ದೇವನಿದ್ದಲ್ಲಿ ಆತ ಏನು ಹೇಳುವನು? ತನ್ನ ಮಕ್ಕಳಲ್ಲಿ ಒಬ್ಬ ಮೇಲು ಜಾತಿಯವನಾಗಿದ್ದು ಇನ್ನೊಬ್ಬ ಕೀಳು ಜಾತಿಯ ಶೂದ್ರನಾಗಿ ಆತನು ಜೀವನ ಪರ್ಯಂತ ಮೇಲು ಜಾತಿಯವನ ಸೇವೆ ಮಾಡುತ್ತಿರಬೇಕು ಎನ್ನುವನೇ? ಇಲ್ಲ, ಅದೇ ರೀತಿ ತನ್ನ ಒಂದು ಧರ್ಮದ ಮಕ್ಕಳು ಇನ್ನೊಂದು ಧರ್ಮದ ಮಕ್ಕಳು ತಮ್ಮೊಳಗೆ ಭೀಕರ ರಕ್ತಪಾತ ಮಾಡಿ ಎಲ್ಲರೂ ಸತ್ತು ಹೋಗಿರೆಂದು ಹೇಳುವನೇ? ಇಲ್ಲ. ಅಥವಾ ಹಳೆಯ ತನ್ನ ಧರ್ಮಗಳು ಸರಿಯಿಲ್ಲ, ಆದುದರಿಂದ ತನ್ನ ಹೊಸತಾಗಿ ನಿರ್ಮಿಸಿದ ಧರ್ಮಕ್ಕೆ ನೀವೆಲ್ಲಾ ವರ್ಗಾವಣೆಯಾಗಿ ಎಂದು ಹೇಳುವನೇ? ಇಲ್ಲ. ತನ್ನ ಹಳೆ ಧರ್ಮದಲ್ಲಿ ಸ್ವಲ್ಪ ವಿಚಾರಗಳನ್ನು ಹೇಳುವುದಕ್ಕೆ ಮರೆತು ಹೋಗಿದೆ, ಅದನ್ನು ತನ್ನ ಅತ್ಯಾಧುನಿಕ ಆವೃತ್ತಿಯ ಧರ್ಮದಲ್ಲಿ ಸೇರಿಸಿದ್ದೇನೆ ಎಂದು ತನ್ನ ನೆನಪು ಶಕ್ತಿಯ ಕೊರತೆಯನ್ನು ಹೇಳುವನೇ? ಇಲ್ಲ. ಹಾಗಿದ್ದರೆ ಮತ್ಯಾಕೆ ಇದೆಲ್ಲವನ್ನು ದೇವರ ಹೆಸರಲ್ಲಿ ಮಾಡಿದ್ದೀರಿ ಮತ್ತು ಮಾಡುತ್ತಿದ್ದೀರಿ? ಹೇಳಿ, ಉತ್ತರ ಕೊಡಿ. ದೇವರ ನಿಜ ಸ್ವರೂಪವಾದ ಸತ್ಯ , ಪ್ರೀತಿ, ನೀತಿಯನ್ನು ಮೂಲೆಗೆ ಹಾಕಿ ಹಲವು ಹಲವು ಪುಸ್ತಕದಲ್ಲಿ ಹಲವು ಹಲವು ಆಚಾರಗಳನ್ನು ಪುಟಗಟ್ಟಲೆ ವರ್ಣಿಸಿ ಆ ಸೃಷ್ಟಿಕರ್ತನನ್ನು ಆಮಿಷ ಒಡ್ಡಿ ಒಲಿಸಿಕೊಳ್ಳುವ ಕೀಳು ಮಾನವನ ತರ ವಿವರಿಸಿದ್ದೀರಲ್ಲಾ, ಇದೆಂಥಹ ದೈವನಿಂದೆ!! ಸೃಷ್ಟಿಕರ್ತನಿಂದ ಸೃಷ್ಟಿಸಲ್ಪಟ್ಟದ್ದೆಂದು ಹೇಳಲ್ಪಡುವ, ಆದರೆ ಒಂದಕ್ಕೊಂದು ವಿರುದ್ದವಾಗಿರುವ ಆಚಾರಗಳನ್ನು ಈ ಜಗತ್ತಿನಲ್ಲಿ ನೋಡುವಾಗಲಾದರೂ ಇವೆಲ್ಲಾ ಸೃಷ್ಟಿಕರ್ತನದ್ದಲ್ಲವೆಂದೂ ಆತನು ಈ ರೀತಿ ವಿಚಿತ್ರವಾಗಿ ವರ್ತಿಸಲಾರನೆಂದು ಗೊತ್ತಾಗಿಲ್ಲವೆ? ಉತ್ತರ ಕೊಡಿ. ಮಹಾತ್ಮರು ಹಿಂದಿನ ಕಾಲದಿಂದಲೇ ಪಂಡಿತರುಗಳ ಸ್ವಾರ್ಥದ ಈ ಮೋಸವನ್ನು ನಿಮಗೆ ಅಗಾಗ್ಗ ತಿಳಿಸಿ ಎಚ್ಚರಿಸುತ್ತಾ ಬಂದಿರುವರು, ನೀವು ಅವರ ಮಾತನ್ನು ಕೇಳಿದಿರೇ? ಇಲ್ಲ. ಆ ಸಹಸ್ರಾರು ವರುಷಗಳಲ್ಲಿ ಧರ್ಮ, ಜಾತಿ ಶೋಷಣೆಗಳಿಗೆ ಒಳಗಾದ ಆ ಆತ್ಮಗಳಿಗೆ ಮಾಡಿರುವ ಅನ್ಯಾಯಕ್ಕೆ ಪ್ರಾಯಶ್ಚಿತ್ತವನ್ನು ಜೀವನ ಪೂರ್ತಿ ಮಾಡಿದರೂ ಸಾಕಾಗಲಾರದು. ಒಮ್ಮೆ ಆ ದೌರ್ಜನ್ಯಕ್ಕೆ, ಶೋಷಣೆಗೆ, ಒಳಗಾದವರ ಆ ಸ್ಥಾನದಲ್ಲಿ ನಮ್ಮನ್ನೇ ನಿಲ್ಲಿಸಿ ನೋಡೋಣ, ಆಗ ಮಾತ್ರ ಅದು ಘೋರ ಪಾಪ ಕರ್ಮವೆಂದು ನಮಗೆ ತಿಳಿಯುವುದು. ಮಾನವೀಯತೆಯ ಹೃದಯವಿದ್ದಲ್ಲಿ, ಧರ್ಮ, ಜಾತಿಯ ಹೆಸರಲ್ಲಿ ಆ ದಾರುಣ ಜೀವನಕ್ಕೆ ಒಳಗಾದ ಮುಗ್ಧ ಮಾನವರನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆಗ ಹೊರಟು ಬರುವ ಕಣ್ಣೀರ ನದಿಗೆ ಜನರು ಪವಿತ್ರವೆಂದು ತಿಳಿದಿರುವ ಆ ಗಂಗೆಗಿಂತಲೂ ಪವಿತ್ರತೆ ಇರುವುದು. ದೇವರನ್ನು ತನ್ನ ಸ್ವಾರ್ಥಕ್ಕೆ ಬೇಕಾದಂತೆ ಜಗತ್ತಿನ ಸರ್ವ ಕಡೆಗಳಲ್ಲೂ ದುರುಪಯೋಗ ಮಾಡುತ್ತಾ, ದೇವರ ಕರುಣೆ, ದಯೆ, ಇತ್ಯಾದಿಗಳ ಕುರಿತು ಕೋಟಿಗಟ್ಟಲೆ ಪುಸ್ತಕಗಳನ್ನು ಬರೆದು ಹಾಕಿದುದರಲ್ಲಿ ಏನು ವಿಶೇಷತೆ ಇದೆ? ಅನುಷ್ಠಾನದಲ್ಲಿ ಜೀವಿಸಿದ ಮಹಾತ್ಮರುಗಳ ಮಾತನ್ನು ಮತ್ತು ಜೀವನವನ್ನು ಯಾರು ಅನುಸರಿಸಿದ್ದಾರೆ? ಅವರ ವಿಶಾಲ ಮನಸ್ಕತೆಯ ಪವಿತ್ರ ಪ್ರೀತಿಯ ಮಾತು ನಿಮಗೆ ದೈವನಿಂದನೆಯಾಯಿತು!! ಇನ್ನು ಉಳಿಗಾಲವಿಲ್ಲ, ದೇವರನ್ನು, ದೇವರ ಮಾತನ್ನು ಉಳಿಸುವ ನೆಪದಲ್ಲಿ ಆತನನ್ನೇ ಅಳಿಸಿ ಹಾಕಿ ಆಗಿದೆ. ಇದೇ ಸ್ಥಿತಿ ಮುಂದುವರಿಯುವುದಾದರೆ ಜಗತ್ತು ಶಾಂತಿಯೆಡೆಗೆ ಎಂದೂ ಮರುಳುವುದಿಲ್ಲ!!

ಆದರೆ ಇನ್ನೇನೂ ಮಾಡಲು ಸಾಧ್ಯವಿಲ್ಲವೆಂದು ಕೈಕಟ್ಟಿ ಕೂತಿರುವುದೂ ಸರಿಯಲ್ಲ. ಮತ್ತು ಆ ಪ್ರಾಚೀನ ವಾಮಾಚಾರ ಶಕ್ತಿಗಳ ಪ್ರಭಾವ ಇವುಗಳೆಲ್ಲದರ ಹಿಂದಿರುವುದೆಂಬುವುದು ಸತ್ಯವಾದರೂ, ಅಸಹಾಯಕತೆಯಿಂದ ಕೂರಲೂ ಸಾಧ್ಯವಿಲ್ಲ. ನಮಗೆ ಈ ಕೊನೆಯ ಗಳಿಗೆಯಲ್ಲಾದರೂ ಸತ್ಯವನ್ನು ಜನರು ಅರಿಯುವಂತೆ ಮಾಡಿ ಜಗತ್ತನ್ನು ಆ ಭೀಕರ ಆಪತ್ತಿನಿಂದ ರಕ್ಷಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಅದಕ್ಕೆ ಜನರಿಗೆ ಸತ್ಯವೆಂಬ ಔಷಧಿಯು ಕಹಿಯಾದರೂ, ಸಿಹಿಯಾದರೂ ಅದನ್ನು ವಿಕೃತಗೊಳಿಸದೆ ಇದ್ದಂತೆ ಸ್ಪಷ್ಟಪಡಿಸಬೇಕಾಗಿದೆ.

ದೇವರು, ವ್ಯಕ್ತಿಯಾದರೂ, ತತ್ವವಾದರೂ ಅದು ಎಂದೂ ಕೆಟ್ಟದನ್ನು ಸೃಷ್ಟಿಸಲಾರದು. ಸೃಷ್ಟಿಕರ್ತನಾದುದರಿಂದ ಆತನಿಗೆ ಯಾವ ಧರ್ಮವೂ ವಿಶೇಷವಾಗಲಾರದು, ಆದರೆ ಆತನು ತನ್ನ ಮಕ್ಕಳು ಶಾಂತಿಯಿಂದ ಜೀವಿಸಬೇಕು ಎಂಬುವುದನ್ನು ಆಶಿಸುವನು ಅಷ್ಟೆ. ನೀವೇ ಹೇಳಿ, ಆತನು ತನ್ನದೇ ಒಂದು ಧರ್ಮದಿಂದ ಇನ್ನೊಂದಕ್ಕೆ ಮತಾಂತರವನ್ನು ಆಶಿಸುವನೇ? ಮಾನವನಿಗೆ ಬೇಕಾದ ಧರ್ಮದ ಸರ್ವ ಸಾರವೂ ಸತ್ಯ, ಪ್ರೀತಿ, ನೀತಿಯಲ್ಲಿ ಅಡಕವಾಗಿದೆ, ಮತ್ತು ಅದನ್ನು ಆತನು ಎಲ್ಲಾ ಧರ್ಮಗಳಲ್ಲೂ ಮೊದಲಲ್ಲೇ ಹೇಳಿ ಮುಗಿಸಿದ್ದಾನೆ. ಮಾತ್ರವಲ್ಲ ಎಲ್ಲಾ ಧರ್ಮಗಳಲ್ಲೂ ಅವುಗಳನ್ನು ಅನುಸರಿಸಿ ಜೀವಿಸಿ ತೋರಿಸಿದ ಮಹಾತ್ಮರನ್ನು ಸೃಷ್ಟಿಸಿ ತನ್ನ ಕರ್ತವ್ಯವನ್ನು ಮಾಡಿದ್ದಾನೆ. ಇನ್ನು ಈ ಆಚಾರಗಳು, ಜಾತೀಯತೆ, ಧರ್ಮಾಂಧತೆಗಳಿಂದ ಶೋಷಣೆ, ರಕ್ತಪಾತ ಮಾಡಲು ಆತನು ಹೇಳಿದನೇ ಮತ್ತು ಹೇಳುವನೇ? ಇಲ್ಲ, ಇಲ್ಲ, ಇಲ್ಲ. ಆದುದರಿಂದ ನಮಗೆ ದೇವರು ಎಂದರೆ ಸತ್ಯ, ಪ್ರೀತಿ, ಮತ್ತು ನೀತಿಯ ಮೂಲವೆಂದೂ ಧರ್ಮವನ್ನು ಸತ್ಯ, ಪ್ರೀತಿ, ನೀತಿಯನ್ನು ಜೀವನದಲ್ಲಿ ಬೆಳೆಸುವ ದಾರಿಯೆಂದು ಚುಟುಕಾಗಿ ವಿವರಿಸಿದರೆ, ಅದು ದೇವರು ಮತ್ತು ಧರ್ಮದ ಪೂರ್ತಿ ವಿವರಣೆ ಆಗುವುದು. ನಮಗೆ ಇದರಿಂದ ಮುಂಬರಲಿರುವ ಎಲ್ಲಾ ಅನಾಹುತಗಳಿಂದಲೂ ಪಾರಾಗುವ ಒಂದು ಅವಕಾಶವೂ ಉಂಟಾಗುವುದು. ಈ ಹಿನ್ನೆಲೆಯಲ್ಲಿ, ಆಚಾರಗಳಿಗೆ ಕಡಿಮೆ ಒತ್ತು ಕೊಟ್ಟಲ್ಲಿ, ಮತ್ತು ಸತ್ಯ, ಪ್ರೀತಿ, ನೀತಿ ಎಂಬ ಸ್ವಭಾವ ದೇವರ ತಿಳುವಳಿಕೆಯಿಂದ ಹಾಗೂ ಸತ್ಯ, ಪ್ರೀತಿ, ನೀತಿಯೇ ಧರ್ಮವೆಂದು ಅರಿತು ಜೀವಿಸುವುದಾದರೆ, ಅದು ಜಗತ್ತಿನ ಜನರಿಗೆ ಆ ಆಪತ್ತಿನಿಂದ ಉಂಟಾಗಲಿರುವ ಭಯಾನಕ ತೊಂದರೆಗಳಿಂದಿರುವ ಒಂದು ರಕ್ಷಣೆಯಾಗುವ ಸಾಧ್ಯತೆ ಇರುವುದು.

 *****************

ನೀವು ನಿಮ್ಮ ಎಲ್ಲಾ ಅನುಭವವನ್ನಿಟ್ಟು ಕೊನೆಯದಾಗಿ ಈ ಜಗತ್ತಿಗೆ ಇರುವ ಆ ಒಂದು ದಾರಿ ಏನೆಂದು ಹೇಳುವಿರಿ?

ಉತ್ತರ- ಎಲ್ಲವನ್ನು ನೋಡಿದನಂತರ ಅವುಗಳನ್ನು ಎದುರಿಸುವಲ್ಲಿ ನನಗೆ ಪರಿಹಾರವಾಗಿ ಕಂಡಿರುವುದು, ಹಿಂಸೆ, ಮತ್ತು ಅನೈತಿಕತೆಯ [ಅನೈತಿಕ ಕಾಮ] ವಿರುದ್ಧ ಸಾರ್ವತ್ರಿಕ ಜನ ಜಾಗ್ರತಿ ಮಾತ್ರವಾಗಿದೆ. ಯಾಕೆಂದರೆ ಈ ಎರಡನ್ನು ಮಾತ್ರ ಆ ಪ್ರಾಚೀನ ವಾಮಾಚಾರವು ತಮ್ಮ ಮುಖ್ಯ ಆಯುಧವಾಗಿ ಇಟ್ಟುಕೊಂಡಿರುವುದು, ಉಳಿದವುಗಳು ಇವನ್ನು ಬೆಳೆಸುವಲ್ಲಿ ಸಹಾಯಕ ಮಾತ್ರವಾಗಿವೆ. ಇದಕ್ಕೆ ಸುಲಭ ದಾರಿಯು, ಎಲ್ಲಾ ಧರ್ಮ ಪಂಥದ ಜನರೂ ಈ ಪ್ರಾಚೀನ ವಾಮಾಚಾರದ ಮೋಸವನ್ನು ಸರಿಯಾಗಿ ಅರಿತು ತಮ್ಮ ತಮ್ಮ ಧರ್ಮ ಪಂಥಗಳನ್ನು ಶುದ್ಧೀಕರಿಸಬೇಕಾಗಿದೆ. ಹೀಗಾದರೆ ನಮಗೆ ಖಂಡಿತವಾಗಿಯೂ ಒಂದು ಸತ್ಯ ಯುಗವನ್ನೇ ಬರಮಾಡಲು ಸಾಧ್ಯವಾಗಬಹುದು, ಇಲ್ಲವಾದರೆ ಸರ್ವನಾಶವನ್ನು ಅನಿವಾರ್ಯವಾಗಿ ಬರಮಾಡಿಕೊಳ್ಳಬೇಕಾಗುವುದು ನಿಶ್ಚಿತ.

ಇಲ್ಲಿ ಒಂದು ಅಂಶವನ್ನೂ ಹೇಳಬೇಕಾಗುವುದು. ಇದುವರೆಗೂ ಆ ಪ್ರಾಚೀನ ವಾಮಾಚಾರವು ಈ ರೀತಿಯಲ್ಲಿ ತಮ್ಮ ತಮ್ಮ ಧರ್ಮವನ್ನು ಜನರು ಶುದ್ಧೀಕರಿಸುವಂತೆ ಮಾಡಲಿಲ್ಲ, ಹಾಗೆ ಮಾಡಿರುತ್ತಿದ್ದರೆ, ಕೊನೆಯ ಪಕ್ಷ, ಇರುವ ಧರ್ಮಗಳು ಹೆಸರಲ್ಲಿ ಮತ್ತು ಕೆಲವು ಬಾಹ್ಯ ಕ್ರಿಯೆಗಳಲ್ಲಿ ಮಾತ್ರ ಬೇರೆ ಬೇರೆಯಾಗಿ ಕಾಣಿಸುತ್ತಿದ್ದವು ಆದರೆ ಬೇರೆ ಯಾವ ರೀತಿಯಲ್ಲೂ ಅವುಗಳು ಬೇರೆ ಬೇರೆಯಾಗಿ ಕಾಣಿಸುತ್ತಿರಲಿಲ್ಲ. ಮಾತ್ರವಲ್ಲ ಯಾವ ಪಂಥಗಳೂ ಸೃಷ್ಟಿಯಾಗುತ್ತಿರಲಿಲ್ಲ, ಯಾಕೆಂದರೆ ಚಿನ್ನದ ಅದಿರನ್ನು ಶುದ್ಧೀಕರಿಸಲು ಹೊರಟ ಸರ್ವರಿಗೂ ಕೊನೆಗೆ ಆ ಏಕ ರೂಪದ ಚಿನ್ನವೇ ದೊರಕಬೇಕು. ಆದರೆ ಅದೇ ಪ್ರಾಚೀನ ವಾಮಾಚಾರವು ಬಹಳ ಬುದ್ಧಿ ಉಪಯೋಗಿಸಿ, ಜನರಲ್ಲಿನ ಆ ಶುದ್ಧೀಕರಣದ ತುಡಿತಕ್ಕೆ ಅದರದೇ ಮೋಸದ ಪರಿಹಾರವನ್ನು ಕೊಟ್ಟು ಜಯಿಸಿದೆ!! ಧರ್ಮಗಳನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ನಿಗಮನಕ್ಕೆ ಜನರನ್ನು ಬರುವಂತೆ ಮಾಡಲು, ಆ ಪ್ರಾಚೀನ ವಾಮಾಚಾರವು, ಜನರಲ್ಲಿ ತಮ್ಮದೇ ಪ್ರತ್ಯೇಕ ಪಂಥಗಳನ್ನು ಸೃಷ್ಟಿ ಮಾಡಿಸಿ ಅವುಗಳಿಂದ ಮಾತ್ರ ಈ ಶುದ್ಧೀಕರಣದ ಕೆಲಸವನ್ನು ಮಾಡಿಸಿದವು!! ಅಂದರೆ ಧ್ವೇಷ, ಹಿಂಸೆ, ರಕ್ತಪಾತಕ್ಕೆ ಮೊದಲೇ ದೊಡ್ಡ ಅಡಿಪಾಯವನ್ನು ಹಾಕಿ, ಆಮೇಲೆಯೇ ಈ ಶುದ್ಧೀಕರಣದ ಪ್ರಯತ್ನ ಮಾಡಿಸಿದೆ ಎಂದು ಅರ್ಥ. ಅದು ಮಾತ್ರವಲ್ಲ, ಕಾಲಕ್ರಮೇಣ ಅವುಗಳನ್ನೂ ನಂಬಿಕೆಗಳ ಅಚಾರಗಳ ಮೂಲಕ ಪುನಃ ಅಶುದ್ಧ ಮಾಡಿ ಹಾಕಿವೆ!! ಆ ಪ್ರಾಚೀನ ವಾಮಾಚಾರವು ಹೀಗೆ ಮಾಡದಿರುತ್ತಿದ್ದರೆ, ಈ ಜಗತ್ತಿಗೆ ಅತ್ಯಂತ ಪರಿಶುದ್ಧವಾದ ಶಾಂತಿ, ನೈತಿಕತೆಯ ಸತ್ಯಯುಗವೆಂಬ ಒಂದೇ ಧರ್ಮವಿರುತ್ತಿತ್ತು!

ಈ ಕಾರಣದಿಂದಾಗಿ ಮಾತ್ರ ನಾನು ಯಾವ ಪಂಥವನ್ನೂ ಹಾಗೂ ಧರ್ಮ ಇತ್ಯಾದಿಗಳನ್ನು ಸೃಷ್ಟಿಸುವುದಿಲ್ಲ ಎಂದು ಅಗಾಗ್ಗ ಸಾರಿ ಹೇಳುವುದು. ಏನಿದ್ದರೂ ಈಗಿರುವ ಧರ್ಮ, ಪಂಥಗಳಲ್ಲದೆ ಇನ್ನೊಂದನ್ನು ಹೊಸತಾಗಿ ಸೃಷ್ಟಿಮಾಡದೆ, ತಮ್ಮನ್ನು ತಾವು ಶುದ್ಧೀಕರಿಸುವ ಪ್ರಯತ್ನವನ್ನು ಮಾಡಿದರೆ ಆ ಭೀಕರ ಅಂತ್ಯದಿಂದ ನಮಗೆ ಮತ್ತು ನಮ್ಮ ಮಕ್ಕಳಿಗೆ ಪಾರಾಗಲು ಸಾಧ್ಯವಾಗಬಹುದು. ಈ ಪರಿಹಾರ ಮಾತ್ರವನ್ನು ನಾನು ನನ್ನ ಎಲ್ಲಾ ಮಾತು ಹಾಗೂ ಬರಹದಲ್ಲಿ ಉದ್ದೇಶಿಸಿರುವುದು, ಇದಲ್ಲದೆ ಯಾವ ದೇವರನ್ನೋ, ಧರ್ಮವನ್ನೋ, ಪಂಥವನ್ನೋ, ನಿಂದಿಸುವ ಉದ್ದೇಶವು ಕನಸಿನಲ್ಲೂ ನನಗೆ ಇಲ್ಲವೆಂದು ಎಲ್ಲರೂ ತಿಳಿಯಬೇಕಾಗಿದೆ. ಅದಕ್ಕೆ ಒಂದು ಸುಲಭ ದಾರಿ ಎಂಬ ನಿಟ್ಟಿನಲ್ಲಿ, ತಮ್ಮ ತಮ್ಮ ದೇವರು ಮತ್ತು ಧರ್ಮವನ್ನು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂದು ತಿಳಿದು ಗೌರವಿಸಿರೆಂದು ಹೇಳಿದ್ದೇನೆ, ಯಾಕೆಂದರೆ ಆ ಸ್ವಭಾವಗಳಿಲ್ಲದಿದ್ದರೆ ಯಾವ ಶಕ್ತಿಯೂ ದೇವ ಶಕ್ತಿ ಆಗಲಾರದು ಮತ್ತು ಯಾವ ಧರ್ಮವೂ ಒಂದು ಧರ್ಮವೇ ಆಗಲಾರದು. ಇದು ನಮ್ಮನ್ನು ಎಲ್ಲರನ್ನೂಒಗ್ಗೂಡಿಸುವುದು ಮಾತ್ರವಲ್ಲ ಆ ಪ್ರಾಚೀನ ವಾಮಾಚಾರದ ಭೀಕರ ಹಿಂಸೆಯ ಕಪಿ ಮುಷ್ಠಿಯಿಂದ ನಮ್ಮನ್ನು ರಕ್ಷಿಸಬಲ್ಲದು ಎಂದು ನಾನು ಕಂಡುಕೊಂಡಿರುವೆನು. ನಾನು ಸ್ಪಷ್ಟವಾಗಿ ಕಂಡ ಆ ಭಯಾನಕ ಸೂಕ್ಷ್ಮದ ರಹಸ್ಯಗಳಲ್ಲಿ ಮುಖ್ಯವಾದುದನ್ನೆಲ್ಲಾ ನಿಮ್ಮ ಮುಂದೆ ಇರಿಸಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಇನ್ನೆಲ್ಲವೂ ನಿಮ್ಮ ಕೈಯಲ್ಲಿದೆ. ನನ್ನ ಪ್ರೀತಿಯ ಈ ಭೂಮಿಯ ಸಮಸ್ತ ಸಹೋದರ, ಸಹೋದರಿಯರೇ, ನಾನಂತೂ ನಿಮ್ಮನ್ನೆಲ್ಲಾ, ನಮಗೆಲ್ಲಾ ಸಾಮಾನ್ಯವಾಗಿ ಇರುವ ಆ ಹೃದಯದ ಅತ್ಮೀಯತೆ ಎಂಬ ಧರ್ಮದಿಂದ ಮಾತ್ರ ನೋಡುತ್ತಿದ್ದೇನೆ, ನಿಮಗೆಲ್ಲರಿಗೂ ಒಳಿತಾಗಲೆಂದು ಹೃದಯಾಳದಿಂದ ಬಯಸುವೆನು.

 *****************

ನನ್ನ ದೇವ ಸಂಕಲ್ಪವು ಅದು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯಾಗಿದೆ. ಆದುದರಿಂದ ನನ್ನ ಭಕ್ತರಾಗುವವರು ಈ ಮೂರನ್ನೂ ನನ್ನ ರೂಪದಲ್ಲಿ ಕಾಣಿರಿ, ನನ್ನ ನಾಮದಲ್ಲಿ ಕಾಣಿರಿ, ನನ್ನ ಮಾತುಗಳಲ್ಲಿ ಕಾಣಿರಿ, ನನ್ನ ಪ್ರೀತಿಯಲ್ಲಿ ಕಾಣಿರಿ ಮತ್ತು ನನ್ನ ನೀತಿಯಲ್ಲಿ ಕಾಣಿರಿ. ಇದುವೇ ನೀವು ನನಗೆ ಸಲ್ಲಿಸುವ ಆ ನಿಜವಾದ ಭಕ್ತಿ. ಇದು ಸತ್ಯ ಸಂಧವಾದರೆ ನೀವು ಅನುಗ್ರಹವನ್ನು ಪಡೆಯುವುದರೊಂದಿಗೆ ಮಹಾತ್ಮರಾಗುವಿರಿ.

 ******************

ದೇವ ಸಂಕಲ್ಪ ಎಂದರೇನು? ದೇವರು ಮತ್ತು ದೇವಸಂಕಲ್ಪಕ್ಕಿರುವ ಸಂಬಂಧವೇನು?

ಉತ್ತರ- ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಅದೇನೆಂದರೆ ಸೃಷ್ಟಿಕರ್ತ ದೇವರು ಎಂದ ತಕ್ಷಣ ಅಲ್ಲಿ ಒಂದೇ ಒಂದು ದೇವ ಸಂಕಲ್ಪ ಮಾತ್ರ ಬರುವುದು. ಅಲ್ಲಿ ಬೇರೆ ಬೇರೆ ದೇವ ಸಂಕಲ್ಪವನ್ನು ಹೇಳಲು ಸಾಧ್ಯವಿಲ್ಲ. ಆದರೆ ಅದರಲ್ಲೇ ಜಗತ್ತಿನಲ್ಲಿ ಬೇರೆ ಬೇರೆ ದೇವಸಂಕಲ್ಪಗಳಿವೆ!! ಇನ್ನು ದೇವ ಸಂಕಲ್ಪಗಳು ಬೇರೆ ಬೇರೆ ಆಗಲು ಸಾಧ್ಯವಿರುವ ಕಡೆಗಳನ್ನು ಪರೀಕ್ಷಿಸಿದಾಗ, ಅದು ದೇವತೆಗಳ ಸೃಷ್ಟಿಯಲ್ಲಿ ಇರುವುದು. ಹಲವು ದೇವತೆಗಳನ್ನು ಮಾನವರು ತಮ್ಮ ಮನೋ ಶಕ್ತಿಯಿಂದ ಸೃಷ್ಟಿಸಿ ಅದರ ಲಾಭವನ್ನು ಪಡೆಯುವರು ಎಂದು ವೇದಗಳಲ್ಲೇ ಹೇಳಿದೆ. ಆ ದೇವತೆಗಳು ಯಾವುದಾದರೂ ಒಂದು ಕೆಲಸ ಮಾಡುವುದಕ್ಕಾಗಿ ಮಾತ್ರ ಸೀಮಿತ ಗೊಳಿಸುವಾಗ, ಅವುಗಳನ್ನು ಆ ಕೆಲಸಗಳ ಅಧಿ ದೇವತೆ ಅಥವಾ ಅಧಿಪತಿ ಎಂದು ಕರೆಯುವರು. ನೀರಿನ ಅಧಿಪತಿ ವರುಣ, ಬೆಂಕಿಯದು ಅಗ್ನಿ ಇತ್ಯಾದಿ ಸಂಕಲ್ಪಗಳು ಅವುಗಳ ಸ್ವಭಾವವನ್ನು ಸೂಚಿಸುವವು. ಅವುಗಳು ಮಾಡುವ ಕೆಲಸ ಮತ್ತು ಕೊಡುವ ಫಲವನ್ನೂ ಅವುಗಳ ಸಂಕಲ್ಪಗಳು ಸೂಚಿಸುವವು, ಇನ್ನೊಂದು ಸಂಕಲ್ಪವು ಆ ದೇವತೆಯ ಅರಾಧನಾ ರೀತಿಗೆ ಸಂಬಂಧ ಪಟ್ಟವಾಗಿರುವುದು. ಹೀಗೆ, ಅವುಗಳಿಗೆಲ್ಲಾ ಪ್ರತ್ಯೇಕ ಆರಾಧನಾ ರೀತಿಗಳಿವೆ. ಅಯಾ ಸಂಕಲ್ಪಗಳ ರೀತಿಯಲ್ಲಿ ಅರಾಧಿಸಿದಲ್ಲಿ, ಅವುಗಳಿಂದ ಅದರ ಲಾಭವನ್ನು ಪಡೆಯಬಹುದೆಂದು ಶಾಸ್ತ್ರಗಳು ಹೇಳುವವು.

ದೇವಸಂಕಲ್ಪವೆಂದರೆ ನಮಗೆ ಈ ಕೆಳಗಿನ ಮೂರು ಪ್ರಶ್ನೆಗಳ ಸಹಾಯದಿಂದ ತಿಳಿಯುವುದು.

1. ಆ ದೇವತೆಯ ಸ್ವಭಾವವೇನು? 2. ಆ ದೇವತೆಯು ಯಾವುದರ ಫಲವನ್ನು ನೀಡುವುದು? 3. ಆ ದೇವತೆಯ ಅರಾಧನಾ ರೀತಿ ಏನು?

[ ಇಲ್ಲಿ ಎಲ್ಲಾ ದೇವತೆಗಳನ್ನೂ ಬೇರೆ ಬೇರೆ ಎಂದೇ ಸೃಷ್ಟಿ ಮಾಡಿರುವುದು. ಆದರೆ, ಸೃಷ್ಟಿಕರ್ತ ಎಂದ ಕೂಡಲೇ ಈ ‘ಬೇರೆ ಬೇರೆ’ ಎಂಬುವುದು ಹೋಗಿಬಿಡುವ ಕಾರಣ ಅವೆಲ್ಲಾ ಒಂದೇ ಎಂದು ಅರ್ಥ ಬರುವುದು, ಮತ್ತು ಒಂದೇ ದೇವಸಂಕಲ್ಪದಲ್ಲಿ ಯಾವುದೂ ಬೇರೆ ಬೇರೆಯಾಗಿ ವಿವರಿಸಲೇಬಾರದು. ಆದುದರಿಂದಲೇ ಜಗತ್ತಿನ ಸೃಷ್ಟಿಕರ್ತ ದೇವ ಸಂಕಲ್ಪವು ಅದು ಅಶಾಸ್ತ್ರೀಯವಾಗಿರುವುದು ಮತ್ತು ತಪ್ಪಾಗಿರುವುದು ಎಂದು ಹೇಳುವುದು.]

ಓಂದೇವ ದೇವ ಸಂಕಲ್ಪವು ದೇವತಾ ದೇವ ಸಂಕಲ್ಪವಾಗಿದೆ. ಆದುದರಿಂದ ಅಲ್ಲಿಯೂ ಅದರದೇ ಪ್ರತ್ಯೇಕ ಸಂಕಲ್ಪವಿರಲೇ ಬೇಕು. ಅದುವೇ ಬಹಳ ಚುಟುಕಾಗಿ ನಾವು ಹೇಳುವ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಆಗಿರುವುದು. ಈಗ ಮೇಲಿನ ಸಂಕಲ್ಪದ ಮೂರು ಪ್ರಶ್ನೆಯನ್ನು ಹಾಕೋಣ,

ಓಂದೇವ ಸಂಕಲ್ಪದ ಸ್ವಭಾವವೇನು?

ಉತ್ತರ- ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯಾಗಿದೆ. 2. ಓಂದೇವರು ಯಾವ ಪ್ರತ್ಯೇಕ ಫಲಕ್ಕಾಗಿ ಇರುವ ದೇವತೆ? ಉತ್ತರ- ಪ್ರತ್ಯೇಕ ಫಲದ ರೀತಿಯಲ್ಲ, ಪ್ರಾರ್ಥನೆಯಲ್ಲಿನ ಬೇಡಿಕೆಯನ್ನು ಅನುಸರಿಸಿ ಫಲ ನೀಡುವ ರೀತಿಯಾಗುವುದು. 3. ಓಂದೇವರ ಆರಾಧನಾ ರೀತಿ ಏನು? ಉತ್ತರ- ಭಕ್ತಿಯ ರೀತಿ, ಇದನ್ನು ಮೊದಲೇ ತಿಳಿಸಿಯಾಗಿದೆ.

ಎಲ್ಲಾ ದೇವತೆಗಳೂ, ಮತ್ತು ಸೃಷ್ಟಿಕರ್ತ ದೇವ ಸಂಕಲ್ಪಗಳು, ಅಸುರ ಅಲ್ಲದುದರಿಂದ, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಹೊಂದಿರಲೇ ಬೇಕಾಗಿದೆ. ಮತ್ತು ಜನರೆಲ್ಲಾ ಅವರವರ ದೇವರುಗಳ ಈ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂಬ ದೇವತ್ವದ ಸಾರಕ್ಕೆ ಒತ್ತು ಕೊಟ್ಟಲ್ಲಿ ನಮಗೆ ಈ ಭೂಮಿಯಲ್ಲಿ ಎಲ್ಲಾ ದೇವ ಸಂಕಲ್ಪಗಳೂ ಒಂದೇ ರೀತಿಯಲ್ಲಿ ಸಿಗುವುದು. ಇದು ಜನರು ತಮ್ಮೊಳಗೆ ಆ ನಂಬಿಕೆಯ ಅಚಾರಗಳಿಗೆ ಬಲಿಯಾಗದಂತೆ ಮತ್ತು ಆ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ರಕ್ತಪಾತವಾಗದಂತೆ ತಡೆಯುವುದು. ಇದು ಮಾನವರನ್ನು ಮುಂಬರುವ ಆ ಧರ್ಮಾಂಧತೆ ಎಂಬ ಆಪತ್ತಿನಿಂದ ರಕ್ಷಿಸಬಲ್ಲುದು ಎಂಬುವುದೇ ಓಂದೇವರು ಕಂಡುಕೊಂಡ ಆ ಸುಲಭ ಜಾಗತಿಕ ಪರಿಹಾರ ಮಾರ್ಗವಾಗಿದೆ.

ಭಾಗ-1

1. ದೇವ ಸಂಕಲ್ಪ ಎಂದರೇನು?

2. ದೇವ ಸಂಕಲ್ಪವನ್ನು ಮುಖ್ಯವಾಗಿ ಎಷ್ಟಾಗಿ ವಿಭಾಗಿಸಿದ್ದಾರೆ, ಅವು ಯಾವುವು?

2. ದೇವ ಸಂಕಲ್ಪಗಳಿಗೂ ಮತ್ತು ಅಯಾ ದೇವರಿಗೂ ಇರುವ ಸಂಬಂಧವೇನು?

3. ಓಂದೇವರ ದೇವ ಸಂಕಲ್ಪ ಯಾವ ರೀತಿಯದು ಮತ್ತು ಓಂದೇವರಲ್ಲಿನ ಭಕ್ತಿಯ ರೀತಿಯ ವ್ಯತ್ಯಾಸವೇನು?

4. ಸೃಷ್ಟಿಕರ್ತ ದೇವ ಸಂಕಲ್ಪವು ಯಾಕೆ ಶಾಸ್ತ್ರೀಯವಲ್ಲ?

ಭಾಗ-2.

1. ಆಗಮ ಶಾಸ್ತ್ರದ ಪೂಜೆಗಳಲ್ಲಿ ಪೂಜೆ ಮಾಡಿಸುವವನ ಸಂಕಲ್ಪವನ್ನು ಯಾಕೆ ತೆಗೆವರು?

2. ಭಕ್ತಿ ರೀತಿಯಲ್ಲಿ ಸಂಕಲ್ಪವನ್ನು ತೆಗೆಯುವುದು ಇಲ್ಲ ಯಾಕೆ?

3. ತಾಂತ್ರಿಕ ರೀತಿ ಮತ್ತು ಆಗಮ ರೀತಿಗಳಲ್ಲಿ ಬಳಸಲ್ಪಡುವ ಮಂತ್ರ ನೀರು, ಬಸ್ಮ, ಯಂತ್ರಗಳು ಇತ್ಯಾದಿಗಳಲ್ಲಿ ಸಂಕಲ್ಪವನ್ನು ಹೇಗೆ ಮಾಡುವರು?

4. ವಾಮಾಚಾರಗಳಲ್ಲಿ ಹೇಗೆ ಸಂಕಲ್ಪ ಮಾಡುವರು?

 ****************

ಜ್ಞಾನಸೇವಕ- ಸೃಷ್ಟಿಕರ್ತ ದೇವರು ಅಥವಾ ಸೃಷ್ಟಿಕರ್ತ ದೇವಸಂಕಲ್ಪ ಜಗತ್ತಿಗೆ ಒಬ್ಬನೇ ಸಾಧ್ಯ ಎಂಬುವುದು ಸರಿತಾನೇ?

ಧರ್ಮಪಂಡಿತ- ಎಲ್ಲರೂ ಆ ಒಬ್ಬನೇ ಸೃಷ್ಟಿಕರ್ತ ದೇವರನ್ನು ಪೂಜಿಸಬೇಕು ಎಂಬುವುದು ನಮ್ಮ ಧರ್ಮದ ನಿಲುವು,

ಜ್ಞಾನಸೇವಕ- ನೋಡಿ, ಹೆಚ್ಚಿನ ಧರ್ಮದವರು ಸೃಷ್ಟಿಕರ್ತನನ್ನು ಆರಾಧಿಸುವರು. ಹಾಗಿರುವಾಗ, ನಾವೆಲ್ಲಾ ಆ ಸೃಷ್ಟಿಕರ್ತನನ್ನು ಒಟ್ಟಿಗೆ ಕುಳಿತು ಆರಾಧಿಸೋಣವೇ?

ಧರ್ಮಪಂಡಿತ- ಅವರೆಲ್ಲಾ ಸೃಷ್ಟಿಕರ್ತನನ್ನು ಅಲ್ಲ ಆರಾಧಿಸುವುದು. ಅವರು ಸೃಷ್ಟಿಕರ್ತನ ಸೃಷ್ಟಿಯನ್ನು ಆರಾಧಿಸುತ್ತಾರೆ. ಆದುದರಿಂದ ಒಟ್ಟಿಗೆ ಕುಳಿತು ಆರಾಧಿಸಲು ಸಾಧ್ಯವಿಲ್ಲ.

ಜ್ಞಾನಸೇವಕ- ನೋಡಿ, ನೀವು ಹಾಗೆ ಹೇಳುವಾಗ, ನಿಮ್ಮಕ್ಕಿಂತ ಮೊದಲೇ ಈ ಭೂಮಿಯಲ್ಲಿ ಸೃಷ್ಟಿಕರ್ತ ಇರಲಿಲ್ಲವೋ ಎಂದು ಇತರ ಧರ್ಮದವರು ಕೇಳುತ್ತಾರೆ. ಅವರಿಗೂ ಇದೇ ಸೃಷ್ಟಿಕರ್ತನಲ್ಲವೇ ಧರ್ಮವನ್ನು ಕೊಟ್ಟಿರುವುದು? ಹಾಗಿರುವಾಗ ಆ ಧರ್ಮಗಳಲ್ಲಿ ಸೃಷ್ಟಿಕರ್ತ ದೇವರಿಲ್ಲ ಎಂದು ಹೇಳಿದರೆ ಹೇಗೆ?

ಧರ್ಮಪಂಡಿತ- ನಾವು ಏಕದೇವ ಉಪಾಸಕರ ಸೃಷ್ಟಿಕರ್ತ ದೇವರನ್ನು ಸೃಷ್ಟಿಕರ್ತ ದೇವರು ಎಂದು ಒಪ್ಪುವೆವು.

ಜ್ಞಾನಸೇವಕ – ನೀವು ಏಕದೇವೋಪಾಸಕರ ದೇವರನ್ನು ದೇವರೆಂದು ಒಪ್ಪುವುದಾದರೆ, ನೀವು ಏಕದೇವೋಪಾಸಕರ ಆ ಬೇರೆ ಬೇರೆ ಧರ್ಮಗಳಲ್ಲಿನ ಸೃಷ್ಟಿಕರ್ತರ ಹೆಸರಲ್ಲಿ ಕೂಡಾ ನಿಮ್ಮ ದೇವರನ್ನು ಪ್ರಾರ್ಥಿಸಿ ನಿಮ್ಮ ಮಾತಿನ ಸತ್ಯಸಂಧತೆಯನ್ನು ತೋರಿಸಿಕೊಡಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಮಾತು ಆಸತ್ಯವಾಗುವುದು.

ಧರ್ಮಪಂಡಿತ- ಅದು ಸಾಧ್ಯವಿಲ್ಲ, ಯಾಕೆಂದರೆ, ನಿಜವಾಗಿಯೂ ನಾವು ಕರೆಯುವ ಸೃಷ್ಟಿಕರ್ತನ ಹೆಸರೇ ಆ ನಿಜವಾದ ಸೃಷ್ಟಿಕರ್ತನ ಹೆಸರು, ಉಳಿದ ಧರ್ಮಗಳ ಸೃಷ್ಟಿಕರ್ತರುಗಳ ಹೆಸರುಗಳು ಆ ನಿಜವಾದ ಹೆಸರುಗಳಲ್ಲ.

ಜ್ಞಾನಸೇವಕ- ಅಯ್ಯೋ, ಸೃಷ್ಟಿಕರ್ತ ದೇವರಿಗೆ ನಿಮ್ಮ ಧರ್ಮಕ್ಕಿಂತ ಮೊದಲು ಅಷ್ಟು ಧರ್ಮಗಳನ್ನು ಮಾಡುವಾಗ ಮತ್ತು ಅಷ್ಟೆಲ್ಲಾ ಆ ಧರ್ಮಗಳಲ್ಲಿ ಹೇಳಿರುವಾಗ, ತನ್ನ ಹೆಸರನ್ನು ಮಾತ್ರ ಇತರ ಯಾವ ಧರ್ಮದವರಿಗೂ ಸರಿಯಾಗಿ ಹೇಳಿಕೊಡದೆ ಅಡಗಿಸಿಡುವನೇ? ಹಾಗಾದರೆ ಅವರೆಲ್ಲರೂ ಇನ್ನು ಯಾವ ಹೆಸರಲ್ಲಿ ಸೃಷ್ಟಿಕರ್ತನನ್ನು ಆರಾಧಿಸಿರುವುದು ಮತ್ತು ನಿಮ್ಮ ಧರ್ಮ ಬರುವುದಕ್ಕಿಂತ ಮೊದಲು ಅಷ್ಟು ಸಾವಿರ ವರುಷಗಳು ಸೃಷ್ಟಿಕರ್ತನಿಗೆ ಅದು ಒಪ್ಪಿಗೆಯಾಗಿತ್ತೇ? ಸೃಷ್ಟಿಕರ್ತ ದೇವರು ಅಷ್ಟಕ್ಕೂ ಮೂರ್ಖನೇ? ನೋಡಿ, ಈ ರೀತಿ ವಾದ ಮಾಡುವುದು ಸೃಷ್ಟಿಕರ್ತನನ್ನು ಮೂರ್ಖನನ್ನಾಗಿ ಮಾಡುವುದಕ್ಕೆ ಸಮವಾಗುವುದು. ನಮಗೆ ವಾದಕ್ಕೆ ಬೇಕಾಗಿ ಕಣ್ಣುಮುಚ್ಚಿ ಏನನ್ನಾದರೂ ಹೇಳುತ್ತಾ ಹೋಗಬಹುದು ಆದರೆ ಅದು ನಾವು ವಾದ ಮಾಡುವ ವಸ್ತು ಅಥವಾ ವಿಷಯವನ್ನೇ ನಾಶಮಾಡಿಹಾಕುವ ರೀತಿಯಲ್ಲಿ ಮಾತ್ರ ದಯವಿಟ್ಟು ವಾದಮಾಡಬೇಡಿ.

ಧರ್ಮಪಂಡಿತ- ಉಳಿದ ಕೆಲವು ಧರ್ಮಗಳು ಏಕದೇವೋಪಾಸನೆ ಆದರೂ ಅವುಗಳೆಲ್ಲಾ ಮನುಷ್ಯರಿಂದ ಕಳೆಯಲ್ಪಟ್ಟು ಮತ್ತು ಸೇರಿಸಲ್ಪಟ್ಟದುದಾದುದರಿಂದ ಆ ನಿಜವಾದ ಪರಿಪೂರ್ಣ ದೇವರ ಧರ್ಮಗ್ರಂಥದ ಸ್ಥಾನವನ್ನು ಅವು ಕಳಕೊಂಡಿವೆ.

ಜ್ಞಾನಸೇವಕ- ನಿಮ್ಮ ಧರ್ಮದ ಧರ್ಮಗ್ರಂಥವು ಕೂಡ ಧರ್ಮ ಸ್ಥಾಪಕರ ಕಾಲದ ಬಹಳ ಕಾಲದ ನಂತರ ಬರೆಯಲ್ಪಟ್ಟಿರುವುದು, ಮತ್ತು ಆಗಾಗಲೇ ಹಲವು ಬೇರೆ ಬೇರೆ ಧರ್ಮಗ್ರಂಥಗಳು ಇದ್ದು ಅವುಗಳನ್ನೆಲ್ಲಾ ನಾಶಪಡಿಸಿ, ಈಗಿರುವ ಒಂದನ್ನು ಮಾತ್ರ ಬಾಹುಬಲದಿಂದ ಬಲವಂತವಾಗಿ ಇರಿಸಿಕೊಂಡಿರುವುದು ಎಂದು ಎಲ್ಲರಿಗೂ ತಿಳಿದಿದೆ. ಮಾತ್ರವಲ್ಲ, ಹಾಗಾಗುವಾಗ, ಅವಲ್ಲಿ ಎಷ್ಟು ಕಳೆದುಹೋದ ಹಾಗೂ ಸೇರಿಸಲ್ಪಟ್ಟದ್ದು ಇದ್ದಿರಬಹುದು? ಆದುದರಿಂದ ಹಾಗೆಲ್ಲಾ ವಾದ ಮಾಡುವುದು ಬಾಲಿಶವಾಗುವುದು. ಇನ್ನು, ಎಲ್ಲಾ ಧರ್ಮಗಳಲ್ಲೂ ಗ್ರಂಥಗಳಲ್ಲಿ ಇರುವುದನ್ನು ಮಾತ್ರ ಜನರಿಗೆ ಬೋಧಿಸುವುದಲ್ಲ, ಧರ್ಮಗಳಲ್ಲಿ ಇಲ್ಲದ ಉದಾಹರಣೆ ಇತ್ಯಾದಿಗಳನ್ನು ಸೇರಿಸಿಯೇ ಧರ್ಮಪಂಡಿತರುಗಳು ಪ್ರವಚನವನ್ನು ಕೊಡುವುದು ಎಂದು ನಮಗೆ ತಿಳಿದಿದೆ. ಹೀಗಿರಲು, ಅದು ಸೃಷ್ಟಿಕರ್ತನ ಧರ್ಮವನ್ನು ತಿರುಚಿದಕ್ಕೆ ಸಮ ಆಗುವುದಿಲ್ಲವೇ? ನೋಡಿ ನನ್ನ ಸಹೋದರ, ಧರ್ಮ ಎಂದರೆ ಏನು ಎಂಬುವುದರ ಬಗ್ಗೆ ನೀವು ಆಲೋಚನೆ ಮಾಡದೆ, ಬರೇ ನೊಣ ಪ್ರತಿ ಮಾಡುವುದನ್ನು ಧರ್ಮ ಎಂದು ತಿಳಿದಂತಿದೆ. ಅದನ್ನು ಕೂಡಾ ಸಾಧಿಸುವಲ್ಲಿ ನಮಗೆ ಸಾಧ್ಯವಾಗಿಲ್ಲ. ಇಂದು ನಿಮ್ಮ ಧರ್ಮದಲ್ಲಿ ಹಲವು ಪಂಥಗಳಿವೆ ಇವೆಲ್ಲಾ ನಿಮ್ಮ ಧರ್ಮದಲ್ಲಿ ಇಲ್ಲವೇ? ಇವೆ ಎಂದಾದರೆ, ಅವು ಅರ್ಥದಲ್ಲಿ ಬೇರೆ ಬೇರೆ ವಿವರಿಸಿವೆಯಲ್ಲಾ? ಆಗ ಆ ಸೃಷ್ಟಿಕರ್ತನ ಮಾತಿನ ನೊಣಪ್ರತಿವಾದವು ಅಥವಾ ಮಾತಿನ ಅರ್ಥದ ನೊಣಪ್ರತಿವಾದ ಎಲ್ಲಾ ಎಲ್ಲಿಹೋಗುವುದು? ಒಳಿತನ್ನು ಕೆಡುಕಾಗಿ ಚಿತ್ರಿಸಬಾರದು ಮತ್ತು ಕೆಡುಕನ್ನು ಒಳಿತಾಗಿ ಚಿತ್ರಿಸಬಾರದು ಮುಖ್ಯವಾಗಿ ಧರ್ಮಗ್ರಂಥಗಳಲ್ಲಿ ಮಾಡಬೇಕಾಗಿರುವುದು ಇಷ್ಟೆ. ಯಾಕೆಂದರೆ, ದೇವರ ಧರ್ಮಗ್ರಂಥವು ಪವಿತ್ರವಾಗಿರಲು ಅಷ್ಟು ಮಾತ್ರ ಬೇಕಾಗಿರುವುದು. ಆದರೆ ದುರಾದೃಷ್ಟವಶಾತ್, ಸೃಷ್ಟಿಕರ್ತನನ್ನು ನಂಬುವ ಇತರ ಧರ್ಮದವರು ಎಲ್ಲರನ್ನು ಅವರು ಎಷ್ಟೇ ಒಳ್ಳೆಯವರಾದರೂ ಅವರು ಅವಿಶ್ವಾಸಿಗಳು ಎಂದು ದೂರವಿಡುವುದು ಅಥವಾ ನಿಂದಿಸುವುದು ಅದು ಆ ದೊಡ್ಡ ಅಧರ್ಮ ಮಾತ್ರವಾಗುವುದು. ನಾವೆಲ್ಲಾ ಸೂರ್ಯನನ್ನು ನೋಡುತ್ತಿದ್ದೇವೆ ಎಂದು ಹೇಳುವಾಗ, ನೀವು ನೋಡುತ್ತಿರುವ ಸೂರ್ಯನು ಸುಳ್ಳು ಸೂರ್ಯ ನಾವು ನೋಡುವ ಸೂರ್ಯ ಮಾತ್ರ ಸತ್ಯ ಸೂರ್ಯ ಎಂದು ಯಾರಾದರೂ ವಾದಮಾಡುವರೇ? ಸೂರ್ಯನಿದ್ದಲ್ಲಿ ಅವನು ಮನವರಿಗೆ ಎಲ್ಲರಿಗೂ ಸಮಾವಾಗಿರುವನು. ಅದೇ ರೀತಿ, ಸೃಷ್ಟಿಕರ್ತ ಇದಲ್ಲಿ, ಆತನು ಆತನ ಸೃಷ್ಟಿಯಾದ ಮಾನವರಿಗೆ ಎಲ್ಲರಿಗೂ ಸಾಮಾನವಾಗಿ ಇರುತ್ತಾನೆ ಮತ್ತು ಆತನ ಸ್ವರ್ಗದ ಅವಕಾಶ ಮಾನವರಾದ ಎಲ್ಲರಿಗೂ ಸಮಾನವಾಗಿಯೇ ಇರುತ್ತದೆ. ಇಲ್ಲವಾದರೆ, ಸೃಷ್ಟಿಕರ್ತನು ಕರುಣಾಮಯನಲ್ಲ, ನ್ಯಾಯ ಇಲ್ಲದವನು, ಮತ್ತು ತನ್ನನ್ನು ಪ್ರೀತಿಸುವ ಮಕ್ಕಳನ್ನು ವಿನಾ ಕಾರಣ ದ್ವೇಷಿಸುವ ವಿಕೃತ ಮನಸ್ಸಿನವನು ಎಂದೆಲ್ಲಾ ಆಗಿಬಿಡುವನು. ಎಲ್ಲಾದರೂ ಸೃಷ್ಟಿಕರ್ತ ದೇವರು ಮಾನವರನ್ನು ವಿಭಜಿಸುವುದಾದರೆ, ಅದು ಉತ್ತಮರು ಮತ್ತು ದುಷ್ಟರು ಎಂಬ ಆ ಎರಡು ಮಾನವ ವರ್ಗ ಮಾತ್ರವಾಗಿರುವುದು. ಈ ಎರಡು ವರ್ಗಗಳ ಜನರು ಎಲ್ಲಾ ಧರ್ಮ ಪಂಥಗಳಲ್ಲೂ ಇರುವರು, ಹಾಗಿರುವಾಗ, ಎಲ್ಲಾ ಧರ್ಮ, ಪಂಥಗಳ ಉತ್ತಮ ಜನರು ಒಂದು ವರ್ಗ ಮತ್ತು ಕೆಟ್ಟ ಜನರು ಇನ್ನೊಂದು ವರ್ಗದಲ್ಲಿ ಸೇರುತ್ತಾರೆ ಅಷ್ಟೆ. ಇನ್ನೂ ನೀವು ನಿಮ್ಮ ಧರ್ಮದಲ್ಲಿ ಮಾತ್ರ ಸ್ವರ್ಗ ಸಿಗುವುದೆಂದು ಹೇಳುವಿರಾ?

ಧರ್ಮ ಪಂಡಿತರು- ನಮ್ಮ ಧರ್ಮದಲ್ಲಿ ಹೇಳಿದಂತೆ ನಾವು ಪಾಲಿಸುತ್ತೇವೆ ಅಷ್ಟೆ.

ಜ್ಞಾನಸೇವಕ – ಕಾಡು ಜನರು ಎಲ್ಲಾ ಕಾಡುಗಳಲ್ಲೂ, ಶಿಲಾಯುಗದಿಂದಲೂ, ತಮ್ಮದೇ ಆದ ಪ್ರತ್ಯೇಕ ದೇವರುಗಳನ್ನು ಪೂಜಿಸುತ್ತಿದ್ದುದು ನಮಗೆ ತಿಳಿದಿದೆ. ಅವರೆಲ್ಲರೂ ಅನ್ಯ ದೇವರುಗಳನ್ನು ಪೂಜಿಸುವವರನ್ನು ಕೊಂದಿದ್ದಾರೆಂದೂ ನಮಗೆ ತಿಳಿದಿದೆ. ಈ ಕಾಡು ಮನುಷ್ಯರು ಹಾಗೆ ಆನ್ಯ ಕಾಡು ದೇವರುಗಳ ಅನುಯಾಯಿಗಳನ್ನು ಸುಮ್ಮನೆ ಕೊಲ್ಲುವರೇ? ಅವರು ಹಾಗೆ ಮಾಡಲು ಅವರ ಕಾಡು ದೇವತೆಯಿಂದ ಪ್ರೇರೇಪಿಸಲ್ಪಟ್ಟಿರುವುದು ಎಂದು ಅವರ ನಂಬಿಕೆ. ಹಾಗೆ ಪ್ರೇರಣೆ ಕೊಡುವ ಶಕ್ತಿಯನ್ನು ಒಂದು ದೈವ ಶಕ್ತಿ ಎಂದು ಕಲ್ಪಿಸಿಕೊಳ್ಳಲು ನಿಮಗೆ ಸಾಧ್ಯವಾಗುವುದೇ? ಹೇಳಿ ನನ್ನ ಸಹೋದರನೇ, ಹೇಳಿ. ಒಟ್ಟಿಲ್ಲಿ, ನಾವು ಕೇಳಬೇಕಾಗಿರುವ ಪ್ರಶ್ನೆ, “ಸೃಷ್ಟಿಕರ್ತ ಯಾರು” ಎಂದು ಅಲ್ಲ, ಆದರೆ ಇದಕ್ಕೆ ವಿರುದ್ಧವಾಗಿ, “ಸೃಷ್ಟಿಕರ್ತ ಎಂದರೆ ಏನು” ಎಂಬ ಪ್ರಶ್ನೆಗೆ ಈ ಪ್ರಪಂಚದ ಎಲ್ಲಾ ಧರ್ಮಗಳು ಮೊಟ್ಟಮೊದಲು ಉತ್ತರಿಸಬೇಕು. ಹಾಗೆಯೇ, “ಧರ್ಮ ಎಂದರೇನು” ಎಂಬ ಪ್ರಶ್ನೆಯು ಎಲ್ಲ ಧರ್ಮಗಳು ಮೊದಲು ಉತ್ತರಿಸಬೇಕಾದ ಇನ್ನೊಂದು ಪ್ರಶ್ನೆಯಾಗಿದೆ. ಒಂದೇ ದೇವರನ್ನು ನಂಬುವ ಅನೇಕ ಧರ್ಮಗಳಿವೆ, ಆದರೆ ಆ ಒಂದೇ ಸೃಷ್ಟಿಕರ್ತನ ಸ್ವರ್ಗವು ಒಂದು ಧರ್ಮದಲ್ಲಿ ಒಂದು ರೀತಿ ಮತ್ತು ಇನ್ನೊಂದು ಧರ್ಮದಲ್ಲಿ ರಾತ್ರಿ ಮತ್ತು ಹಗಲು ರೀತಿಯಂತೆ ವಿರುದ್ಧವಾಗಿರುವಾಗ, ಅದು ಸೃಷ್ಟಿಕರ್ತನ ಅಸ್ತಿತ್ವ ಹಾಗೂ ಆತನ ಸ್ವರ್ಗದ ಪರಿಕಲ್ಪನೆಯ ಮೇಲೆ ಅನುಮಾನವನ್ನು ಉಂಟುಮಾಡುವ ವಿವರಣೆಯಾಗಿಬಿಡುವುದು ಅಷ್ಟೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಹೀಗೆಲ್ಲಾ ವಿರುದ್ಧ ವಿವರಣೆಗಳು ಎಲ್ಲವೂ ಬರೇ ಅವರವರ ನಂಬಿಕೆಗಳು ಮಾತ್ರ ಎಂದು ಸ್ಪಷ್ಟವಾಗುವುದು, ಯಾಕೆಂದರೆ ನಂಬಿಕೆಗಳು ಸತ್ಯವಲ್ಲ ಎಂದು ನಮಗೆ ತಿಳಿದಿದೆ. ಹಾಗಿರುವಾಗ, ಈ ಅಸತ್ಯ ನಂಬಿಕೆಯ ಹಿನ್ನೆಲೆಯಲ್ಲಿ ಧರ್ಮದ ಬಗ್ಗೆ ಚರ್ಚೆ, ಮತಾಂತರ, ದ್ವೇಷ, ಹಿಂಸೆ ಮತ್ತು ರಕ್ತಪಾತ ಏಕೆ ಸಹೋದರ? ಅದರ ಆಗತ್ಯವಿದೆಯೇ? ಮಾನವರೆಲ್ಲರ ಸೃಷ್ಟಿಕರ್ತನಾದ ದೇವಸಂಕಲ್ಪವನ್ನು ಎಲ್ಲರೂ ಒಟ್ಟಾಗಿ ಪೂಜಿಸುವುದು ಎಷ್ಟು ದೊಡ್ಡ ಧಾರ್ಮಿಕ ಪರಿಕಲ್ಪನೆ ಎಂದು ನಿಮ್ಮ ಹೃದಯ ಈಗಲಾದರೂ ಯೋಚಿಸಲು ತಯಾರಾಗುವುದಿಲ್ಲವೇ? ದ್ವೇಷ, ಹಿಂಸಾಚಾರ ಮತ್ತು ರಕ್ತಪಾತವನ್ನು ಸೃಷ್ಟಿಸಲು ಮನುಷ್ಯರನ್ನು ಮನುಷ್ಯರಿಂದ ಬೇರ್ಪಡಿಸುವ ಅನ್ಯಗ್ರಹ ಜೀವಿಗಳ ಸೂಕ್ಷ್ಮದ ಆ ಅತಿ ರಹಸ್ಯ ವಾಮಾಚಾರ ಶಕ್ತಿಗಳಿಂದ ನಮ್ಮ ಸಹ ಮಾನವರನ್ನು ರಕ್ಷಿಸಲು ಇನ್ನಾದರೂ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕೆಂದು ನಾನು ನಿಮ್ಮಲ್ಲಿ ಹಾಗೂ ಜಗತ್ತಿನ ಎಲ್ಲಾ ಧರ್ಮಗಳ ಅನುಯಾಯಿಗಳಲ್ಲಿ ವಿನಯಪೂರ್ವಕ ಕೇಳಿಕೊಳ್ಳುತ್ತೇನೆ.

 _________________________________________

ಹಿಂದೆ, ಓಂದೇವ ಅವರು “ದೇವಸ್ಥಾನಗಳಲ್ಲಿ ದೇವರಿಲ್ಲ” ಎಂದಿದ್ದಾರೆಂದು ಜನರು ಆಡಿಕೊಳ್ಳುತ್ತಿದ್ದರು, ಇದು ಸತ್ಯವೇ?

ಉತ್ತರ- ಜನರಿಗೆ ದೊರಕುವುದು ಬರೇ ವದಂತಿಗಳು ಮಾತ್ರ. ಸರಿಯಾದ ಸತ್ಯವನ್ನು ತಿಳಿಯದೆ, ಅಥವಾ ತಿಳಿಯಲು ಪ್ರಯತ್ನಪಡದೆ, ಆ ವದಂತಿಗಳನ್ನು ನೂರಕ್ಕೆ ನೂರು ಸತ್ಯವೆಂದು ತೆಗೆದು ದೊಡ್ಡ ಅನಾಹುತವನ್ನೇ ಜನರು ಮಾಡಿಬಿಟ್ಟಿದ್ದಾರೆ. ಅಂದು, ಅವರು ತನಗೆ ಕೊಡಲು ಸಾಧ್ಯವಾಗುವ ಅನುಗ್ರಹವನ್ನು ಜನರಿಗೆ ಕೊಟ್ಟರು, ಅದರೊಂದಿಗೆ ಮುಖ್ಯವಾಗಿಯೂ ತಾನು ಕಂಡ, ಬಹಳ ರಹಸ್ಯವಾಗಿರುವ, ಆ ಸೂಕ್ಷ್ಮದ ಆ ಪ್ರಾಚೀನ ವಾಮಾಚಾರದ ಅಪಾಯವನ್ನು ಜನತೆಗೆ ತಿಳಿಸಿ ಆ ರೀತಿಯಲ್ಲೂ ಜನರಿಗೆ ಸಹಾಯವಾಗುವಂತೆ ಕಷ್ಟಪಟ್ಟಿದ್ದರು. ಮನೆ, ಸಮಾಜದಲ್ಲಿ ಉಂಟಾಗಬಹುದಾದ ಆ ಹಲವು ತರದ ಆಪತ್ತುಗಳು ದೂರವಾಗಿ, ಆ ಮೂಲಕವೂ, ಜನರು ನೆಮ್ಮದಿಯನ್ನು ಪಡೆಯಬೇಕೆಂಬ ಉದ್ದೇಶ ಮಾತ್ರ ಅವರಿಗೆ ಇದ್ದಿದ್ದು. ಅಂದು ಮಾತ್ರವಲ್ಲ, ಇಂದೂ ಕೂಡಾ ಆ ಉದ್ದೇಶ ಮಾತ್ರವೇ ಅವರಿಗೆ ಇರುವುದು, ಹೊರತು ಅವರು ಕೊಟ್ಟಿರುವ ಅನುಗ್ರಹದ ಹಿನ್ನೆಲೆಯಲ್ಲಿ ಹಣ ಸಂಪಾದನೆ ಮಾಡುವ ಯಾವುದೇ ಕಾರ್ಯ ಅವರಿಂದ ಎಂದಾದರೂ ಉಂಟಾಗಿದೆಯೇ? ಅವರಿಗೆ ಹೆಸರು ಮಾಡುವ ಉದ್ದೇಶ ಇದ್ದಲ್ಲಿ, ಕಡಿಮೆ ಪಕ್ಷ, ಅಂದು ಅವರನ್ನು ಭಕ್ತರು ಕರೆದ ಕಡೆಗೆಲ್ಲಾ ಆಶೀರ್ವಚನಕ್ಕಾದರೂ ಹೋಗಬೇಕಾಗಿತ್ತು, ಆದರೆ ಅವರು ಒತ್ತಾಯದ ಮೇರೆಗೆ ಒಂದೆರಡು ಕಡೆಗೆ ಹೋಗಿ ಬಂದಿರುವುದನ್ನು ಬಿಟ್ಟರೆ, ಅವರ ಕುಟೀರವನ್ನು ಬಿಟ್ಟು ಅವರು ಹೊರಗೆ ಹೋಗಿದ್ದಾರೆಯೇ? ಮೌನವ್ರತ ಇತ್ಯಾದಿಗಳ ಮೂಲಕ ಕುಟೀರದಲ್ಲಿ ನಿರಂತರ ಧ್ಯಾನ ಮಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಚಾರವೂ ಅಲ್ಲವೇ? ಹೀಗಿರಲು, ಅವರ ಅನುಗ್ರಹವನ್ನು ಅಂದು ಎಲ್ಲರೂ ಬಳಸಿಕೊಂಡರು, ಆದರೆ ಅವರು ತಿಳಿಸಿದ ಅಪಾಯದ ಆ ರಹಸ್ಯ ಸತ್ಯವನ್ನು, ಜನರು ಅವರಲ್ಲಿ ಹೋಗಿ ಸರಿಯಾಗಿ ವಿಚಾರಿಸದೆ, ಅದರ ಬಗ್ಗೆ ತಪ್ಪಾಗಿ ವದಂತಿಗಳನ್ನು ಹರಿಯಬಿಟ್ಟರು. ಜನರು ಆ ತಪ್ಪು ವದಂತಿಗಳನ್ನು ಸರಿಯೆಂದು ನಂಬಿ ಬಲು ದೊಡ್ಡ ಅನಾಹುತವನ್ನು ಮಾಡಿಬಿಟ್ಟರು.

ಭಕ್ತಿಯಲ್ಲಿ ಎರಡು ರೀತಿಗಳಿವೆ. ಒಂದು ಆಚಾರಗಳ ಹಿನ್ನೆಲೆಯ ಭಕ್ತಿ ಮತ್ತು ಇನ್ನೊಂದು ಶುದ್ಧಭಕ್ತಿ ಆಗುವುದು. ಅವರು ಅಂದೂ ಇಂದೂ ಹೇಳುವುದು, ದಾಸರು, ಶರಣರ ತರ ದೇವರಲ್ಲಿ ಜನರು ಶುದ್ಧಭಕ್ತಿಯನ್ನು ಹೆಚ್ಚಸಬೇಕೆಂದು ಆಗಿದೆ. ಅಂದರೆ, ಅದರ ಅರ್ಥ ಆಚಾರಗಳು ಬೇಡ ಎಂದಲ್ಲ. ಬದಲು, ಈ ಶುದ್ಧಭಕ್ತಿಯಲ್ಲಿ ಮಾತ್ರ ಮಾನವನ ಸ್ವಭಾವಶುದ್ಧಿ ಉಂಟಾಗಲು ಸಾಧ್ಯವಾಗುವುದು ಅದಕ್ಕೆ. ಆ ರಹಸ್ಯ ಸೂಕ್ಷ್ಮದ ಪ್ರಾಚೀನ ವಾಮಾಚಾರವು ಮಾನವರ ಮನಸ್ಸನ್ನು ಕೆಟ್ಟ ದಾರಿಗೆ ಕೊಂಡೊಯ್ಯಲು ಹಾಗೂ ದ್ವೇಷ, ಕಲಹಗಳನ್ನು ಮನೆ, ಸಮಾಜಗಳಲ್ಲಿ ಸೃಷ್ಟಿಸಲು ನಿರಂತರ ಪ್ರೇರೇಪಿಸುತ್ತಾ ಇರುತ್ತದೆ ಎಂಬ ಸೂಕ್ಷ್ಮ ರಹಸ್ಯವನ್ನು ಅವರು ಅರಿತಿರುವುದೇ ಜನಸಾಮಾನ್ಯರಲ್ಲಿ ಅದನ್ನು ಒತ್ತಿ ಹೇಳುವುದಕ್ಕೆ ಮುಖ್ಯ ಕಾರಣ ಎಂದೂ ತಿಳಿಯಬೇಕು. ಎಲ್ಲಾ ಧರ್ಮಗಳ ಆರಾಧನಾಲಯಗಳಲ್ಲಿಯೇ ದ್ವೇಷ, ಜಗಳ, ಕೆಲವೊಮ್ಮೆ ರಕ್ತಪಾತಗಳು ಆಗುತ್ತಾ ಇರುವುದನ್ನು ನಾವು ಕಾಣುವೆವು. ಹೀಗಿರುವಾಗ ಮನೆಗಳಲ್ಲಿ ಹಾಗೂ ಪತಿ, ಪತ್ನಿಯರ ನಡುವೆ ಜಗಳ ಹೆಚ್ಚು ಆಗದೆ ಇರುವುದೇ? ಈ ತೊಂದರೆಯನ್ನು ಮನೆ ಮನೆಗಳಲ್ಲಿ ಹಾಗೂ ಸಮಾಜದಲ್ಲಿ ಪರಿಹರಿಸಲು ಅವರಿಗೆ ಅಂದು ಕಂಡ ಪರಿಹಾರವೆಂದರೆ ಮಾನವರಲ್ಲಿ ಶುದ್ಧಭಕ್ತಿಗೆ ಹೆಚ್ಚು ಒತ್ತುಕೊಡುವುದಾಗಿತ್ತು. ಹಾಗೆ ಅದಕ್ಕಾಗಿ ಮಾತಾಡುವಾಗ, ಅವರು ಆ ಎರಡು ರೀತಿಯ ಭಕ್ತಿಗಳನ್ನು ಅಥವಾ ಆರಾಧನಾ ರೀತಿಗಳನ್ನು ಬಂದ ಭಕ್ತರಲ್ಲಿ ವಿವರಿಸುವ ಅನಿವಾರ್ಯತೆ ಉಂಟಾಯಿತು. ಅಂದರೆ, ಆಚಾರಭಕ್ತಿ ಮತ್ತು ಇನ್ನೊಂದು ಶುದ್ಧಭಕ್ತಿ ಎರಡರ ವಿಚಾರವಾಗಿ ಹೇಳಬೇಕಾಗಿ ಬಂತು ಎಂದು ಅರ್ಥ. ಅವರು ಆಚಾರ ಭಕ್ತಿಯಲ್ಲಿ ದೇವರು ಮತ್ತು ಭಕ್ತನ ನಡುವೆ ಪೂಜಾರಿ ಇರುವನು, ಆದರೆ ಶುದ್ಧಭಕ್ತಿಯಲ್ಲಿ ಅದು ಇಲ್ಲ, ಬದಲು ಅಲ್ಲಿ ಅದು ನೇರ ಭಕ್ತಿಯಾಗಿದೆ ಎಂದೆಲ್ಲಾ ವಿವರಿಸಿದರು. ಹೀಗೆ ಹೇಳುವಲ್ಲಿ, ಆಚಾರಭಕ್ತಿಯ ದೇವರ ಸಂಕಲ್ಪವನ್ನೂ ಅವರು ವಿವರಿಸಬೇಕಾಯಿತು. ವಿಗ್ರಹದಲ್ಲಿ ಪ್ರಾಣ ಪ್ರತಿಷ್ಠೆ ಮಾಡಿದ ದೇವಸಂಕಲ್ಪ ಇರುವುದು ಎಂದೂ, ಜ್ಯೋತಿಷಿಗಳು ಪಂಚಾಗ ಇಡುವಾಗ ಹೇಳುವ ಮಾತುಗಳಾದ, “ಕಾಲ ಹೋದಂತೆ ವಿಗ್ರಹದಲ್ಲಿ ಚೈತನ್ಯ ಕ್ಷಯಿಸುವುದು, ಹಾಗೆ ಕ್ಷಯಿಸುವಾಗ, ಕುಂಭಾಭಿಷೇಕ ಅಥವಾ ಬ್ರಹ್ಮಕಲಶ ಮಾಡಿ ಆ ವಿಗ್ರಹದಲ್ಲಿ ಚೈತನ್ಯ ಪುನಃ ಹೆಚ್ಚಿಸಬೇಕು” ಎಂಬೆಲ್ಲಾ ಆ ಇರುವ ಸತ್ಯಗಳನ್ನು ಮಾತ್ರ ಹೇಳಿರುವುದು. ಇದನ್ನು ಕೆಲವು ಜನರು ಸರಿಯಾಗಿ ಅರ್ಥ ಮಾಡದೆ, “ದೇವಸ್ಥಾನಗಳಲ್ಲಿ ದೇವರಿಗೆ ಶಕ್ತಿ ಇಲ್ಲ ಎಂದು ಅವರು ಹೇಳುವರು” ಎಂದು ತಪ್ಪಾಗಿ ಪ್ರಚಾರ ಮಾಡಿದರು.

ಮಾನವರು ಸ್ವಲ್ಪವಾದರೂ ದಾಸರ, ಶರಣರ ತರ ಹೃದಯದ ಶುದ್ಧಭಕ್ತಿಯ ಕಡೆಗೆ ಬಂದರೆ ಮಾತ್ರ ಆ ಪ್ರಾಚೀನ ವಾಮಾಚಾರದ ಮೋಸದಿಂದ ಮಾನವರು ಪಾರಾಗಬಹುದು ಎಂಬ ಆ ಒಂದೇ ಒಂದು ಉದ್ದೇಶ ಮಾತ್ರ ಅವರ ಮಾತಲ್ಲಿ ಅಡಕವಾಗಿತ್ತು ಎಂಬುವುದನ್ನು ಯಾರೂ ತಿಳಿಯದೆ ಹೋದರು! ಇಂದೂ ಅವರು ಎಲ್ಲಾ ಧರ್ಮಗಳಲ್ಲೂ ಕೇಳಿಕೊಳ್ಳುವುದು, ತಮ್ಮ ತಮ್ಮ ದೇವರನ್ನು ಸತ್ಯ, ಪ್ರೀತಿ, ನೀತಿ ಎಂದು ನೋಡಿರೆಂದಾಗಿದೆ. ‘ಸತ್ಯವೇ ದೇವರು, ಮತ್ತು ಪ್ರೀತಿಯೇ ದೇವರು’ ಎಂಬುವುದು ಹಿಂದಿನಿಂದಲೇ ಇರುವ ದೇವರ ಆ ನಿಜವಾದ ದೇವಸಂಕಲ್ಪ ಎಂಬುವುದನ್ನು ಜನರು ಮರೆತು ಹೋಗಿರುವರು, ಅದನ್ನು ಮಾತ್ರ ಅವರು ನೆನಪಿಸುತ್ತಿದ್ದಾರೆ ಅಷ್ಟೆ. ಈ ರೀತಿಯಲ್ಲಿ, ಧರ್ಮ ಹಾಗೂ ದೇವರನ್ನು ಹೆಚ್ಚು ಹೆಚ್ಚು ಕಂಡಲ್ಲಿ ಮಾತ್ರ ಮಾನವರು ಆಗ್ರಹಿಸುವ ಆ ಮನ, ಮನೆ, ಹಾಗೂ ಸಮಾಜ ಶಾಂತಿಗಳು ಸಾಧ್ಯ. ಧರ್ಮಗಳ ಹಾಗೂ ದೇವರುಗಳ ಈ ಸಾರ ಸತ್ಯದ ಭಾಗವನ್ನು ಎತ್ತಿ ಹಿಡಿಯುವುದು ಅಲ್ಲದೆ ಮಾನವರಿಗೆ ಆ ರಹಸ್ಯ ಪ್ರಾಚೀನ ವಾಮಾಚಾರದ ಮೋಸದಿಂದ ಪಾರಾಗಲು ಬೇರೆ ದಾರಿಯೇ ಇಲ್ಲ ಎಂಬುವುದು ಅವರ ಎಲ್ಲಾ ಬರಹಗಳ ಮುಖ್ಯ ಸಾರ ಎಂದು ಅವರ ಬರಹಗಳನ್ನು ಓದಿದ ಸರ್ವರಿಗೂ ತಿಳಿದಿದೆ. ಆದರೆ, ಜನಸಾಮಾನ್ಯರ ಜೀವನದ ಮೇಲೆ ಇಷ್ಟೆಲ್ಲಾ ಕಾಳಜಿವಹಿಸುವ ಮತ್ತು ಜನಸಾಮಾನ್ಯರ ಮೇಲಿನ ಅವರ ಆ ಶುದ್ಧಪ್ರೀತಿಗೆ ಬದಲಾಗಿ ಜನಸಾಮಾನ್ಯರು ತಿರುಗಿ ಅವರಿಗೆ ನೀಡಿದ್ದು ಮಾತ್ರ ಊಹಿಸಲೂ ಸಾಧ್ಯವಾಗದಷ್ಟು ಭೀಕರವಾದ ಕಾಣಿಕೆಯಾಗಿದೆ!

 ***********************************************************************************************

ಚುಟುಕು ಮಹಾಜೀವನ ಪೂರ್ವಸಂಧ್ಯಾ ನಿತ್ಯಸಂಕಲ್ಪ

1. ಅಹಂಕಾರ ಇಲ್ಲದವನಾಗಿ, ‘ಇತರರಂತೆ ನಾನು’ ಎಂದು ತಿಳಿದು ಜೀವಿಸುವುದಾದರೆ ನನಗೆ ಲಾಭ, ಆದರೆ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬುವುದನ್ನು ಕಡೆಗಣಿಸಿ ಅನೈತಿಕವಾಗಿ ನಡೆದರೆ ನನ್ನ ಜೀವನದಲ್ಲಿ ಆನಂದವನ್ನು ಕಳಕೊಂಡು ಕಷ್ಟಪಡಬೇಕಾಗುವುದು.

2. ಇತರರು ಕೋಪಗೊಂಡರೂ ನಾನು ಕೋಪಗೊಳ್ಳಲಾರೆ, ಮತ್ತು ಸತ್ಯದ ಅಭಿಪ್ರಾಯವನ್ನು ಯಾರು ಹೇಳಿದರು ಕೂಡಾ ಅದನ್ನು ಒಪ್ಪಿಕೊಳ್ಳುವೆನು.

3. ಜೀವನದಲ್ಲಿ ನಮಗಿಂತ ಹೆಚ್ಚು ಕಷ್ಟಪಡುವವರೊಂದಿಗೆ ಮಾತ್ರ ನಾನು ನನ್ನನ್ನು ಹೋಲಿಸುವೆನು, ಮತ್ತು ಹಣ, ವಿದ್ಯೆ, ಹೆಸರು, ಕೀರ್ತಿ ಇದ್ದವರು ಕೂಡಾ ಆತ್ಮಹತ್ಯೆಯನ್ನು ಮಾಡುವ ಕಾರಣ, ಜೀವನ ಸಂತೃಪ್ತಿ ಮಾತ್ರವೇ ಜೀವನದಲ್ಲಿ ಸದಾ ಆನಂದವನ್ನು ತಂದುಕೊಡಲು ಸಮರ್ಥವಾಗಿರುವುದು ಎಂಬ ಆ ಸತ್ಯವನ್ನು ಎಂದಿಗೂ ಮರೆಯಲಾರೆ.



4. ಮೇಲಿನ ಈ ಸತ್ಯಗಳ ಪ್ರಜ್ಞೆಯ ಸಹಾಯದಿಂದ ನಾನು ನನ್ನ ಜೀವನವನ್ನು ಸದಾ ಪವಿತ್ರ ಹಾಗೂ ಆನಂದದಿಂದ ಇರುವಂತೆ ಮಾಡಿ ನನ್ನ ಹಾಗೂ ನನ್ನೊಂದಿಗಿರುವವರ ಜೀವನವನ್ನು ಸಾರ್ಥಕವಾಗುವಂತೆ ಮಾಡುವೆನು ಎಂದು ದೃಢಸಂಕಲ್ಪವನ್ನು ಮಾಡುವೆನು.


 ********************************



ಚುಟುಕು ಮಹಾಜೀವನ ಸಾಯಂಸಂಧ್ಯಾ ನಿತ್ಯಸಂಕಲ್ಪ



1. ನನ್ನ ಜೀವನವು ಆನಂದಮಯ ಆಗಬೇಕಾಗಿದ್ದರೆ ನಾನು ಸತ್ಯಸಂಧತೆಯನ್ನು ಹಾಗೂ ಶುದ್ಧಪ್ರೀತಿಯನ್ನು ಪಾಲಿಸಲೇಬೇಕು.

2. ದಾಂಪತ್ಯವು ಆನಂದಮಯ ಆಗಬೇಕಾಗಿದ್ದರೆ, ಅನೈತಿಕ ಸಂಬಂಧವಿಲ್ಲದೆ, ಪತಿ ಪತ್ನಿ ಸಂಬಂಧವನ್ನು ಪವಿತ್ರಗೊಳಿಸುತ್ತಾ, ತಮ್ಮೊಳಗೆ ಅರಿತು ಜೀವಿಸಬೇಕು.



3. ಕಲಹಕ್ಕೆ ಕಾರಣವಾಗುವ ಎಲ್ಲವನ್ನು ಮೊದಲೇ ಅರಿತು, ಅವುಗಳಿಗೆ ಪರಿಹಾರಗಳನ್ನು ಸಂದರ್ಭನೋಡಿ, ಹೇಳಿ, ಪ್ರೀತಿಯಿಂದಲೇ ಪರಿಹರಿಸಬೇಕಾಗಿದೆ.



4. ಈ ಮೇಲಿನ ಅರಿವಿನ ಸಹಾಯದಿಂದ, ನನ್ನ ಬಾಳನ್ನು ನೈತಿಕತೆಯೊಳಗಿನ ಸ್ವರ್ಗವನ್ನಾಗಿ ಮಾಡುವುದರೊಂದಿಗೆ, ನಾನು ಹಾಗೂ ನನ್ನೊಂದಿಗಿರುವ ಜನರು ಜೀವನ ಆನಂದವನ್ನು ಪಡೆಯುವಂತೆ ಮಾಡುವುದೇ ನನ್ನ ಜೀವನದ ಧಾರ್ಮಿಕ ಹಾಗೂ ಮಹತ್ತಾದ ಗುರಿಯಾಗುವುದು ಎಂದು ದೃಢಸಂಕಲ್ಪವನ್ನು ಮಾಡುವೆನು.


 *************************************************************************************************

ಮಹಾಜೀವನಕ್ಕೆ ಸಂಬಂಧಿಸಿ ಇರುವ ಹಲವು ಅಂಶಗಳು

ಶುದ್ಧಪ್ರೀತಿ ಎಂಬುವುದು ಅದರ ಮೇಲಿನ ಹಂತಗಳಲ್ಲಿ ಸಂಕುಚಿತ ರೀತಿಯದ್ದು ಅಲ್ಲದ ಕಾರಣ ಅದರಲ್ಲಿ ಹೃದಯ ವೈಶಾಲ್ಯತೆ ಕಂಡು ಬರುವುದು ಖಂಡಿತವಾಗಿದೆ.

ಓ ಸಾಹಿತ್ಯವೇ, ನೀನು ಮೌನವಾಗದಿರು. ಶುದ್ಧಪ್ರೀತಿಯ ಶುದ್ಧ ತಂಗಾಳಿಯ ಅನುಭವವು ಸಾಹಿತ್ಯದಿಂದ ಬಾನೆತ್ತರಕ್ಕೆ ಏರಿಸಲ್ಪಡಲಿ. ಸಹಜ ಸಾಹಿತ್ಯವು ಹೊರಡುವುದು ಹೃದಯ ಗುಡಿಯ ಅನುಭವದಿಂದ. ಶುದ್ಧಪ್ರೀತಿಯ ಪೂಜೆಯ ಆ ದಿವ್ಯ ಮಂಗಳಾರತಿ ಎಂಬ ಸಾಹಿತ್ಯವು ನಮ್ಮನ್ನು ಮತ್ತು ಅದನ್ನು ಸ್ವೀಕರಿಸುವ ಸರ್ವರನ್ನೂ ಆ ಅದ್ಭುತ ಮಹಾತ್ಮರ ಹಂತಕ್ಕೆ ಕರೆದೊಯ್ಯುವ ಆ ಹೃದಯ ವಾಹನವಾಗುವುದು. ಶುದ್ಧಪ್ರೀತಿಯನ್ನು ಸಾಹಿತ್ಯದಲ್ಲಿ ಪ್ರಕಟಗೊಳಿಸಿ ಅದನ್ನು ಮಹದೆತ್ತರಕ್ಕೆ ಏರಿಸುವ ಸರ್ವರೂ ಧನ್ಯರು.

ಇನ್ನು, ಮೋಸ, ವಂಚನೆಗಳ ಮೂಲವು ಸ್ವಾರ್ಥ ಅಥವಾ ‘ನಾನು, ನನಗೆ’ ಎಂಬುವುದರ ಭ್ರಮೆಯಲ್ಲಿ ಅಡಗಿರುವುದು. ಶುದ್ಧಪ್ರೀತಿಯು ಆ ಭ್ರಮೆಯಿಂದ ದೂರಹೋಗುವಲ್ಲಿ ಸಿಗುವ ನಿಧಿ ಎಂದು ಈಗ ಸ್ಪಷ್ಟವಾಯಿತು. ಎಲ್ಲರೂ ಶುದ್ಧಪ್ರೀತಿಯನ್ನು ಅರಸಿ ಮಹಾಜೀವನ ದಾರಿಯಲ್ಲಿ ನಿತ್ಯವೂ ಮುಂದೆ ಮುಂದೆ ಸಾಗೋಣ. ಆಗ, ಶುದ್ಧಪ್ರೀತಿಯ ನಿಧಿಯು ಹತ್ತಿರ ಹತ್ತಿರವಾಗುವುದು.

ಹೃದಯದಿಂದ ಉಕ್ಕಿ ಬರಬೇಕಾದರೆ ನಾವು ಹೃದಯದಲ್ಲೇ ಶುದ್ಧಪ್ರೀತಿಗಾಗಿ ಒಂದು ಬಾವಿ ನಿರ್ಮಿಸಬೇಕು. ಆ ಪ್ರಯತ್ನವೇ ಮಹಾಜೀವನ ಸಾಧನೆಗಳು.

ಯಾವುದು ಎಲ್ಲೆಡೆ ಇರುತ್ತದೆಯೋ, ಅದು ಜನಸಾಮಾನ್ಯರ ರೀತಿ. ಜನಸಾಮಾನ್ಯರಿಗೆ ಮೋಕ್ಷ ಕೊಡಲು, ದೇವರ ಅನುಗ್ರಹ ಕೊಡಲು ಎಲ್ಲಾ ಧರ್ಮಗಳು ಮುಂದೆ ಬರುತ್ತವೆ, ಆದರೆ ಆಗತ್ಯದ ಮನೆಶಾಂತಿಯನ್ನು ಕೊಡುವಲ್ಲಿ ಏನೂ ಮಾಡುವುದಿಲ್ಲ! ನಿಜವಾಗಿಯೂ ಶುದ್ಧಪ್ರೀತಿಯ ಮೇಲು ಮೇಲಿನ ಹಂತಗಳು ನಮ್ಮ ಹೃದಯವನ್ನು ಮೇಲು ಮೇಲಿನ ಆನಂದದಿಂದ ನಲಿದಾಡುವಂತೆ ಮಾಡುವುದು.

ಶುದ್ಧಪ್ರೀತಿ ಎಂದೂ ಶುದ್ಧವಾಗಿಯೇ ಇರುವುದು. ಅದು ಕೆಲವೊಮ್ಮೆ ಅಶುದ್ಧ ಕೆಲವೊಮ್ಮೆ ಶುದ್ಧ ಎಂದು ಬದಲಾಗುತ್ತಾ ಇರುವುದಿಲ್ಲ. ಹೃದಯ ವೈಶಾಲ್ಯತೆಯೇ ಅದರ ತಾಯಿ, ವೈರಾಗ್ಯದ ಹಾಗೂ ವಿವೇಚನೆಯ ಆ ಜ್ಞಾನವೇ ಅದರ ತಾತ. ಕೊನೆಗೂ ಅಹಂಕಾರ ಸೋತಾಗ ಮಹಾತ್ಮಾನು ಹೃದಯದೊಳಗಿಂದ ಪೂರ್ಣ ಚಿಟ್ಟೆಯ ರೂಪಹೊಂದಿ ಹೊರ ಬರುವನು. ಶುದ್ಧಪ್ರೀತಿಗೆ ಜಯವಾಗಲಿ.

ಶುದ್ಧಪ್ರೀತಿಗೆ ಕಾರಣವು ಹೃದಯ ವೈಶಾಲ್ಯತೆ. ಹೃದಯ ವೈಶಾಲ್ಯತೆಗೆ ಕಾರಣವು ಭೂಮಿಯ ಜೀವನ ಮಿಥ್ಯತ್ವದ ವೈರಾಗ್ಯ ಜ್ಞಾನ ಮತ್ತು ವಿವೇಚನೆಯ ಜ್ಞಾನ, ವಿವೇಚನೆ ಜ್ಞಾನದಲ್ಲಿ ಆತ್ಮಪರಿಶೋಧನೆಯಿಂದ ಬಂದ ನಿಷ್ಪಕ್ಷ ಜ್ಞಾನವೂ ಸೇರಿದೆ. ಒಟ್ಟಲ್ಲಿ, ಶುದ್ಧಪ್ರೀತಿಯು ಪಾಕಶಾಲೆಯ ಸಿಹಿತಿಂಡಿಯ ತರ ಹಲವು ಹಂತಗಳ ನಂತರವೇ ಹುಟ್ಟಿಕೊಳ್ಳುವುದು ಎಂದು ತಿಳಿಯಬೇಕು. ಮಹಾಜೀವನದಲ್ಲಿ ಆಸಕ್ತಿಯನ್ನು ಸ್ವತಃ ಹೆಚ್ಚು ಮಾಡುತ್ತಾ ಬರುವವರಿಗೆ ಆ ಹಲವು ಹಂತಗಳು ಸಹಜವಾಗಿ ತೋರುವುದು, ಅಂದರೆ ಕಷ್ಟವಾಗಿ ತೋರುವುದಿಲ್ಲ. ಆದರೆ, ಜಗತ್ತಿನ ಯಾರಿಗಾದರೂ, ಶುದ್ಧಪ್ರೀತಿ ಇಲ್ಲದೆ ಆನಂದ ಜೀವನವವೂ ಇಲ್ಲ!

ಆದರೆ ಇಲ್ಲಿ ನಾವು ನೋಡಬೇಕಾದುದು, ಎಲ್ಲರೂ ಅಥವಾ 90% ಜನರು ಬಯಸುವ ರೀತಿ ಯಾವುದು ಎಂದು. ಅದು ಮನೆ ಮನೆಯ ಮಹಾತ್ಮರ ರೀತಿ ಅಲ್ಲವೇ? ಹಾಗಿರುವಾಗ ಸಮಾಜಕ್ಕೆ ಹೆಚ್ಚು ಉಪಕಾರಿಯು ಮನೆ ಮನೆಯ ಮಹಾತ್ಮರ ರೀತಿಯಾಗಿದೆ ಎಂಬುವುದು ಸ್ಪಷ್ಟ. ಇನ್ನು, ನಾಸ್ತಿಕರಿಗೂ ಈ ಆನಂದದ ಜೀವನ ಬೇಕು ಆದುದರಿಂದ ಅವರಿಗೂ ಈ ಮನೆ ಮನೆಯ ಮಹಾತ್ಮರ ಜೀವನದ ಅಗತ್ಯ ಇರುವುದು! ಆದರೆ ಅವರಿಗೆ ಮರದಡಿಯ ಮಹಾತ್ಮರ ಗುರಿಯಾದ, ಆ ಮೋಕ್ಷದ ಅಥವಾ ಸ್ವರ್ಗದ ರೀತಿಯು ಬೇಕಾಗಿಲ್ಲ.

ಸೂಕ್ಷ್ಮ ಲೋಕದ ಬಗ್ಗೆ, ಮೋಕ್ಷ, ಸ್ವರ್ಗ ಇತ್ಯಾದಿಗಳ ಬಗ್ಗೆ ಧರ್ಮ, ಪಂಥಗಳು ತಮ್ಮೊಳಗೆ ವಿರುದ್ಧವಾಗಿ ಹೇಳುವಾಗ, ಅವುಗಳ ಅಸ್ತಿತ್ವದ ಬಗ್ಗೆ ಜನಸಾಮಾನ್ಯರಿಗೂ ಸಂಶಯ ಬರುವುದು. ಆದರೆ ಮಾನವನಿಗೆ ಒಂದು ಜೀವನ ಇದೆ ಎಂಬಲ್ಲಿ ಯಾರಿಗೂ ಸಂಶಯವಿಲ್ಲ. ಹೀಗಿರಲು, ಸಂಶಯವಿಲ್ಲದ ಈ ಜೀವನವನ್ನು ಚೆನ್ನಾಗಿ ಇಟ್ಟುಕೊಂಡು ಅದನ್ನು ಚೆನ್ನಾಗಿ ಅನುಭವಿಸಲು ಎಷ್ಟು ಗಮನ ಹರಿಸಬೇಕು ಎಂಬುವುದನ್ನು ಸರ್ವರೂ ಇನ್ನೊಮ್ಮೆ ಆಲೋಚಿಸಿ ಗಟ್ಟಿಮಾಡಿಕೊಳ್ಳಬೇಕಾಗಿದೆ. ಅಂದರೆ, ಮನೆ ಮನೆಯ ಮಹಾತ್ಮರ ಜೀವನವು ಎಷ್ಟು ಅನಿವಾರ್ಯ ಎಂಬುವುದರ ಬಗ್ಗೆ ಚಿಂತಿಸಬೇಕು ಎಂದಾಗಿದೆ.

ವಿಶೇಷವೆಂದರೆ, ಮರದಡಿಯ ಮಹಾತ್ಮನಿಗೆ ಲೌಕಿಕ ಜೀವನ ತ್ಯಾಗ ಮತ್ತು ಅಹಂಕಾರದ ತ್ಯಾಗ ಎಂಬ ಆ ಎರಡು ರೀತಿಯ ತ್ಯಾಗಗಳು ಅನಿವಾರ್ಯವಾಗಿದೆ, ಆದರೆ ಮನೆ ಮನೆಯ ಮಹಾತ್ಮರ ತ್ಯಾಗದಲ್ಲಿ ಅಹಂಕಾರದ ಆ ಒಂದೇ ಒಂದು ತ್ಯಾಗವೇ ಅನಿವಾರ್ಯವಾಗಿರಬೇಕಾಗಿರುವುದು.

ನಿಜವಾಗಿಯೂ ಮನೆ ಮನೆಯ ಮಹಾತ್ಮರು ಮಾನವ ಕುಲಕ್ಕೆ ಅನಿವಾರ್ಯವಾಗಿರುವ ಆದರ್ಶರು. ಇದುವರೆಗೂ ಈ ಮನೆ ಮನೆಯ ಮಹಾತ್ಮರ ಪರಂಪರೆಯು ಈ ಜಗತ್ತಲ್ಲಿ ಸೃಷ್ಟಿಯಾಗಿಲ್ಲ ಎಂಬುವುದು ಅಚ್ಚರಿಯ ಪರಮಾವಧಿಗೆ ನಮ್ಮನ್ನು ಕೊಂಡೊಯ್ಯುತ್ತದೆ!!! ಇನ್ನಾದರೂ, ಮನೆ ಮನೆಯ ಮಹಾತ್ಮರ ದಾರಿಯು ನಮ್ಮನ್ನು ಹೃದಯ ವೈಶಾಲ್ಯತೆಯ ಸುವರ್ಣ ಸೌಧಗಳಿರುವ, ದಿವ್ಯಜ್ಞಾನ ಎಂಬ ಹೆಸರಿನ, ಪವಿತ್ರತೆಯ ಸತ್ಯಯುಗದ ಆ ರಾಜಧಾನಿಗೆ ಕೊಂಡೊಯ್ಯಲಿ.

ಸತ್ತನಂತರ ಒಂದು ಆತ್ಮ ಹೇಗೆ ತನ್ನ ಪಯಣವನ್ನು ಮುಂದುವರಿಸುತ್ತದೆ ಎಂಬ ಆ ಒಂದು ಪ್ರಶ್ನೆಯ ಉತ್ತರವನ್ನು ಇಂದೂ ಬೇರೆ ಬೇರೆ ಧರ್ಮಗಳು ಬೇರೆ ಬೇರೆ ರೀತಿಗಳಲ್ಲಿ ವಿವರಿಸುವವು. ಇನ್ನು ಇತರ ಸೂಕ್ಷ್ಮದ ವಿಚಾರವಾಗಿರುವ ಅಭಿಪ್ರಾಯ ವ್ಯತ್ಯಾಸಗಳನ್ನು ಪ್ರತ್ಯೇಕ ಹೇಳಬೇಕಾಗಿಲ್ಲವಲ್ಲ! ಹಾಗಿರುವಾಗ, ತರ್ಕವನ್ನು ಅವಲಂಭಿಸುವ ಯಾರಿಗಾದರೂ, ಅವುಗಳ ಸತ್ಯತೆಯ ಬಗ್ಗೆ ಸಂಶಯ ಹುಟ್ಟುವುದು ಸಹಜವಾಗುವುದು. ಹೀಗಿರಲು, ಪ್ರತಿಯೊಬ್ಬನ ಮನಸ್ಸಾಕ್ಷಿಯಿಂದ ಬರುವ ಸತ್ಯಸಂಧವಾದ ತರ್ಕಗಳು, ತಮ್ಮ ಜೀವನವನ್ನು ಪೂರ್ತಿಯಾಗಿ ಸತ್ತನಂತರದ ವಿಷಯಗಳಿಗಾಗಿ ಮೀಸಲಾಗಿಡುವಲ್ಲಿ ಉದ್ದೇಶಿಸುವ ಲಾಭದ ಭರವಸೆಯನ್ನೇ ತಗ್ಗಿಸಿಬಿಡುವುದು. ಇಂಥಹ ಪರಿಸ್ಥಿತಿಯಲ್ಲಿ, ಮನುಷ್ಯ ಜೀವನದ ಉದ್ದೇಶವು ಮನೆ ಮನೆಯ ಮಹಾತ್ಮರ ಜೀವನವಾದರೆ, ಆಗ, ಮಾನವರಿಗೆ ಧೈರ್ಯವಾಗಿ ಅದರ ಫಲ ಸಿಗುವುದೆಂಬ ಭರವಸೆಯನ್ನು ಸಂಶಯವಿಲ್ಲದೆ ಇಟ್ಟುಕೊಳ್ಳಬಹುದು.

ಆದರೆ ಆಧ್ಯಾತ್ಮದಲ್ಲಿ ಕಠಿಣ ಸಾಧನೆಗಳು ಇರುವ ಕಾರಣ ಆ ದಾರಿ ಆನಂದದ ದಾರಿ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಆಧ್ಯಾತ್ಮ ವ್ಯಕ್ತಿಗಳು ಮಹಾತ್ಮರ ಹಂತದಲ್ಲಿ ಕಾಣಿಸಿಕೊಳ್ಳುವ ಕಾರಣ ‘ಸಮಾಜಕ್ಕೆ ಒಳಿತನ್ನು ಬಯಸದೆ ಇರುವವರು’ ಎಂದು ಪೂರ್ತಿಯಾಗಿ ಹೇಳುವಹಾಗಿಲ್ಲ. ಮಹಾತ್ಮರು ಆದರ್ಶಪ್ರಿಯರು ಎಂಬುವುದು ಬಹಳ ಸರಿಯಾಗಿದೆ.

ಲೌಕಿಕ ಜೀವನವನ್ನು ಬಿಡಲು ಆಧ್ಯಾತ್ಮ ಹೇಳುವುದು, ಆದರೆ ಲೌಕಿಕ ಜೀವನವನ್ನು ಸುಂದರಗೊಳಿಸಲು, ಆದರ್ಶಗೊಳಿಸಲು, ಅನಂದಗೊಳಿಸಲು, ಮಹಾಜೀವನ ಹೇಳುವುದು.

ಆಧ್ಯಾತ್ಮದಲ್ಲಿ ನಿಷ್ಪಕ್ಷ ತರ್ಕದ ಮೂಲಕ ಮಾಡುವ ಆ ಸತ್ಯಚಿಂತನೆಗೆ ಅವಕಾಶವಿಲ್ಲ. ಇತ್ತ, ಮಹಾಜೀವನವು ಯಾವ ತಪ್ಪು ಎಲ್ಲಿದ್ದರೂ ಹೇಳುವುದು, ಮಾತ್ರವಲ್ಲ, ಯಾವ ಸರಿ ಎಲ್ಲಿದ್ದರೂ ಅದನ್ನೂ ಎತ್ತಿ ಹೇಳುವುದು! ಇದು ಯಾಕೆಂದರೆ, ಅಧ್ಯಾತ್ಮ ಎಂಬುವುದು ಒಂದು ನಂಬಿಕೆ, ಆದರೆ ಮಹಾಜೀವನ ಎಂಬುವುದು ಒಂದು ಚಿಂತನೆಯಾಗುವುದು.

ಆಧ್ಯಾತ್ಮವು ನಂಬಿಕೆಗಳ ಬೇಲಿಯೊಳಗಿದ್ದು ಸಾಧನೆಯನ್ನು ಮಾಡಲು ಹೇಳುವುದು, ಆದರೆ ಮಹಾಜೀವನವು ಯಾವುದೇ ಬೇಲಿಯೊಳಗಿನ ಸಾಧನೆಯನ್ನು ಹೇಳುವುದಿಲ್ಲ. ಮಾತ್ರವಲ್ಲ, ಆದುದರಿಂದಲೇ, ಮಹಾಜೀವನವು ಸಾರ್ವತ್ರಿಕ ಎಂದು ಕರೆಯಲ್ಪಡುವುದು.

ನೋಡಿ, ‘ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ’ ಎಂಬುವುದು ಎಷ್ಟು ಮೂರ್ಖತನವಾಗಿದೆ ಎಂದರೆ ಅದು ದೇವರು, ಧರ್ಮಗಳ ಹೆಸರುಗಳನ್ನು ಹೇಳಿ ಜನರನ್ನು ಕೊಂದರೂ, ಅದನ್ನು ಒಪ್ಪಬೇಕಾದ ಪರಿಸ್ಥಿತಿಗೆ ಅದು ಮಾನವರನ್ನು ತಳ್ಳುವುದು. ಇನ್ನು, ಅದರಿಂದಲೇ ಹುಟ್ಟಿಬಂದಿರುವ ‘ನಾವು ಮಾತ್ರ ಶ್ರೇಷ್ಠ ಇತರರು ನಿಕೃಷ್ಟರು’ ಎಂಬ ನಂಬಿಕೆಯ ನಿಲುವು ಭಯಾನಕವಾಗಿ ಸಮಾಜವನ್ನು ಶೋಷಿಸಿದೆ. ಒಟ್ಟಲ್ಲಿ, ಸತ್ಯದ, ನ್ಯಾಯದ ಧರ್ಮ ಎಂದು ಹೇಳಿಕೊಳ್ಳಬೇಕಾದರೆ, ಮೊಟ್ಟಮೊದಲು, ಈ ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ ಎಂದು ವಾದ ಮಾಡುವುದನ್ನು ಪೂರ್ಣವಾಗಿಯೂ ನಿಲ್ಲಿಸಬೇಕಾಗುತ್ತದೆ.

ಆಧ್ಯಾತ್ಮವು ತಮ್ಮೊಳಗೆ ಹೋರಾಡಲು ಪ್ರೇರೇಪಿಸುವುದು, ಆದರೆ ಮಹಾಜೀವನವು ತಮ್ಮೊಳಗಿನ ಹೋರಾಟವನ್ನು ನಿಲ್ಲಿಸಿ ಒಂದಾಗಲು ಪ್ರೇರೇಪಿಸುವುದು. ಒಂದು ಸತ್ಯದ ಬಗ್ಗೆ ವಾದ ಮಾಡುವ ಈ ಹಲವು ಆಧ್ಯಾತ್ಮಗಳು, ಆಧ್ಯಾತ್ಮವು ಸತ್ಯ ಎಂದು ಸಾಧಿಸಲು ಸಾಧ್ಯವಾಗದೆ ಸೋಲುವವು. ಆದರೆ ಮಹಾಜೀವನವು ಎಲ್ಲರ ವಾಸ್ತವ ಜೀವನವನ್ನು ಉತ್ತಮಗೊಳಿಸುವ ಪ್ರಯತ್ನವನ್ನು ಮಾಡುವ ಕಾರಣ ಅದರ

ಯಾವ ಕೆಲಸವೂ ನೀರಲ್ಲಿ ಹೋಮ ಮಾಡಿದಂತೆ ಆಗುವುದೇ ಇಲ್ಲ, ಅಂದರೆ ಪರಿಪೂರ್ಣವಾಗಿ, ಫಲಪ್ರಧವಾಗಿ ಮಾನವನಿಗೆ ಸಹಾಯಕವಾಗುವವು ಎಂದು ಅರ್ಥ.

ಈ ಭೂಮಿಯ ಜೀವನದ ಬಗ್ಗೆ ಮಾತ್ರ ಮಹಾಜೀವನವು ಹೇಳುವುದು. ನೋಡಿ, ಜಗತ್ತಿನಲ್ಲಿ, ಧರ್ಮಗಳು ನಿಜವಾಗಿಯೂ ಎಷ್ಟು ನಂಬಿಕೆ, ಆಚಾರಗಳ ಕಳಕಳಿಯನ್ನು ಮಾನವರ ಆ ಚಿಕ್ಕ ಜೀವನದಲ್ಲಿ ತುಂಬಿಸಿಬಿಟ್ಟಿವೆ ಎಂದು ಆಲೋಚಿಸಿರಿ. ಎಷ್ಟು ಧರ್ಮ ದ್ವೇಷ, ಜಾತಿ ದ್ವೇಷ, ಶೋಷಣೆ, ಹಿಂಸೆ, ರಕ್ತಪಾತ, ಇತ್ಯಾದಿಗಳನ್ನು ಈ ಮಾನವ ಜೀವನದಲ್ಲಿ ತುಂಬಿಸಿವೆ ಎಂಬುವುದನ್ನು ಕೂಡಾ ಚಿಂತಿಸಿರಿ. ಈಗ, ಅವುಗಳು ಮಾನವರ ಈ ಭೂಮಿಯ ಜೀವನವನ್ನು ಉತ್ತಮ, ಅನಂದಗೊಳಿಸುವಲ್ಲಿ ಎಷ್ಟು ಪ್ರಯತ್ನವನ್ನು ಮಾಡುವವು ಎಂದು ನಿಮಗೇ ತಿಳಿಯುವುದು. ಇನ್ನು, ಶೋಷಣೆ, ಹಿಂಸೆಗಳಿಗೆ ಒತ್ತುಕೊಡುವಾಗ ಶುದ್ಧಪ್ರೀತಿಯನ್ನು ಹೆಚ್ಚಿಸುವಲ್ಲಿ ಅವುಗಳಿಗೆ ಹೇಗೆ ಕೆಲಸಮಾಡಲು ಸಾಧ್ಯ? ಉತ್ತಮ ಸ್ವಭಾವವನ್ನು ಜನರಲ್ಲಿ ಹೆಚ್ಚಿಸುವುದೇ ಧರ್ಮ ಎಂದಾಗುವಾಗ, ಇವು ಮಾಡುತ್ತಿರುವುದಾದರೂ ಧರ್ಮವಿರುದ್ಧವಾಗುವುದಿಲ್ಲವೇ? ಅದಕ್ಕೆ ಮನ, ಮನೆ, ಸಮಾಜ, ಲೋಕ, ಇವನ್ನು ಮಾತ್ರ ಗಮನಿಸಿ ಅವುಗಳನ್ನು ಉದ್ಧರಿಸುವ ಪ್ರಯತ್ನದಲ್ಲಿರುವ ಈ ಮಹಾಜೀವನವನ್ನು ಸತ್ಯಯುಗದ ಸೃಷ್ಟಿಕರ್ತ ಎನ್ನುವುದು!

ಸತ್ತ ನಂತರದ ಆ ಸಂಶಯದ ಜೀವನಕ್ಕೆ ಮತ್ತು ಮೋಕ್ಷಕ್ಕೆ ಪೂರ್ತಿ ಜೀವನವನ್ನೇ ಕೊಡುವವರು ಇರುವಾಗ, ಇನ್ನು, ಜೀವನ ಪೂರ್ತಿ ನೆಮ್ಮದಿ, ಆನಂದವನ್ನು ಕೊಡುವ ಈ ಪವಿತ್ರ ಮಹಾಜೀವನಕ್ಕೆ ನಾವು ಎಷ್ಟು ಸಮಯ ಕೊಡಬೇಕು ಎಂದು ಎಲ್ಲರೂ ಒಮ್ಮೆ ಎರಡು ನಿಮಿಷ ಕುಳಿತು ಆಲೋಚಿಸಿರಿ.

ಎಲ್ಲವೂ ಸರಿಯಾಗಿದೆ. ಇಲ್ಲಿ ಒಂದು ಅಂಶವನ್ನು ಸೇರಿಸುವುದಾದರೆ, ನಾವು ಲೌಕಿಕದ ಮೇಲು ಮಟ್ಟಗಳನ್ನು ಗುರಿಯಾಗಿಸಬಹುದು ಅಥವಾ ಹೋಲಿಸ್ಸಿಕೊಳ್ಳಬಹುದು, ಆದರೆ ಲೌಕಿಕದ ಮೇಲು ಮಟ್ಟ ಎಂಬ ಗಳಿಕೆಯನ್ನು ಪಡೆದ ವ್ಯಕ್ತಿಯನ್ನು ಹೋಲಿಸಬಾರದು. ಉದಾಹರಣೆಗೆ ಒಬ್ಬನು ದೊಡ್ಡ ಉದ್ಯೋಗವನ್ನು ಪಡೆದಿದ್ದರೆ, ನಮಗೂ ಆ ಸ್ಥಾನಕ್ಕೆ ಅರ್ಹತೆ ಇದ್ದಲ್ಲಿ, ನಾವು ಆತನ ಆ ಉದ್ಯೋಗದೊಂದಿಗೆ ಹೋಲಿಸಿಕೊಳ್ಳಬಹುದು, ಆದರೆ ಆ ಉದ್ಯೋಗವನ್ನು ಹೊಂದಿದ ವ್ಯಕ್ತಿಯನ್ನು ಹೋಲಿಸಬಾರದು. ಮೊದಲನೆಯದ್ದು, ಬರೇ ಸ್ಫೂರ್ತಿಯಾಗುವುದು, ಆದರೆ ಎರಡನೇ ರೀತಿ ಅಸೂಯೆ, ದ್ವೇಷ, ಕೋಪ, ಇವೆಲ್ಲವನ್ನು ವ್ಯಕ್ತಿಯ ಸ್ವಭಾವದಲ್ಲಿ ಹೆಚ್ಚಾಗುವಲ್ಲಿ ಕೆಲಸ ಮಾಡುವುದು.

ನೋಡಿ, ಹೋಲಿಸಿಕೊಳ್ಳುವಿಕೆಯಲ್ಲೂ ನಾವು ಎಚ್ಚರವಾಗಿರಬೇಕಾಗಿದೆ ಎಂದರೆ ಜನಸಾಮಾನ್ಯರ ಜೀವನ ಹೇಗಿರಬಹುದು ಎಂದು ಒಮ್ಮೆ ಆಲೋಚಿಸಿರಿ.

ಲೌಕಿಕದಲ್ಲಿ, ತನಗೆ ಎಟಕುವುದನ್ನು ಮಾತ್ರ ಗುರಿಯಾಗಿಸಬೇಕು ಆಥವಾ ಹೋಲಿಸಿಕೊಳ್ಳಬೇಕು, ಆದರೆ ಅದನ್ನು ಹೊಂದಿದ ವ್ಯಕ್ತಿಯನ್ನು ಹೋಲಿಸಬಾರದು. ಇದು ಯಾಕೆಂದು ಈಗಾಗಲೇ ತಿಳಿದಾಗಿದೆ. ಇನ್ನು, ಮಹತ್ತಾದ ವ್ಯಕ್ತಿತ್ವವನ್ನು ಪಡೆದ ನಿಜವಾದ ಮಹಾತ್ಮರಾದರೆ ಮಾತ್ರ ಅಲ್ಲಿ ವ್ಯಕ್ತಿಯೊಂದಿಗೆ ಆತನ ಮಹತ್ವವನ್ನು ಹೋಲಿಸಿಕೊಳ್ಳಬಹುದು. ಯಾಕೆಂದರೆ, ಬೇಲಿಗಳಿಲ್ಲದ ಮಹಾತ್ಮರಿದ್ದಲ್ಲಿ ಅಂಥವರನ್ನು ಹೋಲಿಸಿಕೊಳ್ಳುವುದರಿಂದ ಯಾವ ತೊಂದರೆಯೂ ಉಂಟಾಗುವುದಿಲ್ಲ, ಬದಲು ದೊಡ್ಡ ಆದರ್ಶವಾಗಿ ಆ ಹೋಲಿಸಿಕೊಳ್ಳುವಿಕೆಯು ಆತನಿಗೆ ಸಹಾಯ ಮಾಡಬಹುದು.

