ಪ್ರಶ್ನೋತ್ತರಗಳು

Table of Contents

ದೇವರು, ಧರ್ಮ, ನಂಬಿಕೆ, ಆಚಾರ, ಮತ್ತು ಆಧ್ಯಾತ್ಮ ಇವುಗಳ ಹಿನ್ನೆಲೆಯಲ್ಲಿ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬಹುದೇ?

ನಾನು ಆಚಾರ, ನಂಬಿಕೆಗಳು ಯಾರಿಗೂ ಬೇಡ ಎಂದೆಲ್ಲಾ ಹೇಳುವುದಿಲ್ಲ. ಯಾವೆಲ್ಲಾ ಆಚಾರ ನಂಬಿಕೆಗಳು ಮಾನವರನ್ನು ತಮ್ಮೊಳಗೆ ಬೇರ್ಪಡಿಸುವವೋ, ಮತ್ತು ಮಾನವೀಯತೆಯೇ ಇಲ್ಲದವುಗಳಾಗಿರುವವೋ, ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಹೇಳುವೆನು ಅಷ್ಟೆ. ಅನ್ಯಗ್ರಹಜೀವಿಗಳ ಶಿಲಾಯುಗದಿಂದಲೇ ಇರುವ ಈ ಪ್ರಾಚೀನ ರಹಸ್ಯ ವಾಮಾಚಾರವು ಮಾನವರನ್ನು ಬೇರ್ಪಡಿಸುವ ಸಲುವಾಗಿ, ತಮ್ಮೊಳಗೆ ದ್ವೇಷಿಸಲು, ಹಿಂಸಿಸಲು, ರಕ್ತಪಾತ ಮಾಡುವಂತೆ ಮಾಡಲು, ಈ ಎಲ್ಲಾ ಕಾರ್ಯಗಳಿಗೆ, ಧರ್ಮ, ಪಂಥಗಳ, ಇದೇ ಆಚಾರ, ನಂಬಿಕೆಗಳ ಭಾಗಗಳನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುತ್ತವೆ. ಮಾತ್ರವಲ್ಲ, ದ್ವೇಷ, ಹಿಂಸೆ, ರಕ್ತಪಾತಕ್ಕೆ, ಧರ್ಮ, ಪಂಥಗಳ ಆ ಪ್ರತ್ಯೇಕತೆಯ ‘ನಮ್ಮ ಧರ್ಮ’, ‘ನಮ್ಮ ಪಂಥ’, ‘ನಮ್ಮ ಜಾತಿ’ ಎಂಬಿತ್ಯಾದಿ ಬೇಲಿ ಭಾವನೆಗಳ ಭಾಗಗಳನ್ನು ಕೂಡಾ ಮುಖ್ಯ ಕಾರಣಗಳಾಗಿ ಪ್ರಾಚೀನ ಕಾಲದಿಂದಲೂ ಉಪಯೋಗಿಸುತ್ತಾ ಬರುತ್ತಿವೆ ಎಂಬ ರಹಸ್ಯಸತ್ಯವನ್ನು ನಾನು ಸ್ಪಷ್ಟವಾಗಿ ನನ್ನ 15 ವರುಷಗಳ ಆ ನನ್ನ ನಿರಂತರ ಸೂಕ್ಷ್ಮದ ರಹಸ್ಯಾನ್ವೇಷಣೆಯಿಂದ ಪತ್ತೆಹಚ್ಚಿ ತಿಳಿದುಕೊಂಡಿದ್ದೇನೆ. ಅಷ್ಟು ಮಾತ್ರವಲ್ಲ, ಸೂಕ್ಷ್ಮಲೋಕದ ಮತ್ತೂ ಒಳಗಿನ ಆ ಅತಿಸೂಕ್ಷ್ಮಲೋಕ ವಲಯಗಳಿಂದ, ಅನ್ಯಗ್ರಹಜೀವಿಗಳಿಂದ ತಯಾರಿಸಲ್ಪಟ್ಟ ಈ ವಾಮಾಚಾರ ವ್ಯವಸ್ಥೆಯು, ಸೂಕ್ಷ್ಮಲೋಕ, ಅವುಗಳಲ್ಲಿರುವ ಎಲ್ಲಾ ಸೂಕ್ಷ್ಮಶಕ್ತಿಗಳು ಹಾಗೂ ಭೂಮಿಯ ಎಲ್ಲಾ ಮಾನವರನ್ನು ಸೇರಿ, ಒಟ್ಟಾಗಿ ನಿಯಂತ್ರಿಸುವವು ಎಂಬುವುದನ್ನು ಕೂಡಾ ಸ್ಪಷ್ಟವಾಗಿ ತಿಳಿದಿರುವೆನು! ಈ ಎಲ್ಲಾ ಸೂಕ್ಷ್ಮದ ರಹಸ್ಯ ಸತ್ಯಗಳನ್ನು, ನನ್ನ 15 ವರುಷಗಳ ಸೂಕ್ಷ್ಮವಲಯ ಬೇಹುಗಾರಿಕೆಯ ಸಹಾಯದಿಂದ ಸ್ಪಷ್ಟವಾಗಿ ಕಂಡಿರುವೆನು ಎಂದು ಇನ್ನೊಮ್ಮೆ ನೆನಪಿಸುವೆನು.

ಸೂಕ್ಷ್ಮದ ಬೇಹುಗಾರಿಕೆ ಎಂಬುವುದು ಇದುವರೆಗೂ ಧರ್ಮ, ಪಂಥಗಳಿಗೆ ಧ್ಯಾನದಲ್ಲಿ ತಾನಾಗಿ ಬಂದಿರುವ ಆ ತಮ್ಮೊಳಗೆ ವಿರುದ್ಧವಾಗಿರುವ ಆಧ್ಯಾತ್ಮಿಕ ಅನುಭವಗಳು ಅಲ್ಲ ಎಂದು ತಿಳಿಯಬೇಕು. ಈ ತಾನಾಗಿ ಬರುವ ಆಧ್ಯಾತ್ಮಿಕ ಅನುಭವಗಳು, ಸೂಕ್ಷ್ಮದ ಬೇಹುಗಾರಿಕೆಯಲ್ಲಿ ದೊರಕುವ ಸತ್ಯಾಂಶಗಳು ಅಲ್ಲ ಎಂಬುವುದನ್ನು ಪ್ರತ್ಯೇಕವಾಗಿ ತಿಳಿಯಬೇಕು ಎಂದು ಅರ್ಥ. ಈ ಆಧ್ಯಾತ್ಮಿಕ ಅನುಭವಗಳು ಬರೇ ಧ್ಯಾನದಲ್ಲಿ ತಾನಾಗಿ ಬಂದಿರುವ ಅನುಭವಗಳನ್ನು ಹೇಳುವವು ಅಷ್ಟೆ. ಆ ತಾನಾಗಿ ಬಂದಿರುವ ಆ ಬೇರೆ ಬೇರೆ ಆಧ್ಯಾತ್ಮಿಕ ಅನುಭವಗಳೇ, ಒಂದಕ್ಕೊಂದು ವಿರುದ್ಧವಾಗಿರುವ ಆ ಸಾವಿರಾರು ಧರ್ಮ, ಪಂಥಗಳಾಗಿ ನಮ್ಮ ಮುಂದೆ ಇಂದು ಇರುವುದು. ಆದುದರಿಂದ, ಈ ರೀತಿ, ಬೇಹುಗಾರಿಕೆ ಮಾಡಿ ಸ್ಪಷ್ಟವಾಗಿ ಕಂಡ ಕಾರಣವೇ, ನಾನು ಆ ಬೇಹುಗಾರಿಕೆಯಲ್ಲಿ ತಿಳಿದಿರುವ, ಮತ್ತು ಮಾನವ ಕುಲಕ್ಕೆ ಭಯಾನಕ ಆಪತ್ತುಗಳನ್ನು ಸೃಷ್ಟಿಸುವ, ಆ ರಹಸ್ಯ ಸತ್ಯಗಳನ್ನು ಜಗತ್ತಿಗೆ ತಿಳಿಸುವ ಪ್ರಯತ್ನವನ್ನು ಮಾಡಿರುವುದು. ಇಷ್ಟು ಸಾವಿರ ವರುಷಗಳು ಪತ್ತೆಯಾಗದೆ ರಹಸ್ಯವಾಗಿಯೇ ಇರುವುದನ್ನು ನಾನು ತಿಳಿದೂ ಇಂದು ಹೇಳಿಲ್ಲವಾದರೆ, ಮುಂದೆ ಅದನ್ನು ಯಾರಾದರೂ ಈ ಜಗತ್ತಿಗೆ ಬೇಹುಗಾರಿಕೆ ಮಾಡಿ ತಿಳಿಸಬಹುದೆಂಬ ಭರವಸೆ ನನಗೆ ಇಲ್ಲವಾದ ಕಾರಣವೂ, ನಾನು ಇವನ್ನು ನೇರವಾಗಿ ತಿಳಿಸಲು ದೃಢನಿಶ್ಚಯ ಮಾಡಿರುವುದು ಎಂದು ತಿಳಿಯಬೇಕು. ನನಗೆ ಸೂಕ್ಷ್ಮಲೋಕ ಮತ್ತು ಸೂಕ್ಷ್ಮಶಕ್ತಿಗಳ ಬಗ್ಗೆ ಅಂದು ಆ ಹಂತದಲ್ಲಿ ಸಂಶಯ ಹುಟ್ಟಲಿಲ್ಲವಾಗಿರುತ್ತಿದ್ದರೆ, ನಾನು, ನನ್ನ ಮೌನವ್ರತದೊಂದಿಗೆ,  ನನ್ನಷ್ಟಕ್ಕೆ, ಆ ಹಿಂದಿನ ರೀತಿಯ ಆಧ್ಯಾತ್ಮಿಕ ಮೋಕ್ಷ ಸಾಧನೆಗಳಲ್ಲಿ ನಿರಂತರ ನಿರತನಾಗಿರುತ್ತಿದ್ದೆನು ಎಂಬ ಸತ್ಯವನ್ನು ಕೂಡಾ ಇಲ್ಲಿ ತಿಳಿಸುವುದು ಉತ್ತಮ ಎಂದು ನನಗನಿಸುತ್ತದೆ. ಅವುಗಳ ಆ ಭಯಾನಕ ರಹಸ್ಯ ಕೈವಾಡಗಳಿಂದ ಮುಂದೆ ಮಾನವರಿಗೆ ಆಗಬಹುದಾದ ಆಪತ್ತನ್ನು ನೆನೆದು ಮಾತ್ರ, ‘ಜಗತ್ತಿನ ಎಲ್ಲಾ ಧರ್ಮ, ಪಂಥಗಳ ಜನರಿಗೆ, ಶಾಂತಿ, ನೆಮ್ಮದಿ ಬೇಕಿದ್ದಲ್ಲಿ, ಜಗತ್ತಿನ ಎಲ್ಲಾ ಧರ್ಮ, ಪಂಥಗಳು ಸ್ವತಃ ಶಾಂತಿಯ ಧಾಮಗಳಾಗಲು ಪ್ರಯತ್ನಿಸಲೇಬೇಕಾಗುವುದು ಅದಲ್ಲದೆ ಬೇರೆ ದಾರಿ ಇಲ್ಲ’ ಎಂಬ ಆ ಸತ್ಯವನ್ನು ಜಗತ್ತಿಗೆ ಸಾರಿ ಹೇಳುತ್ತಿರುವುದು ಎಂದು ತಿಳಿಯಬೇಕು.

ಈ ಕಾರಣದಿಂದಾಗಿ, ಧರ್ಮ, ಪಂಥಗಳು, ಇತರ ಧರ್ಮ, ಪಂಥಗಳ ಮೇಲೆ ಮಾಡುತ್ತಿರುವಂತೆ, ಪರಧರ್ಮ, ನಿಂದನೆ, ಪರಪಂಥ ನಿಂದನೆ, ಮತಾಂತರ, ದ್ವೇಷ, ಹಿಂಸೆ, ರಕ್ತಪಾತ ಇತ್ಯಾದಿ ಕೆಲಸಗಳು ನನಗೆ ಪೂರ್ತಿಯಾಗಿಯೂ ಇಲ್ಲವಾಗಿರುವುದು. ಮಾತ್ರವಲ್ಲ, ಆ ಪೈಶಾಚಿಕವಾದವುಗಳನ್ನು ನನ್ನ ಮನದಲ್ಲಿ ಕಲ್ಪಿಸುವ ಅಗತ್ಯವೂ ನನಗೆ ಬರುವುದಿಲ್ಲ ಎಂದೂ ತಿಳಿಯಬೇಕು.  

ಜಗತ್ತಿನ ಪ್ರತಿ ಧರ್ಮ, ಪಂಥದ ಜನರು ಇತರ ಧರ್ಮ, ಪಂಥಗಳ, ದೇವರುಗಳು, ನಂಬಿಕೆಗಳು, ಆಚಾರಗಳು  ಇತ್ಯಾದಿಗಳನ್ನು ಒಪ್ಪುವುದೇ ಇಲ್ಲ! ಈ ಒಂದು ಸ್ಪಷ್ಟ ಸತ್ಯದ ಹಿನ್ನೆಲೆಯಲ್ಲಿ ಮಾತ್ರ, ಜಗತ್ತಿನ ಎಲ್ಲಾ ಧರ್ಮ, ಪಂಥಗಳ ನಿಲುವುಗಳನ್ನು ನಮಗೆ ಸ್ಪಷ್ಟವಾಗಿ ಕಾಣಲು ಸಾಧ್ಯವಾಗುವುದು! ಅಂದರೆ, ‘ಇತರ ಧರ್ಮ, ಪಂಥಗಳು ಸರಿ’ ಎಂದು ಅವುಗಳಿಗೆ ತೋರಿರುತ್ತಿದ್ದರೆ ಇತರ ಧರ್ಮ, ಪಂಥಗಳನ್ನು ಒಪ್ಪುತ್ತಿದ್ದವು. ನೋಡಿ, ಎಲ್ಲ ಧರ್ಮ, ಪಂಥಗಳು ಇತರ ಧರ್ಮ ಪಂಥಗಳು ಯಾವುದು ಸರಿ ಇಲ್ಲ ಎಂದು ಹೇಳುವಾಗ, ಧರ್ಮ, ಪಂಥಗಳು ಎಲ್ಲವೂ ಸರಿ ಇಲ್ಲ ಎಂದು ಈ ಧರ್ಮ, ಪಂಥಗಳೇ ನಿಗಮನಕ್ಕೆ ಬಂದಂತಾಯಿತು, ಅಲ್ಲವೇ? ಇನ್ನು, ನಿರೀಶ್ವರವಾದಿಗಳು ಈ ಆಸ್ತಿಕರೊಂದಿಗೆ ವಾದ ಮಾಡಲು ಬೇರೆ ಬರಬೇಕೇ? ನೋಡಿ, ಕನಿಷ್ಠ ಪಕ್ಷ, “ಸೃಷ್ಟಿಕರ್ತ ದೇವರ ಸಂಕಲ್ಪವು ಅದು ವಿಶ್ವಕ್ಕೆ ಒಬ್ಬನೇ ಎಂದು ಆಗಿರುವ ಕಾರಣ, ಎಲ್ಲಾ ಧರ್ಮಗಳು, ತಮ್ಮ ಪಾಡಿಗೆ ತಮ್ಮ ರೀತಿಗಳಲ್ಲಿ ಆ ಸೃಷ್ಟಿಕರ್ತನ ನಂಬಿಕೆ ಆಚಾರಗಳನ್ನು ಮಾಡಿಕೊಳ್ಳಲಿ” ಎಂಬ ಆ ದೊಡ್ಡ ಮನಸ್ಸನ್ನು ಅಥವಾ ಆ ಸಾತ್ವಿಕ ಮನಸ್ಸನ್ನಾದರೂ ಹೊಂದಿರಲೇಬೇಕಾಗಿತ್ತು. ಆದರೆ ಅದು ಕೂಡಾ ಕಾಣಿಸುವುದೇ? ಅದೂ ಇಲ್ಲ, ಏನು ವಿಚಿತ್ರ  ಇದು!! ಅದರ ಬದಲು, ಧರ್ಮ, ಪಂಥಗಳು, ಇತರ ಧರ್ಮ, ಪಂಥಗಳನ್ನು ವಾದಮಾಡಿ ಸೋಲಿಸುವ, ಬರೇ ಸಿದ್ಧಾಂತಗಳಿಗಾಗಿ ದಿಗ್ವಿಜಯ ಮಾಡುವ, ತಾವೇ ಶ್ರೇಷ್ಠ ಎಂಬಲ್ಲಿ ಮತಾಂತರ ಮಾಡುವ, ಮತ್ತು ಲೋಕವನ್ನೇ ಜಯಿಸಲು ಧರ್ಮಯುದ್ಧದ ಹೆಸರಿನ ಹೋರಾಟ ಮಾಡುವ, ಇತ್ಯಾದಿ ಆ ದ್ವೇಷ, ಹಿಂಸೆ, ರಕ್ತಪಾತಗಳ ಆಟಗಳಲ್ಲಿ ನಿರತರಾಗಿರುವುದನ್ನು ನಾವು ಕಾಣುವೆವು! ಏನಿದು? ‘ನಮ್ಮ ಧರ್ಮವು ಶಾಂತಿಗಾಗಿ’ ಎಂದು ಗಟ್ಟಿಯಾಗಿ ಹೇಳುತ್ತಾ ಇದುವರೆಗೂ ಮಾಡಿರುವುದು ಮಾತ್ರ ಅದರ ಪೂರ್ತಿ ವಿರುದ್ಧ ದಿಶೆಯಲ್ಲಿ ಎಂದರೆ ಏನು ಅಚ್ಚರಿ!! ದೇವರ ವಿರುದ್ಧ ದಿಶೆಯು ಅಸುರ ಅಥವಾ ಸೈತಾನನ ದಿಶೆ, ಮತ್ತು ಧರ್ಮದ ವಿರುದ್ಧ ದಿಶೆಯು ಅಧರ್ಮದ ದಿಶೆ ಎಂದು ತಿಳಿಯುವುದಿಲ್ಲವೇ? ಆದರೆ, ಇತ್ತ, ನನ್ನ ನಿಲುವಿನ ಹಿನ್ನೆಲೆಯಲ್ಲಿ ಹೇಳುವುದಾದರೆ, ಎಲ್ಲಾ ಧರ್ಮಗಳನ್ನು ಮತ್ತು ದೇವರುಗಳನ್ನು ನಾನು ಒಪ್ಪುತ್ತೇನೆ ಎಂಬುವುದನ್ನು ಪ್ರತ್ಯೇಕವಾಗಿ ಹೇಳುವೆನು. ಆದರೆ, ಅವುಗಳ ಪುರಾಣ ಕಥೆ, ನಂಬಿಕೆ, ಆಚಾರಗಳ ಹಿನ್ನೆಯಲ್ಲಿ ಖಂಡಿತ ಒಪ್ಪುವುದಲ್ಲ, ಬದಲು ಸತ್ಯ, ಪ್ರೀತಿ, ನೀತಿಯ ಸ್ವಭಾವ-ದೇವರುಗಳನ್ನು ಮತ್ತು ಸತ್ಯ, ಪ್ರೀತಿ, ನೀತಿಯ ಸ್ವಭಾವ-ಧರ್ಮಗಳನ್ನು ಮಾತ್ರ ನಾನು ಒಪ್ಪುವುದು ಎಂದೂ ತಿಳಿಯಬೇಕು. ನಾನು, ಸತ್ಯಸಂಧವಾಗಿ, ‘ಸತ್ಯ, ಪ್ರೀತಿ, ನೀತಿಯೇ ದೇವರು ಮತ್ತು ಸತ್ಯ, ಪ್ರೀತಿ, ನೀತಿಯೇ ಧರ್ಮ, ಯಾಕೆಂದರೆ ಇವು ಮೂರು ಇಲ್ಲದಿದ್ದಲ್ಲಿ ಯಾವ ದೇವರು ಮತ್ತು ಧರ್ಮ ಸಾಧ್ಯವೇ ಇಲ್ಲ’ ಎಂಬ ಆ ಸತ್ಯದ ಹಿನ್ನೆಲೆಯಲ್ಲಿ, ಎಲ್ಲಾ ದೇವರುಗಳು ಮತ್ತು ಧರ್ಮಗಳನ್ನು ಒಪ್ಪುವ ಒಬ್ಬ ಮನುಷ್ಯನಾಗಿರುವೆನು ಎಂದು ಇನ್ನೊಮ್ಮೆ ಸ್ಪಷ್ಟವಾಗಿ ಹೇಳುವೆನು. ನೋಡಿ, ಹೀಗೆ, ಇತ್ತ ನಾನು ಈ ರೀತಿಯಲ್ಲಿ ಸರ್ವ ಧರ್ಮ, ಪಂಥಗಳನ್ನು ಒಪ್ಪುವಾಗ, ಅತ್ತ, ಇತರ ಎಲ್ಲಾ ಕಡೆಯೂ, ತಮ್ಮದಲ್ಲದ ಇತರ ಯಾವ ದೇವರು ಮತ್ತು ಧರ್ಮವನ್ನು ಒಪ್ಪುವುದಿಲ್ಲ ಎಂಬ ರೀತಿಯು, ದೇವರು, ಧರ್ಮಗಳ ಅರ್ಥವನ್ನೇ ಗಮನಿಸದ ಆ ಅಪಾಯಕಾರಿ ಕುರುಡು ನಂಬಿಕೆಯ ರೀತಿ ಮಾತ್ರವಾಗಿ ಕಾಣಿಸುವುದು! ಎಲ್ಲಾ ಧರ್ಮ, ಪಂಥಗಳ ಹೆಚ್ಚಿನ ಧರ್ಮಪಂಡಿತರುಗಳು, ದೇವರು ಮತ್ತು ಧರ್ಮ ಎಂದರೆ ಏನು ಎಂಬ ರೀತಿಯಲ್ಲಿ ಅವುಗಳ ಅರ್ಥವನ್ನು ವಿವರಿಸುವ ಬದಲು,  “ನಮ್ಮ ದೇವರು” ಮತ್ತು “ನಮ್ಮ ಧರ್ಮ” ಎಂದು ಆ ದೇವರು ಮತ್ತು ಧರ್ಮವನ್ನು ಹೇಳುತ್ತಾ, ಮತ್ತು ಆ ಹಿನ್ನೆಲೆಯಲ್ಲಿ ವಿವರಿಸುತ್ತಾ, ದೇವರು, ಧರ್ಮಗಳನ್ನು ‘ನಮ್ಮ’ ಅಥವಾ ‘ನಮ್ಮದು’ ಭಾವನೆಗಳ ಮೂಲಕ ಬೆಳೆಸಿತರುವರು. ‘ನಮ್ಮದು’ ಎಂಬ ಆ ರೀತಿಯಲ್ಲಿ ಧರ್ಮವನ್ನು ಮತ್ತು ಸೃಷ್ಟಿಕರ್ತ ದೇವರ ಭಾವನೆಗಳನ್ನು ಬೆಳೆಸುವಿಕೆಯು ಈ ಪ್ರಪಂಚದಲ್ಲೇ ಸಾಧ್ಯವಿಲ್ಲ ಎಂಬುವುದನ್ನು ನಾವು ಮರೆಯಬಾರದು. ಇದು ಯಾಕೆಂದರೆ, ದೇವರು ಮತ್ತು ಧರ್ಮವು ನಮ್ಮ ಸ್ವಂತ ಮನೆ ಅಥವಾ ನಮ್ಮ ಸ್ವಂತ ಹಿತ್ತಲಂತೆ ಇರುವ ವಸ್ತುಗಳು ಅಥವಾ ಆಸ್ತಿಗಳಲ್ಲ. ಇದು, ಸೂರ್ಯನನ್ನು ‘ನಮ್ಮದು’ ಎಂದು ಭಾವನಾತ್ಮಕವಾಗಿ ಜನರಲ್ಲಿ ಬೆಳೆಸಿ ತರುವಷ್ಟು ಮೂರ್ಖತನವಾಗುವುದು. ಹೀಗೆ, “ನಮ್ಮದು” ಮಾಡಿದುದರ ಫಲವೇ, ಧರ್ಮಗಳು ಶಾಂತಿಯನ್ನು ಕೊಡುವ ಬದಲು ಧರ್ಮಾಂಧತೆಯ ಬೆಂಕಿಯನ್ನು ಕೊಟ್ಟು ಮಾನವರನ್ನು ಮತ್ತು ಮಾನವೀಯತೆಯನ್ನು ಸುಟ್ಟು ಹಾಕಿರುವುದು!! ಇಷ್ಟೆಲ್ಲಾ ಮಾಡಿಯೂ, ಇನ್ನೂ, ಧರ್ಮ, ಪಂಥಗಳ ಜನರು “ನಮ್ಮ ಧರ್ಮವು ಶಾಂತಿಗಾಗಿ” ಎಂದು ಹೇಳುತ್ತಿರುವುದು ಎಷ್ಟು ಹಾಸ್ಯಾಸ್ಪದ? ‘ನಮ್ಮ ಧರ್ಮ ಶಾಂತಿಗಾಗಿ’ ಎಂದು ಹೇಳದ ಧರ್ಮವಿಲ್ಲ! ನೋಡಿ, ಒಂದು ಅಂಗಡಿಯ ಒಳಗಿಂದ ಎಲ್ಲರೂ ಅಮಲಿನಿಂದ ತೂರಾಡುತ್ತಾ ನಿರಂತರ ಹೊರಬರುತ್ತಿರುವಾಗ, ಆ ಅಂಗಡಿಗೆ ‘ಹಾಲಿನ ಅಂಗಡಿ’ ಎಂದು ಬರೆದಿರುವ ನಾಮಫಲಕವನ್ನು ತೂಗು ಹಾಕಿದ್ದರೆ ಅದರಿಂದ ಏನು ಪ್ರಯೋಜನ? ಎಷ್ಟು ಕಾಲ ಆ ನಾಮಫಲಕದ ಸುಳ್ಳನ್ನು ಜನ ನಂಬಬಹುದು? ಹಿಂದೆ ನಡೆದಿರುವ ಮತ್ತು ಇಂದು ನಡೆಯುತ್ತಾ ಇರುವ ವಾಸ್ತವವನ್ನು ಹಿಂದೆ ನಡೆಯಲಿಲ್ಲ ಮತ್ತು ಇಂದು ನಡೆಯುತ್ತಾ ಇಲ್ಲ ಎಂದು ಯಾರಿಗೆ ಸಮರ್ಥಿಸಲು ಸಾಧ್ಯ?

ಇನ್ನು, ಎಲ್ಲ ಧರ್ಮ, ಪಂಥಗಳು ಹೇಳುವುದು ‘ನಮಗೆ ದೇವರು ಬೇಕು, ಮತ್ತು ನಮಗೆ ಅಸುರ ಅಥವಾ ಸೈತಾನ ಬೇಡ’ ಎಂದು ತಾನೇ? ಹೌದು, ನನಗೂ ದೇವರೇ ಬೇಕು ಮತ್ತು ಅಸುರ ಅಥವಾ ಸೈತಾನ ಎಂದೂ ಬೇಡ. ಆಗಲಿ, ಎಲ್ಲರಿಗೂ, ಆ ಸೃಷ್ಟಿಕರ್ತ ತಂದೆ ದೇವರೇ ಬೇಕಾದರೆ, ಬನ್ನಿ, ಎಲ್ಲಾ ಧರ್ಮ, ಪಂಥದವರು ಒಟ್ಟಿಗೆ ಕುಳಿತು ಆ ಏಕ ಸೃಷ್ಟಿಕರ್ತ ದೇವರನ್ನು ಪ್ರಾರ್ಥಿಸೋಣ, ಆಗಬಹುದೇ?  ಹೀಗೆ ಅವರಲ್ಲಿ ಕೇಳುವಾಗ ಮಾತ್ರ, ಅಲ್ಲಿ ಇದ್ದವರು ಯಾರೂ ಕಾಣಿಸುವುದಿಲ್ಲ, ಆಗಲೇ ಎಲ್ಲರೂ ಓಡಿಹೋಗಿ ಆಗಿರುವುದು! ಅಂದರೆ, ಆ ಎಲ್ಲರ ತಂದೆ ಸೃಷ್ಟಿಕರ್ತ ದೇವರು ಯಾರಿಗೂ ಬೇಡ, ಇದು ಏನು ಅಚ್ಚರಿ!? ಸ್ವಂತ ತಂದೆ ಸೃಷ್ಟಿಕರ್ತನ ಹೆಸರಲ್ಲಿ ಎಲ್ಲರೂ ಒಟ್ಟಿಗೆ ಕೂರದೆ ಬೇರೆ ಬೇರೆ ಕೂರುವುದಾದರೆ, ಈ ಎಲ್ಲಾ ಹಲವು ಧರ್ಮಗಳ ಸೃಷ್ಟಿಕರ್ತರು ಚಿಕ್ಕ ಚಿಕ್ಕ ದೇವತೆ ಸಂಕಲ್ಪಗಳು ಮಾತ್ರ ಎಂದಾಗುವುದು ಖಂಡಿತ, ಅದರಲ್ಲಿ ಸಂಶಯ ಇರುವುದಿಲ್ಲ. ನೋಡಿ, ಒಂದು ಪಕ್ಷದ ಮುಖ್ಯ ನಾಯಕನೊಂದಿಗೆ ಆ ಪಕ್ಷದ ಜನರು ಎಲ್ಲರೂ ಒಟ್ಟಾಗಿ ಕೂತು ನಾಳೆ ಚರ್ಚಿಸಬೇಕು ಎಂದು ಹೇಳುವಾಗ, ಆ ಪಕ್ಷದ ಒಳಗೆ ಇರುವ ಹಲವು ಗುಂಪುಗಳು, “ಬೇಡ ನಾವು ಬೇರೆ ಬೇರೆ ಕೂತು ಚರ್ಚೆ ಮಾಡಿಕೊಳ್ಳುತ್ತೇವೆ” ಎಂದರೆ, ಆ ಗುಂಪುಗಳಿಗೆ ಬೇರೆ ಬೇರೆ ನಾಯಕರು ಇರುವರು ಮತ್ತು ಆ ಬೇರೆ ಬೇರೆ ನಾಯಕರು ಆ ಪಕ್ಷದ ಮುಖ್ಯ ನಾಯಕ ಅಂತೂ ಖಂಡಿತವಾಗಿಯೂ ಅಲ್ಲ ಎಂಬುವುದನ್ನು ಯಾರಿಗೆ ತಾನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ? ಇದೇ ರೀತಿ ಅಲ್ಲವೇ, ಆ ಬೇರೆ ಬೇರೆ ಕೂತು ಪ್ರಾರ್ಥಿಸುವ ಧರ್ಮ, ಪಂಥಗಳ ಆ ಹಲವು ಗುಂಪು ನಾಯಕರ ರೀತಿಯ ಸೃಷ್ಟಿಕರ್ತರುಗಳು! ನಂಬಿಕೆಯ ಕಾರಣದಿಂದ ಯಾರೂ ಪ್ರಶ್ನೆ ಹಾಕದಿರುವಾಗ, ಅಲಂಕಾರದ ತತ್ವಶಾಸ್ತ್ರದ ಮರೆಯಲ್ಲಿ ಮಾತಿನ ಚಕಮಕಿಗಳ ಸಹಾಯದಿಂದ, ಸತ್ಯದ ಬದಲು ಬರೇ ಸ್ವಾರ್ಥವು ನಂಬಿಕೆಗಳ ರೂಪದಲ್ಲಿ ದೈವೀಕರಿಸಲ್ಪಟ್ಟವು ಅಷ್ಟೆ!  ಅದು ಹಾಗಾದರೆ, ಇತ್ತ, ಅತ್ಯಂತ ಮೇಲಿನ ದೇವರು, ಧರ್ಮಗಳ ಆಚಾರಗಳಿಂದ ಹಿಡಿದು, ಕೊನೆಯಲ್ಲಿ ಸಿಗುವ ಕುಲಾಚಾರ, ಜಾತಿ, ಉಪಜಾತಿಗಳ ಆಚಾರಗಳು ಇತ್ಯಾದಿಗಳ ತನಕ, ಈ ಜಗತ್ತಲ್ಲಿ, ನಂಬಿಕೆ, ಆಚಾರಗಳು ಇದುವರೆಗೂ ಮಾಡಿರುವುದಾದರೂ ಏನು? ಈ ಪ್ರಶ್ನೆಗೆ ಉತ್ತರ, ‘ಲೋಕದ ಜನರನ್ನು ಬೇರ್ಪಡಿಸುವಿಕೆ ಎಂದಾಗುವುದು, ಹಾಗೂ ಆ ಮೂಲಕ, ದ್ವೇಷ, ಹಿಂಸೆ, ರಕ್ತಪಾತಗಳನ್ನು ಸೃಷ್ಟಿಸುವುದು’ ಎಂದಾಗುವುದು.  ಅದನ್ನು ಬಿಟ್ಟು, ಅವು ಜಗತ್ತಲ್ಲಿ ನಿಜವಾದ ಧರ್ಮ ಮಾಡಬೇಕಾದ ಸತ್ಯ, ಪ್ರೀತಿ, ನೀತಿಯ ಹೆಚ್ಚಳ ಮತ್ತು ಇಡೀ ಮಾನವ ಕುಲದ ಸಾಹೋದರ್ಯದ ಹೆಚ್ಚಳವನ್ನು ಮಾಡಿದೆಯೇ? ನನ್ನ ಸಹೋದರ ಸಹೋದರಿಯರೇ, ಸತ್ಯಸಂಧವಾಗಿ ಹೇಳಿ, ನಿಮ್ಮ ಮನದಲ್ಲಿ ಈಗಲೇ ಅದನ್ನು ಹೇಳಿ. ‘ಇಲ್ಲ’ ಎಂಬುವುದೇ ಆ ಸತ್ಯಸಂಧವಾದ ಉತ್ತರ. ಆದುದರಿಂದಲೇ, ಈ  ಹಲವು ಧರ್ಮ, ಪಂಥಗಳ ಆ ಪರಸ್ಪರ ವಿರುದ್ಧ ಆಚಾರ, ನಂಬಿಕೆಗಳು ಆ ನಿಜವಾದ ಧರ್ಮದ ಸಾರ ಅಥವಾ ನಿಜಧರ್ಮ ಅಲ್ಲ ಎಂದು ಹೇಳುವುದು.      

ಆ ಅನ್ಯಗ್ರಹಜೀವಿಗಳ ರಹಸ್ಯ ಪ್ರಾಚೀನ ವಾಮಾಚಾರದ ಕುತಂತ್ರವು ಮಾನವರಿಗೆ ಇದುವರೆಗೂ ಅರಿಯದೆ ಇರುವ ಕಾರಣ, ಅವು ಈ ರೀತಿಯಲ್ಲಿ, ನಂಬಿಕೆ ಎಂಬ ಆಯುಧವನ್ನು ಉಪಯೋಗಿಸಿ, ಮಾನವರ ತರ್ಕವನ್ನು ಹಾಗೂ ಸಾಮಾನ್ಯ ಬುದ್ಧಿಯನ್ನು ಕೊಂದುಹಾಕಿ, ಮಾನವರನ್ನು ಬೇರ್ಪಡಿಸುತ್ತಾ ಇದುವರೆಗೂ ಬಂದವು. ‘ಮಾನವರು ಬೇರ್ಪಟ್ಟಲ್ಲಿ ಅಥವಾ ವಿಭಜಿಸಲ್ಪಟ್ಟಯಲ್ಲಿ ಮಾತ್ರ ಶತ್ರುತ್ವ ಭಾವನೆಯನ್ನು ಬೆಳೆಸುವುದಕ್ಕೆ ಅಲ್ಲಿ ಅವಕಾಶ ಇರುವುದು’ ಎಂಬ ಆ ನಿಯಮವು ಅವುಗಳ ರೀತಿಗಳ ಆ ಮೂಲ ರಹಸ್ಯವಾಗಿದೆ. ನೋಡಿ, ‘ನಾವು ಎಲ್ಲರೂ ಒಂದು’ ಎಂಬ ಭಾವನೆ ಇರುವಲ್ಲಿ ಮಾನವರಲ್ಲಿ ಪರಸ್ಪರ ಶತ್ರುತ್ವಕ್ಕೆ ಅವಕಾಶವಿಲ್ಲ, ಮತ್ತು ಶಾಂತಿಗೆ ಹಾಗೂ ಪ್ರೀತಿಗೆ ಮಾತ್ರ ಅಲ್ಲಿ ಅವಕಾಶ ಇರುವುದು!! ಅಂದರೆ, ‘ನಾವು ಒಂದು’ ಎಂಬ ಭಾವನೆಯಲ್ಲಿ ಆ ಪ್ರಾಚೀನ ವಾಮಾಚಾರ ಶಕ್ತಿಗಳಿಗೆ ಏನು ಮಾಡಲೂ ಸಾಧ್ಯವಾಗದೆ ಅವು ಅಲ್ಲಿ ಸೋತು ಹೋಗುವವು ಎಂದು ಅರ್ಥ. ಈ ಕಾರಣದಿಂದಲೇ, ‘ಮಾನವರೆಲ್ಲರ ಒಂದಾಗುವಿಕೆ’ಯು, ಕೊನೆಗೂ, ಮಾನವರಿಗೆ, ಅವುಗಳ ವಿರುದ್ಧ ಜಯಗಳಿಸಲು ಇರುವ ಆ ಏಕೈಕ ಉಪಾಯ ಮತ್ತು ಪರಿಹಾರವೆಂದು ನಾನು ಕಂಡುಕೊಂಡಿರುವುದು. ಈ ಕಾರಣದಿಂದಲೇ, ‘ಈ ಜಗತ್ತಿನ ಮಾನವರೆಲ್ಲ ಒಂದಾಗಬೇಕು’ ಎಂದು ನಾನು ಸಾರಿ ಸಾರಿ ಹೇಳುವುದು ಎಂದು ತಿಳಿಯಬೇಕು. ಅಂದರೆ, ಬರೇ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಬರೇ ಮಾತಿಗಾಗಿ ಮಾತ್ರ ಹೇಳುವುದಲ್ಲ ಎಂದು ಅರ್ಥ. ಅನ್ಯಗ್ರಹಜೀವಿಗಳ ಸೂಕ್ಷ್ಮಲೋಕದ ಒಳಗಿಂದ ವರ್ತಿಸುವ ಆ ಅತಿ ರಹಸ್ಯ ವಾಮಾಚಾರ ವ್ಯವಸ್ಥೆಯ ಕುರಿತಾಗಿ ನಿಮಗೆ ಹೆಚ್ಚು ತಿಳಿಯಬೇಕಿದ್ದಲ್ಲಿ, ನನ್ನ 15 ವರುಷಗಳ ಸೂಕ್ಷ್ಮಲೋಕ ರಹಸ್ಯಾನ್ವೇಷಣೆಯ ಕುರಿತಾಗಿರುವ ಆ ಹಲವು ಹಿಂದಿನ ವೀಡಿಯೋಗಳಿಂದ ತಿಳಿದುಕೊಳ್ಳಬಹುದು. [ಆ ವೀಡಿಯೋಗಳಲ್ಲಿಟ್ಟು ಮುಖ್ಯವಾದ ವೀಡಿಯೋಗಳ ಲಿಂಕುಗಳನ್ನು ಡಿಸ್ಕೃಪ್ಶನ್ ಬಾಕ್ಸಲ್ಲಿ ಕೊಡಲಾಗಿದೆ.]   

ಈ ರೀತಿಯಲ್ಲಿ, ಈ ಭಯಾನಕ ಸೂಕ್ಷ್ಮಶಕ್ತಿಗಳ ಕಾರಣದಿಂದ ಬೇರ್ಪಟ್ಟು ಚಲ್ಲಾಪಿಲ್ಲಿಯಾಗಿರುವ, ಈ ಭೂಮಿಯ ಸಮಾಜಗಳನ್ನು ಒಂದುಗೂಡಿಸಲು ಸಾಧ್ಯವಾಗುವ ಆ ಸ್ಥಳವಾದರೂ ಯಾವುದು? ಇದಕ್ಕೆ ಪರಿಹಾರವನ್ನು ಕಾಣಲು ಎಲ್ಲರಿಗೂ ಸಾಮಾನ್ಯವಾಗಿರುವ ಆ ಒಂದು ಸ್ಥಳವನ್ನು ಹುಡುಕಲೇಬೇಕಾಗಿದೆ. ಹಾಗೆ ಹುಡುಕುವಾಗ, ನಮಗೆ ಸಿಗುವುದೇ, ಮಾನವೀಯತೆಯನ್ನು ಒಳಗೊಂಡಿರುವ ಎಲ್ಲ ಧರ್ಮ, ಪಂಥಗಳ ಆ “ಸಾರಭಾಗ” ಆಗುವುದು. ಧರ್ಮ, ಪಂಥಗಳ ಈ ಸಾರಭಾಗವು ಸತ್ಯ, ಪ್ರೀತಿ, ನೀತಿ ಆಗಿರುವುದರಿಂದ ಅಲ್ಲಿ ಜಗತ್ತಿನ ಸರ್ವರೂ  ಮಾನವೀಯತೆಯನ್ನು ಹೊಂದಿದವರಾಗಿ ಅಥವಾ ಧಾರ್ಮಿಕರಾಗಿ ಕಾಣಿಸುವರು. ಈ ರೀತಿಯಲ್ಲಿ, ಎಲ್ಲರೂ, ಅವರವರ ದೇವರು ಮತ್ತು ಧರ್ಮಗಳ ಆ “ಸಾರಭಾಗ” ವನ್ನು ಹೆಚ್ಚು ಒತ್ತುಕೊಟ್ಟು ಬೆಳೆಸಿದರೆ, ಆಗ ಎಲ್ಲರಿಗೂ  ಸಾಮಾನ್ಯವಾಗಿರುವ ಆ “ಸಾರಭಾಗ” ದಲ್ಲಿ ಧರ್ಮ, ಪಂಥ ಬೇಧವಿಲ್ಲದೆ ಈ ಭೂಮಿಯ ಸರ್ವರಿಗೂ ಒಂದಾಗಬಹುದಾಗಿದೆ! ಅಂದರೆ, ಮುಖ್ಯವಾದ ಭಾಗವಾದ ಈ ಧರ್ಮ, ಪಂಥಗಳ ಸಾರಭಾಗದಲ್ಲಿ ಎಲ್ಲರೂ ಒಂದಾದಲ್ಲಿ, ಧರ್ಮ, ಪಂಥಗಳ ಇನ್ನುಳಿದ ಆಚಾರ, ನಂಬಿಕೆ, ಆಧ್ಯಾತ್ಮಗಳನ್ನು ಬೇರೆ ಬೇರೆ ರೀತಿಗಳಲ್ಲೇ ಅಥವಾ ಅವರವರ  ರೀತಿಯಂತೆ ಬೇರೆ ಬೇರೆಯಾಗಿಯೇ ಅನುಷ್ಠಿಸಿಕೊಂಡರೂ ಆಗ ಅಲ್ಲಿ ಅವು ದ್ವೇಷ, ಹಿಂಸೆ, ರಕ್ತಪಾತಗಳಿಗೆ ಕಾರಣವಾಗಲಾರವು ಎಂದು ಅರ್ಥ. ಹೀಗಾದಲ್ಲಿ, ಧರ್ಮ, ಪಂಥಗಳ ಈಗಿರುವ ಸ್ಥಿತಿಯಲ್ಲೇ ನಮಗೆ ಸುಲಭದಲ್ಲಿ ಒಗ್ಗಟ್ಟಾಗಿ, ಆ ಮೂಲಕ, ಆ ಅತಿ ರಹಸ್ಯ ಪ್ರಾಚೀನ ವಾಮಾಚಾರದ ವಂಚನೆಯ ವಿರುದ್ಧ ಸರ್ವರೂ ಒಂದಾಗಿ, ಪರಿಹಾರವನ್ನು ಕಾಣಲು ಸಾಧ್ಯವಾಗುವುದು!! ಆಗ, ಅನ್ಯಗ್ರಹಜೀವಿಗಳು ನಿರ್ಮಿತ, ಆ ಭಯಾನಕ ಮನುಷ್ಯನಾಶದ ರಹಸ್ಯ ಪ್ರಾಚೀನ ವಾಮಾಚಾರವು ಸೋತುಹೋಗುವುದು, ಮತ್ತು ಮಾನವರು ಗಳಿಸುವ ಜಯದಿಂದ ಆ ಆನಂದದ ಸತ್ಯಯುಗವೇ ಈ ಧರೆಯಲ್ಲಿ ಸೃಷ್ಟಿಯಾಗುವುದು.

ಭೌತವಾದಿಗಳು ಕಣ್ಣಿಗೆ ಕಾಣಿಸುವುದು ಮಾತ್ರ ಸತ್ಯ ಎಂದು ಹೇಳುವರು, ಇದು ಅಚ್ಚರಿಯಾಗಿದೆ! ಆದರೆ ಕಣ್ಣಿಗೆ ಕಾಣದ ವಿಚಾರಗಳ ಬಗ್ಗೆ ಹೇಳುವ ಈ ಧರ್ಮ, ಪಂಥಗಳು, ಆ ಒಂದೇ ಸತ್ಯದ ಬಗ್ಗೆ ಸಾವಿರಗಟ್ಟಲೆ ಬಗೆಗಳಲ್ಲಿ ಹೇಳುವವು ಎಂಬುವುದು ಅದಕ್ಕಿಂತಲೂ ಅಚ್ಚರಿಯಾಗುವುದು!! ಒಟ್ಟಲ್ಲಿ, ವಿರುದ್ಧ ನಂಬಿಕೆಗಳು, ವಿರುದ್ಧ ಆಚಾರಗಳು, ವಿರುದ್ಧ ಸೃಷ್ಟಿಕರ್ತರುಗಳು, ಇವೆಲ್ಲವನ್ನು ನೋಡುವ ಹಾಗೂ ಅವುಗಳ ಬಗ್ಗೆ ಆಲೋಚಿಸುವ ಮಾನವರಿಗೆ, ಸರ್ವವೂ ಗೊಂದಲದ ಬೀಡಾಗಿ ತೋರುವುದು! ಗೊಂದಲ ಇಲ್ಲದೆ ಜನರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು ಎಂಬ ಈ  ಒಂದು ಉದ್ದೇಶ ಹೊರತು ನಾನು ಮಾಡುತ್ತಿರುವುದು ಯಾವುದಾದರೂ ಸರಿ, ಅದು ಒಂದು ಹೊಸ ಪಂಥ ಅಥವಾ ಹೊಸ ಪರಂಪರೆಯನ್ನು ಸೃಷ್ಟಿಸಲು ಇರುವ ಪ್ರಯತ್ನವಲ್ಲ ಎಂದು ಪ್ರತ್ಯೇಕವಾಗಿ ತಿಳಿಯಬೇಕು. ನಮಗೆ ಸತ್ಯ ಬೇಕು, ಆದರೆ ಅಸತ್ಯ ಎಂದಿಗೂ ಬೇಡ. ಸತ್ಯವನ್ನು [ವೈಜ್ಞಾನಿಕ ರೀತಿಯ] ತರ್ಕದ ಮೂಲಕ ಕಾಣಬಹುದು, ಆದರೆ ನಂಬಿಕೆಯ ಮೂಲಕ ಸತ್ಯವನ್ನು ಕಾಣಲು ಎಂದಿಗೂ ಸಾಧ್ಯವಿಲ್ಲ. ಯಾಕೆಂದರೆ, ಕಥೆಯಲ್ಲಿ “ಯಾಕೆ” ಎಂಬ ಪ್ರಶ್ನೆ ಸಾಧ್ಯವಿಲ್ಲ ಎಂಬಂತೆ, ನಂಬಿಕೆಗಳಲ್ಲಿ ತರ್ಕ ಮಾಡುವುದೇ ಸಾಧ್ಯವಿಲ್ಲ. ಅಂದರೆ, ಮುಕ್ತವಾದ ಮತ್ತು ಯಾವ ಬದಿಗೂ ವಾಲದ, ನ್ಯಾಯಾಧೀಶರು ಬಳಸುವ ರೀತಿಯ, ಆ ನಿಸ್ಪಕ್ಷತರ್ಕ ಒಂದು ಮಾತ್ರವೇ ಸತ್ಯವನ್ನು ಮಾನವನಿಗೆ ತಿಳಿಸಿಕೊಡಲು ಶಕ್ತವಾಗುವ ಆ ಏಕ ದಾರಿ ಆಗಿರುವುದು ಎಂದು ಅರ್ಥ.   

ನಾನು ಜನರಿಗೆ ಅನ್ಯಗ್ರಹಜೀವಿಗಳು ನಿರ್ಮಿತ ಆ ಅತಿ ರಹಸ್ಯ ಪ್ರಾಚೀನ ವಾಮಾಚಾರದ ಅಪಾಯಗಳನ್ನು ಮಾತ್ರ ಹೇಳಿರುವೆನು ಮತ್ತು ಹೇಳುವೆನು. ಹಾಗೆ ಹೇಳುವುದರಿಂದ ಯಾವುದೇ ಒಂದು ಧರ್ಮ, ಪಂಥ, ಪರಂಪರೆ, ಶಾಸ್ತ್ರವನ್ನು ನಾನು ಎತ್ತಿ ಹಿಡಿಯುವುದೂ ಇಲ್ಲ, ಅದೇ ರೀತಿಯಲ್ಲಿ, ಯಾವುದನ್ನು ನಿಂದಿಸುವುದೂ ಇಲ್ಲ.

ಇನ್ನು, ಒಂದು ಮುಖ್ಯವಾದ ವಿಷಯವೆಂದರೆ, ನನ್ನ ನಿಲುವು, ‘ಈ ಭೂಮಿಯ ಎಲ್ಲೆಡೆಯೂ ಸತ್ಯ ಮತ್ತು ಪ್ರೀತಿಯ ಸಾಗರವೇ ಹರಿದು ಜನರು ಎಲ್ಲರೂ ಸಂತಸದಿಂದ ಒಗ್ಗಟ್ಟಿನಿಂದ ಜೀವಿಸಬೇಕು’ ಎಂದು ಮಾತ್ರವಾಗಿದೆ. ಈ ಹಿನ್ನೆಲೆಯಲ್ಲಿ, ನಾನು ಹೇಳುತ್ತಿರುವ ಯಾವ ವಿಚಾರವನ್ನಾದರೂ, ಯಾವ ವ್ಯಕ್ತಿಯಾದರೂ ಸರಿ, ಜನರ ಮಧ್ಯೆ ವಿವರಿಸುವಾಗ, ಖಂಡಿತವಾಗಿಯೂ ಅದು ಧ್ವೇಷವನ್ನು ಬಿತ್ತುವ ರೀತಿಯಲ್ಲಿ ಅಥವಾ ಗಲಾಟೆ ಮಾಡುವ ರೀತಿಯಲ್ಲಿ ಇರಬಾರದು ಎಂದು ಎಲ್ಲರಲ್ಲೂ ಕೇಳಿಕೊಳ್ಳುವೆನು. ಹಾಗೆ ಮಾಡುವುದನ್ನು ಯಾವ ಕಾಲಕ್ಕೂ ನಾನು ಒಪ್ಪಲಾರೆ. ಹಾಗೆ ಮಾಡಿದಲ್ಲಿ, ಅದು ಯಾರೇ ಆಗಿರಲಿ, ಅದಕ್ಕೆ ಆ ವ್ಯಕ್ತಿಯೇ ಹೊಣೆಯಾಗುವನು ಹೊರತು ಆ ಮಾತುಗಳು ಮತ್ತು ಅದರ ತಪ್ಪಾದ ಅರ್ಥಗಳು ನನ್ನದು ಆಗಲಾರವು. ನನ್ನ ಹೃದಯವು ನನಗೆ ಹೀಗೆ ಉಪದೇಶಿಸುವುದು, “ನಿನಗೆ ಸಾಧ್ಯವಿದ್ದರೆ, ಸತ್ಯವನ್ನು ನೇರವಾಗಿ ಪ್ರೀತಿಯಿಂದಲೇ ಜನರ ಉಳಿವಿಗಾಗಿ ಮಾತ್ರ ವಿವರಿಸು, ಅದಕ್ಕಿಂತ ಮೇಲಿನ ಧಾರ್ಮಿಕ ರೀತಿ ಇನ್ನೊಂದಿಲ್ಲ. ಅಲ್ಲವಾದರೆ, ಕೂಡಲೆ ಎಲ್ಲವನ್ನು ಬಿಟ್ಟು ವಿರಮಿಸು, ಯಾಕೆಂದರೆ, ಈ ಭೂಮಿಯಲ್ಲಿ ಯಾರೊಬ್ಬರು ಕೂಡಾ ನಿನ್ನಿಂದಾಗಿ ಬೇಸರ, ತೊಂದರೆಗಳಿಗೆ ಒಳಗಾಗಬಾರದು.” ನನ್ನ ಸಹೋದರ ಸಹೋದರಿಯರೇ, ಒಟ್ಟಲ್ಲಿ, ನನ್ನ ನಿಲುವುಗಳು ಮತ್ತು ಗುರಿಗಳು, ಉತ್ತಮ ಮತ್ತು ಮುಗ್ಧ ಮಾನವರಿಗಾಗಿ ಈ ಭೂಮಿಯನ್ನು ನನ್ನಿಂದ ಸಾಧ್ಯವಾಗುವಷ್ಟು  ಆತ್ಮೀಯ ಪ್ರೀತಿಯ ಸ್ವರ್ಗವನ್ನಾಗಿ ಪರಿವರ್ತಿಸುವಲ್ಲಿ ಮಾತ್ರ ಇರುವವು ಎಂದು ನನ್ನ ಹೃದಯಾಳದಿಂದ ನಿಮಗೆ ತಿಳಿಸುವೆನು. ಪ್ರೀತಿಯೇ ದೇವರು, ಪ್ರೀತಿಯೇ ಧರ್ಮವು, ಪ್ರೀತಿಯೇ ಸಾಂತ್ವನ, ಪ್ರೀತಿಯೇ ಜೀವನ.

ಚುಟುಕಾಗಿ ನಿಮ್ಮ ಸೂಕ್ಷ್ಮದ ರಹಸ್ಯಾನ್ವೇಷಣೆ, ಮತ್ತು ನಿಮ್ಮ ಇತರ ಎಲ್ಲಾ ಅನುಭವ ಇತ್ಯಾದಿಗಳ ಹಿನ್ನೆಲೆಯಲ್ಲಿ, ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ಇವೆಲ್ಲದಕ್ಕೂ ನೀವು ಸ್ವಲ್ಪ ವಿವರವಾಗಿ ಉತ್ತರಿಸಿರಿ.
1. ಓಂದೇವ ಎಂದರೆ ದೇವರೇ? ಅಲ್ಲವಾದಲ್ಲಿ ಇನ್ನು ಯಾರು? ಅದು ಯಾಕಾಗಿ ಇದೆ?
2. ಓಂದೇವ ಅವರಿಗೆ ಭಕ್ತರನ್ನು ಅನುಗ್ರಹಿಸುವ ಶಕ್ತಿ ಇದೆಯೇ?
3. ನೀವು ನಿಮ್ಮ ಪೂರ್ತಿ ಬರಹ ಹಾಗೂ ವಿಚಾರಗಳ ವಿವರಣೆಗಳಿಂದ ಏನನ್ನು ಉದ್ದೇಶಿಸುತ್ತೀರಿ?

ಸತ್ಯ, ಪ್ರೀತಿ, ನೀತಿ ಇಲ್ಲದಿದ್ದರೆ ಯಾವುದೇ ಶಕ್ತಿಯೂ ದೇವರು ಆಗಲಾರದು ಎಂದು ನಮಗೆ ತಿಳಿದಿದೆ. ಸೃಷ್ಟಿಕರ್ತ ದೇವರ ಸಂಕಲ್ಪವಾದರೂ, ಆ ಸಂಕಲ್ಪದಲ್ಲಿ ಸತ್ಯ, ಪ್ರೀತಿ, ನೀತಿಗಳು ಇಲ್ಲ ಎಂದಾದರೆ, ಆ ಸೃಷ್ಟಿಕರ್ತ ದೇವರ ಸಂಕಲ್ಪವು ದೇವರು ಆಗುವುದಿಲ್ಲ ಖಂಡಿತ. ಈ ನನ್ನ ಮಾತು ಸರಿಯೋ ಎಂದು ನೀವು ಒಮ್ಮೆ ಆಲೋಚಿಸಿರಿ. ಈ ಕಾರಣದಿಂದ, ನನ್ನ ಮಟ್ಟಿಗೆ, ಸತ್ಯಸಂಧತೆ, ಶುದ್ಧ ಪ್ರೀತಿ, ಮತ್ತು ನೈತಿಕತೆಗಳು ಒಬ್ಬ ವ್ಯಕ್ತಿಯ ಪೂರ್ತಿ ಸ್ವಭಾವವೇ ಆಗಿ ಮೂಡಿಬಂದಲ್ಲಿ, ಆ ಮಹಾ ಮನುಷ್ಯನ ಅಥವಾ ಆ ಮಹಾತ್ಮನ ವ್ಯಕ್ತಿತ್ವವು ದೈವತ್ವವನ್ನು ಪಡೆಯುವುದು ಎಂದಾಗಿದೆ. ದೈವತ್ವ ಇರುವುದು ಮಾತ್ರ ದೇವರು ಆಗುವುದು. ಬರೇ ‘ಅನುಗ್ರಹವನ್ನು ಕೊಡುವುದು ಮಾತ್ರ ದೇವರು’ ಎಂದು ಹೇಳುವಹಾಗಿಲ್ಲ. ಪಿಶಾಚಿ, ದುಷ್ಟಶಕ್ತಿ, ವಾಮಾಚಾರ ಶಕ್ತಿ, ಇತ್ಯಾದಿಗಳನ್ನು ಕೂಡಾ ಆರಾಧನೆ ಮಾಡಿ ಅನುಗ್ರಹವನ್ನು ಪಡೆಯುವ ರೀತಿಯನ್ನು ನಾವು ಕಾಣುವೆವು, ಹಾಗಿರುವಾಗ, ಅವೆಲ್ಲವೂ ದೇವರುಗಳು ಆಗಬೇಕಾಗುವುದು. ಅಂದರೆ, ಸತ್ಯ, ಪ್ರೀತಿ, ನೀತಿ, ಎಂಬ ದೈವತ್ವ ಇರುವವುಗಳು ಮಾತ್ರ ದೇವರಾಗಲು ಸಾಧ್ಯ ಎಂದು ಅರ್ಥ. ಈ ದೈವತ್ವವು ದೇವರನ್ನು ನಿರ್ಣಯಿಸುವ ಕಾರಣದಿಂದಾಗಿಯೇ, “ನಮ್ಮ ದೇವರು ಮಾತ್ರ ಸರಿ, ನಿಮ್ಮ ದೇವರು ದೇವರಲ್ಲ” ಎಂದು ಹೇಳುವುದು ಬರೇ ಮೂರ್ಖತನ ಎನ್ನುವುದು. ಒಟ್ಟಲ್ಲಿ, ದೈವತ್ವ ಎಂಬ ಆ ಒಳಿತು ಹಾಗೂ ಉತ್ತಮ ಸ್ವಭಾವವನ್ನು ಹೊತ್ತ ಮತ್ತು ಪ್ರೋತ್ಸಾಹಿಸುವ ದೇವಸಂಕಲ್ಪವು ಯಾವ ಧರ್ಮದಲ್ಲಿ ಇದ್ದರೂ ಆ ದೇವರ ಸಂಕಲ್ಪವು ನಿಜ ದೇವಸಂಕಲ್ಪವಾಗುವುದು. ಆದರೆ ಅದರ ಬದಲು ದ್ವೇಷ, ಹಿಂಸೆ, ರಕ್ತಪಾತ ಇತ್ಯಾದಿಗಳನ್ನು ದೇವರ ಹೆಸರಲ್ಲಿ ಮಾಡುವುದಾದರೆ ಆ ದೇವಸಂಕಲ್ಪವು ದೈವತ್ವವನ್ನು ಕಳಕೊಳ್ಳುತ್ತದೆ. ಇನ್ನು, ಇತ್ತ, ವಂಚನೆ, ದ್ವೇಷ, ಅನೈತಿಕತೆಗಳು ಒಬ್ಬ ವ್ಯಕ್ತಿಯ ಪೂರ್ತಿ ವ್ಯಕ್ತಿತ್ವ ಆಗುವುದಾದರೆ, ಆ ವ್ಯಕ್ತಿಯ ವ್ಯಕ್ತಿತ್ವವು ಅಸುರವ್ಯಕ್ತಿತ್ವ ಆಗುವುದು. ಇನ್ನು, ಇದರ ವಿರುದ್ದ ಸತ್ಯ, ಪ್ರೀತಿ ನೀತಿ ಇರುವ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯು ದೇವವ್ಯಕ್ತಿತ್ವವನ್ನು ಅಥವಾ ಮಹಾತ್ಮನ ವ್ಯಕ್ತಿತ್ವವನ್ನು ಪಡೆಯುವನು, ಅಷ್ಟೆ. ಆ ನಿಟ್ಟಿನಲ್ಲಿ, ಜನತೆಗೆ ಸ್ವತಃ ಅವರವರನ್ನು ಸೇರಿ, ಪ್ರತಿ ಮನುಷ್ಯನನ್ನು ಅಸುರನನೋ, ದೇವನೋ, ಅಥವಾ ಅದರ ಮಧ್ಯದ ಆ ಎರಡು ವ್ಯಕ್ತಿತ್ವಗಳನ್ನು ಹೊಂದಿದವನೋ, ಎಂದೆಲ್ಲಾ, ವ್ಯಕ್ತಿಯ ಸ್ವಭಾವ ನೋಡಿ ತೀರ್ಮಾನಿಸಬಹುದು. ಆಗ, ನಾವು ಪ್ರತಿಯೊಬ್ಬರೂ, ಇವು ಮೂರರಲ್ಲಿ ಯಾವುದಾದರೂ ಒಂದು ಗುಂಪಲ್ಲಿ ಸೇರಿರುತ್ತೇವೆ ಎಂದು ತಿಳಿಯುವುದು. ಇಲ್ಲಿ, ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಸರಿಯಾಗಿ ತಿಳಿಯದೆ ತೀರ್ಮಾನಿಸುವುದು ಎಂದಿಗೂ ಅಪಾಯಕಾರಿ ತೀರ್ಮಾನ ಎಂಬುವುದನ್ನು ಮಾತ್ರ ಎಲ್ಲರೂ ಅರಿತಿರಬೇಕು ಅಷ್ಟೆ.

ಇನ್ನು, ದೇವರು ಎಂಬುವುದನ್ನು ಸೂಕ್ಷ್ಮದ ಶಕ್ತಿಗಳ ನಿಟ್ಟಿನಲ್ಲಿ ಹೇಳುವುದಾದರೆ,

ಅಲ್ಲಿಯೂ ಕೂಡಾ, ದೇವರು ತನ್ನ ಧರ್ಮದ ಹೆಸರಲ್ಲಿ ಯಾವುದೇ ರೀತಿಯ ಮನುಷ್ಯ ವಿಭಜನೆಯನ್ನು ಮಾಡಬಾರದು. ದೇವರು ಮತ್ತು ಧರ್ಮ ಇವು ಎರಡು ಇರುವುದೇ ಈ ಭೂಮಿಯಲ್ಲಿ ಹೃದಯವೈಶಾಲ್ಯತೆ ಇರುವ ಉತ್ತಮರ ಸಂಖ್ಯೆಯನ್ನು ಹೆಚ್ಚು ಸೃಷ್ಟಿಸಲು, ಮತ್ತು ಸಮಾಜದಲ್ಲಿ ಮೇಲು ಕೀಳು ಭಾವನೆ, ದ್ವೇಷ, ಹಿಂಸೆ, ರಕ್ತಪಾತಗಳನ್ನು ತೊಲಗಿಸಲು ಎಂದು ತಿಳಿಯಬೇಕು.  ಆದುದರಿಂದ, ಈ ರೀತಿಯಲ್ಲಿ ಇರುವ ದೇವರು ಮತ್ತು ಧರ್ಮಗಳ ಸಂಕಲ್ಪಗಳು ಶುದ್ಧ ದೇವರ ಸಂಕಲ್ಪ ಮತ್ತು ಶುದ್ಧ ಧರ್ಮದ ಸಂಕಲ್ಪ ಎಂದು ಹೇಳುವೆನು. ನೋಡಿ, ನಂಬಿಕೆಯವರ ಪ್ರಕಾರ, ಆ ದೇವರ ಆ ನರಕವು ಎಲ್ಲಾ ಇತರ ಧರ್ಮದವರಿಗೆ, ಮತ್ತು ತಮ್ಮ ಧರ್ಮದಲ್ಲಿದ್ದು ಆದರ ಆಚಾರ ತಪ್ಪಿದವರಿಗೆ ಮಾತ್ರ ಕಟ್ಟಿಟ್ಟ ಬುತ್ತಿಯಂತೆ, ಉಳಿದ ಆ ತಮ್ಮ  ಧರ್ಮದವರಿಗೆ ಮಾತ್ರ ಸ್ವರ್ಗ ಸಿಗುವುದಂತೆ. ಅಂದರೆ ತಮ್ಮ ಧರ್ಮದ ನಿತ್ಯ ಆಚಾರ ತಪ್ಪದೆ ಮಾಡುವವರಿಗೆ ಮಾತ್ರ ಸ್ವರ್ಗ ಸಿಗುವುದು ಎಂದು ಹೇಳುವರು. ಆ ನಂಬಿಕೆ ಆಚಾರಗಳನ್ನು ಮಾಡದವರಿಗೆ ಸ್ವರ್ಗ ಇಲ್ಲ ನರಕ ಎನ್ನುವರು. ಹೀಗೆ, ಈ ಯಾಂತ್ರಿಕ ಆಚಾರಗಳಿಗೆ ಇಷ್ಟು ಪ್ರಾಮುಖ್ಯತೆಯನ್ನು ಕೊಟ್ಟಲ್ಲಿ, ಇನ್ನು, ಈ ಧರ್ಮಗಳು ಹೃದಯವೈಶಾಲ್ಯತೆ ಎಂಬ ಆ ನಿಜಧರ್ಮವನ್ನು ಮರೆತುದರಲ್ಲಿ ಏನು ವಿಶೇಷವಿದೆ? ಹೀಗಿರುವಾಗ, ಪರೆಯ, ಶೂದ್ರ, ಎಂದು ಸಾವಿರಾರು ವರುಷಗಳು ತಮ್ಮ ಮಾನವ ಸಹೋದರರನ್ನು ಶೋಷಣೆ ಮಾಡದೆ ಇರುವರೆ? ಸ್ವಂತ ಮನೆಯ ಹೆಣ್ಣು ಮಕ್ಕಳನ್ನು ಬೆಂಕಿಗೆ ಹಾಕುವ ಹೇಯ ಭೀಕರ ಕ್ರೌರ್ಯದ ಕೆಲಸವನ್ನು ಧಾರ್ಮಿಕ ಕೆಲಸ ಎಂದು ಸಾವಿರಾರು ವರುಷಗಳ ತನಕ ಮುಂದುವರಿಸದೆ ಇರುವರೇ? ಇದನ್ನೇ ಹೇಳುವುದು ನಂಬಿಕೆ, ಆಚಾರಗಳ ಹುಚ್ಚು ಎಂದು! ಇನ್ನು, ಇದುವೆ, ಯುದ್ಧದಲ್ಲಿ ಸೆರೆ ಹಿಡಿದ ಹೆಂಗಸರನ್ನು ಬೀದಿಯಲ್ಲಿ ನಾಯಿಗಳನ್ನು ಮಾರುವಂತೆ ಮಾರಲು ಅವಕಾಶ ಮಾಡಿರುವುದು. ದೇವದಾಸಿಯರನ್ನು ಹಾಗೂ ಧರ್ಮಯುದ್ಧ ಮಾಡುವವರಿಗೆ ಕಾಮ ದಾಸಿಯರನ್ನಾಗಿಸಿರುವುದು. ಇದರ ಆ ವಿಶ್ವರೂಪ ಎಲ್ಲಿಯ ತನಕ ಎಂದರೆ, ಇದುವೇ ಬಾಂಬು ಹಾಕಿ ನೂರಾರು ಅಮಾಯಕರನ್ನು ಕೊಂದು ಆಚಾರ ಮಾಡಿ ಸ್ವರ್ಗಕ್ಕೆ ಹೋಗುವ ನಂಬಿಕೆಯನ್ನು ಕೂಡಾ ಇಟ್ಟುಕೊಂಡಿರುವುದು. ಇನ್ನು, ಇದಕ್ಕಿಂತ ಹೆಚ್ಚು ನಿಮಗೆ ಆ ಪವಿತ್ರ ಕರುಣಾಮಯ ಮನುಷ್ಯರೆಲ್ಲರ ತಂದೆಯಾದ ಆ ಸೃಷ್ಟಿಕರ್ತನ ಈ ನಂಬಿಕೆ ಆಚಾರಗಳಿಂದ ಏನು ಬೇಕು ಹೇಳಿ? ನಿಜವಾಗಿಯೂ, ದೇವರು ಮತ್ತು ಧರ್ಮಗಳು ಪವಿತ್ರವಾದ ದೈವತ್ವ-ಸುಗಂಧವನ್ನು ಎಂದಿಗೂ ಹೊರಸೂಸುತ್ತಾ ಇರಬೇಕು, ಆದರೆ ಹೊರಸೂಸಿರುವುದು ಮಾತ್ರ ಭೀಕರ ದ್ವೇಷ, ಹಿಂಸೆ, ರಕ್ತಪಾತಗಳ ವಿಷದ ಹೊಗೆಯನ್ನು ಆಗಿರುವುದು. ಈಗ, ಎಲ್ಲಾ ಧರ್ಮ, ಪಂಥಗಳ ಈ ಆಚಾರ, ನಂಬಿಕೆಗಳನ್ನು ಆ ಅನ್ಯಗ್ರಹಜೀವಿಗಳ ಅತಿರಹಸ್ಯ ವಾಮಾಚಾರವು ನಿಯಂತ್ರಿಸುತ್ತಾ ಅವುಗಳಿಗೆ ಬೇಕಾದಂತೆ ಶಿಲಾಯುಗದಿಂದಲೇ ಉಪಯೋಗಿಸುತ್ತಾ ಬರುತ್ತಿವೆ ಎಂದು ನನ್ನ 15 ವರುಷಗಳ ಸೂಕ್ಷ್ಮಲೋಕದ ಬೇಹುಗಾರಿಕೆಯ ಹಿನ್ನೆಲೆಯಲ್ಲಿ ನಾನು ಹೇಳಿರುವುದು ಸರಿಯಾಗಿರಬಹುದೇ ಎಂದು ಮತ್ತೂ ಸ್ಪಷ್ಟವಾಗಿ ತಿಳಿಯಲು ಆ ನನ್ನ ಹಿಂದಿನ ವೀಡಿಯೋಗಳನ್ನು ಕೇಳಿರಿ. ಸತ್ಯವು ನಮಗೆ ಎಲ್ಲರಿಗೂ ಬೇಕು, ಆದರೆ ಸುಳ್ಳು ಬೇಡ. ಭೂಮಿ ಚಪ್ಪಟೆ ಎಂಬ ಸುಳ್ಳು ಬೇಕೆ ಅಥವಾ ಭೂಮಿ ಗೋಲ ಎಂಬ ಸತ್ಯ ಬೇಕೆ? ಈ ರೀತಿಯನ್ನೇ ನಾವು ಎಲ್ಲದರಲ್ಲೂ ಅನುಸರಿಸಬೇಕಾಗಿರುವುದು. ನನ್ನ ಜಾತಿ, ಪಂಥ, ಧರ್ಮ, ಗುರು ಹೇಳಿರುವರು ಎಂಬ ಕಾರಣಕ್ಕೆ ಯಾವುದನ್ನಾದರೂ ಯಾರಾದರೂ ಅನುಸರಿಸುವುದಾದರೆ, ಎಲ್ಲಾ ಧರ್ಮ, ಪಂಥಗಳಲ್ಲಿ ಸೃಷ್ಟಿಕರ್ತನೇ ಹೇಳಿರುವನೆಂದು ಹೇಳುವ ಆ ಭೂಮಿ ಚಪ್ಪಟೆ, ಸೂರ್ಯ ಭೂಮಿಗೆ ಸುತ್ತುವನು, ಭೂಮಿ ಸೌರವ್ಯೂಹದ ಕೇಂದ್ರ, ಇತ್ಯಾದಿ ಆ ಹಲವು ಸುಳ್ಳುಗಳನ್ನು ಸತ್ಯ ಎಂದು ಜಗತ್ತಿನ ಮುಂದೆ ವಾದಿಸಬೇಕಾಗಿದೆ. ನೋಡಿ, “ನಮ್ಮ ಧರ್ಮದವರಿಗೆ ಮಾತ್ರ ಸ್ವರ್ಗ” ಎಂಬ ಆ ಎಲ್ಲಾ ಧರ್ಮಗಳ ನಂಬಿಕೆಗಳು ಅವುಗಳ ಅತ್ಯಂತ ದೊಡ್ಡ ಮೂರ್ಖತನ ಆಗಿರುವುದು. ಇದು ಯಾಕೆಂದರೆ, ಸೃಷ್ಟಿಕರ್ತ ದೇವರಿಗೆ ಆ ಪವಿತ್ರ ದೈವತ್ವ ಇರಬೇಕಿದ್ದರೆ, ಆತನು ತನ್ನ ಸ್ವರ್ಗವನ್ನು ‘ಭೂಮಿಯ ಉತ್ತಮ ಗುಣದ ಆ ಎಲ್ಲಾ ಧರ್ಮಗಳ ತನ್ನ ಮಕ್ಕಳಿಗಾಗಿ’ ಎಂದು ಮಾಡಿರಬೇಕು ಹಾಗೂ ಎಲ್ಲಾ ಧರ್ಮಗಳಲ್ಲಿ ಅದನ್ನು ಹಲವು ಸಲ ಅಲ್ಲಲ್ಲಿ ಹೇಳಿರಬೇಕು. ಅಯ್ಯೋ, ಇತ್ತ, ಎಲ್ಲಾ ಧರ್ಮಗಳಲ್ಲಿ ಸೃಷ್ಟಿಕರ್ತನು ಹೇಳಿರುವುದು ಮಾತ್ರ ಇತರ ಧರ್ಮಗಳಲ್ಲಿ ಸ್ವರ್ಗವನ್ನು ಗಳಿಸಲು ಸಾಧ್ಯ ಇಲ್ಲ ಎಂದು!! ಇದು ಏನು? ಮನುಷ್ಯರನ್ನು ತಮ್ಮೊಳಗೆ ಹೊಡೆಸಿ ಸಾಯಿಸುವ ಆ ಭೀಕರತೆಯ ತಳಪಾಯ ಅಲ್ಲವೇ? ಈ ಸ್ಪಷ್ಟವಾಗಿ ಕಾಣಿಸುವ ಮೋಸವನ್ನಾದರೂ ಈ ಧರ್ಮ, ಪಂಥಗಳಿಗೆ ಪತ್ತೆ ಹಚ್ಚಲು ಇದುವರೆಗೂ ಅವುಗಳ ಪಾಂಡಿತ್ಯದಿಂದ ಸಾಧ್ಯವಾಗದಿರುವಾಗ, ಆ ಪಾಂಡಿತ್ಯವಾದರೂ ಏನು? ಆಚಾರ, ನಂಬಿಕೆಯ ಪಾಂಡಿತ್ಯವು ನಂಬಿಕೆಯ ಭ್ರಮೆಯನ್ನು ಹೆಚ್ಚಿಸಬಹುದು, ಆದರೆ ಸತ್ಯದ ಕಣ್ಣನ್ನು ಎಂದಿಗೂ ಅದು ತೆರೆಸದು. ಆದುದರಿಂದ, ನನ್ನ ಪ್ರಕಾರ, ಸ್ವಲ್ಪವಾದರೂ ನಂಬಿಕೆಯು ಪವಿತ್ರ ಆಗಬೇಕಿದ್ದರೆ, ಉತ್ತಮರಾದ ಎಲ್ಲಾ ಮಾನವ ಮಕ್ಕಳಿಗೆ ಎಲ್ಲರ ತಂದೆಯಾದ ಸೃಷ್ಟಿಕರ್ತನು ತನ್ನ ಸ್ವರ್ಗವನ್ನು ಕೊಡುವನು ಎಂದು ಆ ನಂಬಿಕೆಯನ್ನು ತಿದ್ದಿಕೊಳ್ಳಬೇಕಾಗುವುದು. ಇದು ಉತ್ತಮ ಅಥವಾ ಆದರ್ಶ ನಂಬಿಕೆಗಳ ಬಗ್ಗೆ ಇರುವ ನನ್ನ ನಿಲುವು ಕೂಡಾ ಆಗಿದೆ.  ಸ್ವಾರ್ಥ ನಂಬಿಕೆ ಆಚಾರಗಳನ್ನು ಸತ್ಯ, ಪ್ರೀತಿ, ನೀತಿ ಆದರ್ಶಗಳ ಹಿನ್ನೆಲೆಯಲ್ಲಿ ಬದಲಾಯಿಸಿಕೊಳ್ಳುವಲ್ಲಿ ಮಾತ್ರ ನಂಬಿಕೆಗಳು ಪವಿತ್ರವಾಗಿ ಮಾನವರ ಬಾಳಿಗೆ ಶಾಂತಿ ನೆಮ್ಮದಿಯನ್ನು ತರಬಲ್ಲವು ಎಂಬುವುದು ಆಚಾರ, ನಂಬಿಕೆಗಳ ಬಗ್ಗೆ ಇರುವ ನನ್ನ ನಿಲುವು ಆಗಿದೆ ಎಂಬುವುದನ್ನು ಗಮನಿಸಬೇಕಾಗಿದೆ. ದುರದೃಷ್ಟವಶಾತ್, ಧರ್ಮ, ಪಂಥಗಳ ಹೆಚ್ಚಿನ ನಂಬಿಕೆಗಳು ಕೂಡಾ ಭಯಾನಕ ಸ್ವಾರ್ಥ ನಂಬಿಕೆಗಳಾಗಿರುವ ಕಾರಣ ಅವುಗಳೆಲ್ಲವೂ ಒಟ್ಟು ಸೇರಿ ದೇವರು ಮತ್ತು ಧರ್ಮಗಳ ಸಂಕಲ್ಪಗಳ ಆ ಪವಿತ್ರತೆಯನ್ನೇ ನಾಶಮಾಡಿಹಾಕಿರುವವು. ಇನ್ನು, ಈ ಅಪವಿತ್ರವಾದವುಗಳನ್ನು ಹೊತ್ತುಕೊಂಡಲ್ಲಿ, ಸತ್ಯಸಂಧತೆ, ಪ್ರೀತಿ, ಕರುಣೆ, ಇತ್ಯಾದಿಗಳು ಇರುವ ಧರ್ಮವನ್ನು ಸೃಷ್ಟಿಸಲು ಹೇಗೆ ಸಾಧ್ಯ? ಅದಕ್ಕೆ ನೋಡಿ, ಧರ್ಮದ ವಿರುದ್ದವಾಗಿರುವ ದ್ವೇಷ, ಹಿಂಸೆ, ರಕ್ತಪಾತಗಳನ್ನು ಧರ್ಮ, ಪಂಥಗಳು ಇದುವರೆಗೂ ಸುಲಭದಲ್ಲಿ ಪರ್ವತದಷ್ಟು ಸೃಷ್ಟಿಸಲು ಸಾಧ್ಯವಾಗಿರುವುದು!    

ಇನ್ನು, ನನ್ನ ಬಗ್ಗೆ ಮತ್ತು ನನ್ನ ಜೀವನ ರೀತಿಯ ಬಗ್ಗೆ ಹೇಳುವುದಾದರೆ, ನಾನು ಹೃದಯವೈಶಾಲ್ಯತೆಯ ಜೀವನವನ್ನು ಸಾಧಿಸಲು ಪ್ರಯತ್ನಿಸುವ ಅಥವಾ ಹೃದಯವೈಶಾಲ್ಯತೆಯ ಜೀವನದ ಸಾಧನೆಗಳನ್ನು ಮಾಡುತ್ತಿರುವ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದೇನೆ. ನಾನು ಮಾಡುತ್ತಿರುವ ಆ ಒಟ್ಟು ಸಾಧನೆಗಳಲ್ಲಿಟ್ಟು ಆ ಮುಖ್ಯ ಮೂರು ಸಾಧನೆಗಳೆಂದರೆ, ಸತ್ಯಚಿಂತನೆಜ್ಞಾನ ಸಾಧನೆ, ಆತ್ಮಪರಿಶೋಧನೆಜ್ಞಾನ ಸಾಧನೆ, ಮತ್ತು ವೈರಾಗ್ಯಜ್ಞಾನ ಸಾಧನೆ ಎಂಬ ಈ ಮೂರು ರೀತಿಯ ಜ್ಞಾನಸಾಧನೆಗಳಾಗಿವೆ.

ಇನ್ನು, ನನ್ನ ಹೆಸರು ಬೇರೆ ಇದೆ ಎಂದೂ, ಮತ್ತು ಓಂದೇವ ಎಂಬುವುದು ಸತ್ಯ, ಪ್ರೀತಿ, ನೀತಿ, ಸ್ವಭಾವದ ಹಿನ್ನೆಲೆಯಲ್ಲಿನ ಆ ನನ್ನ ಮನೋಶಕ್ತಿಯ ವ್ಯಕ್ತಿತ್ವದ ಹೆಸರಾಗಿದೆ ಎಂದು ನಿಮಗೆ ತಿಳಿದಿದೆ. ಇಲ್ಲಿ ‘ಸತ್ಯ’ ಎಂಬ ಒಂದು ಅರ್ಥ ಮಾತ್ರ ಓಂದೇವ ಎಂಬ ಹೆಸರಿಗೆ ಇರುವುದು. ಬೇರೆ ಯಾವ ಇತರ ಪೌರಾಣಿಕ ಅಥವಾ ತಾತ್ವಿಕ ಅರ್ಥಗಳು ಆ ಹೆಸರಿಗಿಲ್ಲ. ನಾನು ಈ ನನ್ನ ಮನೋಶಕ್ತಿಯಾದ ಓಂದೇವ ವ್ಯಕ್ತಿತ್ವವನ್ನು ಇತರ ಎಲ್ಲಾ ದೇವರು, ದೇವತೆಗಳಂತೆ, ಪುರಾಣ ಕಥೆಗಳ ಹಿನ್ನೆಲೆಯಲ್ಲಿ ಹೇಳುವುದಲ್ಲ ಎಂದು ಪ್ರತ್ಯೇಕವಾಗಿ ತಿಳಿಯಬೇಕು, ಬದಲು, ಅದನ್ನು ನಾನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಮಾತ್ರ ವಿವರಿಸುವುದು. ಈ ದೊಡ್ಡ ವ್ಯತ್ಯಾಸವನ್ನು ಪ್ರತ್ಯೇಕವಾಗಿ ತಿಳಿಯಬೇಕು.

ಇನ್ನು, ಮನೋವಿಜ್ಞಾನ ಮತ್ತು ನನ್ನ ರೀತಿಗಿರುವ ಒಂದು ಚಿಕ್ಕ ವ್ಯತ್ಯಾಸ ಎಂದರೆ, ಮನೋವಿಜ್ಞಾನವು, ದೇಹದಿಂದ ಮನೋಶಕ್ತಿಯನ್ನು ಪ್ರತ್ಯೇಕಿಸಿ, ಆ ಸ್ಥೂಲ ವ್ಯಕ್ತಿಗಿಂತ ಹೊರಗೆ ಒಂದು ಪ್ರತ್ಯೇಕ ಸೂಕ್ಷ್ಮ ವ್ಯಕ್ತಿತ್ವವಾಗಿ ಇರಿಸಿಕೊಳ್ಳುವ ರೀತಿಯನ್ನು ಇನ್ನೂ ಕಂಡುಹಿಡಿದಿಲ್ಲ ಎಂಬುವುದು ಮಾತ್ರವಾಗಿದೆ.

ಒಟ್ಟಲ್ಲಿ, ಓಂದೇವ ಎಂಬ ಹೆಸರು, ನನ್ನ ಒಳಗೆ ಇರುವ ಹಾಗೂ ನನ್ನಿಂದ ಪ್ರತ್ಯೇಕಿಸಲ್ಪಟ್ಟು ತಯಾರು ಮಾಡಲ್ಪಟ್ಟಿರುವ, ಸತ್ಯ, ಪ್ರೀತಿ, ನೀತಿ ಎಂಬ ನನ್ನ ಸ್ವಭಾವದ ಹಿನ್ನೆಲೆಯ, ಆ ನನ್ನ ಮನೋಶಕ್ತಿಗಳ ವ್ಯಕ್ತಿತ್ವಗಳು ಎಲ್ಲದರ ಒಟ್ಟಾಗಿರುವ, ಆ ಒಂದು ಸಾಮಾನ್ಯ ಹೆಸರಾಗಿದೆ.

ಇನ್ನು, ಈ ಓಂದೇವ ಎಂಬ ಸೂಕ್ಷ್ಮದ ಮನೋಶಕ್ತಿ ಯಾಕಾಗಿ ಇದೆ ಎಂದು ಕೇಳಿರುವ ಆ ನಿಮ್ಮ ಪ್ರಶ್ನೆಗೆ ಉತ್ತರ.

ಓಂದೇವ ಎಂಬ ಆ ನನ್ನ ಸೂಕ್ಷ್ಮದ ಮನೋಶಕ್ತಿಯು, ಮೊದಲಲ್ಲಿ, ಸೂಕ್ಷ್ಮದಲ್ಲಿ ನನಗೆ ಆಗುತ್ತಿರುವ, ತೊಂದರೆಗಳನ್ನು ನಿವಾರಿಸಲು ಬೇಕಾಗಿ “ನಾನು ಪವಿತ್ರ ಸತ್ಯವಾಗಿದ್ದೇನೆ” ಎಂಬ ನನ್ನ ಧ್ಯಾನದ ಆ ಏಕಾಗ್ರತೆಯ ಮನಸ್ಸಿನಿಂದ ನಾನೇ ಸೃಷ್ಟಿಸಿಕೊಂಡ ಒಂದು ಶಕ್ತಿಯಾಗಿತ್ತು. ಅದು ಕೂಡಾ, ಇತರ ರೀತಿಗಳಲ್ಲಿ ಆ ತೊಂದರೆಗಳಿಂದ ಪಾರಾಗಲು ಮೊದಲು ನಾನು ಶ್ರಮಿಸಿದ ನಂತರ, ಅವು ಯಾವುದೂ ಫಲಕ್ಕೆ ಬಾರದಿರುವಾಗ, ಸ್ವಯಂ ರಕ್ಷಣೆಗಾಗಿ ಸೃಷ್ಟಿಸಲೇಬೇಕಾಗಿ ಬಂದ ಸೂಕ್ಷ್ಮಶಕ್ತಿ ಆಗಿರುವುದು.  ಇನ್ನು, ಎರಡನೇ ಹಂತದಲ್ಲಿ ಮಾತ್ರ, ಅದಕ್ಕೆ ಒಂದು ಹೆಸರು ಸಹಿತ, ವ್ಯವಸ್ಥಿತವಾಗಿ, ಸತ್ಯ ಮತ್ತು ಪ್ರೀತಿಯ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಸೃಷ್ಟಿಮಾಡಿರುವುದು. ಆ ಎರಡನೇ ಹಂತವೇ, ಆ ನನ್ನ ಸೂಕ್ಷ್ಮದ ರಹಸ್ಯಾನ್ವೇಷಣೆಗೆ ಆಗಿತ್ತು. ಅಂದರೆ, ಹಾಗೆ ಸೃಷ್ಟಿಸಲ್ಪಟ್ಟ ಓಂದೇವ ಎಂಬ ಧನಾತ್ಮಕ ಮನೋಶಕ್ತಿಯ ಸಹಾಯದಿಂದಲೇ, ಆ ಸೂಕ್ಷ್ಮದ ರಹಸ್ಯಾನ್ವೇಷಣೆಯ ಮೂಲಕ, ನಾನು ಇಷ್ಟು ಸ್ಪಷ್ಟವಾಗಿ, ಇದುವರೆಗೂ ಬಯಲಾಗದ ಮತ್ತು ಈ ಭೂಮಿಯ ಎಲ್ಲವನ್ನೂ ನಿಯಂತ್ರಿಸುವ, ಅನ್ಯಗ್ರಹಜೀವಿಗಳ, ಶಿಲಾಯುಗದಿಂದಲೇ ಇರುವ  ಆ ಅತಿರಹಸ್ಯ ಅತಿಭಯಾನಕವಾಗಿರುವ ಆ ಪ್ರಾಚೀನ ವಾಮಾಚಾರ ವ್ಯವಸ್ಥೆಯನ್ನು ಪತ್ತೆಹಚ್ಚಲು ಸಾಧ್ಯವಾಗಿರುವುದು. ಅದು ಕೂಡಾ 15 ವರುಷಗಳ ಆ ನನ್ನ ಸತತ ಪ್ರಯತ್ನದ ಮೂಲಕ ಆಗಿರುವುದು. ನೋಡಿ, ಈ ಪ್ರಾಚೀನ ವಾಮಾಚಾರವು ಭೂಮಿಯ ಮನುಷ್ಯರಿಂದ ಸೃಷ್ಟಿಸಲ್ಪಟ್ಟ ಆ ವಾಮಾಚಾರ ಪದ್ಧತಿಗಳು ಅಲ್ಲ ಎಂಬುವುದನ್ನು ನಾನು ಪ್ರತ್ಯೇಕವಾಗಿ ಹೇಳುವೆನು. ಅವುಗಳು, ಭಯಾನಕ ಶಕ್ತಿಗಳು ಹಾಗೂ ಹೀನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕಾರಣ, ಅವನ್ನು ನಾನು ವಾಮಾಚಾರ ಎಂಬ ಹೆಸರಲ್ಲಿ ಸೂಚಿಸಿರುವುದು ಅಷ್ಟೆ. ಇದು, ಸೂಕ್ಷ್ಮಲೋಕದ ಎಲ್ಲಾ ಶಕ್ತಿಗಳನ್ನು ಹಾಗೂ ಭೂಮಿಯ ಎಲ್ಲಾ ಮಾನವರನ್ನು ಶಿಲಾಯುಗದಿಂದಲೇ ನಿಯಂತ್ರಿಸುತ್ತಾ ಬರುತ್ತಿರುವ ಸೂಕ್ಷ್ಮದ ಆ ಅತಿ ರಹಸ್ಯ ಭಯಾನಕ ವಾಮಾಚಾರ ವ್ಯವಸ್ಥೆ ಎಂದು ಹೇಳಬಹುದು.

ಇನ್ನು, ನಿಮಗೆ ಅನುಗ್ರಹಿಸುವ ಶಕ್ತಿ ಇದೆಯಾ ಎಂಬ ಪ್ರಶ್ನೆಯ ಉತ್ತರ

ನೋಡಿ, ಇಲ್ಲಿ, ಇದುವರೆಗಿನ ಭೂಮಿಯ ಎಲ್ಲಾ ದೇವರುಗಳ ಅನುಗ್ರಹ ರೀತಿಗಳನ್ನು ಮೊದಲು ಚುಟುಕಾಗಿ ಹೇಳುವೆನು. ಅದಕ್ಕಾಗಿ ಇಲ್ಲಿ ಬಹಳ ಗಮನಕೊಟ್ಟು ಕೇಳಿರಿ.

ನೋಡಿ, ಶಿಲಾಯುಗದಿಂದಲೇ, ಈ ಅನ್ಯಗ್ರಹ ಜೀವಿಗಳು, ಭೂಮಿಯ ಮಾನವರನ್ನು ಅವುಗಳ ಲಾಭಕ್ಕಾಗಿ ಉಪಯೋಗಿಸುತ್ತಾ ಬರುತ್ತಿವೆ ಎಂದು ಈ ಮೊದಲೇ ಅಲ್ಲಲ್ಲಿ ಹೇಳುರುವೆನು. ಅದು ಏನೆಂದು ಎಲ್ಲವನ್ನು ನನ್ನ ಹಿಂದಿನ ವೀಡಿಯೋಗಳಿಂದ ತಿಳಿದುಕೊಳ್ಳಿರಿ. ಅವುಗಳಲ್ಲಿಟ್ಟು ಹೆಚ್ಚಿನ ವೀಡಿಯೋಗಳ ಲಿಂಕುಗಳನ್ನು ಡಿಸ್ಕ್ರಿಪ್ಷ್ಯನ್ ಬಾಕ್ಸಲ್ಲಿ ಕೊಡಲಾಗಿದೆ.

ನೋಡಿ, ಈ ಅನುಗ್ರಹ ಎಂಬುವುದು, ಮಾನವರು ಕಾಡು ಮಾನವರಾಗಿ ಇದ್ದ ಆ ಶಿಲಾಯುಗ ಕಾಲದಿಂದಲೇ, ಕಾಡು ದೇವತೆಗೆ ಏನನ್ನಾದರೂ ಪ್ರೀತ್ಯರ್ಥವಾಗಿ ಅವರು ಕೊಟ್ಟರೆ ಆ ದೇವತೆ ಅನುಗ್ರಹಿಸುವ ನಂಬಿಕೆ ಅಂದೇ ಇತ್ತು. ಸುಮ್ಮನೆ ಯಾರು ಕೂಡಾ ನಂಬಿಕೆಯ ಆಚಾರವನ್ನು ಮಾಡುವುದಿಲ್ಲ. ಆ ಕಾಡು ಸಂಪ್ರದಾಯ ಮುಂದುವರಿದು ಮಾನವನು ನಾಡಿಗೆ ಬರುವಾಗ ಅದನ್ನು ಒಟ್ಟಿಗೆ ತರಲಾಯಿತು. ಇಂದು, ಅವು ಜಗತ್ತಿನ ಎಲ್ಲಾ ಕಡೆಗಳಲ್ಲೂ ಪರಿಷ್ಕರಿಸಲ್ಪಟ್ಟಿವೆ ಅಷ್ಟೆ. ಅಂದು, ಅವಲ್ಲಿ ಪ್ರಾಣಿಬಲಿಯೊಂದಿಗೆ ನರಬಲಿಯು ಕೂಡ ಆಚಾರವಾಗಿ ಸೇರಿತ್ತು. ಇಂದು, ಅದರಲ್ಲಿ ಒಂದು ವ್ಯತ್ಯಾಸ ಬಂದಿದೆ,  ಅದೇನೆಂದರೆ, ಅವಲ್ಲಿ ನರಬಲಿಯನ್ನು ಲೋಕದ ಎಲ್ಲೆಡೆಯಲ್ಲೂ ನಿಷೇಧಿಸಿರುವರು, ಆದರೆ ಪ್ರಾಣಿಬಲಿಯು ನಂಬಿಕೆಯ ಆಚಾರವಾಗಿ ಇಂದೂ ಮುಂದುವರಿಸಲ್ಪಡುವುದು!

ಈ ಅನುಗ್ರಹದ ರೀತಿಯನ್ನು ಒಮ್ಮೆ ನೋಡಿ. ಜಗತ್ತಿನ ಯಾವ ಮೂಲೆಯಲ್ಲಿ ಆದರೂ, ಲಾಟರಿ ಬಹುಮಾನಗಳ ತರ, ಅನುಗ್ರಹವು, ನಂಬಿ ಆಚರಿಸಿದ ಎಲ್ಲರಿಗೂ ಸಿಗಲಾರದು. ಕೆಲವು ಕಡೆಗಳಲ್ಲಿ ಇತರ ಕಡೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನುಗ್ರಹ ಸಿಗಬಹುದು ಅಷ್ಟೆ. ಇನ್ನು, ಬಹಳ ಅಚ್ಚರಿಯ ವಿಷಯ ಎಂದರೆ, ಅನುಗ್ರಹವು ದೇವರುಗಳ ಅಥವಾ ಶಕ್ತಿಗಳ ಆ ಉತ್ತಮ ಹಾಗೂ ದೊಡ್ಡ ಭಕ್ತರಿಗೆ ಎಷ್ಟೋ ಸಲ ಸಿಗದೆ ಹೋಗುವುದು ಇದೆ, ಮಾತ್ರವಲ್ಲ, ತುಂಬಾ ಸಲ, ಕೆಟ್ಟ ಮಾನವರಿಗೆ ಅನುಗ್ರಹವಾಗುವುದು ಕೂಡಾ ಇದೆ! ಲಾಟರಿ ಬಹುಮಾನಕ್ಕೂ ಉತ್ತಮ ಮಾನವ, ಕೆಟ್ಟ ಮಾನವ ಎಂದು ಬೇಧ ಇಲ್ಲ ತಾನೇ?

ನೋಡಿ, ಲಾಟರಿ ಬಹುಮಾನಗಳ ತರ, ಕೆಲವು ಅನುಗ್ರಹಗಳು ಎಂಬ ಬಹುಮಾನಗಳನ್ನು ನಂಬಿಕೆಯ ಆಚಾರ ಮಾಡಿದವರಿಗೆ ಆಯಾ ದೇವರು ಅಥವಾ ಶಕ್ತಿಗಳ ಹಿನ್ನೆಲೆಯಲ್ಲಿ ಈ ಅನ್ಯಗ್ರಹಜೀವಿಗಳ ಸೂಕ್ಷ್ಮದ ವ್ಯವಸ್ಥೆಯು ಬಿತ್ತರಿಸುವವು. ಆಗ, ಮನುಷ್ಯರು ಕೆಲವೇ ಕೆಲವು ಬಹುಮಾನಗಳಿಗಾಗಿ ಲಕ್ಷಗಟ್ಟಲೆ ಜನ ಲಾಟರಿ ಖರೀದಿಸುವ ತರ, ನಂಬಿಕೆಯ ಆಚಾರಗಳನ್ನು ಮಾಡುವ ಆ ಹಲವರಲ್ಲಿ ಕೆಲವೊಬ್ಬರು ಅನುಗ್ರಹವನ್ನು ಪಡೆಯುವರು. ಲಾಟರಿ ರೀತಿಯ ಪ್ರತ್ಯೇಕತೆ ಎಂದರೆ, ಇಲ್ಲಿ ಉತ್ತಮರಿಗೆ ಲಾಟರಿ ಹೊಡೆಯದೆ ಕೆಟ್ಟವರಿಗೆ ಹೊಡೆಯುವ ಸಾಧ್ಯತೆಗಳಿವೆ. ಅದೇ ರೀತಿ, ಅನುಗ್ರಹಗಳಲ್ಲಿ ಕೂಡಾ ಉತ್ತಮರಿಗೆ ಮತ್ತು ದೊಡ್ಡ ಭಕ್ತರಿಗೆ ಅನುಗ್ರಹ ಆಗದೆ ಕೆಟ್ಟವರಿಗೆ ಆಗುವುದನ್ನು ನಾವು ಕಣ್ಣಾರೆ ಕಾಣುವೆವು. ಧರ್ಮ ಮಾರ್ಗದಲ್ಲಿ ನಡೆದು ಉತ್ತಮರಾಗಿರಿ ಎಂದು ಧರ್ಮವನ್ನು ಬೋಧಿಸುವ ಮತ್ತು ಕರುಣಾಮಯ ಸೃಷ್ಟಿಕರ್ತ ದೇವರು ಅನುಗ್ರಹ ಕೊಡುವುದೇ ಆದರೆ ಅಥವಾ ಕರ್ಮಸಿದ್ಧಾಂತದ ಪ್ರಕಾರ ಭಕ್ತನ ಕೆಟ್ಟಕರ್ಮವನ್ನು ದೇವರು ತಿದ್ದಿ ಅನುಗ್ರಹವನ್ನು ಕೊಡುವುದೇ ಆದರೆ, ಆ ಎಲ್ಲಾ ಕಡೆಯೂ, ಮೊಟ್ಟಮೊದಲು, ಉತ್ತಮರಾದ ತನ್ನ ದೊಡ್ಡ ಭಕ್ತರ ಕೆಟ್ಟಕರ್ಮವನ್ನು ತಿದ್ದಿ ಅವರಿಗೆ ದೇವರು ಅನುಗ್ರಹವನ್ನು ಕೊಡಬೇಕು, ಉತ್ತಮರನ್ನು ಬಿಟ್ಟು ಕೆಟ್ಟವರಿಗೆ ಆತನ ಅನುಗ್ರಹ ಹೋಗಲು ಸಾಧ್ಯವೇ ಇಲ್ಲ. ಆದರೆ ಯಾಕೆ ಅತ್ಯುತ್ತಮ ಭಕ್ತರಿಗೆ ಅನುಗ್ರಹ ಆಗದೆ ಸ್ವಾರ್ಥಿಗಳಾದ ಹಾಗೂ ಕೆಟ್ಟಸ್ವಭಾವದ ಭಕ್ತರಿಗೆ ಅನುಗ್ರಹ ಆಗುವುದು ಎಂಬುವುದಕ್ಕೆ ಉತ್ತರ ಇದುವರೆಗೂ ಯಾವ ಧರ್ಮದಿಂದಲೂ ಇಲ್ಲ! ಉತ್ತರ ಇಲ್ಲದ ಈ ಗೊಂದಲದ ರೀತಿಯಲ್ಲಿ ಮಾತ್ರ ಜಗತ್ತಿನ ಎಲ್ಲಾ ಕಡೆಯ ದೇವರು, ಶಕ್ತಿಗಳಲ್ಲಿ ಅನುಗ್ರಹ ಕೊಡುವಿಕೆ ಇರುವುದು. ಕೆಲವು ಕಡೆಗಳಲ್ಲಿ ಸ್ವಲ್ಪ ಹೆಚ್ಚು ಮತ್ತು ಕೆಲವು ಕಡೆಗಳಲ್ಲಿ ಸ್ವಲ್ಪ ಕಡಿಮೆ ಅಷ್ಟೆ ವ್ಯತ್ಯಾಸ ಮಾಡಲ್ಪಟ್ಟಿರುವುದು.

ಕೆಲವೊಮ್ಮೆ ಕೆಲವೊಂದು ಉತ್ತಮರಿಗೆ ಮತ್ತು ಕೆಲವೊಮ್ಮೆ ಕೆಲವೊಂದು ಕೆಟ್ಟವರಿಗೆ ಅನುಗ್ರಹ ಆಗುವುದನ್ನು ನೋಡುವಾಗ ಎಲ್ಲರೂ ಅದನ್ನು ಏನಾದರೂ ನೆಪದ ಸಿದ್ಧಾಂತಗಳ ಮೂಲಕ ಅಥವಾ ಪುರಾಣ ಕಥೆಗಳ ಸಹಾಯದಿಂದ ಸರಿಪಡಿಸಲು ಪ್ರಯತ್ನಿಸುತ್ತಾರೆ ಅಷ್ಟೆ. ದೇವರ ಆಟ, ದೇವರ ಪರೀಕ್ಷೆ, ಕರ್ಮ, ವಿಧಿ, ಇತ್ಯಾದಿ ಹೇಳಿ ಜಾರಿಕೊಳ್ಳುವರು. ಅಯ್ಯೋ, ಸತ್ಯವು ಬೇರೆಯೇ ಇದೆ. ವಾಸ್ತವದಲ್ಲಿ,  ‘ಭಾಗ್ಯ, ಮತ್ತು ದೌರ್ಭಾಗ್ಯ’ ಎಂಬ ಹಿನ್ನೆಲೆಯಲ್ಲಿ ಮಾತ್ರ ಜಗತ್ತಿನ ಎಲ್ಲಾ ಕಡೆಯ ಆ ಹಲವು ನಂಬಿಕೆಯ ಆಚಾರಗಳನ್ನು ಮಾಡಿದವರಿಗೆ ಒಂದು ನಿಶ್ಚಿತ ಸಂಖ್ಯೆಯ ಅನುಗ್ರಹಗಳನ್ನು ಕೊಡುವ ವ್ಯವಸ್ಥೆಯನ್ನು, ಈ ಅನ್ಯಗ್ರಹಜೀವಿಗಳ ರಹಸ್ಯವಾಮಾಚಾರ ವ್ಯವಸ್ಥೆಯು ಶಿಲಾಯುಗದಿಂದಲೇ ಮಾಡಿದೆ. ಅವಲ್ಲಿ ಎರಡು ಮುಖ್ಯ ರೀತಿಗಳು ಎಂದರೆ, ನಂಬಿಕೆಯ ದೇವರು ಸಂಕಲ್ಪಕ್ಕೆ ಸಂಬಂಧಪಟ್ಟ ಆಚಾರಗಳಿಗೆ ಕೊಡಲ್ಪಡುವ ಅನುಗ್ರಹಗಳು ಮತ್ತು ಭೂಮಿಯ ಆ ವಿವಿಧ ವರ್ಗ ಅಥವಾ ಪರಂಪರೆಯ ವಾಮಾಚಾರಗಳಿಗೆ ಅಥವಾ ವಾಮಾಚಾರ ಮಾಡಿಸಿದರೆ ಕೊಡಲ್ಪಡುವ ಅನುಗ್ರಹಗಳಾಗಿವೆ. ಒಟ್ಟಲ್ಲಿ ನೋಡಿದರೆ, ಎಲ್ಲವೂ, ಅನ್ಯಗ್ರಹಜೀವಿಗಳು ಮೊದಲೇ ಅವುಗಳ ರಹಸ್ಯ ವ್ಯವಸ್ಥೆಗೆ ಲಾಭ ಆಗುವ ತರದಲ್ಲಿ, ಅವು ನಿಶ್ಚಯಿಸಿದಂತೆ, ಮಾತ್ರ ನಡೆಯುವ ಅನುಗ್ರಹಗಳಾಗಿವೆ. ಅದು ಮನುಷ್ಯನ ವ್ಯಯಕ್ತಿಕ ಜೀವನವಾದಾರೂ, ಕುಟುಂಬದ ಜೀವನವಾದರೂ, ಸಮಾಜಗಳ ಏರು ಪೇರು ಆದರೂ, ದೇಶದ ಏರು ಪೇರು ಆದರೂ, ಧರ್ಮಗಳ ಏರು ಪೇರು ಆದರೂ, ಮತ್ತು ದ್ವೇಷ, ಹಿಂಸೆ, ಕಲಹ, ಯುದ್ಧಗಳಾದರೂ, ಇವು ಎಲ್ಲವೂ ಅವುಗಳು ನಿಶ್ಚಯಿಸಿದಂತೆ ಇರುವವು ಮತ್ತು ನಡೆಯುವವು! ಇದುವೇ, ‘ದೇವರಿಂದಲೂ ತಪ್ಪಿಸಲಾಗದ ವಿಧಿ’ ಎಂದು ಜನರು ಆಡುತ್ತಿರುವ ಮತ್ತು ಆ ವಿಧಿ ಎಂದರೆ ಏನೆಂದು ಯಾರಿಗೂ ಸ್ಪಷ್ಟವಿಲ್ಲದ, ಆ ‘ಅನ್ಯಗ್ರಹಜೀವಿಗಳ ರಹಸ್ಯ ವಾಮಾಚಾರದ ವಿಧಿ’ ಆಗಿರುವುದು. ಇದಲ್ಲದೆ, ಬೇರೆ ಯಾರಿಂದ ಅಥವಾ ಯಾವುದರಿಂದ ನಿಶ್ಚಯಿಸಲ್ಪಟ್ಟ ವಿಧಿಯೂ ಈ ಪ್ರಪಂಚದಲ್ಲಿ ಇಲ್ಲ. ನೋಡಿ, ಸೃಷ್ಟಿಕರ್ತನ ಅಥವಾ ದೇವತೆಗಳ ದೊಡ್ಡ ದೊಡ್ಡ ಭಕ್ತರು, ಮಾರಕ ರೋಗಕ್ಕೆ ತುತ್ತಾಗುವಾಗ, ಅವರು ನಿರಂತರ ಪ್ರಾರ್ಥಿಸಿದರು ಕೂಡಾ, ಸರಿಯಾದ ಚಿಕಿತ್ಸೆಯನ್ನು ಮಾಡಿಯೂ, ಸತ್ತು ಹೋಗುವುದನ್ನು ನಾವು ಕಾಣುವೆವು. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಮರಣ ಹೊಂದಿರುವ ರೋಗಿಗಳ ಪಟ್ಟಿಯನ್ನು ನೋಡಿದರೆ ಗೊತ್ತಾಗುವುದು ಈ ಸತ್ಯ. ಒಟ್ಟಲ್ಲಿ, ಆಚಾರ, ನಂಬಿಕೆ, ಅನುಗ್ರಹ, ಸ್ವರ್ಗ, ನರಕ, ಮೋಕ್ಷ, ಇತ್ಯಾದಿ ಎಲ್ಲವೂ ಅವುಗಳ ಮೋಸದ ಆಟವಾಗಿದೆ. ಬರೇ, ನಾಗರೀಕ ತತ್ವಶಾಸ್ತ್ರ ಎಂದು ತೋರ್ಪಡಿಸಲು ಮತ್ತು ಆ ಹಿನ್ನೆಲೆಯಲ್ಲಿ “ನಾವು ಮೇಲು” ಎಂಬ ಭ್ರಮೆಯ ವಾದ, ದ್ವೇಷ, ಕಲಹ, ಹಿಂಸೆ, ರಕ್ತಪಾತಗಳನ್ನು ಅವು ಇದುವರೆಗೂ ಸೃಷ್ಟಿಸುತ್ತಾ ಬಂದಿರುವವು ಅಷ್ಟೆ. ನೋಡಿ, ದೇವರು ಮತ್ತು ಧರ್ಮವು, ಸತ್ಯ, ಪ್ರೀತಿ, ನೀತಿ ಎಂದು ಮತ್ತು ಅವು ಶಾಂತಿಯನ್ನು ಸೃಷ್ಟಿಸಲು ಇರುವವುಗಳು ಎಂದು ಈ ಧರ್ಮ, ಪಂಥಗಳು ಹೇಳಿರುತ್ತಿದ್ದರೆ, ದೇವರು ಮತ್ತು ಧರ್ಮದ ಹೆಸರಲ್ಲಿ ಒಂದೇ ಒಂದು ಹಿಂಸೆಯ ಘಟನೆಯೂ ಇದುವರೆಗೂ ಈ ಭೂಮಿಯಲ್ಲಿ ಸೃಷ್ಟಿಯಾಗುತ್ತಿರಲಿಲ್ಲ. ಸೂರ್ಯನು ಬೆಳಕು ಕೊಡುವವನು ಎಂದು ಆದಿಯಿಂದಲೇ ಹೇಳುತ್ತಾ ಬಂದಿರುವರು, ಅವನು ಎಂದಾದರೂ ಅದನ್ನು ತಪ್ಪಿಸಿ ಕತ್ತಲೆ ಕೊಟ್ಟದ್ದು ಇದೆಯೇ? ಇಲ್ಲ ಅಲ್ಲವೇ? ಅದೇ ರೀತಿ ಸತ್ಯವಾಗಿದ್ದರೆ ಅದು ಯಾವಾಗಲೂ ಸತ್ಯವಾಗಿಯೇ ಕಾಣಿಸುವುದು. ಆದರೆ ದೇವರು, ಧರ್ಮಗಳ ಹೆಸರಲ್ಲಿ ಕ್ರೌರ್ಯದ ದ್ವೇಷ, ಹಿಂಸೆ, ರಕ್ತಪಾತಗಳು ಪರ್ವತದಷ್ಟು ಈಗಾಗಲೇ ಸೃಷ್ಟಿಯಾಗಿರುವಾಗ, ಎಲ್ಲವೂ ಮೋಸ ಎಂದು ತಿಳಿಯುವುದಿಲ್ಲವೇ?

