ಧರ್ಮದ ವಿವರಣೆ

ಧರ್ಮದಲ್ಲಿ ಮುಖ್ಯವಾಗಿ ಎರಡು ಭಾಗವಿದೆ. ಅದರಲ್ಲಿ ಒಂದು ಮಾನವನು ಉತ್ತಮ ಜೀವನವನ್ನು ಪಡೆಯುವ ಭಾಗ ಮತ್ತು ಇನ್ನೊಂದು ಆಧ್ಯಾತ್ಮಿಕ ಸ್ವರ್ಗ ಅಥವಾ ಮೋಕ್ಷವನ್ನು ಪಡೆಯುವ ಭಾಗವಾಗಿದೆ. ದೇವರಿಲ್ಲದ ಧರ್ಮಗಳೂ ಇರುವ ಕಾರಣ ದೇವರು ಧರ್ಮಕ್ಕೆ ಒಂದು ಅನಿವಾರ್ಯ ಘಟಕವಲ್ಲ ಎಂದು ಅದರಿಂದಲೇ ತಿಳಿದುಕೊಳ್ಳಬಹುದು. ಇನ್ನು, ಮರಣಾನಂತರ ಮೋಕ್ಷವನ್ನು ಪಡೆವ ಭಾಗದಲ್ಲಿಯೂ ಹೇಳಿರುವುದು “ಪಾಪಿಗಳಿಗೆ ಮೋಕ್ಷ ಸಾಧ್ಯವಿಲ್ಲ” ಎಂದಾಗಿದೆ. ಅಂದರೆ, ಅಲ್ಲಿಯೂ ಉತ್ತಮ ಸ್ವಭಾವವಿಲ್ಲದೆ ಯಾರಿಗೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ ಎಂದಾಯಿತು. ಹಾಗಾದರೆ, ಧರ್ಮದ ಮೂಲ ಎಲ್ಲಿದೆ ಎಂದು ನಮಗೆ ಸ್ಪಷ್ಟವಾಯಿತು. ಆದುದರಿಂದ ಆಚಾರಗಳಲ್ಲ, ಬದಲು, ಸ್ವಭಾವ ಶುದ್ಧೀಕರಣವೇ ಧರ್ಮದ ಪಾಲನೆ ಎಂದಾಯಿತು. ಇನ್ನು, ನಾವು ಮೊದಲೇ ತಿಳಿದಂತೆ, ಸ್ವಭಾವ ಶುದ್ಧೀಕರಣವು ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯ ಹಿನ್ನೆಲೆಯಲ್ಲಿ ಮಾತ್ರ ದೊರಕುವುದು ಮತ್ತು ಬೇರೆ ಯಾವುದರಿಂದಲೂ ಅದು ಸಾಧ್ಯವೂ ಆಗುವುದಿಲ್ಲ! ಈ ಹಿನ್ನೆಲೆಯಲ್ಲಿ ಧರ್ಮ ಎಂದರೆ ಅದು ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯೇ ಆಗುವುದು ಎಂದು ಹೇಳಬಹುದು. ಅದೇ ರೀತಿ, ಧಾರ್ಮಿಕ ಜೀವನವನ್ನು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಹಿನ್ನೆಲೆಯ ಜೀವನ ಎಂದೂ ಹೇಳಬಹುದಾಗಿದೆ.

ಈ ರೀತಿಯ ಧರ್ಮದ ಸರಳ ಜೀವನವನ್ನು ಸತ್ಯದ ಸಾರದ ಜೀವನ ಅಥವಾ ‘ಸತ್ಯಜೀವನ’ ಎನ್ನಬಹುದು. ಈ ಜಗತ್ತಿನ ಸರ್ವ ಧರ್ಮ, ಪಂಥಗಳನ್ನು ಶುದ್ಧೀಕರಿಸುವ ವಿಧಾನಶಾಸ್ತ್ರವಾಗಿಯೂ ಅಥವಾ ಒಂದು ಯಂತ್ರದಂತೆಯೂ ಇದು ವರ್ತಿಸಬಲ್ಲುದು ಎಂಬುವುದರಲ್ಲಿ ಸಂಶಯವಿಲ್ಲ. ಅದೇ ರೀತಿ, ಧರ್ಮಗಳೊಳಗಿನ ಆ ಆಚಾರಗಳನ್ನೆಲ್ಲಾ ಮೀರಿನಿಂತು, ಜಾಗತಿಕವಾದ ಒಗ್ಗಟ್ಟನ್ನು ಮತ್ತು ಶಾಂತಿಯನ್ನು ತರಲು ಈ ಯಂತ್ರ ಅಥವಾ ವಿಧಾನಶಾಸ್ತ್ರವು ಸಮರ್ಥವಾಗುವುದು!

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||