ಅಚ್ಚರಿ ಎಂದರೆ, ಜನಸಾಮಾನ್ಯರ ಜೀವನವು ನಿಜವಾಗಿಯೂ ಇರುವುದು ಈ ಹೋಲಿಕೆಗಳಲ್ಲಿ! ಹಣ, ಬಂಗಾರ ತುಂಬಿ ತುಳುಕುವಾಗ ಬೀಗದವರು ಅತ್ಯಂತ ವಿರಳ. ಅವರವರ ಘನತೆಯ ಜನರೊಂದಿಗೆ ಬೆರೆಯಲು ಮಾತ್ರ ಜನರು ಇಷ್ಟ ಪಡುತ್ತಾರೆ. ಅವರವರ ಜಾತಿಗಿಂತ ಕೀಳು ಜಾತೀಯವರನ್ನು ಅಗಾಗ್ಗ ಕೀಳಾಗಿ ಕಾಣುವರು. ಇವೆಲ್ಲಾ ಹೋಲಿಕೆಗಳೇ ಅಲ್ಲವೇ? ಮೇಲಿನವರನ್ನು ನೋಡಿ ಕೊರಗುವುದು, ಕೆಳಗಿನವರನ್ನು ಕೊರಗಿಸುವುದು ಜನರ ನಿತ್ಯ ಕರ್ಮದಂತೆ ಆಗಿಹೋಗಿದೆ. ಒಟ್ಟಲ್ಲಿ, ಈ ರೀತಿ ಹೋಲಿಕೆ ಮಾಡುವವರ ಜೀವನದಲ್ಲಿ ಕೊರಗುವುದೇ ಅತ್ಯಧಿಕ ಆಗುವುದು. ಇದಕ್ಕೆ ಮುಖ್ಯ ಕಾರಣ, ಮಾನವನಿಗೆ ಎಲ್ಲವೂ ಒಟ್ಟಿಗೆ ಸಿಗುವುದಿಲ್ಲ ಎಂಬುವುದಾಗಿದೆ. ಉದಾಹರಣೆಗೆ, ಚಿತ್ರಗಾರನು ಸಂಗೀತಗಾರನಾಗಿರುವುದಿಲ್ಲ. ಅಂದರೆ, ಜಗತ್ತಲ್ಲಿ ನೂರಾರು ವಿಶೇಷತೆಗಳು ಇರುವಾಗ ಒಬ್ಬನಿಗೆ ಅವಲ್ಲಿ ಕೆಲವು ಮಾತ್ರ ಇರುವವು, ಆಗ ಇಲ್ಲದ 90% ಆ ಇನ್ನುಳಿದ ವಿಶೇಷತೆಗಳಿಗೆ ಬೇಕಾಗಿ ಆತನು ಕೊರಗಬೇಕಾಗುತ್ತದೆ! ಏನು ಹುಚ್ಚುತನ! ಆದರೆ ಇತ್ತ, ಹೋಲಿಕೆ ಮಾಡದ ಮನೆ ಮನೆಯ ಮಹಾತ್ಮರು ಆರಾಮವಾಗಿ ಈ ತೊಂದರೆಗಳಿಲ್ಲದೆ ಬದುಕುವರು.

ಕೆಳಗಿನ ಹಂತದವರನ್ನು ಹೋಲಿಸಿ ಅವರನ್ನು ನಿಕೃಷ್ಠರೆಂದು ತಿಳಿಯುವುದಾದರೆ ಆತನು ಎಲ್ಲವನ್ನೂ ಕಳಕೊಳ್ಳುವನು. ಆದುದರಿಂದ ಹೋಲಿಸುವಾಗ ಮನೆ ಮನೆಯ ಮಹಾತ್ಮರ ಜೀವನದಲ್ಲಿ ಮುಂದುವರಿಯುವ ಉದ್ದೇಶದಲ್ಲಿ ಮಾತ್ರ ಹೋಲಿಸಿಕೊಳ್ಳಬೇಕು.

ಇನ್ನು, ಮನೆ ಮನೆಯ ಮಹಾತ್ಮರಂತೆ ಆಗಬೇಕಾದರೆ, ಮೊದಲು ಅವರ ಪ್ರತ್ಯೇಕತೆಯಾದ ಆ ‘ಏಕ ವ್ಯಕ್ತಿತ್ವ’ವನ್ನು ಎಲ್ಲರೂ ಪಡೆಯಲು ಪ್ರಯತ್ನಿಸಬೇಕು. ನೋಡಿ, ಪ್ರೀತಿ ಮತ್ತು ದ್ವೇಷವು ಒಂದೇ ವ್ಯಕ್ತಿಯ ಮೇಲೆ ಯಾರಿಗಾದರೂ ತೋರುವುದಾದರೆ ಅಂಥವರು ಹಲವು ವ್ಯಕ್ತಿತ್ವವನ್ನು ಪಡೆದಿರುವರು ಎಂದು ತಿಳಿಯಬೇಕು. ಜಗತ್ತಲ್ಲಿ 90% ಜನರು ಹೀಗಿರುವವರು ಮತ್ತು ಸಾವಿರಾರು ಅನಗತ್ಯ ಮಾನಸಿಕ ನೋವುಗಳನ್ನು ಅನುಭವಿಸುವವರು ಆಗಿರುವರು. ಪ್ರೀತಿ ಇದ್ದಲ್ಲಿ ಕೋಪಗೊಳ್ಳುವುದಿಲ್ಲ, ಬದಲು, ಸಮಾಧಾನದಿಂದ ಎಲ್ಲವನ್ನು ಪರಿಹರಿಸಿಕೊಳ್ಳುವರು. ಆದುದರಿಂದಲೇ, ಪ್ರೀತಿ ಇರುವ ಜನ ಕೋಪಗೊಳ್ಳುವುದಾದರೆ ಆ ಕೋಪಗೊಳ್ಳುವ ವ್ಯಕ್ತಿತ್ವವು ಬೇರೆ ವ್ಯಕ್ತಿತ್ವವೇ ಆಗುವುದು ಎನ್ನುವುದು. ಒಂದು ಉದಾಹರಣೆಗೆ ಹೇಳುವುದಾದರೆ, 1000 ರೂಪಾಯಿ ಎಂಬ ಪ್ರೀತಿಯಿಂದ 100 ರೂಪಾಯಿಯಷ್ಟು ಇರುವ ಅಸಮಾಧಾನದ ಒಂದು ಘಟನೆ ಒಮ್ಮೆ ಆ ವ್ಯಕ್ತಿತ್ವವನ್ನು ಅಲುಗಾಡಿಸಿದರು ಕೂಡಾ ಮತ್ತೂ 900 ರೂಪಾಯಿಯಷ್ಟು ಪ್ರೀತಿಯೇ ಅಲ್ಲಿ ಇರಬೇಕಲ್ಲಾ? ಕೋಪ ಸೃಷ್ಟಿಯಾಗಲು ಸಾಧ್ಯವಾಗುವುದೇ?

ತಾತ್ಸಾರದ ಭಾವನೆಯು ಒಬ್ಬ ಮನುಷ್ಯನನ್ನು ಸರ್ವನಾಶಕ್ಕೆ ಕೊಂಡೊಯ್ಯುವುದು! ಯಾಕೆಂದರೆ, ತಾತ್ಸಾರ ಮಾಡುವವನು ಇನ್ನೊಬ್ಬರಿಂದ ತಾತ್ಸಾರಕ್ಕೆ ಗುರಿಯಾಗುವಾಗ ಬಹಳವಾಗಿ ಮಾನಸಿಕ ನೋವನ್ನು ಅನುಭವಿಸುವನು. ಅಚ್ಚರಿ ಎಂದರೆ, ಈ ಭೂಮಿಯಲ್ಲಿ ಆದಿಯಿಂದಲೇ, ತಾತ್ಸಾರ, ದರ್ಪ, ಇತ್ಯಾದಿಗಳು ಜನಸಾಮಾನ್ಯರಲ್ಲಿ ಮನೆಮಾಡಿರುವವು ಎಂದಾಗಿದೆ. ಅವರ ಜೀವನದಲ್ಲಿ ಅವರು 50% ತಾತ್ಸಾರ ಮಾಡುವರು ಮತ್ತು ಇನ್ನುಳಿದ 50% ವನ್ನು ಇತರರು ಅವರನ್ನು ತಾತ್ಸಾರ ಮಾಡುವಾಗ ದುಃಖಪಡುವುದಕ್ಕಾಗಿ ಇರಿಸಿಕೊಳ್ಳುವರು. ಈ ರೀತಿ ಮಾಡಿ ತಮ್ಮ ಜೀವನವನ್ನು ಮುಗಿಸುವರು. ದಿವ್ಯಜ್ಞಾನ ಸನ್ನಿಧಿಯು ಈ 50% ತಾತ್ಸಾರ ಮಾಡುವುದನ್ನು ಮತ್ತು 50% ತಾತ್ಸಾರ ಆಗಲ್ಪಡುವುದನ್ನು ನಿಲ್ಲಿಸಿಬಿಡುವುದು. ಆಗ ಆ ವ್ಯಕ್ತಿಗೆ ಹೃದಯ ತುಂಬಿ ಆನಂದಿಸುವ ಅಷ್ಟು ಅವಕಾಶವು ಆತನ ಜೀವನದಲ್ಲಿ ಹೆಚ್ಚು ದೊರಕುವುದು!

ಸಂತೋಷ ಎಂಬುವುದು ನಿಜವಾಗಿಯೂ ಒಂದು ವಿಚಿತ್ರವಾದ ಒಂದಾಗಿದೆ. ಯಾಕೆಂದರೆ, ಅದು ಅವರವರ ಅಭಿರುಚಿಯನ್ನು ಹೊಂದಿಕೊಂಡಿದೆ. ತನಗೆ ಇಷ್ಟವಾದುದರಲ್ಲಿ ಮಾತ್ರ ಒಬ್ಬಾತನು ಸಂತೋಷವನ್ನು ಅನುಭವಿಸುವನು. ಇಷ್ಟ ಇಲ್ಲದರಲ್ಲಿ ಅದು ಸಾಧ್ಯವಾಗುವುದಿಲ್ಲ. ಇದುವೇ ಎಲ್ಲಾ ತೊಂದರೆಗಳಿಗೂ ಮೂಲ ಎಂದರೆ ನಿಮಗೆ ಅಚ್ಚರಿಯಾಗಬಹುದು! ಉದಾಹರಣೆಗೆ ಬೆಳಿಗ್ಗಿನ ತಿಂಡಿಯನ್ನೇ ತೆಗೆಯೋಣ, ಅಲ್ಲಿ, ಒಬ್ಬನಿಗೆ ಇಡ್ಲಿಯು ಸಂತೋಷ ಕೊಡುವುದಾದರೆ ಇನ್ನೊಬ್ಬನಿಗೆ ದೋಸೆ, ಮತ್ತೆ ಕೆಲವರಿಗೆ ಕಡುಬು ಇತ್ಯಾದಿಗಳು! ಅಯ್ಯೋ, ಈ ಅನಿಯಂತ್ರಿತ ಅಥವಾ ಅವ್ಯವಸ್ಥಿತ ಸಂತೋಷಗಳೇ ಮನೆ, ಸಮಾಜಗಳಲ್ಲಿ ದೊಡ್ಡ ದೊಡ್ಡ ತೊಂದರೆಗಳನ್ನು ಸೃಷ್ಟಿಸುತ್ತಿರುವುದು ಎಂದು ತಿಳಿಯಬೇಕು. ಮಹಾಜೀವನವು ಈ ಅವ್ಯವಸ್ಥಿತ ಸಂತೋಷವನ್ನು ವ್ಯವಸ್ಥಿತಗೊಳಿಸುವಲ್ಲಿ ಸೂಕ್ತ ಪರಿಹಾರಗಳನ್ನು ನೀಡುವುದು. ಅದರ ಫಲವಾಗಿ, ಜನರು ಸಂತೋಷವಾಗಿ ಜೀವಿಸುವ ವಿಧಾನವನ್ನು ಮಾತ್ರ ಅನುಸರಿಸುವರು. ಇದು ಮನ, ಮನೆ, ಸಮಾಜಗಳಲ್ಲಿನ ತೊಂದರೆಗಳನ್ನು ಗಣನೀಯವಾಗಿ ಕಡಿಮೆಮಾಡುವುದು.

ಜೀವನದ ಮಿಥ್ಯತ್ವದ ಜ್ಞಾನವು ಮಹಾತ್ಮರಿಗೆ ಒಂದು ಅನಿವಾರ್ಯ ಜ್ಞಾನವಾಗಿದೆ. ಅದು ಇದ್ದಲ್ಲಿ ಮಾತ್ರ ಆ ವ್ಯಕ್ತಿಗೆ ತನ್ನ ಆಸೆ, ಆಸಕ್ತಿಗಳನ್ನು ಬೇಕಾದಂತೆ ನಿಯಂತ್ರಿಸಲು ಸಾಧ್ಯ.

 *************************

ಕೊನೆಗೂ, ನಾವು ಒಂದನ್ನಂತೂ ಕಲಿತಾಯಿತು. ಸಂತೋಷವನ್ನು ನಾವು ನಮ್ಮೊಳಗೆ ಸೃಷ್ಟಿಸಬೇಕು ಹೊರತು ಅದು ಹೊರಗೆ ಇರುವ ವಸ್ತುವಲ್ಲ ಎಂಬುವುದೇ ಆ ಪರಮ ಸತ್ಯ!! ಇದಕ್ಕೆ ಉದಾಹರಣೆಗಳನ್ನು ನಾವು ಈ ಹಿಂದೆಯೇ ನೋಡಿದ್ದೇವೆ. ಅವಲ್ಲಿ ಮುಖ್ಯವಾದವುಗಳು, ಶ್ರೀಮಂತರು, ವಿಜ್ಞಾನಿಗಳಷ್ಟು ವಿದ್ಯಾವಂತರು, ಹೆಸರು, ಕೀರ್ತಿ ಇರುವವರು ಮುಂತಾದವರು ಜೀವನದಲ್ಲಿ ಸಂತೋಷವನ್ನು ಕಳಕೊಂಡು ಆತ್ಮಹತ್ಯೆಯನ್ನು ಮಾಡುವುದಾಗಿದೆ. ನೋಡಿ, ಇಲ್ಲೆಲ್ಲಾ, ಮಾನವರಿಗೆ ಹೊರಗಿನ ವಸ್ತುಗಳು ಸಂತೋಷ ತಂದುಕೊಡಲಿಲ್ಲ. ಇನ್ನು, ಅವರಿಗೆ ಇತರ ಚಿಕ್ಕ ಪುಟ್ಟ ಸಮಸ್ಯೆಗಳು ದೊಡ್ಡದಾಗಿ ತೋರಿ ಆತ್ಮಹತ್ಯೆಯನ್ನು ಮಾಡಿರುವರು. ಆದುದರಿಂದ, ತನ್ನ ಮನಸ್ಸಿಗೆ ತಾನೇ ಮಹಾಜೀವನ ರೀತಿಯಲ್ಲಿ ಪಾಠ ಹೇಳಲು ಸಾಧ್ಯವಾದಲ್ಲಿ ಮಾತ್ರ ಒಬ್ಬಾತನಿಗೆ, ನಿಜವಾದ ದುರಂತಗಳ ಸಮಯ ಹೊರತುಪಡಿಸಿ, ಎಲ್ಲಾ ಸಂದರ್ಭಗಳಲ್ಲೂ, ಸಮಸ್ಯೆ ಮುಕ್ತನಾಗಿ ಸಂತೋಷದಲ್ಲೇ ಇರಲು ಸಾಧ್ಯವಾಗುವುದು. ಎಲ್ಲದಕ್ಕೂ ಸತ್ಯಚಿಂತನೆ, ಆತ್ಮಪರಿಶೋಧನೆ, ಜೀವನದ ಮಿಥ್ಯತ್ವಜ್ಞಾನ, ಇವು ಮೂರು ಅಗತ್ಯವಾಗುವ ಕಾರಣ ಅವುಗಳಿಗೆ ಸಾಧ್ಯವಾದಷ್ಟು ಸಮಯಕೊಟ್ಟು, ನಿಧಾನವಾಗಿಯಾದರು, ಅವನ್ನು ಹೆಚ್ಚು ಹೆಚ್ಚು ಗಳಿಸಲು ಪ್ರಯತ್ನಪಡಬೇಕು.

 *****************************

ಆ ನಿಜವಾದ ದುರಂತಗಳ ದುಃಖಗಳನ್ನು ಹೊರತುಪಡಿಸಿದರೆ, ಇತರ ಎಲ್ಲಾ ದುಃಖಗಳು ಕೂಡಾ ನಮ್ಮ ಮನಸ್ಸು, ಮಾತು, ದೇಹ, ಇವುಗಳ ಸ್ವಾರ್ಥ ಹಾಗೂ ತಪ್ಪಾದ ವರ್ತನೆಯಿಂದಲೇ ಸೃಷ್ಟಿಯಾಗುವುದು. ಇಷ್ಟನ್ನು ನಾವು ಸ್ಪಷ್ಟವಾಗಿ ಅರಿತರೆ, ಇನ್ನು, ಅವನ್ನು ಸರಿಪಡಿಸಿದರೆ ಅವು ದುಃಖವನ್ನು ಇಲ್ಲದಂತೆ ಮಾಡುವುದು ಮಾತ್ರವಲ್ಲ, ಜೀವನದಲ್ಲಿ ತೃಪ್ತಿಯನ್ನು ಕೂಡಾ ತಂದುಕೊಡಬಹುದು! ಈಗ ನೀವೇ ಹೇಳಿ, ಮಹಾಜೀವನ ಪಾಠಗಳು ಅಥವಾ ಆ ನಿಟ್ಟಿನ ಜ್ಞಾನವು ಎಷ್ಟು ಲಾಭದಾಯಕ ಎಂದು!

 *****************

ಸರಿಯಾದ ರೀತಿಯಲ್ಲಿ ಆಸೆಗಳ ಮೇಲಿನ ನಿಯಂತ್ರಣ ಇದ್ದಲ್ಲಿ, ಪ್ರತ್ಯೇಕವಾಗಿ ಹೇಳುವೆನು, ಜೀವನದ ಮಿಥ್ಯತ್ವಜ್ಞಾನ ಅಥವಾ ‘ವೈರಾಗ್ಯಜ್ಞಾನ’ ದ ಹಿನ್ನೆಲೆಯಲ್ಲಿ ನಿಯಂತ್ರಣ ಇದ್ದಲ್ಲಿ, ಆಸೆಯು ಎಂದಿಗೂ ದುಃಖಕ್ಕೆ ಕಾರಣವಾಗುವುದಿಲ್ಲ! ಇದಕ್ಕಿರುವ ಆ ಹಲವು ರೀತಿಗಳಲ್ಲಿ ಒಂದು ರೀತಿ ಎಂದರೆ, ನೈತಿಕತೆಯ ಚೌಕಟ್ಟಿನೊಳಗೆ ಮತ್ತು ನಮ್ಮ ಸಾಂಪತ್ತಿಕ ಮಿತಿಯೊಳಗೆ ಹಾಗೂ ಇತರರಿಗೆ ತೊಂದರೆಯಾಗದಿರುವಲ್ಲಿ, ನಮ್ಮ ಆಸೆಗಳನ್ನು ಅನುಭವಿಸುವುದು ಆಗಿದೆ. ಇದನ್ನು ವ್ರತದಂತೆ ಕಟ್ಟುನಿಟ್ಟಾಗಿ ಪಾಲಿಸುತ್ತಾ ಹೋದಲ್ಲಿ, ಒಬ್ಬ ವ್ಯಕ್ತಿಯ ಆಸೆಯು ಅದೇ ವ್ಯಕ್ತಿಯನ್ನು ಸೇರಿ, ಯಾರೊಬ್ಬನ ದುಃಖಕ್ಕೂ ಕಾರಣವಾಗುವುದಿಲ್ಲ!!

 ***************************

ಈ ಜಗತ್ತಲ್ಲಿ, ಸಂತೋಷದ ಅನುಭವ ಒಂದೇ ರೀತಿಯದ್ದು ಆದರೂ, ಜನಸಾಮಾನ್ಯರು ಮತ್ತು ಮಹಾತ್ಮರು, ಎರಡು ವಿಭಿನ್ನ ರೀತಿಗಳಲ್ಲಿ ಸಂತೋಷವನ್ನು ಪಡೆಯುವರು ಎಂಬುವುದು ಸತ್ಯ. ನೋಡಿ, ‘ಬೇಕು’ ಎನ್ನುವುದು ಸಿಗುವಾಗ ಸಂತೋಷ, ಇನ್ನು, ‘ತುಂಬಾ ಬೇಕು’ ಎನ್ನುವುದು ಸಿಗುವಾಗ ತುಂಬಾ ಸಂತೋಷ! ಜನಸಾಮಾನ್ಯರು ಸಾಮಾನ್ಯವಾಗಿ ಅಗತ್ಯ, ಅನಿವಾರ್ಯತೆ, ಇತ್ಯಾದಿ ಭಾವನೆರಹಿತ ಚಿಂತನಾ ರೀತಿಯನ್ನು ಅನುಸರಿಸುವುದಿಲ್ಲ, ಬದಲು, ಅವರು, “ಬೇಕು”, “ತುಂಬಾ ಬೇಕು” ಎಂಬೀ ಭಾವನೆಸಹಿತವಾಗಿರುವ ರೀತಿಯನ್ನೇ ಅನುಸರಿಸುವರು! ಅವನ್ನು ಪಡೆಯುವಲ್ಲಿ ಸೋತಾಗ, ಅದು ಅವರ ದುಃಖ, ಕೋಪ, ಹಿಂಸೆಗಳೆಂಬ ಭಾವನೆಗಳಿಗೆ ಕಾರಣವಾಗುವುದು ಮತ್ತು ಈ ಹುಟ್ಟಿಕೊಂಡ ಭಾವನೆಗಳು ಆ ವ್ಯಕ್ತಿಯನ್ನು ಮತ್ತು ಆ ವ್ಯಕ್ತಿಯ ಸಮೀಪವಿರುವವರನ್ನು ಬಾಧಿಸುವುದು. ಈ ಎಲ್ಲಾ ತೊಂದರೆಗಳನ್ನು ನೀಗಲು ಸಾಧ್ಯವಾಗುವ ಆ ಏಕ ಮಾರ್ಗ ಎಂದರೆ, ಮಹಾಜೀವನ ಮಾರ್ಗವಾಗಿದೆ! ನೋಡಿ, ದುಷ್ಟ ಶಕ್ತಿಗಳು ಕೋಳಿ ಅಂಕದ ತರ ಮಾನವರನ್ನು ಕಾಳಗಕ್ಕೆ ದೂಡುತ್ತಿರಲು, ಮಹಾಜೀವನ ದಾರಿಯ ರೀತಿಗಳ ಆ ಅತ್ಯಂತ ದೃಢ ಸಂಕಲ್ಪಗಳಿಗೆ ಮಾತ್ರ ಅವನ್ನು ಜಯಿಸಲು ಸಾಧ್ಯವಾಗುವುದು. ಅದು ಕೂಡಾ ವ್ಯಯಕ್ತಿಕ ಹಾಗೂ ಎಲ್ಲರೂ ಒಟ್ಟಾಗಿ ಎಂದು ಎರಡು ರೀತಿಯಲ್ಲಿ ದೃಢ ಪ್ರತಿಜ್ಞೆ ಮಾಡುವ ತರ ಇರಬೇಕು. ಇನ್ನು , ಮಹಾತ್ಮರ ಹಂತವು ಬರಬೇಕಿದ್ದರೆ, ಹಿಂದೆ ಹೇಳಿರುವ ಆ ಮೂರು ರೀತಿಯ ಜ್ಞಾನಗಳು ಮನನದ ಅಥವಾ ಚಿಂತನೆಯ ಮೂಲಕ ಹೃದಯದ ಆಳದಲ್ಲಿ ಮನೆಮಾಡಿರಲೇಬೇಕಾಗುವುದು. ಆದುದರಿಂದ, ಮೊದಮೊದಲ ಹಂತಗಳಲ್ಲಿ ವ್ಯಯಕ್ತಿಕ ಹಾಗೂ ಇತರರನ್ನು ಸೇರಿಸಿ ಒಟ್ಟಾಗಿ ಮಾಡುವ ದೃಢ ಪ್ರತಿಜ್ಞೆಗಳು ಮನಶ್ಯಾಂತಿ, ಮನೆಶಾಂತಿ, ಹಾಗೂ ಜೀವನಶಾಂತಿಗಳಿಗೆ ತುಂಬಾ ಸಹಾಯಕವಾಗುವುದು. ಮನಸ್ಸಿದ್ದರೆ ಮಾರ್ಗವಿದೆ.

 ***************************

ಜನಸಾಮಾನ್ಯರ ರೀತಿ ಎಂದರೆ ಮನೆ ಮನೆಯ ಮಹಾತ್ಮರ ರೀತಿಯನ್ನು ಅನುಸರಿಸದ ಜನರ ರೀತಿಯಾಗಿದೆ. ಅಲ್ಲಿ, ತಾತ್ಕಾಲಿಕ ಸಂತೋಷಗಳ ತುಣುಕುಗಳು ಮಿಣುಕು ಹುಳದ ಬೆಳಕಿನಂತೆ ಆಗಾಗ್ಗ ಪ್ರತ್ಯಕ್ಷವಾಗುತ್ತಿರುತ್ತವೆ ಅಷ್ಟೆ. ಉಳಿದ ಕಾಲವು ತಲೆಕೆಟ್ಟುಹೋಗುವ ತರದಲ್ಲಿ ಜೀವಿಸಲ್ಪಡುತ್ತದೆ! ಆ ರೀತಿ ಆಗಬಾರದು ಎಂದಾಗಬೇಕಾದರೆ, ನಾವು ಎಲ್ಲರೂ ಅದಕ್ಕಾಗಿ ಪ್ರಯತ್ನ ಪಡಬೇಕು, ಬೇರೆ ದಾರಿ ಇಲ್ಲ. ಒಟ್ಟಲ್ಲಿ, ಎಲ್ಲರೂ ಮುಖ್ಯವಾಗಿ ಮಾಡಬೇಕಾದುದು ಏನೆಂದರೆ, ನಿಜಜೀವನದಲ್ಲಿ, ಮಹಾಜೀವನದ ತಾಳ್ಮೆ, ಜ್ಞಾನ, ಇತರರಿಗೆ ನೋವಾಗದಿರುವಂತೆ ನೋಡಿಕೊಳ್ಳುವಿಕೆ, ಇತ್ಯಾದಿಗಳನ್ನು ತಾನು ಎಷ್ಟು ಅಳವಡಿಸಿಕೊಂಡಿರುವೆ ಎಂಬ ಆ ಆತ್ಮಪರಿಶೋಧನೆಯನ್ನು ಆಗಿದೆ.

ಮನುಷ್ಯನಿಗೆ ಆಸೆ ಅತಿಯಾಗಲು ಎರಡು ಕಾರಣಗಳಿವೆ. ಒಂದು, ಚಿಂತನೆ ಇಲ್ಲದಿರುವಿಕೆ, ಇನ್ನೊಂದು, ಹಿಂದಿನಿಂದ ಇರುವ ಆ ಹುಟ್ಟುಗುಣದ, ಮತ್ತು ಅದಕ್ಕನುಸರಿಸಿ ಮಾಡುವ ಆ ದುಷ್ಟಶಕ್ತಿಗಳ ಪ್ರೇರಣೆಯಾಗಿದೆ. ನಾವು ಖಂಡಿತವಾಗಿಯೂ ಜಾಗ್ರತರಾಗಿದ್ದರೆ ಮಾತ್ರ ಅವುಗಳಿಂದ ನಮಗೆ ಪಾರಾಗಲು ಸಾಧ್ಯವಾಗುವುದು. ಇಲ್ಲವಾದರೆ, ನಿಯಂತ್ರಣೆ ಪೂರ್ತಿ ಕಳಕೊಂಡ ವಾಹನದ ತರ ಜೀವನ ಓಡುವುದು. ನಮಗೆ ಸಂತೋಷ ಬೇಕು ಎನ್ನುವ ಭಾವನೆಯೇ ನಮಗೆ ದುಃಖವ ತರದಿರಲಿ. ಇತ್ತ, ಮಹಾತ್ಮರು ಆರಾಮವಾಗಿ, ನೈತಿಕ ಚೌಕಟ್ಟಿನೊಳಗೆ ಇದ್ದು, ತಮಗೆ ಸಾಧ್ಯವಾಗುವಷ್ಟು ಜೀವನವನ್ನು ಆನಂದಿಸುವರು, ಅತ್ತ, ಲೌಕಿಕದ ಜನಸಾಮಾನ್ಯನು, ಜೀವನದಲ್ಲಿ ತುಂಬಾ ಸಂತೋಷಪಡಬೇಕೆಂದು ಆಶಿಸುತ್ತಾ ಜೀವನ ಪೂರ್ತಿ ದುಃಖಿಸುವನು!!!

 ****************************

ಇನ್ನು ಮಹಾಜೀವನ ಸಾಧನೆಗಳ ಬಗ್ಗೆ ಹೇಳುವಾಗಲೂ, ಅಲ್ಲಿ ಆ ಸಾಧನೆಗಳಲ್ಲಿ ಮೊದಲು ಬರುವುದು ತಾನು ಮಹಾಜೀವನ ನಡೆಸಿ ಅದರ ಲಾಭವನ್ನು ಪಡೆಯಬೇಕೋ ಬೇಡವೋ ಎಂಬ ಆ ತೀರ್ಮಾನವಾಗಿದೆ. ಇದನ್ನು ಯಾಕೆ ಒತ್ತಿ ಹೇಳಬೇಕಾಗುತ್ತದೆ ಎಂದರೆ, ಈ ತೀರ್ಮಾನವು ಮಹಾಜೀವನದ ಬಗ್ಗೆ ಸರಿಯಾಗಿ ಅರಿತು ಆಮೇಲೆ ಮಾಡಬೇಕಾದ ತೀರ್ಮಾನವಾಗಿರುವುದು. ಒಂದು ಪ್ರತ್ಯೇಕ ಸಮಯದ ಆವೇಶದ ತೀರ್ಮಾನವಾದರೆ ಅದರಲ್ಲಿ ಆ ವ್ಯಕ್ತಿಗೆ ಹೆಚ್ಚಿನ ಲಾಭವಾಗುವುದಿಲ್ಲ. ಮಾತ್ರವಲ್ಲ, ಈ ತೀರ್ಮಾನದ ನೆನಪು ಮೊದಲು ಮೊದಲು ಒಬ್ಬ ಸಾಧಕನಿಗೆ ಅತ್ಯಗತ್ಯವಾಗಿರುವುದು. ಇದು ಆ ವ್ಯಕ್ತಿಗೆ ಯಾವಾಗಲೂ ಮಹಾಜೀವನದ ವಿಶೇಷ ಆಸಕ್ತಿಯನ್ನು ಮನದಲ್ಲಿ ಹಿಡಿದಿಡಲು ಸಾಧ್ಯವಾಗುವಂತೆ ಮಾಡುವುದು. ಒಟ್ಟಲ್ಲಿ, ಈ ತೀರ್ಮಾನ ಎಂಬುವುದು ಮಹಾಜೀವನದಲ್ಲಿ ಒಂದು ಅತಿ ಮುಖ್ಯ ಪಾತ್ರವಹಿಸುವುದು ಎಂದು ಹೇಳಬಹುದು.

 ****************************

ತೀರ್ಮಾನಗಳು ಎಂದರೆ ಅಲ್ಲಿ ಮುಖ್ಯವಾಗಿಯೂ ಅಗತ್ಯವಾಗಿ ಬರುವುದು ‘ಸರಿಯಾವುದು ತಪ್ಪುಯಾವುದು’ ಎಂಬ ಅರಿವು ಆಗಿರುವುದು. ದುರದೃಷ್ಟವಶಾತ್, ಹೆಚ್ಚಿನ ಕಡೆಗಳಲ್ಲೂ, ಈ ಸರಿ, ತಪ್ಪುಗಳನ್ನೇ ತಲೆ ಕೆಳಗಾಗಿ ಬಣ್ಣಿಸಿ, ಮಾನವರನ್ನು ಶೋಷಿಸುತ್ತಾ ಬಂದಿರುವುದನ್ನು ನಾವು ಜಗತ್ತಿನ ಮೂಲೆ ಮೂಲೆಗಳಲ್ಲೂ ಕಾಣುವೆವು. ಇದಕ್ಕೆ ಎಲ್ಲಾ ಧರ್ಮ, ಪಂಥಗಳಲ್ಲೂ ನೂರಾರು ಉದಾಹರಣೆಗಳಿವೆ. ಉದಾಹರಣೆಗೆ, ‘ಶೂದ್ರನಿಗೆ ವಿದ್ಯೆ ಇಲ್ಲ, ಆತನು ಎಂದಿಗೂ ಮೇಲು ವರ್ಗದವರ ಸೇವೆ ಮಾಡುತ್ತಿರಬೇಕು’ ಎಂಬುವುದು ಒಂದು ತಲೆಕೆಳಗಾದ ಧರ್ಮ ಆಗಿತ್ತು. ಇಂದೂ ಅಲ್ಲಲ್ಲಿ, ಅದು ಸರಿ, ಅದು ಧರ್ಮವೇ, ಎಂದು ಹೇಳುವ ಹಲವು ಭೀಕರ ಮಾನವ ಜೀವಿಗಳಿರುವವು! ಇಲ್ಲಿ, ತಪ್ಪನ್ನು ಸರಿ ಎಂದು ಎತ್ತಿ ಹಿಡಿಯಲಾಗಿದೆ. ಈ ರೀತಿಯಲ್ಲಿ, ತಪ್ಪನ್ನು ಸರಿ ಎಂದು ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಎತ್ತಿ ಹಿಡಿಯಲ್ಪಟ್ಟಿರುವುದನ್ನು ನಾವು ಕಾಣುವೆವು. ಹೀಗಿರುವಾಗ, ಇದಕ್ಕೆ ವಿರುದ್ಧವಾಗಿ ಸರಿಯನ್ನು ಸರಿ ಮತ್ತು ತಪ್ಪನ್ನು ತಪ್ಪು ಎಂದು ತಿದ್ದಲು ಪ್ರಯತ್ನಿಸಿದವರೇ ಹಿಂದಿನ ಕಾಲದ ಆ ಮರದಡಿಯ ಮಹಾತ್ಮರಾಗಿರುವರು. ಅವರು ಅಂದು, ಆ ನಿಜಧರ್ಮದ ಪರವಾಗಿ ಜೀವಿಸಿದವರು ಆಗಿದ್ದರು. ಇಂದು, ಮಹಾಜೀವನ ಮನೆ ಮನೆಯ ಮಹಾತ್ಮರುಗಳು, ಸರಿಯನ್ನು ಸರಿ ಎಂದು ಮತ್ತು ತಪ್ಪನ್ನು ತಪ್ಪು ಎಂದು ಆ ನಿಜಧರ್ಮದ ಸೇವಕರಾಗಿ ಸರಿದಾರಿಯಲ್ಲಿ ಜೀವಿಸುತ್ತಾ ಆದರ್ಶವಾಗುವಲ್ಲಿ, ಮನೆ, ಸಮಾಜ, ಲೋಕ ಶಾಂತಿಗಳ ಒಂದು ಆಶಾಕಿರಣ ಆಗುತ್ತಿರುವರು. ನೋಡಿ, ಸರಿಯು ಸರಿಯಾದಲ್ಲಿ, ಮತ್ತು ತಪ್ಪು ತಪ್ಪು ಎಂದಾದಲ್ಲಿ ಮಾತ್ರ ಅಲ್ಲಿಯ ತೀರ್ಮಾನಗಳು ಧರ್ಮವನ್ನು ಹಿಡಿದೆತ್ತಲು ಶಕ್ತವಾಗುವವು ಎಂದು ತಿಳಿಯಬೇಕು. ಅದರ ಬದಲು, ಹಗಲನ್ನು ರಾತ್ರಿ ಎಂದು ಮತ್ತು ರಾತ್ರಿಯನ್ನು ಹಗಲು ಎಂದು ಮೊದಲಲ್ಲೇ ಚಿತ್ರಿಸಿ, ಅನಂತರ, ಅದರೊಳಗೆ ಜನರನ್ನು ಸರಿಯಾದ ತೀರ್ಮಾನವನ್ನು ತೆಗೆಯಲು ಹೇಳುವುದಾದರೆ, ಅದು ಅಧರ್ಮವನ್ನು ಮಾತ್ರ ಹಿಡಿದೆತ್ತಬಹುದೆಂಬುವುದನ್ನು ಇನ್ನೂ ಜಗತ್ತು ಚಿಂತಿಸಲು ಹೋಗುವುದಿಲ್ಲ! ಇನ್ನಾದರೂ, ಈ ತಪ್ಪುಗಳಿಗೆಲ್ಲ ಕಾರಣವಾಗುವ ಆ ನಂಬಿಕೆಯ ಹಿನ್ನೆಲೆಯ ರೀತಿಯ ಬದಲು ಧರ್ಮವನ್ನು ಸತ್ಯದ ಹಿನ್ನೆಲೆಯ ರೀತಿಯಲ್ಲಿ ಕಾಣಲು ಎಲ್ಲಾ ಧರ್ಮಗಳು ಒಟ್ಟಾಗಿ ಪ್ರಯತ್ನಿಸುವವು ಎಂದು ಆಶಿಸೋಣ. ಅದರ ಫಲವಾಗಿ, ಈ ಭೂಮಿಗೆ ಒಂದು ಸತ್ಯಯುಗವನ್ನೇ ಈ ಧರ್ಮ, ಪಂಥಗಳು ದಯಪಾಲಿಸುವವು ಎಂದೂ ಆಶಿಸೋಣ.

 *********************

ಒಗ್ಗಟ್ಟು ಎಂದರೆ ಅದು ಒಂದು ಕಟ್ಟು. ಅಲ್ಲಿ ಒಂದು ವಸ್ತುವಿನ ಅಥವಾ ವ್ಯಕ್ತಿಗೆ ಪ್ರತ್ಯೇಕ ಬೆಲೆ ಕೊಡಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಮಾನವರು ತನ್ನತನ ಮತ್ತು ತಮ್ಮತನವನ್ನು ಪ್ರತ್ಯೇಕವಾಗಿಟ್ಟುಕೊಳ್ಳಲು ಹಾಗೂ ತನ್ನ ಅಥವಾ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಒಗ್ಗಟ್ಟಿನ ಆ ಕಟ್ಟಿನಿಂದ ಹೊರಗೆ ನಡೆಯುವುದು. ಒಟ್ಟಲ್ಲಿ, ಸ್ವಾರ್ಥ ಇದ್ದಲ್ಲಿ ಒಗ್ಗಟ್ಟು ಇರುವುದಿಲ್ಲ. ಇನ್ನು, ಒಂದು ವಿಶೇಷತೆ ಕೂಡಾ ಈ ವಿಷಯದಲ್ಲಿ ಇರುವುದು. ಅದೇನೆಂದರೆ, ಗುಂಪುಗಾರಿಕೆಯಲ್ಲಿ ಜನರು ಒಗ್ಗಟ್ಟಾಗುವರು ಎನ್ನುವುದೇ ಅದಾಗಿದೆ. ಅಂದರೆ, ಯಾವುದಾದರೂ ಒಂದು ರೀತಿಯ ಗುಂಪುಗಾರಿಕೆಯಲ್ಲಿ, ಜನರ ಗುಣ, ಸ್ವಭಾವ, ಸ್ವಾರ್ಥ, ಇತ್ಯಾದಿಗಳು ಒಂದೇ ರೀತಿಯಲ್ಲಿ ಇರುವವು ಎಂದು ಅರ್ಥ. ಇದಕ್ಕೆ ಉದಾಹರಣೆಗಳು ಎಂದರೆ, ಪಕ್ಷ, ಪಂಥ, ಧರ್ಮ, ಇತ್ಯಾದಿಗಳು ಆಗಿವೆ.

ಇಲ್ಲಿ, ನಾವು ಸ್ಪಷ್ಟವಾಗಿ ತಿಳಿಯಬೇಕಾಗಿರುವ ಒಂದು ವಿಚಾರ ಎಂದರೆ, ಅದುವೇ, ಈ ಒಗ್ಗಟ್ಟು ಎಂಬುವುದು ಸ್ವಾರ್ಥಕ್ಕಾಗಿ ಬಳಸಲ್ಪಡದೆ ‘ತಾನೂ ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು’ ಎಂಬಲ್ಲಿ ಉಪಯೋಗಿಸಲ್ಪಡಬೇಕು ಎಂದಾಗುವುದು. ಆಗ, ಮನೆ ಜಗಳ, ಧರ್ಮ, ಪಂಥ, ಪಕ್ಷಗಳ ದ್ವೇಷ, ಹಿಂಸೆ, ರಕ್ತಪಾತ, ಇತ್ಯಾದಿಗಳು ಎಲ್ಲವೂ ತಾನಾಗಿ ಪರಿಹರಿಸಲ್ಪಡುವವು. ಮಹಾಜೀವನ ಮತ್ತು ದಿವ್ಯಜ್ಞಾನ ಸನ್ನಿಧಿಗಳು ಈ ನಿಟ್ಟಿನಲ್ಲಿ, ಒಗ್ಗಟ್ಟನ್ನು ಮನೆ, ಸಮಾಜಗಳಲ್ಲಿ ಹೆಚ್ಚಿಸುವ ಪ್ರಯತ್ನವನ್ನು ಮಾಡುವವು. ಇದರಿಂದ, ಒಗ್ಗಟ್ಟಿನೊಂದಿಗೆ, ಶಾಂತಿಯನ್ನು ಮಾನವರು ಮನೆ, ಸಮಾಜಗಳಲ್ಲಿ ಅನುಭವಿಸುವಂತೆ ಆಗುವುದು. ಇತ್ತ, ಧರ್ಮ, ಪಂಥಗಳು ಮಾನವ ಒಗ್ಗಟ್ಟನ್ನು ಆದಿಯಿಂದಲೇ ಭಯಾನಕವಾಗಿ ನಾಶಪಡಿಸುತ್ತಾ ಬಂದಿವೆ ಎಂದು ತಿಳಿಯುವಾಗ, ಇಂದಿನ ಈ ಭಯಾನಕ ದ್ವೇಷ, ಹಿಂಸೆ, ರಕ್ತಪಾತದ ನರಕದಂತಹ ಭೂಮಿಯ ಮಾನವ ಜೀವನಕ್ಕೆ, ಅವುಗಳ ನೇರ ಕೊಡುಗೆಯ ಆ ದೊಡ್ಡ ಪ್ರಮಾಣವು, ಸ್ಪಷ್ಟವಾಗಿ ಗೋಚರವಾಗುವುದು!

 *********************

ಒಂದು ಶಾಶ್ವತ ಒಗ್ಗಟ್ಟು ಉಂಟಾಗಬೇಕಿದ್ದರೆ, ಅಲ್ಲಿ, ಜನರನ್ನು ಶಾಶ್ವತವಾಗಿ ಒಗ್ಗೂಡಿಸುವ, ಎಲ್ಲರಿಗೂ ಸಾಮಾನ್ಯವಾಗಿರುವ, ಒಂದು ಆಶಯ ಇರಬೇಕಾಗುವುದು. ಈ ಅನ್ಯಗ್ರಹ ಜೀವಿಗಳ ರಹಸ್ಯ ವಾಮಾಚಾರದ ಮಾನವರ ಮೇಲಿನ ಆ ಭಯಾನಕ ಮೋಸವು ಜಾಗತಿಕವಾಗಿ ಎಲ್ಲರನ್ನು ಸಮಾನವಾಗಿ ಬಾಧಿಸುವ ಒಂದು ವಾಸ್ತವತೆ ಆಗಿದೆ. ಹೀಗಿರುವಾಗ, ಅವುಗಳ ವಿರುದ್ಧ ಒಂದು ಶಾಶ್ವತವಾದ ಒಗ್ಗಟ್ಟು ಇಂದು ಮಾನವರಿಗೆ ಅನಿವಾರ್ಯವಾಗಿರುವುದು. ಈ ಒಗ್ಗಟ್ಟನ್ನು ಸೃಷ್ಟಿಸಲು ಮಾನವರು ಪ್ರಯತ್ನಿಸಿದಲ್ಲಿ ಮಾತ್ರ ಅದು ಸಾಧ್ಯವಾಗುವುದು ಯಾಕೆಂದರೆ ಮಾನವರ ಒಗ್ಗಟ್ಟನ್ನು ನಾಶಮಾಡುವುದೇ ಅವುಗಳ ಮುಖ್ಯ ಕೆಲಸಗಳಲ್ಲಿ ಒಂದಾಗಿರುವುದು. ಜಾತಿ, ಪಂಥ, ಧರ್ಮ, ಪರಂಪರೆ, ವಿರುಧ್ಧ ನಂಬಿಕೆಗಳು, ಪಕ್ಷ, ಇತ್ಯಾದಿ ಎಲ್ಲವೂ ಶಿಲಾಯುಗದಿಂದಲೇ ಮಾನವ ವಿಭಜನೆಗೆ ಬೇಕಾಗಿ ಒಂದೊಂದಾಗಿ ನಿಧಾನವಾಗಿ ಬೆಳೆಸಿ ತಂದಿರುವಂತವುಗಳು ಆಗಿವೆ. ಇನ್ನು, ಮನೆಯೊಳಗಾದರೂ ಒಗ್ಗಟ್ಟು ಇದೆಯೇ? ಇನ್ನು, ಒಂದೇ ಸೃಷ್ಟಿಕರ್ತನಿಗಾಗಿ ಬೇರೆ ಬೇರೆ ಧರ್ಮಗಳು ತಮ್ಮೊಳಗೆ ದ್ವೇಷ, ಹಿಂಸೆ, ರಕ್ತಪಾತವನ್ನು ಮಾಡುವುದನ್ನು ಕೂಡಾ ನಾವು ನೋಡುವುದಿಲ್ಲವೇ? ಇವೆಲ್ಲದರಿಂದಲೂ ಮಾನವರು ಮೇಲೇರಿದರೆ ಮಾತ್ರ ಆ ಜಾಗತಿಕ ಒಗ್ಗಟ್ಟು ಸಾಧ್ಯ. ಮಾನವರಿಗೆ, ಆ ರಹಸ್ಯ ವಾಮಾಚಾರದ ಆ ಭಯಾನಕ ಮೋಸ ಇದೆಯೆಂದೇ ಈಗ ತಿಳಿದಿಲ್ಲ. ಆದುದರಿಂದ, ಜಗತ್ತು ಆದಷ್ಟು ಬೇಗನೆ ಅವುಗಳಿಂದ ಆಗುತ್ತಿರುವ ಈ ಮಾನವ ಸರ್ವನಾಶದ ಅಪಾಯವನ್ನು ಅರಿತು ಒಗ್ಗಟ್ಟಿನಿಂದ ಜೀವಿಸುವ ವಿಧಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ.

 ***************************

ಕೆಟ್ಟ ಸ್ವಭಾವವು ಸ್ವಾರ್ಥಪ್ರೇರಿತವಾದ ಕಾರಣ ಅಂಥವರು ಇತರರೊಂದಿಗೆ ಒಗ್ಗಟ್ಟಾಗಿ ಇರಲು ಬಯಸುವುದಿಲ್ಲ. ಉದಾಹರಣೆಗೆ, ಕುಡುಕನು ಕುಡಿಯದವರೊಂದಿಗೆ ಸೇರಿಕೊಳ್ಳಲು ಬಯಸುವುದಿಲ್ಲ, ಅದೇ ರೀತಿ, ಕಳ್ಳನು ಸತ್ಯಸಂಧರೊಂದಿಗೆ ಸೇರಿಕೊಳ್ಳಲು ಬಯಸುವುದಿಲ್ಲ. ನೋಡಿ, ‘ನಾವು, ನಮ್ಮದು’ ಎಂಬ ಸ್ವಾರ್ಥ ಭಾವನೆಯೊಂದಿಗೆ ‘ನಾವು ಶ್ರೇಷ್ಠ’ ಎಂಬ ಗುಂಪುಗಾರಿಕೆಯ ದರ್ಪದ ಆ ಕೆಟ್ಟ ಸ್ವಭಾವವು, ಧರ್ಮಗಳು ಎಲ್ಲವೂ ಒಗ್ಗಟ್ಟಾಗುವುದನ್ನು ತಡೆಯುತ್ತವೆ.

ಒಟ್ಟಲ್ಲಿ, ಮಹಾ ಮನಸ್ಕತೆಗೆ ಮಾತ್ರ “ನಾವು ಎಲ್ಲರೂ ಒಂದು” ಅಥವಾ “ನಾವು ಒಂದಾಗಿ ಇರೋಣ” ಎಂಬ ಭಾವನೆಯನ್ನು ಸೃಷ್ಟಿಸುವ ಸಾಮರ್ಥ್ಯ ಇರುವುದು ಎಂದು ತಿಳಿಯಬೇಕು. ಇದೇ ಕಾರಣಕ್ಕೆ, ‘ವಸುದೈವ ಕುಟುಂಬಕಮ್’ ಎಂದು, ಹಿಂದಿನ ಹೃದಯ ವೈಶಾಲ್ಯತೆಯನ್ನು ಹೊಂದಿದ ಮಹಾತ್ಮರು, ಭೂಮಿಯ ಮಾನವರ ಒಗ್ಗಟ್ಟನ್ನು ಎತ್ತಿ ಹೇಳಿರುವುದು.

ಅಯ್ಯೋ, ಆದರೆ, ಆ ಮರದಡಿಯ ಮಹಾತ್ಮರ ಒಗ್ಗಟ್ಟಿನ ನಿಜಧರ್ಮದ ಮಾತುಗಳನ್ನು ಧ್ವಂಸ ಮಾಡುತ್ತಾ, ಆ ಸ್ಥಾನದಲ್ಲಿ ವರ್ಣ, ಜಾತಿ, ಇತ್ಯಾದಿ ಶೋಷಣೆ, ಹಿಂಸೆಗಳ, ಆ ಸಾವಿರಗಟ್ಟಲೆ ‘ಅಸ್ಪೃಶ್ಯ ಕುಟುಂಬಗಳು’ ಅದರ ಬದಲು ಸೃಷ್ಟಿಯಾಗಲ್ಪಟ್ಟವು! ಅದರ ಪರಿಣಾಮವಾಗಿ, ಮಾನವ ಒಗ್ಗಟ್ಟಿನ ಆ ಕಟ್ಟು ಒಡೆದು ಚೂರು ಚೂರು ಆಯಿತು. ಇದಕ್ಕಿಂತ ಹೆಚ್ಚಿನ ಅಧರ್ಮ ಇನ್ನೇನು? ನೋಡಿ, ಎಲ್ಲಾ ಧರ್ಮ, ಪಂಥಗಳು, ಆ ಸ್ವಾರ್ಥದ ಮತಾಂತರಕ್ಕೆ ಬೇಕಾಗಿ, ಮಾನವರಲ್ಲಿ ಒಗ್ಗಟ್ಟು ಆಗದಂತೆ ಮಾಡುವವು, ಮತ್ತು ಅದಕ್ಕಾಗಿ, ತಮ್ಮ ಪ್ರತ್ಯೇಕತೆಯನ್ನು ಎತ್ತಿಹಿಡಿಯಲು ಹಗಲು ರಾತ್ರಿ ಶ್ರಮವಹಿಸುವವು! ಈ ಭಯಾನಕ ವಾಸ್ತವತೆಯ ಸತ್ಯವನ್ನು ಅರಿಯುವಾಗ, ಬಹಳ ಬಹಳ ದುಃಖ ಆಗುವುದು. ಅಯ್ಯೋ, ಧರ್ಮ ಎಂದು, ಇಷ್ಟು ಸಾವಿರ ವರುಷಗಳಲ್ಲಿ, ಈ ರೀತಿ ಮಾಡುತ್ತಾ, ಆ ರೀತಿಯನ್ನೇ ಕಲಿಸಿ ಕೊಡುತ್ತಾ, ಇವುಗಳು ಇದುವರೆಗೂ ಬಂದಿವೆಯಲ್ಲಾ, ಎಂಬುವುದು, ಧರ್ಮದ ನಿಜವಾದ ಅರ್ಥವನ್ನು ತಿಳಿದಿರುವ ಎಲ್ಲರನ್ನೂ ಬೆಚ್ಚಿಬೀಳಿಸುವುದು!

 ************************

ನಾನು, “ಮರಣವು ಮಾತ್ರ ಪರಿಹಾರವೇ ಇಲ್ಲದ ಆ ತೊಂದರೆಯಾಗಿರುವುದು” ಎಂದು ಹಲವು ಸಲ ನಿಮ್ಮಲ್ಲಿ ಹೇಳಿರುವೆನು. ಮನುಷ್ಯ ಸ್ವಭಾವದಿಂದಾಗುವ ಜೀವನದ ಆ ಪ್ರತಿ ತೊಂದರೆಗೂ ಅದರದ್ದೇ ಆದ ಪರಿಹಾರ ಇರುತ್ತದೆ ಎನ್ನುವುದೇ ಇದಕ್ಕೆ ಕಾರಣವಾಗಿದೆ. ಆ ರಹಸ್ಯ ವಾಮಾಚಾರದ ಪ್ರಭಾವದಿಂದ ಮಾನವರು ಅನುಭವಿಸುವ ಕೋಪ, ದ್ವೇಷ, ಇತ್ಯಾದಿ ತೊಂದರೆಗಳಿಂದ ಪಾರಾಗಲು ಮಹಾಜೀವನ ಕೊಡುವ ಆ ಪರಿಹಾರಗಳೇ ಧಾರಾಳ ಸಾಕಾಗುವುದು. ದುರದೃಷ್ಟವಶಾತ್, ಜನರಿಗೆ ಸಾಧನೆಯನ್ನು ಮಾಡುವ ಮನಸ್ಸು ಇರುವುದಿಲ್ಲ ಎಂಬುವುದು ಮಾತ್ರ ಇಲ್ಲಿರುವ ತೊಂದರೆಯಾಗಿದೆ.

ನೋಡಿ, ಮಹಾಜೀವನದಲ್ಲಿ ಮುಂದುವರಿದಂತೆ ವ್ಯಕ್ತಿತ್ವವು ಬೆಳೆಯುವುದು ಅಥವಾ ವ್ಯಕ್ತಿತ್ವವು ಮಹತ್ತರವಾಗಿ ಬದಲಾಗುವುದು ಎಂದು ನಮಗೆ ತಿಳಿದಿದೆ. ಈ ಜನಸಾಮಾನ್ಯರ ವ್ಯಕ್ತಿತ್ವದಿಂದ ಮಹಾವ್ಯಕ್ತಿತ್ವ ಆಗಲು ಬೇಕಾಗಿರುವವುಗಳಲ್ಲಿಟ್ಟು ಮುಖ್ಯವಾಗಿರುವ ಆ ‘ಮಿಥ್ಯತ್ವಜ್ಞಾನ’ ದ ಬಗ್ಗೆ ಇಲ್ಲಿ ಚುಟುಕಾಗಿ ಹೇಳಿ ಮುಗಿಸುವೆನು. ಇದನ್ನು ಒಂದೆರಡು ವಾಕ್ಯಗಳಲ್ಲಿ ಹೇಳಿಬಿಡುತ್ತೇನೆ. ನಿಮಗೆ ಶ್ರೀಮಂತಿಕೆಯ ಮೇಲೆ ಅತಿಯಾದ ಆಸಕ್ತಿ ಇದ್ದರೆ ನೀವು ಶ್ರೀಮಂತನ ಶವವನ್ನು ಮನದಲ್ಲಿ ಸ್ವಲ್ಪಕಾಲ ನೆನೆಯಿರಿ. ನಿಮಗೆ ಸೌಂದರ್ಯದ ಬಗ್ಗೆ ಅತಿಯಾದ ಆಸಕ್ತಿ ಇದ್ದಲ್ಲಿ ನಿಮ್ಮನ್ನು ನಾಳೆ ಬಂದು ಸೇರಲಿರುವ, ನಿಮ್ಮ ಆ ನೂರು ವರುಷದ ವಯಸ್ಸಲ್ಲಿ ನಿಮ್ಮನ್ನು ನೀವೇ ಸ್ವಲ್ಪಕಾಲ ನೋಡಿ, ಆ ನಿಮ್ಮ ಅಂದಿನ ಸೌಂದರ್ಯವನ್ನು ಸವಿಯಿರಿ. ಇನ್ನು, ನಿಮಗೆ ಸ್ಥಾನಮಾನದ ಭ್ರಮೆ ಇದ್ದಲ್ಲಿ, ದೊಡ್ಡ ದೊಡ್ಡ ಸ್ಥಾನಗಳಲ್ಲಿ ಇದ್ದು ಈ ಭೂಮಿಯಿಂದ ಸತ್ತು ಹೋಗಿರುವ ಜನರನ್ನು ಮತ್ತು ಅಂದು ಅವರು ಇದ್ದ ಆ ದೊಡ್ಡ ದೊಡ್ಡ ಸ್ಥಾನಗಳನ್ನು ಇಂದಿನ ಕಾಲದೊಂದಿಗೆ ಹೊಂದಿಸಿ ನೋಡಿರಿ. ಇದಿಷ್ಟೇ ಸಾಕು, ಮಾನವನ ಭ್ರಮೆಯನ್ನು ನೀಗಿ ಒಬ್ಬಾತನ ಕಣ್ಣು ತೆರೆಸಲು.

ಇನ್ನು, ಒಳಿತು ಮಾಡಿ, ಈ ಭೂಮಿಯಲ್ಲಿ ಎಂದಿಗೂ ನಿಮ್ಮ ವ್ಯಕ್ತಿತ್ವವು ದಿವ್ಯವಾಗಿ ಕಂಗೊಳಿಸಬೇಕಾದರೆ ಮಹಾಜೀವನವನ್ನು ಪೂರ್ತಿಯಾಗಿ ಸಾಧಿಸಿರಿ.

ಮನಸ್ಸಿದ್ದರೆ ಮಾರ್ಗವಿದೆ.

 **************************

ಎಲ್ಲಾ ಧರ್ಮ, ಪಂಥಗಳು ಈ ಭೂಮಿಯ ಜೀವನಕ್ಕಿಂತ ಮರಣಾನಂತರದ ಜೀವನಕ್ಕೆ ಹೆಚ್ಚು ಕೊಟ್ಟಿವೆ. ಅಚ್ಚರಿ ಎಂದರೆ, ಎಲ್ಲವೂ ಮರಣಾನಂತರ ಜೀವನವನ್ನು ವೈಜ್ಞಾನಿಕವಾಗಿ ಒಂದೇ ರೀತಿಯಲ್ಲಿ ವಿವರಿಸುವ ಬದಲು “ನಿಮ್ಮದು ತಪ್ಪು, ನಮ್ಮದು ಮಾತ್ರ ಸರಿ” ಎಂದು ಮಾನವ ವಿಭಜನೆಗೆ ಅದನ್ನು ಉಪಯೋಗಿಸಿ, ದಿಗ್ವಿಜಯ, ಮತಾಂತರ, ಧರ್ಮಯುದ್ಧ ಇತ್ಯಾದಿಗಳನ್ನು ದ್ವೇಷದೊಂದಿಗೆ ಮಾಡುತ್ತಾ ಬಂದವು! ಅಯ್ಯೋ, ‘ಧರ್ಮ, ಪಂಥಗಳು, ಶಾಂತಿ, ಪ್ರೀತಿಗಾಗಿ ಇರುವವುಗಳು’ ಎಂದು ಧರ್ಮ, ಪಂಥಗಳು ಗಟ್ಟಿಯಾಗಿ ಜಗತ್ತಿಗೆ ಸಾರಿ ಹೇಳಿಕೊಳ್ಳುತ್ತಾ, ಇತ್ತ ಎಲ್ಲರ ಕಣ್ಣ ಮುಂದೆಯೇ, ಆದಿಯಿಂದಲೇ, ದ್ವೇಷ, ಹಿಂಸೆಗಳ ಬೆಂಕಿಗಳಾಗಿಯೇ ಇವು ಬಂದಿರುವವೆಂದರೆ ಅತ್ಯಂತ ಅಚ್ಚರಿಯಾಗುವುದು!! ಮಾತ್ರವಲ್ಲ, ಈ ಕಣ್ಣಿಗೆ ಕಾಣಿಸುವ ನೇರ ಮೊಸದ ಬಗ್ಗೆ ಯಾರೂ ಇದುವರೆಗೂ ಮಾತಾಡದೆ ಇರುವುದನ್ನು ನೋಡುವಾಗ, ನಿಜವಾಗಿಯೂ, ಆ ಅನ್ಯಗ್ರಹಜೀವಿಗಳ ರಹಸ್ಯ ಪ್ರಾಚೀನ ವಾಮಾಚಾರದ ‘ನಂಬಿಕೆ’ ಎಂಬ ‘ಬ್ರೈನ್ ವಾಶ್’ ನಮಗೆ ಬಹಳ ಸ್ಪಷ್ಟವಾಗುವುದು. ಅವುಗಳಿಗೆ ಮಾನವರ ಮನೋಶಕ್ತಿಯನ್ನು ಕದ್ದು ತಮ್ಮ ಲೋಕಕ್ಕೆ ಕೊಂಡುಹೋಗಲು ಉಪಯೋಗಿಸುವ ವಿಧಾನಕ್ಕೆ ಮನ, ಮನೆ, ಸಮಾಜಗಳಲ್ಲಿ ನೋವು, ಕ್ರೌರ್ಯ, ಅತಿಕಾಮ ಇತ್ಯಾದಿಗಳ ಅನಿವಾರ್ಯತೆ ಇದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಈ ನಂಬಿಕೆಯು ಅವುಗಳಿಗೆ ಒದಗಿಸುವವು. ಆದಕ್ಕೆಂದೇ, ಅವು, ಬ್ರೈನ್ ವಾಶ್ ನ್ನು ನಂಬಿಕೆಯ ರೂಪದಲ್ಲೇ ಹಿಂದಿನಿಂದಲೇ ಮಾನವರಿಗೆ ಉಣಿಸುತ್ತಾ ಬಂದಿರುವುದು! ನೋಡಿ, ಇದು ಹೊಸತೇನೂ ಅಲ್ಲ, ಈ ನಂಬಿಕೆಯ ಬ್ರೈನ್ ವಾಶ್ ನ್ನು ಅವು ಶಿಲಾಯುಗದ ಕಾಡು ಜನಾಂಗದಿಂದಲೇ ಕೊಟ್ಟಿರುವವು. ಹಿಂದೆ, ಅಲ್ಲಿ, ಹಲವು ಕಾಡು ಜನಾಂಗಗಳು ತಮ್ಮ ತಮ್ಮ ಕಾಡು ದೇವರು, ಆ ಕಾಡು ದೇವರ ಅನುಗ್ರಹ, ಅದಕ್ಕಾಗಿರುವ ಆಚಾರ, ನಂಬಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ, ತಾವು ಇತರ ಕಾಡು ದೇವತೆಯ ಜನರೊಂದಿಗೆ ಸೇರಬಾರದು ಎಂದು ನಂಬುತ್ತಾ, ಇತರ ಕಾಡು ದೇವತೆಗಳನ್ನು ಆರಾಧಿಸುವ ಜನಾಂಗದವರನ್ನು ಶತ್ರುಗಳಂತೆ ಕಂಡು, ಕಂಡಲ್ಲಿ ಕಂಡಲ್ಲಿ ಅವರನ್ನು ಕೊಚ್ಚಿ ಕೊಚ್ಚಿ ಕೊಂದು ಹಾಕುತ್ತಿದ್ದವು. ಇದುವೇ, ಅಂದಿನ ಕಾಡು ಜನಾಂಗದ ಜನರ ಆ ವಿವಿಧ ಚಿಕ್ಕ ಚಿಕ್ಕ ಧರ್ಮಗಳ ಧರ್ಮಯುದ್ಧವಾಗಿತ್ತು. ಇಂದು, ಅಂದು ಆರಂಭಿಸಿರುವ ಅದೇ ಧರ್ಮಯುದ್ಧವು, ಬೇರೆ ಬೇರೆ ಕತೆ, ತತ್ವಗಳಿಂದ ಒಡಗೂಡಿ ಬೇರೆ ಬೇರೆ ಧರ್ಮಗಳಲ್ಲಿ ಕಾಣಿಸಿಕೊಳ್ಳುತ್ತಿರುವವು ಅಷ್ಟೆ. ಒಟ್ಟಲ್ಲಿ, ಶಿಲಾಯುಗದಿಂದಲೇ ಇರುವ ಅವುಗಳ ವಂಚನೆಯ ರೀತಿಯು, ಇಂದಿನ ಈ ಆಧುನಿಕ ಯುಗದಲ್ಲಿ ಕೂಡಾ ಪತ್ತೆಹಚ್ಚಲ್ಪಡದೆ, ಹಿಂದಿನ ಕಾಡು ಜನಾಗದಿಂದಲೇ ಆರಂಭವಾದ ನಂಬಿಕೆಯ ಭಾವನೆಗಳು ಮತ್ತೂ ಭೀಭತ್ಸವಾಗಿ ಹೆಚ್ಚಿ, ಹಿಂದಿನ ಬಿಲ್ಲು ಬಾಣಗಳ ಬದಲು, ಕೋವಿ ಬಾಂಬುಗಳ ಪೈಶಾಚಿಕ ಕೃತ್ಯಗಳಾಗಿ ಬದಲಾಗಿವೆ ಅಷ್ಟೆ. ಈ ಒಂದು ದೊಡ್ಡ ಬದಲಾವಣೆಯು ಮಾತ್ರ ಶಿಲಾಯುಗದ ಕಾಡು ಜನರಿಗಿಂತ ಇಂದಿನ ಮಾನವರು ಹೆಚ್ಚು ಪರಿಷ್ಕೃತ ಧರ್ಮಿಷ್ಠರಾಗಿರುವುದನ್ನು ಸೂಚಿಸುವುದು.

“ನಾವೆಲ್ಲಾ ಒಂದು” ಎಂಬಲ್ಲಿಂದ ಮಾತ್ರವೇ ಧರ್ಮದ ಆರಂಭ ಸಾಧ್ಯ. ಆದರೆ, ವರ್ಣ, ಜಾತಿ, ಪಂಥ, ಹಾಗೂ ಬೇರೆ ಬೇರೆ ಧರ್ಮಗಳು ಅದನ್ನು ಆದಿಯಿಂದಲೇ ನಾಶಮಾಡಿಹಾಕಿವೆ!

 *********************

ಸತ್ಯವನ್ನು ಅಸತ್ಯದಿಂದ ಮುಚ್ಚುವುದು ಧರ್ಮವಲ್ಲ. ನಿಜವಾಗಿಯೂ ಧರ್ಮ ಎಂದರೆ ಅದರ ಅರ್ಥ ಸತ್ಯವನ್ನು ಹಿಡಿದೆತ್ತುವುದು ಎಂದೇ ಆಗಿದೆ. ಇನ್ನು, ಸತ್ಯದ ಪ್ರತಿಪಾದನೆಯೇ ನ್ಯಾಯವಾಗಿದೆ. ನ್ಯಾಯವು ಎಲ್ಲರಿಗೂ ಅವರ ಪಾಲಿಗೆ ಸಿಗಬೇಕಾದುದು ಸಿಗಲೇಬೇಕು ಎಂದು ಹೇಳುವುದು, ಮತ್ತು ಇದು ‘ತಾನು ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು’ ಎಂಬ ಧರ್ಮದ ಆ ಮೂಲಭೂತ ನಿಯಮದ ಹಿನ್ನೆಲೆಯಲ್ಲಿಯೇ ಇರುವುದಾಗಿದೆ.

ನೋಡಿ, ಅಸತ್ಯ, ಸುಳ್ಳು, ಇತ್ಯಾದಿಗಳು ಧರ್ಮಕ್ಕೆ ಮಾರಕವಾದವುಗಳಾಗಿರುವವುಗಳು ಎಂದು ನಾವು ಪ್ರತ್ಯೇಕ ಹೇಳಬೇಕಾಗಿಲ್ಲ ತಾನೇ? ದುರದೃಷ್ಟವಶಾತ್, ಈ ಧರ್ಮ, ಪಂಥಗಳು, ಧರ್ಮದ ಹೆಸರಲ್ಲಿ, ‘ನಾವು ಮೇಲು ನೀವು ಕೀಳು’ ಎನ್ನುವವು! ಮಾತ್ರವಲ್ಲ, ವಸುದೈವ ಕುಟುಂಬಕಮ್ ಎಂದು ಜಗತ್ತಿನ ಸರ್ವರನ್ನು ತನ್ನದೇ ಕುಟುಂಬದವರೆಂದು ಹೇಳುವುದರೊಂದಿಗೆ ಆ ನಿಜವಾದ ಧರ್ಮವನ್ನು ಒಂದು ಕಡೆ ಎತ್ತಿ ಹೇಳುತ್ತಾ, ಇತ್ತ, ಶೂದ್ರ, ಚಂಡಾಲ, ಎಂದು ಆ ದೊಡ್ಡ ಕುಟುಂಬದ ಸ್ವಂತ ಸಹೋದರರನ್ನು ಬಹಳ ದೂರ ನಿಲ್ಲಿಸಿರುವುದು, ಮಾತ್ರವಲ್ಲ, ವಿದ್ಯೆಯನ್ನು ಅವರಿಗೆ ನಿಷೇಧಿಸಿರುವುದು, ಧರ್ಮ ಎಂಬ ಸತ್ಯವನ್ನು ಅಸತ್ಯದಿಂದ ಮುಚ್ಚಿದ್ದನ್ನು ಸ್ಪಷ್ಟವಾಗಿ ತೋರಿಸುವುದು. ಇನ್ನು, ಶಾಂತಿಯ ಧರ್ಮವೆಂದು ಹೇಳುತ್ತಾ, ಧರ್ಮದ ಹೆಸರಲ್ಲಿ ಯುದ್ಧ ಮಾಡುವುದು ಮತ್ತು ಯುದ್ಧದಲ್ಲಿ ಸೆರೆಹಿಡಿದ ಗುಲಾಮ ಮಹಿಳೆಯರನ್ನು ಮಾರುಕಟ್ಟೆಯಲ್ಲಿ ಮಾರುವುದು, ಇತ್ಯಾದಿಗಳು, ಧರ್ಮ ಎಂಬ ಸತ್ಯವನ್ನು ಅಸತ್ಯದಲ್ಲಿ ಮುಚ್ಚಿದ್ದಲ್ಲದೆ ಇನ್ನು ಬೇರೇನು? ಇನ್ನು ಧರ್ಮದ ಹೆಸರಲ್ಲಿ ಗಂಡ ಸತ್ತ ವಿಧವೆಯರನ್ನು ಬೆಂಕಿಗೆ ಹಾಕಿ ಸುಟ್ಟು ಭಸ್ಮಮಾಡಿರುವುದು, ಇಂದು ನಂಬಲು ಕೂಡಾ ಸಾಧ್ಯವಾಗದ, ಅಂದಿನ ಧರ್ಮದ ಹೇಯ ಕೃತ್ಯಗಳಾಗಿದ್ದವು! ಇವೆಲ್ಲಾ, ಶಾಂತಿ, ಪ್ರೀತಿ ಎಂಬ ಧರ್ಮದ ಆ ಸತ್ಯವನ್ನು ಅಸತ್ಯದಲ್ಲಿ ಮುಚ್ಚಿದ್ದಕ್ಕೆ ಇರುವ ಕೆಲವು ಉದಾಹರಣೆಗಳಾಗಿವೆ. ನೋಡಿ, ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ, ‘ಧರ್ಮದ ಸರಿಯಾದ ಪಾಲನೆಯ ಸಮಯ’ ಎಂದೇ ವಿಶೇಷಿಸಲ್ಪಡುವ ಆ ಹಿಂದಿನ ಕಾಲದಲ್ಲೇ, ಸತ್ಯವನ್ನು ಅಸತ್ಯದಿಂದ ಮುಚ್ಚುವ ಕೆಲಸಗಳನ್ನು ನಮಗೆ ಹೆಚ್ಚು ಕಾಣಲು ಸಾಧ್ಯವಾಗಿರುವುದು ಎಂಬುವುದು ಬಹಳ ಅಚ್ಚರಿಯನ್ನು ಉಂಟುಮಾಡುವುದು!! ಆ ಹಿಂದಿನ ಕಾಲದ, ಧರ್ಮಗಳಲ್ಲಿನ, ಸತ್ಯವನ್ನು ಅಸತ್ಯದಿಂದ ಮುಚ್ಚಿರುವ, ಆ ಭಯಾನಕ ನಿಯಮಗಳನ್ನು, ಇಂದಿನ ನಿಯಮಗಳು, ಬಲವಂತವಾಗಿ ಇಷ್ಟಾದರೂ ಬದಲಾಯಿಸಿದರ ಪರಿಣಾಮವಾಗಿ, ಇಂದು ಮಾನವರಿಗೆ ಇಷ್ಟಾದರೂ ನ್ಯಾಯ ಅಥವಾ ಆ ನಿಜಧರ್ಮವು ಲಭಿಸಿರುವುದು. ಇದನ್ನು ನಾವು ಮರೆಯಬಾರದು. ಒಟ್ಟಲ್ಲಿ, ಸತ್ಯವನ್ನು ಅಸತ್ಯದಿಂದ ಮುಚ್ಚುವುದು ಧರ್ಮ ಆಗುವುದಿಲ್ಲ ಖಂಡಿತ, ಎಂದು ಇಲ್ಲಿ ನಾವು ತಿಳಿದುಕೊಳ್ಳಬಹುದು.

ಧರ್ಮಗಳಲ್ಲಿ ಹೇಳಿರುವ ‘ಮಾನವರು ಸೃಷ್ಟಿಕರ್ತನ ಮಕ್ಕಳು’ ಎಂಬ ಮಾತನ್ನು ಎತ್ತಿಹಿಡಿದು, ಆ ಹಿನ್ನೆಲೆಯಲ್ಲಿ, ಮಾನವರೊಳಗೆ ಯಾವ ಭೇದವನ್ನು ತೋರಿಸದಿರುವುದು, ‘ವಸುದೈವ ಕುಟುಂಬಕಮ್’ ಎಂಬ ಆ ಶುದ್ಧಧರ್ಮ ಹೇಳುವಂತೆ, ಜಾತಿ, ವರ್ಣ ಬೇಧಗಳನ್ನು ಪೂರ್ತಿ ತೊಡೆದು ಹಾಕುವುದು, ಧರ್ಮದ ಹೆಸರಲ್ಲಿ ಕೊಲೆ, ಯುದ್ಧ, ಕಣ್ಣೀರನ್ನು ತರಿಸದಿರುವುದು, ಇವು ಧರ್ಮಗಳು ಮಾಡಬೇಕಾಗಿರುವ ಆ ನಿಜವಾದ ಧರ್ಮಸ್ಥಾಪನೆಯ ಮಹತ್ಕಾರ್ಯಗಳಾಗಿವೆ.

 *****************************

ಆ ಅನ್ಯಗ್ರಹಜೀವಿಗಳ ಪ್ರಾಚೀನ ವಾಮಾಚಾರದ ಬಗ್ಗೆ ಎಲ್ಲರಿಗೂ ಈಗ ಸ್ಪಷ್ಟವಾದ ಅರಿವು ಇದೆ ಎಂಬಲ್ಲಿ ಮತ್ತು ನಾನು ಅದರ ಬಗ್ಗೆ ಮೊದಲೇ ಸಾಕಷ್ಟನ್ನು ತಿಳಿಸಿರುವ ಹಿನ್ನೆಲೆಯಲ್ಲಿ, ಇಲ್ಲಿ ಅದಕ್ಕೆ ಸಂಬಂಧಿಸಿದಂತೆ ಬೇರೆ ವಿಚಾರ ಒಂದನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುವೆನು.

ನೋಡಿ, ಅಚ್ಚರಿ ಎಂದರೆ, ಮಾನವರು ತಮ್ಮ ಜೀವನ ಪೂರ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುತಲಿರುತ್ತಾರೆ ಎಂಬುದಾಗಿದೆ. ಸ್ವಾತಂತ್ರ್ಯವು ಎಲ್ಲರಿಗೂ ಬೇಕು ನಿಜ, ಆದರೆ ಈ ‘ಸ್ವಾತಂತ್ರ್ಯ ಬೇಕು’ ಎಂಬುವುದು ಜನಸಾಮಾನ್ಯರ ಆ ಅನ್ಯಗ್ರಹಜೀವಿಗಳು ಪ್ರೇರಿತ ಮನಸ್ಸಿನಿಂದ ಹುಟ್ಟಿಕೊಳ್ಳುವುದು ಎಂಬಲ್ಲಿ ನಮಗೆ ತೋರುವ ಆ ಸ್ವಾತಂತ್ರ್ಯಗಳ ಭಾವನೆಗಳ ಬಗ್ಗೆ ನಾವು ಹಲವು ಸಲ ಆಲೋಚಿಸಬೇಕಾಗುವುದು. ನೋಡಿ, ಮಗುವಿಗೆ ಬೆಂಕಿ ಮುಟ್ಟುವ ಸ್ವಾತಂತ್ರ್ಯ ಬೇಕು, ಇದನ್ನು ನೀವು ಒಪ್ಪುವಿರಾ ಮತ್ತು ಸರಿ ಎನ್ನುವಿರಾ? ಇನ್ನು, ಕುಡುಕನಿಗೆ ಕುಡಿಯುವ ಸ್ವಾತಂತ್ರ್ಯ ಬೇಕು ಎಂದರೆ ಆ ಕುಡುಕನ ತಾಯಿ, ಹೆಂಡತಿ, ಮಕ್ಕಳು ಅದನ್ನು ಸರಿ ಎನ್ನುವರೆ? ಪತಿಯು ಪರಸ್ತ್ರಿಯರೊಂದಿಗೆ ಹಾಗೂ ಪತ್ನಿ ಪರಪುರುಷರೊಂದಿಗೆ ಸ್ವಾತಂತ್ರ್ಯ ಬೇಕು ಎಂದರೆ ಅದು ವಿವಾಹ ವಿಚ್ಛೇಧನದ ಸ್ವಾತಂತ್ರ್ಯವನ್ನು ತಾನಾಗಿ ಬರಮಾಡಿಕೊಳ್ಳುತ್ತದೆ ಮತ್ತು ಕುಟುಂಬ ಎಂಬ ಗುಡಿಯು ತನ್ನ ಕಂಬಗಳನ್ನು ಕಳೆದುಕೊಂಡು ಪಾಳುಗುಡಿಯಾಗಿ ಬಿದ್ದುಬಿಡುತ್ತದೆ. ಒಟ್ಟಲ್ಲಿ, ಸ್ವಾತಂತ್ರ್ಯವು ನೈತಿಕತೆಯ ಪರಿಧಿ ಮೀರಿದರೆ ಆಪತ್ತು ಎಂಬುವುದು ಕಟ್ಟಿಟ್ಟ ಬತ್ತಿಯಾಗುವುದು ಎಂದು ಇಲ್ಲಿ ಸ್ಪಷ್ಟವಾಗುವುದು.

ಸ್ವಾತಂತ್ರ್ಯವು ಇಲ್ಲದೆ ಜೀವನವು ಸಾಧ್ಯವಿಲ್ಲ, ಆದರೆ, ಸ್ವಾತಂತ್ರ್ಯದ ಭಾವನೆಗಳ ಹಿಂದೆ ಆ ರಹಸ್ಯ ಪ್ರಾಚೀನ ವಾಮಾಚಾರವಿದೆ ಎಂಬುವುದನ್ನು ನಾವು ಎಂದಿಗೂ ಮರೆಯಬಾರದು.

 ********************

ಈ ವಿಚಾರವಾಗಿ ಈ ಮೊದಲೇ ಸಾಕಷ್ಟು ವಿವರಿಸಿರುವ ಕಾರಣ, ಪುನಃ ಅದರ ಕುರಿತು ಆಳವಾಗಿ ನಾನು ಬರೆಯುವ ಅಗತ್ಯವಿರುವುದಿಲ್ಲ. ನೋಡಿ, ಮಹಾಜೀವನ ಎಂಬುವುದು ಸೂಕ್ಷ್ಮದ ರಹಸ್ಯ ವಾಮಾಚಾರದ ಆ ಭಯಾನಕ ಪ್ರಭಾವಗಳಿಂದ ಪಾರಾಗಲು ಇರುವ ಆ ಏಕೈಕ ಮಾರ್ಗವಾಗಿದೆ ಎಂದು ನಿಮಗೆ ತಿಳಿದಿದೆ. ಇದು ಹೇಗೆ ಏಕೈಕ ಮಾರ್ಗವಾಗುವುದು ಎಂದು ಕೆಲವರು ನಿಮ್ಮಲ್ಲಿ ಕೇಳಬಹುದು. ಅದಕ್ಕೆ ಉತ್ತರ, ಈ ಭೂಮಿಯಲ್ಲಿ ಇದುವರೆಗೂ ಇತರ ಯಾರಿಗೂ ತಿಳಿಯದ ರಹಸ್ಯಗಳು ಮತ್ತು ಅವುಗಳ ತೊಂದರೆಗಳಿಗೆ, ಇದುವರೆಗೂ ಅದರ ವಿಚಾರವಾಗಿ ತಿಳಿಯದ ಜನರು ಹೇಗೆ ಪರಿಹಾರ ಕಾಣಲು ಸಾಧ್ಯವಾಗುವುದು ಎಂಬ ಪ್ರಶ್ನೆಯೇ ಆಗುವುದು.

ಒಟ್ಟಲ್ಲಿ , ಮಹಾಜೀವನವು, ಒಬ್ಬಾತನ ಜೀವನದಲ್ಲಿ

ಮತ್ತು ಆತನ ವ್ಯಕ್ತಿತ್ವದಲ್ಲಿ ಸೃಷ್ಟಿಯಾಗುವ ಆ ಭೀಕರ ರಹಸ್ಯ ರೋಗಗಳಿಗೆ, ಆ ವ್ಯಕ್ತಿಯದೇ ಜೀವನ ದಾರಿಯಲ್ಲಿ ಸಿಗುವ ಪರಿಹಾರ-ಗಿಡಮೂಲಿಕೆಗಳನ್ನು ಹುಡುಕಿ, ಅವಲ್ಲಿ ಬೇಕಾದವುಗಳನ್ನು ಸೇರಿಸಿ, ಅರೆದುಕೊಟ್ಟು, ಆ ವ್ಯಕ್ತಿಯ ವ್ಯಕ್ತಿತ್ವ ರೋಗಗಳನ್ನು ನಿವಾರಿಸುವ ಆ ಪವಿತ್ರ ಸಾಧನಾಜೀವನರೀತಿ ಆಗುವುದು. ಜೀವಕ್ಕೆ ರೋಗ ಬಂದರೆ ಬಡಪಾಯಿ ದೇಹವು ಹಾಸಿಗೆಯಲ್ಲಿ ಕೆಲಕಾಲ ಮಲಗಿ ಅದನ್ನು ಅನುಭವಿಸಿ ಏಳುವುದು, ಆದರೆ, ವ್ಯಕ್ತಿತ್ವಕ್ಕೆ ರೋಗ ಬಂದಲ್ಲಿ ಆತನಲ್ಲಿ ಅದು ದ್ವೇಷ , ಅಸೂಯೆ, ಹಿಂಸೆ, ಕೊಲೆ ಇತ್ಯಾದಿಗಳನ್ನು ಸೃಷ್ಟಿಸುತ್ತಾ ಇತರರಿಗೂ ತನಗೂ ನಾಶವನ್ನು ತಂದುಕೊಡುವುದು.

ಇರುವ ಒಂದು ಜೀವನವನ್ನು ಹೇಗೆ ಜೀವಿಸಬೇಕು ಎಂಬುವುದು ಪ್ರತಿಯೊಬ್ಬನ ಆಯ್ಕೆ ಮಾತ್ರವಾಗಿದೆ.

ಮನಸ್ಸು ಇದ್ದರೆ ಮಾರ್ಗವಿದೆ. ಮನಸ್ಸಿಲ್ಲದವನಿಗೆ ಕಷ್ಟವಲ್ಲದೆ ಬೇರೆ ದಾರಿಯಿಲ್ಲ!

 ***********************

**********************************************************************************

ಮನಶ್ಯಾಂತಿ ಮತ್ತು ಜೀವನಶಾಂತಿಗಿರುವ ವ್ಯತ್ಯಾಸವೇನು?

ಮನಶ್ಯಾಂತಿ ಮತ್ತು ಜೀವನಶಾಂತಿ ಎಂಬ ಆ ದೊಡ್ಡ ವಿಷಯದ ಬಗ್ಗೆ ಒಂದು ಚುಟುಕು ವಿವರಣೆ ಇಲ್ಲಿದೆ.

ನೋಡಿ, ಸಾಮಾನ್ಯ ರೀತಿ ಮತ್ತು ವೈಜ್ಞಾನಿಕ ರೀತಿ ಎಂಬುವುದು ವಿವರಣೆಯ ಎರಡು ಬೇರೆ ಬೇರೆ ರೀತಿಗಳಾಗಿವೆ. ಹೆಚ್ಚಿನವರು ಸಾಮಾನ್ಯ ರೀತಿಯನ್ನೇ ವಿವರಿಸುವರು ಮತ್ತು ಅನುಸರಿಸುವರು. ಆದರೆ, ಮಹಾತ್ಮೃರುಗಳು, ಪ್ರತ್ಯೇಕವಾಗಿಯೂ, ಮನೆ ಮನೆಯ ಮಹಾತ್ಮರುಗಳು, ಈ ವೈಜ್ಞಾನಿಕ ರೀತಿಯನ್ನು ವಿವರಿಸುವರು ಹಾಗೂ ಅನುಸರಿಸುವವರಾಗಿರುವರು. ಈ ರೀತಿ ಅನುಸರಿಸುವಾಗ ಅಲ್ಲಿ ವಿಚಾರವು ಅದರ ಆ ಸ್ಪಷ್ಟತೆಯಿಂದೊಡಗೂಡಿದ ಜ್ಞಾನವಾಗಿ ಪರಿವರ್ತಿಸಲ್ಪಡುವುದು. ಹೀಗೆ, ನಿಷ್ಪಕ್ಷ ತರ್ಕವನ್ನು ಒಳಗೊಂಡ ಆ ಜ್ಞಾನದ ಲಾಭವನ್ನು, ಅವರು, ತಮ್ಮ ಜೀವನದಲ್ಲಿ ಅದ್ಭುತವಾಗಿ ಮಾಡಿಕೊಳ್ಳುವರು!

ಮೊದಲು, ‘ಮನಶ್ಯಾಂತಿ ಮತ್ತು ಜೀವನಶಾಂತಿಯ ವ್ಯತ್ಯಾಸ’ ಎಂಬ ಪ್ರಸ್ತುತ ವಿಷಯದ ಬಗ್ಗೆ ನಾನು, ವೈಜ್ಞಾನಿಕ ರೀತಿಯಲ್ಲಿ, ಅದರ ಕೆಲವು ಮುಖ್ಯ ಅಂಶಗಳನ್ನು ಒಳಗೊಂಡು, ಚುಟುಕಾಗಿ ಹೇಳಿಬಿಡುತ್ತೇನೆ. ಅಂದರೆ, ಮನೋವೈಜ್ಞಾನಿಕವಾಗಿ ನಾವು ಮನಶ್ಯಾಂತಿ ಮತ್ತು ಜೀವನಶಾಂತಿ ಇವು ಎರಡರ ವ್ಯತ್ಯಾಸಗಳನ್ನು ಮೊದಲು ನೋಡಬೇಕಾಗಿದೆ ಎಂದು ಅರ್ಥ. ಆದರೆ, ಮನೆಶಾಂತಿ, ಸಮಾಜಶಾಂತಿ, ಹಾಗೂ ಲೋಕಶಾಂತಿ ಇವುಗಳು ಬೇರೆಯಾಗಿವೆ ಎಂಬುವುದನ್ನು ತಿಳಿದಿರಬೇಕು. ಮೊದಲಿನದ್ದು, ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧ ಪಟ್ಟು ಇರುವ ರೀತಿಯಾದರೆ, ಎರಡನೆಯದ್ದು, ಒಬ್ಬ ವ್ಯಕ್ತಿ ಹಾಗೂ ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ನಡುವೆ ಇರುವ ರೀತಿಯಾಗುವುದು. ಮನೆಶಾಂತಿ, ಸಮಾಜಶಾಂತಿ, ಲೋಕಶಾಂತಿಗಳ ಬಗ್ಗೆ ಇನ್ನೊಮ್ಮೆ ವಿವರಿಸೋಣ.

ಈಗ, ಮನಶ್ಯಾಂತಿ ಮತ್ತು ಜೀವನಶಾಂತಿಗಳ ಆ ವ್ಯತ್ಯಾಸಗಳ ವಿವರಣೆಯ ಮೊದಲು, ಅವುಗಳ ಮೂಲ ಶಬ್ಧವಾದ ‘ಶಾಂತಿ’ ಎಂದರೆ ಏನು ಎಂಬುವುದನ್ನು ಕೂಡಾ ತಿಳಿಯಬೇಕಾಗಿದೆ. ಅಂದರೆ, ‘ಶಾಂತಿ’ ಎಂದರೆ ಏನು ಎಂಬುವುದರ ಉತ್ತರ ಅಥವಾ ವಿವರಣೆಯನ್ನು ವೈಜ್ಞಾನಿಕವಾಗಿ ನೋಡಬೇಕಾಗಿದೆ ಎಂದು ಅರ್ಥ. ನೋಡಿ, ಶಾಂತಿ ಎಂದರೆ ಚಿಂತನೆ, ಕಲ್ಪನೆ, ಭಾವನೆಗಳಿಲ್ಲದ ಮನಸ್ಸಿನ ಆ ಸ್ಥಿತಿಯಾಗಿದೆ. ಇದನ್ನು ‘ತೃಪ್ತಿಯ ಸ್ಥಿತಿ’ ಎಂದು ಸಾಮಾನ್ಯ ವಿವರಣೆಯ ರೀತಿಯವರು ವಿವರಿಸುವರು, ಆದರೆ ಅದು ತಪ್ಪಾಗುವುದು. ಮನಸ್ಸಿಗೆ ತೃಪ್ತಿಯ ಸ್ಥಿತಿ ಬರಬೇಕಿದ್ದರೆ ಅಲ್ಲಿ ಅಗತ್ಯಗಳು ಅಥವಾ ಆಸೆಗಳು ಈಡೇರಬೇಕಾಗುತ್ತದೆ, ಆದರೆ, ಇತ್ತ, ಶಾಂತಿಯು, ‘ಈಡೇರುವಲ್ಲಿ’ ಸೃಷ್ಟಿಯಾಗುವಂತದ್ದಲ್ಲ. ಉದಾಹರಣೆಗೆ, ಮನಸ್ಸನ್ನು ಒಂದು ಬಿಂದುವಲ್ಲಿ ಕೇಂದ್ರೀಕರಿಸಿ ಮನಶ್ಯಾಂತಿಯನ್ನು ಪಡೆಯುವರು. ಇನ್ನು, ಬೇಕಿದ್ದಲ್ಲಿ, ಕಳ್ಳನಿಗೂ ಸಮುದ್ರ ದಡದಲ್ಲಿ ಕುಳಿತು ಮನಸ್ಸಿನ ಮೂರು ರೀತಿಯಲ್ಲಿರುವ ಆ ಎಲ್ಲಾ ಚಿತ್ತವೃತ್ತಿಗಳನ್ನು ಅಥವಾ ಮನಸ್ಸಿನ ಅಲೆಗಳನ್ನು ಇಲ್ಲದಂತೆ ಮಾಡಿ ಶಾಂತಿಯನ್ನು ತಂದುಕೊಳ್ಳಬಹುದು! ಅಂದರೆ, ಶಾಂತಿಯನ್ನು ಮನಸ್ಸಿಗೆ ತಂದುಕೊಳ್ಳುವುದು ಒಂದು ಮನೋನೈಪುಣ್ಯತೆ ಅಥವಾ ಸಾಮರ್ಥ್ಯ ಎಂದು ಅರ್ಥ. ಇದು, ತಾತ್ಕಾಲಿಕ ಸ್ವಭಾವದ್ದು ಆಗಿದ್ದು, ‘ಜೀವನವು’ ಶಾಂತಿಯನ್ನು ಅನುಭವಿಸುವ ರೀತಿಯಲ್ಲಿ ಶಾಶ್ವತವಾಗಿ ಇರುವವುಗಳು ಅಲ್ಲ. ಇನ್ನು, ಅದು ಪವಿತ್ರತೆಗೆ ಹಾಗೂ ಶುದ್ದವ್ಯಕ್ತಿತ್ವಕ್ಕೆ ನೇರವಾಗಿ ಸಂಬಂಧಿಸಿಲ್ಲ ಎಂದೂ ತಿಳಿಯಬೇಕು. ಈ ಅಂಶದಲ್ಲಿ ಯಾರಿಗಾದರೂ ಸಂಶಯವಿದ್ದಲ್ಲಿ, ಇನ್ನೊಮ್ಮೆ, ಈ ವಿಷಯದ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಿ ಸ್ಪಷ್ಟ ಮಾಡಿಕೊಳ್ಳೋಣ. ಇನ್ನು, ವ್ಯಕ್ತಿಯ ಹೃದಯದ ಪವಿತ್ರತೆಗೆ ಹಾಗೂ ಶುದ್ದ ವ್ಯಕ್ತಿತ್ವಕ್ಕೆ ಸಹಾಯಕವಾಗುವವುಗಳು ಆ ಮೂರು ರೀತಿಯ ಜ್ಞಾನಗಳು ಎಂದು ನಾವು ಈ ಮೊದಲೇ ತಿಳಿದಿದ್ದೇವೆ. ಅವುಗಳೇ, ನಶ್ವರತೆ, ಸತ್ಯಚಿಂತನೆ, ಹಾಗೂ ಆತ್ಮಪರಿಶೋಧನೆ ಜ್ಞಾನಗಳಾಗಿವೆ.

ಈಗ, ಜೀವನಶಾಂತಿ ಎಂದರೇನು? ಜೀವನಶಾಂತಿ ಎಂದರೆ ಜೀವನ ಪೂರ್ತಿ ಶಾಂತಿಯನ್ನು ಪಡೆಯುವುದಾಗಿದೆ. ಅಂದರೆ, ಒಬ್ಬಾತನ ಸಾಧನೆಯ ತೀವ್ರತೆಗೆ ಅನುಸರಿಸಿ, ಹಂತ ಹಂತವಾಗಿ ಜೀವನದಲ್ಲಿ ಶಾಂತಿಯನ್ನು ಹೆಚ್ಛೆಚ್ಚು ಅನುಭವಿಸುತ್ತಾ ಹೋಗುವುದು ಇದರ ರೀತಿಯಾಗಿದೆ. ಇದು ಕೆಲವು ಗಂಟೆಗಳಲ್ಲಿ ಒಬ್ಬ ಸಾಧಕನನ್ನು ಬಿಟ್ಟುಹೋಗುವ ರೀತಿಯದ್ದಲ್ಲ ಎಂದು ಅರ್ಥ.

ಇನ್ನು, ಜೀವನಶಾಂತಿಯನ್ನು ಪಡೆಯುವ ವಿಧಾನವನ್ನು ಚುಟುಕಾಗಿ ನೋಡಿ ಮುಗಿಸೋಣ. ಜೀವನವು ಹಲವು ಘಟನೆಗಳಿಂದ ಕೂಡಿರುತ್ತದೆ ಮತ್ತು ಒಬ್ಬ ವ್ಯಕ್ತಿಯ ಜೀವನಶಾಂತಿಯು ಆತನದ್ದೇ ಮನಸ್ಸು, ಮಾತು, ಕರ್ಮ ಎಂಬ ಆ ಮೂರು ರೀತಿಯ ಕ್ರಿಯೆಗಳನ್ನು ಹಾಗೂ ಅವುಗಳಿಗೆ ತಿರುಗಿ ಬರುವ ಪ್ರತಿಕ್ರಿಯೆಗಳನ್ನು ಹೊಂದಿಕೊಂಡಿದೆ. ಯಾರಿಗೆ ಈ ಎರಡು ಭಾಗಗಳನ್ನು ಪಳಗಿಸಿ ನಿಯಂತ್ರಿಸಲು ಸಾಧ್ಯವಾಗುವುದೋ ಅವರಿಗೆ ಮಾತ್ರ ಜೀವನಶಾಂತಿಯು ಸಾಧ್ಯ. ಆದರೆ, ಇದಕ್ಕೆ, ಪ್ರತ್ಯೇಕ ರೀತಿಯ ಕಲಿಕೆ ಮತ್ತು ನೈಪುಣ್ಯತೆ ಬೇಕಾಗಿದೆ. ಇದನ್ನೇ, ದಿವ್ಯಜ್ಞಾನ ಸನ್ನಿಧಿಗಳು ಅಗತ್ಯವಿರುವವರಿಗೆ ಕೆಲವು ಸಾಧನೆಯ ಮೂಲಕ ಕಲಿಸಿಕೊಡುತ್ತಿರುವುದು. ಜನಸಾಮಾನ್ಯರಲ್ಲಿ, ಮನಸ್ದು, ಮಾತು, ಕರ್ಮ ಎಂಬ ಆ ಮೂರು ರೀತಿಯ ಕ್ರಿಯೆಗಳ ಒಂದೊಂದು ಅಲೆಯು ಕೂಡಾ ಮನಸ್ಸಿನೊಳಗೆ, ಜಲಪಾತದಂತೆ, ಭೋರ್ಗರೆದು ಬೊಬ್ಬಿರಿಯುವ ತರ ಇರುವುದು. ಅವನ್ನು ಎಲ್ಲವನ್ನೂ ಆ ಪ್ರತ್ಯೇಕ ಸಾಧನೆಗಳ ಮೂಲಕ ‘ಶಾಂತವಾಗಿ ಹರಿಯುವ ನದಿ’ ಯಾಗಿ ಪರಿವರ್ತಿಸುವಲ್ಲಿ ಜೀವನಶಾಂತಿ ಎಂಬ ನುಣುಪಾದ ತಂಪಾದ ಶುದ್ಧ ಬೆಣ್ಣೆಯು ನಮಗೆ ದೊರಕುವುದು ಎಂದು ತಿಳಿಯಬೇಕು. ಮಾತ್ರವಲ್ಲ, ಇದು ಪೂರ್ತಿ ಜೀವನಕ್ಕೆ ಸವರಲ್ಪಟ್ಟು, ಪೂರ್ತಿ ಜೀವನವೇ ಆ ಮೇಲುಮಟ್ಟದ ಶಾಂತಿಯ ಹಂತವನ್ನು ನಿರಂತರ ಅನುಭವಿಸುವಂತೆ ಮಾಡುವುದು.

 __________________

ಮನಶ್ಯಾಂತಿಯ ಹಾಗೆ ಜೀವನಶಾಂತಿ ಇಲ್ಲ ಮತ್ತು ಅಲ್ಲ. ಮನಶ್ಯಾಂತಿಯು ತಾತ್ಕಾಲಿಕ ಮತ್ತು ಅದು ವ್ಯಯಕ್ತಿಕ ಆಗುವುದು, ಆದರೆ ಜೀವನದ ತೊಂದರೆಗಳನ್ನು

ನೀಗಿಸುವಲ್ಲಿ ಅದು ಸಹಕರಿಸುವುದಿಲ್ಲ. ಅಂದರೆ, ಜೀವನಶಾಂತಿಯು ವ್ಯಯಕ್ತಿಕವಾದರೂ, ಅಲ್ಲಿ ಅದನ್ನು ನಿಯಂತ್ರಿಸುವ ಘಟಕಗಳು ಇತರ ಮಾನವರೂ ಸೇರಿ ಹಲವು ಇವೆ ಎಂದು ಅರ್ಥ. ಹಾಗಿರುವಾಗ, ಒಮ್ಮೆಗೆ ಎಲ್ಲಾ ಕಷ್ಟಗಳನ್ನು ಮರೆತು ಶಾಂತಿ ಅನುಭವಿಸುವುದನ್ನು ಮಾತ್ರ ಮನಶ್ಯಾಂತಿ ಎಂದು ಹೇಳುವುದು ಎಂದು ಇಲ್ಲಿ ಸ್ಪಷ್ಟವಾಯಿತು. ಅಂದರೆ, ಸ್ವಲ್ಪ ಸಮಯದ ನಂತರ ಅದೇ ಕಷ್ಟಗಳ ನೆನಪುಗಳು ಪುನಃ ಬಂದು ಆ ವ್ಯಕ್ತಿಯನ್ನು ಕಾಡಲು ಆರಂಭಿಸುತ್ತದೆ ಎಂದು ಅರ್ಥ. ಇನ್ನು, ಜೀವನಶಾಂತಿಯು ಪ್ರತಿ ವ್ಯಕ್ತಿಗೆ ಸಂಬಂಧಿಸಿದಂತೆ ವ್ಯಯಕ್ತಿಕವಾದರೂ, ಅಲ್ಲಿ ಅದು ಇತರ ಜೀವನದ ಎಲ್ಲಾ ಘಟಕಗಳನ್ನು ಅವಲಂಭಿಸುತ್ತದೆ ಎಂಬುವುದು ಆ ದೊಡ್ಡ ವ್ಯತ್ಯಾಸವಾಗಿರುವುದು.

ಮನಶಾಂತಿಯು ಒಂದು ರೀತಿಯ ತಾತ್ಕಾಲಿಕವಾಗಿ ಚಿಂತೆ ಇಲ್ಲದ ಸ್ಥಿತಿ ಆಗಿದೆ. ಆದರೆ ಜೀವನದಲ್ಲಿನ ಬಿರುಗಾಳಿಗಳನ್ನು ನಿಯಂತ್ರಿಸಿ ಅವನ್ನು ಮಂದ ಮಾರುತಗಳನ್ನಾಗಿಸುವ ಸಾಮರ್ಥ್ಯ ಅದಕ್ಕೆ ಇಲ್ಲ. ಅದಕ್ಕೆ ಜೀವನಶಾಂತಿಯನ್ನು ಪಡೆಯುವ ಆ ಪ್ರತ್ಯೇಕ ಸಾಧನಾ ರೀತಿಗಳೇ ದಾರಿಯಾಗಿರುವುದು.

ವಿಚಾರಗಳ ಆ ಸಾಮಾನ್ಯ ರೀತಿಯ ವಿವರಣೆಯಲ್ಲಿ ಹೇಳುವಾಗ ವಂಚನೆಗಳಿಂದ ಮನಶ್ಯಾoತಿ ಮತ್ತು ಜೀವನಶಾಂತಿಗಳು ಲಭಿಸಲಾರವು ಎಂದು ಹೇಳಬಹುದು. ಒಟ್ಟಲ್ಲಿ, ಈ ಎರಡನ್ನು ಪಡೆಯುವಲ್ಲಿ ಮಾನವನು ಏನು ಮಾಡಬೇಕು ಎನ್ನುವುದೇ ಆ ನಿಜವಾದ ಕೊನೆಯ ಪ್ರಶ್ನೆಯಾಗುವುದು. ಮಹಾಜೀವನವು ಇಲ್ಲಿ ಮಾನವರಿಗೆ ದಾರಿದೀಪ ಆಗುವುದು.

ಯಾವುದೇ ಒಂದರಲ್ಲಿ ಮನಸ್ಸು ಸಹಜವಾಗಿ ಕೇಂದ್ರೀಕರಿಸಲ್ಪಟ್ಟಾಗ ಅಲ್ಲಿ ಇತರ ಎಲ್ಲದರ ಮರೆಯುವಿಕೆ ಉಂಟಾಗುವುದು. ಆಗ ಮನಸ್ಸು ಸಹಜವಾಗಿಯೇ ಶಾಂತ ಸ್ಥಿತಿಗೆ ಬರುವುದು. ಇನ್ನು, ಸಂತೃಪ್ತಿಗೊಳ್ಳುವಲ್ಲಿ ಆನಂದ ಉಂಟಾಗುವುದು. ಈ ಆನಂದ ಅಥವಾ ಸಂತೋಷವು ಕೂಡಾ ಮನಸ್ಸಿನ ಒಂದು ರೀತಿಯ ಪ್ರಕ್ಷುಬ್ಧ ಸ್ಥಿತಿಯೇ ಆಗಿರುವುದು. ಅಲ್ಲಿ ಭಾವನೆಗಳಿವೆ. ಉದಾಹರಣೆಗೆ, ಅತಿಯಾಗಿ ಸಂತೋಷಪಡುವವರು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುವುದನ್ನು ಒಲಿಂಪಿಕ್ಸ್ ಆಟದಲ್ಲಿ ಜಯಗಳಿಸುವಲ್ಲಿ ನಮಗೆ ಕಾಣಲು ಸಾಧ್ಯವಾಗುವುದು. ಆದುದರಿಂದ ಮನಶಾಂತಿಯು ತೃಪ್ತಿಯಿಂದ ಬರುವ ಸಂತೋಷವಲ್ಲ ಬದಲು ಅದು ಚಿಂತನೆ, ಕಲ್ಪನೆ, ಭಾವನೆಗಳಿಲ್ಲದ ಸ್ಥಿತಿ ಎಂದು ತಿಳಿದುಕೊಳ್ಳಬಹುದು. ಒಟ್ಟಲ್ಲಿ, ಜೀವನಶಾಂತಿಯು ಮನಶ್ಯಾಂತಿಯನ್ನು ತಂದು ಕೊಡಲು ಸಮರ್ಥವಾದಾಗ ಮಾತ್ರ ಮನಶ್ಯಾಂತಿಯು ಮಾನವನಿಗೆ ಶಾಶ್ವತವಾಗಿಬಿಡುವುದು. ಅಲ್ಲಿಯ ತನಕವೂ ಶಾಶ್ವತ ಮನಶ್ಯಾಂತಿ ಎಂಬುವುದು ಮಾನವರ ಪಾಲಿಗೆ ಬರೇ ಮರೀಚಿಕೆ ಮಾತ್ರವಾಗುವುದು!

 _____________________________

ಪ್ರಶ್ನೆ- ಜೀವನಶಾಂತಿಯು ಹೇಗೆ ಮನಶ್ಯಾಂತಿಯನ್ನು ಹೆಚ್ಚಿಸುವುದು ಮತ್ತು ತಾತ್ಕಾಲಿಕ ಸ್ವರೂಪದ ಮನಶ್ಯಾಂತಿಯನ್ನು ಅದು ಹೇಗೆ ಶಾಶ್ವತ ಸ್ವರೂಪದ ಮನಶ್ಯಾಂತಿಯನ್ನಾಗಿ ಪರಿವರ್ತಿಸುವುದು?

ಉತ್ತರ- ಮನಶ್ಯಾಂತಿಯು ಸೃಷ್ಟಿಯಾಗುವುದು ಚಿಂತನೆ, ಕಲ್ಪನೆ, ಭಾವನೆಗಳು ಇಲ್ಲವಾಗುವಾಗ ಅಥವಾ ಆ ಮೂರು ಮನಸ್ಸಿನ ಕೆಲಸಗಳು ಅತ್ಯಂತ ಕಡಿಮೆ ಆಗುವಾಗ ಆಗಿದೆ. ಅಂದರೆ, ಮನಸ್ಸಿಗೆ ಕೆಲಸ ಕಡಿಮೆಯಾಗುವಾಗ ಅಥವಾ ಮನಸ್ಸಿಗೆ ಕೆಲಸ ಇಲ್ಲದಾಗುವಾಗ ಮನಸ್ಸಿಗೆ ಶಾಂತಿ ಬರುವುದು ಎಂದು ಅರ್ಥ. ಹೀಗೆ ಇರಲು, ಸಂತೋಷವೂ ಸೇರಿ, ಉಳಿದ ಎಲ್ಲವೂ ಮನಸ್ಸಿನ ಒಂದಲ್ಲ ಒಂದು ರೀತಿಯ ಕೆಲಸ ಆಗುವ ಕಾರಣ, ಅವು ಮನಶ್ಯಾಂತಿಯನ್ನು ಸೃಷ್ಟಿಸುವವುಗಳು ಅಥವಾ ಹೆಚ್ಚಿಸುವವುಗಳು ಅಲ್ಲ ಎಂದಾಗುವುದು. ಈಗ, ಒಂದು ಮುಖ್ಯ ಅಂಶವಿದೆ, ಅದನ್ನು ಗಮನವಿಟ್ಟು ಅರ್ಥಮಾಡಿರಿ. ನೋಡಿ, ಈ ‘ಸಂತೋಷ’ ಎಂಬುವುದು ಧನಾತ್ಮಕವೇ ಆಗಬೇಕೆಂದೇನೂ ಇಲ್ಲ. ಇನ್ನೊಬ್ಬರನ್ನು ಬೈದು, ನೋಯಿಸಿ, ನಿತ್ಯವೂ ಸಂತೋಷಪಡುವವರು ಇರುವರು. ಮನುಷ್ಯರನ್ನು ಹೊಡೆದು ಬಡಿದು ಮತ್ತು ಕೊಂದು, ಧರ್ಮವನ್ನು ರಕ್ಷಿಸಿದೆವು ಎಂದು ಸಂತೋಷದಿಂದ ಕುಣಿಯುವವರು ಇರುವರು. ಇನ್ನೂ, ಹಲವು ಹಲವು ಉದಾಹರಣೆಗಳನ್ನು ನೀವೇ ಆಲೋಚಿಸಿ ಕಂಡುಕೊಳ್ಳಬಹುದು. ಇಲ್ಲೆಲ್ಲಾ ಸಂತೋಷವು ರಾಕ್ಷಸತ್ವವನ್ನು ಪಡೆದಿರುತ್ತದೆ! ಇನ್ನು, ಅದರ ಅತಿ ಚಿಕ್ಕ ರೀತಿಯನ್ನು ನೋಡುವುದಾದರೆ, ಸಂಬಂಧಿಕರಲ್ಲಿ ಅಥವಾ ಸ್ವಂತ ಮನೆ ಮಂದಿಯಲ್ಲಿ ಚುಚ್ಚು ಮಾತನ್ನು ಹೇಳಿ ತಾನು ಹಾಗೆ ಹೇಳಿದೆನೆಂದು ಮನಸ್ಸಿನ ಒಳಗೊಳಗೇ ಸಂತೋಷಪಡುವುದಾಗಿದೆ. ಹೀಗಿರುವಾಗ, ಇಡೀ ಭೂಮಿಯ ಮಾನವರ ಮನಸ್ಸನ್ನು ಒಟ್ಟಾಗಿ ನೋಡಿದಲ್ಲಿ, ‘ಅಸುರ ಸಂತೋಷ’ ವೇ ನಿರುಪದ್ರವಕಾರಿ ಸಂತೋಷಕ್ಕಿಂತ ಹೆಚ್ಚು ಎಂದು ಸ್ಪಷ್ಟವಾಗುವುದು! ಈ ರಾಕ್ಷಸ ಸಂತೋಷಗಳು ಸ್ವತಃ ಅವರವರಿಗೂ ಮತ್ತು ಇತರರಿಗೂ ಮನಶ್ಯಾಂತಿಯ ಬದಲು ಭೀಕರ ಅಶಾಂತಿಯನ್ನು ಸೃಷ್ಟಿಸುವಂಥವುಗಳು ಎಂದು ಪ್ರತ್ಯೇಕ ಹೇಳಬೇಕೆಂದಿಲ್ಲವಲ್ಲಾ.

ನೋಡಿ, ಮೊದಲೇ ತಿಳಿಸಿರುವಂತೆ, ಮಹಾಜೀವನವು ಅಥವಾ ದಿವ್ಯಜ್ಞಾನ ಸನ್ನಿಧಿಗಳು ಜೀವನಶಾಂತಿಗೆ ಹೆಚ್ಚು ಒತ್ತುಕೊಡುತ್ತವೆ. ಮನಶ್ಯಾಂತಿಯು ತಾತ್ಕಾಲಿಕ ಸ್ವಭಾವದ್ದಾಗಿರುವುದೇ ಇದಕ್ಕೆ ಕಾರಣವಾಗಿದೆ. ಇನ್ನು, ‘ಶಾಂತವಾಗು ಮನವೇ’ ಎಂದು ತನ್ನನ್ನು ತಾನೇ ಶಾಂತಗೊಳಿಸುವ ಒಂದು ಧ್ಯಾನವನ್ನು ಮಾತ್ರ ಮಹಾಜೀವನವು ಈ ಮನಶ್ಯಾಂತಿಗೆ ಬೇಕಾಗಿ ಹೇಳುವುದು ಅಷ್ಟೆ. ಹಿಂದಿನ ಆ ಹಲವು ಇತರ ಮನಶ್ಯಾಂತಿ ರೀತಿಗಳನ್ನು ಅನುಸರಿಸುವರು ಅವರವರಿಗೆ ಇಷ್ಟ ಆಗುವ ರೀತಿಗಳನ್ನು ಬೇಕಿದ್ದಲ್ಲಿ ಉಪಯೋಗಿಸಿಕೊಳ್ಳಬಹುದು ಅಷ್ಟೆ. ಆದರೆ ಇವೆಲ್ಲಾ ‘ರುಚಿಯು, ಊಟ ಮುಗಿಯುವ ತನಕ’ ಎಂಬಂತೆ ಸ್ವಲ್ಪ ಸಮಯಕ್ಕೆ ಮಾತ್ರ ಸೀಮಿತವಾಗಿರುವವುಗಳು.

ಮನಶ್ಯಾಂತಿಯು ಸೃಷ್ಟಿಯಾಗುವುದು ಚಿಂತನೆ, ಕಲ್ಪನೆ, ಭಾವನೆಗಳು ಇಲ್ಲವಾಗುವಾಗ ಅಥವಾ ಅವು ಮೂರು ಅತ್ಯಂತ ಕಡಿಮೆ ಆಗುವಾಗ ಆಗಿದೆ ಎಂದು ಈಗಾಗಲೇ ನಮಗೆ ತಿಳಿದಿದೆ. ಈಗ, ಜೀವನಶಾಂತಿಯನ್ನು ಪಡೆಯುವ ಸಾಧನೆಗಳು ಮಾನವರ ಅನಗತ್ಯ ಚಿಂತನೆಗಳು, ಅನಗತ್ಯ ಭಾವನೆಗಳು ಹಾಗೂ ಅನಗತ್ಯ ಕಲ್ಪನೆಗಳನ್ನು ಇಲ್ಲದಂತೆ ಮಾಡುವುದು. ಆಗ, ಆ ಮೂರು ರೀತಿಯ ಅನಗತ್ಯ ಭಾರಗಳ ಆ ದೊಡ್ಡ ಶೇಖರವು ಒಬ್ಬ ವ್ಯಕ್ತಿಯ ಮನಸ್ಸಿನಿಂದ ಹೋಗುವುದು. ಅಂದರೆ, ಅಲ್ಲಿ ಬಾಕಿ ಉಳಿಯುವುದು ಆ ಬಹಳ ಕಡಿಮೆ ಪ್ರಮಾಣದ ಮತ್ತು ಅಗತ್ಯದ ಚಿಂತನೆ, ಕಲ್ಪನೆ, ಭಾವನೆಗಳು ಮಾತ್ರವಾಗಿಬಿಡುವುದು ಎಂದು ಅರ್ಥ. ಚಿಂತನೆ, ಕಲ್ಪನೆ, ಭಾವನೆಗಳು ಮನದಲ್ಲಿ ಕಡಿಮೆಯಾಗುವಾಗ ಮನಶ್ಯಾಂತಿ ಬರುವುದೆಂದು ನಮಗೆ ಈಗಾಗಲೇ ತಿಳಿದಿದೆ. ಈ ಕಾರಣಕ್ಕೆ, ಜೀವನಶಾಂತಿ ಅಥವಾ ಜೀವನಶಾಂತಿಯ ಸಾಧನೆಗಳು ಮನಶ್ಯಾಂತಿಯನ್ನು ಹೆಚ್ಚಿಸುವುದು ಎಂದು ತಿಳಿಯಬೇಕು. ಮಾತ್ರವಲ್ಲ, ಜೀವನಶಾಂತಿಯು ಜೀವನಪೂರ್ತಿ ಇರುವ ರೀತಿಯದ್ದು ಆದಕಾರಣ, ಅಥವಾ ತಾತ್ಕಾಲಿಕ ರೀತಿಯದ್ದು ಅಲ್ಲದ ಕಾರಣ, ಈ ಜೀವನಶಾಂತಿಯಿಂದ ಬರುವ ಮನಶ್ಯಾಂತಿಯು ಕೂಡಾ ಶಾಶ್ವತ ಸ್ವಭಾವದಿಂದ ಕೂಡಿರುವುದು ಎಂದೂ ತಿಳಿಯಬೇಕು.

 ________________________

ಪ್ರಶ್ನೆ- ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರದ ಪ್ರಭಾವ ಮಾನವರ ಮನಸ್ಸಿನ ಮೇಲೆ ಇರುವಾಗ, ಇನ್ನು, ಮಾನವನು ಸಾಧನೆಮಾಡಿ ಮನಸ್ಸನ್ನು ಶಾಂತಗೊಳಿಸಲು ಸಾಧ್ಯವಾಗುವುದೇ? ಆ ರಹಸ್ಯ ವಾಮಾಚಾರದ ವಿಧಿಯನ್ನು ಮೀರಲು ಸಾಧ್ಯವಾಗುವುದೇ?