ಇಂದಿನವರೆಗೂ, ಈ ನಂಬಿಕೆಯ ಶಾಸ್ತ್ರಗಳು ‘ನಾವು ಸರಿ ನೀವು ತಪ್ಪು’, “ನಾವು ಮೇಲು ನೀವು ಕೀಳು” ಎಂದು ವಾದ ಮಾಡುತ್ತಾ ಬಂದಿವೆ!  ದಿಗ್ವಿಜಯ. ಮತಾಂತರ, ಧರ್ಮಯುದ್ಧ. ಇತ್ಯಾದಿಗಳನ್ನು ಮಾಡುತ್ತಾ ಬಂದಿವೆ. ಇತ್ತ, ನಿಜವಾಗಿಯೂ ಧರ್ಮ ಮಾಡಬೇಕಾದ ಮಾನವರನ್ನು ಎಲ್ಲರನ್ನು ಸಹೋದರರಂತೆ ಪ್ರೀತಿಸುವ ಆ ಹೃದಯವೈಶಾಲ್ಯತೆಯ ಮಾನವರನ್ನು ಸೃಷ್ಟಿಸುವ ಕೆಲಸ ಏನೇನೂ ಮಾಡಿಲ್ಲ. ಅಂದರೆ, ಈಗಿರುವುದು ಎಲ್ಲವೂ ಬೇಲಿ ಧರ್ಮ, ಪಂಥಗಳು, ಯಾಕೆಂದರೆ,  ‘ಪ್ರೀತಿ, ಮೋಕ್ಷ, ಸ್ವರ್ಗ ಎಲ್ಲವೂ ನಮ್ಮ ಧರ್ಮದೊಳಗೆ ಬಂದರೆ ಮಾತ್ರ’ ಎಂದು ಅವು ಹೇಳುವವು. ಇದು, ಅತ್ಯಂತ ಬಾಲಿಶ ರೀತಿಯ ಮತ್ತು ಭಯಾನಕ ರೀತಿಯ ವಾದ ಆಗಿದೆ. ಈ ಕಾರಣದಿಂದಲೇ, ಈ ಜಗತ್ತಲ್ಲಿ, ಬರೇ ದೇವರು, ಧರ್ಮ, ಪಂಥಗಳಿಂದಲೇ ಇದುವರೆಗೂ ಅತ್ಯಂತ ಹೆಚ್ಚು ದ್ವೇಷ, ಹಿಂಸೆ, ರಕ್ತಪಾತವಾಗಿರುವುದು ಎಂದು ಇತಿಹಾಸದಲ್ಲಿ ಬರೆಯಲ್ಪಟ್ಟಿರುವುದು. ಅಂದರೆ, ಅದರ ಸ್ಪಷ್ಟ ಅರ್ಥ ಹೇಗೆ ಬರುವುದು ಎಂದರೆ, ಈ ಜಗತ್ತಲ್ಲಿ ದೇವರು, ಧರ್ಮ, ಪಂಥಗಳಿಂದಲೇ ಇದುವರೆಗೂ ಅತ್ಯಂತ ಹೆಚ್ಚು ಅಧರ್ಮವಾಗಿರುವುದು ಎಂದಾಗುವುದು! ಇದು ಅಚ್ಚರಿ ಅಚ್ಚರಿ ಅಚ್ಚರಿ!!! ಇನ್ನಾದರೂ, ಮಾನವರು, ನಂಬಿಕೆಯ ಆ ಕುರುಡು ಕಣ್ಣು ಮುಚ್ಚುವಿಕೆಯಿಂದ ಹೊರಬಂದು ಕಣ್ಣು ತೆರೆದು ವಾಸ್ತವ ಜಗತ್ತನ್ನು ಪೂರ್ತಿಯಾಗಿ ನೋಡಬೇಕಾಗಿದೆ. ಹಿಂದೆ, ಮಹಾತ್ಮರು ಹೇಳಿರುವಂತೆ, ‘ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಜಾತಿಯೇ ಶ್ರೇಷ್ಠ, ನಮ್ಮ ಧರ್ಮದಲ್ಲಿ ಮಾತ್ರ ಸ್ವರ್ಗ’ ಇತ್ಯಾದಿ ಭಯಾನಕ ಅಜ್ಞಾನದ ಮತ್ತು ತಪ್ಪಾದ ಅರಿವುಗಳ ಕೂಪದಲ್ಲಿ ಕೂಪ ಮಂಡೂಕಗಳ ತರ ಇರುವುದರಿಂದ ಹೊರಬರಬೇಕಾಗಿದೆ.

ಇನ್ನು, ನನಗೆ ಅಥವಾ ಓಂದೇವ ಶಕ್ತಿಗೆ ಅನುಗ್ರಹಿಸುವ ಶಕ್ತಿ ಇದೆಯೇ ಎಂಬ ಪ್ರಶ್ನೆಯ ಉತ್ತರ.

ಎಲ್ಲಾ ಅನುಗ್ರಹಗಳು ಆ ಅನ್ಯಗ್ರಹಜೀವಿಗಳ ಉದ್ದೇಶಿಸಿರುವ ರೀತಿಯಲ್ಲೇ ಅವುಗಳ ನಿಯಂತ್ರಣದಲ್ಲಿ ಸಂಭವಿಸುವವು, ಅಂದರೆ, ಅಲ್ಲಲ್ಲಿ ನಿಶ್ಚಿತವಾಗಿ ಅನುಗ್ರಹ ಪವಾಡಗಳು ಸಂಭವಿಸುವವು ಎಂದು ಅರ್ಥ. ಅಚ್ಚರಿ ಎಂದರೆ, ಸೂಕ್ಷ್ಮದ ಯಾವ ಶಕ್ತಿಗಳಿಗೂ ಅವುಗಳು ತಾನು ಈ ರೀತಿ ಅನ್ಯಗ್ರಹಜೀವಿಗಳ ಆ ಅತಿ ಸೂಕ್ಷ್ಮ ವ್ಯವಸ್ಥೆಯ ಮೂಲಕ ನಿಯಂತ್ರಿಸಲ್ಪಟ್ಟಿರುವುದು ತಿಳಿದಿಲ್ಲ ಎಂಬುವುದಾಗಿದೆ. ಅನುಗ್ರಹಿಸುವ ಹಂತದ ಸೂಕ್ಷ್ಮದ ಶಕ್ತಿಗಳು, ತಾವು ಸ್ವತಂತ್ರರಾಗಿದ್ದು ಅನುಗ್ರಹಿಸುವುದೆಂದು ತಿಳಿದುಕೊಳ್ಳುತ್ತವೆ, ಆದರೆ, ಅವು ಅನುಗ್ರಹಿಸಿದಲ್ಲಿ ವಿಧಿ ಎಂಬ ಈ ಅನ್ಯಗ್ರಹಜೀವಿಗಳು ನಿಶ್ಚಯಿಸಿರುವುದು ಮಾತ್ರ ಫಲಿಸುವವು ಉಳಿದ ಅನುಗ್ರಹಗಳು ಖಂಡಿತವಾಗಿಯೂ ಫಲಿಸುವುದಿಲ್ಲ ಅಷ್ಟೆ. ಅದೇ ರೀತಿ, ದೇವರುಗಳ ಮೂಲಕ ಮಾಡಿಸುವ ಹಾಗೂ ಭೂಮಿಯ ವಾಮಾಚಾರಿಗಳ ಮೂಲಕ ಮಾಡಿಸುವ ವಾಮಾಚಾರವಾದರೂ ಅವಲ್ಲಿ ವಿಧಿ ಎಂಬ ಈ ಅನ್ಯಗ್ರಹಜೀವಿಗಳು ನಿಶ್ಚಯಿಸಿರುವವುಗಳು ಮಾತ್ರ ಫಲಿಸುವವು, ಉಳಿದ ಯಾವುದು ಕೂಡಾ ಅಲ್ಲಿಯೂ ಖಂಡಿತವಾಗಿಯೂ ಫಲಿಸುವುದಿಲ್ಲ. ಈ ರೀತಿಗಳಲ್ಲಿ ದೇವರು, ಆಚಾರ, ನಂಬಿಕೆ, ಮೋಕ್ಷ, ಸ್ವರ್ಗ, ಅನುಗ್ರಹ, ಶಾಪ, ವಾಮಾಚಾರ ಇತ್ಯಾದಿ ಎಲ್ಲವನ್ನು ಮನುಷ್ಯನಿಗೆ ಬರೇ ಮಂಗನಷ್ಟು ಬುದ್ಧಿ ಇದ್ದ ಆ ಶಿಲಾಯುಗದಿಂದಲೂ, ಕಾಲಕಾಲಕ್ಕೆ, ಅವುಗಳ ಹೊರ ಕವಚಗಳನ್ನು ಮಾತ್ರ ಪರಿಷ್ಕರಿಸುತ್ತಾ ಇದುವರೆಗೂ ಗುಟ್ಟು ರಟ್ಟುಮಾಡದೆ ರಹಸ್ಯವಾಗಿಯೇ ಅವು ಬಂದಿವೆ.

ಇನ್ನು, ನನ್ನ ಓಂದೇವ ಶಕ್ತಿಗಳಿಗೆ, ನಾನು ತಿಳಿದಿರುವ ಈ ಎಲ್ಲಾ ಸೂಕ್ಷ್ಮದ ರಹಸ್ಯಗಳು ತಿಳಿದಿದೆ. ಈ ಒಂದು ಮುಖ್ಯ ವ್ಯತ್ಯಾಸ ಇಲ್ಲಿ ಇದೆ ಅಷ್ಟೆ. ಅವುಗಳಿಗೆ, ಈ ಎಲ್ಲಾ ರಹಸ್ಯಗಳ ಅರಿವಿನ ಹಿನ್ನೆಲೆಯಲ್ಲಿ ಏನಾದರೂ ಸ್ವಲ್ಪ ಹೆಚ್ಚು ಪ್ರತ್ಯೇಕವಾಗಿ ಮಾಡಲು ಸಾಧ್ಯವಾದರೆ ಅದು ನಿಮಗೆ ಮುಂದಿನ ನಾಲ್ಕು ವರುಷದೊಳಗೆ ಅಂದರೆ, 2027 ರೊಳಗೆ ಸ್ಪಷ್ಟವಾಗಿ ಕಾಣಿಸಬಹುದು. ಅನ್ಯಗ್ರಹಜೀವಿಗಳ ಕಾಡುವಿಕೆಯಿಂದಾಗಿ, ಅಥವಾ ಅವುಗಳ ಆ ಕಠೋರ ನಿಯಂತ್ರಣದಿಂದಾಗಿ ಅದು ಸಾಧ್ಯವಾಗದಿದ್ದರೆ, ಇದುವರೆಗೂ ಬಯಲಾಗದ ಅತಿ ರಹಸ್ಯಸತ್ಯಗಳನ್ನು ಮಾನವರ ಮುಂದೆ ಇರಿಸಿ, ಮಾನವರು ಸಾಧನೆಯ ಮೂಲಕ ಮನಶ್ಯಾಂತಿ. ಮನೆಶಾಂತಿ, ಜೀವನಶಾಂತಿ, ಸಮಾಜಶಾಂತಿ, ಹಾಗೂ ಲೋಕಶಾಂತಿಗಳೆಂಬ ಅನುಗ್ರಹಗಳನ್ನು ತಮಗೆ ತಾವೇ  ಪಡೆದುಕೊಳ್ಳಲು ಸಾಧ್ಯವಾಗುವ, ಆ ‘ಮಹಾಜೀವನ’ ಮತ್ತು ‘ದಿವ್ಯಜ್ಞಾನ ಸನ್ನಿಧಿ’ ಎಂಬವುಗಳನ್ನು ಮಾನವ ಕುಲಕ್ಕೆ ಪರಿಚಯಿಸಿದ ಆ ಒಂದು ದೊಡ್ಡ ಸಂತೃಪ್ತಿಯೊಂದಿಗೆ, ಓಂದೇವ ಶಕ್ತಿಗಳ ಕೆಲಸಗಳು ಮುಗಿಯುವುದು. 

ಇನ್ನು, ಕೊನೆಯ ಪ್ರಶ್ನೆ – ನೀವು ನಿಮ್ಮ ಪೂರ್ತಿ ಬರಹ ಹಾಗೂ ವಿಚಾರಗಳ ವಿವರಣೆಗಳಿಂದ ಏನನ್ನು ಉದ್ದೇಶಿಸುತ್ತಿರಿ?

ಇದಕ್ಕೆ ಬಹಳ ಚುಟುಕಾಗಿ ಉತ್ತರಿಸುತ್ತೇನೆ. ಸರ್ವವೂ ಶಿಲಾಯುಗದಿಂದಲೇ ಹೋಗಿದೆ. ಅವುಗಳ ದೊಡ್ಡ ನಿಯಂತ್ರಣ ಇರುವ ಈ ಪರಿಸ್ಥಿತಿಯಲ್ಲಿ, ಮಾನವರು ತುಂಬಾ ಪ್ರಯತ್ನ ಪಟ್ಟರೆ ಮಾತ್ರ, ಮಾನವರಿಗೆ ಮನಶ್ಶಾಂತಿ, ಮನೆಶಾಂತಿ, ಜೀವನಶಾಂತಿ, ಲೋಕಶಾಂತಿ ಇತ್ಯಾದಿಗಳನ್ನು ಪಡೆಯಲು ಸಾಧ್ಯ. ಅದಕ್ಕಾಗಿ ಹೇಳುವುದು ಮೋಸದ ನಂಬಿಕೆಗಳು ಸೃಷ್ಟಿ ಮಾಡಿರುವ ಆ ದ್ವೇಷ, ಹಿಂಸೆ, ರಕ್ತಪಾತಗಳಿಂದ ಮಾನವರು ಹೊರಬರಬೇಕು ಎಂದು. ಸತ್ಯವು ನಂಬಿಕೆಯಿಂದ ಸಾವಿರ ಪಾಲು ಪವಿತ್ರ ಆದುದರಿಂದ ನಿರುಪದ್ರವಿ ನಂಬಿಕೆ, ಆಚಾರಗಳನ್ನು ಎಲ್ಲಾ ಧರ್ಮ ಪಂಥಗಳು ಮಾಡಿಕೊಂಡರೂ, ದೇವರು, ಧರ್ಮಗಳಲ್ಲಿ ಸತ್ಯದ ಹಿನ್ನೆಲೆಯ ವಿವರಣೆಗೆ ಹೆಚ್ಚು ಆದ್ಯತೆಯನ್ನು ನಾವು ಎಲ್ಲರೂ ಇನ್ನಾದರೂ ಕೊಡಬೇಕಾಗಿದೆ. ದೇವರು ಎಂದರೆ ಏನು ಮತ್ತು ಧರ್ಮ ಎಂದರೆ ಏನು ಎಂಬ ಪ್ರಶ್ನೆಗಳಿಗೆ ಎಲ್ಲಾ ಧರ್ಮ, ಪಂಥಗಳು ಒಟ್ಟಾಗಿ ಕುಳಿತು ಆಗಾಗ್ಗ  ಸತ್ಯಚಿಂತನೆ ನಡೆಸಿ ಕಂಡುಕೊಳ್ಳಬೇಕಾಗಿದೆ ಮತ್ತು ಜನಸಾಮಾನ್ಯರಲ್ಲಿ ಅದನ್ನು ಬಿತ್ತಬೇಕಾಗಿದೆ. ಹೀಗೆ ಮಾಡಿದಲ್ಲಿ ಮಾನವರ ಉಳಿಗಾಲ ಅಷ್ಟೆ. ಇಲ್ಲವಾದರೆ ಮುಂದೆ ಇರುವುದು ಮಾನವರ ಅಳಿವಿನ ಕಾಲ. ಇನ್ನು, ಮಾನವರು, ಜಾತಿಯಲ್ಲಿ ಮೇಲು, ಧರ್ಮದಲ್ಲಿ ಮೇಲು ಎಂಬ ಮೂರ್ಖತನದಿಂದ ಹೊರಗೆ ಬರಲೇಬೇಕು. ಯಾರು ಎಷ್ಟು ಬೇಕಾದರೂ ಮಾನವೀಯತೆ ಇರುವ ಆಚಾರ ನಂಬಿಕೆಗಳನ್ನು ಮಾಡಿಕೊಳ್ಳಲಿ, ಅದರಿಂದ ತೊಂದರೆ ಇಲ್ಲ. ಇನ್ನು, ಯಾವುದೇ ಸಂಸ್ಕೃತಿಯು, ಮಾನವರಲ್ಲಿ ಹೃದಯವೈಶಾಲ್ಯಯತೆಯನ್ನು ಉಳಿಸಿಕೊಳ್ಳುವುದಕ್ಕೆ ತೊಂದರೆ ಆಗದಿದ್ದರೆ ಅಥವಾ ಹೃದಯವೈಶಾಲ್ಯತೆಯನ್ನು ಬೆಳೆಸುವುದಕ್ಕೆ ಸಹಾಯಕವಾದರೆ, ಅವನ್ನು ಎಲ್ಲವನ್ನೂ ಉಳಿಸಿಕೊಳ್ಳಲಿ, ಆದರೆ “ನಮ್ಮ ದೇವರು ಮಾತ್ರ ಸರಿ, ನಮ್ಮ ಧರ್ಮದಲ್ಲಿ ಮಾತ್ರ ಸ್ವರ್ಗ, ಮೋಕ್ಷ ಇತ್ಯಾದಿಗಳು ಸಾಧ್ಯ ಬೇರೆ ಉಳಿದವು ಎಲ್ಲಾ ತಪ್ಪು” ಎಂದೆಲ್ಲ ಹೇಳುತ್ತಾ ಮತಾಂತರ ಇತ್ಯಾದಿಗಳ ಗುರಿಯಾಗಿಟ್ಟು ಮುಂದುವರಿಯುದಾದರೆ ಎಲ್ಲರಿಗೂ ಅಳಿವಿನ ಕಾಲ. ಅದಲ್ಲ, ಅವನ್ನು ನಿಲ್ಲಿಸುವುದಾದರೆ ಮಾತ್ರ ಮಾನವರಿಗೆ ಎಲ್ಲರಿಗೂ ಅದು ಉಳಿಗಾಲ ಆಗುವುದು. ಸೃಷ್ಟಿಕರ್ತನು ತನ್ನ ಎಲ್ಲಾ ಧರ್ಮಗಳ ತನ್ನ ಸ್ವಂತ ಮಕ್ಕಳಲ್ಲಿ “ನನ್ನ ಈ ಧರ್ಮಗಳನ್ನು ಲೋಕವೆಲ್ಲಾ ಹಬ್ಬಿಸಿ, ನನ್ನ ಲೋಕವನ್ನು ಈ ಭೂಮಿಯಲ್ಲಿ ತನ್ನಿರಿ” ಎಂದು ಎಲ್ಲಾ ಧರ್ಮಗಳನ್ನು ಧರ್ಮಯುದ್ಧಕ್ಕೆ ಹೊರಡಿಸಿದರೆ, ಅಲ್ಲಿ ಆಗುವುದು ಮಾತ್ರ, ಸರ್ವನಾಶದ ಆ ಧರ್ಮಗಳ ಲೋಕಮಹಾಯುದ್ಧ ಅಲ್ಲದೆ ಯಾವ ಧರ್ಮವೂ ಲೋಕವನ್ನು ಜಯಿಸುವುದಿಲ್ಲ ಖಂಡಿತ. ಇದು ಯಾಕೆಂದರೆ,  ಲೋಕವನ್ನು ಜಯಿಸಲು ಅಲ್ಲಿ ಯಾವ ಧರ್ಮವೂ ಉಳಿಯಲಾರದು ಅಷ್ಟೆ. ಈ ಬಹಳ ಚಿಕ್ಕ ತರ್ಕವನ್ನಾದರೂ ಮಾನವರು ಇಲ್ಲಿಯ ತನಕ ಅರಿಯದಾಗಿರುವುದು ಆ ಅನ್ಯಗ್ರಹಜೀವಿಗಳ ರಹಸ್ಯವಾಮಾಚಾರದ ನಂಬಿಕೆ ಎಂಬ ಆ ಭ್ರಮೆಯ ಶಕ್ತಿಯನ್ನು ಮಾತ್ರ ಎತ್ತಿ ತೋರಿಸುವುದು. ಇನ್ನಾದರೂ, ಆ ಭಯಾನಕ ಅತಿರಹಸ್ಯ ವಾಮಾಚಾರದ ವಂಚಕ ಸೂಕ್ಷ್ಮಶಕ್ತಿಗಳಿಂದ, ಮಾನವ ಕುಲವು ಪಾರಾಗಲಿ ಎಂಬ ಆ ಒಂದು ಆಶೆ ಮಾತ್ರ ಈ ನಿಮ್ಮ ಸಹೋದರನಿಗೆ ಇರುವುದು. ಇದುವೇ, ನನ್ನ ಸರ್ವ ಬರಹಗಳ ಹಾಗೂ ಸರ್ವಮಾತುಗಳ ಹಿಂದಿರುವ ಆ ನನ್ನ ಏಕೈಕ ಉದ್ದೇಶವಾಗಿದೆ.

ನಿಮಗೆ ಒಬ್ಬ ಸೃಷ್ಟಿಕರ್ತ ದೇವರು ಇರುವನೇ?

ನೋಡಿ, ನಾನು, ನಿಮ್ಮಲ್ಲಿ, ಶಿಲಾಯುಗದಿಂದಲೇ ಇರುವ ಅನ್ಯಗ್ರಹಜೀವಿಗಳ ಆ ಭಯಾನಕ ವಾಮಾಚಾರ ವ್ಯವಸ್ಥೆಯ ಋಣಾತ್ಮಕ ಪ್ರಭಾವಗಳ ಬಗ್ಗೆ ಸ್ಪಷ್ಟವಾಗಿ ಈ ಮೊದಲೇ ತಿಳಿಸಿದ್ದೇನೆ. ಇನ್ನು, ನಿಮಗೆ ನನ್ನ ಆದರ್ಶ ಸೃಷ್ಟಿಕರ್ತ ದೇವರ ಬಗ್ಗೆ ತಿಳಿಯಬೇಕಿದ್ದರೆ ಅದನ್ನು ಈಗ ವಿವರಿಸುವೆನು. ನನಗೆ, ಜ್ಞಾನದ ಬೆಳಕಲ್ಲಿ ಕಾಣಿಸುವ ಒಬ್ಬ ಆದರ್ಶ ಸೃಷ್ಟಿಕರ್ತನು ಇರುವನು ಎಂದು ಹೇಳುವೆನು. ಸತ್ಯದ ಹಿನ್ನೆಲೆಯಲ್ಲಿ ಸಂಕಲ್ಪಿಸುವ ಈ ಆದರ್ಶ ಸೃಷ್ಟಿಕರ್ತನು ಎಂದಿಗೂ ನಂಬಿಕೆಯ ಸೃಷ್ಟಿಕರ್ತನಲ್ಲ ಎಂಬುವುದನ್ನು ಮೊದಲಲ್ಲೇ ಹೇಳುವೆನು. ಇನ್ನು, ಈ ಸೃಷ್ಟಿಕರ್ತನು ಕೂಡಾ ಭೂಮಿತಾಯಿಯಂತೆ ಎದ್ದು ಬರಬೇಕಾಗಿಲ್ಲ, ನನ್ನಲ್ಲಿ ಮಾತನಾಡಬೇಕಾಗಿಲ್ಲ, ಆದರೆ ಆತನು ಮಾನವರೆಲ್ಲರ ಸೃಷ್ಟಿಕರ್ತ ಎಂಬ ಆ ಆದರ್ಶದ ಹಿನ್ನೆಲೆಯ ಸಂಕಲ್ಪದಲ್ಲಿ ಇರುವುದರಿಂದ, ಈ ಭೂಮಿಯ ಜನರು ಎಲ್ಲರೂ ಆತನ ಮಕ್ಕಳು ಆಗುವರು. ಹಾಗೆ ಆಗುವಾಗ, ಆತನಿಗೆ ಸಹಜವಾಗಿಯೂ ಆತನ ಉತ್ತಮ ಮಕ್ಕಳು ಭೂಮಿಯ ಎಲ್ಲಿ ಇದ್ದರೂ ಅವರ ಮೇಲೆ ಪ್ರೀತಿ ಇರುತ್ತದೆ, ಮತ್ತು ಕೆಟ್ಟ ಮಕ್ಕಳು ಎಲ್ಲಿ ಇದ್ದರೂ ಅವರ ಮೇಲೆ ಪ್ರೀತಿ ಇರುವುದಿಲ್ಲ. ಆ ನನ್ನ ಆದರ್ಶ ಸೃಷ್ಟಿಕರ್ತನನ್ನು ಈ ಭೂಮಿಯ ಯಾವುದೇ ವರ್ಗದ ಜನರು ತಮಗೆ ಮಾತ್ರ ಎಂದು ಕಟ್ಟಿಹಾಕಿ ಸಾಕಲು ಸಾಧ್ಯವಿಲ್ಲ. ಯಾರಿಗೂ ಆತನನ್ನು ತಮ್ಮ ಬೇಲಿಯೊಳಗಿನ ಜನರಿಗೆ ಮಾತ್ರ ಹಾಲು ಕೊಡುವ ಪ್ರಾಣಿಯ ತರ ಹೇಳಿಕೊಳ್ಳಲು ಸಾಧ್ಯವಿಲ್ಲ. ತನ್ನ ಸ್ವಂತ ಕೈಗಳಿಂದ, ಆಚಾರ, ನಂಬಿಕೆಗಳ ಆ ಸ್ವಾರ್ಥ-ಬೇಲಿಗಳ ಸಹಾಯದಿಂದ, ಅವನು ತನ್ನ ಭೂಮಿಯ ಮಕ್ಕಳನ್ನು ತಾನೇ ಬೇರ್ಪಡಿಸಲಾರ. ತನ್ನ ಸ್ವಂತ ಮಕ್ಕಳನ್ನು ತಮ್ಮೊಳಗೆ ದ್ವೇಷಿಸುವಂತೆಯೂ ಕೊಲ್ಲಿಸುವಂತೆಯೂ ಮಾಡುವ ಪಿಶಾಚಿ ಆತನು ಆಗಲಾರ. ತನ್ನ ಮನೆಯ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ತನ್ನ ಮಕ್ಕಳನ್ನು ಮತಾಂತರ ಮಾಡಿಸುವ ಮೂರ್ಖನು ಕೂಡಾ ಆ ನನ್ನ ಆದರ್ಶ ಸೃಷ್ಟಿಕರ್ತನು ಅಲ್ಲ. ಅತ್ಯಂತ ಕಡಿಮೆ ಎಂದರೆ, ಇಷ್ಟಾದರೂ ಬುದ್ಧಿ ಮತ್ತು ಕರುಣೆಯ ಹೃದಯವು ನನ್ನ ಸಂಕಲ್ಪದ ಆ ಆದರ್ಶ ಸೃಷ್ಟಿಕರ್ತನಿಗೆ ಇರುವುದು ಖಂಡಿತ. ಈ ಸೃಷ್ಟಿಕರ್ತ ದೇವರೇ, ನನ್ನ ಸಂಕಲ್ಪದ ಆ ಆದರ್ಶ ಸೃಷ್ಟಿಕರ್ತ ದೇವರು, ಮತ್ತು, ನಾನು, ಈ ರೀತಿಯಲ್ಲಿ, ಸರ್ವವ್ಯಾಪಿಯಾದ ಆ ಸೃಷ್ಟಿಕರ್ತನ ಸಂಕಲ್ಪವನ್ನು ಬೇಲಿವ್ಯಾಪಿಯನ್ನಾಗಿ ಮಾಡದಿರುವ ಕಾರಣ, ನಾನು ಒಬ್ಬ ಪರಿಪೂರ್ಣ ಆಸ್ತಿಕನಾಗುವೆನು. ಆತನ ಆರಾಧನೆಯ ವಿಚಾರ ಹೇಳುವುದಾದರೆ, ಮಾನವ ಹೃದಯಗಳಲ್ಲಿ ಆ ಪವಿತ್ರ ಹೃದಯವೈಶಾಲ್ಯತೆಯನ್ನು ಬೆಳೆಸಿಕೊಳ್ಳುವುದು ಆ ನನ್ನ ಸಂಕಲ್ಪದ ಸೃಷ್ಟಿಕರ್ತ ದೇವರ ಪವಿತ್ರ ಆರಾಧನೆಯ ರೀತಿ ಆಗುವುದು. ಇನ್ನು, ಆತನ ಸೇವೆಯ ಬಗ್ಗೆ ಹೇಳುವುದಾದರೆ, ‘ಆ ದೈವಿಕವಾದ ಹೃದಯವೈಶಾಲ್ಯತೆಯು ತಮ್ಮ ಮನೆಯ ಮತ್ತು ಜೀವನದ ಬೆಳಕಾಗಬೇಕು’ ಎಂದು ಕೇಳಿ ಬರುವವರಿಗೆ, ಆ ದೈವಿಕವಾದ ಹೃದಯವೈಶಾಲ್ಯತೆಯ ಜೀವನವನ್ನು ದೊರಕುವಂತೆ ಮಾಡುವಲ್ಲಿ ಸೇವೆಮಾಡುವುದೇ ಆ ನನ್ನ ಸಂಕಲ್ಪದ ದೇವರ ಸೇವೆಯಾಗುವುದು. ಇನ್ನು, ಈ ರೀತಿಯಲ್ಲದೆ, ಆ ಪವಿತ್ರ ಸೃಷ್ಟಿಕರ್ತ ಸಂಕಲ್ಪವನ್ನು, ಹಿಂಸೆಯ ಪಿಶಾಚಿಯ ರೀತಿಯಲ್ಲಿ ಚಿತ್ರಿಸುವ ಯಾವುದೇ ವಿವರಣೆಗಳನ್ನು ನಾನು ಎಂದಿಗೂ ಮಾಡಲಾರೆನು, ಯಾಕೆಂದರೆ, ದೇವರು ಎಂದಿಗೂ ದೇವರಾಗಿರಬೇಕು ಮತ್ತು ಆ ದೇವರು ಎಂದಿಗೂ ಪಿಶಾಚಿಯಾಗಬಾರದು. ನನ್ನ ಈ ಸಂಕಲ್ಪದ ಸೃಷ್ಟಿಕರ್ತನಿಗೆ ಹೆಸರು ಇಲ್ಲ, ಆದರೆ ಆತನು ಸತ್ಯ, ಪ್ರೀತಿ, ನೀತಿಯೇ ಆಗಿರುವನು. ಇನ್ನು, ಆತನನ್ನು ಸರ್ವಬೇಲಿಗಳನ್ನು ಮೀರಿರುವ ಸತ್ಯ, ಪ್ರೀತಿ, ನೀತಿ ಎಂದು ವಿವರಿಸುತ್ತಾ, ಯಾರಿಗೆ ಬೇಕಾದರೂ ಆತನನ್ನು, ಗೌರವದಿಂದ, ಅವರವರ ಇಷ್ಟದ ಯಾವ ಹೆಸರಲ್ಲಿ ಬೇಕಾದರೂ ಕರೆಯಬಹುದು. ಅದು ಹಾಗಾದರೆ, ಇನ್ನು, ಆತನ ಮೋಕ್ಷ ಮತ್ತು ಸ್ವರ್ಗವು, ಈ ಭೂಮಿಯ ಮಾನವರೆಲ್ಲರ ಶಾಂತಿ, ಪ್ರೀತಿ, ನೆಮ್ಮದಿಯ ಜೀವನ ಆಗಿರುವುದು. ಆತನ ಈ ಭೂಮಿಯೆಂಬ ಸ್ವರ್ಗವನ್ನು ಆ ನಿಜವಾದ ಶಾಂತಿ, ಪ್ರೀತಿಯ ಸ್ವರ್ಗವನ್ನಾಗಿ ಮಾಡುವುದೇ ಆತನ ಎಲ್ಲಾ ಮಾನವ ಮಕ್ಕಳ ಆ ದೊಡ್ಡ ಧರ್ಮ ಮತ್ತು ಆಧ್ಯಾತ್ಮವಾಗಿದೆ. ಆತನ ಹೆಸರಲ್ಲಿ ಈ ಭೂಮಿಯೆಂಬ ಸ್ವರ್ಗವನ್ನು ನರಕ ಮಾಡುವ ಯಾರು ಕೂಡಾ ಖಂಡಿತವಾಗಿಯೂ ಆಸ್ತಿಕರೇ ಅಲ್ಲ. ಮಾತ್ರವಲ್ಲ, ಅಂಥವರು, ಆ ನನ್ನ ಆದರ್ಶ ಸೃಷ್ಟಿಕರ್ತನ ಮಕ್ಕಳಾದ ಮಾನವ ಸಹೋದರರನ್ನು ವಿಭಜಿಸುವ ಮತ್ತು ವಂಚಿಸುವ ಭಯಾನಕ ಸ್ವಾರ್ಥದ ಆಸ್ತಿಕ-ನಾಸ್ತಿಕರಾಗುವರು! ಸೃಷ್ಟಿಕರ್ತನನ್ನು ಸಂಕಲ್ಪವಾಗಿ ತೆಗೆಯುವುದಾದರೆ, ಆತನ ಸ್ವಭಾವ ಪರಿಪೂರ್ಣವಾಗಿರಲೇಬೇಕು. ಆದಿಲ್ಲ, ಭೂಮಿಯ ಒಂದೊಂದು ಗುಂಪು ಜನರಿಗೆ ಮಾತ್ರ ಮೋಕ್ಷ ಅಥವಾ ಸ್ವರ್ಗ ಕೊಡುವ ಸೃಷ್ಟಿಕರ್ತನ ಬಗ್ಗೆ ನೀವು ಹೇಳುವುದಾದರೆ ಆ ಸೃಷ್ಟಿಕರ್ತನನ್ನು ನಾನು ಆದರ್ಶ ಸೃಷ್ಟಿಕರ್ತನಾಗಿ ಹೇಗೆ ಮತ್ತು ಯಾವ ಆಧಾರದ ಹಿನ್ನೆಲೆಯಲ್ಲಿ ಒಪ್ಪುವುದು ಎಂದು ದಯವಿಟ್ಟು ನೀವೇ ಹೇಳಬೇಕು.

ಪ್ರೀತಿಯೇ ದೇವರು, ಪ್ರೀತಿಯೇ ಆತನ ಧರ್ಮ, ಪ್ರೀತಿಯೇ ಆತನ ಕರುಣೆ, ಪ್ರೀತಿಯೇ ಆತನ ಅನುಗ್ರಹವಾಗಿದೆ. ಹೀಗಿರುವಾಗ, ಆ ನನ್ನ ಆದರ್ಶ ಸೃಷ್ಟಿಕರ್ತನ ಪವಿತ್ರ ಶುದ್ಧಪ್ರೀತಿಯೇ ಭೂಮಿಯಿಂದ ದ್ವೇಷ, ಹಿಂಸೆ, ರಕ್ತಪಾತಗಳನ್ನು ಎಂದೆಂದಿಗಾಗಿ ಇಲ್ಲದಂತೆ ಮಾಡಿ, ಅದ್ಭುತ ಧರ್ಮಸ್ಥಾಪನೆ ಮಾಡಿ, ಸತ್ಯಯುಗವನ್ನು ಧರೆಗೆ ಇಳಿಸಲು ಶಕ್ತವಾಗಿರುವ ಸೃಷ್ಟಿಕರ್ತ ಸಂಕಲ್ಪ ಆಗಿರುವುದು, ಅದಲ್ಲದೆ, ಬೇರೆ ಯಾವ ಸೃಷ್ಟಿಕರ್ತ ಸಂಕಲ್ಪಕ್ಕೂ ಬೇಲಿಯೊಳಗಿದ್ದು ಅದನ್ನು ಮಾಡಲು ಸಾಧ್ಯವಾಗದು ಎಂಬುವುದು ಪರಮ ಸತ್ಯವೂ ಆಗಿದೆ. ನನ್ನ ಸಹೋದರ ಸಹೋದರಿಯರೇ, ಇನ್ನಾದರೂ, ಆ ಕರುಣಾಮಯಿ ಸೃಷ್ಟಿಕರ್ತನನ್ನು ನಿಜವಾಗಿಯೂ ಕರುಣಾಮಯಿ ಆಗಿ ಚಿತ್ರಿಸಲು ಆರಂಭಿಸೋಣ. ಆಗಲೇ ನಾವು ಧರ್ಮ, ಪಂಥಗಳ ಬೇಲಿ ಭ್ರಾಂತಿಯಿಂದ ದೂರವಾಗಿ ನಮ್ಮ ನಮ್ಮ ಧರ್ಮ, ಪಂಥಗಳನ್ನು ದೈವೀಕವಾಗಿ ಶುದ್ಧೀಕರಿಸಲು ಸಾಧ್ಯವಾಗುವುದು.   ಈ ರೀತಿಯಲ್ಲಿ, ದ್ವೇಷ, ಹಿಂಸೆಗಳ ಈ ರಕ್ತಸಿಕ್ತ ಭೂಮಿಯನ್ನು ಸತ್ಯಯುಗದ ದೈವಿಕ ಶುದ್ಧಪ್ರೀತಿಯಿಂದ ತೊಳೆದು ಆನಂದದ ಸ್ವರ್ಗವನ್ನಾಗಿ ಮಾಡುವಲ್ಲಿ ಎಲ್ಲಾ ಧರ್ಮ, ಪಂಥಗಳು ಜಯಗಳಿಸುವಂತಾಗಲಿ, ಆ ರೀತಿಯಲ್ಲಿ, ಈ ಭೂಮಿಯ ಎಲ್ಲಾ ಧರ್ಮ, ಪಂಥಗಳಿಗೂ ಜಯವಾಗಲಿ ಎಂದು ಹಾರೈಸುವೆನು. ಮನಸ್ಸಿದ್ದರೆ ಮಾರ್ಗವಿದೆ.

ಮಹಾಜೀವನ ಎಂಬುವುದು ಕೂಡ ಒಂದು ಧರ್ಮ ಅಥವಾ ಪಂಥ ಆಗುವುದಿಲ್ಲವೇ?

ಒಳಿತು ಧರ್ಮ ಮತ್ತು ಕೆಡುಕು ಅಧರ್ಮವಾಗಿದೆ. ಇನ್ನುಳಿದ ಧರ್ಮಗಳು ಹಾಗೂ ಪಂಥಗಳು ಸಾಮಾನ್ಯವಾಗಿ ಬೇಲಿ-ಧರ್ಮ ಮತ್ತು ಬೇಲಿ-ಪಂಥಗಳೆಂದು ಹೇಳಬಹುದು. ಯಾಕೆಂದರೆ, ಅವುಗಳು ತಮ್ಮೊಳಗೆ ಬೇರೆ ಬೇರೆಯಾಗಿರಲು ಇಷ್ಟಪಡುವವು ಮತ್ತು ಎಂದೂ ಒಂದಾಗಲು ಇಷ್ಟಪಡುವುದಿಲ್ಲ! ಒಂದಾಗುವುದು ಎಂದರೆ, ಅವುಗಳ ಅಸ್ತಿತ್ವವನ್ನು ಅವುಗಳು ಕಳಕೊಳ್ಳುವುದು ಎಂದು ಅವು ತಿಳಿದುಕೊಂಡಿರುವವು. ಅದಕ್ಕಾಗಿ ಅವುಗಳು ತಮ್ಮ ಪ್ರತ್ಯೇಕತೆಯ ಬೇಲಿಗಳನ್ನು ಬಲಪಡಿಸುವುದರಲ್ಲೇ ತಮ್ಮ ಸರ್ವಶಕ್ತಿಯನ್ನು ಉಪಯೋಗಿಸುತ್ತಾ ಇರುವವು.  ಒಂದು ಧರ್ಮ ಅಥವಾ ಪಂಥದಲ್ಲಿ ಎರಡು ಮುಖ್ಯ ಘಟಕಗಳನ್ನು ಕಾಣಬಹುದು. ಅವಲ್ಲಿ ಒಂದು, ಅದರದ್ದೇ ಆಗಿರುವ ಮತ್ತು ಇತರ ಧರ್ಮ, ಪಂಥಗಳಿಗಿಂತ ಪ್ರತ್ಯೇಕತೆಯನ್ನು ತೋರಿಸುವ, ಆಚಾರ, ನಂಬಿಕೆಗಳು, ಇನ್ನೊಂದು, ಅದರ ವಾದವಾಗಿರುವುದು. ಅವುಗಳ ವಾದಗಳು ಎಲ್ಲವೂ, ‘ತಾವು ಬೇರೆ ಮತ್ತು ಶ್ರೇಷ್ಠ’ ಎಂದು ಹೇಳಿಕೊಳ್ಳುವ ರೀತಿಯಲ್ಲಿರುವವುಗಳಾಗಿವೆ. ಅಂದರೆ, ಅವು ತಮ್ಮ ಬೇಲಿಯೊಳಗಿದ್ದು, ತಮಗಾಗಿ, ಪಕ್ಷಪಾತದ ತರ್ಕವನ್ನು ಉಪಯೋಗಿಸುವವು ಎಂದು ಅರ್ಥ. ಆದರೆ, ಮಹಾಜೀವನದಲ್ಲಿ ಇವು ಯಾವುದು ಕೂಡಾ ಕಾಣಿಸುವುದಿಲ್ಲ. ಮಾತ್ರವಲ್ಲ, ಪಕ್ಷಪಾತದ ರೀತಿಯಲ್ಲಿ ಮಾಡುವ ವಾದದ ಬದಲು, ನಿಸ್ಪಕ್ಷಪಾತದ ತರ್ಕವನ್ನು ಅಲ್ಲಿ ಉಪಯೋಗಿಸುವುದು ಎಂದು ತಿಳಿಯಬೇಕು. ಅಷ್ಟು ಮಾತ್ರವಲ್ಲ, ವಿಜ್ಞಾನ, ಗಣಿತಗಳ ತರ, ಸರ್ವರಿಗೂ ಅನ್ವಯ ಆಗುವ ರೀತಿಯಲ್ಲಿ ಮಹಾಜೀವನ ಇರುವುದು. ಎಲ್ಲರಿಗೂ ಅನ್ವಯವಾಗುವುದರಲ್ಲಿ ಪ್ರತ್ಯೇಕತೆಯ ಬೇಲಿಗಳಿರುವುದಿಲ್ಲ ಖಂಡಿತ. ಆದುದರಿಂದ, ಮಹಾಜೀವನವು ಎಂದಿಗೂ ಒಂದು ಪ್ರತ್ಯೇಕ ಬೇಲಿ-ಧರ್ಮವೋ ಅಥವಾ ಬೇಲಿ-ಪಂಥವೋ ಆಗುವುದಿಲ್ಲ.

ನೀವು ಈ ಭೂಮಿಯ ಪಂಥಗಳು, ಧರ್ಮಗಳು, ದೇವರು, ಆಚಾರ, ನಂಬಿಕೆಗಳು ಇತ್ಯಾದಿ ಎಲ್ಲದರಲ್ಲೂ  ಅನ್ಯಗ್ರಹಜೀವಿಗಳ ಸ್ಪಷ್ಟ ಕೈವಾಡ ಶಿಲಾಯುಗದಿಂದಲೇ ಇದೆ ಎಂದು ಹೇಳುವಿರಿ. ಆದರೆ, ಇತ್ತ, ಧರ್ಮ, ಪಂಥಗಳು ಎಲ್ಲವೂ ಆ ಒಬ್ಬನೇ ಸೃಷ್ಟಿಕರ್ತನ ಬಗ್ಗೆ ಹೇಳುವಾಗ, ಧರ್ಮಗಳ ವಾದವು ಸರಿಯಾಗಲು ಸಾಧ್ಯತೆ ಇಲ್ಲವೇ?

ಈ ಪ್ರಶ್ನೆಯ ಉತ್ತರದ ತಾರ್ಕಿಕ ಅಂಶಗಳನ್ನು ಇಷ್ಟರಲ್ಲೇ ನಾನು ಸಾಕಷ್ಟು ಕೊಟ್ಟಾಗಿದೆ. ಅವನ್ನು ನನ್ನ ಹಿಂದಿನ ವೀಡಿಯೋ ಮತ್ತು ಜಾಲತಾಣದ ಬರಹಗಳಿಂದ ತಿಳಿದುಕೊಳ್ಳಿರಿ. ಈಗ, ಸ್ಪಷ್ಟತೆಗಾಗಿ, ಇನ್ನೂ ಸ್ವಲ್ಪ ಅವುಗಳ ಸಾಧ್ಯತೆಗಳ ಬಗ್ಗೆ ಹೇಳಬೇಕಾದರೆ, ಅದಕ್ಕೆ, ನಾವು ಈ ಪ್ರಪಂಚವನ್ನು ಒಮ್ಮೆ ಅವಲೋಕಿಸಬೇಕಾಗುವುದು. ಇಲ್ಲಿ, ಕೆಲವು ಅಂಶಗಳನ್ನು ನೋಡೋಣ, ಆಗ,  ಅವು ಸೃಷ್ಟಿಕರ್ತನ ಕೈವಾಡವನ್ನು ಸೂಚಿಸುವುದೋ ಅಥವಾ ಅನ್ಯಗ್ರಹಜೀವಿಗಳ ಕೈವಾಡವನ್ನು ಹೆಚ್ಚು ಸೂಚಿಸುವುದೋ ಎಂಬುವುದನ್ನು ನಿಮಗೆ ಸ್ವತಃ ಅಂದಾಜಿಸಿಕೊಳ್ಳಬಹುದು.

ನೋಡಿ, ಈ ಭೂಮಿಯ ಮನುಷ್ಯರ ಸೂಕ್ಷ್ಮದ ಅನುಭವಗಳು ಅಥವಾ ತತ್ವಶಾಸ್ತ್ರ ಇತ್ಯಾದಿಗಳನ್ನು ಒಟ್ಟಾಗಿ ತೆಗೆಯುವುದಾದರೆ, ಅವನ್ನು ಮುಖ್ಯವಾಗಿ ಎರಡಾಗಿ ವಿಭಾಗಿಸಬಹುದು. ಆ ಎರಡರಲ್ಲಿ ಒಂದು, ತಾರ್ಕಿಕ ತತ್ವಶಾಸ್ತ್ರ ಆಗಿದೆ. ಇನ್ನೊಂದು, ಪುರಾಣ ಕಥೆಗಳ ಹಿನ್ನೆಲೆಯಲ್ಲಿನ ನಂಬಿಕೆ ಮತ್ತು ಸೂಕ್ಷ್ಮದ ಅನುಭವಗಳು ಆಗಿವೆ. ಇವಲ್ಲಿ ಸೃಷ್ಟಿಕರ್ತನ ಬಗ್ಗೆ ಪುರಾಣ ಕಥೆಗಳು ನೂರಾರು ಇವೆ. ಅವೆಲ್ಲಾ ಪರಸ್ಪರ ವಿರುದ್ಧವಾಗಿವೆ ಮತ್ತು ಅವುಗಳ ಸೂಕ್ಷ್ಮದ ಅನುಭವಗಳು ಕೂಡಾ ವಿರುದ್ಧ ಆಗಿವೆ! ಅವು ಒಂದು ಇನ್ನೊಂದು ಸೃಷ್ಟಿಕರ್ತನ ಹೆಸರನ್ನು ಆಚಾರವನ್ನು ನಂಬಿಕೆಗಳನ್ನು ಹಾಗೂ ಧರ್ಮ, ಪಂಥಗಳನ್ನು ಒಪ್ಪುವುದಿಲ್ಲ. ಮಾತ್ರವಲ್ಲ, ಎಲ್ಲರೂ ನಂಬುವುದಾದರೆ, ಬರೇ ನಂಬುತ್ತಾ ಅವರವರ ಪಾಡಿಗೆ ಸುಮ್ಮನೆ ಕೂರುವ ಬದಲು, ಆ ತಂದೆಯಾದ ಏಕ ಸೃಷ್ಟಿಕರ್ತನಿಗಾಗಿ ತಮ್ಮೊಳಗೆ ‘ನಮ್ಮದು ಮಾತ್ರ ಸರಿ, ನಿಮ್ಮದು ತಪ್ಪು’ ಎಂದು ವಾದಿಸುವವು, ದ್ವೇಷಿಸುವವು, ಹಿಂಸಿಸುವವು ರಕ್ತಪಾತ ಮಾಡುವವು! ಇದು ಪುರಾಣ ಕಥೆಗಳ ಹಿನ್ನೆಯವರ ಆ ನಂಬಿಕೆಯ ರೀತಿ ಆಗಿರುವುದು. ಇನ್ನೊಂದು ರೀತಿ ಎಂದರೆ, ತಾರ್ಕಿಕ  ತತ್ವಶಾಸ್ತ್ರದ ರೀತಿಯಾಗಿದೆ. ನೋಡಿ, ಇಲ್ಲಿ ಗ್ರೀಕ್ ತತ್ವಶಾಸ್ತ್ರವಾಗಲಿ ಭಾರತದ ಹಿಂದೂ ಧರ್ಮದ ಆರು ಅತ್ಯಂತ ಮುಖ್ಯ ದರ್ಶನಗಳಾಗಲಿ ಅದೇ ರೀತಿ, ಬೌದ್ಧ ಧರ್ಮ ಆಗಲಿ ಜೈನ ಧರ್ಮಗಳಾಗಲಿ ಸೃಷ್ಟಿಕರ್ತ ದೇವರ ಅಸ್ತಿತ್ವವನ್ನು ಒಪ್ಪಲಿಲ್ಲ. ಅವು ಅದಕ್ಕೆ ಹಲವು ತರ್ಕಯುಕ್ತ ಕಾರಣಗಳನ್ನು ಕೊಡುವವು. ಇನ್ನು ಪೌರಾಣಿಕರಿಗೆ ಪ್ರತ್ಯೇಕವಾಗಿ ತಮಗೆ ತಾವೇ ಮಾಡಿಕೊಂಡಿರುವ ದರ್ಶನಗಳು ಅಥವಾ ತತ್ವಶಾಸ್ತ್ರಗಳು ಇರುವವು, ಅವು, ಖಂಡಿತವಾಗಿಯೂ, ಆ ನಂಬಿಕೆಗಳ ಪುರಾಣ ಕಥೆಗಳನ್ನು ಮುಂದಿಟ್ಟು ಮಾಡಿರುವುದರಿಂದ, ಅಲ್ಲಿ ಅವು ತರ್ಕವನ್ನು ಯಾವ ರೀತಿಯಲ್ಲಿ ಮಾಡಲು ಪ್ರಯತ್ನ ಪಟ್ಟರೂ, ಅವು ತರ್ಕವೇ ಆಗುವುದಿಲ್ಲ,  ಮತ್ತು ಈ ಕಾರಣದಿಂದಲೇ, ಅವುಗಳು ಅವರವರ ಸೃಷ್ಟಿಕರ್ತನನ್ನು ಮಾತ್ರ ಒಪ್ಪುತ್ತವೆ ಅಷ್ಟೆ. ಇನ್ನು, ಅಂಥ ಪೌರಾಣಿಕ ತತ್ವ ಸಿದ್ಧಾಂತಗಳನ್ನು ಹೇಳುವವರಲ್ಲಿ ಒಂದು ಪ್ರಶ್ನೆಯನ್ನು ಹಾಕಿರಿ, ಅದುವೇ, ಸೃಷ್ಟಿಕರ್ತನನ್ನು ಕರೆಯುವ ನಿಮ್ಮ ಧರ್ಮದ ದೇವರ ಹಲವು ಹೆಸರಿನೊಂದಿಗೆ ಇತರ ಧರ್ಮಗಳ ಸೃಷ್ಟಿಕರ್ತನ ಹೆಸರುಗಳನ್ನು ಕೂಡಾ ಸೇರಿಸೋಣ ಎಂದು ಎಲ್ಲಾ ಧರ್ಮದವರಲ್ಲೂ ಕೇಳಿರಿ. ಆಗ ಅಲ್ಲಿಂದ ಎಲ್ಲರೂ ಕಾಲುಕೀಳುತ್ತಾರೆ. ಆಗ ಗೊತ್ತಾಗುತ್ತದೆ ಅವರ ಆ ನಿಜವಾದ ತತ್ವಸಿದ್ಧಾಂತ.  ನೋಡಿ, ಕಣ್ಣು ಮುಚ್ಚಿ ನಂಬುವ ರೀತಿಯಲ್ಲಿ ಇನ್ನು ತರ್ಕ ಮಾಡಲು ಏನು ಉಳಿದಿರುವುದು ಮತ್ತು ಅದರಲ್ಲಿ ಏನು ಸಿದ್ಧಾಂತ? ಹೀಗಿದೆ ನೋಡಿ, ಸೃಷ್ಟಿಕರ್ತ ದೇವರ ಬಗ್ಗೆ ಇದುವರೆಗಿನ ಚರಿತ್ರೆ. ಈಗ, ತನ್ನ ಸ್ವಂತ ಮಾನವ ಮಕ್ಕಳನ್ನು ತಮ್ಮೊಳಗೆ ದ್ವೇಷಿಸುವಂತೆ, ಹಿಂಸಿಸುವಂತೆ, ರಕ್ತಪಾತ ಮಾಡುವಂತೆ, ತನ್ನದೇ ಆ ವಿರುದ್ಧ ಧರ್ಮ, ಪಂಥ, ಆಚಾರ, ನಂಬಿಕೆಗಳ ಹಿನ್ನೆಲೆಯಲ್ಲಿ ಮಾಡಿರುವುದು, ಅದು ಆ ಕರುಣಾಮಯಿ ಸೃಷ್ಟಿಕರ್ತನ ಕೈವಾಡ ಆಗಿರಬಹುದೇ ಅಥವಾ ಸ್ವಾರ್ಥ ಲಾಭಯಕ್ಕಾಗಿ, ಮಾನವರನ್ನು ಶಿಲಾಯುಗದಿಂದಲೇ ಶೋಷಿಸುತ್ತಾ ಬರುವ ಆ ಅನ್ಯಗ್ರಹಜೀವಿಗಳ ರಹಸ್ಯ ಯೋಜನೆಗಳ ಕೈವಾಡದ ಆಗಿರಬಹುದೇ ಎಂಬುವುದನ್ನು ನಿಮಗೆ ಸ್ವತಃ ಅಂದಾಜಿಸಬಹುದಾಗಿದೆ.

ಧರ್ಮ, ಪಂಥಗಳಿಗೆ ಅವುಗಳದೇ ಆಗಿರುವ ಹಿನ್ನೆಲೆ ಸಂಸೃತಿಗಳು ಇವೆಯಲ್ಲ, ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಜಗತ್ತಿನ ಯಾವುದೇ ದೇಶ, ಧರ್ಮ, ಪಂಥವಾದರೂ, ಅವುಗಳ ಆ ಹಿನ್ನೆಲೆಯ ಸಂಸ್ಕೃತಿಗಳು ಮಾನವೀಯತೆಗೆ ವಿರುದ್ದವಾಗಿದ್ದರೆ ಅವು ಕಾಡು ಸಂಸ್ಕೃತಿಗಳು ಆಗುವವು. ಇನ್ನು, ಅದಲ್ಲವಾದಲ್ಲಿ, ಅವುಗಳ ಬಗ್ಗೆ ಪರಸ್ಪರ ಹೊಡೆದಾಡದೆ ಗೌರವಿಸಿಕೊಳ್ಳಬಹುದು.

ನೋಡಿ, ಮೂಲದಲ್ಲಿ ನಾವೆಲ್ಲಾ ಕಾಡು ಜನಾಂಗದವರು ಎಂಬುವುದು ಸ್ಪಷ್ಟ. ಇನ್ನು, ಇಂದಿನ ಕಾಲದ ಮಟ್ಟಿಗೆ ಹೇಳುವುದಾದರೆ, ಅಲ್ಲಿ ಲೆಕ್ಕಕ್ಕೆ ಬರುವುದು ಒಬ್ಬ ವ್ಯಕ್ತಿಯ ಬರೇ ವ್ಯಕ್ತಿತ್ವ ಮಾತ್ರವಾಗಿದೆ, ಸಂಸ್ಕೃತಿ ಇತ್ಯಾದಿಗಳಲ್ಲ. ಅಂದರೆ, ಯಾವುದೇ ಒಂದು ವ್ಯಕ್ತಿತ್ವವು ಸಮಾಜದ ‘ಉತ್ತಮರಾದ ಜನರನ್ನು’ ದ್ವೇಷಿಸುವುದೋ ಅಥವಾ ಪ್ರೀತಿಸುವುದೋ ಎಂಬುವುದಾಗಿರುವುದು ಅಲ್ಲಿ ಇರುವ ಆ ಒಂದೇ ಒಂದು ಪರೀಕ್ಷೆ ಎಂದು ಅರ್ಥ. ಒಟ್ಟಲ್ಲಿ, ವ್ಯಕ್ತಿಯಾಗಿದ್ದು, ಕುಟುಂಬದೊಳಗಿದ್ದು, ಜಾತಿಯೊಳಗಿದ್ದು, ಪಂಥದೊಳಗಿದ್ದು, ಧರ್ಮದೊಳಗಿದ್ದು, ಇತ್ಯಾದಿಗಳ ಹಿನ್ನೆಲೆಯೊಳಗಿದ್ದು ತನ್ನ ವ್ಯಕ್ತಿತ್ವವು ‘ಉತ್ತಮರನ್ನು ಅವರು ಎಲ್ಲಿ ಇದ್ದರೂ ಪ್ರೀತಿಸುವುದೋ ಅಥವಾ ದ್ವೇಷಿಸುವುದೋ’ ಎಂದು ಸ್ವತಃ ತನಗೆ ತಾನೇ ಪರೀಕ್ಷಿಸಿಕೊಳ್ಳ- ಬಹುದಾಗಿದೆ. ಆಗ, ಆ ವ್ಯಕ್ತಿಗೆ ಸಿಗುವ ಉತ್ತರವು ‘ಉತ್ತಮರು ಎಲ್ಲೇ ಇದ್ದರೂ ಅವರನ್ನು ನನ್ನ ಮನಸ್ಸು ಪ್ರೀತಿಸುವುದು’ ಎಂದಾದರೆ, ಆ ವ್ಯಕ್ತಿಯು, ಧರ್ಮ, ದೇವರ ಬಗ್ಗೆ ಮಾತಾಡಲು ಅರ್ಹನು, ಆದರೆ, ಆ ವ್ಯಕ್ತಿಗೆ ಸಿಗುವ ಉತ್ತರವು ಅದಲ್ಲವಾದರೆ, ಆತನು ಅವುಗಳ ಬಗ್ಗೆ ಮಾತನಾಡಲು ಅರ್ಹನಲ್ಲ ಎಂದಾಗುವನು. ಅಂದರೆ ಸಂಸ್ಕೃತಿ ಇತ್ಯಾದಿಗಳ ಬಗ್ಗೆ ಆ ವ್ಯಕ್ತಿಯು ಹೇಳಿಕೊಂಡರೂ, ಆ ವ್ಯಕ್ತಿಯು ಸುಸಂಸ್ಕೃತನಲ್ಲ ಎಂದಾಗುವುದು. ಅಂದರೆ, ಆ ವ್ಯಕ್ತಿ ಶಾರೀರಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ, ಈಗಲೂ ವಿಕಾಸಹೊಂದದೆ, ಆ ಪ್ರಾಚೀನ ಕಾಡು ರೀತಿಯ ಜೀವನದಲ್ಲೇ ಜೀವಿಸುವವನಾಗುವನು ಎಂದು ಅರ್ಥ! ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯು, ದೇವರು, ಧರ್ಮ ಇತ್ಯಾದಿಗಳು ಏನೆಂದು ಇನ್ನೂ ಅರಿಯದ ಆ ಅಪಾಯಕಾರಿ ವ್ಯಕ್ತಿ ಕೂಡಾ ಆಗುವನು. ಪ್ರೀತಿಯೇ ದೇವರು, ಪ್ರೀತಿಯೇ ಧರ್ಮವು, ಪ್ರೀತಿಯೇ ಸಾಂತ್ವನ, ಪ್ರೀತಿಯೇ ಜೀವನ. ಮುಗಿಯಿತು, ಇದರಲ್ಲಿ ಎಲ್ಲವೂ ಅಡಗಿರುವುದು. ಇನ್ನೂ ಹೆಚ್ಚಿನ ವಿವರಣೆಗಳು ಬೇಕಾಗುವುದಿಲ್ಲ.

“ಉತ್ತಮ ಸಂಸ್ಕಾರ ಬೇಕು” ಎಂದು ಜನರು ಹೇಳುವುದನ್ನು ಕೇಳಿರುವೆನು. ಉತ್ತಮ ಸಂಸ್ಕಾರಕ್ಕೂ ಉತ್ತಮ ಸ್ವಭಾವಕ್ಕೂ ವ್ಯತ್ಯಾಸ ಇದೆಯೇ?

ಸಂಸ್ಕೃತಿಯು ಒಂದು ಪ್ರದೇಶದ ಜನತೆಗೆ ಸಾಮಾನ್ಯವಾಗಿರುವ ಆಹಾರಪದ್ಧತಿ, ವಸ್ತ್ರಧಾರಣೆ, ಜೀವನರೀತಿ, ಇತ್ಯಾದಿಗಳನ್ನು ಒಟ್ಟಾಗಿ ಪ್ರತಿಬಿಂಬಿಸುವುದು. ಆದರೆ, ಸಂಸ್ಕಾರ ಎಂಬುವುದು ಒಂದು ಜಾತಿ, ಪಂಥ, ಪರಂಪರೆ, ಧರ್ಮ, ಇತ್ಯಾದಿಗಳ ಆ ವ್ಯತ್ಯಸ್ಥ ನಂಬಿಕೆ, ಆಚಾರಗಳ ಹಿನ್ನೆಲೆಯಲ್ಲಿ ಮನುಷ್ಯ ಸ್ವಭಾವವನ್ನು ನಿರೂಪಿಸುವ ಪ್ರಯತ್ನವಾಗಿದೆ. ಸಂಸ್ಕಾರ ಎಂಬುವುದರಲ್ಲಿ ಇರುವ ತೊಂದರೆ ಎಂದರೆ, ಅವು ಹೃದಯವೈಶಾಲ್ಯತೆ ಇಲ್ಲದ ತರದಲ್ಲಿ, ನಂಬಿಕೆ ಆಚಾರಗಳ ಮಿಶ್ರಣಗಳ ಒಳಗಿಂದ ಮೂಡಿರಬಹುದು, ಮಾತ್ರವಲ್ಲ, ಅವು, ಜಾತಿ, ಪಂಥ, ಧರ್ಮ, ಎಂದು ಎಲ್ಲದಕ್ಕೂ ಬೇರೆ ಬೇರೆ ಆಗಿರುವ ಕಾರಣ, ತಮ್ಮದು ಶ್ರೇಷ್ಠ ಎಂಬ ಭಾವ ಅಲ್ಲಿ ಸೃಷ್ಟಿಯಾಗಬಹುದು ಮತ್ತು ತಮ್ಮೊಳಗೆ ದ್ವೇಷಿಸಲ್ಪಡಬಹುದು. ಇನ್ನು, ಈ ದ್ವೇಷ ಮುಂದುವರಿದು ಏನೂ ಸಂಭವಿಸಬಹುದು. ಆದರೆ, ಉತ್ತಮ ಸ್ವಭಾವವು, ಜಾತ್ಯಾತೀತವಾಗಿದ್ದು, ಅವು ಮನುಷ್ಯರ ಹೃದಯವೈಶಾಲ್ಯತೆಯ ಹಿನ್ನೆಲೆಯಲ್ಲಿ ಮಾತ್ರ ಹುಟ್ಟಿಬರುವುದರಿಂದ, ಅವುಗಳೇ ನಿಜವಾಗಿ ಎಲ್ಲಕ್ಕಿಂತಲೂ ಮಿಗಿಲಾಗಿರುವುದು ಮತ್ತು ಮಾನವರಿಗೆ ಅನಿವಾರ್ಯವಾಗಿ ಬೇಕಾಗಿರುವುದು. ಅದು ಇದ್ದ ಜನರ ಮನ, ಮನೆ, ಸಮಾಜಗಳು ಅತ್ಯುತ್ತಮ ಮತ್ತು ಶಾಂತಿ, ಪ್ರೀತಿಗಳಿಂದ ತುಂಬಲ್ಪಡುವವು. ಮಹಾಜೀವನವು ಇದೇ ಸೇವೆಯನ್ನು ಮಾಡುವುದು. ಅದು, ಮನ, ಮನೆ, ಸಮಾಜ, ಲೋಕ ಶಾಂತಿಗಳಿಗಾಗಿ, ಉತ್ತಮ ಸ್ವಭಾವವನ್ನು ಹೊಂದಿರುವ ಮನೆಮನೆಯ ಮಹಾತ್ಮರನ್ನು ಸೃಷ್ಟಿಸಲು ಪ್ರಯತ್ನಿಸುವುದು ಎಂಬುವುದನ್ನು ತಿಳಿಯಬೇಕು.

1. ನೀವು, ಸೃಷ್ಟಿಕರ್ತ ದೇವರನ್ನು ಒಪ್ಪುವಿರಾ?
2. ಈಗಿರುವ, ನಂಬಿಕೆ ಹಿನ್ನೆಲೆಯ ಸೃಷ್ಟಿಕರ್ತನಿಗೆ ಮತ್ತು ಸತ್ಯದ ಹಿನ್ನೆಲೆಯ ಸೃಷ್ಟಿಕರ್ತನಿಗಿರುವ ವ್ಯತ್ಯಾಸವೇನು?

ಸೃಷ್ಟಿಕರ್ತ ದೇವರು ಒಬ್ಬನೆ ಆದಲ್ಲಿ, ಅವನ ಹೆಸರು ಹೇಳಿ ಸೃಷ್ಟಿಕರ್ತನನ್ನು ನಂಬುವ ಎಲ್ಲಾ ಧರ್ಮ, ಪಂಥಗಳು ಒಟ್ಟಿಗೆ ಕುಳಿತು ಆತನನ್ನು ಆರಾಧನೆ ಮಾಡಬೇಕಾಗುವುದು. ‘ನಾವು ಬೇರೆ ನೀವು ಬೇರೆ’ ಎಂದು ವಾದ ಮಾಡುವುದು ಎಂದಿಗೂ ಸಾಧ್ಯವಿಲ್ಲ. ಮಾತ್ರವಲ್ಲ, ನಂಬಿಕೆ, ಆಚಾರಗಳು ತಮ್ಮೊಳಗೆ ಪೂರಕ ಆಗಬಹುದು ಹೊರತು, ವಿರುದ್ಧ ಎಂದು ಆಗಲು ಎಂದಿಗೂ ಸಾಧ್ಯವೇ ಇಲ್ಲ. ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲ, “ಮೋಕ್ಷ, ಸ್ವರ್ಗಗಳು ಈ ಒಂದು ಧರ್ಮದಲ್ಲಿ ಮಾತ್ರ ಸಾಧ್ಯ ಇತರ ಧರ್ಮಗಳಲ್ಲಿ ಸಾಧ್ಯವಿಲ್ಲ” ಎಂದು ಸೃಷ್ಟಿಕರ್ತ ದೇವರು ಹೇಳಿರುವುದಾಗಿ ಧರ್ಮಗಳು ಹೇಳಿಕೊಳ್ಳುವುದು ಎಂದಿಗೂ ಸಾಧ್ಯವಿಲ್ಲ. ಇನ್ನು, ಆ ಒಬ್ಬನೇ ಸೃಷ್ಟಿಕರ್ತನು ಇದ್ದಲ್ಲಿ ಆತನು ಆತನ ಹೆಸರಲ್ಲಿ ದ್ವೇಷ, ಹಿಂಸೆ, ರಕ್ತಪಾತ ಆಗುವುದನ್ನು ಯಾವ ಕಾಲಕ್ಕೂ ಒಪ್ಪಲಾರನು. ಆತನು ಪರೀಕ್ಷೆ ಮಾಡುವುದು ಎಂದು ಹೇಳುವುದಾದರೂ, ಅಲ್ಲಿಯೂ, ಅದು ಜೀವನದಲ್ಲಿ ಒಬ್ಬಾತನು ಎಷ್ಟು ಸ್ವಾರ್ಥಿಯಾಗಿ ಬದುಕುವನು ಎಂಬಲ್ಲಿ ಮಾತ್ರ ಪರೀಕ್ಷೆ ಮಾಡುವನಷ್ಟೆ ಹೊರತು ತನ್ನ ಹೆಸರಲ್ಲೇ ತನ್ನ ಮಕ್ಕಳನ್ನು ತಮ್ಮೊಳಗೆ ಹೊಡೆಸಿ ಸಾಯಿಸುವ, ಒಬ್ಬ ನೀಚ ಹಿಂಸಾರಸಿಕನ ತರ, ಸ್ವಂತ ಮಕ್ಕಳನ್ನು ವಿಭಜಿಸಿ ಹಿಂಸೆಗೆ, ಕೊಲೆಗೆ ಪ್ರಚೋಧಿಸುವ ಕೆಲಸವನ್ನು ಮಾಡಲಾರನು ಖಂಡಿತ. ಯಾಕೆಂದರೆ, ಎಲ್ಲಾ ಮಾನವರು ಆತನ ಮಕ್ಕಳು. ಹೀಗಿರುವಾಗ, ಆದಿಯಿಂದಲೇ ಸೃಷ್ಟಿಕರ್ತನ ಹೆಸರಲ್ಲಿ ಯಾಕಾಗಿ ಭೀಕರ ದ್ವೇಷ, ಹಿಂಸೆ, ರಕ್ತಪಾತವಾಗುತ್ತಾ ಬಂದಿವೆ? ಹೀಗಿರುವಾಗ, ಇಲ್ಲೆಲ್ಲಾ ಸೃಷ್ಟಿಕರ್ತನ ಅಸ್ತಿತ್ವ ಕಾಣಿಸುವುದೇ ಇಲ್ಲ. ಮಾತ್ರವಲ್ಲ, ಸೃಷ್ಟಿಕರ್ತನು, ಆತನ ಧರ್ಮ, ಆತನ ಲೋಕ, ಅಥವಾ ಆತನ ಸ್ವರ್ಗ, ಇತ್ಯಾದಿಗಳ ಬಗ್ಗೆ ಕಾಡಿನಿಂದ ಹಿಡಿದು, ಈ ಕೊನೆಯ ಕೆಲವು ಸಾವಿರ ವರುಷಗಳ ಹಿಂದಿನ ತನಕ, ಆ ಹಲವು ಲಕ್ಷ ವರುಷಗಳಲ್ಲಿ, ತನ್ನದೇ ಮಕ್ಕಳಿಗೆ ಯಾಕಾಗಿ ಹೇಳಿಲ್ಲ ಮತ್ತು ಅದನ್ನು ಯಾಕಾಗಿ ಮುಚ್ಚಿಟ್ಟಿದ್ದನು? ಅವರೆಲ್ಲ ಆತನ ಮಕ್ಕಳಲ್ಲವೆ? ಯಾಕೆ ಅದುವರೆಗೂ ಸೃಷ್ಟಿಕರ್ತನು ಹೊರಗೆ ಬಾರದೆ ಕೂತನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲದ ಕಾರಣ ನಾನು ವ್ಯಯಕ್ತಿಕವಾಗಿ ಸೃಷ್ಟಿಕರ್ತನ ನಿಜ ಅಸ್ತಿತ್ವವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ. ಆದರೆ ನಾನು ಆದರ್ಶ ಸೃಷ್ಟಿಕರ್ತನನ್ನು ಒಪ್ಪುವೆನು. ಆ ಸೃಷ್ಟಿಕರ್ತನು, ಅನ್ಯಗೃಹಜೀವಿಗಳು ಸೃಷ್ಟಿಕರ್ತನ ಹೆಸರಲ್ಲಿ ಮಾಡುತ್ತಾ ಬಂದಿರುವ ಆ ಎಲ್ಲಾ ತರದ ವಂಚನೆಗೆ ವಿರುದ್ಧವಾಗಿರುವ, ಮಾನವರು ಎಲ್ಲರನ್ನು ಪ್ರೀತಿಯಿಂದ ಒಂದಾಗಿಸುವ, ಆ ಪವಿತ್ರ ಸೃಷ್ಟಿಕರ್ತ ದೇವರ ಸಂಕಲ್ಪವಾಗಿದೆ. ಎಲ್ಲಿ ಮಾನವರು ವಿಭಜಿಸಲ್ಪಡುವರೋ ಅಲ್ಲಿ ಈ ಸೃಷ್ಟಿಕರ್ತನು ಇರುವುದಿಲ್ಲ. ಆದರೆ ಆತನು ತನ್ನ ಮಕ್ಕಳಲ್ಲಿ ಬರೇ ಎರಡು ವರ್ಗಗಳನ್ನು ಮಾತ್ರ ಇಟ್ಟುಕೊಂಡಿರುವನು. ಅವು, ಉತ್ತಮರು ಮತ್ತು ದುಷ್ಟರು. ಯಾವುದೇ ಬೇಲಿ ಭಾವನೆ ಇಲ್ಲದೆ “ಎಲ್ಲರೂ ಚೆನ್ನಾಗಿ ಬಾಳಲಿ” ಎಂಬ ಭಾವನೆಯಲ್ಲಿ ಜೀವಿಸುವ ಮಾನವರು ಆ ಉತ್ತಮರು ಆಗಿರುವರು. ಈ ಆದರ್ಶ ಸೃಷ್ಟಿಕರ್ತನ ಲೋಕ ಅಥವಾ ಸ್ವರ್ಗವು ಈ ಭೂಮಿಯೆಂಬ ಭೂಸ್ವರ್ಗವಾಗಿರುವುದು. ಈ ಭೂಸ್ವರ್ಗದಲ್ಲಿರುವ ಆನಂದ, ಶಾಂತಿಗಳೆಂದರೆ, ಅವು, ಮನಶ್ಶಾಂತಿ, ಮನೆಶಾಂತಿ, ಲೋಕಶಾಂತಿಗಳಾಗಿವೆ. ಇಲ್ಲಿಯ ಆ ದಿವ್ಯಬೆಳಕು ಎಂದರೆ ಅದು ಸತ್ಯ ಮತ್ತು ಶುದ್ಧಪ್ರೀತಿಗಳ,  “ನಮ್ಮದು ಶ್ರೇಷ್ಠ ಬೇಲಿ” ಎಂಬ ಬೇಲಿ ಧರ್ಮ, ಪಂಥಗಳ ಕುರುಡುತನವನ್ನು ನೀಗುವ, ಆ ಜ್ಞಾನದ ದಿವ್ಯ ಬೆಳಕಾಗಿರುವುದು. ಈ ಮೇಲಿನ ಹಿನ್ನೆಲೆಯಲ್ಲಿ, ನಾನು ಧರ್ಮಗಳ ಆ ಬೇಲಿಯೊಳಗೆ ಇರುವ ಮತ್ತು ಬೇಲಿಗಳನ್ನು ಪ್ರೋತ್ಸಾಹಿಸುವ ಆ ಹಲವು ಸೃಷ್ಟಿಕರ್ತರುಗಳನ್ನು ಒಪ್ಪುವ ಬದಲು ಆ ಏಕ ಆದರ್ಶ ಸೃಷ್ಟಿಕರ್ತನನ್ನು ಒಪ್ಪುವೆನು ಎಂದು ಉತ್ತರ ಹೇಳುವೆನು. ಈ ಆದರ್ಶ ಸೃಷ್ಟಿಕರ್ತ ಸಂಕಲ್ಪವು, ತಮ್ಮ ತಮ್ಮ ಮನಬಂದಂತೆ ನಂಬುವ ಆ ನಂಬಿಕೆಯ ಹಿನ್ನೆಲೆಯ ಸೃಷ್ಟಿಕರ್ತ ಸಂಕಲ್ಪ ಅಲ್ಲ, ಬದಲು, ಸೃಷ್ಟಿಕರ್ತನ ಸಂಕಲ್ಪ ಇದ್ದಲ್ಲಿ, ಆ ಸಂಕಲ್ಪವು ಇರಲೇಬೇಕಾದ ಆ ಸತ್ಯದ ಹಿನ್ನೆಲೆ ಎಂಬಲ್ಲಿನ ದೇವಸಂಕಲ್ಪವಾಗುವುದು. ಆಗ, ಜಗತ್ತು, ಸೃಷ್ಟಿಕರ್ತನ ಬಗೆಗೆ ಹೇಳುವ ವಿರುದ್ಧ ನಂಬಿಕೆಗಳ ಆ ನಂಬಿಕೆ-ಆಸನಗಳಿಂದ ಸೃಷ್ಟಿಕರ್ತನನ್ನು ಎಬ್ಬಿಸಿ, ಆತನನ್ನು ಆ ಎಲ್ಲಾ ಧರ್ಮ, ಪಂಥಗಳಿಗೂ ಒಂದೇ ಆಗಿರುವ ಮತ್ತು ಪವಿತ್ರವಾದ ಸತ್ಯದ ಸಿಂಹಾಸನದಲ್ಲಿ ಕೂರಿಸಿದಂತಾಗುವುದು! ಬರೇ ನಂಬಿಕೆಯ ಆಧಾರದಲ್ಲಿ ಮಾತ್ರ ‘ಇದೆ’ ಎಂದು ತಿಳಿದಿರುವ ಆ ಮೋಕ್ಷ, ಸ್ವರ್ಗ ಎಂಬುವುದರ ಲಾಭಕ್ಕಾಗಿ, ಈ ಭೂಮಿಯನ್ನು ಹಲವು ತರದ ನರಕಯಾತನೆಗಳಿಗೆ ತಳ್ಳುವ ಧರ್ಮ, ಪಂಥಗಳ ಆ ದ್ವೇಷ, ಹಿಂಸೆ, ರಕ್ತಪಾತಗಳು ಆಗ ತಾನಾಗಿ ನಿಂತುಬಿಡುವವು. ಆಗಲೇ, ಎಂದಿಗೂ ನಂದದ, ಆ ಆನಂದದ ಸತ್ಯಯುಗವು ಉದಯಿಸಿಬರುವುದು.

ಯಾರಾದರೂ ಒಬ್ಬರು ಹಿಂದೆ ಮಾಡುತ್ತಿದ್ದ ಒಂದು ಆಚಾರವನ್ನು ನಿಲ್ಲಿಸಿದರೆ, ಆ ವ್ಯಕ್ತಿಗೆ, ಆಚಾರ ಮಾಡದಿರುವ ಕಾರಣ, ಆ ಶಕ್ತಿಯ ಕೋಪ ಉಂಟಾಗಿ ತೊಂದರೆ ಆಗಬಹುದೇ?

ನೋಡಿ, ಒಂದು ಧರ್ಮದ ಮುಖ್ಯ ದೇವರನ್ನು ಬಿಟ್ಟು ಮತಾಂತರವಾಗಿ ಇನ್ನೊಂದು ಧರ್ಮಕ್ಕೆ ಹೋದವರು ಲಕ್ಷಗಟ್ಟಲೆ ಜನ ಈ ಭೂಮಿಯಲ್ಲಿ ಆಗಿ ಹೋಗಿರುವರು, ಮತ್ತು ಈಗ ಈ ಭೂಮಿಯಲ್ಲಿ ಜೀವಿಸುತ್ತಿರುವರು ಕೂಡಾ. ಆದರೆ ಯಾವ ಧರ್ಮದಿಂದ ಯಾವ ಇನ್ನೊಂದು ಧರ್ಮಕ್ಕೆ ಮತಾಂತರವಾದರು ಕೂಡಾ ಮತಾಂತರ ಆದ ನಂತರ ಆ ಹಿಂದಿನ ಧರ್ಮದ ಮುಖ್ಯ ದೇವರ ಕೋಪದ ಕಾರಣದಿಂದ ತೊಂದರೆಗೆ ಒಳಗಾಗುವುದು ಅಥವಾ ಆ ದೇವರಿಂದ ಕೊಂದು ಹಾಕಲ್ಪಡುವುದು ನಾವು ಕಾಣುವುದಿಲ್ಲ. ಹಾಗಿರುವಾಗ, ಇತರ ಪುಟ್ಟ ಶಕ್ತಿಗಳ ಕೋಪ ನಡೆಯಬಹುದೇ? ಇಲ್ಲ, ಆದರೆ ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರವು, ಕೆಲವೊಂದು ಪೂರ್ವನಿಶ್ಚಿತ ವ್ಯಕ್ತಿಗಳಿಗೆ ಅಥವಾ ಕುಟುಂಬದ ಸದಸ್ಯರಿಗೆ ಮಾತ್ರ, ಕೆಲವೊಂದು ಶಕ್ತಿಗಳು ಕೋಪವನ್ನು ಬೇಕು ಬೇಕೆಂದೇ ತೋರ್ಪಡಿಸುವಂತೆ ಆ ಶಕ್ತಿಗಳಿಗೆ ಒಳಗಿಂದ ಪ್ರೇರಣೆ ಮಾಡುವವು. ಅಂದರೆ, ಕೆಲವೊಮ್ಮೆ ಸತ್ತ ಆತ್ಮಗಳ ಮೂಲಕ, ಕೆಲವೊಮ್ಮೆ ಆರಾಧನಾ ಶಕ್ತಿಗಳ ಮೂಲಕ, ಇತ್ಯಾದಿಗಳ ಮೂಲಕ ಕೋಪಗೊಳ್ಳುವಂತೆ ಮಾಡುವವು.  ಈ ಅನ್ಯಗ್ರಹಜೀವಿಗಳ, ಆ ರಹಸ್ಯ ಪ್ರಾಚೀನ ವಾಮಾಚಾರ ವ್ಯವಸ್ಥೆಯು ಮಾಡಿಸುವ, ಈ ಅಪರೂಪದ ಪೂರ್ವನಿಶ್ಚಿತ ವ್ಯಕ್ತಿತ್ವದ ಒಳಗಿಂದ ಕೊಡಲ್ಪಡುವ ಪ್ರೇರಣೆಯ ರೂಪದ ಕೋಪಗಳು ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ಜನರಲ್ಲಿ ಬಾಹ್ಯದಲ್ಲಿ ಕಾಣಿಸುವುದು ಕೂಡಾ ಇದೆ.  ಹೀಗೆ ಮಾಡುವುದರ ಮೂಲಕ, ನಂಬಿಕೆಗಳನ್ನು ಮತ್ತು ಆಚಾರಗಳನ್ನು ಈ ಭೂಮಿಯಲ್ಲಿ ಈ ಅನ್ಯಗ್ರಹಜೀವಿಗಳ ರಹಸ್ಯ ಪ್ರಾಚೀನ ವಾಮಾಚಾರ ವ್ಯವಸ್ಥೆಗೆ ಮತ್ತೂ ಹೆಚ್ಚಿಸಲು ಸಾಧ್ಯವಾಗುವುದು ಅಥವಾ ಇರುವ ನಂಬಿಕೆ, ಆಚಾರಗಳ ಮೇಲಿನ ಜನರ ನಂಬಿಕೆಯು ಕಳೆದು ಹೋಗದೆ, ತಲೆಮಾರಿನಿಂದ ತಲೆಮಾರಿಗೆ ನಿಲ್ಲದೆ ಮುಂದುವರಿಯುವಂತೆ ಮಾಡಲು ಸಾಧ್ಯವಾಗುವುದು. ಈಗಲು ಕೂಡಾ ಹೊಸ ಹೊಸ ನಂಬಿಕೆ, ಆಚಾರಗಳು ಹುಟ್ಟಿಕೊಳ್ಳುವುದನ್ನು ನಮಗೆ ಕಾಣಬಹುದಾಗಿದೆ. ಈ ನಂಬಿಕೆಗಳು ಮಾನವರಲ್ಲಿ ಇದ್ದಲ್ಲಿ ಮಾತ್ರ ಅವುಗಳ ಬೇಳೆ ಬೇಯುವುದು, ಅದಕ್ಕೆ ಬೇಕಾಗಿ ಅವು ಹಲವು ರೀತಿಗಳಲ್ಲಿ ಕಷ್ಟಪಡುವವು. ಇದಕ್ಕೆ ಇನ್ನೊಂದು ಅತ್ಯುತ್ತಮ ಉದಾಹರಣೆಯನ್ನು ಕೂಡಾ ಕೊಡುವೆನು, ಗಮನಿಸಿರಿ. ನೋಡಿ, ಆ ರಹಸ್ಯ ವಾಮಾಚಾರಕ್ಕೆ ಆಗತ್ಯವಾಗಿ ಮಾಡಿಸಲೇಬೇಕು ಎಂದು ಇದ್ದಲ್ಲಿ, ಭೂಮಿಯಲ್ಲಿ ಜೀವಿಸಿರುವಾಗ, ಅತ್ಯುತ್ತಮ ಪ್ರೀತಿಯನ್ನು ಮಕ್ಕಳಿಗೆ ಕೊಟ್ಟಿರುವ, ಆ ಅತ್ಯಂತ ಉತ್ತಮ ತಂದೆ ತಾಯಂದಿರನ್ನು ಕೂಡಾ, ಅವರು ಸತ್ತನಂತರ, ಭೂಮಿಯಲ್ಲಿ ಜೀವಿಸುತ್ತಿರುವ ಆ ಅವರದೇ ಪ್ರೀತಿಯ ಮಕ್ಕಳ ವಿರುದ್ಧ, ಪ್ರೇತದ ಭಾದೆಯ ರೀತಿಯಲ್ಲಿ, ಆ ತಂದೆ ಅಥವಾ ತಾಯ ಪ್ರೇತಗಳನ್ನು ಕೋಪಗೊಳಿಸಿ, ಕಾಡಿಸಿ ತೊಂದರೆ ಕೊಡುವಂತೆ ಮಾಡಬಹುದು! ಅದರಂತೆ ಕೆಲವು ಕಡೆ ಆ ರೀತಿಯಲ್ಲಿ ನಡೆಯುವುದನ್ನು ಕೂಡಾ ನಾವು ಸಮಾಜದಲ್ಲಿ ಅಪರೂಪಕ್ಕೆ ಕಾಣುವೆವು. ಪಿತೃ ದೋಷ, ಮಾತೃ ದೋಷ ಎಂಬಿತ್ಯಾದಿಗಳನ್ನು ನೀವು ಕೇಳಿರುವುದು ಇದೇ ರೀತಿಯ ಇನ್ನೊಂದು ರೂಪವಾಗಿದೆ. ಅಚ್ಚರಿ ಎಂದರೆ, ಆ ಸತ್ತ ತಂದೆ ಮತ್ತು ತಾಯಿ, ಭೂಮಿಯಲ್ಲಿ ಜೀವಿಸುತ್ತಿರುವಾಗ, ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಎಂಬುವುದಾಗಿರುವುದು!! ಹೇಳಿ ಸಹೋದರರೇ. ಈ ಒಂದು ಉದಾಹರಣೆ ಸಾಕು ಸೂಕ್ಷ್ಮದಲ್ಲಿ ಯಾವ ಶಕ್ತಿಗಳು ಕೂಡಾ ಸ್ವ-ನಿಯಂತ್ರಿತ ಅಥವಾ ಸ್ವಂತ ಬುದ್ಧಿಯಿಂದ ಅಥವಾ ಭೂಮಿಯಲ್ಲಿರುವಾಗ ಇದ್ದ ರೀತಿಯ ಬುದ್ಧಿಯಿಂದ ಕೆಲಸ ಮಾಡುವುದಿಲ್ಲ ಎಂದು ತಿಳಿದುಕೊಳ್ಳಲು. ಭೂಮಿಯಲ್ಲಿದ್ದಾಗಿನ ಬುದ್ಧಿಯಿಂದಾಗಿರುತ್ತಿದ್ದರೆ ಅವು ತಮ್ಮದೇ ಆ ಪ್ರೀತಿಯ ಮಕ್ಕಳಿಗೆ ತೊಂದರೆ ಕೊಡುತ್ತಿರಲಿಲ್ಲವಲ್ಲಾ? ಎಲ್ಲ ಮಾನವರನ್ನು ಹಾಗೂ ಸೂಕ್ಷ್ಮ ಲೋಕವನ್ನು ಮೇಲಿನಿಂದ ಆ ರಹಸ್ಯ ವಾಮಾಚಾರವು  ಮಾತ್ರ ನಿಯಂತ್ರಿಸುತ್ತದೆ, ಮತ್ತು ಸೂಕ್ಷ್ಮದ ಉಳಿದೆಲ್ಲವೂ ಮಾನವರ ಕಣ್ಣಿಗೆ ಮಣ್ಣೆರಚಲು ಮಾಡಿರುವ ಅವುಗಳ ಅತಿ ರಹಸ್ಯ ಮೋಸಗಳು ಎಂದು ಸ್ಪಷ್ಟವಾಗುವುದಿಲ್ಲವೇ? ಇನ್ನು, ಕಷ್ಟದಲ್ಲಿರುವ ಮಾನವರು ನೂರಾರು ಕಡೆ ಅನುಗ್ರಹಕ್ಕಾಗಿ ಹೋದರೂ ಅವರಲ್ಲಿ ಉತ್ತಮರಿಗೆ ಅನುಗ್ರಹ ಆಗದಿರುವುದು ಕೂಡಾ ಇದೇ ಕಾರಣದಿಂದಾಗಿ ಆಗಿದೆ. ಮಾತ್ರವಲ್ಲ, ಹಲವು ಸಲ ಭೂಮಿಯ ವಾಮಾಚಾರಿಗಳ ಮೂಲಕ ವಾಮಾಚಾರ ಮಾಡಿಸಿದರೂ ಕೆಲವೊಂದು ಫಲಿಸದೆ ಹೋಗುವ ಕಾರಣವು ಕೂಡ, ಆ ಅನ್ಯಗ್ರಹಜೀವಿ ರಹಸ್ಯ ವಾಮಾಚಾರಕ್ಕೆ, ಆ ಭೂಮಿಯ ಮಾನವರಿಂದ ಮಾಡಲ್ಪಡುವ ವಾಮಾಚಾರಕ್ಕೆ ಗುರಿಯಾಗುವ ವ್ಯಕ್ತಿಯ ಆ ಸಮಯವು ಕಷ್ಟಪಡುವ ಸಮಯ ಅಲ್ಲದಿರುವುದಾಗಿರುವುದು. ಒಟ್ಟಲ್ಲಿ, ಯಾರು ಯಾವಾಗ ಎಷ್ಟು ಕಷ್ಟಪಡಬೇಕು, ಹಾಗೂ ಎಷ್ಟು ಸುಖಪಡಬೇಕು ಇತ್ಯಾದಿ ಎಲ್ಲವೂ ಅವುಗಳ ಆ ವಿಧಿ ನಿಶ್ಚಿಯಿಸುವುದು. ಅಚ್ಚರಿ ಎಂದರೆ, ಉತ್ತಮ ಮತ್ತು ದೇವರ ಅತ್ಯಂತ ದೊಡ್ಡ ಭಕ್ತನಿಗೆ ಅನುಗ್ರಹ ಆಗದಿರುವಾಗ, ಕೆಟ್ಟ ಸ್ವಭಾವದ ಒಬ್ಬ ಸಾಧಾರಣ ಮನುಷ್ಯನ ಪ್ರಾರ್ಥನೆಗೆ ದೇವರ ಅನುಗ್ರಹ ಆಗುವುದು ಆಗಿರುವುದು!! ಇದನ್ನು ಕೂಡಾ ನಾವು ಅಲ್ಲಲ್ಲಿ ಕಾಣುವೆವು.  ಒಟ್ಟಲ್ಲಿ, ಯಾರಿಗೆ ಯಾವ ಸಮಯದಲ್ಲಿ ಏನಾಗಬೇಕು ಎಂಬುವುದು ಆ ರಹಸ್ಯ ವಾಮಾಚಾರವು ನಿಶ್ಚಯಿಸುವವು ಎಂಬುವುದು ಇದರಿಂದಲೂ ಸಾಬೀತಾಗುವುದು. ಇದೇ ಆ ನಿಜವಾದ ವಿಧಿ ಆಗಿರುವುದು, ಮತ್ತು ಅದಕ್ಕನುಸಾರವಾಗಿ ಯಾವುದೇ ಧರ್ಮದ ದೇವರ, ದೈವದ ಹಾಗೂ ಮಾನವರಿಂದ ಮಾಡಿಸಲ್ಪಡುವ ವಾಮಾಚಾರದ ಅನುಗ್ರಹ ಅಥವಾ ಕೋಪವು ಸೃಷ್ಟಿಯಾಗುವುದೋ, ಸೃಷ್ಟಿಯಾಗದೆ ಇರುವುದೋ ಸಂಭವಿಸುವುದು!! ಮನುಷ್ಯರ ಜೀವನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ‘ಆಯಾ ಮನುಷ್ಯನ ಹಣೆಬರಹ’ ಎಂಬ ಅವುಗಳ ಆ ಪೂರ್ವನಿಶ್ಚಿತ ರೀತಿಯಲ್ಲಿ ಮಾತ್ರ ಎಲ್ಲ ಘಟನೆಗಳು ನಡೆಯುವವು ಅಷ್ಟೆ. ಈಗ ನಿಮಗೆ ಸಂಪೂರ್ಣವಾಗಿ ಸ್ಪಷ್ಟ ಆಗಿರಬಹುದು ಎಂದು ತಿಳಿಯುವೆನು. ಈಗ, ಮೇಲಿನ ನಿಮ್ಮ ಪ್ರಶ್ನೆಯ ಉತ್ತರವನ್ನು ನೀವೇ, ಈ ಎಲ್ಲಾ ವಾಸ್ತವತೆಯ ವಿವರಣೆಯ ಹಿನ್ನೆಲೆಯಲ್ಲಿ, ನಿರ್ಣಯಿಸಬಹುದಾಗಿದೆ.

ಬ್ರಹ್ಮತತ್ವ ಎಂಬುವುದು ವೈಜ್ಞಾನಿಕ ಅಲ್ಲವೇ, ಹಾಗಿರುವಾಗ, ಅದ್ವೈತ ಸರಿ ಅಲ್ಲವೇ?

ಈ ಜಗತ್ತಲ್ಲಿ ಸಾವಿರಾರು ಸಿದ್ಧಾಂತಗಳು ಇವೆ, ಅವಲ್ಲಿ ಹೆಚ್ಚು ತರ್ಕಬದ್ಧವಾಗಿ ವಿವರಿಸಲ್ಪಟ್ಟ ಸಿದ್ಧಾಂತಗಳಲ್ಲಿ ಒಂದು ಮುಖ್ಯ ಸಿದ್ಧಾಂತವೇ ಅದ್ವೈತ ಸಿದ್ಧಾಂತ ಆಗಿದೆ. ಆದರೆ, ಇಲ್ಲಿ ಈ ಸಿದ್ಧಾಂತವು ವೈಜ್ಞಾನಿಕ ಅಲ್ಲದಾಗುವುದು ಅದರ ಆ ಏಕವಾಗಿರುವ ಮೂಲ ಶಕ್ತಿಗೆ ಪವಿತ್ರತೆ ಅಥವಾ ದೈವತ್ವವನ್ನು ಕಲ್ಪಿಸುವಲ್ಲಿ ಎಂದು ತಿಳಿಯಬೇಕು. ಇದು ಯಾಕೆಂದರೆ, ಮನಸ್ಸು ಇಲ್ಲದ ಸ್ಥಿತಿಗೆ ದೈವತ್ವ ಇರಲು ಸಾಧ್ಯವಿಲ್ಲ. ಬೌದ್ಧ ಧರ್ಮವು ಇದೇ ಬ್ರಹ್ಮವನ್ನು ದೈವತ್ವ ಇಲ್ಲದ ಶೂನ್ಯ ಎನ್ನುವುದು. ಅಂದರೆ, ಬ್ರಹ್ಮ ಇಲ್ಲವೆಂದು ಮತ್ತು ಆ ರೀತಿಯ ದೈವತ್ವ ಇಲ್ಲ ಎಂದೂ ಹೇಳುವುದು. ಗೋಡೆಗೆ ದೈವತ್ವ ಇದೆ ಎಂದರೂ, ಅದು, ದೈವತ್ವವು ಮಾಡಲೇಬೇಕಾದ ಮನುಷ್ಯನ ಹೃದಯವೈಶಾಲ್ಯತೆ ಮತ್ತು ಪವಿತ್ರತೆಗಳನ್ನು ಸೃಷ್ಟಿಸುವುದಿಲ್ಲ. ಇನ್ನು, ಹೃದಯವೈಶಾಲ್ಯತೆ ಮತ್ತು ಪವಿತ್ರತೆಗಳು ಇರುವ ಮಹಾ ಆಚಾರ್ಯರುಗಳು, ಗುರುಗಳು, ಇತ್ಯಾದಿ ಜನರು ಬ್ರಹ್ಮತತ್ವದಿಂದ ಸೃಷ್ಟಿಯಾಗಿದ್ದಾರೆ ಎಂದು ವಾದ ಮಾಡಿದರೆ, ಇತ್ತ ಬೌದ್ಧ ಧರ್ಮದಲ್ಲಿ, ಬ್ರಹ್ಮತತ್ವ ಇಲ್ಲದೆಯೇ, ಶೂನ್ಯ ಎಂದು ತಿಳಿದು, ಪವಿತ್ರತೆ ಮತ್ತು ಹೃದಯವೈಶಾಲ್ಯತೆಯನ್ನು ಆಚಾರ್ಯರುಗಳು, ಗುರುಗಳು, ಇತ್ಯಾದಿ ಜನರು ಪಡೆದಿದ್ದಾರೆ. ವಿಧ್ಯುತ್ ಒಂದು ಶಕ್ತಿಯ ಮೂಲ, ಅದೇ ರೀತಿ, ಬೆಳಕು, ಶಾಖ, ಅಯಸ್ಕಾಂತ, ಇತ್ಯಾದಿ ಎಲ್ಲವೂ, ಶಕ್ತಿಯ ಆ ಹಲವು ಮೂಲಗಳು ಆಗಿವೆ. ಇವುಗಳಿಗೆ ಯಾವುದಕ್ಕೂ ಹೃದಯವೈಶಾಲ್ಯತೆ ಮತ್ತು ಪವಿತ್ರತೆಯನ್ನು ಸೃಷ್ಟಿಸುವ ಆ ದೈವತ್ವವು ಇರುವುದಿಲ್ಲ. ಹಾಗಿರುವಾಗ. ಇನ್ನು, ಶಕ್ತಿಯ ಈ ಎಲ್ಲಾ ಮೂಲಗಳ ಮೂಲಶಕ್ತಿ ಎಂದು ಕರೆಯಲ್ಪಡುವ ಆ ಬ್ರಹ್ಮಕ್ಕೆ ಅಥವಾ ಬ್ರಹ್ಮತತ್ವಕ್ಕೆ ದೈವತ್ವ ಇರುವುದು ಎಂದು ಹೇಗೆ ಹೇಳುವುದು? ಮಾತ್ರವಲ್ಲ, ಬೌದ್ಧ ಧರ್ಮ, ಜೈನ ಧರ್ಮ, ಹಾಗೂ ಹಿಂದೂ ಧರ್ಮದ ಐದು ದರ್ಶನಗಳು ಕೂಡಾ ಈ ಬ್ರಹ್ಮತತ್ವದ ಅಸ್ತಿತ್ವವನ್ನು ಒಪ್ಪುವುದಿಲ್ಲ! ಹೀಗಿರಲು, ಅದ್ವೈತವನ್ನು ಒಂದು ಮುಖ್ಯ ಸಿದ್ಧಾಂತ ಅಥವಾ ಅತ್ಯುತ್ತಮ ಆದರ್ಶ ಎಂದು ಹೇಳಬಹುದೇ ಹೊರತು, ವಿಜ್ಞಾನದಂತೆ ಸತ್ಯವಾಗಿರುವುದು ಎಂದೆಲ್ಲ ಹೇಳಲು ಸಾಧ್ಯವಾಗುವುದಿಲ್ಲ.

ಹಾಗಿದ್ದರೆ, ದ್ವೈತ ಸಿದ್ಧಾಂತ ಸರಿಯೇ?

ಎಲ್ಲವೂ ಸಿದ್ಧಾಂತಗಳು ಅಷ್ಟೆ. ಅದ್ವೈತದ ಬ್ರಹ್ಮವನ್ನು, ತಾವು ಅನುಸರಿಸುವ ಪುರಾಣದಲ್ಲಿನ ಸೃಷ್ಟಿಕರ್ತ ಎಂದು ಹೇಳಿಕೊಳ್ಳುವಲ್ಲಿ ಅದು ದ್ವೈತ ಆಗಿರುವುದು ಅಷ್ಟೆ. ಇಲ್ಲಿ ಹೆಚ್ಚು ಹೇಳುವ ಆಗತ್ಯವಿಲ್ಲ, “ನಿಮ್ಮ ಪುರಾಣದ ಸೃಷ್ಟಿಕರ್ತನ ಹೆಸರು ಅಲ್ಲದ, ಬೇರೆ ಪಂಥ, ಧರ್ಮಗಳ ಸೃಷ್ಟಿಕರ್ತರ ಹೆಸರಲ್ಲಿ ಆ ಏಕ ಸೃಷ್ಟಿಕರ್ತನನ್ನು ನಿಮಗೆ ಒಪ್ಪಿಕೊಂಡು ಅವನನ್ನು ಆ ಹೆಸರುಗಳಲ್ಲೂ ಕೊಂಡಾಡಲು ಸಾಧ್ಯವಾಗುವುದೇ?” ಎಂಬ ಒಂದೇ ಪ್ರಶ್ನೆ ಸಾಕು, ಆಗ ಅದನ್ನು ಯಾರೂ ಒಪ್ಪುವುದಿಲ್ಲ. ಸೃಷ್ಟಿಕರ್ತಾನು ಆ ಹೆಸರಿಗೆ ಮತ್ತು ಆಚಾರ ನಂಬಿಕೆಗಳಿಗೆ ಸೀಮಿತ ಆಗಿಬಿಟ್ಟನು, ಏನು ಅಚ್ಚರಿ!!  ಇಲ್ಲಿ, ಸೃಷ್ಟಿಕರ್ತ ಸಂಕಲ್ಪವು ಇತರ ಧರ್ಮ, ಪಂಥಗಳಲ್ಲಿ ಕಾಣಿಸುವಂತೆ, ಸಂಕುಚಿತ ಆಗುವುದನ್ನು ನಿಮಗೆ ಕಾಣಲು ಸಾಧ್ಯವಾಗುವುದು. ಸೃಷ್ಟಿಕರ್ತ ಒಬ್ಬನೇ ಒಬ್ಬನು ಮತ್ತು ಆತನು ಮಾನವರೆಲ್ಲರ ತಂದೆ ಎಂಬ ಹಿನ್ನೆಲೆಯಲ್ಲಿ ಎಲ್ಲಾ ಧರ್ಮ, ಪಂಥಗಳು ನಿಜವಾಗಿಯೂ ಸಾವಿರಾರು ವರುಷಗಳ ಹಿಂದೆಯೇ ಸೃಷ್ಟಿಕರ್ತ ದೇವರ ಆ ಸಂಕಲ್ಪದ ಹಿನ್ನೆಲೆಯಲ್ಲಿ ಒಂದಾಗಬೇಕಿತ್ತು, ಆದರೆ ಆಗಿರುವುದು ಮಾತ್ರ ವಿಭಜನೆ ಮತ್ತು ಭೀಕರ ದ್ವೇಷ, ಹಿಂಸೆ, ರಕ್ತಪಾತಗಳು!! ಇನ್ನು, ಈ ಎಲ್ಲಾ ಸಿದ್ಧಾಂತಗಳು ಯಾರಿಗೆ ಬೇಕಾಗಿ ತಮ್ಮೊಳಗೆ ಬರೇ ತರ್ಕದ ದಿಗ್ವಿಜಯ ಮಾಡಿದವು, ಯಾಕಾಗಿ ಮತಾಂತರ ಮಾಡಿದವು, ಎಂದು ಯಾರಿಗೂ ತಿಳಿದಿಲ್ಲ!! ಇದು ಯಾಕೆ ಹೇಳುವುದು ಎಂದರೆ, ವಿಜ್ಞಾನದಲ್ಲೂ ಹಲವು ಸಿದ್ಧಾಂತಗಳು ಇವೆ, ಅವೆಲ್ಲಾ ಪುಸ್ತಕ ಬಂಢಾರದಲ್ಲಿ ಚೊಕ್ಕವಾಗಿ ಇರಿಸಲಾಗಿದೆ. ಅದನ್ನು ಜನರು ಓದಿಕೊಳ್ಳುತ್ತಾರೆ ಅಷ್ಟೆ. ನೋಡಿ, ಯಾವುದಾದರೂ ಸಿದ್ಧಾಂತವನ್ನು ಯಾರಾದರೂ  ಕಂಡುಹಿಡಿದರೆ ಹೀಗೆ ಮಾಡಬಹುದು ಹೊರತು ಅದರ ಹೆಸರಲ್ಲಿ ವಾದ ಮಾಡುತ್ತಾ ಮತಾಂತರದ ದಿಗ್ವಿಜಯ ಮಾಡುವ ಆಗತ್ಯವಿದೆಯೇ? ವಿಜ್ಞಾನಿಗಳು ತಮ್ಮ ಸಿದ್ಧಾಂತಗಳ ಪರವಾಗಿ ಮತಾಂತರದ ದಿಗ್ವಿಜಯ ಮಾಡಿರುವರೇ? ಕನಿಷ್ಠಪಕ್ಷ ಒಂದಾದರೂ ಮತಾಂತರ ಮಾಡಿರುವರೇ? ಇದರ ಉತ್ತರ ಇಲ್ಲ ಎಂದಾಗುವುದು.  ಒಟ್ಟಲ್ಲಿ, ತಾವು ಏನು ಮಾಡುತ್ತಿದ್ದೇವೆ ಮತ್ತು ಯಾರಿಗಾಗಿ, ಯಾಕಾಗಿ, ಹೀಗೆಲ್ಲಾ ಮಾಡುತ್ತಿದ್ದೇವೆ ಎಂಬುವುದನ್ನು ಕೂಡಾ ಅರಿಯದೆ, ಜಗತ್ತಿನ ಈ ಎಲ್ಲಾ ಧರ್ಮ, ಪಂಥಗಳಲ್ಲಿ, ಆಜ್ಞಾನದ ಮತಾಂತರ ಮತ್ತು ಅದರ ಹಿನ್ನೆಲೆಯ ಭೀಕರ ಮತಯುದ್ಧಗಳು ನಡೆಸಲ್ಪಟ್ಟಿರುವುದು! ಜಗತ್ತಿನಲ್ಲಿ ಸಂಭವಿಸಿರುವ ಈ ಎಲ್ಲಾ ವಾಸ್ತವ ಘಟನೆಗಳು ಆ ಅನ್ಯಗ್ರಹಜೀವಿಗಳ ರಹಸ್ಯ ವಾಮಾಚಾರದ ಆ ರಹಸ್ಯ ಕೈವಾಡ ಎಂದು, ಮತ್ತೂ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ಅರ್ಥಮಾಡಿಕೊಳ್ಳಲು ಈಗ ಯಾರಿಗೂ ಕಷ್ಟ ಅನಿಸಲಾರದು ಎಂದು ನಾನು ತಿಳಿಯುವೆನು.

ಸ್ವಲ್ಪ ಕಾಲ, ನಿಮ್ಮ ಭಾವಚಿತ್ರವನ್ನು, ನಿಮ್ಮ ಭಕ್ತರು ಆರಾಧನೆ ಮಾಡುತ್ತಿದ್ದರಲ್ಲ, ಅದನ್ನು ನೀವು ತೆಗೆಯಲು ಹೇಳಿರುವುದರ ಹಿಂದೆ ವಿಗ್ರಹಾರಾಧನೆ ಬೇಡ ಎಂಬ ಸಂದೇಶ ಇದೆಯೇ?

ನೋಡಿ, ಈ ಪ್ರಶ್ನೆಯನ್ನು ಉತ್ತರಿಸುವ ಮೊದಲು ಒಂದು ಚಿಕ್ಕ ವಿಚಾರವನ್ನು ನೀವು ತಿಳಿದಿರಲೇಬೇಕು. ಮೊದಲಲ್ಲಿ, ನಾನು ಪವನಗಿರಿಯಿಂದ ದೂರ ಎಲ್ಲಾದರೂ ಒಂದು ಏಕಾಂತ ಸ್ಥಳಕ್ಕೆ ಹೋಗಿ, ಅಲ್ಲಿ ಆ ಸೂಕ್ಷ್ಮದ ರಹಾಸ್ಯಾನ್ವೇಷಣೆ ಅಥವಾ ಸೂಕ್ಷ್ಮದ ಬೇಹುಗಾರಿಕೆ ಮಾಡಲು ಹೊರಟಿದ್ದೆನು. ಯಾಕೆಂದರೆ, ನಾನು ಓಂದೇವ ಎಂಬ ದೇವಸಂಕಲ್ಪವನ್ನು ಸೃಷ್ಟಿಸಿರುವುದೇ ಸೂಕ್ಷ್ಮದ ರಹಸ್ಯಾನ್ವೇಷಣೆಗಾಗಿ ಆಗಿತ್ತು. ಮಾತ್ರವಲ್ಲ, ನಾನು ಅನುಗ್ರಹ ಕೊಡುವುದು, ಫೋಟೋ, ಇತ್ಯಾದಿ ಆ ಯಾವ ಆಲೋಚನೆಯಲ್ಲಿಯೂ ಇರಲಿಲ್ಲ, ಆದರೆ ನನ್ನಿಂದ ಅನುಗ್ರಹ ಸಿಗುವುದು ಎಂದು ಭಕ್ತರಿಗೆ ಸ್ವತಃ ಅನುಭವ ಆಗುವಾಗ, ಭಕ್ತರೇ ನನ್ನನ್ನು ಪವನಗಿರಿಯಿಂದ ಬೇರೆಡೆಗೆ ಹೋಗದಂತೆ ತಡೆಹಿಡಿದು, ನನ್ನ ಭಾವಚಿತ್ರವನ್ನು ಅಥವಾ ಫೋಟೋವನ್ನು ಅನುಗ್ರಹಕ್ಕಾಗಿ ಇಟ್ಟಿರುವುದು. ಮಾತ್ರವಲ್ಲ, ಅನುಗ್ರಹಕ್ಕಾಗಿ ಬರುವವರಿಗೆ ಈ ನನ್ನ ಭಕ್ತರೇ ಪವನಗಿರಿಯಲ್ಲಿ ತಮ್ಮಲ್ಲಾಗುವ ಸೌಕರ್ಯಗಳನ್ನು ಒದಗಿಸಲು ಆರಂಭಿಸಿದ್ದು ಎಂದು ತಿಳಿಯಬೇಕು.

ನೋಡಿ, ನಾನು, ಮೊದಲು ಭಕ್ತರು ಇಟ್ಟು ಆರಾಧಿಸುತ್ತಿದ್ದ ನನ್ನ ಭಾವಚಿತ್ರವನ್ನು ಆನಂತರದಲ್ಲಿ ತೆಗೆಯಲು ಯಾಕಾಗಿ ಅವರಲ್ಲಿ ಹೇಳಿದೆನು ಎಂದರೆ, ಮೊಟ್ಟಮೊದಲಿಗೆ, ಅದು ವಿಗ್ರಹಾರಾಧನೆ ಬೇಡ ಎಂಬ ಸಂದೇಶವನ್ನು ಕೊಡುವುದಕ್ಕಲ್ಲ ಎಂಬುವುದನ್ನು ಸ್ಪಷ್ಟವಾಗಿ ಹೇಳುವೆನು. ಯಾಕೆಂದರೆ, ಆರಾಧನೆಯು ವಿಗ್ರಹ ಇದ್ದು ಅಥವಾ ವಿಗ್ರಹ ಇಲ್ಲದೆ ಈ ಎರಡು ರೀತಿಯಿಂದಲೂ ಮಾಡಿಕೊಳ್ಳಬಹುದು. ಇದು ಹೀಗಾದರೆ, ಇನ್ನು ನನ್ನ ಭಾವಚಿತ್ರವನ್ನು ತೆಗೆಯಲು ಹೇಳಿದುದಕ್ಕೆ ಎರಡು ಮುಖ್ಯ ಕಾರಣಗಳು ಇವೆ. ಅವಲ್ಲಿ

1. ನಾನು ಮೊದಲೇ, ನನ್ನ ಭಕ್ತರಲ್ಲಿ ಓಂದೇವ ಶಕ್ತಿಯು ಆ ನನ್ನ ಭಾವಚಿತ್ರದಲ್ಲಿ ಪ್ರತಿಷ್ಠಿಸಿ ಅರಾಧಿಸಲಾಗುವುದಿಲ್ಲ ಎಂದೂ, ಅಂದರೆ, ನನ್ನ ಭಾವಚಿತ್ರದಲ್ಲಿ ಓಂದೇವ ಶಕ್ತಿಯ ಪ್ರತಿಷ್ಠೆ ಇಲ್ಲ ಎಂದೂ ತಿಳಿಸಿದ್ದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಇದು, ತಂತ್ರ, ಮಂತ್ರಗಳ ಹಿನ್ನೆಲೆಯಲ್ಲಿ ಇರುವ ಆರಾಧನೆಯ ರೀತಿ ಅಲ್ಲ ಆದುದರಿಂದ ಭಕ್ತಿಯ ಹಿನ್ನೆಲೆಯಲ್ಲಿ ಮಾತ್ರ ಭಕ್ತರು ನನ್ನ ಭಾವಚಿತ್ರವನ್ನು ಕಾಣಬೇಕೆಂದು ಅವರಲ್ಲಿ ಹೇಳಿದ್ದೆ ಎಂದು ಅರ್ಥ. ಇನ್ನು, ಭಕ್ತಿಯ ರೀತಿಯನ್ನು ಮಾತ್ರ ಆರಾಧನೆ ಇಟ್ಟುಕೊಳ್ಳುವುದಕ್ಕೂ ಕಾರಣವಿತ್ತು. ಅದು, ಆ ಭಯಾನಕ ಅತಿ ರಹಸ್ಯ ಸೂಕ್ಷ್ಮದ ವಾಮಾಚಾರ ವ್ಯವಸ್ಥೆಯ ಪ್ರಭಾವದಿಂದ ಪಾರಾಗಲು ನನ್ನ ಸೂಕ್ಷ್ಮದ ಆ ಧನಾತ್ಮಕ ಶಕ್ತಿಗಳು ಸೂಕ್ಷ್ಮದಲ್ಲಿ ಹೊರಗೆ ಕಾಣಿಸದೆ, ಅಡಗಿ, ರಹಸ್ಯಾನ್ವೇಷಣೆ ಮಾಡುತ್ತಾ ಇದ್ದುದೇ ಅದಕ್ಕೆ ಕಾರಣವಾಗಿತ್ತು.

