ಒಬ್ಬ ಉತ್ತಮನನ್ನು ಅಧಮನಿಂದ ಪ್ರತ್ಯೇಕಿಸಿ ತಿಳಿಯುವ ವಿಧಾನವು ಅವನಲ್ಲಿ ಉತ್ತಮ ಸ್ವಭಾವವಿರುವುದಾಗಿದೆ. ಒಬ್ಬನಲ್ಲಿ ಸತ್ಯ, ಪ್ರೀತಿ, ನೈತಿಕತೆ, ಇತ್ಯಾದಿಗಳು ಇಲ್ಲದಲ್ಲಿ ಆತನನ್ನು ಯಾರೂ ಉತ್ತಮ ವ್ಯಕ್ತಿ ಎಂದು ಕರೆಯುವುದಿಲ್ಲ. ಅದೇ ರೀತಿ, ಯಾವ ಶಕ್ತಿಯೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು ಹೊಂದಿಲ್ಲವಾದರೆ ಅದು ದೇವಶಕ್ತಿ ಆಗುವುದಿಲ್ಲ. ಆದುದರಿಂದ ದೇವರು ಎಂದರೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ಆಗುವುದು ಎಂದು ಸ್ಪಷ್ಟವಾಗಿ ಹೇಳಬಹುದು.