ಉತ್ತರ- ನೋಡಿ, ಮನುಷ್ಯನ ಜೀವನದ ಘಟನೆಗಳನ್ನು ಅಥವಾ ಆಗುಹೋಗುಗಳನ್ನು ಅವುಗಳಿಗೆ ನಿಯಂತ್ರಿಸಲು ಸುಲಭವಾಗುವುದು. ಅಂದರೆ, ಮಾನವನ ಜೀವನದ ಆಗುಹೋಗುಗಳು ನೂರಕ್ಕೆ ನೂರರಷ್ಟು ಮಾನವನ ನಿಯಂತ್ರಣದಲ್ಲಿ ಇಲ್ಲ ಎಂದು ಅರ್ಥ. ಆದರೆ, ಅದರಂತೆ ಅಲ್ಲ ಮನುಷ್ಯನ ಮನಸ್ಸು ಎಂದು ತಿಳಿಯಬೇಕು. ಮಾನವನು ಬೇಕಾದಲ್ಲಿ ತನ್ನ ತೀರ್ಮಾನಗಳನ್ನು ಬದಲಿಸಲು ಸಾಮರ್ಥ್ಯವನ್ನು ಪಡೆದಿರುವನು. ದುರದೃಷ್ಟವಶಾತ್, ಆ ತೀರ್ಮಾನಗಳು ನಿಜವಾಗಿಯೂ ತನಗೂ ಇತರರಿಗೂ ಒಳಿತು ಮಾಡುವುದೇ ಎಂಬಲ್ಲಿ ಮಾತ್ರವೇ ಮಾನವ ಗಮನಿಸದೆಹೋಗುವುದು ಅಷ್ಟೆ. ಆದುದರಿಂದ, ಕೆಟ್ಟದರ ಕಡೆಗೆ ನಮ್ಮ ಮನಸ್ಸು ಚಲಿಸುವಂತೆ ಆ ರಹಸ್ಯ ಸೂಕ್ಷ್ಮ ವಾಮಾಚಾರವು, ನಮ್ಮ ಮನಸ್ಸಿನ ಒಳಗಿಂದ, ಪ್ರಭಾವದ ರೂಪದಲ್ಲಿ ಬಲವನ್ನು ಪ್ರಯೋಗಿಸುತ್ತಾ ಇರುವುದಾದರೂ, ಆತ್ಮಪರಿಶೋಧನೆ, ಸತ್ಯಚಿಂತನೆಗಳ ಸಹಾಯದಿಂದ, ಬೇಕಿದ್ದಲ್ಲಿ, ಮಾನವರಿಗೆ ಅವುಗಳ ಪ್ರಭಾವದಿಂದ ಪಾರಾಗಲು ಅವಕಾಶವಿದೆ ಎಂದು ತಿಳಿಯಬೇಕು. ಒಟ್ಟಲ್ಲಿ, ಇಲ್ಲಿ, “ಮನಸ್ಸಿದ್ದರೆ ಮಾರ್ಗವಿದೆ” ಎಂದು ಮಾತ್ರ ಹೇಳಬಹುದು ಅಷ್ಟೆ. ಮಹಾಜೀವನ ಮತ್ತು ದಿವ್ಯಜ್ಞಾನ ಸನ್ನಿಧಿಗಳು ಅದಕ್ಕೆ ಬೇಕಾಗಿರುವ ಮಾರ್ಗಗಳನ್ನು ಜನರಿಗೆ ತೋರಿಸಿ ಕೊಡುವವು. ಆದರೆ ಮನಸ್ಸು ಮಾತ್ರ ಅವರವರೇ ಮಾಡಿಕೊಳ್ಳಬೇಕಾಗಿದೆ. ಮನೆ ಮನೆ ಮಹಾತ್ಮರ ಆ ಕೊನೆಯ ಹಂತಕ್ಕೆ ತಲುಪಿದವರಿಗೆ ಖಂಡಿತವಾಗಿಯೂ ಈ ತೊಂದರೆಗಳಿಂದ ಪೂರ್ತಿಯಾಗಿಯೂ ಹೊರಬರಬಹುದು ಎಂದು ಹೇಳಬಹುದು. ಮಾತ್ರವಲ್ಲ, ಇನ್ನು, ಸಾಧನಾ ದಾರಿಯಲ್ಲಿ ಇರುವವರಿಗೆ ಕೂಡಾ ಅವರವರ ಹಂತಕ್ಕೆ ಅನುಸರಿಸಿ ಅವುಗಳ ಪ್ರಭಾವದಿಂದ ಹೊರಬರಲು ಸಾಧ್ಯವಾಗುವುದು ಎಂದೂ ತಿಳಿಯಬೇಕು. ಆದರೆ, ಆ ಮೇಲಿನ ಹಂತಕ್ಕೆ ತಲುಪುವ ವರೆಗೆ ದೃಢ ನಿರ್ಧಾರದಿಂದ, ಕೊನೆಯ ಪಕ್ಷ, ಸಂಕಲ್ಪಸಾಧನೆಯನ್ನಾದರೂ ಮಾಡುತ್ತಿರಬೇಕಾಗಿದೆ. ಯಾಕೆಂದರೆ, ಸಾಧನೆಗಳಿಂದ ಪೂರ್ತಿಯಾಗಿ ದೂರವಿದ್ದಲ್ಲಿ, ಈ ಭಯಾನಕ ವಾಮಾಚಾರದ ಶಕ್ತಿಯುತ ಪ್ರಭಾವಗಳು ಕೆಲವೊಮ್ಮೆ ಸಾಧನೆಯನ್ನೇ ನಿಲ್ಲಿಸುವ ಮನಸ್ಸನ್ನು ಕೊಟ್ಟು, ಆ ವ್ಯಕ್ತಿಯನ್ನು, ಆ ಹಳೆಯ ‘ಗಾಳಿ ಬೀಸಿದ ಕಡೆಗೆ ಹಾರಿಹೋಗುವ ತರಗೆಲೆಯ ತರದ’ ವ್ಯಕ್ತಿಯನ್ನಾಗಿ ಪುನಃ ಬದಲಿಸಿಬಿಡಬಹುದು.

 _________________________________

 ­­­­­­­­­­­­­­­­­

ಈ ಮನಶ್ಯಾಂತಿಯು ಒಟ್ಟು ಮೂರು ರೀತಿಗಳಲ್ಲಿ ಇವೆ, ಅವಲ್ಲಿ ಒಂದು, ಕೆಲವು ಸಾಧನೆಗಳ ಸಹಾಯದಿಂದ ಮನಶ್ಯಾಂತಿಯನ್ನು ಪಡೆಯುವ ರೀತಿ. ಎರಡನೆಯದ್ದು, ಆ ಭಯಾನಕ ರಹಸ್ಯ ಪ್ರಾಚೀನ ವಾಮಾಚಾರದ ಶಕ್ತಿಗಳು ಮನುಷ್ಯರಲ್ಲಿ ಬೇಕುಬೇಕೆಂದೇ ಒಂದು ರೀತಿಯ ವಿಚಿತ್ರ ಮನಸ್ಸಿನ ಶಾಂತಿಯ ಆ ಮಾನಸಿಕ ಅವಸ್ಥೆಯನ್ನು ಸೃಷ್ಟಿ ಮಾಡುವುದಾಗಿದೆ. ಇನ್ನು, ಮೂರನೆಯದ್ದು, ಮಹಾಜೀವನದ ಸಾಧನೆಗಳಿಂದ ಗಳಿಸುವ ಆ ಜೀವನಶಾಂತಿಯು, ಸಹಜವಾಗಿ, ಸೃಷ್ಟಿಸುವ ಆ ಶಾಶ್ವತ ಮನಶ್ಯಾಂತಿ ಆಗಿದೆ.

ಮೊದಲನೆಯ ರೀತಿಯು, 90% ಬರುವ ಆ ಜನಸಾಮಾನ್ಯರ ರೀತಿ. ಈ ರೀತಿಯಲ್ಲಿ, ಮನಶ್ಯಾಂತಿಯನ್ನು ಪಡೆಯುವುದು ಸುಲಭದ ಕೆಲಸ ಏನೂ ಆಗುವುದಿಲ್ಲ. ಇಲ್ಲಿ, ಮನುಷ್ಯರ ಮನಸ್ಸು ಅವರ ಹಿಡಿತದಲ್ಲಿ ಇದ್ದರೂ, ಏನೂ ಹಿಡಿತ ಇಲ್ಲದಂತೆ ಅವರು ವರ್ತಿಸುವರು! ಅನಗತ್ಯ ಆಲೋಚನೆಗಳು, ಕಲ್ಪನೆಗಳು, ಭಾವನೆಗಳು ಮನಸ್ಸಿನಿಂದ ಬಿಟ್ಟು ಹೋಗದೆ ಅಲ್ಲೇ ಸುತ್ತುತ್ತಾ ಇರುವವು. ‘ನನಗೆ ಬೇಡ ಬೇಡ’ ಎಂದು ಮನದಲ್ಲಿ ಎಷ್ಟು ಹೇಳಿಕೊಂಡರೂ ಅವು ಹೋಗದೆ, ಮನದಲ್ಲಿ ಮತ್ತೂ ಸುತ್ತುತ್ತಾ ಇರುವವು. ಇದಕ್ಕೆ ಕಾರಣ, ಮನುಷ್ಯರ ಮನಸ್ಸು ಆ ರಹಸ್ಯ ಪ್ರಾಚೀನ ವಾಮಾಚಾರದ ಕೈಯಲ್ಲಿ ಇರುವುದಾಗಿದೆ ಎಂದು ನಾನು ಈ ಮೊದಲೇ ಹೇಳಿರುವೆನು. ಆದುದರಿಂದ, ಈ ಮೊದಲನೆಯ ಮನಶ್ಯಾಂತಿಯ ರೀತಿಯಲ್ಲಿ, ಮಾನವರು, ಮನಶ್ಯಾಂತಿಯನ್ನು ಪಡೆಯಲು, ಬೇರೆ ದಾರಿ ಕಾಣದೆ, ಹಲವು ಸಾಧನಾ ರೀತಿಗಳನ್ನು ಮೊರೆಹೋಗುವರು.

ಇನ್ನು, ಎರಡನೆಯ ರೀತಿಯನ್ನು ತಿಳಿಯುವ ಮೊದಲು ಕೆಲವು ಅಪರೂಪದ ಉದಾಹರಣೆಗಳನ್ನು ನೋಡಬೇಕಾಗಿದೆ. ನೋಡಿ, ಕೆಲವರು ಭೀಕರ ಕೊಲೆಯನ್ನು ಮಾಡಿದ ನಂತರ ಬಹಳ ಶಾಂತವಾಗಿ ಇರುವುದನ್ನು ನೀವು ದೂರದರ್ಶನದಲ್ಲಿ ನೋಡಿರಬಹುದು. ಇನ್ನು, ಹೆಚ್ಚಿನ ಕಳ್ಳರು ಕೂಡಾ ಚಿಂತೆ ಇಲ್ಲದೆ ಚೆನ್ನಾಗಿ ನಿದ್ರೆ ಮಾಡುವವರೇ ಆಗಿರುವರು! ಹಾಗಿದ್ದರೆ, ಇವರ ಮನಸ್ಸು ಹೇಗೆ ಇತರರಿಗಿಂತಲೂ ಶಾಂತವಾಗಿದೆ? ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಂಥವರಿಗೆ ಮನಶ್ಯಾಂತಿ ಎಲ್ಲಿಂದ ಬಂತು? ಇದಕ್ಕೆ ಉತ್ತರ, ಕ್ರೌರ್ಯದ ಹಾಗೂ ಅನೈತಿಕತೆಯ ಸಹಾಯದಿಂದ ಆ ರಹಸ್ಯ ಪ್ರಾಚೀನ ವಾಮಾಚಾರವು ಚಿಂತನೆ, ಭಾವನೆ, ಕಲ್ಪನೆ ಇಲ್ಲದಂತೆ ಮಾಡಿ ಅವರ ಮನಸ್ಸನ್ನು ಆ ಸ್ಥಿತಿಗೆ ಬೇಕುಬೇಕೆಂದೇ ತಂದು ಇಟ್ಟಿರುವುದು ಎಂದಾಗಿದೆ! ಇದನ್ನು, ಸಾಮಾನ್ಯ ಬಾಷೆಯಲ್ಲಿ, ‘ಪಾಪಪ್ರಜ್ಞೆ ಇಲ್ಲದ ಸ್ಥಿತಿ’ ಎಂದು ಕರೆಯುವರು. ಇಂಥವರಿಗೆ ಇರುವ ಮನಶ್ಯಾಂತಿಯು ಆ ಎರಡನೆಯ ರೀತಿಯದ್ದಾಗಿದೆ.

ಇನ್ನು, ಮೂರನೆಯ ರೀತಿಯ ಮನಶ್ಯಾಂತಿಯು, ನಾವು ಈಗಾಗಲೇ ತಿಳಿದಿರುವ ಮಹಾಜೀವನದ ಸಾಧನೆಗಳಿಂದ ಬರುವ ಆ ಜೀವನಶಾಂತಿಯಿಂದ ಲಭಿಸುವ ‘ಶಾಶ್ವತ ಮನಶ್ಯಾoತಿ’ ಎಂದು ತಿಳಿಯಬೇಕು.

ಈ ಪಾಪಪ್ರಜ್ಞೆ ಇಲ್ಲದ ರೀತಿಯ ಮಾನವರ ಮನಶ್ಯಾಂತಿಯು ಈಗೀಗ ಬಹಳ ವೇಗವಾಗಿ ಹೆಚ್ಚುತ್ತಿರುವುದು ನಮಗೆಲ್ಲಾ ತಿಳಿದ ವಿಚಾರವಾಗಿದೆ. ಮಗುವನ್ನು ತಾಯಿ ಕಲ್ಲು ಬಂಡೆಗೆ ಹೊಡೆದು ಕೊಂದರೂ, ಆ ವ್ಯಕ್ತಿಯ ಶಾಂತವಾದ ಮುಖ, ವರ್ತನೆ, ಇತ್ಯಾದಿಗಳು ಬೆಚ್ಚಿಬೀಳಿಸುವುದು!

ಹೀಗಿರಲು, ಈ ಮೂರು ರೀತಿಯ ಮನಶ್ಯಾಂತಿಗಳಲ್ಲಿ ಮಾನವರ ಜೀವನಕ್ಕೆ ಪೂರಕ, ರಕ್ಷಕ, ಹಾಗೂ ಪರಿಶುದ್ಧವಾದ ಮನಶ್ಯಾಂತಿಯು ಯಾವುದೆಂದು ನೀವೇ ಆಲೋಚಿಸಿ ತಿಳಿದುಕೊಳ್ಳಿರಿ.

 ******************

ಪ್ರಶ್ನೆ- ಮನಶ್ಯಾಂತಿ, ಸಂತೃಪ್ತಿ, ಸಮಾಧಾನ, ನೆಮ್ಮದಿ, ಸಂತೋಷ, ಆನಂದ, ಇವುಗಳ ವ್ಯತ್ಯಾಸಗಳೇನು?

ಉತ್ತರ- ನೋಡಿ, ಈ ಮೇಲಿನ ಯಾವುದಾದರೂ ಒಂದರ ಅರ್ಥವನ್ನು ನಿಘಂಟುವಿನಲ್ಲಿ ಹುಡುಕಿದರೆ, ಅದರ ಸಮಾನಾರ್ಥವಾಗಿ ಇತರ ಎಲ್ಲ ಶಬ್ದಗಳು ಕಾಣಿಸಬಹುದು. ಅಂದರೆ, ಅಲ್ಲಿ ಆಳದಲ್ಲಿರುವ ಅವುಗಳ ವ್ಯತ್ಯಾಸಗಳನ್ನು ನೋಡುವುದಿಲ್ಲ ಎಂದು ಅರ್ಥ. ಈಗ ನಾವು, ಸ್ವಲ್ಪ ಮುಂದೆ ಹೋಗಿ, ಅವುಗಳೊಳಗಿನ ಆ ನಿಜವಾದ ವ್ಯತ್ಯಾಸಗಳು ಏನು ಎಂಬುದನ್ನು ನೋಡೋಣ. ಇದಕ್ಕೆ ಆ ಎಲ್ಲಾ ಶಬ್ದಗಳ ನಿರ್ವಚನೆಗಳನ್ನು ಸ್ವಲ್ಪ ವೈಜ್ಞಾನಿಕ ರೀತಿಯಲ್ಲಿ ನೋಡಿದರೆ ಸಾಕಾಗುವುದು.

1. ಮನಶ್ಯಾಂತಿ- ಮನಸ್ಸಿನಲ್ಲಿ ಕಲ್ಪನೆ, ಭಾವನೆ, ಆಲೋಚನೆ ಕಡಿಮೆ ಅಥವಾ ಇಲ್ಲದಾಗುವಾಗ ಉಂಟಾಗುವುದು.

2. ಸಂತೃಪ್ತಿ- ಅಗತ್ಯಗಳು ಅಥವಾ ಆಸೆಗಳು ಈಡೇರುವಲ್ಲಿ ಸೃಷ್ಟಿಯಾಗುವುದು.

3. ಸಮಾಧಾನ- ತೀವ್ರತೆಯ ಕಷ್ಟ ನೋವುಗಳು ಕಡಿಮೆಯಾಗುವಾಗ ಅವುಗಳ ಪರಿಹರಿಸಲ್ಪಟ್ಟ ಭಾವನೆ.

4. ನೆಮ್ಮದಿ- ತನಗೆ ಈಗ ತೊಂದರೆಗಳು ಏನು ಇಲ್ಲ ಎನ್ನುವಾಗ ಉಂಟಾಗುವ ಒಂದು ತರದ ಉಪಶಮನದ ಅನುಭವ.

5. ಸಂತೋಷ- ಇಂದ್ರಿಯ ಅಥವಾ ಇತರ ರೀತಿಗಳಲ್ಲಿಟ್ಟು, ಯಾವುದಾದರೂ ಒಂದು ಅಥವಾ ಹೆಚ್ಚು ರೀತಿಗಳಲ್ಲಿ, ‘ತನಗೆ ಒಳಿತಾಯಿತು’ ಅಥವಾ ‘ತನಗೆ ಲಾಭವಾಯಿತು’ ಎಂಬುವುದನ್ನು ಪ್ರಕಟಗೊಳಿಸುವ ಆ ತೀವ್ರತರದ ಭಾವನೆಗಳು.

6. ಆನಂದ- ಸಂತೋಷದ ಭಾವನೆಯ ಆ ‘ತೀವ್ರತೆ ಇಲ್ಲದ’ ಬಹಳ ಸೌಮ್ಯದ ರೂಪವಾಗಿದೆ.

ಪ್ರಶ್ನೆ- ದಿವ್ಯಜ್ಞಾನ ಸನ್ನಿಧಿಯ ಬಗ್ಗೆ ಮಾತನಾಡುವಾಗ, ಅಲ್ಲಿ, ಕೊನೆಗೆ ಒಂದು ಮುಖ್ಯ ಸೂಚನೆ ಅಥವಾ ಎಚ್ಚರಿಕೆಯನ್ನು ಕೂಡಾ ಜನರಿಗೆ ಕೊಡಬೇಕಾಗುವುದು ಅದು ಯಾವುದು?

ಉತ್ತರ- ದಿವ್ಯಜ್ಞಾನ ಸನ್ನಿಧಿಯು ಶಾಲೆ, ಕಾಲೇಜುಗಳು ತರ ಇರುವವುಗಳಾಗಿವೆ. ಶಾಲಾ ಕಾಲೇಜುಗಳಲ್ಲಿ, ಅದೆಷ್ಟೋ ವಿದ್ಯಾರ್ಥಿಗಳು ಕಲಿತು ಉತ್ತೀರ್ಣರಾಗಿ ದೊಡ್ಡ, ಚಿಕ್ಕ ಎಂದು ಹಲವು ಹಲವು ಹುದ್ದೆಗಳನ್ನು ಪಡೆಯುತ್ತಾ ಅವರ ಆ ಕಲಿಯುವಿಕೆಯ ಲಾಭವನ್ನು ಮಾಡಿಕೊಳ್ಳುವರು. ಆದರೆ, ಹಲವರು ಲಾಭ ಮಾಡದೆ ಅಥವಾ ಕಲಿಯದೆ, ಸೋತು, ಪೋಲಿಗಳಾಗಿ ತಿರುಗುವವರೂ ಇರುವರು. ಇಲ್ಲಿ, ಶಾಲಾ ಕಾಲೇಜು ಎಲ್ಲರಿಗೂ ಸಮಾನವಾಗಿ ಅವುಗಳ ಕರ್ತವ್ಯಗಳನ್ನು ಮಾಡುತ್ತಿವೆ, ಆದರೆ ಸೋಲುವುದು ಹಾಗೂ ಪೋಲಿ ಆಗುವುದು ವಿಧ್ಯಾರ್ಥಿಗಳ ತೀರ್ಮಾನಗಳನ್ನು ಹೊಂದಿಕೊಂಡಿರುವುದು ಎಂದು ತಿಳಿಯಬೇಕು. ಇದೇ ರೀತಿ, ದಿವ್ಯಜ್ಞಾನ ಸನ್ನಿಧಿಯು ಎಲ್ಲರಿಗೂ ಅದರ ಸೇವೆಯನ್ನು ಸಮಾನವಾಗಿ ಮಾಡುವುದು ಆದರೆ ದಿವ್ಯಜ್ಞಾನ ಸನ್ನಿಧಿಗೆ ಬಂದು ಆ ಸೇವೆಯ ಲಾಭವನ್ನು ಸತ್ಯಸಂಧವಾಗಿ ಮಾಡದೆ ಇದ್ದಲ್ಲಿ, ಎಷ್ಟು ವರುಷ ಕಳೆದರೂ, ಸ್ವಭಾವದಲ್ಲಿ ಬದಲಾವಣೆ ಆಗಲಾರದು. ಹಾಗಿರುವವರು, ಅವರ ಹುಟ್ಟು ಸ್ವಭಾವದ ಪ್ರಲೋಭನೆ ಮತ್ತು ತಮ್ಮ ಮನಸ್ಸಿನೊಳಗಿಂದ ಕಾಡುವ ಆ ರಹಸ್ಯ ವಾಮಾಚಾರದ ಪ್ರಲೋಭನೆ ಇವುಗಳಿಗೆ ಒಳಗಾಗಿ ಕೆಟ್ಟ ದಾರಿಯನ್ನು ಹಿಡಿಯುವ ಸಾಧ್ಯತೆಯೂ ಇರುವುದು.

ಒಟ್ಟಲ್ಲಿ, ಶಾಲಾ ಕಾಲೇಜುಗಳ ತರ, ದಿವ್ಯಜ್ಞಾನ ಸನ್ನಿಧಿ ಮತ್ತು ಮಹಾಜೀವನಗಳು ಕೂಡಾ ಅದಕ್ಕೆ ಜವಾಬ್ಧಾರಿ ಆಗುವುದಿಲ್ಲ. ಇದುವೇ, ಆ ಮುಖ್ಯ ಎಚ್ಚರಿಕೆಯಾಗುವುದು. ಆದುದರಿಂದ, ‘ಉತ್ತಮ ಗುಣ’ ಎಂಬ ಚಿನ್ನದ ನಿಧಿಯ ಬಳಿಗೆ ಕರಕೊಂಡು ಹೋಗುವ ಪಾತ್ರ ಮಾತ್ರ ದಿವ್ಯಜ್ಞಾನ ಸನ್ನಿಧಿಗಳಿಗೆ ಅಥವಾ ಮಹಾಜೀವನಕ್ಕೆ ಇರುವುದು, ಆದರೆ ಅಲ್ಲಿ ಚಿನ್ನವನ್ನು ಬಾಚಿಕೊಳ್ಳಬೇಕೋ, ಬೇಡವೋ, ಎಂಬುವುದು ಅವರವರಿಗೆ ಬಿಟ್ಟದ್ದಾಗಿದೆ. ಬಾಚಿದವನ ಬಾಳು ಬಂಗಾರ, ಆದರೆ, ಅಹಂಕಾರ ಮತ್ತು ಭ್ರಮೆಯಲ್ಲಿ, ತನ್ನ ಆಸಕ್ತಿಗಳೇ ಬಂಗಾರವಾಗಿ ಕಂಡರೆ, ಆಗುವುದು ಆ ವ್ಯಕ್ತಿಯ ಬಾಳು ಅಂಗಾರ.

 *******************

ಆ ಭಯಾನಕ ರಹಸ್ಯ ಸೂಕ್ಷ್ಮ ವಾಮಾಚಾರವು ಆ ಕೊನೆಯ ಮತ್ತು ವ್ಯಕ್ತಿತ್ವದ ಅತಿ ಮೂಲವಾದ ನಮ್ಮ ಮನಸಾಕ್ಷಿಯೊಳಗೂ ಹೋಗಿ ಅಡಗುತ್ತದೆ. ಆದುದರಿಂದ, ಹೆಚ್ಚಿನ ಸಮಯಗಳಲ್ಲೂ ಮನುಷ್ಯನು ‘ತಾನು ಸರಿ’ ಎಂದು ತಿಳಿದುಕೊಳ್ಳುವುದು, ಮತ್ತು ತನ್ನನ್ನು ತಾನು ಆತ್ಮಪರಿಶೋಧನೆ ಸರಿಯಾದ ರೀತಿಯಲ್ಲಿ ಗುರಿಪಡಿಸದಿರುವುದು. ಹೌದು, ಈ ಭಯಾನಕ ಮೋಸದಿಂದ ಪಾರಾಗಲು ಇನ್ನಿರುವುದು, ಮಹಾಜೀವನ ಹಾಕಿಕೊಟ್ಟಿರುವ ದಾರಿಗೆ ಸತ್ಯಸಂಧವಾಗಿ ಅಗಾಗ್ಗ ನಾವು ನಮ್ಮನ್ನು ತಂದುಕೊಳ್ಳುವುದು ಆಗಿದೆ. ಇದಕ್ಕೆ ದುರ್ಬಲ ಅಲ್ಲದ ಆ ದೃಢ ಸಂಕಲ್ಪಗಳು ಬೇಕಾಗಿಬರುವವು ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿ ಇಲ್ಲವಲ್ಲಾ. ಮನುಷ್ಯನು ಈ ಭೂಮಿಯಲ್ಲಿ ವಿಕಾಸಹೊಂದಿ ಲಕ್ಷ ಲಕ್ಷ ವರುಷಗಳು ಆದವು. ಇನ್ನೂ, ಮನೆ ಜಗಳಗಳೂ ಸೇರಿ ಯಾವ ಜಗಳಗಳೂ ನಿಂತಿಲ್ಲ ಬದಲು ಮೊದಲಿಗಿಂತಲೂ ಬಹಳ ಹೆಚ್ಚಾಗಿವೆ ಎಂದರೆ ಆ ಪ್ರಭಾವಗಳು ಆ ಭೀಕರ ಸೂಕ್ಷ್ಮ ವಾಮಾಚಾರ ಶಕ್ತಿಗಳಿಂದಲೇ ಕೊಡಲ್ಪಡುವುದು ಎಂಬುವುದು ಖಂಡಿತವಾಗುವುದು .

 ______________

ಚುಟುಕಾಗಿ ಹೇಳುವುದಾದರೆ, ಮನಸ್ಸು, ಮನೆ, ಸಮಾಜ, ಎಂದು ಎಲ್ಲವೂ ‘ಶುಚಿಯಾದ ನಾಡು’ ಆಗಿರಬೇಕಾದುದು ಆಗಿದೆ. ದುರದೃಷ್ಟವಶಾತ್, ದ್ವೇಷ, ಹಿಂಸೆ, ಕ್ರೌರ್ಯ, ಇತ್ಯಾದಿಗಳ ಕಾಡುಗಳು, ಅವುಗಳಲ್ಲಿ ಹಬ್ಬಿ ತುಂಬಿ, ಅವು ಕ್ರೂರತೆಯ ಆ ಮೃಗತ್ವತುಂಬಿದ ವನ್ಯಜೀವಿಗಳ ಕಾಡುಗಳಾಗಿ ಪರಿಣಮಿಸಿರುತ್ತವೆ. ಮಾನವನಿಗೆ ಈ ಭೀಕರವಾಗಿ ಹಬ್ಬುತ್ತಿರುವ ಕ್ರೌರ್ಯದ ಕಾಡುಗಳಿಂದ ಪಾರಾಗಬೇಕಾದರೆ, ಇನ್ನಿರುವ ಆ ಏಕ ಮಾರ್ಗವು ಮಹಾಜೀವನವಾಗುವುದು ಎಂಬುದರಲ್ಲಿ ಸಂಶಯವಿಲ್ಲ.

 ****************

ಆ ರಹಸ್ಯ ಪ್ರಾಚೀನ ವಾಮಾಚಾರವು ದ್ವೇಷ, ಜಗಳ ಇತ್ಯಾದಿಗಳನ್ನು ಸೃಷ್ಟಿಸುವಲ್ಲಿ ಮಾತ್ರ ಕೆಲಸಮಾಡುತ್ತಿರುತ್ತವೆ. ಇದು ಅವುಗಳಿಗೆ ಸಂಬಂಧಿಸಿ ಹೊಸತೇನು ಅಲ್ಲ. ರಾಮಾಯಣ, ಮಹಾಭಾರತ ಯುದ್ಧಗಳಿಗೆ ಈ ಮನೆಜಗಳಗಳು ಪರೋಕ್ಷವಾಗಿ ಮತ್ತು ನೇರವಾಗಿ ಕಾರಣವಾಗಿಲ್ಲವೇ? ಹೀಗಿರುವಾಗ, ಮಹಾಜೀವನವು ಹೇಳುವುದೇನೆಂದರೆ, ಮನೆಯ ಎಲ್ಲರೂ ಒಟ್ಟಿಗೆ ಅವುಗಳ ಜಗಳ ಸೃಷ್ಟಿಮಾಡುವ ಮೋಸದ ಬಗ್ಗೆ ಯಾವಾಗಲೂ ಜಾಗ್ರತರಾಗಿರಬೇಕು ಎಂದಾಗುವುದು. ಮಾತ್ರವಲ್ಲ, ಇದು, ಮಹಾಜೀವನದ ಆ ಮುಖ್ಯವಾದ ಸಾಧನೆಗಳಲ್ಲಿ ಒಂದು ಸಾಧನೆ ಎಂದು ಎಲ್ಲರೂ ಖಂಡಿತವಾಗಿಯೂ ತಿಳಿದು ಜೀವಿಸಬೇಕು ಎಂದಾಗಿದೆ.

 ******************

ಎಲ್ಲೆಡೆಯೂ ನಾವು ಈ ಭೀಕರ ರಹಸ್ಯ ವಾಮಾಚಾರದ ಕೈವಾಡವನ್ನು ಕಾಣುವೆವು. ಈಗೀಗ, ಮುಖ್ಯವಾಗಿಯೂ, ಅವು ಮನೆಯೊಳಗಿನ ದ್ವೇಷ, ಜಗಳಗಳಿಗೆ ಹೆಚ್ಚು ಒತ್ತು ಕೊಡುತ್ತಾ ಬರುವವು. ಈ ಸತ್ಯವನ್ನು, ದಿನಪತ್ರಿಕೆಗಳಲ್ಲಿ ಬರುವ, ತಾಯಿ ತನ್ನ ಮಗುವನ್ನು ಕೊಲ್ಲುವುದೂ ಸೇರಿ, ಮನೆಯೊಳಗಿನ ಎಲ್ಲಾ ಸಂಬಂಧಗಳೊಳಗಿನ ಕೊಲೆಗಳ ಪ್ರಕರಣಗಳ ಹೆಚ್ಚುವಿಕೆಯ ಹಿನ್ನೆಲೆಯಲ್ಲಿ ಅರಿತುಕೊಳ್ಳಬಹುದು. ಆದುದರಿಂದ, ಮಹಾಜೀವನದಲ್ಲಿ ಎಲ್ಲರೂ ಬಹಳ ಜಾಗೃತರಾಗಿ ಅವುಗಳ ಮೋಸದಿಂದ ಪಾರಾಗಲು ದೃಢಸಂಕಲ್ಪವನ್ನು ಮಾಡುವುದು ಅನಿವಾರ್ಯವಾಗುವುದು.

 ********************

ಆ ರಹಸ್ಯ ಪ್ರಾಚೀನ ವಾಮಾಚಾರವು, ಶಿಲಾಯುಗದಿಂದಲೇ, ಎಲ್ಲವನ್ನು ಭೂಮಿಯಲ್ಲಿ ಅವುಗಳಿಗೆ ಬೇಕಾಗುವ ತರದಲ್ಲಿ ಬೆಳೆಸಿ ತಂದಿದೆ. ಮಾನವರು, ಅವುಗಳ ವಿಧಿಯ ರೀತಿಯಲ್ಲಿ ಅನುಭವಿಸುತ್ತಾ ಜೀವಿಸುವರು, ಮತ್ತು ಜಾಗತಿಕ ಆಗುಹೋಗುಗಳು, ಜಾಗತಿಕ ರೀತಿಯ, ಇನ್ನೊಂದು ಅವುಗಳ ವಿಧಿಯ ರೀತಿಯಾಗಿರುವುದು! ಒಟ್ಟಲ್ಲಿ, ಎಲ್ಲವೂ ಅವುಗಳ ಪೂರ್ವ ನಿಶ್ಚಿತ ಕತೆಗಳಾಗಿವೆ. ಆದರೆ, ಮಾನವನ ಸ್ವಭಾವದ ಭಾಗವನ್ನು ಮಾನವನಿಗೆ ನಿಯಂತ್ರಿಸಲು ಸಾಧ್ಯವಾಗುವ ಕಾರಣ, ಆ ಮೂರು ರೀತಿಗಳ ಜ್ಞಾನಗಳು ಮತ್ತು ದೃಢ ಸಂಕಲ್ಪಗಳು ಸೇರಿರುವ ಮಹಾಜೀವನ ಸಾಧನೆಗಳಿಗೆ ಮಾತ್ರ ಒಳಗಿಂದ ಅವುಗಳು ಸೃಷ್ಟಿಸುವ ಆ ಸ್ವಭಾವ ನಾಶದ ಪ್ರೇರಣೆಯಿಂದ ಮಾನವರನ್ನು ಪಾರು ಮಾಡಲು ಸಾಧ್ಯವಾಗುವುದು ಎಂದು ತಿಳಿಯಬೇಕು.

 ********************

ತೀರ್ಮಾನ ಎಂದರೇನು? ತೀರ್ಮಾನ ಎಂದರೆ ಅದು ಬೇಕು ಬೇಡಗಳಲ್ಲಿ ಬೇಕು ಎಂಬುವುದನ್ನು ಕೊನೆಯದಾಗಿ ಆರಿಸಿಕೊಳ್ಳುವುದಾಗಿದೆ. ಆ ಕೊನೆಯ ತೀರ್ಮಾನವು, ಕೆಲವೊಮ್ಮೆ ಒಳಿತು ಅಥವಾ ಇನ್ನೂ ಕೆಲವೊಮ್ಮೆ ಕೆಡುಕು ಆಗಿರಬಹುದು, ಆದರೆ, ಒಟ್ಟಲ್ಲಿ, ಮಾತು, ಶರೀರ ಕ್ರಿಯೆಗಳನ್ನು ಮಾಡಬೇಕು ಎಂಬಲ್ಲಿಗೆ ತೀರ್ಮಾನವು ತಂದಿಡುತ್ತದೆ ಎಂದು ಅರಿಯಬೇಕು. ನೋಡಿ, “ನಾನು ಇನ್ನೂ ತೀರ್ಮಾನ ಮಾಡಿಲ್ಲ” ಎಂದು ಹೇಳುವಾಗ ಅಲ್ಲಿ ಯಾವುದೇ ರೀತಿಯ ಕ್ರಿಯೆಯು ಉಂಟಾಗಲು ಸಾಧ್ಯವಾಗುವುದೇ? “ಇಲ್ಲ”, ಎಂಬುವುದೇ ಉತ್ತರ. ಒಟ್ಟಲ್ಲಿ ಒಳಿತು, ಕೆಡುಕು ಅಥವಾ ವ್ಯರ್ಥ ಇವು ಮೂರರಲ್ಲಿ ಯಾವುದಾದರೂ ಒಂದು ಕೆಲಸ ನೆರವೇರಬೇಕಿದ್ದರೆ ತೀರ್ಮಾನವು ಬೇಕಾಗುವುದು ಎಂದು ತಿಳಿಯಬೇಕು.

ಇನ್ನು, ಜನಸಾಮಾನ್ಯರು ಈ ತೀರ್ಮಾನಗಳನ್ನು ಬಹಳ ಹಗುರವಾಗಿ ಕಾಣುವರು, ಮತ್ತು ಭೀಕರವಾದ ಅವುಗಳ ಪರಿಣಾಮಗಳನ್ನು ಅದೇ ಕಾರಣದಿಂದಾಗಿ ಅನುಭವಿಸುವರು. ಅಚ್ಚರಿ ಎಂದರೆ, ಹೆಚ್ಚಿನ ಕಡೆಗಳಲ್ಲೂ ಅವರಿಗೆ ತಿಳಿದಿರುವುದಿಲ್ಲ ಅದು ಅವರ ತೀರ್ಮಾನಗಳಿಂದಲೇ ಸೃಷ್ಟಿಯಾಗಿರುವುದು ಎಂದು!!

ಇನ್ನು, ಮಹಾತ್ಮರುಗಳು ಜನಸಾಮಾನ್ಯರ ರೀತಿಯನ್ನು ಅನುಸರಿಸುವುದಿಲ್ಲ. ಅವರು, ಜೀವನದ ತೀರ್ಮಾನಗಳಿಗೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಡುವರು. ಮಾತ್ರವಲ್ಲ, ಮಹಾಜೀವನ ದಾರಿಯ ಆ ಸತ್ಯದ ಹಿನ್ನೆಲೆಯ ತೀರ್ಮಾನಗಳನ್ನೇ ಎಲ್ಲಾ ಕಡೆಗಳಲ್ಲೂ ತೆಗೆದು, ತಮ್ಮ ಜೀವನ ಗಾಡಿಯು ಅಲ್ಲಲ್ಲಿ ಅಪಘಾತಕ್ಕೆ ಒಳಗಾಗುವುದನ್ನು ತಪ್ಪಿಸಿ ಆ ದೊಡ್ಡ ಜೀವನಲಾಭವನ್ನು ಮಾಡಿಕೊಳ್ಳುವರು!

 ******************

ತೀರ್ಮಾನವು ಯಾವುದೇ ಕೆಲಸವನ್ನು ಆರಂಭಿಸಲು ಬೇಕಾಗಿರುವ ಆ ವ್ಯಕ್ತಿತ್ವದ ಒಪ್ಪಿಗೆಯಾಗಿದೆ. ಇಲ್ಲಿ ಒಂದು ಮುಖ್ಯ ಅಂಶ ಇರುವುದು. ಅದೇನೆಂದರೆ, ಈ ತೀರ್ಮಾನವು ಯಾವ ಹಿನ್ನೆಲೆಯಲ್ಲಿ ಅಥವಾ ಯಾವ ಆಧಾರದ ಮೇಲೆ ನಡೆಯುತ್ತದೆ ಎಂಬುವುದೇ ಆ ಮುಖ್ಯ ಅಂಶವಾಗಿರುವುದು. ನೋಡಿ, “ಸಿಗರೇಟ್ಟು ಸೇದೋಣ” ಎಂಬ ಹುಡುಗನ ಆ ಮೊದಲ ತೀರ್ಮಾನವು ಆತನನ್ನು ಆ ಚಟಕ್ಕೆ ಇಳಿಸುವುದು. ಗಾಂಜಾ, ಶರಾಬು, ಇತ್ಯಾದಿಗಳ ಚಟಗಳು ಮತ್ತು ಅವುಗಳ ಭೀಕರ ಪರಿಣಾಮಗಳಾದ ರೋಗಗಳು ಮತ್ತು ಜೀವನ ದುರಂತಗಳು ಇದೇ ತೀರ್ಮಾನಗಳ ಕಾರಣದಿಂದಾಗಿಯೇ ಆಗುವುದು ಎಂದಿರಲು, ತೀರ್ಮಾನಗಳನ್ನು ಹಗುರವಾಗಿ ತೆಗೆಯುವುದು ಎಷ್ಟು ಅಪಾಯಕಾರಿ ಎಂದು ನಿಮಗೇ ಅಂದಾಜಿಸಬಹುದಾಗಿದೆ. ಜನತೆ ಇನ್ನಾದರೂ, ಕಣ್ಣು ಮುಚ್ಚಿ, ‘ಆಚಾರ ನಂಬಿಕೆಗಳೇ ಜೀವನವನ್ನು ನಿರ್ಧರಿಸುವುದು’ ಎಂಬ ತಪ್ಪು ತಿಳುವಳಿಕೆಯಿಂದ ಹೊರಬರಬೇಕಾಗಿರುವುದು. ಮಾತ್ರವಲ್ಲ, ಸ್ವಭಾವದಲ್ಲಿ ಉತ್ತಮರನ್ನಾಗಿ ಮಾಡುವ, ಉತ್ತಮರ ಅಥವಾ ಮಹಾತ್ಮರ ಸತ್ಸಂಗವನ್ನು ಪಡೆಯಬೇಕಾಗಿದೆ. ಹಾಗೆ ಆದಲ್ಲಿ, ಆ ಹಿನ್ನೆಲೆಯಲ್ಲಿ, ತಮ್ಮ ತಮ್ಮ ಜೀವನದ ಎಲ್ಲಾ ಹಂತಗಳಲ್ಲಿನ ತೀರ್ಮಾನಗಳನ್ನು ಸರಿಯಾದ ರೀತಿಯಲ್ಲಿ ತೆಗೆಯುವ ಆ ಸದಾವಕಾಶವು ಅವರಿಗೆ ಒದಗಿ ಬರುವುದು. ಹೀಗೆ, ತಮ್ಮ ಜೀವನವು ಸರ್ವನಾಶವಾಗುವುದನ್ನು ಅವರಿಗೆ ತಡೆಹಿಡಿದು, ಅನಂದದ ಜೀವನವನ್ನು ಪಡೆಯಲು ಸಾಧ್ಯವಾಗುವುದು! ನಮಗೆ ತಿಳಿದಂತೆ, ದಿವ್ಯಜ್ಞಾನ ಸನ್ನಿಧಿಗಳು ಈ ಮಹಾತ್ಮರ ಸತ್ಸಂಗವನ್ನು ಜನತೆಗೆ ದೊರಕಿಸುವಲ್ಲಿ ಅದರ ಸೇವೆಯನ್ನು ಸದಾ ಮಾಡುತ್ತಿರುವ ಸೇವಾತಾಣಗಳಾಗಿವೆ.

 *********************

ತೀರ್ಮಾನಗಳು ಜೀವನದ ಒಂದೊಂದು ಘಟನೆಯ ಫಲಗಳನ್ನು ನಿರ್ಧರಿಸುತ್ತಾ, ಒಬ್ಬ ವ್ಯಕ್ತಿ ಸಾಯುವ ತನಕವೂ, ಕೆಲಸ ಮಾಡುವುದು. ಅಂದರೆ, ಒಬ್ಬ ವ್ಯಕ್ತಿಯು ತೆಗೆಯುವ ಪ್ರತಿ ತೀರ್ಮಾನಗಳು ಆತನ ಜೀವನದ ದಿಕ್ಕನ್ನು ಸೇರಿ ಸರ್ವವನ್ನೂ ನಿಯಂತ್ರಿಸುತ್ತದೆ ಎಂದು ಅರ್ಥ. ಒಬ್ಬನು ಡಾಕ್ಟರ್ ಆಗಬೇಕೆಂದು ಮೊದಲು ತೀರ್ಮಾನಿಸಿ ಅನಂತರ ಅದನ್ನು ತಪ್ಪಿಸಿ ವಕೀಲನಾಗಬೇಕೆಂದು ಮರುತೀರ್ಮಾನಿಸಿದರೆ ಆತ ವಕೀಲನಾಗುವನು. ಏನು ಅಚ್ಚರಿ ನೋಡಿ, ಬಿಳಿಕೋಟು ಧರಿಸಬೇಕಾದವನು ಕಪ್ಪುಕೋಟು ಹಾಕುವನು! ಮಾನವನ ಕೈಯಲ್ಲಿರುವ ಸರ್ವ ತೀರ್ಮಾನಗಳು ಕೂಡಾ ಇದೇ ರೀತಿಯಲ್ಲಿ ಇರುವವು ಎಂದು ಇದರ ಅರ್ಥ.

ಒಳಿತು, ಕೆಡುಕು ಎಂಬುವುದರಲ್ಲಿ ಒಳಿತಿನ ತೀರ್ಮಾನವು ನಿಜವಾಗಿಯೂ ಮಾನವನ ನೆಮ್ಮದಿ, ಶಾಂತಿ, ಆನಂದದ ಜೀವನಕ್ಕೆ ಕಾರಣವಾಗುವುದು ಎಂದು ನಮಗೆ ತಿಳಿದಿದೆ. ಅಚ್ಚರಿ ಎಂದರೆ, ಜನಸಾಮಾನ್ಯರು ಒಳಿತು ಎಂದರೆ ಏನು ಎಂಬುದನ್ನೇ ಗಮನಿಸುವುದಿಲ್ಲ, ಅದರ ಬದಲು, ತಾತ್ಕಾಲಿಕ ಸುಖದ ಬಗ್ಗೆ ಚಿಂತಿಸುವರು. ಇದು ಅವರ ಜೀವನಶಾಂತಿಯನ್ನು ನುಚ್ಚುನೂರು ಮಾಡುವುದು. ಈ ತೊಂದರೆಯು ಜನಸಾಮಾನ್ಯರಲ್ಲಿ ಸಾಮಾನ್ಯವಾಗಿದೆ. ಆದುದರಿಂದ, ಯಾವೊಬ್ಬ ವ್ಯಕ್ತಿಗಾದರೂ, ಜೀವನಶಾಂತಿಯು ಬೇಕಿದ್ದಲ್ಲಿ, ಮಹಾತ್ಮರ ರೀತಿಯ ಆ ಸತ್ಯದ ಹಿನ್ನೆಲೆಯ ತೀರ್ಮಾನಗಳೇ ಬೇಕಾಗಿರುವುದು ಮತ್ತು ಬೇರೆ ಯಾವುದೂ ಅದಕ್ಕಿರುವ ದಾರಿ ಆಗುವುದಿಲ್ಲ ಎಂದು ತಿಳಿಯಬೇಕು.

 *********************

ಇನ್ನು ಮಹಾಜೀವನ ಸಾಧನೆಗಳ ಬಗ್ಗೆ ಹೇಳುವಾಗಲೂ, ಅಲ್ಲಿ ಆ ಸಾಧನೆಗಳಲ್ಲಿ ಮೊದಲು ಬರುವುದು ತಾನು ಮಹಾಜೀವನ ನಡೆಸಿ ಅದರ ಲಾಭವನ್ನು ಪಡೆಯಬೇಕೋ ಬೇಡವೋ ಎಂಬ ಆ ತೀರ್ಮಾನವಾಗಿದೆ. ಇದನ್ನು ಯಾಕೆ ಒತ್ತಿ ಹೇಳಬೇಕಾಗುತ್ತದೆ ಎಂದರೆ, ಈ ತೀರ್ಮಾನವು ಮಹಾಜೀವನದ ಬಗ್ಗೆ ಸರಿಯಾಗಿ ಅರಿತು ಆಮೇಲೆ ಮಾಡಬೇಕಾದ ತೀರ್ಮಾನವಾಗಿರುವುದು. ಒಂದು ಪ್ರತ್ಯೇಕ ಸಮಯದ ಆವೇಶದ ತೀರ್ಮಾನವಾದರೆ ಅದರಲ್ಲಿ ಆ ವ್ಯಕ್ತಿಗೆ ಹೆಚ್ಚಿನ ಲಾಭವಾಗುವುದಿಲ್ಲ. ಮಾತ್ರವಲ್ಲ, ಈ ತೀರ್ಮಾನದ ನೆನಪು ಮೊದಲು ಮೊದಲು ಒಬ್ಬ ಸಾಧಕನಿಗೆ ಅತ್ಯಗತ್ಯವಾಗಿರುವುದು. ಇದು ಆ ವ್ಯಕ್ತಿಗೆ ಯಾವಾಗಲೂ ಮಹಾಜೀವನದ ವಿಶೇಷ ಆಸಕ್ತಿಯನ್ನು ಮನದಲ್ಲಿ ಹಿಡಿದಿಡಲು ಸಾಧ್ಯವಾಗುವಂತೆ ಮಾಡುವುದು. ಒಟ್ಟಲ್ಲಿ, ಈ ತೀರ್ಮಾನ ಎಂಬುವುದು ಮಹಾಜೀವನದಲ್ಲಿ ಒಂದು ಅತಿ ಮುಖ್ಯ ಪಾತ್ರವಹಿಸುವುದು ಎಂದು ಹೇಳಬಹುದು.

 ********************

ಸತ್ಯಚಿಂತನೆ ಎಂದರೇನು? ಸತ್ಯದ ಹಿನ್ನೆಲೆಯಲ್ಲಿ ಚಿಂತಿಸುವುದು ಎಂದು ಅರ್ಥ. ಅಂದರೆ, ನಂಬಿಕೆಯ ಹಿನ್ನೆಲೆಯಲ್ಲಿ ಚಿಂತನೆ ಸಾಧ್ಯವಾಗುವುದಿಲ್ಲ ಎಂದು ಅರ್ಥ. ಉದಾಹರಣೆಗೆ “ಆ ವ್ಯಕ್ತಿ ಉತ್ತಮನು ಎಂದು ನಾನು ನಂಬುತ್ತೇನೆ” ಎಂದು ನೀವು ಹೇಳಬೇಕಾದರೆ, ನೀವು ಆ ವ್ಯಕ್ತಿಯನ್ನು ಹತ್ತಿರದಿಂದ ನೋಡಿಲ್ಲ ಮತ್ತು ನಿಜವಾಗಿಯೂ ಆತನು ಉತ್ತಮನೋ ಅಲ್ಲವೋ ಎಂದು ನಿಮಗೆ ತಿಳಿದಿಲ್ಲ ಎಂದು ಆ ಮಾತು ತಿಳಿಸುವುದು. ಅಂದರೆ, ನಿಮಗೆ ಆ ವ್ಯಕ್ತಿಯ ಪರಿಚಯ ತುಂಬಾ ಇದ್ದಲ್ಲಿ, ನೀವು ‘ನಂಬುತ್ತೇನೆ’ ಎಂಬ ಶಬ್ದವನ್ನು ಉಪಯೋಗಿಸುವುದಿಲ್ಲ, ಬದಲು ‘ನನಗೆ ಗೊತ್ತು’ ಎಂದು ಉತ್ತಮನೋ ಕೆಟ್ಟವನೋ ಎಂಬಲ್ಲಿ ಒಂದನ್ನು ಸ್ಪಷ್ಟವಾಗಿ ಹೇಳುವಿರಿ. ಈ ಕಾರಣದಿಂದ, ಸತ್ಯಚಿಂತನೆ ಎಂದಾಗ, ‘ನಮ್ಮ ನಮ್ಮ ನಂಬಿಕೆಗಳಿಗೆ ಬಿಟ್ಟ ವಿಚಾರ’ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಜಗತ್ತಿನ ಹೆಚ್ಚಿನ ಜನರು ‘ನಮ್ಮ ನಮ್ಮ ನಂಬಿಕೆಗಳಿಗೆ ಬಿಟ್ಟವಿಚಾರ’ ಎಂದು ಹೇಳುವರು ಮತ್ತು ಆದುದರಿಂದಲೇ ಅಂಥ ಆ ಬಹುಸಂಖ್ಯೆಯ ಜನಸಾಮಾನ್ಯರಿಗೆ ಸತ್ಯಚಿಂತನೆಯು ಕಷ್ಟವಾಗುವುದು. ನೋಡಿ, ಎಲ್ಲಾ ಧರ್ಮಗಳು ಕೂಡಾ ನಂಬಿಕೆ ಆಚಾರಗಳ ಒಂದು ರಾಶಿ ಮಾತ್ರ ಆಗಿದ್ದು, ಆದಿಯಿಂದಲೇ, ಜನರಿಗೆ ಕೊಡಲ್ಪಟ್ಟಿವೆ. ಹೀಗಿರಲು, ಸಾವಿರಾರು ತಲೆಮಾರುಗಳಿಂದ ಮನುಷ್ಯರು ವಿಚಾರಗಳ ಕಡೆಗೆ ಆಸಕ್ತಿಯನ್ನು ತೋರದ ಕಾರಣ, ಅನುವಂಶಿಕವಾಗಿಯೂ, ‘ನಂಬಿಕೆ ಮತ್ತು ಆಚಾರಗಳೇ ನಮಗೆ ಸಾಕು’ ಎಂಬ ಭಾವನೆಯಿಂದ ಕೂಡಿರುತ್ತಾರೆ ಎಂದು ತಿಳಿಯಬೇಕು. ಇದೇ ನೋಡಿ, ಶೋಷಿಸಲ್ಪಟ್ಟವರು ಆ ಹಿಂದಿನ ಸಹಸ್ರವರುಷಗಳಲ್ಲಿ ದಂಗೆ ಏಳದೆ ಸಹಿಸಿಕೊಂಡಿರುವುದಕ್ಕೆ ಕಾರಣ, ಮತ್ತು ಶೋಷಿಸಿದವರು ಆ ದೊಡ್ಡ ಶೋಷಣೆಯ ಲಾಭವನ್ನು ಸಹಸ್ರವರುಷಗಳು ನೆಲೆನಿಲ್ಲಿಸುವಲ್ಲಿ ಜಯಗಳಿಸಲು ಕಾರಣ ಎಂದು ತಿಳಿಯಬೇಕು. ನೋಡಿ, ಇಷ್ಟೆಲ್ಲಾ ತಡೆಗಳಿರುವುದರಿಂದಲೇ, ಸತ್ಯಚಿಂತನೆಯು ಆರಂಭದಲ್ಲಿ ಕಷ್ಟವಾಗಿ ಜನರಿಗೆ ತೋರುವುದು. ಇಲ್ಲಿ, ಒಂದನ್ನು ನಾವು ಪ್ರತ್ಯೇಕವಾಗಿ ಗಮನಿಸಬೇಕಾಗುತ್ತದೆ. ಅದೇನೆಂದರೆ, ಎಲ್ಲಾ ದೇವರುಗಳು, ಧರ್ಮಗಳು, ಆಚಾರ ನಂಬಿಕೆಗಳು, ಇತ್ಯಾದಿಗಳು ಎಲ್ಲವೂ ಸಾವಿರಾರು ವರುಷಗಳಿಂದ ಇದ್ದು ಕೂಡಾ, ಮನೆಕಲಹ, ದ್ವೇಷ, ವಿವಾಹ ವಿಚ್ಛೇಧನ, ಹಿಂಸೆ, ಕೊಲೆ, ರಕ್ತಪಾತಗಳು ಇನ್ನೂ ಹೆಚ್ಚಾಗುತ್ತಾ ಇವೆ ಎಂಬುವುದೇ ಸತ್ಯಚಿಂತನೆಯ ಅಭಾವವನ್ನು ಆಗಸದಷ್ಟು ಎತ್ತರಕ್ಕೆ ಎತ್ತಿ ತೋರಿಸುವ ಆ ಮುಖ್ಯ ಅಂಶವಾಗಿರುವುದು. ಈ ಎಲ್ಲಾ ವಾಸ್ತವತೆಗಳು ಅಥವಾ ಸತ್ಯಗಳು ಸರಿಯಾಗಿ ಬೋಧವಾಗುವಲ್ಲಿ ಮಾತ್ರ ಇನ್ನು ಮಾನವರಿಗೆ ಸತ್ಯಚಿಂತನೆಯ ಅನಿವಾರ್ಯತೆಯ ಬಗ್ಗೆ ಅರಿವಾಗಲು ಸಾಧ್ಯವಾಗುವುದು. ಈ ಅನಿವಾರ್ಯತೆಯನ್ನು ಅರಿತಾಗ ಮಾನವರು ತಾವಾಗಿ ಸತ್ಯಚಿಂತನೆಯನ್ನು ಮಾಡಲು ತೊಡಗುವರು. ಇನ್ನು, ಕೊನೆಯದಾಗಿ, ಈ ಸತ್ಯಚಿಂತನೆಯು ಮಹಾತ್ಮರ ಸಾಧನೆಗಳಲ್ಲಿ ಒಂದಾಗಿದ್ದು, ಇದನ್ನು ಮಾಡದಿದ್ದರೆ ವಿಚಾರಗಳ ಆಳದ ಅರ್ಥವಾಗುವಿಕೆ ಅಥವಾ ಭೋಧ ಆಗುವಿಕೆಯ ಹಂತಕ್ಕೆ ಸಾಧಕನಿಗೆ ತಲುಪಲು ಸಾಧ್ಯವಾಗುವುದಿಲ್ಲ. ಒಬ್ಬಾತನ ಜ್ಞಾನವು, ಬೋಧದ ಹಂತದಲ್ಲಿದ್ದರೆ ಮಾತ್ರ ಆ ವ್ಯಕ್ತಿಯು ಮಹಾತ್ಮನ ಹಂತಕ್ಕೆ ಏರಲ್ಪಡುತ್ತಾನೆ. ಒಟ್ಟಲ್ಲಿ, ಆ ಬೋಧದ ಹಂತಕ್ಕೆ ತಲುಪಲು ಸಹಾಯಕವಾಗುವ ಈ ಸತ್ಯಚಿಂತೆನೆಯು ಮಹಾತ್ಮರ ಆ ಮೂರು ಮುಖ್ಯ ಸಾಧನೆಗಳಲ್ಲಿ ಒಂದು ಎಂಬುದರಲ್ಲಿ ಸಂಶಯವೇ ಇಲ್ಲ ಎಂಬುವುದು ಇಲ್ಲಿ ಸ್ಪಷ್ಟವಾಗುವುದು.

 *************************

ತಮ್ಮ ನಂಬಿಕೆ ಆಚಾರಗಳು ಮಾತ್ರ ಸರಿ ಇತರ ಧರ್ಮ ಪಂಥಗಳದ್ದು ತಪ್ಪು ಎಂದು ತಿಳಿದುಕೊಳ್ಳುವುದು ಕೂಡಾ ನಂಬಿಕೆಯೇ ಆಗುವುದು. ಆದುದರಿಂದ ನಂಬಿಕೆಗಳು ಯಾವ ರೀತಿಯಿಂದಲೂ ಸತ್ಯಗಳು ಆಗುವುದಿಲ್ಲ ಎಂಬುವುದು ಸ್ಪಷ್ಟವಾಗುವುದು. ಅಚ್ಚರಿ ಎಂದರೆ, ಒಂದೇ ಸೃಷ್ಟಿಕರ್ತನನ್ನು ಆರಾಧಿಸುವ ಜನರು ಬೇರೆ ಬೇರೆ ಧರ್ಮ, ಪಂಥಗಳಲ್ಲಿದ್ದು ತಮ್ಮೊಳಗೆ ‘ನೀವು ತಪ್ಪು ನಾವು ಸರಿ’ ಎಂದು ಭೀಕರ ದ್ವೇಷ, ಹಿಂಸೆ, ರಕ್ತಪಾತವನ್ನು ಮಾಡುತ್ತಾ ಬಂದಿರುವುದು ಆಗಿರುವುದು! ಇಲ್ಲಿ ಎಲ್ಲಿದೆ ಸತ್ಯಚಿಂತನೆ? ನಿಷ್ಪಕ್ಷ ಸತ್ಯಚಿಂತನೆಯು ಸತ್ಯವನ್ನು ಕಾಣಲಿರುವ ಆ ಸೂಕ್ಷ್ಮ ಮತ್ತು ದೂರದರ್ಶಕಗಳಾಗಿವೆ.

ಎಲ್ಲಿ ನಂಬಿಕೆ ಇದೆಯೋ, ಅಲ್ಲಿ, ಸಮಾಜದಲ್ಲಿ, ತಾವೇ ಸರಿ ಇತರರು ತಪ್ಪು ಎಂಬ ನಂಬಿಕೆಯೂ ಅದರೊಂದಿಗೆ ಹುಟ್ಟಿಕೊಂಡು ದ್ವೇಷ, ಹಿಂಸೆ, ರಕ್ತಪಾತಗಳೆಂಬ ಪಿಶಾಚಿ-ಮರಿಗಳಿಗೆ ಅದು ಜನ್ಮ ನೀಡುತ್ತದೆ! ಧರ್ಮ, ಪಂಥಗಳು, ಈ ಕಾರಣದಿಂದಾಗಿ ಮಾತ್ರ ಪೈಶಾಚಿಕ ದ್ವೇಷ, ಹಿಂಸೆ,ರಕ್ತಪಾತಗಳನ್ನು ಇದುವರೆಗೂ ಮಾಡಿರುವುದು. ಸತ್ಯಚಿಂತನೆಯ ಅಭಾವ, ಅದು ಪ್ರೀತಿ, ದಯೆಗಳ ನಾಶದ ಆ ಭೀಕರ ಪ್ರಭಾವವಾಗಿ ಪರಿಣಮಿಸಿದೆ!!

ಸತ್ಯಕ್ಕೆ ಜಯವಾಗಲಿ, ಸತ್ಯಚಿಂತನೆಗೆ ಜಯವಾಗಲಿ.

ಮನ, ಮನೆ, ಲೋಕಶಾಂತಿಗಳ ತಾಯಿಯ ಜನನವಾಗಲಿ.

 ***************************

ಸಾಧನೆ ಎಂದಾಗಲೇ ಕಷ್ಟ ಎಂಬ ಅರ್ಥವನ್ನು ಅದು ಸೂಚಿಸುವುದು. “ಕೈ ಕೆಸರಾದರೆ ಬಾಯಿ ಮೊಸರು” ಎಂದು ಹಿಂದಿನ ಜನರು ಇದನ್ನು ಚುಟುಕಾಗಿ ಆದರೆ ಸ್ಪಷ್ಟವಾಗಿ ವಿವರಿಸಿ ತಿಳಿಸಿದ್ದಾರೆ. ಇಲ್ಲಿ, ಈಗ, ಇದಕ್ಕೆ ಸಂಬಂಧಿಸಿ, ಒಂದು ಚಿಕ್ಕ ಅಂಶ ಮಾತ್ರ ನೋಡೋಣ. ಸಾಮಾನ್ಯವಾಗಿ ಮನುಷ್ಯನು ಜೀವಿಸುವಾಗ, ಹಲವು ಸಾಧನೆಗಳನ್ನು ಮಾಡಿ, ಅದಕ್ಕನುಸಾರವಾಗಿರುವ ಗುರಿಗಳನ್ನು ಸಾಧಿಸಿಕೊಳ್ಳುವನು. ಆದರೆ, ಇಲ್ಲಿ ಒಂದು ಮುಖ್ಯ ಅಂಶ ಇದೆ. ಅದೇನೆಂದರೆ, ಮಾನವನ ಜೀವನದಲ್ಲಿ ದೊಡ್ಡ ಎರಡು ಗುರಿಗಳ ವಿಭಾಗಗಳಿವೆ ಎಂಬುವುದೇ ಅದಾಗಿದೆ. ಅವಲ್ಲಿ ಒಂದು, ಜೀವನೋಪಾಯ ಮತ್ತು ಸೌಕರ್ಯಗಳ ನೂರಾರು ಗುರಿಗಳು ಸೇರಿರುವ ಆ ಒಟ್ಟು ಭಾಗ, ಇನ್ನೊಂದು, ಉತ್ತಮ ಜೀವನದ ಆ ಒಂದೇ ಒಂದು ಗುರಿ ಇರುವ ಭಾಗವಾಗಿದೆ. ನೋಡಿ, ಇಲ್ಲಿ, ಉತ್ತಮ ಜೀವನ ಎಂಬ ಆ ಒಂದೇ ಒಂದು ಗುರಿ ಇರುವ ಭಾಗವು ಅತಿ ಮುಖ್ಯವಾಗಿದೆ. ಯಾಕೆಂದರೆ, ಇದು ಹೋದರೆ, ಇತರ ಎಲ್ಲಾ ಗುರಿಗಳು ಕೂಡಾ ಅರ್ಥವನ್ನು ಕಳಕೊಳ್ಳುವವು. ಇದಕ್ಕೆ ನೋಡಿ, ಹಣ ಇದ್ದರೂ, ವಿದ್ಯೆ ಇದ್ದರೂ, ಹೆಸರು ಕೀರ್ತಿ ಇದ್ದರೂ, ಆತ್ಮಹತ್ಯೆಯನ್ನು ಕೆಲವರು ಮಾಡುವುದು. ಅಲ್ಲಿ, ಅವರ ಇತರ ದೊಡ್ಡ ದೊಡ್ಡ ಗುರಿಗಳ ಗಳಿಕೆಗಳು ಪೂರ್ತಿ ಅರ್ಥವನ್ನು ಕಳಕೊಂಡಿರುತ್ತವೆ.

ಹೀಗಾಗಿ, ಮಹಾಜೀವನದಲ್ಲಿ, ಮಹಾತ್ಮರುಗಳು ಉತ್ತಮ ಜೀವನ ಎಂಬ ಗುರಿಯನ್ನು ಶಾಶ್ವತವಾಗಿ ಸಾಧಿಸಿಕೊಂಡು, ಅನಂತರ, ಇತರ ತಮಗೆ ಸಾಧ್ಯವಾಗುವ ಗುರಿಗಳನ್ನು ಕೂಡಾ ಆ ಮುಖ್ಯ ಗುರಿಗೆ ಪೂರಕವಾಗಿ ಸಾಧಿಸಿಕೊಳ್ಳುವುದೆಂದು ತಿಳಿಯಬೇಕು. ಇದರ ಅರ್ಥ, ಮಹಾಜೀವನವೆಂದರೆ, ಉತ್ತಮವಾದ ಆ ಶಾಂತಿ, ಆನಂದದ ಜೀವನವನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಸಾಧನಾ ಜೀವನ ಎಂದು ಇಲ್ಲಿ ನಮಗೆ ಸ್ಪಷ್ಟವಾಗಿ ಅರ್ಥವಾಗುವುದು.

 ***********************

ಮಹಾಜೀವನದ ಸಾಧನೆಯು ಕಷ್ಟ ಎಂದು ತೋರುವಾಗ, ಅದು ನಿಜವಾಗಿಯೂ ಕಷ್ಟವಿದೆಯೇ ಎಂಬ ಪ್ರಶ್ನೆಯು ಬರುವುದು. ಅಚ್ಚರಿ ಎಂದರೆ, ಆ ನಿಜವಾದ ಕಷ್ಟಗಳು ಜೀವನದಲ್ಲಿ ಬರಬಾರದು ಎಂಬಲ್ಲಿ ಈ ಸಾಧನೆಯು ಇರುವುದು ಎಂದಾಗಿದೆ! ಅಂದರೆ, ಈ ಸಾಧನೆಗಳು ನಂಬಿಕೆ, ಆಚಾರ, ಇತ್ಯಾದಿಗಳ ಆ ಉಪವಾಸದಂತಹ ಕಷ್ಟದ ಅನುಷ್ಠಾನಗಳಲ್ಲ. ಬರೇ ತನ್ನ ಜೀವನದಲ್ಲಿ ಸಂತೋಷ ಪಡೆಯಲು ಮಾಡುವ ಕೆಲಸಗಳು ಅಷ್ಟೆ. ಅಡುಗೆ ಮಾಡದೆ ನಾವು ರುಚಿಯಾದ ಔತಣವನ್ನು ಸವಿಯಲು ಸಾಧ್ಯವಿಲ್ಲ. ಇಲ್ಲಿಯೂ ಅಷ್ಟೇ ಇರುವುದು. ನಾವು ಬೇಯಿಸದ ತರಕಾರಿಗಳನ್ನು ತಿಂದು ಕಷ್ಟಪಡುವ ಬದಲು, ಪ್ರತಿ ಹೊತ್ತಿಗೂ, ಅಡುಗೆ ಮಾಡಿ ಔತಣದ ರುಚಿಯ ಆನಂದವನ್ನು ಅನುಭವಿಸೋಣ. ಅಂದರೆ, ಜೀವನದ ಪ್ರತಿ ಹೊತ್ತು ಕೂಡಾ ಆನಂದಮಯವಾಗುವ ತರ ನಾವು ಚಿಂತನೆಯ ಅಡುಗೆ ಮಾಡಿ ಅದರ ಸವಿಯನ್ನು ಅನುಭವಿಸೋಣ ಎಂದು ಅರ್ಥ. ನಮಗೆ ತಿಳಿದಂತೆ, ಆ ರಹಸ್ಯ ಪ್ರಾಚೀನ ವಾಮಾಚಾರವು ಚಿಂತನೆಯ ಅಡುಗೆ ಮಾಡದಂತೆ ಸದಾ ತಡೆಹಿಡಿಯಲು ಪ್ರಯತ್ನಿಸುತ್ತಿರುವುದು. ಈ ಸತ್ಯವನ್ನು ಯಾವಾಗಲೂ ಮನದಲ್ಲಿಟ್ಟು ಜಾಗ್ರತನಾಗಿ ಜೀವಿಸಿದರೆ, ಅದು ಒಂದೇ ಒಬ್ಬಾತನನ್ನು ಸುಲಭದಲ್ಲಿ ಮಹಾತ್ಮನನ್ನಾಗಿ ಮಾಡಿಬಿಡುವುದು. ಒಟ್ಟಲ್ಲಿ, ಚಿಕ್ಕ ಮಕ್ಕಳಾಗಿರುವಾಗ ಕಲಿಯಲು ಇಷ್ಟಪಡದೆ ದೊಡ್ಡವರಾದಾಗ ಅದರ ಪಶ್ಚಾತಾಪ ಪಡುವಂತೆ ಮಹಾಜೀವನಕ್ಕೆ ಕಾಲಿಟ್ಟವರ ಜೀವನ ಆಗಲಾರದು ಎಂದು ಆಶಿಸೋಣ.

 *********************

ನಾನು, ಇಲ್ಲಿ, ಈ ಮೊದಲೇ ಹೇಳಿರುವ ವಿಚಾರಕ್ಕೆ ಇನ್ನೊಂದು ಅಂಶವನ್ನು ಚುಟುಕಾಗಿ ವಿವರಿಸಿ ಸೇರಿಸಲು ಬಯಸುತ್ತೇನೆ. ಈ ಮಹಾತ್ಮರಾಗುವ ಗುರಿ ಎಂಬುವುದು ಇತರ ಗುರಿಗಳಂತೆ ಅಲ್ಲ ಎಂಬುವುದೇ ಆ ಒಂದು ಅಂಶ ಎಂದು ತಿಳಿಯಬೇಕು. ನೋಡಿ, ಮಹಾತ್ಮರಾಗುವುದು ಎಂದರೆ ಅದು ಇತರ ಗುರಿಗಳಂತೆ ಕೂಡಿಸುತ್ತಾ ಹೋಗುವುದಲ್ಲ, ಬದಲು ಕಳೆಯುತ್ತಾ ಹೋಗುವುದಾಗಿದೆ! ಶ್ರೀಮಂತನಾಗುವ ಗುರಿ ಇದ್ದಲ್ಲಿ ಆತನು ಹಣವನ್ನು ಹೆಚ್ಚಿಸುತ್ತಾ ಹೋಗಬೇಕು. ಇನ್ನು, ವಿದ್ಯಾವಂತನಾಗಬೇಕೆಂಬ ಗುರಿ ಇದ್ದರೆ, ಒಂದೊಂದೇ ತರಗತಿಗಳನ್ನು ಏರಿ ವಿದ್ಯೆಯನ್ನು ಕೂಡಿಸುತ್ತಾ ಹೋಗಬೇಕು. ಅಂದರೆ, ಎಲ್ಲವೂ ಕೂಡಾ ಇದೇ ಕೂಡಿಸುತ್ತಾ ಹೋಗುವ ರೀತಿಯಲ್ಲೇ ಇರುವುದು ಎಂದು ಅರ್ಥ. ಅಚ್ಚರಿ ಅಂದರೆ, ಮಹಾತ್ಮರಾಗುವ ಗುರಿಯಲ್ಲಿ, ಆ ಗುರಿ ಹೊತ್ತ ಮನುಷ್ಯನು ತನ್ನ ಅಹಂಕಾರವನ್ನು ಕಳಕೊಳ್ಳುತ್ತಾ ಹೋಗಬೇಕಾಗಿದೆ ಎಂಬುವುದಾಗಿದೆ!! ಹೀಗೆ, ಕಳಕೊಳ್ಳುತ್ತಾ ಹೋಗುವಾಗ, ಅದರೊಂದಿಗೆ ಇತರ ಆತನ ಕೆಟ್ಟ ಆಸಕ್ತಿಗಳು ಹಾಗೂ ಕೆಟ್ಟ ಸ್ವಭಾವಗಳನ್ನು ಕೂಡಾ ಆತನು ಕಳಕೊಳ್ಳುವನು. ಒಬ್ಬನು ಮಹಾತ್ಮನಾಗಲು ಸತ್ಯಚಿಂತನೆ, ಆತ್ಮಪರಿಶೋಧನೆ, ಮತ್ತು ಮಿಥ್ಯತ್ವ ಜ್ಞಾನ ಎಂಬ ಆ ಮೂರು ರೀತಿಯ ಜ್ಞಾನಗಳ ಸಂಪಾದನೆಯು ಬೇಕಾಗುವುದು, ಆದರೆ ಇದು ಗುರಿಯಾಗುವುದಿಲ್ಲ, ಬದಲು ಗುರಿಗೆ ತಲುಪಲು ಇರುವ ಆ ಬರೇ ಸಾಧನೆಯ ಆಯುಧ ಮಾತ್ರ ಆಗುವುದು. ಅಂದರೆ, ಗುರಿಗೆ ತಲುಪುವುದಕ್ಕೆ ಆತನು ಈ ಆಯುಧವನ್ನು ಉಪಯೋಗಿಸಿ ಆ ಕಳಕೊಳ್ಳುವಿಕೆಯ ಸಾಧನೆಯನ್ನು ಆರಂಭಿಸಬೇಕಾಗುತ್ತದೆ ಎಂದು ಅರ್ಥ. ಒಟ್ಟಲ್ಲಿ, ಸಾಧನೆಯ ಮೂಲಕ ಈ ಕಳಕೊಳ್ಳುವಿಕೆಯು ಪರಿಪೂರ್ಣವಾದಾಗ ಮಾತ್ರ ಮಹಾತ್ಮನ ಸೃಷ್ಟಿಯಾಗುವುದು ಎಂದು ತಿಳಿಯಬೇಕು.

ನೀರಿನ ಬಾಟ್ಲಿಯಿಂದ ನೀರನ್ನು ತೆಗೆದಾಗ ಅಲ್ಲಿ ವಾಯು ಬಂದು ತಾನಾಗಿ ಸೇರುವಂತೆ, ಮಾನವನು ತನ್ನ ಅಹಂಕಾರವನ್ನು ಪತ್ತೆ ಹಚ್ಚಿ, ಮತ್ತು ಅದರೊಂದಿಗೆ ತನ್ನ ಕೆಟ್ಟತನವನ್ನು ಪತ್ತೆ ಹಚ್ಚಿ, ಅವನ್ನು ತನ್ನ ವ್ಯಕ್ತಿತ್ವದಿಂದ ಕಳೆಯುತ್ತಾ ಹೋಗುವಾಗ, ಮಹಾತ್ಮನ ಆ ಪವಿತ್ರ ವ್ಯಕ್ತಿತ್ವವು ತಾನಾಗಿ ಅಲ್ಲಿ ಬಂದು ಸೇರುವುದು.

ಹೃದಯ ವೈಶಾಲ್ಯತೆಯನ್ನು ಹೊಂದಿದ ಮಹಾವ್ಯಕ್ತಿತ್ವಗಳೇ ಮಾನವರ ಆ ನಿಜವಾದ ಬಂಧುಗಳು. ಇತರ ಎಲ್ಲರೂ, ಸೀಮಿತ ಬೇಲಿಯೊಳಗಿನ ಬಂಧುಗಳನ್ನು ಮಾತ್ರ ಹೊಂದಿದವರು ಆಗಿರುವರು.

 **********************

ಆಸೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಇನ್ನು, ‘ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿರುವಾಗ, ಅದು ಸರಿಯೇ ಎಂದು ತಿಳಿಯಲು ಪ್ರಯತ್ನಿಸೋಣ. ನೋಡಿ, ಆಸೆಯು ಯಾವಾಗಲೂ ಭಾವಯುಕ್ತವಾಗಿರುವುದು, ಆದರೆ, ತನಗೆ ಬೇಕು ಎಂಬುವುದು ಅಗತ್ಯತೆಯ ರೂಪದಲ್ಲಿದ್ದರೆ, ಜನಸಾಮಾನ್ಯರಲ್ಲಾದರೂ, ಭಾವವು ಬಹಳ ಕಡಿಮೆ ಅಂಟಿಕೊಳ್ಳುವುದು. ಈ ಕಾರಣಕ್ಕೆ, ಆಸೆ ಕೈಗೂಡದೆ ಇರುವಾಗ ನಿರಾಶೆಯ ದುಃಖ ಬರುವುದು ಎಂದು ಶ್ರೀ ಬುದ್ಧನು ಹೇಳಿರುವುದು. ಜನಸಾಮಾನ್ಯರಿಗೆ ಸಂಬಂಧಿಸಿ ಆ ಮಾತು ಸತ್ಯ. ಆದರೆ, ಮಹಾತ್ಮರಲ್ಲಿ ಮತ್ತು ಮನೆ ಮನೆಯ ಮಹಾತ್ಮರಲ್ಲಿ ಅದು ಹಾಗಲ್ಲ. ಅವರು ಅಗತ್ಯತೆ, ಅನಿವಾರ್ಯತೆ, ಎಂದು ಮಾತ್ರ ಎಲ್ಲವನ್ನು ಕಾಣುವವರು. ಅವರು ಆ ಮಿಥ್ಯತ್ವ ಜ್ಞಾನದ ಹಿನ್ನೆಲೆಯಲ್ಲಿ ಜೀವಿಸುವವರು ಎಂದು ನಾವು ಪ್ರತ್ಯೇಕವಾಗಿ ತಿಳಿದುಕೊಳ್ಳಬೇಕು. ಮಿಥ್ಯತ್ವ ಜ್ಞಾನ ಹಾಗೂ ವಾಸ್ತವದ ಬೋಧಗಳು ಮನುಷ್ಯನನ್ನು ಆಸೆ ಎಂಬ ಭಾವನೆಯಿಂದ ರಕ್ಷಿಸುವುದು. ಆದುದರಿಂದ, ಮಹಾಜೀವನದಲ್ಲಿ ಮುಂದುವರಿಯುವ ಸಾಧಕರು ನೈತಿಕವಾಗಿ ಎಲ್ಲವನ್ನು ಅನುಭವಿಸಬಹುದಾದರೂ, ಭಾವಯುಕ್ತ ಆಸೆ ಎಂಬುವುದರಿಂದ ಅಗತ್ಯತೆಯ ಕಡೆಗೆ ನಿಧಾನವಾಗಿ ಬರಬೇಕಾಗಿದೆ. ಈ ನಿಟ್ಟಿನ ಪಯಣವು, ನಮ್ಮನ್ನು ಭಾವಬಂಧನದಲ್ಲಿ ಸಿಲುಕುವ ಆ ಅಹಂಕಾರದ ಬಂಧನದಿಂದಲೂ ಬಿಡುಗಡೆ ಮಾಡುವುದು.

ನೆನಪಿಡಿ, ಶುದ್ಧಪ್ರೀತಿಯು ಮಹಾತ್ಮರು ಇಟ್ಟುಕೊಂಡಿರುವ ಭಾವವಾಗಿರುವುದು. ಇದು ಹೃದಯವನ್ನು ಪರಿಶುದ್ಧ ಗೊಳಿಸುವ ಕೆಲಸವನ್ನು ಮಾತ್ರ ಮಾಡುವುದು. ಅದಲ್ಲದೆ, ಅದು ಎಂದಿಗೂ ಬಂಧನವನ್ನು ಹೆಚ್ಚಿಸುವಲ್ಲಿ, ದುಃಖವನ್ನು ತರುವಲ್ಲಿ, ಅಹಂಕಾರವನ್ನು ಹೆಚ್ಚಿಸುಲ್ಲಿ, ಕೆಲಸಮಾಡುವುದಿಲ್ಲ.

 ******************

‘ಆಸೆ ಇದ್ದವನ ಮನಸ್ಸನ್ನು ಆರು ವೈರಿಗಳು ಆಳುವರು’ ಎನ್ನುವುದು ಸತ್ಯ ಮತ್ತು ಅದರಲ್ಲಿ ಸಂಶಯವಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮಧ, ಮಾತ್ಸರ್ಯ ಇವು ಆಸೆಯ ಮರಿಗಳು ಆಗಿವೆ. ಆದುದರಿಂದಲೇ, ಮಹಾಜೀವನದಲ್ಲಿ ‘ಆಸೆಯಲ್ಲ ಅಗತ್ಯತೆ’ ಎಂಬ ರೀತಿಯನ್ನು ಆ ನಿಜವಾದ ಮಹಾಜೀವನ ಸಾಧಕರು ಅನುಸರಿಸುವುದು. ನೋಡಿ, ಒಬ್ಬನ ಕೈಯಲ್ಲಿರುವ ನೂರು ರೂಪಾಯಿಯನ್ನು ಕೊಡಲು ನೀವು ಹೇಳಿದರೆ ಆತನು ಕೊಡಲಾರ. ಆದರೆ, ನೀವು ನೂರು ರೂಪಾಯಿಗೆ ಬದಲು, ಸಾವಿರ ರೂಪಾಯಿಯನ್ನು ಆತನಿಗೆ ಹಿಂತಿರುಗಿ ಕೊಡುವುದಾದರೆ, ಆತನು ಕೊಡುವನು. ಅಂದರೆ, ಹೆಚ್ಚಿನವರು ಕೂಡಾ ವ್ಯವಹಾರ ಬುದ್ಧಿಯವರು ಮತ್ತು ತಮಗೆ ಲಾಭ ಆಗುವಲ್ಲಿ ಮಾತ್ರ ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ ಎಂದು ಅರ್ಥ. ಸುಮ್ಮನೆ ಸಿಹಿ ತಿಂಡಿ ತಿನ್ನುವುದನ್ನು ಆಸಕ್ತಿ ಇರುವವರು ಬಿಡುವುದಿಲ್ಲ, ಆದರೆ ಸಕ್ಕರೆ ಕಾಯಿಲೆ ಇರುವುದಾದರೆ ಆ ತ್ಯಾಗಕ್ಕೆ ಅವರು ತಯಾರಾಗುತ್ತಾರೆ. ಒಟ್ಟಲ್ಲಿ, ತಮಗೆ ಅಗತ್ಯವಿದೆ ಅಥವಾ ಅನಿವಾರ್ಯತೆ ಇದೆ ಎಂಬಲ್ಲಿ, ಅದಕ್ಕೆ ಬೇಕಾಗಿ, ತಮ್ಮ ಆಸೆ, ಆಸಕ್ತಿಗಳನ್ನು ಕೂಡಾ ನಿಯಂತ್ರಿಸಲು ಜನರು ತಯಾರಾಗುವರು ಎಂದು ಅರ್ಥ. ದುರದೃಷ್ಟವಶಾತ್, ಇಂದು, ಮಹಾಜೀವನ ಆದರ್ಶದ ಆ ದೊಡ್ಡ ಲಾಭದ ಬಗ್ಗೆ ಯಾರಿಗೂ ತಿಳಿದೇ ಇಲ್ಲ. ಮುಂದೆ, ಜನರು ಅದನ್ನು ತಿಳಿಯುವಾಗ, ಮಹಾಜೀವನದ ಮಹತ್ವ ಮತ್ತು ಅದರ ಸಾಧನೆಯ ಅನಿವಾರ್ಯತೆಯನ್ನು ಜನರೇ ಅರ್ಥಮಾಡಿಕೊಳ್ಳುವರು.

 ********************

ಕೆಲವರಿಗೆ, ಆಸೆ ಇಲ್ಲದಿದ್ದರೆ ಜೀವನ ನೀರಸವಾಗಬಹುದು ಎಂಬ ಸಂಶಯ ಇರಬಹುದು. ಅದಕ್ಕೆ ಮಾತ್ರವಾಗಿ ಒಂದು ಚಿಕ್ಕ ವಿವರಣೆಯನ್ನು ನೋಡೋಣ. ಅದಕ್ಕೆ ಮೊದಲು, ಅಗತ್ಯತೆ ಮತ್ತು ಆಸೆ ಇವುಗಳ ವ್ಯತ್ಯಾಸವನ್ನು ನೋಡೋಣ.

ಅಗತ್ಯತೆಯಲ್ಲೂ ಅದನ್ನು ಪೂರೈಸುವ ಕ್ರಿಯೆ ಇದ್ದೇ ಇರುತ್ತದೆ, ಆದರೆ ಅದು ಆಸೆಯಂತಲ್ಲ. ಕೊರೋನ ಇಂಜೆಕ್ಷನ್ ಗಾಗಿ ಓಡೋಡಿ ಹೋಗಿರಬಹುದು, ಅಡುಗೆಗೆ ಉಪ್ಪು ಇಲ್ಲದಿರುವಾಗ ಓಡಿ ಹೋಗಿ ಉಪ್ಪು ತಂದಿರಬಹುದು. ಈ ಆಸಕ್ತಿ ತೋರುವಿಕೆಗಳು ಎಲ್ಲವೂ ಆಸೆ ಎಂದು ಹೇಳಲು ಆಗುವುದಿಲ್ಲ. ಆದರೆ, ಆಸೆಯ ಹಿನ್ನೆಲೆಯ ಆಸಕ್ತಿಗಳಲ್ಲಿ, ವ್ಯಯಕ್ತಿಕ ಲಾಭಕ್ಕಾಗಿ ಮನಸ್ಸನ್ನು ಬೇಕುಗಳ ಭಾವನೆಗಳು ಕಾಡುತ್ತಿರುತ್ತವೆ.

ಇನ್ನೊಂದು ಅಂಶ ಎಂದರೆ, ಅನಿವಾರ್ಯತೆಯನ್ನು ಬಿಟ್ಟು, ಬರೇ ಅಗತ್ಯತೆಯಲ್ಲಿ ತಾಳ್ಮೆಯು ಇರುವುದು ಎಂಬುದಾಗಿದೆ. ಆದರೆ ಆಸೆಯ ಆರಂಭವೇ ತಾಳ್ಮೆ ಇಲ್ಲದಿರುವಿಕೆಯಲ್ಲಿ ಇರುವುದು. ಆದುದರಿಂದಲೇ, ಯಾರು ಕೂಡಾ ‘ಅಗತ್ಯತೆಯನ್ನು ನಿಯಂತ್ರಿಸಬೇಕು’ ಎಂದು ಹೇಳುವುದಿಲ್ಲ, ಆದರೆ ಮನಸ್ಸಿಗೆ ಬರುವ ‘ಆಸೆಗಳನ್ನು ನಿಯಂತ್ರಿಸಬೇಕು’ ಎನ್ನುವುದು.

ಇನ್ನೊಂದು ಅಂಶವೆಂದರೆ, ಅಗತ್ಯತೆಯು ಮನಸ್ಸಿಗೆ ತೋಚಿದಂತೆ ಬರುವುದಿಲ್ಲ, ಯಾಕೆಂದರೆ ತನಗೆ ಅದು ಅಗತ್ಯವಿದೆ ಎಂಬಲ್ಲಿ, ಅಗತ್ಯತೆಯು ತೀರ್ಮಾನಗಳಿಂದ ಹುಟ್ಟಿಕೊಳ್ಳುವುದು. ಅಂದರೆ, ಒಂದು ಹಂತದವರೆಗಾದರೂ ಆಲೋಚಿಸಿಯೇ ತೀರ್ಮಾನವನ್ನು ಜನರು ತೆಗೆಯುವುದು. ಆ ಕಾರಣಕ್ಕೆ ಅಗತ್ಯತೆಯಲ್ಲಿ ಆಲೋಚನೆ ಇರುವುದು. ಆದರೆ ಆಸೆಯಲ್ಲಿ, ‘ಆಲೋಚಿಸಿ ಆಸೆ ಮಾಡುವುದು’ ಎಂಬುವುದಿಲ್ಲ, ಬದಲು, ಅವು ಬರೇ ಅನಿಯಂತ್ರಿತ ಬೇಕುಗಳು ಮಾತ್ರ ಆಗಿರುವವು. ಈ ಎಲ್ಲಾ ಕಾರಣಗಳಿಂದ ಆಸೆಯು ಮಾನವನಿಗೆ ಅಪಾಯಕಾರಿಯಾಗಿರುವುದು.

ಇನ್ನು, ಆಸೆ ಇಲ್ಲದೆಯೂ ರುಚಿ, ಇತ್ಯಾದಿ ಎಲ್ಲವನ್ನೂ ಅನುಭವಿಸಬಹುದು. ಆದರೆ ಆಸೆಯಿಂದ ಎಲ್ಲವನ್ನೂ ಅನುಭವಿಸುವವರು, ಬರೇ ಅತಿ ಭಾವನೆಗಳ ಕಾರಣದಿಂದ, ನಿಯಂತ್ರಣವನ್ನು ಕಳಕೊಂಡು ತಪ್ಪಾದ ರೀತಿ, ಅಪಾಯದ ರೀತಿ, ಇತ್ಯಾದಿಗಳಿಗೆ ಬಲಿಯಾಗುವರು ಅಷ್ಟೆ.

ಈ ಎಲ್ಲಾ ಕಾರಣಗಳಿಂದ ಆಸೆ ಇಲ್ಲದೆಯೂ, ಒಬ್ಬಾತನಿಗೆ ಜೀವನ ನೀರಸವಾಗದೆ, ಅದನ್ನು ಆನಂದಿಸಬಹುದು ಎಂದು ತಿಳಿಯಬೇಕು. ಆದರೆ, ಆಸೆ ಇದ್ದಲ್ಲಿ, ಆಸೆಯು ಪೂರೈಸದಾಗ ಜೀವನವು ಭಯಾನಕವಾಗಿ ನೀರಸವಾಗಬಹುದು, ಮತ್ತು ಕೆಲವೊಮ್ಮೆ ಅದು ಆತ್ಮಹತ್ಯೆಗೂ ಆ ವ್ಯಕ್ತಿಯನ್ನು ತಳ್ಳಬಹುದು!

ಜ್ಞಾನವು ಮಾತ್ರ ಆಸೆ ಎಂಬ ಅಜ್ಞಾನವನ್ನು ತೆಗೆದುಹಾಕಲು ಶಕ್ತವಾದ ಆಯುಧವಾಗಿರುವುದು. ಇನ್ನು, ಆಸೆ ಇಲ್ಲವಾಗುವಾಗ, ಆ ವ್ಯಕ್ತಿಗೆ ಅಹಂಕಾರವೂ ಇರುವುದಿಲ್ಲ. ಅಂದರೆ, ಅಹಂಕಾರ ಇಲ್ಲದಾಗುವಾಗ ಆಸೆಯೂ ಇರುವುದಿಲ್ಲ ಎಂದು ಅರ್ಥ. ಈ ಕಾರಣಕ್ಕೆ, ಅಹಂಕಾರ ಇಲ್ಲವಾಗುವಾಗ ಅಥವಾ ಆಸೆ ಇಲ್ಲದಾಗುವಾಗ ಒಬ್ಬ ವ್ಯಕ್ತಿಯು ತಾನಾಗಿ ಮಹಾತ್ಮನಾಗುವನು ಎಂದು ಹೇಳುವುದು.

 *****************************

ಆಸೆಯು ಮಾರಕವಾಗಿದೆ ಎಂದರೂ ತಪ್ಪಿಲ್ಲ. ಯಾಕೆಂದರೆ, ಈ ಆಸೆಯೇ ಅದೆಷ್ಟೋ ರಾಜರುಗಳನ್ನು ಆಕ್ರಮಣಕ್ಕೆ ಪ್ರೇರೇಪಿಸಿರುವುದು. ಎಷ್ಟೋ ಜನರು ಸತ್ತಿರುವುದು ಕೂಡಾ ಇದೇ ಆಸೆಯ ಕಾರಣಕ್ಕೆ. ಹೆಸರು ಬರಲೆಂದು ಸಾಹಸಕ್ಕೆ ಕೈಹಾಕಿ ಸಾಯುವವರನ್ನೂ ನಾವು ನೋಡುತ್ತೇವೆ. ಒಟ್ಟಲ್ಲಿ, ಆಸೆಯು ಮಾನವನ ನಾಶಕ್ಕೆ ಕಾರಣವಾಗಿರುವುದು. ಇನ್ನು, ಒಂದು ಪ್ರಶ್ನೆ ಎಂದರೆ, ಆಸೆಯು ಎಲ್ಲಾದರೂ ಮಾನವನ ಉದ್ಧಾರಕ್ಕೆ ಕಾರಣವಾಗುವುದೋ ಎಂಬುವುದಾಗಿದೆ. ನಿಜವಾಗಿಯೂ ಆಸೆಯಲ್ಲ ಒಬ್ಬ ವ್ಯಕ್ತಿಯ ಉದ್ದಾರಕ್ಕೆ ಕಾರಣವಾಗಿರುವುದು. ಆದರೆ ಅದು ಒಬ್ಬಾತನ ಜ್ಞಾನ, ನೈಪುಣ್ಯತೆಗಳು ಮತ್ತು ಸಮತೋಲನದ ವ್ಯಕ್ತಿತ್ವ ಆಗಿರುವವು. ಒಬ್ಬನು ಹಣದ ಆಸೆಯಲ್ಲಿ ಜೂಜು ಆಡಿ ಹಣ ಸಂಪಾದನೆ ಮಾಡಬಹುದು, ಆದರೆ ಬರೇ ಅದೃಷ್ಟವು ಅಲ್ಲಿ ಕೆಲಸ ಮಾಡಿದೆ ಅಷ್ಟೆ. ಇನ್ನು ಆಸೆಯನ್ನು ಮಾತ್ರ ಮನದಲ್ಲಿ ಇಟ್ಟು ಪರೀಕ್ಷೆ ಬರೆದರೆ, ಫಲಿತಾಂಶ ಬರುವಾಗ, ನಿರಾಶೆಯೇ ಗತಿಯಾಗುವುದು. ಒಟ್ಟಲ್ಲಿ, ಆಸೆ ಮಾನವರಿಗೆ ಅಗತ್ಯ ಎಂದು ಹೇಳಿದರೆ ಆ ಮಾತಿಗೆ ಹುರುಳಿಲ್ಲ ಖಂಡಿತ.

 ***********************

ಬರೇ ಆಸೆಯೇ ದುಃಖಕ್ಕೆ ಕಾರಣವಾಗುವುದು ಎಂದು ಮಹಾತ್ಮರು ಹೇಳುವರು, ಇಲ್ಲಿ ನಾವು ಗೊಂದಲಕ್ಕೆ ಸಿಲುಕದೆ ಇರಲು ಒಂದು ಅಂಶವನ್ನು ಇನ್ನೊಮ್ಮೆ ಹೇಳುವೆನು. ಅದುವೇ, ಆಸೆಯು ಯಾವಾಗಲೂ ಆಲೋಚನೆ ಇಲ್ಲದಲ್ಲಿ ಸೃಷ್ಟಿಯಾಗುವ ಬೇಕುಗಳ ಕಾಡುವಿಕೆ ಆಗಿದೆ. ಇದು ಒಬ್ಬನ ಜೀವನದಲ್ಲಿ ತೊಂದರೆಯನ್ನು ಮಾತ್ರ ಕೊಡಬಲ್ಲದು ಅಷ್ಟೆ. ಜನಸಾಮಾನ್ಯರು ಈ ಆಸೆಯನ್ನು ಅಗತ್ಯತೆಯ ರೂಪಕ್ಕೆ ಬದಲಾಯಿಸಿಕೊಂಡರೆ, ಅವರಿಗೆ ಜೀವನವನ್ನು ಬಹಳ ಹೆಚ್ಚು ಆನಂದಿಸಬಹುದಾಗಿದೆ. ದುರದೃಷ್ಟವಶಾತ್, ಈ ಸತ್ಯವು ಜನಸಾಮಾನ್ಯರಿಗೆ ತಿಳಿದಿಲ್ಲದ ಕಾರಣ, ಅವರು ಆಲೋಚನೆ ಎಂಬ ಅಂಗವನ್ನು ಕಳಕೊಂಡಿರುವ ಆಸೆಯ ಬೇಕುಗಳಿಗೆ ಆಗಾಗ್ಗ ಬಲಿಯಾಗುತ್ತಾ ಇರುವುದು. ಒಟ್ಟಲ್ಲಿ, ಆಸೆಯು ಜನಸಾಮಾನ್ಯರಿಗೂ ಅಪಾಯಕಾರಿ ಮತ್ತು ತಪ್ಪು ತೀರ್ಮಾನಕ್ಕೆ ತಳ್ಳಿ ನಿರಾಶೆಯ ರಾಶಿಯನ್ನು ತಂದುಕೊಡುವ ಆ ಸ್ವನಾಶದ ರೀತಿಯಾಗುವುದು.

ಮಹಾತ್ಮರು ಆಸೆಯೆಂಬ ‘ಆಲೋಚನೆ ಇಲ್ಲದ ಬೇಕುಗಳ ಕಾಡುವಿಕೆ’ ಯ ಕೈಯೊಳಗೆ ಇರುವುದಿಲ್ಲ. ಅವರು ಆಲೋಚನೆ, ತರ್ಕ, ಇರುವ ಆ ಅಗತ್ಯತೆಯಲ್ಲೇ ಜೀವಿಸುವರು.

ನೆನಪಿರಲಿ, ಆಸೆ ಎಂದರೆ ಅದು ಸುಖವನ್ನು ಅನುಭವಿಸುವುದಕ್ಕೆ ಸಂಬಂಧಪಟ್ಟಿಲ್ಲ, ಬದಲು ಸುಖವನ್ನು ಯಾವ ರೀತಿಯಲ್ಲಿ ಅನುಭವಿಸುವಿರಿ ಎಂಬಲ್ಲಿ ಅದು ಇರುವುದು ಎಂದು ತಿಳಿಯಬೇಕು. ಮಹಾಜೀವನವು ಸುಖವನ್ನು ಅಗತ್ಯತೆಯ ರೂಪದಲ್ಲಿ ಅನುಭವಿಸಲು ಹಾಗೂ ಹೆಚ್ಚಿನ ಆನಂದವನ್ನು ಆ ರೀತಿಯಿಂದ ಪಡೆಯಲು ನಿರ್ದೇಶಿಸುವುದು ಮತ್ತು ಕಲಿಸುವುದು. ಇದರಿಂದ, ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನವಾಮಾಚಾರದ ಇತರ ಹಲವು ಹೊಂಚುಗಳಿಂದಲೂ ನಮಗೆ ಪಾರಾಗಬಹುದು ಎಂಬುವುದು ಅಗತ್ಯತೆಯ ಇನ್ನಿತರ ಹೆಚ್ಚಿನ ಲಾಭಗಳಾಗಿವೆ.

 ******************

ಮಹಾಜೀವನದ ಬಗ್ಗೆ ಎಲ್ಲರಿಗೂ ಸ್ಪಷ್ಟ ಜ್ಞಾನವಿದೆ ಎಂದು ತಿಳಿಸಿದ್ದೇನೆ. ನೋಡಿ, ಮಹಾಜೀವನ ಎಂದು ಕೇಳುವಾಗ ಅದು ನಮ್ಮ ಜೀವನವು ನಿಜವಾಗಿಯೂ ಮಹತ್ವ ಇರುವುದು ಎಂಬುವುದನ್ನು ಸ್ಪಷ್ಟವಾಗಿ ಸೂಚಿಸುವುದು. ಹೌದು, ಆದರೆ ಅದು ಸತ್ತ ನಂತರದ ಜೀವನದ ಸುಖ ಅನಂದಗಳನ್ನು ಪಡೆಯಲು, ಈ ಭೂಮಿಯ ಜೀವನವನ್ನು ತ್ಯಾಗ ಮಾಡಿ, ಅದನ್ನು ಮಹತ್ತಾದುದು ಎಂದು ಹೇಳುವುದಲ್ಲ ಎಂದು ತಿಳಿಯಬೇಕು.

ಜೀವನವನ್ನು ಹೆಚ್ಚು ಆನಂದಿಸಬೇಕು ಎಂದು ಜನಸಾಮಾನ್ಯರು ಹಲವು ರೀತಿಯಲ್ಲಿ ಕಷ್ಟಪಡುತಲಿರುವರು. ಆದರೆ, ಜೀವನವನ್ನು ಆನಂದಿಸುವ ಬದಲು ಅವರು ಅತೃಪ್ತರಾಗಿ ದುಃಖವನ್ನು ಅನುಭವಿಸುತ್ತಿದ್ದಾರೆ! ಇದಕ್ಕೆ ಕಾರಣ ಅವರು ಜೀವನವನ್ನು ಅನುಭವಿಸುವಲ್ಲಿ ತನಗೆ ಮಾತ್ರ ಪಾತ್ರ ಎಂದು ತಿಳಿದಿರುವುದಾಗಿದೆ. ಅಂದರೆ, ಸುಖ ಅನುಭವಿಸುವುದರಲ್ಲಿ ತನಗೆ ಮಾತ್ರ ಪಾತ್ರ ಎಂದು ತಿಳಿಯುವಲ್ಲಿ ದ್ವೇಷ, ಕಲಹಗಳ ಆರಂಭ ಎಂದು ಅವರು ತಿಳಿಯಲಿಲ್ಲ ಎಂದು ಅರ್ಥ. ಇದರ ಬಗ್ಗೆ ಬಹಳವಾಗಿ ಈ ಹಿಂದೆಯೇ ಹೇಳಿರುವೆನು. ಒಟ್ಟಲ್ಲಿ, ಸಾಮೂಹಿಕವಾಗಿ ಬದುಕುವ ಮಾನವರು, ಖಂಡಿತವಾಗಿಯೂ, ಜೀವನದಲ್ಲಿ ನೆಮ್ಮದಿ, ಆನಂದಗಳನ್ನು ಪಡೆಯುವುದು ಬರೇ ತಾನು ಅನುಭವಿಸುವುದರಿಂದ ಮಾತ್ರವಲ್ಲ, ಬದಲು ಇತರರ ಹೃದಯದ ಶುದ್ಧಪ್ರೀತಿಯು ನಮ್ಮನ್ನು ಕೂಡಾ ಸೇರಿಸಿಕೊಳ್ಳುವಲ್ಲಿ ಆಗಿದೆ.

ಶುದ್ಧಪ್ರೀತಿಯ ವಾತಾವರಣವನ್ನು ನಮ್ಮ ಮನೆಗಳಲ್ಲಿ ಸೃಷ್ಟಿ ಮಾಡಲು ಹಿಂದಿನ ರೀತಿಯಿಂದ ವ್ಯತ್ಯಸ್ಥ ರೀತಿಯಲ್ಲಿ ಜೀವಿಸಬೇಕಾಗುವುದು. ಆ ಜೀವನವೇ ಮಹಾಜೀವನ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, “ನೀನು ತಯಾರಿಸಿದ ಶುದ್ಧಪ್ರೀತಿಯನ್ನು ಇತರರಿಗೆ ಮೊದಲು ಹಂಚು, ಆಗ, ಇತರರು, ಅವರು ತಯಾರಿಸಿರುವ ಶುದ್ಧಪ್ರೀತಿಗಳನ್ನು ನಿಮಗೆ ಹಂಚುವರು” ಎಂದು ಕೂಡಾ ಹೇಳಬಹುದು. ಇನ್ನು, ಹೀಗಲ್ಲದೆ, ಅವರವರ ಸುಖವನ್ನು ಅನುಭವಿಸುವಲ್ಲಿ ಮಾತ್ರ ನೆಮ್ಮದಿ, ಸಂತೋಷಗಳನ್ನು ಪಡೆಯುವವರು ಈ ಭೂಮಿಯಲ್ಲಿ ಇರುವರು ಎಂದಾದರೆ, ಅದು ಕುಡುಕರು ಮತ್ತು ಮಾದಕ ವಸ್ತುಗಳ ವ್ಯಸನಿಗಳು ಮಾತ್ರವಾಗಿರುವರು. ಇತರ ಯಾರಿಗೂ ಅದು ಸಾಧ್ಯವಾಗುವುದಿಲ್ಲ. ಮಹಾಜೀವನವು, ಜೀವನವನ್ನು ಆತ್ಯಂತಿಕವಾಗಿ ಆನಂದಿಸಲು ಸಹಾಯಮಾಡಲಿ ಎಂದು ಆಶಿಸುವೆನು.

 ********************

ಮಹಾಜೀವನವನ್ನು ಸರಿಯಾಗಿ ಸಾಧನೆ ಮಾಡಿದಲ್ಲಿ ಜೀವನದ ತೊಂದರೆಗಳಲ್ಲಿ 65% ಕಡಿಮೆ ಆಗಿ, ಆ ವ್ಯಕ್ತಿಯು ಬಹಳ ಹೆಚ್ಚು ಆನಂದವನ್ನು ಅನುಭವಿಸುವನು. ಅಂದರೆ, ಅದು ಜೀವನದ ಅತಿ ದೊಡ್ಡ ಲಾಭವಾಗಿದೆ ಎಂದು ಅರ್ಥ. ಇನ್ನು, ಸಾಧನೆ ಮಾಡಿ ಅದನ್ನು ಪಡೆಯಲು ಸಾಧ್ಯವಾಗದಿದ್ದರೆ, ಆಗ, ಆ ವ್ಯಕ್ತಿಯ ಸಾಧನೆಯು ಸತ್ಯಸಂಧವಾಗಿಲ್ಲ ಎಂದು ಮಾತ್ರ ಹೇಳಬೇಕಾಗುವುದು. ನೋಡಿ, ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರದ ನಿರಂತರ ಕಾಡುವಿಕೆ ಇರುವಾಗ, ಎಲ್ಲ ಸಮಯದಲ್ಲೂ ತನ್ನ ಮನಸ್ದು ಹೇಳಿದಂತೆ ಮಾತ್ರ ಒಬ್ಬಾತನು ಕೇಳುತ್ತಾ ಹೋದರೆ, ಆ ವ್ಯಕ್ತಿ ಸಾಧನೆ ಮಾಡಿಲ್ಲ ಎಂದು ಮಾತ್ರ ಹೇಳಬೇಕಾಗುವುದು. ಸಾಯುವ ತನಕ ಸ್ಪಷ್ಟ ಆತ್ಮಪರಿಶೋಧನೆಗೆ ನಮ್ಮ ಮನಸ್ಸನ್ನು ಗುರಿಪಡಿಸಿ ಜೀವಿಸುವುದೇ ಮಹಾಜೀವನ ಸಾಧನೆಯ ಆ ನಿಜವಾದ ಫಲವಾಗಿರುವುದು. ಆದರೆ, ಮಹಾತ್ಮನಾದವನಿಗೆ ಅದು ಆತನ ಸಾಧನೆಯಂತೆ ಕಾಣಿಸದೆ, ಆತನ ಸಹಜ ಆನಂದ ಜೀವನದ ಭಾಗವಾಗಿ ಕಾಣಿಸುವುದು. ಒಟ್ಟಲ್ಲಿ, ಮಹಾಜೀವನವು ಸಹಜವಾದಾಗ, ಅಲ್ಲಿ, ಆನಂದದ ಜೀವನವೂ ಸಹಜವಾಗುವುದು ಎಂದು ತಿಳಿಯಬೇಕು.

ಮಹಾಜೀವನವು ಮುಂದೆ, ದ್ವೇಷ, ಹಿಂಸೆ, ರಕ್ತಪಾತದ ಇಂದಿನ ಮಾನವ ಜೀವನದಲ್ಲಿ, ಆ ಅನಿವಾರ್ಯವಾದ ಮನ, ಮನೆ, ಲೋಕಶಾಂತಿಗಳ ಪ್ರೀತಿಯ ಜ್ಯೋತಿಗಳಾಗಿ ಕಾಣಿಸಲಿ ಎಂದು ಹಾರೈಸೋಣ.

 *********************

ಜೀವನವು ಆಸೆಗಳ ವನವಾದಾಗ ಅಲ್ಲಿ ದುಷ್ಟ ಹೃದಯವಿರುವ ಮಾನವ ಎಂಬ ಹೆಸರಿನ ವನ್ಯಜೀವಿಯ ಸೃಷ್ಟಿಯಾಗುತ್ತದೆ. ಈ ವನ್ಯಜೀವಿಯು ಈ ಭೂಮಿಯ ಇತರ ಕ್ರೂರ ವನ್ಯಜೀವಿಗಳಿಗಿಂತ ಹಲವು ಪಟ್ಟು ಹೆಚ್ಚು ಕ್ರೌರ್ಯವಿರುವ ವನ್ಯಜೀವಿಯಾಗಿದೆ. ಕ್ರೂರ ಮೃಗಗಳು ಲಕ್ಷಗಟ್ಟಲೆ ಮಾನವರನ್ನು ಕೊಂದು ಹಾಕುವ ಆ ಯುದ್ಧವನ್ನು ಮಾಡುವುದಿಲ್ಲ. ಇನ್ನು, ಧರ್ಮ, ಪಂಥಗಳ ಶೋಷಣೆ, ಹಿಂಸೆ, ರಕ್ತಪಾತಗಳನ್ನು ಅಂತೂ ಅವು ಮಾಡುವುದೇ ಇಲ್ಲ. ಇನ್ನು, ಪ್ರೀತಿ ತೋರಿಸಿ ವಂಚನೆ ಮಾಡುವುದು ಇತ್ಯಾದಿಗಳು ಅವಕ್ಕೆ ತಿಳಿದೇ ಇಲ್ಲ. ಆದುದರಿಂದಲೇ, ಮಾನವನಷ್ಟು ಕ್ರೂರಿ ಪ್ರಾಣಿ ಇನ್ನೊಂದಿಲ್ಲ ಎನ್ನುವುದು.

ಆದರೆ, ನೋಡಿ, ಇತ್ತ, ಅತ್ಯಂತ ಹೃದಯವಂತಿಕೆಯನ್ನು ಬೆಳೆಸಲು ಸಾಧ್ಯವಾಗುವ ಆ ಪ್ರಾಣಿಯು ಕೂಡಾ ಈ ಮಾನವನೇ ಆಗಿರುವನು. ಪ್ರಾಣಿಗೆ ಪ್ರೀತಿಯನ್ನು ಸಾಧನೆಯ ಮೂಲಕ ಬೆಳೆಸಿಕೊಳ್ಳುವ ಸಾಮರ್ಥ್ಯವಿಲ್ಲ. ಇಲ್ಲಿಯೇ, ಕ್ರೂರಿಯಾದ ಮೃಗತ್ವವಿರುವ ಮಾನವನನ್ನು ಆ ಪ್ರೀತಿಸ್ವರೂಪದ ಮಹಾತ್ಮನನ್ನಾಗಿಸುವ ಮಹಾಜೀವನದ ಮಹತ್ವವು ನಮಗೆ ಗೋಚರವಾಗುವುದು. ಎಲ್ಲಾ ಧರ್ಮ, ಪಂಥಗಳು ಈ ಕೆಲಸವನ್ನು ಸಹಸ್ರಾರು ವರುಷಗಳಿಂದ ಮಾಡಬೇಕಾಗಿತ್ತು. ದುರದೃಷ್ಟವಶಾತ್, ಅವು “ನಾವು ಧರ್ಮ, ಜಾತಿಗಳಲ್ಲಿ ಮೇಲೆ ಮತ್ತು ನೀವು ಕೆಳಗೆ” ಎಂದು ಪ್ರೀತಿಯನ್ನು ಕೊಲ್ಲುತ್ತಾ ಬಂದವು. ಈ ಧರ್ಮ, ಪಂಥಗಳು ಇಂದೂ ಅವನ್ನೆಲ್ಲಾ ನಿಲ್ಲಿಸಲೇ ಇಲ್ಲ. ನೋಡಿ, ಗಾಡಿ ನಿಂತರೆ ತಾನೇ ಹಿಂದಕ್ಕೆ ಚಲಿಸಲು ಸಾಧ್ಯ. ಇವು ಆ ವಿಕೃತಿಗಳನ್ನು ಇನ್ನೂ ನಿಲ್ಲಿಸಿಲ್ಲ, ಮತ್ತು ಅವು ನಿಲ್ಲಿಸುವುದಾದರೂ ಎಂದು? ಹಾಗಿರುವಾಗ, ಅವುಗಳಿಂದ ಈ ಭೂಮಿಗೆ ಶಾಂತಿಯು ಮುಂದೆ ಎಂದೂ ಇರುವುದಿಲ್ಲ ಎಂಬುವುದು ಖಂಡಿತವಾಗುವುದು.

ಮುಂದೆ, ಈ ಭಯಾನಕ ಗಂಭೀರ ಸ್ಥಿತಿಯಿಂದ ಮಾನವರನ್ನು ರಕ್ಷಿಸಲು ಕೂಡಾ, ಸ್ವಾರ್ಥ ಬೇಲಿಗಳನ್ನು ಹೊಂದಿರದ, ಈ ದೈವಿಕ ಮಹಾಜೀವನಕೆ ಮಾತ್ರ ಸಾಧ್ಯವಾಗುವುದು. ಈ ಎಲ್ಲಾ ಮುಖ್ಯ ಅಂಶಗಳ ಆಧಾರದಲ್ಲಿ, ಮಹಾಜೀವನದ ಆ ಪರಮ ಉತ್ಕೃಷ್ಟ ಸ್ಥಾನವನ್ನು ನಮಗೆ ಇಂದೇ ಅಂದಾಜಿಸಲು ಸಾಧ್ಯವಾಗುವುದು.

 ***********************

ಮಹಾತ್ಮ ಎಂದರೆ ಅವನಲ್ಲಿ ಹೃದಯ ವೈಶಾಲ್ಯತೆಯು ಮುಖ್ಯವಾಗಿಯೂ ಇರುವುದು. ಇದು ಸೃಷ್ಟಿಯಾಗುವುದು, ಸತ್ಯಸಂಧತೆ ಮತ್ತು ಶುದ್ಧಪ್ರೀತಿಗಳಿಂದ. ನೋಡಿ, ಸತ್ಯಸಂಧತೆಯು, ಅದರ ಅತ್ಯಂತ ಮೂಲದಲ್ಲಿ, ಎಲ್ಲದಕ್ಕೂ ಅನಿವಾರ್ಯವಾಗಿರುವ ಸ್ವಭಾವವಾಗಿದೆ. ಇದು ಇಲ್ಲವಾದರೆ ಉಳಿದ ಯಾವುದನ್ನು ಕೂಡಾ ಪಡೆಯಲು ಸಾಧ್ಯವಾಗುವುದಿಲ್ಲ. ಸತ್ಯಸಂಧತೆಯ ಹಿನ್ನೆಲೆಯಲ್ಲಿ ಮಾಡುವ ಆತ್ಮಪರಿಶೋಧನೆ ಎಂಬುವುದು ಸಾಮಾನ್ಯನನ್ನು ಮಹಾತ್ಮನನ್ನಾಗಿ ಪರಿವರ್ತಿಸುವ ಸಾಧನೆಯಾಗಿದೆ. ಇದರ ಉತ್ತುಂಗದಲ್ಲಿ ಮಾತ್ರ ಆ ವ್ಯಕ್ತಿಯು ಎಂದಿಗೂ ಸತ್ಯದ ಅಭಿಪ್ರಾಯವನ್ನು ಮಾತ್ರ ಅನುಸರಿಸುವವನಾಗುವುದು. ಅಂದರೆ, ಅಲ್ಲಿಯ ತನಕವೂ ತನ್ನ ಅಭಿಪ್ರಾಯ ಎಂಬ ಆ ತನ್ನದೇ ಆಸಕ್ತಿಗಳ ಅಭಿಪ್ರಾಯಗಳನ್ನು ಎತ್ತಿ ಹಿಡಿಯುತ್ತಿರುವನು ಎಂದು ಅರ್ಥ.

