ದೇವರಿಗೆ ಒಂದು ಸಾರ್ವತ್ರಿಕ ನಿರ್ವಚನೆ

ಈ ಜಗತ್ತಿನಲ್ಲಿ ಹಲವು ರೀತಿಯ ದೇವರುಗಳು ಇರುವರು ಮತ್ತು ಅವುಗಳಲ್ಲಿ ಒಂದು ಕಡೆ ದೇವ ದೇವತೆಗಳಾದರೆ, ಇನ್ನೊಂದು ಕಡೆ, ಹಲವು ಬೇರೆ ಬೇರೆ ರೀತಿಯ ಸೃಷ್ಟಿಕರ್ತರುಗಳು!! ಇನ್ನು, ತತ್ವ ದೇವರು ಬೇರೆ ಇದೆ. ಈ ರೀತಿ, ಈ ಜಗತ್ತಿನಲ್ಲಿ ನಮಗೆ “ದೇವರು” ಸಂಕಲ್ಪಕ್ಕೆ ಒಂದು ಸಾಮಾನ್ಯ ನಿರ್ವಚನೆ ಕೊಡಲು ಸಾಧ್ಯವಾಗುವುದಿಲ್ಲ. ದೇವರು ಶಬ್ಧಕ್ಕೆ ಅರ್ಥವನ್ನು ಅಥವಾ ನಿರ್ವಚನೆ ಕೊಡಬೇಕಿದ್ದರೆ, ಎಲ್ಲದರಲ್ಲೂ ಸಾಮಾನ್ಯವಾಗಿರುವ ಅಂಶಗಳು ನಮಗೆ ಸಿಗಬೇಕು, ಆದರೆ ಮಾತ್ರ ಅದು ಸಾಧ್ಯವಾಗುವುದು. ಆದರೆ, ಅದು ನಮಗೆ ಇದುವರೆಗೂ ಸಾಧ್ಯವಾಗಿಲ್ಲ!!

ಇನ್ನು, ಈ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ, ಸ್ವಭಾವಗಳು ಇಲ್ಲವಾದರೆ ಆ ಶಕ್ತಿಯು ದುಷ್ಟ ಶಕ್ತಿಯಾಗುವುದು. ಆದುದರಿಂದ ಈ ಸ್ವಭಾವಗಳು ಎಲ್ಲಾ ದೇವಸಂಕಲ್ಪಗಳಲ್ಲೂ ಅನಿವಾರ್ಯವಾಗಿ ಇರಲೇಬೇಕು. ಅದೇ ರೀತಿ, ತತ್ವವಾದರೂ ಅದು ಕೂಡಾ ಈ ಸ್ವಭಾವಗಳನ್ನು ಹುಟ್ಟಿಸುವಲ್ಲಿ ಪ್ರೇರಕ ಚೈತನ್ಯದಂತೆ ವರ್ತಿಸಬೇಕಾಗುವುದು. ಈ ಹಿನ್ನೆಲೆಯಲ್ಲಿ ನಮಗೆ “ದೇವರು” ಎಂಬ ಶಬ್ಧ ಅಥವಾ ಸಂಕಲ್ಪಕ್ಕೆ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೇ ನಿಜವಾದ ಸಾರ್ವತ್ರಿಕ ನಿರ್ವಚನೆಯಾಗುವುದು ಎನ್ನಬಹುದು. ಸಾಮಾನ್ಯವಾಗಿ, ಜನರಿಗೆ, ಅವರ ದೇವರು ಮಾತ್ರ ನಿಜವಾದ ದೇವರು ಮತ್ತು ಇತರ ಧರ್ಮದ ದೇವರುಗಳು ಸೈತಾನ ಆಗುವವು, ಈ ರೀತಿಯ ಭಾವನೆಯು ಕೋಟಿಗಟ್ಟಲೆ ಮಾನವರನ್ನು ಇದುವರೆಗೂ ಬಲಿತೆಗೆದುಕೊಂಡಿದೆ ಎಂಬುವುದನ್ನು ನಾವು ಮರೆಯಬಾರದು. ಆದುದರಿಂದ ಇನ್ನಾದರೂ ಆ ಪ್ರಾಚೀನ ವಾಮಾಚಾರದ ಆ ದೇವರ ಹೆಸರಲ್ಲಿ ಮಾನವನನ್ನು ವಿಭಜಿಸುವ ಆ ಮೋಸವನ್ನು, ಸರ್ವ ಧರ್ಮಗಳಿಗೂ ಅನ್ವಯವಾಗುವ, ಈ ಸಾರ್ವತ್ರಿಕ ದೇವಸಂಕಲ್ಪದ ಮೂಲಕ ನಮಗೆ ಇಲ್ಲವಾಗಿಸಲು ಪ್ರಯತ್ನಿಸೋಣ. ದೇವರ ಹೆಸರು ಏನೇ ಇರಲಿ, ಮತ್ತು ಆಚಾರವು ಏನೇ ಇರಲಿ, ಆದರೆ ದೇವಶಕ್ತಿಯು ಅದು ಎಂದಿಗೂ ಅಸುರಶಕ್ತಿಯಾಗಲಾರದೆಂಬಲ್ಲಿನ ನಿಲುವು ಇದಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||