ಮೊದಲಲ್ಲೇ, ಇಲ್ಲಿಯ ತನಕ ಆರಾಧನೆಯ ರೀತಿಯಲ್ಲಿ ಬದಲಾಯಿಸಿಕೊಂಡು ಆಗಿತ್ತು. ಕೆಲವು ವರುಷಗಳ ನಂತರ, ಇದೇ ಮೇಲಿನ ಮುಖ್ಯ ಕಾರಣವು ಮತ್ತೂ ಮುಖ್ಯವಾಗಿ ತೋರುವಾಗ ಮತ್ತು ಅದರೊಂದಿಗೆ ಇನ್ನೊಂದು ಕಾರಣವೂ ಬಂದು ಸೇರುವಾಗ, ನಾನು ನನ್ನ ಭಾವಚಿತ್ರದ ಆರಾಧನೆಯ ಬದಲು ಆ ಸ್ಥಾನದಲ್ಲಿ ಸತ್ಯ, ಪ್ರೀತಿ, ನೀತಿಯ ಪವಿತ್ರ ಫಲಕ ಇಡಬೇಕೆಂದು ಭಕ್ತರಲ್ಲಿ ಹೇಳಿ ಹಾಗೆ ಅದನ್ನು ಕೂಡಾ ಬದಲಾಯಿಸಿಕೊಂಡೆನು.

2. ಆ ಇನ್ನೊಂದು ಕಾರಣ.

ಈ ಸತ್ಯ, ಪ್ರೀತಿ, ನೀತಿಯ ಪವಿತ್ರ ಫಲಕವನ್ನು ನೋಡಿದಾಗ, ಸತ್ಯಸಂಧ ಭಕ್ತರಿಗೆ, ದೈವಿಕ ಸ್ವಭಾವಗಳು ಹೃದಯದಲ್ಲಿ ಮೂಡಲು ಹಾಗೂ ಬೆಳೆಯಲು ಆರಂಭಿಸುವುದು ಮತ್ತು ಸದ್ಗುಣಗಳು ಭಕ್ತರ ಹೃದಯದಲ್ಲಿ ನಿಧಾನವಾಗಿ ಬೇರೂರುವುದು. ಆದರೆ, ಭಾವಚಿತ್ರವನ್ನು ನೋಡಿದಾಗ ಆ ಭಕ್ತನು ತಾನು ಸ್ವಭಾವ ಶುದ್ಧಿಯನ್ನು ಬೆಳೆಸಿಕೊಳ್ಳಬೇಕು ಎಂದು ಅದು ಆ ಭಕ್ತನ ಮನದಲ್ಲಿ ಪ್ರೇರಣೆ ನೀಡುವುದಿಲ್ಲ, ಬದಲು ಬರೇ ತನಗೆ ಸಿಗಬೇಕಾದ ಅನುಗ್ರಹದಲ್ಲಿ ಮಾತ್ರ ಆ ವ್ಯಕ್ತಿಯ ಮನಸ್ಸು ಗಟ್ಟಿಯಾಗಿ ಇರುವುದು ಅಷ್ಟೆ. ಕಳ್ಳರು ಕೂಡ ಅನುಗ್ರಹವನ್ನು ಬೇಡಿಕೊಳ್ಳುವುದಿಲ್ಲವೆ? ನೋಡಿ, ನಂಬಿಕೆ, ಆಚಾರಗಳ ಹಿನ್ನೆಲೆಯಲ್ಲಿ ಬಹಳ ಕಾಲದವರೆಗೆ ತಪಸ್ಸು ಮಾಡಿರುವ ಅಥವಾ ಪ್ರಾರ್ಥಿಸಿರುವ ಅಸುರರು, ಅಸುರರಾಗಿಯೇ ಉಳಿದರು, ಹೊರತು ಅವರ ಸ್ವಭಾವದಲ್ಲಿ ಬದಲಾವಣೆ ಬರಲಿಲ್ಲ ಎಂದು ನಮಗೆ ತಿಳಿದಿದೆ. ಇದಕ್ಕೆ ಬೇಕಾಗಿ, ಪೂರ್ತಿ ದೈವತ್ವವನ್ನು ಮಾತ್ರ ಹಿನ್ನೆಲೆಯಾಗಿಟ್ಟು ಮಾಡುವ ಈ ಹೊಸ ಪ್ರಾರ್ಥನಾ ರೀತಿಯನ್ನು ನನ್ನ ದೇವಸಂಕಲ್ಪದಲ್ಲಿ ಸೇರಿಸಿಕೊಂಡಿರುವುದು ಎಂದು ತಿಳಿಯಬೇಕು.

ಈ ಪವಿತ್ರ ಫಲಕದ ಪ್ರತ್ಯೇಕತೆಗಳು

ನೋಡಿ, ಸತ್ಯ. ಪ್ರೀತಿ, ನೀತಿಯ ಈ ಫಲಕವು ಎಲ್ಲಾ ದೇವಸಂಕಲ್ಪಗಳನ್ನು ಹಾಗೂ ಎಲ್ಲಾ ಧರ್ಮಗಳನ್ನು ಪ್ರತಿನಿಧೀಕರಿಸುವ ಒಂದು ಪವಿತ್ರ ಫಲಕ ಅಷ್ಟೆ. ಅದರ ಮುಂದೆ ಯಾವ ದೇವರ ಹೆಸರನ್ನು ಹೇಳಿ ಬೇಕಾದರೂ ಆ ದೇವರನ್ನು ಪ್ರಾರ್ಥಿಸಬಹುದು. ಅದು ಯಾವುದೋ ಒಂದು ದೇವರ ಅಥವಾ ಧರ್ಮದ ಸಂಕೇತವಲ್ಲ. ಆದುದರಿಂದಲೇ, ಇದನ್ನು ದಿವ್ಯಜ್ಞಾನ ಸನ್ನಿಧಿಗಳಲ್ಲಿ ಸರ್ವ ಧರ್ಮಗಳ ಹಾಗೂ ಸರ್ವ ದೇವರು ಸಂಕಲ್ಪಗಳ ಪ್ರತಿನಿಧಿಯಾಗಿ ಉಪಯೋಗಿಸುವುದು ಎಂಬುವುದನ್ನು ಮರೆಯಬಾರದು.

ನನ್ನ ಭಾವಚಿತ್ರವನ್ನು ಆರಾಧನೆಗೆ ಇಟ್ಟಿದ್ದ ಕಾಲದ ಒಂದು ಪ್ರತ್ಯೇಕತೆ-

ನೋಡಿ, ಅಂದು ನನ್ನ ಭಾವಚಿತ್ರವನ್ನು ಆರಾಧನೆಗೆ ನನ್ನ ಭಕ್ತರು ಇಟ್ಟಿದ್ದ ಕಾಲದಲ್ಲಿ, ನಾನು ಅದನ್ನು ಕೂಡಾ ಜನತೆಗೆ ಒಂದು ಸಂದೇಶವನ್ನು ಕೊಡಲೆಂದು ಉಪಯೋಗಿಸಿದ್ದೆನು. ಅದೇನೆಂದರೆ, ಆಸಕ್ತಿ ಇರುವ ಮತ್ತು ಸಮಾಜದಲ್ಲಿ ಅತ್ಯಂತ ಮೇಲೆ ಎಂದು ಹೇಳಿಕೊಳ್ಳುವ ಜಾತಿಯ ಮನುಷ್ಯರಿಂದ ಹಿಡಿದು ಸಮಾಜದಲ್ಲಿ ಅತ್ಯಂತ ಕೆಳಗಿನ ಜಾತಿ ಎಂದು ಜನರು ತಿಳಿಯುವ ಜಾತಿಯ ಮನುಷ್ಯರ ಕೈಯಿಂದ ನನ್ನ ಭಾವಚಿತ್ರಕ್ಕೆ ಅಂದು ಮಾಡುತ್ತಿದ್ದ ಆ ‘ಆರತಿ ನಿತ್ಯಪೂಜೆ’ ಯನ್ನು ಮಾಡಿಸಿದ್ದೆನು. ಇದರಿಂದಾಗಿ, ಪೂಜೆ ಮಾಡುವ ಅವಕಾಶವು ಸಮಾಜದಲ್ಲಿ ಅತ್ಯಂತ ದೂರ ತಳ್ಳಲ್ಪಟ್ಟ ಜನರಿಗೂ ದೊರಕಿತಲ್ಲಾ ಎಂಬ ಒಂದು ನೆಮ್ಮದಿಯು ನನಗೆ ಅದರಿಂದ ದೊರಕಿದೆ. ಓಹ್, ಎಲ್ಲಾ ಮಾನವರ ಸೃಷ್ಟಿಕರ್ತ ಅಥವಾ ತಂದೆ ಎಂಬ ದೇವರನ್ನು ಆರಾಧನೆ ಮಾಡುವಲ್ಲಿಯೂ ಕೂಡಾ, ಕೆಳಜಾತಿಯ ಮಾನವರು ಎಂದು ಹೇಳಿಕೊಂಡು ಆ ಮುಗ್ಧ ಮಾನವರನ್ನು ತಮ್ಮ ಸ್ವಂತ ತಂದೆಯಾಗಿರುವ ಸೃಷ್ಟಿಕರ್ತ ದೇವರಿಂದ ಬಹಳ ದೂರ ನಿಲ್ಲಿಸಿ, ಅಸ್ಪೃಶ್ಯತೆಯ ಶೋಷಣೆ ಮಾಡುತ್ತಾ ಬಂದಿರುವುದು, ಅಧರ್ಮಕ್ಕೂ ಮಾಡಲು ಸಾಧ್ಯವಾಗದಷ್ಟು ದೊಡ್ದ ಅಧರ್ಮವಾಗಿರುವುದು.

ಧರ್ಮ ಎಂದರೇನು ಮತ್ತು ದೇವರು ಎಂದರೇನು ಎಂಬ ಪ್ರಶ್ನೆಗಳಿಗೆ ಎಲ್ಲರೂ ಕುಳಿತು ಮೊದಲು ಉತ್ತರಿಸಲಿ, ಅಲ್ಲಿಂದ ಮಾತ್ರ, ಜಗತ್ತಿನ ಸರ್ವ ಧರ್ಮಗಳಲ್ಲೂ ‘ಧರ್ಮ’ ಎಂಬುವುದರ ಉದಯ ಸಾಧ್ಯ. ಇದು ಪರಮ ಸತ್ಯ. ಧರ್ಮ ಎಂದರೆ ಅದು ನಿಸ್ಪಕ್ಷ ಆಗಿರಲೇಬೇಕು. ಯಾವ ಧರ್ಮವೇ ಆದರೂ ಅದು ಬೇಲಿಯ ಒಳಗೆ ಸಂಕುಚಿತವಾಗಿ ಇರಲೇಬಾರದು. ಹಾಗೆ ಸಂಕುಚಿತವಾದರೆ ಅದು ಅಧರ್ಮ ಆಗುವುದು ಖಂಡಿತ. ದುರದೃಷ್ಟವಶಾತ್, ಎಲ್ಲಾ ಧರ್ಮ, ಪಂಥಗಳು ಈ ಬೇಲಿಗಳ ಒಳಗಿಂದಲೇ ಸೃಷ್ಟಿಯಾಗಿ ಹೊರಟುಬಂದಿರುವವುಗಳು!! ಅನ್ಯಗ್ರಹಜೀವಿಗಳ ಸೂಕ್ಷ್ಮದ ಅತಿರಹಸ್ಯ ವಾಮಾಚಾರ ವ್ಯವಸ್ಥೆ, ಅವುಗಳ ಲಾಭಗಳಿಗೆ ಬೇಕಾಗಿ ಶಿಲಾಯುಗದಿಂದಲೇ ಮಾಡುತ್ತಾ ಬಂದಿರುವ ಆ ಮೋಸಗಳು ಧರ್ಮ, ದೇವರುಗಳ ಹೆಸರಲ್ಲಿ ಯಾವೆಲ್ಲಾ ರೀತಿಗಳಲ್ಲಿ ಪ್ರಕಟವಾಗಿವೆ ಎಂಬುವುದನ್ನು ಇದು ಸ್ಪಷ್ಟವಾಗಿ ತೋರಿಸುವುದು.

ನೀವು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತೀರಿ, ಆದರೆ ಜನರ ಅಭಿಪ್ರಾಯಗಳಿಗೆ ಯಾಕೆ ಯೂಟ್ಯೂಬ್ ನಲ್ಲಿ ಅವಕಾಶ ಕೊಡುವುದಿಲ್ಲ?

ನೋಡಿ, ಭೂಮಿ ಚಪ್ಪಟೆ ಎಂದು ನಂಬಿದ್ದ ಕಾಲದಲ್ಲಿ ‘ಭೂಮಿಯು ಗೊಲಾಕಾರವಾಗಿದೆ’ ಎಂದು ಮೊಟ್ಟ ಮೊದಲಲ್ಲಿ ಒಬ್ಬ ವ್ಯಕ್ತಿಯು ಹೇಳುವಾಗ, ಜನರ ಅಭಿಪ್ರಾಯವನ್ನು ಅಥವಾ ಪ್ರತಿಕ್ರಿಯೆಯನ್ನು ಆ ಹೇಳುವ ವ್ಯಕ್ತಿ ಗಮನಿಸಿದಲ್ಲಿ ಏನಾಗಬಹುದು? ಬೆರಳೆಣಿಕೆಯ ಜನರು ‘ಸಾಧ್ಯತೆ ಇದೆ’ ಎನ್ನುವರು ಹೊರತು ಇನ್ನುಳಿದ ಎಲ್ಲರೂ, ‘ಏನೂ ತಿಳಿಯದ ವ್ಯಕ್ತಿಯು ಏನೋ ಭ್ರಮೆಯಲ್ಲಿ ಸುಳ್ಳು ಹೇಳುತ್ತಿದ್ದಾನೆ’ ಎಂದು ಅವರ ಅಭಿಪ್ರಾಯ ಹೇಳಬಹುದು ಅಷ್ಟೆ. ಜನರು ಅಂದು, ಆ ವ್ಯಕ್ತಿಯನ್ನು ನಿಜವಾಗಿಯೂ ಅದೇ ರೀತಿ ನಿಂದಿಸಿ ಗೇಲಿ ಮಾಡಿದ್ದರು!

ಜನರು ಯಾಕೆ ಆ ರೀತಿಯಲ್ಲಿ ಅಂದು ಹೇಳಿದ್ದರು ಎಂದರೆ, ಅಂದಿನ ಕಾಲದ ಅತಿ ಬುದ್ಧಿವಂತರಾದ ವಿಜ್ಞಾನಿಗಳು ಹಾಗೂ ಅತಿ ಬುದ್ದಿವಂತರಾದ ಧಾರ್ಮಿಕ ಪಂಡಿತರುಗಳು ಎಲ್ಲರೂ ಅದುವರೆಗೂ ಜನರಿಗೆ ಪಾಠ ಹೇಳಿಕೊಟ್ಟಿದ್ದದು ‘ಭೂಮಿಯು ಚಪ್ಪಟೆ’ ಎಂದೇ ಆಗಿತ್ತು, ಮತ್ತು ಅದಕ್ಕೆ ಜನಸಾಮಾನ್ಯರು ಆ ರೀತಿಯಲ್ಲಿ ಅಂದು ಗೇಲಿ ಮಾಡಿದ್ದು. ಅದೇ ರೀತಿ, ಈ ಕಣ್ಣಿಗೆ ಕಾಣದ ಸೂಕ್ಷ್ಮದ ಬಗ್ಗೆ, ಇದುವರೆಗೂ ವಿಜ್ಞಾನಕ್ಕೂ, ಧರ್ಮಗಳಿಗೂ ತಿಳಿದಿರುವುದಕ್ಕಿಂತ ಪೂರ್ಣವಾಗಿಯೂ ಬೇರೆಯಾಗಿರುವ, ಕಣ್ಣಿಗೆ ಕಾಣಿಸದ ಸೂಕ್ಷ್ಮದ ವಾಸ್ತವ ಸತ್ಯವನ್ನು, ನನ್ನ ಹದಿನೈದು ವರುಷಗಳ ಸತತ ಸೂಕ್ಷ್ಮದ ಬೇಹುಗಾರಿಕೆಯ ನಂತರ ಹೇಳುವಾಗ, ‘ಭೂಮಿ ಗೋಲ’ ಎಂದು ಮೊದಲಲ್ಲಿ ಹೇಳಿದವನಿಗೆ ಜನರು ಪ್ರತಿಕ್ರಿಯಿಸಿರುವ ಅದೇ ರೀತಿಯಲ್ಲಿ ಅನಗತ್ಯವಾಗಿ ಪ್ರತಿಕ್ರಿಯಿಸುವ  ಸಾಧ್ಯತೆ ಇದೆ. ಎಲ್ಲರಿಗೂ ಸಾಮಾನ್ಯವಾಗಿರುವ ಅಥವಾ ಗೊತ್ತಿರುವ ವಿಷಯ ಆದರೆ ಸರಿ, ಅಭಿಪ್ರಾಯ ಬೇಕು, ಆದರೆ ಈ ವಿಷಯ ಗೊತ್ತೇ ಇಲ್ಲದಿರುವಾಗ ಇನ್ನು ಅಭಿಪ್ರಾಯವನ್ನು ಹೇಗೆ ಹೇಳಲು ಸಾಧ್ಯವಾಗುವುದು ಎಂಬ ಪ್ರಶ್ನೆ ಕೂಡಾ ಅಲ್ಲಿರುವುದು. ಈ ಕಾರಣದಿಂದಾಗಿ, ಮಾನವರು ಆ ಭೀಕರ ಅಪಾಯದಿಂದ ಪಾರಾಗಲು ನಾನು ಏನು ಮಾಡಬೇಕೋ ಮತ್ತು ಅದಕ್ಕೆ ನಾನು ಏನು ಹೇಳಬೇಕೋ ಅದನ್ನು ಹೇಳಿ ಮತ್ತು ಮಾಡಿ ಮುಗಿಸುವುದು ಮಾತ್ರ ನನ್ನ ಉದ್ದೇಶವಾಗಿ ನಾನು ಇಟ್ಟುಕೊಂಡಿರುವುದು ಅಷ್ಟೆ. ಅದಕ್ಕೆಂದೇ ಅಭಿಪ್ರಾಯಗಳ ಗೋಜಿಗೆ ಹೋಗುವುದಿಲ್ಲ. ಆದರೆ ಒಂದು ವಿಷಯದಲ್ಲಿ ಮಾತ್ರ ಇಂದು ಹಿಂದಿನ ಕಾಲಕ್ಕಿಂತ ವ್ಯತ್ಯಸ್ಥವಾಗಿದೆ. ಅದುವೇ, ವಿಜ್ಞಾನದ ಬೆಳವಣಿಗೆ ಮತ್ತು ವೈಜ್ಞಾನಿಕ ಚಿಂತನೆಯ ಬೆಳವಣಿಗೆ ಆಗಿರುವುದು. ವಿಜ್ಞಾನವು ಬಹಳ ಬೆಳೆದುದರಿಂದ ಮುಂದೆ ವೈಜ್ಞಾನಿಕ ಚಿಂತನೆಯ ಸಹಾಯದಿಂದ ನಾನು ಹೇಳುವ ತರ್ಕಬದ್ಧ ಸತ್ಯಗಳನ್ನು ಜನರು ಬಹಳ ಬೇಗನೆ ಅರ್ಥಮಾಡಿಕೊಳ್ಳುವರು ಎಂದು ನನಗೆ ಭರವಸೆ ಇದೆ. ಇನ್ನು, ಒಂದಕ್ಕೊಂದು ವಿರುದ್ಧವಾಗಿರುವ ಕಥೆಗಳಲ್ಲಿ ಸತ್ಯವನ್ನು ಹುಡುಕಲು ಸಾಧ್ಯವೇ? ಈ ನಂಬಿಕೆಗಳ ಪಾಂಡಿತ್ಯವು ಇದುವರೆಗೂ ‘ದೇವರು ಎಂದರೇನು’ ಎಂಬ ಪ್ರಶ್ನೆಗೆ ‘ಅದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ’ ಎಂದು ಅವರವರ ಆ ಬೇರೆ ಬೇರೆ ತಮ್ಮೊಳಗೆ ವಿರುದ್ಧ ಕಥೆಗಳನ್ನು ವಿಸ್ತರಿಸಿ ಹೇಳಿವೆ!! ಸತ್ಯದ ಬಗ್ಗೆ ಮಾತನಾಡುವಾಗ,  ಒಂದೇ ಪ್ರಶ್ನೆಗೆ ಅಥವಾ ಒಂದೇ ಸತ್ಯದ ವಿವರಣೆಗೆ ಹಲವು ಕಥೆಗಳು ಅಥವಾ ಹಲವು ಉತ್ತರಗಳು ಬರಬಾರದು ನೋಡಿ. ಆದುದರಿಂದ ಸತ್ಯ ಸಿಗಬೇಕಿದ್ದರೆ ಅದು ನಂಬಿಕೆಗಳಿಂದ ಸಿಗುವುದಿಲ್ಲ ಎಂಬುವುದು ಖಂಡಿತವಾಯಿತು, ಮತ್ತು ಅಲ್ಲಿ ನಾವು ವೈಜ್ಞಾನಿಕವಾಗಿ ಆಲೋಚಿಸಲೇಬೇಕಾಗುತ್ತದೆ. ಕನಿಷ್ಠಪಕ್ಷ ಆ ಏಕ ಸೃಷ್ಟಿಕರ್ತನ ಕಥೆಗಳು ಯಾಕೆ ಬೇರೆ ಬೇರೆ, ಅವನ ಸ್ವರ್ಗಗಳ ವಿವರಣೆ ಯಾಕೆ ತಮ್ಮೊಳಗೆ ವಿರುದ್ಧ, ಇತ್ಯಾದಿಗಳ ಬಗ್ಗೆ ಎಲ್ಲಾ ಧರ್ಮ, ಪಂಥದವರು ಒಟ್ಟಾಗಿ ಕುಳಿತು ಚರ್ಚಿಸಬಹುದಿತ್ತಲ್ಲಾ? ಅದರ ಬದಲು, ಅವರವರ ಕಥೆಗಳೇ ಸರಿ ಎಂದು ವಾದ, ದ್ವೇಷ, ಹಿಂಸೆ ರಕ್ತಪಾತಗಳನ್ನು ಮಾಡುತ್ತಾ ಬಂದಿರುವ ಧರ್ಮ, ಪಂಥಗಳ ಆ ಭೀಕರ ಚರಿತ್ರೆಯನ್ನು ಮಾತ್ರ ನಾವು ಕಾಣುತ್ತಿರುವುದು!!  ಒಟ್ಟಲ್ಲಿ, ಮುಂದೆ ಕಾಲಹೋದಂತೆ ಜನರು ಎಲ್ಲದರಲ್ಲೂ ಸತ್ಯವನ್ನು ಮಾತ್ರ ಕೇಳುವರು ಹೊರತು ‘ಸುಳ್ಳು’ ಅವರಿಗೆ ಪವಿತ್ರ ಎಂದು ತೋರಲಾರದು ಖಂಡಿತ! ಆಗ, ನನ್ನ ಮಾತುಗಳು, ಸತ್ಯವನ್ನು ಪೂರ್ಣವಾಗಿ ಮತ್ತು ವೈಜ್ಞಾನಿಕವಾಗಿ ತೆರೆದಿಡುವ ಕಾರಣ, ಜನರಿಗೆ ಬಹಳ ಸ್ಪಷ್ಟವಾಗಿ ಅರ್ಥ ಮಾಡಿಸಿಕೊಡಬಹುದು. ಆಗ, ಮಾನವರು ತಾವಾಗಿ ಈ ರಕ್ತಸಿಕ್ತ ಭೂಮಿಯನ್ನು ಆ ಪವಿತ್ರ ಶಾಂತಿಯ ಸತ್ಯಯುಗದ ಭೂಮಿಯನ್ನಾಗಿ ಬದಲಾಯಿಕೊಳ್ಳುವರು ಎಂದು ಆಶಿಸುವೆನು.

ನೀವು, ಭೂಮಿಯ ಮಾನವರ ಮೇಲೆ ಅನ್ಯಗ್ರಹಜೀವಿಗಳ ನಿಯಂತ್ರಣ ಇದೆ ಎಂದು ಹೇಳುತ್ತೀರಲ್ಲಾ, ನೀವು ಅನ್ಯಗ್ರಹಜೀವಿಗಳನ್ನು ನೋಡಿದ್ದೀರಾ?

ನೋಡಿ, ಇಲ್ಲಿ ಈ ಪ್ರಶ್ನೆಗೆ ಕಾರಣ ಸಹಿತ ವಿವರಿಸಿದರೆ ಮಾತ್ರ ಅರ್ಥ ಆಗಬಹುದಷ್ಟೆ, ಆದುದರಿಂದ, ಈ ಕೆಳಗಿನ ಅಂಶಗಳನ್ನು ಗಮನಿಸಿರಿ.

ನೋಡಿ, ನಾನು ಈ ಮೊದಲೇ ಒಂದು ಅತಿಸೂಕ್ಷ್ಮ ರಹಸ್ಯ ವಾಮಾಚಾರ ವ್ಯವಸ್ಥೆಯು ಈ ಭೂಮಿಯ ಸರ್ವ ಮಾನವರ ಭವಿಷ್ಯ, ಆಯುಷ್ಯ, ಹಾಗೂ ಧರ್ಮ, ಪಂಥ, ಅನುಗ್ರಹ, ಇತ್ಯಾದಿ ಎಲ್ಲವನ್ನು ಕೂಡಾ ಶಿಲಾಯುಗದಿಂದಲೇ ನಿಯಂತ್ರಿಸುತ್ತಾ ಬರುತ್ತಿದೆ ಎಂದು ಹೇಳಿದ್ದೆನು.

ನೋಡಿ, ಈ ಅತಿರಹಸ್ಯ ಸೂಕ್ಷ್ಮದ ವಾಮಾಚಾರ ವ್ಯವಸ್ಥೆಯ ಬಹಳ ಹೆಚ್ಚಿನ ಮೋಸಗಳನ್ನು ನಾನು ಸೂಕ್ಷ್ಮದ ಬೇಹುಗಾರಿಕೆಯಲ್ಲಿ ಸ್ಪಷ್ಟವಾಗಿ ನೋಡಿದ್ದೇನೆ ಎಂಬುವುದನ್ನು ಇಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದೇನೆ.

ಆ ನನಗೆ ತಿಳಿದಿರುವ ಒಟ್ಟು ರಹಸ್ಯಗಳಲ್ಲಿಟ್ಟು 15% ದಷ್ಟು ಹೊರಗೆ ಜನತೆಗೆ ಈಗಾಗಲೇ ಹೇಳಿರುವೆನು. ಇನ್ನುಳಿದ, ಅದರ ಕುರಿತಾಗಿರುವ ನನ್ನ ಅರಿವಿನ ಆ 85% ವನ್ನು ನಾನು ಹೊರಗೆ ಹೇಳುವುದಿಲ್ಲ ಅಷ್ಟೆ. ಯಾಕೆಂದರೆ, ಅದು ನಿಮ್ಮ ಕಲ್ಪನೆಯಲ್ಲಿಯೂ ನೆನೆಯಲು ಸಾಧ್ಯವಾಗದಷ್ಟು ಭೀಕರ ಹಾಗೂ ಹೀನವಾಗಿರುವುದು! ಜನತೆಗೆ ಎಚ್ಚರಿಕೆ ನೀಡಿ, ಅದರ ಪ್ರಭಾವದಿಂದ ಹೇಗಾದರೂ ಪಾರಾಗುವ ವಿಧಾನಗಳನ್ನು ತಿಳಿಸಲು ಸೂಕ್ಷ್ಮದ ಆ ರಹಸ್ಯಗಳ ಈ ಅರಿವು ಮಾತ್ರ ಧಾರಾಳ ಸಾಕಾಗುವುದು. ಇನ್ನು, ಈ ಎಲ್ಲವನ್ನು ನಿಯಂತ್ರಿಸುವ, ಆ ಅತಿಪ್ರಾಚೀನ, ಅತಿರಹಸ್ಯ, ಸೂಕ್ಷ್ಮದ ವಾಮಾಚಾರದ ವ್ಯವಸ್ಥೆಯನ್ನು ಯಾರು ಸೃಷ್ಟಿಸಿದರು ಮತ್ತು ಅದರಿಂದ ಅವರಿಗೆ ಏನು ಪ್ರಯೋಜನ ಎಂಬ ಪ್ರಶ್ನೆಗಳು, ಮಾನವರ ಮಟ್ಟಿಗೆ, ಬರೇ ಅನಂತರದ ಪ್ರಶ್ನೆಗಳು ಅಥವಾ ಮುಖ್ಯವಲ್ಲದ ಪ್ರಶ್ನೆಗಳು ಮಾತ್ರ ಆಗುವುದು ಎಂಬುವುದನ್ನು ಮರೆಯಬಾರದು.

ಸೂಕ್ಷ್ಮದಲ್ಲಿಯೂ ಕಾಣಿಸದೆ ಅವಿತು ನಿಯಂತ್ರಿಸುವ ಈ ಅತಿ ರಹಸ್ಯ ವಾಮಾಚಾರ ವ್ಯವಸ್ಥೆಯ ಬಗ್ಗೆ:

1. ಇನ್ನು, ರಹಸ್ಯವಾಗಿ ನಿಯಂತ್ರಿಸುವ ಈ ಪ್ರಾಚೀನ ವಾಮಾಚಾರವು, ಸೂಕ್ಷ್ಮದಲ್ಲಿಯೂ ಕಾಣಿಸದೆ ಅತಿ ರಹಸ್ಯವಾಗಿ ಕೆಲಸ ಮಾಡುವ ಕಾರಣವೇ, ಅದು, ಮಾನವ ನಿರ್ಮಿತ ವಾಮಾಚಾರ ವ್ಯವಸ್ಥೆ ಅಲ್ಲ ಎಂದು ಹೇಳುವುದು.

2. ಅದು ಮಾನವ ನಿರ್ಮಿತವಾಗಿದ್ದರೆ, ಆ ವಾಮಾಚಾರ ವ್ಯವಸ್ಥೆಯನ್ನು ಸೃಷ್ಟಿಸಿರುವ ಆ ವಾಮಾಚಾರಿಗಳ ಕುಟುಂಬ ಅಥವಾ ಇನ್ನು ಅದು ರಾಜಕುಟುಂಬ ಪ್ರಾಯೋಜಿತವಾಗಿದ್ದರೆ, ಆ ರಾಜವಂಶ, ಅಂದಿನಿಂದ ಇಂದಿನವರೆಗೂ ಈ ಭೂಮಿಯನ್ನೇ ನಿಯಂತ್ರಿಸುತ್ತಾ ಬರುತ್ತಿದ್ದವು, ಆದರೆ, ಯಾವುದೇ ವಾಮಾಚಾರ ಪರಂಪರೆಯು ಮತ್ತು ರಾಜ, ಮಹಾರಾಜರುಗಳ ವಂಶವು ಈ ಭೂಮಿಯಲ್ಲಿ ಸ್ವಲ್ಪಕಾಲ ಇದ್ದು ನಾಶವಾಗಲ್ಪಟ್ಟಿವೆ ಹೊರತು ಯಾವುದು ಕೂಡಾ ಈ ಭೂಮಿಯನ್ನೇ ನಿಯಂತ್ರಿಸುತ್ತಾ ಬರುವುದು ನಮಗೆ ಕಾಣಿಸುವುದಿಲ್ಲ. ಹೀಗಿರುವಾಗ, ಈ ಅತಿರಹಸ್ಯ ವಾಮಾಚಾರವು, ಭೂಮಿಯ ಯಾವ ವಾಮಾಚಾರಿ ಪರಂಪರೆ ಅಥವಾ ರಾಜಕುಟುಂಬಗಳ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವುದು ಅಲ್ಲ ಎಂಬುವುದು ಸ್ಪಷ್ಟವಾಗುವುದು.

3. ಇನ್ನು, ಶಿಲಾಯುಗದ ಕಾಡು ಮಾನವರು ಈ ವಾಮಾಚಾರವನ್ನು ಮಾಡಿರಬಹುದೇ ಎಂದು ನೋಡಿದಾಗ, ಅತ್ಯಂತ ಸಂಕೀರ್ಣವಾಗಿರುವ ಮತ್ತು ಅತ್ಯಂತ ಬುದ್ಧಿಶಕ್ತಿಯನ್ನು ಉಪಯೋಗಿಸಿ ಮಾಡಿರುವ ಸೂಕ್ಷ್ಮದ ಈ ಅತಿರಹಸ್ಯ ವಾಮಾಚಾರ ವ್ಯವಸ್ಥೆಯನ್ನು ಸೃಷ್ಟಿಸುವ, ಆ ಬೌದ್ಧಿಕ ಮಟ್ಟದ ಸಾಮರ್ಥ್ಯವನ್ನು ಕಾಡುಜನಾಂಗವು ಹೊಂದಿರಲಿಲ್ಲವಾದುದರಿಂದ, ಕಾಡುಮಾನವರು ಈ ಅತಿರಹಸ್ಯ ವಾಮಾಚಾರ ವ್ಯವಸ್ಥೆಯನ್ನು ಮಾಡಿರುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟವಾಗುವುದು.

ಇನ್ನು, ಮನುಷ್ಯರು ಕಾಡಿನಲ್ಲಿ ವಾಸಿಸುತ್ತಿರುವಾಗ ಮಾಡುತ್ತಿದ್ದ ಆ ಚಿಕ್ಕ ಪುಟ್ಟ ಕಾಡುವಾಮಾಚಾರಗಳು, ಅನಂತರ ಭೂಮಿಯಲ್ಲಿ ಬೆಳೆದು ಬಂದಿರುವ ಮನುಷ್ಯ ನಿರ್ಮಿತ ವಾಮಾಚಾರ ಪದ್ಧತಿಗಳು, ತಂತ್ರ ಶಾಸ್ತ್ರ, ಸೂಕ್ಷ್ಮಶಕ್ತಿ ಆರಾಧನೆ ರೀತಿಗಳು, ಅವುಗಳ ನಂಬಿಕೆ, ಆಚಾರಗಳು, ಇತ್ಯಾದಿಗಳ ಆದಿಯಾಗಿ ಮಾತ್ರ ಪರಿಗಣಿಸಬಹುದಷ್ಟೆ ಹೊರತು ಅದು, ಈ ಭಯಾನಕ ಮತ್ತು ಸಂಕೀರ್ಣವಾಗಿರುವ, ಸೂಕ್ಷ್ಮಲೋಕದಲ್ಲೂ ರಹಸ್ಯವಾಗಿ ಅಡಗಿ ಸರ್ವವನ್ನೂ ನಿಯಂತ್ರಿಸುತ್ತಿರುವ ಆ ಪ್ರತ್ಯೇಕ ವಾಮಾಚಾರದ ಮೂಲ ಆಗಲಾರದು.

4. ಇನ್ನು, ಇದೇ ಸರ್ವವನ್ನೂ ನಿಯಂತ್ರಿಸುವ ಸೂಕ್ಷ್ಮದ ರಹಸ್ಯ ವಾಮಾಚಾರವು, ಶಿಲಾಯುಗದಿಂದಲೇ, ಎಲ್ಲಾ ಆಚಾರ, ನಂಬಿಕೆ, ಆರಾಧನೆ, ಇತ್ಯಾದಿಗಳ ಹಿಂದೆ, ಮತ್ತು ಮಾನವರಿಗೆ ಹಾಗೂ ಸೂಕ್ಷ್ಮವಲಯದ ಸೂಕ್ಷ್ಮಶಕ್ತಿಗಳಿಗೂ ತಿಳಿಯದಂತೆ, ಮೋಸದ ಆ ನಿಯಂತ್ರಿಸುವ ಕೆಲಸ ಮಾಡುತ್ತಾ ಬಂದಿರುವವು. ವ್ಯಕ್ತಿ, ಮನೆ, ಸಮಾಜ, ದೇಶ, ಲೋಕ, ಧರ್ಮ, ಪಂಥ, ಇತ್ಯಾದಿ ಎಲ್ಲದರಲ್ಲಿಯೂ ಇವು ಹಿಂದಿನಿಂದಲೇ ತಮ್ಮ ನಿಯಂತ್ರಣದ ಕೆಲಸ ಮಾಡುತ್ತಾ ಬಂದಿರುವವು! ಇನ್ನು, ದೇವರಿಗೂ ನಿಯಂತ್ರಿಸಲಾಗದ ಆ ವಿಧಿ ಎಂಬುವುದನ್ನು ಮಾನವ ಜೀವನದಲ್ಲಿ ಇವುಗಳೇ ಸೃಷ್ಟಿಸಿ ನಿಯಂತ್ರಿಸುತ್ತಿರುವುದು!! ದುರದೃಷ್ಟವಶಾತ್, ಇವೆಲ್ಲವೂ, ಧರ್ಮ. ಪಂಥ, ಶಾಸ್ತ್ರ, ಇತ್ಯಾದಿಗಳಿಗೆ ಇನ್ನೂ ತಿಳಿದಿಲ್ಲ. ಇದಕ್ಕೆ ಕಾರಣ, ಅವು ಎಲ್ಲವೂ ಸೂಕ್ಷ್ಮದಲ್ಲಿ ತಾನಾಗಿ ಬರುವ ಅನುಭವಗಳನ್ನು ಅವಲಂಭಿಸಿದವು ಹೊರತು ಸೂಕ್ಷ್ಮದ ಬೇಹುಗಾರಿಕೆಯನ್ನು ಮಾಡಿರಲಿಲ್ಲ.

5. ಸೂಕ್ಷ್ಮದಲ್ಲಿ ಬೇಹುಗಾರಿಕೆಯನ್ನು ಮಾಡುತ್ತಾ ಒಂದು ರೀತಿಯಲ್ಲಿ ಕಾಲದಲ್ಲಿ ಹಿಂದೆ ಹಿಂದೆ ಹೋಗಬಹುದು. ಎಷ್ಟು ಹಿಂದೆ ಹೋದರೂ, ಇದೇ ಅತಿ ಬುದ್ಧಿವಂತಿಕೆಯ ವಾಮಾಚಾರ ವ್ಯವಸ್ಥೆ, ಸೂಕ್ಷ್ಮದಲ್ಲಿ ಅಡಗಿ ಕೆಲಸಮಾಡುತ್ತಿರುವುದು ಕಾಣಿಸುವುದು.

6. ಇನ್ನು, ಈ ವಾಮಾಚಾರ ವ್ಯವಸ್ಥೆಯು ನಿರಂತರ ಮಾನವ ಮನೋಶಕ್ತಿಗಳನ್ನು ಸಂಗ್ರಹಿಸುತ್ತಾ ಇರುತ್ತವೆ. ಹಾಗಿರುವಾಗ, ಪ್ರತಿದಿನ ಈ ಭೂಮಿಯಲ್ಲಿ ಅವು ಸಂಗ್ರಹಿಸುವ ಅಷ್ಟು ದೊಡ್ಡ ಶಕ್ತಿಯನ್ನು ಅವು ಎಲ್ಲಿ ಇರಿಸುವವು ಮತ್ತು ಇಷ್ಟು ಲಕ್ಷ ವರುಷಗಳು ಅವನ್ನು ಯಾಕಾಗಿ ತಮ್ಮಲ್ಲಿ ಕಾರಣವಿಲ್ಲದೆ ಇರಿಸಿಕೊಳ್ಳಬೇಕು ಎಂಬ ಪ್ರಶ್ನೆ ಬರುವುದು. ಈ ಸಂಶಯದ ಪ್ರಶ್ನೆ ಒಂದೇ ಸಾಕು, ಅವು ತಮ್ಮ ವಾಮಚಾರ ವ್ಯವಸ್ಥೆಯನ್ನು ನಡೆಸಲು ಬೇಕಾಗುವಷ್ಟು ಶಕ್ತಿಗಳನ್ನು ತಮ್ಮಲ್ಲಿ ಇಟ್ಟು, ಉಳಿದವನ್ನು ಎಲ್ಲಿಗೋ ಕಳುಹಿಸಿ ಕೊಡುತ್ತಿವೆ ಎಂಬ ನಿಗಮನಕ್ಕೆ ಬರಲು, ಎಂದು ತಿಳಿಯಬೇಕು.

ಇನ್ನೂ, ಕೆಲವು ಚಿಕ್ಕ ಪುಟ್ಟ ಕಾರಣಗಳು ಕೂಡಾ ಇವೆ. ಆದುದರಿಂದ, ಈ ಎಲ್ಲಾ ಕಾರಣಗಳಿಂದ ನಾನು ಸೂಕ್ಷ್ಮದ ಬೇಹುಗಾರಿಕೆಯಲ್ಲಿ ಕಂಡಿರುವ ಈ ಪ್ರತ್ಯೇಕ ಅತಿರಹಸ್ಯ ಸೂಕ್ಷ್ಮದ ವಾಮಚಾರವು ಅನ್ಯಗ್ರಹಜೀವಿಗಳದ್ದು ಎಂದು ತೀರ್ಮಾನಿಸಿರುವುದು.

ಈ ಸೂಕ್ಷ್ಮದ ಅತಿಬುದ್ಧಿವಂತ ಮತ್ತು ಅತಿರಹಸ್ಯ ವಾಮಾಚಾರ ವ್ಯವಸ್ಥೆಯನ್ನು ಸೃಷ್ಟಿಸಿರುವುದು ಅನ್ಯಗ್ರಹಜೀವಿಗಳು ಎಂಬುವುದು ಸತ್ಯವಾದರೂ, ಅವು ನೇರವಾಗಿ ಈ ಅತಿರಹಸ್ಯ ವಾಮಾಚಾರ ವ್ಯವಸ್ಥೆಯಲ್ಲಿ ಭಾಗವಹಿಸುವುದಿಲ್ಲ! ಯಾಕೆಂದರೆ, ಅದರಲ್ಲಿ ಸೇರಿಸಿರುವ ಎಲ್ಲಾ ಸೂಕ್ಷ್ಮಶಕ್ತಿಗಳನ್ನು ಮನುಷ್ಯರ ವ್ಯಕ್ತಿತ್ವ ಹಾಗೂ ಮನುಷ್ಯ ಮನಸ್ಸಿನಿಂದಲೇ ಸೃಷ್ಟಿಸಿರುವುದು. ಅಂದರೆ, ಈ ಅತಿರಹಸ್ಯ ಸಂಕೀರ್ಣ ವಾಮಾಚಾರ ವ್ಯವಸ್ಥೆಯ ಆ ದೊಡ್ಡ ಬುದ್ದಿವಂತಿಕೆಯು ಮಾತ್ರ ಅವುಗಳದ್ದು, ಇನ್ನುಳಿದ ಎಲ್ಲವೂ, ಭೂಮಿಯ ಮಾನವರ ಮನೋಶಕ್ತಿಯಿಂದಲೇ ತಯಾರು ಮಾಡಲ್ಪಟ್ಟದ್ದು ಎಂದು ಅರ್ಥ. ಇನ್ನು, ಈ ರಹಸ್ಯ ವಾಮಾಚಾರ ವ್ಯವಸ್ಥೆಯ ಆ ಕೊನೆಯ ಹಂತದಲ್ಲಿ ತಯಾರಿ ಆಗುವ ಉತ್ಪನ್ನಗಳು ಎಂಬ ಈ ಸೂಕ್ಷ್ಮ ಮಾನವ ಮನೋಶಕ್ತಿಗಳನ್ನು, ಕೈಗಾರಿಕೆಗಳ ಉತ್ಪನ್ನಗಳ ತರ, ಅವು ತಮ್ಮ ಲೋಕಕ್ಕೆ ಕೊಂಡುಹೋಗುವುದೆಂದು ತಿಳಿಯಬೇಕು.

ಅವುಗಳು, ಈ ಮನೋಶಕ್ತಿಗಳನ್ನು ಅವುಗಳ ಲೋಕಕ್ಕೆ ಸಾಗಿಸುವ ವಿಚಾರವಾಗಿ ಉಪಯೋಗಿಸುವ ಟೆಲಿಪೋರ್ಟೇಶನ್ ವಿಜ್ಞಾನ ಹಾಗೂ ಇತರ ವಿವರಣೆಗಳನ್ನು ಜಾಲತಾಣದಲ್ಲಿ ಕೊಡಲಾಗಿದೆ. ಆಸಕ್ತಿ ಇದ್ದವರು ಓದಿ ತಿಳಿದುಕೊಳ್ಳಬಹುದು.

ಈ ಎಲ್ಲಾ ಕಾರಣಗಳಿಂದ, ನಾನು ಸ್ಪಷ್ಟವಾಗಿ ಸೂಕ್ಷ್ಮದ ಬೇಹುಗಾರಿಕೆಯಲ್ಲಿ ಕಂಡಿರುವ, ಆ ಅತಿರಹಸ್ಯ ಪ್ರಾಚೀನ ವಾಮಾಚಾರ ವ್ಯವಸ್ಥೆಯು ಅನ್ಯಗ್ರಹಜೀವಿಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು  ನಿಗಮನಕ್ಕೆ ಬಂದಿರುವುದು. [NB-ನಾಸಾದ ವಿಜ್ಞಾನಿಗಳು, ಅನ್ಯಗ್ರಹಜೀವಿಗಳ ವಾಹನಗಳು ಆಗಾಗ್ಗ ಅದೃಶ್ಯವಾಗುವ ಶಕ್ತಿಯನ್ನು ಒಳಗೊಂಡಿವೆ ಮತ್ತು ಅವು ಭೂಮಿಗೆ ಹಲವು ಬಾರಿ ಬಂದು ಹೋಗುತ್ತಿವೆ ಎಂದೆಲ್ಲಾ ಹೇಳುತ್ತಾ, ಕೊನೆಗೆ ಅನ್ಯಗ್ರಹಜೀವಿಗಳು ಈ ಭೂಮಿಗೆ ಬಂದುಹೋಗುತ್ತಿವೆಯೇ ಎಂಬ ಸಂಶಯವನ್ನು ಕೂಡಾ ದೊಡ್ಡ ರೀತಿಯಲ್ಲಿ ಹೊರಹಾಕಿದ್ದಾರೆ! ಇದು ನಿಜವಾಗಿಯೂ, ‘ಅನ್ಯಗ್ರಹಜೀವಿಗಳು, ಮಾನವ ಮನೋಶಕ್ತಿ ವ್ಯಾಪಾರಕ್ಕಾಗಿ, ಶಿಲಾಯುಗದಿಂದಲೂ ಈ ಭೂಮಿಗೆ ಬಂದು ಹೋಗುತ್ತಿವೆ’ ಎಂಬ ಆ ನನ್ನ ನಿಗಮನಕ್ಕೆ ಪೂರಕವಾಗಿರುವ ಒಂದು ತರದ ಪುರಾವೆ ಆಗುವುದು.]

ನೀವು ಮತಾಂತರದ ಬಗ್ಗೆ ಏನು ಹೇಳುವಿರಿ?

ನೀವು, ಮತಾಂತರ ಎಂದರೆ ಒಬ್ಬ ವ್ಯಕ್ತಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದನ್ನು ಉದ್ದೇಶಿಸುತ್ತಿರಾ? ಹಾಗಿದ್ದರೆ ಕೇಳಿ, ನೀವು ಹೇಳುವ ರೀತಿಯಲ್ಲಿ ಮತಾಂತರ ಎಂಬುವುದು ಎಂದಿಗೂ ಸಾಧ್ಯವಿಲ್ಲ! ಯಾಕೆಂದರೆ, ಈ ಕಾಣುವ ಆಕಾಶದಿಂದ ಇನ್ನೊಂದು ಆಕಾಶಕ್ಕೆ ಹೋಗಲು ಅಥವಾ ಬದಲಾಯಿಸಿಕೊಳ್ಳಲು ನಿಮಗೆ ಸಾಧ್ಯವಾದರೆ ಮಾತ್ರ ನಿಮಗೆ ಮತಾಂತರವು ಸಾಧ್ಯವಾಗಬಹುದು ಎಂದು ಹೇಳಲು ಸಾಧ್ಯ. ಅಂದರೆ, ಯಾವುದೇ ಧರ್ಮವು ಪೂರ್ತಿಯಾಗಿ ಆಕಾಶದಂತೆ ಸಾರ್ವತ್ರಿಕವಾದ ಮಾನವನ ಉತ್ತಮ ಸ್ವಭಾವದ ಬೆಳವಣಿಗೆಯನ್ನು ಹೇಳುವುದು. ಯಾವ ಧರ್ಮವಾದರೂ, ಒಬ್ಬ ವ್ಯಕ್ತಿಯನ್ನು ‘ನೀನು ಕಳ್ಳನಾಗಬೇಕು’ ಎಂದು ಹೇಳುವುದಿಲ್ಲ. ಇನ್ನು, ದೇವರುಗಳು, ಆಚಾರ, ನಂಬಿಕೆಗಳು, ಈ ಜಗತ್ತಲ್ಲಿ ಕೋಟಿಗಟ್ಟಲೆ ಇವೆ, ಮತ್ತು ಅವುಗಳು ಎಲ್ಲವೂ ಇದ್ದು ಕೂಡಾ, ಒಬ್ಬನು ಕಳ್ಳ ಅಥವಾ ಕೊಲೆಗಾರ ಆಗುವುದಾದರೆ, ಅವುಗಳಿಂದೆಲ್ಲಾ ಆಗುವ ಪ್ರಯೋಜನವಾದರೂ ಏನು? ಕಳ್ಳನು ಧರ್ಮಗಳ ಆ ಆಚಾರ ನಂಬಿಕೆಗಳನ್ನು ಆಚರಿಸಿದರೂ ಆತನು ಕಳ್ಳನಾಗಿಯೇ ಇರುವನು ಉತ್ತಮನಾಗುವುದಿಲ್ಲ ಎಂದಾದರೆ, ಅದಕ್ಕೆ ಕಾರಣ, ಧರ್ಮವು ಎಂದರೆ ಅದು ಆಚಾರ ನಂಬಿಕೆಗಳಲ್ಲ ಬದಲು ಉತ್ತಮ ಸ್ವಭಾವದ ಬೆಳೆಸುವಿಕೆಯಾಗಿದೆ ಎಂಬ ಸತ್ಯ ಆಗಿರುವುದು.

ಇನ್ನು, ಈ ಉತ್ತಮ ಸ್ವಭಾವಕ್ಕೆ ಧರ್ಮದ ಬೇಲಿಗಳಾದ ನಂಬಿಕೆ ಆಚಾರಗಳ ಬೆಂಬಲದ ಅಗತ್ಯವಿಲ್ಲ. ಅದನ್ನು ಒಬ್ಬ ಮನುಷ್ಯನಿಗೆ ತನ್ನ ಮನಸ್ಸನ್ನು ಪವಿತ್ರಗೊಳಿಸಿ, ಹೃದಯವೈಶಾಲ್ಯತೆಯನ್ನು ಗಳಿಸಿ ಪಡೆಯಬಹುದು. ಈ ಕಾರಣಗಳಿಂದಾಗಿ ನಿಜವಾಗಿಯೂ, ಧರ್ಮವು, ಬೇಲಿಗಳ ಕಾಟಗಳಿಂದ ಮುಕ್ತ ಮತ್ತು ಅದು ಆಕಾಶದಂತೆ ಬೇಲಿರಹಿತವಾಗಿರುವುದು ಎನ್ನುವುದು. ಆಕಾಶದಿಂದ ಇನ್ನೊಂದು ಆಕಾಶಕ್ಕೆ ಹಾರಲು ಯಾರಿಗೂ ಸಾಧ್ಯವಾಗದಿರುವ ಕಾರಣ, ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಆಗಲು ಯಾರಿಂದಲೂ ಸಾಧ್ಯವಿಲ್ಲ, ಆದರೆ, ನಂಬಿಕೆ ಆಚಾರಗಳ ಆ ಸಾವಿರಗಟ್ಟಲೆ ಬೇಲಿಗಳಲ್ಲಿ ಒಂದು ಬೇಲಿಯಿಂದ ಇನ್ನೊಂದು ಬೇಲಿಗೆ ನೆಗೆಯಬಹುದು ಅಷ್ಟೆ. ನೆನಪಿಡಿ, ಈ ಬೇಲಿಗಳೆಲ್ಲವು ಬರೇ ಪಂಜರಗಳು ಆಗಿರುವವು. ನಿಜವಾದ ಧರ್ಮವು ಅದು ಬೇಲಿರಹಿತ ಮತ್ತು ಆಕಾಶದಂತೆ ವಿಶಾಲವಾಗಿರುವುದು. ಹಾಗಿದ್ದರೆ ಅದು ಯಾವುದು? ಆ ಬೇಲಿರಹಿತ ನಿಜವಾದ ಧರ್ಮವೇ, ಸತ್ಯ, ಪ್ರೀತಿ, ನೀತಿಯಾಗಿದೆ. ಈ ಸತ್ಯ, ಪ್ರೀತಿ, ನೀತಿ ಎಂಬ ಪವಿತ್ರ ಧರ್ಮವು ಇಲ್ಲ ಎಂದು ಯಾವುದೇ ಧರ್ಮವು ಹೇಳಿದರೆ, ಆ ಧರ್ಮ ಅಥವಾ ಪಂಥವು ಅಲ್ಲೇ ಸತ್ತು ಬೀಳುವುದು. ಹೌದು, ಯಾಕೆಂದರೆ, ಅವು ಮೂರು ಇಲ್ಲದೆ ಯಾವುದೇ ಧರ್ಮ ಅಥವಾ ಪಂಥಕ್ಕೆ ಅಸ್ತಿತ್ವವೇ ಇರುವುದಿಲ್ಲ!! ಎಲ್ಲಾ ಬೇಲಿ ಧರ್ಮಗಳಲ್ಲೂ ಇರಲೇಬೇಕಾದ ಆ ಸಾರಧರ್ಮ ಅಥವಾ ಆ ನಿಜವಾದ ಧರ್ಮವೇ ಇವು ಆಗಿವೆ. ಆದುದರಿಂದಲೇ ಇನ್ನೊಮ್ಮೆ ಹೇಳುವೆನು, ಜಗತ್ತಲ್ಲಿ ಯಾರಿಗೂ ಮತಾಂತರ ಎಂಬಲ್ಲಿ ಬರೇ ಒಂದು ಬೇಲಿ ಪಂಜರದಿಂದ ಇನ್ನೊಂದು ಬೇಲಿ ಪಂಜರಕ್ಕೆ ಹೋಗಬಹುದು ಹೊರತು ಧರ್ಮವನ್ನು ಬದಲಾಯಿಸಿಕೊಳ್ಳಲು ಅಥವಾ ಇನ್ನೊಂದು ಧರ್ಮವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ, ನನಗೆ ಬೇಲಿ ಪಂಜರವಿಲ್ಲದ ಆ ಮುಕ್ತ ಧರ್ಮ ಮಾತ್ರ ಇರುವುದು ಎಂದು ಹೇಳುವೆನು, ಮತ್ತು ಆ ಪರಿಶುದ್ಧವಾದ ಮತ್ತು ಯಾವುದೇ ಬೇಲಿಯಿಂದ ಬಂಧಿಸಲ್ಪಡದ ಧರ್ಮದಲ್ಲಿ ಜೀವಿಸುವೆನು. ದಯವಿಟ್ಟು, ಇನ್ನಾದರೂ, ಈ ಬರೇ ಬೇಲಿಗಳಿಗಾಗಿ ದ್ವೇಷ, ಹಿಂಸೆ, ರಕ್ತಪಾತ ಮಾಡುವುದನ್ನು ನಿಲ್ಲಿಸಿರಿ. ಶಾಂತಿಯ ಹಾಗೂ ಪ್ರೀತಿಯ ಬೆಳಕನ್ನು ಚೆಲ್ಲಬೇಕಾಗಿರುವ ಜಗತ್ತಿನ ಧರ್ಮಗಳು, ಅವುಗಳ ಬೇಲಿ ವಿಷಸರ್ಪಗಳ ಕಾರಣದಿಂದಾಗಿ, ವಿಷವನ್ನು, ಈ ಭೂಮಿಯಲ್ಲಿ ಹಿಂದಿನಿಂದಲೇ ಕಕ್ಕುತ್ತಾ ಬಂದಿವೆ!! ಅವು, ಇನ್ನಾದರೂ ಬೇಲಿಯ ವಿಚಾರವಾಗಿ ಇಟ್ಟುಕೊಂಡಿರುವ ಆ ಕುರುಡು ನಂಬಿಕೆಗಳಿಂದ ದೈವಿಕವಾದ ಸತ್ಯದ ಕಡೆಗೆ ಬಂದು, ಚಿಂತಿಸಿ, ಪ್ರಬುದ್ಧ ಆಗದಿದ್ದರೆ, ಇದೇ ಬೇಲಿ ವಿಷಸರ್ಪಗಳು ಇನ್ನೂ ಭೀಕರವಾಗಿ ವಿಷವನ್ನು ಕಕ್ಕುತ್ತಾ ಮುಂದಿನ ಪೀಳಿಗೆಯನ್ನು ಹೋಗಿ ಸೇರಬಹುದು. ಆಗ, ಭೂಮಿಯ ಮುಂದಿನ ಪೀಳಿಗೆಯು ಆ ಭೀಕರ ದ್ವೇಷವಿಷರೋಗದಿಂದ ಹುಚ್ಚು ಹಿಡಿದು ತಮ್ಮೊಳಗೆ ‘ನಮ್ಮ ನಂಬಿಕೆ, ನಮ್ಮ ಆಚಾರ, ನಮ್ಮ ದೇವರು’, ಎಂದು ಕಿರುಚುತ್ತಾ ತಮ್ಮೊಳಗೆ ಕಚ್ಚಿ ಕಚ್ಚಿ  ಕೊಂದುಹಾಕಬಹುದು!! ಆ ರೀತಿಯಲ್ಲಿ ಭೀಕರವಾಗಿ ಹುಚ್ಚು ಹಿಡಿಯುವ ಮುನ್ನ ನಾವು ಈ ಮಾನವ ಸಹೋದರ ಸಹೋದರಿಯರನ್ನು ಹೇಗಾದರೂ ರಕ್ಷಿಸಬೇಕಾಗಿದೆ. ಈ ಮತಶುದ್ಧೀಕರಣದ ಜವಾಬ್ದಾರಿಕೆಯನ್ನು ಜಗತ್ತಿನ ಎಲ್ಲಾ ಧರ್ಮ, ಪಂಥಗಳ ನೇತಾರರು ಅಥವಾ ಮುಖಂಡರು ದಯವಿಟ್ಟು ವಹಿಸಿಕೊಳ್ಳಬೇಕಾಗಿದೆ, ಬೇರೆ ದಾರಿ ಇಲ್ಲ. ಇದುವೇ, ಸರ್ವರಲ್ಲಿ ಮಾಡುವ  ಆ ನನ್ನ ವಿನಂತಿಯಾಗಿರುವುದು.

ದೇವರು ಸಂಕಲ್ಪ ಮತ್ತು ಶಕ್ತಿ ಸಂಕಲ್ಪಗಳು ತಮ್ಮೊಳಗೆ ವ್ಯತ್ಯಾಸ ಇದೆಯೇ? ನಿಮ್ಮ ವ್ಯಯಕ್ತಿಕ ಅಭಿಪ್ರಾಯ ಇದರ ಬಗ್ಗೆ ಏನು?

ಕಾಡು ಮಾನವರಾಗಿರುವಾಗಿನಿಂದಲೇ ಶಕ್ತಿ ಸಂಕಲ್ಪಗಳು ಆರಾಧಿಸಲ್ಪಡುತ್ತಿದ್ದವು. ಮಾನವರು ನಾಡಿಗೆ ಬಂದ ನಂತರ, ದೇವತೆ, ದೇವರು ಇತ್ಯಾದಿ ನಾಗರೀಕತೆಯ ಆ ಮೇಲಿನ ಹಂತದ ಆರಾಧನೆಯೂ ಅದರೊಂದಿಗೆ ಸೇರಲ್ಪಟ್ಟವು. ಶಕ್ತಿ ಸಂಕಲ್ಪದಲ್ಲಿ ಬರೇ ಅನುಗ್ರಹವನ್ನು ಪಡೆಯುವ ರೀತಿ ಮಾತ್ರ ಇರುವುದು. ಅಲ್ಲಿ, ಉತ್ತಮ ವ್ಯಕ್ತಿತ್ವದ ಕಡೆಗೆ ಮನುಷ್ಯನ ಹೃದಯದ ಪರಿವರ್ತನೆಯ ಬಗ್ಗೆ ಗಮನ ಇಲ್ಲ. ಯಾಕೆಂದರೆ, ಕ್ರೌರ್ಯದ ಭಾವದಲ್ಲಿರುವ ಶಕ್ತಿಗಳಿಗೂ ಸಾತ್ವಿಕವಾದ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಂಬಂಧವಿಲ್ಲ. ಅಲ್ಲಿ ಮುಖ್ಯವಾಗಿ ಇರುವುದು ಪಕ್ಷಿ ಬಲಿ, ಪ್ರಾಣಿ ಬಲಿ, ಮದ್ಯ, ಇತ್ಯಾದಿಗಳ ನೈವೇದ್ಯ ನೀಡುವಿಕೆಗಳಾಗಿವೆ. ಅಂದರೆ, ಶಕ್ತಿಗಳ ಭಾವವೇ ‘ಕ್ರೌರ್ಯ’ ಆಗಿರುವಾಗ, ಇನ್ನು, ಸತ್ಯ, ಪ್ರೀತಿ, ನೀತಿ, ಇತ್ಯಾದಿ ಮತ್ತು ಸ್ವಭಾವಶುದ್ಧಿಯ ವಿಷಯಗಳು ಎತ್ತಿ ಹಿಡಿಯಲ್ಪಡುವುದಿಲ್ಲ ಎಂದು ಅರ್ಥ. ಇನ್ನು, ದೇವರ ಆರಾಧನೆಯಲ್ಲೂ ಆಚಾರ ಭಕ್ತಿಯನ್ನು ಭಕ್ತಿ ಯೋಗಿಗಳು ಅನುಸರಿಸುವುದಿಲ್ಲ! ಭಕ್ತಿಯೋಗಿಗಳು ಯಾವ ನಂಬಿಕೆಯ ಆಚಾರ ಇತ್ಯಾದಿಗಳಿಗೆ ಗಮನ ಕೊಡುವುದಿಲ್ಲ. ಅವರದ್ದು ಆ ಯಾಂತ್ರಿಕ ಆಚಾರ ಭಕ್ತಿಯಲ್ಲ, ಬದಲು ಅವರದ್ದು ಜ್ಞಾನಭಕ್ತಿಯಾಗಿದೆ. ದಾಸರು, ಶರಣರು, ಇತ್ಯಾದಿ ಯೋಗಿಗಳು ಈ ವರ್ಗಕ್ಕೆ ಸೇರಿರುವರು. ಇವರ ಹೆಚ್ಚಿನ ಹಾಡುಗಳು ಸಮಾಜದ ಆಜ್ಞಾನವನ್ನು ತೊಡೆದು ಹಾಕುವ ರೀತಿಯ ಆ ‘ಜ್ಞಾನ’ವನ್ನು ಕೊಡುವುದು ಎಂಬುವುದನ್ನು ಮರೆಯಬಾರದು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’, “ತನುವ ನೀರಿಗೆ ಅದ್ದಿ ಫಲವೇನು, ಸಜ್ಜನರ ಸಂಗವ ಮಾಡುವುದೇ ಸ್ನಾನ, ದುಷ್ಟರ ಸಹವಾಸ ನೀಗುವುದೇ ಸ್ನಾನ..”ಎಂಬ ರೀತಿಯ ಸಾವಿರಾರು ಜ್ಞಾನದ ಮಾತುಗಳು ಇರುವ ಪದ್ಯಗಳನ್ನು ನಮಗೆ ಅವರಲ್ಲಿ ಕಾಣಬಹುದಾಗಿದೆ. ಇಂಥವರ ಸಂಖ್ಯೆ ಹೆಚ್ಚಾದರೆ, ಮನ, ಮನೆ, ಸಮಾಜಗಳಲ್ಲಿ ಸತ್ಯ, ಪ್ರೀತಿ, ನೀತಿ, ನ್ಯಾಯ, ಅಸ್ಪೃಶ್ಯತೆಯ ನಾಶ, ಧರ್ಮಾಂಧತೆ ನಾಶ, ಇತ್ಯಾದಿ ಆ ದೊಡ್ಡ ಕಾರ್ಯಗಳು ಬೆಳೆದು ಬರಬಹುದು. ದುರದೃಷ್ಟವಶಾತ್, ಆ ಮಹಾತ್ಮರ ಪದ್ಯಗಳನ್ನು ಭಜನೆಗೆ ಮಾತ್ರ ಸೀಮಿತಗೊಳಿಸಿ, ಇತ್ತ ಅದೇ ಹಿಂದಿನ ಆಚಾರ ಭಕ್ತಿಯು ಮತ್ತೂ ತನ್ನ ಕವಲುಗಳನ್ನು ಹೆಚ್ಚಿಸುತ್ತಾ ಹೋಗುತ್ತಿದೆ. ಬಡಜನರಿಗೆ ದೊಡ್ಡ ಖರ್ಚು ತಗಲುವ ಕೆಲವು ಆಚಾರಗಳನ್ನು ನೆರವೇರಿಸಲು ಸಾಧ್ಯವಾಗದೆ ಸಾಲಮಾಡಿ ಜೀವನವನ್ನೇ ಚಿಂತಾಜನಕವಾಗಿಸಿಕೊಂಡಿರುವ ಘಟನೆಗಳು ಕೂಡಾ ಸಾಕಷ್ಟು ನಾವು ಕೇಳಿದ್ದೇವೆ. ಆದುದರಿಂದ ಜನರು ಯಾವುದೇ ಆರಾಧನೆಯನ್ನಾಗಲೀ, ಆಚಾರಗಳನ್ನಾಗಲೀ, ಬಿಟ್ಟುಬಿಡಬೇಕು ಎಂದಲ್ಲ ಇಲ್ಲಿ ಹೇಳುವುದು, ಬದಲು, ಯಾವುದನ್ನು ಇಟ್ಟುಕೊಂಡರು ಕೂಡಾ, ಅದರೊಂದಿಗೆ, ಭಕ್ತಿಯೋಗಿಗಳ ತರದ ಆ ಶುದ್ಧಭಕ್ತಿಯ ‘ಜ್ಞಾನದ ಆರಾಧನಾ ರೀತಿ’ಯನ್ನು ಅತ್ಯಂತ ಎತ್ತರಕ್ಕೆ ಎತ್ತಿ ಹಿಡಿಯುವುದು ಇಂದು ಎಲ್ಲಾ ಧರ್ಮಗಳಲ್ಲೂ ಅನಿವಾರ್ಯವಾಗಿದೆ ಎಂದು ಹೇಳುವೆನು. ಇನ್ನು, ವ್ಯಯಕ್ತಿಕವಾಗಿ ಮಾತ್ರ ಹೇಳುವುದಾದರೆ, ನನಗೆ ಯಾವುದೇ ನಂಬಿಕೆ, ಆಚಾರಗಳು ಬೇಕಾಗಿಲ್ಲ, ಅದರ ಬದಲು, ನಾನು, ಸದಾಚಾರದಲ್ಲಿ ಸದಾ ಜೀವಿಸಲು ಸದಾ ಪ್ರಯತ್ನಿಸುವೆನು.

ಆಸ್ತಿಕರು ಮತ್ತು ನಾಸ್ತಿಕರಲ್ಲಿಟ್ಟು ಯಾರು ಉತ್ತಮರು?

ಈ ಜಗತ್ತು ಈಗಾಗಲೇ ಧರ್ಮ, ಪಂಥಗಳು ಎಂದು ಹಲವು ವಿಭಾಗಗಳಾಗಿ ಛಿದ್ರ ಛಿದ್ರವಾಗಿ ಹೋಗಿವೆ. ಎಲ್ಲೆಲ್ಲೂ ದ್ವೇಷ, ಹಿಂಸೆ, ರಕ್ತಪಾತ! ಅಯ್ಯೋ, ಈ ಧರ್ಮ, ಪಂಥಗಳು ಸಾಕೋ ಸಾಕು ಎನ್ನುವ ಮಟ್ಟಿಗೆ ಅವುಗಳ ಕಾಟ ತಡೆಯಲು ಸಾಧ್ಯವಾಗುವುದಿಲ್ಲ. ದಿನಪತ್ರಿಕೆಯಲ್ಲಿ ಆಗಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಆಗಲಿ, ದೂರದರ್ಶನಗಳಲ್ಲಿ ಆಗಲಿ, ಎಲ್ಲಿ ನೋಡಿದರೂ ಈ ಧರ್ಮಗಳ, ತಮ್ಮೊಳಗಿನ ದ್ವೇಷಕಾರುವಿಕೆ, ಮತಾಂತರ, ಹಿಂಸೆ, ರಕ್ತಪಾತ ಇತ್ಯಾದಿಗಳು ತುಂಬಿಕೊಂಡಿವೆ. ಆದರೆ, ಅಚ್ಚರಿ ಎಂದರೆ, ಎಲ್ಲ ಧರ್ಮ, ಪಂಥಗಳು ತಮ್ಮನ್ನು ತಾವು “ಶಾಂತಿಯ ಧರ್ಮ” ಎಂದು ದೊಡ್ಡದಾಗಿ ಹೇಳಿಕೊಳ್ಳುತ್ತವೆ ಎಂಬುವುದಾಗಿದೆ! ಎಷ್ಟು ಕಾಲ ಇನ್ನು ಈ ಜನರನ್ನು ಸುಳ್ಳಿನಿಂದ ಹೀಗೆ ಮೋಸ ಮಾಡಲು ಸಾಧ್ಯ? ಸತ್ಯವೇ ದೇವರು ಮತ್ತು ಧರ್ಮ, ಈ ಮಾತನ್ನು ಧರ್ಮ, ಪಂಥಗಳು ಒಪ್ಪುವುದಾದರೆ, ಮೊಟ್ಟಮೊದಲು, ಇಂದಿನ ಧರ್ಮ, ಪಂಥಗಳು ಮತ್ತು ತಮ್ಮ ಹಿಂದಿನ ಹಿರಿಯರು, ಧರ್ಮ, ಪಂಥದ ಹೆಸರಲ್ಲಿ ಮಾಡಿರುವ, ಇದುವರೆಗಿನ ಆ ಎಲ್ಲಾ ಪೈಶಾಚಿಕ ಹೀನ ಕೆಲಸಗಳಿಗೆ ಮುಂದೆ 1000 ವರುಷಗಳ ಕಾಲ ಪ್ರಾಯಶ್ಚಿತ ಮಾಡಲು ತೊಡಗಬೇಕಾಗುವುದು. ಅಷ್ಟಕ್ಕೂ ಅಧರ್ಮ ಈ ಧರ್ಮ, ಪಂಥಗಳಿಂದ ಈಗಾಗಲೇ ಆಗಿಹೋಗಿವೆ. ತಪ್ಪಾದರೆ ತಪ್ಪು ಆಗಿಹೋಗಿದೆ ಎಂದು ಹೇಳಿ ಅಲ್ಲಿಯೇ ಸರಿಪಡಿಸಿಕೊಳ್ಳುವುದು ಧರ್ಮದ ಲಕ್ಷಣವಾಗಿದೆ, ಆದರೆ ಸಾವಿರಾರು ವರುಷ ಕಳೆದರೂ ಈ ನಂಬಿಕೆಯ ಧರ್ಮ, ಪಂಥಗಳಿಗೆ ಇನ್ನೂ ಬೋಧ ಆಗಲಿಲ್ಲ ಎಂದರೆ ಅದು ಅತ್ಯಂತ ದೊಡ್ಡ ಅಚ್ಚರಿಯೇ ಆಗುವುದು! ಇನ್ನು ಕೂಡಾ, ‘ನಮ್ಮ ಧರ್ಮ ಶಾಂತಿಗಾಗಿ ಇರುವುದು’ ಎಂದು ಹೇಳುತ್ತಾ, ಭೀಕರ ದ್ವೇಷ, ಹಿಂಸೆ, ರಕ್ತಪಾತವು ಹೆಚ್ಚಾಗುತ್ತ ಹೋಗುತ್ತದೆ! ಏನಿದು, ಎಲ್ಲಿದೆ ಅವು ಹೇಳಿಕೊಳ್ಳುವ ಆ ಶಾಂತಿ? ಎಲ್ಲರಿಗೂ ಧರ್ಮದ ಬದಲು ಮೋಸವೆ ಬೇಕೆ? ಎಲ್ಲರ ಮನದ ಒಳಗೂ, “ನಮ್ಮ ಧರ್ಮ ಏನೂ ತಪ್ಪು ಮಾಡಿಲ್ಲ ಬರೇ ಒಳಿತನ್ನೇ ಮಾಡಿರುವುದು ಎಂದು ಹೇಳುತ್ತಾ ಇರುವುದು”, ಈ ಭ್ರಮೆಯು ವಾಸ್ತವದಲ್ಲಿ ಮತ್ತು ಚರಿತ್ರೆಯ ಪುಟಗಳಲ್ಲಿ ಆಗಿರುವ ಆ ಭೀಕರ ಸತ್ಯಗಳನ್ನು ಗಮನಿಸದಂತೆ ಮಾಡಿಬಿಡುವುದು! ಶೂದ್ರ, ಪರೆಯ, ಚಂಡಾಲ ಎಂದು ಆ ಮುಗ್ಧ ಮಾನವರನ್ನು ಭೀಕರವಾದ ರೀತಿಯಲ್ಲಿ ಮತ್ತು ಹೀನಾಯವಾಗಿ ಕಾಣಲು ಇಷ್ಟು ಸಾವಿರ ವರುಷ ಧರ್ಮಕ್ಕೆ ಹೇಗೆ ಸಾಧ್ಯವಾಯಿತು? ಇದು ಅತ್ಯಂತ ಭಯಾನಕ ಅಧರ್ಮದ ರೀತಿ ಆಗಿರುವುದು. ಸೆಗಣಿಯಾದರೂ  ಆರಾಧನಾಲಯದ ಒಳಗೆ ಪ್ರವೇಶಿಸಬಹುದು, ಆದರೆ ಈ ಹೇಳಿರುವ ಕೆಳ ವರ್ಗಗಳ ಜನರು ಆರಾಧನಾಲಯದಿಂದ ಬಹಳ ಬಹಳ ದೂರ ನಿಲ್ಲಬೇಕಿತ್ತು! ಅಯ್ಯೋ, ಅಪ್ಪಿ ತಪ್ಪಿ ಅವರಲ್ಲಿ ಯಾರಾದರೂ ಒಳಗೆ ಬಂದರೆ, ಇದೇ ಸೆಗಣಿಯಿಂದ ಶುದ್ಧ ಪಡಿಸಬೇಕಾಗಿತ್ತು! ಆ ಎಲ್ಲರ ತಂದೆ ಸೃಷ್ಟಿಕರ್ತ ದೇವರ ಮಕ್ಕಳಾದ ಮಾನವರು, ತಮ್ಮದೇ ಸಹೋದರ, ಸಹೋದರಿಯರ ವಿರುದ್ಧ ಮಾಡಿದ ಈ ಭಯಾನಕ  ತಪ್ಪುಗಳನ್ನು ನೆನೆದು ಹೃದಯದಲ್ಲಿ ಯಾರಿಗೂ ಇನ್ನೂ ನೋವಾಗುವುದಿಲ್ಲವೆ?  ನನ್ನ ಮನವು, ಬಾಲ್ಯದಿಂದಲೇ  ಈ ತಪ್ಪಿಗಾಗಿ ಪ್ರಾಯಶ್ಚಿತ ಮಾಡುವಂತೆ ಚಡಪಡಿಸುತ್ತಾ ಇದೆ. ಇದುವರೆಗೂ, ಆಚಾರ, ಆಚಾರ ಎಂದು ಹೀನ ಸ್ವಾರ್ಥ ವಿಷವನ್ನು ಅದರೊಂದಿಗೆ ಬೆರೆಸಿ ಉಣಿಸಲಾಗಿದೆ. ನಿರುಪದ್ರವಿ ಆಚಾರ, ನಂಬಿಕೆಗಳು ಇಟ್ಟುಕೊಳ್ಳಲಿ, ಆದರೆ ಅದರೊಂದಿಗೆ ಸೇರಿರುವ ವಿಷವನ್ನು ಪತ್ತೆ ಹಚ್ಚುವಷ್ಟು ಬುದ್ಧಿಯಾದರು ಮಾನವರಿಗೆ ಇರಬೇಕಾಗಿತ್ತು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’, “ಹೀನ ಪಾಪಂಗಳ ಬಿಡುವುದೇ ಸ್ನಾನ” ಇತ್ಯಾದಿ ಇತ್ಯಾದಿ, ಹೀನ ನಂಬಿಕೆ, ಆಚಾರಗಳ ಬಣ್ಣ ಬಯಲು ಮಾಡುವ ಆ ಮಹಾತ್ಮರುಗಳಾದ ದಾಸರುಗಳ ಮತ್ತು ಶರಣರುಗಳ ಸಾವಿರಾರು ಪದ್ಯಗಳು, ಬರೇ ಕೋಟಿಗಟ್ಟಲೆ ಕಾರ್ಯಕ್ರಮಗಳ ಭಾಗವಾದವು ಅಷ್ಟೆ. ಮಾನವರು ಜೀವನದಲ್ಲಿ ಅದರ ಲಾಭ ಪಡೆಯುವಂತೆ ಅದನ್ನು ಎಲ್ಲೆಲ್ಲೂ ಬೋಧಿಸಿ ಸಮಾಜವನ್ನು ಶುದ್ಧೀಕರಿಸಲು ಮುಂದಾಗಲಿಲ್ಲ.  ಹಾಗೆ ಸರಿಯಾದ ರೀತಿಯಲ್ಲಿ ಮಾಡಿರುತ್ತಿದ್ದಾರೆ, ಇಂದು ಕೂಡಾ ಮಾನವರು ಜಾತೀಯತೆ ಮತ್ತು ಆ ನಂಬಿಕೆ, ಆಚಾರಗಳ, ಆ ಮೌಡ್ಯಗಳನ್ನು ಹೊತ್ತು ನಡೆಯುತ್ತಿರಲಿಲ್ಲ, ಬದಲು ಭಾರತದ ಸಮಾಜವು ಸತ್ಯಯುಗದ ಆ ಅಮೃತವನ್ನು ಅಂದೇ ಜಗತ್ತಿಗೆ ಉಣಿಸಲು ಆರಂಭಿಸುತ್ತಿತ್ತು.

ಇನ್ನು, ಇತ್ತ, ಮೂಢ ಧರ್ಮಾಂಧರು ತನ್ನ ಸೃಷ್ಟಿಕರ್ತನಿಗೆ ಬೇಕಾಗಿ ಇತರ ಧರ್ಮಗಳ ಸೃಷ್ಟಿಕರ್ತರ ಲಕ್ಷಗಟ್ಟಲೆ ವಿಗ್ರಹ, ಹಾಗೂ ಮನುಷ್ಯರನ್ನು ಕೊಂದು ಹಾಕಿದರು. ಹಿಟ್ಲರ್ ಒಬ್ಬನೆ ಒಂದೇ ಸಲಕ್ಕೆ ಈ ಸೃಷ್ಟಿಕರ್ತನಿಗಾಗಿ ಎಷ್ಟು ಲಕ್ಷ ಜನರನ್ನು ಭೀಕರ ರೀತಿಯಲ್ಲಿ ಕೊಂದಿದ್ದಾನೆ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ಮಾನವರಿಗೆಲ್ಲರಿಗೂ ಈ ಸೃಷ್ಟಿಕರ್ತನು  ಆ ಒಬ್ಬನೇ ತಂದೆ ಆಗಿರುವಾಗ, ಈ ರೀತಿಯಲ್ಲಿ ಸೃಷ್ಟಿಕರ್ತನಿಗಾಗಿ ಮಾಡುವ ಭೀಕರ ಸಾಮೂಹಿಕ ಕೊಲೆಗಳು ಎಷ್ಟು ಮೂರ್ಖತನವಾಗುವುದು ಎಂದರೆ, ಅದು, ‘ನಮ್ಮ ಸೂರ್ಯನಿಗೆ ಬೇಕಾಗಿ, ಇತರರ ಸೂರ್ಯರನ್ನು ನಾಶಮಾಡಬೇಕು’ ಎಂದು ಹೇಳುವಷ್ಟು ಬಾಲಿಶ ಮತ್ತು ಮೂರ್ಖತನವಾಗುವುದು. ‘ಇಂದಿನ ಕಾಲದ ಜನರು ಹಿಂದಿನ ಕಾಲದ ಜನರ ರೀತಿಯಲ್ಲ, ಅವರಿಗೆ ವಿದ್ಯಾಭ್ಯಾಸ ಇದೆ’ ಎಂದೆಲ್ಲಾ ಕೊಚ್ಚಿಕೊಳ್ಳುವುದಾದರೆ, ಆಗ ಅಲ್ಲಿ ನಮಗೆ ಕಾಣಿಸುವುದು, ತುಂಬಾ ಪದವಿಗಳನ್ನು ಹೊತ್ತ ಆದರೆ ಹಿಂದಿನ ಖಡ್ಗದ ಬದಲು ಬಾಂಬು, ಕೋವಿಗಳನ್ನು ಹೊತ್ತು ಹಿಂಸೆಯನ್ನು ಕಾರುತ್ತಾ ನಡೆವ ಆ ವಿದ್ಯಾಸಂಪನ್ನ ಧರ್ಮಾಂಧರನ್ನು!! ಅಯ್ಯೋ, ಭೀಕರ, ಭೀಕರ.  ಶಾಂತಿಯ ಪರಮ ಮೂರ್ತಿ, ಎಲ್ಲಾ ಮಾನವರ ತಂದೆ ಸೃಷ್ಟಿಕರ್ತ ದೇವರ ಹೆಸರಲ್ಲಿ, ಇದು ಹೇಗೆ ಸಾಧ್ಯವಾಯಿತು? ಹೇಳಿ ಸಹೋದರರೇ ಹೇಳಿ. ಅಚ್ಚರಿ ಎಂದರೆ, ಅಸುರರ ಹೆಸರಲ್ಲಿ ಆಗದ ಈ ರೀತಿಯ ದ್ವೇಷ, ಚಿತ್ರಹಿಂಸೆಗಳು ದೇವರ ಹೆಸರಲ್ಲಿ ಹೇಗೆ ನಡೆಯುತ್ತವೆ? ಇದನ್ನು ನೀವು ಎಂದಾದರೂ ಅಲೋಚಿಸಿದ್ದಿರಾ? ಸೂರ್ಯನಿಂದ ಬೆಳಕು ಮಾತ್ರ ಬರಬೇಕು ಕತ್ತಲೆ ಎಂದೂ ಬರಬಾರದು ಎಂಬುವುದು ಸ್ಪಷ್ಟ ತರ್ಕವಾಗಿದೆ. ಹಾಗಿರುವಾಗ, ತಂದೆಯಾದ ಸೃಷ್ಟಿಕರ್ತ ದೇವರಿಂದ ಶಾಂತಿ, ಪ್ರೀತಿ ಹೆಚ್ಚಾಗಬೇಕು ಹೊರತು ಸರ್ವಶಕ್ತನಾದ ಅವನು ತನ್ನ ಹೆಸರಲ್ಲಿ ಮತ್ತು ತನ್ನದೇ ಆಗಿರುವ ಆ ಹಲವು ಧರ್ಮಗಳ ಹೆಸರಲ್ಲಿ ಸ್ವಂತ ಮಕ್ಕಳನ್ನು ತಮ್ಮೊಳಗೆ ಹೊಡೆಸಲಾರ, ಕೊಲ್ಲಿಸಲಾರ, ಇದು ಕೂಡಾ ಖಂಡಿತವಾಗಿರುವ ತರ್ಕವಾಗುವುದು ಅಲ್ಲವೇ? ಹಾಗಿರುವಾಗ, ಸೃಷ್ಟಿಕರ್ತ ದೇವರ ಹೆಸರಲ್ಲಿ ಅವನಿಗಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿ ಯಾಕಾಗಿ ಆದಿಯಿಂದಲೇ ಭೀಕರ ದ್ವೇಷ, ಹಿಂಸೆ, ರಕ್ತಪಾತಗಳಾಗುತ್ತಿವೆ? ಸತ್ಯದ ಹಿನ್ನೆಲೆಯಲ್ಲಿ ನೀವು ದಯವಿಟ್ಟು ಇದಕ್ಕೆ ಉತ್ತರಿಸಬೇಕು, ಅದಲ್ಲದೆ, “ಧರ್ಮ ಎಂದರೆ ಅದೆಲ್ಲ ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ” ಎಂದು ಹೇಳುವ ಆ ಹಿಂದಿನಿಂದಲೇ ಪರಂಪರಾಗತವಾಗಿ ಬಂದಿರುವ ಮೋಸದ ಮಾತಲ್ಲ ನಮಗೆ ಇಲ್ಲಿ ಬೇಕಾಗಿರುವುದು. ಅಯ್ಯೋ, ಜಗತ್ತೆಲ್ಲಾ ಹರಡಿರುವ ಮತ್ತು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಈ ಮೋಸಗಳು ಇನ್ನೆಷ್ಟು ಕಾಲ? ಸತ್ಯಯುಗವು ಬರಬೇಕಿದ್ದರೆ, ಈ ರೀತಿಯ ಭಯಾನಕ ಮೋಸದ ನಂಬಿಕೆ ಯುಗದ ಅಂತ್ಯ ಆಗಲೇಬೇಕು. ಕತ್ತಲೆಯನ್ನು ಆಲಿಂಗಿಸುತ್ತಾ ಬೆಳಕು ಇನ್ನು ಕೂಡಾ ಬಂದಿಲ್ಲ ಎಂದು ಕಣ್ಣೀರು ಹಾಕಿದರೆ ಏನು ಪ್ರಯೋಜನ? ಆ ಒಳ್ಳೆಯ ಪರಿಶುದ್ದ ಬೆಳಕಿನ ಕಾಲವಾದ ಸತ್ಯಯುಗವು ಬರಬೇಕಿದ್ದರೆ ಇಂದು ಮಾಡುತ್ತಿರುವ ನಂಬಿಕೆಗಳ ಹಿನ್ನೆಲೆಯ ಮೂರ್ಖತನಗಳಿಂದ ಮಾನವರೆಲ್ಲರೂ ಹೊರಬರಲೇಬೇಕು, ಬೇರೆ ದಾರಿ ಇಲ್ಲ. ಅಂದರೆ, ಇದರ ಅರ್ಥ. ಧರ್ಮ, ಪಂಥ ದೇವರು ನಂಬಿಕೆ, ಆಚಾರಗಳ ಶುದ್ಧೀಕರಣ ಆಗಬೇಕು ಎಂದು ಮಾತ್ರ ಆಗಿದೆ, ನಂಬಿಕೆ ಆಚಾರಗಳು ಯಾವೊಂದು ಕೂಡಾ ಬೇಕಾಗಿಲ್ಲ ಎಂದಲ್ಲ ಇಲ್ಲಿ ಉದ್ದೇಶಿಸುವುದು ಎಂಬುವುದನ್ನು ಪ್ರತ್ಯೇಕವಾಗಿ ಗಮನಿಸಬೇಕು. ಯಾವುದೇ ಧರ್ಮವಾದರೂ, ವಿಗ್ರಹವಾದರೂ, ಆರಾಧನಾಲಯವಾದರೂ, ಧರ್ಮಗ್ರಂಥವಾದರೂ, ಆಚಾರವಾದರೂ, ನಂಬಿಕೆಯಾದರೂ, ಉತ್ಸವವಾದರೂ, ಇವೆಲ್ಲಾ ಮಾನವರಲ್ಲಿ ಜಾತೀಯತೆ ಮತ್ತು  ಧರ್ಮಾಂಧತೆ ಇಲ್ಲದ ಆ ಉತ್ತಮ ಸ್ವಭಾವನ್ನು ಸೃಷ್ಟಿಸುವುದಾದರೆ ಅಥವಾ ಅದಕ್ಕೆ ಪೂರಕವಾಗಿದ್ದರೆ ಅವನ್ನು ಎಷ್ಟು ಬೇಕಾದರೂ ಉಪಯೋಗಿಸಿಕೊಳ್ಳಬಹುದು, ಆದರೆ, ನಮ್ಮ ದೇವರು, ನಮ್ಮ ಧರ್ಮ, ನಮ್ಮ ಜಾತಿ, ಎಂದು ಅವುಗಳ ಹಿನ್ನೆಲೆಯಲ್ಲಿ ಮಾನವರನ್ನು ವಿಭಜಿಸುವ ಆ ಅಲ್ಪತನದ ಸೃಷ್ಟಿ ಸ್ವಲ್ಪವಾದರೂ ಆಗುವುದಾದರೆ, ಅವೆಲ್ಲಾ ಧನಾತ್ಮಕವಾಗದೆ ಬರೇ ಅಪಾಯಕಾರಿ ಮತ್ತು ಭಯಾನಕ ಋಣಾತ್ಮಕ ರೀತಿಗಳಾಗುವವು! ಚೂರಿಯನ್ನು ಕೂಡಾ ದುರುಪಯೋಗ ಮಾಡುವುದಿಲ್ಲವೇ? ಎಷ್ಟು ಜನ ಜೀವವನ್ನು ಅದರಿಂದಾಗಿ ಕಳಕೊಂಡಿದ್ದಾರೆ, ಆದರೆ ಆ ದುರುಪಯೋಗವು ಬಹಳ ಅಪರೂಪಕ್ಕೆ ಮಾತ್ರ ನಡೆಯುವುದು. ಇತ್ತ, ಈ ಆಚಾರ, ನಂಬಿಕೆ, ದೇವರು, ಧರ್ಮ, ಪಂಥ ಇವುಗಳು ದ್ವೇಷ, ಹಿಂಸೆಗಳ ಭಾವಗಳನ್ನು ಹಲವು ಕೋಟಿ ಮಾನವರಲ್ಲಿ ಪ್ರತಿ ದಿನ ಸೃಷ್ಟಿಸುವವು! ಕನಿಷ್ಠ ಪಕ್ಷ, ಧರ್ಮ ಎಂದರೆ ಏನು, ಮತ್ತು ದೇವರು ಎಂದರೆ ಏನು, ಎಂಬುವುದನ್ನು ಮೊದಲು ಸ್ಪಷ್ಟವಾಗಿ ಅರಿಯಬೇಕು ಅಷ್ಟೆ. ದುರದೃಷ್ಟಶಾತ್, ಆಚಾರ, ನಂಬಿಕೆಗಳೇ ಧರ್ಮ, ಪಂಥಗಳು ಎಂದು ಇದುವರೆಗೂ ಬಿಂಬಿಸಿ ತರಲಾಗಿದೆ!

ಇನ್ನು, ಇದೆಲ್ಲವನ್ನೂ ನೋಡುತ್ತಾ, ಇತ್ತ ನಾಸ್ತಿಕರು ಹೆಚ್ಚಾಗುವುದನ್ನು ನಾವು ಕಾಣುವೆವು. ನೋಡಿ, ಎಲ್ಲವನ್ನೂ ಸತ್ಯಚಿಂತನೆ ಹಾಗೂ ಆತ್ಮಪರಿಶೋಧನೆ ಮಾಡಿ, ಕೊನೆಯಲ್ಲಿ ಜ್ಞಾನದ ಮೂಲಕ ನಾಸ್ತಿಕನಾಗುವುದು ಅದೊಂದು ಬೇರೆ ರೀತಿಯಾಗಿದೆ. ಆ ತರದಲ್ಲಿ ನಾಸ್ತಿಕನಾಗುವ ಜನರು ಈ ಜಗತ್ತಲ್ಲೇ ಅತ್ಯಂತ ವಿರಳವಾಗಿರುವರು, ಆದರೆ ಬರೇ, ತನ್ನ ಸ್ವಾರ್ಥದ ಸ್ವಾತಂತ್ರ್ಯಕ್ಕೆ ಬೇಕಾಗಿ ಆಗುವ ನಾಸ್ತಿಕರೇ ಈ ಭೂಮಿಯ 90% ನಾಸ್ತಿಕರು ಎಂದು ತಿಳಿಯಬೇಕು. ಅಂದರೆ, ಈಗಾಗಲೇ ಇರುವ, “ನಾವು ಶ್ರೇಷ್ಠ” ಎಂದು ವಾದಮಾಡುವ ಈ ಧರ್ಮ, ಪಂಥಗಳೊಂದಿಗೆ, ಇನ್ನೊಂದು ವಾದಮಾಡುವ  ಮಾನವ ಗುಂಪು ಈ ನಾಸ್ತಿಕರು ಅಷ್ಟೆ ಎಂದು ಅರ್ಥ. ಅಂದರೆ, ಇದು ಇನ್ನೊಂದು ಮಾನವ ವಿಭಜನೆ ಮಾತ್ರ ಎಂದು ಅರ್ಥ. ಒಟ್ಟಲ್ಲಿ, ಈ ಧರ್ಮ, ಪಂಥಗಳ ವಿಭಜನೆಯ ಹೊರತಾಗಿ, ಹೀಗೆ, ಜಗತ್ತು ಆಸ್ತಿಕ ಮತ್ತು ನಾಸ್ತಿಕ ಎಂದು ಎರಡಾಗಿ ವಿಭಾಗಿಸಲ್ಪಟ್ಟಿತು. ಆಸ್ತಿಕರು, ‘ಅವ ನಾಸ್ತಿಕ’ ‘ಅವ ನಾಸ್ತಿಕ’ ಎಂದು ನಾಸ್ತಿಕರನ್ನು ಭೂತದಂತೆ ನೋಡುವರು. ಇನ್ನು, ನಾಸ್ತಿಕರು ಆಸ್ತಿಕರನ್ನು ಭ್ರಾoತಿಯವರೆಂದು ದೂರವಿರಿಸಲು ಪ್ರಯತ್ನಿಸುವರು! ಅಂತೂ, ಇಲ್ಲಿಯೂ ವಿಭಜನೆ ಮತ್ತು ದ್ವೇಷ ಸೃಷ್ಟಿಯಾಯಿತು. ನಾಸ್ತಿಕ-ಆಸ್ತಿಕ ವಿಭಜನೆಯೂ ಸೇರಿದಂತೆ, ಈ ಎಲ್ಲದರಲ್ಲೂ ವಾದ, ದ್ವೇಷ, ಹಿಂಸೆ, ರಕ್ತಪಾತಗಳಲ್ಲದೆ, ಸಾಮರಸ್ಯವನ್ನು ಯಾವೊಂದಾದರೂ ಅದರ ಬರೇ ಇರುವಿಕೆಯಿಂದಾಗಿ ಮಾತ್ರ ಸೃಷ್ಟಿಮಾಡಿದೆಯೇ? ಇಲ್ಲ ಇಲ್ಲ! ಈ ನಾಸ್ತಿಕರು ಮತ್ತು ಆಸ್ತಿಕರು ಶತ್ರುಗಳ ತರ ಆದಿಯಿಂದಲೇ ವಾದಮಾಡುತ್ತಾ ಬಂದರಲ್ಲದೆ ಸಮಾಜಕ್ಕೆ ಶಾಂತಿಯನ್ನು ತರಲು ಅವರ ವಾದಗಳು ಸಹಾಯಕ ಆಗಲಿಲ್ಲ. ಅಂದರೆ, ಆಸ್ತಿಕರ ಪಾಲಿಗೆ ಈ ನಾಸ್ತಿಕರು ಕೂಡಾ ತಾವು ವಾದಮಾಡಿ ಜಯಿಸಲಿರುವ ಇನ್ನೊಂದು ಧರ್ಮ ಅಥವಾ ಪಂಥದ ತರವೇ ಆಗಿಹೋದರು ಎಂದು ಅರ್ಥ. ನೋಡಿ, ಅಸುರರು ಕೂಡಾ ಆಸ್ತಿಕರಾಗಿದ್ದರು. ಇಂದು ಕೂಡಾ, ಆಸ್ತಿಕರಾದ ಭಯಾನಕ ವ್ಯಕ್ತಿಗಳು ಇರುವರು ಎಂದು ಎಲ್ಲರಿಗೂ ಗೊತ್ತು. ಧರ್ಮಾಂಧರ ಆ ಭೀಕರ ಸಾಮೂಹಿಕ ನರಹತ್ಯೆ, ಹೆಂಗಸರ ಮಾನಭಂಗ ಮತ್ತು ಕೊಲೆ, ಮಕ್ಕಳ ಕೊಲೆ, ಇತ್ಯಾದಿಗಳು ಇದುವರೆಗೂ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಜಗತ್ತಿನ ಎಲ್ಲಾ ಧರ್ಮ ಪಂಥಗಳಲ್ಲಿನ ಆ ದೇವರನ್ನು ನಂಬುವ ಆಸ್ತಿಕರಿಂದ ಮಾಡಲ್ಪಟ್ಟಿದೆ!! ಹಿಂದಿನ ಆ ಪುರಾಣದ ರಾಕ್ಷಸರೆಲ್ಲ ಇವರ ಬಹಳ ಬಹಳ ಹಿಂದೆ ನಿಲ್ಲಬೇಕು. ಇಂದು, ಧರ್ಮ ಎಂಬ ಶಬ್ಧವನ್ನು ಹೇಳುವಾಗ, ಶಾಂತಿ ಹುಟ್ಟಿಬರುವ ಬದಲು ಹೆದರಿ ಓಡುವ ಪರಿಸ್ಥಿತಿ ಎದುರಾಗಿದೆ! “ನಮ್ಮ ಧರ್ಮ ಶಾಂತಿಗಾಗಿ” ಎಂದು ಗಟ್ಟಿಯಾಗಿ ಕೂಗುತ್ತಾ, ಮೋಸದಿಂದ ಎಲ್ಲಿಯ ತನಕ ಈ ಧರ್ಮಗಳನ್ನು ತಂದಿಟ್ಟರು ನೋಡಿ! ಇನ್ನು, ಹೋಲಿಕೆಯಲ್ಲಿ ನೋಡುವುದಾದರೆ,  ನಾಸ್ತಿಕರು ಇಷ್ಟು ಹೆಚ್ಚು, ದ್ವೇಷ, ಹಿಂಸೆ, ರಕ್ತಪಾತ, ಮಾಡಿಲ್ಲ ಎಂಬುವುದು ಸತ್ಯ. ನೋಡಿ, ನಾಸ್ತಿಕರಲ್ಲಿ ನಾಸ್ತಿಕನು ಶ್ರೀ ಬುದ್ಧನು, ಆದರೆ ಆತನಷ್ಟು ಪ್ರೀತಿವಂತನು ಮತ್ತು ಧರ್ಮಿಷ್ಠನು ಇನ್ನು ಯಾರು ಇರುವರು? ಅಂದರೆ, ಇದರ ಅರ್ಥ, ಧರ್ಮಕ್ಕೆ ದೇವರು ಅನಿವಾರ್ಯವಲ್ಲ, ಆದರೆ ಧರ್ಮಕ್ಕೆ ಧರ್ಮವೇ ಅನಿವಾರ್ಯ ಎಂದಾಗಿರುವುದು. ಧರ್ಮ ಎಂದರೆ ಏನು? ಸತ್ಯ, ಪ್ರೀತಿ, ಮತ್ತು ನೀತಿಗಳು ಧರ್ಮ ಆಗುವುದು. ಸ್ವಲ್ಪ ಹೆಚ್ಚಿನ ವಿವರಣೆ ಧರ್ಮದ ಬಗ್ಗೆ ಬೇಕಿದ್ದಲ್ಲಿ, ಇವು ಮೂರರ ಹಿನ್ನೆಲೆಯಲ್ಲಿ ‘ತಾನೂ ಚೆನ್ನಾಗಿರಬೇಕು ಮತ್ತು ಇತರರು ಚೆನ್ನಾಗಿರಬೇಕು’ ಎಂಬಲ್ಲಿನ ಆ ಆದರ್ಶ ಸಾಮಾಜಿಕ ನಿಯಮಗಳು ಧರ್ಮ ಎನ್ನಬಹುದು. ಸತ್ಯ, ಪ್ರೀತಿ, ನೀತಿ ಇವು ಇಲ್ಲದಿದ್ದರೆ ದೇವರ ಸಂಕಲ್ಪವನ್ನು ಮಾಡಲಾಗುವುದಿಲ್ಲ ಅದೇ ರೀತಿ, ಅಲ್ಲಿ ಧರ್ಮದ ಅಸ್ತಿತ್ವವು ಕೂಡಾ ಇರುವುದಿಲ್ಲ. ಬೇಕಿದ್ದರೆ, ಸ್ವಲ್ಪ ಸಮಯ ಆಲೋಚಿಸಿ ಈ ಮಾತು ಸರಿಯೋ ತಪ್ಪೋ ಎಂದು ನೀವೇ ನೋಡಿ ತಿಳಿದುಕೊಳ್ಳಿರಿ. ಇನ್ನು, ನಿಜಧರ್ಮ ಅಥವಾ ಉತ್ತಮ ಸ್ವಭಾವವನ್ನು ಲೆಕ್ಕಿಸದ ನಾಸ್ತಿಕತನದ ಅಪಾಯವು ಕೂಡಾ ಅದು ಚಿಕ್ಕದು ಏನೂ ಅಲ್ಲ. ಕಣ್ಣಿಗೆ ಕಾಣಿಸುವುದು ಮಾತ್ರ ಸತ್ಯ, ಬೇರೇನೂ ಇಲ್ಲ ಎಂದು ಮನಬಂದಂತೆ ಜೀವಿಸುವುದು ಅವರಲ್ಲಿ ಹೆಚ್ಚಿನವರ ರೀತಿ ಆಗಿರುವುದು. ಇಂದು ನಾಸ್ತಿಕರು ಎಂದು ತಮ್ಮನ್ನು ತಾವು ಹೇಳಿಕೊಳ್ಳುತ್ತಾ, ಹೆಚ್ಚಿನ ಜನರು, ನೈತಿಕತೆಗೆ ಬೆಂಕಿಹಚ್ಚಿ ಜೀವಿಸುವರು. ಅದು ಅವರ ಜೀವನವನ್ನು, ಅವರ ಮನೆಯನ್ನು ಹಾಗೂ ಸಮಾಜವನ್ನು ದೊಡ್ಡ ಪ್ರಪಾತಕ್ಕೆ ಬೀಳಿಸುವುದು ಎಂದು ಅವರು ತಿಳಿಯುವುದಿಲ್ಲ. ಈಗಾಗಲೇ, ಮನೆ, ಮನೆಗಳು ಆ ರೀತಿಯ ನಿಜಧರ್ಮರಹಿತ ನಾಸ್ತಿಕತನದ ಆನಂತರ ಫಲಗಳನ್ನು ತುಂಬಾ ಅನುಭವಿಸುತ್ತಾ ಇವೆ. ಮುಂದೆ ಅದು ತಾರಕಕ್ಕೆ ಏರುವುದು ಖಂಡಿತ. ಒಟ್ಟಲ್ಲಿ, ಆಸ್ತಿಕ, ನಾಸ್ತಿಕ ಎಲ್ಲವೂ ಮಾನವನಿಗೆ ಸಂಬಂಧಿಸಿ ವಿಪರೀತವಾಗಿಯೇ ಇರುವುದು. ಸ್ವಲ್ಪ ಸಂಖ್ಯೆಯಲ್ಲಿ ಉತ್ತಮರು ಎಲ್ಲ ಧರ್ಮಗಳಲ್ಲೂ ಇರುವರು, ಆದರೆ ದುಷ್ಟರ ಸಂಖ್ಯೆ ಹೆಚ್ಚಾಗುತ್ತಾ ಬರುವುದನ್ನು ನಾವು ಎತ್ತಿ ಹೇಳಲೇಬೇಕಾಗುವುದು. ಪಾಯಸದಲ್ಲಿ ತುಂಬಾ ತುಂಬಾ ಹಾಲು ಇದೆ ಎಂದು ಅದಕ್ಕೆ ಬಿದ್ದಿರುವ ವಿಷದ ಕೆಲವು ಬಿಂದುಗಳನ್ನು ಗಮನಿಸದಿದ್ದಲ್ಲಿ ಈ ತುಂಬಾ ತುಂಬಾ ಹಾಲಿಗೆ ಆ ಸರ್ವನಾಶವನ್ನು ತಡೆಯಲು ಸಾಧ್ಯ ಆಗದು. ಆದುದರಿಂದ, ಅನ್ಯಗ್ರಹಜೀವಿಗಳು ಸೃಷ್ಟಿಸಿರುವ, ಜಗತ್ತಿಗೆ ಇದುವರೆಗೂ ತಿಳಿಯದ, ಆ ಶಿಲಾಯುಗದಿಂದಲೇ ಇರುವ ಅತಿರಹಸ್ಯ ಜಾಗತಿಕ ವಾಮಾಚಾರದ ಮೋಸದಿಂದ ಇನ್ನಾದರೂ ನಾವು ಪಾರಾಗೋಣ. ಈ ಅನ್ಯಗ್ರಹಜೀವಿಗಳ ಶಿಲಾಯುಗದಿಂದಲೇ ಇರುವ ಜಾಗತಿಕ ಮೋಸದ ವಿಚಾರವಾಗಿ ಹೆಚ್ಚು ತಿಳಿಯಬೇಕಿದ್ದರೆ, ನನ್ನ 15 ವರುಷಗಳ ಸೂಕ್ಷ್ಮದ ಬೇಹುಗಾರಿಕೆಯಿಂದ ಸಿಕ್ಕಿರುವ ಆ ಎಲ್ಲಾ ಅತಿರಹಸ್ಯ ಸತ್ಯಗಳ ಬಗ್ಗೆ ಹೇಳಿರುವ, ನನ್ನ ಹಿಂದಿನ ವೀಡಿಯೋಗಳಿಂದ ತಿಳಿದುಕೊಳ್ಳಬಹುದು. ಅವುಗಳಲ್ಲಿಟ್ಟು ಕೆಲವೊಂದರ ಲಿಂಕುಗಳನ್ನು ಡಿಸ್ಕ್ರಿಪ್ಶನ್ ಬ್ಯಾಕ್ಸಲ್ಲಿ ಕೊಡಲಾಗಿದೆ. ಅನ್ಯಗ್ರಹಜೀವಿಗಳು, ತಮಗೆ ಬೇಕಾಗಿರುವ ಇಂಧನವಾದ, ‘ತೀವ್ರಗೊಳಿಸಿದ ಮಾನವ ಮನೋಶಕ್ತಿ’ ಯನ್ನು ಕದ್ದುಕೊಂಡುಹೋಗಲು ಭೂಮಿಗೆ ಶಿಲಾಯುಗದಿಂದಲೇ ಬಂದು ಹೋಗುತ್ತಿವೆ ಎಂದು ಗೊತ್ತಾಗಿದೆ. ಆ ತೀವ್ರಮನಸ್ಸಿನ ಕ್ರೌರ್ಯಕ್ಕೆ ಬೇಕಾಗಿ, ಮಾನವ ವಿಭಜನೆಯನ್ನು, ದೇವರು, ಧರ್ಮ, ಪಂಥಗಳೂ ಸೇರಿ, ಹಲವು ಹಲವು ರೀತಿಗಳಲ್ಲಿ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಾ ಅವು ಶಿಲಾಯುಗದಿಂದಲೇ ಬಂದಿವೆ. ಮಾನವರು ವಿಭಜಿಸಲ್ಪಟ್ಟಯಲ್ಲಿ ಮಾತ್ರ ದ್ವೇಷ, ಹಿಂಸೆ, ರಕ್ತಪಾತವೆಂಬ ಆ ಕ್ರೌರ್ಯದ ಮನಸ್ಸನ್ನು ಸೃಷ್ಟಿಸಲು ಸಾಧ್ಯ ಎಂಬುವುದನ್ನು ಮರೆಯಬಾರದು. ಇನ್ನು, ಅನ್ಯಗ್ರಹಜೀವಿಗಳು ನೇರವಾಗಿ ಈ ಸೂಕ್ಷ್ಮದ ಜಾಗತಿಕ ಅತಿರಹಸ್ಯ ವಾಮಾಚಾರದಲ್ಲಿ ಭಾಗಿಯಾಗುವುದಿಲ್ಲ!  ಅವು, ಮಾನವರ ಮನೋಶಕ್ತಿಯಿಂದಲೇ ಈ ಅತಿರಹಸ್ಯ ಜಾಗತಿಕ ವಾಮಾಚರ ವ್ಯವಸ್ಥೆಯನ್ನು ತಯಾರಿಸಿ ಅವುಗಳ ಮೂಲಕ ಮಾತ್ರವೇ ತಮಗೆ ಬೇಕಾಗಿರುವ ಕೆಲಸಗಳನ್ನು ಮಾಡಿಸಿಕೊಳ್ಳುವವು!! ನೆನಪಿರಲಿ, ಇನ್ನೊಮ್ಮೆ ಹೇಳುವೆನು, ಸೂಕ್ಷ್ಮದ ಬೇಹುಗಾರಿಕೆ ಎಂದರೆ, ಅದು ಧ್ಯಾನ ಮಾಡುವವರಿಗೆ ತಾನಾಗಿ ಬರುವ, ಹೆಚ್ಚಾಗಿಯೂ ತಮ್ಮೊಳಗೆ ವಿರುದ್ದವಾಗಿರುವ, ಆ ಹಲವು ತರದ ಆಧ್ಯಾತ್ಮಿಕ ಅನುಭವಗಳು ಅಲ್ಲ, ಆದುದರಿಂದಲೇ, ಈ ಭಯಾನಕ ರಹಸ್ಯ ಸತ್ಯಗಳು ಇದುವರೆಗೂ ಯಾರಿಗೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ತಿಳಿಯಬೇಕು. ಮೋಸವನ್ನು ಅರಿಯಲು ಬೇಹುಗಾರಿಕೆ ಮಾಡಬೇಕಾಗಿರುವುದಾ ಅಥವಾ ಅವರು ಹೇಳುವುದನ್ನು ಎಲ್ಲವನ್ನೂ ಕೇಳಿ ಅದನ್ನು ನಂಬಿ ಅದನ್ನೇ ಸತ್ಯ ಎಂದು ತಿಳಿದುಕೊಳ್ಳುವುದಾ? ಸೂಕ್ಷ್ಮದ ಆ ಮೋಸಗಳಿಂದ ಪಾರಾಗಬೇಕಿದ್ದರೆ ಬೇಹುಗಾರಿಕೆ ಮಾಡುವುದೊಂದೇ ಗತಿಯಾಗಿದೆ. ದುರದೃಷ್ಟವಶಾತ್, ಇಷ್ಟು ಸಹಸ್ರ ವರುಷಗಳಲ್ಲಿ ಕೆಲವರಿಗೆ ಧ್ಯಾನದಲ್ಲಿ ಸಿಕ್ಕಿರುವ, ಆ ಒಂದೇ ರೀತಿ ಅಲ್ಲದ, ತಮ್ಮೊಳಗೆ ವಿರುದ್ಧವಾಗಿರುವ, ಆಧ್ಯಾತ್ಮಿಕ ಅನುಭವಗಳೇ, ಈ ಜಗತ್ತಿನಲ್ಲಿ ಆ ಹಲವು ಧರ್ಮ, ಪಂಥಗಳಾಗಿ ಕಾಣಿಸುತ್ತಿರುವುದು, ಅಷ್ಟೆ. 