ಒಗ್ಗಟ್ಟು ಇರುವಲ್ಲಿ ಜಯವಿದೆ ಎನ್ನುವರು. ಈ ಒಗ್ಗಟ್ಟು ಬರುವುದು ಹೇಗೆ? ಅದುವೇ, ಎಲ್ಲರೂ ಆ ಸತ್ಯದ ಅಭಿಪ್ರಾಯವನ್ನು ಪಾಲಿಸುವ ರೀತಿಯಲ್ಲಿ ಅಥವಾ ಮಹಾತ್ಮರ ರೀತಿಯಲ್ಲಿ ಎಂದು ತಿಳಿಯಬೇಕು. ಒಂದು ಮನೆ ಮಂದಿ ಎಲ್ಲರೂ ಸತ್ಯದ ಅಭಿಪ್ರಾಯವನ್ನು ಅನುಸರಿಸುವುದಾದರೆ, ಆಗ, ಆ ಮನೆಯಲ್ಲಿ ಎಲ್ಲರೂ ಒಂದೇ ಅಭಿಪ್ರಾಯವನ್ನು ತಳೆಯುವರು. ಆಗ, ಸಹಜವಾಗಿ, ಅಭಿಪ್ರಾಯ ವ್ಯತ್ಯಾಸದ ಹಿನ್ನೆಲೆಯಲ್ಲಿನ ಘರ್ಷಣೆ ಇಲ್ಲವಾಗುತ್ತದೆ. ಇದೇ ರೀತಿ, ಸಮಾಜ, ದೇಶ, ಧರ್ಮ, ಇತ್ಯಾದಿಗಳಲ್ಲಿ ಕೂಡಾ ಇದು ಸಂಭವಿಸುವುದು ಎಂದು ತಿಳಿಯಬೇಕು.

ಒಟ್ಟಲ್ಲಿ, ಮಹಾತ್ಮರ ದಾರಿಗಲ್ಲದೆ, ಇನ್ನು ಶಾಂತಿ, ಸಮಾಧಾನಗಳನ್ನು ಜಗತ್ತಿಗೆ ತಂದು ಕೊಡಲು, ಬೇರೆ ಯಾವುದಕ್ಕೂ ಸಾಧ್ಯವಾಗುವುದಿಲ್ಲ ಎಂಬುವುದು ಸತ್ಯವಾಗಿದೆ. ಇದನ್ನು, ಇದುವರೆಗಿನ ಮಾನವ ಇತಿಹಾಸವನ್ನು ನೋಡಿಯೇ ನಮಗೆ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಮನ, ಮನೆ, ಸಮಾಜ, ಪಂಥ, ಧರ್ಮ, ದೇಶ, ಇತ್ಯಾದಿಗಳು ಎಲ್ಲವೂ, ಸತ್ಯದ ನಿಲುವು ಅಥವಾ ಸತ್ಯದ ಅಭಿಪ್ರಾಯ ಎಂಬುವುದರಿಂದ ಪವಿತ್ರವಾಗಲಿ, ಪಾವನವಾಗಲಿ, ಮತ್ತು ಅದರಿಂದ ಶಾಂತಿ, ನೆಮ್ಮದಿಗಳನ್ನು ಈ ಭೂಮಿಯಲ್ಲಿ ಸೃಷ್ಟಿಸುವಂತಾಗಲಿ ಎಂದು ಆಶಿಸೋಣ.

 *******************************

 ತಾಳ್ಮೆ

ತಾಳ್ಮೆ ಎಂದರೆ ಸಮಯಾವಕಾಶವನ್ನು ಕೊಡುವುದು ಎಂದು ಅರ್ಥ. ಈಗಲೇ ಆಗಬೇಕು ಎಂದು ಅವಸರಪಡುವುದು ಅದರ ವಿರುದ್ಧ ಸ್ವಭಾವವಾಗಿದೆ ಮತ್ತು ಸಹನೆ ಎಂಬುವುದು, ತಾಳ್ಮೆಯ ಸಾಧನೆ ಮಾಡುವ ಆರಂಭದಲ್ಲಿ ಅನುಭವವಾಗುವ, ಅಸಹನೆಯ ವಿರುದ್ಧ ಹೋರಾಟದ, ಆ ಒಂದು ತರದ ಭಾವನೆಯಾಗಿದೆ.

ಈ ತಾಳ್ಮೆಯು ಮಾನವ ಜೀವನದಲ್ಲಿ ಬಹಳ ದೊಡ್ಡ ಪಾತ್ರವಹಿಸುತ್ತದೆ ಎಂದು ಎಲ್ಲರಿಗೂ ಗೊತ್ತು. ದುರದೃಷ್ಟವಶಾತ್, ತಾಳುವುದು ಹೆಚ್ಚಿನವರಿಗೂ ಬಹಳ ಕಷ್ಟವಾದ ಕೆಲಸವಾಗಿಬಿಡುವುದು. ಒಂದು ಅಂಶವನ್ನು ನೆನಪಿಡಬೇಕು, ತಾಳುವುದೆಂದರೆ ಯಾವುದಾದರೂ ತಪ್ಪನ್ನು ಒಪ್ಪಿಕೊಳ್ಳುವುದು ಎಂದಲ್ಲ. ಅದೇ ರೀತಿ, ಕ್ಷಮಿಸುವುದು ಎಂದೂ ಅಲ್ಲ. ಬರೇ, ತನ್ನ ಪ್ರತಿಕ್ರಿಯೆಯು ಸಾಕಷ್ಟು ಚೆನ್ನಾಗಿರಲು ಕೊಡುವ ಸಮಯಾವಕಾಶ ಅದಾಗಿರುವುದು. ತಪ್ಪಾದರೂ, ಕಣ್ಣು ಮುಚ್ಚಿ ಒಪ್ಪಿಕೊಂಡವನು, ಮುಂದೆ ಅದರ ಕುರಿತಾಗಿ ಪ್ರತಿಕ್ರಿಯಿಸುವುದಿಲ್ಲ. ಕ್ಷಮಿಸಿದವನು ಕೂಡಾ ಮುಂದೆ ಆ ಕುರಿತಾಗಿ ಪ್ರತಿಕ್ರಿಯಿಸುವುದಿಲ್ಲ. ಆದರೆ ತಾಳಿದವನು ಬಹಳ ಶಾಂತವಾಗಿ ಮತ್ತು ಉತ್ತಮ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಅದಕ್ಕೆ ಪ್ರತಿಕ್ರಿಯಿಸುತ್ತಾನೆ. ಆದುದರಿಂದಲೇ, ಮಹಾಜೀವನದಲ್ಲಿ ತಾಳ್ಮೆಯು ಒಂದು ಅನಿವಾರ್ಯ ಸ್ವಭಾವವೆಂದು ಹೇಳುವುದು. ಇದನ್ನು ಅಭ್ಯಸಿಸಿದವರು ಕೊನೆ ಕೊನೆಗೆ ಶಾಂತಿಯ ಆ ಮಹಾತ್ಮನ ಹೃದಯವನ್ನು ಪಡೆಯುವರು. ಈ ಸಾಧನೆಗೆ ಸಹಾಯವಾಗಿ ಬರುವುದು ಕೂಡಾ ಆ ಮೂರು ರೀತಿಯ ಮಹಾಜೀವನ ಜ್ಞಾನಗಳೇ ಆಗಿವೆ.

 **********************

ತಾಳ್ಮೆ ಇಲ್ಲದವರಿಗೆ ತಾಳ್ಮೆಯನ್ನು ಪಡೆಯಲು ಸಾಧನೆ ಬೇಕಾಗುವುದು. ನೋಡಿ, ಈ ತಾಳ್ಮೆಯ ದೊಡ್ಡ ಶತ್ರುವು ಅಧಿಕ ಭಾವನೆಯಾಗಿದೆ. ಯಾಕೆಂದರೆ, ಈ ಅಧಿಕ ಭಾವನೆಗಳು ಮಾನವರನ್ನು ಯಾವುದಾದರೂ ಕ್ರಿಯೆಯ ಕಡೆಗೆ ಬಲವಂತವಾಗಿ ತಳ್ಳುವುದು. ಈ ಭಾವನೆಯ ತಳ್ಳುವಿಕೆ ಇಲ್ಲದಲ್ಲಿ ಆ ವ್ಯಕ್ತಿಗೆ ಆಸಕ್ತಿ ಇದ್ದರೂ ಅದು ಆತನ ನಿಯಂತ್ರಣದಲ್ಲಿ ಇರುವುದು. ಒಟ್ಟಲ್ಲಿ, ಈ ಭಾವನೆ ಆಟ ಆಡುವಲ್ಲಿ, ಆ ರಹಸ್ಯ ಪ್ರಾಚೀನ ವಾಮಾಚಾರದ ಕೈವಾಡ ಇರುವುದು ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ. ಆದುದರಿಂದ, ತಾಳ್ಮೆಯ ಸಾಧನೆ ಮಾಡುವವರು ಈ ರಹಸ್ಯ ಸೂಕ್ಷ್ಮ ಶಕ್ತಿಗಳ ಪ್ರಭಾವಗಳ ಬಗ್ಗೆ ಕೂಡಾ ಅರಿತು ಸಾಧನೆ ಮಾಡಬೇಕಾಗಿದೆ.

ಅರಿಯುವಿಕೆಯ ಲಾಭವು, ಆ ವ್ಯಕ್ತಿಗೆ ತನ್ನ ಅರಿಯುವಿಕೆಯ ಸಹಾಯದಿಂದ ಸಾಧನೆ ಮಾಡಿ ಜಯಗಳಿಸಬಹುದು ಎಂಬಲ್ಲಿಯವರೆಗೆ ಮಾತ್ರ. ಬಹಳ ಎಚ್ಚರವಾಗಿದ್ದು ಸಾಧನೆ ಮಾಡದಿದ್ದರೆ, ಆ ವ್ಯಕ್ತಿಗೆ ಅರಿತುಕೊಂಡದುದರಿಂದ ಪ್ರಯೋಜನವಾಗುವುದಿಲ್ಲ.

ಸ್ವಾರ್ಥ ಮತ್ತು ಅಹಂಕಾರವು ಹೆಚ್ಚು ಇರುವವರಲ್ಲಿ ತಾಳ್ಮೆಯು ಕೂಡ ಇರುವುದಿಲ್ಲ, ಯಾಕೆಂದರೆ, ತನ್ನ ಸ್ವಾರ್ಥ, ಅಹಂಕಾರಗಳಿಗೆ ಪೆಟ್ಟಾದಾಗ ಆ ವ್ಯಕ್ತಿಯ ಭಾವನೆಯು ಸುಮ್ಮನೆ ಕೂರಲಾರದು.

ಮನಸ್ಸಿದ್ದರೆ ಮಾತ್ರ ಮನಸ್ಸನ್ನು ಜಯಿಸಬಹುದು, ಆದರೆ ಮನಸ್ದು ಎಷ್ಟು ಶೇಖಡ ಇದೆ ಎಂದು ಮಾತ್ರ ಇಲ್ಲಿರುವ ಪ್ರಶ್ನೆ.

 *******************

ಆಧ್ಯಾತ್ಮದಲ್ಲಿ ಅದೇ ರೀತಿ, ಮಹಾತ್ಮರಲ್ಲಿ, ದೇವರ ಅನುಗ್ರಹಕ್ಕಾಗಿ ಅಲ್ಲದೆ, ಬರೇ ಸಹನೆಯ ಶಕ್ತಿಯನ್ನು ಹೆಚ್ಚಿಸಲು ಮಾತ್ರವಾಗಿ ಮಾಡುವ ಕೆಲವು ಸಾಧನೆಗಳು ಇರುತ್ತವೆ. ಇದರ ಲಾಭವೆಂದರೆ, ಮನುಷ್ಯನ ಬೇಕುಗಳನ್ನು ಹೇಳಿದಂತೆ ಕೇಳುವಲ್ಲಿಗೆ ತಂದಿಡುವುದಾಗಿದೆ. ಆಹಾರದ ರುಚಿಯನ್ನು ಬಿಟ್ಟು ಜೀವಿಸುವುದು, ಉಪವಾಸ, ಮೌನ ವ್ರತ, ಇತ್ಯಾದಿಗಳೆಲ್ಲಾ ಸಹನೆಯನ್ನು ಹೆಚ್ಚಿಸುವವು. ಈ ಸಹನೆಯನ್ನು, ‘ನಾನು’ ಎಂಬ ಆ ‘ತನ್ನನ್ನು ತಾನು ಎತ್ತಿ ಹೇಳುವ ಆಸೆ’ ಎಂಬ ಅಹಂಕಾರದ ಭಾವವನ್ನು ಪಳಗಿಸುವಲ್ಲಿ ಉಪಯೋಗಿಸಲಾಗುವುದು. ಆಗಲೇ, ಆ ಎಲ್ಲಾ ಸಾಧನೆಗಳು ಪೂರ್ಣವಾಗುವುದು. ಇನ್ನೊಮ್ಮೆ ಹೇಳುವೆನು, ದೇವರ ಲೋಕಕ್ಕೆ ಹೋಗಲು, ದೇವರಿಂದ ಅನುಗ್ರಹ ಪಡೆಯಲು, ಇತ್ಯಾದಿ ರೀತಿಯ ಸಾಧನಾ ವಿಚಾರವಲ್ಲ ಇಲ್ಲಿ ಹೇಳುತ್ತಿರುವುದು. ಜ್ಞಾನದಲ್ಲಿರುವವರು ಆ ರೀತಿಯಲ್ಲಿ ಸಾಧನೆಗಳನ್ನು ಮಾಡುವುದಿಲ್ಲ. ಈಗ, ಇಲ್ಲಿ ಇರುವ ಆ ಮುಖ್ಯ ಅಂಶ ಎಂದರೆ, ತಾಳ್ಮೆಯನ್ನು ನೇರವಾಗಿ ಅಭ್ಯಸಿಸುವಾಗ, ಅಲ್ಲಿ ಸಹನೆಯು ಸೃಷ್ಟಿಯಾಗುವುದು ಎಂಬುದಾಗಿದೆ. ಅದೇ ರೀತಿ, ಸಹನೆಯನ್ನು ಅಭ್ಯಸಿಸಿ ಕೂಡಾ ಅದು ತಾಳ್ಮೆಯ ಅಭ್ಯಾಸವಾಗಿ, ಸ್ವಲ್ಪ ಚಿಂತನೆಯ ಸಹಾಯದಿಂದ, ಮಾಡಿಕೊಳ್ಳಬಹುದು ಎಂಬುದಾಗಿದೆ. ಒಟ್ಟಲ್ಲಿ, ಅಹಂಕಾರದ ನಿಯಂತ್ರಣ ಆದರೆ ಸಾಕು ಅಷ್ಟೆ. ಇವೆಲ್ಲಾ ಬಾಹ್ಯ ಸಾಧನೆಗಳಿಂದ ತಾಳ್ಮೆ, ಅಹಂಕಾರದ ನಿಯಂತ್ರಣ, ಇತ್ಯಾದಿಗಳನ್ನು ಪಡೆಯುವ ರೀತಿಯಾಗಿದೆ. ಆದರೆ ಮೊದಲೇ ತಿಳಿಸಿರುವಂತೆ, ತಾಳ್ಮೆಯನ್ನು ಪಡೆಯುವ ಆ ಸುಲಭ ಹಾಗೂ ಅತ್ಯುನ್ನತ ಸಾಧನಾ ರೀತಿಯು, ‘ಆ ಮೂರು ರೀತಿಯ ಜ್ಞಾನಗಳ ಭೋಧವಾಗಿರುವ ಸ್ಥಿತಿ’ ಆಗಿರುವುದು ಎಂಬುದರಲ್ಲಿ ಸಂಶಯವಿಲ್ಲ.

 ***************************

ತಾಳ್ಮೆಯ ಕುರಿತಾಗಿ ನಾವು ಸಾಕಷ್ಟು ಮಾತನಾಡಿ ಆಯಿತು. ಇನ್ನು, ಈ ತಾಳ್ಮೆಯ ವಿರುದ್ಧ ಸ್ವಭಾವವಾದ ‘ಅವಸರ’ ಎಂಬುವುದರ ತೊಂದರೆಗಳ ಬಗ್ಗೆ ಇಲ್ಲಿ ತಿಳಿಯೋಣ.

ಈಗ ಒಂದು ಪ್ರಶ್ನೆ. ಅವಸರದಿಂದ ಜನರಿಗೆ ತಮ್ಮ ಜೀವನದಲ್ಲಿ ಲಾಭ ಎಲ್ಲಿಯಾದರೂ ಉಂಟಾಗುವುದೇ ಎಂಬುವುದೇ ಆ ಪ್ರಶ್ನೆಯಾಗಿದೆ. ಕೆಲವರು, ಬಸ್ಸು ತಪ್ಪುವುದನ್ನು ತಡೆಗಟ್ಟಲು ಅವಸರ ಬೇಕು ಎನ್ನುವುದು ಇದೆ. ಇನ್ನು, ಬೇಗನೆ ಕೆಲಸ ಮಾಡಿ ಮುಗಿಸಬೇಕಾದರೂ ಅವಸರದ ಅಗತ್ಯವಿದೆ ಎನ್ನಬಹುದು. ಆದರೆ ಅವೆಲ್ಲಾ ತಪ್ಪು. ಯಾಕೆಂದರೆ, ಅವಸರ ಎಂದರೆ ಅವರು ತಿಳಿದಂತೆ, ‘ವೇಗ’ ಎಂಬ ಅರ್ಥವಲ್ಲ ನಿಜವಾಗಿಯೂ ಅದಕ್ಕಿರುವುದು.

ನಾವು ಸಾಧ್ಯವಾಗುವುದಾದರೆ, ವೇಗವಾಗಿ ಕೆಲಸ ಮಾಡಬಹುದು, ಆದರೆ ಅವಸರವಾಗಿ ಕೆಲಸ ಮಾಡಬಾರದು. ಯಾಕೆಂದರೆ, ಅವಸರದಲ್ಲಿ ನಾವು ಈ ಹಿಂದೆ ಚರ್ಚಿಸಿದ ಆ ಭಾವನೆಗಳ ಅಧಿಕ ಒತ್ತಡವಿರುತ್ತದೆ. ಇನ್ನು, ಭಾವನೆಯ ಅಧಿಕ ಒತ್ತಡದಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳು ಕೂಡಾ ಭಾವನೆಯ ಅಧಿಕ ಒತ್ತಡ ಇಲ್ಲದೆ ಮಾಡುವ ಕೆಲಸಕ್ಕಿಂತ ಕಳಪೆಯದ್ದಾಗಿರುತ್ತದೆ! ಅಂದರೆ, ನಾವು ವೇಗವಾಗಿ, ತಪ್ಪಿಲ್ಲದೆ, ಕೆಲಸಮಾಡುವುದು ಒಂದು ನೈಪುಣ್ಯತೆಯಾದರೆ, ಅವಸರವಾಗಿ ಕೆಲಸಮಾಡುವುದು ಮಾನಸಿಕ ದುರ್ಬಲತೆ ಅಥವಾ ಕೆಲಸ ಮಾಡುವಲ್ಲಿನ ನೈಪುಣ್ಯತೆಯ ಕೊರತೆಯಾಗುವುದು ಎಂದು ಅರ್ಥ. ಇತ್ತ, ತಾಳ್ಮೆ ಇದ್ದವರಿಗೆ ಈ ದುರ್ಬಲತೆ ಅಥವಾ ಕೊರತೆಯು ಇರುವುದಿಲ್ಲ. ಒಂದನ್ನು ಅಂತೂ ನಾವು ತಿಳಿದಿರಲೇಬೇಕು. ಅದೇನೆಂದರೆ, ನಾವು ಚಡಪಡಿಸುವುದಾದರೆ, ಅದನ್ನು ಕೂಡಲೇ ಗಮನಿಸಿ, ಚಡಪಡಿಸದಂತೆ ನಮ್ಮನ್ನು ನಾವು ನೋಡಿಕೊಳ್ಳವುದೇ ಅದಾಗಿರುವುದು.

ಆ ಸೂಕ್ಷ್ಮದ ರಹಸ್ಯ ಪ್ರಾಚೀನ ವಾಮಾಚಾರದ ಕೈವಾಡವು ಎಲ್ಲಾ ಕಡೆಯೂ ಇರುವಾಗ, ಈ ಚಡಪಡಿಸುವಿಕೆಯು ಎಲ್ಲರಲ್ಲಿಯೂ ಕೆಲವು ಸಂದರ್ಭಗಳಲ್ಲಿ ಕಾಣಿಸುವುದು ಸಹಜ. ತಾಳ್ಮೆ ಇರುವವರು ಮತ್ತು ಜ್ಞಾನಿಗಳು ಆ ಸಮಯದಲ್ಲಿ ಅದನ್ನು ಸ್ಪಷ್ಟವಾಗಿ ತಿಳಿದು ಬಹಳ ಜಾಗೃತರಾಗಿ ವರ್ತಿಸುತ್ತಾರೆ ಅಷ್ಟೆ. ಇತರರಿಗೆ, ಚಡಪಡಿಸುವಿಕೆಯು ಬರುವುದು ಮತ್ತು ಹೋಗುವುದು ಗೊತ್ತೇ ಆಗುವುದಿಲ್ಲ! ಜೀವನವು ಜಾಗೃತ ಪ್ರಜ್ಞೆಯಲ್ಲಿ ಇರುವುದೇ ಮಹಾತ್ಮರ ಆ ದೊಡ್ಡ ಲಕ್ಷಣವಾಗಿದೆ.

ಎಲ್ಲರ ಜೀವನ ಗಾಡಿಯು ಜಾಗೃತ ಪ್ರಜ್ಞೆ ಎಂಬ ಹಳಿಯ ಮೇಲೆಯೇ ಸದಾ ಸಂಚರಿಸುವಂತಾಗಲಿ ಮತ್ತು ಅದರಿಂದ ಜೀವನದಲ್ಲಿ ನೆಮ್ಮದಿ, ಶಾಂತಿಗಳು ನಿಮಗೆ ದೊರಕುವಂತಾಗಲಿ ಎಂದು ಹಾರೈಸುವೆನು.

 ********************

ಒಬ್ಬಾತನ ಆಲೋಚನೆಯ ಮರಿಗಳೇ ಆತನ ಜೀವನವಾಗಿದೆ. ಆ ವ್ಯಕ್ತಿಯಲ್ಲಿರುವ ಆಲೋಚನೆ-ತಾಯಿಯು ಅಸುರ ಮರಿಗಳನ್ನು ಇಡುತ್ತಾ ಹೋದರೆ, ಆ ವ್ಯಕ್ತಿ ಅಸುರನಂತೆ ಆಗುವನು, ಮತ್ತು ಮರಿಗಳು ದೈವತ್ವವನ್ನು ಹೊಂದಿರುವುದಾದರೆ ಆ ವ್ಯಕ್ತಿಯು ಮಹಾತ್ಮನಾಗುವನು. ಆದುದರಿಂದ, ಮನೆ ಮನೆ ಮಹಾತ್ಮನಾಗಿ ತನ್ನ ಬಾಳನ್ನು ಬೆಳಗಿಸಬೇಕೆಂದು ಯಾರಿಗಾದರೂ ಇದ್ದರೆ ಆ ವ್ಯಕ್ತಿಯು ತನ್ನ ಆಲೋಚನೆ ಎಂಬುವುದನ್ನು ಪೂರ್ಣವಾಗಿ ತನ್ನ ಮೊದಲ ರೀತಿಗಿಂತ ಬದಲಿಸಬೇಕಾಗುವುದು. ಆಲೋಚನೆ ಮಾಡುವ ರೀತಿಯೇ ಒಬ್ಬಾತನನ್ನು ಕಳ್ಳನೋ ಉತ್ತಮನೋ ಆಗಿ ಬದಲಿಸುವುದು.

ಇನ್ನು, ತಾಳ್ಮೆ ಎಂಬ ಸ್ವಭಾವವನ್ನು ಪಡೆಯಲು ಕೂಡಾ ನಾವು ಮೊದಲು ಸಾಧನೆಯ ಸಹಾಯದಿಂದ ಆಲೋಚನಾ ವಿಧಾನವನ್ನು ಬದಲಿಸಿಕೊಳ್ಳಬೇಕು.

ನೋಡಿ, ನಾವು 1000% ಮನಸ್ಸು ಕೊಟ್ಟರೆ 100℅ ಮನಸ್ಸು ಉಂಟಾಗುವುದು. ಯಾಕೆಂದರೆ, ಆ ರಹಸ್ಯ ವಾಮಾಚಾರವು ಉಳಿದ ಎಲ್ಲವನ್ನೂ ಕಬಳಿಸುತ್ತದೆ. ಹೀಗಿರುವಾಗ, 50% ಮನಸ್ದು ಕೊಟ್ಟವರ ಗತಿ ಏನಾಗಿರಬಹುದು?

 ***********************

 ಆದರ್ಶ

ಆದರ್ಶ ಎಂದರೆ, ಉತ್ತಮರಾಗುವಲ್ಲಿ, ಎಲ್ಲಾ ಜನರು ಕೂಡಾ ಅನುಸರಿಸಬೇಕಾದ ಜೀವನ ಮೌಲ್ಯಗಳ ವ್ಯಯಕ್ತಿಕ ಹಾಗೂ ಸಾಮಾಜಿಕ ಧೋರಣೆಗಳು ಅಥವಾ ನಿಲುವುಗಳು ಆಗಿರುವುದು. ಈ ಭೂಮಿಯಲ್ಲಿ, ಆದರ್ಶಗಳಿಗೆ ಬರಹದಲ್ಲಿ ಏನು ಕಡಿಮೆ ಇಲ್ಲ. ನೋಡಿ, ‘ಸತ್ಯವನ್ನು ನುಡಿಯಬೇಕು’ ಎಂಬುವುದು ಒಂದು ದೊಡ್ಡ ಆದರ್ಶವಾಗಿದೆ, ಅದನ್ನು 100% ಜನರು ಆದರ್ಶವೆಂದು ಒಪ್ಪುವರು. ಆದರೆ, ಅದನ್ನು ಈ ಭೂಮಿಯಲ್ಲಿ 90% ವಾದರೂ ಅನುಸರಿಸುವವರು 5 % ಕ್ಕಿಂತಲೂ ಕಡಿಮೆ ಜನ ಇರಬಹುದು ಅಷ್ಟೆ. ಅದರ್ಶವು ನಿಜವಾಗಿಯೂ ಒಬ್ಬ ವ್ಯಕ್ತಿಗೆ ಜೀವನಾನಂದವನ್ನು ತಂದುಕೊಡುವುದು. ಅದಕ್ಕೆಂದೇ, ಎಲ್ಲರೂ ಅದನ್ನು ಅನುಸರಿಸಬೇಕು ಎನ್ನುವುದು. ದುರದೃಷ್ಟವಶಾತ್, ಜನರು ತಾತ್ಕಾಲಿಕ ಲಾಭಕ್ಕಾಗಿ ಆದರ್ಶಕ್ಕೆ ವಿರುದ್ಧವಾಗಿ ನಡೆಯುವರು. ಇನ್ನೊಂದು ತೊಂದರೆ ಎಂದರೆ, ಕೆಟ್ಟವರೇ ತುಂಬಿರುವ ಸಮಾಜದಲ್ಲಿ, ಆದರ್ಶವನ್ನೇ ಕೀಳಾಗಿ ಬಿಂಬಿಸುವ ಪ್ರಯತ್ನ ನಡೆಯಬಹುದು. ಆಗ ಅದರ್ಶವು ಕಷ್ಟಕ್ಕೆ ತುತ್ತಾಗಬಹುದು. ಇಷ್ಟಾದರೂ, ಆದರ್ಶವೇ ಮತ್ತು ಕೂಡಾ ಒಬ್ಬ ವ್ಯಕ್ತಿಯ ಆನಂದದ ಜೀವನಕ್ಕೆ ಕಾರಣವಾಗುವುದು, ಇದರಲ್ಲಿ ಸಂಶಯವಿಲ್ಲ.

ಒಟ್ಟಲ್ಲಿ, ಆದರ್ಶವನ್ನು ಕೊಲ್ಲುವವರು ತಾತ್ಕಾಲಿಕ ಲಾಭವನ್ನು ಗಳಿಸುವರು, ಆದರೆ ತಮ್ಮ ಸುಧೀರ್ಘ ಜೀವನದಲ್ಲಿ ಶಾಂತಿ, ನೆಮ್ಮದಿ, ಆನಂದಗಳನ್ನು ಹಲವು ರೀತಿಗಳಲ್ಲಿ ಕಳಕೊಳ್ಳುವರು. ಇತ್ತ, ಆದರ್ಶವಂತರು, ಕೆಲವು ಕಡೆ ಜನರ ನಿಂದನೆ, ಮೋಸಕ್ಕೆ ಒಳಗಾದರೂ, ಅವರು ಮಾತ್ರವೇ ತಮ್ಮ ಸುಧೀರ್ಘ ಜೀವನದಲ್ಲಿ ಶಾಂತಿ, ನೆಮ್ಮದಿ, ಆನಂದಗಳನ್ನು ಅನುಭವಿಸುವವರಾಗಿರುವರು.

 ********************

ಆದರ್ಶದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇನ್ನು, ಆದರ್ಶಗಳು ಹಲವು ಇವೆ. ಅವನ್ನು ಒಟ್ಟಾಗಿ ಬೇರೆ ರೀತಿಯಲ್ಲಿ ಹೇಳುವುದಾದರೆ, ‘ಅದರ್ಶವು, ತನಗೂ ಇತರಿಗೂ ಒಳಿತಾಗುವ ತರದಲ್ಲಿ ಮಾಡಿಟ್ಟಿರುವ ಆ ಮಾನವೀಯ ನಿಯಮಗಳ ಪಾಲನೆ’ ಎಂದು ಹೇಳಬಹುದು.

ಇಲ್ಲಿ, ಒಂದು ವಿಷಯವನ್ನು ಅರಿಯಬೇಕಾಗಿದೆ. ಅದೇನೆಂದರೆ, ಎಲ್ಲಾದರೂ ಜಗತ್ತಿನ ಆ ಯಾವುದೇ ಧರ್ಮ, ಪಂಥ, ಜಾತಿಗಳ ಹಿನ್ನೆಲೆಯಲ್ಲಿ, ಕೆಲವೊಂದು ಹೀನ ಸಂಕುಚಿತತೆಗಳನ್ನು ಆದರ್ಶ ಎಂದು ಕರೆಯಲು ಪ್ರಯತ್ನಿಸಿದರೆ, ಅದು ಆದರ್ಶವಾಗುವುದಿಲ್ಲ. ಒಂದು ಉದಾಹರಣೆ ಎಂದರೆ, ‘ಆತನು ಆದರ್ಶ ಮೇಲು ಜಾತಿಯವನು’ ಯಾಕೆಂದರೆ, ಆತನು ತನ್ನ ಜಾತಿಯ ಕೆಲಸವನ್ನು ತಪ್ಪದೆ ಮಾಡುತ್ತಾನೆ ಎಂದು ಅತ್ತ ವಿವರಣೆಯನ್ನು ಕೊಡುವಾಗ, ಆತನು, ಇತ್ತ, ಇತರ ಜಾತಿಯವರನ್ನು ಕೀಳಾಗಿ ನೋಡುವುದಾದರೆ, ಅದು ಆದರ್ಶ ಆಗುವುದಿಲ್ಲ ಖಂಡಿತ. ಆದುದರಿಂದ ಆದರ್ಶ ಆಗಬೇಕಿದ್ದಲ್ಲಿ, ಅಲ್ಲಿ ಬೇಕಾಗಿರುವುದು, ಧರ್ಮ, ಜಾತಿಯ ಹಿನ್ನೆಲೆಯ ವಿಧಾನಗಳು ಅಲ್ಲ, ಬದಲು, ಅದು ಮಾನವತೆಯ ಹಿನ್ನೆಲೆಯಲ್ಲಿ ವಿವರಿಸಲ್ಪಟ್ಟಿರಲೇಬೇಕು ಎಂಬುದಾಗಿದೆ. ಆದುದರಿಂದ, ಎಲ್ಲಾದರೂ, ಜಾತಿ, ಧರ್ಮಗಳ ಆ ‘ಸಂಕುಚಿತ ನಿಯಮ’ ಗಳನ್ನು ಆದರ್ಶ ಎಂದು ಯಾರಾದರೂ ಹೇಳಿಕೊಳ್ಳುವುದಾದರೆ, ‘ಅದು ಆದರ್ಶವಾಗುವುದಿಲ್ಲ, ಬದಲು ಆದರ್ಶದ ಕೊಲ್ಲುವಿಕೆ ಮಾತ್ರ ಆಗುವುದು’ ಎಂದು ಅವರಲ್ಲಿ ಸ್ಪಷ್ಟವಾಗಿ ಮತ್ತು ಖಂಡಿತವಾಗಿ ಹೇಳಬಹುದು.

 **************************

ಆದರ್ಶವೇ ತನ್ನ ಜೀವನವಾದಾಗ ಆ ವ್ಯಕ್ತಿ ಮಹಾತ್ಮನಾಗುವನು. ಮೊದಲೇ ಹೇಳಿರುವಂತೆ, ಅದು ನಿಜವಾದ ಆದರ್ಶವೇ ಆಗಿರಬೇಕು ಎಂಬುವುದು ಆ ಮುಖ್ಯವಿಷಯವಾಗುವುದು. ನೋಡಿ, ನಂಬಿಕೆಗಳು ಆದರ್ಶಗಳಲ್ಲ, ದೇವರ ಮೇಲಿನ ಭಕ್ತಿಯು ಆದರ್ಶವಲ್ಲ, ಧರ್ಮ ಪರಿಪಾಲನೆಯು ಆದರ್ಶವಲ್ಲ. ಅಚ್ಚರಿ ಪಡಬೇಡಿ, ಸ್ವಲ್ಪ ಆಲೋಚಿಸುವಾಗಲೇ ಈ ಮಾತಿನ ಸತ್ಯವು ಅರ್ಥವಾಗುವುದು. ಯಾಕೆ ಇವು ಆದರ್ಶಗಳಲ್ಲ ಎಂದರೆ, ಇವುಗಳು ಸಾರ್ವತ್ರಿಕಗಳಲ್ಲ. ಒಬ್ಬರ ನಂಬಿಕೆ ಇನ್ನೊಂದು ಧರ್ಮದವನಿಗೆ ನರಕದ ಹಾದಿಯಾಗುವುದು. ಅದೇ ರೀತಿ ಇತರ ಎಲ್ಲವೂ ಕೂಡಾ! ಮಾತ್ರವಲ್ಲ, ಇವುಗಳು ಈ ಭೂಮಿಯಲ್ಲಿ ದ್ವೇಷ, ಹಿಂಸೆ, ರಕ್ತಪಾತಗಳನ್ನು ಸಾಗರದಷ್ಟು ಈಗಾಗಲೇ ಸೃಷ್ಟಿಸಿ ಆಗಿದೆ. ಹೀಗಿರುವಾಗ, ಅವು ಆದರ್ಶವಾಗಿ ಅಸ್ತಿತ್ವದಲ್ಲಿ ಇಲ್ಲ ಎಂಬುವುದು ಸ್ಪಷ್ಟ ವಾಗುವುದು, ಮತ್ತು ಅದಕ್ಕೆ ಅವು ಆದರ್ಶಗಳಲ್ಲ ಅಷ್ಟೆ. ಈಗ ಒಂದು ಪ್ರಶ್ನೆ ಎಂದರೆ, ಒಬ್ಬೊಬ್ಬನಿಗೆ ಒಂದೊಂದು ಆದರ್ಶ ಇರಲು ಸಾಧ್ಯವೇ? ಇಲ್ಲ, ಹಾಗಿದ್ದಲ್ಲಿ, ಅದು ಸ್ವೇಚ್ಛೆ ಮಾತ್ರವಾಗುವುದು. ಅದರ್ಶವು ಮನು ಕುಲಕ್ಕೆ ಸಂಬಂಧಿಸಿದುದು. ಹಾಗಿರುವಾಗ, ಪ್ರತಿ ಜಾತಿ, ಧರ್ಮ, ಪಂಥ, ದೇವರಿಗೆ ಒಂದೊಂದು ಬೇರೆ ಬೇರೆ ಆದರ್ಶ ಇರಲು ಸಾಧ್ಯವಿಲ್ಲ. ದುರದೃಷ್ಟವಶಾತ್, ಜಾತಿ, ಧರ್ಮ, ಪಂಥ, ದೇವರುಗಳು ತಮ್ಮದು ಮಾತ್ರ ಆದರ್ಶ, ಇತರ ಎಲ್ಲವೂ ಆದರ್ಶವೇ ಅಲ್ಲ ಎಂದು ತಿಳಿಯುತ್ತವೆ. ಇದು ಆದರ್ಶದ ಶತ್ರು ಮಾಡುವ ಕೆಲಸವಾಗಿದೆ, ಆದರ್ಶ ಮಾಡುವ ಕೆಲಸವಲ್ಲ. ಈ ಕಾರಣದಿಂದ, ಅವು ದ್ವೇಷ, ಹಿಂಸೆ, ರಕ್ತಪಾತಗಳನ್ನು ಸೃಷ್ಟಿಸಿಹಾಕಿರುವುದು ಎಂದು ತಿಳಿಯಬೇಕು.

ಹಾಗಿದ್ದರೆ, ಧರ್ಮ, ದೇವರು ಇತ್ಯಾದಿಗಳು ಆದರ್ಶವಾಗುವುದು ಯಾವಾಗ? ಇದರ ಉತ್ತರ, ಅವುಗಳು, ಆ ಸಾರ್ವತ್ರಿಕ ಮತ್ತು ದೈವಿಕಅಮೃತ ಎಂಬ ಸತ್ಯ, ಪ್ರೀತಿ, ನೀತಿಗಳ ಹಿನ್ನೆಲೆಯಲ್ಲಿ ಮುಖ್ಯವಾಗಿಯೂ ವಿವರಿಸಲ್ಪಟ್ಟಾಗ ಮಾತ್ರವಾಗಿದೆ. ಇವು ಮೂರು ಸಾರಾಮೃತಗಳು ಇಲ್ಲದಲ್ಲಿ, ಧರ್ಮವು, ಧರ್ಮವೇ ಆಗುವುದಿಲ್ಲ, ಮತ್ತು ದೇವರು, ದೇವರೇ ಆಗುವುದಿಲ್ಲ! ಈ ಪರಮ ಸತ್ಯವನ್ನು ಅರಿತು, ಇನ್ನಾದರೂ, ಕಬ್ಬಿನಲ್ಲಿ, ಕಬ್ಬಿನ ಸಿಪ್ಪೆಯಲ್ಲ ಮುಖ್ಯ ಅದರ ಹಾಲು ಮುಖ್ಯ ಎಂದು ತಿಳಿದು, ಎಲ್ಲಾ ಧರ್ಮ, ಪಂಥಗಳು ಸಾರಧರ್ಮ, ಸಾರದೇವರು ಇವುಗಳ ವಿವರಣೆಗಳನ್ನು ಮಾನವ ಕುಲದ ಉಳಿವಿಗಾಗಿ ಎತ್ತಿ ಹಿಡಿಯಬೇಕಾಗಿದೆ. ಈ ರೀತಿಯಲ್ಲಿ, ಪ್ರತಿ ಧರ್ಮ, ಪಂಥವು ಕೂಡಾ ಜಗತ್ತಿಗೆ ಆದರ್ಶವಾಗಬೇಕಾಗಿದೆ.

 **********************

ಆದರ್ಶ ವ್ಯಕ್ತಿಯ ಪ್ರತ್ಯೇಕತೆ ಏನೆಂದು ತಿಳಿಯಲು ಪ್ರಯತ್ನಿಸೋಣ. ಆಗ, ಅದರ ಮಹತ್ವವು ಸ್ಪಷ್ಟವಾಗುವುದು. ನೋಡಿ, ಆದರ್ಶ ವ್ಯಕ್ತಿಯು ಮುಖ್ಯವಾಗಿಯೂ, ಸತ್ಯಸಂಧನಾಗಿರುತ್ತಾನೆ. ಅದಿಲ್ಲವಾದರೆ, ಆ ವ್ಯಕ್ತಿಯು ಆದರ್ಶ ವ್ಯಕ್ತಿ ಆಗಿರುವುದಿಲ್ಲ.

ಆದರ್ಶ ವ್ಯಕ್ತಿಯು ತನ್ನ ಆದರ್ಶದ ಬಗ್ಗೆ ತುಂಬಾ ತುಂಬಾ ಆಳದಲ್ಲಿ ಚಿಂತಿಸಿ ಆದರ್ಶವನ್ನು ಅರಗಿಸಿಕೊಂಡು ರಕ್ತಗತ ಮಾಡಿಕೊಂಡಿರುತ್ತಾನೆ. ಅಂದರೆ, ತನಗೂ ಇತರಿಗೂ ಅದು ಜೀವನ ಶಾಂತಿ, ನೆಮ್ಮದಿ ಆನಂದಗಳೆಂಬ ಆ ಅತಿಯಾದ ಲಾಭವನ್ನು ಸೃಷ್ಟಿಸುವುದು ಎಂಬುವುದರ ಬಗ್ಗೆ ಸ್ಪಷ್ಟವಾಗಿ ಅರಿತಿರುತ್ತಾನೆ ಎಂದು ಅರ್ಥ.

ಆದರ್ಶ ವ್ಯಕ್ತಿಯು ಆದರ್ಶವನ್ನು ಕಷ್ಟಪಟ್ಟು ಪಾಲಿಸುವುದಿಲ್ಲ, ಬದಲು ಇಷ್ಟದಿಂದ ಪಾಲಿಸುವನು. ಅಂದರೆ, ಅವರ ಜೀವನವೇ ಆ ರೀತಿಯಲ್ಲಿರುವುದು. ಮಾತ್ರವಲ್ಲ ಇನ್ನೂ ಹಲವು ಪ್ರತ್ಯೇಕತೆಗಳು ಕೂಡಾ ಆದರ್ಶ ವ್ಯಕ್ತಿಗಳಿಗೆ ಇರುತ್ತವೆ.

ಒಟ್ಟಲ್ಲಿ, ಹೆಚ್ಚಿನ ಜನರಿಗೂ, ಉತ್ತಮರಾಗುವಲ್ಲಿ, ಈ ಆದರ್ಶ ವ್ಯಕ್ತಿತ್ವಗಳು ಒಂದು ಪ್ರೇರಕ ಶಕ್ತಿಯಾಗುವರು ಎಂದು ಹೇಳಬಹುದು. ನೋಡಿ, ಮನೆ ಮನೆಗಳಲ್ಲಿ ಆದರ್ಶದ ಬಗ್ಗೆ ಮಾತನಾಡುವುದೋ, ಅಥವಾ ಆದರ್ಶದ ವ್ಯಕ್ತಿತ್ವಗಳ ಸಹವಾಸವೋ ಇಲ್ಲದೆ, ಸರ್ವರೂ, ಜೀವನದಲ್ಲಿ ಸ್ವಾರ್ಥದ ಸ್ಪರ್ಧೆಯಲ್ಲಿ ಮಾತ್ರ ಮುಳುಗಿಹೋಗಿರುವರು. ಇದು ಆ ಜನರನ್ನು ಕೆಲವೊಮ್ಮೆ ಸಂತೋಷದಲ್ಲಿ ಕುಣಿಯುವಂತೆಯೂ, ಆದರೆ ಹೆಚ್ಚಿನ ಇತರ ಸಮಯಗಳಲ್ಲಿ ದುಃಖದಲ್ಲಿ ಕುಸಿಯುವಂತೆಯೂ ಮಾಡುತ್ತಿರುತ್ತದೆ!

ಆದರ್ಶದ ಮಹತ್ವವು ಇಂದು ಜನತೆಗೆ ಅನಿವಾರ್ಯವಾಗಿದೆ, ಇಲ್ಲವಾದರೆ, ಮನುಷ್ಯರ ಅಹಂಕಾರದ ಆ ದಶಾವತಾರಗಳನ್ನು ಪ್ರತಿ ಮನೆ, ಸಮಾಜಗಳಲ್ಲಿ ಮುಂದೆ ಮತ್ತೂ ಭಯಾನಕವಾಗಿ ಎದುರಿಸಬೇಕಾಗುವುದು! ಜಗತ್ತು ಈಗಲೇ ಎಚ್ಛೆತ್ತುಕೊಳ್ಳಲಿ. ಮನೆ, ಮನೆಯ ಮಹಾತ್ಮರ ಆ ಆದರ್ಶ ಜೀವನದ ಲಾಭ ಮತ್ತು ಅದರ ಮಹತ್ವದ ಬಗ್ಗೆ ಅರಿಯಲು ಮುಂದಾಗಲಿ.

 *******************

ಆದರ್ಶದ ಬಗ್ಗೆ ಈಗಾಗಲೇ ಸಾಕಷ್ಟು ತಿಳಿದಿದ್ದೇವೆ. ಇನ್ನು ಆದರ್ಶ ಇಲ್ಲದಿದ್ದರೆ ಅದರಿಂದ ಏನೆಲ್ಲಾ ತೊಂದರೆಗಳು ಉಂಟಾಗಬಹುದು ಎಂಬುವುದರ ಬಗ್ಗೆ ನೋಡಿಬಿಡೋಣ.

ಆದರ್ಶವನ್ನು ಆಧರಿಸದ ಮನೆಯು ದ್ವೇಷ, ಕಲಹಗಳ ಗುಹೆಯಾಗುವುದು. ಅಲ್ಲಿ, ಸ್ವಾರ್ಥದ ಬೆಂಕಿಯ ತಲೆಗಳು ತಮ್ಮೊಳಗೆ ತಲೆಕೆಡಿಸಿಕೊಳ್ಳುತ್ತಿರುತ್ತವೆ!

ಆದರ್ಶ ಎಂದರೆ, ಅದು, ಮನೆಯನ್ನು, ಸಮಾಜವನ್ನು, ದೇಶವನ್ನು, ಲೋಕವನ್ನು ಅಶಾಂತಿಯಿಂದ ಶಾಂತಿಯೆಡೆಗೆ ತಳ್ಳುವ ಆ ದೊಡ್ಡ ಯಂತ್ರವಾಗಿದೆ. ಇವುಗಳ ಅಭಾವವೇ, ಮನ, ಮನೆ, ಸಮಾಜ, ದೇಶ, ಲೋಕ ಇವೆಲ್ಲದರ ನಾಶವಾಗುವುದು. ಆದುದರಿಂದ ನಿಮ್ಮ ಮನ, ಮನೆ, ಸಮಾಜ ಇತ್ಯಾದಿಗಳು ಶಾಂತಿ, ನೆಮ್ಮದಿಯಿಂದ ಇರಬೇಕಾದರೆ, ಆದರ್ಶಗಳನ್ನು ಪೂಜಿಸಲು ಇಂದೇ ಆರಂಭಿಸಿರಿ.

ಈ ಎಲ್ಲಾ ಆದರ್ಶಗಳ ಮೂಲವು ಸತ್ಯ, ಪ್ರೀತಿ, ನೀತಿಗಳಾಗಿವೆ. ಈ ಕಾರಣಕ್ಕೆ, ಎಲ್ಲಾ ಆದರ್ಶಗಳ ಆ ಒಟ್ಟು ಆರಾಧನೆಯು ಈ ಮೂರು ದಿವ್ಯಾಮೃತಗಳ ಆರಾಧನೆಗೆ ಸಮವಾಗುವುದು. ಇದನ್ನೇ, ಮಹಾಜೀವನದಲ್ಲಿ ಮತ್ತು ದಿವ್ಯಜ್ಞಾನ ಸನ್ನಿಧಿಗಳಲ್ಲಿ ಮಾಡುತ್ತಿರುವುದು.

ಜಗತ್ತು, ಇನ್ನಾದರೂ, ಸ್ವಾರ್ಥದ ಆ ಹಲವು ತರದ ಭ್ರಮೆಗಳಿಂದ ಎಚ್ಚೆತ್ತು ಆದರ್ಶದ ಪೂಜೆಗೆ ತಯಾರಾಗಲಿ. ಆಗಲೇ, ಮಾನವತೆಯ ರೂಪದ ಶಾಂತಿ, ನೆಮ್ಮದಿಗಳ ಆ ದಿವ್ಯ ಗಂಧವು ತನ್ನ ಆನಂದದಿಂದ ಜಗತ್ತನ್ನು ಪುಳಕಿತಗೊಳಿಸುವುದು. ಇದನ್ನೇ ಸತ್ಯಯುಗ ಎನ್ನುವುದು.

 **********************

 ದಯೆ

ದಯೆ ಎಂಬುವುದು ಮೂಲತಃ ಒಂದು ಭಾವನೆಯಾಗಿದೆ. ಈ ದಯೆ ಎಂಬುವುದು ಸಂಕೀರ್ಣವಾದುದು ಏನು ಅಲ್ಲ, ಆದರೆ ಅದನ್ನು ಅರ್ಥಹೀನವನ್ನಾಗಿ ಮಾಡಿಬಿಟ್ಟಿರುವರು ಎಂದರೆ ಬಹಳ ದುಃಖವಾಗುವುದು. ಇದು ಯಾಕೆಂದರೆ, ನೋಡಿ, ಈ ದಯೆ ಎಂಬುವುದು ನಿಜವಾಗಿಯೂ ಸಾರ್ವತ್ರಿಕವಾಗಿರಬೇಕಾದುದು, ಆದರೆ ಅದು ಹಾಗೆ ಆದಿಯಿಂದಲೇ ಇಲ್ಲ. ಇಲ್ಲಿ ಒಂದು ಉದಾಹರಣೆಯನ್ನು ತೆಗೆಯೋಣ. ನೋಡಿ, ಹಿಟ್ಲರನು ಆತನ ಸಾಕು ನಾಯಿಗೆ ಸ್ವಲ್ಪ ನೋವಾದರೂ ಸಹಿಸುತ್ತಿರಲಿಲ್ಲ, ಆಗ ಆತನ ಹೃದಯದಿಂದ ದಯೆ, ಕರುಣೆ ಎಲ್ಲವೂ ಉಕ್ಕಿ ಹರಿದು ಬರುತ್ತಿತ್ತಂತೆ. ಆದರೆ, ಆತನು ಲಕ್ಷಗಟ್ಟಲೆ ಜನರನ್ನು ಕೊಲ್ಲುವಲ್ಲಿ, ಆತನ ಎದೆಯಲ್ಲಿ ಕ್ರೌರ್ಯವು ಮಾತ್ರ ಹೊತ್ತಿ ಉರಿಯಿತಲ್ಲದೆ ಅಲ್ಲಿ ದಯೆ ಎಂಬುವುದರ ಒಂದು ಹನಿಯು ಕೂಡಾ ಹುಟ್ಟಲೇ ಇಲ್ಲ! ಮತ್ತೂ ಅಚ್ಚರಿ ಎಂದರೆ, ಆತನು ಅತ್ಯಂತ ಕ್ರೂರಿಯಾಗಿ ಕಾಣಿಸಿರುವುದು ಆತನ ಧರ್ಮದ ಹಿನ್ನೆಲೆಯಲ್ಲಿ ಎಂಬುವುದಾಗಿರುವುದು!!! ಓಹ್, ಧರ್ಮವು ಶಾಂತಿಗಾಗಿ ಎಂದು ಎಲ್ಲಾ ಧರ್ಮಗಳು ಎತ್ತಿ ಹೇಳುತ್ತಿರುತ್ತವೆ, ಆದರೆ, ಆ ಧರ್ಮ, ಪಂಥಗಳೇ ಹಿಂದಿನಿಂದಲೂ ಅತ್ಯಂತ ಕ್ರೌರ್ಯವನ್ನು ತೋರಿಸುತ್ತಾ ಬಂದಿರುವುದು! ಅಯ್ಯೋ, ಗರ್ಭಿಣಿಯ ಹೊಟ್ಟೆ ಸೀಳುವ ಆ ಕ್ರೌರ್ಯವು ಧರ್ಮಾಂಧತೆಗಲ್ಲದೆ ಬೇರೆ ಯಾವುದಕ್ಕೂ ಸೃಷ್ಟಿಸಲು ಸಾಧ್ಯವಾಗಲಾರದು!! ಇದು ಹೇಗೆ ಸಾಧ್ಯವಾಯಿತು? ನೀರಿಗೆ ಬೆಂಕಿಯಾಗಿ ಉರಿಯಲು ಸಾಧ್ಯವೇ? ಇಲ್ಲವೇ ಇಲ್ಲ. ಅದೇ ರೀತಿಯಲ್ಲಿ, ಶಾಂತಿಯ ಧರ್ಮ, ಪಂಥಗಳಿಗೆ ಕ್ರೌರ್ಯದ ಬೆಂಕಿಯಾಗಿ ಉರಿಯಲು ಸಾಧ್ಯವೇ? ನಿಜವಾಗಿಯೂ ಸಾಧ್ಯವಿಲ್ಲ, ಹಾಗಿರುವಾಗ, ಅದು ಹೇಗೆ ಸಾಧ್ಯವಾಯಿತು?

ನನ್ನ ಹಿಂದಿನ ವೀಡಿಯೋಗಳನ್ನು ನೀವು ನೋಡಿರುವ ಕಾರಣ ಇದರ ಉತ್ತರವನ್ನು ನಾನು ಇಲ್ಲಿ ಹೇಳುವ ಅಗತ್ಯವಿರುವುದಿಲ್ಲ.

ಒಟ್ಟಲ್ಲಿ, ಈ ದಯೆ ಎಂಬುವುದನ್ನು, ಮನುಷ್ಯನು, ಎಲ್ಲಾ ಇತರ ರೀತಿಗಳಂತೆ, ಒಂದು ಸ್ವಾರ್ಥದ ವಸ್ತುವಾಗಿ ಮಾಡಿಕೊಂಡಿರುವನು. ಈ ಜಗತ್ತಲ್ಲಿ, ಧರ್ಮ, ಪಂಥಗಳು, ಅವು ನಿಜವಾದ ಧರ್ಮ, ಪಂಥಗಳು ಆಗಬೇಕೆಂದಿದ್ದರೆ, ಕರುಣೆ, ದಯೆ, ಪ್ರೀತಿ, ಇತ್ಯಾದಿಗಳನ್ನು ಅವು ಮೊದಲು ಅವುಗಳ ಸೆರೆಮನೆಗಳಿಂದ ಬಿಡುಗಡೆಗೊಳಿಸಬೇಕಾಗುವುದು.

ಇಲ್ಲವಾದರೆ, ಮುಂದೆ, ಧರ್ಮ ಎಂಬ ಹಣೆಪಟ್ಟಿಗಳು ಮಾತ್ರ ಬೇರೆ ಬೇರೆ ಬಣ್ಣಗಳಲ್ಲಿ ಕಾಣಲು ಸಾಧ್ಯವಾಗುವುದು ಹೊರತು ಆ ನಿಜವಾದ ಶಾಂತಿಯ ಧರ್ಮ, ಪಂಥಗಳನ್ನು ಎಂದಿಗೂ ನಮಗೆ ಕಾಣಲು ಸಾಧ್ಯವಾಗುವುದಿಲ್ಲ. ಧರ್ಮ, ಪಂಥಗಳು ಬೇಗನೆ ಅವನ್ನು ತಮ್ಮ ಸೆರೆಮನೆಗಳಿಂದ ಬಿಡುಗಡೆಗೊಳಿಸಲಿ ಎಂದು ಆಶಿಸೋಣ.

 *******************

ದಯೆಯು ಹೃದಯದಿಂದ ಹುಟ್ಟಿ ಬರಬೇಕು. ಅದು ಮನಸ್ಸಿನಿಂದ ಹುಟ್ಟಿ ಬರಬಾರದು, ಯಾಕೆಂದರೆ, ಹೃದಯವು ಮನಸಾಕ್ಷಿಯನ್ನು ಒಳಗೊಂಡಿದೆ. ಅಂದರೆ, ಸತ್ಯಸಂಧವಲ್ಲವಾದಲ್ಲಿ, ಆ ದಯೆಯು ಮೋಸವಾಗುವುದು ಎಂದು ಅರ್ಥ. ನೋಡಿ, ಈ ಹಿಂದೆ ಚರ್ಚಿಸಿದಂತೆ, ಈ ದಯೆಯನ್ನು ಹೆಚ್ಚಾಗಿಯೂ ಸ್ವಾರ್ಥ ಬೇಲಿಗಳ ಒಳಗೆ ಮಾತ್ರ ಉಪಯೋಗಿಸುತ್ತಾ ಬಂದಿರುವುದನ್ನು ನಾವು ಈ ಜಗತ್ತಲ್ಲಿ ಹೆಚ್ಚಾಗಿ ಕಾಣುತ್ತೇವೆ. ಆಗ, ಅದು, ತಮ್ಮ ಜಾತಿಯವರ, ತಮ್ಮ ಧರ್ಮದವರ, ತಮ್ಮ ಪಂಥದವರ, ತಮ್ಮ ಪಕ್ಷದವರ, ‘ಪರ’ವಾಗಿ ಮಾತ್ರ ಇರುವ ದಯೆಯಾಗಿ, ಅದರ ಮಹತ್ವವನ್ನು ಸಂಪೂರ್ಣವಾಗಿಯೂ ಕಳಕೊಳ್ಳುವುದು!! ಆದುದರಿಂದ, ದಯೆಯನ್ನು ‘ಪರ’ ಎಂಬ ರೀತಿಯಲ್ಲಿ ಉಪಯೋಗಿಸದೆ, ಮಾನವ ಜನತೆಯನ್ನು ಒಟ್ಟಾಗಿ ನೋಡುವಲ್ಲಿ ಮತ್ತು ದಯೆಗೆ ಅರ್ಹವಾಗುವಲ್ಲಿ ಮಾತ್ರ ತೋರಿಸಬೇಕಾಗಿದೆ. ಮಾನವರು ಮೊದಲಿನಿಂದಲೇ ಹಾಗೆ ಮಾಡುತ್ತಾ ಬಂದಿರುತ್ತಿದ್ದರೆ, ದಯೆಯು ಈ ಭೂಮಿಯ ಮೇಲೆ ಒಂದು ಶಾಂತಿಯ ಸ್ವರ್ಗವನ್ನೇ ಸೃಷ್ಟಿಸುತ್ತಿತ್ತು. ಮಾನವನು ಭೀಕರ ಜಾತಿ ಶೋಷಣೆ, ಧರ್ಮಾಂಧತೆ, ಇತ್ಯಾದಿಗಳನ್ನೇ ಆದಿಯಿಂದಲೂ, ದಯೆ ಮತ್ತು ಶಾಂತಿಗಳನ್ನು ಕೊಡಬೇಕಾದ ದೇವರ ಮತ್ತು ಧರ್ಮದ ಹೆಸರಲ್ಲಿ, ಮಾಡುತ್ತಾ ಬಂದಿರುವುದು ಎಂಬುವುದು ನಿಜವಾಗಿಯೂ ದುರದೃಷ್ಟ ಎಂದೇ ಹೇಳಬೇಕು!

ನೋಡಿ, ಜನರನ್ನು ತನ್ನ ಲಾಭಕ್ಕಾಗಿ ಭೀಕರವಾಗಿ ಕೊಂದಿರುವ ತನ್ನ ಅಪ್ಪನ ಅಥವಾ ಮಗನ ಪರ ನಿಲ್ಲಲು ಒಬ್ಬನಿಗೆ ಸಾಧ್ಯವಾಗುವುದೇ? ಯಾರಾದರೂ ನಿಲ್ಲಲಾರರು. ತಿಳಿದು ಮಾಡಿರುವ ಆ ತಪ್ಪಿಗೆ ಶಿಕ್ಷೆ ಆಗಲೇಬೇಕಾಗಿದೆ. ಇದುವೇ ಆ ನಿಜವಾದ ಧರ್ಮದ ರೀತಿ. ಆದರೆ, ಈ ಬೇಲಿ ಧರ್ಮ, ಪಂಥಗಳು, ತಮ್ಮದಲ್ಲದ ಇತರ ಧರ್ಮ, ಪಂಥದವರನ್ನು ದ್ವೇಷಿಸುವವು, ಹಿಂಸಿಸುವವು, ಮತ್ತು ಕೊಲ್ಲುವವು ಕೂಡಾ! ಇದನ್ನು ಬೆರಳೆಣಿಕೆಯ ಕೆಲವರು ಹೊರತು ಯಾರೂ ಖಂಡಿಸುವುದು ಕೂಡಾ ಇಲ್ಲ! ಯಾಕೆಂದರೆ, ಅದು ತಪ್ಪೆಂದು ಅದೇ ಧರ್ಮದವರಿಗೆ ಕಾಣಿಸುವುದಿಲ್ಲ! ಇದು ಧರ್ಮದ ರೀತಿಯೇ? ಅಲ್ಲ, ಧರ್ಮದ ರೀತಿಯಾಗಿದ್ದರೆ, ಅಲ್ಲಿ ಸತ್ಯಸಂಧವಾದ ಆ ನಿಷ್ಪಕ್ಷತೆ ಇರುತ್ತಿತ್ತು. ಈ ರೀತಿಯು, ಧರ್ಮ, ಪಂಥಗಳಲ್ಲಿ ಮಾತ್ರವಲ್ಲದೆ, ಮನೆ, ಜಾತಿ, ಪಕ್ಷ, ಸಮಾಜ, ದೇಶ, ಇತ್ಯಾದಿ ಎಲ್ಲಾ ಕಡೆಯಲ್ಲೂ ಕೆಲಸ ಮಾಡುವುದನ್ನು ನಾವು ಕಾಣುವೆವು! ಹಾಗೆ ನೋಡಿ, ಮಾನವರು ಆ ನಿಷ್ಪಕ್ಷತೆ ಎಂಬ ಧರ್ಮಪಾಲನೆಯನ್ನು ಸಂಪೂರ್ಣವಾಗಿ ಕಳಕೊಂಡಿರುವುದು.

ತಾನು, ಹೃದಯವಂತಿಕೆಯ ಹಿನ್ನೆಲೆಯಲ್ಲಿ ಅರ್ಹತೆಯನ್ನು ಪಡೆಯದೆ, ಬರೇ ತನ್ನ ಧರ್ಮದ ಹೆಸರು ಹೇಳಿದ ಕೂಡಲೇ, ತನ್ನೊಂದಿಗೆ ಧರ್ಮವಿದೆ ಅಥವಾ ತಾನು ಧರ್ಮವಂತ ಎಂದು ತಿಳಿಯುವುದು ದೊಡ್ಡ ಮೂರ್ಖತನವಾಗುವುದು, ಅದು, ತನ್ನ ಅಂಗೈಯಲ್ಲಿ ಒಂದು ಕಿಲೋಗ್ರಾಮ್ ಚಿನ್ನವಿದೆ ಎಂದು ತನ್ನ ಖಾಲಿ ಕೈಯನ್ನು ಜನರೆಲ್ಲರ ಮುಂದೆ ತೋರಿಸುವ ಮೂರ್ಖತನದಷ್ಟು ದೊಡ್ಡ ಮೂರ್ಖತನವಾಗುವುದು.

‘ಪರ’ವಾದವು, ದ್ವೇಷ, ಹಿಂಸೆ, ರಕ್ತಪಾತಗಳನ್ನು ಯಾವ ನಿಮಿಷದಲ್ಲಿಬೇಕಾದರೂ ಸೃಷ್ಟಿಸಬಹುದು, ಆದರೆ, ಅದಕ್ಕೆ ಎಂದಿಗೂ ಶಾಂತಿಯ ಆ ಪವಿತ್ರ ಧರ್ಮವನ್ನು

ಸೃಷ್ಠಿಸಲು ಸಾಧ್ಯವಾಗದು ಖಂಡಿತ. ಜನತೆ ಬೇಗನೆ ಈ ಪರಮ ಸತ್ಯವನ್ನು ತಿಳಿದು, ಎಚ್ಛೆತ್ತುಕೊಂಡು, ತಮ್ಮ ತಮ್ಮ ಧರ್ಮಗಳನ್ನು ಪರಿಶುದ್ಧಗೊಳಿಸಿಕೊಳ್ಳುವುದರೊಂದಿಗೆ ಮುಂಬರಲಿರುವ ಭೀಕರ ಅನಾಹುತಗಳಿಂದ ಮಾನವರನ್ನು ರಕ್ಷಿಸುವರು ಎಂದು ಆಶಿಸೋಣ.

 ********************

ನೋಡಿ, ‘ದಯೆಮಾಡು’ ಎಂದು ಕೇಳಿಕೊಳ್ಳುವುದು ಇದೆ. ಇದರ ಅರ್ಥವೇನು? ದಯೆಯನ್ನು ಎರಡು ನಿಮಿಷದಲ್ಲಿ ಸೃಷ್ಟಿಮಾಡಲು ಸಾಧ್ಯವೇ? ಹಾಗಲ್ಲ. ಅದರ ಅರ್ಥ, “ನನ್ನ ಅಸಹಾಯಕ ಪರಿಸ್ಥಿತಿಯನ್ನು ಹೃದಯದಿಂದ ಅರ್ಥಮಾಡಬೇಕು” ಎಂದಾಗಿದೆ. ಯಾಕೆಂದರೆ, ಯಾರಾದರೂ, ತನ್ನ ಲಾಭದ ಅಥವಾ ತನ್ನ ಸ್ವಾರ್ಥದ ಹಿನ್ನೆಲೆಯಲ್ಲಿ ದಯೆಯನ್ನು ಲೆಕ್ಕಹಾಕುವುದಾದರೆ, ಆಗ, ಅಲ್ಲಿ, ಆ ವ್ಯಕ್ತಿಯ ಮನದಲ್ಲಿ ದಯೆಯು ಎಂದಿಗೂ ಬರಲಾರದು ಎಂಬುವುದೇ ಆ ಕಾರಣವಾಗಿರುವುದು. ಇದರಲ್ಲಿ ನಾವು ಒಂದು ಪಾಠವನ್ನು ಕಲಿತೆವು. ಅದುವೇ, ‘ದಯೆಯು ಕೂಡಾ ಇತರರ ಅಸಹಾಯಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಒಂದು ರೀತಿಯ ಅರಿವು ಅಥವಾ ಜ್ಞಾನ’ ಎಂಬುವುದೇ ಅದಾಗಿರುವುದು. ಮಾತ್ರವಲ್ಲ, ಅದು, ಆಳದ ಹೃದಯದ ಭಾವನೆಯನ್ನು ಕೂಡಾ ಅವಲಂಭಿಸಿದೆ ಎಂಬುವುದು ಅದರಲ್ಲಿ ಅಡಗಿರುವ ಆ ಇನ್ನೊಂದು ಪ್ರತ್ಯೇಕತೆಯಾಗಿರುವುದು.

ಪಕ್ಷಪಾತದ ದಯೆಯು ದಯೆ ಎಂದಾಗುವುದಿಲ್ಲ, ಯಾಕೆಂದರೆ, ತನ್ನವರು ಅಲ್ಲದವರಲ್ಲಿ ಅಂಥವರು ದ್ವೇಷ, ಕ್ರೌರ್ಯ, ಇತ್ಯಾದಿಗಳನ್ನು ತೋರುವರು! ಒಟ್ಟಲ್ಲಿ, ‘ಒಬ್ಬ ಹೃದಯವಂತ ವ್ಯಕ್ತಿ ಮಾತ್ರ ನಿಷ್ಪಕ್ಷ ದಯೆಯನ್ನು ಹೊಂದಿರುವುದಕ್ಕೆ ಸಾಧ್ಯ’ ಎಂದು ಮಾತ್ರ ನಮಗೆ ಹೇಳಬಹುದಷ್ಟೆ. ಹೃದಯವಂತರು ಎಲ್ಲೇ ಇದ್ದರೂ, ಅವರು, ಮಹಾತ್ಮರ ಸಾಲಿನಲ್ಲಿ ಎಲ್ಲೋ ಒಂದು ಹಂತದಲ್ಲಿ ಇರುತ್ತಾರೆ. ಒಟ್ಟಲ್ಲಿ, ದಯೆಯು, ಮಹಾತ್ಮ-ಹೃದಯದ ಮಗುವಾಗಿರುವುದು. ಅದು ಸ್ವತಂತ್ರವಾಗಿದ್ದು, ಯಾವುದೇ ಧರ್ಮ ಅಥವಾ ಪಂಥದ ಬೇಲಿಯ ಆಸರೆಯನ್ನು ಹೊಂದಿಕೊಂಡಿಲ್ಲ.

 *****************

ದಯೆ ಎಂದರೆ ಏನು? ನೋಡಿ, ದಯೆ ಎಂಬುವುದು, ಇನ್ನೊಂದು ಜೀವಿಯ ಮೇಲೆ ತೋರುವ, ‘ನನ್ನ ಹಾಗೆ ನಿನಗೂ ತೊಂದರೆ ಆಗಬಾರದು’ ಎಂಬ ಕ್ರಿಯಾತ್ಮಕವಾಗಿರುವ ಭಾವನಾತ್ಮಕ ನಿಲುವು ಆಗಿದೆ. ಅಂದರೆ, ದಯೆಯಲ್ಲಿ ಹೆಚ್ಚು ಕೆಲಸ ಮಾಡುವುದು ಪ್ರೀತಿಯಲ್ಲ, ಬದಲು, ಒಬ್ಬಾತನ ಅಸಹಾಯಕ ಸ್ಥಿತಿಯ ಮೇಲಿನ ಅನುಕಂಪವಾಗಿದೆ. ಹೀಗಿರುವಾಗ, ಧರ್ಮದಲ್ಲಿ ದಯೆಯ ಪಾತ್ರ ಏನು ಎಂದು ಮಾತ್ರ ಈಗ ಚುಟುಕಾಗಿ ತಿಳಿಯೋಣ.

ಧರ್ಮವು ಮೂಲದಲ್ಲಿ ಹೇಳುವುದೇನೆಂದರೆ, ತಾನು ಚೆನ್ನಾಗಿರಬೇಕು ಹಾಗೂ ಇತರರೂ ಚೆನ್ನಾಗಿರಬೇಕು ಎಂದಾಗಿದೆ. ಈ ಮೂಲ ನಿಯಮದ ಹಿನ್ನೆಲೆಯಲ್ಲಿ ಮಾಡಿಟ್ಟಿರುವ ನಿಯಮಗಳು ಧರ್ಮವಾಗುವುದು. ದುರದೃಷ್ಟವಶಾತ್, ಹಲವು ಸ್ವಾರ್ಥ ನಿಯಮಗಳು ಧರ್ಮದ ಹೆಸರಲ್ಲಿ ಎಲ್ಲಾ ಧರ್ಮಗಳಲ್ಲೂ ಇಂದೂ ಕಾಣಲು ನಮಗೆ ಸಾಧ್ಯವಾಗುವುದು!

ನೋಡಿ, ಮನುಷ್ಯನ ಅಸಹಾಯಕ ಸ್ಥಿತಿಯ ಮೇಲಿನ ಅನುಕಂಪ ಅಲ್ಲ ನಿಜವಾಗಿಯೂ ಧರ್ಮ ಎಂದರೆ, ಆದರೆ, ಅದಕ್ಕಿಂತಲೂ ಮೊದಲು, ಒಬ್ಬಾತನು ಆ ಅಸಹಾಯಕ ಸ್ಥಿತಿಗೆ ತಲುಪದಂತೆ ಮಾಡುವುದೇ ಆ ನಿಜಧರ್ಮ ಆಗುವುದು! ಈ ಹಿನ್ನೆಲೆಯಲ್ಲಿ, ಇನ್ನೊಬ್ಬರ ಮೇಲೆ ದಬ್ಬಾಳಿಕೆಯನ್ನು ಯಾವ ರೀತಿಯಿಂದಲೂ ಮಾಡದಿರುವುದೇ ಧರ್ಮ ಎಂದಾಗುವುದು. ಅಯ್ಯೋ, ದುರದೃಷ್ಟವಶಾತ್, ಈ ದಬ್ಬಾಳಿಕೆಯೇ, ಸಾವಿರಾರು ವರುಷಗಳಿಂದಲೂ ವರ್ಣ, ಜಾತಿಗಳೂ ಸೇರಿ, ಹಲವು ಕಡೆಗಳಲ್ಲಿ ಹಲವು ರೀತಿಗಳಲ್ಲಿ ನಡೆದು ಬಂದಿರುವುದು!! ಇದು ಸುಳ್ಳು ಅಲ್ಲ, ಬದಲು ಸತ್ಯ ತಾನೇ? ಹಾಗಿರುವಾಗ, ಜಗತ್ತಿನ ಪ್ರತಿ ಧರ್ಮವು ಕೂಡಾ, ಇದುವರೆಗೂ, ‘ತಾನು ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು’ ಎಂಬ ಆ ನಿಜಧರ್ಮದ ವಿರುದ್ಧವೇ, ದ್ವೇಷ, ಹಿಂಸೆ, ರಕ್ತಪಾತ, ಶೋಷಣೆ, ವರ್ಣಬೇಧ, ಜಾತೀಯತೆ, ಇತ್ಯಾದಿಗಳನ್ನು ಮಾಡುತ್ತಾ, ಆ ನಿಜಧರ್ಮ ಎಂಬುವುದನ್ನೇ ಸರ್ವನಾಶ ಮಾಡುತ್ತಾ ಬಂದಿವೆ ಎಂಬುವುದು ಸ್ಪಷ್ಟವಾಗುವುದು!

 *****************

 ಪ್ರೋತ್ಸಾಹ

ಪ್ರೋತ್ಸಾಹ ಎಂದರೇನು ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಆದರೆ, ಎಲ್ಲಾ ಶಬ್ಧಗಳಿಗೂ ಅವುಗಳದೇ ಆದ ಪ್ರತ್ಯೇಕ ಸ್ಥಾನಗಳಿರುತ್ತವೆ. ಅದರ ಬಗ್ಗೆ ಇಲ್ಲಿ ಸ್ವಲ್ಪ ನೋಡೋಣ.

ಮಾನಸಿಕ, ದೈಹಿಕ, ಬೌದ್ಧಿಕ ಎಂದು ಆ ಹಲವು ತಲಗಳಲ್ಲಿ, ಯಾವುದಾದರೂ ಕ್ರಿಯೆಯನ್ನು ತೊಡಗಿಸಿಕೊಳ್ಳುವಲ್ಲಿ, ಆ ವ್ಯಕ್ತಿಯ ಉತ್ಸಾಹವನ್ನು ಹೆಚ್ಚಿಸುವುದೇ ಪ್ರೋತ್ಸಾಹ ಎಂಬ ಶಬ್ದದಿಂದ ನಾವು ಉದ್ದೇಶಿಸುವುದು.

ಹಲವು ರೀತಿಯ ಪ್ರೋತ್ಸಾಹಗಳು ಇವೆ ಎಂದು ಈಗ ತಾನೆ ಹೇಳಿಯಾಗಿದೆ. ಒಟ್ಟಲ್ಲಿ, ಆರ್ಥಿಕ, ಶಾರೀರಿಕ, ನೈತಿಕ, ಇತ್ಯಾದಿ ಆ ಹಲವು ರೀತಿಯ ಪ್ರೋತ್ಸಾಹಗಳು ಕೊನೆಗೂ ಮಾಡುವುದು ಒಬ್ಬ ವ್ಯಕ್ತಿಯು ತನ್ನ ಗುರಿ ತಲುಪುವಲ್ಲಿ ಮಾಡುವ ಕೆಲಸಕ್ಕೆ ಬೆಂಬಲ ಕೊಡುವುದಾಗಿದೆ. ಇವಲ್ಲಿ ನೇರ ಹಾಗೂ ಪರೋಕ್ಷ ರೀತಿಗಳೆಂದು ಎರಡು ವಿಭಾಗಳು ಇವೆ. ಉದಾಹರಣೆಗೆ, ಒಬ್ಬನ ಗುರಿಯು ಉನ್ನತ ವಿದ್ಯಾಭ್ಯಾಸ ಎಂದಾದರೆ, ಅವನಿಗೆ ಮಾಡುವ ಆರ್ಥಿಕ ಸಹಾಯವು ಪರೋಕ್ಷ ಪ್ರೋತ್ಸಾಹವಾಗುವುದು. ಒಬ್ಬನು, ಒಂದು ಮನೆ ಕಟ್ಟುವಾಗ, ಮತ್ತು ಆಗ ಆತನಿಗೆ ಹಣದ ಕೊರತೆ ಬಂದಲ್ಲಿ, ಹಣದ ಸಹಾಯ ಮಾಡುವುದಾದರೆ ಅದು ನೇರ ಬೆಂಬಲ ಅಥವಾ ನೇರ ಪ್ರೋತ್ಸಾಹವಾಗುವುದು. ಇನ್ನು, ಒಬ್ಬಾತನು ಒಳಿತಿನ ಕೆಲಸ ಮಾಡುವಲ್ಲಿ, ಆತನ ಗುರಿಯ ಮಹತ್ವ ಮತ್ತು ಆತನ ಆ ಕೆಲಸಕ್ಕೆ ಮನೋಬಲ ಹೆಚ್ಚಿಸುವ ಮಾತುಗಳಿಂದ ಆತನನ್ನು ಪ್ರೋತ್ಸಾಹಿಸುವುದಾದರೆ, ಅದು, ಪರೋಕ್ಷ ನೈತಿಕ ಬೆಂಬಲ ಅಥವಾ ಪರೋಕ್ಷವಾದ ನೈತಿಕತೆಯ ಹಿನ್ನೆಲೆಯ ಪ್ರೋತ್ಸಾಹವಾಗುವುದು.

ಬಹಳ ಮುಖ್ಯ ವಿಷಯವೆಂದರೆ, ಉತ್ಸಾಹವು ಮನುಷ್ಯ ಜೀವನಕ್ಕೆ ಅನಿವಾರ್ಯವಾದ ಒಂದು ಘಟಕ ಎಂಬುದಾಗಿದೆ. ಅದನ್ನು ಕಷ್ಟ ಕಾಲಗಳಲ್ಲಿ ಪೂರ್ತಿಯಾಗಿ ಕಳಕೊಂಡು ಅದರ ಸ್ಥಾನದಲ್ಲಿ ಜಿಗುಪ್ಸೆ ಬಂದಲ್ಲಿ ಅದು ಕೆಲವೊಮ್ಮೆ ಆತ್ಮಹತ್ಯೆಯವರೆಗೂ ಮಾನವನನ್ನು ಕರೆದೊಯ್ಯಬಹುದು! ಅದಕ್ಕಾಗಿ ನಾವು ಈ ವಿಷಯವಾಗಿ ಬಹಳ ಜಾಗ್ರತೆವಹಿಸಬೇಕಾಗಿದೆ.

ನೋಡಿ, ಮಹಾಜೀವನದಲ್ಲಿ, ‘ತಮ್ಮೊಳಗೆ ಪ್ರೋತ್ಸಾಹಿಸುವುದು’ ಎಂಬುವುದು ಮನೆ ಮನೆ ಮಹಾತ್ಮರ ಜೀವನದ ಒಂದು ಮುಖ್ಯ ಭಾಗವಾಗಿರುವುದು. ಹೀಗಿರುವಾಗ, ಇಲ್ಲಿ, ಈ ಪ್ರೋತ್ಸಾಹವು, ಒಂದು ರೀತಿಯ ಸತ್ಯಚಿಂತನೆಯೂ ಆಗುವ ಕಾರಣ, ಕೋಪ, ದ್ವೇಷ, ಸ್ವಾರ್ಥ, ಅಹಂಕಾರ, ಇತ್ಯಾದಿಗಳು ಆ ಪ್ರೋತ್ಸಾಹಿಸುವ ವ್ಯಕ್ತಿಯಲ್ಲಿ ಕಡಿಮೆಯಾಗಲು ತೊಡಗುವುದು. ಮಾತ್ರವಲ್ಲ, ಕೊನೆಯಲ್ಲಿ ಅದು ಆತನಲ್ಲಿ ಅವನ್ನು ಇಲ್ಲದಂತೆ ಮಾಡುವುದು. ಆಗ, ಅದು ಆತನ ಜೀವನಕ್ಕೆ ಆ 65% ಲಾಭವನ್ನು ಕೊಡುವುದು ಮಾತ್ರವಲ್ಲ ಮಾಡುವುದು, ಅದರೊಂದಿಗೆ, ಆ ವ್ಯಕ್ತಿಯ ಕಷ್ಟ ಕಾಲದಲ್ಲಿ, ತಾನು ಹಿಂದೆ ಕೊಟ್ಟಿರುವ ಪ್ರೋತ್ಸಾಹವು ಇತರರಿಂದ ಸಹಾಯದ ರೂಪದಲ್ಲಿ ತಿರುಗಿ ಬಂದು ಸಹಾಯವನ್ನು ಕೂಡಾ ಮಾಡುವುದು ಎಂದು ತಿಳಿಯಬೇಕು.

 ***************

ಪ್ರೋತ್ಸಾಹ ಎಂದು ಕೇಳಿದಾಗ ಮನಸ್ಸಿಗೆ ಸಮಾಧಾನವಾಗುವುದು, ಯಾಕೆಂದರೆ ಅದು ಆ ವ್ಯಕ್ತಿಯಲ್ಲಿ ಕೆಲಸವನ್ನು ಯಾವುದಾದರೂ ಒಂದು ರೀತಿಯಲ್ಲಿ ಚುರುಕುಗೊಳಿಸುತ್ತದೆ. ಇಲ್ಲಿ, ನಾವು ಒಂದು ಅಂಶವನ್ನು ತಿಳಿದಿರಬೇಕು. ಅದುವೇ, ಈ ‘ಪ್ರೋತ್ಸಾಹವು ಹೊರಗಿನಿಂದ ಬರುವಂಥದ್ದು’ ಎಂಬುವುದೇ ಆ ಮುಖ್ಯ ಅಂಶವಾಗಿದೆ. ಅಂದರೆ, ಪ್ರೋತ್ಸಾಹವು ಒಬ್ಬಾತ ತಾನೇ ಸೃಷ್ಟಿಸುವಂಥದ್ದಲ್ಲ, ಬದಲು, ಹೊರಗಿನಿಂದ ಬರುವಂಥದ್ದು ಎಂದು ಅರ್ಥ. ಅದು, ಅನಂತರದಲ್ಲಿ, ಆ ವ್ಯಕ್ತಿಯ ಅಂತರಂಗದಲ್ಲಿ ಹೆಚ್ಚಿನ ಆಸಕ್ತಿ ಅಥವಾ ಉತ್ಸಾಹವನ್ನು ಹುಟ್ಟುಹಾಕುವುದು, ಅಷ್ಟೆ.

ಇನ್ನು, ಮನೆ ಮನೆಯ ಮಹಾತ್ಮರ ವಿಚಾರವಾಗಿ ಹೇಳುವಾಗ, ಮಹಾತ್ಮನಾಗಿರುವ ಆ ವ್ಯಕ್ತಿ ಹೊರಗಿನಿಂದ ಪ್ರೋತ್ಸಾಹವನ್ನು ನಿರೀಕ್ಷಿಸುವುದಿಲ್ಲ. ಅಂದರೆ, ತಾನೇ ತನಗೆ ಮಹಾಜೀವನ ಜ್ಞಾನದ ಸಹಾಯದಿಂದ ಉತ್ಸಾಹವನ್ನು ಸೃಷ್ಟಿಸಿಕೊಳ್ಳುತ್ತಾನೆ ಎಂದು ಅರ್ಥ. ಅದೇ ವೇಳೆ, ಮಹಾತ್ಮರ ಜೀವನದಲ್ಲಿ ಇತರರ ಉತ್ತಮ ಕರ್ಮಗಳಿಗೆ ಪ್ರೋತ್ಸಾಹವನ್ನು ನೀಡುವುದು ಅವರ ಸಹಜಸ್ವಭಾವವಾಗುವ ಕಾರಣ, ಹೊರಗಿನ ಇತರ ಮಹಾತ್ಮರಿಂದಲೂ ಪ್ರೋತ್ಸಾಹವು ಸಹಾಯದ ರೂಪವಾಗಿ ಆ ಮಹಾತ್ಮನಿಗೆ ಬರಬಹುದು ಎಂಬುವುದು ಇನ್ನೊಂದು ಸತ್ಯವಾಗಿರುವುದು.

ಮಹಾತ್ಮರ ಒಂದು ದೊಡ್ಡ ಮಾತು ಎಂದರೆ ಅದುವೇ “ಪ್ರೋತ್ಸಾಹವನ್ನು ಅರಸಬೇಡಿ, ಯಾಕೆಂದರೆ ಅದು ಹೊರಗಿನಿಂದ ಬರಬೇಕೆಂದು ಏನೂ ಇಲ್ಲ, ಆದರೆ ನಿಮ್ಮ ಉತ್ತಮ ಕಾರ್ಯಗಳಿಗಾಗಿ ನಿಮ್ಮನ್ನು ನೀವು ಪ್ರೋತ್ಸಾಹಿಸಿಕೊಳ್ಳುವುದನ್ನು ಮಾತ್ರ ಎಂದೂ ನಿಲ್ಲಿಸದಿರಿ” ಎಂದಾಗುವುದು.

 ************************

ಕೆಲಸ ಎಂಬ ಪದವು ಮಾನವನ ಜೀವನಕ್ಕೆ ಸಂಬಂಧಿಸಿ ಒಂದು ಪೂರ್ಣವಾದ ಶಬ್ಧವಲ್ಲ. ಯಾಕೆಂದರೆ, ಆ ಕೆಲಸವು ಉತ್ತಮಕೆಲಸವೋ ಅಥವಾ ಕೆಟ್ಟಕೆಲಸವೋ ಎಂಬ ಪ್ರಶ್ನೆ ಅಲ್ಲಿ ಬರುವುದು. ಅದೇ ರೀತಿ, ಪ್ರೋತ್ಸಾಹ ಎಂಬ ಶಬ್ಧ ಕೂಡಾ ಒಳಿತಿನ ಕೆಲಸಕ್ಕೆ ಇರುವ ಪ್ರೋತ್ಸಾಹವೋ ಅಥವಾ ಕೆಡುಕಿನ ಕೆಲಸದ ಪ್ರೋತ್ಸಾಹವೋ ಎಂಬುವುದನ್ನು ಅರಿತಾಗ ಮಾತ್ರ ಅದರ ಅರ್ಥದ ಹಿನ್ನೆಲೆಯಲ್ಲಿ ಪೂರ್ಣವಾಗುವುದು. ಕೆಡುಕಿನ ಪ್ರೋತ್ಸಾಹವು ಕೆಡುಕನ್ನು ಹೆಚ್ಚಿಸುವುದು ಮತ್ತು ಒಳಿತಿನ ಪ್ರೋತ್ಸಾಹವು ಒಳಿತನ್ನು ಹೆಚ್ಚಿಸುವುದು.

ನೋಡಿ, ಯಾವುದೇ ಶಾಂತಿಯು ಸೃಷ್ಟಿಯಾಗುವುದು ‘ನಾವು ಮೇಲೆ ನೀವು ಕೆಳಗೆ’ ಎಂಬ ಭಾವನೆಯು ನಾಶವಾಗುವಾಗ ಎಂದು ನಮಗೆ ತಿಳಿದಿದೆ. ದುರದೃಷ್ಟವಶಾತ್, ಶಾಂತಿಯನ್ನು ತರಲೇಬೇಕಾದ ಈ ಧರ್ಮ, ಪಂಥಗಳು ತಾವು ಮಾತ್ರ ಶ್ರೇಷ್ಠವೆಂದು ಹೇಳಿಕೊಳ್ಳುತ್ತವೆ ಮತ್ತು ಅದಕ್ಕಾಗಿ ಹಿಂಸೆ, ಯುದ್ಧಗಳನ್ನು ಕೂಡಾ ಮಾಡುತ್ತವೆ! ಅಂದರೆ, ಸ್ಪಷ್ಟವಾಗಿಯೂ ಅವುಗಳು ಕೆಡುಕಿನ ದಾರಿಯನ್ನು ಪ್ರೋತ್ಸಾಹಿಸುತ್ತವೆ ಎಂದು ಅರ್ಥ!! ದೇವರು, ಧರ್ಮಗಳು ಒಳಿತಿನ ದಾರಿಯನ್ನು ಬಿಟ್ಟು, ಧರ್ಮಂಧತೆ, ಜಾತಿಯತೆ ಎಂಬ ಕೆಡುಕಿನ ದಾರಿಯನ್ನು ಆದಿಯಿಂದಲೂ ಈ ಭೂಮಿಯಲ್ಲಿ ತುಳಿಯುತ್ತಾ ಬಂದಿವೆ. ತಾವು ಮಾಡುತ್ತಿರುವುದು ಮತ್ತು ಪ್ರೋತ್ಸಾಹವನ್ನು ಕೊಡುತ್ತಿರುವುದು ‘ಅಧರ್ಮ’ ಎಂಬ ಸತ್ಯವನ್ನು ಅವುಗಳ ಅಂಧತ್ವದ ಕಾರಣದಿಂದ ಅವುಗಳಿಗೆ ಇನ್ನು ಕೂಡಾ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ! ಇದು ಮುಂದೆ ಸರ್ವನಾಶಕ್ಕೂ ಕಾರಣವಾಗಬಹುದು.

ಇದುವರೆಗೂ, ‘ನಮ್ಮ ಧರ್ಮ ಶ್ರೇಷ್ಠ’ ಎಂಬಲ್ಲಿ ಮಾತ್ರ ಧರ್ಮ, ಪಂಥಗಳ ಗಮನ ಮತ್ತು ಪ್ರೋತ್ಸಾಹ ಇದ್ದಿರುವುದು, ಆದುದರಿಂದ, ಇನ್ನು ಮುಂದೆ, ‘ಧರ್ಮ ಎಂದರೇನು’ ಎಂಬುವುದನ್ನು ತಿಳಿಯಲು ಎಲ್ಲಾ ಧರ್ಮ, ಪಂಥಗಳು ಪ್ರಯತ್ನಿಸಬೇಕಾಗಿದೆ. ಯಾಕೆಂದರೆ, ಅದನ್ನು ಅರಿತ ತಕ್ಷಣ, ದ್ವೇಷ, ಹಿಂಸೆ, ರಕ್ತಪಾತಗಳು ನಿಂತುಹೋಗಿಬಿಡುವವು. ಮಹಾಜೀವನವು ಈ ಜಗತ್ತಿನಲ್ಲಿ ಆ ಪವಿತ್ರ ಮಹಾಶಾಂತಿಯನ್ನು ತರುವ ನಿಟ್ಟಿನಲ್ಲಿ ಮಾನವ ಸಹೋದರರಿಗೆ ಪ್ರೋತ್ಸಾಹವನ್ನು ನೀಡುವುದು, ಮತ್ತು, ಆ ಹಿನ್ನೆಲೆಯಲ್ಲಿ, ಮಾನವ ಸಹೋದರರು ದ್ವೇಷ, ಹಿಂಸೆ, ರಕ್ತಪಾತಗಳಿಗೆ ಬಲಿಯಾಗುವುದನ್ನು ತಡೆಹಿಡಿಯಲು ಸಾಧ್ಯವಾಗುವಷ್ಟು ಪ್ರಯತ್ನಿಸುವುದು.

ಒಳಿತೇ ಧರ್ಮ ಮತ್ತು ಕೆಡುಕು ಅಧರ್ಮ. ಧರ್ಮವನ್ನು ನಂಬಿಕೆ, ಆಚಾರಗಳ ಹಗ್ಗದಿಂದ ತಮ್ಮ ತಮ್ಮ ಹಟ್ಟಿಯೊಳಗೆ ಕಟ್ಟಿಹಾಕಲು ಎಂದಿಗೂ ಸಾಧ್ಯವಿಲ್ಲ.

 ******************

ಪ್ರೋತ್ಸಾಹದ ಬಗ್ಗೆ ಈಗಾಗಲೇ ಹೇಳಿಯಾಗಿದೆ. ಇನ್ನು, ಅದರ ಅಗತ್ಯ ಎಲ್ಲಿ ಬರುವುದು ಎಂಬುವುದನ್ನು ನಾವು ಬಹಳ ಚುಟುಕಾಗಿ ನೋಡೋಣ. ಮನುಷ್ಯನು ಅಸಹಾಯಕನಾಗುವ ಪರಿಸ್ಥಿತಿಯು ಜೀವನದಲ್ಲಿ ಹಲವು ಕಡೆಗಳಲ್ಲಿ ಬರುವುದು. ಅಲ್ಲೆಲ್ಲಾ ಪ್ರೋತ್ಸಾಹವು ಮಾನವರಿಗೆ ಅಗತ್ಯವಾಗಿದೆ. ಅದು ಸಹಾಯದ ರೂಪದಲ್ಲೋ ಅಥವಾ ನೈತಿಕ ಬೆಂಬಲದ ರೂಪದಲ್ಲೋ ಆಗಿರಬಹುದು.

ಒಬ್ಬ ಅಸಹಾಯಕನಿಗೆ ಇನ್ನೊಬ್ಬ ಅಸಹಾಯಕನನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಅದಕ್ಕೆ, ಮಹಾಜೀವನವು ಹೇಳುವುದು, “ಹಾಸಿಗೆ ಇದ್ದಷ್ಟೇ ಕಾಲುಚಾಚು” ಎಂದು. ಇದರಿಂದ ಒಬ್ಬಾತನಿಗೆ ತಾನೇ ಮಾಡಿಕೊಳ್ಳುವ ಅಸಹಾಯಕ ಪರಿಸ್ಥಿತಿಗಳಿಂದ ತನ್ನನ್ನು ತಾನು ಪಾರುಮಾಡಿಕೊಳ್ಳಬಹುದಾಗಿದೆ. ಪ್ರೋತ್ಸಾಹವು ಹೊರಗಿನಿಂದ ಬರುವಂಥದ್ದು, ಆದರೆ, ಮಹಾತ್ಮರು ಹೇಳುವುದು, ಅದನ್ನು ‘ನೀನು ನಿನ್ನೊಳಗಿನಿಂದ ಬರಿಸಬೇಕು’ ಎಂದು!! ಇದು ಯಾಕೆಂದರೆ, ಹೊರಗಿನ ಪ್ರೋತ್ಸಾಹವು ಸಂಶಯದಲ್ಲಿರುವುದು, ಆದರೆ, ನಮ್ಮದೇ ಪ್ರೋತ್ಸಾಹವು ಖಚಿತವಾಗಿರುವುದು.

 ****************

 ಕರ್ತವ್ಯ

ಕರ್ತವ್ಯ ಎಂಬುವುದು ಕೆಲಸಕ್ಕೆ ಸಂಬಂಧಪಟ್ಟದ್ದಾಗಿರುವುದು ಎಂದು ನಮಗೆ ತಿಳಿದಿದೆ. ಒಬ್ಬನು ತಾನು ಮಾಡಬೇಕಾದ ಕೆಲಸವನ್ನು ಸರಿಯಾಗಿ, ತಪ್ಪದೆ, ಮೋಸಮಾಡದೆ, ಮಾಡುವಾಗ, ಆತನು ತನ್ನ ಕರ್ತವ್ಯವನ್ನು ನೆರವೇರಿಸಿದನು ಎಂದು ಹೇಳಬಹುದು.

ನೋಡಿ, ಈ ಭೂಮಿಯಲ್ಲಿ ಪ್ರತಿ ಮಾನವನಿಗೂ ಬಾಲ್ಯಾವಸ್ಥೆಯಿಂದ ತೊಡಗಿ ಸಾಯುವತನಕವೂ ಒಂದೊಂದು ರೀತಿಯ ಕರ್ತವ್ಯವು ಇರುವುದು. ಶೈಶವ ಅವಸ್ಥೆಯು ಮಾತ್ರ ಈ ಕರ್ತವ್ಯ ಹೊರತಾಗಿರುವುದು. ಚಿಕ್ಕ ಮಕ್ಕಳು ಶಾಲೆಗೆ ಹೊರಟರೆ, ಅವುಗಳಿಗೂ ಇವೆ ಈ ಕರ್ತವ್ಯ! ಸರಿಯಾಗಿ ಕಲಿಯಬೇಕು ಎಂಬುವುದು ಚಿಕ್ಕ ಮಕ್ಕಳಿಗೂ ಇರುವ ಆ ಕರ್ತವ್ಯವಾಗಿದೆ! ಇನ್ನು, ದೊಡ್ಡದಾದ ನಂತರದ ವಿಷಯ ಹೇಳಬೇಕಾಗಿಲ್ಲವಲ್ಲಾ.

ನಾವು ಜವಾಬ್ಧಾರಿ ಎಂಬ ಶಬ್ದವನ್ನು ಕೇಳಿದ್ದೇವೆ. ಜವಾಬ್ಧಾರಿ ಎಂದರೆ ಅದು ಕರ್ತವ್ಯದ ಹೊರೆಯಾಗಿದೆ. ಮದುವೆಯು ಈ ಕರ್ತವ್ಯವನ್ನು ಅಥವಾ ಜವಾಬ್ಧಾರಿಕೆಯನ್ನು ಮತ್ತೂ ಹೆಚ್ಚಿಸುವುದು. ನೋಡಿ, ಈ ಭೂಮಿಯಲ್ಲಿ ಎಲ್ಲರೂ ಅವರವರ ಕರ್ತವ್ಯವನ್ನು ಸರಿಯಾಗಿಯೇ ಮಾಡುವರು ಎಂದು ತಿಳಿದುಕೊಂಡಿರುವರು. ಹೌದು, ಮಾಡುತ್ತಿರಬಹುದು, ಆದರೆ ಹೆಚ್ಚಿನವರು ಅವನ್ನು ಸಾವಿರ ಸಲ ಹೇಳಿಕೊಳ್ಳುವರು. ಅದು, ಮನೆ, ಸಮಾಜಗಳಲ್ಲಿ ಆ ವ್ಯಕ್ತಿಗಳ ವ್ಯಕ್ತಿತ್ವಗಳನ್ನು ಕೆಳಗಿಳಿಸುವುದು. ಕರ್ತವ್ಯ ಎಂದರೆ ಅವರವರು ಮಾಡಬೇಕಾದ ಕೆಲಸ ಎಂದು ಅರ್ಥ. ಹಾಗಿರುವಾಗ, ಅದನ್ನು ಹೇಳಿಕೊಳ್ಳುವ ಅಗತ್ಯವಿದೆಯೇ?

ಇನ್ನು, ಕರ್ತವ್ಯ ಅಲ್ಲದ ವಿಶೇಷ ಕೆಲಸಗಳನ್ನು ಮಾಡುವಲ್ಲಿ ಮಾತ್ರ ಇತರರ ಪ್ರತಿಕ್ರಿಯೆಯ ಬಗ್ಗೆ ಮಾತುಬರುವುದು. ಒಟ್ಟಲ್ಲಿ, ನಾವು ನಮ್ಮ ಕರ್ತವ್ಯವನ್ನು ಯಾವ ರೀತಿಯಲ್ಲಿ ಮಾಡುವೆವು ಎಂಬುವುದು ಮನಶ್ಯಾಂತಿ, ಮನೆಶಾಂತಿ, ಸಮಾಜಶಾಂತಿ, ಇತ್ಯಾದಿಗಳು ಕಡಿಮೆಯಾಗಬೇಕೋ ಅಥವಾ ಹೆಚ್ಚಾಗಬೇಕೋ ಎಂಬುವುದನ್ನು ನಿರ್ಣಯಿಸುವುದು.

ಇನ್ನು, ಕರ್ತವ್ಯಗಳ ಶತ್ರುಗಳು ಕೂಡಾ ಇರುವವು. ಅವುಗಳಿಗೆ ಒಂದು ಉದಾಹರಣೆಯು ಲಂಚ ಪಡೆಯುವುದು ಆಗಿದೆ. ಈಗ, ಒಂದು ಸಮಾಜದಲ್ಲಿ ಲಂಚ ಪಡೆಯುವ ಜನರ ಒಟ್ಟು ಸಂಖ್ಯೆಯು ಆ ಸಮಾಜದ ಕರ್ತವ್ಯ ಪ್ರಜ್ಞೆಯ ಮಟ್ಟವನ್ನು ನಿರ್ಣಯಿಸುತ್ತದೆ ಎಂದು ಹೇಳಬಹುದು. ಇತ್ತ, ಮಹಾಜೀವನವು ಈ ಕರ್ತವ್ಯ ಪ್ರಜ್ಞೆಯನ್ನು ಎತ್ತಿ ಹೇಳಿ ಮಾನವರ ಮನ, ಮನೆ, ಸಮಾಜ ಶಾಂತಿಗಳನ್ನು ವೃದ್ಧಿಗೊಳಿಸುವಲ್ಲಿ ಒಂದು ದೊಡ್ಡ ಪಾತ್ರವಹಿಸುವುದು. ಈ ರೀತಿಯಲ್ಲಿ ಕೂಡಾ ಮಹಾಜೀವನವು ತನ್ನ ಸೇವೆಯನ್ನು ನಿರ್ವಹಿಸುವುದು ಎಂದು ತಿಳಿಯಬೇಕು.

 **********************

ಕರ್ತವ್ಯ ಎಂಬಲ್ಲಿ ಜನರನ್ನು ಮೂರ್ಖರನ್ನಾಗಿಸುವ ರೀತಿಗಳೂ ಸಾಕಷ್ಟು ಇವೆ. ಧರ್ಮಗಳು ತಮ್ಮ ತಮ್ಮ ಶ್ರೇಷ್ಠತೆಯ ಬೇಲಿಯೊಳಗಿದ್ದು ಇತರ ಧರ್ಮವನ್ನು ವಿರೋಧಿಸುವುದೇ ತಮ್ಮ ಕರ್ತವ್ಯ ಎಂದು ತಿಳಿದುಕೊಂಡಿರುವುದನ್ನು ನಾವು ಕಾಣುವೆವು. ಇಂದು ಕೂಡಾ, ಮೇಲು ವರ್ಗದವರ ಸೇವೆಮಾಡುವುದು ಶೂದ್ರರ ಕರ್ತವ್ಯ ಎಂದು ತಿಳಿವ ಮೂರ್ಖ ಜನರು ಇರುವರು! ಇನ್ನು, ಮನೆ, ಸಮಾಜಗಳಲ್ಲಿ ಸ್ತ್ರೀಯರ ಕರ್ತವ್ಯ, ಪುರುಷರ ಕರ್ತವ್ಯ ಎಂದು ಮನುಷ್ಯನು ಅನಾರೋಗ್ಯದಿಂದ ಬಳಲುವಾಗಲೂ ಹೇಳುವವರು ಇರುವರು. ಇವೆಲ್ಲಾ ಹೃದಯ ಶೂನ್ಯತೆಯನ್ನು ಮಾತ್ರ ಸೂಚಿಸುತ್ತವೆ.

ಎಲ್ಲರೂ ಖಂಡಿತವಾಗಿಯೂ ಅವರವರ ಕರ್ತವ್ಯವನ್ನು ಪಾಲಿಸಬೇಕು, ಆದರೆ ಅದರೊಂದಿಗೆ ಹೃದಯವಂತರೂ ಆಗಿರಬೇಕು. ಶುದ್ಧಪ್ರೀತಿಯು ಕರ್ತವ್ಯ ಪ್ರಜ್ಞೆಗಿಂತಲೂ ಮೇಲಿನ ಹಂತವಾಗಿದೆ. ಅದನ್ನು ಹೊಂದಿರುವ ವ್ಯಕ್ತಿಯು, ಒಣ ಕರ್ತವ್ಯದ ವಾತಾವರಣವನ್ನು ತಂಪಾದ ಮಂದಮಾರುತವನ್ನಾಗಿಸಿ, ಸರ್ವರ ಮುಖದಲ್ಲೂ ಜೀವಕಳೆಯೊಂದಿಗೆ ನೆಮ್ಮದಿಯ ಮುಗುಳುನಗುವನ್ನು ತುಂಬುವನು.

 *************************

ಈಗ, ಮಹಾತ್ಮರ ಕರ್ತವ್ಯವು ಹೇಗಿರುವುದು ಎಂದು ತಿಳಿಯೋಣ. ಮಹಾತ್ಮರು, ಜನಸಾಮಾನ್ಯರಂತೆ ತಾವು ಮಾಡಲೇಬೇಕಾದ ಕೆಲಸವನ್ನು ಚೊಕ್ಕವಾಗಿ ಮಾಡಿ, ತಮ್ಮ ಕರ್ತವ್ಯವನ್ನು ನೆರವೇರಿಸುವರು. ಅಂದರೆ, ಮಹಾತ್ಮರು, ಇತರ ಎಲ್ಲಾ ರೀತಿಗಳಲ್ಲೂ ಜನಸಾಮಾನ್ಯರಂತೆ ಕರ್ತವ್ಯವನ್ನು ಪಾಲಿಸುವರು ಎಂದು ಅರ್ಥ, ಆದರೆ, ಕೆಲವೊಂದು ವಿಷಯಗಳಲ್ಲಿ ಮಾತ್ರ ವ್ಯತ್ಯಸ್ಥರಾಗಿರುವರು. ಅವಲ್ಲಿ ಮುಖ್ಯವಾಗಿರುವುದೆಂದರೆ ಜನರಿಗೆ ಬೆಂಬಲ ಕೊಡುವಲ್ಲಿ ಆಗಿದೆ. ಮಹಾತ್ಮರು ಎಂದಿಗೂ ಕೆಟ್ಟವರಿಗೆ ಬೆಂಬಲ ಕೊಡುವುದಿಲ್ಲ. ತಮಗೆ ಹತ್ತಿರದ ಜನರಾದರೂ ದೂರದವರಾದರೂ ಕೆಟ್ಟದ್ದನ್ನು ಕೆಟ್ಟದೆಂದೇ ತಿಳಿದು ದೂರವಿರುವರು. ಇನ್ನು, ಹೃದಯವಂತರಾದ ಉತ್ತಮರು ಎಲ್ಲಿ ಇದ್ದರೂ ಅವರ ಪರವಾಗಿ ಮಹಾತ್ಮರು ಇರುವರು. ಇದುವೇ, ಅವರ ಕರ್ತವ್ಯದ ಒಂದು ದೊಡ್ಡ ಪ್ರತ್ಯೇಕತೆಯಾಗಿದೆ. ಇದು ಯಾಕೆಂದರೆ, ಮಹಾಜೀವನದ ಮಹಾವಾಕ್ಯವು “ಉತ್ತಮರು ಎಲ್ಲೇ ಇದ್ದರೂ ಅವರ ಹೃದಯದಿ ದೇವರು, ದುಷ್ಟರು ಎಲ್ಲೇ ಮೆರೆದರೂ ಅವರೆಲ್ಲರೂ ಹೀನರು” ಎಂದಾಗಿರುವುದು. ಅಲ್ಲಿ, ಕುಟುಂಬ, ಜಾತಿ, ಧರ್ಮ, ದೇಶ, ಇತ್ಯಾದಿಗಳು ಎದುರಾಗಿ ಬರುವುದಿಲ್ಲ. ಈ ಅದರ್ಶವು ಅತ್ಯಂತ ಉತ್ಕೃಷ್ಟವಾದ ಆದರ್ಶವಾಗಿದೆ. ಇದು, ಮೊಟ್ಟಮೊದಲಲ್ಲಿ ಎಲ್ಲಾ ಧರ್ಮ, ಪಂಥಗಳಲ್ಲಿ ಬೆಳೆದುಬರಬೇಕಾಗಿದೆ. ಯಾಕೆಂದರೆ, ಇದು ಇದ್ದಲ್ಲಿ ಮಾತ್ರವೇ ಒಂದು ಧರ್ಮವು ‘ಧರ್ಮ’ ಎಂದಾಗುವುದಷ್ಟೆ. ಇನ್ನು, ಅದಿಲ್ಲದ, ತಮ್ಮ ತಮ್ಮ ಬೇಲಿಯೊಳಗಿನ ಜನರನ್ನು ಮಾತ್ರ ಎತ್ತಿಹಿಡಿವ ಧರ್ಮಗಳು, ಬರೇ ರಾಜಕೀಯ ಪಕ್ಷಗಳ ತರ ಮಾತ್ರ ಆಗುವವು ಅಷ್ಟೆ.

ಈ ರೀತಿ, ಜಗತ್ತಿಗೆ ಶಾಂತಿ, ಆನಂದಗಳನ್ನು ತಂದುಕೊಡುವ ಅತ್ಯುತ್ಕೃಷ್ಟ ಆದರ್ಶಗಳನ್ನು ಪಾಲಿಸುವುದು ಮಹಾತ್ಮರ ಆ ಪ್ರತ್ಯೇಕ ಕರ್ತವ್ಯವಾಗಿರುವುದು.

 *****************

ನಾವು ಆಲೋಚಿಸದ ಒಂದು ಅಚ್ಚರಿಯ ಅಂಶವೆಂದರೆ ‘ಕರ್ತವ್ಯವನ್ನು ತೀರಾ ಮಾಡದಿರುವಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಇಲ್ಲವಾಗುವುದು’ ಎಂಬುವುದಾಗುವುದು! ಅಂದರೆ, ಕರ್ತವ್ಯವನ್ನು ತೀರಾ ಮಾಡದಿರುವ ಆ ವ್ಯಕ್ತಿಯ ವ್ಯಕ್ತಿತ್ವವು ನಿಧಾನವಾಗಿ ಇಲ್ಲದಾಗುವುದು ಎಂದು ಅರ್ಥ.

ಕರ್ತವ್ಯವನ್ನು ಮಾಡದಿರುವಾಗ ಹೇಗೆ ಒಬ್ಬನ ವ್ಯಕ್ತಿತ್ವವು ಇಲ್ಲದಾಗುವುದು ಎಂಬುವುದನ್ನು ವೈಜ್ಞಾನಿಕವಾಗಿ ತಿಳಿಯೋಣ. ತಂದೆಯಾಗಿ ಅಥವಾ ತಾಯಿಯಾಗಿ, ಯಾವುದೇ ಕರ್ತವ್ಯ ಮಾಡದಿರುವಾಗ, ಅಲ್ಲಿ ತಂದೆ ಅಥವಾ ತಾಯಿ ಎಂದು ಕರೆದರೂ, ಆ ವ್ಯಕ್ತಿತ್ವಗಳು ಅಲ್ಲಿ ಇಲ್ಲ ಎಂದು ಮನೆಮಂದಿಗೆ ತಿಳಿಯುವುದು. ಇದೇ ರೀತಿ, ಇತರ ಎಲ್ಲಾ ಸಂಬಂಧಗಳಲ್ಲಿ ಸಂಭವಿಸುವುದು. ಇನ್ನು, ಶಾಲೆಯಲ್ಲಿ ಪಾಠ ಹೇಳಿಕೊಡುವ ಮೇಸ್ಟ್ರು ಅದನ್ನು ಮಾಡದೆ ಇದ್ದಲ್ಲಿ, ಗುರು ಎಂಬ ಆತನ ಆ ವ್ಯಕ್ತಿತ್ವವು ಆತನಲ್ಲಿ ಇಲ್ಲವಾಗುವುದು. ಇದೇ ರೀತಿ, ಇತರ ಕರ್ತವ್ಯ ನಿರ್ವಹಣೆಯ ಕಡೆಗಳಲ್ಲಿ ಸಂಭವಿಸುವುದು.

ಕೊನೆಗೆ, ವಿರುಧ್ಧ ದಿಶೆಯಿಂದ ಒಂದು ಉದಾಹರಣೆಯನ್ನು ನೋಡಿಬಿಡೋಣ. ಒಬ್ಬ ಕಳ್ಳನು, ತನ್ನ ಕೆಲಸ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆತನ ಕರ್ತವ್ಯವಾದ ಕಳ್ಳತನವನ್ನು ಸಂಪೂರ್ಣವಾಗಿ ನಿಲ್ಲಿಸಿ, ಮತ್ತು ಉತ್ತಮ ಕೆಲಸವನ್ನು ತನ್ನ ಕರ್ತವ್ಯವಾಗಿ ಮಾಡಿಕೊಂಡಲ್ಲಿ, ಆತನ ಆ ಹಿಂದಿನ ‘ಕಳ್ಳ’ ಎಂಬ ವ್ಯಕ್ತಿತ್ವ ಹೋಗಿಬಿಡುವುದು, ಮಾತ್ರವಲ್ಲ ಜನರು ಆತನ ಇಂದಿನ ಆ ದೊಡ್ಡ ವ್ಯಕ್ತಿತ್ವವನ್ನು ಅಂಗೀಕರಿಸುವರು. ಕಾಡಿನ ಬೇಡ ಎಂಬ ವ್ಯಕ್ತಿತ್ವವು ವಾಲ್ಮೀಕಿ ಮಹರ್ಷಿ ಎಂಬ ವ್ಯಕ್ತಿತ್ವವಾಗಿ ಬದಲಾಗಿರುವ ಉದಾಹರಣೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು, ಮೋಹನ್ ದಾಸ್ ಕರಮಚಂದ್ ಗಾಂಧಿಯು ಮಹಾತ್ಮಾ ಗಾಂಧಿ ಆದದ್ದು ಕೂಡಾ ಆ ವ್ಯಕ್ತಿಯು ತನ್ನ ಕರ್ತವ್ಯದ ವಲಯವನ್ನು ವಕೀಲ ವೃತ್ತಿಯಿಂದ ದೇಶಸೇವೆಯತ್ತ ತಿರುಗಿಸುವಲ್ಲಿ ಎಂದು ತಿಳಿಯಬೇಕು. ಇಲ್ಲೆಲ್ಲಾ, ಹಿಂದಿನ ತನ್ನ ಕರ್ತವ್ಯವನ್ನು ಪೂರ್ತಿಯಾಗಿ ನಿಲ್ಲಿಸುವಾಗ ಆತನ ಅಂದಿನ ವ್ಯಕ್ತಿತ್ವವು ನಾಶವಾಗಿರುವುದನ್ನು ನಮಗೆ ಕಾಣಲು ಸಾಧ್ಯವಾಗುವುದು.

ಒಟ್ಟಲ್ಲಿ, ಒಬ್ಬಾತನ ಜೀವನದ ಯಾವುದೇ ಕರ್ತವ್ಯವು, ಮಹತ್ತಾದ ಹೃದಯದಿಂದಲೂ ಸೇರಿ ಇದ್ದಲ್ಲಿ, ಆ ವ್ಯಕ್ತಿಯ ವ್ಯಕ್ತಿತ್ವವು, ತನ್ನ ಸುತ್ತಮುತ್ತಲು ಆದರ್ಶದ ಬೆಳಕನ್ನು ಚೆಲ್ಲುವ ವ್ಯಕ್ತಿತ್ವವಾಗಿ ಬದಲಾಗುವುದು ಎಂಬುದರಲ್ಲಿ ಸಂಶಯವಿಲ್ಲ.

 *******************

ಸತ್ಯಯುಗದ ಮಹಾಜೀವನ ಸಂದೇಶ

ಜೀವವನ್ನು ಪ್ರೀತಿ ಹರಸುವ ಸಂಗೀತ,

ಭಾವವನ್ನು ಶುದ್ಧಗೊಳಿಸುವ ಆವೇಶ,

ಸತ್ಯಯುಗದ ಸಂದೇಶ, ಪುಣ್ಯ ಸಂದೇಶ

ಇದು ಮಹಾಜೀವನ ಆ ದಿವ್ಯ ಸಂದೇಶ.

ಸತಿ ಪತಿ ಹೃದಯಗಳೆರಡು

ಅದರಲಿ ದೇವರು ಒಂದು

ಸತ್ಯದ ಶುದ್ಧಪ್ರೀತಿಯ ಮೂರ್ತಿ ಅಲ್ಲಿಹುದು.

ಬ್ರಾಂತಿಯ ಕನಸನ್ನು ಮರೆತು

ವಾಸ್ತವ ಜೀವನ ಬೆಳೆಸಿ

ಜೀವನಕೆ ನಿತ್ಯಶಾಂತಿಯ ದಾನ ಅದು ಮಾಡುವುದು.

ಪರಸ್ಪರ ಅರ್ಥವ ಮಾಡಿ,

ಅರಿತು ಜೀವನ ನಡೆಸಿ,

ಹೊಂಚಿನ ಆ ಸಂಚಿನ ಕಲಹ ಮೆಟ್ಟಿ ಸರಿಸುವುದು.

ಜೀವವನ್ನು ಪ್ರೀತಿ ಹರಸುವ ಸಂಗೀತ,

ಭಾವವನ್ನು ಶುದ್ಧಗೊಳಿಸುವ ಆವೇಶ,

ಸತ್ಯಯುಗದ ಸಂದೇಶ, ಪುಣ್ಯ ಸಂದೇಶ

ಇದು ಮಹಾಜೀವನ ಆ ದಿವ್ಯ ಸಂದೇಶ.

 **************

ಮಹಾಜೀವನದ ಆ ನಿಜವಾದ ಅನುಭವವು ‘ಜೀವನವು ತನ್ನ ಭಾರವನ್ನು ಕಳಕೊಳ್ಳುವುದರಲ್ಲಿ’ ಕಾಣಿಸುವುದು. ಈ ಕೆಲಸವನ್ನು ಮಹಾಜೀವನದ ‘ಜ್ಞಾನದ ಆಳ’ ವು ಮಾಡುವುದು. ಸತ್ಯಚಿಂತನೆ, ಆತ್ಮಪರಿಶೋಧನೆ, ವೈರಾಗ್ಯ, ಎಂಬ ಈ ಮೂರು ಮುಖ್ಯ ಜ್ಞಾನಗಳಲ್ಲಿ ಬರೇ ಒಂದರಲ್ಲಿಯೇ ಮಹಾತ್ಮನಾಗಬಹುದು. ಇದು ಯಾಕೆಂದರೆ, ಅವಲ್ಲಿ ಒಂದನ್ನು ಹಿಡಿದು ಮುಂದುವರಿದರೆ ಉಳಿದ ಎರಡು ಜ್ಞಾನಗಳು ತಾವಾಗಿ ಹುಟ್ಟಿಕೊಳ್ಳುತ್ತವೆ! ಮಹಾಜೀವನದಲ್ಲಿ ಆ ಮೂರನ್ನು ಬೇರೆ ಬೇರೆ ಹೆಸರಿಸಿ ಜ್ಞಾನದ ಪೂರ್ಣತೆಯನ್ನು ಸಾಧಕನು ಬೇಗನೆ ಪಡೆಯುವಂತೆ ಮಾಡಲಾಗುವುದು.