ಇನ್ನು, ಈ ಅನ್ಯಗ್ರಹಜೀವಿಗಳು ‘ಇಲ್ಲವೇ ಇಲ್ಲ’ ಎಂದು ಈಗಲೇ ಕಣ್ಣುಮುಚ್ಚಿ ನಿರ್ಧರಿಸುವವರಿಗಾಗಿ ಮಾತ್ರ ಕೆಲವು ಸೂಚನೆಗಳನ್ನು ಇಲ್ಲಿ ಕೊಡುವೆನು. ನೋಡಿ, ಹಲವು ಗುರುಗಳು ಅನ್ಯಗ್ರಹಜೀವಿಗಳು ಹಿಮಾಲಯಕ್ಕೆ ಬಂದು ಹೋಗುತ್ತಿರುವವು ಎನ್ನುವರು, ಹಲವು ಇರತ ದೊಡ್ಡ ದೊಡ್ಡ ಸಂಶೋಧಕರು ಬರ್ಮುಡಾ ತ್ರಿಕೋನವು ಅನ್ಯಗ್ರಹ ಜೀವಿಗಳ ಬಂದು ಹೋಗುವ ಸ್ಥಳ ಎನ್ನುವರು. ಇವುಗಳಲ್ಲಿ, ಬಹಳ ಮುಖ್ಯವಾಗಿರುವುದೆಂದರೆ, ಅನ್ಯಗ್ರಹಜೀವಿಗಳ ಇರುವಿಕೆಯ ಬಗ್ಗೆ ನಾಸಾದ ವಿಜ್ಞಾನಿಗಳು ಸಂಶೋಧನೆಯ ನಂತರ ಆಡಿರುವ ಮಾತುಗಳಾಗಿವೆ.  ಅವರ ಪ್ರಕಾರ ಈ ಭೂಮಿಯದ್ದಲ್ಲದ ಆಕಾಶ ವಾಹನಗಳು ಖಂಡಿತವಾಗಿಯೂ ಈ ಭೂಮಿಗೆ ಬಂದು ಹೋಗುತ್ತಾ ಇರುತ್ತವೆ ಎಂದಾಗಿದೆ. ಈ ಆಕಾಶ ವಾಹನಗಳು ಆಗಾಗ್ಗ ಕಣ್ಣಿನಿಂದ ಮರೆಯಾಗುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಅವುಗಳಲ್ಲಿ ಕಣ್ಣಿಗೆ ಕಾಣಿಸದಂತೆ ಕುಳಿತಿರುವ ಅನ್ಯಗ್ರಹ ಜೀವಿಗಳ ಇರಲು ಸಾಧ್ಯವಿಲ್ಲ ಎಂದು ಖಂಡಿತವಾಗಿ ಹೇಳಲು ಕೂಡಾ ಸಾಧ್ಯವಾಗದು ಎಂದು ನಾಸಾ ವಿಜ್ಞಾನಿಗಳ ನಿಗಮನವಾಗಿರುವುದು! ಕೊನೆಯಲ್ಲಿ, ಅಮೆರಿಕದ ಕೆಲವು ರಾಷ್ಟ್ರಪತಿಗಳು ಹಾಗೂ ಸೇನಾ ಪ್ರಮುಖರು, “ಅನ್ಯಗ್ರಹಜೀವಿಗಳು ಇವೆ” ಎಂದು ಆ ವಿಜ್ಞಾನಿಗಳು ಅದುವರೆಗೂ ಅಡಗಿಸಿಟ್ಟಿರುವ ರಹಸ್ಯಗಳನ್ನು ವಿಜ್ಞಾನಿಗಳು ತಿಳಿಸುವ ಸ್ವಲ್ಪ ಮೊದಲೇ ಜನರಿಗೆ ತಿಳಿಸಿರುವುದನ್ನು ಕೂಡಾ ಇಲ್ಲಿ ನೆನಪಿಸಿಕೊಳ್ಳಬಹುದು. ಕೆಲವು ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ಹಾರಾಡುವ ತಟ್ಟೆಗಳು ಸೂಕ್ಷ್ಮಗೊಳಿಸಿ ನೇರವಾಗಿ  ಕೊಂಡುಹೋಗಿರುವ ಆ ಹಲವು ನೈಜ ಘಟನೆಗಳನ್ನು ಇಲ್ಲಿ ಮರೆಯುವಹಾಗಿಲ್ಲ. ಆದರೆ, ಒಂದು ಮುಖ್ಯ ಅಂಶ ಎಂದರೆ, ಅವುಗಳು ಯಾಕಾಗಿ ಇಷ್ಟು ಜ್ಯೋತಿರ್ವರ್ಷಗಳಷ್ಟು ದೂರದಿಂದ ಭೂಮಿಗೆ ಕಷ್ಟಪಟ್ಟು ಗುಟ್ಟಾಗಿ ಬಂದು ಹೋಗುತ್ತವೆ ಎಂಬುವುದಾಗಿದೆ. ಅದಕ್ಕಿರುವ ಆ ಕಾರಣವು, ಆ ವಿಜ್ಞಾನಿಗಳಿಗಾಗಲೀ ಅಥವಾ ಇತರ ಜನರಿಗಾಗಲೀ ತಿಳಿದಿಲ್ಲ. ನೋಡಿ, ಸುಮ್ಮನೆ ಯಾರೂ ಬರುವುದಿಲ್ಲ, ಅದು ಕೂಡಾ, ಜ್ಯೋತಿರ್ವರ್ಷಗಳಷ್ಟು ದೂರದಿಂದ ಬರುವುದಿಲ್ಲ, ಯಾವ ಕಾರಣವೂ ಇಲ್ಲದೆ ಗುಟ್ಟಾಗಿ ಬಂದು ಹೋಗುವುದನ್ನು ಅಂತೂ ಹುಚ್ಚರು ಕೂಡಾ ಮಾಡಲಾರರು. ಈಗ, ನಿಮಗೆ ಎಲ್ಲವೂ ಸ್ಪಷ್ಟವಾಗಿರಬಹುದು ಎಂದು ತಿಳಿಯುತ್ತೇನೆ. ಒಟ್ಟಲ್ಲಿ, ಎಲ್ಲಾ ಮಾನವರನ್ನು, ಮಾನವರು ಹೇಳುವ ಆ ದೇವರಿಂದಲೂ ನಿಯಂತ್ರಿಸಲಾಗದ ವಿಧಿಯನ್ನು, ಜಗತ್ತಿನ ಆ ಎಲ್ಲಾ ತರದ ಆರಾಧನಾ ಶಕ್ತಿಗಳ ಅನುಗ್ರಹ, ಶಾಪಗಳನ್ನು. ಧರ್ಮ, ಪಂಥ, ದೇಶ, ಇತ್ಯಾದಿಗಳ ಇಂದಿನ ಸ್ಥಿತಿ ಹಾಗೂ ಮುಂದಿನ ಭವಿಷ್ಯಗಳನ್ನು, ಅವುಗಳ ಆ ಅತಿರಹಸ್ಯ ವಾಮಾಚಾರದ ಕರಾಳ ಹಸ್ತಗಳು ಶಿಲಾಯುಗದಿಂದಲೇ ನಿಯಂತ್ರಿಸುತ್ತಾ ಬರುತ್ತಿವೆ. ಅದರಿಂದ ಪಾರಾಗಲು ಇರುವ ಆ ಏಕ ಮಾರ್ಗವು, ಅವು ಮಾಡಿರುವ ಆ ವಿವಿಧ ತರಗಳ ಮಾನವ ವಿಭಜನೆಗಳ ವಿರುದ್ಧ, ಮಾನವರ ಒಂದಾಗುವಿಕೆ ಮಾತ್ರ ಆಗುವುದು, ಬೇರೆ ದಾರಿ ಇಲ್ಲ. ಈ ಮಾನವರೆಲ್ಲರ ಒಂದಾಗುವಿಕೆಯನ್ನು ಆದಷ್ಟು ಬೇಗನೆ ಪಡೆಯಲು ನಾವು ಎಲ್ಲರೂ ಕೂಡಲೇ ಶ್ರಮಿಸೋಣ. ಶ್ರಮಿಸಿದಲ್ಲಿ ಮಾನವರ ಉಳಿವು, ಇಲ್ಲವಾದರೆ ಮಾನವರ ಅಳಿವು, ಇದು ನಿಶ್ಚಿತ.

ಧರ್ಮಗಳ ಸಾರದ ಭಾಗ ಅಥವಾ ಸಾರಧರ್ಮ ಎಂದರೇನು?

ಉತ್ತರ- ಇದನ್ನು ಹಿಂದೆಯೇ ಸಾಕಷ್ಟು ಸಲ ವಿವರಿಸಿ ಆಗಿದೆ, ಆದರೆ ಇಲ್ಲಿ ಚುಟುಕಾಗಿ ತಿಳಿಸಿಬಿಡುತ್ತೇನೆ. ಯಾವುದು ಇಲ್ಲವಾದರೆ ಒಂದು ವಸ್ತುವಿನ ಅಸ್ತಿತ್ವವೇ ಇಲ್ಲವಾಗುವುದೋ ಅದುವೇ ಅದರ ಸಾರವಾಗಿದೆ. ಕಬ್ಬಿನ ಹಾಲು ಕಬ್ಬಿನ ಸಾರವಾಗಿದೆ, ಮತ್ತು ಅದಿಲ್ಲವಾದರೆ ಕಬ್ಬಿನ ಗೊಜ್ಜು ಯಾರಿಗೂ ಬೇಡ! ಇದೇ ರೀತಿ, ಧರ್ಮಕ್ಕೂ ಸಾರವಿದೆ.  ಆ ಸಾರವೇ ಸಾರ್ವತ್ರಿಕ ಸತ್ಯ, ಸಾರ್ವತ್ರಿಕ ಪ್ರೀತಿ, ಮತ್ತು ಸಾರ್ವತ್ರಿಕ ನೀತಿಯಾಗುವುದು. ಯಾಕೆಂದರೆ, ಈ ಸ್ವಭಾವ-ಸಾರದ ಹಿನ್ನೆಲೆಯು ಇಲ್ಲದ ಯಾವ ಒಂದು ಧರ್ಮ ಅಥವಾ ಪಂಥಕ್ಕೆ ಅಸ್ತಿತ್ವವೇ ಇಲ್ಲವಾಗುವುದು. ಯಾರಿಗಾದರೂ ಅವರ ಧರ್ಮ ಅಥವಾ ಪಂಥದಲ್ಲಿ ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಗಳು “ಇಲ್ಲ” ಎಂದು ಹೇಳಲು ಸಾಧ್ಯವಾಗುವುದೇ? ಅದು ಎಂದಿಗೂ ಸಾಧ್ಯವಾಗಲಾರದು. ಈ ಕಾರಣದಿಂದಾಗಿ, “ಎಲ್ಲಾ ಧರ್ಮಗಳ ಆ ಸಾರದ ಹಿನ್ನೆಲೆಯಲ್ಲಿ ಮಾಡಿರುವ ಸಮಾಜದಲ್ಲಿ ಎಲ್ಲರೂ ತಮ್ಮೊಳಗೆ ತೊಂದರೆಯನ್ನು ಉಂಟುಮಾಡದೆ ಚೆನ್ನಾಗಿ  ಜೀವಿಸಬೇಕು ಎಂಬ ಧರ್ಮ ನಿಯಮಗಳನ್ನು” ನಾವು “ಸಾರಧರ್ಮ” ಎನ್ನುವುದು. ಕೆಲವೊಂದು ಚಿಕ್ಕ ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಇತರ ಎಲ್ಲಾ ಸಾರಧರ್ಮ ನಿಯಮಗಳು ಎಲ್ಲಾ ಧರ್ಮಗಳಿಗೂ ಸಾಮಾನ್ಯವಾಗಿಯೇ ಇರುವುದು. ಉದಾಹರಣೆಗೆ, “ಕಳ್ಳತನ ಮಾಡಬಾರದು” ಎಂಬುವುದರಲ್ಲಿ ಯಾವ ಧರ್ಮಕ್ಕಾದರೂ ಅಭಿಪ್ರಾಯ ವ್ಯತ್ಯಾಸವಿರಬಹುದೇ? ಇರಲಾರದು ಎಂಬುವುದೇ ಅದರ ಉತ್ತರ. ಇದೇ ರೀತಿಯ ಹಲವು ನಿಯಮಗಳು ಒಟ್ಟು ಸೇರುವಾಗ ಎಲ್ಲಾ ಧರ್ಮ, ಪಂಥಗಳ ಆ “ಸಾರಧರ್ಮ” ವಾಗುವುದು ಎಂದು ತಿಳಿಯಬೇಕು.

ದೇವರು, ಅನುಗ್ರಹ, ಮತ್ತು ಮೋಕ್ಷ ಸಾಧನೆ ಇತ್ಯಾದಿಗಳನ್ನು ಅವರವರ ದೇವರ ಮತ್ತು ಧರ್ಮದ ಹಿನ್ನೆಲೆಯಲ್ಲಿ ಮತ್ತು ಅವರವರ ರೀತಿಯಲ್ಲೇ ಅನುಷ್ಠಿಸಿಕೊಳ್ಳಬಹುದಾಗಿದೆ. ಈಗ, ಎಲ್ಲಾ ಧರ್ಮ, ಪಂಥಗಳೂ ಏನನ್ನೂ ಕಳಕೊಳ್ಳದೆ ಮೊದಲಿನಂತೆ ಇರುವುದಾದರೂ, ನಮಗೆ ಎಲ್ಲರಿಗೂ ಒಂದಾಗಲು ಸಾಧ್ಯವಾಗುವ ಒಂದು ಸ್ಥಳವು ಸಾರಧರ್ಮದ ರೂಪದಲ್ಲಿ ಸಿಗುವುದು!!

ಸಾರ್ವತ್ರಿಕ ಸತ್ಯ ಎಂದರೇನು?

ಉತ್ತರ- ಸತ್ಯ ಎಂದರೇನು? ಒಬ್ಬ ವ್ಯಕ್ತಿಯ ಕೈಯಲ್ಲಿ ಒಂದು ಪಾತ್ರೆ ಇದೆ ಎಂದು ಆತನು ಹೇಳಿದಾಗ, ಆ ವ್ಯಕ್ತಿಯ ಕೈಯಲ್ಲಿ ಪಾತ್ರೆ ಇದ್ದರೆ ಅದು ಸತ್ಯವಾಗುವುದು. ಇದು ಮಾನವರ ವ್ಯಾವಹಾರಿಕ ನೆಲೆಯಲ್ಲಿ ಉಪಯೋಗಿಸುವ ಸತ್ಯದ ರೀತಿಯಾಗಿದೆ. ಆದರೆ ದೇವರು ಮತ್ತು ಧರ್ಮಗಳು ಮಾತನಾಡುವುದು ಪ್ರಪಂಚದ ಹಿನ್ನೆಲೆಯಲ್ಲಿ ಎಂದು ಮರೆಯಬಾರದು. ಆಗ ಅಲ್ಲಿಗೂ ಇದೇ ಮಾನವನ ವ್ಯಾವಹಾರಿಕ ರೀತಿಯ ಆ ಕೆಳ ಹಂತದ ಸತ್ಯದ ವಿವರಣೆಯನ್ನು ಕೊಡಲು ಸಾಧ್ಯವೇ ಇಲ್ಲ ಎಂದು ಸಾಮಾನ್ಯ ಬುದ್ಧಿಗೂ ಅರ್ಥವಾಗುವುದು. ಸೃಷ್ಟಿಕರ್ತ ದೇವರು ಇದ್ದಲ್ಲಿ ಆತನ ಧರ್ಮವು ಈ ಜಗತ್ತಿನ ಮಾನವರಿಗೆ ಪೂರ್ತಿಯಾಗಿ ಮಾತ್ರವಲ್ಲ ಅನ್ಯಗ್ರಹ ಜೀವಿಗಳಿಗೂ ಸೇರಿ ಒಂದೇ ಆಗಿರಬೇಕು ಎಂಬುವುದು ದೇವನೀತಿಯಾಗುವುದು. ಈ ರೀತಿಯಲ್ಲಿ, ಅಲ್ಲಿ ಸತ್ಯವು ಜಗತ್ತಿನ ಎಲ್ಲಾ ಮಾನವರಿಗೆ ಒಂದೇ ಸಮಾನವಾಗಿರುವ ನಿಯಮಗಳ ಹಿನ್ನೆಲೆಯಲ್ಲಿ ಇರಲೇಬೇಕು. ಆದರೆ, ಧರ್ಮ, ಪಂಥಗಳು ತಮ್ಮ ಪುರಾಣಗಳಲ್ಲಿ ವಿವರಿಸುವ ರೀತಿಯಲ್ಲಿ ಮಾತ್ರ ತಮಗೆ ತಾವೇ ಬೇಲಿ ಹಾಕಿಕೊಂಡು, ಅದರೊಳಗೆ ಮಾತ್ರ ‘ಎಲ್ಲವೂ ಇರುವುದು’ ಎನ್ನುವ ರೀತಿಯಲ್ಲಿರುವವು! ಆ ರೀತಿ ಅಲ್ಲದೆ ಅವುಗಳು  ಸ್ವಲ್ಪವೂ ಬೇರೆ ಪುರಾಣದ ಮತ್ತು ಧರ್ಮದ ರೀತಿಯನ್ನು ಒಪ್ಪುವುದಿಲ್ಲ! ಇಲ್ಲಿ, ಧರ್ಮ, ಪಂಥಗಳು ‘ಸತ್ಯ’ ವನ್ನು ಮಾನವನ ನಿತ್ಯದ ವ್ಯಾವಹಾರಿಕ ಸತ್ಯದ ಹಿನ್ನೆಲೆಯಲ್ಲಿ ಮಾತ್ರ ಉಪಯೋಗಿಸಿರುವುದು ಸ್ಪಷ್ಟವಾಗುವುದು! ನಿಜವಾಗಿಯೂ, ದೇವರು ಮತ್ತು ಧರ್ಮಗಳು, ಎಲ್ಲ ಕಡೆಯೂ ಒಂದೇ ಆಗಿರುವ, ಆ ಬೇಲಿ ಇಲ್ಲದ ಆಕಾಶದ ತರ ಮಾತ್ರ ಚಿತ್ರಿಸಲ್ಪಡಬೇಕಾಗಿತ್ತು. ಸೂರ್ಯನು ನಮಗೆಲ್ಲ ಒಬ್ಬನೇ ಎಂಬ ಸತ್ಯವು ಸಾರ್ವತ್ರಿಕ ಸತ್ಯವಾಗಿದೆ. ಅದೇ ರೀತಿಯಲ್ಲಿ, ನಾವೆಲ್ಲಾ ಆ ಸೂರ್ಯನನ್ನು ಒಂದೇ ರೀತಿಯಲ್ಲಿ ವಿವರಿಸುತ್ತೇವೆ. ನೀಲಿ ಸೂರ್ಯ, ಹಸುರು ಸೂರ್ಯ ಎಂದು ವಿವರಿಸಿದ್ದನ್ನು ನಾವು ಇದುವರೆಗೂ ನೋಡಿಲ್ಲ. ಇದೇ ತರ ಬೇಲಿ ಇಲ್ಲದೆ ನಾವು ದೇವರು ಮತ್ತು ಧರ್ಮವನ್ನು ತಿಳಿದುಕೊಳ್ಳಬೇಕಾಗಿತ್ತು. ಅಂದರೆ, ಈ ಬೇಲಿಗಳು, ದೇವರು ಮತ್ತು ಧರ್ಮದ ನಿಜ ಅಸ್ತಿತ್ವವಾದ ಆ ಸಾರ್ವತ್ರಿಕ ಸತ್ಯವನ್ನೇ ಧ್ವಂಸ ಮಾಡಿದವು ಎಂದು ಅರ್ಥ. ಇನ್ನು, ಆ ಪ್ರಾಚೀನ ವಾಮಾಚಾರಕ್ಕೆ ಈ ಬೇಲಿಗಳಿಂದಾಗಿ ಆದ ಲಾಭವು ಅಷ್ಟಿಷ್ಟಲ್ಲ ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಅದನ್ನು ಎಲ್ಲರಿಗೂ ಅಂದಾಜಿಸಬಹುದಾಗಿದೆ.   

ಸಾರ್ವತ್ರಿಕ ಪ್ರೀತಿ ಎಂದರೇನು?

ಉತ್ತರ- ಸಾರ್ವತ್ರಿಕ ಪ್ರೀತಿಯು ದೇವರ ಸ್ವಭಾವವನ್ನೇ ಹೇಳುವುದು. ಸೃಷ್ಟಿಕರ್ತ ದೇವರಿಗೆ ತನ್ನ ಸೃಷ್ಟಿಯ ಎಲ್ಲಾ ಮಾನವರೂ ಒಂದೇ ರೀತಿ ಆದರೂ. ದೇವರ ಉಪದೇಶದ ಪ್ರಕಾರ, ಸತ್ಯದಲ್ಲಿ ಜೀವಿಸುವ ಭೂಮಿಯ ಜನರ ಮೇಲೆ, ಪ್ರತ್ಯೇಕ ಒಲವು  ಇರಲೇಬೇಕಾಗುವುದು. ಯಾರು ಕೆಟ್ಟ ದಾರಿಗೆ ಇಳಿಯದೆ ಉತ್ತಮ ವ್ಯಕ್ತಿತ್ವವನ್ನು ಪಡೆಯಲು ಪ್ರಯತ್ನಿಸುವರೋ ಅವರ ಮೇಲೆ ಹೆಚ್ಚು ಪ್ರೀತಿಯನ್ನು ಹೊಂದಿರಲೂ ಬೇಕು ಎಂಬುವುದು ದೇವನೀತಿಯಾಗುವುದು. ಅಂದರೆ, ಅಸುರ ಅಥವಾ ಸೈತಾನನ ಮೇಲೆ ದೇವರಿಗೆ ಪ್ರೀತಿ ಎಂಬುವುದು ಅರ್ಥ ಹೀನವಾಗುವುದು ಎಂದು ಅರ್ಥ. ಈ ದೈವಿಕತೆಯ ಸ್ವಭಾವದ ಹಿನ್ನೆಲೆಯಲ್ಲಿ, ಜಗತ್ತಿನ ಎಲ್ಲಾ ಉತ್ತಮರ ಮೇಲೆ ಇರುವ ಆ ಆತ್ಮೀಯ ಪ್ರೀತಿಯನ್ನೇ ಸಾರ್ವತ್ರಿಕ ಪ್ರೀತಿ ಎನ್ನಬಹುದು. ಕೆಲವು ಆಧ್ಯಾತ್ಮಿಕ ವ್ಯಕ್ತಿಗಳು, ಎಲ್ಲಾ ಕೆಟ್ಟವರನ್ನೂ ಸೇರಿ, ಎಲ್ಲರಲ್ಲೂ ಒಂದೇ ತರದಲ್ಲಿ ಪ್ರೀತಿಸುವುದನ್ನು ಸಾರ್ವತ್ರಿಕ ಪ್ರೀತಿ ಎನ್ನುವರು! ಅದು ಆ ಆಧ್ಯಾತ್ಮಿಕ ವ್ಯಕ್ತಿಯು ಮಾತ್ರ ಇಟ್ಟುಕೊಳ್ಳಬಹುದಾದ ಒಂದು ಅನುಷ್ಠಾನ ಮಾತ್ರವಾಗುವುದು, ಸಮಾಜದಲ್ಲಿ ಅದಕ್ಕೆ ಸ್ಥಾನವಿಲ್ಲ. ಯಾಕೆಂದರೆ, ಆ ರೀತಿಯು ಎಂದೂ ಧರ್ಮವಾಗುವುದಿಲ್ಲ! ಸಮಾಜದಲ್ಲಿ ದುಷ್ಟರನ್ನು ಶಿಕ್ಷಿಸದೆ, ಅವರನ್ನು ರಕ್ಷಿಸಿದರೆ ಅದು ಉತ್ತಮರ ಸರ್ವನಾಶ ಮಾತ್ರವಾಗಿ ಪರಿಣಮಿಸಿ, ಭೀಕರ ಅಧರ್ಮವಾಗುವುದು! ಅಂದರೆ, ಧರ್ಮದ ಸರ್ವನಾಶ ಎಂದು ಅರ್ಥ. ಆದರೆ ಜಗತ್ತಿನಲ್ಲಿ ಹೆಚ್ಚಿನವರು ಇತರ ಧರ್ಮ, ಪಂಥಗಳಲ್ಲಿರುವ ಉತ್ತಮರನ್ನು ಬಿಟ್ಟು ತಮ್ಮ ಧರ್ಮದೊಳಗೆ ಮಾತ್ರ ಈ ಸಾರ್ವತ್ರಿಕ ಪ್ರೀತಿಯನ್ನು ಇಟ್ಟುಕೊಳ್ಳುವರು!! ಇತರ ಧರ್ಮದವರು ಎಷ್ಟೇ ಉತ್ತಮರಾದರೂ, ಅವರು ಅವಿಶ್ವಾಸಿಗಳು ಅಥವಾ ಮ್ಲೇಚ್ಚರು ಎಂಬ ಹೆಸರ ಅಡಿಯಲ್ಲಿ ಹಾಕಿಬಿಡುವರು! ಮಾತ್ರವಲ್ಲ, ಅವರನ್ನು ತಮ್ಮ ಧರ್ಮದೊಳಗಿನ ಅತಿ ದೊಡ್ಡ ಪಾಪಿಗಿಂತಲೂ ಪಾಪಿ ಎಂಬ ತರದಲ್ಲಿ, ಆವರಿಗೆ ಮರಣಾ ನಂತರ ಯಾವ ಗತಿಯೂ ಇಲ್ಲದೆ ಪಿಶಾಚಿಯಾಗಿ ಅಲೆಯಬೇಕಾಗುವುದು ಎಂದು ತಮ್ಮೊಳಗೆ ಆರೋಪಿಸುತ್ತಾ, ತಮ್ಮ ತಮ್ಮ ಧರ್ಮಗಳ ಶ್ರೇಷ್ಠತೆಗಾಗಿ ಆ ರೀತಿಯಲ್ಲಿ ಚಿತ್ರಿಸುತ್ತಾ ಬಂದಿರುವರು!!! ಈ ರೀತಿಯಲ್ಲಿ, ಮತ್ತು ಇತರ ಧರ್ಮದ ದೃಷ್ಟಿಯಿಂದ ಮಾತ್ರ ಪ್ರತಿ ಧರ್ಮವನ್ನು ನೋಡಿದಾಗ, ನಮಗೆ ಈ ಭೂಮಿಯಲ್ಲಿ ಅವಿಶ್ವಾಸಿಗಳು ಮಾತ್ರ ಸಿಗುವರು!! ಈ ಪ್ರಪಂಚ ಸೃಷ್ಟಿಕರ್ತನು, ಎಲ್ಲಾ ಧರ್ಮಗಳಲ್ಲೂ ಈ ರೀತಿಯಲ್ಲಿ ಹೇಳುತ್ತಾ  ಅವಿಶ್ವಾಸಿಗಳನ್ನು ಮಾತ್ರ ಸೃಷ್ಟಿಮಾಡಿ, ತನಗೆ ಯಾರೊಬ್ಬ ವಿಶ್ವಾಸಿಯೂ ಇಲ್ಲದಂತೆ ಮಾಡಿಕೊಳ್ಳುವನೇ? ಆದುದರಿಂದ, ಆ ಸಾರ್ವತ್ರಿಕ ಪ್ರೀತಿಯೆಂದರೆ, ಈ ಜಗತ್ತಿನ ಎಲ್ಲಾ ಉತ್ತಮರನ್ನು, ಅವರು ಎಲ್ಲಿರುವರು ಎಂದು ನೋಡದೆ, ಅವರ ಮೇಲೆ ಆತ್ಮೀಯ ಪ್ರೀತಿಯನ್ನು ಹರಿಸುವುದು ಎಂದು ತಿಳಿಯಬಹುದು.    

ಸಾರ್ವತ್ರಿಕ ನೈತಿಕತೆ ಎಂದರೇನು?

ಉತ್ತರ- ಜಗತ್ತು ನೈತಿಕತೆ ಎಂಬುವುದನ್ನು ಉದ್ದೇಶಿಸಿರುವುದು ಒಂದು ಸಮಾಜದ ಒಟ್ಟು ಒಳಿತಿನ ಹಿನ್ನೆಲೆಯಲ್ಲಿ ಆಗಿರುವುದು. ಆ ಹಿನ್ನೆಲೆಯಲ್ಲಿ ನೈತಿಕತೆಯು ವ್ಯಕ್ತಿ ಪ್ರಧಾನವಾಗಿಟ್ಟು ಮಾಡಿದ್ದಲ್ಲ ಎಂದು ತಿಳಿಯಬಹುದು. ಆದರೆ, ಸಮಾಜ ಪ್ರಧಾನವಾಗಿ ಮಾಡಿದ್ದು ಎಂದರೂ ಅದು ಉದ್ದೇಶಿಸುವುದು ಸಮಾಜದ ಪ್ರತಿ ವ್ಯಕ್ತಿಯ ಒಳಿತನ್ನೇ ಆಗಿದೆ ಎಂಬುವುದನ್ನೂ ಮರೆಯಬಾರದು. ಒಟ್ಟಿನಲ್ಲಿ, ನೈತಿಕತೆ ಎಂದರೆ, ವ್ಯಕ್ತಿಯು, ಇತರರನ್ನು ಕಡೆಗಣಿಸಿ,  ನೇರವಾಗಿ ತನ್ನದೇ ಒಳಿತಿನ ರೀತಿಯಲ್ಲಿ ಜೀವಿಸುವ ರೀತಿಯ ಬದಲು, ಅದು ಸಮಾಜದ ಜನರ ಮೂಲಕ ಹರಿದು ಬಂದು ವ್ಯಕ್ತಿಯ ಒಳಿತನ್ನೇ ಮಾಡಿಕೊಡುವ ರೀತಿಯಾಗಿದೆ ಎಂದು ತಿಳಿಯಬಹುದು. ಅಂದರೆ, “ಇತರರೂ ಚೆನ್ನಾಗಿ ಇರಬೇಕು, ಮತ್ತು ತಾನೂ ಚೆನ್ನಾಗಿರಬೇಕು” ಎಂಬ ಭಾವನೆಯ ಹಿನ್ನೆಲೆಯ ನಿಯಮದ ರೀತಿಯಲ್ಲಿ ಇದು ಇರುವ ಕಾರಣ ಈ ನೈತಿಕತೆಯನ್ನು “ಧರ್ಮ” ಎಂದೂ ಕರೆಯಬಹುದು. ಆದರೆ, ಈ ನೈತಿಕತೆಯನ್ನು ಮಾನವೀಯತೆಗೆ ವಿರುದ್ಧವಾದ ರೀತಿಯಲ್ಲಿ ಜನರು ಬರೆದು ಸೇರಿಸಿ ಸಮಾಜವನ್ನು ಸರ್ವನಾಶ ಮಾಡಿರುವರು ಎಂಬುವುದು ಸತ್ಯವಾಗಿದೆ. ಹೆಣ್ಣಿಗೆ ವಿದ್ಯೆ ಇಲ್ಲ, ಸತಿ ಸಹಗಮನ ಪದ್ದತಿ, ದೇವ ದಾಸಿ ಪದ್ದತಿ, ಶೂದ್ರನ ನೀತಿ, ಕ್ಷತ್ರಿಯನ ನೀತಿ, ಎಂದು ಅದು ಖಡಿವಾಣವಿಲ್ಲದೆ ಹಬ್ಬಿದವು, ಅದರ ಫಲವೇ ಶೋಷಣೆ, ನೋವು, ಹಿಂಸೆ, ಅನಾಚಾರಗಳು!! ಈಗ ಈ ನಿಟ್ಟಿನಲ್ಲಿ ನೈತಿಕತೆಯು ಧರ್ಮವಾಗುವುದೇ ಎಂದು ಕೇಳಿದರೆ “ಎಂದಿಗೂ ಇಲ್ಲ” ಎಂಬುವುದೇ ಅದರ ಉತ್ತರ ಆಗುವುದು. ಆದುದರಿಂದ ಎಲ್ಲಾ ಧರ್ಮ, ಪಂಥಗಳ ನೈತಿಕತೆಯ ವಿವರಣೆಗಳನ್ನು ಅದೇ ರೀತಿಯಲ್ಲಿ ಒಪ್ಪಿಕೊಳ್ಳುವ ಹಾಗಿಲ್ಲ ಎಂದು ತಿಳಿಯಬೇಕು. ಇಲ್ಲಿ, ಮಾನವೀಯತೆಗೆ ವಿರುದ್ಧವಲ್ಲದ ರೀತಿಯಲ್ಲಿ ‘ಇತರರೂ ಚೆನ್ನಾಗಿ ಇರಬೇಕು, ಮತ್ತು ತಾನೂ ಚೆನ್ನಾಗಿ ಇರಬೇಕು’ ಎಂಬ ಹಿನ್ನೆಯಲ್ಲಿ ಸರ್ವರಿಗೂ ಒಳಿತಾಗುವ ನೈತಿಕತೆಯನ್ನು ಮಾತ್ರ ಪ್ರತ್ಯೇಕಿಸಿ ನೋಡಬೇಕಾಗಿದೆ. ಹೀಗೆ ನೋಡುವಾಗ ನಮಗೆ ಕಳ್ಳತನ ಮಾಡಬಾರದು, ವಂಚಿಸಬಾರದು, ಪರಸ್ತ್ರೀ, ಪರಪುರುಷ ಸಂಘ ಮಾಡಬಾರದು, ಸುಳ್ಳು ಹೇಳಬಾರದು, ಮದುವೆಯ ನಂತರವೇ ಮಿಲನ, ಇತ್ಯಾದಿ ಎಲ್ಲಾ ಧರ್ಮ ಪಂಥಗಳಿಗೂ ಸಾಮಾನ್ಯವಾಗಿರುವ ಅದೆಷ್ಟೋ ನೈತಿಕ ಅಂಶಗಳು ಸಿಗುವವು. ಇದನ್ನೇ “ಸಾರ್ವತ್ರಿಕ ನೈತಿಕತೆ” ಎನ್ನುವುದು. ಇದು ಧರ್ಮ, ಪಂಥಗಳ ಸಾರದ ಭಾಗದಲ್ಲೂ ಸೇರಿಕೊಳ್ಳುತ್ತವೆ ಎಂಬುವುದನ್ನು ಪ್ರತ್ಯೆಕವಾಗಿ ತಿಳಿಯಬೇಕಾಗಿದೆ.      

ಈ ಜಗತ್ತಿನ ಎಲ್ಲಾ ಪುರಾಣಗಳಲ್ಲೂ ದೇವತೆಗಳು ಮತ್ತು ದೇವರುಗಳು, ನೈತಿಕವೆಂದು ವಿವರಿಸಲಾಗದ ಕೆಲವು ಕರ್ಮಗಳನ್ನು ಮಾಡಿರುವುದು ತಿಳಿಯುವುದು. ಆದರೆ ನೀವು ಎಲ್ಲಾ ದೇವರುಗಳನ್ನೂ ಶ್ರೇಷ್ಠವೆಂದೇ ಚಿತ್ರಿಸುವಿರಿ. ಈಗ, ಇದು ಸತ್ಯಕ್ಕೆ ವಿರುದ್ಧವಾಗುವುದಿಲ್ಲವೇ?

ಉತ್ತರ- ನೈತಿಕತೆಯು ದೇವಸಂಕಲ್ಪಕ್ಕೆ ಅನಿವಾರ್ಯವಾಗಿದೆ ಎಂಬ ಸತ್ಯವನ್ನು ಹಿಂತೆಗೆಯುವುದಲ್ಲ ಇಲ್ಲಿ ನಾವು ಮಾಡಬೇಕಾಗಿರುವುದು. ಅದೇ ರೀತಿ, ಅನೈತಿಕತೆ ಇದ್ದಲ್ಲಿ ಅವನ್ನೆಲ್ಲ ನೈತಿಕವೆಂದು ಸಾಧಿಸುವ ರೀತಿಯೂ ಅಲ್ಲ, ಹಾಗಿದ್ದರೆ ಸಾಧಿಸಲು ಹೊರಟರೆ ಅದು ಸತ್ಯವಿರುದ್ಧವಾಗುವುದು. ಇದಕ್ಕೆ ಇರುವ ಆ ಒಂದೇ ರೀತಿ ಎಂದರೆ ನಾವು ಎಲ್ಲರೂ ‘ಹಿಂದಿನ’ ಎಲ್ಲಾ ದೇವಸಂಕಲ್ಪಗಳ ಆ ಉತ್ತಮ ಭಾಗಗಳಿಗೆ ಮಾತ್ರ ಒತ್ತುಕೊಟ್ಟು ಇತರ ಭಾಗವನ್ನು “ಬಿಟ್ಟುಬಿಡುವುದು” ಆಗಿದೆ. ಈಗ, ಇಲ್ಲಿ  ಅನೈತಿಕತೆಯನ್ನು ಒಪ್ಪಿಕೊಳ್ಳಲೂ ಇಲ್ಲ, ಇತ್ತ ಎಲ್ಲಾ ದೇವರುಗಳ ನೈತಿಕ ಭಾಗವನ್ನು ಒಪ್ಪಿಯೂ ಆಗುವುದು. ಹೀಗಿರುವಾಗ ಇಲ್ಲಿ ಸತ್ಯವನ್ನು ವಿರೋಧಿಸುವುದಿಲ್ಲ ಎಂದು ಸ್ಪಷ್ಟವಾಗುವುದು. ಇಲ್ಲಿ “ಆಚಾರಕ್ಕೆ ಕುಂದು ಉಂಟಾಯಿತು” ಎನ್ನಲು ಸಾಧ್ಯವಿಲ್ಲ ಯಾಕೆಂದರೆ, ದೇವರನ್ನು ಅಥವಾ ದೇವರುಗಳನ್ನು ನಾವು ಇಲ್ಲಿ ಸ್ವಭಾವದಲ್ಲಿ ಅತ್ಯಂತ ಮೇಲೆ ಎತ್ತಿ ಹಿಡಿದಿದ್ದೇವೆ. ಯಾವ ದೇವರೇ ಆದರೂ, ತನ್ನನ್ನು ಹೊಗಳುವವನನ್ನು ಶಿಕ್ಷಿಸಲಾರನು. ಆದುದರಿಂದ ದೇವರ ಕೋಪದ ಬಗ್ಗೆಯೂ ಹೆದರುವ ಅಗತ್ಯವಿಲ್ಲ. ಈ ರೀತಿ, ನಂಬಿಕೆ, ಅಚಾರಗಳ ತೊಂದರೆಗಳು ಇಲ್ಲಿ ಇಲ್ಲ ಎಂದು ತಿಳಿಯಬಹುದು.  ಇಂದಿನ ದೇವಮಾನವರನ್ನು ಉದ್ದೇಶಿಸಿ ಹೇಳುವುದಲ್ಲ ಎಂದು ತಿಳಿಯಬೇಕು. ಅಂಥವರಲ್ಲಿ ಯಾರಾದರೂ ತಪ್ಪು ಮಾಡಿದರೆ, ಆ ದೇವಮಾನವರಿಗೆ [ಅವರು ಇಂದಿನ ಕಾಲದಲ್ಲಿ ಜೀವಿಸುವ ಕಾರಣ] ತಕ್ಕ ಶಿಕ್ಷೆ ನ್ಯಾಯಾಲಯವು ಕೊಡುವುದು.

ಇಲ್ಲಿ ಯಾರೂ ಅನೈತಿಕ ವಿಚಾರಗಳನ್ನು ನೈತಿಕ ಎಂದು ತಿರುಚುವ ಗೋಜಿಗೆ ಹೋಗುವುದಿಲ್ಲ, ಅದರ ಬದಲು ದೇವರನ್ನು ಒಟ್ಟಾಗಿ ನೈತಿಕತೆಯ ಆದರ್ಶವಾಗಿ ಚಿತ್ರಿಸುವುದೆಂದು ತಿಳಿಯಬೇಕು. ಇನ್ನು ಜಗತ್ತಲ್ಲಿ ಆಸ್ತಿಕರು ಇದುವರೆಗೂ ಇತರ ದೇವರ ಅನೈತಿಕತೆಯನ್ನು ಎತ್ತಿ ಹೇಳುತ್ತಾ, ತನ್ನ ದೇವರನ್ನು ಹಲವು ರೀತಿಯಲ್ಲಿ ವಿವರಿಸಿ ಎಲ್ಲವೂ ನೈತಿಕದಲ್ಲೇ ಇದೆ ಎಂಬಂತೆ ಚಿತ್ರಿಸುವರು. ಒಟ್ಟಿನಲ್ಲಿ ನಾವು ಇಲ್ಲಿ ತಿಳಿಯಬೇಕಾದ ಅಂಶವೆಂದರೆ “ದೇವರು” ಎಂಬ ಸಂಕಲ್ಪಕ್ಕೆ ಇದುವರೆಗೂ ಸಾರ್ವತ್ರಿಕ ಮನ್ನಣೆ ಸಿಗಲಿಲ್ಲ ಎಂದು ಮಾತ್ರವಾಗಿದೆ!! ಇನ್ನು, “ಬೆಳಕು ಎಂಬುವುದಕ್ಕೆ ಕತ್ತಲೆಯನ್ನು ಹೇರುವುದು ನ್ಯಾಯ ವಿರುದ್ಧ” ಎಂಬ  ಸತ್ಯದ ಆಧಾರವನ್ನು ಇಟ್ಟುಕೊಂಡೇ, ನಮಗೆ ಎಲ್ಲ “ದೇವರು” ಸಂಕಲ್ಪಗಳನ್ನೂ “ಆದರ್ಶದ ನಿಧಿ” ಎಂದು ಮಾತ್ರ ಚಿತ್ರಿಸಬಹುದು. ಇನ್ನು, ಜನರು ತಾವು ಬದಲಾಯಿಸಿಕೊಳ್ಳಬೇಕಾಗಿರುವುದು, ತಮ್ಮ ದೇವರನ್ನು ಮಾತ್ರ ಹೊಗಳಿ ಇತರ ದೇವರನ್ನು ತೆಗಳುವ ಬದಲು, ಎಲ್ಲಾ ದೇವಸಂಕಲ್ಪಗಳನ್ನು ಆದರ್ಶದ ಹಿನ್ನೆಲೆಯಲ್ಲಿ ಶ್ರೇಷ್ಠ ಎಂದು ತಿಳಿಯುವ ಕೆಲಸ ಮಾತ್ರವಾಗಿದೆ. ಆದರೆ, ನಾಸ್ತಿಕರು ಈ ರೀತಿಯ ಕುರಿತು ಅಸಮಾಧಾನ ಪಟ್ಟರೆ, ಅವರಿಗೆ, “ಆ “ಹಿಂದಿನ” ದೇವರುಗಳನ್ನು ನಿಂದಿಸಿದಲ್ಲಿ, ಈ ಜಗತ್ತಿನಲ್ಲಿ, ಜನರನ್ನು ಉತ್ತಮರನ್ನಾಗಿ ಪರಿವರ್ತಿಸಲು ಸಾಧ್ಯವಾಗುವುದೇ” ಎಂಬ ಮರು ಪ್ರಶ್ನೆಯನ್ನು ಕೇಳಬೇಕಾಗುವುದು. ಹಾಗೆ ನಿಂದಿಸುವುದರಿಂದ ಯಾರೂ ಉತ್ತಮರಾಗುವುದಿಲ್ಲ, ಬದಲು ಸಮಾಜದಲ್ಲಿ ಧ್ವೇಷಕ್ಕೆ ಮಾತ್ರ ಅದು ಕಾರಣವಾಗುವುದು. ಮಾತ್ರವಲ್ಲ, ಅದು ಆ ಪ್ರಾಚೀನ ವಾಮಾಚಾರಕ್ಕೆ ಪೂರಕವಾದ ಕೆಲಸವೂ ಆಗುವುದು.

ನಾವು ದೇವರುಗಳ ಮತ್ತು ಧರ್ಮಗಳ ಆ ಸಾರ ಭಾಗದಲ್ಲಿ ಜೀವಿಸೋಣ. ಈ ರೀತಿಯಲ್ಲಿ ನಾವು ಜೀವಿಸಲು ಆರಂಭಿಸಿದಾಗ, ಜಗತ್ತು ಯುದ್ಧ, ಹಿಂಸೆ, ಜಗಳ, ಧ್ವೇಷ, ಅನೈತಿಕತೆಗಳ  ಚಟದಿಂದ ತಾನಾಗಿ ದೂರ ಸರಿಯುವುದು. ಆಗಲೇ ಈ ಭೂಮಿಯು ಆನಂದದ ಆ ಶಾಂತಿ-ಸ್ವರ್ಗವಾಗುವುದು.  

ನೀವು ಕೆಲವೊಮ್ಮೆ ಪುರಾಣ ಕಥೆಗಳಲ್ಲಿನ ತಪ್ಪುಗಳನ್ನು ಎತ್ತಿ ಹೇಳುವಿರಲ್ಲ ಅದರ ಅಗತ್ಯವಿದೆಯೇ?

ಉತ್ತರ- ನನ್ನ ಸಹೋದರ, ನನಗೆ ಯಾವ ದೇವರು, ಅಥವಾ ಧರ್ಮದ ಮೇಲೆ ಸ್ವಲ್ಪವೂ ಧ್ವೇಷವಿಲ್ಲ. ಯಾಕೆಂದರೆ ನನಗೆ ಪ್ರತ್ಯೇಕವಾಗಿ ಯಾವ ಧರ್ಮ, ಪಂಥ, ಮತ, ಪರಂಪರೆಗಳಿಲ್ಲ. ಆದುದರಿಂದ ಅದಕ್ಕಾಗಿ ವಾದದಲ್ಲಿ ಜಯಿಸಿ ಜನರನ್ನು ಸೇರಿಸುವ ಅಥವಾ ದಿಗ್ವಿಜಯ ಮಾಡಬೇಕೆಂಬ ಆ ದೊಡ್ಡ ಜವಾಬ್ಧಾರಿಯೂ ಇಲ್ಲ. ಇನ್ನು, ನಾನು ಯಾಕಾಗಿ ಕೆಲವು ಪುರಾಣಗಳಲ್ಲಿ ಇರುವ ವಿರೋಧಾಭಾಸಗಳನ್ನು ಎತ್ತಿ ತೋರಿಸಿರುವುದು ಎಂದರೆ, ಆ ಪ್ರಾಚೀನ ವಾಮಾಚಾರದ ಕೆಲಸವು, ಈ ಧರ್ಮ, ಪಂಥಗಳ ಹಿನ್ನೆಲೆಯಲ್ಲೇ ಹೆಚ್ಚಾಗಿ ನಡೆಯುತ್ತಿರುವುದು ಎಂದು ಎಚ್ಚರಿಸುವುದಕ್ಕೆ ಮಾತ್ರವಾಗಿದೆ. ಯಾರೇ ಆದರೂ, [ನಂಬಿಕೆಯ ರೀತಿಯಲ್ಲಿ ನಂಬಿಸುವುದನ್ನು ಬಿಟ್ಟಲ್ಲಿ,] ಸರಿಯಾದ ತರ್ಕದ ಸಾಕ್ಷ್ಯಾಧಾರವಿಲ್ಲದೆ ಯಾರ ಮಾತನ್ನೂ ಇದುವರೆಗೂ ಒಪ್ಪಿದ್ದಿಲ್ಲ ಮತ್ತು ಅವನ್ನು ಸುಳ್ಳು ಎಂದು ತಳ್ಳಿಬಿಡುವರು. ಸ್ವಪ್ನವೋ ಅಥವಾ ಸೂಕ್ಷದ ಕೆಲವು ನಿಮಿಷಗಳ ದರ್ಶನವೋ ಅಲ್ಲದ, ಹಲವು ವರುಷಗಳು ಬೇಹುಗಾರಿಕೆ ಮಾಡಿದ ಫಲವಾಗಿ ದೊರಕಿರುವ, ನಾನು ಕಂಡ ಆ ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳ ಆ ಭಯಾನಕ ಅಪಾಯಗಳನ್ನು ‘ಸುಳ್ಳು’ ಎಂದು ತಳ್ಳಿದರೆ, ಎಲ್ಲವೂ ಅಲ್ಲಿಗೆ ಮುಗಿಯುವುದೆಂದು ನನ್ನ ಹೃದಯವು ನನಗೆ ಹೇಳುವುದು. ಅಂದರೆ, ಆ ಅಪಾಯಗಳಿಂದ ಕಷ್ಟಪಡಬೇಕಾದವರು ನೀವುಗಳೇ ಆಗಿರುವಿರಿ ಎಂದು ಅರ್ಥ!! ಆದುದರಿಂದ, ನಾನು ಮಾಡುತ್ತಿರುವುದು ಎಲ್ಲವೂ ನಿಮಗಾಗಿ ಮಾತ್ರ ಎಂದು ತಿಳಿಯಬೇಕು, ನನಗಾಗಿ ನಾನು ಏನೂ ಮಾಡಿಯೂ ಇಲ್ಲ. ಹೀಗಿರುವಾಗ, ಆ ಅಪಾಯಗಳ ಸತ್ಯಾವಸ್ಥೆಯನ್ನು ನಿಮ್ಮ ಮುಂದೆ ಇಡುವುದಕ್ಕೆ ಇರುವ ಆ ಏಕೈಕ ಮಾರ್ಗವಾಗಿ ನನಗೆ ‘ಸತ್ಯದ ಹಿನ್ನೆಲೆಯ’ ವಾದವನ್ನು ಮಾಡಬೇಕಾಯಿತು ಎಂದು ತಿಳಿಯಬೇಕು.  ದುರದೃಷ್ಟವಶಾತ್,  ಇಂದೂ,  ಪುರಾಣ ಕಥೆಗಳನ್ನೇ ನೂರಕ್ಕೆ ನೂರು ಸರಿ ಎಂದು ವಾದಿಸಿ, ಆ ಹಿನ್ನೆಲೆಯಲ್ಲಿ, ಧ್ವೇಷ, ಧರ್ಮಾಂಧತೆಗಳನ್ನು ಬೆಳೆಸುತ್ತಿರುವುದನ್ನು ನೋಡುವಾಗ, ಆ ಪ್ರಾಚೀನ ವಾಮಾಚಾರದ ಈ ರೀತಿಯ ಭಯಾನಕ ಕುತಂತ್ರವನ್ನು ಇಲ್ಲವಾಗಿಸಲು ಆಲೋಚಿದೆ. ಇದಕ್ಕೆ ಬೇಕಾಗಿ ಮಾತ್ರ ಆ ರೀತಿ ಪುರಾಣ ಕಥೆಗಳಲ್ಲಿನ ಕೆಲವು ವಿರೋಧಾಭಾಸವನ್ನು ವಿವರಿಸಿದ್ದೇನೆ ಅಷ್ಟೆ. ಅಂದರೆ, ಈ ವಿವರಣೆಗಳು ಯಾವುದೇ ದೇವರು ಅಥವಾ ಧರ್ಮವನ್ನು ನಿಂದಿಸುವ ಉದ್ದೇಶದಿಂದ ಅಲ್ಲ ಎಂಬುವುದನ್ನು ಪ್ರತ್ಯೇಕವಾಗಿ ತಿಳಿಯಬೇಕಾಗಿದೆ.   

ಧರ್ಮ, ಪಂಥಗಳ ಜನರು ಆ ಪ್ರಾಚೀನ ವಾಮಾಚಾರವನ್ನು ತಮ್ಮ ಧರ್ಮದಲ್ಲಿ ಹೇಳಿಲ್ಲ ಎಂದು ವಾದ ಮಾಡಿದರೆ,   ಅದಕ್ಕೆ ನಿಮ್ಮ ಉತ್ತರ ಏನು?

ಉತ್ತರ- ಬಹಳ ಚಿಕ್ಕ ಉತ್ತರ ಮಾತ್ರ ಅದಕ್ಕೆ ಇರುವುದು. ನಿಜವಾಗಿಯೂ ಎಲ್ಲಾ ಧರ್ಮ, ಪಂಥಗಳೂ ಇದೇ ಪ್ರಾಚೀನ ವಾಮಾಚಾರವನ್ನು ತಮಗೆ ಅದರ ಅರಿವಿಲ್ಲದೆಯೇ ಒಪ್ಪಿದೆ, ಅಂದರೆ, ಅವುಗಳಿಗೆ ಅದು ಪ್ರಾಚೀನ ವಾಮಾಚಾರ ಎಂದು ತಿಳಿದಿಲ್ಲ ಎಂದು ಅರ್ಥ!! ಒಂದು ಕಡೆ ಅಸುರ ಶಕ್ತಿ ಎಂದು ಹೇಳಿದರೆ ಇನ್ನೊಂದು ಕಡೆ ಅದನ್ನು ಸೈತಾನ ಎಂದು ಕರೆದಿದ್ದಾರೆ ಅಷ್ಟೆ. ನೀವು ಎಲ್ಲಾ ಧರ್ಮದ ಪಂಡಿತರುಗಳ ಪ್ರವಚನವನ್ನು ಕೇಳುವಾಗಲೂ ಅವರು “ಸೈತಾನನು ಮಾನವನ ಪ್ರತಿ ಕರ್ಮದಲ್ಲೂ ಸೇರಿ ಮಾನವನ ಸದ್ಗುಣವನ್ನು ಇಲ್ಲವಾಗಿಸುವನು” ಎಂದು ಎಚ್ಚರಿಸುವುದನ್ನು ನೋಡುವಿರಿ.  ಮಾತ್ರವಲ್ಲ, ಅವರವರ ಧರ್ಮದ ವಿರುದ್ಧ ರೀತಿಯಲ್ಲಿ ಜೀವಿಸುವಂತೆ ಜನರನ್ನು ಪ್ರಲೋಭಿಸುವನೆಂದೂ ಹೇಳುತ್ತಾ ಬಂದಿರುವರು!!  ಕೊನೆಯ ಕಾಲದಲ್ಲಿ ಕೆಟ್ಟ ಜನರನ್ನು ಆ ಸೈತಾನನು ಅತಿಯಾಗಿ ಎಬ್ಬಿಸುವನೆಂದೂ ಹೇಳುವರು. ಈಗ, ನಾನು ಹೇಳುವ ಅದೇ ಪ್ರಾಚೀನ ವಾಮಾಚಾರ ವಿವರಣೆಯನ್ನೇ ಎಲ್ಲರೂ ಅವರ ರೀತಿಯಲ್ಲಿ ವಿವರಿಸಿರುವುದು ಎಂದು ಸ್ಪಷ್ಟವಾಗುವುದು, ಆದರೆ, ಅಲ್ಲಿ ಅದಕ್ಕೆ ಕಾರಣವಾಗುವುದು ಆ “ಪುರಾಣಕಥೆ” ಯೊಳಗಿನ ಅಸುರ ಅಥವಾ ಸೈತಾನ ಎಂದು ಮಾತ್ರ, ಮತ್ತು ನಾನು ಹೇಳುವ ಆ ಪ್ರಾಚೀನ ವಾಮಾಚಾರವು, “ಮಾನವನೇ ಪ್ರಾಚೀನ ಕಾಲದಲ್ಲಿ ಮಾಡಿಟ್ಟ”, ಆ ತಾನಾಗಿ ತನ್ನನ್ನು ಬೆಳೆಸಿಕೊಳ್ಳುವ ರೀತಿಯ, ಸೂಕ್ಷ್ಮದ, ಒಂದು ಪ್ರತ್ಯೇಕ ವಾಮಾಚಾರ ವ್ಯವಸ್ಥೆ ಆಗುವುದು ಎಂಬ ಒಂದು ವ್ಯತ್ಯಾಸ ಮಾತ್ರ ಇರುವುದು ಎಂದು ತಿಳಿಯಬೇಕು. ಹೀಗೆ, ಎರಡು ಕಡೆಯೂ ಆ ಒಂದೇ ಸೂರ್ಯನನ್ನು ಬೊಟ್ಟುಮಾಡಿ ತೋರಿಸುವಂತೆ, ಆ ಒಂದನ್ನೇ ಬೊಟ್ಟು ಮಾಡಿ ತೋರಿಸುವಾಗ, “ಪ್ರಾಚೀನ ವಾಮಾಚಾರ ಇಲ್ಲ” ಎಂದು ಹೇಳಿ, ನಾನು ತೋರಿಸುವ  ಸೂರ್ಯನನ್ನು ಇಲ್ಲ ಎಂದು ನೀವು ಹೇಳಿದರೆ, ಆ ಅಸುರ ಅಥವಾ ಸೈತಾನನ ವಿವರಣೆ ಎಂಬ ನೀವು ತೋರಿಸುವ  ಸೂರ್ಯನೂ ಅದರೊಂದಿಗೆ ತಾನಾಗಿ ಇಲ್ಲವಾಗುವನು ಎಂಬ ತೊಂದರೆ ಅಲ್ಲಿ ಸೃಷ್ಟಿಯಾಗುವುದು.            

ಎಲ್ಲಾ ಧರ್ಮಗಳೂ ಶಾಂತಿಗಾಗಿಯೇ ನೆಲೆಯಾಗಿವೆ ಅಲ್ಲವೇ?

ಉತ್ತರ- ಈ ಜಗತ್ತಿನಲ್ಲಿ ಲಕ್ಷಗಟ್ಟಲೆ ಗುರುಗಳು ಮತ್ತು ಪ್ರವಾದಿಗಳು ಆಗಿ ಹೋದರು, ಮತ್ತು ಈಗಲೂ ಹಲವರು ಇರುವರು. ಇವರೆಲ್ಲರೂ ಶಾಂತಿಯನ್ನೇ ಪ್ರತಿಪಾದಿಸಿರುವುದು, ಅಂದರೆ, ಶಾಂತಿಯ ಪ್ರತಿಪಾದನೆಯು ಹೊಸತೇನೂ ಅಲ್ಲ! ಇದು ಯಾಕೆಂದರೆ ಶಾಂತಿಯನ್ನು ಪ್ರತಿಪಾದಿಸದಿದ್ದರೆ ಅದೊಂದು ಧರ್ಮವೋ, ಪಂಥವೋ, ಅಥವಾ ದೇವರ ಮಾತೋ ಆಗಲಾರದು! ಆದರೆ, ಇಲ್ಲೆಲ್ಲಾ ಶಾಂತಿಯು ಸೃಷ್ಟಿಯಾಗಿರುವುದು, ಅವರವರ ದೇವರು, ಧರ್ಮ, ಪಂಥಗಳೆಂಬ ಬೇಲಿಯೊಳಗೆ, ಮತ್ತು ಈ ಎಲ್ಲಾ ಭಯಾನಕ ಧ್ವೇಷ, ಹಿಂಸೆ, ರಕ್ತಪಾತಗಳಿಗೂ ಅವು ಕಾರಣವಾಗಿರುವುದು ಎಂಬುವುದು ನಮ್ಮನ್ನು ಬೆಚ್ಚಿ ಬೀಳಿಸುವುದು! ಅಂದರೆ, ತಮ್ಮ ಬೇಲಿಯೊಳಗಿನ ಶಾಂತಿಯೇ ಇತರ ಕಡೆಗಳಲ್ಲಿ ಧ್ವೇಷ, ರಕ್ತಪಾತಗಳನ್ನು ಸೃಷ್ಟಿಸಿದವು ಎಂದು ಅರ್ಥ. ಹಿಂದಿನಿಂದಲೇ ಎಲ್ಲಾ ಧರ್ಮ, ಪಂಥಗಳು ತಮ್ಮ ತಮ್ಮ ಧರ್ಮ, ಪಂಥಗಳನ್ನು ಆ ಶಾಂತಿಯ ಧರ್ಮ, ಪಂಥಗಳು ಎಂದು ಹೇಳುತ್ತಾ ಬಂದಿರುವುದು ಈ ಹಿನ್ನೆಲೆಯಲ್ಲಿ ಮಾತ್ರ ಎಂದು ತಿಳಿಯಬೇಕು. ಎಲ್ಲವನ್ನೂ ಒಟ್ಟಾಗಿ ನೋಡುವಾಗ, ಈ ರೀತಿಯ ಶಾಂತಿಗಳ ಇನ್ನೊಂದು ಮುಖವೇ ಆ ಭಯಾನಕ ಅಶಾಂತಿಗಳು ಎಂದು ಸ್ಪಷ್ಟವಾಗಿ ತಿಳಿದು ಬರುವುದು!!!  

ಆ ಪ್ರಾಚೀನ ವಾಮಾಚಾರವು ಇದುವರೆಗೂ ಶಾಂತಿಯೆಂದು ಹೇಳುತ್ತಾ, ಹೇಗೆ ಜನರನ್ನು ಮೋಸ ಮಾಡುತ್ತಾ ಬಂದಿದೆ ಎಂದು ಇಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ!

ಸಮಾಜದಲ್ಲಿ ಜೀವಿಸಲು, ನಂಬಿಕೆ ಅನಿವಾರ್ಯವೆಂದು ಹೇಳುವರು ಸರಿಯೇ?

ಉತ್ತರ- ಇದನ್ನು ಉತ್ತರಿಸುವ ಮೊದಲು ‘ನಂಬಿಕೆ’ ಎಂದರೇನು ಎಂಬುವುದನ್ನು ನೋಡೋಣ. ನಿಜವಾಗಿಯೂ ‘ನಂಬಿಕೆ’ಯೆಂಬುವುದು ಯಾವುದಾದರು ಒಂದರ ಅಸ್ತಿತ್ವವನ್ನು ಪ್ರತಿನಿಧೀಕರಿಸುವುದಿಲ್ಲ. ಅದು ಮಾನವನ ಅರಿವಿನ ಕೊರತೆಯನ್ನು ಮಾತ್ರ ಹೇಳುವುದು. ಇನ್ನು, ‘ಸತ್ಯ’ ಎಂದಾಗ ಆ ವ್ಯಕ್ತಿಯಲ್ಲಿ ಇರುವಿಕೆಯ ಭಾವದ ಅರಿವನ್ನು ಕಾಣಬಹುದು. ಅದೇ ರೀತಿಯಲ್ಲಿ ‘ಅಸತ್ಯ’ ಎಂದಾಗಲೂ ಇಲ್ಲವೆಂಬ ಅರಿವನ್ನು ಆತನಲ್ಲಿ ಕಾಣಬಹುದು. ಆದರೆ ಒಬ್ಬನು ‘ನಂಬುವೆನು’ ಎಂದಾಗ ಅಲ್ಲಿ ಈ ಎರಡು ರೀತಿಯ ಅರಿವೂ ಇಲ್ಲವಾಗುವುದು. ಅಂದರೆ ಅದು ಎರಡು ರೀತಿಯಿಂದಲೂ ಅರಿವಿನ ಅಭಾವ ಮಾತ್ರವಾಗಿರುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅರಿವಿನ ಅಭಾವವಾದ ಕಾರಣ ನಂಬಿಕೆಯನ್ನು ಅಜ್ಞಾನ ಎನ್ನಬಹುದು. ಅರಿವು ಇದ್ದಲ್ಲಿ ಸಂಶಯ ಇರುವುದಿಲ್ಲ. ಆದರೆ ಅರಿವು ಇಲ್ಲದಲ್ಲಿ ಸಂಶಯ ಇರುವುದು. ಈ ರೀತಿಯಲ್ಲಿ ನಂಬುವುದು ಎಂದರೆ ಸಂಶಯಿಸುವುದು ಎಂದು ಹೇಳಬಹುದು. ಉದಾಹರಣೆಗೆ ಯಾರಾದರೂ ಒಬ್ಬನನ್ನು, ನೀವು ಆತನ ಬಗ್ಗೆ ಸ್ಪಷ್ಟವಾಗಿ ಅರಿತು ಕೊಳ್ಳದಿದ್ದರೆ, ಆತನನ್ನು ಕೆಟ್ಟವ ಅಥವಾ ಒಳ್ಳೆಯವ ಎಂದು ಹೇಗೆ ನಿಮಗೆ ಇನ್ನೊಬ್ಬರು ತಿಳಿಸುವರೋ, ಅದೇ ರೀತಿ ನೀವು ನಂಬುವಿರಿ ಅಥವಾ ಇನ್ನೊಂದು ಶಬ್ಧವನ್ನು ಉಪಯೋಗಿಸುವುದಾದರೆ ಸಂಶಯಿಸುವಿರಿ. ಆಗ ನೀವು ಅತ್ಯಂತ ದೊಡ್ಡ ಅಪರಾಧವನ್ನು ಎಸಗುವ ಸಾಧ್ಯತೆಯು ಹೆಚ್ಚಾಗುವುದು. ಈ ರೀತಿಯ ನಂಬುವಿಕೆಯು ಅಥವಾ ಸಂಶಯಿಸುವಿಕೆಯು ಸಮಾಜಕ್ಕೆ ಅನಿವಾರ್ಯವೆಂದು ಹೇಳುವುದಾದರೆ, ಆಶ್ಚರ್ಯವಾಗುವುದು. ಆದುದರಿಂದ ಸಮಾಜದಲ್ಲಿ ಜೀವಿಸಲು ನಂಬಿಕೆ ಅಥವಾ ಸಂಶಯವಲ್ಲ, ಬದಲು ಸತ್ಯದ ಅರಿವು ಮುಖ್ಯವೆಂದು ತಿಳಿದುಕೊಳ್ಳಬಹುದು.

ಸಮಾಜದಲ್ಲಿ, ಪೊಲೀಸ್ ಠಾಣೆ, ನ್ಯಾಯಾಲಯ, ಎಂದು ಎಲ್ಲೆಡೆಯಲ್ಲೂ “ನಾನು ಹೀಗೆಂದು ನಂಬುತ್ತೇನೆ” ಎಂದರೆ ಯಾರೂ ಕೇಳುವುದಿಲ್ಲ. ಅಲ್ಲೆಲ್ಲಾ ಸತ್ಯವನ್ನು ತೋರುವ ಸಾಕ್ಷ್ಯಾಧಾರಗಳು ಬೇಕಾಗುವುದು. ಇನ್ನು, ಮನೆಯಲ್ಲಾದರೂ ಸಮಾಜದಲ್ಲಾದರೂ ಯಾರೂ ನಂಬಿ ಜೀವಿಸುವುದಿಲ್ಲ. ನಂಬಿಕೆ ಎಂದರೆ ತರ್ಕವಿಲ್ಲದೆ ಒಪ್ಪಿಕೊಳ್ಳುವುದಾಗಿದೆ. ಎಲ್ಲರೂ ಕೋಪ, ಅಸೂಯೆ, ಮತ್ತು ಜಗಳ ಆಡುವಾಗ, ಆ ತಮ್ಮ ತಮ್ಮ ಪರವಾಗಿ ಮಾಡುವ ತರ್ಕಕ್ಕೆ ಲೆಕ್ಕವೇ ಇಲ್ಲ ಎಂಬುವುದನ್ನು ಇಲ್ಲಿ ನೆನೆಯಬೇಕು!! ಇಲ್ಲೆಲ್ಲಾ ನಂಬಿಕೆ ಎಲ್ಲಿದೆ ಎಂದು ತಿಳಿಯುವುದಿಲ್ಲ. ಇನ್ನು, ಎಲ್ಲರಿಗೂ ‘ಬೇಕಾಗಿರುವುದು’ ಸತ್ಯಸಂಧತೆ ಎಂಬುವುದು ಸತ್ಯ. ಅದು ಸಮಾಜದಲ್ಲಿ, ತಾನು ಇತರರಿಗೆ ತೋರದಿದ್ದರೂ, ಇತರರು ತನ್ನನ್ನು ವಂಚಿಸದೆ ಸತ್ಯಸಂಧತೆಯನ್ನು ತೋರಬೇಕೆಂದು ಬಯಸುವುದು ಇದೆ!! ಒಬ್ಬ ಕಳ್ಳನು ಕೂಡಾ ಇನ್ನೊಬ್ಬ ಕಳ್ಳನು ಆತನನ್ನು ವಂಚಿಸದೆ ಸತ್ಯಸಂಧತೆಯನ್ನು ತೋರಬೇಕೆಂದು ಬಯಸುವನು!!! ಆದರೆ ನಂಬಿಕೆಯಿಂದ ಮನೆ, ಸಮಾಜ ಶಾಂತಿಯನ್ನು ಪಡೆಯುವುದು ಎಂಬುವುದು ಅರ್ಥಹೀನವಾಗುವುದು. ಅದರೆ, ಸತ್ಯಸಂಧತೆ ಇದ್ದಲ್ಲಿ ಮಾತ್ರ ಮನೆ, ಸಮಾಜ ಶಾಂತಿಯನ್ನು ಪಡೆಯುವುದು ಎಂಬ ಸತ್ಯವನ್ನು ಜನರು ಮರೆತಿದ್ದಾರೆ.

ಇದರೊಂದಿಗೆ, ಆತ್ಮೀಯ ಪ್ರೀತಿಯು ಪರಸ್ಪರ ಅರಿತುಕೊಳ್ಳುವಿಕೆಯಿಂದ ಮಾತ್ರ ಹುಟ್ಟಿಕೊಳ್ಳುವುದು, ಹೊರತು ಅದು ನಂಬಿಕೆಯಿಂದ ಎಂದೂ ಹುಟ್ಟಿಕೊಳ್ಳುವುದಿಲ್ಲ ಎಂಬುವುದನ್ನು ಪ್ರತ್ಯೇಕವಾಗಿ ತಿಳಿದುಕೊಳ್ಳಬೇಕು.     

ಸಾಮಾಜಿಕ ಜೀವನದಲ್ಲಿ ಈ ನಂಬಿಕೆ ಎಲ್ಲೂ ಕೆಲಸ ಮಾಡಿಲ್ಲವೇ?

ಉತ್ತರ- ಇಲ್ಲ. ಸಾಮಾಜಿಕ ಜೀವನದಲ್ಲಿ, ಪೊಲೀಸ್ ಅಧಿಕಾರಿಗಳಾಗಲೀ, ನ್ಯಾಯಾಧೀಶರಾಗಲೀ, ಯಾರ ಮಾತನ್ನು ನಂಬಿಕೆಯ ಹಿನ್ನೆಲೆಯಲ್ಲಿ ಸ್ವೀಕರಿಸುವುದಿಲ್ಲ. ಅವರು ತನಿಕೆ ಮತ್ತು ಆಧಾರಗಳ ಹಿನ್ನೆಲೆಯಲ್ಲಿ ಮಾತ್ರ ನಿಗಮನಕ್ಕೆ ಬರುವರು. ಇದು ಸಮಾಜದ ತೊಂಬತ್ತು ಶೇಕಡ ಭಾಗವನ್ನೂ ಹಬ್ಬಿರುವುದು. ಇನ್ನು ಯಾರಿಗೂ ಇದುವರೆಗೂ ತಿಳಿಯದ ಇತರ ಕೆಲವು ವಿಚಾರಗಳ ಕುರಿತು ಹೇಳುವುದಾದರೆ, ಅವುಗಳು ನಂಬಿಕೆಗಳಲ್ಲ, ಅವು ಸಾಧ್ಯತೆಗಳಾಗುವವು. ಆದರೆ ನಂಬಿಕೆಯಿಂದಲೇ ಜಗತ್ತಿನಲ್ಲಿ ಪ್ರೀತಿಯಿಂದಿರಲು ಸಾಧ್ಯವೆಂಬ ವಾದಕ್ಕೆ ಅರ್ಥವೇ ಇಲ್ಲ ಎಂದು ಹೇಳಬಹುದು. ಕಾರಣ, ಪ್ರೀತಿಯ ಮೂಲ ತ್ಯಾಗ ಭಾವನೆಯಾಗುವುದು. ಅದು ನಂಬಿಕೆಯಲ್ಲ. ಕೆಳಮಟ್ಟದ ಸ್ವಾರ್ಥ ಪ್ರೀತಿಯಲ್ಲಾದರೂ ತನಗೆ ಲಾಭ ಇಲ್ಲವಾದಾಗ ಪ್ರೀತಿಯೂ ಕಡಿಮೆಯಾಗುವುದನ್ನು ನಾವು ಕಾಣುತ್ತೇವೆ. ಅದೇ ರೀತಿ ತನ್ನ ಅಹಂಕಾರಕ್ಕೆ ದಕ್ಕೆಯಾಗುವಾಗಲೂ ಪ್ರೀತಿ ಹೊರಟು ಹೋಗಿ ದ್ವೇಷವು ಉಂಟಾಗುವುದನ್ನು ನಾವು ಕಾಣುತ್ತೇವೆ. ಇಲ್ಲೆಲ್ಲಾ ಪ್ರೀತಿ ಮತ್ತು ನಂಬಿಕೆಗಳಿಗೆ ತಮ್ಮೊಳಗೆ ಯಾವ ಸಂಬಂಧವೂ ಇಲ್ಲ ಎಂಬುವುದಾಗಿ ಸ್ಪಷ್ಟವಾಗುವುದು. ನಂಬಿಕೆಯಿಂದಾಗಿ ಪ್ರೀತಿ ಹುಟ್ಟಿಕೊಂಡು, ಅದು ಸಮಾಜದಲ್ಲಿ ಎಲ್ಲರನ್ನೂ ಸಂತೋಷದಿಂದಿರುವಂತೆ ಮಾಡುವುದು, ಎಂದು ಹೇಳುವುದು ತಪ್ಪು ಎಂದು ಇದರಿಂದ ಸ್ಪಷ್ಟವಾಗಿ ತಿಳಿದುಬರುವುದು.

ಧಾರ್ಮಿಕ ನಂಬಿಕೆಗಳ ಕುರಿತು ಏನು ಹೇಳಬಹುದು?

ಉತ್ತರ- ಧಾರ್ಮಿಕ ಅಥವಾ ಆಧ್ಯಾತ್ಮಿಕ ಎಂದ ಕೂಡಲೆ ಅಲ್ಲಿ ನಂಬಿಕೆಗೆ ಬೇರೆ ಅರ್ಥ ಬರುವುದಿಲ್ಲ. ಆದರೆ ಅದನ್ನು ಇಲ್ಲಿ ಸ್ವಲ್ಪ ವಿವರಣೆಯ ಮೂಲಕ ಸ್ಪಷ್ಟಪಡಿಸಬೇಕಾಗಿದೆ. ಸತ್ಯ ಗೊತ್ತಿಲ್ಲದಿರುವ ಸ್ಥಿತಿಯಲ್ಲಿ ನಂಬಿಕೆಯು ಹುಟ್ಟಿಕೊಳ್ಳುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಂಬಿಕೆಯು ಸಂಶಯದ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು. ಸತ್ಯ ಸ್ಪಷ್ಟವಾದಾಗ ನಂಬಿಕೆ ಹೊರಟುಹೋಗುವುದು. ಮೊದಲೇ ವಿವರಿಸಿರುವಂತೆ ಸೂರ್ಯನು ತಲೆ ಮೇಲಿರುವಾಗ ‘ನಾನು ಆ ಸೂರ್ಯನನ್ನು ನಂಬುತ್ತೇನೆ’ ಎಂದು ಕಣ್ಣಿದ್ದವರು ಯಾರೂ ಹೇಳುವುದಿಲ್ಲ. ಅದೇ ರೀತಿ ಸತ್ಯ ತಿಳಿದಿರುವಾಗ ಯಾರೂ ನಂಬಿಕೆಯೆಂಬ ಪದವನ್ನೇ ಬಳಸುವುದಿಲ್ಲ. ಹಾಗೆ ನೋಡುವಾಗ ದೇವರನ್ನು ನಂಬುವುದು ಎಂದರೆ ದೇವರ ಇರುವಿಕೆಯನ್ನು, ಅದು ಸತ್ಯ ಎಂದು ಹೇಳಿದಂತೆ ಆಗುವುದಿಲ್ಲ, ಸಂಶಯದಿಂದ ನೋಡಿದಂತಾಗುವುದು. ಇದು ಸರಿಯಾದ ರೀತಿಯೇ? ದೇವರನ್ನು ಜಗತ್ತಿನ ಸರ್ವರೂ ಸತ್ಯ, ಪ್ರೀತಿ, ನೀತಿಯೆಂದು ಅರಿತುಕೊಳ್ಳುವ ರೀತಿಯಲ್ಲವೆ ನಿಜವಾದ ರೀತಿಯಾಗಿರಬೇಕಾಗಿರುವುದು? ಇಷ್ಟರಲ್ಲೇ ನಮಗೆ ಆತ್ಮೀಯ ಪ್ರೀತಿಯ ಆ ಕರುಣಾಮಯ ದೇವರು, ಆ ಸತ್ಯಸಂಧ ಭಕ್ತಿ, ಮತ್ತು ಪವಿತ್ರವಾದ ಆ ಧರ್ಮ, ಇವುಗಳೆಲ್ಲಾ  ಅತ್ಯಂತ ಪರಿಶುದ್ಧ ರೂಪದಲ್ಲಿ ದೊರಕುವುದಿಲ್ಲವೇ? ಇನ್ನು ಆ ದೇವರ ಹೆಸರಲ್ಲಿ ತಮ್ಮೊಳಗೆ ವಿರೋಧಿಸುವ ಆ ಸಾವಿರಾರು  ನಂಬಿಕೆಗಳ ಅಗತ್ಯವಾದರೂ ಏನು? ಇನ್ನು, ನಂಬಿಕೆಗಳು ಇದುವರೆಗೂ ನಮಗೆ ಏನಾದರೂ ಒಳಿತನ್ನುಂಟುಮಾಡಿದೆಯೇ  ಎಂದು ನೋಡಿದಾಗ ಅದರ ಉತ್ತರ ‘ಅದು ಸಮಾಜಕ್ಕೆ ಒಳಿತನ್ನುಂಟುಮಾಡುವಲ್ಲಿ ಏನೂ ಮಾಡಿಲ್ಲ ಆದರೆ ಸಮಾಜವನ್ನು ಒಡೆಯುವಲ್ಲಿ ಮತ್ತು ತಮ್ಮ ತಮ್ಮೊಳಗೆ ಹಿಂಸಿಸುವಲ್ಲಿ ಕೆಲಸ ಮಾಡಿದೆ’ ಎಂದಾಗುವುದು! ಇದು ಎಲ್ಲರಿಗೂ ತಿಳಿದಿರುವ ಸತ್ಯವೂ ಆಗಿರುವುದು. ಶಾಂತಿಗಾಗಿ ಹುಟ್ಟಿಕೊಂಡಿರುವ ಈ ನಂಬಿಕೆಯ ಧರ್ಮ, ಪಂಥಗಳು ಸಾವಿರಾರು ವರುಷಗಳ ಹಿಂದಿನಿಂದಲೇ ಭೀಕರ ಧರ್ಮಾಂಧತೆಯ ಯುದ್ಧ, ಹಿಂಸಾಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವು. ಇತರ ಯುದ್ಧಗಳಿಗಿಂತಲೂ ಭಿನ್ನವಾಗಿ ಈ ನಂಬಿಕೆಯ ಧರ್ಮಾಂಧತೆಯ ಭ್ರಮೆಯು, ಸಣ್ಣ, ಪುಟ್ಟ ಮಕ್ಕಳನ್ನೂ ಬಿಡದೆ, ಹೆಂಗಸರು ವೃದ್ದೆಯರೆಂದೂ ನೋಡದೆ ಎಲ್ಲರನ್ನೂ ಕೊಂದು ಹಾಕಿದವು. ಎಷ್ಟೋ ತಾಯಂದಿರು ಅತ್ಯಾಚಾರಕ್ಕೆ ಬಲಿಯಾಗಿ ಹೋದರು, ಆದರೂ ಕರುಣೆಯ ದೇವರೆಂದು ಹಾಡಿ ಹೊಗಳುವ ಈ ನಂಬಿಕೆಗಳ ಧರ್ಮ, ಪಂಥಗಳನ್ನು ಅನುಸರಿಸುವ ಮನುಷ್ಯ ಜೀವಿಗಳಿಗೆ ಸ್ವಲ್ಪವೂ ಕರುಣೆ ಬರಲಿಲ್ಲ, ಬದಲು ಕ್ರೌರ್ಯದ ಅಟ್ಟಹಾಸ ಮಾಡಿದವು. ಇದೇ ರೀತಿ ಇನ್ನೆಷ್ಟೋ ಧಾರ್ಮಿಕ ನಂಬಿಕೆಗಳು ಸಮಾಜವನ್ನು ನುಚ್ಚುನೂರು ಮಾಡಿವೆ! ಆದರೂ ನಂಬಿಕೆಯ ಸ್ವಾರ್ಥಿ ಜನಗಳು ಇನ್ನೂ, ಏನನ್ನು ಹೇಳುತ್ತಿರುವರು ಎಂದು ಆಲಿಸಿ, ಅವರು ಮತ್ತೂ ಹೇಳುವುದು ಅದನ್ನೇ, ದೇವರು,ಧರ್ಮಗಳು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ, ಮತ್ತು ಆ ನಂಬಿಕೆಗಳಿಂದ ಮಾತ್ರ ದೇವರನ್ನು ಸೇರಲು ಮತ್ತು ಧಾರ್ಮಿಕ ಜೀವನವನ್ನು ನಡೆಸಲು ಸಾಧ್ಯ ಎಂದಾಗಿದೆ!!

ಸತ್ಯ, ಪ್ರೀತಿ ನೀತಿಯೇ ದೇವರು ಮತ್ತು ಧರ್ಮ ಎಂದು ಅರಿತುಕೊಳ್ಳುವ ಆ ವಿಧಾನವನ್ನು ಈ ಜಗತ್ತಿನ ಎಲ್ಲರೂ ಅನುಸರಿಸುತ್ತಾ ಬಂದಿದ್ದರೆ, ಎಂದೋ ಈ ಭೂಮಿ ಶಾಂತಿಯ ಸಾಗರದಲ್ಲಿ ತೇಲಾಡುತ್ತಿತ್ತು. ಆ ಜಾತೀ ಶೋಷಣೆ, ಧರ್ಮಾಂಧರ ರಕ್ತಪಾತಗಳು ಉಂಟಾಗುತ್ತಿರಲಿಲ್ಲ. ದೇವರನ್ನು ಮತ್ತು ಧರ್ಮವನ್ನು ಅರಿತುಕೊಳ್ಳುವ ರೀತಿಯಲ್ಲೇ ಮುಂದುವರಿಯುತ್ತಾ ಬಂದಿದ್ದಲ್ಲಿ, ಈ ಜಗತ್ತಿನಲ್ಲಿ, ‘ಶಾಂತಿಸ್ಥಾಪನೆ’ ಎಂಬ ಧರ್ಮಗಳ ಆ ಮುಖ್ಯ ಉದ್ದೇಶವನ್ನು ಎಂದೋ ಅವುಗಳಿಗೆ ನಿರ್ವಹಿಸಿ ಆಗುತ್ತಿತ್ತು!

ಕೆಲವು ಜನರು ಭಾರತದಲ್ಲಿ ನಂಬಿಕೆ ರೀತಿಯೇ ಇಲ್ಲ, ಬರೇ ಸತ್ಯದ ಅನ್ವೇಷಣೆಯ ರೀತಿ ಎನ್ನುವರು ಇದು ಸರಿಯೇ?

ಉತ್ತರ- ನಾವು ಈ ಭಾರತದಲ್ಲಿ ಪುರಾಣಗಳು ಮತ್ತು ಅವುಗಳ ದೇವರುಗಳ ನಂಬಿಕೆ, ಆಚಾರಗಳನ್ನೇ ನೋಡುತ್ತಿರುವುದು! ದರ್ಶನಗಳು ಮತ್ತು ಉಪನಿಶತ್ತುಗಳು ಕೆಲವು ಮಠ, ಆಶ್ರಮಗಳಲ್ಲಿ ಮಾತ್ರ ಕಾಣಲು ಸಾಧ್ಯ. ತೊಂಬತೈದು ಶೇಖಡ ಜನರೂ ದೇವರು, ನಂಬಿಕೆ, ಆಚಾರಗಳಲ್ಲಿ ತೊಡಗಿರುವುದನ್ನು ನಾವು ನಿತ್ಯವೂ ಕಾಣುತ್ತೇವೆ. ನಿಜವಾಗಿಯೂ ಭಾರತ ಸಂಸ್ಕೃತಿಯು ಪೌರಾಣಿಕ ನಂಬಿಕೆ, ಆಚಾರಗಳ ನಂಬಿಕೆ, ಆಧ್ಯಾತ್ಮಿಕ ನಂಬಿಕೆ, ಮತ್ತು ಸಾಮಾಜಿಕ ನಂಬಿಕೆ ಎಂದು ಹಲವು ಕ್ಷೇತ್ರಗಳಲ್ಲಿ ಕಾಣಸಿಗುವವು. ನೀವು ‘ಭಾರತದಲ್ಲಿ ನಂಬಿಕೆಯ ರೀತಿ ಇಲ್ಲ’ ಎಂದು ನಂಬಿದರೆ, ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.  

ಧರ್ಮಗಳಲ್ಲಿ ಪ್ರಶ್ನೆಗಳನ್ನು ಹಾಕಿ ಸಿಕ್ಕಿದ ವಿಚಾರಗಳೂ ನಂಬಿಕೆಗಳಾಗುವವೇ?

ಉತ್ತರ- ಪ್ರಶ್ನೆಗಳನ್ನು ಎರಡು ರೀತಿಯಲ್ಲಿ ಕೇಳುವರು ಅವುಗಳಲ್ಲಿ ಒಂದು ಪುರಾಣ ಕಥೆಯೊಳಗಿನ ಪ್ರಶ್ನೆಗಳು. ಯಾವುದೇ ಪುರಾಣ ಕಥೆಯೊಳಗೆ ಏನಿದ್ದರೂ ಅವು ಜನರಿಗೆ ನಂಬಿಕೆಯ ರೂಪದಲ್ಲೇ ಸಿಗುವವು. ಅದರೊಳಗೆ ಒಂದು ಮೂಲ ವಸ್ತುವನ್ನು ಕಂಡುಹಿಡಿದುದನ್ನು ತರ್ಕ ಬದ್ಧವಾಗಿ ವಿವರಿಸಿದರೂ ಆ ವಿಚಾರವು ಮಾತ್ರ ವಿಜ್ಞಾನವಾಗಬಹುದು ಹೊರತು ಆ ಪುರಾಣ ಕಥೆಯ ದೇವರು ಅಥವಾ ದೇವರುಗಳು ಮತ್ತು ಆ ದೇವರ ಹಿನ್ನೆಲೆಯ ನಂಬಿಕೆ, ಆಚಾರಗಳು ಹಾಗೇ ಇರುವವು!! ಇನ್ನು, ದರ್ಶನಗಳ ರೀತಿಯಲ್ಲಿ ಈ ಜಗತ್ತಲ್ಲಿ ಹಲವು ಕಡೆಗಳಲ್ಲಿ ವಿಚಾರಗಳನ್ನು ಪ್ರಶ್ನೆ-ಉತ್ತರಗಳ ರೀತಿಯಲ್ಲಿ ಮಂಡಿಸುವುದನ್ನು ನಮಗೆ ಕಾಣಬಹುದು. ಆದರೆ ಅದೇ ಸಮಯದಲ್ಲಿ ತಮ್ಮೊಳಗೆ ಅವು ಸರಿಯಲ್ಲ ಎಂಬ ಆ “ಖಂಡನೆಗಳು” ಅಲ್ಲಿ ಇರುವಾಗ, ಅಲ್ಲಿ ವಿಜ್ಞಾನದ ರೀತಿಯ ಆ ಸರ್ವಸಮ್ಮತ ಸತ್ಯವು ಇನ್ನೂ ಸಿಗಲಿಲ್ಲ ಎಂದು ಸ್ಪಷ್ಟವಾಗುವುದು. ಇದರ ಫಲವಾಗಿಯೇ ಎಲ್ಲಾ  ದರ್ಶನ ಮತಗಳು, ಪುರಾಣ ನಂಬಿಕೆಗಳಂತೆ, ತಾವೇ ಸರಿ ಎಂದು ವಾದದಲ್ಲಿ ಜಯಗಳಿಸಿ ಜಗತ್ತನ್ನೇ ಹಬ್ಬುವ ಆಸೆಯನ್ನು  ಇಟ್ಟು ವಾದ ಪ್ರತಿವಾದದಲ್ಲಿ ಇಷ್ಟೆಲ್ಲಾ ವರುಷಗಳನ್ನು ವ್ಯಯಮಾಡಿರುವುದು, ಮತ್ತು ಇಂದಿಗೂ ಆ ಪ್ರಶ್ನೆ-ಉತ್ತರಗಳ ಆ ವಾದಗಳಲ್ಲಿನ ಪ್ರಶ್ನೆಗಳು ಇತ್ಯರ್ಥವಾಗಲ್ಪಡಲಿಲ್ಲ!!!! ಇನ್ನು, ಕೆಲವು ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನು ಕೊಡುವ ಶಾಸ್ತ್ರಗಳು, ಅವುಗಳು ಹಲವು ವಿಧಗಳಲ್ಲಿ ಈ ಜಗತ್ತಲ್ಲಿ ಎಲ್ಲಾ ಕಡೆಗಳಲ್ಲೂ ಇವೆ. ಇವನ್ನು ಮಾತ್ರ ಪ್ರತ್ಯೇಕವಾಗಿ ನಂಬಿಕೆಗಳಲ್ಲ ಬದಲು ಶಾಸ್ತ್ರಗಳು ಎಂದು ಹೇಳಬಹುದು ಅಷ್ಟೆ. ಆದರೆ, ಧರ್ಮ, ಪಂಥಗಳಲ್ಲಿ ನಂಬಿಕೆಗಳೇ ಇಲ್ಲ ಎಂದು ಇವುಗಳ ಹಿನ್ನೆಲೆಯಲ್ಲಿ ಹೇಳುವುದು ಸತ್ಯವಾಗುವುದಿಲ್ಲ. 

ಅನ್ಯಗ್ರಹ ಜೀವಿಗಳು ಮತ್ತು ಆ ಪ್ರಾಚೀನ ವಾಮಾಚಾರಕ್ಕೆ ಏನಾದರೂ ಸಂಬಂಧವಿದೆಯೇ?

ಉತ್ತರ- ಒಂದೇ ಒಂದು ಸಾಧ್ಯತೆಯು ಅನ್ಯಗ್ರಹ ಜೀವಿಗಳ ನಿಯಂತ್ರಣವಾಗಿದೆ!! ಇಲ್ಲಿ, ನಾವು ಆ ನಿಯಂತ್ರಣದ ಸಾಧ್ಯತೆಗಳನ್ನು ಮಾತ್ರ ನೋಡೋಣ. ಅವುಗಳಿಗೆ ಸಂಬಂಧಿಸಿರುವ ಕೆಲವು ವೈಜ್ಞಾನಿಕ ಅಂಶಗಳನ್ನು ಈ ಕೆಳಗೆ ತಿಳಿಸುವೆನು.

1. ವಿಜ್ಞಾನವು ಅನ್ಯಗ್ರಹಗಳಲ್ಲಿ ವೈಜ್ಞಾನಿಕವಾಗಿ ಬಹಳವಾಗಿ ಬೆಳೆದಿರುವ ಮೂರನೇ ವಿಧದ ಸಂಸ್ಕೃತಿಯ ಜೀವಿಗಳ ಸಾಧ್ಯತೆಯ ಬಗ್ಗೆ ಹೇಳುವುದು. ಈ ಮೂರನೇ ವಿಧದ ಸಂಸೃತಿಯನ್ನು ತಲುಪಿದ ಈ ಪ್ರಪಂಚದ ಜೀವಿಗಳಿಗೆ, ಮಾನವನ ಮನೋ ಶಕ್ತಿಯನ್ನು, ನಾವು ಈ ಭೂಮಿಯಲ್ಲಿ ಆಹಾರ, ಉಪಯೋಗ ವಸ್ತು, ಇಂಧನ, ಇತ್ಯಾದಿಗಳನ್ನು ಉಪಯೋಗಿಸುವಂತೆ ಆ ರೂಪಗಳಲ್ಲಿ ಉಪಯೋಗಿಸುವ ಶಕ್ತಿ ಇರಬಹುದೆಂಬುವುದು ನಮಗೆ ಸಂಶಯಿಸಬಹುದಾಗಿದೆ.

2. ಇದಕ್ಕೆ ಸರಿಯಾಗಿ ಈ ಭೂಮಿಯಲ್ಲಿ ಮನುಷ್ಯ, ಪ್ರಾಣಿಗಳ ಮನಸ್ಸು ಅವುಗಳಿಗೆ ಬೇಕಾದಷ್ಟು ಲಭ್ಯವೂ ಹೌದು.  

3. ಇನ್ನು, ಸಂಶಯಿಸಲು ಇರುವ ಅಂಶವೆಂದರೆ ಈ ಪ್ರಾಚೀನ ವಾಮಾಚಾರದ ಶಾಂತವಲ್ಲದ ಶಕ್ತಿಯುತವಾದ ಭಾವಯುಕ್ತ ಮನೋಶಕ್ತಿಯ ಶೇಖರಿಸುವಿಕೆಯಾಗಿದೆ. ಅವುಗಳ ನಿರಂತರ ಕ್ರೌರ್ಯ ಮತ್ತು ಅನೈತಿಕ, ವಿಕೃತ, ಕಾಮ ಭಾವನೆಗಳ ಶೇಖರಿಸುವಿಕೆಯು ನಮ್ಮನ್ನು ಅದು ಅನ್ಯಗ್ರಹ ಜೀವಿಗಳಿಗಾಗಿ ತಯಾರು ಮಾಡುತ್ತಿರಬಹುದೇ ಎಂಬ ಸಂಶಯದ ಕಡೆಗೆ ಕೊಂಡುಹೋಗುವುದು. ಮನಸ್ಸು ತೀವ್ರ ಚಾಲಕ ಶಕ್ತಿಯನ್ನು ಈ ಸ್ಥಿತಿಯಲ್ಲಿ ಪಡೆದಿರುವುದು ಎಂಬುವುದೇ ಅವುಗಳ ಮೇಲಿನ ಸಂಶಯವು ತೀವ್ರಗೊಳ್ಳಲು ಕಾರಣವಾಗಿರುವುದು.

4. ಇನ್ನು, ಈ ಭೂಮಿಯಲ್ಲಿ ಶೇಖರಿಸಲ್ಪಟ್ಟ ಮನೋಶಕ್ತಿಯನ್ನು ಇನ್ನೊಂದು ನಕ್ಷತ್ರದ ಭೂಮಿಗೆ ಕೊಂಡುಹೋಗಲು ಸಾಧ್ಯವಾಗುವ ಸಾರಿಗೆ ವ್ಯವಸ್ಥೆಯನ್ನು ನೋಡುವುದಾದರೆ, ವಿಜ್ಞಾನವು ಅದು “ಟೆಲಿಪೋರ್ಟೇಷನ್” ಎಂಬ ವ್ಯವಸ್ಥೆ ಮಾಡಿದಲ್ಲಿ ಸಾಧ್ಯ ಎಂದೂ ಹೇಳುವುದು!!

5. ಈ ಟೆಲಿಪೋರ್ಟೇಶನ್ ಗೆ ಕೊಂಡುಹೋಗುವ ಸ್ಥಳದಲ್ಲಿ ಹಾಗೂ ಅದನ್ನು ಪಡೆಯುವ ಆ ಎರಡು ಸ್ಥಳಗಳಲ್ಲೂ ಅದಕ್ಕೆ ಸಂಬಂಧಪಟ್ಟ ಉಪಕರಣಗಳನ್ನು ಸ್ಥಾಪಿಸಲೇಬೇಕಾಗುವುದು. ಇದಕ್ಕೆ ಸರಿ ಎಂಬಂತೆ ಈ ಭೂಮಿಗೆ ಅನ್ಯಗ್ರಹ ಜೀವಿಗಳು ಬಂದು ಹೋಗಿರುವ ಹಲವು ಘಟನೆಗಳು ನಡೆದಿರುವುದಾಗಿ ಜಗತ್ತು ಅಲ್ಲಲ್ಲಿ ಹೇಳುತ್ತಾ ಬಂದಿರುವುದು. ಮಾತ್ರವಲ್ಲ ಕೆಲವು ಭೂಮಿಯಲ್ಲಿ ಕಂಡ ವಸ್ತುಗಳು ವೈಜ್ಞಾನಿಕ ವಸ್ತುವಿನಂತೆ ಇದ್ದರೂ ಅವುಗಳ ಕಾಲವು ಅತ್ಯಂತ ಪ್ರಾಚೀನವಾಗಿರುವುದು ವಿಜ್ಞಾನಿಗಳ ತಲೆ ಕೆಡಿಸಿರುವುದನ್ನೂ ನಾವು ಕೇಳಿದ್ದೇವೆ. ಈ ವೈಜ್ಞಾನಿಕ ವಸ್ತುಗಳು ಟೆಲಿಫೋರ್ಟೇಶನ್ ಗಾಗಿ ಅನ್ಯಗ್ರಹ  ಜೀವಿಗಳು ಉಪಯೋಗಿಸುತ್ತಿರಲು ಸಾಧ್ಯತೆ ಇದೆ ಎಂಬ ಸಂಶಯವು ಇನ್ನೊಂದಾಗಿದೆ.

6. ಇನ್ನು, ಟೆಲಿಪೋರ್ಟೇಶನ್ ಮೂಲಕ ಅತ್ಯಂತ ಸೂಕ್ಷ್ಮ ಕಣವನ್ನು ಮಾತ್ರ ಕೊಂಡು ಹೋಗಬಹುದೆಂದೂ ವಿಜ್ಞಾನ ಹೇಳುವುದು.  ಆ ರೀತಿಯಲ್ಲಿ ನೋಡುವಾಗಲೂ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುವ ಕಾರಣ ಅದನ್ನು ಖಂಡಿತವಾಗಿಯೂ ಟೆಲಿಪೋರ್ಟೇಶನ್ ಮಾಡಬಹುದೆಂದು ವೈಜ್ಞಾನಿಕವಾಗಿಯೂ ಸಾಧ್ಯತೆಯು ಸ್ಪಷ್ಟವಾಗುವುದು.

ಈ ಎಲ್ಲಾ ಅಂಶಗಳ ಆಧಾರದಲ್ಲಿ ಈ ಪ್ರಾಚೀನ ವಾಮಾಚಾರದ ಹಿಂದೆ ಅನ್ಯಗ್ರಹ ಜೀವಿಗಳ ನಿಯಂತ್ರಣವನ್ನು ನಮಗೆ ಸಂಶಯಿಸಲು ಸಾಧ್ಯವಾಗುವುದು. 

ಯೋಗ, ಮತ್ತು ಮಹಾತ್ಮರ ಜೀವನದಲ್ಲಿ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಸಬಹುದೇ?

ಉತ್ತರ- ಯೋಗ ಎಂದು ಹೇಳುವಾಗ ಮೊದಲು ಅವಲ್ಲಿ ಎರಡು ದೊಡ್ಡ ವಿಭಾಗವಿದೆ. ಒಂದು ವ್ಯಾಯಾಮ[ಹಠ] ಯೋಗ, ಈ ಯೋಗವೇ ಇಂದು ಜಗತ್ಪ್ರಸಿದ್ಧವಾಗಿರುವುದು. ಇನ್ನೊಂದು ಆಧ್ಯಾತ್ಮ ಯೋಗ, ಇದು ಮೋಕ್ಷಾರ್ಥಿಗಳಿಗಾಗಿ ಇರುವುದು.  ಅದನ್ನು ಕನಿಷ್ಠ ಪ್ರಮಾಣದಲ್ಲಿ ಉಪಯೋಗಿಸುವಾಗ ಅದು ಮನಶ್ಯಾಂತಿಯನ್ನು ಬಯಸುವವರಿಗೆ ಮಾತ್ರ ಸೀಮಿತ ಆಗುವುದು.   

ಮೇಲಿನ ಎರಡರಲ್ಲಿ, ನಾವು ಇಲ್ಲಿ ಮಾತನಾಡುವ ವಿಷಯವು ಆಧ್ಯಾತ್ಮಿಕ ಯೋಗದ ಬಗ್ಗೆ ಆಗಿರುವುದೆಂದು ತಿಳಿಯಬೇಕು. ಈ ಯೋಗದಲ್ಲಿ ಸಾಧಕರು ಮನಸ್ಸಿನ ಆಳಕ್ಕೆ ತೆರಳಿ, ಮನಸ್ಸೇ ಇಲ್ಲದ ಸ್ಥಿತಿಯನ್ನು ಕಂಡು, ತನ್ನ ಅಸ್ತಿತ್ವವು ವಿಶಾಲವಾಗಿದೆ ಎಂದು ಆ ಅನುಭವದ ಮೂಲಕ ತಿಳಿಯುವರು. ಮಹಾತ್ಮರ ಜೀವನದ ಸಾಧನೆಯೂ ತನ್ನ ವ್ಯಕ್ತಿತ್ವದ ವೈಶಾಲ್ಯತೆಯನ್ನೇ ಹೇಳುವುದು. ಆದರೆ, ಮಹಾತ್ಮರು “ಮನಸ್ಸು ಇರುವಲ್ಲಿ ಮತ್ತು ಮನಸ್ಸಿನ ಜಾಗ್ರತ ಅವಸ್ಥೆಯಲ್ಲೇ” ಅವನ್ನು ಪಡೆಯುವರು. ಅದಕ್ಕೆ ಇನ್ನೊಂದು ಹೆಸರೇ ವಿಶಾಲ ಮನಸ್ಕತೆಯಾಗಿದೆ. ಇವುಗಳೇ ಈ ಎರಡರ ಸಾಮ್ಯತೆ ಹಾಗೂ ವ್ಯತ್ಯಾಸವಾಗಿದೆ.

ಆಧ್ಯಾತ್ಮ ಯೋಗದ ಆ ಮೇಲಿನ ಗುರಿಯಾದ ಸಮಾಧಿಯನ್ನು ಗಳಿಸಲು ಸಾಧನೆ ಮಾಡುವ ಆ ಸಾಧಕರು ಸಾಮಾನ್ಯವಾಗಿ ಲೌಕಿಕ ಜೀವನವನ್ನು ಬಿಟ್ಟಿರುವುದು ನಮಗೆ ಕಾಣಿಸುವುದು. ಆದರೆ ಮಹಾತ್ಮರು ಗೃಹಸ್ಥಾಶ್ರಮಿಗಳಾಗಿಯೇ ಅವರ ಗುರಿಯನ್ನು ಪಡೆಯುವರು!! ಇನ್ನು, ಮಹಾತ್ಮರು ತಮ್ಮ ಜೀವನದ ಬಹಳ ಸಮಯವನ್ನು, ಯೋಗಿಗಳಂತೆ, ಮನಸ್ಸಿನ ಸಾಗರದ ಆಳಕ್ಕೆ ಮುಳುಗುವುದಕ್ಕೆ ವ್ಯಯ ಮಾಡದೆ, ಮತ್ತು ಅಲ್ಲಿ ಉಸಿರುಗಟ್ಟದೆ, ನೀರಿನ ಮೇಲಿಂದ ಸುಲಭದಲ್ಲಿ ಈಜಿಕೊಂಡೇ ಆ ವಿಶಾಲ ಮನಸ್ಕತೆಯನ್ನು ಪಡೆಯುತ್ತಾರೆ!! ಆ ಮನೋ ಸಾಗರದ ಆಳಕ್ಕೆ ಉಸಿರುಗಟ್ಟಿ ಇಳಿಯುವುದು ಕೋಟಿಗೆ ಒಬ್ಬನಿಗೆ ಮಾತ್ರ ಸಾಧ್ಯ ಎಂದು ಅದೇ ಸಮಾಧಿ ಶಾಸ್ತ್ರಗಳು  ಹೇಳುತ್ತಿರುವಾಗ, ಇತ್ತ ಮಹಾತ್ಮನಾಗಲು  ಸತ್ಯಸಂಧತೆಯಿಂದ ಕೂಡಿದ ದೃಢ ಮನಸ್ಸೊಂದು ಇದ್ದರೆ, ಕೋಟಿ ಜನರಿಗೂ ವಿಶಾಲ ಮನಸ್ಕತೆಯನ್ನು ಪಡೆಯಲು ಸಾಧ್ಯ ಎಂಬ ಆ ದೊಡ್ಡ ವ್ಯತ್ಯಾಸವನ್ನು ನಮಗೆ ಕಾಣಬಹುದಾಗಿದೆ!! ಈ ಸಾಧ್ಯತೆಯ ಕಾರಣದಿಂದಾಗಿ ಮಾತ್ರ ಈ ಜಗತ್ತಿಗೆ ಸತ್ಯಯುಗವನ್ನು ತರುವಲ್ಲಿ ಎಲ್ಲಕ್ಕಿಂತಲೂ ಈ ಮಹಾತ್ಮರ ರೀತಿಯೇ ಅನಿವಾರ್ಯವಾಗಿರುವುದು ಎಂದು ಹೇಳಿರುವುದು.  

ತಂತ್ರ ಶಾಸ್ತ್ರ ಯೋಗ ಮತ್ತು ಪತಂಜಲಿ ಯೋಗವನ್ನು ಜೊತೆಗೊಳಿಸಿ ವಿವರಿಸಬಹುದೇ?

ಉತ್ತರ- ತಂತ್ರಶಾಸ್ತ್ರ-ಯೋಗ ಮತ್ತು ಪತಂಜಲಿ-ಯೋಗವನ್ನು ಜೊತೆಗೊಳಿಸುವುದು ಅಪಾಯಕಾರಿಯಾಗುವುದು. ಪತಂಜಲಿ ಯೋಗವು ಯಮ, ನಿಯಮ, ಎಂದು ನೈತಿಕತೆ ಮತ್ತು ಪವಿತ್ರತೆಯನ್ನು ಪ್ರತಿಪಾದಿಸುವಾಗ, ಈ ತಂತ್ರಶಾಸ್ತ್ರ-ಯೋಗವು ಅವನ್ನು ಪ್ರತಿಪಾದಿಸುವುದಿಲ್ಲ. ಆಗ, ಅಲ್ಲಿ ದೊಡ್ಡ ತಪ್ಪು ಸೃಷ್ಟಿಯಾಗುವುದು. ಹಾಗೆ ಮಿಶ್ರಗೊಳಿಸಿದ ಯಾರೇ ಮಹಾತ್ಮನಾಗಲು ಸಾಧ್ಯವಾಗಲಾರದು. ಮಾತ್ರವಲ್ಲ, ಅವರು ಯೋಗದ ಹೆಸರು ಹೇಳುತ್ತಾ ಈ ‘ತಂತ್ರಶಾಸ್ತ್ರದ ರೀತಿಯ ನೈತಿಕತೆಯನ್ನು ಗೌಣ ಮಾಡುವ ರೀತಿ’ಯಲ್ಲಿ ಮಾತನಾಡವ ಸಾಧ್ಯತೆಯೂ ಇದೆ. ಆಗ “ಈ ರೀತಿಯ ತಾಂತ್ರಿಕ ನಿಯಮಗಳನ್ನು ಸಮಾಜದ ಹತ್ತಿರಕ್ಕೂ ತರಬಾರದು, ಮತ್ತು ಅವುಗಳು ಬರೇ ಸಾಧಕರಲ್ಲಿ ಮಾತ್ರ ಸಮಾಜದಿಂದ ದೂರ ಮತ್ತು ಬಹಳ ಗುಪ್ತವಾಗಿ ಇರಬೇಕು” ಎಂಬ ಹಿಂದಿನ ಯೋಗಿ, ಮಹಾತ್ಮರುಗಳು ಹಾಕಿರುವ ಆ ಕಟ್ಟುಪಾಡನ್ನು ಮೀರಿದಂತಾಗುವುದು. ಹಾಗೆ ಮಿಶ್ರವಾದಾಗ, ಜನಸಾಮಾನ್ಯರಿಗೂ ಅವುಗಳ ಪ್ರಭಾವವು  ಅಲ್ಪ ಪ್ರಮಾಣದಲ್ಲಿಯಾದರೂ ಬಂದು ಸೇರುವವು, ಮತ್ತು ಅದರಿಂದ ಬಹಳ ಜನರು ಅನೈತಿಕತೆಯನ್ನು ದೂರವಿರಿಸುವುದನ್ನು ಕೊನೆಗೊಳಿಸುವಂತಾಗುವುದು. ಇದು ಸಮಾಜದ ಅಧಪತನಕ್ಕೆ ಕಾರಣವಾಗುವುದು. ನೈತಿಕತೆ ಇಲ್ಲದ ಸಮಾಜವು ಅಧಾರ್ಮಿಕ ಸಮಾಜ ಎಂದು ಎಲ್ಲರಿಗೂ ತಿಳಿದಿದೆ, ಮತ್ತು ಈ ಹಿನ್ನೆಲೆಯಲ್ಲಿ ಇವು ಧರ್ಮ ವಿರುದ್ಧವಾಗುವುದು. ಇನ್ನು, ಈ ತರದ ಮಿಶ್ರಣ ರೀತಿಯು ಕೆಲವು ಕಡೆ ಯೋಗದ ಹೆಸರಲ್ಲಿ, ಗಂಡು, ಹೆಣ್ಣುಗಳ ಕುಣಿತ, ಮತ್ತು ಸೇರುವಿಕೆಯೂ ಒಳಗೊಂಡಂತೆ ಹಲವು ಭಯಾನಕ ಹೊಸ ಆಚಾರಗಳ ಪಂಥಗಳ ಸೃಷ್ಟಿಗೂ ಕಾರಣವಾಗಿರುವುದು. ಸಾಮಾನ್ಯ ಜನರಲ್ಲಿ ಹೆಚ್ಚಿನ ಜನರಿಗೂ ಇದು ಸುಲಭದ ಮನರಂಜನೆಯಾಗುವುದರಿಂದ ಅವರು ಅದನ್ನು ತುಂಬಾ ಪ್ರೋತ್ಸಾಹಿಸುವರು!     

ಯೋಗದ ಸಾಮಾಜಿಕ ಮುಖ ಅಥವಾ ಸಾಮಾಜಿಕ ಪಾತ್ರ ಎಂದರೆ ಏನು? 

ಉತ್ತರ- ಯೋಗವನ್ನು ಎರಡಾಗಿ ವಿಭಾಗಿಸಿದ್ದಾರೆ. ಅವುಗಳಲ್ಲಿ ಒಂದು ಹಠ ಯೋಗ ಅಥವಾ ವ್ಯಾಯಾಮ ಯೋಗ, ಇನ್ನೊಂದು ಆಧ್ಯಾತ್ಮ ಯೋಗವಾಗಿದೆ. ಈ ಆಧ್ಯಾತ್ಮ ಯೋಗವನ್ನು ಹೇಳುವಾಗ ಅದರ ಪಾತ್ರವನ್ನು ಸಾಮಾನ್ಯವಾಗಿ ಎರಡು ಕಡೆ ವಿವರಿಸುವರು. ಒಂದು “ಯೋಗವು ಆತ್ಮ, ಮೋಕ್ಷ, ಇತ್ಯಾದಿ ಕಡೆಯಲ್ಲಿ” ಎಂದು, ಇನ್ನೊಂದು “ಯೋಗವು ಸಾಮಾಜಿಕ ಜೀವನದಲ್ಲಿ” ಎಂದಾಗಿದೆ.  

ಯೋಗವು ವ್ಯಾಯಾಮಕ್ಕಾಗಿ ಮತ್ತು ಮೋಕ್ಷಕ್ಕಾಗಿ ಆದಲ್ಲಿ ಅವು ಬರೇ ವ್ಯಕ್ತಿಗೆ ಸಂಬಂಧಿಸಿದುದಾಗುವುದು. ಆದರೆ ಸಾಮಾಜಿಕ ನಿಟ್ಟಿನ ಆ ಯೋಗ ವಿವರಣೆಗಳು ಮಾತ್ರವೇ ಧಾರ್ಮಿಕ ಮುಖವನ್ನು ಪಡೆಯುವುದು ಎಂಬುವುದನ್ನು ಮರೆಯಬಾರದು. ಇನ್ನು, “ಏಕತೆ”ಯೇ ಆಧ್ಯಾತ್ಮ ಯೋಗದ ಅಡಿಪಾಯವಾಗಿದೆ. ಅದು ಅಧ್ಯಾತ್ಮ ಯೋಗದ “ಆತ್ಮ, ಪರಮಾತ್ಮನ ಒಂದಾಗುವಿಕೆ” ಎಂದು ಹೇಳುವಲ್ಲಿ ಅಥವಾ ಬರೇ “ಭೋಧ ವಿಕಾಸದ” ಬಗ್ಗೆ ಹೇಳುವಲ್ಲಿ ಅದು ಯೋಗದ ಬರೇ ಆಧ್ಯಾತ್ಮದ ಪಾತ್ರವನ್ನು ಮಾತ್ರ ವಹಿಸುವುದು. ಅದನ್ನು ಸಾಮಾಜಿಕವಾಗಿ ಪರಿವರ್ತಿಸಲು ಬಹಳ ಕಷ್ಟವಿದೆ.

ಚುಟುಕಾಗಿ ಹೇಳುವುದಾದರೆ, ಆತ್ಮ ಮತ್ತು ವ್ಯಕ್ತಿತ್ವವು ಬೇರೆ ಬೇರೆಯಾಗಿದೆ. ಯಾರು ಕೂಡಾ ಆತ್ಮವನ್ನು ಸಾಮಾಜಿಕ ಜೀವನವನ್ನು ನಡೆಸುವಲ್ಲಿ ವ್ಯವಹರಿಸುವ ಆ ವ್ಯಕ್ತಿತ್ವ ಎಂದು ತಿಳಿಯುವುದಿಲ್ಲ, ಬದಲು ಅದು ನಮ್ಮ ವ್ಯವಹಾರವೆಲ್ಲ ನಿಂತಲ್ಲಿನ ನಮ್ಮ ಆಂತರ್ಯದ ಅಸ್ತಿತ್ವವೆಂದು ಮಾತ್ರ ಹೇಳುವರು.

ಇದುವರೆಗೂ, “ಆತ್ಮ ಎಲ್ಲರಿಗೂ ಒಂದೇ”, “ದೇವರ ಮಕ್ಕಳು ನಾವೆಲ್ಲ”, ಎಂದೆಲ್ಲಾ ಆ ಆಧ್ಯಾತ್ಮದ ಯೋಗದ ಆ ಆಧ್ಯಾತ್ಮ ಪಾತ್ರ[ಮುಖ]ದಲ್ಲೇ ಬಂದಾಗಿದೆ. ಆದರೆ, ಅದು ಹಿಂದಿನ ಕಾಲದಲ್ಲಿ ವರ್ಣ ಬೇಧವನ್ನು ಹಾಗೂ ಅದರಿಂದ ಆಗಿರುವ ಆ ಭೀಕರ ಮಾನವರ ಶೋಷಣೆಯನ್ನು ಕಡಿಮೆಗೊಳಿಸಿರಲಿಲ್ಲ!!! ಇಂದೂ, ಜಾತೀಯತೆಯು ನಲಿದಾಡುತ್ತಿದೆ! ಕೆಲವು  ದೊಡ್ಡ ಆಚಾರ್ಯಗಳೂ ‘ಆಧ್ಯಾತ್ಮ ಯೋಗ’ ಎಂದು ಹೇಳುತ್ತಾ ಅಸ್ಪೃಶ್ಯತೆಯನ್ನು ತೋರಿಸಿದುದನ್ನು ನಾವೆಲ್ಲಾ ಓದಿ ತಿಳಿದಿರುವ ವಿಚಾರವಾಗಿದೆ. ಅಂದರೆ, ಯೋಗದ ತನ್ನ ಸಾಮಾಜಿಕ ಮುಖ[ಪಾತ್ರ]ದಲ್ಲಿ  ಮಾತ್ರ ಮಾನವನ ಆತ್ಮವಲ್ಲದ ಆ “ವ್ಯಕ್ತಿತ್ವದ ವಿಕಾಸ” ದ ಬಗ್ಗೆ ಹೇಳುವುದು ಎಂದು ತಿಳಿಯಬೇಕು. ಅಂದರೆ, ವ್ಯಯಕ್ತಿಕ ಮೋಕ್ಷ ಅಥವಾ ಬೋಧ ಯೋಗದಲ್ಲಿ ಆತ್ಮ ಅಥವಾ ಬೋಧವನ್ನು ವಿಶಾಲಗೊಳಿಸುವಾಗ, ಅದು ವ್ಯಯಕ್ತಿಕ ಮಾತ್ರವಾಗಿ ಹೋಗಿ, ಸಮಾಜ ಪರಿವರ್ತನೆಗೆ ಕಾರಣವಾಗಿಲ್ಲ ಎಂದು ಅರ್ಥ. ಈ ಮಾತಿನ ಸತ್ಯತೆಯನ್ನು ಈ ವರೆಗಿನ ಹಲವು ಸಹಸ್ರವರುಷಗಳ ಅನುಭವದ ಹಿನ್ನೆಲೆಯ ಆಧಾರದಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.  