ಮಹಾಜೀವನವು, ಭ್ರಮೆಯ ಗ್ರಹಣ ಹಿಡಿದ ಮನುಷ್ಯ ಮನಸ್ಸನ್ನು ಹೋಗಲಾಡಿಸಿ, ಆ ವ್ಯಕ್ತಿಯ ಮನಸ್ಸು ಬುದ್ಧಿಗಳಿಗೆ ವಾಸ್ತವದ ಸತ್ಯದೃಷ್ಟಿಯನ್ನು ದಯಪಾಲಿಸುವುದು. ಇದು ಹಬ್ಬುತ್ತಾ ಆ ವ್ಯಕ್ತಿಯ ಹೃದಯದಲ್ಲಿ ಶುದ್ಧಪ್ರೀತಿಯ ಅಮೃತವನ್ನು ಹರಿಸುವುದು. ಅಷ್ಟರಲ್ಲಿ ಆ ವ್ಯಕ್ತಿಗೆ ‘ಮಹಾತ್ಮ’ ಎಂಬ ಹೊಸಜನ್ಮ ಕೂಡಾ ಬಂದುಬಿಡುವುದು!

 *******************

ದೈನಂದಿನ ಜೀವನದಲ್ಲಿ ಜನಸಾಮಾನ್ಯರು ಬಯಸುವುದು ಹಣ ಸಂಪಾದನೆಯೊಂದನ್ನು ಮಾತ್ರ! ಇನ್ನು, ‘ಹಣ ಮಾತ್ರ ಮುಖ್ಯ ಅಲ್ಲ, ಜೀವನವು ಅದಕ್ಕಿಂತಲೂ ಮುಖ್ಯ’ ಎಂದು ಹೇಳುವವರೇ ಇಲ್ಲ. ಅಪರೂಪಕ್ಕೆ ಯಾರಾದರೂ ಹೇಳಿದರೆ, ಪರಂಪರೆಯಿಂದಲೇ ಎಲ್ಲರೂ ಹಣಕ್ಕಾಗಿ ಹೋರಾಡುತ್ತಿರುವುದನ್ನು ಮಾತ್ರ ನೋಡುತ್ತಿರುವ ವರ್ತಮಾನದ ಪೀಳಿಗೆಯು ಅದನ್ನು ಲೆಕ್ಕಕ್ಕೆ ತೆಗೆಯುವುದೂ ಇಲ್ಲ.

ಅಚ್ಚರಿ ಎಂದರೆ ಎಲ್ಲರಿಗೂ ಶಾಂತಿ, ನೆಮ್ಮದಿಯು ಬೇಕು. ತಾವೇ ಬೆಂಕಿಯ ಹತ್ತಿರ ಕುಳಿತು ‘ಅಯ್ಯೋ, ಬೆಂಕಿಯ ಶಾಖ ತಡೆಯಲಾರೆ’ ಎಂದರೆ ಏನು ಅರ್ಥ? ಅಂಥವರಿಗೆ, ನೆಮ್ಮದಿ, ಶಾಂತಿಗಳನ್ನು ಎಲ್ಲಿಂದ ತರಲು ಸಾಧ್ಯ? ಕಂಬವನ್ನು ತಾನೇ ಗಟ್ಟಿಯಾಗಿ ಹಿಡಿಯುತ್ತಾ, ದೇವರಲ್ಲಿ ತನ್ನನ್ನು ಕಂಬದಿಂದ ಬಿಡುಗಡೆ ಮಾಡಲು ಹರಕೆ ಹೊತ್ತರೆ ಏನು ಪ್ರಯೋಜನ? ಇದನ್ನೇ ನೋಡಿ ಮೌಢ್ಯ ಎನ್ನುವುದು. ಹೆಚ್ಚಿನ ಜನರು, ತಾವು ಅಗತ್ಯವಾಗಿ ಏನು ಮಾಡಬೇಕೋ ಅದರ ವಿರುದ್ಧ ಮಾಡುತ್ತಾ, ತಮಗೆ ಅದರಿಂದ ತೊಂದರೆ ಆದಾಗ, ಅದು ಹೊರಗಿನಿಂದ ಬಂದ ತೊಂದರೆ ಎಂದು ತಪ್ಪು ತಿಳಿಯುವರು. ಇಲ್ಲೇ ನೋಡಿ, ಆತ್ಮ ಪರಿಶೋಧನೆ, ಸತ್ಯಚಿಂತನೆಗಳ ಅನಿವಾರ್ಯತೆ ಇರುವುದು.

ಮಹಾಜೀವನ ನಡೆಸುವ ಸಾಧಕರು, ತಮ್ಮ ಸಾಧನೆಯ ಕಾರಣದಿಂದ, ಇಂಥ ಮೂರ್ಖತನಗಳಿಗೆ ಒಳಗಾಗುವುದಿಲ್ಲ. ಈ ಕಾರಣದಿಂದ, ಅಂಥವರ ಜೀವನದಲ್ಲಿ, ಕಡಿಮೆ ಪಕ್ಷ, 65% ವಾದರೂ ಜನಸಾಮಾನ್ಯರಿಗಿಂತ ಗೊಂದಲ, ಕೋಪ, ದುಃಖಗಳು ಕಡಿಮೆ ಇರುತ್ತವೆ. ಈ ಕಾರಣದಿಂದಾಗಿ, ಮಹಾಜೀವನವು ಮನುಷ್ಯರಿಗೆ ಹೆಚ್ಚಿನ ಜೀವನಾನಂದವನ್ನು ತಂದು ಕೊಡುವ ಆ ಮಹಾವರದಾನ ಎಂದು ಹೇಳುವುದು.

 ******************

ಮಾನವ ಸಮಾಜದಲ್ಲಿ ‘ಶಾಂತಿಯ ಸ್ಥಿತಿ’ ಎಂದರೆ ಏನು? ಎರಡು ಅಥವಾ ಎರಡಕ್ಕಿಂತ ಹೆಚ್ಚು ಜನರು ಅಥವಾ ಗುಂಪುಗಳು ಘರ್ಷಣೆಯ ಹಾದಿಯಿಂದ ದೂರವಾಗಿರುವ ಸ್ಥಿತಿ ಅದಾಗಿರುವುದು. ಅಂದರೆ, ಘರ್ಷಣೆ, ಯುದ್ಧಗಳು ಇಲ್ಲದ ಸ್ಥಿತಿ ಎಂದು ಅರ್ಥ. ಈ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಮಹಾಜೀವನ ನಡೆಸುವ ಒಬ್ಬ ವ್ಯಕ್ತಿಯ ಪ್ರಥಮ ಕರ್ತವ್ಯವಾಗಿದೆ.

ಕೋಪಗೊಂಡಲ್ಲಿ ಸಮಸ್ಯೆಯ ಇಲ್ಲವಾಗುವುದಿಲ್ಲ. ಸಮಸ್ಯೆಯು ಹೋಗಬೇಕಾದರೆ ಅದಕ್ಕೆ ಶಾಂತವಾಗಿ ಪರಿಹಾರ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಚಿಕ್ಕ ಸೂತ್ರವನ್ನು ನಾವು ಉಪಯೋಗಿಸಿಕೊಳ್ಳಬಹುದು. ಜ್ಞಾನದ ದಾರಿಯು ಸಿಕ್ಕಿ ಅದು ಗಟ್ಟಿಯಾಗುವ ಮೊದಲಲ್ಲಿ ಈ ರೀತಿಯ ಚಿಕ್ಕ ಚಿಕ್ಕ ಸೂತ್ರಗಳನ್ನು ಬಳಸಬಹುದು. ಈ ರೀತಿಯ ಸೂತ್ರಗಳಲ್ಲಿ ಎರಡು ಭಾಗಗಳಿವೆ. ಅವಲ್ಲಿ ಒಂದು, ನಮಗೆ ಎಲ್ಲೆಲ್ಲಾ ಕೋಪ ಬರುವುದು ಎಂಬುವುದನ್ನು ನಮ್ಮನ್ನು ನಾವು ಪರೀಕ್ಷಿಸಿ ಅದನ್ನು ಬರೆದಿಡುವುದು ಆಗಿದೆ. ಎರಡನೆಯ ಭಾಗವು, ಆ ಬರೆದಿರುವ ಪ್ರತ್ಯೇಕ ಸಂದರ್ಭಗಳ ವಿರುದ್ಧ ಉಪಾಯದ ಪರಿಹಾರವನ್ನು ಕಂಡುಕೊಳ್ಳುವುದಾಗಿದೆ. ಒಂದು ಉದಾಹರಣೆಯನ್ನು ಹೇಳುವುದಾದರೆ, ಹಸಿವು ಆಗುವಾಗ ಕೋಪ ಬರುವವರು, ಹಸಿವು ಆಗದಂತೆ ಸ್ವಲ್ಪ ಏನನ್ನಾದರೂ ತಿಂದು ತಮ್ಮ ಕೋಪದ ಮುಖದಿಂದ ಪಾರಾಗಬಹುದಾಗಿದೆ. ಇನ್ನು, ಸ್ವಲ್ಪ ಅವಮಾನವಾದರೂ ಒಮ್ಮೆಗೆ ಕೋಪ ಬಂದುಬಿಡುವವರು, ಅವಮಾನವಾದಲ್ಲಿ ತನಗೆ ಕೋಪ ಬರುವುದಿಲ್ಲ ಎಂಬುವುದನ್ನು ಮನದಲ್ಲಿ ಗಟ್ಟಿ ಮಾಡುತ್ತಾ ಇರಬೇಕು ಮತ್ತು ಅದನ್ನು ಎದುರಿಸಲು ಕಾಯುತ್ತಿರುವ ರೀತಿಯಲ್ಲಿ ತಮ್ಮನ್ನು ಬದಲಿಸಿಕೊಳ್ಳಬೇಕು. ಆಗ ಅವಮಾನದ ಸಮಯ ಅದು ಸಾಧನೆ ತರ ಆಗಿ ಕೋಪ ಬರುವುದಿಲ್ಲ. ಇನ್ನು, ಜಗತ್ತಿನ ಸರ್ವರಿಗೂ ಅವಮಾನ ಆಗುತ್ತಿರುತ್ತದೆ ಎಂಬ ಆ ಸತ್ಯದ ಅರಿವು ಮತ್ತೂ ಸಹಾಯ ಮಾಡಬಹುದು. ಅವಮಾನವಾದರೆ, ಮತ್ತು ಆಗ ಕೋಪಮಾಡಿದರೆ ಆ ಆದ ಅವಮಾನವು ಇಲ್ಲವಾಗುವುದೇ? ಕೋಪದಿಂದ ಬಾಯಿಗೆ ಬಂದ ಹಾಗೆ ಮಾತನಾಡಿ, ಮತ್ತೂ ಹೆಚ್ಚು ಅವಮಾನ ಆಗುವುದಷ್ಟೆ, ಅದು ಪರಿಹಾರವಾಗುವುದಿಲ್ಲ. ಹೀಗೆ ನಾವು ಬರೆದಿಟ್ಟ ಎಲ್ಲ ಸಂಧರ್ಭಗಳಿಂದ ನಮಗೆ ಪಾರಾಗಬಹುದಾಗಿದೆ.

ನೋಡಿ, ಮೇಲೆ ವಿವರಿಸಿರುವ ರೀತಿಗಳು ಸಹಜವಾದ ರೀತಿಯಲ್ಲ, ಯಾಕೆಂದರೆ ಅದರಲ್ಲಿ ನಮ್ಮನ್ನು ನಾವು ಕೋಪ ಇತ್ಯಾದಿಗಳಿಂದ ಆಗುವ ತೊಂದರೆಗಳಿಂದ ಪಾರು ಮಾಡಿಕೊಳ್ಳಬಹುದು ಹೊರತು ಅದು ಜ್ಞಾನದ ಪರಿಹಾರವನ್ನು ಮಾನವನಲ್ಲಿ ಸೃಷ್ಟಿಸುವುದಿಲ್ಲ. ಆದರೆ, ಸತ್ಯಚಿಂತನೆ ಜ್ಞಾನ, ಆತ್ಮಪರಿಶೋಧನೆ ಜ್ಞಾನ, ಮತ್ತು ವೈರಾಗ್ಯ ಜ್ಞಾನ ಎಂಬ ಆ ಮೂರು ಜ್ಞಾನಗಳ ಹಿನ್ನೆಲೆಯು ವ್ಯಕ್ತಿತ್ವದಲ್ಲಿ ಹೆಚ್ಚು ಹೆಚ್ಚು ಬೆಳೆಯುತ್ತಾ ಕೊನೆಗೆ ಅವು ರಕ್ತಗತವಾದಾಗ ಸೃಷ್ಟಿಯಾಗುವ ಆ ಪರಿಶುದ್ಧ ಮಹಾತ್ಮನ ವ್ಯಕ್ತಿತ್ವವು ಸಹಜ ಮತ್ತು ದೈವೀಕವಾಗಿರುವುದು. ಮಾತ್ರವಲ್ಲ, ಅದು ಸರ್ವತೋಮುಖ, ಶಾಶ್ವತ, ಹಾಗೂ ಪರಿಹಾರದಾಯಕ ಆಗಿರುವುದು. ಆದುದರಿಂದ, ಇತರ ಚುಟುಕು ರೀತಿಗಳನ್ನು ಅನುಸರಿಸಿದರೂ, ಆ ಮೂರು ಜ್ಞಾನಗಳನ್ನು ಪಡೆಯುದರಿಂದ ಮಹಾಜೀವನ ಆಕಾಂಕ್ಷಿಗಳು ಎಂದಿಗೂ ಹಿಂದೆ ಸರಿಯಬಾರದು.

 *****************

ಒಳಿತು ಎಂದರೆ ಧರ್ಮ. ಕೆಡುಕು ಎಂದರೆ ಅಧರ್ಮ. ಇವು ಎರಡು ಕೂಡಾ ಮನುಷ್ಯನ ಮನಸ್ಸು, ಮಾತು, ಮತ್ತು ಕರ್ಮ ಇವು ಮೂರರಲ್ಲಿ ಪ್ರತಿಫಲಿಸುತ್ತಾ ಇರುವುದು. ನೋಡಿ, ನಾವು ನಮ್ಮ ಸ್ವಭಾವವನ್ನು ನಿಯಂತ್ರಿಸಲು ಮನಸ್ಸು, ಮಾತು, ಕರ್ಮಗಳನ್ನು ಗಮನಿಸುವುದು ಸಾಧನೆಗಳಲ್ಲಿ ಒಂದು ಸಾಧನೆ ಎಂದು ಹೇಳಬಹುದು, ಆದರೆ, ಇದು ಒಂದು ಮಾತ್ರ ಏನನ್ನು ಮಾಡಲಾರದು. ಯಾಕೆಂದರೆ, ಜ್ಞಾನಗಳ ಹಿನ್ನೆಲೆ ಇಲ್ಲದ ವ್ಯಕ್ತಿ ತನ್ನ ಸ್ವಾರ್ಥದ ಬಗ್ಗೆ ಮಾತ್ರ ಆಲೋಚಿಸುವನು. ಹಾಗಿರುವಾಗ, ಆತನು ತನ್ನನ್ನು ತಾನು ಗಮನಿಸುತ್ತಾ ಇರುವುದಾದರೂ ಅದರಿಂದ ಮಹಾಜೀವನದ ಆ ಶಾಂತಿ, ನೆಮ್ಮದಿಯ ಹಿನ್ನೆಲೆಯ ಯಾವ ಲಾಭವೂ ಆಗಲಾರದು. ಈ ಕಾರಣದಿಂದ, ಮಹಾಜೀವನಕ್ಕೆ ಅತ್ಯಂತ ಅಗತ್ಯವಾಗಿರುವುದು ಆ ಮೂರು ಪವಿತ್ರ ಜ್ಞಾನಗಳಾಗಿರುವವು ಎಂಬುವುದು ಮತ್ತೂ ಸ್ಪಷ್ಟವಾಗುವುದು.

ಈ ಜ್ಞಾನದ ಇನ್ನೊಂದು ಪ್ರತ್ಯೇಕತೆ ಎಂದರೆ ಇದು ಮರಣಾನಂತರಕ್ಕಾಗಿರುವ ತತ್ವಜ್ಞಾನ ಅಲ್ಲ ಎಂಬುವುದಾಗಿದೆ. ಅಂದರೆ, ಈ ಭೂಮಿಯಲ್ಲಿ ತಮ್ಮದೇ ಹಲವು ಹಲವು ತಪ್ಪುಗಳಿಂದ ಮನಶ್ಯಾಂತಿ, ಜೀವನಶಾಂತಿಗಳನ್ನು ಕಳಕೊಂಡಿರುವ ಮುಗ್ಧ ಮಾನವರಿಗೆ ಈ ಮಹಾಜೀವನವು ಒಂದು ದೊಡ್ಡ ಆಸರೆಯಾಗುವುದು ಎಂದು ಅರ್ಥ.

ಬರಡು ಜೀವನದಲ್ಲಿ ಶಾಂತಿ ನೆಮ್ಮದಿಗಳು ಬೇಕು ಎಂದು ಬಯಸುವ ಮಾನವರಿಗೆ ಈ ಮಹಾಜೀವನವು ಒಂದು ಸುವರ್ಣ ಅವಕಾಶವಾಗುವುದು.

 ******************

ಮಹಾಜೀವನದ ಆ ನಿಜವಾದ ಅನುಭವವು ‘ಜೀವನವು ತನ್ನ ಭಾರವನ್ನು ಕಳಕೊಳ್ಳುವುದರಲ್ಲಿ’ ಕಾಣಿಸುವುದು. ಈ ಕೆಲಸವನ್ನು ಮಹಾಜೀವನದ ‘ಜ್ಞಾನದ ಆಳ’ ವು ಮಾಡುವುದು. ಸತ್ಯಚಿಂತನೆ, ಆತ್ಮಪರಿಶೋಧನೆ, ವೈರಾಗ್ಯ, ಎಂಬ ಈ ಮೂರು ಮುಖ್ಯ ಜ್ಞಾನಗಳಲ್ಲಿ ಬರೇ ಒಂದರಲ್ಲಿಯೇ ಮಹಾತ್ಮನಾಗಬಹುದು. ಇದು ಯಾಕೆಂದರೆ, ಅವಲ್ಲಿ ಒಂದನ್ನು ಹಿಡಿದು ಮುಂದುವರಿದರೆ ಉಳಿದ ಎರಡು ಜ್ಞಾನಗಳು ತಾವಾಗಿ ಹುಟ್ಟಿಕೊಳ್ಳುತ್ತವೆ! ಮಹಾಜೀವನದಲ್ಲಿ ಆ ಮೂರನ್ನು ಬೇರೆ ಬೇರೆ ಹೆಸರಿಸಿ ಜ್ಞಾನದ ಪೂರ್ಣತೆಯನ್ನು ಸಾಧಕನು ಬೇಗನೆ ಪಡೆಯುವಂತೆ ಮಾಡಲಾಗುವುದು.

ಮಹಾಜೀವನವು, ಭ್ರಮೆಯ ಗ್ರಹಣ ಹಿಡಿದ ಮನುಷ್ಯ ಮನಸ್ಸನ್ನು ಹೋಗಲಾಡಿಸಿ, ಆ ವ್ಯಕ್ತಿಯ ಮನಸ್ಸು ಬುದ್ಧಿಗಳಿಗೆ ವಾಸ್ತವದ ಸತ್ಯದೃಷ್ಟಿಯನ್ನು ದಯಪಾಲಿಸುವುದು. ಇದು ಹಬ್ಬುತ್ತಾ ಆ ವ್ಯಕ್ತಿಯ ಹೃದಯದಲ್ಲಿ ಶುದ್ಧಪ್ರೀತಿಯ ಅಮೃತವನ್ನು ಹರಿಸುವುದು. ಅಷ್ಟರಲ್ಲಿ ಆ ವ್ಯಕ್ತಿಗೆ ‘ಮಹಾತ್ಮ’ ಎಂಬ ಹೊಸಜನ್ಮ ಬಂದುಬಿಡುವುದು!

 ***************

ಮಹಾತ್ಮರೆಲ್ಲರು ಮಾನವರ ಏಳಿಗೆಗೆ ಶ್ರಮವಹಿಸಿದವರು ಎಂದು ಹೇಳಬಹುದು. ಆದರೆ ಮನೆ ಮನೆಯ ಮಹಾತ್ಮರ ರೀತಿಯು ಜಗತ್ತಿಗೆ ಹೊಸದು. ಹಿಂದಿನ ಮರದಡಿಯ ಮಹಾತ್ಮರ ರೀತಿಗೆ, ವೈವಾಹಿಕ, ಕೌಟುಂಬಿಕ, ಹಾಗೂ ಸಾಮಾಜಿಕ ಜೀವನವನ್ನು ಮೇಲೆತ್ತುವಲ್ಲಿ, ಉತ್ತಮ ಫಲವನ್ನು ತಂದು ಕೊಡಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಇಂದಿನ ಸಮಾಜವೇ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮನೆ ಮನೆಯ ಮಹಾತ್ಮರ ಜೀವನ ಅಥವಾ ಮಹಾಜೀವನ ಹಾಗೂ ದಿವ್ಯಜ್ಞಾನ ಸನ್ನಿಧಿಗಳು ಅವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿರುವ ಹೊಸ ಆವಿಷ್ಕಾರಗಳಾಗಿವೆ ಎಂದು ಹೇಳಬಹುದು. ಮಾನವ ಜೀವನ ಶುದ್ಧೀಕರಣ, ಧರ್ಮ, ಪಂಥಗಳ ಶುದ್ಧೀಕರಣ, ದ್ವೇಷ, ಹಿಂಸೆಗಳ ನಶೀಕರಣ, ಇವು ಮಹಾಜೀವನ ಸತ್ಯಯುಗದ ಆನಂದ ಜೀವನಕ್ಕಿರುವ ದಾರಿಯಾಗುವುದು.

 *****************

ನೋಡಿ, ಜಗತ್ತಲ್ಲಿ, ಮಹಾಜೀವನವನ್ನು ಬಿಟ್ಟು , ಮುಖ್ಯವಾಗಿ, ಎರಡು ರೀತಿಯ ಜೀವನ ರೀತಿಗಳನ್ನು ನಮಗೆ ಕಾಣಬಹುದು. ಅವಲ್ಲಿ ಒಂದು, ಧರ್ಮಗಳು ಕೊಡುವ ಆ ಹಲವು ತರದ ಜೀವನ ರೀತಿಗಳು, ಇನ್ನೊಂದು, ನಾಸ್ತಿಕ ಜೀವನ ರೀತಿ ಎಂದಾಗುವುದು. ಇವು ಎರಡರಲ್ಲೂ, ಮನೆಕಲಹ, ಸಮಾಜಕಲಹ, ಇತ್ಯಾದಿಗಳನ್ನು ನಿಯಂತ್ರಿಸುವಲ್ಲಿ ಇರುವ ಆ ಮುಖ್ಯ ಶಾಂತಿಬೋಧನೆಗೆ ಪ್ರಾಮುಖ್ಯತೆಯನ್ನು ಕೊಡಲಿಲ್ಲ. ಆಸ್ತಿಕರ ಜಾತೀಯತೆಯು ಸಮಾಜ ಶಾಂತಿಯನ್ನು ಹೆಚ್ಚಿಸಿದೆ ಎನ್ನಲು ಸಾಧ್ಯವಿಲ್ಲ, ಇನ್ನು, ಧರ್ಮ, ಪಂಥಗಳು ತಮ್ಮೊಳಗೆ ಹೊಡೆದಾಡಿ ರಕ್ತಪಾತವನ್ನು ಮಾಡಿರುವುದು ಕೂಡಾ ಸಮಾಜಶಾಂತಿ ಎನ್ನಲು ಸಾಧ್ಯವಿಲ್ಲ. ಇನ್ನು ಮನೆಜಗಳದ ವಿಚಾರ ಬಂದರೆ, ಎಲ್ಲಾ ಮನೆಯ ಅವಸ್ಥೆಯೂ ಒಂದೇ ತರ ಎಂದು ಗಾದೆ ಮಾತು ಹೇಳಿ ಆಸ್ತಿಕ, ನಾಸ್ತಿಕ ರೀತಿಗಳು ಸಮಾಧಾನ ಪಟ್ಟುಕೊಳ್ಳುವವು, ಹೊರತು, ಮನೆಶಾಂತಿಗಾಗಿ ಕೆಲಸ ಮಾಡಿರುವುದು ಕಾಣಿಸುವುದಿಲ್ಲ. ರಾಮಾಯಣ, ಮಹಾಭಾರತ ಕಾವ್ಯಗಳು ಕೂಡಾ ‘ಪ್ರಾಚೀನ ಕಾಲದಿಂದಲೂ ಮನೆಜಗಳ ಭಯಾನಕವಾಗಿಯೇ ಇತ್ತು’ ಎಂಬುವುದನ್ನು ಸಾಬೀತುಪಡಿಸುವವು. ಕೈಕೇಯಿಯ ಆ ಮನೆಜಗಳವು, ಸಾವು, ನೋವು, ಕೊನೆಗೆ ಯುದ್ಧದವರೆಗೆ ಕೊಂಡುಹೋಯಿತು. ಕುಟುಂಬ ಕಲಹವು ದೊಡ್ಡ ಯುದ್ಧವಾಗಿ ಮಹಾಭಾರತದಲ್ಲಿ ಪರಿಣಮಿಸಿತು. ಅಚ್ಚರಿ ಎಂದರೆ, ಈ ಮನೆಜಗಳವು ಎಲ್ಲಾ ಧರ್ಮ, ಪಂಥಗಳಲ್ಲೂ ಅದೇ ರೀತಿ, ನಾಸ್ತಿಕರಲ್ಲೂ ಒಂದೇ ರೀತಿಯಲ್ಲಿ ಕಾಣಿಸುವವು ಎಂಬುವುದಾಗುವುದು!

ಈ ಹಿನ್ನೆಲೆಯಲ್ಲೇ, ಮಹಾಜೀವನವು ಮನೆಶಾಂತಿಗೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಟ್ಟಿರುವುದು, ಮತ್ತು ಮನೆಶಾಂತಿಯನ್ನು ಜ್ಞಾನದ ಸಹಾಯದಿಂದ ಕಾಪಾಡದವರನ್ನು ‘ಮಹಾಜೀವನದ ಪರಿಪೂರ್ಣ ಪಾಲಕರು’ ಎಂದು ಪರಿಗಣಿಸದೆ ಇರುವುದು ಎಂದು ತಿಳಿಯಬೇಕು.

 ***************

ನೋಡಿ, ಮಹಾಜೀವನ ಅಥವಾ ಮನೆ ಮನೆ ಮಹಾತ್ಮರ ಜೀವನ ಎಂಬುವುದು ಒಂದು ಹೊಸ ಜೀವನರೀತಿಯಾಗಿದೆ. ಇದು ಮನುಷ್ಯರಿಂದ ಮನುಷ್ಯರನ್ನು ಬೇರ್ಪಡಿಸಿ, ದ್ವೇಷ, ಹಿಂಸೆ, ರಕ್ತಪಾತವನ್ನು ಮಾಡುವ ಧರ್ಮ, ಪಂಥಗಳ ಬೇಲಿಗಳನ್ನು ಮೀರಿದ ಹೃದಯ ವೈಶಾಲ್ಯತೆಯ ಜೀವನರೀತಿಯಾಗಿರುವುದು. ಧರ್ಮ, ಪಂಥಗಳು ತಾವು ಶ್ರೇಷ್ಠ ಎನ್ನುವವು, ಆದರೆ, ಮಹಾಜೀವನವು ‘ಉತ್ತಮರು ಯಾವುದೇ ಧರ್ಮ ಅಥವಾ ಪಂಥದಲ್ಲಿದ್ದರೂ ಅವರು ಮಾತ್ರ ಶ್ರೇಷ್ಠರು’ ಎನ್ನುವುದು. ಈ ಕಾರಣದಿಂದಾಗಿ ಮಹಾಜೀವನವನ್ನು ಅಲ್ಪತ್ವದ ಬೇಲಿಯನ್ನು ಹೊಂದಿರದ ಹೃದಯ ವೈಶಾಲ್ಯತೆಯ ಜೀವನರೀತಿ ಎನ್ನುವುದು. ಇಲ್ಲಿ, ಸತ್ಯ, ಪ್ರೀತಿ, ನೀತಿಗಳಿಗೆ ಹೆಚ್ಚಿನ ಒತ್ತು ಕೊಡುತ್ತಾ, ಅವರವರ ಧರ್ಮ, ಪಂಥಗಳೊಳಗೆ ಇದ್ದು ಶಾಂತಿಯಿಂದ ಜೀವಿಸುವುದು ರೀತಿಯಾಗಿದೆ, ಅಂದರೆ, ಮತಾಂಧತೆಗೆ, ಜಾತೀಯತೆ ಹಾಗೂ ಮತಾಂತರಗಳಿಗೆ ಇಲ್ಲಿ ಅವಕಾಶ ಇಲ್ಲ ಎಂದು ಅರ್ಥ. ಒಟ್ಟಲ್ಲಿ, ಮಹಾಜೀವನವು ಧರ್ಮ ಅಥವಾ ಪಂಥವಲ್ಲ, ಬದಲು, ಧರ್ಮ, ಪಂಥಗಳನ್ನು ಶುದ್ಧೀಕರಿಸುವ ಘಟಕವಾಗಿದೆ ಎಂದು ಹೇಳಬಹುದು. ಮನ, ಮನೆ, ಸಮಾಜ, ಲೋಕ, ಇತ್ಯಾದಿಗಳು ಶುದ್ಧವಾಗಬೇಕೆಂಬ ಮನಸ್ಸಿದ್ದರೆ, ಅವುಗಳ ಆ ಮಹತ್ಕಾರ್ಯಕ್ಕೆ ಈ ಮಹಾಜೀವನವು ದಾರಿಯನ್ನು ತೋರುವುದು. ಮನಸ್ಸಿದ್ದರೆ ಮಾರ್ಗವಿದೆ.

 *****************

ಮಹಾಜೀವನ ಮತ್ತು ಇತರ ಜೀವನಗಳ ಬಗ್ಗೆ ನಾವು ಸಾಕಷ್ಟು ತಿಳಿದಾಯಿತು. ಇನ್ನು, ‘ನಾವು ಮೇಲು ನೀವು ಕೀಳು’ ಎಂದರೆ ಅದು ಮಹಾಜೀವನವಾಗುವುದೇ? ಇನ್ನು, ‘ನಮ್ಮ ಧರ್ಮ ಮಾತ್ರ ಶ್ರೇಷ್ಠ ನಿಮ್ಮ ಧರ್ಮ ಶ್ರೇಷ್ಠವಲ್ಲ’ ಎಂದರೆ ಮಹಾಜೀವನವಾಗುವುದೇ? ಇನ್ನು, ‘ನಮಗೆ ಮಾತ್ರ ಸ್ವರ್ಗ ಮೋಕ್ಷಗಳು, ನಿಮಗಿಲ್ಲ’ ಎಂದರೆ ಮಹಾಜೀವನವಾಗುವುದೇ? ಇವುಗಳಿಗೆಲ್ಲಾ ಉತ್ತರವು ‘ಖಂಡಿತವಾಗಿಯೂ ಆಗಲಾರವು’ ಎಂದೇ ಆಗುವುದು. ಇಲ್ಲಿ ಒಂದು ಅಚ್ಚರಿ ಇದೆ, ಅದೇನೆಂದರೆ, ಈ ಭೂಮಿಯ ಎಲ್ಲಾ ಧರ್ಮ, ಪಂಥ, ಪರಂಪರೆ, ಇತ್ಯಾದಿಗಳು ‘ನಾವು ಮೇಲು’ ಎಂಬಲ್ಲಿಯೇ ಉದಯವಾದವುಗಳಾಗಿವೆ ಎಂಬುವುದೇ ಆ ಅಚ್ಚರಿಯಾಗಿದೆ! ಇಂದೂ, ಎಲ್ಲವೂ ಅದನ್ನೇ ತಲೆಯಲ್ಲಿ ಹೊತ್ತು ಕೂತಿವೆ. ಹೀಗಿರುವಾಗ, ಅಲ್ಲೆಲ್ಲಾ ಮಹಾಜೀವನ ಇದೆ ಎಂದು ಹೇಗೆ ಹೇಳುವುದು, ನೀವೇ ಹೇಳಿರಿ. ಎಲ್ಲರೂ ತಾವು ಶ್ರೇಷ್ಠ ಎಂದು ಹೇಳಿಕೊಳ್ಳಬಹುದು ಆದರೆ ಅದನ್ನು ಹೇಳುವಾಗಲೇ ಎಲ್ಲರೂ ತಾವೇ ನಿಕೃಷ್ಠರಾಗಿಹೋಗಿ ಆಗುವುದು. ಇಲ್ಲೆಲ್ಲಾ ನಿಜವಾದ ಹೃದಯವಂತರಾದ ಮಹಾತ್ಮರುಗಳು, ಬರೇ ಬೆರೆಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಕಾಣಿಸುವರು ಅಷ್ಟೆ.

ಒಟ್ಟಲ್ಲಿ, ಮಹಾಜೀವನವು, ಬೇಲಿಗಳಿಲ್ಲದೆ, ಪ್ರೀತಿ ಮತ್ತು ಹೃದಯ ವೈಶಾಲ್ಯತೆಯ ಹಿನ್ನೆಲೆಯಲ್ಲಿ ಹುಟ್ಟಿ ಬಂದಿರುವುದರಿಂದ ಅದು ಒಂದು ಪವಿತ್ರ ಹೊಸ ನದಿಯಾಗುವುದು ಎಂದೇ ಹೇಳಬೇಕಾಗುತ್ತದೆ. ಮಾತ್ರವಲ್ಲ, ಅದು ಮುಂದೆ ಈ ಭೂಮಿಯ ಎಲ್ಲೆಡೆಯೂ ಹರಿದು ಅಲ್ಪತ್ವ ಎಂಬ ಕೊಳೆಯನ್ನು ನೀಗಿ, ಪ್ರೀತಿ, ಆನಂದಗಳೆಂಬ ಸುಂದರ ಜೀವನವನ್ನು ಬೇಕೆಂದು ಬಯಸುವ ಮಾನವರಿಗೆ ನಿರಂತರ ದಯಪಾಲಿಸಲಿರುವುದು.

 *****************

ಮಹಾಜೀವನ ಮತ್ತು ಇತರ ರೀತಿಯ ಜೀವನಗಳ ವ್ಯತ್ಯಾಸಗಳು ಎಲ್ಲರಿಗೂ ತಿಳಿದಿದೆ. ಅವಲ್ಲಿ ಒಂದು ಪ್ರತ್ಯೇಕವಾದ ವ್ಯತ್ಯಾಸ ಎಂದರೆ ಮಹಾಜೀವನದಲ್ಲಿ ಜೀವಿಸುವವರು ತಮ್ಮ ಮನೆಯಲ್ಲಿ ಶಾಂತಿ ಬರುವ ರೀತಿಯನ್ನು ಅವಲಂಭಿಸುತ್ತಾರೆ ಎಂಬುವುದಾಗಿದೆ. ಈ ರೀತಿಯಲ್ಲಿ ಪೂರ್ಣ ಜಯವನ್ನು ಪಡೆಯಬೇಕಾದರೆ ಮನೆ ಮಂದಿ ಎಲ್ಲರೂ ನಿಷ್ಪಕ್ಷ ರೀತಿಯನ್ನು ಅವಲಂಭಿಸಬೇಕಾಗುತ್ತದೆ. ನಿಷ್ಪಕ್ಷ ರೀತಿ ಎಂದರೆ ಸತ್ಯದ ರೀತಿ ಎಂದು ಅರ್ಥ. ಹೀಗೆ ಮಾಡುವಾಗ, ಅಲ್ಲಿ, ‘ದೇಶ ಮೊದಲು’ ಎಂಬ ಗುರಿಯಂತೆ, ‘ಮನೆಶಾಂತಿ ಮೊದಲು’ ಎಂಬ ಗುರಿಯನ್ನು ಮನೆ ಮಂದಿಯೆಲ್ಲ ಇಟ್ಟುಕೊಳ್ಳುಬೇಕಾಗುವುದು. ಇದು, ಇತರ ಯಾವ ಜೀವನ ರೀತಿಯಲ್ಲೂ ಕಾಣಿಸುವುದಿಲ್ಲ. ಮಹಾಜೀವನವನ್ನು ಅನುಸರಿಸುವವರು, ಈ ಗುರಿಯನ್ನು ಇಡದಿದ್ದರೆ, ಅವರು ಮಹಾಜೀವನವನ್ನು ಪೂರ್ತಿಯಾಗಿ ಅನುಸರಿಸುವುದಿಲ್ಲ ಎಂದೇ ಹೇಳಬೇಕಾಗುವುದು.

 ***************

ನೋಡಿ, ಸನ್ಯಾಸಿಗಳು ಮತ್ತು ಮಹಾಜೀವನದ ಮಹಾತ್ಮರುಗಳು ಇವು ತಮ್ಮೊಳಗಿನ ವ್ಯತ್ಯಾಸಗಳು ನಿಮಗೆ ತಿಳಿದಿದೆ. ಈಗ, ಅವುಗಳ ಒಟ್ಟು ವ್ಯತ್ಯಾಸಗಳ ಬಗ್ಗೆ ಇಲ್ಲಿ ಚುಟುಕಾಗಿ ಪರಿಶೀಲಿಸೋಣ.

ಧರ್ಮಗಳಲ್ಲಿ ಆಧ್ಯಾತ್ಮ ಮತ್ತು ಧರ್ಮ ಎಂದು ಎರಡು ಭಾಗಗಳನ್ನು ಕಾಣಬಹುದು. ಇನ್ನು ಅವುಗಳ ಗುರಿಗಳ ಬಗ್ಗೆ ಹೇಳುವುದಾದರೆ, ಆಧ್ಯಾತ್ಮದಲ್ಲಿ ಮೋಕ್ಷವು ಗುರಿಯಾದರೆ, ಧರ್ಮದಲ್ಲಿ, ನಿತ್ಯಜೀವನವನ್ನು ತನಗೂ ಹಾಗೂ ಇತರರಿಗೂ ತೊಂದರೆ ಆಗದಂತೆ ಜೀವಿಸಲಿರುವ ಹಲವು ಜೀವನ ನಿಯಮಗಳನ್ನು ನೀಡುವುದು ಗುರಿಯಾಗುವುದು.

ಈಗ ನಾವು ಒಂದು ಅಂಶವನ್ನು ಪ್ರತ್ಯೇಕವಾಗಿ ನೋಡೋಣ. ಆಧ್ಯಾತ್ಮವು ನಿತ್ಯಜೀವನವನ್ನು ಬೆಳಗಿಸುವಲ್ಲಿ ಒತ್ತು ಕೊಡುವುದಿಲ್ಲ ಎಂದು ನಮಗೆ ತಿಳಿದಿದೆ, ಯಾಕೆಂದರೆ ಅದು ಲೌಕಿಕವನ್ನು ಸಂಪೂರ್ಣವಾಗಿ ತ್ಯಜಿಸಲು ಹೇಳುವ ಭಾಗವಾಗಿದೆ. ಅಂದರೆ, ಸನ್ಯಾಸಿಗಳು ಮನೆ, ಸಮಾಜಗಳನ್ನು ಬಿಟ್ಟವರು ಆದುದರಿಂದ ಅವರಿಂದ ಗೃಹಸ್ಥಾಶ್ರಮ ತೊಂದರೆಗಳು ನಿಗಲ್ಪಡುವುದಿಲ್ಲ ಎಂದು ಅರ್ಥ. ಇನ್ನು, ಧರ್ಮದ ಭಾಗಕ್ಕೆ ಬರೋಣ, ಅಲ್ಲಿ, ಮಾನವರು ಮಾಡಬೇಕಾಗಿರುವ ಕೆಲವು ಕರ್ತವ್ಯಗಳನ್ನು, ನಿಷ್ಪಕ್ಷ ರೀತಿ ಅಲ್ಲದ, ಆಯಾ ಧರ್ಮ, ಪಂಥಗಳ ನಂಬಿಕೆಯ ಹಿನ್ನೆಲೆಯಲ್ಲಿ ಧರ್ಮಗಳು ಹೇಳುವವು ಅಷ್ಟೆ. ಇನ್ನುಳಿದ ಧರ್ಮದ ಭಾಗವು ನಂಬಿಕೆ ಅಚಾರಗಳಿಂದ ತುಂಬಿರುವವು. ಇಷ್ಟು ಅಲ್ಲದೆ, ಬೇರೆ ನಿತ್ಯಜೀವನವನ್ನು ಬೆಳಗಿಸುವಲ್ಲಿ ಕಲಿತಿರಬೇಕಾದ ಪಾಠಗಳಿಗೆ ಇಲ್ಲಿ ಒತ್ತು ಕೊಡುವುದಿಲ್ಲ.

ಮನೆ, ಸಮಾಜಗಳ ಶುದ್ದಿ ಅಥವಾ ಬೆಳಗುವಿಕೆಯು ನಂಬಿಕೆ ಆಚಾರಗಳಲ್ಲಿ ನಡೆಯುವುದಿಲ್ಲ ಎಂದು ನಮಗೆ ತಿಳಿದಿದೆ. ಯಾಕೆಂದರೆ ಅಲ್ಲೆಲ್ಲಾ ಬೇಕಾಗಿರುವುದು ಜ್ಞಾನವಾಗಿರುವುದು.

ಒಟ್ಟಲ್ಲಿ ಹೇಳುವುದಾದರೆ, ಧರ್ಮ, ಪಂಥಗಳು ಮತ್ತು ಅವುಗಳಲ್ಲಿನ ಸನ್ಯಾಸಿಗಳು, ಇವು ಎಲ್ಲವು ಕೂಡಾ ಮನೆಶಾಂತಿ, ಸಮಾಜಶಾಂತಿಯ ಗುರಿಯನ್ನು ಮುಖ್ಯವಾಗಿ ಹೊಂದಿಲ್ಲವಾದುದರಿಂದ ಜನಸಾಮಾನ್ಯರ ಜೀವನವು ಬೆಳಗದೆಹೋಗಿರುವುದು ಎಂದು ತಿಳಿಯಬೇಕು. ಇಲ್ಲಿಯೇ, ಮಹಾಜೀವನದ ಆ ಮನೆ ಮನೆಯ ಮಹಾತ್ಮರುಗಳ ಜೀವನವು ಜನಸಾಮಾನ್ಯರ ನಿತ್ಯಜೀವನವನ್ನು ಬೆಳಗಿಸುವಲ್ಲಿ ದೊಡ್ಡ ಪಾತ್ರ ವಹಿಸಿರುವುದು ಎಂಬುವುದನ್ನು ನಾವು ಮನಗೊಳ್ಳಬೇಕಾಗಿರುವುದು.

 **************

ನೋಡಿ, ಮಹಾಜೀವನವು ಗೃಹಸ್ಥಾಶ್ರಮಿಗಳ ಜೀವನವಾಗಿದೆ. ಈ ಕಾರಣಕ್ಕೆ, ಮನೆ ಮನೆಯ ಮಹಾತ್ಮರ ಜೀವನ ಎಂದು ಮಹಾಜೀವನವನ್ನು ಕರೆಯುವುದು. ಇತ್ತ, ಸನ್ಯಾಸವು ಗೃಹಸ್ಥಾಶ್ರಮವನ್ನು ತ್ಯಜಿಸಿದ ಜೀವನವಾಗಿದೆ. ಮಾತ್ರವಲ್ಲ, ಈ ಕಾರಣದಿಂದಲೇ, ಮಹಾಜೀವನವು ಮಾತ್ರವೇ ಗೃಹಸ್ಥಾಶ್ರಮಕ್ಕೆ ಆದರ್ಶವಾಗಲು ಸಾಧ್ಯ ಎನ್ನುವುದು ಎಂದು ತಿಳಿಯಬೇಕು. ಅಂದರೆ, ಸನ್ಯಾಸ ಮತ್ತು ಗೃಹಸ್ಥಾಶ್ರಮಗಳು ಎರಡು ವಿರುದ್ಧ ತರ ಜೀವನಗಳು, ಮತ್ತು ಆ ಎರಡು ಜೀವನಗಳನ್ನು ಮಿಶ್ರಮಾಡಿ ಇಹದ ಜೀವನ ನಡೆಸುವ ಜನಸಾಮಾನ್ಯರಿಗೆ ಉಪದೇಶಗಳನ್ನು ನೀಡಬಾರದು ಎಂದು ಅರ್ಥ. ಅಚ್ಚರಿ ಎಂದರೆ, ಕೆಲವು ಕಡೆಗಳಲ್ಲಿ, ಸನ್ಯಾಸಿಗಳು ಹಾಗೂ ಗುರುಗಳು, ಗೃಹಸ್ಥಾಶ್ರಮಿಗಳಿಗೆ ‘ತಾವರೆ ಎಲೆ ತರ ಇದ್ದು ಈ ಭೂಮಿಯಲ್ಲಿ ಜೀವಿಸಬೇಕು’ ಎಂದು ಉಪದೇಶ ಹೇಳುವುದಾಗಿದೆ! ಅಂದರೆ, ಮೋಕ್ಷಾರ್ಥಿಗಳಾದ ಸನ್ಯಾಸಿಗಳಂತೆ, ಈ ಭೂಮಿಯ ಯಾವುದಕ್ಕೂ ಅಂಟದೆ ಜೀವಿಸಬೇಕು ಎನ್ನುವುದಾಗಿದೆ. ಹೀಗೆ ಹೇಳುವಾಗ, ಶುದ್ಧಪ್ರೀತಿಯು ಕೂಡಾ ಒಂದು ರೀತಿಯ ಭಾವನಾತ್ಮಕ ಸಂಬಂಧ ಅಥವಾ ಅಂಟುವಿಕೆಯಾಗುವುದು ಎಂಬುವುದನ್ನು ಅವರು ಮರೆಯುವರು. ಅಂದರೆ, ಮಹಾತ್ಮರ ಆ ಪವಿತ್ರ ಹೃದಯವಾದ ಒಳಿತಿನ ಹಾಗೂ ಉತ್ತಮರ ಮೇಲಿನ ಹೃದಯದ ಕಾಳಜಿಯು ‘ಬೇಕಾಗಿಲ್ಲ’ ಎಂದು ಹೇಳಿದಂತೆ ಆಗುವುದು. ಇದು ಸಮಾಜದ ಒಳಿತಿನ ಬಗ್ಗೆ ಕಾಳಜಿವಹಿಸಿರುವ ಹಿಂದಿನ ಆ ಎಲ್ಲಾ ಮಹಾತ್ಮರ ಅನಿವಾರ್ಯತೆಯನ್ನೇ ಅಲ್ಲಗಳೆದಂತೆ ಆಗುವುದು. ಈ ಹಿನ್ನೆಲೆಯಲ್ಲಿ, ಆ ಎರಡು ಜೀವನ ರೀತಿಗಳನ್ನು ಮಿಶ್ರಮಾಡಿ ಉಪದೇಶಿಸುವುದು ಎಷ್ಟು ಭಯಾನಕ ತಪ್ಪು ಎಂಬುವುದು ಸ್ಪಷ್ಟವಾಗುವುದು.

ಈ ಭೂಮಿಯಲ್ಲಿ, ಸಮಾಜದಲ್ಲಿ ಶೋಷಿತರ ದಯನೀಯ ಜೀವನವನ್ನು ಕಂಡು, ಅದಕ್ಕೆ ಮರುಗಿ, ಅವರಿಗಾಗಿ ಕಾಳಜಿವಹಿಸಿ, ಅವರಿಗಾಗಿ ದುಡಿದು ಮಡಿದಿರುವ ಆ ಮಹಾತ್ಮರುಗಳು ಎಲ್ಲರೂ ಕೂಡಾ ಶುದ್ಧಪ್ರೀತಿಯ ಹಾಗೂ ಕರುಣೆ, ದಯೆಗಳ ಭಾವನೆಗಳ ಕಾರಣದಿಂದ, ಹೃದಯದಿಂದ, ಮಾನವ ಪ್ರೇಮ ಎಂಬಲ್ಲಿ ಬಂಧಿತರೇ ಆಗಿರುವರು. ಒಳಿತು ಎಂದರೆ, ಅದು, ಉತ್ತಮ ಮನಸ್ಸು, ಉತ್ತಮ ಮಾತು, ಉತ್ತಮ ಕರ್ಮದ ಕಡೆಗಿನ ಹೆಚ್ಚಿನ ಒಲವು ಆಗಿದೆ. ಹೀಗಿರಲು, ಯಾವುದೇ ವ್ಯಕ್ತಿಯ ಮನ, ಮನೆ, ಸಮಾಜ ಇವು ಒಳಿತಿನ ದಾರಿಯಲ್ಲಿ ಇರಬೇಕಾದರೆ ಅಥವಾ ಧರ್ಮದ ಹಾದಿಯಲ್ಲಿ ಇರಬೇಕಾದರೆ ಮಾನವರು ಒಳಿತಿನ ಕಡೆಗೆ ಹೆಚ್ಚಿನ ಒಲವು ತೋರಲೇಬೇಕಾಗುವುದು. ಹೀಗಿರಲು, ಗೃಹಸ್ಥಾಶ್ರಮಿಗಳಿಗೆ, ‘ಕೆಟ್ಟದ್ದಕ್ಕೆ ಆಂಟಬಾರದು’ ಎಂದು ಉಪದೇಶಿಸಬಹುದು, ಆದರೆ ‘ಗೃಹಸ್ಥಾಶ್ರಮಿಗಳು ಯಾವುದಕ್ಕೂ ಅಂಟಬಾರದು’ ಎಂದು ಎಲ್ಲವನ್ನು ಒಟ್ಟಾಗಿ ಹೇಳುವುದು ದೊಡ್ಡ ತಪ್ಪಾಗುವುದು.

ಇನ್ನು, ಮತ್ತೂ ಅಚ್ಚರಿ ಎಂದರೆ, ಮೋಕ್ಷ ಸಾಧಿಸಬೇಕಾದರೆ ಸಾತ್ವಿಕ, ರಾಜಸಿಕ, ತಾಮಸಿಕ, ಎಂಬ ಮೂರು ಗುಣಗಳನ್ನು ವ್ಯಕ್ತಿಯು ಮೀರಬೇಕು ಎಂದು ಅಧ್ಯಾತ್ಮದಲ್ಲಿ ಇರುವುದರಿಂದ, ಕೆಲವು ಉಪದೇಶಗಳು ಹೇಗಿರುತ್ತವೆ ಎಂದರೆ, ‘ಒಳಿತು, ಕೆಡುಕು ಎಂಬುವುದು ಇಲ್ಲ, ಎಲ್ಲವೂ ಅವರವರ ದೃಷ್ಟಿಕೋನ’ ಎಂಬ ರೀತಿಯಲ್ಲಿ ಇರುವವು! ಅಯ್ಯೋ, ಒಳಿತು ಕೆಡುಕು ಇಲ್ಲ ಎಂದಾದರೆ ಇನ್ನು ಧರ್ಮ ಎಂಬುವುದು ಹೇಗಿರಲು ಸಾಧ್ಯ? ಆಗ ಆ ಬೋಧನೆಯು ಅಧರ್ಮದ ಹಂತಕ್ಕೆ ಏರುವುದು. ಯಾಕೆಂದರೆ, ಒಳಿತೇ ಧರ್ಮ ಮತ್ತು ಕೆಡುಕೇ ಅಧರ್ಮವಾಗಿದೆ. ಉಪದೇಶಿಸುವ ಮಣೆಯಲ್ಲಿ ಕುಳಿತಿರುವ ಇಂಥಹ ಗುರುಗಳು ಹೀಗೆಲ್ಲಾ ಹೇಳುವುದು ನಿಜವಾಗಿಯೂ ಅಚ್ಚರಿಯನ್ನು ಉಂಟು ಮಾಡುವುದು. ದುರದೃಷ್ಟವಶಾತ್, ಅಂಥವರಿಗೂ ನಂಬಿಕೆ, ಆಚಾರಗಳ ರಾಶಿಯಲ್ಲಿರುವ ಆ ಕುರುಡು ಶ್ರದ್ಧೆ ಮಾತ್ರ ಕಡಿಮೆಯಾಗಿರುವುದಿಲ್ಲ. ನೋಡಿ, ಈ ಭೂಮಿಯ ಪ್ರತಿ ದೇಶವು ಕೂಡಾ ಪೊಲೀಸ್ ಠಾಣೆ, ನ್ಯಾಯಾಲಯಗಳನ್ನು ಇಟ್ಟಿರುವುದು ಕೂಡಾ ಒಳಿತಿನ ದಾರಿಯಲ್ಲಿ ಜನರು ನಡೆಯಲೆಂದು ಮತ್ತು ಒಳಿತಿನ ದಾರಿಗೆ ತಡೆ ಆಗಬಾರದೆಂದು, ಅಂದರೆ, ಆ ಪರಮ ಧರ್ಮದ ರಕ್ಷಣೆಗಾಗಿ. ಈ ಸತ್ಯವನ್ನು ಕೂಡಾ ಆ ರೀತಿಯಲ್ಲಿ ಉಪದೇಶಿಸುವವರು ಮರೆತಿರುವರು ಎಂಬುವುದು ಇನ್ನೂ ಅಚ್ಚರಿಯನ್ನು ಇಮ್ಮಡಿಗೊಳಿಸುವುದು!!

ಒಟ್ಟಲ್ಲಿ, ಒಳಿತೇ ಧರ್ಮ, ಮತ್ತು ಕೆಡುಕು ಅಧರ್ಮವಾಗಿದೆ. ಆದುದರಿಂದ, ಒಳಿತಿನ ಕಡೆಗಿರುವ ಭಾವನಾತ್ಮಕ ನಂಟು ಖಂಡಿತವಾಗಿಯೂ, ಗೃಹಸ್ಥಾಶ್ರಮಿಗಳಿಗೆ ಸಂಬಂಧಿಸಿ, ಅವರ ಮನ, ಮನೆ, ಸಮಾಜಗಳ ಶಾಂತಿ, ಅನಂದಗಳನ್ನು ವೃದ್ಧಿಮಾಡುವಲ್ಲಿ ತುಂಬಾ ಸಹಕಾರಿಯಾಗುವುದು. ಇದರಲ್ಲಿ ಯಾವ ಸಂಶಯವೂ ಇಲ್ಲ.

 *****************

ಸನ್ಯಾಸ ಮತ್ತು ಮಹಾಜೀವನದಲ್ಲಿ ಯಾವುದು ಮಾನವರಿಗೆ ಅನಿವಾರ್ಯ ಎಂಬಲ್ಲಿ, ಮಹಾಜೀವನವು ಈ ಭೂಮಿಯ ಮಾನವರಿಗೆ ಅನಿವಾರ್ಯ ಎಂದು ಹೇಳಬಹುದು. ಇದು ಹೇಗೆ ಎಂಬುವುದನ್ನು ನೋಡೋಣ. ನೋಡಿ, ಈ ಭೂಮಿಯಲ್ಲಿ ಕಡಿಮೆಯಲ್ಲಿ 90% ಜನರು ಗೃಹಸ್ಥಾಶ್ರಮಿಗಳು ಇರಬಹುದು. ಇನ್ನು, ಮದುವೆಯೇ ಗೃಹಸ್ಥಾಶ್ರಮದ ಮೂಲವಾಗಿದೆ. ಅಂದರೆ, ಈ ಲೋಕವು ‘ಮದುವೆ’ ಎಂಬ ಜೀವನ ಮೌಲ್ಯವನ್ನು ಜಾತಿ, ಧರ್ಮ, ಬೇಧವಿಲ್ಲದೆ ಯಾಕಾಗಿ ಇಷ್ಟು ಗಟ್ಟಿಯಾಗಿ ಇಟ್ಟುಕೊಂಡಿದೆ ಎಂದು ಇಲ್ಲಿ ನಮಗೆ ಅರ್ಥವಾಗುವುದು.

ನೋಡಿ, ಮದುವೆ ಇಲ್ಲದಿದ್ದರೆ, ಜಗತ್ತಲ್ಲಿ, ಬಾಡಿಗೆ ತಾಯಿಗಳು ಮತ್ತು ನಾಯಿ ಮರಿಗಳಂತೆ, ಸ್ವಲ್ಪ ಕಾಲ ಬೆಳೆಯುವ ತನಕ ಮಕ್ಕಳನ್ನು ಇಟ್ಟುಕೊಳ್ಳುವ ಏಕ ಪೋಷಕರು ಮಾತ್ರ ಕಾಣಿಸಬಹುದು ಹೊರತು, ಇಂದಿನ ರೀತಿಯಲ್ಲಿ, ಮಗುವನ್ನು ಕುಟುಂಬದೊಳಗೆ ಬೆಳೆಸುವ ರೀತಿ ಇರಲಾರದು. ಇಂದಿನಂತೆ, ಸಹೋದರ, ಸಹೋದರಿಯರು ಇರಲಾರರು. ಇನ್ನು, ಇತರ ಆ ಹಲವು ಸಂಬಂಧಿಕರು ಕೂಡಾ ಇರಲಾರರು. ಅದರ ಬದಲು, ಸರ್ವರೂ ಕಾಮದ ಅಲೆದಾಡುವ ಪಿಶಾಚಿಗಳು ಮಾತ್ರ ಆಗಿಹೋಗುವರು.

ಪ್ರೀತಿಯ ಆರಂಭವು ತಾಯಿ, ಮಗು, ಕುಟುಂಬ, ಇತ್ಯಾದಿಗಳಿಂದ ಎಂದು ನಮಗೆ ತಿಳಿದಿದೆ. ಅವೆಲ್ಲಾ ಇಲ್ಲವಾದಲ್ಲಿ, ಸ್ವಾರ್ಥ ಮಾತ್ರವಾಗಿ, ಪ್ರೀತಿಯ ಅಸ್ತಿತ್ವವೇ ಇಲ್ಲವಾಗಿಬಿಡಬಹುದು. ಮಾತ್ರವಲ್ಲ, ಒಳಿತು ಎಂಬುವುದು ಸರ್ವನಾಶವಾಗಿ, ಕೆಡುಕು ಅದರ ತಾರಕಕ್ಕೆ ಏರಬಹುದು. ಈ ಮದುವೆ ವ್ಯವಸ್ಥೆಯು ಜಗತ್ತಲ್ಲಿ ಇಲ್ಲವಾದಲ್ಲಿ, ಧರ್ಮ, ಪಂಥಗಳು ತಾವಾಗಿ ಇಲ್ಲವಾಗುವವು ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲಾ. ಇನ್ನು, ನಮಗೆ ಈಗಾಗಲೇ ತಿಳಿದಿರುವಂತೆ, ಅನ್ಯಗ್ರಹ ಜೀವಿಗಳ ರಹಸ್ಯ ಪ್ರಾಚೀನ ವಾಮಾಚಾರದ ಆ ‘ಮದುವೆ ಇಲ್ಲದ ಸಮಾಜ’ ದ ಗುರಿಯು, ಒಂದು ಕಾಲದಲ್ಲಿ ಈ ಭೂಮಿಯಲ್ಲಿ ಧರ್ಮ, ಪಂಥಗಳನ್ನು ಇಲ್ಲದಂತೆ ಮಾಡುವುದು ಎಂಬ ಆ ಸತ್ಯ ಕೂಡಾ ಇಲ್ಲಿ ಸ್ಪಷ್ಟವಾಗುವುದು.

ಇನ್ನು, ಅನ್ಯಗ್ರಹ ಜೀವಿಗಳ ಈಗಾಗಲೇ ತಯಾರು ಮಾಡಿರುವ ‘ಮದುವೆ ಇಲ್ಲದ ಸಮಾಜ’ ಎಂಬುವುದನ್ನು ಅವು, ಈಗಿರುವ ಭೂಮಿಯ ಮಾನವ ಜೀವನದಲ್ಲಿ ನಿಧಾನವಾಗಿ ಪಡೆಯುವ ಗುರಿ ಹೊಂದಿರುವುದರಿಂದ, ಅದರಿಂದ ಪಾರಾಗಲು, ಇನ್ನು, ಈಗಿರುವ ಬೇಲಿಗಳಿಂದ ಕೂಡಿರುವ ಯಾವ ಜೀವನ ರೀತಿಗೂ ಸಾಧ್ಯವಿಲ್ಲ. ಯಾಕೆಂದರೆ, ಇಂದಿನ ಧಾರ್ಮಿಕ ಶೋಷಣೆ, ನಿಬಂಧನೆ, ಇತ್ಯಾದಿ ರೀತಿಗಳಲ್ಲಿ ಯಾವುದನ್ನು ಕೂಡಾ ಮುಂದೆ ಅವು ಉಳಿಸುವುದಿಲ್ಲ!!

ಇಂಥ ಪರಿಸ್ಥಿತಿಯಲ್ಲಿ, ಇದಕ್ಕೆಂದೇ ಒಂದು ಪರಿಹಾರವನ್ನು ಕಾಣಲಾಯಿತು, ಅದರ ಹೆಸರೇ, ಯಾವುದೇ ಬೇಲಿಗಳಿಲ್ಲದ, ವ್ಯಕ್ತಿತ್ವ ಶುದ್ಧೀಕರಣ ಎಂಬ, ಆ ಮಹಾಜೀವನ ರೀತಿಯಾಗಿದೆ. ಮಹಾಜೀವನವು ಮನ, ಮನೆ, ಸಮಾಜ, ಲೋಕ ಇವುಗಳ ಶಾಂತಿ, ನೆಮ್ಮದಿಗಳನ್ನು ಮಾತ್ರ ಗುರಿಯಾಗಿಟ್ಟಿರುವುದರಿಂದ, ಭವಿಷ್ಯದಲ್ಲಿ, ಇದರಲ್ಲಿ ನಮಗೆ ಒಂದು ಭರವಸೆಯನ್ನು ಕಾಣಬಹುದಾಗಿದೆ.

ಮಹಾಜೀವನವು ಸತ್ಯ, ವಾಸ್ತವತೆಯ ಹಿನ್ನೆಲೆಯ ಜ್ಞಾನದ ಒಂದು ಸಾಧನಾ ರೀತಿಯಾಗಿದೆ. ಎಲ್ಲಾ ಧರ್ಮ, ಪಂಥದವರಿಗೂ, ಅದೇ ರೀತಿ, ನಾಸ್ತಿಕರಿಗೂ, ಬೇಕಿದ್ದಲ್ಲಿ, ಶಾಲಾ ಕಾಲೇಜುಗಳ ವಿದ್ಯಾಭ್ಯಾಸದ ತರ, ಅದರ ಲಾಭವನ್ನು ಪಡಕೊಳ್ಳಬಹುದು. ಇದು, ಮುಳುಗುವ ಹಡಗಿನಲ್ಲಿ ಇರುವ ಜನರಲ್ಲಿ, ಬೇಕಿದ್ದವರಿಗೆ, ಜೀವ ಉಳಿಸಿಕೊಳ್ಳುವ ದೋಣಿ ಅಷ್ಟೆ. ಒಟ್ಟಲ್ಲಿ, ಮಾನವರನ್ನು

ಒಗ್ಗಟ್ಟು ಮಾಡುವಲ್ಲಿ ಮಾತ್ರ ಭವಿಷ್ಯದ ಹಲವು ವಿಪತ್ತುಗಳ ಪರಿಹಾರ ಇರುವುದು, ಆದರೆ, ಅದು ಇಂದಿನ ಆ ಸಹಸ್ರ ರೂಪಗಳಲ್ಲಿ ಕಾಣಿಸುವ, ಮಾನವರನ್ನು ಮಾನವರಿಂದ ಬೇರ್ಪಡಿಸುವ, ಬೇಲಿಗಳಿಂದ ಕೂಡಿರುವ ಯಾವುದರಿಂದಲೂ ಅಲ್ಲವೇ ಅಲ್ಲ ಎಂಬುವುದು ಖಂಡಿತ.

 *********************

ಈ ಮೊದಲೇ ತಿಳಿದಂತೆ, ಮದುವೆ ಇಲ್ಲದ ಸಮಾಜವನ್ನು ಈ ಭೂಮಿಯಲ್ಲಿ ಸೃಷ್ಟಿಮಾಡಲು ಆ ಅನ್ಯಗ್ರಹಜೀವಿಗಳ ರಹಸ್ಯ ವಾಮಾಚಾರವು ಪ್ರಯತ್ನಿಸುವಾಗ, ಅಲ್ಲಿ ನಿಧಾನಕ್ಕೆ ಪತಿ ಪತ್ನಿ ಜಗಳ, ವಿವಾಹ ವಿಚ್ಛೇದನ, ಇತ್ಯಾದಿಗಳು ಹೆಚ್ಚಾಗುತ್ತಾ ಹೋಗಲೇಬೇಕಾಗುತ್ತದೆ. ಅದು ಹೆಚ್ಚುತ್ತಿರುವುದನ್ನು ನಾವು ಈಗಾಗಲೇ ಜಗತ್ತಿನ ಎಲ್ಲಾ ಸಮಾಜಗಳಲ್ಲಿ ನೋಡುತ್ತಿರುತ್ತೇವೆ.

ಈ ತೊಂದರೆಯು ಬಹಳ ಗಂಭೀರವಾಗುತ್ತಾ ಹೋಗುತ್ತಿರಲು, ಅದರಿಂದ ಪಾರಾಗುವುದು ಹೇಗೆಂಬ ಚಿಂತೆ ಎಲ್ಲರಲ್ಲೂ ಕಾಡಲು ಆರಂಭಿಸಿದೆ. ಗೃಹಸ್ಥಾಶ್ರಮದ ಈ ದೊಡ್ಡ ಸಮಸ್ಯೆಗೆ ಪರಿಹಾರವು ಸಂಸಾರ ಜೀವನವನ್ನು ತೊರೆದಿರುವ ಸನ್ಯಾಸಿ ವರ್ಗದಿಂದ ಸಾಧ್ಯವಾಗಲಾರದು. ಅದೇ ರೀತಿ, ಸಂಸಾರ ಜೀವನವನ್ನು ತೊರೆದಿರುವ ಮರದಡಿಯ ಮಹಾತ್ಮರುಗಳು ಕೂಡಾ ಇಲ್ಲಿ ಸಹಾಯಕರಾಗುವುದಿಲ್ಲ. ಯಾಕೆಂದರೆ, ಈ ಎರಡು ವರ್ಗಗಳು ಕೂಡಾ ಗೃಹಸ್ಥಾಶ್ರಮಕ್ಕೆ ಆದರ್ಶವಾಗಲು ಸಾಧ್ಯವಾಗುವುದಿಲ್ಲ ಎಂಬುವುದೇ ಕಾರಣವಾಗಿದೆ. ಆದುದರಿಂದ, ಇನ್ನು, ಇದರ ಪರಿಹಾರಕ್ಕೆ ಗೃಹಸ್ಥಾಶ್ರಮದಲ್ಲಿ ಆದರ್ಶ ಜನರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಇದಲ್ಲದೆ, ಬರೇ ಉಪದೇಶಗಳು ಇನ್ನು ಕೆಲಸಮಾಡಲಾರವು ಖಂಡಿತ. ಈ ಮುಖ್ಯ ಕಾರಣದ ಹಿನ್ನೆಲೆಯಲ್ಲಿಯೇ, ಒಂದು ಹೊಸ ವರ್ಗವಾದ ‘ಮನೆ ಮನೆಯ ಮಹಾತ್ಮರು’ ಎಂಬ ವರ್ಗ ಸೃಷ್ಠಿಯಾಗಿರುವುದು. ಇದು, ಹಿಂದಿನ ಗೃಹಸ್ಥ ಋಷಿಗಳಂತೆ ಮೋಕ್ಷದ ಧ್ಯಾನ, ಸಾಧನೆ, ಇತ್ಯಾದಿಗಳನ್ನು ಮಾಡುವ ವರ್ಗವಲ್ಲ, ಆದರೆ ಈ ವರ್ಗವು ತನ್ನ ಮನ, ಮನೆ, ಸಮಾಜಗಳಲ್ಲಿ ಶಾಂತಿ, ಆನಂದ, ನೆಮ್ಮದಿಗಳನ್ನು ತುಂಬಲು ಪ್ರಯತ್ನಿಸುವ, ಮತ್ತು ಉತ್ತಮರ ಮೇಲೆ ಕಾಳಜಿಹೊಂದಿರುವ, ಹಾಗೂ ಹೃದಯ ವೈಶಾಲ್ಯತೆ ಇರುವ ವರ್ಗವಾಗಿದೆ. ಈ ಜಾಗತಿಕ ಸಮಸ್ಯೆಯ ಪರಿಹಾರಕ್ಕಾಗಿ ಮಾತ್ರ ಸೃಷ್ಟಿಯಾಗಿರುವ, ಪವಿತ್ರತೆಯ, ಈ ಹೊಸ ವರ್ಗದಲ್ಲಿ, ಸನ್ಯಾಸಿಗಳು ಮತ್ತು ಮರದಡಿಯ ಮಹಾತ್ಮರಂತೆ, ಮದುವೆಯಾಗದೆ ಜೀವಿಸಲು ಅವಕಾಶವಿಲ್ಲ. ಈ ಕಾರಣದಿಂದ, ಈ ಹೊಸ ರೀತಿಯನ್ನು ಆರಂಭಿಸುವಲ್ಲಿ, ನಾನು ಕೂಡಾ ಗೃಹಸ್ಥಾಶ್ರಮಿ ಆಗಲೇಬೇಕಾಯಿತು.

ಒಟ್ಟಲ್ಲಿ, ಅನ್ಯಗ್ರಹಜೀವಿಗಳ ರಹಸ್ಯ ವಾಮಾಚಾರದ ತೊಂದರೆಯನ್ನು ಪರಿಹರಿಸಲು ಮಾತ್ರವಾಗಿ ಮನೆ ಮನೆಯ ಮಹಾತ್ಮರು ಅಥವಾ ಮಹಾಜೀವನ ಎಂಬ ಬೇಲಿಗಳಿಲ್ಲದ ಸತ್ಯ, ಪ್ರೀತಿ, ನೀತಿಗಳ ಹಿನ್ನೆಲೆಯ ಜ್ಞಾನವನ್ನು ಹೊಂದಿರುವ ಹೊಸ ವರ್ಗವನ್ನು ಸೃಷ್ಟಿಮಾಡಲಾಯಿತು ಎಂದು ತಿಳಿಯಬೇಕು. ಹೀಗಿರುವಾಗ, ತನ್ನ ಧರ್ಮದಲ್ಲಿದ್ದೇ, ಈ ಜ್ಞಾನವನ್ನು ಅವಲಂಭಿಸಿ, ಅದರ ಲಾಭವನ್ನು ಪಡೆಯಲು ಈ ಭೂಮಿಯ ಯಾವುದೇ ವ್ಯಕ್ತಿಗೆ ಸಾಧ್ಯವಾಗುವುದು. ಇದುವೇ ಇದರ ಒಂದು ಮುಖ್ಯ ಪ್ರತ್ಯೇಕತೆಯು ಕೂಡಾ ಆಗಿರುವುದು.

ಇನ್ನು, ದಿವ್ಯಜ್ಞಾನ ಸನ್ನಿಧಿಗಳು ಮೇಲೆ ಹೇಳಿರುವ ಪರಿಹಾರಗಳನ್ನು ನೀಡುವ ಮತ್ತು ಮಾನವ ಸಾಂತ್ವನದ ಕೇಂದ್ರಗಳಾಗಿರುವವು. ಇಲ್ಲಿ, ಮಾನವರನ್ನು, ಯಾವುದೇ ರೀತಿಯ ಬೇಲಿಗಳ ಹಿನ್ನೆಲೆ ಬಿಟ್ಟು, ಮಾನವರಾಗಿ ಮಾತ್ರ ಪ್ರೀತಿಯಿಂದ ಕಾಣಲಾಗುವುದು, ಮತ್ತು ಮನ, ಮನೆ, ಸಮಾಜ, ಲೋಕ ಶಾಂತಿಗಳನ್ನು ಬೆಳೆಸುವಲ್ಲಿ ಗಮನಹರಿಸಲಾಗುವುದು.

 *****************

ನೋಡಿ, ನಾವು ಯಾವುದೇ ಒಂದು ಗುರಿಯನ್ನು ಇಟ್ಟು ಅದನ್ನು ಪಡೆಯಲು ನಮ್ಮ ಜೀವನದ ಸಮಯವನ್ನು ವ್ಯಯಿಸುವಾಗ, ಅಲ್ಲಿ ಆ ನಾವಿಟ್ಟಿರುವ ಗುರಿ ಇರಲೇಬೇಕಲ್ಲವೇ? ಇನ್ನು, ಗುರಿಯ ಅಸ್ತಿತ್ವದ ಬಗ್ಗೆ ಸಂಶಯ ಇರುವಾಗ ಯಾರೂ ಕೂಡಾ, ಕೆಲವೊಮ್ಮೆ ಚಿಕ್ಕ ಸಮಯಾವಕಾಶವಾದರೆ ಪರೀಕ್ಷಿಸಿ ನೋಡಬಹುದೇ ಹೊರತು, ಜೀವನ ಪರ್ಯಂತ ಸಮಯವನ್ನು ಸಂಶಯವಿರುವ ಯಾವುದಕ್ಕಾದರೂ ವ್ಯಯಮಾಡಲಾರರು ಖಂಡಿತ. ಈ ಅಂಶದ ಹಿನ್ನೆಲೆಯಲ್ಲಿ ನಾವು ಸನ್ಯಾಸದ ಗುರಿಯನ್ನು ಒಮ್ಮೆ ನೋಡಿಬಿಡೋಣ. ಅಚ್ಚರಿ ಎಂದರೆ, ಈ ಸನ್ಯಾಸದ ಅಥವಾ ಆಧ್ಯಾತ್ಮದ ಗುರಿಯ ಬಗ್ಗೆ ಧರ್ಮಗಳು ತಮ್ಮೊಳಗೆ ಒಂದಕ್ಕೊಂದು ವಿರುದ್ಧವಾಗಿ ಹೇಳುವವು ಎಂಬುವುದಾಗಿದೆ!! ಹೀಗಿರುವಾಗ, ಆ ಏಕ ಗುರಿಯನ್ನು ಉದ್ದೇಶಿಸಿ ಹೇಳುವ ಆ ಬೇರೆ ಬೇರೆ ಗುರಿಗಳಲ್ಲಿ ಯಾವುದು ಸತ್ಯ? ಸತ್ಯವು ಒಂದು ಮಾತ್ರ ಆಗಿರಲು ಸಾಧ್ಯ ಎಂಬುದು ನಮಗೆ ತಿಳಿದಿದೆ. ಒಟ್ಟಲ್ಲಿ, ಇದು, ಶಿಲಾಯುಗದಿಂದಲೇ ಮಾನವರನ್ನು ಮೋಸ ಮಾಡುತ್ತಾ ಬಂದಿರುವ ಅನ್ಯಗ್ರಹ ಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರದ ಕೈವಾಡವನ್ನು ಮತ್ತೂ ಸ್ಪಷ್ಟಪಡಿಸುವುದು ಅಷ್ಟೆ.

ಇನ್ನು, ಮಹಾಜೀವನದ ಗುರಿಯು, ನಮ್ಮ ನಮ್ಮ ಜೀವನದಲ್ಲಿ, ನೈತಿಕ ರೀತಿಯಲ್ಲಿ, ಅತ್ಯಧಿಕ ಶಾಂತಿ, ನೆಮ್ಮದಿಗಳನ್ನು ಪಡೆಯುವುದಾಗಿದೆ. ಈ ಗುರಿಯು ಮಾನವರಾದ ಎಲ್ಲರಿಗೂ ಬೇಕಾಗಿದೆ. ಹಾಗಿರುವಾಗ, ಆ ಗುರಿಯು ಇದೆಯೋ ಇಲ್ಲವೋ ಎಂಬ ಸಂಶಯವು ಬರುವ ಅವಕಾಶವೇ ಇಲ್ಲವಾಗುತ್ತದೆ.

ಒಟ್ಟಲ್ಲಿ, ಸನ್ಯಾಸ ಮತ್ತು ಮಹಾಜೀವನದ ಗುರಿಗಳಲ್ಲಿ ಇಷ್ಟು ದೊಡ್ಡ ವ್ಯತ್ಯಾಸಗಳು ಕಾಣಿಸುವವು!

 ****************

ಸಾಧಕ, ಸಾಧನೆ, ಮತ್ತು ಸಾಧ್ಯ ಎಂಬ ಈ ಮೂರು, ಗಳಿಕೆಯ ಆ ಮೂರು ಘಟಕಗಳಾಗಿವೆ. ಇವಲ್ಲಿ, ಮೊದಲಿಗೆ, ಸಾಧ್ಯ ಅಥವಾ ಗುರಿ ಎಂಬುವುದನ್ನು ನೋಡೋಣ.

ನೋಡಿ, ಮನುಷ್ಯನ ಎಲ್ಲಾ ಕ್ರಿಯೆಗಳು ಕೂಡಾ ಗುರಿಗಳನ್ನು ಹೊಂದಿವೆ! ಗುರಿ ಇಲ್ಲದೆ ಯಾವ ಕೆಲಸವನ್ನು ಮಾಡಲೂ ಸಾಧ್ಯವಿಲ್ಲ. ಉದಾಹರಣೆಗೆ ಸಾಮಾನ್ಯ ಕೆಲಸಗಳಾದ ಸ್ನಾನ ಮಾಡುವಿಕೆ, ಅಡುಗೆ ಮಾಡುವಿಕೆ, ಇತ್ಯಾದಿಗಳು ಕೂಡಾ ಗುರಿಗಳೇ ಆಗಿವೆ, ಆದರೆ ಅವುಗಳಿಗೆ ಹೆಚ್ಚಿನ ಗಮನ ಅಗತ್ಯವಿಲ್ಲದ ಕಾರಣ, ಅವು ಕಟ್ಟುನಿಟ್ಟಾಗಿ ಸಮಯಬಂಧಿತವಲ್ಲದ ಕೆಲಸವಾದ ಕಾರಣ, ಮತ್ತು ಅವಲ್ಲಿ ಹೆಚ್ಚಿನ ಆಸಕ್ತಿ, ಅನಿವಾರ್ಯತೆಗಳು ಇಲ್ಲದಿರುವ ಕಾರಣ ಅವುಗಳು ಗುರಿಗಳಾಗದೆ ಬರೇ ‘ತೀರ್ಮಾನ’ ಎಂಬ ಹಂತದಲ್ಲಿ ಮಾತ್ರ ಇರುವವು ಅಷ್ಟೆ. ಆದುದರಿಂದ, ಸಾಮಾನ್ಯವಾಗಿ, ಗುರಿ ಎಂಬುದರಲ್ಲಿ, ಹೆಚ್ಚಿನ ಗಮನ, ಅನಿವಾರ್ಯತೆ, ಮತ್ತು ಆಸಕ್ತಿಗಳು ಸಾಧಕನಲ್ಲಿ ಕಂಡುಬರುವವು ಎಂದು ತಿಳಿಯಬಹುದು.

ಗುರಿಯ ಬಗ್ಗೆ ಇನ್ನೊಂದು ಅಂಶವು ಕೂಡಾ ಇದೆ. ಅದುವೇ ಗುರಿಯ ವ್ಯಾಪ್ತಿ ಅಥವಾ ಗಾತ್ರ ಆಗಿದೆ. ನೋಡಿ, ಅತ್ಯಂತ ಹೆಚ್ಚಿನ ಪ್ರಯತ್ನ ಇಲ್ಲದೆ ಪಡೆಯಲು ಸಾಧ್ಯವಾಗುವುದನ್ನು ಗುರಿ ಎಂದೂ, ಮತ್ತು ಅತ್ಯಂತ ಹೆಚ್ಚಿನ ಪ್ರಯತ್ನದ ಫಲವಾಗಿ ಪಡೆಯುವಂತದ್ದು ಮಹತ್ವಾಕಾಂಕ್ಷೆ ಎಂದೂ ಕರೆಯಲ್ಪಡುವವು. ಇಲ್ಲಿ, ಎಲ್ಲರೂ ಜಾಗ್ರತೆವಹಿಸಬೇಕಾದ ಒಂದು ಅಂಶವೆಂದರೆ, ಅದುವೇ, ಆ ದೊಡ್ಡ ಗಾತ್ರದ ಗುರಿ ಅಥವಾ ಮಹತ್ವಾಕಾಂಕ್ಷೆ ಬಗ್ಗೆ ಆಗಿದೆ. ಇದು ಯಾಕೆಂದರೆ, ಗುರಿಯನ್ನು ಪಡೆಯಲು ಕಡಿಮೆ ಪ್ರಯತ್ನ ಮಾಡುವೆವು, ಆದುದರಿಂದ ಗುರಿಯನ್ನು ಪಡೆಯಲು ಆಗದೆ ಸೋತರೆ, ಅದು ನಮ್ಮ ಕಡಿಮೆ ಸಮಯ ಮತ್ತು ಪ್ರಯತ್ನವನ್ನು ನಷ್ಟಗೊಳಿಸುವುದು ಅಷ್ಟೆ. ಇತ್ತ, ಜೀವನದ ಒಂದು ದೊಡ್ಡ ಕಾಲವನ್ನು ಮತ್ತು ಪ್ರಯತ್ನವನ್ನು ಕೊಡುವ ಮಹತ್ವಾಕಾಂಕ್ಷೆಯು ನಷ್ಟವಾದಲ್ಲಿ ಅದು ಮನಸ್ಸನ್ನು ಗುರುತರವಾಗಿ ಬಾಧಿಸಬಹುದು. ಮಾತ್ರವಲ್ಲ, ಮನಸ್ಸು ಕುಗ್ಗಿಹೋಗುವ ಸಾಧ್ಯತೆಯೂ ಇದೆ.ಆದುದರಿಂದ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಳ್ಳುವ ಮೊದಲು ಅದರ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ತನ್ನ ಸಾಮರ್ಥ್ಯದ ಬಗ್ಗೆಯೂ ಹಲವು ಸಲ ಹೊಂದಿಸಿ ನೋಡಿಯೇ ಇಟ್ಟುಕೊಳ್ಳಬೇಕಾಗುವುದು. ಬಡವನಿಗೆ ಬಂಗಲೆಯ ಮಹತ್ವಾಕಾಂಕ್ಷೆ, ಅದೇ ರೀತಿ, ಬುದ್ಧಿಶೂನ್ಯನಿಗೆ ವಿಜ್ಞಾನಿಯಾಗುವ ಮಹತ್ವಾಕಾಂಕ್ಷೆ, ಇತ್ಯಾದಿಗಳು ಜೀವನವನ್ನು ಕಳಕೊಳ್ಳುವ ಮೂರ್ಖತನ ಮಾತ್ರವಾಗುವವು.

 *********************

ಈಗ, ಎರಡನೆಯದಾದ ‘ಸಾಧಕ’ ಎಂಬುವುದನ್ನು ನೋಡೋಣ. ನೋಡಿ, ಇಲ್ಲಿ, ಸಾಧಕನ ಸ್ವಭಾವವು ಆತನ ಗುರಿ ಅಥವಾ ಸಾಧ್ಯವನ್ನು ನಿರ್ಣಯಿಸುತ್ತದೆ ಎಂಬುವುದನ್ನು ಅರಿಯಬೇಕು. ಅಂದರೆ, ಕೆಟ್ಟವನ ಗುರಿಗಳು ಕೆಟ್ಟದ್ದಾಗಿರುವುದು ಮತ್ತು ಅದೇ ರೀತಿ ಉತ್ತಮನ ಗುರಿಗಳು ಉತ್ತಮವಾಗಿರುವವು ಎಂದು ಅರ್ಥ. ಆದುದರಿಂದ ಬರೇ ಗುರಿ, ಸಾಧನೆ, ಎಂದೆಲ್ಲಾ ಹೇಳುವುದಲ್ಲ, ಬದಲು ಗುರಿಯು ಉತ್ತಮವೋ ಅಥವಾ ಕೆಟ್ಟದ್ದೋ ಎಂದು ನೋಡಬೇಕಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಗುರಿಯು ಉತ್ತಮ ವ್ಯಕ್ತಿಯದ್ದೋ ಅಥವಾ ಕೆಟ್ಟ ವ್ಯಕ್ತಿಯದ್ದೋ ಎಂಬುವುದನ್ನು ನಾವು ಮೊದಲು ನೋಡಬೇಕಾಗಿರುವುದು.

ನೋಡಿ, ಈಗ ಯಾವುದು ಉತ್ತಮ ಗುರಿಗಳು, ಮತ್ತು ಅವನ್ನು ಹೇಗೆ ಪತ್ತೆಹಚ್ಚಲು ಸಾಧ್ಯ ಎಂಬ ಪ್ರಶ್ನೆಯು ಬರುವುದಿಲ್ಲವೇ? ಕಳ್ಳನಿಗೂ ಗುರಿಗಳು ಇರುವಾಗ, ಉತ್ತಮ ಗುರಿಗಳು ಎಂಬುವುದು ಖಂಡಿತ ಇರುವವು ಎಂಬುವುದು ಸ್ಪಷ್ಟವಾಗುವುದು. ಇನ್ನು ಈ ಧರ್ಮ, ಪಂಥಗಳು ಹೇಳಿಕೊಡುವ ಅಸಮಾನತೆಯ ಮತ್ತು ಮೇಲು ಕೀಳು ಧೋರಣೆಯ ವರ್ಣಗಳ ಪಾಲನೆಯ ಗುರಿಗಳು, ಜಾತೀಯತೆಯಿಂದ ಕೂಡಿದ ಜಾತಿಪಾಲನೆಯ ಗುರಿಗಳು, ತಮ್ಮ ಧರ್ಮವೇ ಶ್ರೇಷ್ಠ ಮತ್ತು ಅದು ಮಾತ್ರ ಈ ಲೋಕವನ್ನು ಜಯಿಸಬೇಕು ಎಂಬ ಆ ಭಯಾನಕ ಗುರಿಗಳು, ಇತ್ಯಾದಿಗಳು, ಶೋಷಣೆಯ, ಅನ್ಯಾಯದ, ಅಶಾಂತಿಯ, ಹಾಗೂ ಅಧರ್ಮದ ಗುರಿಗಳಾಗುವವು.

ಒಟ್ಟಲ್ಲಿ, ಮನೆ ಮುರಿಯುವ ಅಥವಾ ಮನುಷ್ಯರಿಂದ ಮನುಷ್ಯರನ್ನು ಬೇರ್ಪಡಿಸುವ ಯಾವುದೇ ಬೇಲಿಯ ಉದ್ಧಾರದ ಗುರಿಯು ಅದು ನೀಚ ಗುರಿ ಆಗುವುದು ಖಂಡಿತ, ಆದರೆ ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯ ಗುರಿಗಳು ಅವು ಎಂದೂ ಶಾಂತಿ ಆನಂದವನ್ನು ಮನ, ಮನೆ, ಸಮಾಜಗಳಿಗೆ ತಂದುಕೊಡುವ ಕಾರಣ, ಅವು ಅತ್ಯತ್ತಮ ಗುರಿಗಳು ಆಗುವವು. ಇನ್ನು, ಮಹಾಜೀವನವು ಈ ಹಿನ್ನೆಲೆಯಲ್ಲಿ ಮಾತ್ರ ಸಾಧಕರನ್ನು ತಯಾರು ಮಾಡುವ ಕಾರಣ, ಅಲ್ಲಿ ಉತ್ತಮ ಸಾಧಕರು ಸೃಷ್ಟಿಯಾಗಿ, ಅವರಿಂದ ಉತ್ತಮ ಗುರಿಗಳ ಆ ಉತ್ತಮ ಫಲಗಳು ಮಾತ್ರ ಸೃಷ್ಟಿಯಾಗುವವು. ಇದು, ಮುಂದೆ ಸತ್ಯಯುಗದ ಆ ಸುವರ್ಣ ಕಾಲಕ್ಕೆ ದಾರಿಮಾಡಿಕೊಡಬಹುದು.

 ********************

ಇನ್ನು ಮೂರನೆಯದ್ದಾದ ‘ಸಾಧನೆ’ ಎಂಬುವುದನ್ನು ನೋಡೋಣ.

ಚುಟುಕಾಗಿ ಹೇಳುವುದಾದರೆ, ಸಾಧನೆ ಎಂದರೆ ಗುರಿಯನ್ನು ಪಡೆಯಲಿರುವ ಪ್ರಯತ್ನ ಎಂದಾಗುವುದು. ಅಂದರೆ, ಸಾಧನೆಯು ದಿನ ನಿತ್ಯದ ಕೆಲಸದಂತೆ ಇರುವ ಕೆಲಸವಲ್ಲ, ಅದಕ್ಕಿಂತ ವ್ಯತ್ಯಸ್ಥವಾದ ಕೆಲಸ ಎಂದು ಅರ್ಥ. ಇನ್ನು, ಸಾಧನೆಯು, ಮನುಷ್ಯ ಮನಸ್ಸಿನಿಂದ ಹುಟ್ಟಿ ಬರಬೇಕಾಗಿರುವುದರಿಂದ, ಸಾಧನೆಗೆ ಬೇಕಾಗಿ ಮನಸ್ಸಿನಲ್ಲಿ ಕೆಲವು ತಯಾರಿಗಳು ಬೇಕಾಗುವವು, ಅವು ಯಾವುವು ಎಂದೂ ನೋಡಬೇಕಾಗಿದೆ. ಈಗ ಅವುಗಳ ಬಗ್ಗೆ ನೋಡೋಣ.

ಮನಸ್ಸಿನ ಸಾಧನೆಯ ತಯಾರಿ ಎಂಬಲ್ಲಿ ಮೊದಲನೆಯದ್ದು,

ಗುರಿಯ ಬಗ್ಗೆ ಇರುವ ಸ್ಪಷ್ಟ ಅರಿವು. ಅಂದರೆ, ಅದರ ಗುಣ, ದೋಷಗಳ ಬಗೆಗಿನ ಸ್ಪಷ್ಟ ಅರಿವು. ಇನ್ನು ಮುಂದಿನ ತಯಾರಿಯು, ಗುರಿ ಮತ್ತು ತನ್ನ ಸಾಮರ್ಥ್ಯವನ್ನು, ಭ್ರಮೆಯ ರೀತಿ ಬಿಟ್ಟು, ವಾಸ್ತವತೆಯ ಹಿನ್ನೆಲೆಯಲ್ಲಿ ತುಲನೆ ಮಾಡಿ ನೋಡುವುದಾಗಿದೆ. ಇದು ಅನಿವಾರ್ಯವಾಗಿದೆ, ಯಾಕೆಂದರೆ, ಇಲ್ಲಿ ತಪ್ಪಿದಲ್ಲಿ, ಎಲ್ಲವೂ ವ್ಯರ್ಥ ಆಗುವ ಅಥವಾ ಅಪಾಯ ಸಂಭವಿಸುವ ಸಾಧ್ಯತೆಗಳಿರುತ್ತವೆ. ಇನ್ನು, ಮೂರನೆಯದ್ದು, ತನಗೆ ಗುರಿಯ ಗಳಿಕೆಯಲ್ಲಿ ಆಸಕ್ತಿ ಇರುವುದೇ ಎಂದು ನೋಡಿ, ಆಸಕ್ತಿ ತೀರಾ ಇಲ್ಲದಲ್ಲಿ ಆ ಗುರಿಯನ್ನು ಬಿಟ್ಟುಬಿಡುವುದಾಗಿದೆ. ನಾಲ್ಕನೆಯದ್ದು, ಆ ಗಳಿಕೆಗಾಗಿ ಸಾಧನೆ ಮಾಡುವ ದೃಢ ಮನಸ್ಸು ಆಗಿದೆ. ಅಂದರೆ, ಇದು ಕಡಿಮೆ ಇದ್ದಲ್ಲಿ ಅದನ್ನು ನಿರಂತರ ಹೆಚ್ಚಿಸುತ್ತಾ ಇರುವುದಾಗಿದೆ. ಇದರಿಂದ ಮನಸ್ಸು ಬಲವಂತವಾಗಿ ಸಾಧನೆ ಮಾಡುವಲ್ಲಿಂದ ಸಹಜವಾಗಿ ಸಾಧನೆ ಮಾಡುವಲ್ಲಿಗೆ ಬಂದು ನಿಲ್ಲುತ್ತದೆ. ಕೊನೆಯದಾಗಿ, ನಿರಂತರತೆಯ ನಿಷ್ಠೆಯು ಅಗತ್ಯವಾಗಿದೆ. ಇದು ಯಾಕೆಂದರೆ, ನಿರಂತರತೆಯು ಬೇಗನೆ ಗುರಿಯತ್ತ ಕೊಂಡು ಹೋಗುತ್ತದೆ. ಇನ್ನು, ಬಿಟ್ಟು ಬಿಟ್ಟು ಸಾಧನೆ ಮಾಡುವಾಗ, ಮಧ್ಯೆ, ಮರೆಯುವಿಕೆಯು ಬಂದು ಬೆಳವಣಿಗೆಯನ್ನು ಕುಂಠಿತಗೊಳಿಸುವುದು. ಈ ರೀತಿಯಲ್ಲಿ ಮನಸ್ಸು ಸಾಧನೆಗೆ ತಯಾರಿ ಆದಲ್ಲಿ ಆ ವ್ಯಕ್ತಿಗೆ ಗುರಿಯನ್ನು ತಲುಪುವುದು ಬಹಳ ಸುಲಭವಾಗುವುದು.

 *************************

ಒಳಿತು, ಕೆಡುಕು ಎಂಬ ಎರಡು ಗುಣಗಳು ಇವೆ ಎಂದಾದರೆ, ಅವುಗಳು ಎರಡರಲ್ಲಿ ಒಳಿತಿಗಾಗಿ ಮಾಡುವ ಪ್ರಯತ್ನ ಅಥವಾ ಸಾಧನೆಯೇ ಶ್ರೇಷ್ಠ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ. ಇಲ್ಲಿ ಅಚ್ಚರಿ ಎಂದರೆ, ಹೆಚ್ಚಿನ ಕಡೆಗಳಲ್ಲೂ, ಒಬ್ಬರ ಒಳಿತು ಇನ್ನೊಬ್ಬರಿಗೆ ಕೆಡುಕು ಆಗುವುದಾಗಿದೆ! ನೋಡಿ, ಕಳ್ಳನಿಗೆ ಕಳ್ಳತನವು ಒಳಿತು ಆಗುವುದು, ಆದರೆ ಇತರರಿಗೆ ಅದು ಕೆಡುಕು ಅಲ್ಲವೇ? ಇನ್ನು, ಇತ್ತ, ಕೆಲವು ಜಾತಿಗಳಿಗೆ ತಮ್ಮ ಜಾತಿಗಳು ತಮ್ಮ ಪಾಲಿಗೆ ಒಳಿತಾಗಿರುವವು, ಆದರೆ ಇನ್ನೂ ಕೆಲವು ಜಾತಿಗಳಿಗೆ ತಮ್ಮ ಜಾತಿಗಳು, ದಾರುಣ ಬಂಧನದ ಪಂಜರದ ಗಿಳಿಗಳ ತರ, ಕೆಡುಕು ಆಗುವವು. ಮಾತ್ರವಲ್ಲ, ಕೆಲವು ಧರ್ಮಗಳಿಗೆ ಅವುಗಳ ಮತಾಂತರ, ಧರ್ಮಯುದ್ಧಗಳು ಒಳಿತಾಗಿರುವವು, ಆದರೆ ಇತರ ಧರ್ಮಗಳಿಗೆ ಅವು ಕೆಡುಕು ಆಗುವವು. ಇನ್ನು ಉಳಿದಿರುವುದು ದೇವರುಗಳು ಆಗಿವೆ. ದೇವರು ಕೂಡಾ ಕೆಲವು ಧರ್ಮ, ಪಂಥಗಳಿಗೆ ಒಳಿತು ಎಂಬಲ್ಲಿ ಇರುವುದು ಆದರೆ ಅದೇ ದೇವರು, ಇತರ ಧರ್ಮ, ಪಂಥಗಳಿಗೆ ಕೆಡುಕು ಆಗಿಬಿಡುವವು. ದೊಡ್ಡ ಅಚ್ಚರಿ ಎಂದರೆ, ಒಳಿತು, ಕೆಡುಕಿನ ಬಗ್ಗೆ ಉಪದೇಶಿಸಿ, ಒಳಿತನ್ನು ಮಾತ್ರ ಎತ್ತಿ ಹಿಡಿಯಬೇಕಾದ ಈ ಧರ್ಮ, ಪಂಥಗಳು, ಒಳಿತನ್ನು ಕೆಡುಕು ಎಂಬ ಸ್ವಾರ್ಥ ಬೇಲಿಯೊಳಗೆ ಹಿಡಿದಿಡುವ ಆ ಅಧರ್ಮವನ್ನು ಮಾಡುತ್ತಾ ಬಂದಿರುವುದು ಆಗಿದೆ. ಮಾತ್ರವಲ್ಲ, ಆ ಹಿನ್ನೆಲೆಯಲ್ಲಿ, ಭಯಾನಕ ದ್ವೇಷ, ಹಿಂಸೆ, ರಕ್ತಪಾತಗಳನ್ನು ಮಾಡುತ್ತಾ ಬಂದಿರುವುದಾಗಿದೆ. ಹೀಗಿರುವಾಗ, ಶಾಂತಿ ಅಥವಾ ಧರ್ಮವು ನಿಜವಾಗಿಯೂ ಈ ಭೂಮಿಗೆ ಈ ಬೇಲಿ ಧರ್ಮ, ಪಂಥಗಳಿಂದ ಕೊಡಲ್ಪಟ್ಟಿವೆಯೇ ಎಂಬುವುದನ್ನು ನಿಮಗೆ ಸ್ವತಃ ಅಂದಾಜಿಸಬಹುದಾಗಿದೆ. ಅಯ್ಯೋ, ಮೊಟ್ಟ ಮೊದಲು ಒಳಿತು ಯಾವುದು ಮತ್ತು ಕೆಡುಕು ಯಾವುದು ಎಂದು ಎಲ್ಲಾ ಧರ್ಮ, ಪಂಥಗಳು ಸ್ಪಷ್ಟ ನಿರ್ಧಾರಕ್ಕೆ ಬರಲಿ. ಇನ್ನು, ಈ ಮಾತಿಗೆ, ಕೆಲವು ಧರ್ಮಪಂಡಿತರುಗಳು, ‘ಸಾರ್ವತ್ರಿಕವಾಗಿ ಒಳಿತು ಕೆಡುಕು ಎಂಬುವುದು ಇಲ್ಲ’ ಎಂದು ಹೇಳುವುದಾದರೆ, ಆಗ, ಅದರ ಅರ್ಥವು, ‘ಅವರವರಿಗೆ ತೋಚಿದಂತೆ ಜೀವಿಸಬಹುದು’ ಎಂದಾಗುವುದು! ಅವರವರಿಗೆ ತೋಚಿದಂತೆ ಜೀವಿಸುವುದಾದರೆ, ಅದು ಧರ್ಮವಲ್ಲ, ಅದು ಭಯಾನಕ ಅಧರ್ಮ ಮಾತ್ರ ಆಗುವುದು ಎಂದು ಅದರ ಅರ್ಥ ಬರುವುದು. ಸೃಷ್ಟಿಕರ್ತ ತಂದೆಯ ಮಕ್ಕಳು ಈ ಮನುಷ್ಯರೆಲ್ಲರು ಎಂದು, ಧರ್ಮಗಳ ಹಿನ್ನೆಲೆಯಲ್ಲಿ ವಿವರಿಸುತ್ತಾ, ತಮ್ಮೊಳಗೆ ದ್ವೇಷಿಸುತ್ತಾ, ಹಿಂಸಿಸುತ್ತಾ, ರಕ್ತಪಾತ ಮಾಡುತ್ತಾ ಇದುವರೆಗೂ ಬಂದಿರುವುದು ಆ ತೋಚಿದಂತೆ, ಶಾಂತಿಯ ಧರ್ಮವನ್ನು ಬಿಟ್ಟು, ಅಧರ್ಮದಲ್ಲಿ ಜೀವಿಸಿ ಬಂದಿರುವುದನ್ನು ಬಹಳ ಸ್ಪಷ್ಟವಾಗಿ ತೋರಿಸಿಕೊಡುವುದು. ಈಗ, ‘ಒಳಿತಿನ ಸಾಧನೆ’ ಎಂದರೆ, ಅದು ಖಂಡಿತವಾಗಿಯೂ ಧರ್ಮ, ಪಂಥಗಳಿಗೆ ಸಂಬಂಧಿಸಿಲ್ಲ ಎಂಬುವುದು ಮತ್ತೂ ಸ್ಪಷ್ಟವಾಗುವುದು.

ನೋಡಿ, ಕೊನೆಯ ಪಕ್ಷ, ಇತರರಿಗೆ ತೊಂದರೆಯಾಗದ ಆದರೆ ತನಗೆ ಲಾಭವಾಗುವ ಸಾಧನೆಯನ್ನು ಒಳಿತಿನ ಹಿನ್ನೆಲೆಯ ಸಾಧನೆಯ ಅಡಿಯಲ್ಲಿ ಸೇರಿಸಬಹುದು. ಇನ್ನು, ಉತ್ತಮ ಒಳಿತಿನ ಹಿನ್ನೆಲೆಯ ಸಾಧನೆಯು, ಅದು “ತಾನು ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು” ಎಂಬಲ್ಲಿ ಮಾಡುವ ಸಾಧನೆಗಳಾಗಿವೆ. ಈ ಹಿನ್ನೆಲೆಯಲ್ಲಿ ಮಾಡುವ ಯಾವುದೇ ಸಾಧನೆಯು ಎಂದಿಗೂ ದ್ವೇಷ, ಹಿಂಸೆ, ರಕ್ತಪಾತಕ್ಕೆ ಕಾರಣವಾಗುವುದಿಲ್ಲ ಎಂಬುವುದೇ ಅದಕ್ಕಿರುವ ಕಾರಣವಾಗಿರುವುದು. ನಿಜವಾಗಿಯೂ, ಎಲ್ಲಾ ಧರ್ಮ, ಪಂಥಗಳ ಆಧಾರವು ಈ ಉತ್ತಮ ಸಾಧನಾ ರೀತಿಯಲ್ಲಿ ಇರಬೇಕಾಗಿತ್ತು, ಆದರೆ, ಅದು ಇಂದಿನವರೆಗೂ ಈ ಧರ್ಮ, ಪಂಥಗಳಿಂದ ಸಾಧ್ಯ ಆಗಿಲ್ಲ!

ಒಟ್ಟಲ್ಲಿ, ಮಹಾಜೀವನ ಹಾಗೂ ದಿವ್ಯಜ್ಞಾನ ಸನ್ನಿಧಿಗಳು, ಮೇಲೆ ಸೂಚಿಸಿರುವ ಆ ದೊಡ್ಡ ಕೊರತೆಯನ್ನು ಇಲ್ಲದಂತೆ ಮಾಡಲೆಂದೇ ಸೃಷ್ಟಿಯಾಗಿರುವುದು ಎಂದು ತಿಳಿಯಬೇಕು. ಈ ಕಾರಣದಿಂದಲೇ, ಅವಲ್ಲಿ ಬರೇ ಒಳಿತಿನ ಸಾಧನೆಗಳು ಮಾತ್ರವಿರುವುದು ಎಂದು ತಿಳಿಯಬೇಕು. ಮಾತ್ರವಲ್ಲ, ಶಾಲಾ, ಕಾಲೇಜುಗಳು, ಧರ್ಮ, ಪಂಥಗಳ ಬೇಲಿಗಳನ್ನು ಮೀರಿ ಹೇಗೆ ಜ್ಞಾನವನ್ನು ಕೊಡುತ್ತವೋ, ಅದೇ ರೀತಿ, ಮಹಾಜೀವನ ಮತ್ತು ದಿವ್ಯಜ್ಞಾನ ಸನ್ನಿಧಿಗಳು, ಮನ, ಮನೆ, ಸಮಾಜ ಶಾಂತಿಗಳೆಂಬ ಆ ಪವಿತ್ರ ಶಾಂತಿ, ಸಾಂತ್ವನಗಳನ್ನು ಮಾನವರಿಗೆ ನೀಡುವವು ಎಂದು ತಿಳಿಯಬೇಕು. ಅವುಗಳ ಆ ಎಲ್ಲಾ ಸೇವೆಗಳು, ಇತರರ ಒಳಿತಿನಲ್ಲಿ ಕೇಂದ್ರೀಕರಿಸಿರುವ ಕಾರಣ, ಅಲ್ಲಿ ನೀಡುವ ಸಾಧನಾ ರೀತಿಗಳು ಕೂಡಾ, ಅತ್ಯಂತ ಒಳಿತಿನ, ಆ ತ್ಯಾಗದ ಸಾಧನಾರೀತಿಗಳಾಗುವವು ಎಂಬುದರಲ್ಲಿ ಸಂಶಯವಿಲ್ಲ.

 ******************

ಈ ಕುಟುಂಬ, ಸಮಾಜ, ಇತ್ಯಾದಿಗಳು ಯಾಕಾಗಿ ಮಾಡಲ್ಪಟ್ಟವು ಎಂದು ಮೊದಲು ತಿಳಿಯೋಣ. ಅದರ ಬಗ್ಗೆ ಆಲೋಚಿಸಿದಾಗ, ಅವುಗಳು ಮಾಡಲ್ಪಟ್ಟಿರುವುದು ಮನುಷ್ಯರು ಜವಾಬ್ಧಾರಿಕೆಯನ್ನು ಹೊತ್ತುಕೊಳ್ಳುವುದಕ್ಕೆ ಎಂದು ತಿಳಿಯುವುದು. ಉದಾಹರಣೆಗೆ, ಒಂದು ಮಗುವಿನ ಜವಾಬ್ಧಾರಿಕೆಯನ್ನು ಆ ಮಗುವಿನ ಮನೆಯವರು ಹೊರುತ್ತಾರೆ, ಇನ್ನು, ಒಬ್ಬರು ವ್ಯಕ್ತಿಯಾದರು ಕೂಡಾ, ಆ ವ್ಯಕ್ತಿಗೆ ತೊಂದರೆಯಾದಾಗ, ಹೆಚ್ಚು ಕಡಿಮೆ ಆ ವ್ಯಕ್ತಿಯ ಜವಾಬ್ಧಾರಿಕೆಯನ್ನು ಆತನ ಮನೆಯವರು ಹೊರುತ್ತಾರೆ. ಅಂದರೆ, ನೆರೆಮನೆಯವರು ಅಥವಾ ಸಮಾಜ ಅದನ್ನು ಹೊರುವುದಿಲ್ಲ ಅಥವಾ ಅಪರೂಪಕ್ಕೆ ಕೆಲವೊಮ್ಮೆ ಮಾತ್ರ ಹೊರುವರು ಎಂದು ಅರ್ಥ. ಅದೇ ರೀತಿ, ಒಂದು ಪಂಚಾಯತ್, ಜಿಲ್ಲೆ, ರಾಜ್ಯ, ಇತ್ಯಾದಿಗಳ ಜವಾಬ್ಧಾರಿಯನ್ನು ಇನ್ನೊಂದು ಹೊರುವುದಿಲ್ಲ. ಒಂದು ದೇಶದ ಜವಾಬ್ಧಾರಿಕೆಯನ್ನು ಇನ್ನೊಂದು ದೇಶ ಹೊರುವುದಿಲ್ಲ. ಇದಕ್ಕಾಗಿ ಮಾನವರು ಮನೆ, ಸಮಾಜ, ರಾಜ್ಯ, ರಾಷ್ಟ್ರ ಇತ್ಯಾದಿಗಳನ್ನು ಮಾಡಿರುವುದು ಎಂದು ತಿಳಿಯಬೇಕು. ಹಾಗಿರುವಾಗ, ಮನುಷ್ಯನ ಈ ಜವಾಬ್ಧಾರಿಕೆ ಎಂಬುವುದು ಮನೆ, ಸಮಾಜ, ದೇಶ, ಎಂದು ಎಲ್ಲೆಡಯೂ ಅನಿವಾರ್ಯವಾಗುವುದು ಎಂದು ಸ್ಪಷ್ಟವಾಯಿತು. ಇದರ ಪ್ರತ್ಯೇಕತೆ ಎಂದರೆ, ಇಲ್ಲಿ ಯಾರೂ ನೆರೆಮನೆಯವರನ್ನು, ನೆರೆ ರಾಜ್ಯ, ರಾಷ್ಟ್ರಗಳನ್ನು ದ್ವೇಷಿಸು, ಹಿಂಸಿಸು ಎಂದು ಹೇಳುವುದಿಲ್ಲ. ದುರದೃಷ್ಟವಶಾತ್, ಇಲ್ಲಿಯೂ ಕೂಡಾ ಜವಾಬ್ಧಾರಿಕೆಯತ್ತ ಬಹಳ ಕಡಿಮೆ ಮಾತ್ರ ಗಮನಹರಿಸಿ, ದ್ವೇಷ, ಹಿಂಸೆ, ರಕ್ತಪಾತಗಳನ್ನು ಮಾಡುತ್ತಾ ಮಾನವರು ಬಂದಿರುವರು! ಇದು ಅಡುಗೆಮನೆಯ ಚೂರಿಯನ್ನು ಹತ್ತಿರದ ಮನುಷ್ಯನ ಶರೀರಕ್ಕೆ ಚುಚ್ಚಲು ಉಪಯೋಗಿಸಿಕೊಳ್ಳುವ ಆ ವಿಕೃತ ರೀತಿಯ ತರವೇ ಆಯಿತು. ಮಾತ್ರವಲ್ಲ, ಇಲ್ಲಿಯೂ, ಪ್ರದೇಶಗಳ ವಿಚಾರ ಬರುವಾಗ, “ನಮ್ಮ ಧರ್ಮದವರಿಗೆ ಮಾತ್ರ ಅಥವಾ ನಮ್ಮ ಪರಂಪರೆಯವರಿಗೆ ಮಾತ್ರ ಪ್ರತ್ಯೇಕ ಪ್ರದೇಶ ಬೇಕು” ಎಂಬ ಆ ಬೇಲಿ ರೂಪಗಳನ್ನು ಅವು ತಳೆಯುವವು! ಬೇಲಿ ಅಲ್ಲದ, ಆದರೆ ಬರೇ ಸಾಮಾಜಿಕ ವ್ಯವಸ್ಥೆಗೆ ಬೇಕಾಗಿ ಮಾಡಿರುವ ಇಂಥ ವಿಂಗಡನೆಗಳನ್ನು ಕೂಡಾ ಈ ಹಾಳು ಬೇಲಿ ರೂಪಕ್ಕೆ ತಿರುಗಿಸುವಲ್ಲಿ ಪಾತ್ರವಹಿಸಿರುವುದು ಧರ್ಮ, ಪಂಥಗಳ ಆ ಬೇಲಿ-ಭ್ರಮೆಯೇ ಆಗಿದೆ!

ನೋಡಿ, ಮದುವೆ ಇಲ್ಲದ ಸಮಾಜ ಸೃಷ್ಟಿಯಾದಲ್ಲಿ, ಅಲ್ಲಿ, ಕಾಮಕ್ಕಾಗಿ ಪಕ್ಷಿಗಳಿಗಿಂತಲು ಕೀಳಾಗಿ ನಾಯಿಗಳ ತರ ಮಾನವನು ವರ್ತಿಸಬಹುದು. ಆಗ, ಅಲ್ಲಿ, ಯಾರು ಸತ್ತರೂ ಯಾರೂ ಗಮನಿಸಲಾರರು. ಯಾಕೆಂದರೆ, ಅಲ್ಲಿ ಯಾವ ಜವಾಬ್ಧಾರಿಕೆ ಯಾರಿಗೂ ಯಾರಮೇಲೂ ಇರುವುದಿಲ್ಲ. ಇದಕ್ಕೆ ಬೇಕಾಗಿಯೇ, ಜೀವನ ಪೂರ್ತಿ ತಮ್ಮೊಳಗೆ ಸಹಕರಿಸುತ್ತಾ ಜೀವಿಸಲು, ಮದುವೆ ಎಂಬ ಪದ್ಧತಿಯನ್ನು ಸೃಷ್ಟಿಸಿರುವುದು. ಇದನ್ನೇ ನೈತಿಕತೆ ಎನ್ನುವುದು. ಇದು, ಮನುಷ್ಯರನ್ನು ಮನುಷ್ಯರಿಂದ ಬೇರ್ಪಡಿಸುವ ಬೇಲಿಯಾಗುವುದಿಲ್ಲ. ಒಟ್ಟಲ್ಲಿ, ನೈತಿಕತೆಗೆ ಎಂಬ ಶಬ್ದಕ್ಕೆ ಜವಾಬ್ಧಾರಿಕೆ ಎಂಬ ಅರ್ಥ ಕೂಡಾ ಇರುವುದು ಎಂದು ತಿಳಿದುಕೊಳ್ಳಬಹುದು.

ದುರಂತ ಎಂದರೆ, ಕಣ್ಣು ತೆರೆದು ಜ್ಞಾನವನ್ನು ಪಾಲಿಸಬೇಕಾದ ಈ ಕುಟುಂಬ, ಸಮಾಜಗಳು, ಕಣ್ಣು ಮುಚ್ಚಿ ನಂಬಿಕೆ, ಆಚಾರಗಳ ಹಿಂದೆ ಹೋಗುತ್ತಾ “ನಾವು ಶ್ರೇಷ್ಠ” ಎಂಬ ಕ್ರೌರ್ಯದ ಅಜ್ಞಾನವನ್ನು ಜಗತ್ತೆಲ್ಲಾ ಹಬ್ಬಿಸಿರುವುದು ಆಗಿದೆ! ಈ “ನಾವು ಶ್ರೇಷ್ಠ” ಎಂಬ ಕಡು ಬೇಲಿಗಳ ಆ ಹಲವು ತರದ ವಿಷ ಹಾಲುಗಳೇ, ಈ ಎಲ್ಲಾ ಭಯಾನಕ ದ್ವೇಷ, ಶೋಷಣೆ, ಜಾತೀಯತೆ, ಧರ್ಮಾoಧತೆ, ಹಿಂಸೆ, ರಕ್ತಪಾತ ಇತ್ಯಾದಿಗಳನ್ನು ಸೃಷ್ಟಿಸಿರುವುದು! ಇಂದೂ ಕೂಡಾ, ಈ ಬೇಲಿ ವಿಷಗಳೇ ಎಲ್ಲಾ ಭಯಾನಕ ಕ್ರೌರ್ಯ, ಹಿಂಸೆ, ರಕ್ತಪಾತಕ್ಕೂ ಕಾರಣವಾಗಿ ತಾಂಡವ ಆಡುತ್ತಿರುವುದು ಎಂದು ಎಲ್ಲರಿಗೂ ತಿಳಿದಿದೆ.

ಇತ್ತ, ಮಹಾಜೀವನವು ಮನೆ, ಸಮಾಜಗಳಲ್ಲಿ, ನೈತಿಕತೆಯ ಜವಾಬ್ಧಾರಿಕೆಯನ್ನು ಮಾನವರಲ್ಲಿ ಹೆಚ್ಚಿಸುತ್ತದೆ ಮತ್ತು ಬೇಲಿ ವಿಷಗಳನ್ನು ಕಡಿಮೆಮಾಡುತ್ತದೆ. ಈ ರೀತಿಯಲ್ಲಿ, ಮನೆ, ಸಮಾಜ, ಹಾಗೂ ಜಗತ್ತು, ಇವುಗಳ ಆ ನೋವಿನ ಕಣ್ಣೀರನ್ನು ನೆಮ್ಮದಿಗಳ ಆನಂದಬಾಷ್ಪವಾಗಿ ಪರಿವರ್ತಿಸುವುದು. ಮಹಾಜೀವನದ ಸತ್ಯಯುಗದ ಆ ಆನಂದದ ದಿವ್ಯ ಸೂರ್ಯೋದಯವು ಬೇಗನೆ ಆಗಲಿ ಎಂದು ಆಶಿಸೋಣ.