ಈಗ, ಈ ಯೋಗದ ‘ಸಾಮಾಜಿಕ ಮುಖ’ದಲ್ಲಿ ಇರುವ ಆ ಏಕೈಕ ಏಕತೆಯ ರೀತಿಯನ್ನು ನೋಡೋಣ. ಯೋಗದ ಈ ಸಾಮಾಜಿಕ ಮುಖವು ವ್ಯಕ್ತಿತ್ವದ ವಿಕಾಸವನ್ನು ಹೇಳುವುದು. ಇಲ್ಲಿ ಹೇಳುವ ಆ ಯೋಗದ ಆಧಾರ ‘ಏಕತೆ’ ಯು ವಿಶಾಲ ಮನಸ್ಕತೆಯಾಗಿದೆ. ಈ ವಿಶಾಲ ಮನಸ್ಕತೆಯು, ಮಾನವೀಯತೆ ಹಾಗೂ ಸಾರ್ವತ್ರಿಕ ಪ್ರೀತಿಯ ಹಿನ್ನೆಲೆಯಲ್ಲಿ, ಮನಸ್ಸನ್ನು ಇಡೀ ಜಗತ್ತಿನಷ್ಟೆ ವಿಕಾಸಗೊಳಿಸುವುದು. ಈ ಏಕತೆಯ ಪ್ರತ್ಯೇಕತೆಯು ಇದು ಮನಶ್ಯಾಂತಿ, ಮನೆ ಶಾಂತಿ, ಹಾಗೂ ಲೋಕ ಶಾಂತಿಯೆಂಬ ಈ ಮೂರನ್ನು ಕೊಡಬಲ್ಲ ಅತ್ಯದ್ಭುತ ಏಕತೆಯ ಯೋಗ ರೀತಿ ಎಂಬುವುದಾಗಿದೆ!! ಮಾತ್ರವಲ್ಲ, ಈ “ವಿಶಾಲ ಮನಸ್ಕತೆಯೇ” ಧರ್ಮದ ತಿರುಳು. ಅತ್ಯಂತ ಉತ್ಕೃಷ್ಠ ಮಾನವ ಲೌಕಿಕ ಜೀವನದ ಆಧಾರ ಸ್ಥಂಭ. ಇದನ್ನು ದೂರಕ್ಕೆ ದೂಡಿದವನಿಗೆ ದೇವರು ಇಲ್ಲ, ಮತ್ತು ಧರ್ಮವೂ ಇಲ್ಲ! ಸ್ವಾರ್ಥವನ್ನು ಬದಿಗಿರಿಸಲು ನಮ್ಮಲ್ಲಿ ಹೇಳುವುದು ಇದೇ ವಿಶಾಲ ಮನಸ್ಕತೆಯಾಗಿದೆ. ಇನ್ನು, “ಕಳ್ಳತನ ಮಾಡಬೇಡ”, “ವಂಚಿಸ ಬೇಡ” ಎಂದೆಲ್ಲಾ ನೈತಿಕತೆರ್ಗಳನ್ನು ಧರ್ಮವು ಈ ಜಗತ್ತಿಗೆ ಕೊಡುವಾಗ, ಅದಕ್ಕೆ ಅದರ ಕಾರಣವನ್ನು ಅದು ಕೊಡುವುದು ಇದೇ ವಿಶಾಲ ಮನಸ್ಕತೆಯನ್ನು ಆಗಿದೆ. ಈ ವಿಶಾಲ ಮನಸ್ಕತೆ ಆ ಕಾರಣವನ್ನು ಹೇಗೆ ಕೊಡುವುದು ಎಂದು ಒಂದು ಚಿಕ್ಕ ಉದಾಹರಣೆಯ ಮೂಲಕ ನೋಡೋಣ. ವಿಶಾಲ ಮನಸ್ಕತೆಯು ಕೇಳುವುದು, “ ’ನಿನ್ನ ಮನೆಯನ್ನು ಇತರರು ಕಳ್ಳತನ ಮಾಡಿದರೆ ನೀನು ಒಪ್ಪುವಿಯಾ?’ ಮತ್ತು ‘ನಿನ್ನನ್ನು ಇತರರು ವಂಚಿಸಿದರೆ ನೀನು ಆ ವಂಚನೆಯನ್ನು ಒಪ್ಪುವಿಯಾ?’” ಎಂದು. ಮತ್ತು ಇದೇ  ಕಾರಣಕ್ಕೆ ಒಬ್ಬಾತನು  ಕಳ್ಳತನ, ವಂಚನೆ, ಇತ್ಯಾದಿಗಳನ್ನು ಇತರರಿಗೂ ಮಾಡಬಾರದು ಎಂದು ಸ್ಪಷ್ಟವಾಗಿ ಅದು ವಿವರಿಸಿಕೊಡುವುದು. ಅಂದರೆ, ಧರ್ಮವು ನೈತಿಕತೆಯನ್ನು ಹೇಳುವಾಗ, ಅದಕ್ಕೆ ಅಡಿಪಾಯವು ಇದೇ “ತನ್ನೊಂದಿಗೆ ಇತರರೂ ಚೆನ್ನಾಗಿ ಜೀವಿಸಬೇಕು” ಎಂಬ ಆ ವಿಶಾಲ ಮನಸ್ಕತೆಯ “ಸಾಮಾಜಿಕ ಯೋಗ” ವಾಗಿದೆ ಎಂದು ಅರ್ಥ.

ಮಹಾತ್ಮರ ರೀತಿಯಾದ ಆ “ಸಾಮಾಜಿಕ ಯೋಗ”ವು  ತನ್ನ ಆ ಸಾಮಾಜಿಕ ಪಾತ್ರದಲ್ಲಿ, ಮುಂದೆ, ಆ ಶಾಂತಿಯ ಮತ್ತು ಸಮಾನತೆಯ ಆ ಅದ್ಭುತ ಸತ್ಯಯುಗವನ್ನು ಈ ಜಗತ್ತಿಗೆ ತರಲಿ ಎಂದು ಆಶಿಸೋಣ. ಮಾತ್ರವಲ್ಲ, ಹಿಂದಿನ ಆ ಮರದಡಿಯ ಯೋಗಿ, ಮಹಾತ್ಮರ ರೀತಿಯಲ್ಲದ, ಹಳ್ಳಿ, ಪೇಟೆ, ನಗರಗಳ ಕೋಟಿಗಟ್ಟಲೆ ಮಹಾತ್ಮರುಗಳನ್ನು ಈ ಸಾಮಾಜಿಕ ಯೋಗ ಸೃಷ್ಟಿಸಿ, ಪಾಪಿಗಳ ತುಳಿತಕ್ಕೆ ಒಳಗಾಗಿ ಬೆನ್ನುಬಾಗಿ ಮುದಿಯಾಗಿಹೋದ ಪಾವನ ಭೂಮಿತಾಯಿಯನ್ನು, ಆ ಶಾಂತಿ, ಆನಂದಗಳ ನಿತ್ಯಯೌವನದ ಮಹಾತಾಯಿಯನ್ನಾಗಿ ಬದಲಾಯಿಸುವಂತಾಗಲಿ ಎಂದು ಬಯಸೋಣ.       

ಇನ್ನೂ ಜಗತ್ತಿಗೆ ತಿಳಿಸದ ಆ ಪ್ರಾಚೀನ ವಾಮಾಚಾರದ ಹಲವು ರಹಸ್ಯಗಳು ತಮ್ಮಲ್ಲೇ ಇವೆ ಎಂದಿದ್ದೀರಿ. ಆದರೆ ಮತಾಂತರದ ವಿರುದ್ಧವಿರುವ ಆ ನಿಮ್ಮ ಸ್ಪಷ್ಟ ನಿಲುವಿಗೆ ಹಿನ್ನೆಲೆಯಾಗಿ ಏನಾದರೂ ಪ್ರತ್ಯೇಕ ರಹಸ್ಯ ಇದೆಯೇ?

ಉತ್ತರ- ನನ್ನ ಸಹೋದರ, ನಿಜವಾಗಿಯೂ ಇನ್ನೂ ಜನತೆಗೆ ತಿಳಿಸದ ಹಲವು ಪ್ರಾಚೀನ ವಾಮಾಚರದ ರಹಸ್ಯ ಸತ್ಯಗಳು ನನ್ನ ಹೃದಯದಲ್ಲೇ ಇವೆ. ಅವುಗಳಲ್ಲಿ ಯಾವುದೊಂದು ಕೂಡಾ ಮಾನವರಿಗೆ ಅಪಾಯವಾಗುವಲ್ಲೇ ಇರುವುದು ಹೊರತು ಲಾಭವನ್ನು ಉಂಟು ಮಾಡುವವು ಇಲ್ಲ. ಆದರೆ, ನೀವು ಈಗ ಕೇಳಿರುವ ಪ್ರಶ್ನೆಯು ಅಷ್ಟೊಂದು ರಹಸ್ಯವಾಗಿ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲದ ಕಾರಣ ಅದನ್ನು ಹೇಳುವೆನು. ನಾನು ಮೊದಲೇ ತಿಳಿಸಿರುವಂತೆ ಈ ಪ್ರಾಚೀನ ವಾಮಾಚಾರ ವ್ಯವಸ್ಥೆಯು ಎರಡು ಮುಖ್ಯ ಆಶಯ ಅಥವಾ ಸಂಕಲ್ಪಗಳ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ. ಅವುಗಳು ದೇವರು ಎಂಬುವುದು ಒಂದು ಸಂಕಲ್ಪ ಅಥವಾ ಆಶಯವಾದರೆ ಸೈತಾನ ಅಥವಾ ಅಸುರ ಎಂಬುವುದು ಇನ್ನೊಂದು ಸಂಕಲ್ಪವಾಗಿದೆ. ಇವುಗಳಲ್ಲಿ ದೇವರು ಸಂಕಲ್ಪವನ್ನು ಅವುಗಳು ಎಲ್ಲಾ ಆದರ್ಶ ಸ್ವಭಾವ ಅಥವಾ ಉತ್ತಮ ಸ್ವಭಾಗಳ ಪ್ರತಿನಿಧಿಯಾಗಿ ಇರಿಸಿಕೊಳ್ಳುವವು, ಮತ್ತು ಸೈತಾನ ಅಥವಾ ಅಸುರ ಸಂಕಲ್ಪವನ್ನು ಅವು ಮಾನವನ ಕೆಟ್ಟ ಸ್ವಭಾವಗಳ ಪ್ರತಿನಿಧಿಯಾಗಿರಿಸಿಕೊಳ್ಳುವವು. ಈಗ ಹೇಳುತ್ತಿರುವುದು ಪುರಾಣ ಕಥೆಗಳ ವಿಚಾರವಲ್ಲ ಎಂದು ಪ್ರತ್ಯೇಕವಾಗಿ ಅರಿತಿರಬೇಕು. ಈ ಪ್ರಾಚೀನ ವಾಮಾಚಾರಕ್ಕೆ ಸೈತಾನನ ಅಥವಾ ಅಸುರ ಸ್ವಭಾವವನ್ನು ಈ ಜಗತ್ತಲ್ಲಿ ಹೆಚ್ಚಾಗಿಸುತ್ತಾ ಬರಬೇಕು ಅಷ್ಟೆ. ಯಾಕೆಂದರೆ ಅವುಗಳಿಗೆ ತಮ್ಮ ವ್ಯವಸ್ಥೆಗೆ ಅನಿವಾರ್ಯವಾದ ಆ ಕ್ರೌರ್ಯ ಮತ್ತು ಅನೈತಿಕ ಕಾಮ ಭಾವನೆಗಳು ಹೀಗೆ ಮಾಡುವುದರಿಂದ “ಮಾತ್ರ” ಲಭಿಸುವುದು. ಧರ್ಮವು ಅವೆರಡನ್ನೂ ಕಡಿಮೆಗೊಳಿಸುವ ಮುಖ್ಯ ಮಾರ್ಗವಾದುದರಿಂದ, ಅವುಗಳಿಗೆ ಧರ್ಮ, ಪಂಥ, ಪರಂಪರೆ, ಆಚಾರಗಳು ತಮ್ಮೊಳಗೆ ಧ್ವೇಷ, ಹಿಂಸೆ, ರಕ್ತಪಾತ ಮಾಡುವುದರಿಂದ, ಇತರ ಕಡೆಗಳಲ್ಲಿನ ಧ್ವೇಷ, ರಕ್ತಪಾತದ ಲಾಭಕ್ಕಿಂತಲೂ ಎರಡುಪಾಲು ಹೆಚ್ಚು ಲಾಭ ದೊರಕುವುದು! ಅವುಗಳಿಗೆ ರಾಜರುಗಳ ಯುದ್ಧದಿಂದ ತುಂಬಾ ಕ್ರೌರ್ಯ ಭಾವನೆಯು ಸಿಕ್ಕಿದೆಯಾದರೂ ಮತ್ತು ಅವುಗಳನ್ನು ಉಪಯೋಗಿಸಿವೆಯಾದರೂ, ಅವುಗಳಿಗೆ ‘ಧಾರ್ಮಿಕ ಹಿನ್ನೆಲೆ ಇಲ್ಲ’ ಎಂಬ ಒಂದು ಕೊರತೆ ಇತ್ತು. ಅಂದರೆ, ಅವುಗಳಿಗೆ “ದೇವರು, ಧರ್ಮ ಸಂಕಲ್ಪಗಳ ನಾಶ” ಮಾಡುವ ಕ್ರೌರ್ಯ ಭಾವನೆಯು ಸಿಕ್ಕಿದ್ದಲ್ಲಿ ದೊಡ್ಡ ಲಾಭವಾಗುವುದು ಎಂದು ಅರ್ಥ. ಈ ಕ್ರೌರ್ಯ ಭಾವನೆಯು ಮಾನವನ ಸ್ವಭಾವವನ್ನು ಸುಲಭದಲ್ಲಿ ಪಾತಾಳಕ್ಕೆ ತಗ್ಗಿಸಿ ಮಾನವರನ್ನು ಅಸುರರನ್ನಾಗಿ ಮಾಡಲು ಅತ್ಯಂತ ಸುಲಭವಾಗುವುದು!! ಇದಕ್ಕಾಗಿ ಅವು ಈ ವಿಭಜಿಸಲ್ಪಟ್ಟ ಧರ್ಮ, ಪಂಥ, ಪರಂಪರೆ, ಜಾತೀ ಆಚಾರ, ಕುಲಾಚಾರ, ಸಂಪ್ರದಾಯ, ಇತ್ಯಾದಿಗಳನ್ನು, ದೇವರ ಮತ್ತು ಧರ್ಮದ ಹಿನ್ನೆಲೆಯಲ್ಲೇ ಮಾಡಿಟ್ಟಿರುವ ಕಾರಣ, ಅವುಗಳನ್ನು ತಮ್ಮೊಳಗೆ ಧ್ವೇಷಿಸುವಂತೆ ಮಾಡುವ ಮತ್ತು ರಕ್ತಪಾತ ಮಾಡಿಸಿ, ದೇವರು ಮತ್ತು ಧರ್ಮದ ನಾಶದ ಕ್ರೌರ್ಯವನ್ನು ಪಡೆದುಕೊಳ್ಳುವುದು!! ಈ ದೇವರನ್ನು ಮತ್ತು ಧರ್ಮವನ್ನು ನಾಶ ಮಾಡುವ ಆ ಅತ್ಯಂತ ಪಾಪ ಕೆಲಸವನ್ನು, ಮಾನವನಿಂದ, ಪ್ರತ್ಯೇಕವಾಗಿ, ಆಸ್ತಿಕರು ಅಥವಾ ಭಕ್ತರಿಂದಲೇ ಹಲವು ರೀತಿಗಳಲ್ಲಿ ಭೀಕರವಾಗಿ ಮಾಡಿಸುತ್ತಾ ಬಂದವು ಎಂಬುವುದೇ ಭಯಾನಕ ಸತ್ಯವಾಗುವುದು!!! ಈ ರೀತಿಯಲ್ಲಿ, ಅವು ಮಾನವರನ್ನು ಇತರ ಧರ್ಮದ ದೇವರ ನೆಪದಲ್ಲಿ “ದೇವರು ಸಂಕಲ್ಪ” ದ ಕೊಲೆಗಾರರನ್ನಾಗಿ ಮಾಡುತ್ತಾ ಬಂದಿರುವವು. ಮಾನವನು ಇದೇನನ್ನೂ ತಿಳಿಯದೆ ದೇವರು ಸಂಕಲ್ಪವನ್ನು ಕೊಲೆ ಮಾಡುತ್ತಾ ಇಷ್ಟು ಸಹಸ್ರ ವರುಷ ತಮ್ಮ ಧರ್ಮಕ್ಕೆ ಜಯವಾಗಿದೆ ಎಂಬ ಆ “ನಂಬಿಕೆ” ಯೊಂದಿಗೆ ಮುಗುಳು ನಗುತ್ತಾ ಬಂದಿರುವನು!!! ಮಾತ್ರವಲ್ಲ, ತಮ್ಮ ಮುಂದಿನ ಜಯದ ಬಗ್ಗೆ, ಕೋಟಿಗಟ್ಟಲೆ ಹಣ ಮತ್ತು ಸಮಯ ಸುರಿದು, ಆ ಆಲೋಚನೆಗಳಲ್ಲೇ ಮಗ್ನನಾಗಿ ಯೋಜನೆಗಳನ್ನು ಹಾಕುತ್ತಿದ್ದಾನೆ!!! ಅಯ್ಯೋ ದೇವರೆ, ದೇವರನ್ನೇ ಕೊಲ್ಲುವುದಕ್ಕೆ ದೇವರದೇ ಧರ್ಮವನ್ನು ಮತ್ತು ಆಸ್ತಿಕರನ್ನೇ ಉಪಯೋಗಿಸುವುದು ಎಂಥ ಶೋಚನೀಯ ಸ್ಥಿತಿ!!! ಈ ರೀತಿ ಮಾನವರಿಂದ ಮಾಡಿಸಿದಲ್ಲಿ ಮಾನವರಲ್ಲಿ ಸ್ವಭಾವ ಅಧಪತನವಾಗಬೇಕು ಎಂಬುವುದು ಆ ಪ್ರಾಚೀನ ವಾಮಾಚಾರದ ಮೊದಲಿಂದಲೇ ಇದ್ದ ಲೆಕ್ಕಾಚಾರವಾಗಿದೆ, ಅದೇ ರೀತಿ, ಈ ಜಗತ್ತಲ್ಲಿ ಕೆಟ್ಟವರ ಸಂಖ್ಯೆ ಹೆಚ್ಚಾಗಿರುವುದನ್ನು ನಾವು ಕಾಣುವೆವು. ಈ ಜಗತ್ತಿನಲ್ಲಿ ಕೆಟ್ಟವರು ಹೆಚ್ಚಾಗಿರುವುದನ್ನೂ ಕೂಡಾ “ದೇವರ ಲೀಲೆ” ಅಥವಾ “ದೇವರ ಇಚ್ಛೆ” ಎಂದು, ಈ ಎಲ್ಲಾ ಧರ್ಮಗಳು, ದೇವರ ಸಂಕಲ್ಪವನ್ನು ನಾಶಮಾಡುವುದರೊಂದಿಗೆ, ದೇವರ ಮೇಲೆಯೇ ಆ ಅಪವಾದವನ್ನೂ ಹೊರಿಸಿಬಿಟ್ಟಿವೆಯಲ್ಲಾ, ಅಯ್ಯೋ ಇದೆಂಥ ಮಹಾ ಪಾಪ!! ಉರಿಯುತ್ತಿರುವ ಬಲ್ಬುಗಳ ಸಂಖ್ಯೆ ಹೆಚ್ಚಾದರೆ, ಒಟ್ಟು ಬೆಳಕು ಹೆಚ್ಚಾಗುವುದು ಎಂದು ನಮಗೆ ಗೊತ್ತಿದೆ. ಆದರೆ, ಈ ಧರ್ಮ, ಪಂಥಗಳು ಹೆಚ್ಚಾದಾಗ “ಉತ್ತಮ ಸ್ವಭಾವ” ಎಂಬ ಆ ಧರ್ಮಗಳು ಸೃಷ್ಟಿಸಬೇಕಾದ ಬೆಳಕುಗಳು ಹೆಚ್ಚಾಗುವ ಬದಲು ಕತ್ತಲೆ ಎಂಬ “ನೀಚ, ಭಯಾನಕ ಸ್ವಭಾವಗಳು” ಹೆಚ್ಚಾಗುತ್ತಾ ಬಂದಿವೆ ಎಂದಾಗ, ಈ ಪ್ರಾಚೀನ ವಾಮಾಚಾರವೇ ಇದಕ್ಕೆ ಕಾರಣ ಎಂಬುವುದನ್ನು ಅರಿಯುವುದು ಸುಲಭವಾಗುವುದು. ಇನ್ನು, ಈ ಎಲ್ಲಾ ಧರ್ಮಗಳಲ್ಲಿ ಸರ್ವವೂ ತಮ್ಮೊಳಗೆ ಒಂದಕ್ಕೊಂದು ವಿರುದ್ದವಾಗಿ ಹೇಳಲ್ಪಟ್ಟಿದ್ದರೂ, ಆ ಕೊನೆಯ ಕಾಲದಲ್ಲಿ ಮಾನವರ ಸ್ವಭಾವವು ಬಹಳ ಕೆಟ್ಟದಾಗುವುದೆಂಬುವುದನ್ನು ಮಾತ್ರ ಎಲ್ಲಾ ಧರ್ಮಗಳಲ್ಲೂ “ಒಂದೇ ರೀತಿಯಲ್ಲಿ” ದೇವರ ಭವಿಷ್ಯವಾಣಿಯೆಂದು ಆದಿಯಲ್ಲಿಯೇ ನುಡಿದಿರುವುದು ಆ ಪ್ರಾಚೀನ ವಾಮಾಚಾರದ ಕೊನೆಯ ಗುರಿಯನ್ನು ಮಾತ್ರ ಪ್ರತಿಫಲಿಸುವವು!!! ದೇವರು ಈ ರೀತಿಯಲ್ಲಿ ಯೋಜನೆ ಹಾಕಿರಲಾರ, ಯಾಕೆಂದರೆ, ಆದಿ ಕಾಲದ ಜನರಲ್ಲಿ ಹೆಚ್ಚು ಪ್ರೀತಿ ಮತ್ತು ಕೊನೆಯ ಕಾಲದ ಮಾನವರಲ್ಲಿ [ಕಾರಣವಿಲ್ಲದೆ] ತುಂಬಾ ಹಗೆತನ ದೇವರಿಗೆ ಇದ್ದಂತೆ ಆ ಯೋಜನೆ ತೋರುವುದು. ಈ ಯೋಜನೆಯು ದೇವರ ಯೋಜನೆಯೋ ಅಥವಾ ಆ ಪ್ರಾಚೀನ ವಾಮಾಚಾರದ ಯೋಜನೆಯೋ ಎಂದು ನಮಗೆ ಈಗ ತೀರ್ಮಾನಕ್ಕೆ ಬರಲು ಸುಲಭವಾಗುವುದು. 

ಈಗ, ನಿಮ್ಮ ಪ್ರಶ್ನೆಯ ಉತ್ತರವನ್ನು ಚರ್ಚಿಸೋಣ. ಈ ಮತಾಂತರದಲ್ಲಿ ಅದೇ ರೀತಿಯ “ದೇವ ಸಂಕಲ್ಪ” ದ ಕೊಲೆಯು ಮತ್ತೂ ಶಕ್ತಿಯುತವಾಗಿ ನಡೆಯುವುದು!! ಇದು ಹೇಗೆಂದರೆ, ಮತಾಂತರವಾದ ಜನರು “ಮೊದಲ” ತನ್ನ ದೇವರನ್ನು ಧ್ವೇಷಿಸುವುದು ಮತ್ತು ಅವುಗಳ ವಿರುದ್ಧ ಹೀನಾಯವಾಗಿ ನಿಂದಿಸುವ ರೀತಿಯಾಗಿದೆ. ಇಲ್ಲಿ, ಇತರ ಧರ್ಮದ ದೇವರನ್ನು ವಿರೋಧಿಸುವ ರೀತಿಗಿಂತಲೂ ಪ್ರಭಲವಾಗಿ, ತಾನು ನೇರವಾಗಿ ಹಿಂದೆ ಪೂಜಿಸಿದ್ದ ದೇವ ಸಂಕಲ್ಪವನ್ನೇ  ನಾಶಮಾಡುವ ರೀತಿ ಆ ಪ್ರಾಚೀನ ವಾಮಾಚಾರಕ್ಕೆ ಸಿಗುವುದು!! ಇದು ಪ್ರಾಚೀನ ವಾಮಾಚಾರಕ್ಕೆ ದೇವರ ಸಂಕಲ್ಪವನ್ನು ನಾಶಮಾಡುವಲ್ಲಿ ‘ತುಂಬಾ’ ಲಾಭಮಾಡಿ ಕೊಡುವುದು. ಆದುದರಿಂದಲೇ, ‘ಧರ್ಮ, ಪಂಥಗಳ ಹಿನ್ನಲೆಯಲ್ಲೇ’ ಎಲ್ಲರೂ ಜಾಗತಿಕವಾಗಿ ಒಂದಾಗುವ ರೀತಿಯೇ  ಇನ್ನುಳಿದ ಯಾವ ಹಿನ್ನೆಲೆಯ ಜಾಗತಿಕ ಒಂದಾಗುವಿಕೆಗಿಂತಲೂ ಅನಿವಾರ್ಯವಾದ ರೀತಿ ಎಂದು ನಾನು ಆ ಪರಿಹಾರದ ವಿವರಣೆಯಲ್ಲಿ ವಿವರಿಸಿರುವುದು, ಮತ್ತು ಮತಾಂತರವನ್ನು ಅಧರ್ಮ ಚಟುವಟಿಕೆಯೆಂದು ಹೇಳಿರುವುದು ಎಂದು ತಿಳಿಯಬೇಕು. ದೌರ್ಭಾಗ್ಯವಶಾತ್, ದೇವರದೇ ಆರಾಧನೆಯ ಹೆಸರಲ್ಲಿ, ಇಲ್ಲಿಯ ತನಕ [ಸಾವಿರಾರು ವರ್ಷಗಳು], ಈ ಧರ್ಮ, ಪಂಥಗಳು ಲಕ್ಷಗಟ್ಟಲೆ ಆರಾಧನಾಲಯಗಳನ್ನು, ದೇವರ ವಿಗ್ರಹಗಳನ್ನು, ದೇವರ ಪುಸ್ತಕ ಎಂದೇ ಕರೆಯಲ್ಪಡುವ ಧರ್ಮ ಗ್ರಂಥಗಳನ್ನು ನಾಶಮಾಡಿ ಆ ಪ್ರಾಚೀನ ವಾಮಾಚಾರಕ್ಕೆ ಅತಿ ದೊಡ್ಡ ಸೇವೆ ಮಾಡಿ ಆಗಿದೆ!! ಇವೆಲ್ಲಾ ಆ ಪ್ರಾಚೀನ ವಾಮಾಚಾರದ ದೇವರನ್ನು[ಉತ್ತಮ ಸ್ವಭಾವವನ್ನು] ಮತ್ತು ಧರ್ಮ[ಉತ್ತಮ ಸ್ವಭಾವ]ವನ್ನು ಕೊಲ್ಲುವ ಹಲವು ಉಪಾಯಗಳು ಎಂದು ತಿಳಿಯದ ಮಾನವನು ಇಂದೂ ಖಡ್ಗವನ್ನು ಮುಂದಿನ ಕಾಳಗಕ್ಕೆ ಗುಟ್ಟಿನಲ್ಲಿ ಮಸೆಯುತ್ತಾ ಇದ್ದಾನೆ!!! ಒಟ್ಟಿನಲ್ಲಿ, ಮಾನವರು ಮೋಸಹೋದರು, ಮತ್ತು ಇಂದು ಯಾವುದೂ ಯಾರ ಹಿಡಿತದಲ್ಲೂ ಇಲ್ಲದೆ ಆ ಪ್ರಾಚೀನ ವಾಮಾಚಾರದ ಮುಂದಿನ ಬಲಿಪಶುಗಳಾಗಿ ತಲೆ ಒಡ್ಡಿ ಕೂರುವ ಪರಿಸ್ಥಿತಿ ಮಾತ್ರ ಇರುವುದು ಆಷ್ಟೆ!! ನನ್ನ ಸಹೋದರ, ನಿನಗೆ ಏನಾದರೂ ಈ ಪ್ರಾಚೀನ ವಾಮಾಚಾರದ ಕೈಗಳಿಂದ ತಪ್ಪಿಸಿಕೊಳ್ಳಬೇಕು ಎಂದು ಇದ್ದಲ್ಲಿ ಮೊದಲು ಈ “ನಂಬಿಕೆ” ಎಂಬ ಆ ಪ್ರಾಚೀನ ವಾಮಾಚಾರವು ಮಾಡಿಟ್ಟ ಬಾಂಬನ್ನು ನಿರ್ವೀರ್ಯಗೊಳಿಸಿ ಅದೇ ಸ್ಥಾನದಲ್ಲಿ ದೇವರೆಂದೇ ಕರೆಯಲ್ಪಡುವ ಆ “ಸತ್ಯ”ದ ಪರ್ವತವನ್ನೇ ತಯಾರಿಸು. ದೇವರು ಮತ್ತು ಧರ್ಮವನ್ನು ನಂಬಿಕೆಯ ಹಿನ್ನೆಲೆಯಲ್ಲಿ ನೋಡುವುದನ್ನು ನಿಲ್ಲಿಸಿ ಆ ಪವಿತ್ರ ಸತ್ಯದ ಹಿನ್ನೆಲೆಯಲ್ಲಿ ನೋಡು!!!   

ಕೆಲವು ವಿಶೇಷ ಆಧ್ಯಾತ್ಮಿಕ ವ್ಯಕ್ತಿಗಳು ನೈತಿಕತೆಗೆ ಕಡಿಮೆ ಪ್ರಾಮುಖ್ಯತೆಯನ್ನು ಕೊಡುವರು. ನಮಗೆ ನೈತಿಕತೆ ಇಲ್ಲದೆ ಮಹಾತ್ಮರಾಗಲು ಸಾಧ್ಯವಿದೆಯೇ?

ಉತ್ತರ- ನೈತಿಕತೆ ಇಲ್ಲದೆ ಮಹಾತ್ಮರಾಗಲು ಸಾಧ್ಯವಾಗಲಾರದು. ಉದಾಹರಣೆಗೆ, ನೈತಿಕತೆ ಇಲ್ಲದಿರುವುದು ದೇವತ್ವ ವಾಗುವುದಿಲ್ಲ. ನೈತಿಕತೆ ಇಲ್ಲದಿರುವುದು ಧರ್ಮವಾಗುವುದಿಲ್ಲ. ನೈತಿಕತೆ ಇಲ್ಲದೆ ಸಾತ್ವಿಕತೆ ಸಾಧ್ಯವಿಲ್ಲ ಮತ್ತು ಅದಿಲ್ಲದೆ ಏಕಾಗ್ರತೆಯ ಯೋಗಗಳು ಸಾಧ್ಯವಿಲ್ಲ. ಅದೇ ರೀತಿ, ನೈತಿಕತೆ ಇಲ್ಲದೆ ಮಹಾತ್ಮರು ಇಲ್ಲ.  ವಿವೇಕಾನಂದ ಸ್ವಾಮಿಗಳಿಗೆ ಅಂದಿನ ಕಾಲದ ಸ್ತ್ರೀಯರ ನಡತೆಯೇ ಸರಿ ಕಾಣಿಸದಿರುವಾಗ, ತಾನು ಈ ಭಾರತದ ಸ್ತ್ರೀಯರನ್ನು ಸೀತಾ ಮಾತೆಯ ತರ ಪತಿವ್ರತೆಯರನ್ನಾಗಿ ಮರಣಾನಂತರವಾದರೂ ಮೇಲಿಂದ ನಿರಂತರ ಶ್ರಮವಹಿಸಿ ಮಾಡುವೆನು ಎಂದು ಪ್ರತಿಜ್ಞೆಯನ್ನು ಮಾಡಿದ್ದರು!! ಆದರೆ, ನಡೆದದ್ದು ಮಾತ್ರ ಅದರ ವಿರುದ್ಧವಾಗಿದೆ. ಅಂದಿಗಿಂತಲೂ ಬಹಳ ಹೆಚ್ಚು ಸಂಖ್ಯೆಯಲ್ಲಿ ಇಂದು ಸ್ತ್ರೀಯರು ನೈತಿಕತೆಯಿಂದ ಜಾರಿ ಹೋಗಿರುವುದನ್ನು ನಾವು ಕಾಣುವೆವು!! ಆ ಪ್ರಾಚೀನ ವಾಮಾಚಾರದ ಪ್ರಭಲ ಕೈವಾಡವು ಇಲ್ಲೂ ನಮಗೆ ಕಾಣಿಸುವುದು. ಆದರೆ, ಇಲ್ಲಿ, ನಮಗೆ ಸ್ವಾಮೀಜಿಯವರ ಮಾತನ್ನು “ಧರ್ಮ ಮತ್ತು ಆಧ್ಯಾತ್ಮದಲ್ಲಿ ನೈತಿಕತೆಯ ಅನಿವಾರ್ಯತೆ”ಯ ಕುರಿತಾಗಿ ಕೇಳಿರುವ ಮಾತಾಗಿ ತೆಗೆಯಬಹುದು. ಒಟ್ಟಿನಲ್ಲಿ, ಆ ಸಾರ್ವತ್ರಿಕ ಶುದ್ಧ ನೈತಿಕತೆಗಳಿಗೆ ಬೆಲೆ ಕೊಡದಿದ್ದಲ್ಲಿ, ಯಾರಿಗೂ ‘ನಿಜವಾದ’ ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ಮಾತಾಡಲೂ ಅರ್ಹತೆ ಇರುವುದಿಲ್ಲ.          

ಜಗತ್ತಿನಲ್ಲಿ ಹಲವು ಗುರುಗಳು ಹಲವು ಜನರಿಗೆ ಶಾಂತಿಯನ್ನು ಕೊಡಲಿಲ್ಲವೇ?

ಉತ್ತರ- ಖಂಡಿತವಾಗಿಯೂ ಕೊಟ್ಟಿದ್ದಾರೆ ಮತ್ತು ಅವರ ಕೆಲಸವನ್ನು ನನ್ನ ಹೃದಯದಿಂದ ಕೊಂಡಾಡುತ್ತೇನೆ. ನಾನು ಇದುವರೆಗೂ ಹೇಳಿದುದರ ಅರ್ಥವನ್ನು ಏನೆಲ್ಲಾ ತಪ್ಪು ಕಲ್ಪನೆಗಳಿಗೆ ದಯವಿಟ್ಟು ಗುರಿಪಡಿಸದಿರಿ. ನಾನು ಉದ್ದೇಶಿಸುವುದು ಆ ರೀತಿಯ ಗುರುಗಳು ತಮ್ಮಲ್ಲಿಗೆ ಬಂದವರಿಗೆ ಕೊಡುವ ಶಾಂತಿಯ ಬಗ್ಗೆಯಲ್ಲ. ಆ ರೀತಿಯು ಆದಿ ಕಾಲದಿಂದಲೇ ಇದೆ, ಅದು ಮತ್ತೂ ಹೆಚ್ಚಾಗುತ್ತಾ ಬಂದಿದೆ. ಎಲ್ಲಾ ಧರ್ಮಗಳಲ್ಲೂ ಆ ರೀತಿಯ ಗುರುಗಳು ತಮ್ಮ ಕೆಲಸವನ್ನು ಮಾಡುತ್ತಾ ಬಂದಿರುವರು.  ಅದೇ ರೀತಿ ಅಲ್ಲಿಗೆ ಹೋಗಿ ಮನಶ್ಯಾಂತಿಯನ್ನು ಪಡೆದವರೂ ತುಂಬಾ ಮಂದಿ ಇರುವರು. ಅದು ಮಾತ್ರವಲ್ಲ, ಆರಾಧನಾಲಯಗಳು ಹಲವು ಪಟ್ಟುಗಳಲ್ಲಿ ಹೆಚ್ಚಿದೆ, ಆಚಾರ, ಮತ್ತು ನಂಬಿಕೆಯ ಹಿನ್ನೆಲೆಯ ಎಲ್ಲವೂ ಎಲ್ಲಾ ಧರ್ಮ, ಪಂಥಗಳಲ್ಲೂ ಹಲವು ಪಟ್ಟು ಹೆಚ್ಚಿದೆ. ಧರ್ಮದ ಪ್ರವಚನಗಳು ಸಾವಿರ ಪಟ್ಟು ಇಂದಿನ ಕಾಲದಲ್ಲಿ ಹಲವು ಮಾಧ್ಯಮಗಳ ಹಿನ್ನೆಲೆಯಲ್ಲಿ ಹೆಚ್ಚಿದೆ!!! ನಾನು ಹೇಳುತ್ತಿರುವ ಅಂಶವು, ಇಷ್ಟೆಲ್ಲಾ ಆದರೂ, ಜಗತ್ತಲ್ಲಿ ಭಯಾನಕವಾಗಿ ಧ್ವೇಷ, ಹಿಂಸೆ,  ರಕ್ತಪಾತ, ಅನೈತಿಕತೆಗಳು ಬಹಳ ಹೆಚ್ಚಾಗುತ್ತಾ ಹೋಗುತ್ತಿವೆ ಎಂಬುವುದರ ಬಗ್ಗೆ ಮತ್ತು ಅದರ ಕಾರಣದ ಬಗ್ಗೆಯಾಗಿದೆ.  ಅಂದರೆ, ಎಲ್ಲವೂ ಇದೇ ರೀತಿಯಲ್ಲಿ ಮುಂದುವರಿದೇ ಮುಂದೆ ಒಂದು ದಿನ ಅತ್ಯಂತ ಕ್ರೌರ್ಯದ ಹಾಗೂ ಮದುವೆಯೇ ಇಲ್ಲದ  ಅನೈತಿಕ ಸಮಾಜ ಸೃಷ್ಟಿಯಾಗುವುದು ಎಂದಾಗುವುದು. ಅದು ತಪ್ಪು ಎಂದು ನಿಮ್ಮ ಮನಸ್ಸಲ್ಲಿ ಬಂದರೆ, ಬರೇ ಐವತ್ತು   ವರುಷದ ಹಿಂದೆಯ ಸಮಾಜವನ್ನಾದರೂ ಹೋಲಿಸಿ ನೋಡಿರಿ!!! ಅಲ್ಲಿಂದ ಇಲ್ಲಿಗೆ ಆದ ಆ ಬದಲಾವಣೆ ಒಂದು ಸಾಕು  ಮುಂದೆ ನೂರಾರು ವರುಷಗಳಲ್ಲಿ ಏನಾಗಬಹುದು ಎಂದು ಸ್ವತಃ ತೀರ್ಮಾನಕ್ಕೆ ಬರಲು.

ಒಟ್ಟಿನಲ್ಲಿ ಈಗ ನಡೆಯುತ್ತಿರುವುದು ಎಲ್ಲವೂ ಆ ಪ್ರಾಚೀನ ವಾಮಾಚಾರದ ಇರವು ಮತ್ತು ಅವುಗಳ ರಹಸ್ಯಗಳು ತಿಳಿಯದೆ ಇರುವ ರೀತಿಗಳಾಗಿವೆ. ಆದರೆ ಅದು ಧರ್ಮದ ಸರ್ವನಾಶದಲ್ಲಿ ಅಂತ್ಯಕಾಲ ಅಥವಾ ಕಲಿಯುಗ ಎಂದು ಸುಮ್ಮನೆ ಕೂರುವುದು ಹೊರತು ಅದೇನೂ ಮಾಡಲಾರದು!! ಆದುದರಿಂದ ನಾನು ಹೇಳುತ್ತಿರುವುದೆಲ್ಲಾ ಇತ್ತ ಆ ಪ್ರಾಚೀನ ವಾಮಾಚಾರದ ಕಡೆಯ ಆ ಶಾಶ್ವತ ಧರ್ಮನಾಶದ ಪರಿಹಾರ ಮಾರ್ಗದ ಬಗ್ಗೆ ಮಾತ್ರವೆಂದು ತಿಳಿದುಕೊಳ್ಳಬೇಕು.

ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಸೃಷ್ಟಿಸಿದ್ದು ದೇವರು ಎಂದು ಹೇಳುವುದು ಸರಿಯಾಗುವುದೇ?  

ಉತ್ತರ- ಪುರಾಣ ಕಥೆಯನ್ನು ಹಿಂಬಾಲಿಸಿ ಹೋದಲ್ಲಿ ಹೀಗೆಲ್ಲಾ ಅನಾಹುತಗಳಾಗುವುದು ಸ್ವಾಭಾವಿಕವಾಗಿದೆ. ಸೃಷ್ಟಿಕರ್ತನು  ಎಲ್ಲವನ್ನೂ ಸೃಷ್ಟಿಸಿದ್ದಾನೆ ಎಂಬ ಪುರಾಣದಲ್ಲಿ ಮಾತು ಸರಿಯಾಗಬೇಕಿದ್ದರೆ ಮೇಲಿನ ರೀತಿಯ ವಿವರಣೆ ಅನಿವಾರ್ಯವಾಗುವುದು. ಇಲ್ಲವಾದರೆ ಕೆಟ್ಟದ್ದನ್ನು ಸೃಷ್ಟಿಸಲು ಇನ್ನೊಬ್ಬ ಸೃಷ್ಟಿಕರ್ತನನ್ನು ತರಬೇಕಾಗುವುದು. ಎರಡು ಸೃಷ್ಟಿಕರ್ತರು ಸಾಧ್ಯವಿಲ್ಲದ ಕಾರಣ “ಎಲ್ಲವನ್ನೂ ಸೃಷ್ಟಿಕರ್ತನೇ ಮಾಡುವನು” ಎಂದು ಹೇಳಿರುವುದು. ಹೀಗೆ, ಈ ರೀತಿಯಲ್ಲಿ ತಮ್ಮಲ್ಲಿ ಕೇಳಿದ ಪ್ರಶ್ನೆಗೆ ಸುಲಭದಲ್ಲಿ ಉತ್ತರವನ್ನು ಹೇಳಿ ಆರಾಮವಾಗಿ ಧರ್ಮಪಂಡಿತರುಗಳು ಕೂತಿರುವರು! ಆದರೆ, ಅದರ ನಂತರ ಅಲ್ಲಿ ಏನು ಸಂಭವಿಸುವುದು ಎಂಬುವುದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ ಎಂಬುವುದು ನಿಜವಾಗಿಯೂ ಅಚ್ಚರಿಯನ್ನು ಉಂಟುಮಾಡುವುದು! ಅಲ್ಲಿ ತಮ್ಮ ತಮ್ಮ ದೇವರುಗಳನ್ನು ಅಧಃಪತನದ ಕೂಪಕ್ಕೆ ತಳ್ಳಿಹಾಕಿರುವುದು ಎಂಬ ಸತ್ಯವನ್ನು ಅವರು ಅರಿತಿಲ್ಲ ಎಂದು ತೋರುವುದು. ಉದಾಹರಣೆಗೆ, ನಾಯಕ ಮತ್ತು ಖಳನಾಯಕ ಒಬ್ಬನೇ ಆಗಿರುವ ಒಂದು ನಾಟಕವಾಗಲಿ ಅಥವಾ ಸಿನೆಮವಾಗಲಿ ತೋರಿಸಿಕೊಡಿ, ನಿಮಗೆ ಸಾಧ್ಯವಾಗುವುದೇ? ಇಲ್ಲ, ಯಾಕೆಂದರೆ ಅಂಥಹ ವ್ಯಕ್ತಿತ್ವವು ವಿಕೃತ ಮನಸ್ಸಿನ ಮಾನವನನ್ನು ಮಾತ್ರ ತೋರಿಸುವುದು ಹೊರತು ಸಾಮಾನ್ಯ ಮಾನವನ ಸ್ವಭಾವವನ್ನೂ ತೋರಿಸುವುದಿಲ್ಲ. ಸಾಮಾನ್ಯ ಮಾನವವರು ಯಾರೂ ತನ್ನದೇ ಮಗುವಿಗೆ ಆಹಾರ ಬಟ್ಟೆಯನ್ನು ಪ್ರೀತಿಯಿಂದ ಕೊಟ್ಟು, ಸ್ವಲ್ಪ ಕಳೆದ ನಂತರ, ಆ ಮಗುವಿನ ಕಾಲು ಮುರಿದು ಹಾಕುವ ಅಥವಾ ಇನ್ನಾವ ಕಷ್ಟವನ್ನು ಕೊಡುವ ರೀತಿಯಲ್ಲಿ [ವಿಕೃತವಾಗಿ] ವರ್ತಿಸಲಾರ. ಆದರೆ ಧರ್ಮಪಂಡಿತರುಗಳು ಈ ವಿಕೃತ ಸ್ವಭಾವವನ್ನು ತಮ್ಮ ದೇವರಿಗೇ ಕೊಟ್ಟು ಆರಾಮವಾಗಿ ಕೂತಿದ್ದಾರೆ!!! ಪ್ರತಿಯೊಂದಕ್ಕೂ “ದೇವರು ಮಾನವನನ್ನು ಪರೀಕ್ಷೆ ಮಾಡಲು ಹಾಗೆ ಮಾಡಿದನು” ಎಂದು ಜಾರಿಕೊಳ್ಳುವವರು ದೇವರು ವಿಕೃತ ಕಾಮ, ಅಸೂಯೆ, ಹಗೆತನ, ಶೋಷಣೆ, ಕಳ್ಳತನ, ವಂಚನೆ, ವೇಶ್ಯಾವಾಟಿಕೆ, ಇತ್ಯಾದಿ ಸಾವಿರಾರು ಕೆಟ್ಟತನವನ್ನು ಸೃಷ್ಟಿಸಿದನೆಂದರೆ ಒಪ್ಪಲು ಆಗುವುದೇ? ಇನ್ನು, ಆತನು ಸೃಷ್ಟಿಸಿರುವ ಒಳ್ಳೆಯತನವು ಬಹಳ ಕಡಿಮೆ ಮತ್ತು ಇಂಥ ನೀಚ ಕೆಟ್ಟತನ ಬಹಳ ಹೆಚ್ಚು ಎಂದು ಆಗುವುದು! ಅಂದರೆ, ಸೈತಾನನ ಭಾಗವೇ ಆತನಲ್ಲಿ ಹೆಚ್ಚು ಆಗುವುದು, ಹಾಗಿರುವಾಗ, ಇನ್ನೊಬ್ಬ ಸೈತಾನನ ಅಗತ್ಯವೇನು? ನಿಜವಾಗಿಯೂ ಇದಕ್ಕಿಂತ ದೊಡ್ಡ ದೈವ ನಿಂದನೆ ಇನ್ನಾವುದು ಇದೆ? ಇದಕ್ಕಿಂತ ದೊಡ್ಡ ಅಧರ್ಮ ಇನ್ನಾವುದು ಇದೆ? ಧರ್ಮ, ಅಧರ್ಮ ಮಿಶ್ರವಾಗಿರುವ ಪಾತ್ರೆಯಿಂದ ಇನ್ನು ಹೇಗೆ ಇವರು ಧರ್ಮವನ್ನು ಮಾತ್ರ ಜನರಿಗೆ ವಿವರಿಸುವರು?

ಮಹಾತ್ಮರು ಎಂದಿಗೂ ದೇವರ ಮೇಲೆ ಈ ತಪ್ಪನ್ನು ಮಾಡಲಾರರು. ಅವರು ಎಂದೆಂದಿಗೂ ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೈತಿಕತೆಯ ನಿಧಿಯೆಂದು ಮಾತ್ರ ದೇವರನ್ನು ವಿವರಿಸುವರು. ಹಾಗಾಗಿ ಮಹಾತ್ಮರ ದೇವನು ಎಂದೂ ಪವಿತ್ರತೆಯ ಅದ್ಭುತ ದೇವರೇ ಆಗಿ, ಜಗತ್ತಿನ ಎಲ್ಲಾ ದೇವರುಗಳಲ್ಲಿ, ಮಾನವನ ಹೃದಯದ ಸದ್ಗುಣಗಳಲ್ಲಿ, ಮತ್ತು ಅವುಗಳ ಕಾರಣಗಳಲ್ಲಿ ಕಲ್ಪಾಂತ್ಯದವರೆಗೂ ನೆಲೆಯಾಗಿ ಇರುವನು.

ಆವರ್ತನೆಯ ಜಪವು ಮಹಾತ್ಮರನ್ನು ಸೃಷ್ಟಿಸಲಾರದು ಎಂದು ನೀವು ಹೇಳುವಿರಿ, ಹಾಗಿದ್ದರೆ, ವಾಲ್ಮೀಕಿಯು ಜಪವನ್ನು ಮಾಡಿ ಮನೋಶುದ್ಧಿಯನ್ನು ಪಡೆಯಲಿಲ್ಲವೇ?

ಉತ್ತರ- ಜಪ ಎಂದರೇನು ಎಂಬುವುದನ್ನು ನಾವು ಮೊದಲು ತಿಳಿಯಬೇಕು. ಜಪದ ಮುಖ್ಯವಾದ ಭಾಗವು ಆವರ್ತನೆಯಾಗಿದೆ. ನಾವು ಜಪ ಮಾಡುವವರಲ್ಲಿ ಜಪಮಾಲೆ ಉಪಯೋಗಿಸಿ ಎಣಿಸುವುದನ್ನು ಎಲ್ಲಾ ಧರ್ಮಗಳಲ್ಲೂ ನೋಡುತ್ತೇವೆ. ಅಂದರೆ, ಜಪಕ್ಕೆ ಯಾವುದೇ ಸಂಕಲ್ಪವು ಸ್ವಂತದ್ದೆಂದು ಇಲ್ಲ ಎಂದು ಅರ್ಥ. ಸಂಕಲ್ಪವೆಂದರೆ “ಇದು ಹೀಗೆ” ಎಂಬ ಒಂದು ಅರ್ಥವನ್ನು ಒಳಗೊಂಡಿರುವುದು. ಸತ್ಯಸಂಧನಾಗಿ ಇದ್ದಲ್ಲಿ, ಒಬ್ಬ ವ್ಯಕ್ತಿಯು ಆತನ ಸಂಕಲ್ಪದಂತೆ ಇರುವ ವ್ಯಕ್ತಿಯಾಗಿ ಕಾಲಕ್ರಮೇಣ ಬದಲಾಗುವನು ಎಂಬುವುದು ಮನೋವಿಜ್ಞಾನವಾಗಿದೆ. ಮನಸ್ಸನ್ನೇ ದಾಟಲು ಪ್ರಯತ್ನಿಸುವ ರಾಜಯೋಗಿಗಳ ಆ ಯೋಗ ಮಾರ್ಗವಾಗಲೀ ಅಥವಾ ಜ್ಞಾನಿಗಳ ಬ್ರಹ್ಮಭಾವವಾಗಲೀ, ಆತ್ಮದ ಅಥವಾ ಬ್ರಹ್ಮದ ಪವಿತ್ರತೆಯ ಸಂಕಲ್ಪವನ್ನು ಅನುಸರಿಸಿಯೇ ಇರುವುದು.

ವಾಲ್ಮೀಕಿಯಲ್ಲಿ, ನಿಜವಾಗಿಯೂ, ಆತನು ಮಾಡಿದ ಜಪವು ಎಣಿಸುವ ಆವರ್ತನೆಯ ರೀತಿಯದ್ದಲ್ಲ ಆತನು ಜಪ ಸರವನ್ನೂ ಎಂದೂ ಉಪಯೋಗಿಸಿರಲಿಲ್ಲ [ಹುತ್ತದೊಳಗೆ ಜಪಸರ ಎಣಿಸಲು ಸಾಧ್ಯವಿಲ್ಲ]. ಆತನನ್ನು ಅಂತ್ಯದಲ್ಲಿ ಮಹಾತ್ಮನನ್ನಾಗಿ ಮಾಡಿದುದು ಆತನಲ್ಲಿ ಮೊದಲಲ್ಲಿ ಉಂಟಾಗಿದ್ದ “ತನ್ನ ತಪ್ಪಿನ ಅರಿವಿನ ಬೋಧ” ವಾಗಿದೆ. ಆ ಬೋಧದ ಫಲವಾಗಿ ಉದಿಸಿದ ‘ವೈರಾಗ್ಯ’ ವು ಎಷ್ಟು ಇತ್ತೆಂದರೆ ಆತನು ತನ್ನ ಮನೆ, ಹೆಂಡತಿ, ಮಕ್ಕಳು ಎಲ್ಲವನ್ನೂ ಬಿಟ್ಟು ಹೋಗುವಷ್ಟು ಇತ್ತು! ಅದು ಹೆಚ್ಚು ಕಡಿಮೆ ಬುದ್ಧನ ವೈರಾಗ್ಯದಷ್ಟೇ ಇತ್ತು ಎಂದು ಸ್ಪಷ್ಟವಾಗುವುದು! ಅಂದರೆ, ಆತನ ಮನಸ್ಸು ತಾನು ಮಾಡಿದ ತಪ್ಪನ್ನು ತಾನೇ ಅತ್ಯಂತ ಮೇಲೆ ಎತ್ತಿ ಹಿಡಿದುದರ [ಆತ್ಮಾವಲೋಕನದ] ಪರಿಣಾಮವಾಗಿ ಅದು ಆತನಿಗೆ ಅತ್ಯಂತ ಶಕ್ತಿಯುತವಾದ ಪಶ್ಚಾತಾಪವನ್ನು ತಂದುಕೊಟ್ಟಿತು. ಇದು ಆತನಲ್ಲಿ ಅತ್ಯಂತ ಮೇಲಿನ ವೈರಾಗ್ಯವನ್ನು ಮೂಡಿಸಿತು ಎಂದು ಅರ್ಥ.  ಇಲ್ಲಿ ಒಂದು ಸತ್ಯವು ನಮಗೆ ಸ್ಪಷ್ಟವಾಗುವುದು, ಯಾರು ತನ್ನ ತಪ್ಪನ್ನು ಆಳದಲ್ಲಿ ಅರಿತು, ಅತ್ಯಂತ ಹೆಚ್ಚು ಪಶ್ಚಾತಾಪವನ್ನು ಅನುಭವಿಸುವನೋ ಆತನು ಎಷ್ಟೇ ಕೆಟ್ಟವ್ಯಕ್ತಿಯಾಗಿದ್ದರೂ ಅವನಿಗೆ ಮಹಾತ್ಮನಾಗುವ ‘ಅರ್ಹತೆ’ಯು ಸೃಷ್ಟಿಯಾಗುವುದು!! ಒಟ್ಟಿನಲ್ಲಿ, ವಾಲ್ಮೀಕಿಯಲ್ಲಿ ತಾನು ಇದುವರೆಗೂ ಮಾಡಿರುವುದು ಅತ್ಯಂತ ದೊಡ್ಡ ತಪ್ಪು ಎಂಬ ಅದೇ ಭಾವನೆಯು ತಳವೂರಿತ್ತು. ಈ ಕಾರಣವಲ್ಲದೆ ವಾಲ್ಮೀಕಿಯು, ತಾನು ಜಪ ಮಾಡುವ ಆ ಶಬ್ಧದ ಅರ್ಥವನ್ನೂ ತಿಳಿಯದೆ, ‘ಮರ ಮರ’ ಎಂದು ಬರೇ ಶಬ್ಧವನ್ನು ಮಾತ್ರ ಜಪಿಸಿದರಿಂದ ಈ ಮಹಾತ್ಮನ ಸ್ಥಿತಿಯನ್ನು ಪಡೆದಿದ್ದಲ್ಲ. ಇನ್ನು, ದೇವರ ನಾಮದಲ್ಲಿ ದೇವರ ಮಹಿಮೆಯನ್ನು ಭಕ್ತನು ಸಂಕಲ್ಪಿಸಿದಲ್ಲಿ “ಮಾತ್ರ” ಆ ಜಪವು ಜಪವಾಗಿರದೆ, ಅದು ದೇವರ ಮಹಿಮೆಯ[ಸದ್ಗುಣಗಳ] ಗುಣಗಾನ ಎಂಬ [ಸತ್ಯ]ಚಿಂತನೆಯೇ ಆಗುವುದು. ಆಗ ಅಲ್ಲಿಯೂ ಅದು ಆವರ್ತನೆಯ ಜಪದ ರೀತಿಯಾಗುವುದಿಲ್ಲ! ಒಬ್ಬನು ಆ ಒಂದು ಶಬ್ಧವನ್ನು ನಿರಂತರ ಉಚ್ಚಾರ ಮಾಡುವಾಗ, ನಿಜವಾಗಿಯೂ, ಆ ಕ್ರಿಯೆಯು ಇತರ ವಿಚಾರಗಳು ಆತನ ಮನಸ್ಸಿಗೆ ಬಾರದೆ ಅವನ್ನು ತಡೆಯಲು ಸಹಾಯ ಮಾಡುವುದು ಅಷ್ಟೆ. ಅದೇ ರೀತಿಯಲ್ಲಿ, ವಾಲ್ಮೀಕಿಯ ಧ್ಯಾನದ ಆದಿಯಲ್ಲಿ ಇದ್ದ ಆ ಅತ್ಯಂತ ಆಳದ “ಹಿಂಸೆ ಮಾಡುವುದು ತಪ್ಪು, ಹಿಂಸೆ ಮಾಡಲೇಬಾರದು” ಎಂಬ ಭಾವಯುಕ್ತ ಅರ್ಥವು ಯಾವ ಹೊರ ಇತರ ಆಸೆಗಳಿಂದ ಭಾದಿಸಲ್ಪಡದೆ ಜಪದ ಕಾಲದಲ್ಲಿ ಬೆಳೆಯುತ್ತಾ ಹೋಯಿತು. 

ಯಾವುದಾದರೂ ಒಂದು ಶಬ್ಧವನ್ನು ಮನಸ್ಸನ್ನು ಶಾಂತಗೊಳಿಸುವ ಧ್ಯಾನಕ್ಕೆ ಉಪಯೋಗಿಸುವ ಕ್ರಮವಿದೆ. ಮನಸ್ಸನ್ನು ಶಾಂತಗೊಳಿಸುವ ಧ್ಯಾನಕ್ಕೆ ಸಾಧಾರಣವಾಗಿ ಪ್ರಶಾಂತತೆ ಅಥವಾ ಯಾವುದಾದರೂ ಒಂದು ಸಂಗೀತ ಅದಲ್ಲವಾದರೆ ನದಿ, ಸಾಗರಗಳ ಶಬ್ಧವನ್ನು ಅವಲಂಭಿಸುವರು. ಅಂಥವರಲ್ಲಿ ಕೆಲವರು ಸರಾಗವಾಗಿ ಉಚ್ಛರಿಸಲ್ಪಡುವ ದೇವನಾಮವನ್ನು ಉಪಯೋಗಿಸುವುದೂ ಇದೆ. ವಾಲ್ಮೀಕಿಯಲ್ಲಿ, ಅತನು ಅವಲಂಭಿಸಿರುವ ಶಬ್ಧವು ಮನೋಶಾಂತಿಯನ್ನೂ ಆತನಿಗೆ ಆಳದಲ್ಲಿ ತಂದು ಕೊಟ್ಟಿತು.

ಹೀಗೆ, ಈ ಮನೋಶಾಂತಿಯ ಬಲವೂ ವಾಲ್ಮೀಕಿಗೆ ಸೇರಿ ಬಂದಾಗ, ಮನೋಶಾಂತಿಯ ಸಾಗರ ಮತ್ತು ಆ ವೈರಾಗ್ಯ ತಂದ ಸತ್ಯಚಿಂತನೆಯ ಕಾರಣದಿಂದ ಹರಿದು ಬಂದ ಆ ಕರುಣಾರಸದ ಮಹಾಸಾಗರಗಳ ಸಂಗಮದ ಮಹಾತ್ಮನಾಗಿ ಉದಿಸಿಬಂದನು!! ಈ ಸಂಗಮ ಸಾಗರಗಳು ಮಹಾತ್ಮರಲ್ಲಿರುವ “ವಿಶಾಲಮನಸ್ಕತೆ”ಯೆಂಬ ಆ ಪವಿತ್ರವಾದ ಸಾರ್ವತ್ರಿಕ ಪ್ರೀತಿಯ ಸಾಗರವಾಗಿರುವುದು ಎಂದು ತಿಳಿಯಬೇಕು. ನಾಮದ ಆವರ್ತನೆಯು ಮಾತ್ರ ಮನೋಶುದ್ಧಿಯನ್ನು ತರುವುದಾದರೆ, ಅಸುರರ ಉದ್ದೇಶ ಏನಿದ್ದರೂ, ಅವರ ಕೋಟಿಗಟ್ಟಲೆ ಜಪವು ಆ ಅಸುರರ ವ್ಯಕ್ತಿತ್ವಗಳಲ್ಲಿ ಬದಲಾವಣೆಯನ್ನು ತರಲೇಬೇಕಾಗಿತ್ತು, ಆದರೆ ಅವರು ಅಷ್ಟು ಜಪವನ್ನು ಮಾಡಿಯೂ ಮತ್ತೂ ಕೆಟ್ಟ ಸ್ವಭಾವದ ವ್ಯಕ್ತಿಗಳಾಗಿ ಬಾಳಿದರು ಎಂಬುವುದನ್ನು ನಾವು ಮರೆಯಬಾರದು. ಕೊನೆಯಲ್ಲಿ, ವಾಲ್ಮೀಕಿಯು ತನ್ನ ಸಾಧನೆಯೆಲ್ಲ ಮುಗಿಸಿದ ಬಳಿಕ ಒಮ್ಮೆ ಕಾಡಲ್ಲಿ ನಡೆಯುತ್ತಾ ಇರುವಾಗ, ಎರಡು ಹಕ್ಕಿಗಳು ತಮ್ಮೊಳಗೆ ಆತ್ಮೀಯವಾಗಿ ಹತ್ತಿರ ಹತ್ತಿರ ಕುಳಿತು ಸಂತೋಷದಿಂದ ಇರುವುದನ್ನು ಕಂಡನು. ಆ ಸಂಧರ್ಭದಲ್ಲಿ, ಇನ್ನೊಬ್ಬ ಬೇಡನು ಅವುಗಳಲ್ಲಿ ಒಂದನ್ನು ಕೊಂದು ಹಾಕಿದನು. ಇದು, ಸಾರ್ವತ್ರಿಕ ಪ್ರೀತಿಯನ್ನು ಹೊಂದಿರುವ, ಆ ಹಿಂದಿನ ಕ್ರೂರ ಬೇಡನ, ಇಂದಿನ ವಾಲ್ಮೀಕಿ ಎಂಬ ಮಹಾತ್ಮ ಹೃದಯಕ್ಕೆ ತಡೆಯಲಾರದಂತೆ ಮಾಡಿತು!

ಮನಸ್ಸನ್ನು ಪವಿತ್ರತೆಯ ಮತ್ತು ಕರುಣೆಯ ಸಾಗರವಾಗಿಸಿದ ಹೇ ಮಹಾತ್ಮರುಗಳೇ, ನಿಜವಾಗಿಯೂ ನೀವೇ ದೇವರುಗಳು. 

ಸತ್ಯ ಅಥವಾ ಸತ್ಯದ ಅರಿವು ನಂಬಿಕೆಗಿಂತ ಬಹಳ ಮೇಲು ಎಂದು ಮೊದಲೇ ಹಲವು ಕಡೆ ಉದಾಹರಣೆಯ ಸಹಿತ ನೀವು ವಿವರಿಸಿದ್ದೀರಿ. ಆದರೂ,  ಜಗತ್ತು ನಂಬಿಕೆಯಲ್ಲಿ ಹೂತು ಹೋಗಿರುವ ಕಾರಣ, ಇನ್ನೊಂದು ಉದಾಹರಣೆಯ ಮೂಲಕ  ಅದನ್ನು ವಿವರಿಸಬಹುದೇ?   

ಉತ್ತರ- ಜಗತ್ತು, ಸರಿಯಾದ ಕಾರಣಕ್ಕೆ ತಲೆ ಬಾಗಲೇಬೇಕು. ಈ ಕಾರಣಗಳಿಗೆ ತಲೆ ಬಾಗಿರುವ ಸ್ಪಷ್ಟ ಉದಾಹರಣೆಯೇ ನಮ್ಮ ಮುಂದಿರುವ ಮತ್ತು ನಾವು ಅನುಭವಿಸುತ್ತಿರುವ ಈ ಎಲ್ಲಾ ತರದ ವೈಜ್ಞಾನಿಕ ಸೌಕರ್ಯಗಳಾಗಿರುವುದು. ಅಂದರೆ, ವೈಜ್ಞಾನಿಕವಾದುವೆಲ್ಲಾ “ಕಾರಣ ಸಹಿತ ವಿವರಣೆಯ” ಮೂರ್ತ ರೂಪಾಂತರಗಳಾಗಿವೆ ಎಂದು ಅರ್ಥ. ಇತ್ತ, ‘ನಂಬಿಕೆ’ಯು ‘ಕಾರಣ ಕೊಡದಿರುವಿಕೆ’ಯ ಮೂರ್ತ ರೂಪಾಂತರವಾಗುವವು! ಕಾರಣವೇ[ಸತ್ಯ ತಿಳಿದಿರುವ ಸ್ಥಿತಿ] ನಿಜವಾಗಿಯೂ ನಮ್ಮ ಜೀವನವನ್ನು ರಕ್ಷಿಸುವುದು. ಪ್ರಳಯ, ಭೂಚಲನೆ ಇತ್ಯಾದಿಗಳ ಮುನ್ಸೂಚನೆಯು ಎಷ್ಟೊ ಜನರ ಜೀವವನ್ನು ರಕ್ಷಿಸುವುದು. ಅದೇ ರೀತಿ, ರೋಗದ ವೇಗದ ಪತ್ತೆಯೂ ಜೀವವನ್ನು ಉಳಿಸಬಹುದು. ಆದರೆ ತರ್ಕವನ್ನು ಕಳಕೊಂಡ ನಂಬಿಕೆಯು ಆ ಭ್ರಮೆಯ ತರದಲ್ಲಿ ಈ ಜಗತ್ತಿನಲ್ಲಿ ಶೋಷಣೆ, ಧ್ವೇಷ, ಹಿಂಸೆ, ರಕ್ತಪಾತವನ್ನು ಮಾಡುತ್ತಿದೆ. ಯಾವಾಗ ‘ಅರಿವು’ ಈ ‘ನಂಬಿಕೆ’ಯ ಬದಲು ಬರುವುದೋ, ಆಗ, ಕೊನೆಯ ಪಕ್ಷ, ಅಪರಾಧಗಳು ಇಂದಿನ ಅಪರಾಧಗಳ ಸಂಖ್ಯೆಯ ಅರ್ಧದಷ್ಟಾದರೂ ಇಳಿಯುವುದರಲ್ಲಿ ಸಂಶಯವಿಲ್ಲ.  ಇನ್ನು, ಮಹಾತ್ಮರ ಸಂಖ್ಯೆ ಹೆಚ್ಚಾದರೆ, ಅಲ್ಲಿ ಆ ಸಮಾಜವು ಶಾಂತಿಯ ಸ್ವರ್ಗವಾಗಿ ಪರಿವರ್ತಿಸಲ್ಪಡುವುದು ಎಂಬುವುದರಲ್ಲೂ ಸಂಶಯವಿಲ್ಲ. 

ಮಾನವ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಕೊಡಬೇಕು?

ಉತ್ತರ- ಒಂದು ಎಂಬ ಸಂಖ್ಯೆಯು ಯಾವುದಾದರೂ ಒಂದು ಬಗೆಯ ಅಸ್ತಿತ್ವ ಮಾತ್ರವಾಗಿದೆ. ಅಂದರೆ, ನಿಜವಾಗಿಯೂ ಸಂಖ್ಯೆಯು ಆರಂಭವಾಗುವುದು ಎರಡರಿಂದ ಆಗುವುದು. ನಾವು ಆವರ್ತನೆಯನ್ನು ಆರಂಭಿಸುವಾಗ ಮಾತ್ರ ಸಂಖ್ಯೆಯ ಆರಂಭವಾಗುವುದು!! ಇನ್ನೊಂದು ರೀತಿಯಲ್ಲಿ ಹೇಳುವುದಾದರೆ,  ನಾವು ಯಾವುದಾದರೊಂದನ್ನು ಪೂರ್ತಿಮಾಡಿ, ಇನ್ನೊಂದು ಅದೇ ತರ ಆವರ್ತಿಸದಿದ್ದರೆ ಮುಂದಿನ ಸಂಖ್ಯೆಯ ಸೃಷ್ಟಿ ಆಗುವುದಿಲ್ಲ!

ನಾವು ಕಾಣುವ ದೊಡ್ಡ ದೊಡ್ಡ ಸಂಖ್ಯೆಗಳು ಯಾವುದೋ ಒಂದು ‘ಬಗೆ’ ಯ [ಅಸ್ತಿತ್ವದ] ದೊಡ್ಡ ದೊಡ್ಡ ಆವರ್ತನೆಗಳ ಪ್ರತಿನಿಧಿಗಳು ಮಾತ್ರವಾಗಿವೆ ಎಂದರೆ ಅಚ್ಚರಿಯಾಗುವುದಿಲ್ಲವೇ? ಸಾವಿರ ರೂಪಾಯಿ ಅಂದರೆ ಅದು ಸಾವಿರ ಒಂದು ರೂಪಾಯಿಗಳ[ಅವುಗಳು ಬೇರೆ ಬೇರೆ ರೂಪಾಯಿಗಳಾದರೂ] ಸಾವಿರ ಆವರ್ತನೆಯಾಗಿದೆ, ಅಂದರೆ, ಐದು ರೂಪಾಯಿಗಳ ಸಾವಿರ ಆವರ್ತನೆ ಅಲ್ಲ! ಸಾವಿರ ಡಾಲರ್ ಆದರೆ, ಅಲ್ಲಿ ವ್ಯತ್ಯಾಸ ಇರುವುದು “ಡಾಲರ್” ಎಂಬ ‘ಬಗೆ’ಯಲ್ಲಿ ಅಥವಾ ಮೂಲ ಅಸ್ತಿತ್ವದಲ್ಲಿ ಮಾತ್ರ ಎಂದು ತಿಳಿಯಬೇಕು. ನೂರು ಹಣ್ಣುಗಳು ಅಂದರೆ ಇದೇ ರೀತಿ ಆಗುವುದು. ಇಲ್ಲಿ, ಅವುಗಳು ಯಾವುದೋ ಒಂದು ‘ಬಗೆ’ಯ  ಹಣ್ಣಿನ ಆವರ್ತನೆ ಮಾತ್ರವಾಗುವುದು! ಇನ್ನು ಹಲವು ತರದ ಹಣ್ಣುಗಳು ಸೇರಿದ ಬುಟ್ಟಿಯಲ್ಲಿ ನೂರು ಹಣ್ಣುಗಳು ಎಂದರೆ, ಅಲ್ಲಿ ಅವು ನೂರು ತರಕಾರಿ, ಚಕ್ಕುಲಿ, ಇತ್ಯಾದಿಗಳ ನೂರು ಆವರ್ತನೆಯಲ್ಲ ಅದು ನೂರು ವಿವಿಧ ಹಣ್ಣುಗಳ ಆವರ್ತನೆ ಎಂದು ಅರ್ಥವನ್ನು ಕೊಡುವುದು.

ಎಲ್ಲವೂ ನಮಗೆ ಜೀವನದಲ್ಲಿ ಆವರ್ತನೆಯ ರೂಪದಲ್ಲಿ ಸಿಗುವುದು. ಆದುದರಿಂದ ಅದರ ಕಡೆಗೆ ಗಮನ ಅತಿಯಾಗಿ ಕೊಡುವ ಅಗತ್ಯವಿಲ್ಲ. ಆದರೆ, ನಾವು ಎಂದೂ ಸುಖವಾಗಿರಬೇಕೆಂದು ಬಯಸುವ ಆ ನಮ್ಮ ಜೀವನವು ಮಾತ್ರ ಆವರ್ತನಾ ರಹಿತವಾಗಿದೆ, ಮತ್ತು ಅದು ಒಂದೇ ಒಂದು ಸಲ ಮಾತ್ರ ನಮಗೆ ಸಿಗುವುದು. ಆದುದರಿಂದ ನಾವು ನಮ್ಮ ಶಾಂತಿಯ ಆ ಆನಂದದ ಜೀವನಕ್ಕಾಗಿ ಎಲ್ಲಕಿಂತಲೂ ಹೆಚ್ಚು ಗಮನ ಹರಿಸಬೇಕಾಗುವುದು. ಬರೇ ಜಿಪುಣನ ಜೀವನದ ಅವಸ್ಥೆಯನ್ನು ಆಲೋಚಿಸಿರಿ. ಆತನು ತನ್ನ ಜಿಪುಣತನ ಒಂದರಲ್ಲೇ ಪ್ರತಿ ದಿನವೂ ಕಣ್ಣಿಲ್ಲದವರಿಗಿಂತಲೂ ಹೆಚ್ಚು ಕೊರಗುವನು!! ಅಂದರೆ, ಸಾಮಾನ್ಯರಿಗೆ ಆ ಹಣ ಕರ್ಚು ಮಾಡುವಾಗ ಹೊಟ್ಟೆ ಉರಿಯುವ ಅನುಭವ ಆಗುವುದಿಲ್ಲ ಎಂದು ಅರ್ಥ. ಇನ್ನು, ಅಸೂಯೆಯವನ ಅವಸ್ಥೆ, ಮದದಲ್ಲಿರುವವನ ಅವಸ್ಥೆ, ಎಂದು ಈ ಎಲ್ಲವೂ ಮಾನವನಿಗೆ ಆ ಆನಂದದ ಜೀವನ ಕೈ ತಪ್ಪುವಂತೆ ಮಾಡುವಲ್ಲೇ ಇರುವವುಗಳು ಎಂಬುವುದನ್ನು ನೆನಪಿಡಬೇಕು.   

ನಾವು ಮಾಡುವ ಎಲ್ಲವೂ ಉತ್ತಮ ಜೀವನಕ್ಕಾಗಿ, ಅಂದರೆ ಆನಂದ, ಶಾಂತಿಯ ಜೀವನಕ್ಕಾಗಿ. ಆದರೆ ಹೆಚ್ಚಿನವರೂ ಈ ಆನಂದದ ಜೀವನವನ್ನು ಜಗಳ, ಅಹಂಕಾರ, ಅಸೂಯೆ ಇತ್ಯಾದಿಗಳಲ್ಲಿ ಮೊದಲೇ ಕಳಕೊಂಡು, ಅದನ್ನು ದಿನ ನಿತ್ಯವೂ ಬದಲಾಗುವ ವ್ಯಕ್ತಿತ್ವದ ಜೀವನವಾಗಿಯೂ ಪರಿವರ್ತಿಸಿಕೊಂಡಿದ್ದಾರೆ!! ಅಂದರೆ, ವ್ಯಕ್ತಿತ್ವವು, ಸಾಗರವನ್ನು ಸೇರುವ ತನಕ ಕಡಿಯದ ನದಿಯ ತರ ಇರಬೇಕೇ ಹೊರತು ಅದು ದಿನಕ್ಕೊಂದರಂತೆ ಬದಲಾಗುವ ತರ ಇರಬಾರದು. ಇದರಿಂದಾಗಿ ಆತನಿಗೆ ಒಂದು ಶಾಶ್ವತ ವ್ಯಕ್ತಿತ್ವವೇ ಸೃಷ್ಟಿಯಾಗುವುದಿಲ್ಲ. ಶಾಶ್ವತ ವ್ಯಕ್ತಿತ್ವವಿಲ್ಲದ ಆ ದಿನಗೂಲಿಯ ತರದ ಆ ವ್ಯಕ್ತಿತ್ವದವನಿಗೆ, ಹಿಂದಿನ ಮತ್ತು ಮುಂದಿನ ದಿನಗಳ ಬರವಸೆ ಇಲ್ಲದಿರುವುದರಿಂದ, ಜೀವನದ ಒಂದು ಕಿರುಗಾಳಿಯೂ ಬಿರುಗಾಳಿಯ ತರವಾಗಿಬಿಡುವುದು. ಆತನು ಮಹಾತ್ಮನೆಂದೂ ಆಗಲಾರನು, ಮಾತ್ರವಲ್ಲ ನಂಬಲರ್ಹನಲ್ಲದ ವ್ಯಕ್ತಿಯಾಗಿ, ಯಾರ ಪ್ರೀತಿಗೂ ಪಾತ್ರನಾಗದ ಜೀವನವನ್ನು ನಡೆಸಿ, ಎಲ್ಲರೂ ಒಟ್ಟಿಗೆ ಇದ್ದರೂ, ಆ ನಿತ್ಯ ಅನಾಥನ ಜೀವನವನ್ನು ಮುಗಿಸಬೇಕಾಗುವುದು! ಆದುದರಿಂದ ಜೀವನ ಎಂಬ ಈ ಆವರ್ತನಾ ರಹಿತ ನಿಧಿಯನ್ನು ಅನುಭವಿಸಬೇಕಾದರೆ, ಅನಗತ್ಯವಾದವುಗಳು ಯಾವುದು ಎಂಬುವುದನ್ನು ಮೊದಲು ಹುಡುಕಿ ಅದನ್ನು ಕಡಿಮೆಗೊಳಿಸಬೇಕಾಗುವುದು.

ಮಾನವರಲ್ಲಿ “ನನಗೆ ಖುಷಿ ತೋರುವುದೇ ನನ್ನ ಉತ್ತಮ ಜೀವನ”  ಎಂದು ಹೇಳುವವರು ಇರುವರು, ಆದರೆ ಇಂದಿನ ಖುಷಿಯ ಸಿಹಿ ರುಚಿಯು ನಾಳೆಯ ಕಹಿ ರುಚಿಯಾಗುವಾಗ ಆತನು ನಾಳೆ ಇನ್ನೊಬ್ಬ ವ್ಯಕ್ತಿಯಾಗುವನು, ಅದೂ ಕಹಿಯಾಗುವಾಗ ಇನ್ನೊಂದು ದಿನ ಮತ್ತೊಂದು ವ್ಯಕ್ತಿತ್ವವನ್ನು ಪಡೆವನು!!!! ಈ ರೀತಿಯಲ್ಲಿ ಸಾಯುವುದರೊಳಗಾಗಿ ಸಾವಿರಾರು ವ್ಯಕ್ತಿತ್ವವನ್ನು ಪಡೆಯುವನು. ಅಂದರೆ, ಖುಷಿಯ ಬೆನ್ನೆತ್ತಿ ಹೋದಲ್ಲಿ ಅದು ಯಾವುದೇ ವ್ಯಕ್ತಿತ್ವವನ್ನು ಆತನಲ್ಲಿ ಶಾಶ್ವತವಾಗಿ ರೂಪಿಸುವುದಿಲ್ಲ, ಬದಲು ಆತನ ಖುಷಿಯು ಆತನ ವ್ಯಕ್ತಿತ್ವವನ್ನು ಬದಲಿಸುತ್ತಾ ಇರುವುದು ಎಂದು ಅರ್ಥ! ಅಂಥವರಿಗೆ ಸತ್ಯ, ಪ್ರೀತಿ, ನೈತಿಕತೆಯು ಇರುವುದಿಲ್ಲ. ಅವರಿಗೆ ಶಾಶ್ವತ ಗೆಳೆಯರು ಇರಲಾರರು. ಈ ರೀತಿಯಲ್ಲಿ ಜೀವನವು ಸೋಲನ್ನು ಕಾಣುವುದು.   

ಮಹಾತ್ಮರ ಜೀವನವನ್ನು ಅನುಸರಿಸುವಾಗ, ಅದು ಪೂರ್ತಿ ಜೀವನವನ್ನು ಒಟ್ಟಾಗಿ ಉತ್ತಮಗೊಳಿಸುವಲ್ಲಿ ಹೆಚ್ಚು ಗಮನಿಸುವುದು. ಆಗ, ಅಲ್ಲಿ ನಾವು ನಿತ್ಯ ತೃಪ್ತರಾಗಿರುತ್ತೇವೆ. ತೃಪ್ತಿ ಇದ್ದಲ್ಲಿ ಮಾತ್ರ ಶಾಂತಿ ಇರಲು ಸಾಧ್ಯ, ಹೀಗೆ, ನಮ್ಮ ಜೀವನವೆಂಬ ನಿಧಿಯನ್ನು, ನಗರದಲ್ಲಿದ್ದರೂ ಅಥವಾ ಒತ್ತಡದ ಕೆಲಸಗಳಲ್ಲಿ ಇದ್ದರೂ, ನಿಜವಾಗಿಯೂ ಆನಂದಿಸುವಂತೆ ಮಾಡುವುದು. 

ಜಗತ್ತಲ್ಲಿ ಧರ್ಮ ಮತ್ತು ಅಧರ್ಮವನ್ನು ‘ನೇರ-ಸತ್ಯ’ದ ಹಿನ್ನೆಲೆಯಲ್ಲಿ ಚುಟುಕಾಗಿ ಹೇಗೆ ವಿವರಿಸಬಹುದು?

ಉತ್ತರ- ನನ್ನ ಸಹೋದರ, ಈ ಪ್ರಶ್ನೆಯನ್ನು ಏನೋ ನೀವು ಕೇಳಿದ್ದೀರಿ. ಆದರೆ ದಯವಿಟ್ಟು ಅದರ ಉತ್ತರವನ್ನು ಕೇಳುವಷ್ಟು ಹೃದಯವಂತಿಕೆಯನ್ನು ಇಟ್ಟುಕೊಳ್ಳಲು ಮೊದಲು ಕೇಳಿಕೊಳ್ಳುತ್ತೇನೆ!

ಸತ್ಯವನ್ನು ಸತ್ಯದ ರೂಪದಲ್ಲೇ ಹೇಳುವಾಗ ಅದು ಹೆಚ್ಚಿನ ಜನರಿಗೂ ಹಿಡಿಸುವುದಿಲ್ಲ ಎಂದು ಗೊತ್ತಿದೆಯಲ್ಲಾ. ಸತ್ಯವು ಸತ್ಯವಂತರಿಗೆ ಮಾತ್ರ ಸಿಹಿಯಾಗುವುದು. ಆದರೆ, ಇತರರಿಗೆ ಕಹಿಯಾಗುವುದು. ಇಲ್ಲಿ, ಮೊದಲು ಆಧ್ಯಾತ್ಮವನ್ನು ಧರ್ಮದಿಂದ ಪ್ರತ್ಯೇಕಿಸಿರಿ, ಯಾಕೆಂದರೆ, ಅದು ಪ್ರತಿ ಧರ್ಮದಲ್ಲೂ ಬೇರೆ ಬೇರೆಯಾಗಿರುವುದು. ಮಾತ್ರವಲ್ಲ, ಅದಕ್ಕೆ ಆಧ್ಯಾತ್ಮವೆಂಬ ಒಂದು ಪ್ರತ್ಯೇಕ ಶಬ್ಧವೇ ಇದೆಯಲ್ಲಾ? ಇನ್ನು, ನೇರ-ಸತ್ಯದಲ್ಲಿಯೇ ಹೇಳಬೇಕಿದ್ದರೆ, ಅದು  ನಿಸ್ಪಕ್ಷಪಾತತೆಯೇ ಧರ್ಮ ಮತ್ತು ಪಕ್ಷಪಾತತೆಯೇ ಅಧರ್ಮವಾಗುವುದು ಎಂದು ಹೇಳಬೇಕಾಗಿದೆ! ಯಾಕೆಂದರೆ, ತಮಗೆ ಮಾತ್ರವೆಂದು ಎಂದಿಗೂ ಹೇಳಲು ಸಾಧ್ಯವಾಗದ ಆ ಸಾರ್ವತ್ರಿಕ ಸತ್ಯವೇ ಧರ್ಮದ ಬೆನ್ನೆಲುಬು ಆಗಿರುವುದು ಮತ್ತು ಅದಿಲ್ಲವಾದಲ್ಲಿ ಧರ್ಮ ಮತ್ತು ದೇವರು ಈ ಎರಡೂ ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ.  ಸಾರ್ವತ್ರಿಕ ಸತ್ಯದ ಆ ನಿಜವಾದ ಧರ್ಮವೇ ನಿಮಗೆ ಬೇಕಿದ್ದಲ್ಲಿ, ಮೊದಲಿಗೆ ನಿಸ್ಪಕ್ಷಪಾತತೆಯನ್ನು ತಾಳಲೇಬೇಕಾಗುವುದು.  ಇನ್ನು, ಪಕ್ಷಪಾತಿಗೆ ಯಾವ ಸತ್ಯವೂ ಇಲ್ಲ ಮತ್ತು ಯಾವ ಧರ್ಮವೂ ಇಲ್ಲ ಮಾತ್ರವಲ್ಲ, ಅಂಥವರು ಧರ್ಮವೇ ಹೇಳುವ ಪ್ರಕಾರ ಅತ್ಯಂತ ನಿಕೃಷ್ಠರು ಆಗುವರು. ಇಷ್ಟೆ ಸಹೋದರ, ಚುಟುಕು ಮಾತುಗಳಲ್ಲಿ ವಿವರಿಸಲಿರುವುದು. ಆದರೆ, ಹೃದಯವಂತಿಕೆ ಬೇಕು ಎಂದು ಅಂದೆನಲ್ಲ ಅದು ಯಾಕೆ ಗೊತ್ತಾ? ಅದು ಈ ಪರಮ ಸಾರ್ವತ್ರಿಕ ಸತ್ಯದ ಹಿನ್ನೆಲೆಯ ಆ ಪಕ್ಷಪಾತ ರಹಿತವಾದ ನಿಟ್ಟಿನಲ್ಲಿ ನಿಮಗೆ ಈ ಜಗತ್ತಲ್ಲಿ ಎಲ್ಲೂ ಯಾವೊಂದು ಧರ್ಮ, ಪಂಥ, ಸಿದ್ಧಾಂತ, ಪರಂಪರೆ ಎಂದು ಯಾವುದೂ ಸಿಗಲಾರದೆಂಬ ಬೆಚ್ಚಿ ಬೀಳಿಸುವ ಸತ್ಯವನ್ನು ಅರಗಿಸಿಕೊಳ್ಳುವುದಕ್ಕಾಗಿತ್ತು!! ಎಲ್ಲವೂ ಬೇಲಿಯೊಳಗಿನ ಅಥವಾ ಹಿಂದೆ ಮಹಾತ್ಮರು ಹೇಳಿರುವಂತೆ ಬಾವಿಯೊಳಗಿನ ಕಪ್ಪೆಗಳು. ಅಂದರೆ, ತಮ್ಮ ಬಾವಿಯೇ “ಸಾಗರ” ಎಂದು ಹೇಳಿಕೊಳ್ಳುವ ರೀತಿ ಮಾತ್ರವಾಗಿವೆ!!  

ಕುಳಿತು ಸತ್ಯಸಂಧವಾಗಿ ಆಲೋಚಿಸಿ ನೋಡಿದಾಗ ತಿಳಿವುದು, ಎಲ್ಲವೂ “ತಮ್ಮ ಪರ” ಎಂಬ ರೀತಿಯಲ್ಲಿ ಮಾತ್ರ ಬೆಳೆದು ಬಂದಿವೆ ಎಂದು!! ಧರ್ಮವನ್ನು ಎಂದೂ “ತಮ್ಮ ಪರ” ಎಂಬ ರೀತಿಯಲ್ಲಿ ವಿವರಿಸಲು ಸಾಧ್ಯವೇ ಇಲ್ಲ, ಅದು ನ್ಯಾಯಾಧೀಶನು ಕಳ್ಳತನ ಮಾಡುವುದನ್ನು ‘ಸರಿ’ ಎಂದು ಸಾರಿದಷ್ಟು ಭೀಕರ ವಿರೋಧಾಭಾಸವಾಗುವುದು! ಇನ್ನಾದರೂ ಮಾನವರು, ಈ ಎಲ್ಲದಕ್ಕೂ ಕಾರಣವಾಗಿರುವ, ಆ ನಂಬಿಕೆಯ ಅಂಧತೆಯಿಂದ ಹೊರಬಂದು ಸತ್ಯದ ಬೆಳಕನ್ನು ಪಡೆಯಲು ಪ್ರಯತ್ನಿಸುವರೆಂದು ಆಶಿಸೋಣ. ಆ ಪ್ರಾಚೀನ ವಾಮಾಚಾರವು ಮಾನವನನ್ನು ಹೇಗೆ ತನ್ನ ಅಂಕೆಯಲ್ಲಿ ಇದುವರೆಗೂ ಹಿಡಿದಿರಿಸಿಕೊಂಡು ಬಂದಿದೆ ಎಂಬುವುದು ನಮಗೆ ಮತ್ತೂ ಇಲ್ಲಿ ಸ್ಪಷ್ಟವಾಗುವುದು. 

ನೀವು ಮನೋ ವಿಜ್ಞಾನವೇ ಅಲ್ಲದೆ ಸೂಕ್ಷ್ಮ ಜಗತ್ತಿನಲ್ಲಿ ಬೇರೊಂದಿಲ್ಲ ಎನ್ನುವಿರಲ್ಲ, ಹಾಗಿದ್ದರೆ ಮನೋ ವಿಜ್ಞಾನವು ದೆವ್ವ ಆತ್ಮಗಳನ್ನು ಒಪ್ಪುವುದಿಲ್ಲ ಇದಕ್ಕೆ ನೀವು ಹೇಗೆ ಉತ್ತರಿಸುವಿರಿ?

ಉತ್ತರ- ವಿಜ್ಞಾನವು ಎಂದೂ ನಂಬುವುದನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ತರ್ಕವನ್ನು ಪ್ರೋತ್ಸಾಹಿಸುವುದು ಎಂಬ ಕಾರಣದಿಂದ ಇಲ್ಲಿ ವಿವರಣೆಯು ಮತ್ತೂ ಸುಲಭವಾಗುವುದು. ನಿರೀಶ್ವರ ವಾದಿಗಳು ಎಂಬ ಜನರು ಬರೇ ವಾದಿಗಳಾಗಿಬಿಡುವ ಕಾರಣ ಅವರು ಇತರರಂತೆ ನಂಬಿಕೆಯವರೇ ಆಗಿರುವರು. ಅವರ ಕೆಲಸ ‘ತಮ್ಮ ಪರ’ ವಾದ ಮಾತ್ರವಾಗಿದೆ! ಈ “ಪರ” ಎಂಬುವುದು ಇದ್ದಲ್ಲಿ ಸತ್ಯವು ಎಂದಿಗೂ ಇರುವುದಿಲ್ಲ ಎಂಬುವುದು ಒಂದು ಮಹಾ ಸತ್ಯವಾಗುವುದು.

ಸತ್ಯಸಂಧ ತರ್ಕವು ಮಾತ್ರ ಸತ್ಯವನ್ನು ಹೊರತರಬಹುದಷ್ಟೆ ಎಂದು ನಮಗೆ ತಿಳಿದಿದೆ. ಈಗ ನಾನು ಹೇಳುತ್ತಿರುವುದು ತರ್ಕಬದ್ಧವಾಗಿಯೇ ಇದ್ದಲ್ಲಿ, ಅದರ ಬಗ್ಗೆ ಮನೋ ವಿಜ್ಞಾನಿಗಳಿಗೂ ಚಿಂತಿಸಬಹುದು ಎಂಬ ಕಾರಣಕ್ಕೆ ಮಾತ್ರ ನಾನು ಈಗ ಉತ್ತರವನ್ನು ಹೇಳುವೆನು. ಮೊದಲು ನಾನು ಕಂಡ ರಹಸ್ಯ ಸತ್ಯಗಳನ್ನು ಪ್ರತ್ಯೇಕ ಅಂಶಗಳ ರೀತಿಯಲ್ಲಿ ಚುಟುಕಾಗಿ ಈ ಕೆಳಗೆ ಸೂಚಿಸುವೆನು.

  1. ಸೂಕ್ಷ್ಮದ ಸ್ಥರಗಳಲ್ಲಿ ಇರುವ ಪ್ರತಿಯೊಂದು ಅಸ್ತಿತ್ವಗಳು ಮಾನವ ಮನೋಶಕ್ತಿಗಳು ಮಾತ್ರವಾಗಿವೆ.
  2. ಅವುಗಳಲ್ಲಿ ಚಿಕ್ಕ ಚಿಕ್ಕ ದೇವತೆಗಳು, ಸೃಷ್ಟಿಕರ್ತ ಎಂದು ಹೇಳಿಕೊಳ್ಳುವ ದೇವತೆಗಳು, ದೆವ್ವ, ಮತ್ತೂ ಕೆಳಗಿನ ಭೀಕರ ಪಿಶಾಚಿ,ಇತ್ಯಾದಿ ಹಲವು ಸೇರಿವೆ.
  3. ಭೂಮಿಯಲ್ಲಿ ದೇವತೆಗಳಿಗೆ ಮನೋಶಕ್ತಿ[ಆತ್ಮ ಶಕ್ತಿ] ಕೊಟ್ಟು ನಿತ್ಯಪೂಜೆಯ ಮೂಲಕ ಶಕ್ತಿ ಬೆಳೆಸುವ ರೀತಿಯನ್ನು ಹಲವು ತರದ ಆಗಮ ತಂತ್ರ ಶಾಸ್ತ್ರಗಳು ಹೇಳುತ್ತವೆ. ಅವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
  4. ಈ ಜಗತ್ತಿನಲ್ಲಿ ಹಲವು ಧರ್ಮ, ಪಂಥಗಳು ಇದ್ದರೂ ಸತ್ತ ನಂತರದ ಆತ್ಮದ ವಿವರಣೆಯನ್ನು “ಒಂದೇ ತರ” ದಲ್ಲಿ ಕೊಟ್ಟಿಲ್ಲ, ಮತ್ತು ಅವು ಇನ್ನೂ ವಾದ ಮಾಡುವುದರಲ್ಲೇ ಇವೆಯಷ್ಟೆ. ಇದು, ಆ ನಿಜವಾದ ಸತ್ತ ನಂತರದ ಆತ್ಮದ ರಹಸ್ಯವು ಇನ್ನೂ ಹೊರಬಂದಿಲ್ಲ ಎಂಬುವುದನ್ನೇ ತೋರಿಸುವುದು!

ನಾನು ಸೂಕ್ಷ್ಮದಲ್ಲಿ ಕಂಡ ಎಲ್ಲಾ ದೈವಿಕ ಹಾಗೂ ಹಲವು ತರದ ಋಣಾತ್ಮಕ ಅಸ್ತಿತ್ವಗಳು ಎಲ್ಲವೂ ಈ ಮಾನವನ ಮನಸ್ಸಿನಿಂದ ಮಾತ್ರ ತಯಾರಾಗಿರುವ ಅಥವಾ ಬಂದಿರುವ ಅಸ್ತಿತ್ವಗಳಾಗಿವೆ. ಅಲ್ಲಿ, ಸೃಷ್ಟಿಕರ್ತ ಎಂದು ಈ ದೇವತೆಗಳೇ ಹೇಳುವುದನ್ನೂ ನಾನು ಸ್ಪಷ್ಟವಾಗಿ ನೋಡಿದ್ದೇನೆ! ಸೃಷ್ಟಿಕರ್ತನು ಒಬ್ಬನೇ ಎಂದು ಹೇಳುತ್ತಾ, ಧರ್ಮಾಂಧತೆಯಿಂದ [ಆ ಒಬ್ಬನೇ] ಸೃಷ್ಟಿಕರ್ತನ ಈ ಭೂಮಿಯ ಮಕ್ಕಳು, ಹಿಂಸೆ, ರಕ್ತಪಾತವನ್ನು ಮಾಡುತ್ತಾ ಬಂದಿರುವುದಕ್ಕೆ ಇರುವ ಕಾರಣವು ಇದುವರೆಗೂ ಸಿಗದಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಮಾತ್ರವಲ್ಲ, ಸೃಷ್ಟಿಕರ್ತನು ಒಂದೇ ರೀತಿಯಲ್ಲಿ ಎಲ್ಲಾ ಕಡೆ ಹೇಳದೆ, ಹಲವು ಕಡೆಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ನಂಬಿಕೆ, ಆಚಾರ, ವಿಚಾರಗಳು ಹೇಳಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಎಲ್ಲರಿಗೂ ತಂದೆಯಾಗಿರುವ ಒಬ್ಬ ಸೃಷ್ಟಿಕರ್ತ ಹೀಗೆ ಮಾಡಲಾರ. ಹಾಗಿರುವಾಗ, ಬೇರೆ ಬೇರೆ ಕಡೆಗಳಲ್ಲಿ ಕಾಣಿಸಿಕೊಂಡಿರುವ ಸೃಷ್ಟಿಕರ್ತರು ಒಂದೇ ಆಗಿರದೆ, ಬರೇ ಸೃಷ್ಟಿಕರ್ತ ಎಂದು ತಮ್ಮನ್ನು ತಾವೇ ಹೇಳಿಕೊಳ್ಳುವ, ಮಾನವನ ಮನೋಶಕ್ತಿಯ, ಆ ಬೇರೆ ಬೇರೆ ದೇವತೆಗಳು ಮಾತ್ರವಾಗಿವೆ ಎಂಬುವುದು ಸ್ಪಷ್ಟವಾಗುವುದು. ಈ ರೀತಿ, ಸೂಕ್ಷ್ಮದಲ್ಲಿ ಎಲ್ಲವೂ ಮಾನವನ ಮನಸ್ಸಿನ ಉತ್ಪನ್ನಗಳೇ ಆಗಿರಲು, ಅವನ್ನೆಲ್ಲಾ ಮನೋ ವಿಜ್ಞಾನಕ್ಕೆ ಸೇರಿಸದೆ ಇನ್ನೇನು ಮಾಡಲಿ?

ಮನೋಶಕ್ತಿಯ ಬಗ್ಗೆ ವಿವರಿಸಿ ಹೇಳುವ ಮನೋ ವಿಜ್ಞಾನವು ಒಂದು ಮುಖ್ಯವಾದುದನ್ನು ಮುಂದೆ ಕಂಡು ಹಿಡಿಯಬೇಕಾಗಿದೆ. ಮನಸ್ಸಿನ ವ್ಯಕ್ತಿತ್ವವನ್ನು ಪ್ರತ್ಯೇಕಿಸಿ ಅವನ್ನು ಉಪಯೋಗಿಸಬಹುದೆಂಬ ವಿಜ್ಞಾನವೇ ಅದಾಗಿದೆ. ಈ ವಿಜ್ಞಾನವನ್ನು ಹಲವು ವಿಧಾನಗಳಲ್ಲಿ ವಿವರಿಸುವುದನ್ನು ನಾವು ದೇವಾಚಾರದಲ್ಲೂ, ವಾಮಾಚಾರದಲ್ಲೂ ಕಾಣುವೆವು. ಜಗತ್ತಿನಲ್ಲಿ ಎಲ್ಲೆಡೆಯೂ ಇವು ಬೇರೆ ಬೇರೆ ರೀತಿಗಳಿಂದ ನಡೆಯುತ್ತಾ ಬಂದಿವೆ. ಆತ್ಮ,, ದೆವ್ವಗಳೆಂದರೆ ಜೀವಂತವಾಗಿರುವಾಗ ಮತ್ತು ಸತ್ತ ನಂತರದ ಮಾನವನ ವ್ಯಕ್ತಿತ್ವವಾಗಿವೆ ಎಂದು ಸಾಮಾನ್ಯವಾಗಿ ಹೇಳಲ್ಪಡುವುದು.

ಇನ್ನು, ಆ ಪ್ರಾಚೀನ ವಾಮಾಚಾರದಲ್ಲಿ, ಈ ಆತ್ಮ, ದೆವ್ವಗಳು, ಆ ಸಾಂಪ್ರದಾಯಿಕವಾಗಿ ಅವುಗಳ ಅಸ್ತಿತ್ವದ ಬಗ್ಗೆ ಇತರ ಕಡೆ ಕೊಟ್ಟಿರುವ ವಿವರಣೆಗಳಿಗಿಂತ ಹೇಗೆ ನಿಜ ಸ್ಥಿತಿಯಲ್ಲಿ ತುಂಬಾ ಭಿನ್ನವಾಗಿವೆ ಎಂಬುವುದನ್ನು ನೋಡೋಣ.

ನಾವು ಮೊದಲು ತಿಳಿದಂತೆ ಜೀವಂತ ಮಾನವನ ಆತ್ಮಗಳು ಬರೇ ‘ಒಂದು’ ವ್ಯಕ್ತಿತ್ವವನ್ನು ಮಾತ್ರ ಹೊಂದಿರುವುದು ಅಲ್ಲ, ಬದಲು ಅವು ಹುಟ್ಟಿನಲ್ಲೇ ಹಲವು ವ್ಯಕ್ತಿತ್ವವನ್ನು ಹೊಂದಿರುವ ಹಲವು ವ್ಯಕ್ತಿತ್ವಗಳ ಒಂದು ಪುಂಜವಾಗಿದೆ! ಈ ಪುಂಜದಲ್ಲಿ ಸತ್ತ ತನ್ನದೇ ಮನೆಯ ಹಿರಿಯರ ವ್ಯಕ್ತಿತ್ವವು ಇರಬಹುದು ಅದೇ ರೀತಿ, ಇತರ ಕಡೆಯ ಜನರ ವ್ಯಕ್ತಿತ್ವವೂ ಇರಬಹುದು. ಅಂದರೆ, ಬಾಹ್ಯದಲ್ಲಿ ಎಲ್ಲರಿಗೂ ಒಂದು ವ್ಯಕ್ತಿತ್ವವೇ ಇರುವಂತೆ ಕಾಣಿಸಿದರೂ ಎಲ್ಲರ ಒಳಗೆ ಹಲವು ವ್ಯಕ್ತಿತ್ವಗಳ ಒಂದು ಪುಂಜವೇ ಇದೆ ಎಂದು ಅರ್ಥ. ದೆವ್ವ ಮೈಮೇಲೆ ಬರುವುದೆಂದರೆ, ಅದು ಸಹಜವಾದ ಬಾಹ್ಯದ ವ್ಯಕ್ತಿತ್ವದ ಪ್ರಕಟವಾಗುವಿಕೆಯ ಸ್ಥಿತಿಯನ್ನು ಬಿಟ್ಟು, ಆ ಒಳಗಿನ ಪುಂಜದ ಒಂದು ವ್ಯಕ್ತಿತ್ವವು ನೇರವಾಗಿ ಹೊರಗೆ ಪ್ರಕಟವಾಗುವುದಾಗಿದೆ. ಈ ಪುಂಜದಿಂದಲ್ಲದೆ ಹೊರಗಿನ ಸೂಕ್ಷ್ಮದ ಬೇರೆ ಕಡೆಯ ಒಂದು ವ್ಯಕ್ತಿತ್ವಕ್ಕೂ ಪ್ರಕಟವಾಗಲು ಸಾಧ್ಯವಿದೆ. ಆದರೆ ಇಲ್ಲಿ ಒಂದು ನಿಯಮ ಅಂದರೆ, ಆ ಪ್ರಾಚೀನ ವಾಮಾಚಾರವು ಬಯಸದೆ ಈ ಕೆಲಸವು ಯಾವುದೂ ಆಗುವುದಿಲ್ಲ!! ಅವುಗಳಿಗೆ ಇಂಥ ಅಪರೂಪದ “ನೇರ” ಪ್ರಕಟವಾಗುವಿಕೆಯಿಂದ ಲಾಭವಿರುವ ಕಾರಣ ಅವುಗಳು ಅವನ್ನು ಬಹಳ ಅಪರೂಪವಾಗಿ ಮಾಡುವವು. ಈ ರೀತಿ ಅಪರೂಪಕ್ಕಲ್ಲದೆ, ಎಲ್ಲರಲ್ಲೂ ಅದನ್ನು ಅಗಾಗ್ಗ ಮಾಡಿದರೆ, ಎಲ್ಲರಿಗೂ ದೆವ್ವದ ಅಸ್ತಿತ್ವವು ಸ್ಪಷ್ಟವಾಗಿ ತಿಳಿದು, ಎಲ್ಲರೂ ಸತ್ಯಸಂಧವಾಗಿಯೇ ದೇವರ ಕಡೆಗೆ ತಿರುಗುವ ಸಾಧ್ಯತೆಯನ್ನು ಆ ಪ್ರಾಚೀನ ವಾಮಾಚಾರವು ಅರಿತಿದೆ, ಮತ್ತು ಅದು ಅದಕ್ಕೆ ಬೇಕಾಗಿಲ್ಲ! ಈ ಭೂಮಿಯಲ್ಲಿ ಇದುವರೆಗೂ ದೆವ್ವ ಇದೆಯೋ ಇಲ್ಲವೋ ಎಂದು ಸ್ಪಷ್ಟವಾಗದ ಸ್ಥಿತಿಯೇ ಈಗಲೂ [ದೇವರ ಅಸ್ತಿತ್ವದ ತರವೇ] ಮುಂದುವರಿಯುತ್ತಿರುವುದೂ ಈ ಪ್ರಾಚೀನ ವಾಮಾಚಾರದ ಆ ಅದ್ಭುತ ನಿಯಂತ್ರಣ ಕಲೆ ಅಥವಾ ಸಾಮರ್ಥ್ಯದಿಂದ ಮಾತ್ರವಾಗಿದೆ. ಸತ್ಯವೆಂದು ಸರಿಯಾಗಿ ಗೊತ್ತಾದಲ್ಲಿ ಎಲ್ಲರೂ ಉತ್ತಮರಾಗಿಬಿಡುವ ಸಾಧ್ಯತೆ ಇರುವ ಕಾರಣ ಅದು ಎಲ್ಲವನ್ನೂ ಗೊಂದಲದಲ್ಲೇ [ಸಂಶಯದಲ್ಲಿ] ಇರಿಸಿಕೊಂಡು ಬರುವ ರೀತಿಯನ್ನು ಹಿಂದಿನಿಂದಲೇ ಅನುಸರಿಸುತ್ತಿರುವುದು.

ಇಲ್ಲಿ ಒಂದು ವಿಚಾರವನ್ನೂ ಹೇಳಿ ಮುಗಿಸುವೆನು. ಈ ಪ್ರಾಚೀನ ವಾಮಾಚಾರವು ಒಬ್ಬನಿಂದಲೇ ಸಾವಿರಾರು ಆತನ ಆಂಶಿಕ ವ್ಯಕ್ತಿತ್ವದ ದೆವ್ವವನ್ನು ಆತನು ಜೀವಂತವಾಗಿರುವಾಗಲೇ ತಯಾರಿಸುತ್ತಾ ಹೋಗುವವು. ಈ ಎಲ್ಲಾ ತಯಾರು ಮಾಡಲ್ಪಟ್ಟ ದೆವ್ವಗಳು ಅದೇ ವ್ಯಕ್ತಿಯ ಮತ್ತು ಆತನದೇ ಕುಟುಂಬದ ಶತ್ರುವಾಗಿ ಮಾತ್ರ ತಯಾರಿಸಲ್ಪಡುವವು!! ಅಂದರೆ, ಒಬ್ಬನ ದೆವ್ವವು ಆತನಿಗೇ ಮೊದಲ ಶತ್ರುವಾಗುವುದು, ಮತ್ತು ಆತನ ಕುಟುಂಬದ ಸದಸ್ಯರಿಗೂ ಶತ್ರುವಾಗುವ ತರದಲ್ಲೇ ತಯಾರಿಸಲ್ಪಡುವುದು ಎಂದು ಅರ್ಥ. ಇದೇ ಕಾರಣದಿಂದಾಗಿ ಮಾತ್ರ ಈ ಭೂಮಿಯಲ್ಲಿ ಜೀವಿಸಿರುವಾಗ ಅತ್ಯಂತ ಪ್ರೀತಿ ಕೊಟ್ಟ ತಂದೆ, ತಾಯಂದಿರು ಕೂಡಾ ಸತ್ತ ನಂತರ “ಪಿತೃ ದೋಷ” ದ ಪ್ರೇತವಾಗಿ ಕಾಣಿಸುವುದು ಮತ್ತು ಮಕ್ಕಳನ್ನು ಕಾಡುವುದು ಎಂಬುವುದನ್ನು ಇಲ್ಲಿ ನೆನೆಯಬೇಕು. ಈ ಪ್ರಾಚೀನ ವಾಮಾಚಾರವು, ಜಗತ್ತಿನಲ್ಲಿ ಎಲ್ಲ ಧರ್ಮ, ಪಂಥದವರಿಗೂ ಒಂದೇ ರೀತಿಯಲ್ಲಿ ಅನ್ವಯವಾಗುವ ರೀತಿಯಲ್ಲೇ ತನ್ನ ವ್ಯವಸ್ಥೆಯನ್ನು ತಯಾರು ಮಾಡಿರುವುದು. ಪ್ರಾಚೀನ ವಾಮಾಚಾರಕ್ಕೆ, ಕೆಲವು ಕಡೆಗಳಲ್ಲಿ, ಅವುಗಳು ‘ಪಿತೃ ದೋಷ’ ದ ತರ ಕಾಡಬೇಕು ಎಂದಿದ್ದರೆ, ಅವು ಪ್ರಕಟವಾಗಿ ತಮ್ಮ ಮಕ್ಕಳನ್ನು ಕಾಡುವವು!! ಹಾಗಿಲ್ಲದ ಕಡೆಗಳಲ್ಲಿ, ಅವುಗಳಿಗೆ ಸೂಕ್ಷ್ಮದಲ್ಲಿ ಇತರ ಕೆಲಸ ಕೊಡಲ್ಪಡುವುದು.

ಇನ್ನು, ಒಬ್ಬನು ಸತ್ತ ನಂತರ, ಆತನು ಜೀವಂತವಾಗಿರುವಾಗ ತಯಾರು ಮಾಡಲ್ಪಟ್ಟ ಆತನದ್ದೇ ಈ ಸಾವಿರಾರು ದೆವ್ವಗಳಲ್ಲಿ ಎಷ್ಟು ದೆವ್ವಕ್ಕೆ ನೀವು ಮೋಕ್ಷವನ್ನು ಉಂಟುಮಾಡುತ್ತೀರಿ? ಎಲ್ಲರಿಗೂ ಗೊತ್ತಿರುವುದು ಸಾಯುವಾಗ ಒಂದು ಆತ್ಮ ಹೊರಗೆ ಹೋಗುವುದು ಎಂದಾಗಿದೆ. ಅದರ ಮೊದಲೇ ಹೊರಗೆ ನಡೆದಿರುವ [ಪ್ರತ್ಯೇಕಿಸಲ್ಪಟ್ಟ] ಸಾವಿರಾರು ಆತನದೇ ದೆವ್ವ ವ್ಯಕ್ತಿಗಳು ಅಲ್ಲಿರುವಾಗ, ಮೋಕ್ಷದ ಅರ್ಥವೇ ಇಲ್ಲವಾಗಿಬಿಡುವುದು! ಒಟ್ಟಿನಲ್ಲಿ, ಈ ಜಗತ್ತಿನ ಸಾವಿರಾರು ಬೇರೆ ಬೇರೆ ಮೋಕ್ಷ ಶಾಸ್ತ್ರಗಳು ಬರೇ ಮಾನವನ ವಿಭಜನೆಗೆ ಮಾತ್ರ ಪರೋಕ್ಷವಾಗಿ ಬಳಸಲ್ಪಟ್ಟವು ಅಷ್ಟೆ!!

ಇನ್ನು, ಒಬ್ಬನು ಕೊಲೆಯಾಗಲ್ಪಟ್ಟ ನಂತರ, ಆ ಕೊಲೆಯಾದವನ ಆತ್ಮವು ಕೊಲೆ ಮಾಡಿದವನ ಮೇಲೆ ಹಗೆತನವನ್ನು ಇಟ್ಟು ಆತನನ್ನು ಕೊಲ್ಲುವ ಬದಲು, ಯಾಕೆ ತಮ್ಮ ಮನೆಯವರಿಗೇ ಬಂದು ತೊಂದರೆ ಕೊಡುತ್ತದೆ ಎಂಬುವುದಕ್ಕೂ, ಆ ಪ್ರಾಚೀನ ವಾಮಾಚಾರದ, ಅವುಗಳ ತಯಾರಿಯ ರೀತಿಯಾದ “ತನಗೆ ತಾನು ಶತ್ರು, ಮತ್ತು ತಮಗೆ ತಾವೇ ಶತ್ರು” ಎಂಬ “ರೀತಿಯೇ” ಕಾರಣವಾಗಿದೆ ಎಂಬುವುದನ್ನೂ ತಿಳಿಸುವೆನು.