 *********************

ಭಾವನೆ ಎಂದರೇನು? ಇದರ ಉತ್ತರವನ್ನು ಚುಟುಕಾಗಿ ‘ಅಹಂ’ ನ ಪ್ರತಿಕ್ರಿಯೆ ಎನ್ನಬಹುದು. ನೋಡಿ, ಚಿಂತನೆಯಲ್ಲಿ ‘ನಾನು’ ಅಥವಾ ‘ಅಹಂ’ ನ ಸ್ಪಂದನೆ ಇಲ್ಲ. 2+2= 4 ಎಂಬುವುದಕ್ಕೆ ‘ಅಹಂ’ ಪ್ರತಿಕ್ರಿಯಿಸುತ್ತದೆಯೇ? ಇಲ್ಲ, ಅಲ್ಲಿ ಅದು ಅರ್ಥಮಾಡಿಕೊಳ್ಳುವುದು ಅಷ್ಟೆ. ಆದರೆ, ಭಾವನೆ ಯಾವುದೇ ಇರಲಿ, ಅಲ್ಲಿ ‘ಅಹಂ’ನ ಅಥವಾ ‘ನಾನು’ವಿನ ಚಿಕ್ಕ ಅಥವಾ ದೊಡ್ಡ ಪ್ರತಿಕ್ರಿಯೆ ಇರುವುದು. ಇಷ್ಟರಲ್ಲೇ, ಎಲ್ಲಾ ರಹಸ್ಯಗಳು ತಿಳಿಯಿತು, ಇನ್ನು, ಹೆಚ್ಚು ಹೇಳುವ ಅಗತ್ಯವಿಲ್ಲ. ಅಂದರೆ, ಈ ಭಾವನೆಗಳು ಭಯಾನಕವಾಗುವುದರ ಕಾರಣವು ಈ ‘ಅಹಂ’ ಆಗುವುದು ಎಂದೂ, ಮತ್ತು ಭಾವನೆಯನ್ನು ಉತ್ತಮಗೊಳಿಸುವುದು ಎಂದರೆ ಅದು ಈ ‘ಅಹಂ’ ನ ಶುದ್ಧೀಕರಣ ಎಂದೂ ಸ್ಪಷ್ಟವಾಗುವುದು ಎಂದು ಅರ್ಥ.

ಮಾನವನು ಮೂಲತಃ ಭಾವಜೀವಿ, ಆದರೆ ಆತನಲ್ಲಿ ಕ್ರೌರ್ಯ ಭಾವವು ಹೆಚ್ಚಾದಷ್ಟು ಇತರ ಸದ್ಭಾವನೆಗಳನ್ನು ಎಲ್ಲವನ್ನು ಕಳಕೊಳ್ಳುತ್ತಾನೆ! ಅದೇ ರೀತಿ, ಅತಿ ಕಾಮದ ಭಾವನೆಯು ಕೂಡಾ ಸದ್ಭಾವನೆಗಳನ್ನು ನಾಶಪಡಿಸುವ ಇನ್ನೊಂದು ಮುಖ್ಯ ಭಾವವಾಗಿದೆ. ಒಟ್ಟಲ್ಲಿ, ಒಬ್ಬಾತನ ಜೀವನ ಆನಂದಕ್ಕೆ ಆ ಎಲ್ಲಾ ಕೆಟ್ಟ ಭಾವನೆಗಳು ತಡೆಯಾಗುವವು ಮತ್ತು ಅವುಗಳಿಂದ ಪಾರಾಗದವರೆಗೆ, ಆ ವ್ಯಕ್ತಿಯು, ಭ್ರಮೆಯ ಕೂಪದಲ್ಲಿ ಜೀವನ ಪರ್ಯಂತ ನರಕಯಾತನೆ ಅನುಭವಿಸಬೇಕಾಗುವುದು. ಆ ಭ್ರಮೆಯ ಕೂಪದಲ್ಲಿದ್ದವರು, ಎರಡು ನಿಮಿಷ ಸುಖವೆಂದು ಭ್ರಮಿಸಿ ನಗುವರು ಮತ್ತು ಮರುಕ್ಷಣದಲ್ಲಿ ದುಃಖದ ಕಣ್ಣೀರಲ್ಲಿ ಅಳುತ್ತಾ ಹುಚ್ಚರಂತೆ ವರ್ತಿಸುತ್ತಾ ಜೀವಿಸುವರು!

ಧರ್ಮ, ಪಂಥಗಳು ಆಚಾರ ನಂಬಿಕೆಗಳಲ್ಲಿ ಮಾತ್ರ ಮುಳುಗಿಹೋಗಿರುವ ಕಾರಣ, ಈ ಭ್ರಮೆಯ ನರಕದಿಂದ ಮಾನವರನ್ನು ಪಾರುಮಾಡುವ ಪರಿಹಾರವು ಎಲ್ಲೂ ಸಿಗದೆಹೋಗಿರುವುದು, ಮತ್ತು ಮಾನರಲ್ಲಿ ಹೆಚ್ಚಿನವರೂ ಈ ಕಾರಣದಿಂದಲೇ, ಜೀವನದಲ್ಲಿ ಶಾಂತಿಯ ತಂಗಾಳಿಯ ಬದಲು ಭ್ರಮೆಯ ಆ ಉಷ್ಣ ಗಾಳಿಗೆ ಬೆಂದು ಹೋಗಿರುವುದು. ನೋಡಿ, ಇಲ್ಲಿಯೇ, ಮಹಾಜೀವನವು ಮಾನವರ ರಕ್ಷಕ ಆಗುವುದು ಎಂದು ತಿಳಿಯಬೇಕು. ಮಹಾಜೀವನವು, ವ್ಯಕ್ತಿತ್ವದ ಬೆಳವಣಿಗೆಯೊಂದಿಗೆ, ಭಾವನೆಗಳ ಶುದ್ಧೀಕರಣವನ್ನು ಮಾಡುವ ಆ ಪವಿತ್ರ ಅರಿವು ಹಾಗೂ ಸಾಧನಾ ವಿಧಾನಗಳನ್ನು ತಿಳಿಸಿಕೊಟ್ಟು, ಮಾನವರನ್ನು, ಈ ಭ್ರಮೆಯ ಕೂಪದಿಂದ ತಪ್ಪಿಸಲು ಪ್ರಯತ್ನಿಸುವುದು.

ನೋಡಿ, ಮನುಷ್ಯನು ಹಲವು ಕಡೆಗಳಲ್ಲಿ ‘ನನ್ನ’ ಮತ್ತು ‘ನಮ್ಮ’ ಎಂಬ ಭಾವನೆಗಳ ವಿಶ್ವರೂಪವನ್ನು ತೋರಿಸುವನು. ಆತನು ನನ್ನ ಮನಸ್ಸು, ನಮ್ಮ ಮನೆ, ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ಪಂಥ, ನಮ್ಮ ಪರಂಪರೆ, ನಮ್ಮ ಮನೆತನ, ನಮ್ಮ ದೇಶ, ನಮ್ಮ ಭೂಮಿ, ಎಂದು ಇಲ್ಲೆಲ್ಲಾ ಭಾವನೆಗಳ ಆ ಪ್ರೀತಿ ಅಥವಾ ಪ್ರೇಮವನ್ನು ಒಂದು ಕಡೆ ಪ್ರಕಟಿಸುತ್ತಾ ಇನ್ನೊಂದು ಕಡೆ, ನನ್ನದರಿಂದ ನಿನ್ನ ಮತ್ತು ನಿಮ್ಮವನ್ನು, ಹಾಗೂ ನಮ್ಮದರಿಂದ ನಿಮ್ಮವನ್ನು ಆ ದ್ವೇಷ, ಹಿಂಸೆ, ರಕ್ತಪಾತಗಳಿಗೆ ಗುರಿಪಡಿಸುವನು!! ಇದುವೇ ಮಾನವಕುಲದ ದುರಂತವಾಗಿರುವುದು.

ಒಟ್ಟಲ್ಲಿ, ಈ ಎಲ್ಲಾ ಕಡೆಗಳಲ್ಲಿ ಮಾನವರು ತಮ್ಮ ಭಾವನೆಗಳನ್ನು ಮಹಾಜೀವನದ ರೀತಿಯಲ್ಲಿ ಪ್ರಕಟಿಸಲು ಸಮರ್ಥರಾದರೆ, ಆಗ ಮಾತ್ರ, ಮನಶ್ಯಾಂತಿಯಿಂದ ತೊಡಗಿ ಲೋಕ ಶಾಂತಿಯವರೆಗಿನ ಆ ಎಲ್ಲಾ ರೀತಿಗಳ ಶಾಂತಿಗಳು ದೊರಕಲು ಸಾಧ್ಯವಾಗುವುದು. ಹಾಗೆ ಇಲ್ಲವಾದರೆ, ಭವಿಷ್ಯದಲ್ಲಿ ಅದು ಎಂದಿಗೂ ಸಾಧ್ಯವಾಗದೆ, ಇಂದಿಗಿಂತಲೂ ಭಯಾನಕವಾಗಿ ಮಾನವರ ಜೀವನವು ಮಾರ್ಪಾಟು ಹೊಂದುವುದು ಎಂಬುವುದರಲ್ಲಿ ಸಂಶಯವಿಲ್ಲ.

 ***********************

ನನ್ನ ಸಹೋದರ ಸಹೋದರಿಯರೇ,


ನೋಡಿ, ಉತ್ತಮರು ಎಂದರೆ ಯಾರು? ಈ ಜಗತ್ತಲ್ಲಿ ಉತ್ತಮರು ಎಂಬುದಕ್ಕೆ ಸಾರ್ವತ್ರಿಕವಾದ ಒಂದು ಉತ್ತರವು ಎಲ್ಲಿಯೂ ಸಿಗುವುದಿಲ್ಲ, ಅದಕ್ಕೆ ಇದನ್ನು ನಿಮ್ಮಲ್ಲಿ ಕೇಳುವುದು. ಅದೇನೇ ಇರಲಿ, ಈಗ, ಉತ್ತಮರು ಎಂದಾದರೆ, ಅವರನ್ನು ಸಮಾಜ ಗೌರವಿಸಬೇಕು ಎಂಬುವುದು ಖಂಡಿತ, ಅಲ್ಲವೇ? ಇನ್ನು, ‘ಉತ್ತಮರನ್ನು ನಾವು ಗೌರವಿಸುವುದಿಲ್ಲ’ ಎಂದು ಆಸ್ತಿಕರನ್ನು ಬಿಡಿ, ನಾಸ್ತಿಕರಿಗಾದರೂ ಹೇಳಲು ಸಾಧ್ಯವಾಗುವುದೇ? ಇಲ್ಲ, ಯಾಕೆಂದರೆ ಆಗ ಅದು ಧರ್ಮ ಆಗುವುದಿಲ್ಲ ಬದಲು ಅಧರ್ಮ ಆಗುವುದು. ಇದು ಇಲ್ಲಿ ಸ್ಪಷ್ಟವಾಯಿತು, ಇನ್ನು ಮುಂದಿನ ಭಾಗವನ್ನು ಕೂಡಾ ವಿಶ್ಲೇಷಿಸೋಣ, ಆಗ ಒಂದು ದೊಡ್ಡ ಸತ್ಯವು ಹೊರಬೀಳುವುದು.

ಈಗ, ಹಿಂದಿನಿಂದಲೇ, ವರ್ಣ, ಜಾತಿಗಳಲ್ಲಿ ‘ಕೆಳಗಿನ’ ಎಂದು ಹೇಳುವ ಆ ವರ್ಣ, ಜಾತಿಯವರಲ್ಲಿ, ಎಷ್ಟೇ ಉತ್ತಮ ಜನರು ಇದ್ದರೂ, ಅವರನ್ನು ಮೇಲಿನವರು ಎಂದು ಹೇಳಿಕೊಳ್ಳುವ ಜನ ಗೌರವಿಸದೆ ಭಯಾನಕವಾಗಿ ಶೋಷಿಸಿರುವುದನ್ನು ನಾವು ನೋಡುವೆವು! ಅದೇ ರೀತಿ, ಇತರ ಧರ್ಮಗಳಲ್ಲಿ ಇರುವ ಉತ್ತಮರನ್ನು ಉತ್ತಮರು ಎಂದು ಪರಿಗಣಿಸದೆ ಇರುವುದನ್ನು ಕೂಡಾ ನಾವು ಕಾಣುವೆವು! ಇದೇನು ವಿಚಿತ್ರ? ಉತ್ತಮರನ್ನು ನಾಸ್ತಿಕರಾದರು ಕೂಡಾ ಗೌರವಿಸಬೇಕು ಎಂದು ಈಗ ತಾನೇ ಅಲ್ಲವೇ ಹೇಳಿರುವುದು? ಹಾಗಿರುವಾಗ, ಈ ಧರ್ಮ, ಪಂಥಗಳು ಇದುವರೆಗೂ ಮಾಡುತ್ತಾ ಬಂದಿರುವುದು ಏನನ್ನು? ಅಂದರೆ, ದೊಡ್ಡ ದೊಡ್ಡ ಮಾತುಗಳು ಗ್ರಂಥಗಳಿಂದ ಆಯ್ದು ಹೇಳಿ ತಮ್ಮದು ಶ್ರೇಷ್ಠ ಧರ್ಮ ಎಂದು ತೋರಿಸುತ್ತಾ, ಇತ್ತ, ‘ನಾವು ಹೇಳುವವರು ಅಥವಾ ನಮ್ಮವರು ಮಾತ್ರ ಉತ್ತಮರು’ ಎಂದು ಧರ್ಮವು ತಿದ್ದಲ್ಪಟ್ಟಿರುವುದು ಎಂದಾಗುವುದು! ಇಲ್ಲಿಗೆ, ಧರ್ಮ ನಾಶವಾಯಿತು, ಸತ್ಯ ನಾಶವಾಯಿತು, ಅದೇ ರೀತಿ, ನ್ಯಾಯವು ಕೂಡಾ ನಾಶವಾಯಿತು. ಈ ಧರ್ಮ, ಪಂಥ, ಜಾತಿಗಳ ಬೇಲಿಗಳಿಂದ ಆಗಿರುವುದು ಇಷ್ಟೆ. ಇದಕ್ಕೆ ನೋಡಿ, ದೇವರು, ಧರ್ಮಗಳು ಬೇಲಿರಹಿತವಾಗಿ ಖಂಡಿತ ಇರಬೇಕು ಎನ್ನುವುದು. ದುರದೃಷ್ಟವಶಾತ್, ಯಾವ ಧರ್ಮ, ಪಂಥ ಕೂಡಾ ಬೇಲಿರಹಿತವಾಗಿ ಇಲ್ಲ.


ಇನ್ನು, ಮಾನವರ ಎಲ್ಲರ ತಂದೆಯಾದ ಸೃಷ್ಟಿಕರ್ತನಿಗೆ ಕೂಡಾ ಕೆಳಗಿನ ವರ್ಣ, ಜಾತಿಗಳ ತನ್ನದೇ ಮಕ್ಕಳಾದ ಜನರು ಕೆಟ್ಟವರಾದರೆ? ಯಾಕೆಂದರೆ, ತನ್ನ ಮೂರ್ತಿಯ ಹತ್ತಿರಕ್ಕೆ ಆ ಕೆಳ ಜಾತಿಯವರು ಬಂದರೆ ತಂದೆ ದೇವರಿಗೆ ಸಹಿಸಲಾಗುದಿಲ್ಲವಂತೆ. ಈ ರೀತಿ ಮಾಡಲು ಈ ಭೂಮಿಯ ಒಬ್ಬ ಮನುಷ್ಯ ತಂದೆಗೆ ಕೂಡಾ ಸಾಧ್ಯವಾಗುವುದಿಲ್ಲ, ಅವನು ಸಸ್ಯಾಹಾರಿ ಮಗ ಮಾಂಸಾಹಾರಿ ಮಗ ಎಲ್ಲರನ್ನು ತನ್ನ ಹತ್ತಿರಕ್ಕೆ ಕರೆಸಿಕೊಳ್ಳುವನು, ಹಾಗಿರುವಾಗ, ಇನ್ನು ಕೆಟ್ಟ ವಾಸನೆ ಬರುವ ಆ ಕೊಳೆತ ವಸ್ತುವಿನ ಒಳಗೆ ಜೀವಿಸುವ ಕ್ರಿಮಿಗಳನ್ನು ಕೂಡಾ ಸೃಷ್ಟಿಸಿರುವ ಆ ಕರುಣಾಮಯ ಸೃಷ್ಟಿಕರ್ತ ತಂದೆಗೆ ಹಾಗೆ ಶುದ್ಧ ಅಶುದ್ಧ ತೋರುವುದೇ ಹೇಳಿ ನೀವೇ ಹೇಳಿ. ಆರಾಧನಾಲಯಗಳಲ್ಲಿ ಇಷ್ಟು ಸಹಸ್ರ ವರುಷಗಳು ಆ ದೇವರ ಮುಗ್ಧ ಮಕ್ಕಳನ್ನು ದೂರ ನಿಲ್ಲಿಸಿರುವುದು ಯಾತಕ್ಕೆ? ದೇವರು ತನ್ನ ಯಾವುದಾದರೊಂದು ಭಾವದಲ್ಲಿ ಅಥವಾ ಅವತಾರದಲ್ಲಿ ಮಾಂಸಹಾರಿಯೂ ಹೌದು ತಾನೇ? ನೋಡಿ, ಸ್ವಾರ್ಥಕ್ಕಾಗಿ ಧರ್ಮವನ್ನು ಹೀಗೆಲ್ಲಾ ಜನರು ವಿವರಿಸಿ ಬಿಟ್ಟಿದ್ದಾರೆ. ಆದರೆ ಅಚ್ಚರಿ ಅದಲ್ಲ, ಈ ತುಳಿಯಲ್ಪಟ್ಟ ಜನ ಸಾಮಾನ್ಯರನ್ನೇ ತಮಗೆ ಬೇಕಾದವರನ್ನು ಹೊಡಿಯಲು ಮತ್ತು ಬಡಿಯಲು ಧರ್ಮರಕ್ಷಣೆಯ ಹೆಸರಲ್ಲಿ ಉಪಯೋಗಿಸಿಕೊಳ್ಳುವುದಾಗಿದೆ! ಅಯ್ಯೋ, ಎಲ್ಲಾ ಧರ್ಮಗಳಲ್ಲೂ ಇದನ್ನೇ ನಾವು ನೋಡುವೆವು. ಮೊನ್ನೆ ಮೊನ್ನೆಯಷ್ಟೇ ಒಂದು ವಿಡಿಯೋವನ್ನ ನಾನು ನೋಡಿರುವೆನು. ಅಲ್ಲಿ ಕೋವಿಯೊಂದಿಗೆ ಇನ್ನೊಂದು ದೇಶದ ಒಳಗೆ ನುಗ್ಗಿರುವ ಜನರಲ್ಲಿ ಒಬ್ಬಾತನು ತನ್ನ ಮನೆಯವರೊಂದಿಗೆ ದೂರವಾಣಿಯಲ್ಲಿ ತಾನು ಕೊಳ್ಳುವ ಸ್ಥಳದಿಂದ ಮಾತನಾಡಿರುವುದಾಗಿದೆ. ಅದರಲ್ಲಿ ಅವನು, “ನೋಡಿ ಅಪ್ಪಾ, ನಾನು ಹತ್ತು ಜನರನ್ನು ಕೊಂದು, ನಮ್ಮ ದೇವರಿಗೆ ಸಮರ್ಪಿಸಿದೆ, ನಮ್ಮ ಧರ್ಮಕ್ಕೆ ದೊಡ್ಡ ಸೇವೆ ನಾನು ಮಾಡಿರುವೆನು ಅಪ್ಪಾ, ನೀವು ವಾಟ್ಸೇಫ್ ತೆರೆಯಿರಿ ಅದರಲ್ಲಿ ನಾನು ಕೊಂದ ಆ ಶವಗಳ ಫೋಟೋಗಳಿವೆ ಅವನ್ನು ಒಮ್ಮೆ ನೋಡಿ” ಎಂದು ದೇವರ, ಧರ್ಮದ ಆ ಪರಮ ಭಕ್ತನು ಮಾತನಾಡುತ್ತಿದ್ದನು!! ಅಯ್ಯೋ, ಸೃಷ್ಟಿಕರ್ತ ತಂದೆಯ ಭಕ್ತನಾದ ಆ ಭೀಕರನು ಸೈನಿಕನೂ ಅಲ್ಲ ಮತ್ತು ಆಟನುಕೊಂಡಿರುವುದು ಶತ್ರು ಸೈನಿಕರನ್ನು ಕೂಡಾ ಅಲ್ಲ, ಚಿಕ್ಕ ಚಿಕ್ಕ ಮಕ್ಕಳು, ಹೆಂಗಸರನ್ನು ಸೇರಿ ಆ ಮುಗ್ಧ ಜೀವಿಗಳನ್ನು ಆತನು ಅಲ್ಲಿ ಕೊಂದು ಹಾಕಿರುವುದು!! ಅಯ್ಯಯ್ಯೋ, ಈ ಎಲ್ಲಾ ಕೊಲೆಗಳು, ದೇವರನ್ನು ತೃಪ್ತಿಪಡಿಸಲು ಮತ್ತು ಧರ್ಮವನ್ನು ರಕ್ಷಿಸಲು ಮಾಡುವುದಂತೆ!! ಈ ಹೊಡಿಬಡಿ ಧರ್ಮರಕ್ಷಕರಿಂದ ಇನ್ನು ಉಳಿಗಾಲವಿಲ್ಲ, ‘ಶಾಂತಿ’ ಎಂಬ ಆ ‘ಧರ್ಮ’ ದ ಸರ್ವನಾಶವು ಇವರಿಂದಲೇ ಎಂಬುವುದು ಕಟ್ಟಿಟ್ಟ ಬುತ್ತಿಯಾಗುವುದು, ಇದರಲ್ಲಿ ಸಂಶಯವಿಲ್ಲ.


ಇನ್ನಾದರೂ, ‘ಧರ್ಮ ಎಂದರೆ ಏನು, ದೇವರು ಎಂದರೆ ಏನು’ ಎಂಬುದನ್ನು ತಿಳಿಯಲು ಜನರು ಮೊದಲು ಪ್ರಯತ್ನಿಸಲಿ. ಧರ್ಮ ಎಂದರೆ ಅದು ನಮ್ಮ ನಮ್ಮ ನಂಬಿಕೆಗಳಿಗೆ ಬಿಟ್ಟ ವಿಚಾರ ಎಂದು ಹೇಳುತ್ತಾ ಹೊಡೆದು ಬಡಿದು ಕೊಂದುಹಾಕುವುದಲ್ಲ ಎಂಬುವುದನ್ನು ಇನ್ನಾದರೂ ಅರ್ಥಮಾಡಿಕೊಳ್ಳಲಿ. ಈ ಧರ್ಮ, ಪಂಥಗಳು ಇಷ್ಟಕ್ಕೆ ನಿಲ್ಲುವುದಿಲ್ಲ, ಇಷ್ಟೆಲ್ಲದರ ಮೇಲೆ, ಹಲವು ಧರ್ಮಗಳು ಲೋಕವನ್ನು ಜಯಿಸಲು ಹೊರಟಾಗಿದೆ. ನೋಡಿ, ಲೋಕವನ್ನು ಜಯಿಸುವ ಆ ಭಯಾನಕ ಉದ್ದೇಶವಿರುವಾಗ, ಒಂದು ದಿನ ಇವೆಲ್ಲವೂ ಸಹಜವಾಗಿಯೂ ಮುಖಾಮುಖಿಗಳಾಗುವವು ಖಂಡಿತ. ಆಗ, ಈ ಸೃಷ್ಟಿಕರ್ತ ಮತ್ತು ಆತನ ಈ ಹಲವು ಧರ್ಮಗಳು ಎಷ್ಟು ಲಕ್ಷ ಮುಗ್ಧ ಜನರನ್ನು ಕೊಂದು ಧರ್ಮವನ್ನು ರಕ್ಷಿಸಿ ಶಾಂತಿ ಸ್ಥಾಪನೆ ಮಾಡಲಿವೆಯೋ ಏನೋ! ಅಯ್ಯೋ, ಎಲ್ಲರೂ ಇದೇ ರೀತಿಯ ಭಾವನೆಯ ಧರ್ಮಪಂಡಿತರುಗಳೇ ಆಗಿರುವಾಗ, ಇನ್ನು ಯಾರಲ್ಲಿ ಹೇಳುವುದು? ಧರ್ಮ ಎಂದರೆ ಲೋಕವನ್ನು ಜಯಿಸುವುದಲ್ಲ, ಬದಲು, ಧರ್ಮ ಎಂದರೆ ಅದು ತನ್ನನ್ನು ತಾನು ಜಯಿಸುವುದಾಗಿದೆ. ಧರ್ಮ ಎಂದರೆ, ಕ್ರೌರ್ಯನ್ನು ಹೆಚ್ಚಿಸುವುದಲ್ಲ, ಬದಲು, ನಮ್ಮ ನಮ್ಮ ಮನದಿಂದ ಕ್ರೌರ್ಯವನ್ನು ನೀಗುವುದಾಗಿದೆ. ಧರ್ಮವು ಯುದ್ಧಮಾಡಲಿರುವುದಲ್ಲ, ಬದಲು ಶಾಂತಿ, ಪ್ರೀತಿಯನ್ನು ಹೆಚ್ಚಿಸಲು ಇರುವುದಾಗಿದೆ. ಅಯ್ಯೋ, ಧರ್ಮಗಳು, ಧರ್ಮದ ವಿರುದ್ಧ ದಿಶೆಯಲ್ಲಿವೆ, ಅವು ಅಲ್ಲಿದ್ದು ಮನುಷ್ಯರಿಗೆ ಕಷ್ಟ ನೋವನ್ನು ತಂದು ಹಾಕುವವಲ್ಲಾ, ಏನು ದುರಂತವಿದು!ಬೇಲಿಯೇ ಹೊಲವನ್ನು ಮೇಯುತ್ತಿದೆಯಲ್ಲಾ, ಯಾಕೆ ಈ ಜನರಿಗೆ ಇನ್ನೂ ಅರ್ಥವಾಗುತ್ತಿಲ್ಲ? ಹೇಳುವಾಗ, ಧರ್ಮಗ್ರಂಥ ಸರಿ ಇದೆ ಎಂದು ವಾದ ಮಾಡುವರು. ಮನೆಯೊಳಗಿನ ಜನರು ತಮ್ಮೊಳಗೆ ಹೊಡೆದು ಬಡಿದು ಸಾಯುವಾಗ, ಮನೆಯ ಕಟ್ಟಡ ಸರಿ ಇದೆ, ಚೆನ್ನಾಗಿ ಇದೆ, ಎಂದು ಹೇಳಿ ಏನು ಪ್ರಯೋಜನ? ನಂಬಿಕೆ ಎಂಬ ಭ್ರಮೆಯೇ ಬುದ್ಧಿಯನ್ನು ಕೆಡಿಸುವ ಆ ವಿಷವಾಗಿರುವುದು. ದಯವಿಟ್ಟು ತಿಳಿಯಿರಿ, ಸತ್ಯವೇ ದೇವರು, ಪ್ರೀತಿಯೇ ದೇವರು ಎಂಬುವುದೆಲ್ಲಾ ಸರಿ, ಆದರೆ, ನಂಬಿಕೆಯೇ ದೇವರೆಂದು ಎಲ್ಲೂ ಹೇಳಿಲ್ಲ.

ಚುಟುಕಾಗಿ ಹೇಳುವುದಾದರೆ, ಸತ್ಯ, ಪ್ರೀತಿ, ನೀತಿ ಇಲ್ಲವಾದಲ್ಲಿ ಧರ್ಮ, ಹಾಗೂ ದೇವರು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಯಾಕೆಂದರೆ ದುಷ್ಟರನ್ನು ದೇವರೆಂದು ಯಾರೂ ಒಪ್ಪುವುದಿಲ್ಲ ಮತ್ತು ದುಷ್ಟತನವು ಧರ್ಮ ಆಗುವುದೂ ಇಲ್ಲ. ಅಂದರೆ, ದಯೆ ಇರುವ ಹೃದಯವಂತರೇ ಉತ್ತಮರು ಮತ್ತು ಅವರ ಹೃದಯಗಳಲ್ಲಿ ಮಾತ್ರ ಧರ್ಮ ಇರುವುದು ಎಂದಾಗುವುದು ಎಂದು ಅರ್ಥ. ಇತ್ತ, “ನಾವು ಶ್ರೇಷ್ಠ” ಎಂದು ಸಾರುವ ಆ ಸ್ವಾರ್ಥ ಬೇಲಿಯೊಳಗೆ ಮಾತ್ರ, ಉತ್ತಮರನ್ನು, ಕಾಣುವ ರೀತಿಯು, ಅದು ಭೀಕರ ಅಧರ್ಮವಾಗುವುದು ಎಂಬುವುದು ಕೂಡಾ ಈಗ ಸ್ಪಷ್ಟವಾಗುವುದು.


ಇನ್ನು, ಕೊನೆಯಲ್ಲಿ, ಯಾರಿಗೂ ತೊಂದರೆ ಆಗದ ನಂಬಿಕೆಯ ಆಚಾರಗಳನ್ನು ಮಾಡುವುದರ ಬಗ್ಗೆ ಅಲ್ಲ ಇಲ್ಲಿ ನಾವು ಹೇಳುತ್ತಿರುವುದು ಎಂದು ತಿಳಿಯಬೇಕು. ಅವನ್ನು ಮಾಡುವವರು ಮಾಡಿಕೊಳ್ಳಲಿ. ಆದರೆ, ಅದರ ಬದಲು, ಸ್ವಾಮಿ ವಿವೇಕಾನಂದರು ಹೇಳಿರುವಂತೆ, ‘ನಮ್ಮ ಜಾತಿಯೇ ಶ್ರೇಷ್ಠ, ನಮ್ಮ ಧರ್ಮವೇ ಶ್ರೇಷ್ಠ’ ಎಂಬಿತ್ಯಾದಿ, ಬಾವಿಯೊಳಗಿನ ಕಪ್ಪೆಯ ನಂಬಿಕೆಗಳ ತರದ, ಆ ಮೂರ್ಖತನವನ್ನು ತ್ಯಾಗ ಮಾಡಲು ಈ ಧರ್ಮ ಪಂಥಗಳು ಇನ್ನಾದರೂ ತಯಾರಾಗಬೇಕು ಎಂದು ಮಾತ್ರ ನಾವು ಉದ್ದೇಶಿಸುವುದು ಮತ್ತು ಆಶಿಸುವುದಾಗಿದೆ. ಹಾಗೆ ಮಾಡಿದಲ್ಲಿ ಮಾತ್ರ, ಮುಂದೆ ಮಾನವರ ಉಳಿವು, ಇಲ್ಲವಾದರೆ ಮಾನವರ ಅಳಿವು ನಿಶ್ಚಿತ. ಎಲ್ಲದಕ್ಕೂ ಮನಸ್ಸೇ ಕಾರಣ, ಆದುದರಿಂದ ಮನಸ್ಸಿದ್ದರೆ ಅಲ್ಲಿ ಮಾರ್ಗವೂ ಇರುವುದು ಖಂಡಿತ.

 *************************
 

ದೇವರು ಮತ್ತು ಶಕ್ತಿಗಳ ಆರಾಧನೆ ಎಂದು ಎರಡು ರೀತಿಗಳಲ್ಲಿ ಆರಾಧನೆಯು ಇರುವುದು. ದೇವರು ಎಂದರೆ ಅಸುರ ಅಲ್ಲ ಎಂಬಲ್ಲಿ ಆತನ ಉತ್ತಮ ಸ್ವಭಾವವು ಮಾತ್ರ ದೇವರು ಎಂದು ಅನಿಸಿಕೊಳ್ಳುವುದಕ್ಕೆ ಕಾರಣವಾಗಿರುವುದು ಎಂಬುವುದು ಸ್ಪಷ್ಟವಾಗಿದೆ. ದಿವ್ಯಜ್ಞಾನ ಸನ್ನಿಧಿಗಳಲ್ಲಿ ಈ ಸ್ವಭಾವದ ದೇವರ ಆರಾಧನೆಯ ಕುರಿತು ಮಾತ್ರ ಹೇಳಲಾಗುವುದು.

ಇನ್ನು, ದೇವರ ಆರಾಧನೆಯ ರೀತಿಗಳನ್ನು ನೋಡುವುದಾದರೆ, ಅಲ್ಲಿ, ದೇವರನ್ನು ಮುಖ್ಯವಾಗಿ ಮೂರು ರೀತಿಗಳಲ್ಲಿ ಆರಾಧಿಸುವುದನ್ನು ಕಾಣಬಹುದು. ಅವಲ್ಲಿ ಒಂದು, ವ್ಯಕ್ತಿ ದೇವರಾಗಿ, ಇನ್ನೊಂದು ತತ್ವ ದೇವರಾಗಿ, ಮತ್ತೊಂದು ವ್ಯಕ್ತಿತ್ವ ದೇವರಾಗಿ ಇರುವ ಆರಾಧನೆಯಾಗಿದೆ. ಇಲ್ಲಿ ಮೊದಲ ಎರಡು ಎಲ್ಲರಿಗೂ ಹೆಚ್ಚು ಪರಿಚಿತವಾಗಿರುವುದು, ಆದರೆ ಅತ್ಯಂತ ಅಗತ್ಯವಾಗಿರುವ ಆ ಮೂರನೆಯ ರೀತಿಯು ಪರಿಚಿತವಲ್ಲದ ರೀತಿಯಾಗಿದೆ ಅಷ್ಟೆ.

ವ್ಯಕ್ತಿ ದೇವರಾಗಿ ಮಾಡುವ ಆರಾಧನೆಯಲ್ಲಿ ಆಚಾರ, ಸಂಪ್ರದಾಯ, ಇತ್ಯಾದಿಗಳು ಸೇರಿವೆ. ತತ್ವ ದೇವರಾಗಿ ಮಾಡುವ ಆರಾಧನೆಯು ಧ್ಯಾನ ರೂಪದಲ್ಲಿದ್ದು ಅದು ತತ್ವವನ್ನು ಸೇರುವ ಆ ಮೋಕ್ಷದ ದಾರಿಯವರ ಆರಾಧನೆ ಎಂದು ಹೆಚ್ಚಾಗಿ ಕರೆಯಲ್ಪಡುವುದು. ಇನ್ನು, ಕೊನೆಯದ್ದಾಗಿರುವ ದೇವರ ವ್ಯಕ್ತಿತ್ವದ ಆರಾಧನೆಯು ಒಬ್ಬ ವ್ಯಕ್ತಿಯ ಜೀವನಕ್ಕೆ ಅನಿವಾರ್ಯವಾಗಿರುವ ಸ್ವಭಾವಶುದ್ಧಿಗೆ, ಮಾತ್ರವಲ್ಲ, ಅದರೊಂದಿಗೆ, ಮನಶ್ಯಾಂತಿ, ಮನೆಶಾಂತಿ, ಜೀವನಶಾಂತಿಗಳಿಗೆ ಬೇಕಾಗಿ ಮಾಡುವ ಆರಾಧನೆಯಾಗಿದೆ.

ವಿ. ಸೂ- ದೇವರ ಈ ಮೂರು ಆರಾಧನಾ ರೀತಿಗಳಲ್ಲಿ, ದೇವರ ವ್ಯಕ್ತಿತ್ವ ಆರಾಧನಾ ರೀತಿ ಅಥವಾ ದೈವತ್ವ ಆರಾಧನಾ ರೀತಿಯು ಮಾತ್ರ ಆ ರಹಸ್ಯ ಪ್ರಾಚೀನ ವಾಮಾಚಾರದ ಭಯಾನಕ ಪ್ರಭಾವವನ್ನು ಒಂದು ಹಂತದವರೆಗೆ ನಿರ್ವೀರ್ಯ ಮಾಡಲು ಶಕ್ತವಾಗುವ ರೀತಿಯಾಗಿರುವುದು.

 ********

ಭಾಗ -1

ದಿವ್ಯಜ್ಞಾನ ಸನ್ನಿಧಿಗಳಲ್ಲಿ ವ್ಯಕ್ತಿತ್ವ ದೇವರ ಆರಾಧನೆಯ ರೀತಿ

ಅವರವರ ಇಷ್ಟ ದೇವರ ಸಂಕಲ್ಪದಲ್ಲೇ, ಆಯಾ ದೇವರ ವ್ಯಕ್ತಿತ್ವ ಆರಾಧನೆ, ಅಥವಾ ದೈವತ್ವ ಆರಾಧನೆ

1. ದೈವತ್ವದ ಸುಗಂಧದ ಪ್ರತೀಕವಾಗಿ ಊದುಬತ್ಘಿಯನ್ನು ಉರಿಸುವುದು. ಇದು ಮನಸ್ಸನ್ನು ಪವಿತ್ರಗೊಳಿಸುವಲ್ಲಿ ಸಹಾಯಕವಾಗುವುದು.

2. ಎಲ್ಲರೂ ಕುಳಿತು ಪವಿತ್ರ ಫಲಕದಲ್ಲಿ ಅಥವಾ ತಮ್ಮ ಮನದಲ್ಲಿ, ತಮ್ಮ ಇಷ್ಟ ದೇವರನ್ನು ಸ್ಥಾಪಿಸಿ, ಆ ದೇವರು ಸತ್ಯ, ಪ್ರೀತಿ, ನೀತಿಯ ಬೆಳಕಾಗಿ ಅದನ್ನು ಅನುಭವಿಸುವುದು ಆಗಿದೆ. ಹೀಗೆ ಅನುಭವಿಸುವಾಗ, ಆ ದೇವರ ದೈವತ್ವದ ಬೆಳಕು ಮಾನವರ ಹೃದಯದಲ್ಲಿ ಬೆಳಗಲು ಆರಂಭಿಸುವುದು. ಸತ್ಯಸಂಧವಾದ ಈ ರೀತಿಯ ದೇವರ ಆರಾಧನೆಯು ಒಬ್ಬಾತನನ್ನು ಮಹಾತ್ಮನನ್ನಾಗಿ ಮಾಡುವುದು.

ಭಾಗ-2

ದಿವ್ಯಜ್ಞಾನ ಸನ್ನಿಧಿಯಲ್ಲಿ, ಪವಿತ್ರತೆ ಧ್ಯಾನ.

ಇದು ತಾನು ಪವಿತ್ರ ವ್ಯಕ್ತಿತ್ವ ಎಂಬುವುದನ್ನು ಮನದಲ್ಲಿ ಗಟ್ಟಿಮಾಡುವುದಕ್ಕೆ ಹಾಗೂ ಅದನ್ನು ಹೃದಯದಲ್ಲಿ ಅನುಭವಿಸುವುದಕ್ಕೆ ಸಹಾಯಕವಾಗುವುದು.

ಭಾಗ-3

ದಿವ್ಯಜ್ಞಾನ ಸನ್ನಿಧಿಯಲ್ಲಿ, ಮನಸ್ಸು ಶಾಂತಗೊಳಿಸುವ ಧ್ಯಾನ

ಇದು ಮನಸ್ಸಿಗೆ ಶಾಂತಿಯನ್ನು ತಂದು ಕೊಡುವುದು.

ಭಾಗ-4

ಸತ್ಯಚಿಂತನೆ-

ಯಾವುದಾದರೂ ಒಂದು ವಿಚಾರವು ಹೇಗೆ ಸತ್ಯ ಅಥವಾ ಅಸತ್ಯ ಎಂದು ವಿವರಿಸುವುದು ಆಗಿದೆ.

ಭಾಗ- 5

ಮನೆಶಾಂತಿ, ಜೀವನಶಾಂತಿಯ ವಿಚಾರಗಳು-

ಇಲ್ಲಿ, ಪ್ರಶ್ನೆ-ಉತ್ತರ ರೀತಿಯನ್ನು ಅವಲಂಭಿಸಿ ಪರಿಹಾರ ಕಾಣುವ ಪ್ರಯತ್ನವಾಗಿದೆ.

ಭಾಗ- 6

ಕೊನೆಯದಾಗಿ ಪವಿತ್ರ ಫಲಕಕ್ಕೆ ನಮಸ್ಕರಿಸಿ ಏಳುವುದು.

 *****

ದಿವ್ಯಜ್ಞಾನ ಸನ್ನಿಧಿಗೆ ಬರುವ ಜನರಲ್ಲಿ ಒಟ್ಟು ನಾಲ್ಕು ವಿಧಗಳು

1. ಬರೇ ಮನಶ್ಯಾಂತಿಗೆ ಬೇಕಾಗಿ ಮಾತ್ರ ಬರುವವರು.

2. ಯಾವುದಾದರೂ ಒಂದು ಎರಡು ತೊಂದರೆಗಳ ಪರಿಹಾರಕ್ಕೆ ಮಾತ್ರ ಬರುವವರು.

3. ಜೀವನಶಾಂತಿಗೆ ಬೇಕಾಗಿ ಬರುವವರು.

4. ಜ್ಞಾನಸೇವಕರು.

ಮೊದಲನೇ ವರ್ಗ ಜನರು-ಬರೇ ಮನಶ್ಯಾಂತಿಗೆ ಬೇಕಾಗಿ ಮಾತ್ರ ಬರುವವರು. ಅವರಿಗೆ ದಿವ್ಯಜ್ಞಾನ ಸನ್ನಿಧಿಯಲ್ಲಿ ಮನಶ್ಯಾಂತಿಯ ಅನುಭವಕ್ಕಾಗಿ ಮಾತ್ರ ಮಾಡಿಟ್ಟಿರುವ ಕೆಲವು ವಿಧಾನಗಳಿಂದ ಅದನ್ನು ಅನುಭವಿಸಿಕೊಳ್ಳುವಂತೆ ಮಾಡಲಾಗುವುದು. ಅವರಿಗೆ ದಿವ್ಯಜ್ಞಾನ ಸನ್ನಿಧಿ ಪಾಠಗಳ ಅಗತ್ಯತೆ ಇರುವುದಿಲ್ಲ.

ಎರಡನೆಯ ವರ್ಗ ಜನರು- ಇಂಥವರಿಗೆ ದಿವ್ಯಜ್ಞಾನ ಸನ್ನಿಧಿಯ ಚುಟುಕು ಪರಿಚಯದ ಅಗತ್ಯ ಇರುವುದು. ಅದರ ನಂತರ ಅವರಿಗೆ ಅವರ ತೊಂದರೆಗಳನ್ನು ನಿಭಾಯಿಸಲು ಇರುವ ಸಲಹೆಯನ್ನು ಹಾಗೂ ಸಾಧನೆಗಳನ್ನು ತಿಳಿಸಿಕೊಡಲಾಗುವುದು.

ಮೂರನೆಯ ವರ್ಗ ಜನರು- ಈ ವರ್ಗದ ಜನರಿಗೆ ಜೀವನಶಾಂತಿಯ ಅಗತ್ಯವಿರುವುದು. ಅವರಿಗೆ ಪ್ರತ್ಯೇಕ ರೀತಿಯ ಪಾಠಗಳು ಹಾಗೂ ಸಾಧನೆಗಳನ್ನು ಕೊಡಲಾಗುವುದು.

ನಾಲ್ಕನೇ ವರ್ಗದ ಜನರು-ಜ್ಞಾನಸೇವಕರು- ಈ ವರ್ಗದ ಜನರು ಅತ್ಯಪೂರ್ವವಾಗಿ ಇರುವವರಾಗಿರುವರು. ಇವರು ದಿವ್ಯಜ್ಞಾನ ಸನ್ನಿಧಿಯಲ್ಲಿ ಪಾಠ ಹೇಳುವ ಸೇವಾ ಕಾರ್ಯಕರ್ತರು ಆಗಿರುವರು.

 ***************

ದಿವ್ಯಜ್ಞಾನ ಸನ್ನಿಧಿಯ ಕುರಿತಾಗಿರುವ ಚುಟುಕು ಪರಿಚಯ

1. ದಿವ್ಯಜ್ಞಾನ ಸನ್ನಿಧಿ ಎಂದರೇನು?

2. ದಿವ್ಯಜ್ಞಾನ ಸನ್ನಿಧಿ ಯಾಕಾಗಿ ಹುಟ್ಟಿಕೊಂಡಿತು.

3. ದಿವ್ಯಜ್ಞಾನ ಸನ್ನಿಧಿ ಯಾವೆಲ್ಲಾ ವಿಧಗಳಲ್ಲಿ ಜನರಿಗೆ ಲಾಭ ಮಾಡಿಕೊಡುತ್ತದೆ.

*****************

ಆ ನಾಲ್ಕು ವಿಧಗಳ ವಿಸ್ತಾರವಾದ ವಿವರಣೆಗಳು

1. ಬರೇ ಮನಶ್ಯಾಂತಿಗೆ ಬೇಕಾಗಿ ಮಾತ್ರ ಬರುವವರು.

ಮನಶ್ಯಾಂತಿಗೆ ಬೇಕಾಗಿ ಮಾತ್ರ ಬರುವವರು:-

ಈ ವರ್ಗದ ಜನರಿಗೆ ತಿಳಿಸಬೇಕಾಗಿರುವ ಮುಖ್ಯವಾದ ಮತ್ತು ಚುಟುಕಾದ ವಿಚಾರಗಳು:-

ಅವರಿಗಾಗಿ ಏನು ಮಾಡುವುದಾದರೂ, ಅದರ ಮೊದಲು ತಿಳಿದಿರಬೇಕಾದುದು.

1. ಬರುವ ಜನರು ಜ್ಞಾನಿಗಳೇನು ಆಗಿರುವುದಿಲ್ಲ.

2. ಬರುವ ಜನರು ಮನಶ್ಯಾಂತಿ ಇಲ್ಲದವರು.

3. ಬರುವ ಜನರು ಜನಸಾಮಾನ್ಯರ ಬುದ್ಧಿಯಲ್ಲೇ ಮತ್ತೂ ಜೀವನವನ್ನು ಮುಂದುವರಿಸಲು ಇಚ್ಚಿಸುವವರು ಆಗಿರುವರು.

1 ನಂಬಿಕೆ

ನಂಬಿಕೆ ಎಂದರೆ ನಿಜವಾಗಿಯೂ ಏನು? ನೋಡಿ, ‘ಈ ಊರಲ್ಲಿ ನಿನ್ನೆ ಹುಲಿಯನ್ನು ನೋಡಿದವರು ಇದ್ದಾರಂತೆ’ ಎಂದರೆ ಕೆಲವರು ಅದನ್ನು ನಂಬಬಹುದು. ಇನ್ನು, ಇದನ್ನು ವಾಕ್ಯದಲ್ಲಿ ಹೇಳುವುದಾದರೆ, “ನಾನು ಹುಲಿ ಬಂದ ಸುದ್ದಿಯನ್ನು ನಂಬುತ್ತೇನೆ” ಎನ್ನಬಹುದು, ಆದರೆ ಕಣ್ಣಿದ್ದವರು ಯಾರೂ, “ಸೂರ್ಯನನ್ನು ನಾನು ನಂಬುತ್ತೇನೆ” ಎಂದು ಹೇಳುವುದಿಲ್ಲ, ಅಲ್ಲವೇ? ಯಾಕೆ? ಮೊದಲನೆಯದರಲ್ಲಿ, ಹುಲಿ ಬಂದಿರುವ ವಿಚಾರವಾಗಿ ನಮಗೆ ತಿಳಿದಿಲ್ಲ, ಆದರೆ ಎರಡನೆಯದರಲ್ಲಿ ಸೂರ್ಯನ ವಿಚಾರವಾಗಿ ನಮಗೆ ಸ್ಪಷ್ಟವಾಗಿ ತಿಳಿದಿದೆ ಇದುವೇ ಆ ವ್ಯತ್ಯಾಸಕ್ಕೆ ಕಾರಣ. ಅಂದರೆ, ಯಾವುದನ್ನಾದರೂ ನಾವು ಸ್ಪಷ್ಟವಾಗಿ ತಿಳಿದಿದ್ದರೆ ಅದನ್ನು ನಂಬುತ್ತೇನೆ ಎನ್ನಲು ನಮಗೆ ಸಾಧ್ಯವಾಗುವುದಿಲ್ಲ, ಮತ್ತು ತಿಳಿಯದೆ ಇರುವುದನ್ನು ಮಾತ್ರ ನಾವು ನಂಬಲು ಸಾಧ್ಯ ಅಥವಾ ತಿಳಿಯದೆ ಇರುವುದರ ಮೇಲೆ ಮಾತ್ರ ನಮಗೆ ನಂಬಿಕೆ ಇರಿಸುವುದಕ್ಕೆ ಸಾಧ್ಯ ಎಂದು ಇಲ್ಲಿ ಸ್ಪಷ್ಟವಾಗುವುದು. ಹೀಗಾಗುವಾಗ, ನಂಬಿಕೆ ಎಂದರೆ, ಸ್ಪಷ್ಟವಾಗಿ ತಿಳಿಯದಿರುವಾಗ, ‘ಕಣ್ಣು ಮುಚ್ಚಿ ಒಪ್ಪಿಕೊಳ್ಳುವುದು’ ಎಂಬ ಅರ್ಥವು ಮಾತ್ರ ಆ ಶಬ್ಧಕ್ಕೆ ಬರುವುದು ಎಂದು ತಿಳಿಯಬೇಕು.

ಈಗ ದೇವರನ್ನು ನಂಬುತ್ತೇನೆ ಎಂದಾಗಲೂ, ದೇವರ ಬಗ್ಗೆ ನಿಮಗೆ ಏನೂ ತಿಳಿದಿಲ್ಲ, ಆದರೆ ನೀವು ಕಣ್ಣುಮುಚ್ಚಿ ದೇವರನ್ನು ಒಪ್ಪಿಕೊಂಡಿದ್ದೀರಿ ಎಂಬ ಅರ್ಥವು ಮಾತ್ರ ಅಲ್ಲಿ ಬರುವುದು. ಇದು ದೈವ ನಿಂದನೆಯಲ್ಲವೇ? ಆದುದರಿಂದಲೇ, “ದೇವರನ್ನು ನಾನು ನಂಬುತ್ತೇನೆ” ಎಂದು ಹೇಳುವುದಲ್ಲ, ಬದಲು ದೇವರನ್ನು ನಾನು ಅರಿತಿದ್ದೇನೆ, ದೇವರನ್ನು ನಾನು ಆರಾಧಿಸುತ್ತೇನೆ, ಅಥವಾ ದೇವರನ್ನು ನಾನು ಪೂಜಿಸುತ್ತೇನೆ ಎಂದೆಲ್ಲಾ ಹೇಳಬಹುದು. ಹೀಗೆ ಹೇಳುವಾಗ, ಕೆಲವರು, ದೇವರನ್ನು ಅರಿಯಲು ಸಾಧ್ಯವಿಲ್ಲ ಎಂದು ಹೇಳಿದರೆ, ನಾವು ಉದ್ದೇಶಿಸಿದ್ದು ತತ್ವ ದೇವರು ಅಲ್ಲ, ವ್ಯಕ್ತಿ ದೇವರನ್ನು ಎಂದು ಹೇಳಿಬಿಡಿ. ದೇವರನ್ನು ಅರಿಯುವುದು ಎಂದರೇನು ಎಂದು ಅವರು ಕೇಳಿದರೆ, ಅದು ದೇವರು ಎಂದರೇನು ಎಂಬ ಪ್ರಶ್ನೆಗೆ ಇರುವ ಉತ್ತರವಾಗಿದೆ ಎಂದು ಹೇಳಬೇಕು ಅಷ್ಟೆ. ಹಾಗಾದರೆ ಆ ಪ್ರಶ್ನೆಗಿರುವ ಉತ್ತರ ಏನು ಎಂದು ಕೇಳಿದರೆ, ‘ದೇವರು ಕರುಣಾಮಯ, ದಯಾಮಯ, ಸತ್ಯ, ಪ್ರೀತಿ, ನೀತಿಯ ಒಡೆಯ’ ಎಂದು ಹೇಳಿ. ಅಂದರೆ, ದೇವರು ಈ ಎಲ್ಲಾ ಸ್ವಭಾವವನ್ನು ಹೊತ್ತವ ಎಂದೂ ಅವನು ಕ್ರೂರಿ ಆಲ್ಲ ಎಂದೂ ಹೇಳಿರಿ. ಅಸುರರಲ್ಲೂ ಶಕ್ತಿ ಇದೆ, ಆದರೆ ಅವರು ಅಸುರರಾಗಿರುವುದು ಅವರ ದುಷ್ಟ ಸ್ವಭಾವದಿಂದ ಮಾತ್ರ ಎಂದು ಅವರನ್ನು ನೆನಪಿಸಿರಿ. ಅಸುರರು ದುಷ್ಟ ಸ್ವಭಾವದಿಂದ ಅಸುರರಾದರೆ, ಇನ್ನು, ದೇವತೆ ಅಥವಾ ದೇವರುಗಳು ಉತ್ತಮ ಸ್ವಭಾವದಿಂದ ದೇವತೆಗಳು ಅಥವಾ ದೇವರು ಆಗಿರುವುದು ಎಂಬುವುದು ಸ್ಪಷ್ಟವಾಗುವುದು. ಒಟ್ಟಲ್ಲಿ, ದೇವರ ಮೂಲವು ಸತ್ಯ, ಪ್ರೀತಿ, ನೀತಿಯೇ ಆಗುವಾಗ, ದೇವರು ಎಂದರೆ ಸತ್ಯ ಪ್ರೀತಿ ನೀತಿ ಎಂದೇ ಚುಟುಕಾಗಿ ಹೇಳಬಹುದು ಎಂದು ತಿಳಿಸಿರಿ. ಕೊನೆಗೆ, ದೇವರು ಸೃಷ್ಟಿಕರ್ತ ಎಂಬ ಸಂಕಲ್ಪವಾದಲ್ಲಿ ಆ ದೇವಸಂಕಲ್ಪ ಸತ್ಯ, ಪ್ರೀತಿ, ನೀತಿಯು ಉತ್ತುಂಗದಲ್ಲಿರಲೇ ಬೇಕಾಗುತ್ತದೆ ಮತ್ತು ಕರುಣಾಮಯ ಅಗಿರಲೇಬೇಕಾಗುತ್ತದೆ ಎಂದು ತಿಳಿಸಿರಿ. ಮಾತ್ರವಲ್ಲ, ಹಾಗಾಗುವಾಗ, ತನ್ನ ಮಾನವ ಮಕ್ಕಳನ್ನು ಎಲ್ಲರನ್ನು ಎಲ್ಲಾ ಧರ್ಮಗಳಲ್ಲೂ ಒಂದೇ ರೀತಿಯಲ್ಲಿ ಪ್ರೀತಿಸುವ ಆ ಕರುಣಾಮಯ ಆಗಿರುವನು ಎಂದೂ, ಇನ್ನೊಂದು ಧರ್ಮದ, ತನ್ನದೇ ಉತ್ತಮ ಭಕ್ತರಾದ ಮಕ್ಕಳಿಗೆ ಸ್ವರ್ಗ ನೀಡದ ಮತ್ತು ನರಕವನ್ನು ಕೊಡುವ ಕ್ರೂರಿ ತಂದೆಯು ಆಗುವುದಿಲ್ಲ ಎಂಬುವುದನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಿರಿ.

ಕೊನೆಯಲ್ಲಿ, ಯಾಕೆ ನಾವು ಇದುವರೆಗಿನ ಎಲ್ಲಾ ಧರ್ಮ ಪಂಥಗಳ ಈ ‘ನಂಬಿಕೆ’ ಎಂಬ ತಪ್ಪಾದ ಶಬ್ದದ ಬಳಕೆಯನ್ನು ಎತ್ತಿ ಹೇಳಿ ಸರಿಪಡಿಸಲು ಕಾರಣ ಏನೆಂದರೆ, ಈ ನಂಬಿಕೆಯ ರೀತಿಯು, ಈ ಭೂಮಿಯಲ್ಲಿ ಸೃಷ್ಟಿಸಿರುವ ಆ ಸಾಗರದಷ್ಟು ಪ್ರಮಾಣದ ದ್ವೇಷ, ಹಿಂಸೆ, ರಕ್ತಪಾತಗಳೇ ಅದಕ್ಕೆ ಕಾರಣವಾಗಿರುವುದು. ದೇವರು ಕರುಣಾಮಯ ಮತ್ತು ಎಲ್ಲಾ ಮನುಷ್ಯರ ಸೃಷ್ಟಿಕರ್ತನಾದ ತಂದೆ ಎಂದು ಆ ಏಕ ಸೃಷ್ಟಿಕರ್ತ ದೇವರನ್ನು ಹೇಳುತ್ತಾ, ಅದೇ ಏಕ ಸೃಷ್ಟಿಕರ್ತ ದೇವರ ಹೆಸರಲ್ಲಿ, ನಂಬಿಕೆ ಎಂಬ ರೀತಿಯನ್ನು ಅನುಸರಿಸಿ, “ನಮ್ಮ ಸೃಷ್ಟಿಕರ್ತ ಹೇಳಿದ್ದು ಮಾತ್ರ ಸರಿ, ನಿಮ್ಮದು ಸರಿ ಅಲ್ಲ”, “ನಮ್ಮ ಸೃಷ್ಟಿಕರ್ತನ ಸ್ವರ್ಗ ಮಾತ್ರ ಸರಿಯಾದ ಸ್ವರ್ಗ, ನಿಮ್ಮದು ತಪ್ಪು” ಎಂದೆಲ್ಲಾ ಹೇಳುತ್ತಾ ದ್ವೇಷ, ಹಿಂಸೆ, ರಕ್ತಪಾತವನ್ನು ಮಾಡಿ, ಹೆಂಗಸರು, ಮಕ್ಕಳನ್ನೂ ಸೇರಿ, ಕೋಟಿಗಟ್ಟಲೆ ಮುಗ್ಧ ಮಾನವರನ್ನು ಇದುವರೆಗೂ ಕೊಂದುಹಾಕಿಯಾಗಿದೆ. ಇದಕ್ಕಾಗಿ, ಈ ನಂಬಿಕೆಯ ರೀತಿಯಲ್ಲಿ ದೇವರನ್ನು ಕಾಣುವ ಬದಲು, ನಂಬಿಕೆಗಿಂತಲೂ ಕೋಟಿ ಪಾಲು ಮಿಗಿಲಾಗಿರುವ, ಆ ಸತ್ಯದ ರೀತಿಯಲ್ಲಿ ದೇವರನ್ನು ಕಾಣಬೇಕು ಎಂದು ಹೇಳುವುದು. ಆಗ, ದೇವರಿಂದ ಭಯಾನಕ ದ್ವೇಷ, ಹಿಂಸೆ, ರಕ್ತಪಾತಗಳು ಸೃಷ್ಟಿಯಾಗುವುದು ಹೋಗಿ ಅಲ್ಲಿ, ಹೃದಯವೈಶಾಲ್ಯತೆ, ಪ್ರೀತಿ, ದಯೆ, ಇತ್ಯಾದಿಗಳು ಸೃಷ್ಟಿಯಾಗಲು ತೊಡಗುವುದು. ಆದುದರಿಂದ, “ದೇವರು ಎಂದರೆ ಏನು” ಎಂಬಲ್ಲಿಂದಲೇ ನಾವು ಎಲ್ಲರೂ ಆ ಪರಮ ಪವಿತ್ರ ಈ ಸತ್ಯದ ಹಿನ್ನೆಲೆಯ ರೀತಿಯನ್ನು ಅರಿಯಲು ತೊಡಗಬೇಕಾಗಿದೆ. ಆಗ, ಎಲ್ಲರಿಗೂ ದೇವರು ಕರುಣಾಮಯ, ಉತ್ತಮ ವ್ಯಕ್ತಿತ್ವದ ಅಧಿಪತಿ, ಎಂದೆಲ್ಲಾ ಒಂದೇ ತರದಲ್ಲಿ ಉತ್ತರ ಲಭಿಸುವುದು. ಈ ಪವಿತ್ರ ಸಾರ್ವತ್ರಿಕ ಉತ್ತರವು ಸರ್ವ ಧರ್ಮ, ಪಂಥದವರಿಗೂ ಒಂದೇ ರೀತಿ ಇದ್ದು, ಅದು, ದ್ವೇಷ, ಹಿಂಸೆ, ರಕ್ತಪಾತ ಇತ್ಯಾದಿಗಳನ್ನು ದೇವರ ಹೆಸರಲ್ಲಿ ಮಾಡುವುದನ್ನು ಪೂರ್ತಿಯಾಗಿ ತಡೆಯುವುದು. ಇದಕ್ಕಾಗಿಯೇ, ದಿವ್ಯಜ್ಞಾನ ಸನ್ನಿಧಿಯು, ಹಿಂದೆಯೇ ಇದ್ದ ಆ ಎರಡು ದೇವರ ಆರಾಧನಾ ರೀತಿಯೊಂದಿಗೆ, ಸುಪರಿಚಿತವಲ್ಲದ, ಆದರೆ ಮಾನವರಿಗೆ ಅತ್ಯಗತ್ಯವಾದ, ದೇವರ ವ್ಯಕ್ತಿತ್ವದ ಆರಾಧನೆಯನ್ನು ಕೂಡಾ ಜಗತ್ತಿನ ಎಲ್ಲಾ ಧರ್ಮ, ಪಂಥಗಳು ಅನಿವಾರ್ಯವಾಗಿ ಸೇರಿಸಿಕೊಳ್ಳಬೇಕು ಎಂದು ಹೇಳುವುದು. ಇದು, ಆ ರಹಸ್ಯ ಪ್ರಾಚೀನ ವಾಮಾಚಾರದ ವಿರುದ್ಧ ಪರಿಹಾರವನ್ನು ಕಂಡುಕೊಳ್ಳುವುದು ಎಂಬುವುದು ಈ ಆರಾಧನಾ ವಿಧಾನದ ಮಾತ್ರ ಒಂದು ದೊಡ್ಡ ಪ್ರತ್ಯೇಕತೆಯಾಗಿದೆ. ಅದರ ಬಗ್ಗೆ ನನ್ನ ಹಿಂದಿನ ವೀಡಿಯೋಗಳಿಂದ ತಿಳಿದುಕೊಳ್ಳಿರಿ. ಒಟ್ಟಲ್ಲಿ, ಈ ಎಲ್ಲದಕ್ಕಾಗಿಯೇ, ದಿವ್ಯಜ್ಞಾನ ಸನ್ನಿಧಿಗಳಲ್ಲಿ, ಜಾತಿ, ಧರ್ಮ ಅತೀತವಾದ, ಜಗತ್ತಿನ ಯಾವುದೇ ದೇವಸಂಕಲ್ಪದ ಆರಾಧನೆಯ, ಆ ಪವಿತ್ರ ಮೂರನೆಯ ರೀತಿ ಒಂದನ್ನು ಮಾತ್ರ ಇರಿಸಿಕೊಂಡಿರುವುದು ಎಂದು ತಿಳಿಯಬೇಕು. ಆದುದರಿಂದ, ನಂಬಿಕೆಯಲ್ಲ, ಮತ್ತು ನಂಬಿಕೆಯ ರೀತಿಯೂ ಅಲ್ಲ, ಬದಲು, ಸತ್ಯ ಮತ್ತು ಸತ್ಯದ ರೀತಿಗಳು, ದೇವರ ಸಂಕಲ್ಪದ ಪವಿತ್ರತೆಯನ್ನು ಉಳಿಸುವುದಕ್ಕೂ ಮತ್ತು ಮಾನವರನ್ನು ಸರ್ವನಾಶದಿಂದ ರಕ್ಷಿಸುವುದಕ್ಕೂ, ಮಾನವರಿಗೆ ಅತ್ಯಗತ್ಯವಾಗಿರುವ ರೀತಿಯಾಗುವುದು, ಎಂಬುವುದು ಇಲ್ಲಿ ಸ್ಪಷ್ಟವಾಗುವುದು.

*************************************************************************************************

1. ಸಸ್ಯಾಹಾರ

ಸತ್ಯವನ್ನು ಜಗತ್ತಿನ ಮುಂದಿಡಲು ವಾದ ಎಂಬ ಆ ತಪ್ಪಾದ ರೀತಿಯಲ್ಲೇ ಇಂದೂ ಮುಂದುವರಿಸುತ್ತಿರಲು, ಇನ್ನು ನಿಸ್ಪಕ್ಷ ರೀತಿಯ ಆ ಸತ್ಯಚಿಂತನೆಯನ್ನು ಈ ‘ಸಸ್ಯಾಹಾರ ಮತ್ತು ಮಾಂಸಾಹಾರ’ ಎಂಬ ವಿಷಯದಲ್ಲಿ ಮಾಡುವರೇ? ಇಲ್ಲ, ತಮ್ಮ ಪರ ರೀತಿಯಲ್ಲಿ ಅಲ್ಲದೆ ನಿಸ್ಪಕ್ಷವಾಗಿ ಮಾಡಿಲ್ಲ. ಆದುದರಿಂದ, ಯಾರೂ ಆ ರೀತಿಯಲ್ಲಿ ಪ್ರಯತ್ನಿಸದಿರಲು, ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಆ ವಿಷಯವನ್ನು ನಾವು ಈಗ ಸತ್ಯದ ಹಿನ್ನೆಲೆಯಲ್ಲೇ ಪರಿಶೀಲಿಸಿ ನೋಡಲು ಪ್ರಯತ್ನಿಸೋಣ.

ಸಸ್ಯಾಹಾರವನ್ನು ಶ್ರೇಷ್ಠ ಎನ್ನುವವರಿದ್ದಾರೆ, ಇನ್ನು ಮಾಂಸಹಾರ ಶ್ರೇಷ್ಠ ಎನ್ನುವವರೂ ಇದ್ದಾರೆ. ಹಲವರು ಸಸ್ಯಾಹಾರದ ಪರವಾಗಿ ಮಾತನಾಡಿದರೆ ಇನ್ನೂ ಹಲವರು ಮಾಂಸಹಾರದ ಪರ ಮಾತನಾಡುವರು ಎಂದು ಇದರಿಂದ ತಿಳಿಯಿತು. ಇವೆಲ್ಲ ‘ತಮ್ಮ ಪರ’ ಎಂಬ ರೀತಿಯ ವಾದಗಳು ಮಾತ್ರವಾಗಿವೆ ಅಷ್ಟೆ. ಅಚ್ಚರಿ ಎಂದರೆ ಕೆಲವು ವಿಶೇಷ ವ್ಯಕ್ತಿಗಳೆಂದು ಹೇಳಿಕೊಳ್ಳುವವರು, ಸಸ್ಯಾಹಾರದ ಬುದ್ಧಿಯು ಈ ಜಗತ್ತಲ್ಲೇ ಅತ್ಯಂತ ಶಕ್ತಿಯುತ ಬುದ್ಧಿ ಎಂದೂ ಹೇಳುವರು! ಅಯ್ಯೋ, ಇದು ಮಾತ್ರ ಮಿತಿ ಮೀರಿದ ವಾದವಾಗಿಹೋಗಿರುವುದು, ಯಾಕೆಂದರೆ, ಈ ಜಗತ್ತಲ್ಲಿ, ಅತ್ಯಂತ ಬುದ್ಧಿಯನ್ನು ಉಪಯೋಗಿಸಿರುವ ಆ ದೊಡ್ಡ ದೊಡ್ಡ ವಿಜ್ಞಾನಿಗಳನ್ನು ನೋಡಿದರೆ ಅವರಲ್ಲಿ ಹೆಚ್ಚಿನವರೂ ಮಾಂಸಹಾರಿಗಳೆಂದು ಚಿಕ್ಕ ಮಕ್ಕಳಿಗೂ ತಿಳಿದಿದೆ. ಇನ್ನು, ಅತ್ಯಂತ ಬುದ್ಧಿಹೀನರ ಆ ಪಟ್ಟಿಯಲ್ಲಿ ಕೂಡಾ ಸಸ್ಯಾಹಾರಿಗಳು ಸಮಪಾಲುದಾರರಾಗಿರುವುದನ್ನೂ ನಾವು ಕಾಣುವೆವು. ಆದುದರಿಂದ ನಾವು ಈ ರೀತಿಯ, ಪೂರ್ತಿ ಕಣ್ಣು ಮುಚ್ಚಿದ, ಆ “ತಮ್ಮ ಪರ” ಎಂಬ ವಾದದ ರೀತಿಯನ್ನು ಬಿಟ್ಟು ವೈಜ್ಞಾನಿಕ ರೀತಿಯಲ್ಲಿ ಈ ವಿಷಯದ ಬಗ್ಗೆ ಚಿಂತನೆ ಮಾಡಬೇಕಾಗಿದೆ.

ಈಗ ಸಸ್ಯಾಹಾರದ ಬಗ್ಗೆ ನೋಡೋಣ. ಸಾತ್ವಿಕ ಸ್ವಭಾವ ಸಸ್ಯಾಹಾರದಿಂದ ಬರುತ್ತದೆ ಎಂದು ಹೇಳುವರು. ಇದನ್ನು ವೈಜ್ಞಾನಿಕವಾಗಿ ನೋಡೋಣ. ಅತ್ಯಂತ ಕ್ರೂರಿಯಾದ ವ್ಯಕ್ತಿ, ಹಿಟ್ಲರ್, ಒಬ್ಬ ಸಸ್ಯಾಹಾರಿ ಮತ್ತು ಪ್ರಾಣಿಪ್ರೇಮಿ ಎಂದು ನಮಗೆ ತಿಳಿದಿದೆ. ಆದರೆ ಅವನ ಮನಸ್ಸು ಸಾತ್ವಿಕವಾಗಿರಲಿಲ್ಲ. ಅವನು ಲಕ್ಷಾಂತರ ಮಾನವರು ಎಂಬ ಜಾತಿಯ ಆ ಸಸ್ತನಿ ಪ್ರಾಣಿಗಳನ್ನು ಭೀಕರ ಕ್ರೌರ್ಯದ ಭಾವನೆಯಲ್ಲಿ ಹಿಂಸಿಸಿ ಕೊಂದುಹಾಕಿದ್ದನು. ಹಾಗಿರಲು, ಆತನು ಸಾತ್ವಿಕನೂ ಆಗಿರಲಿಲ್ಲ, ಅದೇ ರೀತಿ, ಪ್ರಾಣಿ ಸ್ನೇಹಿಯೂ ಆಗಿರಲಿಲ್ಲ ಎಂಬುವುದು ಸ್ಪಷ್ಟವಾಗುವುದು. ಸಸ್ಯಾಹಾರಿಗಳಲ್ಲಿ ಕೋಪಗೊಳ್ಳುವವರು ಇಲ್ಲವೇ? ಆಸ್ತಿಗಾಗಿ ಸ್ವಂತ ಮನೆಯವರ ಮೇಲೆ ಹಲ್ಲೆ ಮಾಡಿದವರು ಮತ್ತು ಮನೆಯವರನ್ನೇ ಕೊಲೆ ಮಾಡಿದವರು ಇರುವರು ಎಂದು ನಮಗೆ ತಿಳಿದಿದೆ. ನಿತ್ಯ ಜಗಳಕಾಯುವ ಜನರು ಹಾಗೂ ವಿವಾಹ ವಿಚ್ಛೇದಹನವನ್ನು ಮಾಡಿರುವ ಜನರನ್ನೂ ಈ ಸಸ್ಯಾಹಾರಿಗಳಲ್ಲೇ ನಮಗೆ ಸಾಕಷ್ಟು ಕಾಣಲು ಸಾಧ್ಯವಾಗುವುದು. ಇನ್ನು, ಹಿಂದಿನ ವಿಷಯ ಹೇಳುವುದಾದರೆ, ಸಾತ್ವಿಕ ಎಂದು ಹೇಳುತ್ತಾ ಸಾವಿರಾರು ವರುಷಗಳವರೆಗೆ, ಗಂಡ ಸತ್ತಲ್ಲಿ ಹೆಂಡತಿಯನ್ನು ಬಲವಂತವಾಗಿ ಹಸಿ ಹಸಿ ಯಾಗಿ ಬೆಂದು ಸಾಯಲು ಸತಿ ಸಹಗಮನ ಪದ್ದತಿಯ ಹಿನ್ನೆಲೆಯಲ್ಲಿ ಈ ಸಾತ್ವಿಕರು ಎಂದು ಹೇಳಿ ಕೊಳ್ಳುವವರು ಬಿಟ್ಟಿಲ್ಲವೇ? ಅದನ್ನು ಕಾನೂನಿನ ಮೂಲಕ ನಿಷೇಧಿಸುವ ವೇಳೆ, ಈ ಸಾತ್ವಿಕರು ಎಲ್ಲರೂ ಅದನ್ನು ಎದುರಿಸಲಿಲ್ಲವೇ? ಇದು ಯಾವ ಸಾತ್ವಿಕತೆ ಅಥವಾ ಪ್ರಾಣಿದಯೆ ಎಂದು ಅವರೇ ಹೇಳಬೇಕು ಅಷ್ಟೆ. ಹೀಗೆಲ್ಲಾ ಇರುವಾಗ ನಿಜವಾಗಿಯೂ ಇಲ್ಲೆಲ್ಲ ಸಾತ್ವಿಕ ಸ್ವಭಾವ ಎಲ್ಲಿದೆ? ಇನ್ನು, ಮಾಂಸವನ್ನು ಮಾತ್ರ ಮುಖ್ಯವಾಗಿ ತಿನ್ನುವ ದೇಶಗಳಲ್ಲೂ ಸಾತ್ವಿಕ ಸ್ವಭಾವದ ತುಂಬಾ ಜನರನ್ನು ನಾವು ಕಾಣುವೆವು. ಮಾಂಸಹಾರವು ತಾಮಸಿಕ ಮತ್ತು ಕ್ರೌರ್ಯ ಸ್ವಭಾವವನ್ನು ಬಹಳ ಸೃಷ್ಟಿಸುವುದು ಎಂಬ ನಿಗಮನವು ವೈಜ್ಞಾನಿಕವಾಗಿರುತ್ತಿದ್ದರೆ, ಆಗ ಮಾಂಸ ತಿನ್ನುವವರಲ್ಲಿ ಒಂದೋ ಎರಡೋ ಜನರು ಮಾತ್ರ ಬರೆ ಅಪಾವಾದ ಎಂಬಂತೆ ಈ ಜಗತ್ತಲ್ಲಿ ಸಾತ್ವಿಕರಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿತ್ತು, ಹೊರತು ಬಹಳ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಸಾತ್ವಿಕತೆ ಎಂಬುವುದು ಈ ಆಹಾರ ಪದ್ದತಿ ಅಲ್ಲದೆ ಬೇರೆ ಯಾವುದನ್ನೋ ಆಧರಿಸಿ ಇರುವವುಗಳು ಎಂಬುವುದು ಇಲ್ಲಿ ನಮಗೆ ಬಹಳ ಸ್ಪಷ್ಟವಾಗುವುದು. ಆದರ ಬಗ್ಗೆ ಕೊನೆಯಲ್ಲಿ ಮಾತಾಡೋಣ.

ಇನ್ನು, ಸಸ್ಯಾಹಾರದ ವಿಜ್ಞಾನವನ್ನು ನೋಡೋಣ. ಮಾನವನು ಪ್ರಾಣಿಗಳಲ್ಲಿ ಇಟ್ಟು ಒಂದು ವಿಶೇಷ ಪ್ರಾಣಿ ಆಗಿದ್ದಾನೆ. ಆದುದರಿಂದ ಒಬ್ಬ ಮಾನವಪ್ರೇಮಿಗೆ ಮಾತ್ರವೇ ಪ್ರಾಣಿಪ್ರೇಮಿಯಾಗಲು ಸಾಧ್ಯ ಎಂಬುವುದನ್ನು ನಾವು ತಿಳಿದಿರಬೇಕಾಗುವುದು. ಹಾಗಲ್ಲದಿದ್ದರೆ, ಅದು ಕೇವಲ ಹೇಳಿಕೊಳ್ಳುವಿಕೆ ಅಥವಾ ಪ್ರಾಣಿಸ್ನೇಹದ ಗೇಲಿಮಾಡುವಿಕೆ ಮಾತ್ರ ಆಗಿಬಿಡುವುದು. ಒಬ್ಬ ವ್ಯಕ್ತಿಯು ಮಾನವ ಪ್ರೇಮಿಯಾಗಿದ್ದರೆ, ಸ್ವಾಭಾವಿಕವಾಗಿ, ಆ ವ್ಯಕ್ತಿಯು ಪ್ರಾಣಿಪ್ರೇಮಿಯೂ ಆಗಿರುತ್ತಾನೆ. ದುರದೃಷ್ಟವಶಾತ್, ಮಾನವರು ಅಹಂಕಾರ, ಜಾತಿ, ಧರ್ಮ, ದೇಶ ಇತ್ಯಾದಿಗಳ ಬೇಲಿಗಳಿಂದ ಬಂಧಿತರಾಗಿದ್ದಾರೆ, ಈ ಹಲವು ರೀತಿಯ ಬೇಲಿಗಳು, ಮಾನವರನ್ನು ಮಾನವಪ್ರೇಮ ಎಂಬ ಆ ಅತ್ಯಂತ ಶ್ರೇಷ್ಠ ಗುಣವನ್ನು ಕಳೆದುಕೊಳ್ಳುವಂತೆ ಮಾಡಿದೆ. ಈಗ, ಈ ಹಲವು ಸಸ್ಯಾಹಾರದ ಕಾರಣಗಳಲ್ಲಿ “ನಾನು ಪ್ರಾಣಿಗಳನ್ನು ಹಿಂಸಿಸುವುದಿಲ್ಲ” ಎಂಬ ಮಾನವ ಹೃದಯದ ಆ ಕರುಣೆಯ ಭಾವನೆಯು ಮಾತ್ರ ನಿಜವಾದ ಸಸ್ಯಾಹಾರದ ಕಾರಣವಾಗುವುದು, ರೋಗ ರುಜಿನ ಇತ್ಯಾದಿಗಳು ಜಗತ್ತಿನ ಎಲ್ಲಾ ಜನರಿಗೂ ಬರುತ್ತಾ ಇರುತ್ತವೆ. ರೋಗಗಳು ಒಬ್ಬ ಆ ವ್ಯಕ್ತಿಗೆ ಯಾಕಾಗಿ ಬರುತ್ತವೆ ಆದರೆ ಹತ್ತಿರದ ಇನ್ನೊಬ್ಬಗೆ ಯಾಕೆ ಬರಲಿಲ್ಲ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಕೂಡಾ ಉತ್ತರವಿಲ್ಲದೆ ಕೈಚೆಲ್ಲಿದ್ದಾರೆ. ಅದೇನೇ ಇರಲಿ, ಈಗ ‘ನನ್ನ ಜಾತಿಯು ನನ್ನ ಸಸ್ಯಾಹಾರಕ್ಕೆ ಕಾರಣ’ ಎಂದರೆ, ಅಲ್ಲಿ, ಆ ಕಾರಣವು ಹೃದಯದ ಪ್ರೇರಣೆಯಿಂದ ಹುಟ್ಟಿಕೊಳ್ಳದ ಕಾರಣ, ಆತನು ಕದ್ದು ಮಾಂಸಹಾರವನ್ನು ತಿನ್ನುವ ಸಾಧ್ಯತೆ ಇದೆ. ಹಾಗೆ ಮಾಡುವವರನ್ನು ನಾವು ಸಾಕಷ್ಟು ಸಂಖ್ಯೆಯಲ್ಲಿ ಕಾಣುವೆವು. ಒಟ್ಟಲ್ಲಿ, ಈ ಪ್ರಾಣಿಪ್ರೇಮವನ್ನು ಮಾನವರಲ್ಲಿಯವರೆಗೆ ತಂದರೆ ಅಥವಾ ಮಾನವ ಪ್ರಾಣಿಗಳನ್ನೂ ಪ್ರಾಣಿಪ್ರೇಮದೊಂದಿಗೆ ಸೇರಿಸಿಕೊಂಡರೆ ಮಾತ್ರ ಮಾನವರಿಗೆ ಸಸ್ಯಾಹಾರದಿಂದ ಒಂದು ದೊಡ್ಡ ಲಾಭವಾಗುವುದು ಎಂಬುವುದು ಇಲ್ಲಿ ಸ್ಪಷ್ಟವಾಗುವುದು. ಈ ಪ್ರತ್ಯೇಕ ರೀತಿಯ ಪ್ರಾಣಿಸ್ನೇಹವು ಮಾತ್ರ ಶಾಂತಿ ನೆಮ್ಮದಿಯ ಜೀವನವನ್ನು ಗಿಟ್ಟಿಸಿಕೊಳ್ಳಲು ಮಾನವರಿಗೆ ಸಹಾಯಕವಾಗುವುದು ಅಷ್ಟೆ. ದುರದೃಷ್ಟವಶಾತ್, ‘ನೀವು ಕೀಳು ಜಾತಿಯವರು’ ಎಂದು ಇತರ ಮಾನವರನ್ನು ಹೀನವಾಗಿ ಕಾಣುವಾಗ, ಸಸ್ಯಾಹಾರದಿಂದ ಆಗುವ ಆ ಏಕೈಕ ಲಾಭವು ಕೂಡಾ ಪೂರ್ತಿಯಾಗಿ ಇಲ್ಲವಾಗಿಬಿಡುವುದು! ಇದೇ ರೀತಿ, ಸಸ್ಯಾಹಾರಿಗಳ ಪಂಗಡ ಕಟ್ಟಿ ಆ ಪಂಗಡದ ಬಗ್ಗೆ ವಾದ ಮಾಡುವುದು ಮತ್ತು ಆ ನಿಟ್ಟಿನಲ್ಲಿ ಇತರರನ್ನು ಕೀಳಾಗಿ ಕಾಣುವುದು ಕೂಡ ಸಸ್ಯಾಹಾರದಿಂದಾಗುವ ಆ ಲಾಭವನ್ನು ಕಳಕೊಳ್ಳುವಂತೆ ಮಾಡುವುದು. ಒಟ್ಟಲ್ಲಿ, ಮಾನವಪ್ರೇಮಿಗೆ ಮಾತ್ರವೇ ತನ್ನ ಮನಸ್ಸಲ್ಲಿ, ತನ್ನ ಮನೆಯಲ್ಲಿ, ತನ್ನ ಸಮಾಜದಲ್ಲಿ ಎಂದು ಎಲ್ಲೆಡೆಯಲ್ಲೂ ಶಾಂತಿಯನ್ನು ಸೃಷ್ಟಿಸಲು ಸಾಧ್ಯವಾಗುವುದು ಎಂಬುವುದನ್ನು ಮರೆಯಬಾರದು. ಮಾನವರನ್ನು ಹೊರತಾದ ಬರೇ ಪ್ರಾಣಿಪ್ರೇಮಿಗಳಿಗೆ ಇವನ್ನು ಪಡೆಯಲು ಸಾದ್ಯವಾಗಲಾರದು. ಹೀಗಿರಲು, ಮನುಷ್ಯಪ್ರಾಣಿಯನ್ನು ಒಳಗೊಂಡಂತೆ ಇರುವ ಆ ಸಂಪೂರ್ಣ ಪ್ರಾಣಿಪ್ರೇಮವನ್ನು ಬೆಳೆಸಲು ಈ ಮಾನವರ ಪ್ರಾಣಿಪ್ರೇಮ ಅಥವಾ ಸಸ್ಯಾಹಾರ ಪದ್ಧತಿಯು ಸಹಾಯ ಮಾಡಿದರೆ, ಆಗ ಮಾತ್ರ ಸಸ್ಯಾಹಾರವು ತನ್ನ ಗುರಿಯನ್ನು ಸಾಧಿಸಿದೆ ಎಂದು ಹೇಳಬಹುದಷ್ಟೆ. ಆಗ ಮಾತ್ರ ಆ ಆಹಾರ ಪದ್ಧತಿಯು ಗೌರವಕ್ಕೆ ಪಾತ್ರವಾಗುವುದು. ಇನ್ನು, ‘ಶುದ್ಧ’ ಎಂಬ ಶಬ್ಧವನ್ನು ಈ ಸಸ್ಯಾಹಾರಕ್ಕೆ ನಂಟು ಹಾಕಿ ಹೇಳುವುದನ್ನೂ ನಾವು ಕಾಣುವೆವು. ದಯವಿಟ್ಟು ಹಾಗೆ ಹೇಳುತ್ತಾ ಬರುವುದು ಬೇಡ, ಯಾಕೆಂದರೆ ಅತ್ಯಂತ ಶುದ್ಧದ ಮಹಾ ಯಾಗಗಳಲ್ಲೂ ಕುದುರೆ ಇತ್ಯಾದಿ ಪ್ರಾಣಿಗಳ ಮಾಂಸವನ್ನು ಹವಿಸ್ಸು ಆಗಿ ದೇವತೆಗಳಿಗೆ ಅರ್ಪಿಸುತ್ತಿದ್ದರು, ಮತ್ತು ಪ್ರಸಾದವಾಗಿ ಎಲ್ಲರೂ ಅವನ್ನು ಸೇವಿಸುತ್ತಿದ್ದರು. ಆದುದರಿಂದ, ಸಸ್ಯಾಹಾರವನ್ನು ಮನಸ್ಸಿನ ಶುದ್ಧೀಕರಣದ ಅಭ್ಯಾಸವೆಂದು ಪರಿಗಣಿಸಿದರೆ ಮಾತ್ರ ಅದು ನಮಗೆ ದೊಡ್ಡ ಲಾಭವನ್ನು ತಂದುಕೊಡುತ್ತದೆ ಎಂದು ನಮಗೆ ಹೇಳಬಹುದಷ್ಟೆ. ಈ ರೀತಿ ಆದಲ್ಲಿ ಅದು ಶ್ರೇಷ್ಠ ವ್ಯಕ್ತಿತ್ವಗಳನ್ನು ಸಮಾಜದಲ್ಲಿ ಸೃಷ್ಟಿಸಲು ಸಮರ್ಥವಾಗುವುದು. ಮಾತ್ರವಲ್ಲ, ಆ ಶ್ರೇಷ್ಠ ವ್ಯಕ್ತಿತ್ವವು ಒಬ್ಬ ವ್ಯಕ್ತಿಯನ್ನು, ಅವನ ಕುಟುಂಬವನ್ನು ಮತ್ತು ಅವನ ಸುತ್ತಲಿನ ಪರಿಸರವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂಬುವುದನ್ನೂ ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಸಸ್ಯಾಹಾರಿಗಳಲ್ಲದ ಆದರೆ ಮಹಾ ಮನಸ್ಕತೆ ಇರುವ ಮಹಾತ್ಮರುಗಳನ್ನು ಕೂಡಾ ನಮಗೆ ಈ ಭೂಮಿಯಲ್ಲಿ ಕಾಣಲು ಸಾಧ್ಯವಾಗಿದೆ. ಈ ಭೂಮಿಯಲ್ಲಿ ಮಾಂಸಹಾರವನ್ನು ಸೇವಿಸುತ್ತಾ ಜೀವಿಸುತ್ತಿದ್ದ ಹಾಗೂ ಜೀವಿಸುತ್ತಿರುವ ಸಾತ್ವಿಕ ಸನ್ಯಾಸಿಗಳನ್ನು ಮತ್ತು ಮಾನವ ಪ್ರೇಮಿಗಳನ್ನೂ ಈ ಭೂಮಿಯ ಹಲವು ಧರ್ಮಗಳಲ್ಲಿ ಅಥವಾ ಹಲವು ಸಮಾಜಗಳಲ್ಲಿ ಕೊನೆಯ ಪಕ್ಷ ಒಂದು ನಿಶ್ಚಿತ ಸಂಖ್ಯೆಯಲ್ಲಿ ಆದರೂ ನಮಗೆ ಕಾಣಲು ಸಾಧ್ಯವಾಗುವುದು. ಸಾತ್ವಿಕ ಹೃದಯಗಳಲ್ಲೂ ಹಲವು ಹಂತಗಳಿವೆ. ಕೆಳಗಿನ ಹಂತದ ಸಾತ್ವಿಕ ಸ್ವಭಾವವು ಯಾವುದಾದರೂ “ನಾವು” ಬೇಲಿಯೊಳಗಿನ ಸಾತ್ವಿಕ ಸ್ವಭಾವವಾಗಿರುವುದು. ಆದರೆ ಮಹಾತ್ಮರ ಸಾತ್ವಿಕ ಸ್ವಭಾವವು ಬೇಲಿರಹಿತವಾಗಿದ್ದು ಅದು ಅತ್ಯಂತ ಮೇಲ್ಮಟ್ಟದ್ದಾಗಿರುವುದು. ಆದುದರಿಂದ ನಿಜವಾದ ಸಾತ್ವಿಕ ಹೃದಯ ಸಿಗಬೇಕಾದರೆ, ಅದು ಆತ್ಮಪರಿಶೋಧನೆ ಮತ್ತು ಸತ್ಯಚಿಂತನೆಗಳಿಂದ ಮಾತ್ರ ಸಾಧ್ಯವಾಗುವುದು ಎಂದು ತಿಳಿಯಬೇಕು. ಆತ್ಮಪರಿಶೋಧನೆ ಇಲ್ಲದ ಸಸ್ಯಾಹಾರವು, ಹಿಟ್ಲರ್ ನ ತರದ ಆ ಅತ್ಯಂತ ಕೆಳಹಂತದವರೆಗೂ ಮಾನವರನ್ನು ಬೇಲಿ ಭ್ರಾಂತಿಯ ಮೂಲಕ ಕೊಂಡು ಹೋಗಬಹುದು ಎಂಬುವುದನ್ನೂ ಮರೆಯಬಾರದು. ಒಟ್ಟಲ್ಲಿ, ಸಸ್ಯಾಹಾರವು ಒಂದು ಜಾತಿ ಅಥವಾ ಪಂಥವಲ್ಲ, ಆದರೆ ಅದು ಮಾನವನ ಹೃದಯದ ಭಾವನೆಗಳಿಗೆ ಸಂಬಂಧಪಟ್ಟ ವಿಷಯವಾಗಿದೆ ಎಂಬುವುದು ಮುಖ್ಯವಾಗಿದೆ. ಆದ್ದರಿಂದ, ಸಸ್ಯಾಹಾರದ ಭಾವನೆಗಳು ಅಥವಾ ಪ್ರಾಣಿಗಳ ಬಗ್ಗೆ ಇರುವ ಸಹಾನುಭೂತಿಯು ಮಾನವೀಯತೆಯ ಭಾವನೆಯೊಂದಿಗೆ ಸಂಯೋಜಿಸಲ್ಪಟ್ಟರೆ ಮಾತ್ರ ಪೂರ್ಣಗೊಳ್ಳುತ್ತದೆ ಎಂದು ತಿಳಿಯಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮಾನವೀಯತೆಯ ಭಾವನೆಯು ಸಸ್ಯಾಹಾರದಿಂದ ಪಡೆಯಬಹುದಾದ ಆ ಅತ್ಯುನ್ನತ ಭಾವನೆಯಾಗಿದೆ. ಆದ್ದರಿಂದ, ಜನರು ತಮ್ಮ ವ್ಯಕ್ತಿತ್ವದಿಂದ ಕ್ರೌರ್ಯವನ್ನು ತಪ್ಪಿಸಿ ಮತ್ತು ಆ ಸ್ಥಾನದಲ್ಲಿ ಶುದ್ಧಪ್ರೀತಿಯನ್ನು ಪ್ರತಿಷ್ಠಿಸುವುದಾದರೆ, ಸಸ್ಯಾಹಾರಿಯಾಗಿಯೋ ಅಥವಾ ಸಸ್ಯಾಹಾರ ಅಲ್ಲದೆಯೋ, ಆ ‘ಶ್ರೇಷ್ಠ ಸಸ್ಯಾಹಾರಿ ವ್ಯಕ್ತಿತ್ವ’ ಅಥವಾ ‘ಸಾತ್ವಿಕ ವ್ಯಕ್ತಿತ್ವ’ ಆಗಿ ತಮ್ಮನ್ನು ತಾವು ಪರಿವರ್ತಿಸಿಕೊಳ್ಳಲು ಸಾಧ್ಯವಾಗುವುದು, ಮತ್ತು ಜೀವನದಲ್ಲಿ ತಮಗೆ, ತಮ್ಮ ಕುಟುಂಬಗಳಿಗೆ ಹಾಗೂ ಸಮಾಜಗಳಿಗೆ ನೆಮ್ಮದಿ, ಆನಂದ ಕೊಡುವ, ಮಹಾ ಹೃದಯವೆಂಬ ಆ ದಿವ್ಯ ಔಷಧಿಯ ಲಾಭವನ್ನು ಆ ರೀತಿಯಲ್ಲಿ ಸ್ವತಃ ಬದಲಾಗುವುದರಿಂದ ಪಡೆದುಕೊಳ್ಳಬಹುದು ಎಂಬ ಸತ್ಯವನ್ನು ಇಲ್ಲಿ ನೆನಪಿಸುವೆನು.

2. ಸಂಕಲ್ಪ ಶಾಸ್ತ್ರದ ತಪ್ಪುಗಳು.

ಸೂಕ್ಷ್ಮದಲ್ಲಿ ಮನೋಸಂಕಲ್ಪ ಎಂಬುವುದು ಮುಖ್ಯ ಪಾತ್ರವಹಿಸುತ್ತದೆ ಮತ್ತು ಅದು ಸೂಕ್ಷ್ಮದ ವಿಜ್ಞಾನವಾಗಿರುತ್ತದೆ. ಬಲಾಚಾರ ಮತ್ತು ಎಡಾಚಾರ ಎರಡರಲ್ಲೂ ಇದನ್ನು ಉಪಯೋಗಿಸುತ್ತಾರೆ. ಎಲ್ಲಾ ಧರ್ಮಗಳಲ್ಲೂ ಇವೆ.

ಮಾನವರ ಕಡೆಯಿಂದ ಕೊಡುವ ಅರ್ಥ ಅಥವಾ ಸಂಕಲ್ಪವು ಆ ದೇವರ ಸಂಕಲ್ಪವಾಗುವುದು. ಉದ- ಸಾತ್ವಿಕ ತಾಮಸಿಕ ಇತ್ಯಾದಿ. ನಾವು ದೇವರನ್ನು ಸಾತ್ವಿಕ ಎಂದರೆ ನಮ್ಮ ಮನಸ್ಸು ಕೂಡಾ ಸಾತ್ವಿಕ ಆಗುವುದು, ಕ್ರೌರ್ಯದ ಹಿನ್ನೆಲೆಯಲ್ಲಿ ನೋಡಿದರೆ ಮಾನವ ಮನಸ್ಸು ಕ್ರೌರ್ಯವನ್ನು ಹೆಚ್ಚು ಹೆಚ್ಚು ಪಡೆಯುವುದು. ಅರ್ಚಕರು ಬೇಕಾಗಿಲ್ಲ.

ಈಗ ದೇವರ ಪವಿತ್ರ ಸಂಕಲ್ಪವನ್ನು ‘ತಮಗರಿವಿಲ್ಲದೆಯೇ’ ಹೆಗೆಲ್ಲಾ ವಿಕೃತವಾಗಿ ತೆಗೆದಿರುವರು.. ದೇವರು ಸಂಕಲ್ಪದಲ್ಲಿ ಅನಿವಾರ್ಯವಾಗಿ ದೈವತ್ವ ಸತ್ಯ, ಪ್ರೀತಿ ನೀತಿ ಇರಲೇಬೇಕು. ಬರೇ ಸೂಕ್ಷ್ಮ ಶಕ್ತಿಯಲ್ಲ. ಆದರೆ ದೇವರ ಹೆಸರು ಹೇಳಿಯೇ ಹೊಡೆದು ಬಡಿದು ಕೊಂದು ಹಾಕಿರುವುದು ಹಿಂದಿನಿಂದ ಇಂದಿನವರೆಗೂ ನಡೆದು ಬಂದಿರುವುದು. ಇಲ್ಲಿ ಕ್ರೌರ್ಯ ವನ್ನು ದೇವರ ಸಾತ್ವಿಕತೆಗೆ {ದೈವತ್ವದ ನಾಶಕ್ಕಾಗಿ} ಸುಲಭದಲ್ಲಿ ಆ ಪ್ರಾಚೀನ ಸೂಕ್ಷ್ಮ ವಾಮಾಚಾರವು ಅಂಟಿಸುತ್ತದೆ. ಯುದ್ಧ, ಪವಿತ್ರ ಯುದ್ಧ, ಧರ್ಮಯುದ್ಧ, ಕೋಮು ಗಲಭೆ ಇತ್ಯಾದಿ ದೇವರ ಹೆಸರನ್ನು ಉಪಯೋಗಿಸಿವೆ. ದೇವರ ಸಂಕಲ್ಪವು ಹಿಂಸೆಯ ಸಂಕಲ್ಪವಾಗಿ ಆಯಾ ಧರ್ಮಗಳಿಂದಲೇ ಬದಲಾಯಿಸುತ್ತಾ ಬಂದಿವೆ. ದೇವರ ಹೆಸರನ್ನು ಗಟ್ಟಿಯಾಗಿ ಉಚ್ಚರಿಸಿದಾಗ ಆಕ್ರಮಣದ ರಣಕಹಳೆಯಂತೆ ಕೇಳಿಸಬಹುದು.

ಪ್ರಾ ಸೂ ವಾ ಕ್ಕೆ ದೈವತ್ವದ ನಾಶ ಮಾತ್ರ ಬೇಕು. ರೂಪ ಇರುವ ಇಲ್ಲದ ದೇವರುಗಳ ಗೊಡವೆ ಇಲ್ಲ ಅವಕ್ಕೆ.

ಧರ್ಮ ಶಾಂತಿಗಾಗಿ, ಅಂದರೆ ಧರ್ಮ ಎಂದ ಕೂಡಲೇ ಅಲ್ಲೂ ಶಾಂತಿ ಅನುಭವ ಆಗಬೇಕು. ಆದರೆ ಇತರ ಧರ್ಮಗಳ ಹಸರು ಭಯವನ್ನು ತರುವುದು. ಕಾರಣ ಅದೇ ಆಗಿದೆ. ಇನ್ನು ಆಧ್ಯಾತ್ಮ ಕೂಡಾ ಇದೇ ರೀತಿ. ಅಲ್ಲಿ ಮೋಕ್ಷ ನಮ್ಮ ಧರ್ಮದಲ್ಲಿ ಮಾತ್ರ ಸಾಧ್ಯ, ಎಂದು ಇತರ ಧರ್ಮದವರನ್ನು ಭಯಾನಕ ರೀತಿಯೂ ಸೇರಿ ಮತಾಂತರ ಮಾಡುವುದು, ಲಕ್ಷಗಟ್ಟಳೆ ವಿಗ್ರಹಗಳನ್ನು ಪುಡಿಮಾಡುವುದರೊಂದಿಗೆ ಹತ್ಯೆ ಮಾಡುವುದು ಇತ್ಯಾದಿ ಸೇರಿವೆ. ಧರ್ಮರಕ್ಷಣೆ ಎಂದರೆ ಹೊಡಿಬಡಿ ಧರ್ಮ ರಕ್ಷಣೆಯೇ?

ಇನ್ನು ನೈತಿಕತೆಯನ್ನು ಆಯಾ ಧರ್ಮ ಪಂಥಗಳಿಂದಲೇ ವಿಕೃತ ಮಾಡುವುದು ಅವುಗಳ ಇನ್ನೊಂದು ರೀತಿ. ಅಂದರೆ ಧಾರ್ಮಿಕ ನಂಬಿಕೆ ಆಚಾರ ಸಂಕಲ್ಪಗಳನ್ನೇ ಅನೈತಿಕ ರೀತಿಯಲ್ಲಿ ಮಾಡಿಬಿಡುವುದು. 1. ವಸುದೈವ ಕುಟುಂಬಕಮ್ ಎಂಬುವುದನ್ನು ವರ್ಣ ಜಾತಿಯಾಗಿ ತಗ್ಗಿಸಿಬಿಡುವುದು. 2. ಶೂದ್ರ ಶೋಷಣೆ, ವಿದ್ಯೆ ಇಲ್ಲ ಇತ್ಯಾದಿ. {ಉತ್ತಮ ಸ್ವಭಾವ ಪಡೆದವರೇ ಮೇಲು ಜಾತಿಯವರು}. ಸ್ತ್ರೀ ಶೋಷಣೆ, ಯುದ್ಧದಲ್ಲಿ ಸೆರೆಯಾಳು ಆಗಿ ಸಿಕ್ಕಿರುವ ಸ್ತ್ರೀಯರನ್ನು ಮಾರುವುದು, ಸತಿ ಸಹಗಮನ ಪದ್ಧತಿ, ದೇವದಾಸಿ ಸಂಪ್ರದಾಯ. ಇನ್ನು, ದೇವದಾಸಿ ಸಂಪ್ರದಾಯ ಮತ್ತು ಇದರ ಭವಿಷ್ಯದ ಪ್ರತ್ಯೇಕ ಭಯಾನಕ ಪ್ರತ್ಯಾಘಾತ. ಒಟ್ಟಲ್ಲಿ “ಧರ್ಮ, ದೇವರ ಸಂಕಲ್ಪಗಳಲ್ಲಿ ಮಾನವರು ಮಾಡಿರುವ ತಪ್ಪು” ಗಳು ಹಲವು ಹಲವು, ಮಾತ್ರವಲ್ಲ, ಭವಿಷ್ಯದಲ್ಲಿ ಅವೆಲ್ಲವನ್ನೂ ಆ ಸೂಕ್ಷ್ಮದ ರಹಸ್ಯ ಪ್ರಾಚೀನ ವಾಮಾಚಾರವು ಹಲವು ಹಲವು ವಿಕೃತ ರೀತಿಯಾಗಿ ಬದಲಿಸಿ, ಸಮಾಜಕ್ಕೆ ತಿರುಗಿ ತಂದು ಬಡಿಯಲಿರುವುದು!! ಆ ಪ್ರಹಾರವನ್ನು ತಪ್ಪಿಸಲು ಜಗತ್ತಿನ ಯಾವ ಆಚಾರ ನಂಬಿಕೆಗಳಿಂದಲೂ ಅಂದು ಸಾಧ್ಯವಾಗುವುದಿಲ್ಲ. ಆದುದರಿಂದ, ಈ ಆಪತ್ತನ್ನು ಮುಂದೆ ನೋಡಿಯೇ, ದಿವ್ಯಜ್ಞಾನ ಸನ್ನಿಧಿಯು ಒಂದು ರೀತಿಯ ಪರಿಹಾರ ರೂಪದಲ್ಲಿ ಹುಟ್ಟಿಕೊಂಡಿರುವುದು

 _____________________________

ವಿಗ್ರಹಾರಾಧನೆ

ಈ ಪರ ವಾದಗಳಿಂದ ಮುಕ್ತವಾಗಳು ಈ ವಿಷಯವನ್ನು ಚುಟುಕಾಗಿ ಸತ್ಯಚಿಂತನೆಗೆ ಗುರಿಪಡಿಸೋಣ.

ವಿಗ್ರಹ ಅಥವಾ ರೂಪಕೆತ್ತನೆ ಎಂಬುವುದು ಕಾಡು ಜನಾಂಗದಿಂದಲೇ ಮಾನವರಿಗೆ ಹಾದು ಬಂದ ಒಂದು ರೀತಿಯ ಕೆತ್ತನೆ ಕಲೆಯಾಗಿರುವುದು. ಇಂದು ಸರ್ವ ದೇಶಗಳಲ್ಲೂ ಈ ಕಲೆಯು ಬಹಳವಾಗಿ ಮುಂದುವರಿದಿದೆ ಮತ್ತು ಅತ್ಯಂತ ನೈಪುಣ್ಯದ ಕಲೆಯಾಗಿ ಕಾಣಿಸುವುದು. ಇದು ವಿಗ್ರಹದ ಕಲೆಯ ವಿಚಾರವಾಯಿತು. ಇನ್ನು, ನಾವು ವಿಗ್ರಹದ ಆರಾಧನೆಯ ವಿಚಾರವಾಗಿ ಮಾತಾಡೋಣ. ಇಲ್ಲಿಯೂ ಕೂಡಾ, ಕಾಡು ಜನಾಂಗದಿಂದಲೇ ವಿಗ್ರಹ ಆರಾಧನೆಯೂ ಆರಂಭವಾಗಿತ್ತೆಂಬುವುದನ್ನು ನಾವು ಕಾಣುವೆವು.

ಎರಡು ರೀತಿಯ ವಿಗ್ರಹಾರಾಧನೆಗಳು ಇವೆ. ಆ ಎರಡು ರೀತಿಗಳು ಯಾವುವೆಂದರೆ, ಅವುಗಳಲ್ಲಿ ಒಂದನೆಯದ್ದು, ಯಾವುದೋ ಒಂದು ಸೂಕ್ಷ್ಮಶಕ್ತಿ ಅಥವಾ ಒಂದು ದೇವತೆಯನ್ನು ಒಂದು ವಿಗ್ರಹದಲ್ಲಿ ಆರಾಧಿಸುವ ರೀತಿ ಆಗಿದೆ, ಮತ್ತು ಇನ್ನೊಂದು, ಸೃಷ್ಟಿಕರ್ತ ದೇವರನ್ನು ವಿಗ್ರಹದಲ್ಲಿ ಆರಾಧಿಸುವ ರೀತಿ ಆಗಿದೆ. ಅಂದರೆ, ಅವು ಎರಡು ವ್ಯತ್ಯಸ್ತ ರೀತಿಗಳು ಎಂದು ಅರ್ಥ.

ಎಲ್ಲಿಯಾದರೂ ಸೃಷ್ಟಿಕರ್ತನಿಗೆ, ಮಾನವ ಕುಲದ ಆದಿಯಿಂದಲೇ ಆರಂಭವಾಗಿರುವ, ಈ ಶಕ್ತಿಗಳ ಆರಾಧನೆ ಮತ್ತು ಆನಂತರ ಬಂದ ಸಾವಿರಾರು ದೇವತೆಗಳ ಆರಾಧನೆಯು ಸರಿಯಲ್ಲ ಅಥವಾ ಅವುಗಳ ವಿಗ್ರಹಾರಾಧನೆ ಸರಿಯಲ್ಲ ಎಂದೆಲ್ಲಾ ಕಾಣಿಸಿರುತ್ತಿದ್ದರೆ, ಆ ಸೃಷ್ಟಿಕರ್ತನು ಲಕ್ಷಗಟ್ಟಲೆ ವರುಷಗಳ ಹಿಂದೆಯೇ ಬಂದು ಈ ಭೂಮಿಯ ಎಲ್ಲಾ ಶಕ್ತಿ ಹಾಗೂ ದೇವತೆಗಳ ಆರಾಧನೆಗಳನ್ನು ಇಲ್ಲವಾಗಿಸಲು ಮತ್ತು ಅವುಗಳ ವಿಗ್ರಹಾರಾಧನೆಯನ್ನು ಇಲ್ಲವಾಗಿಸಲು ಭೂಮಿಯಲ್ಲಿ ಜನರನ್ನು ನಿಯಮಿಸುತ್ತಿದ್ದನು, ಆದರೆ, ಅಷ್ಟು ಲಕ್ಷ ಗಟ್ಟಲೆ ವರುಷಗಳು ಸೃಷ್ಟಿಕರ್ತ ಬರಲೇ ಇಲ್ಲ.

ಇನ್ನು, ಸೃಷ್ಟಿಕರ್ತ ದೇವಸಂಕಲ್ಪವು ಜಗತ್ತಿನ ಹೆಚ್ಚಿನ ಧರ್ಮಗಳಿಂದಲೂ ಆರಾಧಿಸಲ್ಪಡುವುದು, ಹಾಗಿರುವಾಗ, ನಾವು ಇಲ್ಲಿಯೇ ವಿಗ್ರಹರಾಧನೆಯ ಕುರಿತಂತೆ, ಇನ್ನೂ ಸ್ವಲ್ಪ ಸತ್ಯಚಿಂತನೆ ಮಾಡಬೇಕಾಗಿರುವುದು. ಶಕ್ತಿಗಳು ಮತ್ತು ದೇವತೆಗಳು, ಅವು ಸರ್ವವ್ಯಾಪಿ ಅಲ್ಲದುದರಿಂದ, ಅವುಗಳನ್ನು ವಿಗ್ರಹಗಳಲ್ಲಿ ಸಂಕಲ್ಪಿಸಬಹುದು. ಮಾತ್ರವಲ್ಲ, ಅವು ಸೃಷ್ಟಿಕರ್ತನನ್ನು ಪ್ರತಿನಿಧೀಕರಿಸದ ಕಾರಣ, ಆ ರೀತಿಯ ಆರಾಧನೆಗಳು ಸರಿಯೋ ತಪ್ಪೋ ಎಂಬಲ್ಲಿ ಬರುವುದೇ ಇಲ್ಲ. ಅಲ್ಲಿ ಪ್ರಶ್ನೆ ಏನಾದರೂ ಬರುವುದಾದರೆ, ಮೊದಲು ಹೇಳಿರುವಂತೆ, ವಿಗ್ರಹರಾಧನೆ ತಪ್ಪು ಎಂದಾದರೆ, ಸೃಷ್ಟಿಕರ್ತನು ಯಾಕೆ ಲಕ್ಷಗಟ್ಟಲೆ ವರುಷಗಳ ಮೊದಲೇ ಬಂದು ವಿಗ್ರಹರಾಧನೆಯನ್ನು ನಿಲ್ಲಿಸಲಿಲ್ಲ, ಯಾಕೆ ಮೊನ್ನೆ ಮೊನ್ನೆ ಕೆಲವು ಸಾವಿರ ವರುಷಗಳ ಹಿಂದಿನಿಂದ ಮಾತ್ರ ಈ ಕೆಲಸವನ್ನು ಆರಂಭಿಸಿರುವುದು, ಎಂಬ ಪ್ರಶ್ನೆ ಮಾತ್ರ ಬರುವುದಷ್ಟೆ. ವಿಗ್ರಹಾರಾಧನೆಯಲ್ಲಿ, ನಿಜವಾಗಿಯೂ ಸರಿಯೋ ತಪ್ಪೋ ಎಂಬ ಪ್ರಶ್ನೆ ಬರುವುದು ಸೃಷ್ಟಿಕರ್ತ ದೇವಸಂಕಲ್ಪವನ್ನು ವಿಗ್ರಹದಲ್ಲಿ ಆರಾಧಿಸುವಾಗ ಮಾತ್ರ ಆಗಿದೆ, ದೇವತೆಗಳನ್ನು ಅಥವಾ ಶಕ್ತಿಗಳನ್ನು ಆರಾಧಿಸುವಲ್ಲಿ ಅಲ್ಲ. ಈಗ ಅದರ ಬಗ್ಗೆ ಸ್ವಲ್ಪ ತಿಳಿಯೋಣ.

ಸೃಷ್ಟಿಕರ್ತ ದೇವರು ಇದ್ದರೂ ಆಥವಾ ಇಲ್ಲದಿದ್ದರೂ, ಸೃಷ್ಟಿಕರ್ತನೆಂಬ ಸಂಕಲ್ಪವು ಸರ್ವವ್ಯಾಪಿ ಆದ ಕಾರಣ, ಅಲ್ಲಿ ಆ ಸಂಕಲ್ಪಕ್ಕೆ ವಿಗ್ರಹವನ್ನು ಬಳಸಬಹುದೋ ಇಲ್ಲವೋ ಎಂಬ ಪ್ರಶ್ನೆ ಖಂಡಿತ ಬರುವುದು. ಸರ್ವವ್ಯಾಪಿ ಅಲ್ಲದ ಯಾವುದೇ ಶಕ್ತಿಗಳನ್ನು ನಮಗೆ ಒಂದು ವಿಗ್ರಹದೊಳಗೆ ಸಂಕಲ್ಪಿಸಬಹುದು, ಆದರೆ ಸರ್ವವ್ಯಾಪಿ ಎಂದ ಕೂಡಲೇ ಅದು ಸಾಧ್ಯವಾಗುವುದಿಲ್ಲ. ಆಕಾಶವನ್ನು ಹೇಗೆ ಒಂದು ಗೂಡಲ್ಲಿ ಹಾಕಲು ಸಾಧ್ಯವಿಲ್ಲವೋ ಅದೇ ತರ ಇಲ್ಲಿಯೂ ಸರ್ವವ್ಯಾಪಿ ದೇವರಲ್ಲೂ ಅದು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲಿ ಭಕ್ತಿಯೋಗಿಗಳ ರೀತಿ ಒಂದು ಬೇರೆ ಆಗಿರುವುದು. ಅವರ ಮಾತು ಹೇಗಿದೆ ಎಂದು ನೋಡಿ. ಭಕ್ತಿಯೋಗಿಗಳಲ್ಲಿ ದೇವರೊಂದಿಗೆ ಸಂಭಾಷಣೆ ಎಂಬುವುದು ಹೆಚ್ಚು ಮುಖ್ಯವಾಗಿರುವುದು. ದೇವರೊಂದಿಗೆ ಮಾತನಾಡುತ್ತಾ ಅವರು ದೇವರೊಂದಿಗೆ ಬೇಡಿಕೊಳ್ಳುವುದು ಏನೆಂದರೆ, ದೇವರೇ, ನೀನು ಸರ್ವವ್ಯಾಪಿಯಾದರೂ, ನೀನು ನಮ್ಮೊಂದಿಗೆ ಮಾತಾಡುತ್ತಿಯಲ್ಲ, ಇನ್ನೂ ಕೆಲವರು ನಿನ್ನನ್ನು ಕಾಣದೆ ಇದ್ದರೂ ನಿನ್ನೊಂದಿಗೆ ಅವರ ಕಡೆಯಿಂದ ಆದರೂ ಮಾತನಾಡುತ್ತಾ ಇರುತ್ತಾರೆ. ಹಾಗಿರುವಾಗ, ದೇವರೇ, ನಿನ್ನ ಮಾತನ್ನು ಒಮ್ಮೆ ಮೇಲೆ ಇನ್ನೊಮ್ಮೆ ಕೆಳಗೆ ಮತೊಮ್ಮೆ ಎಡದಲ್ಲಿ ಮಗದೊಮ್ಮೆ ಬಲದಲ್ಲಿ ಕೇಳುವುದಕ್ಕಿಂತ ಒಂದೇ ಕಡೆ ಮಾತಾಡಲು ನಾವು ವಿಗ್ರಹವನ್ನು ತೋರಿಸುತ್ತೇವೆ, ನಾವು ಆ ವಿಗ್ರಹದಲ್ಲೇ ಮಾತಾಡುತ್ತೇವೆ ಮತ್ತು ನೀನು ಅಲ್ಲಿಂದಲೇ ಮಾತಾಡಿ ದಯವಿಟ್ಟು ಸಹಕರಿಸು ಎಂದಾಗಿದೆ. ಇದು ಸರ್ವವ್ಯಾಪಿಯಾದ ಸೃಷ್ಟಿಕರ್ತದೇವರೊಂದಿಗೆ ಮಾತಾಡುವುದಕ್ಕೆ ಸುಲಭದ ದಾರಿ ಎಂದು ಅವರು ಹೇಳುವರು. ಇಲ್ಲಿ, ಸೃಷ್ಟಿಕರ್ತನನ್ನು ಚಿಕ್ಕದು ಮಾಡಿ ವಿಗ್ರಹದೊಳಗೆ ಇರಿಸುವ ಸಂಕಲ್ಪ ಇಲ್ಲ ಎಂದು ಪ್ರತ್ಯೇಕ ತಿಳಿಯಬೇಕು. ಆದುದರಿಂದ ಭಕ್ತಿಯೋಗಿಗಳ ಪ್ರಕಾರ ಸೃಷ್ಟಿಕರ್ತನ ಈ ರೀತಿಯ ವಿಗ್ರಹಾರಾಧನೆಯು ಯಾವ ಧರ್ಮದವರಿಗೆ ಬೇಕಾದರೂ ಸೌಕರ್ಯಕ್ಕೆ ಬೇಕಾಗಿ ಮಾಡಿಕೊಳ್ಳಬಹುದು ಎಂದಾಗುವುದು. ಆದರೆ ಅದೇ ಸೃಷ್ಟಿಕರ್ತನಿಗೆ ಇಷ್ಟೆಲ್ಲಾ ಪೂಜೆ ಸಲ್ಲಿಸಿಲೇ ಬೇಕು ಮತ್ತು ಇಷ್ಟು ಆಚಾರಗಳನ್ನು ಮಾಡಲೇ ಬೇಕು ಎಂಬ ನಿಬಂಧನೆ ಇರುವುದಾದರೆ, ಅದು ಸರ್ವವ್ಯಾಪಿತ್ವಕ್ಕೆ ವಿರುದ್ಧವಾಗಿ, ಅದು ಬರಿಯ ವಿಗ್ರಹದೊಳಗಿನ ಚಿಕ್ಕ ಚಿಕ್ಕ ದೇವತಾ ವಿಗ್ರಹಾರಾಧನೆಯ ರೀತಿಯಾಗಿಬಿಡುವುದು.