ಇಲ್ಲಿ, ನಾನು ಮನೋಶಾಸ್ತ್ರದವರ ಅಥವಾ ಸಾಂಪ್ರದಾಯಿಕ ಶಾಸ್ತ್ರದವರ ಪರ ಅಥವಾ ವಿರೋಧವಾಗಿ ಮಾತನಾಡಿದ್ದು ಅಲ್ಲ, ಬದಲು ನಾನು ನೋಡಿದ್ದನ್ನು ತರ್ಕ ಬದ್ಧವಾಗಿ ನಿಮ್ಮ ಮುಂದೆ ಇಡುವ ಪ್ರಯತ್ನವನ್ನು ಮಾಡಿರುವುದು ಮಾತ್ರವಾಗಿದೆ ಎಂದು ತಿಳಿಯಬೇಕು.

ಸತ್ಯಚಿಂತನೆಯಿಂದ ಈ ಜಗತ್ತು ಶಾಂತಿಯನ್ನು ಪಡೆಯಬಹುದು ಎಂಬುವುದಕ್ಕೆ ಇನ್ನೂ ಹೆಚ್ಚಿನ ವಿವರಣೆಯನ್ನು ಕೊಡಬಹುದೇ?  

ಉತ್ತರ- ನಂಬಿಕೆಯು ಚಿಂತನೆಯನ್ನೇ ತಡೆ ಹಿಡಿಯಿತು! ಅವನ್ನು ಬಿಟ್ಟು, ಇನ್ನು ನಾವು ತತ್ವ ಶಾಸ್ತ್ರ, ದರ್ಶನ ಶಾಸ್ತ್ರ, ಮತ್ತು ಇತರ ಧಾರ್ಮಿಕ ಶಾಸ್ತ್ರಗಳನ್ನು ನೋಡಿದರೆ, ಅವುಗಳು ತಮ್ಮ ದೃಷ್ಟಿಕೋನಗಳನ್ನು ಮಾತ್ರ ಹೇಳಿದವು, ಹಾಗಾಗಿ ಅವುಗಳು ಅಯಾ ದೃಷ್ಟಿಕೋನಗಳನ್ನು “ತಮ್ಮ ಪರ” ಚಿಂತನೆಯ ಮೂಲಕ ಸಾಧಿಸುವ ಮಂಡನೆ, ಖಂಡನೆಗಳನ್ನು ಮಾಡುತ್ತಾ ಬಂದವು!! ಇವುಗಳು ಇಂದಿಗೂ ಒಮ್ಮತವಾಗಲೂ ಇಲ್ಲ, ಮುಂದೆ ಆಗುವುದೂ ಇಲ್ಲ. ಆ ರೀತಿಯಲ್ಲಿ ಇವುಗಳೆಲ್ಲವೂ ನಂಬಿಕೆ ತರವೇ ಆದವು!!

ನಾನು ನಿಮಗೆ ನಂಬಿಕೆಯನ್ನು ಮತ್ತು ದೃಷ್ಟಿಕೋನಗಳನ್ನು ಕೊಟ್ಟಿಲ್ಲ ಎಂಬುವುದನ್ನು ಪ್ರತ್ಯೇಕವಾಗಿ ತಿಳಿಯಬೇಕು. ಯಾಕೆಂದರೆ ಅವುಗಳಿಗೆ ಆ ಸಾರ್ವತ್ರಿಕ ಸತ್ಯವನ್ನು ಕಂಡುಕೊಳ್ಳುವ ಶಕ್ತಿ ಇಲ್ಲ.  ಈ ನಂಬಿಕೆಗಳು ಮತ್ತು ದೃಷ್ಟಿಕೋನಗಳು ಕಲ್ಪಾಂತ್ಯದವರೆಗೂ ಇದೇ ರೀತಿ “ನಮ್ಮದೇ ಸರಿ” ಎಂದು ಹೇಳಿದ್ದನ್ನೇ ಹೇಳುತ್ತಾ ಇರುವವು!! ಸತ್ಯವನ್ನು ನಮ್ಮ ಅಭಿರುಚಿಯ ದೃಷ್ಟಿಕೋನದಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ. ಸತ್ಯಕ್ಕಾಗಿ ನಾವು ಮುಕ್ತ ಸತ್ಯಚಿಂತನೆಯನ್ನು ಮಾಡಬೇಕಾಗಿದೆ. ಅದಕ್ಕೆ ನಾವು,  ಮೊದಲು ಮಾಡಬೇಕಾದುದು ನಮ್ಮ ಸುತ್ತ, ಹಾಕಿರುವ ಆ “ನಮ್ಮ ಧರ್ಮ”, “ನಮ್ಮ ಪಂಥ”, “ನಮ್ಮ ಮತ”  “ನಮ್ಮ ಗುರು ಪರಂಪರೆ” ಇತ್ಯಾದಿ ಬಂಧನಗಳಿಂದ ಪಾರಾಗಿ, ಆ ಸತ್ಯ, ಧರ್ಮ, ದೇವರು ಎಂದು ಮುಕ್ತವಾಗಿ ಚಿಂತಿಸಲು ಆರಂಭಿಸುವುದಾಗಿದೆ. ಇದರ ಅರ್ಥ ಅವರವರ ದೇವರು, ಧರ್ಮ, ಗುರುಗಳನ್ನು ಬಿಡಬೇಕೆಂದು “ಅಲ್ಲ” ಎಂಬುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಅಂದರೆ, “ನಮ್ಮದು ಮಾತ್ರವೇ ಸರಿ” ಯೆಂಬ ಭ್ರಮೆಯ ಬಂಧನದಿಂದ ಪಾರಾಗಬೇಕಾಗಿದೆ ಎಂದು ಅರ್ಥ. ಸತ್ಯವನ್ನು ಯಾವ ದೇವರು ಅಥವಾ ಗುರುಗಳು ಹೇಳಿದರೂ ಅವೆಲ್ಲ ಸತ್ಯವೇ ಆಗುವುದು, ಮತ್ತು  ಅಸತ್ಯವನ್ನು ಯಾವ ದೇವರು ಅಥವಾ ಗುರುಗಳು ಹೇಳಿದರೂ ಅವು ಅಸತ್ಯವೇ ಆಗುವುದು ಎಂಬ ನಿಲುವು ನಮಗೆ ಅಗತ್ಯವಾಗಿಯೂ ಬೇಕಾಗುವುದು. ಇನ್ನು, “ನಮ್ಮ ದೇವರು” ಮತ್ತು “ನಮ್ಮ ಗುರುಗಳು ಅಥವಾ ಪ್ರವಾದಿಗಳು” ಎಂಬ ಆ ಭಾವನಾತ್ಮಕ ನಂಟು ಮತ್ತು ಅಂಟುಗಳು ಮಾತ್ರದಿಂದ ನಮಗೆ ಆ ನಿತ್ಯ ಸತ್ಯವು ದೊರಕಬೇಕೆಂದಿಲ್ಲ!! ವಿಜ್ಞಾನವು, ಈ “ನಾವು” ಎಂಬ ಭಾವನಾತ್ಮಕ ನಂಟು, ಅಂಟುಗಳ ಆ ಬಂಧನದಿಂದ ಬಿಡುಗಡೆ ಹೊಂದಿದ ಆ ಸತ್ಯಾನ್ವೇಷಣೆಯ ಮುಕ್ತ ರೀತಿಗೆ ಒಂದು ಉದಾಹರಣೆಯಾಗಿದೆ.

ಜನಸಾಮಾನ್ಯರಿಗೆ ಜಗತ್ತಲ್ಲಿ ಇದುವರೆಗೂ ನಂಬಿಕೆಗಳನ್ನು ಅಥವಾ ಕೆಲವು ನಿರ್ಧಿಷ್ಠ ಚಿಂತನೆಗಳನ್ನು ಪಠಣಕ್ಕಾಗಿ ಕೊಟ್ಟಿರುವರು ಹೊರತು, ಸಾರ್ವತ್ರಿಕವಾಗಿ, ಜನಸಾಮಾನ್ಯರಿಗೆಲ್ಲ ಆ ಮುಕ್ತವಾದ ಸತ್ಯಚಿಂತನೆಯನ್ನು “ನಿತ್ಯ” ಧಾರ್ಮಿಕ ಅನುಷ್ಠಾನ, ನಿಷ್ಠೆಗಳಾಗಿ ಯಾರೂ ಕೊಟ್ಟಿಲ್ಲ ಎಂಬುವುದು ಶೋಚನೀಯವಾಗಿದೆ! ಅಂದರೆ, “ಚಿಂತಿಸಲು ಮರದಡಿಯ ಆಧ್ಯಾತ್ಮಿಕ ವ್ಯಕ್ತಿ, ಮತ್ತು ಅದನ್ನು ಒಪ್ಪಿಕೊಳ್ಳಲು ಮತ್ತು ಅವನ್ನೇ ಸರಿ ಎಂದು ವಾದ ಮಾಡಲು ಮಾತ್ರ ಸಾಮಾನ್ಯ ಜನರು” ಎಂಬ ರೀತಿಯಲ್ಲೇ ಬಂದಿರುವುದು. ಅಂದರೆ, ಜನಸಾಮಾನ್ಯರಿಗೆ ನಿತ್ಯಾನುಷ್ಠಾನವಾಗಿ ಸತ್ಯಚಿಂತನೆಯು ಇರಲಿಲ್ಲ ಎಂದು ಅರ್ಥ! ಅದನ್ನು ಹಿಂದೆಯೇ ಜನ ಸಾಮಾನ್ಯರಿಗೆ ಕೊಟ್ಟಿರುತ್ತಿದ್ದರೆ, ಇಂದು ಈ ಜಗತ್ತು ಅದ್ಭುತವಾದ ಶಾಂತಿಯ ಮತ್ತು ಆನಂದದ ಸ್ವರ್ಗವೇ ಆಗುತ್ತಿತ್ತು! ಅಂದರೆ, ಪ್ರಾಚೀನ ಕಾಲದಲ್ಲೇ, “ವರ್ಣಗಳು ಎಂಬ ಧರ್ಮವನ್ನು ಪಾಲಿಸಲೇಬೇಕು” ಎಂದು ಜನಸಾಮಾನ್ಯರಿಗೆ ತಿಳಿಸಿದಾಗ, ಜನಸಾಮಾನ್ಯರು ತಮ್ಮ ಚಿಂತನೆಯಿಂದ “ಅದರ ಅಗತ್ಯವೇನು?“ ಎಂಬ ಪ್ರಶ್ನೆಯನ್ನು ಹಾಕಿ ಆಳದಲ್ಲಿ ಚಿಂತಿಸಿ ಅದು ಅನಗತ್ಯ ಮತ್ತು ಅಪಾಯಕಾರಿ ಎಂದು ಉತ್ತರವನ್ನು ಹೇಳಿ ಆ ಪೊಳ್ಳು, ಸ್ವಾರ್ಥ, ವಾದಗಳನ್ನು ಅಂದೇ ಅಲ್ಲೇ ಬಿಟ್ಟು ಬಿಡುತ್ತಿದ್ದರು!! ಸ್ಪಷ್ಟ ಅಧರ್ಮವೇ ಆದ ಆ ಮೇಲು ಜಾತಿ ಭಾವನೆ ಮತ್ತು ಆ ಹಿನ್ನೆಲೆಯ ಸಹಸ್ರಾರು ವರುಷಗಳ ಶೋಷಣೆ ಎಂಬುವುದೇ ಸೃಷ್ಟಿಯಾಗುತ್ತಿರಲಿಲ್ಲ!!! ಹಾಗಿದ್ದರೆ, ಯಾವುದು ಈ ಭೀಕರ ಅಧರ್ಮವನ್ನು ಹೊತ್ತುಕೊಂಡು ಇದುವರೆಗೂ ಬಂದಿರುವುದು? ಅದು ಹೇರಲ್ಪಟ್ಟ ಆ ನಂಬಿಕೆಗಳೆಂದು ಸ್ಪಷ್ಟವಾಗುವುದು!!! 

ಪವಿತ್ರ ಸತ್ಯಚಿಂತನೆಯ ಪರಿಣಾಮವಾಗಿ ಎಲ್ಲರೂ ಅದ್ಭುತ ಜ್ಞಾನಿಗಳು ಆಗಿರುವಾಗ, ತಾವು ಮಾತ್ರ ಮೇಲೆ ಎಂದು ವಾದ ಮಾಡಿ ನಂಬಿಸಲು ಯಾರಿಗೂ ಸ್ವಲ್ಪವೂ ಸ್ಥಳಸಿಗುತ್ತಿರಲಿಲ್ಲ! ಇತರರಿಗಿಂತ ತಾವು ಶ್ರೀಮಂತರು ಎಂದು ಹೇಳಬೇಕಾದರೆ, ನಮ್ಮಲ್ಲಿ ಇತರರಿಗಿಂತ ಹೆಚ್ಚು ಹಣವಿರುವುದಕ್ಕೆ ಸಾಕ್ಷ್ಯಾಧಾರಗಳು ಬೇಕು. ಹಿಂದೆ, ಜ್ಞಾನವು ಆ ಸತ್ಯಚಿಂತನೆಯಿಂದಾಗಿ ಎಲ್ಲರಲ್ಲೂ ತುಂಬಿರುತ್ತಿದ್ದರೆ, ಯಾರಿಗೂ ತಾವು ಮೇಲಿನ ವರ್ಣ ಅಥವಾ ಮೇಲು ಜಾತಿ ಎಂದು ಹೇಳಲು ಮತ್ತು ಶೋಷಿಸಲು ಅವಕಾಶವೇ ಉಂಟಾಗುತ್ತಿರಲಿಲ್ಲ. ಮಾತ್ರವಲ್ಲ, ಶೋಷಣೆ, ಹಿಂಸೆ, ರಕ್ತಪಾತಗಳು ಖಂಡಿತವಾಗಿಯೂ ಉಂಟಾಗುತ್ತಿರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳದೆಯೇ ನಮಗೆ ತಿಳಿಯುವುದು. 

ಒಟ್ಟಿನಲ್ಲಿ ಹೇಳುವುದಾದರೆ, ನಾನು ಹೇಳುತ್ತಿರುವುದು, ಮೇಲೆ ವಿವರಿಸಿರುವ ರೀತಿಯಲ್ಲಿ, ಜಗತ್ತಿನ ಜನರಿಗೆಲ್ಲ ಒಂದೇ ರೀತಿಯಲ್ಲಿ ಅನ್ವಯವಾಗುವ ಆ ಸತ್ಯಚಿಂತನೆಯನ್ನು ಮಾತ್ರ ಎಂದು ತಿಳಿಯಬೇಕು. ಅಂದರೆ, ಜಗತ್ತಿನ ಸರ್ವರೂ ಸತ್ಯದ ಹಿನ್ನೆಲೆಯಲ್ಲಿ ಚಿಂತಿಸಿ ಸತ್ಯವನ್ನು ಕಂಡುಕೊಳ್ಳಲಿ ಎಂದು ಆಗಿದೆ. ಸತ್ಯವಾಗಿದ್ದರೆ ಅದು ಹಿಂದಿನದಾದರೂ ಅಥವಾ ಇಂದಿನದಾದರೂ ಸತ್ಯವೇ ಆಗುವುದು. ಆದರೆ ಒಂದೇ ಒಂದು ಮತ್ತು ಅತ್ಯಂತ ದೊಡ್ಡ ನಿಬಂಧನೆ ಎಂದರೆ ಸತ್ಯಚಿಂತನೆಗಳು ಎಂದಿಗೂ ಒಬ್ಬೊಬ್ಬರ ದೃಷ್ಟಿಕೋನವಾಗಿರಬಾರದು ಮತ್ತು ಅವುಗಳು ಎಂದಿಗೂ ಮುಕ್ತವಾದ ಆ ಸಾರ್ವತ್ರಿಕ ಸತ್ಯದ ಹಿನ್ನೆಲೆಯಲ್ಲಿ ಮಾತ್ರ ಇರಬೇಕು ಎಂದು ಮಾತ್ರವಾಗಿದೆ.   

ಸತ್ಯಚಿಂತನೆಯನ್ನು ನೀವು ‘ಕ್ರಿಯಾ ದೇವರು’ ಎಂದು ಹೇಳಲು ಕಾರಣವೇನು?

ಉತ್ತರ- ನಾನು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯನ್ನು “ಮೂಲ ದೇವರು” ಎಂದಿರುವೆನು. ಸತ್ಯಚಿಂತನೆಯು ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯ ಕ್ರಿಯಾರೂಪವಾಗಿದೆ. ನಾವು ಈ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂಬ ದೇವರನ್ನೇ ಆಧಾರವಾಗಿಟ್ಟು ಸತ್ಯಚಿಂತನೆ ನಡೆಸುತ್ತೇವೆ. ಆ ಹಿನ್ನೆಲೆಯಲ್ಲಿಯೇ ನಾನು ಸತ್ಯಚಿಂತನೆಯನ್ನು ‘ಕ್ರಿಯೆಯಲ್ಲಿರುವ ದೇವರು’ ಅಥವಾ “ಕ್ರಿಯಾ ದೇವರು” ಎಂದಿರುವುದು. ಇನ್ನು, ನಾವು ಸಾಹಿತ್ಯದ ಸಹಾಯದಿಂದ ಹೇಳುವುದಾದರೆ ಸತ್ಯ ಚಿಂತನೆಯು ಆ “ಮೂಲ ದೇವರ” ಪೂಜೆ ಎನ್ನಬಹುದು. ಯಾಕೆಂದರೆ, ಆ ಪವಿತ್ರ ಸತ್ಯಚಿಂತನಾ ವೇಳೆಯಲ್ಲಿ, ದೇವಾಂಶಗಳಾದ, ಆ ಪವಿತ್ರ ಸ್ವಭಾವಗಳು ಮಾನವ ಹೃದಯಗಳಲ್ಲಿ ಸೃಷ್ಟಿಸಲ್ಪಡುವುದು. ಇದು ಇತರ ಯಾಂತ್ರಿಕವಾಗಿ ಮಾಡುವ ಯಾವುದೇ ದೇವರ ಪೂಜೆಯು ಕೊಡುವುದಕ್ಕಿಂತಲೂ, ಸ್ವಭಾವ ಶುದ್ದಿಯ ಅನುಗ್ರಹವನ್ನು, ಹೆಚ್ಚು ಮತ್ತು ದೇವರಲ್ಲಿ  ಬೇಡದೆಯೇ ಕೊಡುವುದು!! ಇನ್ನು, ಈ ಸತ್ಯಚಿಂತನೆಯು ಯಾವುದೇ ಧರ್ಮ, ಪಂಥಗಳಲ್ಲಿ ಹೇಳಲ್ಪಟ್ಟ ಕೆಲವು ನಿಯಮಗಳೋ ಅಥವಾ ಲೆಕ್ಕ ಮಾಡಿ ಹೇಳಿರುವ ಕೆಲವು ಪ್ರತ್ಯೇಕ ಸತ್ಯದ ದೃಷ್ಟಿಕೋನದ ಅಂಶಗಳನ್ನು ಮೆಲುಕು ಹಾಕುವುದಲ್ಲ, ಬದಲು ಈ ಸತ್ಯಚಿಂತನೆಯು ಯಾವ ದೃಷ್ಟಿಕೋನವನ್ನು ಅವಲಂಭಿಸದೆ, ಮತ್ತು ಯಾವ ಪ್ರತ್ಯೇಕ  ಧರ್ಮ ಗ್ರಂಥಗಳನ್ನು ಮಾತ್ರ ಆಶ್ರಯಿಸದೆ, ಮಾಡುವ ಆ ಸತ್ಯದ ಹಿನ್ನೆಲೆಯ ಚಿಂತನೆಯಾಗಿದೆ. ಆದಕ್ಕಾಗಿಯೇ, ಈ ಕ್ರಿಯಾ ದೇವರನ್ನು ಎಂದೂ ಒಂದು ಹರಕೆ ಅಥವಾ ಆಚಾರದ ತರ ಮಾಡಬೇಡಿ ಎಂದಿರುವುದು. ಅದೇ ರೀತಿಯಲ್ಲಿ, ಈ ಮೂಲ ದೇವರಿಂದ ಅಥವಾ ಈ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೈತಿಕತೆಗಳಿಂದ ಎಂದಿಗೂ ಜಾತೀ ಶೋಷಣೆ ಮತ್ತು ಧರ್ಮಾಂಧತೆ ಇತ್ಯಾದಿಗಳು ಸೃಷ್ಟಿಯಾಗಲಾರವು ಎಂಬುವುದು ಖಂಡಿತ, ಮತ್ತು ಅವು ಅವುಗಳನ್ನು ಸಹಜವಾಗಿ ಮತ್ತು ಶಾಂತವಾಗಿ ತಡೆಯುವಲ್ಲಿ ಮಾತ್ರ ಸಹಾಯ ಮಾಡುವ ಕಾರಣ, ಸತ್ಯಚಿಂತನೆ ಮಾಡಿಯೂ ಒಬ್ಬಾತನು ಉತ್ತಮನಾಗಿಲ್ಲ ಎಂಬ ಮಾತನ್ನು ಯಾರೂ ಹೇಳುವ ಹಾಗಿಲ್ಲ. ಇನ್ನು, ಉದಾಹರಣೆಯ ಸಹಾಯದಿಂದ ಹೇಳುವುದಾದರೆ, ಚಿನ್ನದ ಗಟ್ಟಿಗಳ ರಾಶಿಯೇ ಜನರ ಮುಂದೆ ಇಟ್ಟು ಎಲ್ಲರೂ ಅದರಿಂದ ಚಿನ್ನವನ್ನು ಮುಕ್ತವಾಗಿ ತೆಗೆದುಕೊಳ್ಳಲು ಹೇಳಿದ ನಂತರ, ಮತ್ತೆ ಯಾರು ಅದರಿಂದ ಎಷ್ಟನ್ನು ತೆಗೆದುಕೊಳ್ಳಲು ಮನಸ್ಸುಮಾಡುತ್ತಾರೆ ಎಂಬುವುದನ್ನು ಮಾತ್ರ  ಅದು ಆಶ್ರಯಿಸಿರುವುದು. ಅಂದರೆ, ಎಲ್ಲರಿಗೂ ಮುಕ್ತವಾಗಿರುವ ಆ ಸತ್ಯಚಿಂತನೆ ಎಂಬ ಕ್ರಿಯಾ ದೇವರನ್ನು ನೀವು ಎಷ್ಟು ಸ್ವೀಕರಿಸಲು ತಯಾರಾಗಿದ್ದೀರಿ ಎಂಬುವುದರ ಮೇಲೆ ವ್ಯಕ್ತಿಯ ಗುಣ ಮಟ್ಟವು ಮೇಲೇರುತ್ತಾ ಹೋಗಲು ಸಾಧ್ಯ ಎಂದು ಅರ್ಥ. ಈಗ, ಸತ್ಯಚಿಂತನೆಯಲ್ಲಿ ಭಾಗವಹಿಸಿಯೂ ಸ್ವಭಾವವು ಚೆನ್ನಾಗಿಲ್ಲ ಎಂದು ಹೇಳಿದಾಗ ಅದರ ಅರ್ಥವು ಸತ್ಯಚಿಂತನೆ ಮಾಡಿಯೂ ಸ್ವಭಾವವು ಚೆನ್ನಾಗಿಲ್ಲ ಎಂದು ಅಲ್ಲ, ಬದಲು ಸತ್ಯಚಿಂತನೆ ಎಂಬ ಆ ಕ್ರಿಯಾ ದೇವರಿಂದ ಜನರು ಆ ದೇವತ್ವವನ್ನು ಹೀರಿಕೊಳ್ಳಲು ತಯಾರಾಗಿಲ್ಲ ಎಂದು ಮಾತ್ರ ತಿಳಿಯಬೇಕು.

ಇದರಿಂದ ನಮಗೆ ಒಂದು ವಿಷಯವು ಸ್ಪಷ್ಟವಾಗುವುದು. ಸತ್ಯಚಿಂತನೆ ಮಾಡಿ ಮಹಾತ್ಮರಾದವರು  ಎಷ್ಟೋ ಮಂದಿ   ಇರುವಾಗ, ಸತ್ಯಚಿಂತನೆ ಮಾಡಿಯೂ ಒಬ್ಬಾತನು ಉತ್ತಮನಾಗಿಲ್ಲ ಎಂದು ಹೇಳುವುದೇ ಒಂದು ದೊಡ್ಡ ತಪ್ಪಾಗುವುದು! ಅದರ ಬದಲು ಆ ವಾಕ್ಯವನ್ನು ಬದಲಿಸಿ “ಸತ್ಯಚಿಂತನೆಯನ್ನು ಆತನು ಸರಿಯಾದ ರೀತಿಯಲ್ಲಿ ಮಾಡಿಲ್ಲ” ಎಂದು ಮಾತ್ರ ಹೇಳಬೇಕು. ಹೀಗೆ ಹೇಳುವುದಕ್ಕೆ ಇನ್ನೊಂದು ಬಲವಾದ ಕಾರಣವೂ ಇದೆ. ಅದು, ಸತ್ಯಚಿಂತನೆ ಮಾಡಿಯೂ ಒಬ್ಬಾತನು ಉತ್ತಮನಾಗಿಲ್ಲ ಎಂದು ಹೇಳುವಾಗ ಅಲ್ಲಿ ಆ ಪ್ರಾಚೀನ ವಾಮಾಚಾರವು ಆ ನಿಮ್ಮ ಮಾತನ್ನು “ಸತ್ಯಚಿಂತನೆ ಮಾಡಿದರೆ ಉತ್ತಮನಾಗುವುದಿಲ್ಲ” ಎಂಬ ಅರ್ಥಕ್ಕೆ ಕೊಂಡುಹೋಗಿ, ಆ ಸಂಕಲ್ಪದ ರಾಶಿಯನ್ನು ತಯಾರು ಮಾಡಿ ಅದನ್ನು ಸ್ವಲ್ಪ ಕಾಲದ ನಂತರದಲ್ಲಿ ನಿಮ್ಮ ಮೇಲೆ ಹಾಕುವುದು. ಆಗ ನೀವು ಸತ್ಯಚಿಂತನೆ ಮಾಡಿ ಸಿಕ್ಕುವ ಫಲವೂ ತನ್ನಿಂದ ತಾನಾಗಿ ಕಡಿಮೆಯಾಗಲು ಆರಂಭವಾಗುವುದು. ಜಾಗ್ರತೆ, ಜಾಗ್ರತೆ, ಆದುದರಿಂದ ಆ ರೀತಿ ಎಂದಿಗೂ ಹೇಳಿ ನಾಶವಾಗಬೇಡಿ. ಯಾಕೆಂದರೆ, ನಿಮ್ಮ ಜೀವನದ ಉಸಿರಾಗಿರುವ ಆ ಶಾಂತಿಯ ಮತ್ತು ಆನಂದದ ಜೀವನವನ್ನೇ ನೀವು ಈ ರೀತಿ ಹೇಳಿ ಕಳಕೊಳ್ಳುವಿರಿ.          

ನಿಜವಾಗಿಯೂ ನಮಗೆ ಕೋಪ ಬರುವಾಗ ಮತ್ತು ಅನಿಯಂತ್ರಿತ ಭಾವನೆಗಳಿಗೆ ನಾವು ಬಲಿಯಾಗುವಾಗ. ಅದಕ್ಕೆ ಅಲ್ಲಿ ಇನ್ನೊಬ್ಬರು ಕಾರಣವಾಗಿ ಇರುವುದಾದರೂ, ಅಲ್ಲಿಯೇ ನಾವು ಮಾಡಿರುವ ಸತ್ಯಚಿಂತನೆಯ ತೀವ್ರತೆಯ ಫಲಿತಾಂಶವೂ ಇರುವುದು! ಇದು ಸತ್ಯಚಿಂತನೆ ಮಾಡುವವರಿಗೆ ಶಾಲೆಯಲ್ಲಿ ಮಾಡುವ ಪರೀಕ್ಷೆಯ ತರದಲ್ಲಿ ತಮ್ಮನ್ನು ತಾವು ಅಳೆಯುವ ಪರೀಕ್ಷೆ ಮಾತ್ರವಾಗುವುದು. ಅದರಲ್ಲಿ ಸೋಲುವಾಗ, ನಿಜವಾಗಿಯು ಇತರರು ಅದಕ್ಕೆ ಕಾರಣವಾಗಿದ್ದರೂ ಸೋತದ್ದು ತಾವೇ ಎಂಬುವುದು ಸತ್ಯವಾಗುವುದು. ಅಂದರೆ, ಅಂಥಹ ಸಂದರ್ಭಗಳನ್ನು ನಿಜವಾಗಿಯೂ ನಾವು ನಮ್ಮನ್ನು ಪರೀಕ್ಷೆ ಮಾಡುವುದಕ್ಕಾಗಿ ಉಪಯೋಗಿಸಬಹುದು ಎಂದು ಅರ್ಥ. ಅದರ ನಂತರವೇ ಆ ತೊಂದರೆಗೆ ಕಾರಣವಾದ ವ್ಯಕ್ತಿಯನ್ನು ಸರಿ ಪಡಿಸುವ ಜವಾಬ್ಧಾರಿ ನಮಗೆ ಇರುವುದು ಎಂದು ಸತ್ಯಚಿಂತಕರು ತಿಳಿದುಕೊಂಡಿದ್ದರೆ, ಸತ್ಯಚಿಂತನೆಯು ನಮ್ಮನ್ನು ಬೇಗನೆ ಆ ವಿಶಾಲ ಮನಸ್ಕತೆಯ ನಿತ್ಯ ಆನಂದದಿಂದ ಜೀವಿಸುವ ಆ ಮಹಾತ್ಮನ ಹಂತಕ್ಕೆ ಎತ್ತುವುದು ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ.

ಬ್ರಹ್ಮ ಜ್ಞಾನ, ಯೋಗ, ಸೃಷ್ಟಿಕರ್ತ ದೇವರು, ಮತ್ತು ಮಹಾತ್ಮರ ಮಹಾಜೀವನ ಅಥವಾ ಸತ್ಯಜೀವನ ಇವುಗಳ ಸಾಮ್ಯತೆ ಮತ್ತು ಭಿನ್ನತೆಗಳನ್ನು ತಿಳಿಸಬಹುದೇ?

ಉತ್ತರ-  ಬ್ರಹ್ಮಜ್ಞಾನವು ಏಕವಾದ ಬ್ರಹ್ಮದ ಬಗ್ಗೆ ತಿಳಿಸುವುದು ಮತ್ತು ಅರಿಯಲು ಹೇಳುವುದು. ಅದು ಆ ಏಕತೆಯನ್ನು ಬ್ರಹ್ಮಾಂಢದ ಆ ಸೂಕ್ಷ್ಮಾತಿ ಸೂಕ್ಷ್ಮ ಮೂಲ ಅಸ್ತಿತ್ವವನ್ನು ಅರಿಯುವ ಹಿನ್ನೆಲೆಯಲ್ಲಿ ಹೇಳುವುದು. ಈ ಏಕತೆಯ ರೀತಿಯನ್ನು ‘ಯೋಗ’ ಎಂದೂ ಕರೆಯುವರು. ಆದರೆ ಈ ಜೀವನ್ಮುಕ್ತಿ ಕೋಟಿಗೆ ಒಬ್ಬನಿಗೆ ಮಾತ್ರ ಸಾಧ್ಯವೆಂದೂ ಹೇಳುವುದು. ಇನ್ನು ರಾಜಯೋಗವು ಸಮಾಧಿಯನ್ನು ಅರಿತು ತನ್ನ ನಿಜ ಸ್ವರೂಪವನ್ನು ತಿಳಿದು ಮುಕ್ತನಾಗುವಂತೆಯೂ ಹೇಳುವುದು. ಇಲ್ಲಿಯೂ ಆ ಆತ್ಮ ಅನುಭವವು ಸರ್ವರಿಗೂ ಒಂದಾಗಿರುವ ಕಾರಣ ಏಕತೆಯ ಸ್ವರವಿರುವುದು. ಆದರೆ, ಇದನ್ನು ಸಾಧಿಸುವವರೂ ಕೋಟಿಗೆ ಒಬ್ಬರು ಎಂಬ ರೀತಿಯಲ್ಲಿಯೇ ಇದೆ. ಆದರೆ, ಇವೆಲ್ಲಾ ಸಾಮಾನ್ಯ ಜೀವನದಿಂದ ದೂರವಾದ ಆ “ಮಾನವನ ವ್ಯಕ್ತಿತ್ವವು ಇಲ್ಲದ ಕಡೆ”ಯಲ್ಲಿನ ಏಕತೆಯನ್ನು ಹೇಳುವವು. ಇವುಗಳಲ್ಲಿ ಸ್ವಲ್ಪ ಕೆಳಹಂತದಲ್ಲೂ ಆ ತರದ ಏಕತೆಯನ್ನು ಪೂರ್ಣವಾಗಿ ಮರೆತು ಆ ತನ್ನ ಜಾತಿ ಭಾವನೆಯಿಂದ ಬಾಧಿಸಲ್ಪಡುವವರನ್ನು ಹಲವು ಕಡೆ ನಾವು ನೋಡುತ್ತೇವೆ. ಅಂಥವರಲ್ಲಿ ದೊಡ್ಡ ದೊಡ್ಡ ಆಚಾರ್ಯರುಗಳು ಸೇರಿರುವುದನ್ನೂ ಕಾಣುತ್ತೇವೆ! ಇನ್ನು, ಸೃಷ್ಟಿಕರ್ತ ದೇವರಲ್ಲೂ, ಎಲ್ಲಾ ಜೀವ ಜಾಲಗಳ ಸೃಷ್ಟಿಕರ್ತ ಎಂಬ ಸಂಕಲ್ಪದಲ್ಲಿ, ಎಲ್ಲಾ ಮಕ್ಕಳ ತಂದೆ ಎಂಬ ತರದ ಒಂದು ಏಕತೆಯನ್ನೇ ನೋಡುವೆವು!! ಆದರೆ, ಇಲ್ಲಿಯೂ ಆ ಒಬ್ಬ ಸೃಷ್ಟಿಕರ್ತನನ್ನು ಮಾನವರು ಹಲವಾರು ಮಾಡಿ, ಅರ್ಥ ಹೀನವಾದ ರೀತಿಯಲ್ಲಿ ತಮ್ಮ ತಮ್ಮ ಆ ಏಕ ಸೃಷ್ಟಿಕರ್ತನಿಗಾಗಿ ವಾದವನ್ನು ಮತ್ತು ರಕ್ತಪಾತವನ್ನು ಮಾಡುತ್ತಿರುವುದು ಕಾಣಿಸುವುದು!! ಆದರೆ, ಮಹಾತ್ಮರ ಜೀವನ ಅಥವಾ ಸತ್ಯಜೀವನದಲ್ಲಿ ಏಕತೆಯು ಮಾನವನ “ವ್ಯಕ್ತಿತ್ವ ಇರುವಲ್ಲೇ” ಇರುವುದಾಗಿದೆ. ಅಲ್ಲಿ ಯೋಗ ಅಥವಾ ಏಕತೆಯು ಆ ಸಾರ್ವತ್ರಿಕ ಸತ್ಯ, ಸಾರ್ವತ್ರಿಕ ಪ್ರೀತಿ, ಮತ್ತು ಸಾರ್ವತ್ರಿಕ ನೀತಿಯ ರೂಪದಲ್ಲಿ ಕಾಣಿಸುವವು. ಈ ಏಕತೆಯು ಮಹಾತ್ಮರಲ್ಲಿ “ವಿಶಾಲಮನಸ್ಕತೆ” ಯೆಂಬ ಭಾವದಲ್ಲಿ, ವ್ಯಾವಹಾರಿಕ ಜೀವನದ ಚಲಾವಣೆಯ ಶಕ್ತಿಯಾಗಿ ಇರುವುದು. ಇತರ ಎಲ್ಲ ಕಡೆಯ ಏಕತೆಯು ಅಥವಾ ಯೋಗವು ವ್ಯಾವಹಾರಿಕ ಜೀವನದಿಂದ ದೂರವಾಗಿ ಆಧ್ಯಾತ್ಮಿಕ ಎಂದು ಪ್ರತ್ಯೇಕವಾಗಿ ಇರುವಾಗ, ಈ ಮಹಾತ್ಮರ ಜೀವನವು ಸಾಮಾಜಿಕ ಜೀವನದಲ್ಲೇ ಆ ಸಂಕುಚಿತ ಮನೋಭಾವಗಳನ್ನೆಲ್ಲಾ ಕೊಚ್ಚಿ ಎಸೆಯುತ್ತಾ ಹರಿಯುವ ಆ ವಿಶಾಲಮನಸ್ಕತೆಯ ಪ್ರೀತಿಯ ಮಹಾನದಿಯಾಗುವುದು! ಇಲ್ಲಿ, ಇದನ್ನು ಕೋಟಿಗೆ ಒಬ್ಬ ಸಾಧಿಸುವುದಲ್ಲ, ಸತ್ಯಸಂಧತೆ ಮತ್ತು ದೃಢ ತೀರ್ಮಾನವಿದ್ದರೆ ಎಲ್ಲರಿಗೂ ಸಾಧಿಸಿಕೊಳ್ಳಬಹುದು!! ಇಲ್ಲಿ, ಆ ಜಾತೀಯತೆ, ಧರ್ಮಾಂಧತೆ, ಇತ್ಯಾದಿಗಳ ಭ್ರಮೆಯು ಸಾಧನೆಯ ಕೆಳಗಿನ ಹಂತದಲ್ಲೇ ನಾಶವಾಗಿಬಿಡುವ ಕಾರಣ ಆ ಅಜ್ಞಾನವು ಪುನಃ ಕಾಣಿಸಬಹುದೆಂಬ ಭಯವೂ ಇರುವುದಿಲ್ಲ. ಮೊದಲ ರೀತಿಗಳಲ್ಲಿ, ಮರದಡಿಯ ಯೋಗಿಗಳು, ಮಹಾತ್ಮರು ಮಾತ್ರ ಸೃಷ್ಟಿಯಾದರೆ, ಈ ಸತ್ಯಜೀವನದಲ್ಲಿ ಹಳ್ಳಿ, ಪೇಟೆ, ನಗರಗಳಲ್ಲಿ ಮತ್ತು ಎಲ್ಲಾ ವರ್ಗದ ಜನರಲ್ಲೂ ಮಹಾತ್ಮರು ಕೋಟಿಗಟ್ಟಲೆಯಲ್ಲಿ ಸೃಷ್ಟಿಯಾಗುವ ಅವಕಾಶವು ಇರುವುದು! ಬಹಳ ಕಡಿಮೆ ಸಂಖ್ಯೆಯ ಮರದಡಿಯ ಮಹಾತ್ಮರು ಸಮಾಜದಲ್ಲಿ ಉತ್ತಮ ಬದಲಾವಣೆಯನ್ನು ಬಯಸಿದರು ಹಾಗೂ ಶ್ರಮಿಸಿದರಾದರೂ, ಅವೆಲ್ಲ, ಸಾಮಾನ್ಯ ಜನರಿಗೆ

ಭಾಧಕವಲ್ಲ ಎಂಬ ರೀತಿಯಲ್ಲಿ ಜನರು ಅವರ ಉಪದೇಶಗಳಿಗೆ ಓಗೊಡದೆ ತಮ್ಮ ಹಳೇ ಚಾಳಿಯಾದ ಜಾತೀ ಮೇಲು, ಕೀಳು ಭಾವನೆ ಮತ್ತು ಶೋಷಣೆ ಇತ್ಯಾದಿಗಳನ್ನು ಮುಂದುವರಿಸುತ್ತಾ ಬಂದರು. ಆದರೆ ಮನೆ ಮನೆಯಲ್ಲಿ ಮಹಾತ್ಮರುಗಳು ಇರುವಲ್ಲಿ, ಆ ಮಹಾತ್ಮರ ಮನಸ್ಸಿನ ಸತ್ಯದ ದೈವಿಕಶಕ್ತಿಯು ಸಮಾಜವನ್ನು ಸತ್ಯ, ಜ್ಞಾನದ ಬೆಳಕಲ್ಲಿ ಬೆಳಗಿಸಿ, ಅಜ್ಞಾನವನ್ನು ಹೋಗಲಾಡಿಸಿ, ಈ ಜಗತ್ತಿಗೆ ಒಂದು ಸತ್ಯಯುಗವನ್ನೇ ದಯಪಾಲಿಸಲು ಶಕ್ತವಾಗುವುದು ಎಂಬುವುದರಲ್ಲಿ ಸಂಶಯವಿಲ್ಲ! ಇನ್ನೂ ಒಂದು ಪ್ರತ್ಯೇಕತೆ ಎಂದರೆ, ಇತರ ಎಲ್ಲಾ ಸಾಧನೆಗಳು ಪ್ರತ್ಯೇಕ, ನಂಬಿಕೆ, ಅಚಾರಗಳನ್ನು ಹೊತ್ತ ಕಾರಣ ಒಂದು ಪ್ರತ್ಯೇಕ ಧರ್ಮ, ಪಂಥದ ಅವಲಂಬನೆಯ ರೀತಿಯಲ್ಲಿ ಇರುವವು. ಆದರೆ ಈ ಸತ್ಯಚಿಂತನೆಯ ಮಹಾಜೀವನ ಅಥವಾ ಸತ್ಯಜೀವನವು ತಮ್ಮನ್ನು ತಾವು ಪರಿಶುದ್ಧಗೊಳಿಸುವ ಒಂದು ಶುದ್ಧೀಕರಣ ಯಂತ್ರದಂತೆ ಮಾತ್ರ ಕೆಲಸ ಮಾಡುವುದು ಎಂಬುವುದು ವಿಶೇಷತೆಯಾಗಿದೆ. ಆದುದರಿಂದ, ಈ ಸತ್ಯಚಿಂತನಾ ಸಾಧನೆಯು ಜಗತ್ತಿನ ಸರ್ವ ಧರ್ಮ, ಪಂಥಗಳಿಗೂ ಅನ್ವಯವಾಗುವ ರೀತಿಯದ್ದಾಗಿದೆ. ತನ್ನ ದೇವರಿಗೆ ಆ [ಸಂಶಯದ] ನಂಬಿಕೆಯ ಸ್ಥಾನದಿಂದ ಅತ್ಯಂತ ಮೇಲಿನ ಸ್ಥಾನವಾದ ಆ ಸಾರ್ವತ್ರಿಕ ಸತ್ಯದ ಸ್ಥಾನವನ್ನು ಕೊಡುವುದು ಎಂದರೆ ಭಕ್ತನಿಗೆ ಭಕ್ತಿಯ ರೋಮಾಂಚನವಾಗಬಹುದು. ತನ್ನ ದೇವರು ಸಾರ್ವತ್ರಿಕ ಪ್ರೀತಿಯ ಕರುಣಾಮಯನೆಂದು ಹೇಳದಿದ್ದರೆ ಆತನು ನಿಜ ಭಕ್ತನಾಗಲಾರನು. ಅದೇ ರೀತಿ, ತನ್ನ ದೇವರು ನೈತಿಕತೆ ಇಲ್ಲದವನು ಎಂದು ಹೇಳಲು ಯಾವ ಭಕ್ತನ ಬಾಯಿಯೂ ತೆರೆಯಲಾರದು. ಇನ್ನು, ಯಾವ ಧರ್ಮ, ಪಂಥಗಳಿಗೂ ಈ ಮೂರು ಮುಖ್ಯ ದೈವಿಕ ಸ್ವಭಾವಗಳನ್ನು ಮುಂದಿಟ್ಟು ತಮ್ಮ ದೇವರು ಮತ್ತು ಧರ್ಮಗಳ ಇತರ ಭಾಗಗಳನ್ನು ವಿವರಿಸುವುದೂ ಕಷ್ಟವಾಗಲಾರದು. ಒಟ್ಟಿನಲ್ಲಿ, ಮೊದಲಿನ ಏನನ್ನೂ ಕಳಕೊಳ್ಳದೆ, ಮತ್ತೂ ಪವಿತ್ರರಾದ ಅನುಭವವನ್ನು ಮಾತ್ರ ಧರ್ಮ, ಪಂಥಗಳು ಸತ್ಯಚಿಂತನೆಯಿಂದ ಪಡೆದುಕೊಳ್ಳುವವು. ಈ ರೀತಿಯಲ್ಲಿ, ಆ ಮಹಾತ್ಮರ ಸತ್ಯಜೀವನವು ‘ಜನಸಾಮಾನ್ಯರ ದೈನಂದಿನ ವ್ಯಕ್ತಿ ಜೀವನವನ್ನು’ ಬೆಳಗಿಸುವುದರೊಂದಿಗೆ  ಜಗತ್ತಿಗೆ ಸತ್ಯಯುಗವನ್ನೂ ತರುವುದು! ಇದು ‘ಸತ್ಯಜೀವನ’ದ ಪ್ರತ್ಯೇಕತೆ ಅಥವಾ ಭಿನ್ನತೆಯ ಚುಟುಕಾದ ವಿವರಣೆಯಾಗಿದೆ.            

ನಂಬಿಕೆ, ಆಚಾರಗಳು ಧರ್ಮದ ಅವಿಭಾಜ್ಯ ಅಂಗ ಎನ್ನುವವರಿಗೆ ನೀವು ಏನು ಹೇಳುವಿರಿ?

ಉತ್ತರ- ನಿಜವಾಗಿಯೂ ಅವು ಧರ್ಮದ ಅವಿಭಾಜ್ಯ ಅಂಗಗಳಲ್ಲ.  ಆದರೆ ಜನರು ಅವನ್ನು ಹಾಗೆ ಮಾಡಿದಲ್ಲಿ ನಾವು ಏನು ಮಾಡುವುದು? ಹಾಗೆ ಹೇಳುವ ಸಹೋದರ ಸಹೋದರಿಯರಲ್ಲಿ ಆ ಮಹಾತ್ಮರು ಕಣ್ಣಿರಿಟ್ಟು ಹೇಳಿದ ಮಾತನ್ನು ಮತ್ತು ಅದರ ಅರ್ಥವನ್ನು ವಿವರಿಸುವುದು ಮಾತ್ರ ನನಗೆ ಇಲ್ಲಿ ಮಾಡಲು ಸಾಧ್ಯ. ಸಾವಿರಾರು ವರುಷಗಳು ಸಂದಿವೆಯಾದರೂ, ಇನ್ನು ಎಂದಾದರೂ ಮಾನವನು ಧಾರ್ಮಿಕವಾಗಿ ವಿಕಾಸವಾಗಲು ತೊಡಗುವುದಾದರೆ, ಅವರು ಈ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆ ಎಂಬ ಕತ್ತಲೆಯಿಂದ ಆ ಮಹಾತ್ಮರು ಹೇಳುವ ಆ “ಸತ್ಯ”ವೆಂಬ ಬೆಳಕಿನ ಕಡೆಗೆ ಬಂದೇ ಆಗಬೇಕು. ಇದು ಸತ್ಯ.  

ಮೊದಲು, ಜನರ ಸಂಶಯ ಪರಿಹಾರಕ್ಕಾಗಿ, “ಧರ್ಮ” ಎಂದರೆ ಏನೆಂದು ತಿಳಿಯುವುದಕ್ಕೋಸ್ಕರ, ಆ ದೇವರ ಮಾತುಗಳನ್ನೇ ಮುಂದಿಟ್ಟು ತಿಳಿಯೋಣ. ಧರ್ಮ ಸಂಸ್ಥಾಪನೆ ಮಾಡುವ ವಿಧಾನವನ್ನು ದೇವರು ಹೇಗೆಂದು ಗೀತೆಯಲ್ಲಿ ಬಣ್ಣಿಸಿದ್ದಾನೆ? ಸಜ್ಜನರನ್ನು ರಕ್ಷಿಸುವುದು ಮತ್ತು ಕೆಟ್ಟ ಕರ್ಮಗಳಲ್ಲಿ ನಿರತರಾದ ಆ ಕೆಟ್ಟ ಜನರನ್ನು ಇಲ್ಲದಂತೆ ಮಾಡುವುದೇ ‘ಧರ್ಮ’ ಸಂಸ್ಥಾಪನೆ ಎಂದು ದೇವರು ಹೇಳಿದ್ದಾನೆ ಎಂದು ಎಲ್ಲರಿಗೂ ತಿಳಿದಿದೆ. ಹೀಗಲ್ಲದೆ, ಹಲವು ರೀತಿಯ ಪೂಜೆಗಳನ್ನೋ,  ಅದಕ್ಕೆ ಸಂಬಂಧಿಸಿದ ನಂಬಿಕೆ, ಆಚಾರಗಳನ್ನೋ, “ಧರ್ಮ” ಎಂದು ಹೇಳಿಲ್ಲ!!! ಅವುಗಳೆನ್ನೆಲ್ಲಾ ಒಟ್ಟಾಗಿ ಅಧ್ಯಾತ್ಮವೆಂದು ಪ್ರತ್ಯೇಕವಾಗಿ ಹೇಳುತ್ತಾ, “ಅವರವರು ಪೂಜಿಸುವ ದೇವರ ಲೋಕಕ್ಕೆ ಆಯಾ ದೇವರುಗಳ ಭಕ್ತರು ಹೋಗುವರು” ಎಂಬ ಶುದ್ಧ ಆಯ್ಕೆಯ ರೀತಿಯನ್ನೇ ಆಧ್ಯಾತ್ಮ ಭಾಗಕ್ಕೂ ಕೊಟ್ಟಿರುವುದು ಎಂಬುವುದನ್ನು ದಯವಿಟ್ಟು ಮರೆಯಬಾರದು!! ಹಾಗಿದ್ದರೆ, ಭೂಮಿಯಲ್ಲಿ ಮಾನವರಿಗೆ ಸಂಬಂಧಿಸಿದಂತೆ ಧರ್ಮ ಉದ್ದಾರವನ್ನು ಹೇಗೆ ಮಾಡಬಹುದು? ಆ ದೇವರ ಮಾತಿನ ಪ್ರಕಾರ ಅದು ಈ ನಂಬಿಕೆ, ಆಚಾರ, ಶುದ್ಧ, ಅಶುದ್ಧ, ಇತ್ಯಾದಿಗಳು ಯಾವುದರಿಂದಲೂ ಅಲ್ಲವೆಂದೂ, “ಉತ್ತಮರನ್ನು ರಕ್ಷಿಸಲು” ಎಂಬ ಮಾತಿನ ಅರ್ಥವನ್ನು ಮಾನವರು ಈ ಭೂಮಿಯಲ್ಲಿ ಪಾಲಿಸುವಾಗ “ನಾವು ಉತ್ತಮರಾಗಬೇಕು” ಎಂಬ ಅರ್ಥ ಮಾತ್ರ ಅದಕ್ಕೆ ಬರುವುದೆಂದೂ ಸ್ಪಷ್ಟವಾಗುವುದು. ಇನ್ನು, “ದುಷ್ಟರನ್ನು ಶಿಕ್ಷಿಸಲು” ಅಂದಾಗ ಅಲ್ಲಿ ಮಾನವರು ಅದನ್ನು ತಮ್ಮ ಮನದ ದುಷ್ಟ ಬುದ್ಧಿಯನ್ನು ನಾಶಮಾಡುವುದೆಂದು ಮಾತ್ರ ಅರ್ಥ ಬರುವುದು. ಇದನ್ನೇ “ಸತ್ಯಚಿಂತನೆಯ ಮೂಲಕ  ಮನೋಶುದ್ಧೀಕರಣ” ಎನ್ನುವುದು. ಇಲ್ಲಿ, ಉತ್ತಮರಾಗಲು ನಮಗೆ ಆಚಾರಗಳೋ, ನಂಬಿಕೆಗಳೋ ಸಹಾಯ ಮಾಡಲಾರವು ಖಂಡಿತ. ಆದರೆ, ಅದಕ್ಕೆ ನಮಗೆ ಸಹಕರಿಸುವುದು ಆ ಮನೋಶುದ್ಧಿಯ ಪ್ರಯತ್ನವು ಮಾತ್ರ ಆಗುವುದು. ಆಚಾರ, ನಂಬಿಕೆಗಳ ಗೋಜು ಇಲ್ಲದ ಆ [ಚಿಂತನಾ ಯುಕ್ತ]ಶುದ್ಧಭಕ್ತಿಯು ಕೂಡಾ ಈ ಸ್ವಭಾವವನ್ನು ಶುದ್ಧೀಕರಿಸಲು ಸಮರ್ಥವಾಗಿರುವುದು ಎಂಬುವುದನ್ನು ಮರೆಯಬಾರದು. ಅಂದರೆ, ಅಂಥ ಶುದ್ಧಭಕ್ತಿಯು ಜ್ಞಾನದಿಂದ ಒಡಗೂಡಿಯೇ ಇರುವುದು!! ಆತ್ಮಾವಲೋಕನ ಅಥವಾ ಆಂತರ್ಯದ ಸತ್ಯಚಿಂತನೆ ಮತ್ತು ಬಾಹ್ಯದ ಸತ್ಯಚಿಂತನೆಯು ಒಟ್ಟಿಗೆ ಸೇರಿದಲ್ಲಿ ಸ್ವಭಾವ ಶುದ್ಧೀಕರಣವು ತುಂಬಾ ವೇಗವಾಗಿ ನಡೆಯುವುದು. ತಮ್ಮಲ್ಲಿರುವ ಕೆಟ್ಟ ಸ್ವಭಾವವೆಂಬ ಅಸುರರನ್ನು ನಾಶ ಮಾಡಿ, ದೈವಿಕ ಸ್ವಭಾವವನ್ನು ತನ್ನ ಹೃದಯದಲ್ಲಿ ಎತ್ತರಕ್ಕೆ ಬೆಳೆಸಿ ಆತನು ಆ ಧರ್ಮ ಸ್ಥಾಪನೆಯ ಪುಣ್ಯ ಕರ್ಮವನ್ನು ಮಾಡುವನು. ಹೀಗೆ ಮಾಡುವಾಗ, ಆತನ ಸುತ್ತಮುತ್ತಲೂ ಆ ಶಾಂತಿಯ ತಂಬುರಿಯ ಸುಗಂಧದ ಅಲೆಗಳು ಇತರ ಮಾನವರಲ್ಲೂ ಆ ಸಾತ್ವಿಕ ಹೃದಯ ಭಾವನೆಯನ್ನು ಬಡಿದೆಬ್ಬಿಸಿ ಅವರನ್ನೂ ಧರ್ಮ ಸ್ಥಾಪನೆಯತ್ತ ಹೆಜ್ಜೆ ಇರಿಸುವಂತೆ ಮಾಡುವುದು! ಈ ರೀತಿಯಲ್ಲಿ,ನಂಬಿಕೆ, ಆಚಾರವಲ್ಲದ ಆ ನಿಜವಾದ ಧರ್ಮವನ್ನು ಬೆಳೆಸಿದಲ್ಲಿ ಮಾನವ ಜೀವನ ಮತ್ತು ಸಮಾಜವು  ಆನಂದವನ್ನು ಅನುಭವಿಸುವುದು. ಇಲ್ಲಿ, ‘ನಾನು’ ಎಂಬುವುದಕ್ಕೆ ಬೇಲಿ ಇರುವುದಿಲ್ಲ, ‘ನಾವು’ ಎಂಬುವುದಕ್ಕೂ ಬೇಲಿ ಇರುವುದಿಲ್ಲ! ಹಾಗಿರುವಾಗ, ಇಲ್ಲಿ “ನಾವು” ಎಂದು ಯಾರಾದರೂ ಹೇಳುವುದಾದರೆ ಅದು “ವಸುದೈವ ಕುಟುಂಬ” ಎಂಬ ಅರ್ಥವೇ ಎಂದು ಸ್ಪಷ್ಟವಾಗುವುದು! ಈ ರೀತಿಯಲ್ಲೇ ಧರ್ಮವನ್ನು ವಿವರಿಸುತ್ತಾ ಬಂದಿದ್ದರೆ ವಿಶಾಲ ಮನಸ್ಕತೆಯ, ಶಾಂತಿಯ, ಪ್ರೀತಿಯ ಆನಂದದ ಜೀವನವು ಆ ಪ್ರಾಚೀನ ಕಾಲದಿಂದಲೇ ಮಾನವರಿಗೆ ಸಿಗುತ್ತಿತು! ಹೇ ಮಾನವಾ, ನಿನ್ನ ಕೈಯಲ್ಲಿ ಖಡ್ಗವನ್ನಿತ್ತು ರಾಜರುಗಳು ಸಾವಿರಾರು ವರುಷ ಬಳಸಿಕೊಂಡರು, ತಲೆಯಲ್ಲಿ ಮಂಕನ್ನು ತುಂಬಿಸಿ ಬುದ್ಧಿವಂತರು ಬಳಸಿದರು, ಧರ್ಮ ಎಂಬ ಹೆಸರಿನಲ್ಲಿ ಅಧರ್ಮದ ಆ ಧರ್ಮಾಂಧತೆಯ ವಿಷವನ್ನು ಹೃದಯದಲ್ಲಿ ಸೇರಿಸಿ, ದೇವರ ಹೆಸರನ್ನು ಹೇಳುತ್ತಾ ಮುಗ್ಧ ಮಗುವಿನ ಕತ್ತನ್ನು ಸೀಳುವಷ್ಟು ಕ್ರೌರ್ಯವನ್ನು ನಿಲ್ಲಲ್ಲಿ ತುಂಬಿಸಿಬಿಟ್ಟರು ಮತ್ತು ನಿನ್ನನ್ನು ಕ್ರೂರ ಪ್ರಾಣಿಯಂತೆ ಮಾಡಿ ಬಳಸಿಕೊಂಡರು!! ನನ್ನ ಸಹೋದರನೇ, ಇನ್ನೂ ನಿನ್ನಲ್ಲಿ ಕಣ್ಣೀರಿನ ಅಂಶವು ಸ್ವಲ್ಪವಾದರೂ ಬಾಕಿ ಇದ್ದರೆ ಆ ಮಹಾತ್ಮರ ಮಾತುಗಳನ್ನು ಆಲಿಸುವಷ್ಟಾದರೂ ಮನಸ್ಸು ಮಾಡು. ಅದು ನಿನಗೆ ಅವಿತಿರುವ ಆ ಧರ್ಮವನ್ನು ತೋರಿಸುವುದು. ನಂಬಿಕೆ, ಆಚಾರಗಳು ಅವುಗಳ ಪಾಡಿಗೆ ಇದ್ದುಕೊಳ್ಳಲಿ, ಮತ್ತು ಆಚರಿಸುವವರು ಆಚರಿಸಲಿ. ಆದರೆ, ಮಹಾತ್ಮರ ಮಾತುಗಳನ್ನು ಸಂಪೂರ್ಣ ಮರೆತು, ಆಚಾರ,ನಂಬಿಕೆಗಳನ್ನು ಮಾತ್ರ ಮುಂದಿಟ್ಟು “ಧರ್ಮ” ಎಂದು ಒತ್ತಿ ಹೇಳುವ, ಮತ್ತು ಸಾವಿರಾರು ವರುಷಗಳಿಂದ ಮಾಡುತ್ತಾ ಬಂದಿರುವ, ಆ ದೊಡ್ಡ ಅನರ್ಥವನ್ನು ಇನ್ನಾದರೂ ಮಾಡದಿರೋಣ.      

ನೀವು, ‘ಆಚಾರ ನಂಬಿಕೆಗಳು ನಿಜವಾಗಿಯೂ ಧರ್ಮಗಳಲ್ಲಿ ಅನಿವಾರ್ಯವಲ್ಲ’ ಎಂದಿರುವಿರಲ್ಲ ಅದನ್ನು ತರ್ಕದ ಮೂಲಕ ಸ್ಪಷ್ಟಪಡಿಸಬಹುದೇ?

ಉತ್ತರ- ನೀವು “ನಮ್ಮೆಲ್ಲರ ಮನೆ” ಎಂದು ಹೇಳುವಾಗ ಅಲ್ಲಿ ಏನನ್ನು ಉದ್ದೇಶಿಸುತ್ತೀರಿ? ಆ ಪ್ರತಿ ಮನೆಯ ಕೋಣೆಗಳ ಸಂಖ್ಯೆಯಾ, ಅಥವಾ ಅವುಗಳ ವಿಸ್ತೀರ್ಣವಾ, ಅದೇನು ಅಲ್ಲ ಅಲ್ಲವೇ? ನೀವು ಉದ್ದೇಶಿಸಿರುವುದು ಬರೇ ನಾವು ಉಳಕೊಳ್ಳುವ, ಆ ಮಳೆ, ಬಿಸಿಲಿನಿಂದ ನಮ್ಮನ್ನು ರಕ್ಷಿಸುವ, ಸ್ಥಳವನ್ನು ಮಾತ್ರವಾಗಿದೆ ಎಂದು ನಿಮಗೆ ತಿಳಿದಿದೆ. ಅದೇ ರೀತಿ, ಎಲ್ಲಾ ಧರ್ಮಗಳು “ಧರ್ಮ” ಎಂದು ತಮ್ಮನ್ನು ಹೇಳುವಾಗ, ಅವುಗಳು ತಮ್ಮ ಧರ್ಮದ ಶ್ರೇಷ್ಠತೆಯ ಬಗ್ಗೆ ಹೊಗಳುತ್ತಾ, ಇತರ ಧರ್ಮಗಳ ಕೊರತೆಗಳನ್ನು ಹೇಳಬೇಕಾ ಅಥವಾ ಜಗತ್ತಿನ ಮಾನವರ ಉತ್ತಮ, ಆತ್ಮೀಯ, ಹಾಗೂ ಶಾಂತಿಯ ಜೀವನದ ಬಗ್ಗೆ ಮಾತ್ರ ವಿವರಿಸಬೇಕಾ ಎಂಬುವುದನ್ನು ನೀವೇ ಹೇಳಿರಿ. 

ಇನ್ನು, ಎಲ್ಲಾ ಧರ್ಮಗಳ ಕೆಲಸವು ಮಾನವನಿಗೆ ಧ್ವೇಷ, ಅಸೂಯೆಯು ಇಲ್ಲದಿರುವ ಆ ಉತ್ತಮ ಮತ್ತು ಶಾಂತಿಯ ಜೀವನವನ್ನು ಕೊಡುವುದಾಗಿದೆ. ಅದನ್ನು ಮಾಡದಿದ್ದಲ್ಲಿ ಅವುಗಳು ತುಕ್ಕು ಹಿಡಿದ ವಸ್ತುಗಳ ತರ ಉಪಯೋಗ ಶೂನ್ಯವಾಗುವವು. ಇನ್ನು, ನಂಬಿಕೆ, ಆಚಾರಗಳು, ಬೇರೆ ಬೇರೆ ಧರ್ಮ, ಪಂಥಗಳಿಗೆ ಬೇರೆ ಬೇರೆ ಆಗಿವೆ, ಮಾತ್ರವಲ್ಲ, ಅವುಗಳಲ್ಲಿ ಹಲವು ಪರಸ್ಪರ ವಿರುದ್ಧವೂ ಆಗಿ ಇರುವವು!! ಅಂದರೆ, ಅವುಗಳು ಯಾವುದೇ ಧರ್ಮದ ಆ ಸಾರ್ವತ್ರಿಕ ವಿಚಾರಗಳ ಬಗ್ಗೆ ಹೇಳುವುದಲ್ಲ ಎಂದು ಅದರಿಂದಲೇ ತಿಳಿದುಕೊಳ್ಳಬಹುದು. ಇನ್ನು, ಕಳ್ಳತನ ಮಾಡಬಾರದು ಎಂಬುವುದು ನೈತಿಕತೆಯ ಭಾಗವಾದರೂ ಅವು ಎಲ್ಲಾ ಧರ್ಮಗಳಲ್ಲೂ ಇರುವ ಕಾರಣ ಅದಕ್ಕೆ ಸಾರ್ವತ್ರಿಕತೆ ಇದೆ. ಇದು ನಂಬಿಕೆಯಾಗುವುದಿಲ್ಲ, ಸ್ಪಷ್ಟವಾಗಿ ಹೇಳುವುದಾದರೆ, ಇಂಥಹ ಹಲವು ಸಾರ್ವತ್ರಿಕವಾಗಿ ಇರುವಂಥವುಗಳು ಮಾತ್ರವೇ ಒಂದು ಧರ್ಮದ ಅಸ್ತಿತ್ವ ಅಥವಾ ಸಾರವಾಗಿರುವುದು. ಈ ರೀತಿಯಲ್ಲಿ ಇರುವ ಯಾವ ಧರ್ಮದ ಅಸ್ತಿತ್ವಕ್ಕಾದರೂ ಅದು ಯಾವ ನಂಬಿಕೆ, ಆಚಾರಗಳನ್ನು ಅವಲಂಬಿಸದ ಕಾರಣ, ಯಾವ ಧರ್ಮದಲ್ಲೂ ಈ ನಂಬಿಕೆ, ಆಚಾರಗಳು ಅನಿವಾರ್ಯವಲ್ಲ ಎಂದಿರುವುದು. ಆ ನಂಬಿಕೆ, ಆಚಾರಗಳು ಬರೇ ‘ವ್ಯಕ್ತಿಯ ಆಯ್ಕೆ’ ರೀತಿಯಲ್ಲಿ ಅವರವರ ಧರ್ಮ, ಪಂಥಗಳಲ್ಲಿ ಅನುಸರಿಸಿಕೊಳ್ಳಬಹುದು ಎಂದೂ ಹೇಳಿರುವುದು.

ಸ್ವಭಾವದೇವರ ಕುರಿತು ಇನ್ನೂ ಸ್ವಲ್ಪ ವಿವರಣೆಯನ್ನು ಕೊಡಬಹುದೇ?

ಉತ್ತರ- ಎಲ್ಲಾ ಧರ್ಮ, ಪಂಥಗಳು ತರ್ಕ ಎಂಬ ಶಬ್ಧವನ್ನು ಉಪಯೋಗಿಸುತ್ತವೆ. ಅವುಗಳು ತಮ್ಮ ಪರ ವಿಚಾರಗಳನ್ನು ತರ್ಕಬದ್ಧವಾಗಿ ವಿವರಿಸಲು ಪ್ರಯತ್ನಿಸುವವು. ಅದರಲ್ಲೂ ನಂಬಿಕೆಗಳನ್ನು ತರ್ಕಕ್ಕೆ ಗುರಿಪಡಿಸುವುದು ನಿಜವಾಗಿಯೂ ಬಹಳ ಅಚ್ಚರಿಯ ವಿಷಯವಾಗಿದೆ, ಯಾಕೆಂದರೆ, ತರ್ಕವಿಲ್ಲದ ಕಾರಣವೇ ಅವುಗಳನ್ನು ನಂಬಿಕೆಗಳು ಎಂದು ಕರೆದಿರುವುದು. ಈ ರೀತಿ, ಹಲವು ಧರ್ಮ, ಪಂಥಗಳು, ‘ತಮ್ಮದು ಮಾತ್ರ ಆಗಿರುವ’ ಹಲವು ಸತ್ಯಗಳನ್ನು ಈ ಜಗತ್ತಿನ ಸಾರ್ವತ್ರಿಕ ಸತ್ಯಗಳೆಂದು ಸಾಧಿಸುವ ಪ್ರಯತ್ನವನ್ನು ಮಾಡುವವು!

ನ್ಯಾಯಾಧೀಶರುಗಳು ಹಲವು ವ್ಯಕ್ತಿಗಳಾದರೂ ಈ ಜಗತ್ತಲ್ಲಿ ಅವರೆಲ್ಲಾ ಒಂದೇ ಗುಂಪಿಗೆ ಸೇರಿದವರಾಗಿದ್ದಾರೆ. ಯಾಕೆಂದರೆ ಆ ಎಲ್ಲಾ ನ್ಯಾಯಾಧೀಶರ ಕೆಲಸವು ಸತ್ಯ, ನ್ಯಾಯವನ್ನು ಜನರಿಗೆ ಕೊಡುವ ಆ ಒಂದೇ ಕೆಲಸವಾದ ಕಾರಣವಾಗಿದೆ ಎಂದು ನಮಗೆ ತಿಳಿದಿದೆ.  ಈಗ, ನ್ಯಾಯಾಧೀಶರು ಎಂದು ಹೇಳುವಾಗಲೇ, ನಮಗೆ ಈ ಜಗತ್ತಿನ ಎಲ್ಲಾ ನ್ಯಾಯಾಧೀಶರ ಅರ್ಥವೂ ಸ್ಪಷ್ಟವಾಗಿ ಒಮ್ಮೆಗೇ  ಸಿಗುವುದು. ಇಲ್ಲಿ, ಒಂದೊಂದು ನ್ಯಾಯಾಧೀಶನ, ಪ್ರಾಯ,  ಸಂಪತ್ತು, ಶಾರೀರಿಕ ಶಕ್ತಿ, ಇವೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ! ಇದೇ ರೀತಿಯಲ್ಲಿ, ಈ ಜಗತ್ತಿನಲ್ಲಿ ಹಲವು ಬೇರೆ ಬೇರೆ ದೇವರುಗಳಿದ್ದರೂ, ದೇವರು ಎಂದು ಹೇಳಿದ ತಕ್ಷಣ ನಮಗೆ ಅರ್ಥವಾಗಬೇಕಾದುದು ದೇವರು ಎಂಬ ಆ ಅರ್ಥವನ್ನು ಆಗಿದೆ. ಅಂದರೆ, ದೇವರು ಎಂಬ ಮಾತ್ರಕ್ಕೆ ಆ ಸಂಕಲ್ಪವು ಈ ಜಗತ್ತಿನ ಜನರಿಗೆ ಸತ್ಯ, ನ್ಯಾಯವು ಸಿಗುವಂತೆ ಮಾಡುವ ಶಕ್ತಿಯಾಗಿ ಮನದಲ್ಲಿ ಗೋಚರಿಸಬೇಕು,  ಆಗ,  ಅದು ‘ಸತ್ಯವನ್ನು ಮತ್ತು ನ್ಯಾಯವನ್ನು ಸಿಗದಂತೆ ಮಾಡುವ ಶಕ್ತಿಯು ದೇವರು ಅಲ್ಲ’ ಎಂದು ನಮಗೆ ಅರ್ಥೈಸುವುದು. ಈ “ಅರ್ಥ”ವು ಸಾರ್ವತ್ರಿಕವಾದುದು ಎಂಬುವುದನ್ನು ನೆನಪಿಡಬೇಕು. ಈ ಅರ್ಥವೇ ದೇವರ ಅಸ್ತಿತ್ವವಾಗಿದೆ. ಇದು ಆ ಮೂಲ ಧನಾತ್ಮಕ ಸ್ವಭಾವಗಳಾದ ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯೆಂಬ ಮಹಾ ಸ್ವಭಾವಗಳ ಹಿನ್ನೆಲೆಯಲ್ಲಿ ಇರುವುದು ಮತ್ತು ಇರಲೇಬೇಕಾಗಿದೆ ಎಂದೂ ಸ್ಪಷ್ಟವಾಗುವುದು. ಯಾರಿಗಾದರೂ ಈ ವಿಚಾರವಾಗಿ ಸಂಶಯವಿದ್ದಲ್ಲಿ, ಈ ಮೂಲ ಧನಾತ್ಮಕ ಸ್ವಭಾವಗಳಿಲ್ಲದ ದೇವರು, ತಮ್ಮ ಧರ್ಮದ ಅಥವಾ ತಮ್ಮ ಪಂಥದ ದೇವರು, ಎಂದು ಸಾರಿ ಹೇಳಲಿ ನೋಡೋಣ, ಯಾರಾದರೂ ಅದಕ್ಕೆ ತಯಾರಾಗುವರೇ? ಅದು ಎಂದಿಗೂ ಯಾರಿಗೂ ಸಾಧ್ಯವಿಲ್ಲ!! ಹೀಗಿರುವಾಗ, ಎಲ್ಲರೂ ತಮ್ಮ ದೇವರ ಅರ್ಥಕ್ಕಾಗಿ ಮತ್ತು ಆ ಅರ್ಥದ ಮಹತ್ವವನ್ನು ಎತ್ತಿ ಹಿಡಿಯುವುದಕ್ಕಾಗಿ ಪ್ರಯತ್ನಿಸಬೇಕೇ ಹೊರತು ತಮ್ಮ ತಮ್ಮ ದೇವರ ಹಿನ್ನೆಲೆಯ ಪುರಾಣ ಕಥೆ, ನಂಬಿಕೆ, ಆಚಾರಗಳ ಮಹತ್ವವನ್ನು ಎತ್ತಿ ಹೇಳಿ ತಮ್ಮ ದೇವರ ಮಹತ್ವವನ್ನು ಹೆಚ್ಚಿಸಲು ಸಾಧ್ಯವಿಲ್ಲ ಮತ್ತು ಹಾಗೆ ಪ್ರಯತ್ನಿಸಲೂಬಾರದು. ಯಾಕೆಂದರೆ, ಹಾಗೆ ಮಾಡಿದರೆ, ಅದರಿಂದ ದೇವರ ಮಹಿಮೆಯು ಎತ್ತಿ ಹಿಡಿಯಲ್ಪಡುವ ಬದಲು “ನಮ್ಮ ದೇವರು ಇತರ ದೇವರುಗಳಿಗಿಂತ ಮೇಲು” ಎಂಬ ಆ ಭಯಾನಕ ಧರ್ಮಾಂಧತೆಯ ಸೃಷ್ಟಿಯಾಗುವುದು. ಇದು ಆ “ದೇವರ ಅರ್ಥ” ವನ್ನು ನಾಶ ಮಾಡುವುದು! ಇದುವರೆಗೂ ಈ ಜಗತ್ತಲ್ಲಿ ನಡೆದಿರುವುದು ಈ ದೇವರ ಅರ್ಥ ನಾಶದ ರೀತಿಯಲ್ಲಿ “ದೇವರ ನಾಶ” ಮಾತ್ರವಾಗಿರುವುದು ಎಂದು ತಿಳಿದಾಗ ಭಯವಾಗುವುದು! ಆ ಪ್ರಾಚೀನ ವಾಮಾಚಾರದ ಆ ಭಯಾನಕ ಪ್ರಭಾವವು ಎಂಥ ಬುದ್ಧಿವಂತರನ್ನೂ ಗೊಂದಲದ ಸುಳಿಯೊಳಗೆ ಸಿಕ್ಕಿಸಿ ಬಿಡುವುದು  ಎಂಬುವುದಕ್ಕೆ ಇದೇ  ಸಾಕ್ಷಿಯಾಗಿದೆ! ಇನ್ನಾದರೂ, ನಿಜವಾದ ಸತ್ಯದ ಹಿನ್ನೆಲೆಯ ಆ ತರ್ಕದಿಂದ [ಸತ್ಯಚಿಂತನೆಯಿಂದ] ಸತ್ಯವನ್ನು ಅರಿಯಲು ಪ್ರಯತ್ನಿಸಿ ಎಲ್ಲರೂ ಜಗತ್ತಿನ ದೇವಸಂಕಲ್ಪವನ್ನು ಆ ಪ್ರಾಚೀನ ವಾಮಾಚಾರದ ನಾಶದ ಕೈಗಳಿಂದ ಬಿಡಿಸಲು ಪ್ರಯತ್ನಿಸುವರು ಎಂದು ಆಶಿಸೋಣ.

ಮದುವೆ ಮೊದಲ ಮಿಲನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ- ಯಾರು ಒಬ್ಬ ವ್ಯಕ್ತಿಯ ದಾಂಪತ್ಯ ಜೀವನವು ಕೊನೆಯವರೆಗೂ ಚೆನ್ನಾಗಿರಬೇಕು ಎಂದು ಬಯಸುವರೋ ಅವರು ಮದುವೆ ಮೊದಲು ಮಿಲನವನ್ನು “ಬೇಡ” ಎಂದು ಎಚ್ಚರಿಸುವರು, ಆದರೆ ಮದುವೆಯಾಗಿ ಜಗಳ ಮತ್ತು ವಿವಾಹ ವಿಚ್ಛೇಧನವನ್ನು ಯಾರು ಪ್ರೊಹ್ಸಾಹಿಸುವರೋ ಅವರು ಖಂಡಿತವಾಗಿಯೂ ಅದನ್ನು  “ತಪ್ಪಿಲ್ಲ” ಅಥವಾ “ಸರಿ” ಎಂದು ಹೇಳುವರು. ಮಹಾತ್ಮರು ಮತ್ತು ಯೋಗಿಗಳು ವಿಶಾಲ ಮನಸ್ಕತೆಯವರಾದ ಕಾರಣ, ಮತ್ತು ದಾಂಪತ್ಯವು ಕೊನೆಯವರೆಗೂ ಉತ್ತಮವಾಗಿ ಇದ್ದು ಮಾನವರು ನಿತ್ಯವೂ ಅದರ ಆನಂದದ ಸವಿಯಲಿ ಜೀವಿಸಲೆಂದೇ ಮದುವೆ ಮೊದಲು ಮಿಲನ ‘ಬೇಡ’ ಎಂದು ಹೇಳುವುದು.

ದಾಂಪತ್ಯ ಜೀವನಕ್ಕೆ “ಆತ್ಮೀಯತೆ”ಯೇ ರಾಜಮಾರ್ಗವಾಗಿರುವುದು. ಸಂಪತ್ತು, ಬುದ್ಧಿವಂತಿಕೆ, ರೂಪ ಇತ್ಯಾದಿಗಳು ಅದಕ್ಕೆ  ಮಾರ್ಗಗಳೇ ಆಗಲಾರವು! ವರದಕ್ಷಿಣೆಯು ಮುಳ್ಳಿನ ದಾರಿಯಾಗುವುದು. ಈಗ, ನಮಗೆ ಆ ಪತಿ-ಪತ್ನಿಯರ ಜೀವನವನ್ನು ಸ್ವರ್ಗದ ಜೀವನದಂತೆ ಮಾಡುವುದು ಯಾವುದು “ಮಾತ್ರ” ಎಂದು ತಿಳಿಯಿತು. ಇನ್ನು, ಇದೇ ಪತಿ-ಪತ್ನಿಯರು, ಮದುವೆಯ ಮೊದಲು, ಹಲವು ಜನರನ್ನು ಎರಡು ಗಂಟೆಗಳ ಕಾಲ ಆ ತಾತ್ಕಾಲಿಕ ಮದುವೆಯಾಗುತ್ತಾ ಮತ್ತು ಬಿಡುತ್ತಾ ಹೋದಲ್ಲಿ, ಕೊನೆಗೆ ಆ ದೊಡ್ಡ ಕರ್ಚಿನ ಆ ದೊಡ್ಡ ಮದುವೆಯಲ್ಲಿ ಸಿಗುವ ಗಂಡ ಕೊನೆಯ ಗಂಡ ಮಾತ್ರ ಆಗುವನು ಅಲ್ಲವೇ? ಅದೇ ರೀತಿ, ಅಲ್ಲಿ ಸಿಗುವ ಹೆಂಡತಿಯು ಕೊನೆಯ ಹೆಂಡತಿ ಮಾತ್ರ ಆಗುದಿಲ್ಲವೇ? ಇನ್ನು, ದಾಂಪತ್ಯ ಜೀವನದ ರಾಜಮಾರ್ಗವಾಗಿರುವ  ಆ ಪವಿತ್ರ ‘ಆತ್ಮೀಯತೆ’ಯು ಅವರ ಮಧ್ಯೆ ಎಲ್ಲಿಂದ ಬರುವುದು??? ಈ ಆತ್ಮೀಯತೆ ಇಲ್ಲದ ಡೊಂಬರಾಟದ ಬದುಕು ಸಾಯುವ ತನಕದ ಬರೇ ಒಂದು ನೂಕುಗಾಡಿ ಮಾತ್ರ ಆಗುವುದು.  

ತಮ್ಮ ದಾಂಪತ್ಯ ಜೀವನವು ಚೆನ್ನಾಗಿರಬೇಕೆಂದು ತೀವ್ರವಾಗಿ ಬಯಸುವ ದಂಪತಿಗಳಿಗೆ, ಪ್ರತ್ಯೇಕ ಸ್ವಭಾವ-ಶುದ್ಧಿಯ ಅನುಷ್ಠಾನಗಳಿಂದ, ಉತ್ತಮ ದಾಂಪತ್ಯ ಜೀವನವನ್ನು ತಿರುಗಿ ಪಡೆಯಬಹುದು ಎಂಬುವುದು ಸತ್ಯವಾದರೂ, ಅದಕ್ಕೆ ಎರಡು ಕಡೆಯಿಂದಲೂ ಒಂದೇ ರೀತಿಯಲ್ಲಿ ಆ ತೀವ್ರ ಆಗ್ರಹವು ಹುಟ್ಟಿಬರಬೇಕಾದ ಅನಿವಾರ್ಯತೆ ಇದೆ ಎಂಬುವುದೇ ಅತಿ ಮುಖ್ಯ ಅಂಶವಾಗುವುದು.

ಅನೈತಿಕವಾಗಿ ನಡೆವವರಿಗೆ ನಿಮ್ಮ ಸಲಹೆ ಏನು?

ಉತ್ತರ- ಯಾರು ಹೇಗಿರಬೇಕೆಂದು ಅವರವರೇ ತೀರ್ಮಾನಿಸಬೇಕು. ಯಾರ ಮೇಲೂ ಯಾವುದೂ ಹೇರುವುದು ಸಾಧ್ಯವಿಲ್ಲ. ಆದರೆ, ಅನೈತಿಕವಾಗಿ ನಡೆಯಲು ಕೊನೆಯ ತೀರ್ಮಾನವನ್ನು ಮಾಡಿದವರಲ್ಲಿ ಒಂದು ಅಪೇಕ್ಷೆ ಮಾತ್ರ ಇದೆ, ಅದು ಏನೆಂದರೆ ನೀವು ದಯವಿಟ್ಟು ಅನೈತಿಕತೆಯನ್ನು ನೈತಿಕತೆಯ ತರ ಬಿಂಬಿಸಬೇಡಿ, ಅದು ಅತ್ಯಂತ ಅನ್ಯಾಯವಾಗಿಬಿಡುವುದು. ಸಮಾಜದಲ್ಲಿ ಮದುವೆಯ ಮೊದಲ ಗಂಡು ಹೆಣ್ಣಿನ ಸಂಬಂಧವನ್ನೂ ಸೇರಿ, ಎಲ್ಲಾ ಅನೈತಿಕತೆಗಳನ್ನು ಆದರ್ಶ ಎಂದು ಮಾತ್ರ ತಿಳಿಯಬೇಡಿ, ಮತ್ತು ಇನ್ನೊಬ್ಬರೂ  ಅದನ್ನೇ ಮಾಡುವಂತೆ ಪ್ರೋತ್ಸಾಹಿಸದಿದ್ದರೆ ಸಾಕಾಗುವುದು. ಆದರ್ಶ ಎಂದೂ ಆದರ್ಶವಾಗಿದೆ. ನಿಮ್ಮಿಂದ ಅದನ್ನು ಅನುಸರಿಸಲು ಸಾಧ್ಯವಾಗದಿದ್ದರೂ, ಕೊನೆಯ ಪಕ್ಷ, ಅದನ್ನು ದಯವಿಟ್ಟು ಗೌರವಿಸಿರಿ. ಹಾಗೆ ಮಾಡಿದರೆ, ಮುಂಬರುವ ಸಂತತಿಗಳಾದರೂ ಉತ್ತಮ ಜನರ ಒಂದು ಸತ್ಯಯುಗವನ್ನು ಈ ಜಗತ್ತಿನಲ್ಲಿ ಸೃಷ್ಟಿಸಿ ಈ ಜಗತ್ತನ್ನು ರಕ್ಷಿಸುವವು. ಅನೈತಿಕ ಕಾಮ, ಕ್ರೌರ್ಯಗಳು ಅವರಲ್ಲಿ ಕಡಿಮೆಯಾಗಿ, ಜಗತ್ತಿನ ಕಣ್ಣೀರನ್ನು ಒರೆಸುವ ಒಂದು ಮಹಾ ಮಾನವ ಜನಾಂಗ ಅದು ಆಗುವುದು.

ಸಾರ್ವತ್ರಿಕ ಪ್ರೀತಿಯನ್ನು ಅನುಷ್ಠಾನ ಮಾಡುವುದು ಹೇಗೆ?

ಉತ್ತರ- ಮೊದಲಿಗೆ ನೀವು ಸತ್ಯಸಂಧರಾಗದಿದ್ದರೆ ಈ ಸಾರ್ವತ್ರಿಕ ಪ್ರೀತಿಯನ್ನು ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಆತ್ಮೀಯ ಪ್ರೀತಿ ಹುಟ್ಟಿಕೊಳ್ಳುವುದು ಸ್ವಭಾವದ ಹಿನ್ನೆಲೆಯಲ್ಲಿ ಹೊರತು ಅದಕ್ಕೆ ಬೇರೆ ಮೂಲಗಳಿರುವುದಿಲ್ಲ. ಅಂದರೆ, ಅಪ್ಪಟ ಧರ್ಮದ ರೀತಿಯನ್ನು ಮಾತ್ರ ಇಲ್ಲಿ ಪಾಲಿಸುವ ಕಾರಣ, ಸತ್ಯವು ಎಲ್ಲಿದ್ದರೂ ಅದು ಮಾತ್ರ ಸತ್ಯ, ಅದು ತನ್ನಲ್ಲಾದರೆ ತಾನು ಸತ್ಯ, ಇನ್ನೊಬ್ಬನಲ್ಲಾದರೆ ಆತನದು ಸತ್ಯ ಎಂಬ ರೀತಿಯಾಗಿದೆ. ತಮ್ಮದು ಸತ್ಯ ಎಂದು ಎಲ್ಲರೂ ಅವರವರದನ್ನು ವಾದ ಮಾಡುವ ರೀತಿ ಇಲ್ಲಿಲ್ಲ. ಯಾಕೆಂದರೆ, ಅಲ್ಲಿ ಎಲ್ಲರೂ ಸತ್ಯವನ್ನು ತಮ್ಮ ತಮ್ಮ ಬೇಲಿಯೊಳಕ್ಕೆ ಎಳೆದು ತರಲು ಪ್ರಯತ್ನಿಸುವರು!!! ಸತ್ಯವು ಎಲ್ಲಿದ್ದರೂ “ಅಲ್ಲಿದೆ ಸತ್ಯ” ಎಂದು ಹೇಳುವಷ್ಟು ಸತ್ಯಸಂಧತೆ ಇಲ್ಲ!! ಧರ್ಮ, ಪಂಥಗಳು ಈ ಜಗತ್ತಲ್ಲಿ ಇದುವರೆಗೂ ಮಾಡಿರುವ ವಾದವು, ಈ ರೀತಿಯ ಸತ್ಯಸಂಧತೆಯೇ ಇಲ್ಲದ, ಆ ತನ್ನೆಡೆಗೆ ಸತ್ಯವನ್ನು ಎಳೆಯುವ ರೀತಿಯನ್ನು ಎಂದರೆ ಅಚ್ಚರಿಯಾಗುವುದಿಲ್ಲವೇ? ಆದುದರಿಂದ ಇಲ್ಲಿ ಸಾರ್ವತ್ರಿಕ ಪ್ರೀತಿ ಎಂದರೆ, ಅದು ವಿಭೀಷಣನು ತನ್ನವರನ್ನು ಮತ್ತು ಎಲ್ಲವನ್ನೂ ಬಿಟ್ಟು ಸತ್ಯ, ನ್ಯಾಯದ ಕಡೆಗೆ ಬಂದ ರೀತಿ ಎಂದು ತಿಳಿಯಬೇಕು. ಒಟ್ಟಿನಲ್ಲಿ,  ಸಾರ್ವತ್ರಿಕ ಪ್ರೀತಿ ಎಂದರೆ “ಸತ್ಯಸಂಧವಾದ ಮತ್ತು ವಿಶಾಲ ಮನಸ್ಸನ್ನು ಪಡೆದ ಈ ಜಗತ್ತಿನ ಎಲ್ಲಾ ಉತ್ತಮರ ಮೇಲೂ ಸೃಷ್ಟಿಯಾಗುವ ಆ ಆತ್ಮೀಯತೆಯಾಗಿದೆ”. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸತ್ಯ, ನ್ಯಾಯ ಇತ್ಯಾದಿಗಳನ್ನು ಕಳಕೊಂಡವರು ಮತ್ತು ಅದಕ್ಕೆ ವಿರುದ್ದವಾಗಿ ವರ್ತಿಸುವವರು, ಎಷ್ಟೇ ಹತ್ತಿರ ಸಂಬಂಧದವರಾದರೂ, ಅವರಲ್ಲಿ ಧ್ವೇಷವನ್ನು ಇಡದೆ, ಅವರಿಂದ ದೂರವಿರುವಂತೆ ಈ ಸಾರ್ವತ್ರಿಕ ಪ್ರೀತಿಯು ಹೇಳುವುದು. ಜನಸಾಮಾನ್ಯರಿಗೆ ಇದೆಲ್ಲಾ ಹಿಡಿಸಲಾರದ  ಮಾತುಗಳಾಗಿ ಕೇಳಿಸಬಹುದು. ಆದರೂ ಧರ್ಮ, ದೇವರು ಇತ್ಯಾದಿಗಳ ಮಾತನ್ನು ಯಾರಾದರೂ ಎತ್ತುವುದಾದರೆ, ಅಲ್ಲಿ ಈ ಆದರ್ಶದ ರೀತಿಯಲ್ಲದೆ ಬೇರೆ ರೀತಿಯು ಸಾಧ್ಯವೇ ಇಲ್ಲ.

ಹೆಚ್ಚಿನ ಕಡೆಯೂ ಧರ್ಮಪಂಡಿತರುಗಳು ‘ಇತರರಿಗೆ ಮೋಕ್ಷವಿಲ್ಲ’ ಅಥವಾ ‘ಸ್ವರ್ಗವಿಲ್ಲ’ ಎಂದು ಹೇಳುವರಲ್ಲಾ ಅದು ಯಾವ ಮೋಕ್ಷ ಅಥವಾ ಸ್ವರ್ಗ?

ಉತ್ತರ- ನಿಮ್ಮ ಸ್ವಂತದ್ದಾಗಿ ಮನೆ ಇರುವಾಗ, ಅಲ್ಲಿ, “ನನ್ನ ಮನೆಗೆ” ಅಥವಾ “ನಮ್ಮ ಮನೆಗೆ ಬರುವುದು ಬೇಡ” ಎಂದು ಯಾರಾದರೂ ಒಬ್ಬನಲ್ಲಿ ಹೇಳಿದರೆ ಅದು ಅವರ ಸ್ವಂತದ್ದು ಆದುದರಿಂದ ಅಲ್ಲಿ ಹಾಗೆ  ಹೇಳುವ ಸ್ವಾತಂತ್ರ್ಯ ಅವರಿಗಿದೆ.  ಆದರೆ, ಒಂದು ಊರಿಂದ ಒಂದು ಮನೆಯವರನ್ನು ಹೊರಟು ಹೋಗಬೇಕು ಅಂದರೆ “ಈ ಊರು ಆತನದೇ? ಅಥವಾ ಆ ಗುಂಪು ಜನರದೇ?” ಎಂದು ಹೇಳಿ ಆ ಊರಿನ ಉಳಿದ ಪ್ರಜ್ಞಾವಂತ ಜನರು ತಡೆಯುವ ಪ್ರಯತ್ನವನ್ನು ಮಾಡುವರು ಖಂಡಿತ. ಎಲ್ಲಾದರೂ ಆ ರೀತಿಯು ಸರಿ ಎಂದು ವಾದಿಸಿದರೆ, ಇತರರು ಈ ರೀತಿ ವಾದ ಮಾಡುವವರನ್ನು ಊರಿಂದ ಹೊರಹೋಗಲು ಹೇಳಿದರೆ ಅವರೂ ಹೋಗಲೇಬೇಕಾಗುವುದು ಮತ್ತು ಅದಕ್ಕೆ ಅವರು ಒಪ್ಪುವವರಾಗಿರಬೇಕು ಎಂಬ ಶರ್ತ ಬರುವುದು. ಇದೇ ರೀತಿ, ಎಲ್ಲಾ ಧರ್ಮಗಳಲ್ಲೂ, ಹೆಚ್ಚಿನ ಧರ್ಮಪಂಡಿತರುಗಳು ತಮ್ಮ ಧರ್ಮದಲ್ಲಿ ಮಾತ್ರ ಮೋಕ್ಷ ಅಥವಾ ಸ್ವರ್ಗ, ಮತ್ತು ಇತರ ಧರ್ಮದಲ್ಲಿ ಅದು ಸಾಧ್ಯವಾಗಲಾರದು ಎಂದು ಘಂಟಾಘೋಷವಾಗಿ ಅಲ್ಲಲ್ಲಿ ಸಾರಿ ಹೇಳುವಾಗ,  ಮೊಟ್ಟ ಮೊದಲು, ಆ ಧರ್ಮವು ಕೊನೆಯ ಪಕ್ಷ ಅವರ ಸ್ವಂತದ್ದಾದರೆ ಸ್ವಲ್ಪವಾದರೂ ಅರ್ಥವನ್ನು ಕಾಣಬಹುದು. ಅದಲ್ಲವಾದಲ್ಲಿ ಎಲ್ಲರೂ ಅದೇ ರೀತಿ ಹೇಳುವಾಗ ಅಲ್ಲಿ ಯಾವ ಸತ್ಯ, ನ್ಯಾಯಗಳಿಲ್ಲದೆ ಬರೇ ಅಧರ್ಮ ರೀತಿಯಾದ ಆ  ಬಲವಂತ ಹೇರುವಿಕೆ ಮಾತ್ರ ಕಾಣಿಸುವುದು. ಜಗತ್ತಲ್ಲಿ ನಮ್ಮ ಸಂಸ್ಥೆಯ ಸಾಬೂನುಗಳಿಗೆ ಮಾತ್ರ ಶುಚಿಗೊಳಿಸುವ ಸಾಮರ್ಥ್ಯವಿರುವುದು, ಇತರ ಸಂಸ್ಥೆಗಳದ್ದಕ್ಕೆ ಅದು ಇಲ್ಲ ಎಂದು ಯಾರಿಗಾದರೂ ಹೇಳಲು ಸಾಧ್ಯವಿದೆಯೇ? ಇನ್ನು ಆ ರೀತಿ ಹೇಳುವಂತೆ ಮೂಲದಲ್ಲಿ ತಿಳಿಸಿರುವುದು ಅವರವರ ದೇವರುಗಳೇ ಎಂದು ಹೇಳುವುದು ಅತ್ಯಂತ ಅಚ್ಚರಿಯ ವಿಷಯವಾಗಿದೆ!!! ಎಲ್ಲರೂ ಹೀಗೆ ಹೇಳುವಾಗ, “ಇವರೆಲ್ಲ ಹೇಳುತ್ತಿರುವುದು ಯಾವ ಸ್ವರ್ಗವನ್ನು?” ಎಂಬ ನಿಮ್ಮ ಪ್ರಶ್ನೆಯು ಸಹಜವಾಗಿಯೂ ಬರುವುದು. ಇಲ್ಲಿ ಎಲ್ಲಾ ಸ್ಪಷ್ಟವಾಗುವುದು, ಎಲ್ಲಾ ದೇವರುಗಳೂ ‘ದೇವತಾ ಹಂತ’ದಲ್ಲಿಯೇ ಮೇಲೆ ಇರುವ ಕಾರಣ ಅಲ್ಲಿ ಹಲವು ದೇವರುಗಳು ಮತ್ತು ಸೃಷ್ಟಿಕರ್ತ ದೇವರುಗಳು ಹಾಗೂ ಹಲವು ಸ್ವರ್ಗಗಳು ತಾನಾಗಿ ಸೃಷ್ಟಿಯಾಗಿವೆ ಎಂಬುವುದನ್ನು ಮಾತ್ರ ಇದು ತೋರಿಸುವುದು. ಅಂದರೆ, ನಾನು ಸೂಕ್ಷ್ಮದಲ್ಲಿ ಸ್ಪಷ್ಟವಾಗಿ ಕಂಡ ಆ ಸಾಮಾನ್ಯ ದೇವತೆಗಳು ಮತ್ತು ಸೃಷ್ಟಿಕರ್ತ ದೇವತೆಗಳು ಎಂಬ ಆ ಎರಡು ದೇವತಾ ವರ್ಗವನ್ನೇ ಇದು ಪುಷ್ಠೀಕರಿಸುವುದು ಎಂದು ಹೇಳಬಹುದು. 

ಇನ್ನು, ಇದಕ್ಕೆ ಸುಲಭ ಪರಿಹಾರವು “ಅವರವರ ದೇವರ ಸ್ವರ್ಗಕ್ಕೆ ಅವರವರು ಹೋಗಲಿ, ಮತ್ತು ಅವರವರ ಸ್ವರ್ಗಕ್ಕೆ ಹೋಗುವ ಜನರನ್ನು ತಡೆದು ತಮ್ಮ ದೇವತೆಯ ಸ್ವರ್ಗದ ಕಡೆಗೆ ಎಳೆಯಲು ಪ್ರಯತ್ನಿಸುವುದನ್ನು ನಿಲ್ಲಿಸಲಿ” ಎಂಬುವುದು ಮಾತ್ರವಾಗಿದೆ. ಆದರೆ ನಿಜವಾಗಿಯೂ ನಡೆಯುತ್ತಿರುವುದು ಈ ದೇವರು ಮತ್ತು ಸ್ವರ್ಗಭೇದದಿಂದ ಸೃಷ್ಟಿಯಾದ ಧರ್ಮಾಂಧತೆಯ ಧ್ವೇಷದ ಹಿಂಸೆ, ರಕ್ತಪಾತ ಎಂದು ನಮಗೆಲ್ಲ ತಿಳಿದಿದೆ. ಇಷ್ಟು ಮಾತ್ರವಲ್ಲ, ಆ ಸತ್ಯ, ಪ್ರೀತಿಯ ನಿಧಿಗಳಾಗಿ ಜೀವಿಸಿದ ಆ ಮಹಾ ವ್ಯಕ್ತಿಗಳೂ, ಬರೇ ಇನ್ನೊಂದು ಧರ್ಮದಲ್ಲಿ ಇರುವ ಕಾರಣಕ್ಕೆ, ಅವರನ್ನೂ “ನರಕಕ್ಕೆ ಹೋಗುವವರು” ಎಂದು ಹೇಳುವಾಗ ಅದು  ನಿಜವಾಗಿಯೂ ಧರ್ಮದ ದುರುಪಯೋಗದ ಪರಮಾವಧಿ ಮಾತ್ರ ಆಗುವುದು. ಇಲ್ಲೆಲ್ಲಾ ಧರ್ಮ, ದೇವರು, ಎಂದರೆ ಏನು ಎಂಬ ಚಿಂತನೆಯೇ ಇಲ್ಲದ್ದು ಸ್ಪಷ್ಟವಾಗಿ ಅರಿವಾಗುವುದು. ಹಾಗೆ ಸತ್ಯದ ಹಿನ್ನೆಲೆಯಲ್ಲಿ ಚಿಂತಿಸಿದ್ದರೆ, ಯಾರಿಗೂ ಈ ರೀತಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಬರೇ ನಂಬಿಕೆಯ ಕಂಠಪಾಠದ ಆವರ್ತನೆಯು ಇಷ್ಟೆಲ್ಲಾ ಭಯಾನಕ ಗೊಂದಲಗಳನ್ನು ಎಬ್ಬಿಸುತ್ತಿವೆ ಎಂಬುವುದು ಸ್ಪಷ್ಟವಾಗುವುದು. ಆ ಪ್ರಾಚೀನ ವಾಮಾಚಾರದ ಕೈಗೊಂಬೆಗಳು ಈ ಮಾನವರು ಎಂಬುದಕ್ಕೆ ಇನ್ನು ಬೇರೆ ಉದಾಹರಣೆ ಬೇಕೆ?

ಮಹಾತ್ಮರ ದಾರಿಯಲ್ಲಿ ಸಾಧನೆ ಮಾಡುವವರು, ಆ ಮಹಾಜೀವನವನ್ನು ಸುಲಭದಲ್ಲಿ ಪಡೆಯಲು, ತಮ್ಮ ಸಾಧನೆಗಳೊಂದಿಗೆ ಇನ್ನು ಬೇರೆ ಏನು ಮಾಡುವರು?  

ಉತ್ತರ- ಮಹಾತ್ಮರ ದಾರಿಯಲ್ಲಿರುವವರು ತಾವು ಸಾಧನೆ ಮಾಡುತ್ತಾ ಇರುವ ಕಾಲದಲ್ಲಿ ತಮ್ಮ ಮನಸ್ಸು ಹೇಳುವ ಎಲ್ಲವನ್ನೂ ಕೇಳುವುದಿಲ್ಲ ಅಥವಾ ಅನುಸರಿಸುವುದಿಲ್ಲ. ಯಾಕೆಂದರೆ ಅದರಲ್ಲಿ ಆ ಪ್ರಾಚೀನ ವಾಮಾಚಾರ ಶಕ್ತಿಗಳು ಸದಾ ತಮ್ಮ ಪ್ರಭಾವವನ್ನು ಬೀರುತ್ತಿರುತ್ತವೆ ಎಂದು ಅವರಿಗೆ ತಿಳಿದಿದೆ. ಆದುದರಿಂದ ಆ ಮನಸ್ಸಿನ ಆ ಸರ್ವನಾಶದ ಸ್ವಾರ್ಥ ಬೋಧನೆಯ ಬದಲು, ಅವರು ‘ಮಹಾತ್ಮರ ದಾರಿ’ಯು ಸಾರ್ವತ್ರಿಕ ಸತ್ಯದ ಹಿನ್ನೆಲೆಯಲ್ಲಿ ತರ್ಕ ಬದ್ಧವಾಗಿ ಏನು ಹೇಳುವುದೋ ಅಥವಾ ಬೋಧಿಸುವುದೋ ಅದರಲ್ಲಿ ಮಾತ್ರ ಜೀವಿಸುವರು. ತನ್ನ ಜೀವನವೆಂಬ ಆ ರೈಲು ಗಾಡಿಯು ಚಲಿಸಲಿರುವ ಆ ರೈಲು ಹಳಿಯು ಅವರಿಗೆ ತಮ್ಮ ಸಾಧನಾ ರೀತಿಯಾಗಿ ಮೊದಲೇ ದೊರಕಿದೆ. ಇನ್ನು ಅವರಿಗಿರುವ ಆ ಏಕೈಕ ಸುಲಭದ ಕೆಲಸವು ಆ ದಾರಿಯಲ್ಲಿ ಚಲಿಸುವುದು ಮಾತ್ರವಾಗಿದೆ. ಅಂದರೆ, ಮಹಾತ್ಮರು ಆ ಪರಮ ಸತ್ಯದ ಹಿನ್ನೆಲೆಯಲ್ಲಿ ದೊರಕಿರುವ ಆ ಪರಮ ಪಾವನ ತೀರ್ಮಾನಗಳಲ್ಲಿ ಜೀವಿಸುವವರು ಎಂದು ಅರ್ಥ. ಈ ಪಾವನ ತೀರ್ಮಾನಗಳು, ಅವರಿಗೆ, ಪಾವನ ಜೀವನದೊಂದಿಗೆ ಆ ಸಾರ್ಥಕ ಜೀವನ ಆನಂದವನ್ನೂ ಹಂತ ಹಂತವಾಗಿ ದೊರಕಿಸಿಕೊಡುವುದು!

ಮಾನವನಿಗೆ ಸಾಮಾನ್ಯವಾಗಿ ಹೆಚ್ಚು ಹಿತ ಮತ್ತು ಖುಷಿಯನ್ನು ಯಾವ ಪರಿಸ್ಥಿತಿಯು ಕೊಡುವುದು?

ಉತ್ತರ- ಸಾಮಾನ್ಯನಿಗೆ ತನ್ನ ಮನೆಯ ವಾತಾವರಣದಂತೆ ಭಾಸವಾಗುವುದು ಆತನ ಆಸಕ್ತಿಯ ವಲಯಗಳಲ್ಲಿ ಮಾತ್ರವಾಗಿದೆ. ಇಂದಿನ ಮಾನವನಿಗೆ ತನ್ನ ಆಸಕ್ತಿಯ ಜೀವನವು ಇತರರ ಬಗ್ಗೆ ಕಾಳಜಿ ಇಲ್ಲದಿರುವ, ಆದರೆ ಬರೇ ತನ್ನ ಬಗ್ಗೆ ಮತ್ತು ತನ್ನನ್ನು ಕೇಂದ್ರವಾಗಿಟ್ಟು ಜೀವಿಸುವಲ್ಲಿ ಮಾತ್ರ ಇರುವುದು. ಮಹಾತ್ಮನ ದಾರಿಯನ್ನು ಬಯಸುವವರು ಮೊಟ್ಟ ಮೊದಲಿಗೆ ಈ ಅತ್ಯಂತ ಅಧಪತನದಿಂದ ಪಾರಾಗುವ ರೀತಿಗಳನ್ನು ಅವಲಂಭಿಸುವರು, ಇದು ಯಾಕೆಂದರೆ ತಾನು ಚೆನ್ನಾಗಿ ಜೀವಿಸುವಾಗ ತನ್ನೊಂದಿಗೆ ಇತರರೂ ಚೆನ್ನಾಗಿ ಜೀವಿಸಬೇಕೆಂಬ ಆ ಸ್ಪಷ್ಟ ಬೋಧ ಅವರಿಗಿರುವುದು. ಜನರು ಮಹಾತ್ಮರಾಗಲು ಬಯಸದೆ ಇರುವುದಕ್ಕೆ ಕಾರಣ, ತನ್ನ ಮೇಲಿನ ಆಸಕ್ತಿಯನ್ನು ತಾನು ಕಡಿಮೆ ಮಾಡಬೇಕೆಂಬ ಆ ಒಂದು ಭಯವಾಗಿರುವುದು!! ಸಾಮಾನ್ಯ ಜನರು ತಮ್ಮನ್ನೇ ಕೇಂದ್ರವಾಗಿಟ್ಟು ಜೀವಿಸಿ ಆನಂದಿಸಲು ಪ್ರಯತ್ನಪಡುವರು, ಆದರೆ ಅದರ ಫಲ ಮಾತ್ರ ತಲೆಕೆಡಿಸಿಕೊಂಡೇ ದಿನ ನೂಕುವ ತರ ಇರುವುದು, ಅವರಿಗೆ ಶಾಂತಿ, ನೆಮ್ಮದಿ ಮತ್ತು ತೃಪ್ತಿ ಎಂಬುವುದು ಇರುವುದಿಲ್ಲ. ನಿಜವಾಗಿಯೂ ಈ ಭೂಮಿಯ ಜೀವನವನ್ನು ಬಹಳ ಚೆನ್ನಾಗಿ ಆಸ್ವದಿಸುವವರು [ಮರದಡಿಯ ಮಹಾತ್ಮರಲ್ಲದ] ಮನೆಯಲ್ಲೇ ತಯಾರಾಗಿರುವ ಮಹಾತ್ಮರುಗಳು ಎಂಬ ಪರಮ ಸತ್ಯವನ್ನು ಜನರು ತಿಳಿಯದಾಗಿರುವರು.    

ನಾವು ಪಡಕೊಂಡವುಗಳು ನಮಗೆ ಹೆಚ್ಚು ಸಂತೋಷವನ್ನು ಕೊಡಲಾರವೇ?

ಉತ್ತರ- ಇರುವಿಕೆಯು ಅಹಂಕಾರದ ವರ್ಧನೆಗೆ ಕಾರಣವಾಗುವುದು. ಅಹಂಕಾರವು ಯಾವಾಗಲೂ ಆ ಇರುವಿಕೆಗಳಲ್ಲಿ ಲೀನವಾಗಿಯೇ ಇರುವುದು, ಹೊರತು ತನ್ನ ತಲೆಯನ್ನು ಹೊರಗೆ ಹಾಕಿ ಆ ವ್ಯಕ್ತಿಗೆ ತಿಳಿಯುವ ತರದಲ್ಲಿ ಆತನ ಮನಸ್ಸಿನಲ್ಲಿ ಕೂತಿರುವುದಿಲ್ಲ. ಅಂದರೆ, ಅಧಿಕಾರ, ಮೆಲು ಜಾತಿ, ಸಂಪತ್ತು, ಬುದ್ಧಿ, ವಿಧ್ಯೆ, ಸೌಂದರ್ಯ, ಇತ್ಯಾದಿಗಳು ಎಲ್ಲೆಲ್ಲಾ ಇರುವವೋ, ಅಲ್ಲೆಲ್ಲಾ ಈ ಅಹಂಕಾರವೂ ಅವುಗಳ ಒಳಗಿಂದಲೇ ಸೇರಿ ತನ್ನ ಕೆಲಸವನ್ನು ಸುಪ್ತವಾಗಿಯೇ ನಿರ್ವಹಿಸುವುದು! ಆಗ, ಮೊದಲಿಗೆ ಅವುಗಳು ಕ್ರಿಯೆ ಮತ್ತು ಮಾತುಗಳಲ್ಲಿ ಪ್ರಕಟವಾಗಲು ಆರಂಭಿಸುವವು.

ಇರುವವರಿಗೆ, ಇದರಿಂದ ಪಾರಾಗಲು ಇರುವ ಮಾರ್ಗವು, ತನಗೆ ತಾನೇ ಅರಿವನ್ನು ಉಂಟುಮಾಡಿಕೊಡುವ ಆ ಸತ್ಯಚಿಂತನೆ ಆಗಿದೆ. ಈ ತನಗೆ ತಾನೇ ಮಾಡುವ ಸತ್ಯಚಿಂತನೆಯನ್ನು ಆತ್ಮಪರಿಶೋಧನೆ ಎಂದೂ ಹೇಳುವರು. ಇದನ್ನು ಮಾಡದೆ ಇದ್ದಲ್ಲಿ, ಹಲವು ಕೋಟಿ ವರುಷ ಕಳೆದರೂ ಆತನು ಅಹಂಕಾರದಿಂದ ಪಾರಾಗಲಾರ ಎಂಬುವುದನ್ನು ಮರೆಯಬಾರದು. ಒಟ್ಟಿನಲ್ಲಿ, “ನಾನು” ಮತ್ತು “ನನ್ನದು” ಎಂದು ಹೇಳಿಕೊಳ್ಳುವ ಅಥವಾ ಹೇಳಿಕೊಳ್ಳಲು ಬಯಸುವ ವ್ಯಕ್ತಿಗಳಿಗೆ ಇದರಿಂದ ಎಂದಿಗೂ ಪಾರಾಗಲು ಸಾಧ್ಯವೇ ಇಲ್ಲ. ಅವರು ಇಂದು ತನ್ನಲ್ಲಿರುವುದನ್ನು ತೋರಿಸಿ ಕೊಚ್ಚಿಕೊಳ್ಳುವರು. ಆದರೆ, ನಾಳೆ ಇತರರಿಗೆ ಅದಕ್ಕಿಂತ ಹೆಚ್ಚು ಬರುವಾಗ, ಅದೇ ಕೊಚ್ಚಿಕೊಳ್ಳುವಿಕೆಯ ಸಂತೋಷವು ಭಸ್ಮವಾಗಿ, ದುಃಖದ ಮೊಗದೊಂದಿಗೆ ಕೊರಗಲು ಆರಂಭಿಸುವರು! ಈ ರೀತಿ, ಹಿಗ್ಗುವಿಕೆ ಮತ್ತು ಕುಗ್ಗುವಿಕೆಯೇ ಅವರ ಜೀವನವಾಗುವುದು. ಕೊನೆಯಲ್ಲಿ, ಶರೀರವೇ ಕುಗ್ಗುವ ವೇಳೆಗೆ, ಈ ಜುಗಾರಿ ಜೀವನದ ಆ ಕೊನೆಯ ಲೆಕ್ಕಾಚಾರವನ್ನು ಮಾಡುವಾಗ, ಹಿಗ್ಗುವಿಕೆಗಿಂತ ಕುಗ್ಗುವಿಕೆಯ ರಾಶಿಯೇ ಹೆಚ್ಚಿರುವುದು ಅವರಿಗೆ ಕಾಣಿಸುವುದು! ಎಲ್ಲಾ ಇದ್ದರೂ, ಈ ಅಹಂಕಾರವು ಹೇಗೆ ಮಾನವನ ಜೀವನವನ್ನು ಸರ್ವನಾಶ ಮಾಡಿಬಿಡುವುದು ಎಂಬುವುದನ್ನು ಇಲ್ಲಿ ಕಾಣಬಹುದು! ಆದರೆ, ಮಾಹಾತ್ಮರ ಜೀವನದ ಆ ಸಾಧನೆಗಳನ್ನು ಹೆಚ್ಚು ಹೆಚ್ಚು ಮಾಡುತ್ತಾ ಹೋದಂತೆ, ‘ಅಲ್ಪನ ಹಿಗ್ಗುವಿಕೆ’ ಮತ್ತು ‘ದುಃಖದಿಂದ ಕುಗ್ಗುವಿಕೆ’ ಎಂಬ ಈ ಎರಡು ರೀತಿಯ ತೊಂದರೆಗಳೂ ಇಲ್ಲವಾಗಿ, ಅವರು ಜೀವನದ ಹೆಚ್ಚಿನ ಕಾಲವನ್ನು ಧನ್ಯತೆಯ “ಆನಂದ” ದಿಂದ ಮಾತ್ರ ಜೀವಿಸಿ ಸಾರ್ಥಕ ಬದುಕನ್ನು ಪಡೆವರು.

ಧರ್ಮವು ಸರ್ವ ಜನತೆಗೂ ಅಗತ್ಯವೆಂದು ಅತ್ಯಂತ ಸರಳವಾಗಿ ಮತ್ತು ಅದನ್ನು ಚುಟುಕು ವಿವರಣೆಯೊಂದಿಗೆ ವಿವರಿಸಬಹುದೇ?

ಉತ್ತರ- ನಾವು ಒಬ್ಬಾತನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳೋಣ. ಅವುಗಳಿಗೆ ಆತನು ಉತ್ತರಿಸುವಾಗಲೇ ಸರ್ವರಿಗೂ ಧರ್ಮದ ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ಉತ್ತರ ಸಿಗುವುದು! ಮೊದಲ ಪ್ರಶ್ನೆಯಿಂದ ಆರಂಭಿಸೋಣ, “ನಿಮ್ಮ ಮನೆಯನ್ನು ಒಬ್ಬ ಕಳ್ಳನು ಕಳ್ಳತನ ಮಾಡಬೇಕೇ? ನಿಮ್ಮ ಮಕ್ಕಳನ್ನು ಇನ್ನೊಬ್ಬರು ಭಯಾನಕವಾಗಿ ಹೊಡೆದು ಹಾಕುವುದಾದರೆ ಅದು ನಿಮಗೆ ಬೇಕೇ? ನಿಮ್ಮ ಮನೆಯ ಗಂಡು ಮತ್ತು ಹೆಣ್ಣುಮಕ್ಕಳು ದಾರಿ ತಪ್ಪಿ ನಡೆಯಬೇಕೇ?“ ಇನ್ನೂ ಹಲವು ಪ್ರಶ್ನೆಗಳಿವೆ. ಈ ಮೇಲಿನ ಆ ಕೆಲವು ಪ್ರಶ್ನೆಗಳಿಗೆ ಆತನ  ಉತ್ತರವು “ಬೇಡ” ಎಂದಾದರೆ ಆತನಿಗೆ ಧರ್ಮದ ಅಗತ್ಯವಿದೆ ಎಂದಾಗುವುದು. ಆದರೆ ಆತನ ಉತ್ತರವು “ಬೇಕು” ಎಂದಾದರೆ ಆತನಿಗೆ ಧರ್ಮದ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ನಿಜವಾದ ಧರ್ಮದ ಪಾಲನೆಯ ರೀತಿಯಲ್ಲಿ ಅದು ಮನುಷ್ಯನ ಕಾವಲುಗಾರನಂತೆ ಇರುವುದು. ಆತನನ್ನು ಎಲ್ಲಾ ಅಪಾಯಗಳಿಂದ ಅದು ನಿರಂತರ ರಕ್ಷಿಸುವುದು!! 

ಧರ್ಮವು ಸರ್ವ ಮಾನವರಿಗೂ ಅಗತ್ಯವಿದೆ. ಅದಿಲ್ಲವಾದರೆ ಆತನು ಕಾಡು ಜನಾಂಗಕ್ಕಿಂತ ವ್ಯತ್ಯಸ್ಥನಾಗುವುದಿಲ್ಲ. ಆದರೆ, ನಾವು ಕಾಣುವ ಆಚಾರ-ಧರ್ಮಗಳು ಆತನನ್ನು ಅಸೂಯೆ, ಹಿಂಸೆ, ಶೋಷಣೆ, ರಕ್ತಪಾತಗಳ ಮೂಲಕ ಆ ಕಾಡು ಜನಾಂಗದವನಿಗಿಂತಲೂ ನಿಕೃಷ್ಠನನ್ನಾಗಿ ಮಾಡುವುದು ಎಂಬುವುದನ್ನು ನಾವು ಪ್ರತ್ಯೇಕವಾಗಿ ತಿಳಿಯಬೇಕಾಗಿದೆ.  ನಿಜವಾಗಿಯೂ, ‘ತನ್ನೊಂದಿಗೆ ಇತರರೂ ಚೆನ್ನಾಗಿ ಜೀವಿಸಬೇಕು’ ಎಂಬ ಭಾವನೆಯನ್ನು ಸೃಷ್ಟಿಸಿ ಬೆಳೆಸುವುದೇ ಯಾವುದೇ ನಿಜವಾದ ಧರ್ಮದ ಪೂರ್ಣ ಸಾರವಾಗಿದೆ. ಮಾನವನಿಗೆ ಇದೊಂದೇ ಸಾಕು ಪೂರ್ಣ ಧರ್ಮವನ್ನು ಪಾಲಿಸಲು. ಉಳಿದ ಎಲ್ಲವೂ ಹಲವು ರೀತಿಯ ಆಧ್ಯಾತ್ಮ ರೀತಿಗಳು ಮಾತ್ರವಾಗಿವೆ! ಮಾತ್ರವಲ್ಲ, ಅವು ಮಾನವನ ಬರೇ ಆಯ್ಕೆ ಆಗುವವು. ಆಯ್ಕೆ ಮಾತ್ರವಾಗಬೇಕಾದ ಆ ಆಧ್ಯಾತ್ಮವನ್ನು ಧರ್ಮದೊಂದಿಗೆ ಸೇರಿಸಿ ಧರ್ಮವನ್ನು ನೋಡುವಾಗ ಮಾತ್ರ ಅಲ್ಲಿ ರಕ್ತಪಾತದವರೆಗಿನ ಸರ್ವ ರೀತಿಯ ಭಯಾನಕ ತೊಂದರೆಗಳೂ ಎದ್ದು ಬರುವುದನ್ನು ನಮಗೆ ಕಾಣಲು ಸಾಧ್ಯವಾಗುವುದು. ಆದರೆ, ಅವನ್ನು ತಮ್ಮೊಳಗೆ ಸೇರಿಸದಿದ್ದಲ್ಲಿ, ಮಾನವರೆಲ್ಲಾ ಒಂದಾಗುವ, ಎಲ್ಲಾ ಧರ್ಮಗಳ, ಆ ಸಾರ್ವತ್ರಿಕ ಧರ್ಮ-ಭಾಗವು ನಮಗೆಲ್ಲರಿಗೂ ಆ ಒಂದೇ ಮನೆಯಾಗಿ ಲಭ್ಯವಾಗುವುದು. ಆಗ, ಅಲ್ಲಿ, ಸರ್ವಮಾನವರಿಗೂ ಆ ಆನಂದದ ಪ್ರೀತಿಯ ಜೀವನ ದೊರಕುವುದು ಎಂಬುವುದು ಖಂಡಿತವಾಗುವುದು. ಇದನ್ನೇ ಸತ್ಯಯುಗ ಎನ್ನುವುದು.

ಇನ್ನು, ‘ನೈತಿಕತೆ ಮಾತ್ರ ಸಾಕು, ಧರ್ಮದ ಅಗತ್ಯವಿಲ್ಲ’ ಎನ್ನುವ ನಾಸ್ತಿಕ ಜನರು ಇರುವರು. ಈ ಜನರು ನಿಜವಾಗಿಯೂ ನೈತಿಕತೆಯನ್ನು ಸತ್ಯಸಂಧವಾಗಿ ಒಪ್ಪುವುದಾದರೆ ಅವರು ಧರ್ಮವನ್ನೇ ಎತ್ತಿ ಹಿಡಿದಿರುವರು. ಈ ಸತ್ಯವನ್ನು ಅವರು ಸ್ವತಃ  ಮರೆತಿದ್ದಾರೆ!! ಒಟ್ಟಿನಲ್ಲಿ, ‘ದೇವರು ಇಲ್ಲವೋ, ಅಥವಾ ಇರುವನೋ’ ಎಂಬ ಆ ಹಳೇ ಚರ್ಚೆಗಳು ಅಲ್ಲ ಧರ್ಮವನ್ನು ನಿರ್ಧರಿಸುವುದು. ಯಾಕೆಂದರೆ, ದೇವರಿಲ್ಲದ ಧರ್ಮಗಳೂ ಈ ಜಗತ್ತಲ್ಲಿ ಜೀವಂತವಾಗಿರುವುದು ಅದಕ್ಕೆ ಸಾಕ್ಷ್ಯಗಳಾಗಿ ಇರುವವು. ಅಂದರೆ, ‘ಮಾನವೀಯತೆಗೆ ವಿರುದ್ಧವಾಗದ’ ಆ ಶುದ್ಧ ನೈತಿಕತೆಯೇ ನಿಜವಾಗಿಯೂ ಧರ್ಮವಾಗಿದೆ ಎಂದು ತಿಳಿಯಬೇಕು! ಉಳಿದ ಎಲ್ಲವೂ ಬರೇ  ಮಾನವನ ಆಯ್ಕೆಯ ಆಧ್ಯಾತ್ಮವಾಗುವವು. ಈ ಹಿನ್ನೆಲೆಯಲ್ಲಿ, ಆ ಶುದ್ಧ ನೈತಿಕತೆಯನ್ನು ಹಿಡಿದೆತ್ತುವ ಎಲ್ಲಾ ನಾಸ್ತಿಕರು ಧರ್ಮಿಷ್ಠರೇ ಆಗುವರು ಎಂದು ಸ್ಪಷ್ಟವಾಗುವುದು.  ಅದೇ ರೀತಿ, ಆ ಶುದ್ಧ ನೈತಿಕತೆಯನ್ನು ಹಿಡಿದೆತ್ತದ ಆಸ್ತಿಕರು ಹಾಗೂ ನಾಸ್ತಿಕರು ಅಧರ್ಮಿಗಳು ಮಾತ್ರವೇ ಆಗುವರು ಎಂದೂ ಅದರೊಂದಿಗೆ ನಮಗೆ ಅರಿವಾಗುವುದು!! 

ಒಂದು ಮಗು ಹುಟ್ಟಿ ಸಾಯುವ ತನಕ ಆತನು ತನ್ನ ಜೀವನದ ಪ್ರತಿ ಕೆಲಸಗಳನ್ನಾಗಿ ಏನು ಮತ್ತು ಹೇಗೆ ಮಾಡಬೇಕು ಎಂದು ಧರ್ಮಗಳು ವಿವರಿಸಿರುವವು. ಆದರೆ, ಅವನ್ನೇ ಅಯಾ ಧರ್ಮಗಳ ಶ್ರೇಷ್ಠತೆಯನ್ನು ವಿವರಿಸಲೂ ಮುಖ್ಯವಾಗಿ  ಉಪಯೋಗಿಸುವರು. ಇದು ಸರಿಯೇ, ಮತ್ತು ನೀವು ಹೇಳುತ್ತಿರುವ ಆ ಸಾರಧರ್ಮವೂ ಇಂಥ ನಿಯಮಗಳನ್ನು ಉದ್ದೇಶಿಸಿರುವುದೇ? 

ಉತ್ತರ- ಒಂದು ಅಂಶವನ್ನು ನಾವು ಮೊದಲಲ್ಲೇ ಬಹಳ ಗಮನಕೊಟ್ಟು ತಿಳಿಯಲೇಬೇಕು. ಅದು ಏನೆಂದರೆ ‘ಇತರರ ಒಳಿತು’ ಮತ್ತು ತನ್ನ ಒಳಿತಿನ ಹಿನ್ನೆಲೆಯಲ್ಲಿ ಇರುವ ಆ ಸಮಾನತೆಯ ಅದ್ಭುತ ನಿಯಮಗಳು ಮಾತ್ರ ‘ಸಾರಧರ್ಮ’ ಆಗಲು ಸಾಧ್ಯ ಎಂದಾಗಿದೆ. ಅಸಮಾನತೆಯು ಇರುವುದಾದರೆ ಅಲ್ಲಿ “ಇತರರ ಒಳಿತು” ಎಂಬ ಮಾತೇ ಅಗತ್ಯವಿರುವುದಿಲ್ಲ, ಯಾಕೆಂದರೆ ಅದು ಅಲ್ಲಿ ಸಾಧ್ಯವಾಗುವುದಿಲ್ಲ! ಇಲ್ಲಿ, “ಇತರರು” ಎಂದರೆ ಇತರ ಮಾನವರು ಎಂದು ಅರ್ಥ. ತನ್ನ ಧರ್ಮ, ಪಂಥದೊಳಗಿನ ಮಾನವರು ಮಾತ್ರ ಎಂದಲ್ಲ!! ಹಾಗೆ ಯಾರಾದರೂ ತನ್ನ ಧರ್ಮ, ಪಂಥದೊಳಗಿನ ಜನರನ್ನು ಮಾತ್ರ ಉದ್ದೇಶಿಸುವುದಾದರೆ ಆತನ ದೇವರು ಸೃಷ್ಟಿಕರ್ತ ದೇವರಾಗಲು ಸಾಧ್ಯವೇ ಆಗುವುದಿಲ್ಲ. ಅದು ಸೃಷ್ಟಿಕರ್ತ ದೇವರನ್ನು ದೇವತೆಯ ಹಂತಕ್ಕೆ ತಗ್ಗಿಸಿದಂತೆ ಆಗುವುದು ಎಂಬುವುದು ಇನ್ನೊಂದು ವಿರೋಧಾಭಾಸವಾಗುವುದು.

ಇನ್ನು, ಮಾನವನು ಹುಟ್ಟಿನಿಂದ ಸಾಯುವ ತನಕ ಏನೇನು ಮಾಡಬೇಕು ಎಂದು ಎಲ್ಲಾ ಧರ್ಮಗಳಲ್ಲೂ ಹೇಳುವ ನಿಯಮಗಳಲ್ಲಿ ಹಲವು ಆಚಾರಗಳು ತುಂಬಿರುವುದರಿಂದ ಅವುಗಳು ಎಲ್ಲವೂ ಒಟ್ಟಾಗಿ “ಸಾರಧರ್ಮ” ಅಲ್ಲ ಎಂಬುವುದನ್ನು ತಿಳಿದುಕೊಳ್ಳಬೇಕು. ಅವನ್ನು ಧರ್ಮದ ಆಧ್ಯಾತ್ಮ ಭಾಗದ ಹಿನ್ನೆಲೆಯಲ್ಲಿ ಪ್ರತ್ಯೇಕಿಸಿ ಅನುಷ್ಠಾನ ಮಾಡುವುದಾದರೆ ಮಾಡಬಹುದು. ಆಚಾರಗಳು ಒಂದು ಧರ್ಮದಲ್ಲಿ ಒಂದು ರೀತಿಯಾಗಿದ್ದರೆ ಇನ್ನೊಂದು ಧರ್ಮದಲ್ಲಿ ಅದರ ವಿರುದ್ಧ ರೀತಿಯಲ್ಲಿ ಇರುವುದು. ಇದನ್ನು ವಿವರಿಸಲು ಹೊರಟರೆ ನಮಗೆ ಹಲವು ಗಂಟೆಗಳು ಬೇಕಾಗುವುದು. ಆದುದರಿಂದ ಅದರ ಬಗ್ಗೆ ನೀವೇ ತಿಳಿದುಕೊಳ್ಳಿರಿ. ಆದರೆ ಒಂದಂತೂ ಸತ್ಯವೆಂದು ಎಲ್ಲರಿಗೂ ತಿಳಿದಿದೆ, ಅದು ಈ ಜಗತ್ತಿನಲ್ಲಿ ಇಷ್ಟೆಲ್ಲಾ ಧ್ವೇಷ, ರಕ್ತಪಾತಗಳಿಗೆ ಈ ವಿರುದ್ಧ ಆಚಾರಗಳೇ ಕಾರಣ ಎಂದು ಆಗಿದೆ. ಆದುದರಿಂದ ಯಾವ ಧರ್ಮದ ಆಚಾರ ಸಹಿತ ಇರುವ ಮಾನವ ಜೀವನ ನಿಯಮಗಳನ್ನು ಖಂಡಿತವಾಗಿಯೂ “ಸಾರಧರ್ಮ” ವಾಗಿ ಉದ್ದೇಶಿಸಿಲ್ಲ ಎಂದು ಸ್ಪಷ್ಟವಾಗಿ ತಿಳಿಯಬೇಕು. ಒಟ್ಟಿನಲ್ಲಿ, ‘ಇತರರೂ ಚೆನ್ನಾಗಿರಬೇಕು ಮತ್ತು ತಾನೂ ಚೆನ್ನಾಗಿ ಜೀವಿಸಬೇಕು’ ಎಂಬ ಆಶಯದ ಮೇಲೆ ನಿಂತಿರುವ ಆ  ಸಾರಧರ್ಮವು ನಿಜವಾಗಿಯೂ ಮಾನವರಲ್ಲಿ ಹೇಳುವುದು ಚಿಂತಿಸಲು ಮಾತ್ರವಾಗಿದೆ! ಇದು ಯಾಕೆಂದರೆ, ತನಗೆ ಬರಬಾರದ ತೊಂದರೆಗಳು ಇತರರಿಗೂ ಬರಬಾರದು ಎಂದು ಆತನು ಆಲೋಚಿಸಿ ಜೀವಿಸಬೇಕಾಗಿರುವುದು. ಮಾನವರಿಗೆ ಚಿಂತಿಸುವುದು ಕಷ್ಟ ಎಂದು ವಾದಿಸುವವರು ಇಲ್ಲಿ ಪ್ರತ್ಯೇಕವಾಗಿ ಗಮನಿಸಬೇಕು. ಮಾನವರಿಗೆ ಯಾವೆಲ್ಲಾ ತೊಂದರೆಗಳು ಬರುವುದು ಎಂಬುವುದು ಎಲ್ಲರಿಗೂ ಚಿಂತಿಸದೆಯೇ ತಿಳಿಯುವುದು. ಅವನ್ನೂ ನೆನಪಿಸಲು ಸಾಧ್ಯವಾಗದವರು ಈ ಜಗತ್ತಲ್ಲಿ ಬುದ್ಧಿ ಮಾಂದ್ಯರಲ್ಲದೆ ಬೇರೆ ಯಾರೂ ಇರಲಾರರು. ಆದುದರಿಂದಲೇ ಸಾರಧರ್ಮ ವನ್ನು ಅರಿಯಲು ಜನರಿಗೆ ಗ್ರಂಥಗಳ ಅಗತ್ಯವಿಲ್ಲ ಎಂದು ಹೇಳುವುದು, ‘ಇತರರಿಗೂ ತನ್ನಂತೆ ತೊಂದರೆ ಆಗಬಾರದು’ ಎಂಬುವುದನ್ನು ಹೃದಯದಲ್ಲಿ ಬೆಳೆಸಲು ನಮಗೆ ಬೇಕಾಗಿರುವುದು ಬರೇ ಮನೋಶುದ್ಧಿ ಮಾತ್ರವಾಗಿದೆ. ಈ ಮನೋಶುದ್ಧಿಯನ್ನು ಸತ್ಯಚಿಂತನೆಯು ಮಾತ್ರ ನಮಗೆ ದೊರಕಿಸುವುದು ಹೊರತು ಗ್ರಂಥವು ದೊರಕಿಸಲಾರದು! ಸ್ನಾನವನ್ನು ಈ ರೀತಿಯಲ್ಲಿ ಮಾಡು, ಕೈಯನ್ನು ಈ ರೀತಿಯಲ್ಲಿ ತೊಳೆ, ಇತ್ಯಾದಿ ಎಲ್ಲಾ ಧರ್ಮಗಳಲ್ಲೂ ಕಾಣಿಸುವ ಆ ಸಾವಿರಾರು ನಿಬಂಧನೆಗಳು ಮತ್ತು ಅವುಗಳ ಶ್ರೇಷ್ಠತೆಯ ವಿವರಣೆಗಳು ಹೇಗೆ ಧರ್ಮವಾಗುವುದು? ಅವು ಮನೋಶುದ್ಧಿಗೆ ಮತ್ತು ‘ತನ್ನೊಂದಿಗೆ ಇತರರೂ ಚೆನ್ನಾಗಿ ಜೀವಿಸಬೇಕು’ ಎಂಬ ಆ ಪವಿತ್ರ ಭಾವನೆಯನ್ನು ಹೃದಯದಲ್ಲಿ ಸೃಷ್ಟಿಸಲು ಸಹಾಯಕವಾಗುವುದೇ? ಇಲ್ಲ. ಆದುದರಿಂದಲೇ, ಈ ಆಚಾರಗಳೆಲ್ಲಾ  ಧರ್ಮದ ಭಾಗವಾಗುವುದಿಲ್ಲ ಎನ್ನುವುದು.  ಈ ಹಿನ್ನೆಲೆಯಲ್ಲಿ, ಧರ್ಮಗಳು ಜೀವನ ಪರ್ಯಂತ ಮಾನವರಿಗೆ ಹೇರುವ ಆ ಅನಗತ್ಯ ನಿಬಂಧನೆಗಳನ್ನು ಆಯಾ ಧರ್ಮದ ಶ್ರೇಷ್ಠತೆಯನ್ನು ವಿವರಿಸಲು ಉಪಯೋಗಿಸುವುದು ಶುದ್ಧ ಮೂರ್ಖತನವಾಗುವುದು ಮಾತ್ರವಲ್ಲ, ಅದು ಅತ್ಯಂತ ಅಪಾಯಕಾರಿ ಎಂದೂ ನಮಗೆ ತಿಳಿಯುವುದು.

ತರ್ಕ, ಸತ್ಯ, ಮತ್ತು ನಂಬಿಕೆ, ಇವುಗಳು ಧರ್ಮ, ಪಂಥಗಳೊಳಗೆ ಹೇಗೆ ಹೊಂದಿಕೊಂಡಿವೆ? 

ಉತ್ತರ- ತರ್ಕವು ಒಂದು ಆಯುಧವಾಗಿದೆ. ಅದನ್ನು ಸತ್ಯವನ್ನು ಕಂಡುಹಿಡಿಯಲು ಉಪಯೋಗಿಸಬಹುದು, ಅದೇ ರೀತಿ, ಅನ್ಯಾಯವನ್ನು ನ್ಯಾಯವೆಂದು ತೋರಿಸಿಕೊಡಲೂ ಉಪಯೋಗಿಸಬಹುದು. ನ್ಯಾಯಾಲಯದಲ್ಲಿ ಎರಡು ಕಡೆಯ ವಕೀಲರು ತರ್ಕವನ್ನೇ ಉಪಯೋಗಿಸುವರಾದರೂ ಸತ್ಯ ಅಥವಾ ನ್ಯಾಯವು ಒಂದು ಕಡೆ ಮಾತ್ರ ಇರುವುದು ಎಂದು ನಮಗೆ ತಿಳಿದಿದೆ. ಇನ್ನು, ನಂಬಿಕೆಯು ಅದು ಈ ತರ್ಕವನ್ನೇ ನಾಶಮಾಡಿಬಿಡುತ್ತದೆ!! ಅಂದರೆ, ಮುಂದೆ ಎಂದಾದರೂ ಆ ಸತ್ಯವು ಹೊರಬರುವ ಸಾಧ್ಯತೆಯನ್ನೇ ಇಲ್ಲವಾಗಿಸುತ್ತದೆ ಎಂದು ಅರ್ಥ!! ಸತ್ಯದಕಡೆಯ ತರ್ಕಕ್ಕೆ ಒಂದು ನ್ಯಾಯಾಲಯದಲ್ಲಿ ಪರಾಜಯವಾದರೆ ಇನ್ನೊಂದು ಮೇಲಿನ ನ್ಯಾಯಾಲಯದಲ್ಲಿ ಜಯಸಿಗುವ ಸಾಧ್ಯತೆ ಇರುವುದು. ಆದರೆ, ಸತ್ಯವನ್ನು ವಕ್ರವಾಗಿ ಚಿತ್ರಿಸಿದ ನಂಬಿಕೆಯ ಸ್ಥಿತಿಯು ನಮಗೆ ಕಲ್ಪಾಂತ್ಯದವರೆಗೂ ಆ ಸತ್ಯವನ್ನು ಹಿಂದಿರುಗಿಸಲಾರದು!  

ಧರ್ಮ, ಪಂಥಗಳ ಅಡಿಗಲ್ಲೇ ನಂಬಿಕೆಗಳಾಗುವ ಕಾರಣ ನಮಗೆ ಅಲ್ಲಿ ಸತ್ಯವನ್ನು ಕಂಡುಹಿಡಿಯಲು ಅವಕಾಶವೇ ಇಲ್ಲವಾಗುವುದು. ಅಲ್ಲಿ ಒಬ್ಬೊಬ್ಬರು ಹೇಳಿದ ಬಣ್ಣದ ಸೂರ್ಯರನ್ನು ಒಪ್ಪಬೇಕಾಗುವುದು. ನೀಲಿಸೂರ್ಯ ಎಂದರೆ ಕಲ್ಪಾಂತ್ಯದವರೆಗೂ ಆ ಧರ್ಮ ಪಂಡಿತ ನೀಲಿಸೂರ್ಯ ಎಂದೇ ವಾದ ಮಾಡುವನು. ಇಲ್ಲವಾದರೆ ಆತನ ಧರ್ಮ ಬಿದ್ದುಬಿಡುತ್ತದೆ ಎಂಬ ಭಯ ಆತನಿಗೆ ಇರುವುದು. ಇನ್ನೊಂದು ಧರ್ಮದ ಪಂಡಿತ ಹಳದಿಸೂರ್ಯ ಎಂಬ ವಾದಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಸುವನು. ಅದಲ್ಲವಾದರೆ ಆತನ ಧರ್ಮ ಬಿದ್ದುಬಿಡುವುದೆಂಬ ಭಯ ಆತನಿಗೂ ಇರುತ್ತದೆ. ಅಂದರೆ, ಕಲ್ಪಾಂತ್ಯದವರೆಗೂ ಆ ನಿಜವಾದ [ಸತ್ಯದ]ಸೂರ್ಯನ ಅಡಿಯಲ್ಲಿ ಒಂದಾಗುವ ಆ ಸತ್ಯಯುಗವು ಈ ಧರ್ಮ, ಪಂಥಗಳಿಂದ ಎಂದಿಗೂ ಸಾದ್ಯವಾಗಲಾರದೆಂದು ಅರ್ಥ. ನಂಬಿಕೆಯ ಒಳಗೆ ನಿಂತು ತರ್ಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಂಬಿಕೆಯೊಳಗಿನ ತರ್ಕವು ಅಸ್ತಿತ್ವವನ್ನೇ ಪಡೆಯುವುದಿಲ್ಲ. ಹೀಗಿದ್ದರೂ, ದರ್ಮ, ಪಂಥಗಳು,  ತಾವು ಇತರರಿಗಿಂತ ಶ್ರೇಷ್ಠ ಎಂದು ಅದೇ “ನಂಬಿಕೆಯೊಳಗಿನ ತರ್ಕ” ದಿಂದಲೇ ಸಾವಿರಾರು ವರುಷಗಳಿಂದ ವ್ಯರ್ಥ-ವಾದಗಳನ್ನು ಮಾಡುತ್ತಾ ಬಂದಿರುವವು!! ಧರ್ಮ, ಪಂಥಗಳು ಶಾಂತಿಗಾಗಿ ಇರುವವು ಎಂದು ಹೇಳುವವು. ಆದರೆ, ಶಾಂತಿಗಾಗಿ ಈ ಸರಣಿ ವಾದಗಳ ಅಗತ್ಯವಿದೆಯೇನು? ಅಲ್ಲಿ ಆ ಸಾರ್ವತ್ರಿಕ ಪ್ರೀತಿಯ ಕರುಣಾ ದೃಷ್ಟಿಯಲ್ಲವೇ ಬೇಕಾಗಿರುವುದು? ಆದರೆ, ಅಲ್ಲಿ, ಎಲ್ಲರೂ ತಮ್ಮ ಪಂಥ, ಮನೆತನ, ಜಾತಿಗಳನ್ನು ತಮ್ಮ ತಲೆಯ ಮೇಲಿಟ್ಟು, ಶಾಂತಿಯ ಬದಲು ಅಸ್ಪೃಶ್ಯರನ್ನು ಸೃಷ್ಟಿಸಿ, ಆ ‘ಅಸ್ಪೃಶ್ಯತೆ’ಯನ್ನೇ  ಸಮಾಜಕ್ಕೆ ಬಳುವಳಿಯಾಗಿ ನೀಡಿರುವರು!!! ಧರ್ಮ ಸಾರುವ ಆ ಮಾನವೀಯತೆಯನ್ನು ಪೂರ್ಣವಾಗಿ ಮರೆತು ದರ್ಪದ ಆಸನಗಳಲ್ಲಿ ಕುಳಿತು ಆ ಮುಗ್ಧ ಮಾನವನನ್ನು ಹಿಂಡಿ ಅಸ್ತಿಪಂಜರವನ್ನಾಗಿ ಮಾಡಿರುವುದು ಧರ್ಮಗಳಿಂದ ಒಸರಿರುವ ಆ ಶಾಂತಿಯಾಗುವುದೇ? ಇವೆಲ್ಲಾ, ಜಗತ್ತಿನ ಎಲ್ಲಾ ಧರ್ಮ, ಪಂಥಗಳ ಆ “ನಮ್ಮ ಧರ್ಮ ಶಾಂತಿಯ ಧರ್ಮ” ಎಂಬ ವಾದಗಳ ಪೊಳ್ಳುತನವನ್ನು ಮಾತ್ರ ಎತ್ತಿ ಹೇಳುತ್ತವೆಯಷ್ಟೆ. ಇನ್ನು, “ನಾವು ಶ್ರೇಷ್ಠ ಧರ್ಮದವರು” ಎಂಬ ವಾದಗಳ ಕುರಿತು ಮಾತ್ರ ನೋಡೋಣ. ಈ ವಾದಗಳಲ್ಲಿ ಯಾರೂ ಜಯಿಸದೆ ಆದಾಗ, ಅವು ಅನಂತರದ ಹಂತವಾದ ಮಾತಿನ ಜಗಳಕ್ಕೆ ಹೋಗುವವು, ಮತ್ತು ಆ ಮಾತಿನ ಜಗಳವೂ ಮುಗಿದಾಗ ಅನಂತರದ ಹಂತವಾದ ಆ ಭೀಕರ ರಕ್ತಪಾತದ ಹಂತಕ್ಕೆ ಏರುವವು ಮತ್ತು ಅಲ್ಲಿಗೆ ಎಲ್ಲವೂ ಕೊನೆಗೊಳ್ಳುವುದು!! ನಾವು ಹಿಂದಿನಿಂದಲೇ ಕಾಣುತ್ತಿರುವ ಈ ರೀತಿಗಳಲ್ಲದೆ, ಈ ಧರ್ಮ, ಪಂಥಗಳಿಗೆ ಸಾರ್ವತ್ರಿಕ ಸತ್ಯದ ಧರ್ಮವನ್ನು ಮತ್ತು ಆ ಸಾರ್ವತ್ರಿಕ ಸತ್ಯದ ಹಿನ್ನೆಲೆಯ ದೇವರನ್ನು ಈ ಜಗತ್ತಿಗೆ ತೋರಿಸಿಕೊಟ್ಟು ಇಲ್ಲಿ ಶಾಂತಿಯನ್ನು ಸ್ಥಾಪಿಸಲು[ಇದುವರೆಗೂ ಆಗದಿರಲು] ಎಂದಿಗೂ ಸಾಧ್ಯವಾಗಲಾರದು ಎಂಬುವುದು ಸ್ಪಷ್ಟವಾಗುವುದು.

ಇನ್ನು, ಈ ಜಗತ್ತಿನ ಉಳಿವಿಗೆ ಬೇಕಾಗಿರುವುದು ಇವು ಯಾವುದೂ ಅಲ್ಲ, ಬದಲು ದೇವಾಂಶವೇ ಆದ ಆ “ಸತ್ಯಸಂಧತೆ” ಮಾತ್ರ ಆಗುವುದು. ಈ “ಸತ್ಯಸಂಧತೆಯ ಹಿನ್ನೆಲೆಯ ತರ್ಕ” ವು ಮಾನವನಿಗೆ ಸತ್ಯ, ನಿಜವಾದ ಧರ್ಮ, ಅತ್ಮೀಯ ಪ್ರೀತಿ, ಇವು ಎಲ್ಲವನ್ನೂ ದೊರಕಿಸಿಕೊಡುವುದು! ಆದುದರಿಂದ ಜಗತ್ತು “ನಂಬಿಕೆಯ ಹಿನ್ನೆಲೆಯ ತರ್ಕ” ದಿಂದ “ಸತ್ಯದ ಹಿನ್ನೆಲೆಯ ತರ್ಕ”  ಅಥವಾ “ಸತ್ಯಚಿಂತನೆ” ಯ ಕಡೆಗೆ ನಡೆಯಬೇಕಾಗಿದೆ. ಈ ನಡೆಯು, ಇಡೀ ಧರಿತ್ರಿಯನ್ನೇ ಆ ಅದ್ಭುತ ಸತ್ಯಯುಗದ ಆ ಪ್ರೀತಿಯ ಸಾಮ್ರಾಜ್ಯದೊಳಕ್ಕೆ ಕೊಂಡುಹೋಗುವುದು!!

ಎಲ್ಲರೂ ಇನ್ನೂ ಯಾಕೆ ತಮ್ಮ ನಂಬಿಕೆಯ ದೇವರೆಂದೇ ಹೇಳುವರು, ತಮ್ಮ ದೇವರು ಸತ್ಯದ ದೇವರೆಂದರೆ ಸಾಲದೇ?  

ಉತ್ತರ- ಚುಟುಕಾಗಿ ಹೇಳುವುದಾದರೆ, ಕೆಟ್ಟ ಸ್ವಭಾವಗಳಲ್ಲಿ ವ್ಯಕ್ತಿ ದೇವರು ಇಲ್ಲ, ಮತ್ತು ತತ್ವ ದೇವರು ಅವನ್ನು ಹುಟ್ಟಿಸುವುದೂ ಇಲ್ಲ. ಅದೇ ರೀತಿ, ಅವಲ್ಲಿ ಧರ್ಮವೂ ಇಲ್ಲ. ಇಲ್ಲಿಗೆ ಎಲ್ಲವೂ ಸ್ಪಷ್ಟವಾಗುವುದು. ಅಂದರೆ, ಈ ಜಗತ್ತಲ್ಲಿ, ಆದಿಯಿಂದಲೇ, ಮಾನವನಿಂದ ಮಾನವನನ್ನು ಬೇರ್ಪಡಿಸುವ ಆ ಹೊಸ ಹೊಸ ಆಚಾರಗಳ ಮತ್ತು ನಂಬಿಕೆಗಳ ಆ ಹೊಸ ಹೊಸ ಕಟ್ಟುಗಳು ಮಾತ್ರ ತಯಾರಾಗುತ್ತಾ ಬಂದಿರುವುದು ಎಂದು ಅರ್ಥ. ಹಳೆಯ ಆಚಾರ, ನಂಬಿಕೆಗಳ ಕಟ್ಟುಗಳನ್ನು ದೂರುತ್ತಾ ಹೊಸ ಅಚಾರ ನಂಬಿಕೆಗಳ ಕಟ್ಟುಗಳು ಬಂದವು ಅಷ್ಟೆ! ಹಳೆಯ ಹಾಗೂ ಹೊಸದಾಗಿ ಬಂದವುಗಳು ಎಲ್ಲವೂ ತಮ್ಮ ಶಕ್ತಿಗನುಸಾರವಾಗಿ, ಈ ಭೂಮಿಯಲ್ಲಿ ಸ್ವಲ್ಪ ಸ್ಥಳವನ್ನು ಆವರಿಸಿ, ಒಂದೊಂದು ಕಡೆಯಲ್ಲಿ ಕೂತಿರುವವು! ಇನ್ನು, ಇವುಗಳ ಪರಿಣಾಮವನ್ನು ನೋಡಿದರೆ, ಅವುಗಳ ಪರಿಣಾಮವಾಗಿ ವರ್ಣ, ಜಾತಿ, ಮೇಲು ಕೀಳು ಭಾವನೆ, ಸ್ವಾರ್ಥ, ಧ್ವೇಷ, ಮತ ಭಿನ್ನತೆ, ಧರ್ಮಾಂಧತೆ, ರಕ್ತಪಾತ ಇವುಗಳನ್ನು ಅವು ತಂದು ಕೊಟ್ಟವು!! ಉತ್ತಮ ಜೀವನವನ್ನು ನಡೆಸಬೇಕು ಎಂಬ ಧರ್ಮವನ್ನು ಬೋಧಿಸುವುದಕ್ಕೆ ಈ ರೀತಿಯ ಭಯಾನಕ ಧ್ವೇಷ, ಶೋಷಣೆ, ರಕ್ತಪಾತಗಳು ಬೇಕಾಗುವುದೇ? ಸರಿಯಾಗಿ ಆಲೋಚಿಸಿದಾಗ ನಮಗೆ ಈ ಎಲ್ಲಾ ಆಟದ ಹಿಂದೆ ಮಾನವನನ್ನು ಮೋಸಗೊಳಿಸುವ ಒಂದು ಶಕ್ತಿಯ ಕೈವಾಡವನ್ನು ಕೊನೆಯ ಪಕ್ಷ, ಸಂಶಯಿಸಲಾದರೂ ಸಾಧ್ಯವಾಗುವುದು. ಉದಾಹರಣೆಗೆ, ಒಂದು ಗುಹೆಯಲ್ಲಿ ಮಾತ್ರ ಜೀವಿಸುತ್ತಿದ್ದ ಮತ್ತು ಹೊರಗೆ ಬಾರದ ಒಂದು ಮಾನವ ವರ್ಗವಿದೆ ಎಂದು ಕಲ್ಪಿಸಿರಿ. ಅವರು ಸೂರ್ಯನ ಬಗ್ಗೆ ತಮ್ಮ ತಮ್ಮ ರೀತಿಯಲ್ಲಿ ವಾದ ಮಾಡುತ್ತಾ ಜಗಳವಾಡುವುದಾದರೆ, ಅವರು ಹೊರಗೆ ಬಂದು ಸೂರ್ಯನನ್ನು ನೋಡುವಾಗ ಸತ್ಯವು ಅರಿವಾಗುವುದು. ಆಗ, ಅವರೆಲ್ಲ ಆ ಹಿಂದಿನ ವಾದವನ್ನೆಲ್ಲಾ ನಿಲ್ಲಿಸುವರು. ಈಗ, ಈ ಭೂಮಿಯಲ್ಲಿ ಆ ರೀತಿಯಲ್ಲಿ ದೇವರ ವಿಚಾರದಲ್ಲಾಗಲೀ ಅಥವಾ  ಸೂಕ್ಷ್ಮದ ಇತರ ಆಧ್ಯಾತ್ಮ ವಿಚಾರದಲ್ಲಾಗಲೀ ಎಲ್ಲರಿಗೂ ಸೇರಿ ಆ ಕೊನೆಯ ಸತ್ಯವು ದೊರಕಿದೆಯೇ? ಇಲ್ಲ, ತಮ್ಮ ತಮ್ಮ ಬೇರೆ ಬೇರೆ ನಂಬಿಕೆಗಳ ರೀತಿಗಳು ಅಲ್ಲದೆ ಎಲ್ಲರಿಗೂ ಸೇರಿ ಸತ್ಯವು ದೊರಕಿಲ್ಲ ಮತ್ತು ಎಂದೂ ದೊರಕುವುದಿಲ್ಲ ಎಂಬುವುದು ಅದರ ಉತ್ತರವಾಗುವುದು. ಹಾಗಿರುವಾಗ, ಈಗ ಮಾಡುತ್ತಿರುವ ಈ ಸಾವಿರಗಟ್ಟಲೆ

ರೀತಿಯ ಆ ಕೋಟಿಗಟ್ಟಲೆ ವಾದಗಳೆಲ್ಲ ಏನೂ  ತಿಳಿಯದ ಆ ಗುಹೆಯೊಳಗಿನ ಸ್ಥಿತಿಯ ಮಾನವನ ವಾದಗಳು ಮಾತ್ರವಾಗುವುದಿಲ್ಲವೇ? ದಯವಿಟ್ಟು ಈ ವಿಚಾರವಾಗಿ ಆಲೋಚಿಸಲು ಪ್ರಯತ್ನಿಸಿರಿ.

ಸಾರ್ವತ್ರಿಕವಾಗಿ ನಮಗೆ ಒಂದು ಸತ್ಯವು ದೊರಕದಾಗ ಖಂಡಿತವಾಗಿಯೂ ಅದನ್ನು ಸಾರ್ವತ್ರಿಕತೆಯ ಹಿನ್ನೆಲೆಯಲ್ಲಿ ಕಾಣುವ ‘ಪ್ರಯತ್ನ’ವನ್ನಾದರೂ ಮಾಡಬೇಕಿತ್ತು. ಆದರೆ ಅದರ ಬದಲು ಮಾಡಿರುವುದು ಧ್ವೇಷ, ರಕ್ತಪಾತ!! ವಿಜ್ಞಾನವು ಸತ್ಯವಾಗಿರುವುದು ಅದು ಹಲವು ಪರೀಕ್ಷಣೆಗಳನ್ನು ನಡೆಸಿ ಸಾರ್ವತ್ರಿಕವಾಗಿ ಸತ್ಯವಾಗುವಲ್ಲಿ ಮಾತ್ರವೆಂದು ತಿಳಿಯಬೇಕು.

ದೇವರನ್ನು ಮತ್ತು ಧರ್ಮವನ್ನು ಆ ಸಾರ್ವತ್ರಿಕತೆಯಲ್ಲಿ ನೋಡಿದಲ್ಲಿ ಈ ಜಗತ್ತು ದೇವರನ್ನು ಮತ್ತು ಧರ್ಮವನ್ನು ಸತ್ಯದ ಮೂಲಕ ದರ್ಶಿಸಲು ಶಕ್ತವಾಗುವುದು, ಮತ್ತು ಒಂದು ಆತ್ಮೀಯತೆಯ ಸತ್ಯಯುಗಕ್ಕೆ ಅವಕಾಶವೂ ಉಂಟಾಗುವುದು. ಇಲ್ಲವಾದರೆ, ಆ ಉದಾಹರಣೆ ಕಥೆಯಲ್ಲಿ ಹೇಳಿರುವ ಆ ಗುಹೆಯೊಳಗಿನ ಸಾವಿರಾರು ನಂಬಿಕೆಗಳನ್ನು ಹೊತ್ತ ಮಾನವರ ತರ, ತಮ್ಮ ತಮ್ಮ ದೇವರು ಮತ್ತು ಧರ್ಮದ ಮೇಲಿನ ಭಕ್ತಿಯ ಹೆಸರಿನಲ್ಲಿ ತಮ್ಮೊಳಗೆ ಕಾದಾಡಿ ನಾಶವಾಗುವಂತೆ ಮಾಡುವ ವಂಚನೆಯನ್ನು, ಆ ಪ್ರಾಚೀನ ವಾಮಾಚಾರವು ನಿಲ್ಲಿಸದು.

ನೀವು ಆ ಪ್ರಾಚೀನ ವಾಮಾಚಾರವು ಮಾನವನನ್ನು ಮೊದಲು ಬೇರ್ಪಡಿಸಿ ಅನಂತರ ಕಾಲಾಂತರದಲ್ಲಿ ಅವುಗಳು ತಮ್ಮೊಳಗೆ ಧ್ವೇಷ, ಹಿಂಸೆ, ರಕ್ತಪಾತವನ್ನು ಸೃಷ್ಟಿಸುವಂತೆ ಮಾಡುವವು ಎನ್ನುವಿರಿ. ಮಾತ್ರವಲ್ಲ, ಅದಕ್ಕಾಗಿಯೇ ಹಳೆಯ ಅಥವಾ ಹೊಸತಾದ ಒಂದು ಧರ್ಮ, ಪಂಥ, ಪರಂಪರೆಯ ಹಿನ್ನೆಲೆಯಲ್ಲಿ ನಿಮ್ಮನ್ನು ಯಾವ ಕಾಲಕ್ಕೂ ಚಿತ್ರಿಸಬಾರದು ಎಂದು ಜನರಲ್ಲಿ ಕೇಳಿಕೊಂಡಿರುವಿರಿ. ಈ ನಿಮ್ಮ ಮಾತಿನ ಸತ್ಯತೆಯನ್ನು ನೀವು ಹೇಗೆ ತೋರಿಸಿಕೊಡುವಿರಿ?

ಉತ್ತರ- ಎಲ್ಲಾ ಧರ್ಮಗಳ ಆರಂಭದಲ್ಲಿ ಅದರಲ್ಲಿರುವ ದೇವರು ಮತ್ತು ಆ ಧರ್ಮದ ಸಂಸ್ಥಾಪಕರು ಅವು ಹೋಳುಗಳಾಗಬೇಕು ಎಂದು ಬಯಸಿರಲಾರರು. ಹಾಗೆ ದೇವರು ಬಯಸಿದ್ದಾನೆ ಎಂದರೆ ಆ ದೇವರನ್ನೇ ಸಂಶಯಿಸಬೇಕಾಗುವುದು. ಹೀಗೆ, ದೇವರು ಮತ್ತು ಅ ಸಂಸ್ಥಾಪಕರು ತಮ್ಮ ಧರ್ಮವು ವಿಭಾಗವಾಗಿ ಹೋಗುವುದು ಬಯಸದಿರುವಾಗ, ಎಲ್ಲ ಧರ್ಮಗಳೂ ಎರಡು ದೊಡ್ಡ ಹೋಳುಗಳಾಗಿರುವುದನ್ನು ನಾವು ಸ್ಪಷ್ಟವಾಗಿ ಕಾಣುವೆವು. ಮಾತ್ರವಲ್ಲ, ಅವು ಮತ್ತೂ ಚಿಕ್ಕ ಚಿಕ್ಕ ಹೋಳುಗಳಾಗಿ ಹೋಗಿರುವುದನ್ನೂ ಕಾಣುವೆವು! ಅದರೊಂದಿಗೆ, ಧ್ವೇಷ, ಹಿಂಸೆ, ರಕ್ತಪಾತವನ್ನು ಮಾಡಿರುವುದೂ ನಮಗೆ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಹೀಗಿರುವಾಗ, ಒಂದರಲ್ಲಿ ಮಾತ್ರವಲ್ಲದ, ‘ಜಗತ್ತಿನ ಎಲ್ಲೆಡೆಯೂ ಕಾಣಿಸುವ’ ಆ ಮಾನವರನ್ನು ಬೇರ್ಪಡಿಸುವಿಕೆ ಮತ್ತು ಆ ಹಿನ್ನೆಲೆಯ ಹಿಂಸೆಯ ಕಗ್ಗೊಲೆಗಳನ್ನು ಪವಿತ್ರ ದೇವರ ಹೆಸರಲ್ಲಿ ಮತ್ತು ಶಾಂತಿಯ ಧರ್ಮದ ಹೆಸರಲ್ಲಿ ಯಾರು ಮಾಡಿಸಿದರು? ದೇವರಿರುವ ಧರ್ಮಗಳು ಆ ಧರ್ಮವನ್ನು ದೇವರೇ ಕೊಟ್ಟಿರುವುದು ಎಂದು ಹೇಳುವವು. ಇಲ್ಲಿ, ಮುಖ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರವೆಂದರೆ, “ಆ ದೇವರುಗಳು ಮತ್ತು ಧರ್ಮ ಸ್ಥಾಪಕರು ಮೇಲಿಂದ ಈ ದುರಂತವನ್ನು ಕಣ್ಣಾರೆ ನೋಡುತ್ತಾ ಇಲ್ಲವೇ? ಯಾಕೆ ಅವರಿಗೆ ಅದನ್ನು ತಡೆಯಲು ಆಗಲಿಲ್ಲ?” ಎಂಬ ಅಂಶವನ್ನು ಆಗಿದೆ. ಎಲ್ಲದಕ್ಕೂ “ದೇವರ ಪರೀಕ್ಷೆ” ಎಂಬ ಸುಲಭ ಉತ್ತರ ಕೊಡುವುದನ್ನು ನಾವು ನೋಡುವೆವು. ಈಗ, ದೇವರು ಪರೀಕ್ಷೆ ಮಾಡುವುದಾದರೆ ಮಾಡಲಿ ತೊಂದರೆ ಇಲ್ಲ, ಆದರೆ ತಾನು ಕೊಟ್ಟ ಆ ಪಠ್ಯ ಪುಸ್ತಕ ಅಥವಾ “ಮೂಲ ರೀತಿ”ಯನ್ನೇ ಮಾನವರು ತಿರುಚಿ ಹಲವು ಪಂಥಗಳನ್ನಾಗಿ ಮಾಡುವಾಗ,

ಯಾಕೆ ಸುಮ್ಮನೆ ಕೂತರು ಎಂಬುವುದು ಇಲ್ಲಿರುವ ಪ್ರಶ್ನೆ! ಇನ್ನು, ಈ ಮಾನವ ರಚಿತ ಪಂಥಗಳು ಎಂಬ ಪುಸ್ತಕದ ಆಧಾರದಲ್ಲಿ ದೇವರು ಪರೀಕ್ಷೆ ನಡೆಸುವುದು ಹೇಗೆ?        

ದೇವರಿಗೆ ಬಲಿ ಕೊಡುವ ಉದ್ದೇಶವೇನು?

ಉತ್ತರ- ದೇವರಿಗೆ ಬಲಿ ಕೊಡಲು ಸಾಧ್ಯವಿಲ್ಲ, ಯಾಕೆಂದರೆ ಅದು ವಿರೋಧಾಭಾಸವಾಗುವುದು. ದೇವರು ನಮಗೆ ಶಾಂತಿಯ ಧರ್ಮವನ್ನು ಕೊಡುವಾಗ, ಆತನು ಅದರ ವಿರುದ್ಧ, ಕ್ರೌರ್ಯವನ್ನು ಬೆಳೆಸುವ ಯಾವುದನ್ನೂ ಹೇಳಲಾರ. ಆದುದರಿಂದ, ದೇವತಾ ಸಂಕಲ್ಪಕ್ಕೆ ಬಲಿ ಕೊಡುವುದು ಸಾಧ್ಯವಲ್ಲ. ಅದು ಬರೇ ಸೂಕ್ಷ್ಮದ ಯಾವುದೋ “ಶಕ್ತಿ” ಸಂಕಲ್ಪಗಳಿಗೆ ಮಾತ್ರ ಆಗುವುದು. ದೇವರು ಅಂದರೆ, ಅಲ್ಲಿ ಇರುವುದು ಆ ಸಾರ್ವತ್ರಿಕ ಸತ್ಯ, ಪ್ರೀತಿ, ಮತ್ತು ನೀತಿಯಾಗಿದೆ. ಮಾತ್ರವಲ್ಲ, ಯಾರು ಉತ್ತಮರು ಮತ್ತು ಯಾರು ಕೆಟ್ಟವರು ಎಂಬ ಅರಿವು ಅಥವಾ ವಿವೇಚನೆಯು ಅಲ್ಲಿ ಮುಖ್ಯವಾಗಿರುವುದು. ಆದರೆ, “ರಕ್ತ ಕುಡಿಯುವುದು ಪಿಶಾಚಿ ಎಂದು ಎಲ್ಲ ಧರ್ಮಗಳೂ ಹೇಳುವವು.” ಹೀಗಿರುವಾಗ, ದೇವರಿಗೆ ರಕ್ತ ಅಗತ್ಯವಿಲ್ಲ ಎಂದೂ   ಸ್ಪಷ್ಟವಾಗುವುದು. ಇನ್ನು, “ಶಕ್ತಿ”ಗಳು ಅವು ಮಾನವನ ಕೆಲವು ಪ್ರತ್ಯೇಕ “ಭಾವ”ವನ್ನು ಮಾತ್ರ ಸಂಗ್ರಹಿಸಿ ಅದರಲ್ಲಿ ಮಾತ್ರ ವ್ಯಕ್ತಿತ್ವವನ್ನು ಉಂಟುಮಾಡಿರುವ ಶಕ್ತಿಗಳಾಗಿವೆ. ಅವುಗಳಿಂದ  ವಿವೇಚನೆಯನ್ನು ಯಾರಿಗೂ ಬಯಸಲು ಸಾಧ್ಯವಿಲ್ಲ. ಅದಕ್ಕೆ ಯಾರು ಹೆಚ್ಚು ಉಣಲು, ತಿನಲು ಅಥವಾ ಇತರ ಏನನ್ನಾದರೂ ಪ್ರೀತ್ಯರ್ಥವಾಗಿ ಕೊಟ್ಟರೆ ಅವು ನಿಮ್ಮನ್ನು ಮರೆತು, ಹೆಚ್ಚು ಕೊಟ್ಟವನಿಗೆ ಸಹಾಯ ಮಾಡುವವು. ಆದರೆ ದೇವತಾ ಸಂಕಲ್ಪವು ಭಕ್ತರನ್ನು ಅವರ ಶುದ್ಧ ಭಕ್ತಿಯ ಹಿನ್ನೆಲೆಯಲ್ಲಿ ಮಾತ್ರ ಹರಸುವ ಶಕ್ತಿಯಾಗುವುದು. ಆದರೆ, ದೇವರಿರುವ ಧರ್ಮಗಳು ಒಂದಲ್ಲ ಒಂದು ರೀತಿಯಲ್ಲಿ ಈ ಬಲಿಯನ್ನು ಕೊಡುತ್ತಲೇ ಬಂದಿವೆ!! ನೀವು, “ಬಲಿ”ಗೆ ನಿಮ್ಮದೇ ವ್ಯಾಖ್ಯಾನವನ್ನು ಕೊಡಲು ಪ್ರಯತ್ನಿಸಬಹುದು, ಆದರೆ ಅದು ಶಾಂತಿಯೆಂದು ತಮ್ಮ ಧರ್ಮಗಳನ್ನು ವ್ಯಾಖ್ಯಾನ ಮಾಡಿದಲ್ಲಿ ಅವೆಲ್ಲಾ ನಾಟುವುದಿಲ್ಲ.  ಇನ್ನು, ದೇವರಿಗೆ ಬಲಿಕೊಡುವುದು ಎಂಬುವುದನ್ನು ಬೇರೆ ಯಾವುದಾದರೂ ಶಾಂತಿಯ ವಿವರಣೆ ಸರಿ ಹೊಂದಿಸಿ ವಿವರಿಸುವುದಾದರೆ, ಇತರ ಕಡೆಗಳಲ್ಲಿ ಧರ್ಮಗಳು ಶಾಂತವಾಗಿ ಕಾಣಿಸಬೇಕಿತ್ತು, ಆದರೆ, ಈ ಬೇಲಿಯೊಳಗಿನ ಧರ್ಮ, ಪಂಥಗಳು ಭೀಕರ ಶೋಷಣೆ, ಹಿಂಸೆ, ರಕ್ತಪಾತಗಳಿಗೆ ಕಾರಣವಾಗಿವೆ ಹೊರತು ಅವು ಶಾಂತಿಯನ್ನು ಕೊಟ್ಟಿಲ್ಲ!! ದೇವರಿಗೆ ಬಲಿಕೊಡುವುದನ್ನು ಶಾಂತಿಯ ಹಿನ್ನೆಲೆ ಅಥವಾ ತ್ಯಾಗದ ಹಿನ್ನೆಲೆ ಇಟ್ಟು ವಿವರಿಸಿ ಫಲವೇನು?

ಧರ್ಮಗಳು ನಿರಂತರವಾಗಿ ಶಾಂತಿಯನ್ನು ಕೊಡಬೇಕಿದ್ದರೆ, ಮೊದಲು ಎಲ್ಲಾ ಧರ್ಮಗಳು ತಮ್ಮ ಸುತ್ತಲೂ ಹಾಕಿರುವ ಆ “ಬೇಲಿ”ಯನ್ನು ಮಾನಸಿಕವಾಗಿ ಕಿತ್ತೆಸೆಯಬೇಕು. ಆಗ ಮಾತ್ರ ಧರ್ಮದ ಹೆಸರಲ್ಲಿ ಶಾಂತಿಯ ಆರಂಭವಾಗುವುದು. ಒಟ್ಟಿನಲ್ಲಿ, ಆ ಪ್ರಾಚೀನ ವಾಮಾಚಾರವು ಮಾನವರನ್ನು ಹೊಸ ಹೊಸ ಆಚಾರಗಳ ಹಿನ್ನೆಲೆಯಲ್ಲಿ ಮತ್ತು ಅವುಗಳ ಉದಾತ್ತ ವ್ಯಾಖ್ಯಾನದ ಹೆಸರಲ್ಲಿ  ಹೇಗೆಲ್ಲಾ ಮೋಸ ಮಾಡುತ್ತಾ ಬಂದಿದೆ ಎಂದು ಈಗ ಮತ್ತೂ ಸ್ಪಷ್ಟವಾಗುವುದು. 

ದೇವರನ್ನು ದೇವರಾಗಿ ಮತ್ತು ಧರ್ಮವನ್ನು ಧರ್ಮವಾಗಿ ನೋಡಿದಲ್ಲಿ ಮಾತ್ರ, ದೇವರ ಮತ್ತು ಧರ್ಮದ ಹೆಸರಲ್ಲಿ ನಡೆಯುವ ಧರ್ಮಾಂಧತೆಯ ನರಬಲಿಗಳು ಸಂಪೂರ್ಣವಾಗಿ ನಿಂತುಹೋಗಬಹುದು.  

ಅತ್ಯಂತ ಚುಟುಕಾಗಿ ಈ ಜಗತ್ತು ಆ ಕಾಡು ಜನಾಂಗವಾಗಿ ಪರಿವರ್ತಿಸಲ್ಪಡದಂತೆ ಮಾಡಲು ಧರ್ಮ, ಪಂಥಗಳು ಅನಿವಾರ್ಯವಾಗಿ ಮಾಡಬೇಕಾದುದು ಏನು?

ಉತ್ತರ- ಬಹಳ ಚುಟುಕಾಗಿ ಹೇಳುವುದಾದರೆ ಈ ಮಾನವ ಜಗತ್ತು ಜಾಗ್ರತೆವಹಿಸಬೇಕಾಗಿರುವುದು ಎರಡೇ ವಿಷಯಗಳಲ್ಲಿ ಮಾತ್ರವಾಗಿದೆ. ಅವು, ಧರ್ಮ, ಪಂಥಗಳೊಳಗೆ ಯಾವ ಕಾಲಕ್ಕೂ “ಕ್ರೌರ್ಯ”ವು ಹೆಚ್ಚಾಗದಂತೆ ನೋಡಬೇಕು, ಅಂದರೆ ಕಡಿಮೆ ಮಡುತ್ತಾ ಬರಬೇಕು, ಮತ್ತು ಇನ್ನೊಂದು ಅವುಗಳಲ್ಲಿ ಎಂದೂ ‘ಅನೈತಿಕ ಕಾಮ’ ಹೆಚ್ಚಾಗದಂತೆಯೂ ನೋಡಬೇಕು ಅಷ್ಟೆ. ಇವುಗಳಲ್ಲಿ ಯಾವುದಾದರೂ ಒಂದು ಇದ್ದರೂ ನಾಶವು ಖಚಿತವಾಗಿದೆ. ಯಾಕೆಂದರೆ, ಕ್ರೌರ್ಯವನ್ನು ಅನೈತಿಕ ಕಾಮವಾಗಿ ನಿಮಿಷಾರ್ಧದಲ್ಲಿ ಪರಿವರ್ತಿಸಲು ಹಾಗೂ ಅನೈತಿಕ ಕಾಮವನ್ನು ನಿಮಿಷಾರ್ಧದಲ್ಲಿ ಕ್ರೌರ್ಯವಾಗಿ ಪರಿವರ್ತಿಸಲು ಆ ಪ್ರಾಚೀನ ವಾಮಾಚಾರಕ್ಕೆ ಸಾಧ್ಯವಾಗುವುದು. ಇದು ಸತ್ಯ. 

ನಂಬಿಕೆಯು ಸತ್ಯ ಅಥವಾ ಜ್ಞಾನಕ್ಕಿಂತಲೂ ಶ್ರೇಷ್ಠ ಎಂದು ವಾದ ಮಾಡಿದರೆ ಅದಕ್ಕೆ ನೀವು ಏನೆನ್ನುವಿರಿ?

ಉತ್ತರ- ನಂಬಿಕೆಯು ಸತ್ಯ,  ಜ್ಞಾನಕ್ಕಿಂತಲೂ ಶ್ರೇಷ್ಠ ಎಂದರೆ, ಆ ರೀತಿ ಹೇಳಲು ಭ್ರಮೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳುವೆನು. ಯಾಕೆಂದರೆ, ಅಲ್ಲಿ ತರ್ಕವು ಸಂಪೂರ್ಣವಾಗಿ ನಾಶವಾಗಿರುತ್ತದೆ. ಇದಕ್ಕೆ ಒಂದು ಉದಾಹರಣೆ ಕಥೆಯನ್ನು ನೋಡೋಣ.  “ಮೂರು ಅಜ್ಜಿಯಂದಿರು, ಆ ಮೂವರಿಗೂ ಸರಿಯಾಗಿ ಪರಿಚಯವಿರುವ ಒಬ್ಬ ವೈದ್ಯರಲ್ಲಿಗೆ, ಆ ಮೂವರಿಗೂ ಸಾಮಾನ್ಯವಾಗಿರುವ “ಕಳ್ಳರ ಭಯ”ವೆಂಬ ಒಂದೇ ಮಾನಸಿಕ ರೋಗಕ್ಕೆ ಚುಚ್ಚು ಮದ್ದನ್ನು ಪಡೆದು ಹಿಂದಿರುಗುತ್ತಿದ್ದರು. ಆದರೆ ವೈದ್ಯರು ಆ ಎರಡು ಶ್ರೀಮಂತ ಅಜ್ಜಿಯರಿಗಿಂತ ಎರಡು ಪಾಲು ಹೆಚ್ಚು ಹಣವನ್ನು ಅವರಲ್ಲಿ ಒಬ್ಬರಾದ ಅತ್ಯಂತ ಬಡ ಅಜ್ಜಿಯ ಕೈಯಿಂದ ವಸೂಲಿ ಮಾಡಿದುದು ಅವರಿಗೆ ತಿಳಿಯಿತು. ಅದು ಅವರಲ್ಲಿ ಕುತೂಹಲ ಮತ್ತು ಅಚ್ಚರಿಯನ್ನು ಮೂಡಿಸಿತು! ಕೊನೆಗೆ “ವೈಧ್ಯರು ನಿನಗೆ ಏನು ಮಾಡಿದರು?” ಎಂದು ಆ ಬಡ ಅಜ್ಜಿಯಲ್ಲಿ ಕೇಳುವಾಗ ಎಲ್ಲವೂ ಸ್ಪಷ್ಟವಾಯಿತು.  ವೈದ್ಯರು ಆ ಬಡ ಅಜ್ಜಿಗೆ ಮಾತ್ರ ಒಂದರ ಬದಲು ಎರಡು ಚುಚ್ಚು ಮದ್ದನ್ನು ಕೊಟ್ಟು, ಮಾತ್ರೆಗಳನ್ನೂ ಆ ಇಬ್ಬರು ಅಜ್ಜಿಯರಿಗಿಂತ ಎರಡು ಪಾಲು ಹೆಚ್ಚು ಕೊಟ್ಟಿದ್ದರಂತೆ!  ಅಂದರೆ, ವೈದ್ಯರಿಗೆ ಪರಿಚಯವಿರುವ ಕಾರಣ ಆ ಮೂರು ಅಜ್ಜಿಯಂದಿರ ಸಾಂಪತ್ತಿಕ ಹಿನ್ನೆಲೆ ಚೆನ್ನಾಗಿ ತಿಳಿದಿದೆ. ಆಗ, ಆ ಅತ್ಯಂತ ಬಡತನದ ಅಜ್ಜಿಗೆ ಕಳ್ಳರ ಭಯವಿದೆ ಎಂದರೆ ಆ ಅಜ್ಜಿ ತರ್ಕವನ್ನೆಲ್ಲಾ ಕಳಕೊಂಡು ಬರೇ ಒಂದು ತರದ ಭ್ರಮೆಯಿಂದ ಮಾತ್ರ ಭಯ ಪಡುತ್ತಿರುವುದು ಎಂದು ವೈದ್ಯರಿಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಆ ಅಜ್ಜಿಗೆ ದೊಡ್ಡ ಪ್ರಮಾಣದಲ್ಲಿ ಮದ್ದನ್ನು ಕೊಟ್ಟಿರುವುದು ಎಂದು ಅರ್ಥ. ಇದೇ ರೀತಿ, ನಂಬಿಕೆಯ ಹಿನ್ನೆಲೆಯ ಆ ಮೇಲು ಜಾತಿ ಮತ್ತು ಧರ್ಮ ಶ್ರೇಷ್ಠತೆಗಳು ಸರ್ವ ತರ್ಕವನ್ನೂ ಕಳಕೊಂಡ ಭೀಕರ ಭ್ರಮೆಯಾಗಿದೆ. ಈ ಭ್ರಮೆಯನ್ನು ಇಂಗಿಸುವ ಔಷಧಿಗಳು ಸರಿಯಾಗಿ ಸಮಾಜಕ್ಕೆ ದೊರಕದ ಕಾರಣ, ಅವು ಇಷ್ಟು ಕ್ರೂರವಾಗಿ ಶೋಷಣೆ ಮತ್ತು ಕೊಚ್ಚಿ ಕೊಂದು ಹಾಕುವ ಕೆಲಸವನ್ನು ಮಾಡಿದವು ಎಂಬುವುದನ್ನು ಮರೆಯಬಾರದು.

ನಿಮ್ಮ ಅನುಭವಗಳು ಎಲ್ಲವೂ ‘ಭ್ರಮೆ’ ಎಂದು ಕಣ್ಣು ಮುಚ್ಚಿ ಯಾರಾದರೂ ಹೇಳುವುದಾದರೆ ಅಂಥವರಿಗೆ ನಿಮ್ಮ ಉತ್ತರ ಏನಿರಬಹುದು?

ಉತ್ತರ- ಹಾಗೆ ಹೇಳುವ ಸಹೋದರ, ಸಹೋದರಿಯರಿಗಾಗಿ ಮಾತ್ರ ನಾನು ಇಲ್ಲಿ ಮಾತಾಡುತ್ತಿರುವುದು ಎಂದು ಮೊದಲಿಗೆ ಎಲ್ಲರೂ ತಿಳಿಯಬೇಕು. ಈ ರೀತಿ ಕಣ್ಣು ಮುಚ್ಚಿ ತಮಗೆ ತಾವೇ ಸಮಾಧಾನವನ್ನು ತರುವ ಅಭಿಪ್ರಾಯಗಳನ್ನು ಹೇಳುವುದು ಇದು ಮೊದಲ ಸಾರಿ ಏನೂ ಅಲ್ಲ. ಇದುವರೆಗಿನ ಎಲ್ಲಾ ಧರ್ಮ, ಪಂಥಗಳು ಇತರ ಧರ್ಮ, ಪಂಥಗಳನ್ನು ಇದೇ ರೀತಿ ಖಂಡಿಸಿ ತಮಗೆ ತಾವೇ ಸಮಾಧಾನ ಪಟ್ಟುಕೊಂಡು ಜೀವಿಸುತ್ತಾ ಬಂದಿವೆ!! ಇನ್ನು ನನ್ನ ವಿಚಾರದ ಬಗ್ಗೆ ಹೇಳಿದರೆ ಅದು ಅದ್ಭುತ ಏನೂ ಆಗುವುದಿಲ್ಲ. ನನ್ನ ಅನುಭವಗಳು “ಸುಳ್ಳು” ಎಂದು ತಾರ್ಕಿಕ ರೀತಿ ಇಲ್ಲದೆ ಬರೇ ವಿರೋಧಿಸುವ ರೀತಿಯಲ್ಲಿ ಹೇಳುವವರಿಗೆ ಮಾತ್ರ ಈ ಕೆಳಗೆ ಕೆಲವು ಅಂಶಗಳನ್ನು ಹೇಳುವೆನು, ಅವನ್ನು ಅವರು ಗಮನಿಸಲಿ.

  • ಈ ಭೂಮಿಗೆ ಧರ್ಮಗಳನ್ನು ದೇವರಿಂದ ಅಥವಾ ಇನ್ನಾವ ರೀತಿಯಿಂದಾದರೂ ತಂದು ಕೊಟ್ಟವರು ಮಾನವ ಗುರುಗಳು ತಾನೇ? ಅಂದರೆ, ಅವರವರ ಗುರುಗಳೋ, ಯೋಗಿಗಳೋ, ಪ್ರವಾದಿಗಳೋ ಆಗಿರುವ ಆ  ಮಾನವರ ಅನುಭವಗಳು ಮಾತ್ರವೇ [ತಮ್ಮೊಳಗೆ ಪರಸ್ಪರ ವಿರುದ್ಧವಾದರೂ] ಇಂದು ಹಲವು ಧರ್ಮಗಳಾಗಿ ಈ ಜಗತ್ತಲ್ಲಿ ಇರುವುದು ಎಂದು ಅರ್ಥ!!
  • ನಾನೂ ಮಾನವ. ಹಾಗಿರುವಾಗ, “ನಮ್ಮ ಮಾನವ ಗುರುಗಳಿಗೆ ಮಾತ್ರವೇ ಸಾಧ್ಯ ಮತ್ತು ನಿಮಗೆ ಸೂಕ್ಷ್ಮ ಲೋಕದ ಅನುಭವವಾಗಲಾರದು” ಎಂದು ನನ್ನಲ್ಲಿ ಯಾರಿಗಾದರೂ ವಾದಿಸಲು ಸಾಧ್ಯವಾಗುವುದೇ? ಇಲ್ಲ, ಹಾಗೆ ಹೇಳಲು ಯಾರಿಗೂ ಸಾಧ್ಯವಾಗುವುದಿಲ್ಲ.
  • ನಾನು ಈ ಸೂಕ್ಷ್ಮದ ಶಬ್ಧ, ರೂಪಗಳನ್ನು ಮತ್ತು ಅವುಗಳ ಆ ವೈರುಧ್ಯಗಳಿಂದ ಕೂಡಿದ ಮಾತುಗಳನ್ನು ಅಲ್ಲೇ ಸಂಶಯಿಸಿದ ಪರಿಣಾಮವಾಗಿ ಅದರ ಸತ್ಯತೆಯ ಬಗ್ಗೆ ಸೂಕ್ಷ್ಮದಲ್ಲಿ ಬೇಹುಗಾರಿಕೆ ಮಾಡಿದೆನು. ಅದರ ಫಲವಾಗಿ ಮಾತ್ರವೇ ಇದುವರೆಗೂ ಜಗತ್ತಿಗೆ ತಿಳಿಯದಿರುವ ಆ ಪ್ರಾಚೀನ ವಾಮಾಚಾರದ ಬಗ್ಗೆ ನಾನು ಹೇಳುತ್ತಿರುವುದು ಎಂದು ತಿಳಿಯಬೇಕು. ನಾನು ಹೇಳುತ್ತಿರುವ ಮಾತುಗಳ ಹಿನ್ನೆಲೆಯು ಆ “ಬೇಹುಗಾರಿಕೆಯ ಫಲ” ಎಂಬ ಆ ಮುಖ್ಯ ಕಾರಣವನ್ನು ಇನ್ನೊಮ್ಮೆ ಆಲೋಚಿಸಿ ತಿಳಿದುಕೊಳ್ಳುವುದು ಉತ್ತಮ.   
  • ಸೂಕ್ಷ್ಮದಲ್ಲಿ ಕೇಳಿದ್ದನ್ನು ಅಥವಾ ಕಂಡದ್ದನ್ನು ಅತ್ತ ಇತ್ತ ನೋಡದೆ ನೇರವಾಗಿ ಒಪ್ಪಿಕೊಂಡಿರುವುದರ ಬದಲು ಈ ಧರ್ಮಗಳು, ಈ ಮೊದಲೇ, ಬೇಹುಗಾರಿಕೆಯನ್ನು ಮಾಡಿರುತ್ತಿದ್ದರೆ, ಇಂದಿರುವ ಧರ್ಮಗಳೆಲ್ಲದರ ಸ್ವರೂಪಗಳೂ ಬೇರೆಯೇ ಇರುತ್ತಿದ್ದವು ಮತ್ತು ನನಗೆ ಇಂದು ನಿಮ್ಮ ಮುಂದೆ ಮಾತನಾಡುವ ಅಗತ್ಯವೂ ಬರುತ್ತಿರಲಿಲ್ಲ.

ಅಚ್ಚರಿ ಎಂದರೆ, ಈ ಜಗತ್ತಲ್ಲಿ, ಇದುವರೆಗೂ, ಸರ್ವರಿಗೂ ಒಂದೇ ಆಗಿರುವ ಸೂರ್ಯನಂಥ ಸೃಷ್ಟಿಕರ್ತ ದೇವರನ್ನು ಒಂದೇ ರೀತಿಯಲ್ಲಿ ವಿವರಿಸದೆ ಎಲ್ಲರೂ ಬೇರೆ ಬೇರೆ ರೀತಿಗಳಲ್ಲಿ ವಿವರಿಸಿ ತೋರಿಸಿದ್ದಾರೆ ಎಂಬುವುದಾಗಿದೆ!! ಇದು “ಆ ಒಬ್ಬನೇ ಆಗಿರುವ ಸೃಷ್ಟಿಕರ್ತ ದೇವರು ಇದ್ದಾನೆ” ಎಂಬ ಸತ್ಯವನ್ನು ಸಾಧಿಸಿ ತೋರುವುದಿಲ್ಲ, ಬದಲು ಸರ್ವರೂ ಗೊಂದಲಗಳಲ್ಲಿ ಹುದುಗಿರುವುದನ್ನು ಮಾತ್ರ ತೋರುವುದು. ಹೀಗೆ, ಎಲ್ಲರೂ ಒಂದೇ ರೀತಿಯಲ್ಲಿ ವಿವರಿಸದೆ ಅವರವರಿಗೆ ತೋರಿದ ರೀತಿಯಲ್ಲಿ ಆ ಒಬ್ಬ ಸೃಷ್ಟಿಕರ್ತ ದೇವರು ಮತ್ತು ಆತನ ಮಾತುಗಳನ್ನು ವಿವರಿಸುವ ಕಾರಣ ಮತ್ತು ಇನ್ನೊಂದು ಧರ್ಮದ  ಸೃಷ್ಟಿಕರ್ತನನ್ನು ನಿಂದಿಸುವ ಕಾರಣ, ಅಲ್ಲಿ ಭ್ರಮೆಯ ಸ್ವರೂಪವು ಇರುವುದನ್ನು ನ್ಯಾಯವಾಗಿ ಸಂಶಯಿಸಬಹುದಾಗಿದೆ. ನಾನು, ಆ ಒಬ್ಬನೇ ಸೃಷ್ಟಿಕರ್ತನು ಇದ್ದಲ್ಲಿ, ಆತನನ್ನು ಎಲ್ಲರೂ ಒಟ್ಟಾಗಿ ಸೇರಿ ಆನಂದದಿಂದ ಭಜಿಸಬೇಕು ಎಂದು ಮಾತ್ರ  ಹೇಳುವೆನು. ಯಾಕೆಂದರೆ ಒಬ್ಬ ಸೃಷ್ಟಿಕರ್ತನಿಗೆ, ಹಲವು ಬೇರೆ ಬೇರೆ ಮತ್ತು ಪರಸ್ಪರ ವಿರುದ್ಧ ರೀತಿಯ ಆಚಾರಗಳಿಂದ ಕೂಡಿರುವ ಆರಾಧನೆಯು ಸಾಧ್ಯವಾಗಲಾರದು, [ಸೃಷ್ಟಿಕರ್ತರು ಇತರ ಧರ್ಮಗಳ ರೀತಿಗಳನ್ನು ನಿಷಿದ್ಧ ಎಂದು ಎಚ್ಚರಿಸಿ, ಅದೇ ರೀತಿ ಜನರು ಇತರ ಧರ್ಮದ ರೀತಿಗಳು ಸ್ವಲ್ಪವೂ ತಮ್ಮ ಧರ್ಮದಲ್ಲಿ ಬಾರದ ಹಾಗೆ ಕಾಯ್ದು ಕೊಂಡಿರುವುದನ್ನು ಇಲ್ಲಿ  ನೆನಪಿಸಬೇಕು.]

ಇನ್ನು, ಆ ಒಬ್ಬ ಸೃಷ್ಟಿಕರ್ತನಿಗಾಗಿ ಎಲ್ಲಾ ಧರ್ಮದ ಜನರು ಒಟ್ಟು ಸೇರಿ ಆ “ಸೃಷ್ಟಿಕರ್ತ” ಎಂಬ ಏಕ ದೇವರ ಸಂಕಲ್ಪಕ್ಕೆ ಪ್ರಾರ್ಥನೆಯನ್ನು ಸಲ್ಲಿಸಲು ಸಾಧ್ಯವಾಗಬೇಕಾಗಿದೆ. ಇಷ್ಟಾದರೂ ಧರ್ಮಗಳಿಗೆ ಮಾಡಲು ಸಾಧ್ಯವಾಗಬಹುದೇ? ಸಾಧ್ಯವಾದರೆ ಅಲ್ಲಿ ಭ್ರಮೆಯಿಲ್ಲ ಎನ್ನಬಹುದು, ಎಲ್ಲಾದರೂ ಸಾಧ್ಯವಾಗದೆ ಇದ್ದಲ್ಲಿ [ಇದುವರೆಗೂ, ಅತ್ಯಪರೂಪದ, ಕೆಲವು ಗಂಟೆಗಳ, ಸರ್ವಧರ್ಮ ಸಮ್ಮೇಳನದ ಕೆಲವು ಭಾಷಣಗಳು ಹೊರತಾಗಿ ನಿಜ ಜೀವನದಲ್ಲಿ ಆ ರೀತಿಯ ಬದಲಾವಣೆ ಸಾಧ್ಯವಾಗಿಲ್ಲ ಎಂದು ನಮಗೆ ಗೊತ್ತಿದೆ] ಆ ಪ್ರಾಚೀನ ವಾಮಾಚಾರವು ಮುಂದೆ ಯಾವುದನ್ನೂ ಉಳಿಸುವುದಿಲ್ಲ.   ಈ ಜಾತೀಯತೆ ಮತ್ತು ಧರ್ಮಾಂಧತೆ ಎಂದರೆ ಅದರ ಇನ್ನೊಂದು ರೀತಿಯ ಅನುಭವವನ್ನು ನೋಡೋಣ. ಶೂದ್ರನು ಮೇಲು ಜಾತಿಯ ಮನೆಯ ಒಳಗೆ ಬಂದರೆ ಮನೆ ಮಂದಿಗೆ ಹೊಟ್ಟೆ ಉರಿಯುವುದು! ಮನೆಯೊಳಗೆ ನೀರು ಮುಟ್ಟಿದರೆ ಅಂತೂ ಆ ಹೊಟ್ಟೆ ಉರಿಯು ಮತ್ತೂ ಮೂರು ಪಟ್ಟು ಹೆಚ್ಚುವುದು!!! ಈ ಹೊಟ್ಟೆ ಉರಿಯೇ ಜಾತೀಯತೆಯಾಗಿದೆ, ಆ ಭಾವನೆ ಬರಲು ನಿಜವಾಗಿಯೂ ಯಾವ ಆಧಾರವೂ ಇಲ್ಲ ಎಂಬುವುದೇ ಅತ್ಯಂತ ಅಚ್ಚರಿಯ ವಿಷಯವಾಗಿದೆ!!! ಇಂದೂ ಎಲ್ಲಾ ಜಾತಿಯಲ್ಲಿಯೂ ತನ್ನಕ್ಕಿಂತ  ಕೆಳ ಜಾತಿಯವರ ಮೇಲೆ ಇದೇ ಈ ಹೊಟ್ಟೆ ಉರಿ ಭಾವನೆ ಇದೆ ಅಂದರೆ ಈ ಕೊಳಚೆ ನೀರನ್ನು ತಮ್ಮಲ್ಲಿ  ಇಟ್ಟುಕೊಂಡು ಇಷ್ಟು ಸಹಸ್ರ ವರುಷ ಅದನ್ನು ದೂಡಿಕೊಂಡು ಬರಲು ಈ ಜನ ಸಮೂಹಕ್ಕೆ ನಾಚಿಕೆಯಾಗಲಿಲ್ಲ ಯಾಕೆಂದು ಮಹಾತ್ಮರು ಅಚ್ಚರಿಪಡುವರು!! ಯಾಕೆಂದರೆ, ಇತ್ತ ದೊಡ್ಡ ದೊಡ್ಡ “ವಸುದೈವ ಕುಟುಂಬಕಮ್”, “ದೇವರ ಮಕ್ಕಳು”, “ಎಲ್ಲರ ಆತ್ಮವೂ ಒಂದೇ”, ಎಂದೆಲ್ಲಾ ಬಾಷಣ ಬಿಗಿಯುತ್ತಾ ಈ ರೀತಿ ಮಾಡಿದರಲ್ಲ ಎಂಬುವುದೇ ಅಚ್ಚರಿಗೆ ಇನ್ನೊಂದು ದೊಡ್ಡ ಕಾರಣವಾಗಿದೆ!! ಸತ್ಯಸಂಧತೆ ಇಲ್ಲದಿದ್ದರೆ ಇನ್ನು ಏನು ದೇವರು, ಧರ್ಮ? ಆ ಪ್ರಾಚೀನ ವಾಮಾಚಾರವು ಈ ಜಾತಿಗಳಲ್ಲೇ ಅಷ್ಟು ಹೊಟ್ಟೆಉರಿಯನ್ನು ಇಟ್ಟಿರುವಾಗ, ಇನ್ನು ಜಗತ್ತಿನ ಧರ್ಮಾಂಧತೆಗಳಲ್ಲಿ ಆ ಪ್ರಾಚೀನ ವಾಮಾಚಾರವು ಎಷ್ಟು ಹೊಟ್ಟೆ ಉರಿಯನ್ನು ಹಾಕಿರಲಾರದು? ಈ ಹೊಟ್ಟೆ ಉರಿಯೇ ‘ಒಂದೇ ಸೃಷ್ಟಿಕರ್ತ’ ಎಂದು ಜಗತ್ತಿನಲ್ಲಿ ಎಲ್ಲರೂ ವಾದ ಮಾಡುತ್ತಿದ್ದರೂ ಜನರು ಎಲ್ಲರೂ ಒಟ್ಟಾಗಿ ಕುಳಿತು ಆತನ ಭಜನೆಯನ್ನು ಅಥವಾ ಪ್ರಾರ್ಥನೆಯನ್ನು ಮಾಡದೆ ಧ್ವೇಷ, ಹಿಂಸೆ, ರಕ್ತಪಾತವನ್ನು ಮಾಡಲು ಕಾರಣವಾಗಿರುವುದು ಎಂದು ತಿಳಿಯಬೇಕು. ಅಂದರೆ, ಧರ್ಮಾಂಧತೆಯಲ್ಲಿ, ಈ ಹೊಟ್ಟೆ ಉರಿಯೆಂಬ ವಿಷವನ್ನು, ಆ ಪ್ರಾಚೀನ ವಾಮಾಚಾರವು, ಜಗತ್ತಿನ ಮಾನವರೆಲ್ಲರೂ ಒಂದಾಗಬಾರದು ಎಂದು ಆ ಒಂದಾಗುವಲ್ಲೇ ಇಟ್ಟಿರುವುದು! ಅದಕ್ಕಾಗಿ ಅದು “ತಮ್ಮ ಧರ್ಮವೇ ಜಗತ್ತನ್ನು ಮುಂದೆ ಜಯಿಸಲಿರುವುದು” ಎಂದು ಎಲ್ಲಾ ಧರ್ಮಗಳಲ್ಲೂ ಒಂದು ಭ್ರಮೆಯನ್ನು ಒಳಗಿಂದ ತುಂಬಿಸಿರುವುದು! ಮಾನವರು ಅದಕ್ಕಾಗಿ ಖಡ್ಗ, ಕೋವಿ, ಬಾಂಬುಗಳನ್ನು ಶೇಖರಿಸುತ್ತಾ ಇದ್ದಾರೆ!!  ಎಲ್ಲರೂ ಒಂದಾದರೆ, ಮತಾಂತರವು ಸಾಧ್ಯವಾಗದೆ, ಈ ಜಗತ್ತನ್ನು ತಮ್ಮ ಧರ್ಮವು ಜಯಿಸಲು ಸಾಧ್ಯವಾಗಲಾರದು ಎಂಬ ಆ ಪ್ರಾಚೀನ ವಾಮಾಚಾರ ಕೊಟ್ಟಿರುವ ಭ್ರಮೆಯ ಪ್ರಭಾವವು ನಿಜವಾಗಿಯೂ ಬಹಳವಾಗಿ

ಕೆಲಸಮಾಡುತ್ತಿರುವುದನ್ನು ನಮಗೆ ಎಲ್ಲೆಡೆಯೂ ಕಾಣಬಹುದಾಗಿದೆ. ಇನ್ನು, ಆ ಪ್ರಾಚೀನ ವಾಮಾಚಾರದ ಇನ್ನೊಂದು ಉಪಾಯವನ್ನೂ ಇಲ್ಲಿ ನೋಡಬಹುದು.  ಅದು ಏನೆಂದರೆ, ಎಲ್ಲಾದರೂ ಒಬ್ಬಾತನಿಗೆ ತನ್ನ ಹೊಟ್ಟೆ ಉರಿ ರೀತಿಯು ಸರಿಯಲ್ಲ ಎಂದು ತಿಳಿದರೂ, ಆ ಹೊಟ್ಟೆ ಉರಿಯನ್ನು ಆತನು ತನ್ನಲ್ಲೇ ಅನುಭವಿಸುವ ಕಾರಣ, ಆತನು ಅದಕ್ಕೆ ತಾನೇ ಹೊಣೆ ಎಂದು ತನ್ನೊಳಗೇ ತಿಳಿದುಕೊಳ್ಳುವನು, ಮತ್ತು ದುಷ್ಟ ಶಕ್ತಿಗಳ ಪಾತ್ರ ಅದರಲ್ಲಿ ಇಲ್ಲವೆಂದೂ ಆತನಿಗೆ ತೋರುವಂತೆ ಇರುವುದು.  ಈ ರೀತಿಯಲ್ಲಿ, ಆ ಪ್ರಾಚೀನ ವಾಮಾಚಾರಕ್ಕೆ ಮಾನವನ ಸ್ವಭಾವದ ಅವನತಿಯಲ್ಲಿ ಇರುವ ಆ ತನ್ನ ನೇರ ಪಾತ್ರವನ್ನು ಬಹಳ ರಹಸ್ಯವಾಗಿಯೇ ಇಂದಿನ ತನಕವೂ ಇರಿಸಿಕೊಳ್ಳಲು ಸಾಧ್ಯವಾಗಿದೆ. ಇದು ಮಾತ್ರವಲ್ಲದೆ, ಮೊದಲಲ್ಲೇ, ಆ ಪ್ರಾಚೀನ ವಾಮಾಚಾರವು ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಅದಕ್ಕೆ ಬೇಕಾಗುವ ಕೆಲವು ಪ್ರತ್ಯೇಕ ರೀತಿಯ ಮಾತುಗಳನ್ನೂ ಸೇರಿಸಿ ಇಟ್ಟಿರುವುದು. ಅಂದರೆ, ಮಾನವನು, ಕಾಲಹೋದಂತೆ, ಆಯಾ ಧರ್ಮಗಳಲ್ಲಿ ಈ ಪ್ರಾಚೀನ ವಾಮಾಚಾರವು ಪ್ರತ್ಯೇಕವಾಗಿ ಸೇರಿಸಿರುವ ಮಾತುಗಳನ್ನೇ ಧರ್ಮವೆಂದು ವಾದ ಮಾಡುವಂತೆ ಅದು ಹೆಚ್ಚು ಹೆಚ್ಚು ಪ್ರೇರೇಪಿಸುತ್ತಾ ಹೋಗುವುದು. ಅಂದರೆ, ಧರ್ಮದಲ್ಲಿರುವ ಆ ನಿಜವಾದ ವಿಶಾಲ ಮನಸ್ಕತೆಯಿಂದ ಕೂಡಿದ ಧರ್ಮದ ಸಾರದ ಭಾಗವನ್ನು ಪೂರ್ಣವಾಗಿ ಕಡೆಗಣಿಸುವಂತೆಯೂ ಅದು ಪ್ರೇರೇಪಿಸುವುದು ಎಂದು ಅರ್ಥ!! ನಾವು ಇದನ್ನು ಎಲ್ಲಾ ಧರ್ಮ, ಪಂಥಗಳಲ್ಲೂ ಕಾಣುವೆವು. ಇಂದು ಜನರಿಗೆ ಧರ್ಮದಲ್ಲಿನ ಹಲವು ನಂಬಿಕೆ, ಆಚಾರಗಳು ಮಾತ್ರ ಧರ್ಮವಾಗಿ ಕಾಣಿಸುವುದು, ಆದರೆ ನೈತಿಕತೆ ಮತ್ತು ಸ್ವಭಾವ ಶುದ್ಧಿಯೆಂಬ ಆ ನಿಜವಾದ ಧರ್ಮದ ಭಾಗವು ಯಾರಿಗೂ ಬೇಕಾಗಿಲ್ಲ!! ಇಲ್ಲೆಲ್ಲಾ, ಧರ್ಮಗಳೊಳಗೆ, ಆ ಪ್ರಾಚೀನ ವಾಮಾಚಾರದ ಮೋಸವನ್ನು ನಮಗೆ ಸ್ಪಷ್ಟವಾಗಿ ಕಾಣಬಹುದಾಗಿದೆ.

ಜಗತ್ತಿಗೆ ‘ಒಬ್ಬನೇ ಸೃಷ್ಟಿಕರ್ತ’ ಎಂದು ಹೇಳುವ ಜಗತ್ತಿನ ಸರ್ವರೂ, ಆ ಒಂದೇ ದೇವರನ್ನು, ಒಟ್ಟಾಗಿ ಕುಳಿತು, ಪೂಜಿಸಿ, ಪ್ರಾರ್ಥಿಸಿ, ಜಗತ್ತಿನ ಮುಂದೆ ಅದನ್ನು ತೋರಿಸಿಕೊಡುವ ಜವಾಬ್ಧಾರಿಯನ್ನು ಹೊಂದಿರುವರು. ಮಾತ್ರವಲ್ಲ, ಆ ಸಂದೇಶವನ್ನು ಜಗತ್ತಿನ ಸರ್ವ ಜನರಿಗೂ ತಲುಪಿಸುವ ಆ ಮತ್ತೂ ದೊಡ್ಡದಾದ ಜವಾಬ್ಧಾರಿಯೂ ಅದರೊಂದಿಗೆ ಅವರಿಗೆ ಇರುವುದು. ಅದು ಸಾಧ್ಯವಲ್ಲ ಎಂದು ಹೇಳುವುದಾದರೆ, ಎಲ್ಲರೂ ತಮ್ಮ ತಮ್ಮ ದೇವರುಗಳು ತಮಗೆ ಮಾತ್ರವೇ ಸೀಮಿತಗೊಂಡಿರುವ ಆ “ದೇವತೆ”ಗಳು ಮಾತ್ರ ಎಂದು ಸತ್ಯಸಂಧವಾಗಿ ಒಪ್ಪಿಕೊಳ್ಳಬೇಕಾಗುವುದು. ತಾಯಿಯು ಅವಳ ಮಕ್ಕಳಿಗೆ ಎಲ್ಲರಿಗೂ ಒಬ್ಬಳೇ ಆಗಿರುವಾಗ, ಅದೇ ತಾಯಿಯನ್ನು ಅವಳ ಒಬ್ಬ ಮಗನು “ನನ್ನ ಸ್ವಂತ ಸಹೋದರನ ತಾಯಿ ಕೆಟ್ಟವಳು, ಆದರೆ ನನ್ನ ತಾಯಿ ಅತ್ಯಂತ ಒಳ್ಳೆಯವಳು, ಬೇಕಿದ್ದರೆ ಅದನ್ನು ವಾದ ಮಾಡಿ ತೋರಿಸಿ ಕೊಡುತ್ತೇನೆ” ಎಂದು ಹೇಳಲು ಸಾಧ್ಯವಾಗುವುದೇ? ದಯವಿಟ್ಟು ಉತ್ತರವನ್ನು ಹೇಳಿ. ಈ ಧರ್ಮ ಪಂಡಿತರುಗಳ, ಹಲವು ಸಹಸ್ರ ವರುಷಗಳ, ತಮ್ಮ ಧರ್ಮದ ಶ್ರೇಷ್ಠತೆಯ ಭಾಷಣಗಳು ಈ ರೀತಿಯಲ್ಲಿ ಪೂರ್ಣವಾಗಿಯೂ ಅರ್ಥಹೀನವಾಗಿ ಹೋಗುತ್ತವೆ ಎಂದು ಅರಿತುಕೊಳ್ಳಬಹುದು.ಅಷ್ಟು ಮಾತ್ರವಾದರೂ ಸಹಿಸಬಹುದಾಗಿತ್ತು, ಆದರೆ ಅವು ಸಮಾಜದಲ್ಲಿ ಮಾನವರನ್ನು ವಿಭಜಿಸಿ, ಶೋಷಣೆ, ಧ್ವೇಷ, ರಕ್ತಪಾತಗಳನ್ನು ಸೃಷ್ಟಿಸಿ ಶಾಂತವಾಗಿದ್ದ ಸಮಾಜವನ್ನು ಸರ್ವನಾಶ ಮಾಡಿದವು, ಮತ್ತು ಮಾನವರಲ್ಲಿ, ಮಕ್ಕಳಲ್ಲೂ ಸೇರಿ, ಸರ್ವರಲ್ಲೂ ಕ್ರೌರ್ಯವನ್ನು ಹೆಚ್ಚಿಸುತ್ತಾ ಬಂದವು!! ಅತ್ತ ನೋಡಿ, ಇನ್ನು, ಇತ್ತ ನೋಡಿ, ಎಲ್ಲೂ ತಮ್ಮ ತಮ್ಮ ಧರ್ಮಗಳ ಶ್ರೇಷ್ಠತೆಯ ಅದೇ ಭಯಾನಕ ಭಾಷಣಗಳು! ತಮ್ಮ ಹಿಂದಿರುವ ಆ ಕರಾಳ ಹಸ್ತಗಳ ಪರಿವೇ ಇಲ್ಲದೆ ಮೊದಲಿಗಿಂತಲೂ ಹೆಚ್ಚು ಶಕ್ತಿಯನ್ನು ಪಡೆದು ಈ ಬೊಂಬೆಯಾಟಗಳು ಮುಂದುವರಿಯುತ್ತಾ ಹೋಗುತ್ತಿವೆ!!!

ಆ ಪ್ರಾಚೀನ ವಾಮಾಚಾರವು ಯಾಕೆ ಸಮಾಜದಲ್ಲಿ ಕೆಟ್ಟ ಸ್ವಭಾವವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ?

ಉತ್ತರ- ಇದರ ಉತ್ತರವನ್ನು ಹಲವು ರೀತಿಯಲ್ಲಿ ಈ ಮೊದಲೇ ತಿಳಿಸಿದ್ದೇನೆ. ಇನ್ನೂ ಸಂಶಯವಿದ್ದವರು ಈಗ ಅದನ್ನು ಪರಿಹರಿಸಿಕೊಳ್ಳಬಹುದು. ಆ ಪ್ರಾಚೀನ ವಾಮಾಚಾರಕ್ಕೆ ಬೇಕಾಗಿರುವ ಆ ಎರಡು ಮುಖ್ಯ ಮನೋ ಶಕ್ತಿಯ ಭಾವಗಳು ಎಂದರೆ ಕ್ರೌರ್ಯ, ಮತ್ತು ಅನೈತಿಕ ವಿಕೃತ ಕಾಮವಾಗಿದೆ. ಈ ಎರಡನ್ನು ಉತ್ತಮ ಮತ್ತು ಶಾಂತ ಸಮಾಜದಲ್ಲಿ ಪಡೆಯಲು ಎಂದಿಗೂ ಸಾಧ್ಯವಿಲ್ಲ ಅದಕ್ಕೆ ಅದು ಕಾಲಾ ಕಾಲಕ್ಕೆ ಸಮಾಜವನ್ನು ಕೆಟ್ಟದನ್ನಾಗಿ ಮಾಡಿ ತಮಗೆ ಬೇಕಾದುದನ್ನು ಪಡೆದು ಕೊಳ್ಳುತ್ತವೆ. ಈ ಎರಡು ಭಾವವನ್ನು ಸೃಷ್ಟಿಸಲು ಒಮ್ಮೆಗೇ ಸಾಧ್ಯವಾಗುವುದಿಲ್ಲ, ಅಲ್ಲಿ ಅವು ಹಲವು ಹಂತಗಳನ್ನು ಅನುಸರಿಸುವವು. ಮೊದಲು ಧ್ವೇಷ, ಅಹಂಕಾರ ಅಸೂಯೆ ಇತ್ಯಾದಿಗಳಿಂದ “ವಿಭಜನೆ” ಮಾಡುವುದು, ಅನಂತರ ನಿರಂತರ  ಧ್ವೇಷ, ಅಸೂಯೆ, ಅಹಂಕಾರ, ಸ್ವಾರ್ಥ, ಇತ್ಯಾದಿ ಗಳನ್ನು ಶಾಶ್ವತವಾಗಿ ಮತ್ತು ಬೇಗನೆ ಬೆಳೆಸಿಕೊಳ್ಳುವವು. ಆ ಮೇಲೆ ಅಗತ್ಯವಿದ್ದಲ್ಲಿ ದೊಡ್ಡ ಜಗಳ, ರಕ್ತಪಾತವನ್ನು ಅವು ಮಾಡಿಸುವವು! ಇದು ಮನೆ ಜಗಳದಿಂದ ಹಿಡಿದು, ನೆರೆ ಮನೆ, ಸಂಬಂಧಿಕರು, ಜಾತಿ, ಹತ್ತಿರದ ಸಮಾಜ, ಧರ್ಮ, ಪಂಥ, ಇತ್ಯಾದಿಗಳೆಲ್ಲದರಲ್ಲೂ ಸೇರಿ ಕೊನೆಗೆ ಅಂತಾರಾಷ್ಠ್ರೀಯ ಧ್ವೇಷ, ಹಾಗೂ ಯುದ್ಧಗಳ ವರೆಗೂ ವ್ಯಾಪಿಸಿದೆ!! ಇದು ಮನುಷ್ಯ ಮತ್ತು ಆತನ ಸಮಾಜದಲ್ಲಿ ಕಾಣಿಸುವ ಬದಲಾವಣೆ ಬಗ್ಗೆ ಮಾತ್ರ ಇರುವ ವಿವರಣೆಯಾಗಿದೆ. ಈ ಪ್ರಾಚೀನ ವಾಮಾಚಾರವು, ಈ ಜಗತ್ತು ಧರ್ಮ, ಸತ್ಯ, ದೇವರು, ಇತ್ಯಾದಿಗಳನ್ನು ತೊದಲು  ನುಡಿವ ಮೊದಲೇ ಸೃಷ್ಟಿಯಾಗಿದ್ದ ವ್ಯತ್ಯಸ್ಥ ಮತ್ತು ತನ್ನನೇ ತಾನೇ ಬೆಳೆಸಿಕೊಳ್ಳಲು ಸಮರ್ಥವಾದ ಒಂದು ವಾಮಾಚಾರ ವ್ಯವಸ್ಥೆ ಎಂಬುವುದನ್ನು ಮರೆಯಬಾರದು. [ಇದು ಇಷ್ಟಕ್ಕೆ ಮುಗಿದಿಲ್ಲ ಮಾನವನ ಆಂತರ್ಯದಲ್ಲಿ ಈ ಪ್ರಾಚೀನ ವಾಮಾಚಾರವು ಹಲವು ರೀತಿಯಲ್ಲಿ ತನಗೆ ಬೇಕಾದಂತೆ ಶಕ್ತಿಯನ್ನು ತಯಾರು ಮಾಡುವುದು ಎಂದು ಹೇಳಿದ್ದೇನಲ್ಲ, ಆದರೆ ಅವು ಮತ್ತು ಇನ್ನು ಹಲವು ಬಾಹ್ಯದ ಘಟನೆಗಳೂ ಅವು ಸಂಬಂಧಿಸಿವೆ ಎಂಬ ಸತ್ಯವು ರಹಸ್ಯವಾಗಿಯೇ ಉಳಿಯಲಿ. ಯಾಕೆಂದರೆ, ಅವನ್ನೆಲ್ಲಾ ಹೇಳುವುದರಲ್ಲಿ ಖಂಡಿತಾ ಮಾನವರಿಗೆ ಲಾಭವಿಲ್ಲ.] 

ಇನ್ನು, ಜಗತ್ತು ನಿಜವಾಗಿಯೂ ಹಿಂಸೆಯ ನೋವಿನಿಂದ ಮತ್ತು ಮದುವೆ ಇಲ್ಲದೆ ಮುಕ್ತ ಕಾಮದ ಭೂತಗಳ ಕೈಗಳಿಂದ ಹೊರಬಂದು  ಉತ್ತಮರಾಗಬೇಕು ಎಂದು ಆಸೆ ಇದ್ದಲ್ಲಿ, ಅದಕ್ಕೆ ಜಾಗತಿಕವಾಗಿ ಮಾನವರು ಧರ್ಮ, ಪಂಥಗಳ ಹೆಸರಲ್ಲಿ ಒಂದಾಗುವುದು ಒಂದೇ ದಾರಿ ಹೊರತು, ಅದನ್ನು ಯಾವ ಧರ್ಮದ, ಯಾವ ಆಚಾರದಿಂದ ನೀಗಿಸಲು ಸಾಧ್ಯವಿಲ್ಲ!!

ಯಾವುದು ಧರ್ಮ ಮತ್ತು ಯಾವುದು ಧರ್ಮವಲ್ಲ ಎಂಬುವುದನ್ನು ಒಂದು ಉದಾಹರಣೆಯ ಸಹಾಯದಿಂದ ಸ್ಪಷ್ಟಪಡಿಸಬಹುದೇ?

ಉತ್ತರ- ಇಲ್ಲಿ ಒಂದು ಚಿಕ್ಕ ಕಥೆಯಿದೆ. ಪ್ರಾಚೀನ ಕಾಲದಲ್ಲಿ, ಪಿಶಾಚಿಗಳ ರಾಜನು ಜನರನ್ನು ಕೆಟ್ಟ ದಾರಿಗೆ ಎಳೆದು ತರಲು ಬಹಳ ಪ್ರಯತ್ನಿಸಿದರೂ, ಅಂದು ಅವರಿಗೆ ಒಳ್ಳೆಯತನದ ಅರ್ಥದ ಸ್ಪಷ್ಟತೆ ಇದ್ದುದರಿಂದ ಆತನಿಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಆಗ, ಆತನು ತನ್ನ ಬುದ್ಧಿವಂತ ಪಿಶಾಚಿಗಳನ್ನೆಲ್ಲಾ ಕರೆದು ಪರಿಹಾರ ಕಾಣದೆ ಇರುವ ತನ್ನ ದುಃಖವನ್ನು ಹೇಳಿಕೊಂಡನು. ಮಾತ್ರವಲ್ಲ, ದೇವರು, ಕೆಲವು ದಿನಗಳಲ್ಲೇ ಒಂದು ದೊಡ್ಡ ಸಂಖ್ಯೆಯ ಜಪ ಸಾಧನೆಯನ್ನು ಮಾಡಿಸುವನು ಮತ್ತು ಅದನ್ನು ಪೂರ್ಣಗೊಳಿಸುವ ಭಕ್ತರಿಗೆಲ್ಲಾ ಅವರವರ ಆಸೆಗನುಸಾರವಾಗಿ ಒಂದೊಂದು ವರಗಳನ್ನು ಕೊಡುವನು ಎಂದೂ, ತನಗೆ ತಿಳಿದ ಆ ಸುದ್ಧಿಯನ್ನೂ ಎಲ್ಲರಿಗೂ ತಿಳಿಸಿದನು. ಆಗ, ಒಬ್ಬ ಬುದ್ಧಿವಂತ ಪಿಶಾಚಿ ಎದ್ದು, ತಾನು ಅದಕ್ಕೆ ಪರಿಹಾರ ಕಾಣುವುದಾಗಿ ಹೇಳಿ ತನ್ನ ರಾಜನನ್ನು ಸಮಾಧಾನ ಪಡಿಸಿದನು. ರಾಜ ಪಿಶಾಚಿಗೆ ಅಚ್ಚರಿಯಾದರೂ, ಏನೂ ಹೇಳದೆ ಆತನಿಗೆ ಒಪ್ಪಿಗೆಯನ್ನು ಕೊಟ್ಟನು. ಈ ಬುದ್ಧಿವಂತ ಪಿಶಾಚಿಯು ಎಲ್ಲಾ ಭಕ್ತರೊಂದಿಗೆ ತಾನೂ ಜಪ ಸಾಧನೆಗೆ ಕೂರುವುದಾಗಿ ಹೇಳಿ ಹೋಗಿ ಕೂತನು. ಕೊನೆಯಲ್ಲಿ, ಆ ಜಪವೆಲ್ಲ ಮುಗಿದು ದೇವರು ಒಬ್ಬೊಬ್ಬರಿಗೆ ಒಂದೊಂದು ವರವನ್ನು ಕೊಡುತ್ತಾ ಬರುವಾಗ, ಎಲ್ಲಾ  ಭಕ್ತರು ತಮಗೆ ದೊಡ್ಡ ದೊಡ್ಡ ವರವನ್ನು ಕೇಳಿಕೊಂಡರು. ಅದೆಲ್ಲ ಆಗಿ ಕೊನೆಗೆ ಈ ಪಿಶಾಚಿಯ ಬಳಿ ದೇವರು ಬಂದು ಆತನಿಗೆ ಬೇಕಾಗಿರುವ ವರವನ್ನು ವಿಚಾರಿಸಿದಾಗ, ಪಿಶಾಚಿಯು, “ಓ ದೇವರೇ, ನನಗೆ ದೊಡ್ಡ ದೊಡ್ಡ ವರವೆಲ್ಲಾ ಬೇಡ, ಒಂದು ಚಿಕ್ಕ ವರ ಮಾತ್ರ ಸಾಕು ಅದೇನೆಂದರೆ, “ನೀವು ಆ ಸ್ವರ್ಗದ ಮತ್ತು ನರಕದ ಮುಂದೆ ತೂಗಿ ಹಾಕಿರುವ ಆ ಸ್ವರ್ಗ ಮತ್ತು ನರಕ ಎಂದು ಬರೆದಿರುವ ಫಲಕಗಳನ್ನು ಅದಲುಬದಲು ಮಾಡಿ ಹಾಕಿಬಿಡಿ, ಅಷ್ಟೇ ಸಾಕು ನನಗೆ” ಎಂದಿತು. ದೇವರು ಅದಕ್ಕೆ “ಒಹ್, ಬಹಳ ಚಿಕ್ಕ ವರ” ಎಂದು ಅದನ್ನು ಮಾಡಿದನಂತೆ. ಅಂದಿನಿಂದ ಮಾನವರು ಸ್ವರ್ಗಕ್ಕೆ ಹೋಗಲು, ನರಕದ ಭ ಯಾನಕ ಕರ್ಮಗಳನ್ನು ಅನುಸರಿಸಲು ಆರಂಭಿಸಿದರು

ಎಂದು ಕಥೆ ಹೇಳುವುದು. ಅಂದರೆ, ಹಿಂದೆ ಸ್ವರ್ಗಕ್ಕೆ ಹೋಗಲು  ಎಲ್ಲಾ ತರದ ಪವಿತ್ರ ಹೃದಯದ ಉತ್ತಮ ಕರ್ಮಗಳನ್ನು ಮಾತ್ರ ಮಾನವರು ಅನುಸರಿಸಿದ್ದರು, ಆದರೆ, ಇದರ ನಂತರ, ಬರೇ ನಂಬಿಕೆಗಳ ಯಾಂತ್ರಿಕ ಆಚಾರ, ಮಧ್ಯವರ್ತಿ ಪುರೋಹಿತರು, ಇತ್ಯಾದಿಗಳನ್ನು ಅವಲಂಭಿಸುವುದರ ಜೊತೆಗೆ, ದೇವರು ಮತ್ತು ಧರ್ಮವನ್ನೇ ತಮ್ಮ ಭುಜಬಲದಿಂದ ರಕ್ಷಿಸಿ ತಮಗೆ ಸ್ವರ್ಗಕ್ಕೆ ಹೋಗಲು ಧ್ವೇಷ, ಹಿಂಸೆ, ರಕ್ತಪಾತದ ದಾರಿಯನ್ನು ತಾವೇ ಕಂಡುಕೊಂಡರು ಎಂದು ಕಥೆ ಹೇಳುವುದು.

ಸಹೋದರಾ, ಇನ್ನು ನಿಮಗೆ ಯಾವುದು ಧರ್ಮ ಮತ್ತು ಯಾವುದು ಧರ್ಮವಲ್ಲ ಎಂಬುವುದು ಒಂದೆರಡು ಮಾತುಗಳಲ್ಲೇ ಅರ್ಥವಾಗಬಹುದು.

ಮಾನವರ ಒಳಿತಿನ ಬಗ್ಗೆ ಮಾತಾಡುವಾಗ, ಮತ್ತು ಅದಕ್ಕಾಗಿ ಕರ್ಮವನ್ನು ಮಾಡುವಾಗ ಅದು ಧರ್ಮ ಆಗುವುದು, ಆದರೆ, ಧಾರ್ಮಿಕ ನಿಯಮಗಳ ಹಿನ್ನೆಲೆಯಲ್ಲಿ ಮಾನವರನ್ನು ವರ್ಣ, ಜಾತಿ, ಮತ್ತು ಸ್ವಾರ್ಥಪರ ನೈತಿಕತೆಗಳಿಗೆ ಬಲಿಯಾಗಿಸುವಾಗ ಅದು ‘ಧರ್ಮವಲ್ಲ’ವಾಗುವುದು ಅಥವಾ ಅಧರ್ಮವಾಗುವುದು.[ಇದು ಆಗಾಗ್ಗ ಹೇಳುವ  ಬಾಯಿಪಾಠದ ಮಾತೇನೂ ಅಲ್ಲ, ಒಮ್ಮೆ ಹಿಂದೆ ನೋಡಿ, ಮಾನವರು ಇವುಗಳ ಹಿನ್ನೆಲೆಯಲ್ಲಿ ಶೋಷಿಸಲ್ಪಟ್ಟದ್ದನ್ನು  ನೋಡಿದಾಗ, ಅದು ಕಣ್ಣೀರಿನ ಕೋಡಿಯನ್ನು ಇಂದಿನ ಮಾನವರಲ್ಲೂ ಹರಿಸಲು ಸಮರ್ಥವಾಗುವ ಹಲವು ಕೋಟಿ   ದುರಂತ ಚಲನಚಿತ್ರಗಳಿಗೆ ಸತ್ಯಕಥೆಯಾಗಬಹುದು.] ಇನ್ನು, ಮಾನವರ ಒಳಿತಿನ ಬಗ್ಗೆ ಮಾತಾಡುವಾಗ ಮತ್ತು ಅದಕ್ಕಾಗಿ ಕರ್ಮವನ್ನು ಮಾಡುವಾಗ ಅದು ಧರ್ಮವಾಗುವುದು, ಆದರೆ, ಇತರರ ಮೇಲೆ ತಮ್ಮ ಆಚಾರ, ನಂಬಿಕೆ ಮತ್ತು ದೇವರುಗಳನ್ನು ಯಾವುದಾದರೂ ರೀತಿಯಲ್ಲಿ ಹೇರಲು ತೊಡಗುವಾಗ ಅದು ಧರ್ಮವಲ್ಲ ಅಥವಾ ಅಧರ್ಮವಾಗುವುದು. ದೌರ್ಭಾಗ್ಯವಶಾತ್, ಇದನ್ನು ಹೆಚ್ಚು ಕಡಿಮೆ ಜಗತ್ತಿನಲ್ಲಿ ಎಲ್ಲಾ ಧರ್ಮ, ಪಂಥಗಳು ಒಂದಲ್ಲ ಒಂದು ರೀತಿಯಲ್ಲಿ ಮಾಡುತ್ತಾ ಬಂದಿವೆ! ಅವುಗಳಲ್ಲಿ ಹಿಂಸಾ ಮಾರ್ಗವು ಅತ್ಯಂತ ಭಯಾನಕವಾಗಿರುವುದು. ಅವೆಲ್ಲಾ ಹೆಚ್ಚು ಹೆಚ್ಚು ಆಗುತ್ತಾ ಹೋಗುವವು,[“ನಮ್ಮ ಧರ್ಮ ಶಾಂತಿಯ ಧರ್ಮ” ಎಂದು ಎಲ್ಲವೂ ಹೇಳಿಕೊಳ್ಳುವುದಾದರೂ,]ಮುಂದೆ ಇವುಗಳು ಶಾಂತಿಯ ಲೋಕವನ್ನು ಮಾನವರಿಗೆ ತಂದುಕೊಡುವ ಭರವಸೆಯನ್ನು ಅವುಗಳೇ, ಈ ರೀತಿಯಲ್ಲಿ, ಬಹಳ ಹಿಂದೆಯೇ ಸರ್ವನಾಶ ಮಾಡಿಕೊಂಡಿವೆ!