ಇನ್ನು, ಈ ಭೂಮಿಯಲ್ಲಿ ಮಾತನಾಡಲೆಂದು ಸೃಷ್ಟಿಕರ್ತನನ್ನು ಮೇಲೆ ಹೇಳಿದ ರೀತಿಯಲ್ಲಿ ವಿಗ್ರಹದಲ್ಲಿ ಆರಾಧಿಸುವ ಆ ಬೆರಳೆಣಿಕೆಯ ಭಕ್ತಿಯೋಗಿಗಳನ್ನು ಬಿಟ್ಟರೆ, ಸೃಷ್ಟಿಕರ್ತನನ್ನು ನಂಬುವ ಎಲ್ಲಾ ಧರ್ಮಗಳಲ್ಲೂ ಸೃಷ್ಟಿಕರ್ತನನ್ನು ಚಿಕ್ಕ ಚಿಕ್ಕ ದೇವತೆಗಳ ರೀತಿಯಲ್ಲೇ ಆ ವಿಗ್ರಹಾರಾಧನೆಯನ್ನೂ ಮಾಡುತ್ತ ಇದುವರೆಗೂ ಬಂದಿರುವುದು. ವಿಗ್ರಹವನ್ನು ವಿರೋಧಿಸುವ ಧರ್ಮಗಳು ಕೂಡಾ ಅವುಗಳಲ್ಲಿ ಸೇರಿವೆ ಎಂದರೆ ನಿಮಗೆ ಅಚ್ಚರಿ ಆಗಬಹುದು. ಅದರ ಬಗ್ಗೆ ಸ್ವಲ್ಪ ಆಳದಲ್ಲಿ ಆಲೋಚಿಸಿದಾಗಲೇ ನಮಗೆ ಆ ಸತ್ಯವನ್ನು ತಿಳಿಯಲು ಸಾಧ್ಯವಾಗುವುದು. ಈ ವಿಷಯವನ್ನು ವಿವರಿಸುವ ಮೊದಲು ನಾವು ಒಂದು ವಿಚಾರವನ್ನು ಪ್ರತ್ಯೇಕವಾಗಿ ನೋಡಬೇಕಾಗಿದೆ. ಇಲ್ಲಿ ನಾವು ವಿಗ್ರಹದ ಕೆಲಸ ಏನೆಂದು ಮೊದಲು ಅರಿಯಬೇಕಾಗಿದೆ. ಅದರ ಕೆಲಸವನ್ನು ಒಂದು ಶಬ್ಧ ಮತ್ತು ಅದರ ಅರ್ಥಕ್ಕೆ ಹೋಲಿಸಬಹುದು. ಅಂದರೆ, ಕಣ್ಣಿಗೆ ಗೋಚರಿಸುವ ಮತ್ತು ಕಿವಿಗಳಿಗೆ ಕೇಳಿಸುವ ಶಬ್ದವು ಇಲ್ಲಿ ವಿಗ್ರಹವಾದರೆ, ಅದರ ಅರ್ಥವು ಅದರಲ್ಲಿ ಅಡಗಿರುವ ದೇವತೆ ಆಗಿರುವುದು ಎಂದು ತಿಳಿಯಬೇಕು. ಉದಾಹರಣೆಗೆ ನೀರು, ಗಾಳಿ, ಬೆಂಕಿ ಇತ್ಯಾದಿ ವಸ್ತುಗಳು ಒಂದೇ ಅಲ್ಲ, ಅವು ಬೇರೆ ಬೇರೆ ಆಗಿವೆ, ಹಾಗಾಗಿ, ಇಲ್ಲಿ ಅವುಗಳ ಹೆಸರುಗಳು ಕೂಡಾ ಬೇರೆ ಬೇರೆ ಆಗಿರುವುದು, ಅಂದರೆ ಬೇರೆ ಬೇರೆ ವಸ್ತುಗಳನ್ನು ಹೆಸರಿಸಲು ಅಲ್ಲಿ ಆ ಬೇರೆ ಬೇರೆ ಹೆಸರುಗಳು ಅನಿವಾರ್ಯವಾಗಿ ಬಂದಿರುವುದು, ಮಾತ್ರವಲ್ಲ, ಇಲ್ಲಿ, ಒಂದು ಇನ್ನೊಂದು ಶಬ್ದದ ಪರ್ಯಾಯ ಶಬ್ಧವಾಗಿ ಬಳಸಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಅರ್ಥ ಇದು ಒಂದು ರೀತಿಯಾದರೆ, ಇನ್ನು ಎರಡನೇ ರೀತಿಯಲ್ಲಿ, ಹೆಸರು ಬೇರೆ ಬೇರೆ ಆಗಿದ್ದು, ಆದರೆ ಅವು ಸೂಚಿಸುವ ವಸ್ತು ಒಂದೇ ಅಥವಾ ಒಂದೇ ರೀತಿಯದ್ದು ಎಂಬ ರೀತಿಯಲ್ಲಿ ಇರುವವು. ಉದಾಹರಣೆಗೆ ನೀರು, ಪಾನಿ, ವಾಟರ್, ಇತ್ಯಾದಿ ಹೆಸರುಗಳು ಬೇರೆ ಬೇರೆಯಾದರೂ ಅವೆಲ್ಲಾ ಉದ್ದೇಶಿಸುವುದು ಒಂದೇ ವಸ್ತುವನ್ನು ಆಗಿದೆ. ಅಲ್ಲಿ, “ಅವು ಒಂದೇ ವಸ್ತು ಅಲ್ಲ” ಎಂದು ಯಾರೂ ಹೇಳುವುದಿಲ್ಲ. ಈ ಸತ್ಯವನ್ನು ಕೂಡಾ ಗಮನದಲ್ಲಿಟ್ಟು, ಇನ್ನು, ಸೃಷ್ಟಿಕರ್ತ ಎಂಬ ಶಬ್ದವು ಈ ಎರಡರಲ್ಲಿ ಯಾವುದರಲ್ಲಿ ಸೇರಿದೆ ಎಂದು ಪರೀಕ್ಷಿಸೋಣ. ನಿಜವಾಗಿಯೂ ಸೃಷ್ಟಿಕರ್ತ ಎಂಬ ಶಬ್ದವು ಅವುಗಳಲ್ಲಿ ಎರಡನೆಯ ತರವಾಗಿರಬೇಕಿತ್ತು, ಅಂದರೆ, ಬೇರೆ ಬೇರೆ ಹೆಸರುಗಳಲ್ಲಿ ಕರೆದರೂ, ಆ ಕರೆಯಲ್ಪಡುವ ವ್ಯಕ್ತಿ ಅಥವಾ ವಸ್ತು, ಒಂದೇ ಎಂದು ಆಗುವ ಆ ತರದ್ದು ಆಗಬೇಕಿತ್ತು. ದುರದೃಷ್ಟವಶಾತ್, ಇಲ್ಲಿ, ಸೃಷ್ಟಿಕರ್ತನ ಹೆಸರಂತೂ ತಮ್ಮೊಳಗೆ ಒಂದೇ ಆಗಿ ಎಲ್ಲರಿಂದಲೂ ಸ್ವೀಕರಿಸಲ್ಪಟ್ಟಿಲ್ಲ. ಧರ್ಮಗಳು ತಮ್ಮೊಳಗೆ ಒಂದೇ ಹೆಸರನ್ನು ಒಪ್ಪದೆ, ಹೆಸರುಗಳು ಕಡ್ಡಾಯವಾಗಿ ಬೇರೆ ಬೆರೆಯಾಗಿಯೇ ಎಂದು ವಾದ ಮಾಡುವವು. ಮಾತ್ರವಲ್ಲ, ಅದರ ಮೇಲೆ ಯಾರು ಕೂಡಾ ಇತರ ಧರ್ಮಗಳ ಸೃಷ್ಟಿಕರ್ತರನ್ನು ತಮ್ಮದೇ ಸೃಷ್ಟಿಕರ್ತ ಎಂದೂ ಒಪ್ಪಿಕೊಳ್ಳುವುದಿಲ್ಲ, ಇಲ್ಲಿಯೂ, ನಮ್ಮದು ಬೇರೆ ಎನ್ನುವರು! ಈಗ, ಇದು, ವಸ್ತುವೂ ಬೇರೆ, ಹೆಸರೂ ಬೇರೆ, ಎಂಬ ರೀತಿ ಆಗುವುದು. ಅಂದರೆ, ಈ ರೀತಿಯು, ಬೇರೆ ಬೇರೆ ದೇವತೆಗಳನ್ನೇ ಸೃಷ್ಟಿಕರ್ತ ಎಂದು ಹೇಳಿದಂತೆ ಆಗುವುದು. ಇದನ್ನೇ “ಹೆಸರಿನ ವಿಗ್ರಹಾರಾಧನೆ” ಎನ್ನುವುದು. ವಿಗ್ರಹವು ದೇವರನ್ನು ತನ್ನೊಳಗೆ ಸೇರಿಸಿಕೊಳ್ಳುವಾಗ ಅದು ವಿಗ್ರಹಾರಾಧನೆ ಆಗುವುದು, ಆದರೆ, “ತಮ್ಮ ಸೃಷ್ಟಿಕರ್ತನ ಹೆಸರು ಬೇರೆ ಮತ್ತು ಅದು ಸೂಚಿಸುವ ಆ ಸೃಷ್ಟಿಕರ್ತ ದೇವನೂ ಬೇರೆ” ಎಂದು ಆ ಖಾಸಗೀಕರಿಸಲ್ಪಟ್ಟ ಹೆಸರಿನಿಂದ ಮಾತ್ರ ಕರೆದಾಗ, ಆಲ್ಲಿ ಆ ತಮ್ಮದೇ ಸೃಷ್ಟಿಕರ್ತನನ್ನು ಆ ಪ್ರತ್ಯೇಕ ಹೆಸರಿನೊಳಗೆ ಮಾತ್ರ ಎರಕ ಹೊಯ್ದಂತೆ ಆಗುವುದು. ಇದು ಹೆಸರು ಎಂಬ ವಿಗ್ರಹದೊಳಗೆ ತಮ್ಮ ಸೃಷ್ಟಿಕರ್ತನನ್ನು ಕಾಣುವುದಕ್ಕೆ ಸಮ ಆಗುವುದು.

ಇಲ್ಲಿ, ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು, ಅದೇನೆಂದರೆ, ಎಲ್ಲಿಯಾದರೂ ಸೃಷ್ಟಿಕರ್ತನ ಈ ಬೇರೆ ಬೇರೆ ಹೆಸರುಗಳನ್ನು ಎಲ್ಲಾ ಧರ್ಮದವರು ತಮ್ಮೊಳಗೆ ಒಪ್ಪುವುದಾದರೆ, ಮತ್ತು ಸೃಷ್ಟಿಕರ್ತನ ಹಲವು ಹೆಸರುಗಳನ್ನು ಆತನ ಇನ್ನುಳಿದ ಹೆಸರುಗಳಾಗಿ ಪರಿಗಣಿಸಿ, ಆ ಹೆಸರುಗಳಲ್ಲೂ ಸೃಷ್ಟಿಕರ್ತನನ್ನು ಆರಾಧನೆ ಮಾಡುವುದಾದಾರೆ, ಆಗ, ಆ ಹೆಸರುಗಳು ವಿಗ್ರಹಕ್ಕೆ ಸಮ ಆಗುವುದಿಲ್ಲ ಖಂಡಿತ. ಅದು ನೀರನ್ನು ಪಾನಿ, ವಾಟರ್ ಎಂದು ನಾವು ಕರೆಯುವ ಆ ಸರಿಯಾದ ಎರಡನೆಯ ರೀತಿ ಆಗಿಬಿಡುವುದು. ಅಲ್ಲಿ ಎಲ್ಲರೂ ಹೆಸರು ಬೇರೆ ಬೇರೆ ಹೇಳಿಕೊಂಡರೂ ನೀರೆಂಬ ಆ ಒಂದೇ ವಸ್ತುವನ್ನು ತೋರಿಸುವರು. ನಿಮ್ಮದು ನೀರಲ್ಲ ನಮ್ಮದು ಮಾತ್ರ ನೀರು ಎಂದು ಹೇಳುವುದಿಲ್ಲ. ಆದರೆ ಇಲ್ಲಿ, ಧರ್ಮಗಳು ತಮ್ಮೊಳಗೆ ಇನ್ನೊಂದು ಧರ್ಮದ ಸೃಷ್ಟಿಕರ್ತನನ್ನು ಒಪ್ಪದ ಕಾರಣ ಆ ಹೆಸರುಗಳು ಪೂರ್ತಿಯಾಗಿ ಒಂದು ವಿಗ್ರಹದ ಕೆಲಸವನ್ನೇ ಮಾಡುವುದು ಎಂದು ಸ್ಪಷ್ಟವಾಗುವುದು. ಒಟ್ಟಲ್ಲಿ, ಈ ಜಗತ್ತಲ್ಲಿ ವಿಗ್ರಹಾರಾಧಕರು ಎಂದು ಕರೆಯಲ್ಪಡುವ ಮಾನವರ ವಿಗ್ರಹಗಳಿಗೆ ಹೆಸರು ಮತ್ತು ಲೋಹ ಎಂಬ ಎರಡು ಕವಚವಿದ್ದರೆ, “ನಾವು ವಿಗ್ರಹಾರಾಧಕರು ಅಲ್ಲ” ಎಂದು ಹೇಳಿಕೊಳ್ಳುವ ಮಾನವರ ಸೃಷ್ಟಿಕರ್ತನಿಗೆ ಹೆಸರಿನ ಆ ಒಂದು ವಿಗ್ರಹದ ಕವಚ ಮಾತ್ರ ಇರುವುದು, ಅಷ್ಟು ಮಾತ್ರವೇ ಅವುಗಳು ತಮ್ಮೊಳಗೆ ಇರುವ ವ್ಯತ್ಯಾಸ.

ಆದುದರಿಂದ, ಇದುವರೆಗೂ “ವಿಗ್ರಹಾರಾಧನೆ ದೈವನಿಂದನೆ” ಎಂದು ಹೇಳಿ, ಲಕ್ಷಗಟ್ಟಲೆ ವಿಗ್ರಹಗಳನ್ನು ಧ್ವಂಸ ಮಾಡಿರುವುದೆಲ್ಲ ಅರ್ಥ ಹೀನವಾಗಿರುವುದು ಎಂದು ತಿಳಿಯಬೇಕು. ಯಾವಾಗ ಇತರ ಧರ್ಮಗಳ ಸೃಷ್ಟಿಕರ್ತರ ಹೆಸರು ಎಲ್ಲವೂ ಕೂಡಾ ಆ ತಮ್ಮ ಸೃಷ್ಟಿಕರ್ತನ ಹೆಸರೇ ಆಗುವುದು ಎಂದು ಒಪ್ಪುವರೋ, ಆಗ ಮಾತ್ರವೇ, ಸೃಷ್ಟಿಕರ್ತನ ಹೆಸರು ವಿಗ್ರಹದ ಸ್ವರೂಪವನ್ನು ಕಳಕೊಳ್ಳುವುದು ಅಷ್ಟೆ. ಅಲ್ಲಿಯ ತನಕವೂ ಸೃಷ್ಟಿಕರ್ತ ಎಂದು ಹೇಳಿದರೂ, ಅವೆಲ್ಲಾ ಆ ದೇವತೆಗಳಂತೆ ಮನುಷ್ಯರ ಚಿಕ್ಕ ಚಿಕ್ಕ ಬಣಕ್ಕೆ ಅಥವಾ ಗುಂಪಿಗೆ ಮಾತ್ರ ಸೀಮಿತವಾಗಿರುವ ದೇವತೆಗಳಂತೆ ಇರುವವು.

ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರವು ಆದಿ ಕಾಲದಿಂದಲೇ, ಅವುಗಳ ಲಾಭದ ವ್ಯಾಪಾರಕ್ಕೆ ಬೇಕಾಗಿ, ಮಾನವರನ್ನು ವಿಭಜಿಸಿ ತಮ್ಮೊಳಗೆ ಹಿಂಸೆ, ರಕ್ತಪಾತಗಳನ್ನು ಕಾಡಿನಿಂದಲೇ ಮಾಡಿಸುತ್ತಾ ಬಂದಿರುವಾಗ, ಇನ್ನು, ಕೊನೆಗೆ ಬಂದಿರುವ ಈ ಧರ್ಮ, ಪಂಥಗಳು ಕೂಡಾ ಅವುಗಳ ಮಾನವ ವಿಭಜನೆಯ ತಾಂತ್ರಿಕತೆಯಿಂದ ಹೊರಗುಳಿಯಲಾರವು ಎಂಬ ಸರಳ ತರ್ಕವು ನಮಗೆ ಆ ಆತ್ಯಂತಿಕ ಸತ್ಯವನ್ನು ಸ್ಪಷ್ಟಪಡಿಸುವುದು.

ಇನ್ನು, ಆ ಭೀಕರ ರಹಸ್ಯ ವಾಮಾಚಾರದ ಮೋಸದಿಂದ ಪಾರಾಗಲು ಇರುವ ಆ ಒಂದೇ ಒಂದು ಮಾರ್ಗವೆಂದರೆ, ದೇವರಿಗೆ ರೂಪವಿರಲಿ, ಇಲ್ಲದೆ ಇರಲಿ, ವಿಗ್ರಹ ಇಟ್ಟುಕೊಳ್ಳಲಿ, ಅಥವಾ ವಿಗ್ರಹವಿಲ್ಲದೆ ಆರಾಧಿಸಲಿ, ನಾವು ದೇವರು ಮತ್ತು ಧರ್ಮ ಹೇಳುವ ಆ ಸತ್ಯ ಮತ್ತು ಪ್ರೀತಿಗೆ ಬೆಲೆಕೊಟ್ಟು ಜೀವಿಸುವೆವು ಎಂಬ ನಿಲುವು ಮಾತ್ರ ಆಗಿರುವುದು. ಈ ನಿಲುವಿನ ಅಡಿಪಾಯ ಇದ್ದಲ್ಲಿ, ಧರ್ಮ, ಪಂಥಗಳಿಂದ ಆಚರಿಸಲ್ಪಡುವ ಯಾವ ಆಚಾರ ನಂಬಿಕೆಗಳನ್ನು ಆ ರಹಸ್ಯ ಪ್ರಾಚೀನ ವಾಮಾಚಾರಕ್ಕೆ ತಮ್ಮ ಲಾಭಕ್ಕಾಗಿ ಬಳಸಲು ಸಾಧ್ಯವಾಗುವುದಿಲ್ಲ. ಆದುದರಿಂದ, ಈ ರೀತಿ, ಮನುಷ್ಯ ಕುಲವನ್ನು, ಆ ರಹಸ್ಯ ಪ್ರಾಚೀನ ಮಾಮಾಚಾರದ ಕೈಯಿಂದ ಪಾರುಮಾಡುವಲ್ಲಿ ಮಾನವರು ಎಲ್ಲರೂ, ಎಲ್ಲಾ ಧರ್ಮಗಳಲ್ಲಿಯೂ ಸ್ಪಷ್ಟವಾಗಿ ಹೇಳಿರುವ, ಆ ಸತ್ಯ ಮತ್ತು ಪ್ರೀತಿಯನ್ನು ದೇವರು ಮತ್ತು ಧರ್ಮ ಎಂಬಲ್ಲಿ ಮೇಲೆತ್ತಿ ಹಿಡಿವರೆಂದು ಆಶಿಸುವೆನು.

**********************************************************************************

ವಿಗ್ರಹಾರಾಧನೆ

ಈ ‘ಪರ’ ವಾದಗಳಿಂದ ಮುಕ್ತವಾಗಲು ಈ ವಿಷಯವನ್ನು ಚುಟುಕಾಗಿ ಸತ್ಯಚಿಂತನೆಗೆ ಗುರಿಪಡಿಸೋಣ.

ವಿಗ್ರಹ ಅಥವಾ ರೂಪಕೆತ್ತನೆ ಎಂಬುವುದು

ಕಾಡು ಜನಾಂಗದಿಂದಲೇ ವಿಗ್ರಹ ಆರಾಧನೆಯೂ ಆರಂಭವಾಗಿತ್ತು..

ಎರಡು ರೀತಿಯ ವಿಗ್ರಹಾರಾಧನೆಗಳು ಇವೆ

ವಿಗ್ರಹಗಳು ಸೃಷ್ಟಿಕರ್ತನಿಗೆ ವಿರೋಧವಾಗಿದ್ದರೆ….

ಶಕ್ತಿಗಳು ಮತ್ತು ದೇವತೆಗಳು, ಅವು ಸರ್ವವ್ಯಾಪಿ ಅಲ್ಲದುದರಿಂದ, ಅವುಗಳನ್ನು ವಿಗ್ರಹಗಳಲ್ಲಿ ಸಂಕಲ್ಪಿಸಬಹುದು.

ನಿಜವಾಗಿಯೂ ಸರಿಯೋ ತಪ್ಪೋ ಎಂಬ ಪ್ರಶ್ನೆ ಬರುವುದು ಸೃಷ್ಟಿಕರ್ತ ದೇವಸಂಕಲ್ಪವನ್ನು ವಿಗ್ರಹದಲ್ಲಿ ಆರಾಧಿಸುವಾಗ ಮಾತ್ರ ಆಗಿದೆ,

 ಆಕಾಶವನ್ನು ಹೇಗೆ ಒಂದು ಗೂಡಲ್ಲಿ ಹಾಕಲು ಸಾಧ್ಯವಿಲ್ಲವೋ ಅದೇ ತರ ಇಲ್ಲಿಯೂ ಸರ್ವವ್ಯಾಪಿ ದೇವರಲ್ಲೂ ಅದು ಸಾಧ್ಯವಾಗುವುದಿಲ್ಲ.

ಆದರೆ, ಇಲ್ಲಿ ಭಕ್ತಿಯೋಗಿಗಳ ರೀತಿ ಒಂದು ಬೇರೆ ಆಗಿರುವುದು. ಅವರ ಮಾತು ಹೇಗಿದೆ ಎಂದು ನೋಡಿ. ದೇವರೇ, ನೀನು ಸರ್ವವ್ಯಾಪಿಯಾದರೂ, ನೀನು ನಮ್ಮೊಂದಿಗೆ ಮಾತಾಡುತ್ತಿಯಲ್ಲ,

ಸೃಷ್ಟಿಕರ್ತನ ಈ ರೀತಿಯ ವಿಗ್ರಹಾರಾಧನೆಯು ಯಾವ ಧರ್ಮದವರಿಗೆ ಬೇಕಾದರೂ ಸೌಕರ್ಯಕ್ಕೆ ಬೇಕಾಗಿ ಮಾಡಿಕೊಳ್ಳಬಹುದು ಎಂದಾಗುವುದು.

ಭಕ್ತಿಯೋಗಿಗಳನ್ನು ಬಿಟ್ಟರೆ, ಸೃಷ್ಟಿಕರ್ತನನ್ನು ನಂಬುವ ಎಲ್ಲಾ ಧರ್ಮಗಳಲ್ಲೂ ಸೃಷ್ಟಿಕರ್ತನನ್ನು ಚಿಕ್ಕ ಚಿಕ್ಕ ದೇವತೆಗಳ ರೀತಿಯಲ್ಲೇ ಆ ವಿಗ್ರಹಾರಾಧನೆಯನ್ನೂ ಮಾಡುತ್ತ ಇದುವರೆಗೂ ಬಂದಿರುವುದು. ವಿಗ್ರಹವನ್ನು ವಿರೋಧಿಸುವ ಧರ್ಮಗಳು ಕೂಡಾ ಅವುಗಳಲ್ಲಿ ಸೇರಿವೆ. ಇದನ್ನು ಸಾಬಿತುಪಡಿಸಲು, ಇಲ್ಲಿ ನಾವು ವಿಗ್ರಹದ ಕೆಲಸ ಏನೆಂದು ಮೊದಲು ಅರಿಯಬೇಕಾಗಿದೆ. ಅದರ ಕೆಲಸವನ್ನು ಒಂದು ಶಬ್ಧ ಮತ್ತು ಅದರ ಅರ್ಥಕ್ಕೆ ಹೋಲಿಸಬಹುದು.

ಉದಾಹರಣೆಗೆ ನೀರು, ಗಾಳಿ, ಬೆಂಕಿ ಇತ್ಯಾದಿ ವಸ್ತುಗಳು ಒಂದೇ ಅಲ್ಲ, ಅವು ಬೇರೆ ಬೇರೆ ಆಗಿವೆ, ಹಾಗಾಗಿ, ಇಲ್ಲಿ ಅವುಗಳ ಹೆಸರುಗಳು ಕೂಡಾ ಬೇರೆ ಬೇರೆ ಆಗಿರುವುದು,

ಇನ್ನು ಎರಡನೇ ರೀತಿಯಲ್ಲಿ, ಹೆಸರು ಬೇರೆ ಬೇರೆ ಆಗಿದ್ದು, ಆದರೆ ಅವು ಸೂಚಿಸುವ ವಸ್ತು ಒಂದೇ ಅಥವಾ ಒಂದೇ ರೀತಿಯದ್ದು ಎಂಬ ರೀತಿಯಲ್ಲಿ ಇರುವವು. ಉದಾಹರಣೆಗೆ ನೀರು, ಪಾನಿ, ವಾಟರ್, ಇತ್ಯಾದಿ.

ಇನ್ನು, ಸೃಷ್ಟಿಕರ್ತ ಎಂಬ ಶಬ್ದವು ಈ ಎರಡರಲ್ಲಿ ಯಾವುದರಲ್ಲಿ ಸೇರಿದೆ ಎಂದು ಪರೀಕ್ಷಿಸೋಣ.

ಸೃಷ್ಟಿಕರ್ತನ ಹೆಸರಂತೂ ತಮ್ಮೊಳಗೆ ಒಂದೇ ಆಗಿ ಎಲ್ಲರಿಂದಲೂ ಸ್ವೀಕರಿಸಲ್ಪಟ್ಟಿಲ್ಲ. ಅದರ ಮೇಲೆ ಯಾರು ಕೂಡಾ ಇತರ ಧರ್ಮಗಳ ಸೃಷ್ಟಿಕರ್ತರನ್ನು ತಮ್ಮದೇ ಸೃಷ್ಟಿಕರ್ತ ಎಂದೂ ಒಪ್ಪಿಕೊಳ್ಳುವುದಿಲ್ಲ, ಇದು, ವಸ್ತುವೂ ಬೇರೆ, ಹೆಸರೂ ಬೇರೆ, ಎಂಬ ರೀತಿ ಆಗುವುದು. ಅಂದರೆ, ಈ ರೀತಿಯು, ಬೇರೆ ಬೇರೆ ದೇವತೆಗಳನ್ನೇ ಸೃಷ್ಟಿಕರ್ತ ಎಂದು ಹೇಳಿದಂತೆ ಆಗುವುದು. ಇದನ್ನೇ “ಹೆಸರಿನ ವಿಗ್ರಹಾರಾಧನೆ” ಎನ್ನುವುದು.

ತಮ್ಮದೇ ಸೃಷ್ಟಿಕರ್ತನನ್ನು ಆ ಪ್ರತ್ಯೇಕ ಹೆಸರಿನೊಳಗೆ ಮಾತ್ರ ಎರಕ ಹೊಯ್ದಂತೆ ಆಗುವುದು. ಇದು ಹೆಸರು ಎಂಬ ವಿಗ್ರಹದೊಳಗೆ ತಮ್ಮ ಸೃಷ್ಟಿಕರ್ತನನ್ನು ಕಾಣುವುದಕ್ಕೆ ಸಮ ಆಗುವುದು.

ಎಲ್ಲಿಯಾದರೂ ಸೃಷ್ಟಿಕರ್ತನ ಈ ಬೇರೆ ಬೇರೆ ಹೆಸರುಗಳನ್ನು ಎಲ್ಲಾ ಧರ್ಮದವರು ತಮ್ಮೊಳಗೆ ಒಪ್ಪುವುದಾದರೆ, ಮತ್ತು ಸೃಷ್ಟಿಕರ್ತನ ಹಲವು ಹೆಸರುಗಳನ್ನು ಆತನ ಇನ್ನುಳಿದ ಹೆಸರುಗಳಾಗಿ ಪರಿಗಣಿಸಿ, ಆ ಹೆಸರುಗಳಲ್ಲೂ ಸೃಷ್ಟಿಕರ್ತನನ್ನು ಆರಾಧನೆ ಮಾಡುವುದಾದಾರೆ, ಆಗ, ಆ ಹೆಸರುಗಳು ವಿಗ್ರಹಕ್ಕೆ ಸಮ ಆಗುವುದಿಲ್ಲ ಖಂಡಿತ.

ವಿಗ್ರಹಾರಾಧಕರು ಎಂದು ಕರೆಯಲ್ಪಡುವ ಮಾನವರ ವಿಗ್ರಹಗಳಿಗೆ ಹೆಸರು ಮತ್ತು ಲೋಹ ಎಂಬ ಎರಡು ಕವಚವಿದ್ದರೆ, “ನಾವು ವಿಗ್ರಹಾರಾಧಕರು ಅಲ್ಲ” ಎಂದು ಹೇಳಿಕೊಳ್ಳುವ ಮಾನವರ ಸೃಷ್ಟಿಕರ್ತನಿಗೆ ಹೆಸರಿನ ಆ ಒಂದು ವಿಗ್ರಹದ ಕವಚ ಮಾತ್ರ ಇರುವುದು, ಅಷ್ಟು ಮಾತ್ರವೇ ಅವುಗಳು ತಮ್ಮೊಳಗೆ ಇರುವ ವ್ಯತ್ಯಾಸ.

ಆದುದರಿಂದ, ಇದುವರೆಗೂ “ವಿಗ್ರಹಾರಾಧನೆ ದೈವನಿಂದನೆ” ಎಂದು ಹೇಳಿ, ಲಕ್ಷಗಟ್ಟಲೆ ವಿಗ್ರಹಗಳನ್ನು ಧ್ವಂಸ ಮಾಡಿರುವುದೆಲ್ಲ ಅರ್ಥ ಹೀನವಾಗಿರುವುದು

ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರವು ಮಾನವ ವಿಭಜನೆಯ ತಾಂತ್ರಿಕತೆ ಈ ವಾದಗಳು.

ಇನ್ನು, ಆ ಭೀಕರ ರಹಸ್ಯ ವಾಮಾಚಾರದ ಮೋಸದಿಂದ ಪಾರಾಗಲು ಇರುವ ಆ ಒಂದೇ ಒಂದು ಮಾರ್ಗವೆಂದರೆ, ದೇವರಿಗೆ ರೂಪವಿರಲಿ, ಇಲ್ಲದೆ ಇರಲಿ, ವಿಗ್ರಹ ಇಟ್ಟುಕೊಳ್ಳಲಿ, ಅಥವಾ ವಿಗ್ರಹವಿಲ್ಲದೆ ಆರಾಧಿಸಲಿ, ನಾವು ದೇವರು ಮತ್ತು ಧರ್ಮ ಹೇಳುವ ಆ ಸತ್ಯ ಮತ್ತು ಪ್ರೀತಿಗೆ ಬೆಲೆಕೊಟ್ಟು ಜೀವಿಸುವೆವು ಎಂಬ ನಿಲುವು ಮಾತ್ರ ಆಗಿರುವುದು.

 ***********************

ಅನ್ಯಗ್ರಹಜೀವಿಗಳ ರಹಸ್ಯ ವಾಮಾಚಾರದ ಇರುವಿಕೆ ಸಾಬೀತು:

ನಂಬಿಕೆಗಳಿಗೆ ಪುರಾವೆಗಳು ಇಲ್ಲ, ಯಾಕೆಂದರೆ, ನಂಬಿಕೆಯು ಸತ್ಯವಲ್ಲ. ಸತ್ಯವು ಒಮ್ಮೆ ಬಂದರೆ ಆನಂತರ ಹಿಂದಿನ ಅದರ ಸ್ಥಾನದಲ್ಲಿದ ನಂಬಿಕೆ ಪುನಃ ಬರಲಾರದು.

ಇಲ್ಲಿ, ಅನ್ಯಗ್ರಹಜೀವಿಗಳ ಆ ರಹಸ್ಯ ವಾಮಾಚಾರವನ್ನು ಸಾಬೀತುಪಡಿಸುವಲ್ಲಿ, ಮುಖ್ಯವಾಗಿಯೂ ಎರಡು ರೀತಿಗಳನ್ನು ಇಟ್ಟುಕೊಳ್ಳಲಾಗಿದೆ. ಒಂದು ನಂಬಿಕೆಯವರಿಗೆ ಅಥವಾ ಆಸ್ತಿಕರಿಗೆ ಮತ್ತು ಇನ್ನೊಂದು ನಾಸ್ತಿಕರಿಗೆ. ಇವು ಎರಡು ಎರಡು ರೀತಿಗಳಲ್ಲಿ ಇವೆ. ನಂಬಿಕೆಯವರಿಗೆ ನಂಬಿಕೆಯ ಆಧಾರದ ಮೇಲೆಯೇ ಸಾಬೀತುಪಡಿಸಬೇಕಾಗುತ್ತದೆ. ಆದರೆ ನಾಸ್ತಿಕರು ಅವರು ನಂಬಿಕೆಯವರಲ್ಲದ ಕಾರಣ ಅವರಿಗೆ ಬೇರೆ ರೀತಿಯಲ್ಲಿ ಸಾಬೀತುಪಡಿಸಬೇಕಾಗುವುದು ಅಷ್ಟೆ.

ಮೊದಲಲ್ಲಿ ನಂಬಿಕೆಯವರ ಹಿನ್ನೆಲೆಯಲ್ಲಿ ಸಾಬೀತು ಪಡಿಸುವ ಅಂಶಗಳು

1. ಧರ್ಮ ಪಂಥಗಳು ತಮ್ಮದೇ ಸರಿ ಎನ್ನುವವು, ಸೃಷ್ಟಿಕರ್ತನೆಂಬ ಆ ಒಂದೇ ಸತ್ಯವು ಹೇಗೆ ಬೇರೆ ಬೇರೆ ಆಗುವುದು? ಅಂದರೆ, ಇದುವರೆಗೂ ಆ ಸೂಕ್ಷ್ಮದ ಸತ್ಯವು ಇನ್ನೂ ಗೊತ್ತಾಗಿಲ್ಲ ಎಂದಾಗುವುದು. ಹಾಗಿರುವಾಗ ಸೂಕ್ಷ್ಮದಲ್ಲಿ ರಹಸ್ಯವು ಬೇರೆ ಏನೋ ಇದೆ ಎಂದಾಯಿತು.

2. ಒಂದೇ ದೇವರ ಬಗ್ಗೆ ಬೇರೆ ಬೇರೆ ವಿರುದ್ಧ ಮಾತುಗಳನ್ನು ಹೇಳುತ್ತಾ ತಮ್ಮದೇ ಸರಿ ಎಂದು ದ್ವೇಷ, ಹಿಂಸೆ, ಯುದ್ಧವನ್ನು ಮಾಡುವಾಗ, ಆ ಮಾನವರ ತಂದೆಯಾದ ದೇವರು ಅದನ್ನು ಮಾಡಿಸುವನು ಎಂದರೆ ಅದು ದೇವರಾಗುವುದಿಲ್ಲ, ಮಾಡಿಸಲಾರ ಎಂದರೆ ಹಾಗಿದ್ದರೆ ಇನ್ನು ಯಾವ ಸೂಕ್ಷ್ಮಶಕ್ತಿ ಮಾಡಿಸಿರುವುದು ಎಂಬ ಪ್ರಶ್ನೆ ಬರುವುದು. ಇಲ್ಲೇ ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರದ ಕೈವಾಡವು ಸ್ಪಷ್ಟವಾಗುವುದು.

3. ಸೃಷ್ಟಿಕರ್ತನ ಹೆಸರು ಹೇಳಿದಾಗ ಎಲ್ಲರೂ ಒಬ್ಬ ತಂದೆಯ ಮಕ್ಕಳಂತೆ ಒಂದಾಗಬೇಕಿತ್ತು. ಆದರೆ ವಿಭಜಿಸಲ್ಪಟ್ಟಿರುವುದು ಹೇಗೆ ಸಾಧ್ಯ? ತಂದೆಯಾದ ದೇವರು ತನ್ನ ಹೆಸರಲ್ಲಿ ತನ್ನ ಮಕ್ಕಳು ಹಿಂಸೆ ರಕ್ತಪಾತಮಾಡುವುದನ್ನು ಸಹಿಸುವನೇ? ಹಾಗಿದ್ದರೆ ಈ ಮೂರ್ಖತನದ ಬ್ರೈನ್ ವಾಶ್ ಸೂಕ್ಷ್ಮದ ಯಾವ ಶಕ್ತಿಯಿಂದ ಆಯಿತು? ಇಲ್ಲಿಯೇ ಸೂಕ್ಷ್ಮದಲ್ಲಿ ಬೇಹುಗಾರಿಕೆ ಮಾಡುವ ರೀತಿಯು ಇದುವರೆಗೂ ಇರಲೇ ಇಲ್ಲ ಎಂಬ ಆ ಪರಮ ಸತ್ಯವನ್ನು ನಾವು ನೆನಪಿಸಿಕೊಳ್ಳಬೇಕಾಗಿರುವುದು.

4. ಸೂಕ್ಷ್ಮಲೋಕದ ರಹಸ್ಯಾನ್ವೇಷಣೆಯಿಂದ ಸಿಕ್ಕಿರುವ ನನ್ನ ಮಾಹಿತಿಗಳು ಮತ್ತು ಇತರ ಎಲ್ಲಾ ಧರ್ಮ ಪಂಥದವರಿಗೆ ಧ್ಯಾನದಲ್ಲಿರುವಾಗ ನೇರವಾಗಿ ಸಿಕ್ಕಿರುವ ಆ ತಮ್ಮೊಳಗೆ ಒಂದಕ್ಕೊಂದು ವಿರುದ್ಧ ಅನುಭವಗಳ ಮಾತುಗಳು ಇವನ್ನು ತುಲನೆ ಮಾಡುವುದು ಮತ್ತು ಸತ್ಯ ಯಾವುದು ಎಂದು ಕಾಣಲು ಪ್ರಯತ್ನಿಸುವುದು ಇನ್ನೊಂದು ಅಂಶವಾಗಿ ಇಟ್ಟುಕೊಳ್ಳಬಹುದು. ಅಂದರೆ ಶಿಲಾಯುಗದಿಂದಲೇ ಇರುವ ಈ ಪ್ರಾಚೀನ ವಾಮಾಚಾರದ ಕೈವಾಡಗಳ ವಿವರಣೆ ಮತ್ತು ತಮ್ಮೊಳಗೆ ವಿರುದ್ಧ ವಿವರಣೆಕೊಡುವ ಈ ಎಲ್ಲಾ ಇದುವರೆಗಿನ ಧರ್ಮ, ಪಂಥಗಳ ಧ್ಯಾನಗಳಲ್ಲಿ ಸಿಕ್ಕಿರುವ ವಿವರಣೆಗಳನ್ನು ಹೋಲಿಸಿದಾಗಲೇ ಸತ್ಯವು ಸ್ಪಷ್ಟವಾಗಬಹುದು ಎಂಬ ಅಂಶ.

5. ದೇವರ ಪರೀಕ್ಷೆ ಎಂದು ಶತ್ರುಗಳು ಕೂಡಾ ಮಾಡಲು ಅಂಜುವ ಪರೀಕ್ಷೆಗಳನ್ನು ಮಾನವರ ಮೇಲೆ ತಂದೆಯಾದ ಸೃಷ್ಟಿಕರ್ತ ದೇವರು ಮಾಡುವನು ಎಂದರೆ ಅದು ದೇವರು ಅತ್ಯಂತ ಕ್ರೂರಿ ಎಂದು ಸಾಬೀತುಪಡಿಸುವುದಿಲ್ಲವೇ? ದೇವರಿಗೆ ಒಳಿತು ಕೆಡುಕುಗಳು ಇಲ್ಲ ಎಂದು ನೀವು ಹೇಳುವಿರೇ? ಹಾಗೆ ನೀವು ಇಲ್ಲಿ ಜಾರಿಕೊಳ್ಳಲು ಹೇಳುವುದಾದರೆ, ದೇವರಿಗೆ ಆಗ ಧರ್ಮ, ಅಧರ್ಮ ಇಲ್ಲ ಎಂದಾಗುವುದು. ಹಾಗಿರುವಾಗ ಧರ್ಮವನ್ನು ಬೋಧಿಸುವ ದೇವರ ಆ ಎಲ್ಲಾ ಧರ್ಮಗ್ರಂಥಗಳು ಸುಳ್ಳಾಗುವವು. ಆದುದರಿಂದ ಒಂದೋ ಕ್ರೂರಿ ಅದಲ್ಲವಾದರೆ ಕರುಣಾಮಯ ಇವಲ್ಲಿ ಕರುಣಾಮಯ ಎಂದು ನೀವು ಹೇಳಿದರೆ ಆ ಸ್ವಭಾವ ಇದ್ದವನಿಗೆ ಈ ಅತಿ ಕ್ರೂರ ಪರೀಕ್ಷೆಯು ಎಂದಿಗೂ ಸಾಧ್ಯವಿಲ್ಲ. ಹಾಗಿದ್ದರೆ ಈ ಅತಿ ಕ್ರೂರವಾಗಿ ಮಾನವರನ್ನು ಕಾಡುವುದು ಇನ್ನಾವ ಶಕ್ತಿಗಳು?

6. ಧರ್ಮಗಳೊಳಗೆ ಹಲವು ಪಂಥಗಳು ಅವುಗಳ ಹುಟ್ಟಿನ ಆದಿಯಲ್ಲಿ ಸ್ವಲ್ಪದರಲ್ಲೇ ಸೃಷ್ಟಿಯಾಗಿವೆಯಲ್ಲ? ದೇವರೇ ಧರ್ಮಗಳ ಸೃಷ್ಟಿಗೆ ಕಾರಣ ಎಂದು ಹೇಳಿಕೊಳ್ಳುವ ಕಾರಣ ಆಯಾ ಧರ್ಮಗಳ ಸ್ಥಾಪಕರು ಮತ್ತು ದೇವರುಗಳು ಅವುಗಳನ್ನು ವಿಭಜಿಸುವ ಕೆಲಸವನ್ನು ಮೇಲಿನಿಂದ ಮಾಡಲಾರರು. ಹಾಗಿದ್ದರೆ ಹಲವು ಹಲವು ಪಂಥಗಳಾಗಿ ವಿಭಜನೆ ಮಾಡಿಸಿ ತಮ್ಮೊಳಗೆ ಹಿಂಸೆ, ರಕ್ತಪಾತ ಮಾಡಿಸಿರುವುದು ಯಾವ ಶಕ್ತಿಗಳು? ಈಗ, “ನಮ್ಮ ಧರ್ಮವು ಶಾಂತಿಗಾಗಿ” ಎಂದು ಧರ್ಮಗಳು ಹೇಳುವಾಗ, ಅವು ಬೇರೆ ಧರ್ಮಗಳೊಂದಿಗೆ ಶಾಂತಿ ಅಂತೂ ಮಾಡಿಲ್ಲ ಇನ್ನು ಅದರ ಮೇಲೆ ಸ್ವಂತ ಧರ್ಮದೊಳಗಿನ ಆ ಹಲವು ಪಂಥಗಳು ತಮ್ಮೊಳಗೂ ಹಿಂಸೆ ರಕ್ತಪಾತ ಮಾಡುತ್ತಾ ಬಂದಿವೆ ಎಂಬಲ್ಲಿ, “ಧರ್ಮವು ಶಾಂತಿಗಾಗಿ” ಎಂಬುವುದು ಶುದ್ಧ ಸುಳ್ಳಾಯಿತಲ್ಲ! ಇದು ಮೋಸ ಮಾಡಿದಂತೆ ಆಯಿತಲ್ಲಾ. ಪಂಥಗಳನ್ನು ಸೈತಾನ ಸೃಷ್ಟಿಸಿದ ಅಂದರೆ ಎಲ್ಲಾ ಧರ್ಮಗಳಲ್ಲೂ ಹಲವು ಪಂಥಗಳ ರೂಪದಲ್ಲೇ ಇಂದು ಧರ್ಮಗಳು ಕಾಣಿಸುವುದು ಅಲ್ಲದೆ ಮೂಲ ರೂಪದಲ್ಲಿ ಯಾವುದೂ ಕಾಣಿಸುವುದಿಲ್ಲ. ಹಾಗಿರುವಾಗ ಈಗ ಕಾಣಿಸುವ ಪಂಥ ಸ್ವರೂಪವನ್ನು ಪಡೆದಿರುವ ಈ ಎಲ್ಲವೂ ಸೈತಾನ ಹೇಳಿರುವ ಆ ರೀತಿಯನ್ನೇ ಅನುಸರಿಸುವುದು ಎಂದು ಮತ್ತು ದೇವರ ಮಾತನ್ನು ಯಾರೂ ಅನುಸರಿಸುವುದಿಲ್ಲ ಎಂದಾಗುವುದು. ಇದನ್ನು ಯಾರಾದರೂ ಒಪ್ಪುವರೇ? ಇನ್ನು, ಅದಲ್ಲ ಎಂದರೆ, ಇನ್ನು ಯಾವ ಸೂಕ್ಷ್ಮಶಕ್ತಿಗಳು ಈ ಪಂಥಗಳನ್ನು ಸೃಷ್ಟಿಸಿದವು ಎಂಬ ಆ ಮೊದಲ ಪ್ರಶ್ನೆಯೇ ಪುನಃ ಬರುವುದು.

7. ಕ್ರೌರ್ಯ, ಅನೈತಿಕ ಕಾಮ, ಅತಿಕಾಮಗಳು, ಆ ಸೂಕ್ಷ್ಮ ರಹಸ್ಯ ವಾಮಾಚಾರ ವ್ಯವಸ್ಥೆಗೆ ಅಗತ್ಯವಾಗಿದೆ ಎಂದು ನಾನು ಮೊದಲೇ ಹೇಳಿರುವೆನು. ಆಗ, ಅದೇ ರೀತಿಯಲ್ಲಿ, ಅವು ಈ ಭೂಮಿಯಲ್ಲಿ ಹೆಚ್ಚಾಗುತ್ತಾ ಬರುವುದನ್ನು ತಾಳೆಹೊಂದಿಸಿ ನೋಡಿದರೆ ಅವುಗಳ ಕೈವಾಡವು ಅಲ್ಲಿ ಸ್ಪಷ್ಟವಾಗುವುದಿಲ್ಲವೇ?

8. ಯುಗಗಳಿಗೂ ಮಾನವನ ಸ್ವಭಾವಕ್ಕೂ ನಂಟುಹಾಕಿ ಮಾನವರನ್ನು ‘ಕೆಟ್ಟಕಾಲದಲ್ಲಿ ಹಾಗೆ ನಡೆಯುವುದು’ ಎಂದು ಮಾನವರು ಸುಮ್ಮನೆ ಕೂರುವಂತೆ ಮತ್ತು ಆ ಸ್ವಭಾವ ಶುದ್ಧಿಯ ನಿಟ್ಟಿನಲ್ಲಿ ಯಾರೂ ಜನರನ್ನು ಎಬ್ಬಿಸದೆ ಬರೆ ಆಚಾರ ರಾಶಿಯಲ್ಲಿ ಮುಳುಗಿಸಿದ ಆ ಪ್ರೇರಕ ಶಕ್ತಿಗಳು ಯಾವುವು?

9. ತಮ್ಮ ಧರ್ಮವೇ ಅಂತಿಮವಾಗಿ ಈ ಭೂಮಿ ಪೂರ್ತಿ ಆವರಿಸುವುದು ಎಂಬ ಭ್ರಮೆಯನ್ನು ಎಲ್ಲಾ ಧರ್ಮದಲ್ಲೂ ಹಬ್ಬಿ ಆ ರಹಸ್ಯ ಜೀವಿಗಳು ಮಾಡಿರುವ ಆ ಮಾನವ ರಕ್ತಪಾತದ ತಯಾರಿಯು ಎಷ್ಟು ಸ್ಪಷ್ಟವಾಗುವುದು, ಇದು ಅವುಗಳ ಭಯಾನಕ ಮೋಸವಲ್ಲದೆ ಇನ್ನೇನು? ಆಗ ಎನಾಗುವುದೆಂದಾರೆ, ಎಲ್ಲರೂ ಮತಾಂತರದ ಹಿಂದೆ ಓಡುವರು, ಮತ್ತು ರಕ್ತಪಾತಕ್ಕೂ ಎಲ್ಲರೂ ತಯಾರಾಗುವರು! ಎಲ್ಲರೂ ಯುದ್ಧಕ್ಕೆ ಹೊರಟರೆ, ಆ ನಿಜ ಧರ್ಮವಾದ ಶಾಂತಿ ಧರ್ಮಗಳ ಅವಸ್ಥೆ ಎನಾಗಿರಬಹುದು? ಇದು ಯಾರು ಮಾಡಿಸಿರುವುದು?

10. ‘ಫ್ರೀ ವಿಲ್’ ಮತ್ತು ‘ಕಾಲಹೋದಂತೆ ಮಾನವರು ಕೆಟ್ಟವರಾಗುವರು’ ಎಂದು ದೇವರು ಹೇಳಿದ್ದಾನೆ ಎಂಬ ಅಂಶಗಳು, ಇವು ತಮ್ಮೊಳಗೆ ವಿರುದ್ಧವಾಗಿವೆ. ಹಾಗಿರುವಾಗ, ಇದು ಬೇಕೆಂದೆ ಹೇಳಿಸಿರುವ ರೀತಿ ಅಲ್ಲವೇ? ಕಾಲಹೋದಂತೆ ಉತ್ತಮರಾಗಲು ಜನರು ಬಯಸದಂತೆ ಇದು ಪ್ರೇರೇಪಿಸುವುದಿಲ್ಲವೇ? ಕಾಲ ಹೋದಂತೆ ಜನ ಕೆಟ್ಟವರಾಗುವಂತೆ ಇತ್ತ ಆ ರಹಸ್ಯ ಶಕ್ತಿಗಳು ತಯಾರಿ ಮಾಡಿವೆ ಎಂಬುವುದು ಈಗ ಸ್ಪಷ್ಟವಾಗುವುದಿಲ್ಲವೇ?

11. ದೇವರಲ್ಲಿ ಎಷ್ಟೇ ಪ್ರಾರ್ಥಿಸಿದರೂ ಅನುಗ್ರಹ ಬಾರದಿರಲು, ಅದನ್ನು ವಿಧಿ ಎಂದು ಹೇಳುವರು. ಹಾಗಿದ್ದರೆ ಈ ದೇವರಿಗೂ ನಿಯಂತ್ರಿಸಲಾಗದ ವಿಧಿ ಅದು ಏನು? ಮಾತ್ರವಲ್ಲ ಈ ಅದೃಷ್ಟ ದುರದೃಷ್ಟಗಳು ಏನು ಎಂದೂ ಯಾರೂ ಹೇಳುವುದಿಲ್ಲ. ಕೆಟ್ಟವರಿಗೆ ದೊಡ್ಡ ದೊಡ್ಡ ಅದೃಷ್ಟ ಉತ್ತಮರಿಗೆ ಸಾಯುವ ತನಕವೂ ದುರದೃಷ್ಟ ಇರುವ ಉದಾಹರಣೆಗಳು ಕರ್ಮನಿಯಮವನ್ನು ಅದಕ್ಕೆ ಉತ್ತರಿಸದೆ ಮೌನ ಮಾಡುವಾಗ ಇವೆಲ್ಲಾ ಅನ್ಯಾಯಗಳು ಆ ಸೂಕ್ಷ್ಮ ರಹಸ್ಯ ಶಕ್ತಿಗಳಿಗೆ ಮಾತ್ರ ಸಾಧ್ಯವಾಗುವುದು ಎಂದು ಅರ್ಥವಾಗುವುದಿಲ್ಲವೇ?

12. ಈ ಭೂಮಿಯಿಂದ ಬಿಟ್ಟುಹೋದ ಆ ಮಾನವರನ್ನು ಉತ್ತಮ ಮಾಡಲೆಂದು ಪಣತೊಟ್ಟ ಆಧ್ಯಾತ್ಮಿಕ ವ್ಯಕ್ತಿಗಳು, ಮಹಾತ್ಮರುಗಳು, ಇತ್ಯಾದಿ ಜನರಿಂದಲೂ ಈ ಭೂಮಿಯ ಜನರನ್ನು ಮೇಲೆತ್ತಲು ಆಗಿಲ್ಲ ಎಂಬುವುದು ಕೂಡಾ ಆ ರಹಸ್ಯ ವಾಮಾಚಾರದ ಕೆಲಸ ಮಾತ್ರ ನಡೆಯುವುದು ಮೇಲಿಂದ ಬೇರೆ ಮೇಲಿಂದ ಎಲ್ಲಿಂದಲೂ ಏನೇನೂ ನಡೆಯುವುದಿಲ್ಲ ಎಂದು ಸ್ಪಷ್ಟವಾಗುವುದು.

13. ಧರ್ಮ ಎಂದರೆ ಅದು ಶಾಂತಿಗಾಗಿ ಎನ್ನುವವು ಈ ಎಲ್ಲಾ ಧರ್ಮ, ಪಂಥಗಳು. ಆದರೆ, ಅದರ ವಿರುದ್ಧವಾಗಿ ಧರ್ಮಯುದ್ಧವನ್ನು ಯಾಕಾಗಿ ಪ್ರೋತ್ಸಾಹಿಸುವವು ಎಂಬುವುದು ಕೂಡಾ ಧರ್ಮದ ಹೆಸರಲ್ಲಿ ಆ ಪ್ರಾಚೀನ ವಾಮಾಚಾರದ ಕೈವಾಡವನ್ನು ಸೂಚಿಸುವುದು.

14. ಧರ್ಮಗಳಿಗೆ ಈ ಆಚಾರ ನಂಬಿಕೆಗಳ ಬೇಲಿ ಹೇಗೆ ಬಂದವು? ಈ ಬೇಲಿಗಳು ಅವಲ್ಲವಲ್ಲಾ ಧರ್ಮವನ್ನು ನಿರ್ಣಯಿಸುವುದು. ಧರ್ಮ ಅಧರ್ಮಗಳನ್ನು ನಿರ್ಣಯಿಸುವುದು ಮಾನವನ ಒಳಿತು ಮತ್ತು ಕೆಡುಕು ಎಂಬ ಆ ಕರ್ಮಗಳು ಮಾತ್ರ ಅಲ್ಲವೇ? ಹಾಗಿರುವಾಗ, ಈ ನಂಬಿಕೆ, ಆಚಾರಗಳೆಂಬುವುದರಿಂದ ಮಾಡಿರುವ ಆ ಬೇಲಿಗಳನ್ನೇ ಧರ್ಮ ಎಂದು ನಂಬಿಸಿ, ತಮ್ಮೊಳಗೆ ಬೇರ್ಪಡಿಸಿ, “ನಾವು ಶಾಂತಿಗಾಗಿ” ಎಂದು ಅವುಗಳ ಬಾಯಲ್ಲಿ ಹೇಳಿಸುತ್ತಾ ದ್ವೇಷ, ಹಿಂಸೆ, ರಕ್ತಪಾತಗಳನ್ನು ಅವುಗಳಿಂದ ಯಾರು ಮಾಡಿಸಿದರು?

15. ಸೃಷ್ಟಿಕರ್ತನು ಶಿಲಾಯುಯಗದ ಕಾಡಿನಲ್ಲೇ ಬಂದು ಯಾಕೆ ತನ್ನ ಮಕ್ಕಳಿಗೆ ಆತನ ಧರ್ಮವನ್ನು ತಿಳಿಸಿಲ್ಲ? ಯಾಕೆ ಲಕ್ಷಗಟ್ಟಳೆ ವರುಷಗಳು ಬರಲೇ ಇಲ್ಲ, ತನ್ನ ಮೊದಲ ಅಷ್ಟು ಕೋಟಿ ಕೋಟಿ ಮಕ್ಕಳಿಗೂ ಯಾಕೆ ಸ್ವರ್ಗ ಅವಕಾಶವನ್ನು ಇಲ್ಲದಂತೆ ಮಾಡಿದನು?

16. ತಂದೆಯಾದ ಕರುಣಾಮಯ ಸೃಷ್ಟಿಕರ್ತನು ಬಂದ ನಂತರ, ಅತ್ಯಂತ ಶಾಂತಿ ಬರುವ ಬದಲು, ಬಹಳ ಹೆಚ್ಚು ದ್ವೇಷ, ಹಿಂಸೆ, ರಕ್ತಪಾತಗಳು ಈ ಭೂಮಿಯಲ್ಲಿ ಯಾಕೆ ಸಂಭವಿಸಿತು?

17. ಆದಿಮಾನವರು ಶಿಲಾಯುಯಗದ ಕಾಡಿನಲ್ಲೇ ಭೂತಾರಾಧನೆಯನ್ನು ಮಾಡಲು ಪ್ರಾರಂಭಿಸಿದ್ದವು. ಯಾವುದೇ ಸಂಪರ್ಕವಿಲ್ಲದ ಅಂದು ಒಂದೇ ರೀತಿಯಲ್ಲಿ ಜಗತ್ತಿನ ಮೂಲೆ ಮೂಲೆಗಳಲ್ಲಿ ಅದು ಹೇಗೆ ಸಾಧ್ಯವಾಯಿತು? ಮಾನವರು ಆಫ್ರಿಕಾದ ಒಂದೇ ಕಡೆ ಹುಟ್ಟಿ ವಲಸೆ ಹೋಗಿರುವರು ಎಂದರೆ ಈ ಭೂಮಿಯ ಸೂಕ್ಷ್ಮದಿಂದ ಹಿಡಿದು ಅತ್ಯಂತ ದೊಡ್ಡ ಜೀವಿಗಳು ಕೂಡಾ, ಅವುಗಳಲ್ಲಿ ಕೆಲವೊಂದು ನಡೆಯಲಾರದ ಜೀವಿಗಳೂ ಸೇರಿ, ಆಫ್ರಿಕದಿಂದಲೇ ಎಲ್ಲೆಡೆಗೂ ವಲಸೆ ಹೋಗಿ ಇತರ ಕಡೆಗಳ ಜೀವಿಗಳಾಗಿ ಇಂದು ಕಾಣಿಸಿರುವುದು ಎಂಬ ವಾದವನ್ನು ಮಾಡಬೇಕಾಗುವುದು. ಆ ರಹಸ್ಯ ಸೂಕ್ಷ್ಮಶಕ್ತಿಗಳಿಗೆ ಯಾವುದಾದರೂ ತರದಲ್ಲಿ ಬಾಹ್ಯ ಆರಾಧನೆ ಮಾನವರು ಮಾಡುವುದರಿಂದ ಅವುಗಳಿಗೆ ತಮ್ಮ ವ್ಯವಸ್ಥೆಯೊಂದಿಗೆ ಸೇರಿಸುವಲ್ಲಿ ಸುಲಭವಾಗುವುದು ಮತ್ತು ಆನಂತರದಲ್ಲಿ ಅವು ಕಾಡಿನಲ್ಲೇ ದೇವರ ಮತ್ತು ಆರಾಧನೆಯ ಹೆಸರಲ್ಲಿ ಗೋತ್ರವರ್ಗಗಳು ತಮ್ಮೊಳಗೆ ಕೊಂದು ಕೊಂದು ತಮ್ಮ ಧರ್ಮಯುದ್ಧಗಳನ್ನು ಆರಂಬಿಸಿವೆ. ಇದನ್ನು ಮಾಡಿಸಲೂ ಈ ಬಾಹ್ಯ ಆರಾಧನೆಗಳು ಅವುಗಳಿಗೆ ಲಾಭವಾದಿದೆ.

ಇವೆಲ್ಲಾ, ನಂಬಿಕೆಯವರಿಗೆ ಸಂಬಂಧಿಸಿದಂತೆ, ಅನ್ಯಗ್ರಹಜೀವಿಗಳ ಸೂಕ್ಷ್ಮದ ಆ ರಹಸ್ಯ ವಾಮಾಚಾರದ ಇರುವಿಕೆಯನ್ನು ಸಾಬೀತುಪಡಿಸುವ ಅಂಶಗಳಾಗಿವೆ.

**********************************************************************************

ಪ್ರಶ್ನೆ-ಉತ್ತರ

ಪ್ರಶ್ನೆ- ನೀವು ಆಸ್ತಿಕರೋ ನಾಸ್ತಿಕರೊ?

ಉತ್ತರ- ಮೊದಲಿಗೆ, ಆಸ್ತಿಕರು ಮತ್ತು ನಾಸ್ತಿಕರು ಎಂದರೆ ಯಾರು?

ಜಗತ್ತಿನ ಎಲ್ಲಾ ಧರ್ಮ, ಪಂಥಗಳಿಗೆ ಸಂಬಂಧಿಸಿ ಹೇಳುವಾಗ, ಈ ಜಗತ್ತಿಗೆ ಮೂಲ ಕಾರಣವಾದ ಒಂದು ಪವಿತ್ರ ಶಕ್ತಿಯನ್ನು ಒಪ್ಪುವವರನ್ನು ಆಸ್ತಿಕರೆಂದೂ ಆದರೆ ಅದನ್ನು ಒಪ್ಪದವರನ್ನು ನಾಸ್ತಿಕರೆಂದೂ ಸಾಮಾನ್ಯವಾಗಿ ಜನರು ತಿಳುದುಕೊಂಡಿರುವರು.

ಇಲ್ಲಿ ಒಂದು ಅಂಶವನ್ನು ಹೇಳಬೇಕಾಗಿದೆ. ಅದಕ್ಕಾಗಿ ಮೊದಲಲ್ಲಿ, ದೇವರ ಚೈತನ್ಯದ ಸ್ವಭಾವವನ್ನು ನೋಡೋಣ. ಇಲ್ಲಿ ಆ ಚೈತನ್ಯವು ಪವಿತ್ರವಾಗಿದೆ ಎಂದು ಶಾಸ್ತ್ರಗಳು ಹೇಳುವವು. ಅಂದರೆ ಆ ಪವಿತ್ರತೆಯನ್ನು ಒಪ್ಪಿರುವುದೇ, ಜನರ ಆಸ್ತಿಕತನಕ್ಕೂ ಕಾರಣವಾಗಿರುವುದು ಎಂದು ಅರ್ಥ. ಪವಿತ್ರವಲ್ಲದಿದ್ದಲ್ಲಿ, ಯಾವ ಕಾಲಕ್ಕೂ, ಸಗುಣ ದೇವರಾಗಲೀ ಅಥವಾ ನಿರ್ಗುಣ ದೇವರಾಗಲೀ, ಅದು ದೇವರೇ ಆಗುವುದಿಲ್ಲ ಎಂಬುವುದು ಸರ್ವ ಸಮ್ಮತವೆಂದು ಇದು ತೋರಿಸುವುದು. ಈಗ ಪವಿತ್ರತೆ ಎಂದರೆ ಏನು ಎಂದು ನೋಡೋಣ. ಪವಿತ್ರತೆಯನ್ನು ನಾವು ಸತ್ಯ, ಪ್ರೀತಿ, ನೀತಿಯೆಂದೇ ಹೇಳಬೇಕಾಗಿದೆ, ಯಾಕೆಂದರೆ ಇವುಗಳು ಹೊರತಾದ ಪವಿತ್ರತೆ ಈ ಜಗತ್ತಿನಲ್ಲಿ ಇಲ್ಲ. ಅಂದರೆ ಸಗುಣವಾದರೂ, ನಿರ್ಗುಣವಾದರೂ, ದೇವರ ಮೂಲ ಚೈತನ್ಯವು ಪವಿತ್ರವಾಗಿರುವುದು ಎಂದು ಹೇಳುವಲ್ಲಿ, ಅದು ಸತ್ಯ, ಪ್ರೀತಿ, ನೀತಿಗಳನ್ನು ಜಗತ್ತಿನಲ್ಲಿ ಸೃಷ್ಟಿಸಲು ಶಕ್ತವಾಗಿರುವಂಥಹ ಪವಿತ್ರ ಶಕ್ತಿಯನ್ನು ಹೊಂದಿರುವುದು ಎಂದು ಸ್ಪಷ್ಟವಾಗುವುದು. ಹಾಗಿದ್ದಲ್ಲಿ ನಾವೆಲ್ಲ ಸತ್ಯ, ಪ್ರೀತಿ, ನೀತಿ ಎಂಬ, ಯಾವುದೇ ದೇವಸಂಕಲ್ಪಕ್ಕೆ ಅನಿವಾರ್ಯವಾಗಿ ಬೇಕಾಗಿರುವ, ಆ ದೈವತ್ವವನ್ನೇ ಮೂಲದಲ್ಲಿ ಆಸ್ತಿಕತನಕ್ಕೂ ಕಾರಣ ಎಂದು ಹೇಳಿದಂತಾಯಿತು. ಅಂದರೆ ಈ ಸತ್ಯ, ಪ್ರೀತಿ, ನೀತಿಯನ್ನು ಈ ಜಗತ್ತಲ್ಲಿ ಸೃಷ್ಟಿಸುವ, ಆ ಪವಿತ್ರ, ಕಾರಣ ಚೈತನ್ಯವನ್ನೇ ಆಸ್ತಿಕನಾಗಲು ಒಬ್ಬನು ಒಪ್ಪಬೇಕಾಗಿರುವುದು ಎಂದು ಶಾಸ್ತ್ರಗಳು ಒತ್ತಾಯಿಸಿದಂತೆ ಆಗುವುದು. ಆದುದರಿಂದ ಯಾರು ಅಸತ್ಯ, ದ್ವೇಷ, ಅನೀತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವರೋ ಅವರು ಆಸ್ತಿಕರೆಂದು ಹೇಳಿಕೊಂಡರೂ ಅವರೆಂದೂ ಆಸ್ತಿಕರಲ್ಲ, ಬದಲು ನಾಸ್ತಿಕರಾಗುವರೆಂದು ಇಲ್ಲಿ ಸ್ಪಷ್ಟವಾಗುವುದು. ಚುಟುಕಾಗಿ ಹೇಳುವುದಾದರೆ ಆಸ್ತಿಕನೆಂದರೆ ದೇವರನ್ನು ಸತ್ಯ, ಪ್ರೀತಿ, ನೀತಿಯೆಂದು ಅಥವಾ ಅವುಗಳ ಮೂಲ ಕಾರಣವೆಂದು ಖಂಡಿತವಾಗಿಯೂ ತಿಳಿದುಕೊಂಡಿರುವವನು, ಎಂದು ಹೇಳಬೇಕಾಗುವುದು. ಬೇರೆ ಬೇರೆ ಧರ್ಮಗಳಲ್ಲಿ ವ್ಯತ್ಯಸ್ಥವಾಗಿ ವಿವರಿಸಿರುವ, ಪುರಾಣಗಳ ಸೃಷ್ಟಿಕರ್ತ ದೇವರುಗಳನ್ನು ನಂಬುವ, ಆ ರೀತಿಯು ಅದು ತಾರ್ಕಿಕ ಅಥವಾ ವೈಜ್ಞಾನಿಕ ರೀತಿಯ ಆಸ್ತಿಕವಾದವಾಗುವುದಿಲ್ಲ ಎಂದೂ ತಿಳಿದುಬರುವುದು. ಈ ಹಿನ್ನೆಲೆಯಲ್ಲಿ, ನಾನು ಸತ್ಯ, ಪ್ರೀತಿ ನೀತಿಯನ್ನು ದೇವರು ಎಂದು ತಿಳಿಯುವ ಕಾರಣ ನಾನೊಬ್ಬ ತಾರ್ಕಿಕ ಮತ್ತು ವೈಜ್ಞಾನಿಕ ರೀತಿಯ ವಿವರಣೆಯ ಹಿನ್ನೆಲೆಯ ಶುದ್ಧ ಆಸ್ತಿಕನಾಗುವೆನು.

ನೋಡಿ, ಸತ್ಯ, ಪ್ರೀತಿ, ನೀತಿಯೇ ನನ್ನ ದೇವರು ಮತ್ತು ಧರ್ಮ ಆಗಿರುವುದು ಎಂದು ನಾನು ಹೇಳುವಾಗ, ಅವುಗಳು ಹೇಗೆ ದೇವರು ಮತ್ತು ಧರ್ಮ ಆಗಲು ಸಾಧ್ಯ ಎಂಬ ಸಂಶಯವು ನಿಮ್ಮಲ್ಲಿ ಇನ್ನೂ ಬಾಕಿ ಉಳಿದಿರುವ ಸಾಧ್ಯತೆ ಇದೆ. ಈಗ ಒಂದು ಉದಾಹರಣೆಯನ್ನು ನೋಡೋಣ. ಸಿಹಿ ಇಲ್ಲದ ಸಿಹಿ ತಿಂಡಿಗಳು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ, ಈ ಸತ್ಯ, ಪ್ರೀತಿ, ನೀತಿಗಳಿಲ್ಲದ ದೇವರು, ಧರ್ಮಗಳು ಎಂದಿಗೂ ಸಾಧ್ಯವೇ ಇಲ್ಲ. ಅಂದರೆ, ಆ ಅನಿವಾರ್ಯವಾದ ಸಿಹಿ ಎಂಬ ದೈವತ್ವವೇ ದೇವರು ಮತ್ತು ಧರ್ಮಗಳ ಸೃಷ್ಟಿಗೆ ಕಾರಣ ಎಂದಾಗುವುದು. ಈ ಪವಿತ್ರ ಸ್ವಭಾವಾಗಳು ಇಲ್ಲವಾದರೆ, ದೇವರ ಬದಲು ಅಲ್ಲಿ ಅಸುರ ಎಂದಾಗುವುದು ಮತ್ತು ಧರ್ಮದ ಬದಲು ಅಲ್ಲಿ ಅಧರ್ಮ ಎಂದಾಗುವುದು.

ನೋಡಿ, ಈ ನಂಬಿಕೆ ಆಚಾರಗಳ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ದೇವರುಗಳ ಮತ್ತು ಧರ್ಮಗಳ ಹೆಸರುಗಳು, ಗ್ರಂಥಗಳು, ಇತ್ಯಾದಿಗಳು, ಅವು ಬರೇ ಅವುಗಳ ಹೊರ ಕವಚಗಳು ಮಾತ್ರವಾಗಿರುವವು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅತ್ಯಂತ ಭಯವನ್ನು ಹುಟ್ಟಿಸುವ ಒಂದು ಅಂಶ ಎಂದರೆ, ಈ ಧರ್ಮಗಳ ಹಾಗೂ ದೇವರುಗಳ ಹೆಸರುಗಳು ಮತ್ತು ಅವುಗಳ ಗ್ರಂಥಗಳ ಕಾರಣದಿಂದ ಇದುವರೆಗೂ ಈ ಭೂಮಿಯಲ್ಲಿ ಸೃಷ್ಟಿಯಾಗಿರುವ ದ್ವೇಷ, ಹಿಂಸೆ, ರಕ್ತಪಾತಗಳ ಪ್ರಮಾಣದಷ್ಟು ಬೇರೆ ಯಾವ ಇತರ ಯುದ್ಧಗಳಿಂದಲೂ ಆಗಿಲ್ಲ ಎಂಬ ಇತಿಹಾಸವು ನಮಗೆ ತಿಳಿಸುವ ಆ ಸತ್ಯವಾಗಿರುವುದು. ಈ ವಾಸ್ತವತೆಯನ್ನು ಅರಿಯುವಾಗ, ಧರ್ಮ, ಪಂಥಗಳ ಆ ಮೊದಲ ಮಾತಾಗಿರುವ, “ನಮ್ಮ ದೇವರು ಮತ್ತು ನಮ್ಮ ಧರ್ಮವು ಶಾಂತಿಗಾಗಿ” ಎಂಬುವುದು ಎಷ್ಟು ಭಯಾನಕ ಅಸತ್ಯ ಎಂದು ಮತ್ತೂ ಸ್ಪಷ್ಟವಾಗುವುದು. ಸತ್ಯವನ್ನೇ ನುಡಿಯಬೇಕು ಎಂಬುವುದು ಧರ್ಮ ಮತ್ತು ದೇವರು ಸಂಕಲ್ಪಗಳ ಮೊದಲ ಮಾತು. ಹಾಗಿರುವಾಗ, ದೇವರು, ಧರ್ಮಗಳ ಆ ಮೊದಲ ಪುಟದಲ್ಲೇ ಈ ಭಯಾನಕ ಅಸತ್ಯದ ದರ್ಶನವನ್ನು ನಮಗೆ ಹೇಗೆ ಸಹಿಸಲು ಸಾಧ್ಯವಾಗುವುದು!? ನೋಡಿ, ಹಣ ಇದ್ದಲ್ಲಿ ಆತ ಶ್ರೀಮಂತ, ವಿದ್ಯೆ ಇದ್ದಲ್ಲಿ ಆತ ವಿದ್ಯಾವಂತ. ಹೌದು, ಈ ವಾದ ಸರಿ. ಆದರೆ ಶಾಂತಿ, ಪ್ರೀತಿ ಇಲ್ಲದಲ್ಲಿ, ಮತ್ತು ದ್ವೇಷ, ಹಿಂಸೆ, ಕ್ರೌರ್ಯ ಇರುವಲ್ಲಿ, ಶಾಂತಿಗಾಗಿ ಎಂದು ಹೇಳಿಕೊಳ್ಳುವ ಧರ್ಮ, ದೇವರುಗಳು ಹೇಗೆ ಸಾಧ್ಯವಾಗುವವು?

ಆಚಾರ, ನಂಬಿಕೆ, ಗ್ರಂಥಗಳು ಅಲ್ಲ ಒಂದು ಧರ್ಮವನ್ನು ಸೃಷ್ಟಿಸುವುದು, ಬದಲು, ಒಂದು ಧರ್ಮದಲ್ಲಿ ಎಷ್ಟು ಜನರು ನೀತಿಯನ್ನು, ಮಾನವ ಪ್ರೀತಿಯನ್ನು, ಹಾಗೂ ಶಾಂತಿಯನ್ನು ಬೆಳೆಸಿತಂದಿರುವರು ಎಂಬುವುದರ ಮೇಲೆ ಆ ಧರ್ಮವು ಒಂದು ‘ಧರ್ಮ’ ಎಂಬುದಕ್ಕೆ ಅರ್ಹತೆಯನ್ನು ಪಡೆದಿದೆಯೇ, ಇಲ್ಲವೋ, ಎಂಬುವುದು ನಿಶ್ಚಯಿಸಲ್ಪಡುವುದು. ಇನ್ನಾದರೂ, ಎಲ್ಲಾ ಧರ್ಮ, ಪಂಥಗಳು ಈ ಪರಮ ಸತ್ಯವನ್ನು ತಿಳಿಯಬೇಕಾಗಿದೆ. ಮಾತ್ರವಲ್ಲ, ಶಾಂತಿಯನ್ನು ಸೃಷ್ಟಿಸುವ ಸತ್ಯ, ಪ್ರೀತಿ, ನೀತಿ ಎಂಬ ಆ ದೈವತ್ವವನ್ನು ಮಾನವ ಹೃದಯಗಳಲ್ಲಿ ಬೆಳೆಸುವ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗಿದೆ. ಇಲ್ಲವಾದರೆ, ‘ಶಾಂತಿಗಾಗಿ ಇರುವವುಗಳು’ ಎಂದು ಹೇಳಿಕೊಳ್ಳುವ ಈ ಧರ್ಮ, ಪಂಥಗಳಿಂದ ಈ ಮಾನವ ಕುಲವೇ ಸರ್ವನಾಶಮಾಡಿಬಿಡಬಹುದು.

ಪ್ರಶ್ನೆ- ನಿಮ್ಮ ರಾಜಕೀಯ ದೃಷ್ಟಿಕೋನವು ವ್ಯತ್ಯಸ್ಥ ಎಂದು ಕೇಳಿದ್ದೇವೆ, ಅದರ ಬಗ್ಗೆ ತಿಳಿಸಬಹುದೇ?

ಉತ್ತರ- ಹೌದು, ನನ್ನ ರಾಜಕೀಯ ದೃಷ್ಟಿಕೋನವು ಅದು ಪರಮ ಪವಿತ್ರವಾದುದರಿಂದ ಅದು ಇಂದಿನ ಅಧಪತಿಸಿದ ರಾಜಕೀಯದ ಕಾಲಕ್ಕೆ ಹೊಂದಲಾರದು ಎಂದು ನನಗೆ ತಿಳಿದಿದೆ. ಮುಂದೆ, ಜನರು ಪ್ರಬುದ್ಧರಾದರೆ, ಕೆಲವೊಮ್ಮೆ, ಆ ರೀತಿಯು ಈ ಭಾರತ ಭೂಮಿಯನ್ನು ಪಾವನಗೊಳಿಸಬಹುದು ಎಂದು ತಿಳಿದಿದ್ದೇನೆ. ಅದಕ್ಕೆಂದೇ ನನ್ನ ಜೀವನದ ಮೊಟ್ಟ ಮೊದಲ ಬಾರಿಯ ಮತವನ್ನು ಚಲಾಯಿಸಿದ ನಂತರ ಎಂದಿಗೂ ಮತವನ್ನು ಚಲಾಯಿಸದೆ ಆ ವ್ರತವನ್ನು ನಾನು ಇಂದೂ ಮುಂದುವರಿಸುತ್ತಿರುವುದು! ಇದು ನಾನು ಒಬ್ಬನೇ ಮಾಡುವ ವ್ರತವಾಗಿದೆ. ಈ ವ್ರತಕ್ಕೆ ಇನ್ನು ಯಾರನ್ನೂ ಸೇರುವಂತೆ ನಾನು ಹೇಳಿಲ್ಲ ಮತ್ತು ಪ್ರಲೋಭಿಸಲೂ ಇಲ್ಲ. ಬಹಳ ಚುಟುಕಾಗಿ ನನ್ನ ಆ ರಾಜಕೀಯ ದೃಷ್ಟಿಕೋನವನ್ನು ಹೇಳುವುದಾದರೆ, ಅದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿವ ಪ್ರಯತ್ನವೇ ಆಗಿರುವುದು ಎಂದು ಹೇಳಬಹುದು. ಆದರೆ ಆ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಮಾತ್ರ ಇರುವುದಿಲ್ಲ ಅಷ್ಟೆ! ಅಚ್ಚರಿ ಪಡಲು ಏನೂ ಇಲ್ಲ, ಯಾಕೆಂದರೆ ಈ ರಾಜಕೀಯ ಪಕ್ಷಗಳು ಇದ್ದು ಇರುವ ಪ್ರಜಾಪ್ರಭುತ್ವಕ್ಕಿಂತ ಸಾವಿರ ಪಟ್ಟು ಮೇಲಿನ ಮಟ್ಟದ ಪ್ರಜಾಪ್ರಭುತ್ವವು ಇದಾಗಿರುವುದು. ಎಲ್ಲರಿಗೂ ತಿಳಿದಿರುವಂತೆ, ಕಲಹ, ಹಿಂಸೆ, ಕೊಲೆ, ಬ್ರಷ್ಠಾಚಾರ, ಇವೆಲ್ಲ ಇಂದಿನ ರಾಜಕೀಯಕ್ಕೆ ಅಂಟಿರುವ ಆ ವಿವಿಧ ಭೀಕರ ಪಿಶಾಚಿಗಳು. ಅವನ್ನು ಇಲ್ಲದಂತೆ ಮಾಡಲು ಪಕ್ಷರಹಿತ ಪ್ರಜಾಪ್ರಭುತ್ವಕ್ಕೆ ಮಾತ್ರವೇ ಸಾಧ್ಯ.

ಇನ್ನು, ಪಕ್ಷರಹಿತ ಪ್ರಜಾಪ್ರಭುತ್ವ ಎಂದರೆ ಏನು? ಇದರ ಉತ್ತರ, ರಾಷ್ಟ್ರದ ಅಥವಾ ರಾಜ್ಯದ ಎಲ್ಲೆಡೆಯಿಂದಲೂ, ಜನರು, ಜಾತಿ, ಧರ್ಮ, ಎಲ್ಲವನ್ನೂ ಮೀರಿ ಜನರಿಗಾಗಿ ಮಾತ್ರ ಸೇವೆಮಾಡುವ ಸಮಾಜ ಸೇವಕರನ್ನು ಪಡಿತರ ಅಂಗಡಿಗಳ ಮೂಲಕ ಅಥವಾ ಇನ್ನಿತರ ಸಮೀಕ್ಷೆ ರೀತಿಗಳ ಮೂಲಕ ಆರಿಸುವುದಾಗಿದೆ. ಇಲ್ಲಿ, ಚುನಾವಣಾ ವೆಚ್ಚ ಇತ್ಯಾದಿ ಯಾವುದೂ ಇಲ್ಲ. ಈ ಆರಿಸಲ್ಪಟ್ಟ ಪರಿಶುದ್ಧ ಸಮಾಜ ಸೇವಕರಿಗೆ ಮೂರು ತಿಂಗಳುಗಳ ಕಾಲ ಸರಕಾರ ನಡೆಸುವ ಕುರಿತಾಗಿ ವಿವಿಧ ವಿಷಯಗಳ ಬಗ್ಗೆ ತರಬೇತಿಯನ್ನು ಕೊಡಲಾಗುವುದು. ಅದರ ನಂತರ ಅವರು ರಾಷ್ಟ್ರ ಅಥವಾ ರಾಜ್ಯವನ್ನು ನಡೆಸುವರು. ಇಲ್ಲಿ, ಪ್ರತಿಪಕ್ಷದ ಸ್ಥಾನದಲ್ಲಿ, ಇನ್ನೊಂದು ಗುಂಪು ಆರಿಸಲ್ಪಟ್ಟ ಸಮಾಜ ಸೇವಕರೇ ಕುಳಿತು ಸರಕಾರದ ಎಲ್ಲಾ ಚಟುವಟಿಕೆಗಳನ್ನು ಕಲಿತು ಅದರ ಒಳಿತು ಕೆಡುಕಿನ ಬಗ್ಗೆ ವಾದ ಮಾಡುವರು. ಆದುದರಿಂದ ಈ ವಾದಗಳ ಕೊನೆಯಲ್ಲಿ ಮಾತ್ರವೇ ಸರಕಾರದ ಯಾವುದೇ ನಿರ್ಣಯವು ಸಾಧುವಾಗುವುದು. ಇಷ್ಟು ಚಿಕ್ಕ ಬದಲಾವಣೆ ಮಾತ್ರವೇ ಮಾಡಬೇಕಾಗಿರುವುದು, ಆದರೆ ಇಂದಿನ, ‘ಹಣ ಮಾಡುವ ಮತ್ತು ದರ್ಪದ ರಾಜಕೀಯ’ ಎಂಬಲ್ಲಿಂದ ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಿಸುವ ಈ ಪರಿಶುದ್ಧ ಪಕ್ಷರಹಿತ ಪ್ರಜಾಪ್ರಭುತ್ವದ ರಾಜಕೀಯಕ್ಕೆ ಎಷ್ಟು ವರುಷಗಳ ಅಂತರ ಇದೆ ಎಂಬುವುದನ್ನು ನಾನು ಅರಿಯೆನು. ಆದರೆ ಅದಕ್ಕಾಗಿರುವ ವ್ರತವನ್ನು ಮಾತ್ರ, ನಾನು ಒಬ್ಬನೇ, ಆ ಸತ್ಯಯುಗ ಕಾಲದ ರಾಜಕೀಯ ರೀತಿಯ ಆಗಮನಕ್ಕಾಗಿ ಹೃದಯ ತುಂಬಿ ಮುಂದುವರಿಸುವೆನು.

ಪ್ರಶ್ನೆ- ಸನ್ಯಾಸಿಗಳ ವೈರಾಗ್ಯಜ್ಞಾನ ಮತ್ತು ಮಹಾತ್ಮರ ವೈರಾಗ್ಯಜ್ಞಾನ ಇವು ತಮ್ಮೊಳಗಿನ ವ್ಯತ್ಯಾಸವೇನು?

ಉತ್ತರ- ಸನ್ಯಾಸಿಗಳ ವೈರಾಗ್ಯಜ್ಞಾನ ಮತ್ತು ಮಹಾತ್ಮರ ವೈರಾಗ್ಯಜ್ಞಾನಗಳಲ್ಲಿ ವ್ಯತ್ಯಾಸವಿಲ್ಲ, ಆದರೆ ಅದರ ಬಳಸುವಿಕೆಯಲ್ಲಿ ಮಾತ್ರ ರಾತ್ರಿ ಹಗಲಿನಷ್ಟು ವ್ಯತ್ಯಾಸ ಇರುವುದು. ಇದನ್ನು ಅರಿಯಲು, ಮೊದಲಿಗೆ, ವೈರಾಗ್ಯಜ್ಞಾನ ಎಂದರೇನು ಎಂಬುವುದನ್ನು ತಿಳಿಯಬೇಕು. ವೈರಾಗ್ಯಜ್ಞಾನ ಎಂದರೆ, ಮಾನವ ಜೀವನದ ಮಿಥ್ಯತ್ವದ ಅಥವಾ ನಶ್ವರತೆಯ ಬಗ್ಗೆ ಮಾಡಿರುವ ಆಳದ ಚಿಂತನೆಯ ಫಲವಾಗಿ ಬಂದಿರುವ ನಶ್ವರತೆಯ ಆ ಶಾಶ್ವತ ಜ್ಞಾನವಾಗಿರುವುದು. ಅಂದರೆ, ಇದು ಸ್ಮಶಾನ ವೈರಾಗ್ಯದ ತರ ಕೆಲವು ಗಂಟೆಗಳಿಗೆ ಅಥವಾ ಕೆಲವು ದಿವಸಗಳಿಗೆ ಮಾತ್ರ ಸೀಮಿತವಾಗಿರುವ ವೈರಾಗ್ಯ ಅಲ್ಲ ಎಂದು ಅರ್ಥ. ಈ ವೈರಾಗ್ಯಜ್ಞಾನವನ್ನು ಉಪಯೋಗಿಸುವ ರೀತಿಗಳಲ್ಲಿರುವ ವ್ಯತ್ಯಾಸಗಳನ್ನು ನೋಡೋಣ. ಬಹಳ ಚುಟುಕಾಗಿ ಹೇಳುವುದಾದರೆ, ಸನ್ಯಾಸದಲ್ಲಿ ಈ ವೈರಾಗ್ಯಜ್ಞಾನವನ್ನು ತನ್ನ ಲೌಕಿಕ ಜೀವನವನ್ನು ಪೂರ್ತಿಯಾಗಿ ಬಿಟ್ಟುಬಿಡಲು ಸಹಾಯಕವಾಗುವ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಾಗಿದೆ. ಆದರೆ ಮಹಾಜೀವನದಲ್ಲಿ ಈ ವೈರಾಗ್ಯಜ್ಞಾನವನ್ನು ತಮ್ಮ ಜೀವನದ ಆಸೆಗಳನ್ನು ನಿಯಂತ್ರಿಸಲು ಹಾಗೂ ಲೌಕಿಕದ ಆ ಹಲವು ರೀತಿಯ ಭ್ರಮೆಗಳಿಗೆ ಒಳಪಡದೆ ಇರಲು ಬೇಕಾಗಿ ಉಪಯೋಗಿಸಲಾಗುವುದು. ಆದುದರಿಂದ, ಈ ಪ್ರತ್ಯೇಕ ನಶ್ವರತೆಯ ಜ್ಞಾನವು ಮಹಾತ್ಮರಾಗುವುದಕ್ಕೆ ಅನಿವಾರ್ಯವಾಗಿದೆ ಎಂದು ಹೇಳುವುದು. ಮಹಾತ್ಮಾರಾಗುವುದಕ್ಕೆ ಮೂರು ರೀತಿಯ ಜ್ಞಾನಗಳು ಅನಿವಾರ್ಯವಾಗಿದೆ. ಅವಲ್ಲಿ ಒಂದು ಆತ್ಮಪರಿಶೋಧನೆಯ ಜ್ಞಾನ, ಇನ್ನೊಂದು ಸತ್ಯಚಿಂತನೆಯ ವಿವೇಚನೆಯ ಜ್ಞಾನ ಮತ್ತು ಮೂರನೆಯದು ಈಗ ಹೇಳಿರುವ ಆ ವೈರಾಗ್ಯಜ್ಞಾನ ಆಗುವುದು.

ಪ್ರಶ್ನೆ- ನಿಮ್ಮ ಧರ್ಮ ಯಾವುದು? ನೀವು ಯಾವ ಧರ್ಮಕ್ಕೆ ಸೇರಿದವರು?

ಉತ್ತರ- ನಿಜವಾಗಿಯೂ ಧರ್ಮ ಎನ್ನುವುದಕ್ಕೆ ಹೆಸರಿಲ್ಲ. ಯಾಕೆಂದರೆ ಅದು ಸೂರ್ಯನಂತೆ ಎಲ್ಲರಿಗೂ ಒಂದೇ ರೀತಿಯಲ್ಲಿ ಕೆಲಸಮಾಡುವುದು. ನೋಡಿ, “ತಾನೂ ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು, ಹಾಗೂ ಈ ರೀತಿಗೆ ವಿರುದ್ಧವಾಗಿ ನಡೆಯುವವರು ಧಾರ್ಮಿಕರಲ್ಲ” ಎಂದು ಮೂಲದಲ್ಲಿ ಚುಟುಕಾಗಿ ಧರ್ಮವು ಹೇಳುವುದು. ಹಾಗಿರುವಾಗ, ಎಲ್ಲಾ ಧರ್ಮಗಳೂ ಈ ಹಿನ್ನೆಲೆಯ ಸಮಾಜ ಉದ್ದಾರವಾಗುವ ರೀತಿಯನ್ನು ಅನುಸರಿಸಲೇಬೇಕಾಗುವುದು. ಅಯ್ಯೋ, ಇತ್ತ ಜನರು ಧರ್ಮಗಳನ್ನು ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರುವ ವಸ್ತುಗಳ ತರ ನೋಡುತ್ತಾರೆ! ಹಾಗೆ ಆಗುವಾಗ, ಜನರು ಧರ್ಮ ಎಂಬುವುದನ್ನು ಬರೇ ತಮ್ಮ ಆಸಕ್ತಿಯ ಒಂದು ಪಕ್ಷ ಎಂಬಲ್ಲಿಗೆ ಮೆಟ್ಟಿ ತಗ್ಗಿಸಿಬಿಡುತ್ತಾರೆ! ಇದು ನಿಜವಾಗಿಯೂ ಅತ್ಯಂತ ಹೀನವಾದ ಧರ್ಮದ ಮೇಲಿನ ನಿಲುವು ಆಗಿದೆ. ಮಾತ್ರವಲ್ಲ, ಈ ತಪ್ಪಾದ ನಿಲುವು, ಆದಿಯಿಂದಲೇ ಇರುವ ಮತ್ತು ಆ ಭೀಕರ ದ್ವೇಷ, ಹಿಂಸೆ, ರಕ್ತಪಾತಗಳನ್ನು ಸೃಷ್ಟಿಸಿರುವ ನಿಲುವು ಕೂಡಾ ಆಗಿರುವುದು ಎಂಬುವುದನ್ನು ಮರೆಯಬಾರದು.

ಇನ್ನು, ನಿಮ್ಮ ಪ್ರಶ್ನೆಗೆ ಉತ್ತರ ನನ್ನ ಎಂದರೆ, ಅದು, ಸತ್ಯ, ಪ್ರೀತಿ, ನೀತಿ, ಇವು ಮಾತ್ರವೇ ನನ್ನ ಧರ್ಮ ಎಂದಾಗುವುದು. ಈಗ, ನೀವು ಇಷ್ಟು ಮಾತ್ರ ಆಲೋಚಿಸಿದರೆ ಸಾಕಾಗುವುದು, ಅದುವೇ, ಸತ್ಯ, ಪ್ರೀತಿ, ನೀತಿ, ನಿಮ್ಮ ಧರ್ಮದಲ್ಲಿ ಇವೆಯೋ, ಇಲ್ಲವೋ ಎಂದು. ಈಗ ನಿಮಗ್ಗೆ ಉತ್ತರವಾಗಿ ಏನು ಸಿಗುವುದೋ ಆ ನಿಟ್ಟಿನಲ್ಲಿ ನಾನು ನಿಮ್ಮ ಧರ್ಮದಲ್ಲಿ ಸೇರುತ್ತೇನೋ, ಇಲ್ಲವೋ ಎಂದು ನಿಮಗೆ ಆಲೋಚಿಸಿ ತಿಳಿದುಕೊಳ್ಳಬಹುದು. ಈಗ ನಾನು ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೇನೆ.

ನಾನು ವ್ಯಯಕ್ತಿಕವಾಗಿ, ಯಾವ ಯಾಂತ್ರಿಕ ನಂಬಿಕೆ, ಆಚಾರಗಳ ಮೂಲಕವೂ ದೇವರನ್ನು ಮತ್ತು ಧರ್ಮವನ್ನು ನೋಡುವುದಿಲ್ಲ. ಹಾಗೆಂದು, ಮಾನವೀಯತೆಗೆ ವಿರುದ್ಧವಲ್ಲದ ಯಾವ ಧರ್ಮದ ಆಚಾರ, ನಂಬಿಗಳ ವಿರುದ್ಧವೂ ನಾನು ಏನನ್ನೂ ಹೇಳುವುದಿಲ್ಲ, ಅಷ್ಟೆ.

ಸತ್ಯದ ಹಿನ್ನೆಲೆಯಲ್ಲಿ ಆಚರಿಸಬೇಕಾದ ಮತ್ತು ಇರಬೇಕಾದ ದೇವರು ಮತ್ತು ಧರ್ಮಗಳು, ದುರದೃಷ್ಟವಶಾತ್, ನಂಬಿಕೆ, ಆಚಾರಗಳ ಹಿನ್ನೆಲೆಯಲ್ಲಿ ಆಗಿಹೋಗಿವೆ ಮತ್ತು ಅದುವೇ ಶಾಂತಿ ತರಬೇಕಾದ ಧರ್ಮ, ಪಂಥಗಳನ್ನು ದ್ವೇಷ, ಹಿಂಸೆ, ರಕ್ತಪಾತಕ್ಕೆ ಇದುವರೆಗೂ ಪ್ರೇರೇಪಿಸಿರುವುದು ಎಂಬ ಆ ಪರಮ ಸತ್ಯವನ್ನು, ಆ ಸೂಕ್ಷ್ಮದ ರಹಸ್ಯ ಪ್ರಾಚೀನ ವಾಮಾಚಾರದ ಭಯಾನಕ ವಂಚನೆಗಳನ್ನು ಬಯಲಿಗೆಳೆಯುವ ಮೂಲಕ, ಜನರು ಅರಿಯುವಂತೆ ಮಾಡಲು ನಾನು ಪ್ರಯತ್ನಿಸುತ್ತೇನೆ.

ಪ್ರಶ್ನೆ- ಪ್ರಬುದ್ಧತೆ ಎಂದರೆ ಏನು, ಅದನ್ನು ಹೇಗೆ ಗಳಿಸಬಹುದು?

ಉತ್ತರ- ನೋಡಿ, ಪ್ರಬುದ್ಧತೆ ಎಂದರೆ ಅದು ಮನುಷ್ಯನ ವ್ಯಕ್ತಿತ್ವಕ್ಕೆ ಸಂಬಂಧಿಸಿರುವ ಕಾರಣ, ಒಬ್ಬಾತನ ಬುದ್ಧಿ, ಜಾಣತನ, ವಿದ್ಯಾಭ್ಯಾಸ ಇದು ಯಾವುದೂ ಅದನ್ನು ಬಾಧಿಸುವುದಿಲ್ಲ. ನಾವು ವ್ಯಕ್ತಿತ್ವ ಎಂದು ಹೇಳುವುದು ಒಬ್ಬಾತನ ಸ್ವಭಾವದ ಭಾಗವನ್ನು ಮಾತ್ರ ಆಗಿದೆ. ಉದಾಹರಣೆಗೆ ಒಬ್ಬಾತನ ಕೆಟ್ಟ ವ್ಯಕ್ತಿತ್ವ ಎಂದರೆ ಅದು ಆತನ ಹಣ, ವಿದ್ಯೆ, ಬುದ್ದಿವಂತಿಕೆ, ಇತ್ಯಾದಿಗಳನ್ನು ಸ್ಪರ್ಶಿಸುವುದಿಲ್ಲ, ಮತ್ತು ಬರೇ ಆ ವ್ಯಕ್ತಿಯ ಸ್ವಭಾವದ ಬಗ್ಗೆ ಹೇಳುವುದು. ಈ ಹಿನ್ನೆಲೆಯಲ್ಲಿ, ಒಬ್ಬ ವ್ಯಕ್ತಿಯ ಮನಸ್ಸು, ಮಾತು, ಕರ್ಮಗಳನ್ನು ಶುದ್ಧಜ್ಞಾನದ ಅಥವಾ ನಿಸ್ಪಕ್ಷ ತರ್ಕದ ಮೂಲಕ ಪಳಗಿಸಿ, ಆ ಮೂಲಕ ಪಡೆದಿರುವ ವ್ಯಕ್ತಿತ್ವವನ್ನು, ಪ್ರಬುದ್ಧ ವ್ಯಕ್ತಿತ್ವ ಎನ್ನಬಹುದು, ಮತ್ತು ಆ ವ್ಯಕ್ತಿಯ ಮನಸ್ಸು, ಮಾತು, ಕರ್ಮಗಳ ಒಟ್ಟು ಗುಣಮಟ್ಟವನ್ನು ಪ್ರಬುದ್ಧತೆ ಎನ್ನಬಹುದು. ಪ್ರಬುದ್ಧತೆಯನ್ನು ಗಳಿಸಲು ಒಬ್ಬಾತನಿಗೆ ಕಡಿಮೆ ಪಕ್ಷ ಮೂರು ಜ್ಞಾನಗಳು ಬೇಕಾಗುವುದು. ಅವುಗಳೇ ಸರಿ ತಪ್ಪುಗಳನ್ನು ಬೇರ್ಪಡಿಸಿ ತಿಳಿಯುವ ವಿವೇಚನಾಜ್ಞಾನ ಅಥವಾ ಸತ್ಯಚಿಂತನೆಯ ಜ್ಞಾನವಾಗಿದೆ. ಇನ್ನೊಂದು, ತನ್ನಲ್ಲಿರುವ ತಪ್ಪುಗಳನ್ನು ಕಂಡು, ಅವನ್ನು ತಿದ್ದುವ ಆತ್ಮಪರಿಶೋಧನೆಯ ಜ್ಞಾನವಾಗಿದೆ. ಇನ್ನು, ಮೂರನೆಯದ್ದಾಗಿ, ಮಾನವ ಜೀವನದ ನಶ್ವರತೆಯನ್ನು ಅಳದಲ್ಲಿ ಅರಿಯಲು ಸಾಧ್ಯವಾಗುವ ಆ ವೈರಾಗ್ಯಜ್ಞಾನವಾಗಿದೆ. ಇವು ಮೂರು ರೀತಿಯ ಜ್ಞಾನಗಳು ಒಬ್ಬಾತನಲ್ಲಿ ಇರುವುದಾದರೆ ಆ ವ್ಯಕ್ತಿಯು ಪ್ರಬುದ್ಧನಾಗಿಯೇ ಆಗುವನು. ಹೃದಯ ವೈಶಾಲ್ಯತೆಯು ಪ್ರಬುದ್ಧತೆಗೆ ಒಂದು ಉದಾಹರಣೆಯಾಗಿದೆ, ಮತ್ತು ನಿಜವಾದ ಮಹಾತ್ಮರ ಹೃದಯವು ಪ್ರಬುದ್ಧತೆಯನ್ನು ಹೊಂದಿರುತ್ತದೆ.

ಪ್ರಶ್ನೆ- ಜನರು ನೀವು ಹೇಳುತ್ತಿರುವುದು ಎಲ್ಲಾ ಸುಳ್ಳು ಅಥವಾ ತಪ್ಪು ಎಂದರೆ ನಿಮ್ಮ ಉತ್ತರ ಏನು?

ಉತ್ತರ- ಅದಕ್ಕಿಂತ ಮೊದಲು, ನಾನು ಒಂದು ಪ್ರಶ್ನೆಯನ್ನು ಕೇಳುವೆನು. ಪ್ರಶ್ನೆ ಕೇಳುವವರು ಯಾವ ಧರ್ಮ, ಪಂತಕ್ಕೆ ಸೇರಿದವರಾದರೂ ಅವರು ಒಂದನ್ನು ತಿಳಿದಿರಬೇಕು. ಅದೇನೆಂದರೆ ನಿಮ್ಮ ಧರ್ಮವು ಅಥವಾ ಪಂಥವು ತಪ್ಪು ಮತ್ತು ಅದು ದೇವರ ಮೇಲೆ ನಂಬಿಕೆ ಇಲ್ಲದವರ ಧರ್ಮ ಅಥವಾ ಪಂಥ ಎಂದು ಇತರ ಧರ್ಮ ಪಂಥಗಳು ಹೇಳುತ್ತಾ ಬಂದಿವೆಯಲ್ಲಾ, ಅದರ ಕುರಿತು ನೀವು ಏನು ಹೇಳುವಿರಿ? ಎಲ್ಲ ಧರ್ಮಗಳೂ ತಮ್ಮೊಳಗೆ “ತಪ್ಪು” ಎಂದೇ ಹೇಳುವವು. ಆದುದರಿಂದ ನೀವು ರಕ್ತದಲ್ಲಿ ಸೇರಿರುವ ಆ ಅಭ್ಯಾಸ ಬಲದಿಂದ ನನ್ನ ಮಾತುಗಳನ್ನು ಕೂಡ ಅದೇ ರೀತಿ ಹೇಳುತ್ತಿರಬಹುದು ಎಂದು ನಾನು ತಿಳಿದುಕೊಂಡಿದ್ದೇನೆ. ಒಂದು ವಿಷಯವಂತೂ ನಾನು ಹೇಳುವೆನು. ನೋಡಿ, ಮೊದಲಲ್ಲಿ, ನಾನು ಹೇಳುವುದು ನಮ್ಮ ನಂಬಿಕೆ ಎಂದು ಹೇಳಿಕೊಳ್ಳುವ ನಂಬಿಕೆಯ ಪುರಾಣಗಳನ್ನು ಆಚಾರಗಳನ್ನು ಅಲ್ಲ. ಇನ್ನು, ನಾನು ಹೇಳುವುದು ಯಾವುದು ಇದ್ದರೂ ಅವನ್ನು, ನಮ್ಮ ನಂಬಿಕೆ ಎಂದು ಹೇಳದೆ, ಅದನ್ನು ವಿಜ್ಞಾನ, ಗಣಿತಗಳಂತೆ ತರ್ಕದ ಮೂಲಕ ಸಾಧಿಸಿ ತೋರಿಸುತ್ತಾ ಹೋಗುವೆನು. ಆದುದರಿಂದ, ನೀವು ನಾನು ಹೇಳುತ್ತಿರುವುದು ತಪ್ಪು ಎಂದು ಹೇಳಬೇಕಾದರೆ ಮೊದಲು ಪುರಾಣ ಕಥೆಗಳಲ್ಲದ ಆ ನಿಸ್ಪಕ್ಷ ತರ್ಕಗಳನ್ನು ಓದಿ ಆನಂತರ ಅವಲ್ಲಿ ತಪ್ಪಿದ್ದರೆ ತರ್ಕಬದ್ಧವಾಗಿ ಮಾತ್ರ ಅದನ್ನು ತೋರಿಸಿಕೊಡಬೇಕಾಗುವುದು. ಅಂದರೆ ಸುಮ್ಮನೆ ಹೇಳುವಹಾಗಿಲ್ಲ ಎಂದು ಅರ್ಥ. ಇನ್ನೊಂದು ಕಡೆ, ನಾನು ಹೇಳುವುದು ಯಾವುದೇ ದೇವರ ಪರವಾಗಿ ಅಲ್ಲ, ಆಚಾರ್ಯರ ಅಥವಾ ಗುರುಗಳ ಪರವಾಗಿ ಅಲ್ಲ. ನಾನು ಧರ್ಮ, ಪಂಥಗಳನ್ನು ಸೃಷ್ಟಿಸಲಿಲ್ಲ ಮತ್ತು ಸೃಷ್ಟಿಸುವುದಿಲ್ಲ ಎಂಬುವುದು ಸ್ಪಷ್ಟವಾಗಿರುವುದರಿಂದ ನನ್ನ ಪರವಾಗಿಯೂ ಅಲ್ಲ ಎಂಬುವುದು ಸ್ಪಷ್ಟ. ಆದುದರಿಂದ, ಮುಗ್ಧ ಜನರು, ಧರ್ಮ, ಪಂಥಗಳ ಆ ದ್ವೇಷ, ಹಿಂಸೆಗಳ ಬಲಿಪಶುಗಳು ಇನ್ನಾದರೂ ಆಗದಿರಲಿ ಎಂಬ ಕಾರಣಕ್ಕೆ ಹಾಗೂ ಅನ್ಯಗ್ರಹ ಜೀವಿಗಳ ರಹಸ್ಯ ವಾಮಾಚಾರದ ಇನ್ನೂ ಇತರ ಭಯಾನಕ ವಂಚನೆಗಳಿಗೂ ಬಲಿಯಾಗದಿರಲಿ ಎಂಬ ಕಾರಣಕ್ಕೂ ಬೇಕಾಗಿ ಮಾತ್ರ ನಾನು ಆ ಸೂಕ್ಷ್ಮದ ಅತಿ ರಹಸ್ಯಗಳನ್ನು ಜನರಿಗೆ ತಿಳಿಸುತ್ತಿರುವುದು ಅಷ್ಟೆ. ನನ್ನ ಮಾತನ್ನು ಯಾರೂ ಗಮನಿಸದಿದ್ದರೆ, ನಾನು ಚಡಪಡಿಸುವ ಅಗತ್ಯವಿಲ್ಲ, ನನಗೆ ಯಾರನ್ನೂ ಬಲವಂತಪಡಿಸುವ ಅಗತ್ಯವಿರುವುದಿಲ್ಲ, ಮತ್ತು ನನ್ನ ಮಾತು ಈ ಭೂಮಿ ಪೂರ್ತಿ ಹಬ್ಬಿಸಲು ನನ್ನಲ್ಲಿ ಯಾವ ಶಕ್ತಿಯೂ ಮೇಲಿಂದ ಹೇಳಿಯೂ ಇಲ್ಲ. ಆದುದರಿಂದ ನಾನು ಮೊದಲೇ ಹೇಳಿರುವಂತೆ, ರೈಲು ಹಳಿಯಲ್ಲಿ ಅತಿ ದೊಡ್ಡ ಬಿರುಕುಗಳು ಇರುವುದನ್ನು ಕಂಡಾಗ ಹತ್ತಿರದ ರೈಲು ನಿಲ್ಧಾಣಗಳಲ್ಲಿ ಇರುವ ನಿಮಗೆ ತಿಳಿಸುವ ಕೆಲಸವನ್ನು ಮಾತ್ರ ನಾನು ಮಾಡುತ್ತಿರುವುದು, ಅಷ್ಟೆ. ಒಟ್ಟಲ್ಲಿ, ನಾನು ಇತರ ಧರ್ಮ, ಪಂಥಗಳು ಮಾಡುವ ರೀತಿಯಲ್ಲಿ, ನನ್ನ ಪರವಾಗಿ ವಾದ ಮಾಡಲು, ಮತಾಂತರ ಮಾಡಲು, ಮತ್ತು ಆ ನಿಟ್ಟಿನಲ್ಲಿ ಇತರ ಧರ್ಮ, ಪಂಥಗಳನ್ನು ಇಲ್ಲದಂತೆ ಮಾಡಿ ಜಗತ್ತನ್ನು ಜಯಿಸಲು ಹೊರಡುವುದಿಲ್ಲ ಎಂದು ನಿಮಗೆ ಎಲ್ಲರಿಗೂ ಭರವಸೆಯನ್ನು ಕೊಡುತ್ತೇನೆ. ಮಾನವರ ಒಂದಾಗುವಿಕೆಯೇ ಧರ್ಮದ ಅಡಿಪಾಯ ಮತ್ತು ಅದರ ಮೊಟ್ಟಮೊದಲ ಸೇವೆ ಎಂಬ ಆ ಪರಮಸತ್ಯವನ್ನು ಧರ್ಮ, ಪಂಥಗಳು ಎಲ್ಲವೂ ಪೂರ್ತಿಯಾಗಿ ಮರೆತಂತೆ ಅವು ಇದುವರೆಗೂ ವರ್ತಿಸುತ್ತಾ ಬಂದಿರುವುದು!

ಮಹಾಜೀವನ ವಿವೇಕಾನಂದರ ಯೋಚನೆ ಅಥವಾ ಯೋಜನೆ ಆಗಿತ್ತೇ?

ಉತ್ತರ- ಮಹಾತ್ಮರೆಲ್ಲರು ಮಾನವರ ಏಳಿಗೆಗೆ ಶ್ರಮವಹಿಸಿದವರು ಎಂಬ ಹಿನ್ನೆಲೆಯಲ್ಲಿ ಅದು ಸರಿ ಎಂದು ಹೇಳಬಹುದು. ಆದರೆ ಮನೆ ಮನೆಯ ಮಹಾತ್ಮರ ರೀತಿಯು ಜಗತ್ತಿಗೆ ಹೊಸದು. ವಿವೇಕಾನಂದರು ಸೇರಿ ಹಿಂದಿನ ಮರದಡಿಯ ಮಹಾತ್ಮರ ರೀತಿಗೆ, ವೈವಾಹಿಕ, ಕೌಟುಂಬಿಕ, ಹಾಗೂ ಸಾಮಾಜಿಕ ಜೀವನವನ್ನು ಮೇಲೆತ್ತುವಲ್ಲಿ, ಉತ್ತಮ ಫಲವನ್ನು ತಂದು ಕೊಡಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಇಂದಿನ ಸಮಾಜವೇ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮನೆ ಮನೆಯ ಮಹಾತ್ಮರ ಜೀವನ ಅಥವಾ ಮಹಾಜೀವನ ಹಾಗೂ ದಿವ್ಯಜ್ಞಾನ ಸನ್ನಿಧಿಗಳು ಅವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿರುವ ಹೊಸ ಆವಿಷ್ಕಾರಗಳಾಗಿವೆ ಎಂದು ತಿಳಿಯಬೇಕು.

ಮಹಾಜೀವನದ ಆ ಸೇವಾ ಜೀವನವು ವಿಶೇಷ ಎಂದು ನೀವು ಹೇಳುವುದಕ್ಕೆ ನಿಜವಾಗಿಯೂ ಕಾರಣವಿರುವುದೇ?

ಉತ್ತರ- ದೇವರು ಧರ್ಮಗಳು ಮತ್ತು ಅವುಗಳ ಆರಾಧನೆ ಅನುಷ್ಠಾನಗಳು ಇರಲಿ, ಆದರೆ ಅವುಗಳು ಇದ್ದೂ ಮಾನವನು ಕಣ್ಣೀರು ಹಾಕುತ್ತಿರುವಾಗ ಅದನ್ನು ಕಡಿಮೆ ಮಾಡಲು ಮಾಡುವ ಯಾವುದೇ ಪ್ರಯತ್ನವು ಅದು ದೇವರು ಮತ್ತು ಧರ್ಮಕ್ಕಿಂತಲು ಮಿಗಿಲಾದ ದೈವಿಕ ಕೆಲಸ ಎಂದು ನಾನು ತಿಳಿದಿದ್ದೇನೆ. ದೇವರು, ತನ್ನ ಪ್ರೀತ್ಯರ್ಥವಾಗಿ ತನಗೆ ಏನನ್ನಾದರೂ ಭಕ್ತರು ಕೊಟ್ಟರೆ ಅಥವಾ ಆಚಾರ ಮಾಡಿದರೆ, ಅಂಥವರಿಗೆ ಮಾತ್ರ ಅನುಗ್ರಹಿಸುವನಂತೆ ಅಥವಾ ಸ್ವರ್ಗವನ್ನು ನೀಡುವನಂತೆ. ಹೀಗಿರಲು, ತಮಗಾಗಿ ಕೇಳದೆ, ಮುಗ್ಧ ಹಾಗೂ ಉತ್ತಮ ಮಾನವರ, ಆ ಕಣ್ಣೀರು ಒರೆಸುವ ಸೇವೆಯು ದೈವೀಕತೆಗಿಂತಲು ಮಿಗಿಲು ಎಂಬುದರಲ್ಲಿ ಸಂಶಯವಿಲ್ಲ.

ಪ್ರಶ್ನೆ- ನೀವು, ದೇವರು , ಧರ್ಮ, ಇತ್ಯಾದಿಗಳ ಬಗ್ಗೆ ನಿಮ್ಮ ಸ್ಪಷ್ಟ ನಿಲುವುಗಳನ್ನು ತಿಳಿಸಿದ್ದೀರಿ, ಹಾಗಿರುವಾಗ, ಭಕ್ತರಿಗೆ ನಿಮ್ಮ ಅನುಗ್ರಹದ ಬಗ್ಗೆ ಸ್ಪಷ್ಟವಾಗಿ ತಿಳಿಸಬಹುದಲ್ಲಾ?

ಉತ್ತರ- ನೋಡಿ, ನಾನು ನನ್ನ ಅನುಗ್ರಹದ ಬಗ್ಗೆ ಎಲ್ಲೂ ಏನೂ ಹೇಳಲಿಲ್ಲ, ಮತ್ತು ಹೇಳುವುದೂ ಇಲ್ಲ. ಭಕ್ತರು ಹೇಳಿ ಕೇಳಿ ಬಂದವರು ಅಷ್ಟೆ. ಮಾನವರು ಉತ್ತಮ ವ್ಯಕ್ತಿತ್ವವನ್ನು ಪಡೆದರೆ ಅವರ ಜೀವನವೇ ಬೆಳಗಲ್ಪಟ್ಟು ಅದು ಅವರ ಪಾಲಿಗೆ ಅತ್ಯುತ್ತಮ ಅನುಗ್ರಹವಾಗಿಬಿಡುವುದು ಎಂಬುವುದೇ ನನ್ನ ಮೊದಲ ಮತ್ತು ಕೊನೆಯ ಮಾತು. ಅದಕ್ಕೆ ಸಹಾಯವಾಗುವ ಎಲ್ಲವನ್ನು ನಾನು ಮಾನವರಿಗಾಗಿ ಮಾಡುತ್ತಿದ್ದೇನೆ.

ಇನ್ನು, ಜಗತ್ತಿನ ಸರ್ವ ಕಡೆಯೂ ಸರ್ವ ಮನುಷ್ಯರನ್ನು ಬಹಳ ರಹಸ್ಯವಾಗಿ ಮತ್ತು ವಿಧಿ ಸ್ವರೂಪದಲ್ಲಿ ಆಟ ಆಡಿಸುವ ಆ ಅನ್ಯಗ್ರಹ ಜೀವಿಗಳ ಸೂಕ್ಷ್ಮದ ರಹಸ್ಯ ವಾಮಾಚಾರವು ಇರುವುದು ಎಂದು ನಾನು ಖಂಡಿತವಾಗಿಯೂ ಹಾಗೂ ಸ್ಪಷ್ಟವಾಗಿಯೂ ನನ್ನ 15 ವರುಷಗಳ ಸೂಕ್ಷ್ಮದ ಬೇಹುಗಾರಿಕೆಯಿಂದ ತಿಳಿದಿದ್ದೇನೆ. ಶಿಲಾಯುಗದ ಕಾಡು ಜನರ ಆ ಕಾಡು ದೇವತೆಗಳ ಆರಾಧನೆಯ ಕಾಲದಿಂದಲೇ, ಒಂದು ಚಿಕ್ಕ ಶೇಖಡ ಅನುಗ್ರಹವು, ಈ ಅನ್ಯಗ್ರಹ ಜೀವಿಗಳ ರಹಸ್ಯ ವಾಮಾಚಾರವು, ಜನರು ನಂಬಿ ಬಾಹ್ಯ ಆರಾಧನೆಯನ್ನು ತಲೆತಲೆಮಾರುಗಳು ನಡೆಸಿಕೊಂಡು ಹೋಗುವಂತೆ ಮಾಡಲು, ಆರಾಧನೆ ಮಾಡುವವರಲ್ಲಿ ಕೆಲವರಿಗೆ ನೀಡುತ್ತಾ ಬಂದಿರುವವು ಹಾಗೂ ಅಲ್ಲಲ್ಲಿ ಪವಾಡಗಳನ್ನು ನಡೆಸುತ್ತಾ ಬಂದಿರುವವು. ಆ ರೀತಿ, ಇಂದು ಹಲವು ಹಲವು ರೂಪಗಳಲ್ಲಿ ಈ ಜಗತ್ತಲ್ಲಿ ಕಾಣಿಸುವವು ಅಷ್ಟೆ. ಒಟ್ಟಲ್ಲಿ ಹೇಳುವುದಾದರೆ, ಈಗ, ನಾನು ಸೂಕ್ಶ್ಮದ ಬೇಹುಗಾರಿಕೆಯಲ್ಲಿ ಕಂಡ ಆ ಸೂಕ್ಶ್ಮದ ರಹಸ್ಯ ಸತ್ಯವನ್ನು ನಿಮ್ಮಲ್ಲಿ ಹೇಳಿದ್ದೇನೆ ಅಷ್ಟೆ, ಅದಲ್ಲದೆ ಶಿಲಾಯುಗದಿಂದಲೇ ಭಯಾನಕವಾಗಿ ಹಬ್ಬಿರುವ ಆ ರಹಸ್ಯ ವಾಮಾಚಾರ ವ್ಯವಸ್ಥೆಯನ್ನು ಮತ್ತು ಅವುಗಳ ಮಾನವನ ವಿಧಿಯ ಕಾಟವಾದ ಕಷ್ಟ, ನೋವು, ಆಯುಷ್ಯ, ಇತ್ಯಾದಿಗಳನ್ನು ನನ್ನಿಂದ ಏನು ಮಾಡಲು ಸಾಧ್ಯ, ನೀವೇ ಹೇಳಿ.

ಇನ್ನು, ನಾನು ನನ್ನ ಓಂದೇವ ದೇವಸಂಕಲ್ಪದ ಸಹಾಯದಿಂದ 15 ವರುಷಗಳು ಸೂಕ್ಷ್ಮದಲ್ಲಿ ರಹಸ್ಯವಾಗಿ ಬೇಹುಗಾರಿಕೆ ಮಾಡಿರುವುದು ನಿಮಗೆ ಎಲ್ಲರಿಗೂ ತಿಳಿದ ವಿಚಾರವೂ ಹೌದು. ಭಕ್ತರ ಬೇಡಿಕೆಯ ಒತ್ತಡದಿಂದ, ಆ ಅನ್ಯಗ್ರಹ ಜೀವಿಗಳ ರಹಸ್ಯ ವಾಮಾಚಾರ ನನ್ನ ಮೇಲೆ ಮಾಡುವ ತೊಂದರೆಗಳನ್ನು ಆದಷ್ಟು ಕಡಿಮೆಗೊಳಿಸಲು, ಸೂಕ್ಷ್ಮದಲ್ಲಿ ನನ್ನ ಶಕ್ತಿಗಳು ರಹಸ್ಯವಾಗಿ ಆಥವಾ ಅಡಗಿ ಅನುಗ್ರಹ ಕೊಡುವ ಒಂದು ಪ್ರತ್ಯೇಕ ಅನುಗ್ರಹ ವ್ಯವಸ್ಥೆಯನ್ನು ಕೊನೆಗೂ ಬೇರೆ ಉಪಾಯ ಇಲ್ಲದೆ ಭಕ್ತರಿಗೆ ಬೇಕಾಗಿ ಇರಿಸಿಕೊಳ್ಳಬೇಕಾಗಿ ಬಂತು.

ಸೂಕ್ಷ್ಮದಲ್ಲಿ ಅಡಗಿ ಅನುಗ್ರಹಿಸುವ ಈ ಹೊಸ ರೀತಿಯನ್ನು ಇಟ್ಟುಕೊಂಡಿರುವ ಕಾರಣ, ಅನುಗ್ರಹವಾಗಲಿ ಅಥವಾ ಓಂದೇವಸಂಕಲ್ಪದ ನಿಂದನೆ ಇತ್ಯಾದಿಗಳಿಗಿರುವ ಶಿಕ್ಷಣೆಯಾಗಲಿ ಕೂಡಲೇ ಫಲಿಸಬಹುದೆಂದು ಹೇಳಲು ಖಂಡಿತವಾಗಿಯೂ ಸಾಧ್ಯವಿಲ್ಲ. ಏನೇ ಆಗಲಿ, ಅದು ಅಂದು ಮಾಡಿಟ್ಟ ರೀತಿ, ಅದು ಅದರ ಪಾಡಿಗೆ ನಡೆಯುತ್ತಿರಲಿ, ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದು ಬೇಡ. ನೀವು ಪ್ರಶ್ನೆ ಕೇಳಿದ್ದಕ್ಕೆ ಉತ್ತರವಾಗಿ ನಾನು ಇರುವ ಸತ್ಯವನ್ನು ಹೇಳಿದೆ ಅಷ್ಟೆ.

ದೇವಸಂಕಲ್ಪ ಎಂದಾಗುವಾಗ, ಅಲ್ಲಿ ಭಕ್ತ ರಕ್ಷಣೆ ಮತ್ತು ದುಷ್ಟ ಶಿಕ್ಷಣೆ ಎಂಬ ಎರಡು ರೀತಿ ಬೇಕೇ ಬೇಕಾದ ಕಾರಣ, ಆ ಎರಡು ರೀತಿಗಳನ್ನು ಇರಿಸಿಕೊಂಡಿರುವುದು ಎಂದು ತಿಳಿಯಬೇಕು. ಆ ಅನ್ಯಗ್ರಹ ಜೀವಿಗಳ ರಹಸ್ಯ ವಾಮಾಚಾರದ ಕುರಿತಾಗಿ ನಾನು ಮಾನವ ಜಗತ್ತಿಗೆ ತಿಳಿಸಿರುವ ಕಾರಣ, ಅವುಗಳಿಗೆ ನನ್ನ ಮೇಲೆ ಕೋಪ ಇದೆ, ಆದರೆ, ನಾನು ಅವುಗಳ ಕೈಗಳಿಗೆ ಸಿಗದಂತೆ ಹಾಗೂ ಸೂಕ್ಷ್ಮದಲ್ಲಿ ಅಡಗಿ ಹೋರಾಡುತ್ತಿರುತ್ತೇನೆ. ಈ ಸೂಕ್ಷ್ಮದ ಅಡಗಿ ಮಾಡುವ ಹೋರಾಟದಲ್ಲಿ ನನಗೆ ಏನೆಲ್ಲಾ ತೊಂದರೆಗಳು ಇದುವರೆಗೆ ಸಂಭವಿಸಿದೆ ಮತ್ತು ಮುಂದೆ ಏನೆಲ್ಲಾ ಸಂಭವಿಸಬಹುದು ಎಂಬುವುದು ಬೇರೆ ವಿಷಯ. ಅದು ಏನೇ ಆದರೂ, ನನ್ನ ಓಂದೇವ ಸಂಕಲ್ಪವು ಅದು ಒಂದು ದೇವಸಂಕಲ್ಪ ಆದುದರಿಂದ ಅದರ ನಿಯಮವನ್ನು ನಾನು ಪಾಲಿಸಲೇಬೇಕಾಗುತ್ತದೆ ಅಷ್ಟೆ. ಅದರಲ್ಲಿ ಅನುಗ್ರಹಕ್ಕೆ ಒಂದು ರೀತಿ ಇದೆ. ಅದೇ ರೀತಿ, ಓಂದೇವ ಸಂಕಲ್ಪದ ವಿರುದ್ಧ ಮಾಡಿರುವ ಪಾಪಗಳ ಶಮನಕ್ಕೂ ಅದರದೇ ಆದ ಪ್ರಾಯಶ್ಚಿತ ದಾರಿ ಇರುವುದು, ಈ ಪ್ರತ್ಯೇಕ ದಾರಿಗಳಲ್ಲದೆ ಬೇರೆ ಯಾವ ರೀತಿಯಲ್ಲೂ ಅವನ್ನು ಪಡೆಯುವುದೋ ಪರಿಹರಿಸಿಕೊಳ್ಳುವುದೋ ಸಾಧ್ಯವಿಲ್ಲ. ಇಷ್ಟು ಮಾತ್ರವೇ, ಹಿಂದೆಯೇ ಮಾಡಿಟ್ಟಿರುವ, ಆ ನನ್ನ ಓಂದೇವ ಸಂಕಲ್ಪದ ಸ್ಪಷ್ಟ ರೀತಿಯಾಗಿರುವುದು.

ಇವೆಲ್ಲಾ ಓಂದೇವ ದೇವಸಂಕಲ್ಪಕ್ಕೆ ಸಂಬಂಧಿಸಿರುವ ಕಾರಣ, ಅವು ಪೂರ್ತಿಯಾಗಿಯೂ ವ್ಯಯಕ್ತಿಕವಾಗಿರುವುದು. ಇನ್ನು, ನನ್ನದೇ ರೀತಿಯ ಈ ಅನುಗ್ರಹ ವ್ಯವಸ್ಥೆಯು, ಜೀವನದಲ್ಲಿ ನೊಂದ ಜನತೆಯ ಕಣ್ಣೀರು ಒರೆಸಲೆಂದು ನನ್ನ ಜೀವನವನ್ನೇ ಮುಡಿಪಾಗಿರಿಸಿದ ಆ ಮಹಾಜೀವನ ರೀತಿಗೆ ಹಾಗೂ ದಿವ್ಯಜ್ಞಾನ ಸನ್ನಿಧಿ ರೀತಿಗೆ ಸ್ವಲ್ಪವೂ ಸಂಬಂಧಿಸಿಲ್ಲ ಎಂದು ಪ್ರತ್ಯೇಕವಾಗಿಯೂ ತಿಳಿಯಬೇಕು.

ಪ್ರಶ್ನೆ- ದಿಗಂಬರ ಸನ್ಯಾಸಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ- ಮೋಕ್ಷ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಅಲ್ಲಿರಲಿ, ಈಗ, ಬಟ್ಟೆ ಹಾಕಿ ಇರುವ ಸನ್ಯಾಸಿಗಳು ಈ ಭೂಮಿಯಲ್ಲಿ ಎಲ್ಲಾ ದರ್ಮಗಳಲ್ಲೂ ಇರುವರು. ಮಾತ್ರವಲ್ಲ ಅದೇ ಧರ್ಮದಲ್ಲಿ ಬಿಳಿ ಬಟ್ಟೆ ಧರಿಸುವ ಸನ್ಯಾಸಿಗಳನ್ನೂ ಕಾಣಬಹುದಾಗಿದೆ. ಆದುದರಿಂದ, ಮೋಕ್ಷಕ್ಕೆ, ದಿಗಂಬರರು ಆಗಿ ಸಾಧನೆ ಮಾಡಬೇಕಾಗಿಲ್ಲ ಎಂಬುವುದು ಅಲ್ಲಿ ಸ್ಪಷ್ಟವಾಗುವುದು. ಇನ್ನು, ಅದನ್ನು ಸಂಸ್ಕೃತಿಯ ಹಿನ್ನೆಲೆಯಲ್ಲಿ ವಾದಿಸುವ ಹಾಗಿಲ್ಲ, ಯಾಕೆಂದರೆ ಅದು ಕಾಡು ಜನಾಂಗದವರ ಸಂಸ್ಕೃತಿಯಷ್ಟು ಹಿಂದಿನ ಸಂಸ್ಕೃತಿಗೆ ಒಯ್ಯುವುದು.

ಪ್ರಶ್ನೆ- ಪೂರ್ಣವಾಗಿ ಮಹಾತ್ಮರಾಗಲು ಬೇಕಾದ ಆ ಮೂರು ಜ್ಞಾನಗಳ ಬಗ್ಗೆ ವಿವರಿಸಬಹುದೇ?

ಉತ್ತರ- ಪೂರ್ಣವಾಗಿ ಮಹಾತ್ಮರಾಗಲು ಒಬ್ಬಾತನಿಗೆ ಕಡಿಮೆ ಪಕ್ಷ ಮೂರು ಜ್ಞಾನಗಳು ಬೇಕಾಗುವುದು. ಅವುಗಳಲ್ಲಿ ಒಂದು, ಸರಿ, ತಪ್ಪುಗಳನ್ನು ಬೇರ್ಪಡಿಸಿ ತಿಳಿಯುವ ವಿವೇಚನಾಜ್ಞಾನ ಅಥವಾ ಸತ್ಯಚಿಂತನೆಯ ಜ್ಞಾನವಾಗಿದೆ. ಇನ್ನೊಂದು, ತನ್ನಲ್ಲಿರುವ ತಪ್ಪುಗಳನ್ನು ಕಂಡು, ಅವನ್ನು ತಿದ್ದುವ ಆತ್ಮಪರಿಶೋಧನೆಯ ಜ್ಞಾನವಾಗಿದೆ. ಇನ್ನು, ಮೂರನೆಯ ಜ್ಞಾನ, ಮಾನವ ಜೀವನದ ನಶ್ವರತೆಯನ್ನು ಅಳದಲ್ಲಿ ಅರಿಯಲು ಸಾಧ್ಯವಾಗುವ ಆ ವೈರಾಗ್ಯಜ್ಞಾನವಾಗಿದೆ. ಇವು ಮೂರು ರೀತಿಯ ಜ್ಞಾನಗಳು ಒಬ್ಬಾತನಲ್ಲಿ ಇರುವುದಾದರೆ ಆ ವ್ಯಕ್ತಿಯು ಮಹಾತ್ಮನಾಗಿಯೇ ಆಗುವನು.

ಪ್ರಶ್ನೆ- ಮಹಾಜೀವನ ಎಂಬುವುದು ಕೂಡ ಒಂದು ಧರ್ಮ ಅಥವಾ ಪಂತ ಆಗುವುದಿಲ್ಲವೇ?

ಉತ್ತರ- ಧರ್ಮ ಅಥವಾ ಪಂಥ ಆಗಬೇಕಿದ್ದರೆ ಎರಡು ಮುಖ್ಯ ಘಟಕಗಳ ಅನಿವಾರ್ಯತೆ ಇದೆ. ಅವಲ್ಲಿ ಒಂದು, ಅದರದ್ದೇ ಆಗಿರುವ ಮತ್ತು ಇತರ ಧರ್ಮ, ಪಂಥಗಳಿಗಿಂತ ಪ್ರತ್ಯೇಕತೆಯನ್ನು ತೋರಿಸುವ, ಆಚಾರ, ನಂಬಿಕೆಗಳು ಅದರೊಳಗೆ ಇರುತ್ತವೆ. ಇನ್ನೊಂದು, ಅದರ ವಾದವು ತಾವು ಬೇರೆ ಮತ್ತು ಶ್ರೇಷ್ಠ ಎಂದು ಹೇಳಿಕೊಳ್ಳುವ ತರದಲ್ಲಿ ಇರುವವು. ಅಂದರೆ, ಅವು ತಮ್ಮ ಬೇಲಿಯೊಳಗಿದ್ದು ತಮಗಾಗಿ ಪಕ್ಷಪಾತದ ತರ್ಕವನ್ನು ಉಪಯೋಗಿಸುವವು. ಆದರೆ, ಕ ಇವು ಎರಡು ಕಾಣಿಸುವುದಿಲ್ಲ ಎಂಬುವುದು ಮುಖ್ಯ ಅಂಶವಾಗಿದೆ. ಮಾತ್ರವಲ್ಲ, ಗಣಿತದ ತರ ಸರ್ವರಿಗೂ ಅನ್ವಯ ಆಗುವ ರೀತಿಯಲ್ಲಿ ಅದು ಇರುವುದು.

ಒಳಿತಿನ ಹಾದಿಯಲ್ಲಿನ ನಿಸ್ಪಕ್ಷ ತರ್ಕವೇ ಸತ್ಯದ ದಾರಿ ಆಗುವುದು. ಸತ್ಯದ ದಾರಿಯೇ ದೇವರ ಹಾಗೂ ಧರ್ಮದ ದಾರಿ ಆಗುವುದು.

ಒಳಿತಿನ ಹೆಸರಲ್ಲಿ ಪಕ್ಷಪಾತದ ತರ್ಕವು ಅನ್ಯಾಯದ ಹಾಗೂ ಅಧರ್ಮದ ದಾರಿ, ಇದು ದೇವರ ದಾರಿ ಎಂದೂ ಆಗಲಾರದು.

ದಯವಿಟ್ಟು ಇನ್ನಾದರೂ ಅನಂತ ಆಕಾಶವೆಂಬ ದೇವರು ಮತ್ತು ಧರ್ಮಗಳಿಗೆ ಹಾಕಿರುವ ಆ ಪ್ರತ್ಯೇಕತೆಯ ಬೇಲಿಗಳನ್ನು ತೆಗೆಯಿರಿ. ದೇವರು, ಧರ್ಮಗಳು ಬಂಧನಮುಕ್ತವಾಗಿ ಸತ್ಯಯುಗವನ್ನು ಈ ಧರೆಯಲ್ಲಿ ಸೃಷ್ಟಿಸಲಿ.

ದೇವರು, ಧರ್ಮಗಳು ನಮ್ಮ ನಮ್ಮ ನಂಬಿಕೆಗಳಿಗೆ ಬಿಟ್ಟ ವಿಚಾರ ಎಂಬ ಆ ಹಠಮಾರಿತನದ ಕತ್ತಲೆಯಿಂದ ಪಾರಾಗಿ, ನಿಜವಾಗಿಯೂ ದೇವರು, ಧರ್ಮಗಳು ಆ ಪವಿತ್ರ ಸತ್ಯದ ವಿಚಾರ ಆದುದರಿಂದ, ಅವು, ಆ ಬೇಲಿ ರಹಿತ ನಿಸ್ಪಕ್ಷ ತರ್ಕದ ಹಿನ್ನೆಲೆಯಲ್ಲಿ, ಜ್ಞಾನದ ಬೆಳಕಾಗಿ, ಬೆಳಕಿನೆಡೆಗೆ ನಮ್ಮನ್ನು ನಡೆಸಲಿ.

ನಂಬಿಕೆಯ ಕತ್ತಲೆಯ ಕಲಿಯುಗದಿಂದ ಸತ್ಯದ ಬೆಳಕಿನ ಸತ್ಯಯುಗದ ಕಡೆಗೆ ತೀರ್ಥಯಾತ್ರೆಯನ್ನು ಆರಂಭಿಸೋಣ.
 
ಪ್ರಶ್ನೆ- ಮಹಾಜೀವನದ ಪ್ರತ್ಯೇಕತೆಯನ್ನು ಅಥವಾ ವಿಶೇಷತೆಯನ್ನು ವಿವರಿಸಬಹುದೇ?

ಉತ್ತರ- ಮಹಾಜೀವನವು ಸ್ಪಷ್ಟವಾಗಿ ಹೇಳುವುದೇನೆಂದರೆ, ಉತ್ತಮ ಸ್ವಭಾವ ಇರುವವರಿಗೆ ಮಾತ್ರ ಜೀವನದಲ್ಲಿ ಅನಗತ್ಯವಾಗಿ ಬರುವ ಆ ಸಾವಿರಾರು ಮಾನಸಿಕ ಹಿಂಸೆ, ಅಶಾಂತಿಗಳಿಂದ ಪಾರಾಗಲು ಸಾಧ್ಯ ಎಂದಾಗಿದೆ. ಆದುದರಿಂದ ಮುಖ್ಯವಾಗಿಯೂ ಮಹಾಜೀವನವು ಮನುಷ್ಯನ ಸ್ವಭಾವದ ಬೆಳವಣಿಗೆಯನ್ನು ಗಮನಿಸುವುದು. ಇದು, ಇತರ ಕಡೆಗಳಂತೆ, ಯಾವುದೇ ಧರ್ಮ, ಪಂಥ, ಆಚಾರ, ನಂಬಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಇರುವ ರೀತಿ ಅಲ್ಲ. ಅದು ಮಾನವನ ಮನಶ್ಯಾಂತಿ, ಮನೆಶಾಂತಿ, ಜೀವನಶಾಂತಿ, ಸಮಾಧಾನ, ಸಂತೋಷವನ್ನು ಹೆಚ್ಚಿಸುವಲ್ಲಿ ಕೆಲಸಮಾಡುತ್ತದೆ. ಯಾವ ಧರ್ಮ, ಪಂಥಗಳ ಜನರಿಗೂ ಅವರವರ ಧರ್ಮ, ಪಂಥಗಳಲ್ಲಿ ಇದ್ದೇ ಮಹಾಜೀವನದ ಲಾಭವನ್ನು ಪಡೆಯಲು ಸಾಧ್ಯವಾಗುವುದು. ಮನಶ್ಯಾಂತಿ, ಮನೆಶಾಂತಿ, ಜೀವನಶಾಂತಿ ಇವುಗಳು ಬೇರೆ ಬೇರೆಯಾಗಿದ್ದು ಅವನ್ನು ಪಡೆಯುವ ಸಾಧನಾ ದಾರಿಯು ಮತ್ತೂ ಮಹಾಜೀವನದ ಪ್ರತ್ಯೇಕತೆಯನ್ನು ಎತ್ತಿ ಹೇಳುವುದು. ಸಾಮಾಜಿಕವಾಗಿ ಮತ್ತು ಜಾಗತಿಕವಾಗಿ ಮಹಾಜೀವನವು ಮಾನವರೆಲ್ಲರ ಒಗ್ಗಟ್ಟನ್ನು ಹೆಚ್ಚಿಸುವಲ್ಲಿ ಕೆಲಸಮಾಡುವುದು ಎಂಬುವುದು ಇದರ ಇತರ ಪ್ರತ್ಯೇಕತೆಗಳಲ್ಲಿ ಮುಖ್ಯವಾದ ಒಂದಾಗಿದೆ. ಇನ್ನುಳಿದ ವಿಶೇಷತೆಗಳಿಗಾಗಿ ಮಹಾಜೀವನ ಎಂದರೇನು ಎಂಬ ಪ್ರಶ್ನೆ ಅಥವಾ ಆ ವಿಷಯಕ್ಕೆ ಸಂಬಂಧಪಟ್ಟ ವೀಡಿಯೋವನ್ನು ಕೇಳಿ ತಿಳಿಯಿರಿ.

ಪ್ರಶ್ನೆ- ಧರ್ಮದಲ್ಲಿ ಶಿಕ್ಷೆಗೆ ಸ್ಥಾನವಿಲ್ಲ ಎಂದು ನೀವು ಹೇಳುತ್ತೀರಿ, ಅದು ಹೇಗೆ ಸಾಧ್ಯ, ಧರ್ಮ ಎಂದರೆ ಉತ್ತಮರನ್ನು ರಕ್ಷಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು ಅಲ್ಲವೇ?

ಉತ್ತರ- ನೋಡಿ, ಈ ಪ್ರಶ್ನೆಯ ಉತ್ತರವನ್ನು ವಿವರಣೆಯ ಮೂಲಕವೇ ಉತ್ತರಿಸಬೇಕಲ್ಲದೆ, ಒಂದು ವಾಕ್ಯದಲ್ಲಿ ಉತ್ತರಿಸಲು ಸಾಧ್ಯವಿಲ್ಲ.

ನೋಡಿ, ಒಂದು ದೇವಸಂಕಲ್ಪವಾದರೆ, ಆ ದೇವರ ಹೊಣೆಯು ಭಕ್ತರ ರಕ್ಷಣೆ ಮತ್ತು ದುಷ್ಟರ ಶಿಕ್ಷಣೆ ಆಗಿದೆ ಎಂದು ಹೇಳಬಹುದು. ಆಗ, ಅಲ್ಲಿಯೂ, ದೇವರು, ದುಷ್ಟರಿಗೆ ಅನುಗ್ರಹ, ವರ, ಇತ್ಯಾದಿಗಳನ್ನು ಕೊಡಬಾರದು ಎಂಬ ನಿಬಂಧನೆ ಬರುತ್ತದೆ. ಇನ್ನು ನಾವು ಧರ್ಮ ಎಂಬಲ್ಲಿಗೆ ಬರೋಣ, ಅಲ್ಲಿ, ಈ ಧರ್ಮ ಎಂಬ ಶಬ್ದಕ್ಕೆ ಕರ್ತವ್ಯ ಎಂಬ ಒಂದು ಮುಖ್ಯ ಬೇರೆ ಅರ್ಥವಿದೆ. ಇದು ಮಾತ್ರವಲ್ಲದೆ, ಇನ್ನೂ ಹಲವು ಅರ್ಥಗಳನ್ನು ಈ ಧರ್ಮ ಎಂಬ ಶಬ್ದಕ್ಕೆ ಕೊಡಲಾಗಿದೆ. ಆದುದರಿಂದ, ಆ ಎಲ್ಲಾ ಇತರ ಅರ್ಥಗಳನ್ನು ಅಲ್ಲ ಇಲ್ಲಿ ನಾವು ಧರ್ಮ ಎನ್ನುವಲ್ಲಿ ಉದ್ದೇಶಿಸುವುದು ಎಂದು ತಿಳಿದಿರಬೇಕು. ಇದು ಯಾಕೆ ಹೇಳುವೆನು ಎಂದರೆ, ಇಲ್ಲವಾದರೆ, ಧರ್ಮ ಎಂಬುವುದು ಆ ವ್ಯತ್ಯಸ್ಥ ಹಲವು ಅರ್ಥಗಳ ಒಂದು ದೊಡ್ಡ ಗೊಂದಲ ಮಾತ್ರವಾಗಿಬಿಡುವುದು ಮತ್ತು ಯಾರಿಗೂ ಅರ್ಥವಾಗಲಾರದು. ಒಟ್ಟಲ್ಲಿ, “ಮಾನವರು ಧರ್ಮ ಮಾರ್ಗದಲ್ಲಿ ನಡೆಯಬೇಕು” ಎಂಬಲ್ಲಿ ಜನರು ಏನನ್ನು ಉದ್ದೇಶಿಸುವರೋ, ಅದನ್ನು ನಾವು ಇಲ್ಲಿ ಉದ್ದೇಶಿಸುವುದು ಎಂದು ತಿಳಿಯಬೇಕು.

ನೋಡಿ, ಈ ಜಗತ್ತಲ್ಲಿ ಹಲವು ಧರ್ಮಗಳಿವೆ ಎಂದು ಜನರು ಹೇಳುವರು, ಸರಿ, ಆದರೆ ನಿಜವಾಗಿಯೂ ಅವು ಧರ್ಮಗಳಲ್ಲ, ಬದಲು ಹಲವು ಮತಗಳು ಮಾತ್ರ ಆಗುವವು ಅಷ್ಟೆ. ಇನ್ನು, ಧರ್ಮ ಎಂದು ಒಂದು ಧರ್ಮದ ಒಳಗಿನ ಆ ಬೇರೆ ಬೇರೆ ಅನುಷ್ಠಾನ ವಿಭಾಗಳನ್ನು ಕೂಡಾ ಬೊಟ್ಟುಮಾಡಿ ತೋರಿಸಿ ಹೇಳುವರು. ಅಲ್ಲೂ, ಅವೆಲ್ಲವೂ ಧರ್ಮ ಆಗುವುದಿಲ್ಲ, ಬದಲು ಅವುಗಳು ಆ ಬೇರೆ ಬೇರೆ ಹೆಸರುಗಳಿಂದ ಕೂಡಿದ ಆಯಾ ಮತದ ಆ ಪ್ರತ್ಯೇಕ ಅನುಷ್ಠಾನ ಭಾಗಗಳಾಗುವವು ಅಷ್ಟೆ. ಉದಾಹರಣೆಗೆ, ಆರಾಧನೆ, ಅನುಗ್ರಹ, ಆಧ್ಯಾತ್ಮ, ಇವೆಲ್ಲಾ ಒಂದೊಂದು ಮತದೊಳಗಿನ ಆ ಹಲವು ಅನುಷ್ಠಾನ ಭಾಗಳಾಗಿವೆ. ಇವಲ್ಲಿ ಧರ್ಮ ಎಂಬುವುದು ಒಂದು ಅನುಷ್ಠಾನ ಭಾಗವಾಗಿ ಇರುವುದು ಅಷ್ಟೆ. ದುರದೃಷ್ಟವಶಾತ್, ಎಲ್ಲವನ್ನು ಒಟ್ಟಾಗಿ ವಿವರಿಸುತ್ತಾ, ಜಗತ್ತಿನ ಎಲ್ಲಾ ಮತಗಳು ಮಾನವರನ್ನು ಗೊಂದಲದಲ್ಲಿರಿಸಿಯೇ ತಂದಿರುವವು! ಇದು ಮಾನವರ ತಪ್ಪು ತಿಳುವಳಿಕೆಗೆ ಮತ್ತು ಭಯಾನಕ ತಪ್ಪುನಂಬಿಕೆಗಳ ಸೃಷ್ಟಿಗೆ ಕಾರಣವಾದವು! ಮಾತ್ರವಲ್ಲ, ಇದೇ ಕಾರಣದಿಂದಾಗಿಯೇ, ಶೋಷಣೆ, ದ್ವೇಷ, ಹಿಂಸೆ, ರಕ್ತಪಾತಗಳು ಸಾವಿರಾರು ವರುಷಗಳಿಂದ ಮಾನವರನ್ನು ಬೇಟೆಯಾಡಿರುವುದು ಎಂದು ತಿಳಿಯಬೇಕು.

ಇನ್ನೂ ಹೆಚ್ಚು ಅರ್ಥವಾಗಬೇಕಿದ್ದರೆ, ಇನ್ನೊಂದು ಉದಾಹರಣೆಯನ್ನು ನೋಡೋಣ. ನೋಡಿ, ಧರ್ಮ, ಅರ್ಥ, ಕಾಮ, ಮೋಕ್ಷ, ಎಂದು ನಾಲ್ಕು ಪುರುಷಾರ್ಥಗಳನ್ನು ಹೇಳುವಲ್ಲಿ, ಆ ನಾಲ್ಕರಲ್ಲಿ ಒಂದು ಎಂದು ಧರ್ಮವು ಪ್ರತ್ಯೇಕವಾಗಿ ಎದ್ದು ಕಾಣುವುದು, ಇಲ್ಲವೇ? ಹಾಗಿರುವಾಗ ಇಲ್ಲೇ, ಪ್ರತ್ಯೇಕವಾಗಿ ಕಾಣಿಸುವ ಈ ಧರ್ಮದ ಚುಟುಕು ನಿರ್ವಚನೆಯನ್ನು ತಿಳಿದುಬಿಡೋಣ. ಧರ್ಮ ಎಂದರೆ, “ತಾನೂ ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು”, ಅಥವಾ “ಸಮಾಜದಲ್ಲಿ ಅಪರಾಧಿಗಳಲ್ಲದ ಎಲ್ಲರೂ ಚೆನ್ನಾಗಿರಬೇಕು” ಎಂಬ ಆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಮಾಡಿಟ್ಟಿರುವ ನಿಯಮಗಳಾಗಿವೆ ಎಂದು ತಿಳಿಯಬೇಕು. ಜೀವನಕ್ಕೆ ಸಂಬಂಧಿಸಿದ ನಿಯಮಗಳನ್ನು ರಚಿಸುವಾಗ, ಅಲ್ಲಿ, ಅದು, ನೈತಿಕತೆ ಮತ್ತು ಆದರ್ಶಗಳ ರೂಪಗಳನ್ನು ತಾಳುವವು. ಈ ಕಾರಣದಿಂದಾಗಿ, ನಾಲ್ಕು ಪುರುಷಾರ್ಥಗಳಲ್ಲಿ ಮೊದಲನೆಯದಾದ ‘ಧರ್ಮ’ ಎಂಬ ಆ ಜ್ಞಾನ ಸಂಪಾದನೆಯ ಕಾಲದಲ್ಲಿ ಈ ನೈತಿಕ, ಆದರ್ಶಗಳ ನಿಯಮಗಳ ಅರಿವನ್ನು ಜನರಿಗೆ ತಿಳಿಸಿ ಕೊಡಲಾಗುತ್ತಿತ್ತು. ಜನರು ಧರ್ಮವನ್ನು ಅರಿತು, ಆ ನೈತಿಕ, ಆದರ್ಶಗಳ ಹಿನ್ನೆಲೆಯಲ್ಲೇ ಇತರ ಮೂರು ಪುರುಷಾರ್ಥಗಳನ್ನು ನೆರವೇರಿಸಬೇಕಾಗಿತ್ತು. ಅಂದರೆ, ಸಮಾಜದಲ್ಲಿ ಸಾಯುವತನಕ ಇರುವ ಆ ಹಲವು ಜೀವನ ಘಟ್ಟಗಳಲ್ಲಿ ಮಾನವರು ಜೀವಿಸುವಾಗ, ಪ್ರತಿ ಘಟ್ಟದ ಜೀವನವನ್ನು ಕೂಡಾ ನೈತಿಕತೆ, ಆದರ್ಶಗಳ ಹಿನ್ನೆಲೆಯಲ್ಲಿ ಜೀವಿಸುವಂತೆ ಮಾಡುವುದಕ್ಕೆಬೇಕಾಗಿ ಈ ನಾಲ್ಕರಲ್ಲಿ ಮೊದಲನೆದ್ದಾಗಿರುವ ಧರ್ಮದ ಅರಿವು ಸಹಾಯಕವಾಗುವುದು ಎಂದು ಅರ್ಥ. ಒಟ್ಟಲ್ಲಿ, ಈಗ ಧರ್ಮ ಎಂದರೆ ಮತ ಎಂದು ಅಲ್ಲ ಎಂದಾಯಿತು. ಮಾತ್ರವಲ್ಲ, ಧರ್ಮ ಎಂದು ಯಾವುದೇ ಮತದ ಒಳಗಿನ ಆ ಎಲ್ಲಾ ಭಾಗಗಳನ್ನು ಒಟ್ಟಾಗಿ ಹೇಳುವಹಾಗಿಲ್ಲ ಎಂದೂ ಈಗ ತಿಳಿಯಿತು.

ಈಗ, ಧರ್ಮದಲ್ಲಿ ಶಿಕ್ಷೆಗೆ ಸ್ಥಾನ ಯಾಕಿಲ್ಲ ಎಂಬುವುದರ ಬಗ್ಗೆ ನೋಡೋಣ. ನೋಡಿ, ಧರ್ಮಗಳು ವ್ಯಕ್ತಿ ಹಾಗೂ ಸಮಾಜವು ಚೆನ್ನಾಗಿ ಇರುವಂತೆ ಮಾಡುವ ಭಾಗವಾಗಿದೆ. ಅದರ ಕೆಲಸ, ಜನರಲ್ಲಿ ಆ ಬೋಧವನ್ನು ಹೆಚ್ಚಿಸಿ ಸಮಾಜದಲ್ಲಿ ಉತ್ತಮರ ಸಂಖ್ಯೆಯನ್ನು ಹೆಚ್ಚಿಸುವುದಾಗಿದೆ. ಹೀಗಿರುವಾಗ, ಸಮಾಜದಲ್ಲಿ ದುಷ್ಟರು ಹೆಚ್ಚಾಗುವುದಾದರೆ, ಅದು ಧರ್ಮದ ಭಾಗದಲ್ಲಿ ಕರ್ತವ್ಯವನ್ನು ನಿರ್ವಹಿಸುವ ಜನರು ಧರ್ಮದ ವಿಚಾರವಾಗಿ ಜನರಿಗೆ ಹೆಚ್ಚು ಮನದಟ್ಟು ಮಾಡಿ, ನೈತಿಕತೆ, ಆದರ್ಶಗಳನ್ನು ಪಾಲಿಸುವಂತೆ ಮಾಡುವಲ್ಲಿ ಸೋತುಹೋಗಿರುವುದನ್ನು ಮಾತ್ರ ತೋರಿಸುವುದು ಎಂದು ಸ್ಪಷ್ಟವಾಗುವುದು. ಒಂದು ತರಗತಿಯಲ್ಲಿ ಇತರ ಎಲ್ಲಾ ವಿಷಯಗಳಲ್ಲೂ ಮಕ್ಕಳು ಉತ್ತಮ ಅಂಕಗಳನ್ನು ಪಡೆದು, ಒಂದು ಗುರು ಕಲಿಸಿ ಕೊಡುವ ವಿಷಯದಲ್ಲಿ ಎಲ್ಲರೂ ಕಡಿಮೆ ಅಂಕಗಳನ್ನು ಪಡೆದರೆ, ಆ ಗುರುವಿಗೆ ಚೆನ್ನಾಗಿ ಪಾಠ ಕಲಿಸಲು ಬರುವುದಿಲ್ಲ ಎಂದು ಜನ ಹೇಳುತ್ತಾರೆ. ಅದೇ ರೀತಿ, ಯಾವುದೇ ಒಂದು ಮತದಲ್ಲಿ ಅದರ ಧರ್ಮದ ಭಾಗದಲ್ಲಿ ಕೆಲಸ ಮಾಡುವವರ ಅಪರ್ಯಾಪ್ತತೆಯನ್ನು ಆ ಮತದೊಳಗಿನ ಕೆಟ್ಟವರ ಹೆಚ್ಚುವಿಕೆಯು ತೋರಿಸುವುದು ಎಂದು ತಿಳಿಯಬೇಕು. ಇನ್ನು ಕೆಟ್ಟವರನ್ನು ಶಿಕ್ಷಿಸುವ ಕೆಲಸವನ್ನು ಆ ನೆಲವನ್ನು ಆಳುವವರು, ಪೊಲೀಸ್, ನ್ಯಾಯಾಲಯಗಳ ಸಹಾಯದಿಂದ ಮಾಡಿಸಬೇಕಾಗುವುದು ಅಷ್ಟೆ. ಈ ಧರ್ಮ ಎಂಬ ನೈತಿಕತೆ, ಆದರ್ಶಗಳನ್ನು ಕಲಿಸುವ ಭಾಗದವರು ಹೋಗಿ ಕೆಟ್ಟವರನ್ನು ಶಿಕ್ಷಿಸುವ ಕೆಲಸ ಮಾಡಬಾರದು. ಸರಕಾರಗಳು, ನೀವು ನೈತಿಕತೆಯನ್ನು ಜನರಲ್ಲಿ ಹೆಚ್ಚಿಸಿ ಆದರೆ ನೈತಿಕ ಪೊಲೀಸ್ ಗಿರಿಯನ್ನು ಮಾಡಬೇಡಿ ಎಂದು ಎಚ್ಚರಿಕೆ ಕೊಡುವುದನ್ನು ಇಲ್ಲಿ ನಾವು ನೆನಪಿಸಬಹುದು. ಅಂದರೆ ‘ಆ ಶಿಕ್ಷಿಸುವ ಕೆಲಸ ನಿಮ್ಮದಲ್ಲ ಸರಕಾರದ್ದು’ ಎಂದಾಗುವುದು. ಆದುದರಿಂದ, ಧರ್ಮಕ್ಕಿರುವ ಕೆಲಸವು, ಜನರನ್ನು ಜ್ಞಾನದ ಪಾಠಗಳ ಸಹಾಯದಿಂದ ನೈತಿಕ ಹಾಗೂ ಆದರ್ಶರಾಗುವಂತೆ ಅವರನ್ನು ಮನದಟ್ಟು ಮಾಡಿಕೊಡುವ ಆ ಕೆಲಸಮಾತ್ರವಾಗಿದೆ, ಆದರೆ ಶಿಕ್ಷಿಸುವುದು ಅದು ಧರ್ಮಕ್ಕೆ ಸಂಬಂಧಿಸಿದ ಕೆಲಸವಲ್ಲ, ಅದು ಆ ನೆಲವನ್ನು ಆಳುವವರು ಪೊಲೀಸ್, ನ್ಯಾಯಾಲಯಗಳ ಸಹಾಯದಿಂದ ಮಾಡಬೇಕಾದ ಕೆಲಸ ಎಂದು ಇಲ್ಲಿ ಬಹಳ ಸ್ಪಷ್ಟವಾಗುವುದು. ಈ ಕಾರಣದಿಂದ, ಧರ್ಮದಲ್ಲಿ ಶಿಕ್ಷೆಗೆ ಸ್ಥಾನ ಇಲ್ಲ ಎಂದು ಹೇಳುವುದು.

 *******************

ಪ್ರಶ್ನೆ-ನಮ್ಮ ಧರ್ಮವು ಇತರ ಧರ್ಮಗಳಂತೆ ಅಲ್ಲ, ವ್ಯತ್ಯಸ್ಥವಾಗಿದೆ, ನಮ್ಮ ಧರ್ಮದ ಎಲ್ಲರಿಗೂ, ಸ್ವರ್ಗವನ್ನು ಪಡೆಯುವ ಆಧ್ಯಾತ್ಮವೇ ಧರ್ಮದ ಆ ಏಕ ಗುರಿಯಾಗಿರುವುದು. ಅಲ್ಲಿ ಅದಕ್ಕೆ ಆಧ್ಯಾತ್ಮ ಎಂದು ಬೇರೆ ವಿಭಜನೆ ಇಲ್ಲ. ಮಾತ್ರವಲ್ಲ, ದೇವರು ನಮ್ಮ ಧರ್ಮದಲ್ಲಿ ಶಿಕ್ಷೆಗೆ ಸ್ಥಾನ ಕೊಟ್ಟಿದ್ದಾನೆ. ಅದಕ್ಕಾಗಿಯೇ ಆತನು ಒಂದು ಕಾನೂನು ಸಂಹಿತೆ ಒಂದನ್ನು ಕೂಡಾ ಧರೆಗಿಳಿಸಿದ್ದಾನೆ.

ಉತ್ತರ- ನೋಡಿ, ನಿಮ್ಮ ಧರ್ಮದಲ್ಲಿ ಅಥವಾ ಆಧ್ಯಾತ್ಮದಲ್ಲಿ ದೇವರು ಏನು ಹೇಳಿದ್ದಾನೆ ಎಂದು ನೋಡಿದಾಗ, ಅಲ್ಲಿ ದೇವರು ಮಾನವರಿಗೆ ಭೂಮಿಯಲ್ಲಿ ಒಂದೇ ಒಂದು ಜನ್ಮವನ್ನು ಕೊಟ್ಟು ಉತ್ತಮ ಕೆಲಸ ಮಾಡಿದವರಿಗೆ ಮರಣಾನಂತರ ಸ್ವರ್ಗವನ್ನು ಮತ್ತು ದುಷ್ಟರಿಗೆ ನರಕವನ್ನು ಕೊಡುತ್ತಾನೆ ಎಂದು ದೇವರೇ ತಿಳಿಸಿರುವುದಾಗಿ ನಂಬುವುದನ್ನು ಕಾಣುವೆವು. ನೋಡಿ, ಆದರೆ, ಎಲ್ಲಕ್ಕಿಂತ ಹೆಚ್ಚು ನಿಮ್ಮ ಮತದಲ್ಲಿ ನಂಬುವ ಇನ್ನೊಂದು ಅಂಶ ಎಂದರೆ ಅದುವೇ ದೇವರು ಮಾನವರಿಗೆ ಮುಕ್ತ ಮನಸ್ಸು ಅಥವಾ ಫ್ರೀ ವಿಲ್ ನ್ನು ಕೊಟ್ಟಿದ್ದಾನೆ ಎಂಬುವುದನ್ನಾಗಿದೆ. ಈ ಫ್ರೀ ವಿಲ್ ಎಂದರೆ, ಮನುಷ್ಯನಿಗೆ ಆತನ ಇಷ್ಟದಂತೆ ಉತ್ತಮ ಮಾರ್ಗವನ್ನು ಮತ್ತು ಕೆಟ್ಟಮಾರ್ಗವನ್ನು ತನ್ನ ಜೀವನದಲ್ಲಿ ಆಯ್ದು ಕೊಳ್ಳಲಿರುವ ಅಥವಾ ಅನುಸರಿಸಲು ಇರುವ, ದೇವರು ಮನುಷ್ಯನಿಗೆ ಕೊಟ್ಟ, ಆ ಪೂರ್ತಿ ಸ್ವಾತಂತ್ರ್ಯವಾಗಿದೆ. ಅಂದರೆ, ದೇವರು, ಒಬ್ಬ ವ್ಯಕ್ತಿ ಕೆಟ್ಟ ದಾರಿಯನ್ನು ಆಯ್ದುಕೊಂಡರೆ, ಆ ವ್ಯಕ್ತಿ ಸತ್ತ ನಂತರ ಆತನಿಗೆ ನರಕವನ್ನು ಕೊಡಬಹುದೇ ಹೊರತು ಆ ವ್ಯಕ್ತಿಯು ಕೆಟ್ಟ ಕೆಲಸ ಮಾಡುವಾಗ ಯಾವುದೇ ರೀತಿಯಲ್ಲಿಯೂ ಆತನಿಗೆ ತಾನೇ ಕೊಟ್ಟ ಫ್ರೀ ವಿಲ್ ನ ಅಥವಾ ಸ್ವಾತಂತ್ರದ ವಿರುದ್ಧ ಅವನನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅರ್ಥ. ಹಾಗೆ ಮಾಡಿದರೆ, ದೇವರು ಫ್ರೀ ವಿಲ್ ಕೊಡಲಿಲ್ಲ ಎಂದೇ ಅರ್ಥಬರುವುದು. ಹೀಗಿರಲು, ನಿಮ್ಮ ದೇವರು, ದುಷ್ಟರನ್ನು ಅವರು ಜೀವಿಸುತ್ತಿರುವಾಗಲೇ ಶಿಕ್ಷಿಸಿ ನಿಯಂತ್ರಿಸುವ ಆ ದೊಡ್ಡ ನಿಯಮ ಸಂಹಿತೆಯನ್ನು ಹೇಗೆ ಧರೆಗಿಳಿಸಲು ಸಾಧ್ಯ? ಆದುದರಿಂದ, ನಿಮ್ಮ ಮತದಲ್ಲಿ, ಶಿಕ್ಷೆ ಕೊಡುವಿಕೆ ಎಂಬುವುದು ಎಂದಿಗೂ ತಾಳೆ ಹೊಂದುವುದಿಲ್ಲ ಅಥವಾ ಶಿಕ್ಷೆ ಕೊಡುವಿಕೆಯನ್ನು ಸೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನಿಷ್ಪಕ್ಷ ತರ್ಕವು ಸ್ಪಷ್ಟಪಡಿಸುವುದು.

ನಿಮ್ಮ ಮತದಲ್ಲಿ, ದೇವರು ಮತ್ತು ದೇವರ ಮಾತುಗಳು ನಿಮಗೆ ಮುಖ್ಯವಾದರೆ, ಆ ದೇವರು ಕೊಡುವ ಧರ್ಮದಲ್ಲಿ ಶಿಕ್ಷೆಯ ಭಾಗ ಇಲ್ಲ ಎಂದೇ ಹೇಳಬೇಕಾಗುವುದು, ಮತ್ತು, ಶಿಕ್ಷೆಯನ್ನು, ನೆಲವನ್ನು ಆಳುವವರು, ಪೊಲೀಸ್, ಮತ್ತು ನ್ಯಾಯಾಲಯಗಳ ಸಹಾಯದಿಂದ ನಿರ್ವಹಿಸುವರು ಎಂದು ಹೇಳಿಕೊಳ್ಳಬೇಕಾಗುತ್ತದೆ.

 *************************

ಪ್ರಶ್ನೆ- ನಿಮ್ಮ ಮದುವೆಯಲ್ಲಿ ಯಾಕೆ ಆಚಾರಗಳನ್ನು ಮಾಡಿಲ್ಲ?

ಉತ್ತರ- ಇತರ ಎಲ್ಲಾ ಕಡೆ ಆಚಾರ ನಂಬಿಕೆಗಳು ಮದುವೆಯ ಮುಖ್ಯ ಭಾಗವಾಗಿದ್ದು ಅದು ಒಂದು ಉತ್ಸವದಂತೆ ಮಾಡಲಾಗುವುದು.
ನಿಜವಾಗಿಯೂ ಮದುವೆಯು ಇರುವುದು ಕೊನೆಯತನಕ ಪತಿ, ಪತ್ನಿಯರು ಆನಂದದಿಂದ ಜೀವಿಸಲು ಎಂದು ಆಗಿರುವುದು. ಈ ಮುಖ್ಯ ಉದ್ದೇಶವನ್ನು ಈಗ ತಾನೇ ಹೇಳಿರುವ ಆ ನಂಬಿಕೆ, ಆಚಾರಗಳ ಉತ್ಸವವು ನೆರವೇರಿಸುವುದಿಲ್ಲ. ಅವುಗಳು ಎಲ್ಲಾದರೂ ಮನೆಜಗಳ, ವಿವಾಹ ವಿಚ್ಛೇದನಗಳನ್ನು ಇಲ್ಲದಂತೆ ಮಾಡುವುದಾದರೆ, ‘ಅವನ್ನು ಆಚರಿಸಲೇಬೇಕು’ ಎಂದು ನಾನು ಎತ್ತಿ ಹೇಳುತ್ತಿದ್ದೆ, ಆದರೆ, ನಂಬಿಕೆ ಆಚಾರಗಳ ರಾಶಿಯನ್ನೇ ನೆರವೇರಿಸಿ ಕೂಡಾ, ಮನೆ ಜಗಳ, ವಿವಾಹ ವಿಚ್ಛೇದನಗಳು ನಿರಂತರವಾಗಿ ನಡೆಯುವುದಾದರೆ, ಅವುಗಳ ಪ್ರಾಮುಖ್ಯತೆಯನ್ನು ನಮಗೆ ಖಂಡಿತ ಅಂದಾಜಿಸಬಹುದಾಗಿದೆ. ಈ ಕಾರಣದಿಂದ,

1. ಮದುವೆ ಎಂದರೆ, ‘ತ್ಯಾಗಭಾವದ ಹಿನ್ನೆಲೆಯಲ್ಲಿ, ತಮ್ಮೊಳಗೆ ಅರಿತು ಜೀವಿಸಿ, ಅದರಿಂದ ಬರುವ ಆ ಶುದ್ಧಪ್ರೀತಿಯಲ್ಲಿ ಕೊನೆಯತನಕ ಆನಂದದಿಂದ ಜೀವಿಸುವಿಕೆ’ ಎಂಬ ಸಂದೇಶವನ್ನು ಜನತೆಗೆ ನೀಡಲು, ಮತ್ತು

2. ಮದುವೆಯ ಆಚಾರ ನಂಬಿಕೆಗಳು ಒಂದೊಂದು ಊರಿಗೆ, ಒಂದೊಂದು ಪಂಥಕ್ಕೆ, ಒಂದೊಂದು ಜಾತಿಗೆ, ಬೇರೆ ಬೇರೆ ಆಗಿರುವವು, ಎಂಬಲ್ಲಿ, ಅವು ಮದುವೆ ಕಾರ್ಯಕ್ರಮದಲ್ಲಿ ಬರೇ ಔಪಚಾರಿಕತೆಗಾಗಿ ಮಾತ್ರ ಸೇರಿಸಿಕೊಂಡಿರುವವುಗಳು ಎಂಬ ಸತ್ಯವನ್ನು ಜನರಿಗೆ ತಿಳಿಸಲು, ಹಾಗೂ,

3. ಮೂರನೆಯದಾಗಿ, ಮದುವೆಗಳಲ್ಲಿ ಆಚಾರಗಳನ್ನು ಮಾಡಬಾರದು ಎಂದಲ್ಲ ಇಲ್ಲಿ ಹೇಳುವುದು, ಆದರೆ ಆಚಾರ ಇಲ್ಲದೆಯೂ, ತ್ಯಾಗಭಾವದ ಹಿನ್ನೆಲೆಯಲ್ಲಿ ಅರಿತು ಜೀವಿಸಿ ಅದರಿಂದ ಬರುವ ಆ ಶುದ್ದಪ್ರೀತಿಯಲ್ಲಿ ಜೀವಿಸುವಲ್ಲಿ ಮದುವೆಯು ನಿಜವಾಗಿಯೂ ಪೂರ್ಣ ಆಗುವುದು ಎಂಬ ಆ ಪರಮ ಸತ್ಯವನ್ನು ತಿಳಿಸುವುದರೊಂದಿಗೆ, ಆಚಾರ ಮಾಡಿದವರು ಕೂಡಾ ಈ ಮುಖ್ಯ ಭಾಗವನ್ನು ಸತ್ಯಸಂಧವಾಗಿ ಅನುಷ್ಠಿಸಿದರೆ, ಅವರಿಗೂ ಅದರ ಲಾಭವನ್ನು ಪಡೆಯಬಹುದು ಎಂಬ ಆ ಪರಿಹಾರದ ಸಂದೇಶವನ್ನು ತಿಳಿಸುವುದಕ್ಕಾಗಿಯೂ, ನಾನು ಪೂರ್ತಿಯಾಗಿ ಆಚಾರಗಳನ್ನು ಬಿಟ್ಟು ತ್ಯಾಗಭಾವನೆಯ ಹಿನ್ನಲೆಯ ಅರಿತು ಜೀವಿಸುವಿಕೆಯ ಆ ದಿವ್ಯಜ್ಞಾನದ ಸಂಕಲ್ಪದ ಹಿನ್ನೆಲೆಯಲ್ಲಿ ಮದುವೆ ಆಗಿರುವುದು ಎಂದು ತಿಳಿಯಬೇಕು.

 ********************

ಪ್ರಶ್ನೆ- ಮಹಾಜೀವನದಲ್ಲಿ ಕಲ್ಪನೆಗೆ ಸ್ಥಾನವಿಲ್ಲ ಎನ್ನುವರು, ಕಾರಣವೇನು?

ಉತ್ತರ – ನೋಡಿ, ಮಹಾಜೀವನವು ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯ ಜೀವನ ಆಗಿರುವುದು ಎಂದು ತಿಳಿದಿದೆ. ಹೀಗಿರುವಾಗ, ಸತ್ಯಕ್ಕೆ ಬೇಕಾಗಿರುವುದು ನಿಸ್ಪಕ್ಷ ತರ್ಕದ ವಿಚಾರಗಳು ಆಗಿವೆ. ಇನ್ನು, ಶುದ್ಧಪ್ರೀತಿಗೆ ಬೇಕಾಗಿರುವುದು ಪವಿತ್ರ ಭಾವನೆಯಾಗಿದೆ. ನೀತಿಯು ಖಂಡಿತವಾಗಿಯೂ ‘ತಾನು ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು’ ಎಂಬಲ್ಲಿ ಮಾಡಿಟ್ಟಿರುವ ಆ ಪವಿತ್ರ ನಿಯಮಗಳು ಆಗಿರುವವು ಎಂಬುವುದು ನಮಗೆ ತಿಳಿದಿದೆ. ಹೀಗಿರುವಾಗ, ಕಲ್ಪನೆಗೆ ಎಲ್ಲಿ ಸ್ಥಾನವಿದೆ? ಇಲ್ಲ, ಆದರೆ, ಅದಕ್ಕೆ ಮಹಾಜೀವನದಲ್ಲಿ ಬರೇ ಒಂದು ಕಡೆ ಸ್ಥಾನ ಇರುವುದು! ಹೌದು, ಅದು ಬಿಟ್ಟರೆ ಬೇರೆ ಎಲ್ಲೂ ಅದಕ್ಕೆ ಸ್ಥಾನವಿಲ್ಲ. ಇನ್ನು, ಕಲ್ಪನೆಯ ಆ ಒಂದು ಕಡೆಯ ಸ್ಥಾನವೇ, ಶುದ್ಧಪ್ರೀತಿಯನ್ನು ಎತ್ತಿ ಹೇಳುವಲ್ಲಿನ ಸ್ಥಾನವಾಗಿದೆ. ಅಲ್ಲಿ, ಅದಕ್ಕಾಗಿ ಉಪಯೋಗಿಸಬಹುದಾದ ಕವನ, ಸಂಗೀತ, ಸಾಹಿತ್ಯಗಳಲ್ಲಿ ಈ ಕಲ್ಪನೆಗಳಿಗೆ ಸ್ಥಾನ ಇರುವುದು.

 *************************

ಪ್ರಶ್ನೆ- ಬ್ರಹ್ಮತತ್ವ ಎಂಬುವುದು ವೈಜ್ಞಾನಿಕ ಅಲ್ಲವೇ, ಹಾಗಿರುವಾಗ, ಅದ್ವೈತ ಸರಿ ಅಲ್ಲವೇ?

ಉತ್ತರ- ಸಾವಿರಾರು ಸಿದ್ಧಾಂತಗಳು ಇವೆ, ಅವಲ್ಲಿ ಹೆಚ್ಚು ತರ್ಕಬದ್ಧವಾಗಿ ವಿವರಿಸಲ್ಪಟ್ಟ ಸಿದ್ಧಾಂತಗಳಲ್ಲಿ ಒಂದು ಮುಖ್ಯ ಸಿದ್ಧಾಂತವೇ ಅದ್ವೈತ ಸಿದ್ಧಾಂತ ಆಗಿದೆ. ಆದರೆ, ಇಲ್ಲಿ ಈ ಸಿದ್ಧಾಂತವು ವೈಜ್ಞಾನಿಕ ಅಲ್ಲದಾಗುವುದು ಅದರ ಆ ಏಕವಾಗಿರುವ ಮೂಲ ಶಕ್ತಿಗೆ ಪವಿತ್ರತೆ ಅಥವಾ ದೈವತ್ವವನ್ನು ಕಲ್ಪಿಸುವಲ್ಲಿ ಎಂದು ತಿಳಿಯಬೇಕು. ಇದು ಯಾಕೆಂದರೆ, ಮನಸ್ಸು ಇಲ್ಲದ ಸ್ಥಿತಿಗೆ ದೈವತ್ವ ಇರಲು ಸಾಧ್ಯವಿಲ್ಲ. ಬೌದ್ಧ ಧರ್ಮವು ಇದೇ ಬ್ರಹ್ಮವನ್ನು ದೈವತ್ವ ಇಲ್ಲದ ಶೂನ್ಯ ಎನ್ನುವುದು. ಅಂದರೆ, ಬ್ರಹ್ಮ ಇಲ್ಲವೆಂದು ಮತ್ತು ಆ ರೀತಿಯ ದೈವತ್ವ ಇಲ್ಲ ಎಂದೂ ಹೇಳುವುದು. ಗೋಡೆಗೆ ದೈವತ್ವ ಇದೆ ಎಂದರೂ, ಇಲ್ಲ, ಎಂದರೂ, ಆ ಗೋಡೆಯಿಂದ, ದೈವತ್ವವು ಮಾಡಲೇಬೇಕಾದ ಮನುಷ್ಯನ ಹೃದಯವೈಶಾಲ್ಯತೆಯು ಸೃಷ್ಟಿಯಾಗುವುದಿಲ್ಲ. ಇನ್ನು, ಹೃದಯವೈಶಾಲ್ಯತೆ ಮತ್ತು ಪವಿತ್ರತೆಗಳು ಇರುವ ಮಹಾ ಆಚಾರ್ಯರು, ಗುರುಗಳು ಇತ್ಯಾದಿ ಜನರು ಬ್ರಹ್ಮತತ್ವದಿಂದ ಸೃಷ್ಟಿಯಾಗಿದ್ದಾರೆ ಎಂದು ವಾದ ಮಾಡಿದರೆ, ಇತ್ತ ಬೌದ್ಧ ಧರ್ಮದಲ್ಲಿ, ಬ್ರಹ್ಮ ಇಲ್ಲದೆಯೇ, ಶೂನ್ಯ ಎಂದು ತಿಳಿದು, ಪವಿತ್ರತೆ ಮತ್ತು ಹೃದಯ ವೈಶಾಲ್ಯತೆಯನ್ನು ಆಚಾರ್ಯರು, ಗುರುಗಳು ಇತ್ಯಾದಿ ಜನರು ಪಡೆದಿದ್ದಾರೆ. ವಿಧ್ಯುತ್ ಒಂದು ಶಕ್ತಿಯ ಮೂಲ, ಅದೇ ರೀತಿ, ಬೆಳಕು, ಶಾಖ, ಅಯಸ್ಕಾಂತ, ಇತ್ಯಾದಿ ಹಲವು ಶಕ್ತಿಯ ಮೂಲಗಳು ಇವೆ. ಇವುಗಳಿಗೆ ಯಾವುದಕ್ಕೂ ಹೃದಯ ವೈಶಾಲ್ಯತೆ ಮತ್ತು ಪವಿತ್ರತೆಯನ್ನು ಹೆಚ್ಚಿಸುವ ಆ ದೈವತ್ವವು ಇರುವುದಿಲ್ಲ. ಹಾಗಿರುವಾಗ. ಇನ್ನು, ಈ ರೀತಿಯ ಶಕ್ತಿಯ ಮೂಲಗಳು ಎಲ್ಲದರ ಶಕ್ತಿಯ ಮೂಲ ಎಂದು ಹೇಳಲ್ಪಡುವ ಆ ಬ್ರಹ್ಮಕ್ಕೆ ದೈವತ್ವ ಇರುವುದು ಎಂದು ಹೇಗೆ ಹೇಳುವುದು? ಮಾತ್ರವಲ್ಲ, ಬೌದ್ಧ, ಜೈನ, ಧರ್ಮಗಳು ಹಾಗೂ ಹಿಂದೂ ಧರ್ಮದ ಆರು ದರ್ಶನಗಳಲ್ಲಿ ಅದ್ವೈತದ ಮೂಲ ದರ್ಶನವಾಗಿರುವ ಉತ್ತರ ಮೀಮಾಂಸವನ್ನು ಹೊರತುಪಡಿಸಿ ಉಳಿದ ಐದು ದರ್ಶನಗಳು ಈ ಎಲ್ಲವೂ ಒಟ್ಟಾಗಿ ಈ ಬ್ರಹ್ಮ ತತ್ವದ ಅಸ್ತಿತ್ವವನ್ನು ಒಪ್ಪುವುದಿಲ್ಲ. ಹೀಗಿರಲು, ಅದ್ವೈತವನ್ನು ಒಂದು ಮುಖ್ಯ ಸಿದ್ಧಾಂತ ಎಂದು ಹೇಳಬಹುದೇ ಹೊರತು, ವಿಜ್ಞಾನದಂತೆ ಅದು ಸತ್ಯವಾಗಿರುವುದು ಎಂದು ಹೇಳಲು ಸಾಧ್ಯವಾಗುವುದಿಲ್ಲ.


ನನ್ನ ಸಹೋದರರೇ, ಮನುಷ್ಯನಲ್ಲಿ ಪವಿತ್ರತೆ ಮತ್ತು ದೈವತ್ವವು, ಆ ವ್ಯಕ್ತಿಯು, ಸತ್ಯಚಿಂತನೆ ಜ್ಞಾನ, ಆತ್ಮಪರಿಶೋಧನೆ ಜ್ಞಾನ, ಮತ್ತು ವೈರಾಗ್ಯ ಜ್ಞಾನ, ಎಂಬ ಆ ಮೂರು ರೀತಿಯ ಜ್ಞಾನಸಾಧನೆಗಳಿಂದ ಹುಟ್ಟಿಬರುವ ಆ ಶಾಶ್ವತ ಹೃದಯವೈಶಾಲ್ಯತೆಯಿಂದ ಮಾತ್ರ ಸಾಧ್ಯವಾಗುವುದು. ಇದರಲ್ಲಿ ಸಂಶಯವಿದ್ದರೆ, ಇತ್ತ, ಜಗತ್ತಿನ ಹಲವು ದರ್ಶನಗಳ ಹಾಗೂ ಧರ್ಮ, ಪಂಥಗಳ ಆ ಮತಾಂತರದ ದಿಗ್ವಿಜಯಗಳನ್ನು ಒಂದನ್ನು ನೋಡಿದರೆ ಸಾಕಾಗುವುದು, ಮಾನವರ ಮನಸ್ಸು ಇವೆಲ್ಲದರಿಂದ ಎಷ್ಟು ಪವಿತ್ರಗೊಂಡಿದೆ ಮತ್ತು ದೈವತ್ವ ಹಾಗೂ ಹೃದಯವೈಶಾಲ್ಯಯತೆ ಅವಲ್ಲಿ ಎಷ್ಟು ಅಡಕವಾಗಿರಬಹುದು ಎಂಬುವುದನ್ನು ತಿಳಿಯಲು!! ಹೃದಯವೈಶಾಲ್ಯತೆಯೇ ಪವಿತ್ರತೆಯ ಮೂಲ, ಮತ್ತು ಸಂಕುಚಿತತೆಯೇ ಭಯಾನಕ ದ್ವೇಷ, ಹಿಂಸೆ, ರಕ್ತಪಾತವನ್ನು ಸೃಷ್ಟಿಸುವ ಅಲ್ಪತ್ವ ಎಂಬ ಆ ಅಪವಿತ್ರತೆಯ ಮೂಲ.

 *************************

ಪ್ರಶ್ನೆ- ನಿಮ್ಮ ಮದುವೆಯಲ್ಲಿ ಯಾಕೆ ಆಚಾರಗಳನ್ನು ಮಾಡಿಲ್ಲ?

ಉತ್ತರ- ಇತರ ಎಲ್ಲಾ ಕಡೆ ಆಚಾರ ನಂಬಿಕೆಗಳು ಮದುವೆಯ ಮುಖ್ಯ ಭಾಗವಾಗಿದ್ದು ಅದು ಒಂದು ಉತ್ಸವದಂತೆ ಮಾಡಲಾಗುವುದು.

ನಿಜವಾಗಿಯೂ ಮದುವೆಯು ಇರುವುದು ಕೊನೆಯತನಕ ಪತಿ ಪತ್ನಿಯರು ಆನಂದದಿಂದ ಜೀವಿಸಲು ಆಗಿರುವುದು. ಈ ಮುಖ್ಯ ಉದ್ದೇಶವನ್ನು ಈಗ ತಾನೇ ಹೇಳಿರುವ ಆ ನಂಬಿಕೆ, ಆಚಾರಗಳ ಉತ್ಸವವು ನೆರವೇರಿಸುವುದಿಲ್ಲ. ಅವುಗಳು ಎಲ್ಲಾದರೂ ಮನೆ ಜಗಳ, ವಿವಾಹ ವಿಚ್ಛೇದನವನ್ನು ಇಲ್ಲದಂತೆ ಮಾಡುವುದಾದರೆ, ಅದನ್ನು ಆಚರಿಸಲೇಬೇಕು ಎಂದು ನಾನು ಎತ್ತಿ ಹೇಳುತ್ತಿದ್ದೆ, ಆದರೆ, ನಂಬಿಕೆ ಆಚಾರಗಳ ರಾಶಿಯನ್ನೇ ನೆರವೇರಿಸಿ ಕೂಡಾ ಮನೆ ಜಗಳ, ವಿವಾಹ ವಿಚ್ಛೇದನಗಳು ನಿರಂತರವಾಗಿ ನಡೆಯುವುದಾದರೆ ಅವುಗಳ ಪ್ರಾಮುಖ್ಯತೆಯನ್ನು ನಮಗೆ ಖಂಡಿತ ಅಂದಾಜಿಸಬಹುದಾಗಿದೆ. ಈ ಕಾರಣದಿಂದ,

1. ಮದುವೆ ಎಂದರೆ, ‘ತ್ಯಾಗಭಾವದ ಹಿನ್ನೆಲೆಯಲ್ಲಿ, ತಮ್ಮೊಳಗೆ ಅರಿತು ಜೀವಿಸಿ, ಅದರಿಂದ ಬರುವ ಆ ಶುದ್ಧಪ್ರೀತಿಯಲ್ಲಿ ಕೊನೆಯತನಕ ಆನಂದದಿಂದ ಜೀವಿಸುವಿಕೆ’ ಎಂಬ ಸಂದೇಶವನ್ನು ಜನತೆಗೆ ನೀಡಲು, ಮತ್ತು

2. ಮದುವೆಯ ಆಚಾರ ನಂಬಿಕೆಗಳು ಒಂದೊಂದು ಊರಿಗೆ, ಒಂದೊಂದು ಪಂಥಕ್ಕೆ, ಒಂದೊಂದು ಜಾತಿಗೆ, ಬೇರೆ ಬೇರೆ ಆಗಿರುವವು, ಎಂಬಲ್ಲಿ, ಅವು ಮದುವೆ ಕಾರ್ಯಕ್ರಮದಲ್ಲಿ ಬರೇ ಔಪಚಾರಿಕತೆಗಾಗಿ ಮಾತ್ರ ಸೇರಿಸಿಕೊಂಡಿರುವವುಗಳು ಎಂಬ ಸತ್ಯವನ್ನು ಜನರಿಗೆ ತಿಳಿಸಲು, ಹಾಗೂ,

3. ಮೂರನೆಯದಾಗಿ, ಮದುವೆಗಳಲ್ಲಿ ಆಚಾರಗಳನ್ನು ಮಾಡಬಾರದು ಎಂದಲ್ಲ ಇಲ್ಲಿ ಹೇಳುವುದು, ಆದರೆ ಆಚಾರ ಇಲ್ಲದೆಯೂ, ತ್ಯಾಗಭಾವದ ಹಿನ್ನೆಲೆಯಲ್ಲಿ ಅರಿತು ಜೀವಿಸಿ ಅದರಿಂದ ಬರುವ ಆ ಶುದ್ದಪ್ರೀತಿಯಲ್ಲಿ ಜೀವಿಸುವಲ್ಲಿ ಮದುವೆಯು ನಿಜವಾಗಿಯೂ ಪೂರ್ಣ ಆಗುವುದು ಎಂಬ ಆ ಪರಮ ಸತ್ಯವನ್ನು ತಿಳಿಸುವುದರೊಂದಿಗೆ, ಆಚಾರ ಮಾಡಿದವರು ಕೂಡಾ ಈ ಮುಖ್ಯ ಭಾಗವನ್ನು ಸತ್ಯಸಂಧವಾಗಿ ಅನುಷ್ಠಿಸಿದರೆ, ಅವರಿಗೂ ಅದರ ಲಾಭವನ್ನು ಪಡೆಯಬಹುದು ಎಂಬ ಆ ಪರಿಹಾರದ ಸಂದೇಶವನ್ನು ತಿಳಿಸುವುದಕ್ಕಾಗಿಯೂ, ನಾನು ಪೂರ್ತಿಯಾಗಿ ಆಚಾರಗಳನ್ನು ಬಿಟ್ಟು ತ್ಯಾಗಭಾವನೆಯ ಹಿನ್ನಲೆಯ ಅರಿತು ಜೀವಿಸುವಿಕೆಯ ಆ ದಿವ್ಯಜ್ಞಾನದ ಸಂಕಲ್ಪದ ಹಿನ್ನೆಲೆಯಲ್ಲಿ ಮದುವೆ ಆಗಿರುವುದು ಎಂದು ತಿಳಿಯಬೇಕು.
 *************


ಪ್ರಶ್ನೆ- ಮಹಾಜೀವನದಲ್ಲಿ ಕಲ್ಪನೆಗೆ ಸ್ಥಾನವಿಲ್ಲ ಎನ್ನುವರು, ಕಾರಣವೇನು?

ಉತ್ತರ – ನೋಡಿ, ಮಹಾಜೀವನವು ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯ ಜೀವನ ಆಗಿರುವುದು ಎಂದು ತಿಳಿದಿದೆ. ಹೀಗಿರುವಾಗ, ಸತ್ಯಕ್ಕೆ ಬೇಕಾಗಿರುವುದು ನಿಸ್ಪಕ್ಷ ತರ್ಕದ ವಿಚಾರಗಳು ಆಗಿವೆ. ಇನ್ನು, ಶುದ್ಧಪ್ರೀತಿಗೆ ಬೇಕಾಗಿರುವುದು ಪವಿತ್ರ ಭಾವನೆಯಾಗಿದೆ. ನೀತಿಯು ಖಂಡಿತವಾಗಿಯೂ ‘ತಾನು ಚೆನ್ನಾಗಿರಬೇಕು ಮತ್ತು ಇತರರೂ ಚೆನ್ನಾಗಿರಬೇಕು’ ಎಂಬಲ್ಲಿ ಮಾಡಿಟ್ಟಿರುವ ಆ ಪವಿತ್ರ ನಿಯಮಗಳು ಆಗಿರುವವು ಎಂಬುವುದು ನಮಗೆ ತಿಳಿದಿದೆ. ಹೀಗಿರುವಾಗ, ಕಲ್ಪನೆಗೆ ಎಲ್ಲಿ ಸ್ಥಾನವಿದೆ? ಇಲ್ಲ, ಆದರೆ, ಅದಕ್ಕೆ ಮಹಾಜೀವನದಲ್ಲಿ ಬರೇ ಒಂದು ಕಡೆ ಸ್ಥಾನ ಇರುವುದು! ಹೌದು, ಅದು ಬಿಟ್ಟರೆ ಬೇರೆ ಎಲ್ಲೂ ಅದಕ್ಕೆ ಸ್ಥಾನವಿಲ್ಲ. ಇನ್ನು, ಕಲ್ಪನೆಯ ಆ ಒಂದು ಕಡೆಯ ಸ್ಥಾನವೇ, ಶುದ್ಧಪ್ರೀತಿಯನ್ನು ಎತ್ತಿ ಹೇಳುವಲ್ಲಿನ ಸ್ಥಾನವಾಗಿದೆ. ಅಲ್ಲಿ, ಅದಕ್ಕಾಗಿ ಉಪಯೋಗಿಸಬಹುದಾದ ಕವನ, ಸಂಗೀತ, ಸಾಹಿತ್ಯಗಳಲ್ಲಿ ಈ ಕಲ್ಪನೆಗಳಿಗೆ ಸ್ಥಾನ ಇರುವುದು.


 **************


ಪ್ರಶ್ನೆ- ಬ್ರಹ್ಮತತ್ವ ಎಂಬುವುದು ವೈಜ್ಞಾನಿಕ ಅಲ್ಲವೇ, ಹಾಗಿರುವಾಗ, ಅದ್ವೈತ ಸರಿ ಅಲ್ಲವೇ?

ಉತ್ತರ – ಸಾವಿರಾರು ಸಿದ್ಧಾಂತಗಳು ಇವೆ, ಅವಲ್ಲಿ ಹೆಚ್ಚು ತರ್ಕಬದ್ಧವಾಗಿ ವಿವರಿಸಲ್ಪಟ್ಟ ಸಿದ್ಧಾಂತಗಳಲ್ಲಿ ಒಂದು ಮುಖ್ಯ ಸಿದ್ಧಾಂತವೇ ಅದ್ವೈತ ಸಿದ್ಧಾಂತ ಆಗಿದೆ. ಆದರೆ, ಇಲ್ಲಿ ಈ ಸಿದ್ಧಾಂತವು ವೈಜ್ಞಾನಿಕ ಅಲ್ಲದಾಗುವುದು ಅದರ ಆ ಏಕವಾಗಿರುವ ಮೂಲ ಶಕ್ತಿಗೆ ಪವಿತ್ರತೆ ಅಥವಾ ದೈವತ್ವವನ್ನು ಕಲ್ಪಿಸುವಲ್ಲಿ ಎಂದು ತಿಳಿಯಬೇಕು. ಇದು ಯಾಕೆಂದರೆ, ಮನಸ್ಸು ಇಲ್ಲದ ಸ್ಥಿತಿಗೆ ದೈವತ್ವ ಇರಲು ಸಾಧ್ಯವಿಲ್ಲ. ಬೌದ್ಧ ಧರ್ಮವು ಇದೇ ಬ್ರಹ್ಮವನ್ನು ದೈವತ್ವ ಇಲ್ಲದ ಶೂನ್ಯ ಎನ್ನುವುದು. ಅಂದರೆ, ಬ್ರಹ್ಮ ಇಲ್ಲವೆಂದು ಮತ್ತು ಆ ರೀತಿಯ ದೈವತ್ವ ಇಲ್ಲ ಎಂದೂ ಹೇಳುವುದು. ಗೋಡೆಗೆ ದೈವತ್ವ ಇದೆ ಎಂದರೂ, ಇಲ್ಲ, ಎಂದರೂ, ಆ ಗೋಡೆಯಿಂದ, ದೈವತ್ವವು ಮಾಡಲೇಬೇಕಾದ ಮನುಷ್ಯನ ಹೃದಯವೈಶಾಲ್ಯತೆಯು ಸೃಷ್ಟಿಯಾಗುವುದಿಲ್ಲ. ಇನ್ನು, ಹೃದಯವೈಶಾಲ್ಯತೆ ಮತ್ತು ಪವಿತ್ರತೆಗಳು ಇರುವ ಮಹಾ ಆಚಾರ್ಯರು, ಗುರುಗಳು ಇತ್ಯಾದಿ ಜನರು ಬ್ರಹ್ಮತತ್ವದಿಂದ ಸೃಷ್ಟಿಯಾಗಿದ್ದಾರೆ ಎಂದು ವಾದ ಮಾಡಿದರೆ, ಇತ್ತ ಬೌದ್ಧ ಧರ್ಮದಲ್ಲಿ, ಬ್ರಹ್ಮ ಇಲ್ಲದೆಯೇ, ಶೂನ್ಯ ಎಂದು ತಿಳಿದು, ಪವಿತ್ರತೆ ಮತ್ತು ಹೃದಯ ವೈಶಾಲ್ಯತೆಯನ್ನು ಆಚಾರ್ಯರು, ಗುರುಗಳು ಇತ್ಯಾದಿ ಜನರು ಪಡೆದಿದ್ದಾರೆ. ವಿಧ್ಯುತ್ ಒಂದು ಶಕ್ತಿಯ ಮೂಲ, ಅದೇ ರೀತಿ, ಬೆಳಕು, ಶಾಖ, ಅಯಸ್ಕಾಂತ, ಇತ್ಯಾದಿ ಹಲವು ಶಕ್ತಿಯ ಮೂಲಗಳು ಇವೆ. ಇವುಗಳಿಗೆ ಯಾವುದಕ್ಕೂ ಹೃದಯ ವೈಶಾಲ್ಯತೆ ಮತ್ತು ಪವಿತ್ರತೆಯನ್ನು ಹೆಚ್ಚಿಸುವ ಆ ದೈವತ್ವವು ಇರುವುದಿಲ್ಲ. ಹಾಗಿರುವಾಗ. ಇನ್ನು, ಈ ರೀತಿಯ ಶಕ್ತಿಯ ಮೂಲಗಳು ಎಲ್ಲದರ ಶಕ್ತಿಯ ಮೂಲ ಎಂದು ಹೇಳಲ್ಪಡುವ ಆ ಬ್ರಹ್ಮಕ್ಕೆ ದೈವತ್ವ ಇರುವುದು ಎಂದು ಹೇಗೆ ಹೇಳುವುದು? ಮಾತ್ರವಲ್ಲ, ಬೌದ್ಧ, ಜೈನ, ಧರ್ಮಗಳು ಹಾಗೂ ಹಿಂದೂ ಧರ್ಮದ ಆರು ದರ್ಶನಗಳಲ್ಲಿ ಅದ್ವೈತದ ಮೂಲ ದರ್ಶನವಾಗಿರುವ ಉತ್ತರ ಮೀಮಾಂಸವನ್ನು ಹೊರತುಪಡಿಸಿ ಉಳಿದ ಐದು ದರ್ಶನಗಳು ಈ ಎಲ್ಲವೂ ಒಟ್ಟಾಗಿ ಈ ಬ್ರಹ್ಮ ತತ್ವದ ಅಸ್ತಿತ್ವವನ್ನು ಒಪ್ಪುವುದಿಲ್ಲ. ಹೀಗಿರಲು, ಅದ್ವೈತವನ್ನು ಒಂದು ಮುಖ್ಯ ಸಿದ್ಧಾಂತ ಎಂದು ಹೇಳಬಹುದೇ ಹೊರತು, ವಿಜ್ಞಾನದಂತೆ ಅದು ಸತ್ಯವಾಗಿರುವುದು ಎಂದು ಹೇಳಲು ಸಾಧ್ಯವಾಗುವುದಿಲ್ಲ.

ನನ್ನ ಸಹೋದರರೇ, ಮನುಷ್ಯನಲ್ಲಿ ಪವಿತ್ರತೆ ಮತ್ತು ದೈವತ್ವವು, ಆ ವ್ಯಕ್ತಿಯು, ಸತ್ಯಚಿಂತನೆ ಜ್ಞಾನ, ಆತ್ಮಪರಿಶೋಧನೆ ಜ್ಞಾನ, ಮತ್ತು ವೈರಾಗ್ಯ ಜ್ಞಾನ, ಎಂಬ ಸಾಧನೆಗಳಿಂದ ಹುಟ್ಟಿಬರುವ ಆ ಶಾಶ್ವತ ಹೃದಯವೈಶಾಲ್ಯತೆಯಿಂದ ಮಾತ್ರ ಸಾಧ್ಯವಾಗುವುದು. ಸಂಶಯವಿದ್ದರೆ, ಇತ್ತ, ಜಗತ್ತಿನ ಆ ಹಲವು ದರ್ಶನಗಳ ಹಾಗೂ ಧರ್ಮ, ಪಂಥಗಳ ಆ ಮತಾಂತರದ ದಿಗ್ವಿಜಯಗಳು ಒಂದು ಸಾಕು ಮಾನವರ ಮನಸ್ಸು ಇವೆಲ್ಲದರಿಂದ ಎಷ್ಟು ಪವಿತ್ರಗೊಂಡಿದೆ ಮತ್ತು ಅವಲ್ಲಿ ಎಷ್ಟು ದೈವತ್ವ ಹಾಗೂ ಹೃದಯವೈಶಾಲ್ಯತೆ ಅವಲ್ಲಿ ಅಡಕವಾಗಿವೆ ಎಂಬುವುದನ್ನು ತಿಳಿಯಲು.

 ******************


ಪ್ರಶ್ನೆ- ಈ ಎಲ್ಲಾ ಜಗತ್ತಿನ ಸೂಕ್ಷ್ಮಶಕ್ತಿಗಳ ಮೂಲ ಯಾವುದು, ಸೃಷ್ಟಿಕರ್ತನೇ?

ಉತ್ತರ- ಈ ಭೂಮಿಯ ಮಾನವರಿಗೆ ಮಾತ್ರ ಈ ಸೂಕ್ಷ್ಮಶಕ್ತಿ ಇರುವುದು, ಪ್ರಾಣಿಗಳಿಗಿಲ್ಲ. ಹೀಗಿರುವಾಗ, ಈ ಮಾನವ ರಾಶಿಯ ಆದಿ ಕಾಲದಲ್ಲಿ ಏನಿತ್ತು ಎಂದು ನೋಡಿದರೆ ಇದರ ಉತ್ತರವು ಸುಲಭವಾಗುವುದು. ನೋಡಿ, ಮಾನವನ ಆದಿಯು ಶಿಲಾಯುಗವಾಗಿದೆ. ಅಚ್ಚರಿ ಎಂದರೆ, ಶಿಲಾಯುಗದಲ್ಲೇ ಮನುಷ್ಯರು ಕಾಡು ದೇವತೆಗಳನ್ನು ಭೀಕರ ನರಬಲಿ ಸಹಿತ ಆರಾಧಿಸುತ್ತಿದ್ದರು ಎಂಬುವುದಾಗಿದೆ! ಒಂದು ವಿಷಯ ಅಂತೂ ಸ್ಪಷ್ಟ, ಆಗಿನ ಕಾಲದಲ್ಲಿ ಸೃಷ್ಟಿಕರ್ತನ ವಿಷಯವೇ ಮನುಷ್ಯರಿಗೆ ಗೊತ್ತಿರಲಿಲ್ಲ. ಮಾತ್ರವಲ್ಲ, ಸೃಷ್ಟಿಕರ್ತನು ಮನುಷ್ಯನ ಕಲ್ಪನೆಗೆ ಪ್ರವೇಶಿಸುವುದು ಕೆಲವು ಲಕ್ಷ ವರುಷಗಳ ನಂತರ ಆಗಿರುವುದು. ಹೀಗಿರುವಾಗ, ಭೂಮಿಯ ಎಲ್ಲಾ ಕಾಡುಗಳಲ್ಲಿ, ಒಂದೇ ರೀತಿಯಲ್ಲಿ, ಈ ಮಾನವರಿಗೆ ನರಬಲಿ ಸಹಿತ ಸೂಕ್ಷ್ಮಶಕ್ತಿಯನ್ನು ಆರಾಧಿಸುವಂತೆ ಯಾರು ಮಾಡಿರಬಹುದು? ಅಂದು ಧರ್ಮಪ್ರಚಾರಕರು ಯಾರೂ ಇರಲಿಲ್ಲ. ಆಗಲೇ, ಅಲ್ಲಿ ಅನ್ಯಗ್ರಹಜೀವಿಗಳ ಅತಿರಹಸ್ಯ ಪ್ರಾಚೀನ ವಾಮಾಚಾರದ ಕೈವಾಡ ಕಾಣಿಸುವುದು. ನಮಗಿಂತ ಹಲವು ಲಕ್ಷ ವರುಷಗಳು ವಿಜ್ಞಾನದಲ್ಲಿ ಮುಂದುವರಿದಿರುವ ಅನ್ಯಗ್ರಹಜೀವಿಗಳು, ತಮ್ಮ ಲೋಕದ ಇಂಧನವಾದ ‘ತೀವ್ರಗೊಳಿಸಲ್ಪಟ್ಟ ಮನುಷ್ಯರ ಮನೋಶಕ್ತಿ’ಯ ಲಾಭಕ್ಕಾಗಿ ಈ ಭೂಮಿಯಲ್ಲಿ, ಆದಿಯಿಂದಲೇ, ಸೂಕ್ಷ್ಮಶಕ್ತಿಗಳನ್ನು ಹುಟ್ಟುಹಾಕಿ ಅವುಗಳಿಗೆ ಕಾಲಾಕಾಲಕ್ಕೆ ತಕ್ಕಂತೆ ಹೊಸಹೊಸ ರೀತಿಯ ನಾಮ ರೂಪಗಳಲ್ಲಿ ಬೇರೆ ಬೇರೆಯಾಗಿ ಬೇರೆ ಬೇರೆ ಕಡೆಗಳಲ್ಲಿ ಕೊಟ್ಟು, ಮನುಷ್ಯರನ್ನು ಬೇರ್ಪಡಿಸಿ, ಅದರ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿರುವವು. ಒಟ್ಟಲ್ಲಿ, ಇವುಗಳೇ ಭೂಮಿಯ ಎಲ್ಲ ಸೂಕ್ಷ್ಮಶಕ್ತಿಗಳ ಮೂಲ ಆಗಿರುವವು.

 **************

ಪ್ರಶ್ನೆ- ನೀವು ಮನೋಶಕ್ತಿಯನ್ನು ಬೆಳೆಸಿ ಸೂಕ್ಷ್ಮಶಕ್ತಿಯನ್ನು ಮಾಡಿಕೊಂಡಿರುವಂತೆ, ಎಲ್ಲರಿಗೂ ಬೆಳೆಸಿ ಸೂಕ್ಷ್ಮಶಕ್ತಿಗಳನ್ನು ಮಾಡಿಕೊಳ್ಳಬಹುದೇ?

ಉತ್ತರ- ಮೊದಲಾಗಿ ಈ ಸೂಕ್ಷ್ಮದ ಮನೋಶಕ್ತಿಗೆ ನಾವು ಏಕಾಗ್ರತೆಯ ಧ್ಯಾನವನ್ನು ದೀರ್ಘಕಾಲ ಮಾಡಬೇಕಾಗುವುದು. ಅದು ಜನಸಾಮಾನ್ಯರಿಗೆ ಮಾಡುವುದು ಕಷ್ಟ. ಇನ್ನು, ಎರಡನೆಯದ್ದಾಗಿ, ಧೀರ್ಘಕಾಲ ಧ್ಯಾನ ಮಾಡಿದವರಿಗೆ ಕೂಡಾ ಕೆಲವೊಮ್ಮೆ ಸೂಕ್ಷ್ಮದ ಕೆಲವು ಅನುಭವ ಆಗಬಹುದು ಹೊರತು ಸೂಕ್ಷ್ಮಲೋಕ, ಸೂಕ್ಷ್ಮ ಜೀವಿಗಳ ಅನುಭವಗಳನ್ನು ಪಡೆಯುವುದು ಕಷ್ಟ ಆಗಬಹುದು. ಇನ್ನು, ಈ ಸೂಕ್ಷ್ಮ ವಲಯಗಳ ಕುರಿತಾಗಿ ಇರುವ ಅನುಭವಗಳನ್ನು ಕೆಲವು ತಾಂತ್ರಿಕರು ಹೊಂದಿದ್ದರು ಕೂಡಾ, ಸ್ವತಃ ಅವರವರದೇ ಶಕ್ತಿಯಲ್ಲಿ ಅವರು ಏನನ್ನು ಮಾಡುವುದಿಲ್ಲ, ಬದಲು, ಬೇರೆ ಯಾವುದೋ ಮಂತ್ರ ಶಕ್ತಿ, ತಂತ್ರ ಶಕ್ತಿಗಳನ್ನು ಮಾತ್ರ ತಯಾರು ಮಾಡುವರಷ್ಟೆ. ಮಾತ್ರವಲ್ಲ, ಇನ್ನು, ಕೆಲವು ಕಡೆ, ವ್ಯಕ್ತಿಯ ದೇಹದಲ್ಲಿ ತಾತ್ಕಾಲಿಕವಾಗಿ ಬಂದು ಕುಳಿತು ತನ್ನನ್ನು ಹೊರಗೆ ಭಾವದ ರೂಪದಲ್ಲಿ ಪ್ರಕಟ ಮಾಡಿಕೊಳ್ಳುವ ಶಕ್ತಿಗಳು ಆ ಶರೀರಗಳನ್ನು ತಾವು ಪ್ರಕಟಗೊಳ್ಳುವುದಕ್ಕಾಗಿ ಬಳಸಿಕೊಳ್ಳುವವು ಅಷ್ಟೆ. ಇನ್ನು, ಸ್ವತಃ ಒಬ್ಬ ವ್ಯಕ್ತಿಯು ತನ್ನದೇ ಶಕ್ತಿಯನ್ನು ಒಂದು ಸೂಕ್ಷ್ಮದ ಶಕ್ತಿಯಾಗಿ ಬದಲಾಯಿಸುವುದು ಅತ್ಯಂತ ಅಪಾಯಕಾರಿ ಕೆಲಸ ಆಗುವುದು ಎಂಬುವುದನ್ನು ತಿಳಿಸಲು ಇಚ್ಚಿಸುವೆನು. ಸೂಕ್ಷ್ಮದ ರಹಸ್ಯಾನ್ವೇಷಣೆ ಮಾಡಲು ಈ ಸ್ವಂತ ಸೂಕ್ಷ್ಮ ಶಕ್ತಿಯಲ್ಲದೆ ಬೇರೆ ಯಾವ ಇತರ ಶಕ್ತಿಯನ್ನು ಆಶ್ರಯಿಸಲು ಸಾಧ್ಯವಿಲ್ಲ. ಆ ರಹಸ್ಯ ಪ್ರಾಚೀನ ವಾಮಾಚಾರದ ಕಣ್ಣನ್ನು ತಪ್ಪಿಸಿ ಹಾಗೂ ನಿಯಂತ್ರಣವನ್ನು ತಪ್ಪಿಸಿ ಇರಲು ಹೊರಗಿನ ಯಾವ ಶಕ್ತಿಗಳಿಗೂ ಸಾಧ್ಯವಾಗುವುದಿಲ್ಲ ಎಂಬುವುದೇ ಇದಕ್ಕೆ ಕಾರಣ. ನನ್ನ ಶಕ್ತಿಯಾದುದರಿಂದ ಮಾತ್ರ ಸೂಕ್ಷ್ಮದಲ್ಲಿ, ಸ್ವಲ್ಪ ಕಾಲದ ನಂತರವಾದರೂ, ಅಡಗಿ ಬೇಹುಗಾರಿಕೆ ಮಾಡಲು ಸಾಧ್ಯವಾಯಿತು. ಈ ಬೇಹುಗಾರಿಕೆಗಾಗಿ ಇತರ ಶಕ್ತಿಗಳನ್ನು ನಾನು ಉಪಯೋಗಿಸುತ್ತಿದ್ದರೆ, ಅವುಗಳು ಪ್ರಾಚೀನ ಶಕ್ತಿಗಳಾದ ಕಾರಣ, ನನಗೆ ಅವುಗಳನ್ನು ಅಡಗಿ ಬೇಹುಗಾರಿಕೆ ಮಾಡುವಂತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ನಾನು ಬೇರೆ ದಾರಿ ಇಲ್ಲದೆ ಬೇಹುಗಾರಿಕೆಗಾಗಿ ನನ್ನ ಮನೋಶಕ್ತಿಯನ್ನೇ ಉಪಯೋಗಿಸಬೇಕಾಗಿ ಬಂತು. ಈಗಲಾದರೂ ತಿಳಿಯುದಿಲ್ಲವೆ, ಓಂದೇವ ಸೂಕ್ಷ್ಮಶಕ್ತಿಗಳು ಸೃಷ್ಟಿಯಾಗಿರುವುದು ಬೇಹುಗಾರಿಕೆಗಾಗಿ ಎಂದು, ಮತ್ತು ಅನುಗ್ರಹಕೊಡಲು ಬೇಕಾಗಿ ತಯಾರು ಮಾಡಿದ ಶಕ್ತಿ ಅಲ್ಲ ಎಂದು? ಈ ಕಾರಣದಿಂದಲೇ, ನನ್ನ ಈ ಓಂದೇವ ಸೂಕ್ಷ್ಮಶಕ್ತಿಗಳ ಶಕ್ತಿಯನ್ನು ಹೆಚ್ಚಿಸುವ ಆ ಮೊದಲ ಕೆಲವು ಹಂತಗಳಲ್ಲಿ ನನಗೆ ನನ್ನ ಜೀವದ ಮೇಲೆ ಭರವಸೆಯೇ ಇರಲಿಲ್ಲ ಎಂದು ನಾನು ಹೇಳಿರುವುದು. ಒಟ್ಟಲ್ಲಿ, ಮಂತ್ರಮೂರ್ತಿ, ತಂತ್ರಶಕ್ತಿಗಳನ್ನು ತಯಾರಿಸುವುದು ತಾಂತ್ರಿಕರಿಗೆ ಸಾಧ್ಯವಾಗಬಹುದು, ಆದರೆ, ಈ ರೀತಿ ಮಾಡುವುದು ಅದು ಯಾರಿಗಾದರೂ ಬಹಳ ಕಷ್ಟ ಮತ್ತು ಅಪಾಯಕಾರಿಯಾಗಬಹುದು ಎಂದು ನಾನು ಹೇಳುವೆನು.

 ****************

ಪ್ರಶ್ನೆ- ಪ್ರಬುದ್ಧತೆ ಎಂದರೇನು ಅದಕ್ಕೆ ಹಂತಗಳಿವೆಯೇ?

ಉತ್ತರ- ಜೀವನ ಮೌಲ್ಯಗಳು ಹಾಗೂ ಮಾನವೀಯತೆಯ ಮೌಲ್ಯಗಳ ಆಳದ ಜ್ಞಾನವು ಮನಸ್ಸು, ಮಾತು, ಬರಹ, ಕಾರ್ಯಗಳಲ್ಲಿ ಪ್ರತಿಫಲಿಸುವುದಾದರೆ, ಆ ವ್ಯಕ್ತಿಯ ವ್ಯಕ್ತಿತ್ವದಲ್ಲಿನ ಆ ಧನಾತ್ಮಕ ಬೆಳವಣಿಗೆಯನ್ನು ಪ್ರಬುದ್ಧತೆ ಎನ್ನಬಹುದು. ಆದುದರಿಂದ, ಪ್ರಬುದ್ಧತೆಯು ಆ ಹಿನ್ನೆಲೆಯ ಜ್ಞಾನದ ರೂಪದಲ್ಲಿ ಇರುವುದು ಎಂದೂ ತಿಳಿದುಕೊಳ್ಳಬಹುದು.

ಪ್ರಬುದ್ಧತೆಗೆ ಹಂತಗಳು ಇವೆಯೇ ಎಂದು ಕೇಳಿದರೆ ಅದರ ಉತ್ತರವು, ‘ಪ್ರಬುದ್ಧತೆಗೆ ಹಂತಗಳು ಇವೆ, ಆದರೆ ಇಲ್ಲ’ ಎಂದಾಗುವುದು! ಜೀವನ ಹಾಗೂ ಮಾನವೀಯತೆಯ ಮೌಲ್ಯಗಳ ಬಗ್ಗೆ ಅರಿಯಲು ಮತ್ತು ಅನುಸರಿಸಲು ಒಬ್ಬ ವ್ಯಕ್ತಿಗೆ ಇರುವ ಆಸಕ್ತಿ ಮತ್ತು ಶ್ರಮವು ಇಲ್ಲಿ ಎಲ್ಲವನ್ನು ನಿರ್ಣಯಿಸುವುದು. ಅವುಗಳು ಅತಿ ಹೆಚ್ಚು ಇರುವ ವ್ಯಕ್ತಿಯು, ಈ ವಿಚಾರಗಳ ಬಗ್ಗೆ ಬಹಳ ಆಳಕ್ಕೆ ಇಳಿದು ಚಿಂತಿಸಿ ಅರಿತುಕೊಳ್ಳುವನು. ಹೀಗೆ ಆಳಕ್ಕೆ ಇಳಿದು ಚಿಂತಿಸಿದಲ್ಲಿ, ಅಂತವರಿಗೆ, ಬೋಧೋದಯವು ಬಹಳ ಬೇಗನೆ ಹಲವು ಹಂತಗಳು ಇಲ್ಲದೆಯೇ ಬರುವುದು. ಇನ್ನು, ಇತ್ತ, ಒಬ್ಬ ಜನಸಾಮಾನ್ಯನಿಗೆ, ಆಳದ ಆಸಕ್ತಿ, ಶ್ರಮಗಳು ಇಲ್ಲದಿರುವಾಗ, ಆ ಮೇಲಿನ ಹಂತವನ್ನು ತಲುಪಲು ಆ ವ್ಯಕ್ತಿಗೆ ಹಲವು ಹಂತಗಳನ್ನು ದಾಟಬೇಕಾಗುವುದು. ಈ ಕಾರಣದಿಂದಾಗಿ, ‘ಪ್ರಬುದ್ಧತೆಗೆ ಹಂತಗಳು ಇವೆ, ಆದರೆ ಇಲ್ಲ’ ಎಂದು ಹೇಳಿರುವುದು.

 **************



ಪ್ರಶ್ನೆ- ಸ್ವಲ್ಪ ಕಾಲ, ನಿಮ್ಮ ಭಾವಚಿತ್ರವನ್ನು, ನಿಮ್ಮ ಭಕ್ತರು ಆರಾಧನೆ ಮಾಡುತ್ತಿದ್ದರಲ್ಲ, ಅದನ್ನು ನೀವು ತೆಗೆಯಲು ಹೇಳಿರುವುದರ ಹಿಂದೆ ವಿಗ್ರಹಾರಾಧನೆ ಬೇಡ ಎಂಬ ಸಂದೇಶ ಇದೆಯೇ?

ಉತ್ತರ- ನೋಡಿ, ಈ ಪ್ರಶ್ನೆಯನ್ನು ಉತ್ತರಿಸುವ ಮೊದಲು ಒಂದು ಚಿಕ್ಕ ವಿಚಾರವನ್ನು ನೀವು ತಿಳಿದಿರಲೇಬೇಕು. ಮೊದಲಲ್ಲಿ, ನಾನು ಪವನಗಿರಿಯಿಂದ ದೂರ ಎಲ್ಲಾದರೂ ಒಂದು ಏಕಾಂತ ಸ್ಥಳಕ್ಕೆ ಹೋಗಿ, ಅಲ್ಲಿ ಆ ಸೂಕ್ಷ್ಮದ ರಹಾಸ್ಯಾನ್ವೇಷಣೆ ಅಥವಾ ಸೂಕ್ಷ್ಮದ ಬೇಹುಗಾರಿಕೆ ಮಾಡಲು ಹೊರಟಿದ್ದೆನು. ಯಾಕೆಂದರೆ, ನಾನು ಓಂದೇವ ಎಂಬ ದೇವಸಂಕಲ್ಪವನ್ನು ಸೃಷ್ಟಿಸಿರುವುದೇ ಸೂಕ್ಷ್ಮದ ರಹಸ್ಯಾನ್ವೇಷಣೆಗಾಗಿ ಆಗಿತ್ತು. ಮಾತ್ರವಲ್ಲ, ನಾನು ಅನುಗ್ರಹ ಕೊಡುವುದು, ಫೋಟೋ, ಇತ್ಯಾದಿ ಆ ಯಾವ ಆಲೋಚನೆಯಲ್ಲಿಯೂ ಇರಲಿಲ್ಲ, ಆದರೆ ನನ್ನಿಂದ ಅನುಗ್ರಹ ಸಿಗುವುದು ಎಂದು ಭಕ್ತರಿಗೆ ಸ್ವತಃ ಅನುಭವ ಆಗುವಾಗ, ಭಕ್ತರೇ ನನ್ನನ್ನು ಪವನಗಿರಿಯಿಂದ ಬೇರೆಡೆಗೆ ಹೋಗದಂತೆ ತಡೆಹಿಡಿದು, ನನ್ನ ಭಾವಚಿತ್ರವನ್ನು ಅಥವಾ ಫೋಟೋವನ್ನು ಅನುಗ್ರಹಕ್ಕಾಗಿ ಇಟ್ಟಿರುವುದು. ಮಾತ್ರವಲ್ಲ, ಅನುಗ್ರಹಕ್ಕಾಗಿ ಬರುವವರಿಗೆ ಈ ನನ್ನ ಭಕ್ತರೇ ಪವನಗಿರಿಯಲ್ಲಿ ತಮ್ಮಲ್ಲಾಗುವ ಸೌಕರ್ಯಗಳನ್ನು ಒದಗಿಸಲು ಆರಂಭಿಸಿದ್ದು ಎಂದು ತಿಳಿಯಬೇಕು.

ನೋಡಿ, ನಾನು, ಮೊದಲು ಭಕ್ತರು ಇಟ್ಟು ಆರಾಧಿಸುತ್ತಿದ್ದ ನನ್ನ ಭಾವಚಿತ್ರವನ್ನು ಆನಂತರದಲ್ಲಿ ತೆಗೆಯಲು ಯಾಕಾಗಿ ಅವರಲ್ಲಿ ಹೇಳಿದೆನು ಎಂದರೆ,

ಮೊಟ್ಟಮೊದಲಿಗೆ, ಅದು ವಿಗ್ರಹಾರಾಧನೆ ಬೇಡ ಎಂಬ ಸಂದೇಶವನ್ನು ಕೊಡುವುದಕ್ಕಲ್ಲ ಎಂಬುವುದನ್ನು ಸ್ಪಷ್ಟವಾಗಿ ಹೇಳುವೆನು. ಯಾಕೆಂದರೆ, ಆರಾಧನೆಯು ವಿಗ್ರಹ ಇದ್ದು ಅಥವಾ ವಿಗ್ರಹ ಇಲ್ಲದೆ ಈ ಎರಡು ರೀತಿಯಿಂದಲೂ ಮಾಡಿಕೊಳ್ಳಬಹುದು. ಇದು ಹೀಗಾದರೆ, ಇನ್ನು ನನ್ನ ಭಾವಚಿತ್ರವನ್ನು ತೆಗೆಯಲು ಹೇಳಿದುದಕ್ಕೆ
ಎರಡು ಮುಖ್ಯ ಕಾರಣಗಳು ಇವೆ. ಅವಲ್ಲಿ

1. ನಾನು ಮೊದಲೇ, ನನ್ನ ಭಕ್ತರಲ್ಲಿ ಓಂದೇವ ಶಕ್ತಿಯು ಆ ನನ್ನ ಭಾವಚಿತ್ರದಲ್ಲಿ ಪ್ರತಿಷ್ಠಿಸಿ ಅರಾಧಿಸಲಾಗುವುದಿಲ್ಲ ಎಂದೂ, ಅಂದರೆ, ನನ್ನ ಭಾವಚಿತ್ರದಲ್ಲಿ ಓಂದೇವ ಶಕ್ತಿಯ ಪ್ರತಿಷ್ಠೆ ಇಲ್ಲ ಎಂದೂ ತಿಳಿಸಿದ್ದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಇದು, ತಂತ್ರ, ಮಂತ್ರಗಳ ಹಿನ್ನೆಲೆಯಲ್ಲಿ ಇರುವ ಆರಾಧನೆಯ ರೀತಿ ಅಲ್ಲ ಆದುದರಿಂದ ಭಕ್ತಿಯ ಹಿನ್ನೆಲೆಯಲ್ಲಿ ಮಾತ್ರ ಭಕ್ತರು ನನ್ನ ಭಾವಚಿತ್ರವನ್ನು ಕಾಣಬೇಕೆಂದು ಅವರಲ್ಲಿ ಹೇಳಿದ್ದೆ ಎಂದು ಅರ್ಥ. ಇನ್ನು, ಭಕ್ತಿಯ ರೀತಿಯನ್ನು ಮಾತ್ರ ಆರಾಧನೆ ಇಟ್ಟುಕೊಳ್ಳುವುದಕ್ಕೂ ಕಾರಣವಿತ್ತು. ಅದು, ಆ ಭಯಾನಕ ಅತಿ ರಹಸ್ಯ ಸೂಕ್ಷ್ಮದ ವಾಮಾಚಾರ ವ್ಯವಸ್ಥೆಯ ಪ್ರಭಾವದಿಂದ ಪಾರಾಗಲು ನನ್ನ ಸೂಕ್ಷ್ಮದ ಆ ಧನಾತ್ಮಕ ಶಕ್ತಿಗಳು ಸೂಕ್ಷ್ಮದಲ್ಲಿ ಹೊರಗೆ ಕಾಣಿಸದೆ, ಅಡಗಿ, ರಹಸ್ಯಾನ್ವೇಷಣೆ ಮಾಡುತ್ತಾ ಇದ್ದುದೇ ಅದಕ್ಕೆ ಕಾರಣವಾಗಿತ್ತು.

ಮೊದಲಲ್ಲೇ, ಇಲ್ಲಿಯ ತನಕ ಆರಾಧನೆಯ ರೀತಿಯಲ್ಲಿ ಬದಲಾಯಿಸಿಕೊಂಡು ಆಗಿತ್ತು. ಕೆಲವು ವರುಷಗಳ ನಂತರ, ಇದೇ ಮೇಲಿನ ಮುಖ್ಯ ಕಾರಣವು ಮತ್ತೂ ಮುಖ್ಯವಾಗಿ ತೋರುವಾಗ ಮತ್ತು ಅದರೊಂದಿಗೆ ಇನ್ನೊಂದು ಕಾರಣವೂ ಬಂದು ಸೇರುವಾಗ, ನಾನು ನನ್ನ ಭಾವಚಿತ್ರದ ಆರಾಧನೆಯ ಬದಲು ಆ ಸ್ಥಾನದಲ್ಲಿ ಸತ್ಯ, ಪ್ರೀತಿ, ನೀತಿಯ ಪವಿತ್ರ ಫಲಕ ಇಡಬೇಕೆಂದು ಭಕ್ತರಲ್ಲಿ ಹೇಳಿ ಹಾಗೆ ಅದನ್ನು ಕೂಡಾ ಬದಲಾಯಿಸಿಕೊಂಡೆನು.

2. ಆ ಇನ್ನೊಂದು ಕಾರಣ.

ಈ ಸತ್ಯ, ಪ್ರೀತಿ, ನೀತಿಯ ಪವಿತ್ರ ಫಲಕವನ್ನು ನೋಡಿದಾಗ, ಸತ್ಯಸಂಧ ಭಕ್ತರಿಗೆ, ದೈವಿಕ ಸ್ವಭಾವಗಳು ಹೃದಯದಲ್ಲಿ ಮೂಡಲು ಹಾಗೂ ಬೆಳೆಯಲು ಆರಂಭಿಸುವುದು ಮತ್ತು ಸದ್ಗುಣಗಳು ಭಕ್ತರ ಹೃದಯದಲ್ಲಿ ನಿಧಾನವಾಗಿ ಬೇರೂರುವುದು. ಆದರೆ, ಭಾವಚಿತ್ರವನ್ನು ನೋಡಿದಾಗ ಆ ಭಕ್ತನು ತಾನು ಸ್ವಭಾವ ಶುದ್ಧಿಯನ್ನು ಬೆಳೆಸಿಕೊಳ್ಳಬೇಕು ಎಂದು ಅದು ಆ ಭಕ್ತನ ಮನದಲ್ಲಿ ಪ್ರೇರಣೆ ನೀಡುವುದಿಲ್ಲ, ಬದಲು ಬರೇ ತನಗೆ ಸಿಗಬೇಕಾದ ಅನುಗ್ರಹದಲ್ಲಿ ಮಾತ್ರ ಆ ವ್ಯಕ್ತಿಯ ಮನಸ್ಸು ಗಟ್ಟಿಯಾಗಿ ಇರುವುದು ಅಷ್ಟೆ. ಕಳ್ಳರು ಕೂಡ ಅನುಗ್ರಹವನ್ನು ಬೇಡಿಕೊಳ್ಳುವುದಿಲ್ಲವೆ? ನೋಡಿ, ನಂಬಿಕೆ, ಆಚಾರಗಳ ಹಿನ್ನೆಲೆಯಲ್ಲಿ ಬಹಳ ಕಾಲದವರೆಗೆ ತಪಸ್ಸು ಮಾಡಿರುವ ಅಥವಾ ಪ್ರಾರ್ಥಿಸಿರುವ ಅಸುರರು, ಅಸುರರಾಗಿಯೇ ಉಳಿದರು, ಹೊರತು ಅವರ ಸ್ವಭಾವದಲ್ಲಿ ಬದಲಾವಣೆ ಬರಲಿಲ್ಲ ಎಂದು ನಮಗೆ ತಿಳಿದಿದೆ. ಇದಕ್ಕೆ ಬೇಕಾಗಿ, ಪೂರ್ತಿ ದೈವತ್ವವನ್ನು ಮಾತ್ರ ಹಿನ್ನೆಲೆಯಾಗಿಟ್ಟು ಮಾಡುವ ಈ ಹೊಸ ಪ್ರಾರ್ಥನಾ ರೀತಿಯನ್ನು ನನ್ನ ದೇವಸಂಕಲ್ಪದಲ್ಲಿ ಸೇರಿಸಿಕೊಂಡಿರುವುದು ಎಂದು ತಿಳಿಯಬೇಕು.

ಈ ಪವಿತ್ರ ಫಲಕದ ಪ್ರತ್ಯೇಕತೆಗಳು

ನೋಡಿ, ಸತ್ಯ. ಪ್ರೀತಿ, ನೀತಿಯ ಈ ಫಲಕವು ಎಲ್ಲಾ ದೇವಸಂಕಲ್ಪಗಳನ್ನು ಹಾಗೂ ಎಲ್ಲಾ ಧರ್ಮಗಳನ್ನು ಪ್ರತಿನಿಧೀಕರಿಸುವ ಒಂದು ಪವಿತ್ರ ಫಲಕ ಅಷ್ಟೆ. ಅದರ ಮುಂದೆ ಯಾವ ದೇವರ ಹೆಸರನ್ನು ಹೇಳಿ ಬೇಕಾದರೂ ಆ ದೇವರನ್ನು ಪ್ರಾರ್ಥಿಸಬಹುದು. ಅದು ಯಾವುದೋ ಒಂದು ದೇವರ ಅಥವಾ ಧರ್ಮದ ಸಂಕೇತವಲ್ಲ. ಆದುದರಿಂದಲೇ, ಇದನ್ನು ದಿವ್ಯಜ್ಞಾನ ಸನ್ನಿಧಿಗಳಲ್ಲಿ ಸರ್ವ ಧರ್ಮಗಳ ಹಾಗೂ ಸರ್ವ ದೇವರು ಸಂಕಲ್ಪಗಳ ಪ್ರತಿನಿಧಿಯಾಗಿ ಉಪಯೋಗಿಸುವುದು ಎಂಬುವುದನ್ನು ಮರೆಯಬಾರದು.

ನನ್ನ ಭಾವಚಿತ್ರವನ್ನು ಆರಾಧನೆಗೆ ಇಟ್ಟಿದ್ದ ಕಾಲದ ಒಂದು ಪ್ರತ್ಯೇಕತೆ-

ನೋಡಿ, ಅಂದು ನನ್ನ ಭಾವಚಿತ್ರವನ್ನು ಆರಾಧನೆಗೆ ಇಟ್ಟಿದ್ದ ಕಾಲದಲ್ಲಿ, ನಾನು ಅದನ್ನು ಕೂಡಾ ಜನತೆಗೆ ಒಂದು ಸಂದೇಶವನ್ನು ಕೊಡಲೆಂದು ಉಪಯೋಗಿಸಿದ್ದೆನು. ಅದೇನೆಂದರೆ, ಆಸಕ್ತಿ ಇರುವ ಮತ್ತು ಸಮಾಜದಲ್ಲಿ ಅತ್ಯಂತ ಮೇಲೆ ಎಂದು ಹೇಳಿಕೊಳ್ಳುವ ಜಾತಿಯ ಮನುಷ್ಯರಿಂದ ಹಿಡಿದು ಸಮಾಜದಲ್ಲಿ ಅತ್ಯಂತ ಕೆಳಗಿನ ಜಾತಿ ಎಂದು ಜನರು ತಿಳಿಯುವ ಜಾತಿಯ ಮನುಷ್ಯರ ಕೈಯಿಂದ ನನ್ನ ಭಾವಚಿತ್ರಕ್ಕೆ ಅಂದು ಮಾಡುತ್ತಿದ್ದ ಆ ‘ಆರತಿ ನಿತ್ಯಪೂಜೆ’ ಯನ್ನು ಮಾಡಿಸಿದ್ದೆನು. ಇದರಿಂದಾಗಿ, ಪೂಜೆ ಮಾಡುವ ಅವಕಾಶವು ಸಮಾಜದಲ್ಲಿ ಅತ್ಯಂತ ದೂರ ತಳ್ಳಲ್ಪಟ್ಟ ಜನರಿಗೂ ದೊರಕಿತಲ್ಲಾ ಎಂಬ ಒಂದು ನೆಮ್ಮದಿಯು ನನಗೆ ಅದರಿಂದ ದೊರಕಿದೆ. ಓಹ್, ಎಲ್ಲಾ ಮಾನವರ ಸೃಷ್ಟಿಕರ್ತ ಅಥವಾ ತಂದೆ ಎಂಬ ದೇವರನ್ನು ಆರಾಧನೆ ಮಾಡುವಲ್ಲಿಯೂ ಕೂಡಾ, ಕೆಳಜಾತಿಯ ಮಾನವರು ಎಂದು ಹೇಳಿಕೊಂಡು ಆ ಮುಗ್ಧ ಮಾನವರನ್ನು ತಮ್ಮ ಸ್ವಂತ ತಂದೆಯಾಗಿರುವ ಸೃಷ್ಟಿಕರ್ತ ದೇವರಿಂದ ಅಷ್ಟು ದೂರ ನಿಲ್ಲಿಸಿ, ಶೋಷಣೆ ಮಾಡುತ್ತಾ ಬಂದಿರುವುದು, ಅಧರ್ಮಕ್ಕೂ ಮಾಡಲು ಸಾಧ್ಯವಾಗದಷ್ಟು ದೊಡ್ದ ಅಧರ್ಮವಾಗಿರುವುದು.

ಧರ್ಮ ಎಂದರೇನು ಮತ್ತು ದೇವರು ಎಂದರೇನು ಎಂಬ ಪ್ರಶ್ನೆಗಳಿಗೆ ಎಲ್ಲರೂ ಕುಳಿತು ಮೊದಲು ಉತ್ತರಿಸಲಿ, ಅಲ್ಲಿಂದ ಮಾತ್ರ, ಜಗತ್ತಿನ ಸರ್ವ ಧರ್ಮಗಳಲ್ಲೂ ‘ಧರ್ಮ’ ಎಂಬುವುದರ ಉದಯ ಸಾಧ್ಯ. ಇದು ಪರಮ ಸತ್ಯ. ಧರ್ಮ ಎಂದರೆ ಅದು ನಿಸ್ಪಕ್ಷ ಆಗಿರಲೇಬೇಕು. ಯಾವ ಧರ್ಮವೇ ಆದರೂ ಅದು ಬೇಲಿಯ ಒಳಗೆ ಸಂಕುಚಿತವಾಗಿ ಇರಲೇಬಾರದು. ಹಾಗೆ ಸಂಕುಚಿತವಾದರೆ ಅದು ಅಧರ್ಮ ಆಗುವುದು ಖಂಡಿತ. ದುರದೃಷ್ಟವಶಾತ್, ಎಲ್ಲಾ ಧರ್ಮ, ಪಂಥಗಳು ಈ ಬೇಲಿಗಳ ಒಳಗಿಂದಲೇ ಸೃಷ್ಟಿಯಾಗಿ ಹೊರಟುಬಂದಿರುವವುಗಳು!!

ಅನ್ಯಗ್ರಹಜೀವಿಗಳ ಸೂಕ್ಷ್ಮದ ಅತಿರಹಸ್ಯ ವಾಮಾಚಾರ ವ್ಯವಸ್ಥೆಯ, ಅವುಗಳ ಲಾಭಗಳಿವೆ ಬೇಕಾಗಿ ಅವುಗಳು ಶಿಲಾಯುಗದಿಂದಲೇ ಮಾಡುತ್ತಾ ಬಂದಿರುವ, ಆ ಮೋಸಗಳು, ಧರ್ಮ, ದೇವರುಗಳ ಹೆಸರಲ್ಲಿ ಯಾವೆಲ್ಲಾ ರೀತಿಗಳಲ್ಲಿ ಪ್ರಕಟವಾಗಿವೆ ಎಂಬುವುದನ್ನು ಇದು ಸ್ಪಷ್ಟವಾಗಿ ತೋರಿಸುವುದು.

 ****************