ಈ ದೊಡ್ಡ ಸಮಸ್ಯೆಯನ್ನು ಪರಿಹರಿಸಲು ಇನ್ನಿರುವ ಆ ಒಂದೇ ಒಂದು ದಾರಿಯು, ಆ ಅದಲು ಬದಲಾಗಿರುವ ಫಲಕಗಳನ್ನು ಅವುಗಳ ಹಿಂದಿನ ಸ್ಥಾನದಲ್ಲಿ ಒಂದು ‘ಸಾರ್ವತ್ರಿಕ ರೀತಿಯ’[ಸಾರಧರ್ಮದ]ಹಿನ್ನೆಲೆಯಿಂದ  ಪುನಃ ಇರಿಸುವುದು ಮಾತ್ರವಾಗಿದೆ! ಹಾಗೆ ಮಾಡಿದರೆ, ಎಲ್ಲವೂ ನಿಧಾನವಾಗಿ ಬದಲಾಗಲು ಆರಂಭವಾಗಿ, ಮುಂದೆ, ಒಂದು ಅದ್ಭುತ ಸತ್ಯಯುಗದ ಸುಂದರ, ಶಾಂತಿಯ ಉದ್ಯಾನವಾಗಿ ಈ  ಜಗತ್ತು ಕಂಗೊಳಿಸಬಹುದು.

ಜಗತ್ತಿನಲ್ಲಿ ಎಲ್ಲವೂ ವಿಜ್ಞಾನ  ಎಂದು ನೀವು ಹೇಳುವಿರಲ್ಲಾ, ಅದನ್ನು ಹೇಗೆ ವಿವರಿಸುವಿರಿ?

ಉತ್ತರ- ವಿಜ್ಞಾನ ಎಂದರೆ ಅಲ್ಲಿ ವ್ಯವಸ್ಥೆ ಇರಬೇಕು, ಅಂದರೆ ಮಿತಿ ಅಥವಾ ಪರಿಧಿ ಇರಬೇಕು. ಒಂದು ವ್ಯವಸ್ಥೆಯೊಳಗೆ ಮಾತ್ರ ವಿಜ್ಞಾನ ಇರಲು ಸಾಧ್ಯ. ಈ ಪ್ರಪಂಚವನ್ನೆಲ್ಲಾ ಹರಡಿಕೊಂಡಿರುವ ಆ ಅನಂತ ಆಕಾಶವನ್ನು ತೋರಿಸಿ ಆ ಅನಂತತೆಯಲ್ಲಿ ನಮಗೆ ವಿಜ್ಞಾನವನ್ನು ಕಾಣಲು ಸಾಧ್ಯವಿಲ್ಲ! ಯಾಕೆಂದರೆ ಅಲ್ಲಿ ಅದು ಮಿತಿ, ಎಲ್ಲೆ, ಅಥವಾ ಪರಿಧಿ ಒಳಗೆ ಇಲ್ಲ. ನಾವು ಅನುಭವಿಸುವ ಸೂರ್ಯನು ನಮ್ಮ ಸೌರವ್ಯೂಹದ ಪರಿಧಿಯೊಳಗಿದ್ದವನು. ನಾವು ಅನುಭವಿಸುವ ವಾತಾವರಣದ ಒತ್ತಡ ಅದು ಭೂಮಿಯ ಗುರುತ್ವಾಕರ್ಷಣೆಯ ಪರಿಧಿಯೊಳಗಿನದು. ಗುಂಡಿ ಒತ್ತಿದರೆ ಬಲ್ಬು ಉರಿಯಬೇಕಾದರೂ ಅಲ್ಲಿ ಅದಕ್ಕೆ ಜೋಡಿಸಿರುವ ತಂತಿಗಳು ಕಡಿದಿರಬಾರದು. ಅದೇ ರೀತಿ ಎಲ್ಲವೂ ಅದು ವ್ಯವಸ್ಥೆ ಅಥವಾ ಪರಿಧಿಯೊಳಗೆ ಮಾತ್ರವಾಗಿರುವುದು! ಇನ್ನು, ನಮ್ಮ ಹಿತ್ತಲಿನ ವಿಚಾರ ಹೇಳುವುದಾದರೂ ಅಲ್ಲಿಯೂ ಗುರುತು ಅಥವಾ ಬೇಲಿ ಇರುವುದು. ಆ ಗುರುತು ಅಥವಾ ಬೇಲಿ ಇಲ್ಲವಾದರೆ ಹಿತ್ತಲ ಕಲ್ಪನೆಯೇ ಇಲ್ಲವಾಗುವುದು. ದೇಶಗಳ ಗಡಿ ಇತ್ಯಾದಿಗಳು ನಮ್ಮ ವ್ಯವಹಾರಿಕ ವಿಜ್ಞಾನಕ್ಕೆ ಉದಾಹರಣೆಗಳಾಗುವವು. ನಾವು ನಿತ್ಯವೂ ಉಪಯೋಗಿಸುವ ನೋಟುಗಳನ್ನು ಎಲ್ಲರೂ ಅವರವರೇ ತಯಾರಿಸಿಕೊಳ್ಳುವ ರೀತಿಯಾದರೆ, ಆಗ ಅಲ್ಲಿ ಪರಿಧಿ ಇಲ್ಲವಾಗಿ, ಆರ್ಥಿಕ ವ್ಯವಸ್ಥೆ ನಾಶವಾಗುವುದು. ಅಂದರೆ ಆರ್ಥಿಕ ವಿಜ್ಞಾನ ಅಥವಾ ಅರ್ಥಶಾಸ್ತ್ರ ಇಲ್ಲವಾಗುವುದು! ಹೀಗೆ, ಎಲ್ಲೆಡೆಯೂ ವ್ಯವಸ್ಥೆ ಅಥವಾ ಪರಿಧಿ ಇರುವಲ್ಲಿಯೇ ವಿಜ್ಞಾನ ಇರುವುದನ್ನೂ ನಾವು ಕಾಣುವೆವು, ಮತ್ತು ಈ ಪರಿಧಿ-ವಿಜ್ಞಾನವೇ ಎಲ್ಲವೂ ಆಗಿರುವುದು ಎಂದೂ ತಿಳಿಯುವುದು. ಇನ್ನು, ಒಂದು ಶರೀರ-ಪರಿಧಿಯು ‘ನಾನು’ ವನ್ನು[ವ್ಯಕ್ತಿಯನ್ನು] ಉಂಟು ಮಾಡುವುದು. ಒಂದು ಸ್ವಲ್ಪ ಜನರ ಕೂಟವೆಂಬ ಪರಿಧಿಯೊಳಗೆ ಕುಟುಂಬ ಇರುವುದು, ಆದರೆ ಊರಿನವರೆಲ್ಲಾ ಕುಟುಂಬದಲ್ಲಿರಲಾರರು. ಇನ್ನು, ಪರಿಧಿ ದೊಡ್ಡದಾಗುವಾಗ ಊರು, ದೇಶ ಇತ್ಯಾದಿಗಳಾಗುವವು. ಇವೆಲ್ಲಾ ಪರಿಧಿಗಳಾಗಿವೆ, ಮತ್ತು ಈ ಪರಿಧಿಗಳೇ ಅವುಗಳ ಇರುವಿಕೆಯ ಅಥವಾ ಅಸ್ಥಿತ್ವಗಳ ವಿಜ್ಞಾನವಾಗುವವು. ಇನ್ನು, ಮನುಷ್ಯನ ಸ್ವಭಾವವನ್ನು ನೋಡೋಣ. ಅಲ್ಲಿ ಈ ಸ್ವಭಾವದ ವಿಜ್ಞಾನವು ಸಾಹಚರ್ಯ-ಪರಿಧಿಯಲ್ಲಿರುವವು. ನಾವು ಉತ್ತಮ ಕರ್ಮಗಳ ಸಾಹಚರ್ಯವನ್ನು ಸೃಷ್ಟಿಸುತ್ತಾ ಹೋದಾಗ ನಾವು ಉತ್ತಮ ಜನರೆಂದು ಕರೆಯಲ್ಪಡುವೆವು. ಇನ್ನೊಬ್ಬನನ್ನು  ಬಯ್ಯುವಾಗ, ಅದನ್ನು ಕೇಳುವಾತನಲ್ಲಿ ಕೋಪಕ್ಕೆ ಕಾರಣವಾಗುವ ಆ ವಿಚಾರ-ಭಾವನೆಗಳ ಸಾಹಚರ್ಯ ಪರಿಧಿಯು ಸೃಷ್ಟಿಸಿಲ್ಪಡುವ ಕಾರಣ,  ಕೇಳಿದಾತನು ಕೋಪಗೊಳ್ಳುವನು. ಸಹಾಯ ಮಾಡುವಾಗ ಅದನ್ನು ಪಡೆಯುವಾತ ಕೊಟ್ಟವನನ್ನು ಹೊಗಳುವುದೂ ಆಲ್ಲಿ ಆತನ ವಿಚಾರ-ಭಾವನೆಗಳಿಂದ ಸೃಷ್ಟಿಸಲ್ಪಡುವ ಆ ಒಂದು ಸಾಹಚರ್ಯ ಪರಿಧಿಯೊಳಗಿಂದ. ಈ ರೀತಿ, ಅಲ್ಲಲ್ಲಿ ಸಾಹಚರ್ಯ-ಪರಿಧಿಗಳ ಸೃಷ್ಟಿ ಮಾಡುವಿಕೆಯೇ ಸಮಾಜದ ಅಥವಾ ಸಮಾಜಶಾಸ್ತ್ರದ ವಿಜ್ಞಾನವಾಗುವುದು. ಆದರೆ, ಇಲ್ಲಿ ಒಂದಂಶವು ವ್ಯತ್ಯಸ್ಥವಾಗುವುದು. ಅದೇನೆಂದರೆ ಇತರ ಕಡೆಗಳಲ್ಲಿ ಪರಿಧಿಗಳು ಸ್ಥೂಲವಾದುದರಿಂದ ಅದನ್ನು  ಯಾರಿಗೂ ತಪ್ಪಿಸಲು ಸಾಧ್ಯವಾಗುವುದಿಲ್ಲ. ಹಿತ್ತಲಿಗೆ ಬೇಲಿಹಾಕಿದ್ದಲ್ಲಿ ಅದನ್ನು ಇನ್ನೊಬ್ಬರು ತಪ್ಪಿಸುವ ಹಾಗಿಲ್ಲ, ಆದರೆ ಸ್ವಭಾವದ ವಿಜ್ಞಾನದಲ್ಲಿ ಒಂದು ದೊಡ್ಡ ತೊಂದರೆಯೇ “ಆರೋಪ”  ಆಗಿದೆ. ಈ ಆರೋಪವು ಬೇಕೆಂದೇ ಒಬ್ಬನು ಮಾಡಿಟ್ಟ ಉತ್ತಮ ಮತ್ತು ನಿಜವಾದ ಸಾಹಚರ್ಯ- ಪರಿಧಿಯ ಮೇಲೆ ಇನ್ನೊಬ್ಬನು ತಯಾರು ಮಾಡಿದ ಸುಳ್ಳು ಸಾಹಚರ್ಯ-ಪರಿಧಿಯ ಹೇರುವಿಕೆಯಾಗಿದೆ! ಆಗ, ದೂರದ ಒಬ್ಬನು ಈ ಹೇರಲ್ಪಟ್ಟ ಸುಳ್ಳು ಪರಿಧಿಯನ್ನು ನೋಡಿ, ಅದನ್ನೇ ಆ ಉತ್ತಮನ ವ್ಯಕ್ತಿತ್ವ ಎಂದು ತಪ್ಪು ತಿಳಿವನು. ಇದು ಈ ಸಮಾಜಶಾಸ್ತ್ರಕ್ಕಿರುವ ಒಂದು ದೊಡ್ಡ ತೊಂದರೆ ಆಗುವುದು. ಇನ್ನಿರುವುದು ಆಧ್ಯಾತ್ಮವಾಗಿದೆ. ಇಲ್ಲಿಯೂ, ಉತ್ತಮರು ಸ್ವರ್ಗಕ್ಕೆ ಮತ್ತು ದುಷ್ಟರು ನರಕಕ್ಕೆ ಎಂಬ ಪರಿಧಿ ಅಥವಾ ವ್ಯವಸ್ಥೆಯ ವಿಜ್ಞಾನವಿದೆ. ಇನ್ನು ನಿರ್ಗುಣ ತತ್ವ ಮತ್ತು ಶೂನ್ಯ’ವಾದ’ ರೀತಿಯ ಮೋಕ್ಷಗಳಲ್ಲಿ, ಕೊನೆಯಲ್ಲಿ ಪರಿಧಿ ರಹಿತನಾಗುವ ರೀತಿಯಾದರೂ, ತತ್ವದೊಂದಿಗೆ ಲೀನವಾಗುವಿಕೆ ಅಥವಾ ಶೂನ್ಯವಾಗುವಿಕೆ ಎಂಬ ಒಂದು ಸಾಧನಾ ಪರಿಧಿಯೇ ಅಲ್ಲಿಯೂ ಇರುವುದು.

ಇನ್ನು, ಕೊನೆಯದಾಗಿ ‘ದೇವರು’ ಎಂಬ ಸಂಕಲ್ಪವಾಗಿದೆ. ಆತ ನೀಚ ಸ್ವಭಾವದವನಾದರೆ ನಾವು ಅತನನ್ನು ದೇವರಲ್ಲ, ಸೈತಾನ ಎನ್ನುವೆವು. ದೇವರೆಂದ ಕೂಡಲೇ ಉತ್ತಮ ಸ್ವಭಾವದವನೆಂದು ಸಂಶಯ ಇಲ್ಲದೆ ತಿಳಿದಿರುವೆವು. ಅಂದರೆ, ದೇವರಿಗೆ ಪರಿಧಿಯು ಆ ಉತ್ತಮ ಸ್ವಭಾವವಾಗಿದೆ. ಆ ಉತ್ತಮ ಸ್ವಭಾವವು ಎಲ್ಲಿಂದ ಬರುವುದು ಎಂಬುವುದಕ್ಕೆ ಉತ್ತರವು, ಅದು ಆ ಸಾರ್ವತ್ರಿಕ ಸತ್ಯ, ಪ್ರೀತಿ ಮತ್ತು ನೀತಿಗಳಿಂದ ಮಾತ್ರ ಸಾಧ್ಯ ಎಂದಾಗಿದೆ. ಅಂದರೆ, ಅವುಗಳಿಲ್ಲದಿದ್ದರೆ ದೇವರು ದೇವರೇ ಆಗುವುದಿಲ್ಲ! ಈ ಕಾರಣದಿಂದಾಗಿಯೇ ‘ದೇವರ ಅಸ್ತಿತ್ವ’ದ ವಿಜ್ಞಾನವು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಪರಿಧಿ ಆಗುವುದೆಂದು ಹೇಳುವುದು.

ಈ ರೀತಿಯಲ್ಲಿ, ಪರಿಧಿ ಇಲ್ಲದೆ ಏನೂ ಇಲ್ಲ, ಆದುದರಿಂದ ಈ ಜಗತ್ತಿನಲ್ಲಿ ವಿಜ್ಞಾನವಲ್ಲದೆ ಬೇರೆ ಏನೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ. ಈ ಕಾರಣದಿಂದಲೇ, ಜಗತ್ತಲ್ಲಿ ನಾವು ಏನೇ ಮಾಡುವುದಾದರೂ ಅದನ್ನು ವೈಜ್ಞಾನಿಕವಾಗಿ ಅಥವಾ ತರ್ಕಬದ್ಧವಾಗಿ ವಿವರಿಸಿ ಕೊಡಲೇಬೇಕಾಗುವುದು. ಸಾವಿರಾರು ಪುರಾಣ ಕಥೆಗಳನ್ನು ಹೇಳುತ್ತಾ, ತಮ್ಮೊಳಗೆ ವಿಮರ್ಶಿಸುತ್ತಾ,  ತಮ್ಮ ಧರ್ಮ, ಪಂಥಗಳ ಶ್ರೇಷ್ಠತೆಯನ್ನು ಮೆರೆಯುವುದು, ಅದು ವೈಜ್ಞಾನಿಕ ಮತ್ತು ತರ್ಕಬದ್ಧವಾದ  ರೀತಿಯ ಹಿನ್ನೆಲೆಯ ಧರ್ಮವೇ ಆಗುವುದಿಲ್ಲ, ಬದಲು ಅದು ಬರೇ ಅವರವರಿಗೆ ಬಿಟ್ಟ ನಂಬಿಕೆಯ ಧರ್ಮ ಮಾತ್ರವಾಗುವುದು! 

ಚುಟುಕಾಗಿ ನಿಮ್ಮ ಸೂಕ್ಷ್ಮದ ರಹಸ್ಯಾನ್ವೇಷಣೆ, ಮತ್ತು ನಿಮ್ಮ ಇತರ ಎಲ್ಲಾ ಅನುಭವ ಇತ್ಯಾದಿಗಳ ಹಿನ್ನೆಲೆಯಲ್ಲಿ, ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ಇವೆಲ್ಲದಕ್ಕೂ ನೀವು ಸ್ವಲ್ಪ ವಿವರವಾಗಿ ಉತ್ತರಿಸಿರಿ.
1. ಓಂದೇವ ಎಂದರೆ ದೇವರೇ? ಅಲ್ಲವಾದಲ್ಲಿ ಇನ್ನು ಯಾರು? ಅದು ಯಾಕಾಗಿ ಇದೆ?
2. ಓಂದೇವ ಅವರಿಗೆ ಭಕ್ತರನ್ನು ಅನುಗ್ರಹಿಸುವ ಶಕ್ತಿ ಇದೆಯೇ?
3. ನೀವು ನಿಮ್ಮ ಪೂರ್ತಿ ಬರಹ ಹಾಗೂ ವಿಚಾರಗಳ ವಿವರಣೆಗಳಿಂದ ಏನನ್ನು ಉದ್ದೇಶಿಸುತ್ತೀರಿ?

ಉತ್ತರ: ಸತ್ಯ, ಪ್ರೀತಿ, ನೀತಿ ಇಲ್ಲದಿದ್ದರೆ ಯಾವುದೇ ಶಕ್ತಿಯೂ ದೇವರು ಆಗಲಾರದು ಎಂದು ನಮಗೆ ತಿಳಿದಿದೆ. ಸೃಷ್ಟಿಕರ್ತ ದೇವರ ಸಂಕಲ್ಪವಾದರೂ, ಆ ಸಂಕಲ್ಪದಲ್ಲಿ ಸತ್ಯ, ಪ್ರೀತಿ, ನೀತಿಗಳು ಇಲ್ಲ ಎಂದಾದರೆ, ಆ ಸೃಷ್ಟಿಕರ್ತ ದೇವರ ಸಂಕಲ್ಪವು ದೇವರು ಆಗುವುದಿಲ್ಲ ಖಂಡಿತ. ಈ ನನ್ನ ಮಾತು ಸರಿಯೋ ಎಂದು ನೀವು ಒಮ್ಮೆ ಆಲೋಚಿಸಿರಿ. ಈ ಕಾರಣದಿಂದ, ನನ್ನ ಮಟ್ಟಿಗೆ, ಸತ್ಯಸಂಧತೆ, ಶುದ್ಧ ಪ್ರೀತಿ, ಮತ್ತು ನೈತಿಕತೆಗಳು ಒಬ್ಬ ವ್ಯಕ್ತಿಯ ಪೂರ್ತಿ ಸ್ವಭಾವವೇ ಆಗಿ ಮೂಡಿಬಂದಲ್ಲಿ, ಆ ಮಹಾ ಮನುಷ್ಯನ ಅಥವಾ ಆ ಮಹಾತ್ಮನ ವ್ಯಕ್ತಿತ್ವವು ದೇವರು ಆಗುವುದು ಎಂದಾಗಿದೆ. ಅನುಗ್ರಹವನ್ನು ಕೊಡುವುದು ಮಾತ್ರ ದೇವರು ಎಂದಲ್ಲ. ಹಾಗಿದ್ದಲ್ಲಿ, ಪಿಶಾಚಿ, ದುಷ್ಟಶಕ್ತಿ, ವಾಮಾಚಾರ ಶಕ್ತಿ, ಇತ್ಯಾದಿಗಳನ್ನು ಕೂಡಾ ಆರಾಧನೆ ಮಾಡಿ ಅನುಗ್ರಹವನ್ನು ಪಡೆಯುವ ರೀತಿಯನ್ನು ನಾವು ಕಾಣುವೆವು, ಮತ್ತು ಅವೆಲ್ಲವೂ ದೇವರುಗಳು ಆಗಬೇಕಾಗುವುದು. ಅಂದರೆ, ಸತ್ಯ, ಪ್ರೀತಿ, ನೀತಿ, ಎಂಬ ದೈವತ್ವ ಇರುವವುಗಳು ಮಾತ್ರ ದೇವರಾಗಲು ಸಾಧ್ಯ ಎಂದು ಅರ್ಥ. ಇನ್ನು, ವಂಚನೆ, ದ್ವೇಷ, ಅನೈತಿಕತೆಗಳು ಒಬ್ಬ ವ್ಯಕ್ತಿಯ ಪೂರ್ತಿ ವ್ಯಕ್ತಿತ್ವ ಆಗುವುದಾದರೆ, ಆ ವ್ಯಕ್ತಿಯ ವ್ಯಕ್ತಿತ್ವವು ಅಸುರ ವ್ಯಕ್ತಿತ್ವ ಆಗುವುದು. ಆ ನಿಟ್ಟಿನಲ್ಲಿ, ಜನತೆಗೆ ಸ್ವತಃ ಅವರವರನ್ನು ಸೇರಿ, ಪ್ರತಿ ಮನುಷ್ಯನನ್ನು ಅಸುರನನೋ, ದೇವನೋ, ಅಥವಾ ಅದರ ಮಧ್ಯದ ಆ ಎರಡು ವ್ಯಕ್ತಿತ್ವಗಳನ್ನು ಹೊಂದಿದವನೋ, ಎಂದೆಲ್ಲಾ, ವ್ಯಕ್ತಿಯ ಸ್ವಭಾವ ನೋಡಿ ತೀರ್ಮಾನಿಸಬಹುದು. ಆಗ, ನಾವು ಪ್ರತಿಯೊಬ್ಬರೂ, ಇವು ಮೂರರಲ್ಲಿ ಯಾವುದಾದರೂ ಒಂದು ಗುಂಪಲ್ಲಿ ಸೇರಿರುತ್ತೇವೆ ಎಂದು ತಿಳಿಯುವುದು. ಇಲ್ಲಿ, ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಸರಿಯಾಗಿ ತಿಳಿಯದೆ ತೀರ್ಮಾನಿಸುವುದು ಎಂದಿಗೂ ಅಪಾಯಕಾರಿ ಎಂಬುವುದನ್ನು ಮಾತ್ರ ಎಲ್ಲರೂ ಅರಿತಿರಬೇಕು ಅಷ್ಟೆ.

ಇನ್ನು, ದೇವರು ಎಂಬುವುದನ್ನು ಸೂಕ್ಷ್ಮದ ಶಕ್ತಿಗಳ ನಿಟ್ಟಿನಲ್ಲಿ ಹೇಳುವುದಾದರೆ, ಅಲ್ಲಿಯೂ ಕೂಡಾ, ದೇವರು ತನ್ನ ಧರ್ಮದ ಹೆಸರಲ್ಲಿ ಯಾವುದೇ ರೀತಿಯ ಮನುಷ್ಯ ವಿಭಜನೆಯನ್ನು ಮಾಡಬಾರದು. ದೇವರು ಮತ್ತು ಧರ್ಮ ಇವು ಎರಡು ಇರುವುದೇ ಈ ಭೂಮಿಯಲ್ಲಿ ಹೃದಯವೈಶಾಲ್ಯತೆ ಇರುವ ಉತ್ತಮರ ಸಂಖ್ಯೆಯನ್ನು ಹೆಚ್ಚು ಸೃಷ್ಟಿಸಲು, ಮತ್ತು ಸಮಾಜದಲ್ಲಿ ಮೇಲು ಕೀಳು ಭಾವನೆ, ದ್ವೇಷ, ಹಿಂಸೆ, ರಕ್ತಪಾತಗಳನ್ನು ತೊಲಗಿಸಲು ಎಂದು ತಿಳಿಯಬೇಕು. ಆದುದರಿಂದ, ಈ ರೀತಿಯಲ್ಲಿ ಇರುವ ದೇವರು ಮತ್ತು ಧರ್ಮಗಳ ಸಂಕಲ್ಪಗಳು ಶುದ್ಧ ದೇವರ ಸಂಕಲ್ಪ ಮತ್ತು ಶುದ್ಧ ಧರ್ಮದ ಸಂಕಲ್ಪ ಎಂದು ಹೇಳುವೆನು. ನೋಡಿ, ನಂಬಿಕೆಯವರ ಪ್ರಕಾರ, ಆ ದೇವರ ನರಕವು ಎಲ್ಲಾ ಇತರ ಧರ್ಮದವರಿಗೆ ಕಟ್ಟಿಟ್ಟ ಬುತ್ತಿಯಂತೆ, ಮತ್ತು ತಮ್ಮ ಧರ್ಮದಲ್ಲಿದ್ದು ಆದರ ಆಚಾರ ತಪ್ಪಿದವರಿಗೆ ಮಾತ್ರ ನರಕ ಆಗುವುದು, ಉಳಿದವರಿಗೆ ಸ್ವರ್ಗ ಸಿಗುವುದಂತೆ. ಅಂದರೆ ತಮ್ಮ ಧರ್ಮದ ನಿತ್ಯ ಆಚಾರ ಮಾಡುವವರಿಗೆ ಮಾತ್ರ ಸ್ವರ್ಗ ಎಂದೂ ಹೇಳುವರು. ಆ ನಂಬಿಕೆ ಆಚಾರಗಳನ್ನು ಮಾಡದವರಿಗೆ ಸ್ವರ್ಗ ಇಲ್ಲ ನರಕ ಎನ್ನುವರು. ಹೀಗೆ, ಈ ಯಾಂತ್ರಿಕ ಆಚಾರಗಳಿಗೆ ಇಷ್ಟು ಪ್ರಾಮುಖ್ಯತೆಯನ್ನು ಕೊಟ್ಟಲ್ಲಿ, ಇನ್ನು, ಈ ಧರ್ಮಗಳು ಹೃದಯ ವೈಶಾಲ್ಯತೆ ಎಂಬ ಆ ನಿಜ ಧರ್ಮವನ್ನು ಮರೆತುದರಲ್ಲಿ ಏನು ವಿಶೇಷವಿದೆ? ಪರೆಯ, ಶೂದ್ರ ಎಂದು ಸಾವಿರಾರು ವರುಷಗಳು ತಮ್ಮ ಮಾನವ ಸಹೋದರರನ್ನು ಶೋಷಣೆ ಮಾಡದೆ ಇರುವರೆ? ಸ್ವಂತ ಮನೆಯ ಹೆಣ್ಣು ಮಕ್ಕಳನ್ನು ಬೆಂಕಿಗೆ ಹಾಕುವ ಹೇಯ ಭೀಕರ ಕ್ರೌರ್ಯದ ಕೆಲಸವನ್ನು ಧಾರ್ಮಿಕ ಕೆಲಸ ಎಂದು ಸಾವಿರಾರು ವರುಷಗಳು ಅದನ್ನು ನಿಷೇಧಿಸುವ ತನಕ ಮುಂದುವರಿಸದೆ ಇರುವರೇ? ಇದನ್ನೇ ಹೇಳುವುದು ನಂಬಿಕೆ ಆಚಾರಗಳ ಹುಚ್ಚು ಎಂದು! ಇನ್ನು, ಇದುವೆ ಯುದ್ಧದಲ್ಲಿ ಸೆರೆ ಹಿಡಿದ ಹೆಂಗಸರನ್ನು ಬೀದಿಯಲ್ಲಿ ನಾಯಿಗಳನ್ನು ಮಾರುವಂತೆ ಮಾರಲು ಅವಕಾಶ ಮಾಡಿರುವುದು. ದೇವದಾಸಿಯರನ್ನು ಹಾಗೂ ಧರ್ಮ ಯುದ್ಧ ಮಾಡುವವರಿಗೆ ಕಾಮ ದಾಸಿಯರನ್ನಾಗಿಸಿರುವುದು. ಇದರ ಆ ವಿಶ್ವರೂಪ ಎಲ್ಲಿಯ ತನಕ ಎಂದರೆ, ಇದುವೇ ಬಾಂಬು ಹಾಕಿ ನೂರಾರು ಅಮಾಯಕರನ್ನು ಕೊಂದು ಆಚಾರ ಮಾಡಿ ಸ್ವರ್ಗಕ್ಕೆ ಹೋಗುವ ನಂಬಿಕೆಯನ್ನು ಕೂಡಾ ಇಟ್ಟುಕೊಂಡಿರುವುದು. ಇನ್ನು ಇದಕ್ಕಿಂತ ಹೆಚ್ಚು ನಿಮಗೆ ಆ ಪವಿತ್ರ ಕರುಣಾಮಯ ಮನುಷ್ಯರೆಲ್ಲರ ತಂದೆಯಾದ ಆ ಸೃಷ್ಟಿಕರ್ತನ ಈ ನಂಬಿಕೆ ಆಚಾರಗಳಿಂದ ಏನು ಬೇಕು ಹೇಳಿ? ದೇವರು ಮತ್ತು ಧರ್ಮಗಳು ಪವಿತ್ರ ದೈವತ್ವವನ್ನು ಎಂದಿಗೂ ಹೊರಸೂಸುತ್ತಾ ಇರಬೇಕು ಆದರೆ ಹೊರಸೂಸಿರುವುದು ಮಾತ್ರ ಭೀಕರ ದ್ವೇಷ, ಹಿಂಸೆ, ರಕ್ತಪಾತಗಳ ವಿಷ ಮತ್ತು ವಿಷಯ ಮಾತ್ರವಾಗಿದೆ. ಈಗ ಈ ಆಚಾರ್ಯ ನಂಬಿಕೆಗಳನ್ನು ಆ ಅನ್ಯ ಗ್ರಹಜೀವಿಗಳ ಅತಿರಹಸ್ಯ ವಾಮಾಚಾರವು ನಿಯಂತ್ರಿಸುತ್ತಾ ಅವುಗಳಿಗೆ ಬೇಕಾದಂತೆ ಶಿಲಾಯುಗದಿಂದಲೇ ಉಪಯೋಗಿಸುತ್ತಾ ಬರುತ್ತಿವೆ ಎಂದು ನನ್ನ 15 ವರುಷಗಳ ಸೂಕ್ಷ್ಮ ಲೋಕದ ಬೇಹುಗಾರಿಕೆಯ ಹಿನ್ನೆಲೆಯಲ್ಲಿ ನಾನು ಹೇಳಿರುವುದು ಸರಿಯಾಗಿರಬಹುದೇ ಎಂದು ತಿಳಿಯಲು ಆ ನನ್ನ ಹಿಂದಿನ ವೀಡಿಯೋಗಳನ್ನು ಕೇಳಿರಿ. ಸತ್ಯವು ನಮಗೆ ಬೇಕು ಸುಳ್ಳು ಬೇಡ. ಭೂಮಿ ಚಪ್ಪಟೆ ಎಂಬ ಸುಳ್ಳು ಬೇಕೆ ಅಥವಾ ಭೂಮಿ ಗೋಲ ಎಂಬ ಸತ್ಯ ಬೇಕೆ? ಈ ರೀತಿಯನ್ನೇ ನಾವು ಎಲ್ಲದರಲ್ಲೂ ಅನುಸರಿಸಬೇಕಾಗಿರುವುದು. ನನ್ನ ಜಾತಿ, ಪಂಥ, ಧರ್ಮ, ಗುರು ಹೇಳಿರುವ ಕಾರಣಕ್ಕೆ ಅದನ್ನು ಅನುಸರಿಸುವುದಾದರೆ, ಎಲ್ಲಾ ಧರ್ಮ, ಪಂಥಗಳಲ್ಲಿ ಹೇಳಿರುವ ಸೃಷ್ಟಿಕರ್ತನೇ ಹೇಳಿರುವ ಭೂಮಿ ಚಪ್ಪಟೆ, ಸೂರ್ಯ ಭೂಮಿಗೆ ಸುತ್ತುವನು, ಭೂಮಿ ಸೌರವ್ಯೂಹದ ಕೇಂದ್ರ, ಇತ್ಯಾದಿ ಆ ಹಲವು ಸುಳ್ಳುಗಳನ್ನು ಸತ್ಯ ಎಂದು ಜಗತ್ತಿನ ಮುಂದೆ ಹೇಳಬೇಕಾಗುವುದು. “ನಮ್ಮ ಧರ್ಮದವರಿಗೆ ಮಾತ್ರ ಸ್ವರ್ಗ” ಎಂಬ ಆ ಎಲ್ಲಾ ಧರ್ಮಗಳ ನಂಬಿಕೆಗಳು ಅವುಗಳ ಅತ್ಯಂತ ದೊಡ್ಡ ಮೂರ್ಖತನ ಆಗಿರುವುದು. ಇದು ಯಾಕೆಂದರೆ, ಎಂದರೆ, ಸೃಷ್ಟಿಕರ್ತ ದೇವರಿಗೆ ಆ ಪವಿತ್ರ ದೈವತ್ವ ಇರಬೇಕಿದ್ದರೆ, ಆತನು ತನ್ನ ಸ್ವರ್ಗವನ್ನು ಭೂಮಿಯ ತನ್ನ ಉತ್ತಮ ಗುಣದ ಮಕ್ಕಳಿಗಾಗಿ ಎಂದು ಮಾಡಿರಬೇಕು ಹಾಗೂ ಎಲ್ಲಾ ಧರ್ಮಗಳಲ್ಲಿ ಹೇಳಿರಬೇಕು. ಅಯ್ಯೋ, ಇತ್ತ, ಎಲ್ಲಾ ಧರ್ಮಗಳಲ್ಲಿ ಸೃಷ್ಟಿಕರ್ತಾನು ಹೇಳಿರುವುದು ಮಾತ್ರ ಆಯಾ ಧರ್ಮದಲ್ಲಿ ಸ್ವರ್ಗ, ಆದರೆ ಇತರ ಧರ್ಮಗಳಲ್ಲಿ ಸ್ವರ್ಗ ಸಾಧ್ಯ ಇಲ್ಲ ಎಂದು!! ಇದು ಏನು ಮನುಷ್ಯರನ್ನು ತಮ್ಮೊಳಗೆ ಹೊಡೆಸಿ ಸಾಯಿಸುವ ಮೋಸ! ಈ ಸ್ಪಷ್ಟವಾಗಿ ಕಾಣುವ ಮೊಸವನ್ನಾದರೂ ಈ ಧರ್ಮ, ಪಂಥಗಳಿಗೆ ಪತ್ತೆ ಹಚ್ಚಲು ಇದುವರೆಗೂ ಅವುಗಳ ಪಾಂಡಿತ್ಯದಿಂದ ಸಾಧ್ಯವಾಗದಿರುವಾಗ, ಈ ಪಾಂಡಿತ್ಯ ಏನು? ಆಚಾರ, ನಂಬಿಕೆಯ ಪಾಂಡಿತ್ಯವು ನಂಬಿಕೆಯ ಭ್ರಮೆಯನ್ನು ಹೆಚ್ಚಿಸುವುದು ಆದರೆ ಸತ್ಯದ ಕಣ್ಣನ್ನು ಎಂದಿಗೂ ಅದು ತೆರೆಸದು. ಆದುದರಿಂದ, ನನ್ನ ಪ್ರಕಾರ, ಸ್ವಲ್ಪವಾದರೂ ನಂಬಿಕೆಯು ಪವಿತ್ರ ಆಗಬೇಕಿದ್ದರೆ, ಉತ್ತಮರಾದ ಎಲ್ಲಾ ಮಾನವ ಮಕ್ಕಳಿಗೆ ಎಲ್ಲರ ತಂದೆಯಾದ ಸೃಷ್ಟಿಕರ್ತನು ತನ್ನ ಸ್ವರ್ಗವನ್ನು ಕೊಡುವನು ಎಂದು ಆ ನಂಬಿಕೆಯನ್ನು ತಿದ್ದಿಕೊಳ್ಳಬೇಕಾಗುವುದು ಎಂದಾಗಿದೆ. ಇದು ಉತ್ತಮ ಅಥವಾ ಆದರ್ಶ ನಂಬಿಕೆಗಳ ಬಗ್ಗೆ ಇರುವ ನನ್ನ ನಿಲುವು ಕೂಡಾ ಆಗಿದೆ. ಸ್ವಾರ್ಥ ನಂಬಿಕೆ ಆಚಾರಗಳನ್ನು ಸತ್ಯ, ಪ್ರೀತಿ, ನೀತಿ ಆದರ್ಶಗಳ ಹಿನ್ನೆಲೆಯಲ್ಲಿ ಬದಲಾಯಿಸಿಕೊಳ್ಳುವಲ್ಲಿ ಮಾತ್ರ ನಂಬಿಕೆಗಳು ಪವಿತ್ರವಾಗಿ ಮಾನವರ ಬಾಳಿಗೆ ಶಾಂತಿ ನೆಮ್ಮದಿಯನ್ನು ತರಬಲ್ಲವು ಎಂಬುವುದು ಆಚಾರ, ನಂಬಿಕೆಗಳ ಬಗ್ಗೆ ಇರುವ ನನ್ನ ನಿಲುವು ಆಗಿದೆ. ದುರದೃಷ್ಟವಶಾತ್, ಧರ್ಮ, ಪಂಥಗಳ ಹೆಚ್ಚಿನ ನಂಬಿಕೆಗಳು ಕೂಡಾ ಭಯಾನಕ ಸ್ವಾರ್ಥ ನಂಬಿಕೆಯಾಗಿರುವ ಕಾರಣ ಅವುಗಳೆಲ್ಲವೂ ಒಟ್ಟು ಸೇರಿ ಪವಿತ್ರ ದೇವರು ಮತ್ತು ಧರ್ಮಗಳ ಸಂಕಲ್ಪಗಳ ಆ ಪವಿತ್ರತೆಯನ್ನೇ ನಾಶಮಾಡಿ ಹಾಕಿರುವವು. ಇನ್ನು, ಈ ಅಪವಿತ್ರವಾದವುಗಳನ್ನು ಹೊತ್ತುಕೊಂಡಲ್ಲಿ, ಸತ್ಯಸಂಧತೆ, ಪ್ರೀತಿ, ಕರುಣೆ, ಇತ್ಯಾದಿಗಳು ಇರಬೇಕಾದ ಆ ಧರ್ಮವನ್ನು ಸೃಷ್ಟಿಸಲು ಹೇಗೆ ಸಾಧ್ಯ? ಅದಕ್ಕೆ ನೋಡಿ, ಧರ್ಮದ ವಿರುದ್ದವಾಗಿರುವ ದ್ವೇಷ, ಹಿಂಸೆ, ರಕ್ತಪಾತಗಳನ್ನು ಧರ್ಮ, ಪಂಥಗಳು ಇದುವರೆಗೂ ಪರ್ವತದಷ್ಟು ಸಾಧ್ಯವಾಗಿರುವುದು!

ಇನ್ನು, ನನ್ನ ಬಗ್ಗೆ ಮತ್ತು ನನ್ನ ಜೀವನ ರೀತಿಯ ಬಗ್ಗೆ ಹೇಳುವುದಾದರೆ, ನಾನು ಹೃದಯವೈಶಾಲ್ಯತೆಯ ಜೀವನವನ್ನು ಸಾಧಿಸಲು ಪ್ರಯತ್ನಿಸುವ ಅಥವಾ ಹೃದಯವೈಶಾಲ್ಯತೆಯ ಜೀವನದ ಸಾಧನೆಗಳನ್ನು ಮಾಡುತ್ತಿರುವ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದೇನೆ. ನಾನು ಮಾಡುತ್ತಿರುವ ಆ ಒಟ್ಟು ಸಾಧನೆಗಳಲ್ಲಿಟ್ಟು ಆ ಮುಖ್ಯ ಮೂರು ಸಾಧನೆಗಳೆಂದರೆ, ಸತ್ಯಚಿಂತನೆಜ್ಞಾನ, ಆತ್ಮಪರಿಶೋಧನೆಜ್ಞಾನ, ಮತ್ತು ವೈರಾಗ್ಯಜ್ಞಾನ ಎಂಬ ಈ ಮೂರು ರೀತಿಯ ಜ್ಞಾನಸಾಧನೆಗಳಾಗಿವೆ.

ಇನ್ನು, ನನ್ನ ಹೆಸರು ಬೇರೆ ಇದೆ ಎಂದೂ, ಮತ್ತು ಓಂದೇವ ಎಂಬುವುದು ಸತ್ಯ, ಪ್ರೀತಿ, ನೀತಿ, ಸ್ವಭಾವದ ಹಿನ್ನೆಲೆಯಲ್ಲಿನ ಆ ನನ್ನ ಮನೋಶಕ್ತಿಯ ವ್ಯಕ್ತಿತ್ವದ ಹೆಸರಾಗಿದೆ ಎಂದು ನಿಮಗೆ ತಿಳಿದಿದೆ. ಇಲ್ಲಿ ‘ಸತ್ಯ’ ಎಂಬ ಒಂದು ಅರ್ಥ ಮಾತ್ರ ಓಂದೇವ ಎಂಬ ಹೆಸರಿಗೆ ಇರುವುದು. ಬೇರೆ ಯಾವ ಇತರ ಪೌರಾಣಿಕ ಅಥವಾ ತಾತ್ವಿಕ ಅರ್ಥಗಳು ಆ ಹೆಸರಿಗಿಲ್ಲ. ನಾನು ಈ ನನ್ನ ಮನೋಶಕ್ತಿಯಾದ ಓಂದೇವ ವ್ಯಕ್ತಿತ್ವವನ್ನು ಇತರ ಎಲ್ಲಾ ದೇವರು, ದೇವತೆಗಳಂತೆ, ಪುರಾಣ ಕಥೆಗಳ ಹಿನ್ನೆಲೆಯಲ್ಲಿ ಹೇಳುವುದಲ್ಲ ಎಂದು ಪ್ರತ್ಯೇಕವಾಗಿ ತಿಳಿಯಬೇಕು, ಬದಲು, ಅದನ್ನು ನಾನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಮಾತ್ರ ವಿವರಿಸುವುದು. ಈ ದೊಡ್ಡ ವ್ಯತ್ಯಾಸವನ್ನು ಪ್ರತ್ಯೇಕವಾಗಿ ತಿಳಿಯಬೇಕು.

ಇನ್ನು, ಮನೋವಿಜ್ಞಾನ ಮತ್ತು ನನ್ನ ರೀತಿಗಿರುವ ಒಂದು ಚಿಕ್ಕ ವ್ಯತ್ಯಾಸ ಎಂದರೆ, ಮನೋವಿಜ್ಞಾನವು, ದೇಹದಿಂದ ಮನೋಶಕ್ತಿಯನ್ನು ಪ್ರತ್ಯೇಕಿಸಿ, ಆ ಸ್ಥೂಲ ವ್ಯಕ್ತಿಗಿಂತ ಹೊರಗೆ ಒಂದು ಪ್ರತ್ಯೇಕ ಸೂಕ್ಷ್ಮ ವ್ಯಕ್ತಿತ್ವವಾಗಿ ಇರಿಸಿಕೊಳ್ಳುವ ರೀತಿಯನ್ನು ಇನ್ನೂ ಕಂಡುಹಿಡಿದಿಲ್ಲ ಎಂಬುವುದು ಮಾತ್ರವಾಗಿದೆ.

ಒಟ್ಟಲ್ಲಿ, ಓಂದೇವ ಎಂಬ ಹೆಸರು, ನನ್ನ ಒಳಗೆ ಇರುವ ಹಾಗೂ ನನ್ನಿಂದ ಪ್ರತ್ಯೇಕಿಸಲ್ಪಟ್ಟು ತಯಾರು ಮಾಡಲ್ಪಟ್ಟಿರುವ, ಸತ್ಯ, ಪ್ರೀತಿ, ನೀತಿ ಎಂಬ ನನ್ನ ಸ್ವಭಾವದ ಹಿನ್ನೆಲೆಯ, ಆ ನನ್ನ ಮನೋಶಕ್ತಿಗಳ ವ್ಯಕ್ತಿತ್ವಗಳು ಎಲ್ಲದರ, ಒಂದು ಸಾಮಾನ್ಯ ಹೆಸರಾಗಿದೆ. ಅಂದರೆ, ಓಂದೇವ ಎಂಬುವುದು ಸೂಕ್ಷ್ಮದ ನನ್ನ ಮನೋಶಕ್ತಿಯ ವ್ಯಕ್ತಿತ್ವಗಳು ಎಲ್ಲದರ ಆ ಒಂದು ಸಾಮಾನ್ಯ ಹೆಸರಾಗಿದೆ ಎಂದು ಅರ್ಥ.

ಇನ್ನು, ಈ ಓಂದೇವ ಎಂಬ ಸೂಕ್ಷ್ಮದ ಮನೋಶಕ್ತಿ ಯಾಕಾಗಿ ಇದೆ ಎಂದು ಕೇಳಿರುವ ಆ ನಿಮ್ಮ ಪ್ರಶ್ನೆಗೆ ಉತ್ತರ.

ಅದು, ಮೊದಲಲ್ಲಿ, ಸೂಕ್ಷ್ಮದಲ್ಲಿ ನನಗೆ ಆಗುತ್ತಿರುವ, ತೊಂದರೆಗಳನ್ನು ನಿವಾರಿಸಲು ಬೇಕಾಗಿ “ನಾನು ಪವಿತ್ರ ಸತ್ಯವಾಗಿದ್ದೇನೆ” ಎಂಬ ನನ್ನ ಧ್ಯಾನದ ಆ ಏಕಾಗ್ರತೆಯ ಮನಸ್ಸಿನಿಂದ ನಾನೇ ಸೃಷ್ಟಿಸಿಕೊಂಡ ಒಂದು ಶಕ್ತಿಯಾಗಿತ್ತು. ಅದು ಕೂಡಾ, ಇತರ ರೀತಿಗಳಲ್ಲಿ ಆ ತೊಂದರೆಗಳಿಂದ ಪಾರಾಗಲು ಮೊದಲು ನಾನು ಶ್ರಮಿಸಿ ಅವು ಯಾವುದೂ ಫಲಕ್ಕೆ ಬಾರದಿರುವಾಗ, ಸ್ವಯಂ ರಕ್ಷಣೆಗಾಗಿ ಸೃಷ್ಟಿಸಲೇಬೇಕಾಗಿ ಬಂದ ಶಕ್ತಿ ಆಗಿರುವುದು. ಇನ್ನು, ಎರಡನೇ ಹಂತದಲ್ಲಿ, ಅದಕ್ಕೆ ಒಂದು ಹೆಸರು ಸಹಿತ, ವ್ಯವಸ್ಥಿತವಾಗಿ, ಸತ್ಯ ಮತ್ತು ಪ್ರೀತಿಯ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಸೃಷ್ಟಿಮಾಡಿರುವುದು. ಆ ಎರಡನೇ ಹಂತವು, ಸೂಕ್ಷ್ಮದ ರಹಸ್ಯಾನ್ವೇಷಣೆಗೆ ಆಗಿತ್ತು. ಅಂದರೆ, ಹಾಗೆ ಸೃಷ್ಟಿಸಲ್ಪಟ್ಟ ಓಂದೇವ ಎಂಬ ಧನಾತ್ಮಕ ಮನೋಶಕ್ತಿಯ ಸಹಾಯದಿಂದಲೇ, ಆ ಸೂಕ್ಷ್ಮದ ರಹಸ್ಯಾನ್ವೇಷಣೆಯ ಮೂಲಕ, ನಾನು ಇಷ್ಟು ಸ್ಪಷ್ಟವಾಗಿ, ಇದುವರೆಗೂ ಬಯಲಾಗದ ಮತ್ತು ಈ ಭೂಮಿಯ ಎಲ್ಲವನ್ನೂ ನಿಯಂತ್ರಿಸುವ, ಅನ್ಯಗ್ರಹಜೀವಿಗಳ, ಶಿಲಾಯುಗದಿಂದಲೇ ಇರುವ ಆ ಅತಿರಹಸ್ಯ ಅತಿ ಭಯಾನಕ ಆ ಪ್ರಾಚೀನ ವಾಮಾಚಾರ ವ್ಯವಸ್ಥೆಯನ್ನು ಪತ್ತೆಹಚ್ಚಲು ಸಾಧ್ಯವಾಗಿರುವುದು. ಅದು ಕೂಡಾ 15 ವರುಷಗಳ ಆ ನನ್ನ ಸತತ ಪ್ರಯತ್ನದ ಮೂಲಕ ಆಗಿರುವುದು. ನೋಡಿ, ಈ ಪ್ರಾಚೀನ ವಾಮಾಚಾರವು ಭೂಮಿಯ ಮನುಷ್ಯರಿಂದ ಸೃಷ್ಟಿಸಲ್ಪಟ್ಟ ಆ ವಾಮಾಚಾರ ಪದ್ಧತಿಗಳು ಅಲ್ಲ ಎಂಬುವುದನ್ನು ನಾನು ಪ್ರತ್ಯೇಕವಾಗಿ ಹೇಳುವೆನು. ಅವುಗಳು, ಭಯಾನಕ ಶಕ್ತಿಗಳು ಹಾಗೂ ಹೀನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕಾರಣ, ಅವನ್ನು ನಾನು ವಾಮಾಚಾರ ಎಂಬ ಹೆಸರಲ್ಲಿ ಸೂಚಿಸಿರುವುದು ಅಷ್ಟೆ. ಇದು, ಸೂಕ್ಷ್ಮ ಲೋಕದ ಎಲ್ಲಾ ಶಕ್ತಿಗಳನ್ನು ಹಾಗೂ ಭೂಮಿಯ ಎಲ್ಲಾ ಮಾನವರನ್ನು ಶಿಲಾಯುಗದಿಂದಲೇ ನಿಯಂತ್ರಿಸುತ್ತಾ ಬರುತ್ತಿರುವ ಸೂಕ್ಷ್ಮದ ಆ ಅತಿ ರಹಸ್ಯ ಭಯಾನಕ ವಾಮಾಚಾರ ವ್ಯವಸ್ಥೆ ಎಂದು ಹೇಳಬಹುದು.

ಇನ್ನು, ನಿಮಗೆ ಅನುಗ್ರಹಿಸುವ ಶಕ್ತಿ ಇದೆಯಾ ಎಂಬ ಪ್ರಶ್ನೆಯ ಉತ್ತರ;

ನೋಡಿ, ಇಲ್ಲಿ, ಇದುವರೆಗಿನ ಭೂಮಿಯ ಎಲ್ಲಾ ದೇವರುಗಳ ಅನುಗ್ರಹ ರೀತಿಗಳನ್ನು ಮೊದಲು ಚುಟುಕಾಗಿ ಹೇಳುವೆನು. ಅದಕ್ಕಾಗಿ ಇಲ್ಲಿ ಬಹಳ ಗಮನಕೊಟ್ಟು ಕೇಳಿರಿ.

ನೋಡಿ, ಶಿಲಾಯುಗದಿಂದಲೇ, ಈ ಅನ್ಯಗ್ರಹ ಜೀವಿಗಳು, ಭೂಮಿಯ ಮಾನವರನ್ನು ಅವುಗಳ ಲಾಭಕ್ಕಾಗಿ ಉಪಯೋಗಿಸುತ್ತಾ ಬರುತ್ತಿವೆ ಎಂದು ಈ ಮೊದಲೇ ಅಲ್ಲಲ್ಲಿ ಹೇಳುರುವೆನು. ಅದು ಏನೆಂಬುವುದನ್ನು ಎಲ್ಲವನ್ನು ನನ್ನ ಹಿಂದಿನ ವೀಡಿಯೋಗಳಿಂದ ತಿಳಿದುಕೊಳ್ಳಿರಿ. ಅವುಗಳಲ್ಲಿಟ್ಟು ಹೆಚ್ಚಿನ ವೀಡಿಯೋಗಳ ಲಿಂಕುಗಳನ್ನು ಡಿಸ್ಕ್ರಿಪ್ಷ್ಯನ್ ಬಾಕ್ಸಲ್ಲಿ ಕೊಡಲಾಗಿದೆ.

ನೋಡಿ, ಈ ಅನುಗ್ರಹ ಎಂಬುವುದು ಮಾನವರು ಕಾಡು ಮಾನವರಾಗಿ ಇದ್ದ ಆ ಶಿಲಾಯುಗ ಕಾಲದಿಂದಲೇ, ಕಾಡು ದೇವತೆಗೆ ಏನನ್ನಾದರೂ ಪ್ರೀತ್ಯರ್ಥವಾಗಿ ಕೊಟ್ಟರೆ ಆ ದೇವತೆ ಅನುಗ್ರಹಿಸುವ ನಂಬಿಕೆ ಇತ್ತು. ಸುಮ್ಮನೆ ಯಾರು ಕೂಡಾ ನಂಬಿಕೆಯ ಆಚಾರವನ್ನು ಮಾಡುವುದಿಲ್ಲ. ಅದು ಮುಂದುವರಿದು ಮಾನವನು ನಾಡಿಗೆ ಬರುವಾಗ ಅದನ್ನು ಮುಂದುವರಿಸಿ ತರಲಾಯಿತು. ಇಂದು ಅವು ಜಗತ್ತಿನ ಎಲ್ಲಾ ಕಡೆಗಳಲ್ಲೂ ಪರಿಷ್ಕರಿಸಲ್ಪಟ್ಟಿವೆ ಅಷ್ಟೆ. ಅಂದು, ಅವಲ್ಲಿ ಪ್ರಾಣಿಬಲಿಯೊಂದಿಗೆ ನರಬಲಿಯು ಕೂಡ ಆಚಾರವಾಗಿ ಸೇರಿತ್ತು. ಇಂದು, ಅದರಲ್ಲಿ ಒಂದು ವ್ಯತ್ಯಾಸ ಬಂದಿದೆ, ಅದೇನೆಂದರೆ, ಅವಲ್ಲಿ ನರಬಲಿಯನ್ನು ಲೋಕದ ಎಲ್ಲೆಡೆಯಲ್ಲೂ ನಿಷೇಧಿಸಲಾಗಿದೆ, ಆದರೆ ಪ್ರಾಣಿಬಲಿಯು ನಂಬಿಕೆಯ ಆಚಾರವಾಗಿ ಇಂದೂ ಮುಂದುವರಿಸಲ್ಪಡುವುದು.

ಈ ಅನುಗ್ರಹದ ರೀತಿಯನ್ನು ಒಮ್ಮೆ ನೋಡಿ. ಜಗತ್ತಿನ ಯಾವ ಮೂಲೆಯಲ್ಲಿ ಆದರೂ, ಲಾಟರಿ ಬಹುಮಾನಗಳ ತರ, ಅನುಗ್ರಹವು ನಂಬಿ ಆಚರಿಸಿದ ಎಲ್ಲರಿಗೂ ಸಿಗಲಾರದು. ಕೆಲವು ಕಡೆಗಳಲ್ಲಿ ಇತರ ಕಡೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನುಗ್ರಹ ಸಿಗಬಹುದು ಅಷ್ಟೆ. ಇನ್ನು ಬಹಳ ಅಚ್ಚರಿಯ ವಿಷಯ ಎಂದರೆ, ಅನುಗ್ರಹವು ದೇವರುಗಳ ಅಥವಾ ಶಕ್ತಿಗಳ ಆ ಉತ್ತಮ ಹಾಗೂ ದೊಡ್ಡ ಭಕ್ತರಿಗೆ ಎಷ್ಟೋ ಸಲ ಸಿಗದೆ ಹೋಗುವುದು ಇದೆ, ಮಾತ್ರವಲ್ಲ ತುಂಬಾ ಸಲ ಕೆಟ್ಟ ಮಾನವರಿಗೆ ಅನುಗ್ರಹವಾಗುವುದು ಇದೆ! ಲಾಟರಿ ಬಹುಮಾನಕ್ಕೂ ಉತ್ತಮ ಮಾನವ, ಕೆಟ್ಟ ಮಾನವ ಎಂದು ಬೇಧ ಇಲ್ಲ ತಾನೇ?

ನೋಡಿ, ಲಾಟರಿ ಬಹುಮಾನಗಳ ತರ, ಕೆಲವು ಅನುಗ್ರಹಗಳು ಎಂಬ ಬಹುಮಾನಗಳನ್ನು ನಂಬಿಕೆಯ ಆಚಾರ ಮಾಡಿದವರಿಗೆ ಆಯಾ ದೇವರು ಅಥವಾ ಶಕ್ತಿಗಳ ಹಿನ್ನೆಲೆಯಲ್ಲಿ ಈ ಅನ್ಯಗ್ರಹಜೀವಿಗಳ ಸೂಕ್ಷ್ಮದ ವ್ಯವಸ್ಥೆಯು ಬಿತ್ತರಿಸುವವು. ಆಗ, ಮನುಷ್ಯರು ಕೆಲವೇ ಕೆಲವು ಬಹುಮಾನಗಳಿಗಾಗಿ ಲಕ್ಷಗಟ್ಟಲೆ ಜನ ಲಾಟರಿ ಖರೀದಿಸುವ ತರ, ನಂಬಿಕೆಯ ಆಚಾರಗಳನ್ನು ಮಾಡುವ ಆ ಹಲವರಲ್ಲಿ ಕೆಲವೊಬ್ಬರು ಅನುಗ್ರಹವನ್ನು ಪಡೆಯುವರು. ಲಾಟರಿ ರೀತಿಯ ಪ್ರತ್ಯೇಕತೆ ಎಂದರೆ, ಇಲ್ಲಿ ಉತ್ತಮರಿಗೆ ಲಾಟರಿ ಹೊಡೆಯದೆ ಕೆಟ್ಟವರಿಗೆ ಹೊಡೆಯುವ ಸಾಧ್ಯತೆಗಳಿವೆ. ಅದೇ ರೀತಿ, ಅನುಗ್ರಹಗಳಲ್ಲಿ ಕೂಡಾ ಉತ್ತಮರಿಗೆ ಮತ್ತು ದೊಡ್ಡ ಭಕ್ತರಿಗೆ ಅನುಗ್ರಹ ಆಗದೆ ಕೆಟ್ಟವರಿಗೆ ಆಗುವುದನ್ನು ನಾವು ಕಣ್ಣಾರೆ ಕಾಣುವೆವು. ಧರ್ಮ ಮಾರ್ಗದಲ್ಲಿ ನಡೆದು ಉತ್ತಮರಾಗಿರಿ ಎಂದು ಧರ್ಮವನ್ನು ಬೋಧಿಸುವ ಮತ್ತು ಕರುಣಾಮಯ ಸೃಷ್ಟಿಕರ್ತ ದೇವರು ಅನುಗ್ರಹ ಕೊಡುವುದೇ ಆದರೆ ಅಥವಾ ಕರ್ಮ ಸಿದ್ಧಾಂತದ ಪ್ರಕಾರ ಆದರೆ, ಕೆಟ್ಟ ಕರ್ಮವನ್ನು ತಿದ್ದಿ, ಅನುಗ್ರಹವನ್ನು ಕೊಡುವುದೇ ಆದರೆ, ಅವು ಎಲ್ಲವೂ, ಉತ್ತಮರಾದ ತನ್ನ ದೊಡ್ಡ ಭಕ್ತರ ಕೆಟ್ಟಕರ್ಮವನ್ನು ತಿದ್ದಿ ಅವರಿಗೆ ಅನುಗ್ರಹವನ್ನು ಕೊಡಬೇಕು, ಆದರೆ ಉತ್ತಮರನ್ನು ಬಿಟ್ಟು ಕೆಟ್ಟವರಿಗೆ ಆತನ ಅನುಗ್ರಹ ಹೇಗೆ ಹೋಗುವುದು, ಎಂಬುವುದಕ್ಕೆ ಉತ್ತರ ಇಲ್ಲ. ಈ ರೀತಿಯಲ್ಲಿ, ಜಗತ್ತಿನ ಎಲ್ಲಾ ಕಡೆಯ ದೇವರು, ಶಕ್ತಿಗಳಲ್ಲಿ ಅನುಗ್ರಹ ಕೊಡುವಿಕೆ ಇರುವುದು. ಕೆಲವು ಕಡೆಗಳಲ್ಲಿ ಸ್ವಲ್ಪ ಹೆಚ್ಚು ಮತ್ತು ಕೆಲವು ಕಡೆಗಳಲ್ಲಿ ಸ್ವಲ್ಪ ಕಡಿಮೆ ಅಷ್ಟೆ ವ್ಯತ್ಯಾಸ ಮಾಡಲ್ಪಟ್ಟಿರುವುದು.

ಕೆಲವೊಮ್ಮೆ ಕೆಲವೊಂದು ಉತ್ತಮರಿಗೆ ಮತ್ತು ಕೆಲವೊಮ್ಮೆ ಕೆಲವೊಂದು ಕೆಟ್ಟವರಿಗೆ ಅನುಗ್ರಹ ಆಗುವುದನ್ನು ನೋಡುವಾಗ ಎಲ್ಲರೂ ಅದನ್ನು ಏನಾದರೂ ನೆಪದ ಸಿದ್ಧಾಂತಗಳ ಅಥವಾ ಪುರಾಣ ಕಥೆಗಳ ಸಹಾಯದಿಂದ ಸರಿಪಡಿಸಲು ಪ್ರಯತ್ನಿಸುತ್ತಾರೆ ಅಷ್ಟೆ. ಆದರೆ, ಇತ್ತ, ವಾಸ್ತವದಲ್ಲಿ, ಭಾಗ್ಯ, ಮತ್ತು ದೌರ್ಭಾಗ್ಯ ಎಂಬ ಹಿನ್ನೆಲೆಯಲ್ಲಿ ಮಾತ್ರ ಜಗತ್ತಿನ ಎಲ್ಲಾ ಕಡೆಯ ಆ ಹಲವು ನಂಬಿಕೆಯ ಆಚಾರಗಳನ್ನು ಮಾಡಿದವರಿಗೆ ಒಂದು ನಿಶ್ಚಿತ ಸಂಖ್ಯೆಯ ಅನುಗ್ರಹಗಳನ್ನು ಕೊಡುವ ವ್ಯವಸ್ಥೆಯನ್ನು ಶಿಲಾಯುಗದಿಂದಲೇ ಅವುಗಳಿಂದ ಮಾಡಲ್ಪಟ್ಟಿದೆ. ಅವಲ್ಲಿ ಎರಡು ಮುಖ್ಯ ರೀತಿಗಳು ಎಂದರೆ, ನಂಬಿಕೆಯ ದೇವರು ಸಂಕಲ್ಪಕ್ಕೆ ಸಂಬಂಧಪಟ್ಟ ಆಚಾರಗಳಳಿಗೆ ಕೊಡಲ್ಪಡುವ ಅನುಗ್ರಹಗಳು ಮತ್ತು ಭೂಮಿಯ ಆ ವಿವಿಧ ವರ್ಗ ಅಥವಾ ಪರಂಪರೆಯ ವಾಮಾಚಾರಗಳಿಗೆ ಕೊಡಲ್ಪಡುವ ಅನುಗ್ರಹಗಳಾಗಿವೆ. ಒಟ್ಟಲ್ಲಿ ನೋಡಿದರೆ, ಎಲ್ಲವೂ, ಅನ್ಯಗ್ರಹಜೀವಿಗಳು ಮೊದಲೇ ಅವುಗಳ ರಹಸ್ಯ ವ್ಯವಸ್ಥೆಗೆ ಲಾಭ ಆಗುವ ತರದಲ್ಲೆ ಅವು ನಿಶ್ಚಯಿಸಿದಂತೆ ಮಾತ್ರ ನಡೆಯುವ ಅನುಗ್ರಹಗಳಾಗಿವೆ. ಅದು ಮನುಷ್ಯನ ವ್ಯಯಕ್ತಿಕ ಜೀವನವಾದಾರೂ, ಕುಟುಂಬದ ಜೀವನವಾದರೂ, ಸಮಾಜಗಳ ಏರು ಪೇರು ಆದರೂ, ದೇಶದ ಏರು ಪೇರು ಆದರೂ, ಧರ್ಮಗಳ ಏರು ಪೇರು ಆದರೂ, ಮತ್ತು ದ್ವೇಷ, ಹಿಂಸೆ, ಕಲಹ, ಯುದ್ಧಗಳಾದರೂ, ಇವು ಎಲ್ಲವೂ ಅವುಗಳು ನಿಶ್ಚಯಿಸಿದಂತೆ ಇರುವವು! ಇದುವೇ, ‘ದೇವರಿಂದಲೂ ತಪ್ಪಿಸಲಾಗದ ವಿಧಿ’ ಎಂದು ಜನರು ಆಡುತ್ತಿರುವ ಆ ‘ವಿಧಿ’ ಆಗಿರುವುದು. ಇದಲ್ಲದೆ, ಬೇರೆ ಯಾರಿಂದ ಅಥವಾ ಯಾವುದರಿಂದ ನಿಶ್ಚಯಿಸಲ್ಪಟ್ಟ ವಿಧಿಯೂ ಈ ಪ್ರಪಂಚದಲ್ಲಿ ಇಲ್ಲ. ನೋಡಿ, ಸೃಷ್ಟಿಕರ್ತನ ಅಥವಾ ದೇವತೆಗಳ ಭಕ್ತರು, ಮಾರಕ ರೋಗಕ್ಕೆ ತುತ್ತಾಗಿ, ಅವರು ನಿರಂತರ ಪ್ರಾರ್ಥಿಸಿದರು ಕೂಡಾ ಸರಿಯಾದ ಚಿಕಿತ್ಸೆಯನ್ನು ಮಾಡಿಯೂ, ಸತ್ತು ಹೋಗುವುದನ್ನು ನಾವು ಕಾಣುವೆವು. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಮರಣ ಹೊಂದಿರುವ ರೋಗಿಗಳ ಪಟ್ಟಿಯನ್ನು ನೋಡಿದರೆ ಗೊತ್ತಾಗುವುದು ಈ ಸತ್ಯ. ಒಟ್ಟಲ್ಲಿ, ಆಚಾರ, ನಂಬಿಕೆ, ಅನುಗ್ರಹ, ಸ್ವರ್ಗ, ನರಕ, ಮೋಕ್ಷ, ಇತ್ಯಾದಿ ಎಲ್ಲವೂ ಅವುಗಳ ಮೋಸದ ಆಟವಾಗಿದೆ. ಬರೇ, ನಾಗರೀಕ ತತ್ವಶಾಸ್ತ್ರ ಎಂದು ತೋರ್ಪಡಿಸಲು ಮತ್ತು ಆ ಹಿನ್ನೆಲೆಯಲ್ಲಿ “ನಾವು ಮೇಲು” ಎಂಬ ಭ್ರಮೆಯ ವಾದ, ದ್ವೇಷ, ಕಲಹ, ಹಿಂಸೆ, ರಕ್ತಪಾತಗಳನ್ನು ಅವು ಇದುವರೆಗೂ ಸೃಷ್ಟಿಸುತ್ತಾ ಬಂದಿರುವವು ಅಷ್ಟೆ. ನೋಡಿ, ದೇವರು ಮತ್ತು ಧರ್ಮವು, ಸತ್ಯ, ಪ್ರೀತಿ, ನೀತಿ ಎಂದು ಮತ್ತು ಅವು ಶಾಂತಿಯನ್ನು ಸೃಷ್ಟಿಸಲು ಇರುವವುಗಳು ಎಂದು ಈ ಧರ್ಮ, ಪಂಥಗಳು ಹೇಳುವುದಾದರೆ, ದೇವರು ಮತ್ತು ಧರ್ಮದ ಹೆಸರಲ್ಲಿ ಒಂದೇ ಒಂದು ಹಿಂಸೆಯ ಘಟನೆಯೂ ಇದುವರೆಗೂ ಈ ಭೂಮಿಯಲ್ಲಿ ಸೃಷ್ಟಿಯಾಗುತ್ತಿರಲಿಲ್ಲ. ಸೂರ್ಯನು ಬೆಳಕು ಕೊಡುವವನು ಎಂದು ಆದಿ ಇಂದಲೇ ಹೇಳುತ್ತಾ ಬಂದಿರುವರು, ಅವನು ಎಂದಾದರೂ ಕತ್ತಲೆ ಕೊಟ್ಟದ್ದು ಇದೆಯೇ? ಇಲ್ಲ ಅಲ್ಲವೇ? ಅದೇ ರೀತಿ ಸತ್ಯವಾಗಿದ್ದರೆ ಅದು ಯಾವಾಗಲೂ ಸತ್ಯವಾಗಿಯೇ ಕಾಣಿಸುವುದು. ಆದರೆ ದೇವರು ಧರ್ಮಗಳ ಹೆಸರಲ್ಲಿ ಕ್ರೌರ್ಯದ ದ್ವೇಷ, ಹಿಂಸೆ, ರಕ್ತಪಾತಗಳು ಪರ್ವತದಷ್ಟು ಈಗಾಗಲೇ ಸೃಷ್ಟಿಯಾಗುವಾಗ ಎಲ್ಲವೂ ಮೋಸ ಎಂದು ತಿಳಿಯುವುದಿಲ್ಲವೇ? ಎಲ್ಲರ ಮುಂದೆಯೇ ಕೊಲೆ ಮಾಡುತ್ತಾ, ಅದರ ಮೇಲೆ, ನಿತ್ಯವೂ ದಿನ ಪತ್ರಿಕೆಯಲ್ಲಿ ಆತನ ಹೆಸರು ಬರುತ್ತಿರುವಾಗ, ಇನ್ನು ಎಷ್ಟು ಕಾಲ ಆ ವ್ಯಕ್ತಿಯನ್ನು ಕರುಣಾಮಯನಾದ ಮಹಾತ್ಮ ಎಂದು ಚಿತ್ರಿಸಲು ಈ ನಂಬಿಕೆಯವರಿಗೆ ಸಾಧ್ಯವಾಗುವುದೋ ತಿಳಿದಿಲ್ಲ.

ಇಂದಿನವರೆಗೂ, ಈ ನಂಬಿಕೆಯ ಶಾಸ್ತ್ರಗಳು ನಾವು ಸರಿ ನೀವು ತಪ್ಪು. ನಾವು ಮೇಲು ನೀವು ಕೀಳು” ಎಂದು ವಾದ ಮಾಡುತ್ತಾ ಬಂದಿವೆ. ದಿಗ್ವಿಜಯ. ಮತಾಂತರ, ಧರ್ಮಯುದ್ಧ. ಇತ್ಯಾದಿಗಳನ್ನು ಮಾಡುತ್ತಾ ಬಂದಿವೆ. ಇತ್ತ, ನಿಜವಾಗಿಯೂ ಧರ್ಮ ಮಾಡಬೇಕಾದ ಮಾನವರನ್ನು ಎಲ್ಲರನ್ನು ಸಹೋದರರಂತೆ ಪ್ರೀತಿಸುವ ಆ ಹೃದಯವೈಶಾಲ್ಯತೆಯ ಮಾನವರನ್ನು ಸೃಷ್ಟಿಸುವ ಕೆಲಸ ಏನೇನೂ ಮಾಡಿಲ್ಲ. ಅಂದರೆ, ಈಗಿರುವುದು ಎಲ್ಲವೂ ಬೇಲಿ ಧರ್ಮ, ಪಂಥಗಳು, ಯಾಕೆಂದರೆ, ‘ಪ್ರೀತಿ, ಮೋಕ್ಷ, ಸ್ವರ್ಗ ಎಲ್ಲವೂ ನಮ್ಮ ಧರ್ಮದೊಳಗೆ ಬಂದರೆ ಮಾತ್ರ’ ಎಂದು ಅವು ಹೇಳುವವು. ಇದು, ಅತ್ಯಂತ ಬಾಲಿಶ ರೀತಿಯ ಮತ್ತು ಭಯಾನಕ ರೀತಿಯ ವಾದ ಆಗಿದೆ. ಈ ಕಾರಣದಿಂದಲೇ, ಈ ಜಗತ್ತಲ್ಲಿ, ಬರೇ ದೇವರು, ಧರ್ಮ, ಪಂಥಗಳಿಂದಲೇ ಇದುವರೆಗೂ ಅತ್ಯಂತ ಹೆಚ್ಚು ದ್ವೇಷ, ಹಿಂಸೆ, ರಕ್ತಪಾತವಾಗಿರುವುದು ಎಂದು ಇತಿಹಾಸದಲ್ಲಿ ಬರೆಯಲ್ಪಟ್ಟಿರುವುದು. ಅಂದರೆ, ಅದರ ಸ್ಪಷ್ಟ ಅರ್ಥ ಹೇಗೆ ಬರುವುದು ಎಂದರೆ, ಈ ಜಗತ್ತಲ್ಲಿ ದೇವರು, ಧರ್ಮ, ಪಂಥಗಳಿಂದಲೇ ಇದುವರೆಗೂ ಅತ್ಯಂತ ಹೆಚ್ಚು ಅಧರ್ಮವಾಗಿರುವುದು ಎಂದಾಗುವುದು! ಇದು ಅಚ್ಚರಿ ಅಚ್ಚರಿ ಅಚ್ಚರಿ!!! ಇನ್ನಾದರೂ, ಮಾನವರು, ನಂಬಿಕೆಯ ಆ ಕುರುಡು ಕಣ್ಣು ಮುಚ್ಚುವಿಕೆಯಿಂದ ಹೊರಬಂದು ಕಣ್ಣು ತೆರೆದು ವಾಸ್ತವ ಜಗತ್ತನ್ನು ಪೂರ್ತಿಯಾಗಿ ನೋಡಬೇಕಾಗಿದೆ. ಹಿಂದೆ, ಮಹಾತ್ಮರು ಹೇಳಿರುವಂತೆ, ‘ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಜಾತಿಯೇ ಶ್ರೇಷ್ಠ, ನಮ್ಮ ಧರ್ಮದಲ್ಲಿ ಮಾತ್ರ ಸ್ವರ್ಗ’ ಇತ್ಯಾದಿ ಭಯಾನಕ ಅಜ್ಞಾನದ ಅರಿವುಗಳ ಕೂಪದಲ್ಲಿ, ಕೂಪ ಮಂಡೂಕಗಳ ತರ, ಇರುವುದರಿಂದ ಹೊರಬರಬೇಕಾಗಿದೆ.

ಇನ್ನು, ನನಗೆ ಅಥವಾ ಓಂದೇವ ಶಕ್ತಿಗೆ ಅನುಗ್ರಹಿಸುವ ಶಕ್ತಿ ಇದೆಯೇ ಎಂಬ ಪ್ರಶ್ನೆಯ ಉತ್ತರ;

ಎಲ್ಲಾ ಅನುಗ್ರಹಗಳು ಆ ಅನ್ಯಗ್ರಹಜೀವಿಗಳ ಉದ್ದೇಶಿಸಿರುವ ರೀತಿಯಲ್ಲೇ ಅವುಗಳ ನಿಯಂತ್ರಣದಲ್ಲಿ ಸಂಭವಿಸುವವು, ಅಂದರೆ, ಅಲ್ಲಲ್ಲಿ ನಿಶ್ಚಿತವಾಗಿ ಅನುಗ್ರಹ ಪವಾಡಗಳು ಸಂಭವಿಸುವವು ಎಂದು ಅರ್ಥ. ಅಚ್ಚರಿ ಎಂದರೆ, ಸೂಕ್ಷ್ಮದ ಯಾವ ಶಕ್ತಿಗಳಿಗೂ ಅವುಗಳು ತಾನು ಈ ರೀತಿ ಅನ್ಯಗ್ರಹಜೀವಿಗಳ ಆ ಅತಿ ಸೂಕ್ಷ್ಮ ವ್ಯವಸ್ಥೆಯ ಮೂಲಕ ನಿಯಂತ್ರಿಸಲ್ಪಟ್ಟಿರುವುದು ತಿಳಿದಿಲ್ಲ ಎಂಬುವುದಾಗಿದೆ. ಅನುಗ್ರಹಿಸುವ ಹಂತದ ಸೂಕ್ಷ್ಮದ ಶಕ್ತಿಗಳು, ತಾವು ಸ್ವತಂತ್ರರಾಗಿದ್ದು ಅನುಗ್ರಹಿಸುವುದೆಂದು ತಿಳಿದುಕೊಳ್ಳುತ್ತವೆ, ಆದರೆ, ಅವು ಅನುಗ್ರಹಿಸಿದಲ್ಲಿ ವಿಧಿ ಎಂಬ ಈ ಅನ್ಯಗ್ರಹಜೀವಿಗಳು ನಿಶ್ಚಯಿಸಿರುವುದು ಮಾತ್ರ ಫಲಿಸುವವು ಉಳಿದ ಅನುಗ್ರಹಗಳು ಖಂಡಿತವಾಗಿಯೂ ಫಲಿಸುವುದಿಲ್ಲ ಅಷ್ಟೆ. ಅದೇ ರೀತಿ, ದೇವರುಗಳ ಮೂಲಕ ಮಾಡಿಸುವ ಶತ್ರುನಾಶವಾದರೂ, ಭೂಮಿಯ ವಾಮಾಚಾರಿಗಳ ಮೂಲಕ ಮಾಡಿಸುವ ವಾಮಾಚಾರವಾದರೂ ಅವಲ್ಲಿ, ವಿಧಿ ಎಂಬ ಈ ಅನ್ಯಗ್ರಹಜೀವಿಗಳು ನಿಶ್ಚಯಿಸಿರುವುದು ಮಾತ್ರ ಫಲಿಸುವವು ಉಳಿದ ಯಾವುದು ಕೂಡಾ ಅಲ್ಲಿಯೂ ಖಂಡಿತವಾಗಿಯೂ ಫಲಿಸುವುದಿಲ್ಲ. ಈ ರೀತಿಗಳಲ್ಲಿ ದೇವರು, ಆಚಾರ, ನಂಬಿಕೆ, ಮೋಕ್ಷ, ಸ್ವರ್ಗ, ಅನುಗ್ರಹ, ಶಾಪ, ವಾಮಾಚಾರ ಇತ್ಯಾದಿ ಎಲ್ಲವನ್ನು ಮನುಷ್ಯನಿಗೆ ಬರೇ ಮಂಗನಷ್ಟು ಬುದ್ಧಿ ಇದ್ದ ಆ ಶಿಲಾಯುಗದಿಂದಲೂ, ಕಾಲಕಾಲಕ್ಕೆ, ಅವುಗಳ ಹೊರ ಕವಚಗಳನ್ನು ಮಾತ್ರ ಪರಿಷ್ಕರಿಸುತ್ತಾ ಇದುವರೆಗೂ ಗುಟ್ಟು ರಟ್ಟು ಮಾಡದೆ ರಹಸ್ಯವಾಗಿಯೇ ಬಂದಿವೆ.

ಇನ್ನು, ನನ್ನ ಓಂದೇವ ಶಕ್ತಿಗಳಿಗೆ, ನಾನು ತಿಳಿದಿರುವ ಈ ಎಲ್ಲಾ ಸೂಕ್ಷ್ಮದ ರಹಸ್ಯಗಳು ತಿಳಿದಿದೆ. ಈ ಒಂದು ಮುಖ್ಯ ವ್ಯತ್ಯಾಸ ಇಲ್ಲಿ ಇದೆ ಅಷ್ಟೆ. ಅವುಗಳಿಗೆ, ಈ ಎಲ್ಲಾ ರಹಸ್ಯಗಳ ಅರಿವಿನ ಹಿನ್ನೆಲೆಯಲ್ಲಿ ಏನಾದರೂ ಸ್ವಲ್ಪ ಹೆಚ್ಚು ಪ್ರತ್ಯೇಕವಾಗಿ ಮಾಡಲು ಸಾಧ್ಯವಾದರೆ ಅದು ನಿಮಗೆ ಮುಂದಿನ ನಾಲ್ಕು ವರುಷದೊಳಗೆ ಅಂದರೆ, 2027 ರೊಳಗೆ ಸ್ಪಷ್ಟವಾಗಿ ಕಾಣಿಸಬಹುದು. ಅನ್ಯಗ್ರಹಜೀವಿಗಳ ಕಾಡುವಿಕೆಯಿಂದಾಗಿ, ಅಥವಾ ಅವುಗಳ ಆ ಕಠೋರ ನಿಯಂತ್ರಣದಿಂದಾಗಿ ಅದು ಸಾಧ್ಯವಾಗದಿದ್ದರೆ, ಇದುವರೆಗೂ ಬಯಲಾಗದ ಅತಿ ರಹಸ್ಯ ಸತ್ಯಗಳನ್ನು ಮಾನವರ ಮುಂದೆ ಇರಿಸಿ, ಮಾನವರು ಸಾಧನೆಯ ಮೂಲಕ ಮನಶ್ಯಾಂತಿ. ಮನೆಶಾಂತಿ, ಜೀವನಶಾಂತಿ, ಸಮಾಜಶಾಂತಿ, ಹಾಗೂ ಲೋಕಶಾಂತಿಗಳೆಂಬ ಅನುಗ್ರಹಗಳನ್ನು ತಮಗೆ ತಾವೇ ಪಡೆದುಕೊಳ್ಳಲು ಸಾಧ್ಯವಾಗುವ, ಆ ‘ಮಹಾಜೀವನ’ ಮತ್ತು ‘ದಿವ್ಯಜ್ಞಾನ ಸನ್ನಿಧಿ’ ಎಂಬವುಗಳನ್ನು ಮಾನವ ಕುಲಕ್ಕೆ ಪರಿಚಯಿಸಿದ ಆ ಒಂದು ದೊಡ್ಡ ಸಂತೃಪ್ತಿಯೊಂದಿಗೆ, ಓಂದೇವ ಶಕ್ತಿಗಳ ಕೆಲಸಗಳು ಮುಗಿಯುವುದು.

ಇನ್ನು, ಕೊನೆಯ ಪ್ರಶ್ನೆ – ನೀವು ನಿಮ್ಮ ಪೂರ್ತಿ ಬರಹ ಹಾಗೂ ವಿಚಾರಗಳ ವಿವರಣೆಗಳಿಂದ ಏನನ್ನು ಉದ್ದೇಶಿಸುತ್ತಿರಿ?

ಉತ್ತರ: ಇದಕ್ಕೆ ಬಹಳ ಚುಟುಕಾಗಿ ಉತ್ತರಿಸುತ್ತೇನೆ. ಸರ್ವವೂ ಶಿಲಾಯುಗದಿಂದಲೇ ಹೋಗಿದೆ. ಅವುಗಳ ದೊಡ್ಡ ನಿಯಂತ್ರಣ ಇರುವ ಈ ಪರಿಸ್ಥಿತಿಯಲ್ಲಿ, ಮಾನವರು ತುಂಬಾ ಪ್ರಯತ್ನ ಪಟ್ಟರೆ ಮಾತ್ರ, ಮಾನವರಿಗೆ ಮನಶ್ಶಾಂತಿ, ಮನೆಶಾಂತಿ, ಜೀವನಶಾಂತಿ, ಲೋಕಶಾಂತಿ ಇತ್ಯಾದಿಗಳನ್ನು ಪಡೆಯಲು ಸಾಧ್ಯ. ಅದಕ್ಕಾಗಿ ಹೇಳುವುದು ಮೋಸದ ನಂಬಿಕೆಗಳು ಸೃಷ್ಟಿ ಮಾಡಿರುವ ಆ ದ್ವೇಷ, ಹಿಂಸೆ, ರಕ್ತಪಾತಗಳಿಂದ ಮಾನವರು ಹೊರಬರಬೇಕು ಎಂದು. ಸತ್ಯವು ನಂಬಿಕೆಯಿಂದ ಸಾವಿರ ಪಾಲು ಪವಿತ್ರ ಆದುದರಿಂದ ನಿರುಪದ್ರವಿ ನಂಬಿಕೆ ಆಚಾರಗಳನ್ನು ಎಲ್ಲಾ ಧರ್ಮ ಪಂಥಗಳು ಮಾಡಿಕೊಂಡರೂ, ದೇವರು ಧರ್ಮಗಳಲ್ಲಿ ನಾವು ಸತ್ಯದ ಹಿನ್ನೆಲೆಯ ವಿವರಣೆಗೆ ಹೆಚ್ಚು ಆದ್ಯತೆ ಇನ್ನಾದರೂ ಕೊಡಬೇಕಾಗಿದೆ. ದೇವರು ಎಂದರೆ ಏನು ಮತ್ತು ಧರ್ಮ ಎಂದರೆ ಏನು ಎಂಬ ಪ್ರಶ್ನೆಗಳಿಗೆ ಎಲ್ಲಾ ಧರ್ಮ, ಪಂಥಗಳು ಒಟ್ಟಾಗಿ ಕುಳಿತು ಆಗಾಗ್ಗ ಸತ್ಯಚಿಂತನೆ ನಡೆಸಿ ಕಂಡುಕೊಳ್ಳಬೇಕಾಗಿದೆ ಮತ್ತು ಜನಸಾಮಾನ್ಯರಲ್ಲಿ ಅದನ್ನು ಬಿತ್ತಬೇಕಾಗಿದೆ. ಹೀಗೆ ಮಾಡಿದಲ್ಲಿ ಮಾನವರ ಉಳಿಗಾಲ ಅಷ್ಟೆ. ಇಲ್ಲವಾದರೆ ಮುಂದೆ ಇರುವುದು ಮಾನವರ ಅಳಿವಿನ ಕಾಲ. ಇನ್ನು, ಮಾನವರು, ಜಾತಿಯಲ್ಲಿ ಮೇಲು, ಧರ್ಮದಲ್ಲಿ ಮೇಲು ಎಂಬ ಮೂರ್ಖತನದಿಂದ ಹೊರಗೆ ಬರಲೇಬೇಕು. ಯಾರು ಎಷ್ಟು ಬೇಕಾದರೂ ಮಾನವೀಯತೆ ಇರುವ ಆಚಾರ ನಂಬಿಕೆಗಳನ್ನು ಮಾಡಿಕೊಳ್ಳಲಿ, ಅದರಿಂದ ತೊಂದರೆ ಇಲ್ಲ. ಇನ್ನು, ಯಾವುದೇ ಸಂಸ್ಕೃತಿಯು, ಮಾನವರಲ್ಲಿ ಹೃದಯವೈಶಾಲ್ಯಯತೆಯನ್ನು ಉಳಿಸಿಕೊಳ್ಳುವುದಕ್ಕೆ ತೊಂದರೆ ಆಗದಿದ್ದರೆ ಅಥವಾ ಹೃದಯವೈಶಾಲ್ಯತೆಯನ್ನು ಬೆಳೆಸುವುದಕ್ಕೆ ಸಹಾಯಕವಾದರೆ, ಅವನ್ನು ಎಲ್ಲವನ್ನೂ ಉಳಿಸಿಕೊಳ್ಳಲಿ, ಆದರೆ “ನಮ್ಮ ದೇವರು ಮಾತ್ರ ಸರಿ, ನಮ್ಮ ಧರ್ಮದಲ್ಲಿ ಮಾತ್ರ ಸ್ವರ್ಗ, ಮೋಕ್ಷ ಇತ್ಯಾದಿಗಳು ಸಾಧ್ಯ ಬೇರೆ ಉಳಿದವು ಎಲ್ಲಾ ತಪ್ಪು” ಎಂದೆಲ್ಲ ಹೇಳುತ್ತಾ ಮತಾಂತರ ಇತ್ಯಾದಿಗಳ ಗುರಿಯಾಗಿಟ್ಟು ಮುಂದುವರಿಯುದಾದರೆ ಎಲ್ಲರಿಗೂ ಅಳಿವಿನ ಕಾಲ. ಅದಲ್ಲ, ಅವನ್ನು ನಿಲ್ಲಿಸುವುದಾದರೆ ಮಾತ್ರ ಮಾನವರಿಗೆ ಎಲ್ಲರಿಗೂ ಅದು ಉಳಿಗಾಲ ಆಗುವುದು. ಸೃಷ್ಟಿಕರ್ತನು ತನ್ನ ಎಲ್ಲಾ ಧರ್ಮಗಳ ಸ್ವಂತ ಮಕ್ಕಳಲ್ಲಿ “ನನ್ನ ಈ ಧರ್ಮಗಳನ್ನು ಲೋಕವೆಲ್ಲಾ ಹಬ್ಬಿಸಿ ನನ್ನ ಲೋಕವನ್ನು ಈ ಭೂಮಿಯಲ್ಲಿ ತನ್ನಿರಿ” ಎಂದು ಧರ್ಮಯುದ್ಧಕ್ಕೆ ಹೊರಡಿಸಿದರೆ, ಅಲ್ಲಿ ಆಗುವುದು ಮಾತ್ರ, ಸರ್ವನಾಶದ ಆ ಧರ್ಮಗಳ ಲೋಕಮಹಾಯುದ್ಧ ಅಲ್ಲದೆ ಯಾವ ಧರ್ಮವೂ ಲೋಕವನ್ನು ಜಯಿಸುವುದಿಲ್ಲ. ಇದು ಯಾಕೆ ಎಂದರೆ, ಲೋಕವನ್ನು ಜಯಿಸಲು ಅಲ್ಲಿ ಯಾವ ಧರ್ಮವೂ ಉಳಿಯಲಾರದು ಅಷ್ಟೆ. ಈ ಬಹಳ ಚಿಕ್ಕ ತರ್ಕವನ್ನಾದರೂ ಮಾನವರು ಇಲ್ಲಿಯ ತನಕ ಅರಿಯದಾಗಿರುವುದು, ಆ ಅನ್ಯಗ್ರಹಜೀವಿಗಳ ರಹಸ್ಯ ವಾಮಾಚಾರದ ನಂಬಿಕೆ ಎಂಬ ಆ ಭ್ರಮೆಯ ಶಕ್ತಿಯನ್ನು ಮಾತ್ರ ಎತ್ತಿ ತೋರಿಸುವುದು. ಇನ್ನಾದರೂ, ಆ ಭಯಾನಕ ಅತಿರಹಸ್ಯ ವಾಮಾಚಾರದ, ಆ ವಂಚಕ ಸೂಕ್ಷ್ಮಶಕ್ತಿಗಳಿಂದ, ಮಾನವ ಕುಲವು ಪಾರಾಗಲಿ ಎಂಬ ಆ ಒಂದು ಆಶೆ ಮಾತ್ರ ಈ ನಿಮ್ಮ ಸಹೋದರನಿಗೆ ಇರುವುದು. ಇದುವೇ, ನನ್ನ ಸರ್ವ ಬರಹಗಳ ಹಾಗೂ ಮಾತುಗಳ ಹಿಂದಿರುವ ಆ ನನ್ನ ಏಕೈಕ ಉದ್ದೇಶವಾಗಿದೆ.

ನಿಮಗೆ ಒಬ್ಬ ಸೃಷ್ಟಿಕರ್ತ ದೇವರು ಇರುವನೇ?

ಉತ್ತರ: ಭೂಮಿತಾಯಿ ಎಂದು ನಾವು ಗೌರವಿಸುತ್ತೇವೆ. ಆದರೆ ಭೂಮಿ ತಾಯಿ ಇರುವಳೇ, ಅಥವಾ ನಿಮ್ಮಲ್ಲಿ ಬಂದು ಮಾತನಾಡುವಳೇ? ಇಲ್ಲ. ಆದರೆ, ಎಲ್ಲರೂ, ಭೂಮಿತಾಯಿಯನ್ನು ನಿಜವಾಗಿ ಒಟ್ಟಾಗಿ ಗೌರವಿಸಿರುತ್ತಿದ್ದರೆ, ಖಂಡಿತವಾಗಿಯೂ ಈ ಭೂಮಿಯು, ಅದರಲ್ಲಿರುವ ಅವಳ ಮಾನವ ಮಕ್ಕಳಿಗೆ ತಾಯಿಯ ಮಡಿಲಿನ ತರ ಆಗಿ, ಎಲ್ಲೆಲ್ಲೂ ಶಾಂತಿ, ನೆಮ್ಮದಿ, ಪ್ರೀತಿಗಳು ಉಕ್ಕಿ ಹರಿಯುತ್ತಿತ್ತು. ಇನ್ನು, ಅದೇ ರೀತಿ, ನನಗೆ, ಜ್ಞಾನದ ಬೆಳಕಲ್ಲಿ ಕಾಣಿಸುವ ಒಬ್ಬ ಸೃಷ್ಟಿಕರ್ತನು ಇರುವನು. ಅವನು ಕೂಡಾ ಎದ್ದು ಬರಬೇಕಾಗಿಲ್ಲ, ಮಾತನಾಡಬೇಕಾಗಿಲ್ಲ, ಆದರೆ ಆತನು ಸೃಷ್ಟಿಕರ್ತನ ಸಂಕಲ್ಪ ಆದುದರಿಂದ, ಈ ಭೂಮಿಯ ಜನರು ಎಲ್ಲರೂ ಆತನ ಮಕ್ಕಳು ಖಂಡಿತ ಆಗುವರು. ಆತನಿಗೆ ಉತ್ತಮ ಮಕ್ಕಳು ಎಲ್ಲಿ ಇದ್ದರೂ ಅವರ ಮೇಲೆ ಪ್ರೀತಿ, ಕೆಟ್ಟ ಮಕ್ಕಳು ಎಲ್ಲಿ ಇದ್ದರೂ ಅವರ ಮೇಲೆ ಪ್ರೀತಿ ಇಲ್ಲ. ಅವನನ್ನು ಈ ಭೂಮಿಯ ಯಾವುದೇ ವರ್ಗದ ಜನರು ಕಟ್ಟಿಹಾಕಿ ಸಾಕಲು ಸಾಧ್ಯವಿಲ್ಲ. ಯಾರಿಗೂ ಆತನನ್ನು ತಮ್ಮ ಬೇಲಿಯೊಳಗಿನ ಜನರಿಗೆ ಮಾತ್ರ ಹಾಲು ಕೊಡುವ ಪ್ರಾಣಿಯಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಅವನು ತನ್ನ ಮಕ್ಕಳನ್ನು ತಾನೇ, ತನ್ನ ಸ್ವಂತ ಕೈಗಳಿಂದ, ಆಚಾರ ನಂಬಿಕೆಗಳ ಬೇಲಿಗಳ ಸಹಾಯದಿಂದ ಬೇರ್ಪಡಿಸಲಾರ. ತನ್ನ ಸ್ವಂತ ಮಕ್ಕಳನ್ನು ತಮ್ಮೊಳಗೆ ದ್ವೇಷಿಸುವಂತೆಯೂ ಕೊಲ್ಲಿಸುವಂತೆಯೂ ಮಾಡುವ ಪಿಶಾಚಿ ಆತನು ಆಗಲಾರ. ತನ್ನ ಮನೆಯ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ತನ್ನ ಮಕ್ಕಳನ್ನು ಮತಾಂತರ ಮಾಡಿಸುವ ಮೂರ್ಖನು ಕೂಡಾ ಆತನು ಅಲ್ಲ. ಅತ್ಯಂತ ಕಡಿಮೆ ಎಂದರೆ, ಇಷ್ಟಾದರೂ ಬುದ್ಧಿ ಮತ್ತು ಕರುಣೆಯ ಹೃದಯವು ನನ್ನ ಸಂಕಲ್ಪದ ಸೃಷ್ಟಿಕರ್ತನಿಗೆ ಇರುವುದಂತು ಖಂಡಿತ. ಈ ಸೃಷ್ಟಿಕರ್ತ ದೇವರೇ ನನ್ನ ಸಂಕಲ್ಪದ ಸೃಷ್ಟಿಕರ್ತ ದೇವರು, ಮತ್ತು, ನಾನು, ಈ ರೀತಿಯಲ್ಲಿ, ಸರ್ವವ್ಯಾಪಿಯನ್ನು ಬೇಲಿವ್ಯಾಪಿಯನ್ನಾಗಿ ಮಾಡದ ಒಬ್ಬ ಪರಿಪೂರ್ಣ ಆಸ್ತಿಕನಾಗುವೆನು. ನಮ್ಮಲ್ಲಿ ನಾವು ಆ ಪವಿತ್ರ ಹೃದಯವೈಶಾಲ್ಯತೆಯನ್ನು ಬೆಳೆಸಿಕೊಳ್ಳುವುದು ಆ ಸೃಷ್ಟಿಕರ್ತ ದೇವರ ಅನಿವಾರ್ಯ ಆರಾಧನೆಯಾಗಿದೆ, ಮತ್ತು ಆ ಪವಿತ್ರ, ದೈವಿಕ, ಹೃದಯವೈಶಾಲ್ಯತೆಯು ತಮ್ಮ ಮನೆಯ ಮತ್ತು ಜೀವನದ ಬೆಳಕಾಗಬೇಕು ಎಂದು ಕೇಳಿ ಬರುವವರಿಗೆ, ಆ ದೈವಿಕ ಹೃದಯವೈಶಾಲ್ಯತೆಯ ಮಹಾಜೀವನವು ದೊರಕುವಂತೆ ಮಾಡುವಲ್ಲಿ ನಮ್ಮ ನಮ್ಮ ಕಿಂಚಿತ್ತು ಸೇವೆಮಾಡುವುದು ನನ್ನ ಪಾಲಿಗೆ ಆ ದೇವರ ಅನಿವಾರ್ಯ ಧರ್ಮವಾಗುವುದು. ಇನ್ನು, ಈ ರೀತಿಯಲ್ಲದೆ, ಆ ಪವಿತ್ರ ಸೃಷ್ಟಿಕರ್ತ ಸಂಕಲ್ಪವನ್ನು, ಪಿಶಾಚಿಯ ರೀತಿಯಲ್ಲಿ ಚಿತ್ರಿಸುವ ಕಥೆ ಅಥವಾ ವಿವರಣೆಗಳನ್ನು ನಾನು ಎಂದಿಗೂ ಮಾಡಲಾರೆನು, ಮತ್ತು ಆ ರೀತಿಯಲ್ಲಿ ಯಾರಾದರೂ ಮಾಡಿದಲ್ಲಿ, ನಾನು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ, ದೇವರು ಎಂದಿಗೂ ದೇವರಾಗಿರಬೇಕು, ಮತ್ತು ಆ ದೇವರು ಎಂದಿಗೂ ಪಿಶಾಚಿಯಾಗಬಾರದು. ಈ ನನ್ನ ಸಂಕಲ್ಪದ ಸೃಷ್ಟಿಕರ್ತನಿಗೆ ಹೆಸರು ಇಲ್ಲ, ಆದರೆ ಆತನು ಸತ್ಯ, ಪ್ರೀತಿ, ನೀತಿಯಾಗಿರುವನು. ಇನ್ನು, ಆತನನ್ನು ಸರ್ವ ಬೇಲಿಗಳನ್ನು ಮೀರಿರುವ ಸತ್ಯ, ಪ್ರೀತಿ, ನೀತಿ ಎಂದು ವಿವರಿಸುತ್ತಾ, ಯಾರಿಗೆ ಬೇಕಾದರೂ ಆತನನ್ನು, ಗೌರವದಿಂದ, ಅವರವರ ಇಷ್ಟದ ಯಾವ ಹೆಸರಲ್ಲಿ ಬೇಕಾದರೂ ಕರೆಯಬಹುದು. ಅದು ಹಾಗಾದರೆ, ಇನ್ನು, ಭ್ರಮೆ ಕವಿಯದ ಮತ್ತು ಆ ಸ್ಪಷ್ಟವಾದ ಆತನ ಮೊದಲ ಮತ್ತು ಅಮೂಲ್ಯ ಸ್ವರ್ಗವು, ಈ ಭೂಮಿಯೇ ಆಗಿರುವುದು. ಆತನ ಇನ್ನಿತರ ಸ್ವರ್ಗಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ, ಯಾಕೆಂದರೆ, ಆತನ ಈ ಭೂಮಿಯೆಂಬ ಸ್ವರ್ಗವನ್ನು ಆ ನಿಜವಾದ ಶಾಂತಿ ಪ್ರೀತಿಯ ಸ್ವರ್ಗವನ್ನಾಗಿ ಮಾಡುವುದೇ ಆತನ ಎಲ್ಲಾ ಮಾನವ ಮಕ್ಕಳ ಆ ದೊಡ್ಡ ಧರ್ಮ ಮತ್ತು ಆಧ್ಯಾತ್ಮವಾಗಿದೆ. ಆತನ ಹೆಸರಲ್ಲಿ ಈ ಭೂಮಿಯೆಂಬ ಸ್ವರ್ಗವನ್ನು ನರಕ ಮಾಡುವ ಯಾರು ಕೂಡಾ ಖಂಡಿತವಾಗಿಯೂ ಆಸ್ತಿಕರೇ ಅಲ್ಲ. ಮಾತ್ರವಲ್ಲ, ಅಂಥವರು, ಸೃಷ್ಟಿಕರ್ತನ ಮಕ್ಕಳಾದ ಮಾನವ ಸಹೋದರರನ್ನು ವಿಭಜಿಸುವ ಮತ್ತು ವಂಚಿಸುವ ಭಯಾನಕ ಆಸ್ತಿಕ-ನಾಸ್ತಿಕ ಸ್ವಾರ್ಥಜೀವಿಗಳು ಮಾತ್ರವಾಗಿರುವರು.

ಮಹಾಜೀವನ ಎಂಬುವುದು ಕೂಡ ಒಂದು ಧರ್ಮ ಅಥವಾ ಪಂಥ ಆಗುವುದಿಲ್ಲವೇ?

ಉತ್ತರ: ಧರ್ಮ, ಮತ್ತು ಪಂಥಗಳನ್ನು ಸಾಮಾನ್ಯವಾಗಿ ಬೇಲಿ-ಧರ್ಮ ಮತ್ತು ಬೇಲಿ-ಪಂಥಗಳೆಂದು ಹೇಳಬಹುದು. ಯಾಕೆಂದರೆ, ಅವುಗಳು ತಮ್ಮೊಳಗೆ ತಾವು ಬೇರೆ ಬೇರೆ ಎಂದು ಒಂದಾಗಲು ಇಷ್ಟಪಡುವುದಿಲ್ಲ. ಒಂದಾಗುವುದು ಎಂದರೆ, ಅವುಗಳ ಅಸ್ತಿತ್ವವನ್ನು ಅವುಗಳು ಕಳಕೊಳ್ಳುವುದು ಎಂದು ಅವು ತಿಳಿದುಕೊಂಡಿರುವವು. ಅದಕ್ಕಾಗಿ ಅವುಗಳು ತಮ್ಮ ಪ್ರತ್ಯೇಕತೆಯ ಬೇಲಿಗಳನ್ನು ಬಲಪಡಿಸುವುದರಲ್ಲೇ ತಮ್ಮ ಸರ್ವಶಕ್ತಿಯನ್ನು ಉಪಯೋಗಿಸುತ್ತಾ ಇರುವವು. ಒಂದು ಧರ್ಮ ಅಥವಾ ಪಂಥದಲ್ಲಿ ಎರಡು ಮುಖ್ಯ ಘಟಕಗಳನ್ನು ಕಾಣಬಹುದು. ಅವಲ್ಲಿ ಒಂದು, ಅದರದ್ದೇ ಆಗಿರುವ ಮತ್ತು ಇತರ ಧರ್ಮ, ಪಂಥಗಳಿಗಿಂತ ಪ್ರತ್ಯೇಕತೆಯನ್ನು ತೋರಿಸುವ, ಆಚಾರ, ನಂಬಿಕೆಗಳು. ಇನ್ನೊಂದು, ಅದರ ವಾದವು ‘ತಾವು ಬೇರೆ ಮತ್ತು ಶ್ರೇಷ್ಠ’ ಎಂದು ಹೇಳಿಕೊಳ್ಳುವ ಆ ತಮ್ಮ ತಮ್ಮ ಪ್ರತ್ಯೇಕತೆಯ ಆಚಾರ, ನಂಬಿಕೆಗಳ ಬೇಲಿಗಳನ್ನು ಎತ್ತಿ ಹಿಡಿಯುವ ತರದಲ್ಲಿ ಇರುತ್ತವೆ. ಅಂದರೆ, ಅವು ತಮ್ಮ ಬೇಲಿಯೊಳಗಿದ್ದು, ತಮಗಾಗಿ, ಪಕ್ಷಪಾತದ ತರ್ಕವನ್ನು ಉಪಯೋಗಿಸುವವು ಎಂದು ಅರ್ಥ. ಆದರೆ, ಮಹಾಜೀವನದಲ್ಲಿ ಇವು ಯಾವುದು ಕೂಡಾ ಕಾಣಿಸುವುದಿಲ್ಲ. ಮಾತ್ರವಲ್ಲ, ಪಕ್ಷಪಾತದ ರೀತಿಯಲ್ಲಿ ಮಾಡುವ ವಾದದ ಬದಲು, ನಿಸ್ಪಕ್ಷಪಾತದ ತರ್ಕವನ್ನು ಅಲ್ಲಿ ಉಪಯೋಗಿಸುವುದು ಎಂದು ತಿಳಿಯಬೇಕು. ಅಷ್ಟು ಮಾತ್ರವಲ್ಲ, ವಿಜ್ಞಾನ, ಗಣಿತಗಳ ತರ, ಸರ್ವರಿಗೂ ಅನ್ವಯ ಆಗುವ ರೀತಿಯಲ್ಲಿ ಅದು ಇರುವುದು. ಎಲ್ಲರಿಗೂ ಅನ್ವಯವಾಗುವುದರಲ್ಲಿ ಪ್ರತ್ಯೇಕತೆಯ ಬೇಲಿಗಳಿರುವುದಿಲ್ಲ ಖಂಡಿತ. ಆದುದರಿಂದ, ಮಹಾಜೀವನವೂ ಎಂದಿಗೂ ಒಂದು ಪ್ರತ್ಯೇಕ ಬೇಲಿ-ಧರ್ಮವೋ ಅಥವಾ ಬೇಲಿ-ಪಂಥವೋ ಆಗುವುದಿಲ್ಲ.

ನೀವು ಈ ಭೂಮಿಯ ಪಂಥಗಳು, ಧರ್ಮಗಳು, ದೇವರು, ಆಚಾರ, ನಂಬಿಕೆಗಳು ಇತ್ಯಾದಿ ಎಲ್ಲದರಲ್ಲೂ ಅನ್ಯಗ್ರಹಜೀವಿಗಳ ಸ್ಪಷ್ಟ ಕೈವಾಡ ಶಿಲಾಯುಗದಿಂದಲೇ ಇದೆ ಎಂದು ಹೇಳುವಿರಿ. ಆದರೆ, ಧರ್ಮ, ಪಂಥಗಳು ಎಲ್ಲವೂ ಆ ಒಬ್ಬನೇ ಸೃಷ್ಟಿಕರ್ತನನ್ನು ಹೇಳುವಾಗ ಮತ್ತು ಒಪ್ಪಿರುವಾಗ, ಅವು ಹೇಳುವುದು ಸರಿಯಾಗಲು ಸಾಧ್ಯತೆ ಇಲ್ಲವೇ?

ಉತ್ತರ: ಅದನ್ನು ಸ್ಪಷ್ಟಪಡಿಸುವ ತಾರ್ಕಿಕ ಅಂಶಗಳನ್ನು ಇಷ್ಟರಲ್ಲೇ ನಾನು ಸಾಕಷ್ಟು ಕೊಟ್ಟಾಗಿದೆ. ಅವನ್ನು ನೀವು ಕೇಳಿಕೊಳ್ಳಿರಿ. ಈಗ, ಸ್ಪಷ್ಟತೆಗಾಗಿ, ಇನ್ನೂ ಸ್ವಲ್ಪ ಅವುಗಳ ಸಾಧ್ಯತೆಗಳ ಬಗ್ಗೆ ಹೇಳಬೇಕಾದರೆ, ಅದಕ್ಕೆ, ನಾವು ಈ ಪ್ರಪಂಚವನ್ನು ಒಮ್ಮೆ ಅವಲೋಕಿಸಬೇಕಾಗುವುದು. ಇಲ್ಲಿ, ಕೆಲವು ಅಂಶಗಳನ್ನು ಮುಂದಿಟ್ಟು ನೋಡುವಾಗ, ಅವು ಸೃಷ್ಟಿಕರ್ತನ ಕೈವಾಡವನ್ನು ಸೂಚಿಸುವುದೋ ಅಥವಾ ಅನ್ಯಗ್ರಹಜೀವಿಗಳ ಕೈವಾಡವನ್ನು ಹೆಚ್ಚು ಸೂಚಿಸುವುದೋ ಎಂಬುವುದನ್ನು ನಿಮಗೆ ಸ್ವತಃ ಅಂದಾಜಿಸಿಕೊಳ್ಳಬಹುದು.

ನೋಡಿ, ಈ ಭೂಮಿಯ ಮನುಷ್ಯರ ಸೂಕ್ಷ್ಮದ ಅನುಭವಗಳು ಅಥವಾ ತತ್ವಶಾಸ್ತ್ರ ಇತ್ಯಾದಿಗಳನ್ನು ಒಟ್ಟಾಗಿ ತೆಗೆಯುವುದಾದರೆ, ಅವನ್ನು ಮುಖ್ಯವಾಗಿ ಎರಡಾಗಿ ವಿಭಾಗಿಸಬಹುದು. ಆ ಎರಡರಲ್ಲಿ ಒಂದು, ತಾರ್ಕಿಕ ತತ್ವಶಾಸ್ತ್ರ ಆಗಿದೆ. ಇನ್ನೊಂದು, ಪುರಾಣ ಕಥೆಗಳ ಹಿನ್ನೆಲೆಯಲ್ಲಿನ ನಂಬಿಕೆ ಮತ್ತು ಸೂಕ್ಷ್ಮದ ಅನುಭವಗಳು ಆಗಿವೆ. ಇವಲ್ಲಿ ಸೃಷ್ಟಿಕರ್ತನ ಬಗ್ಗೆ ಪುರಾಣ ಕಥೆಗಳು ನೂರಾರು ಇವೆ. ಅವೆಲ್ಲಾ ಪರಸ್ಪರ ವಿರುದ್ಧವಾಗಿವೆ ಮತ್ತು ಸೂಕ್ಷ್ಮದ ಅನುಭವಗಳು ಕೂಡಾ ವಿರುದ್ಧ ಆಗಿವೆ! ಅವು ಒಂದು ಇನ್ನೊಂದು ಸೃಷ್ಟಿಕರ್ತನ ಹೆಸರನ್ನು ಆಚಾರವನ್ನು ನಂಬಿಕೆಗಳನ್ನು ಹಾಗೂ ಧರ್ಮ, ಪಂಥಗಳನ್ನು ಒಪ್ಪುವುದಿಲ್ಲ ಮಾತ್ರವಲ್ಲ, ನಂಬುವುದಾದರೆ, ಬರೇ ನಂಬುತ್ತಾ ಅವರವರ ಪಾಡಿಗೆ ಸುಮ್ಮನೆ ಕೂರುವ ಬದಲು, ಆ ತಂದೆಯಾದ ಏಕ ಸೃಷ್ಟಿಕರ್ತನಿಗಾಗಿ ತಮ್ಮೊಳಗೆ ತಮ್ಮದು ಮಾತ್ರ ಸರಿ, ನಿಮ್ಮದು ತಪ್ಪು ಎಂದು ವಾದಿಸುವವು, ದ್ವೇಷಿಸುವವು, ಹಿಂಸಿಸುವವು ರಕ್ತಪಾತ ಮಾಡುವವು! ಇದು ಪುರಾಣ ಕಥೆಗಳ ಹಿನ್ನೆಯವರ ಆ ನಂಬಿಕೆಯ ರೀತಿ. ಇನ್ನೊಂದು ರೀತಿ ಎಂದರೆ, ತಾರ್ಕಿಕ ತತ್ವಶಾಸ್ತ್ರದ ರೀತಿಯಾಗಿದೆ. ನೋಡಿ, ಇಲ್ಲಿ ಗ್ರೀಕ್ ತತ್ವಶಾಸ್ತ್ರವಾಗಲಿ ಭಾರತದ ಹಿಂದೂ ಧರ್ಮದ ಆರು ಅತ್ಯಂತ ಮುಖ್ಯ ದರ್ಶನಗಳಾಗಲಿ ಅದೇ ರೀತಿ, ಬೌದ್ಧ ಧರ್ಮ ಆಗಲಿ ಜೈನ ಧರ್ಮಗಳಾಗಲಿ ಸೃಷ್ಟಿಕರ್ತ ದೇವರ ಅಸ್ತಿತ್ವವನ್ನು ಒಪ್ಪಲಿಲ್ಲ. ಅವು ಅದಕ್ಕೆ ಹಲವು ತರ್ಕಯುಕ್ತ ಕಾರಣಗಳನ್ನು ಕೊಡುವವು. ಇನ್ನು ಪೌರಾಣಿಕರಿಗೆ, ತಮಗೆ ತಾವೇ ಮಾಡಿಕೊಂಡಿರುವ ದರ್ಶನಗಳು ಅಥವಾ ತತ್ವಶಾಸ್ತ್ರಗಳು ಇರುವವು, ಅವು, ಖಂಡಿತವಾಗಿಯೂ, ಆ ನಂಬಿಕೆಗಳ ಪುರಾಣ ಕಥೆಗಳನ್ನು ಮುಂದಿಟ್ಟು ಮಾಡಿರುವುದರಿಂದ, ಅಲ್ಲಿ ಅವು ತರ್ಕವನ್ನು ಯಾವ ರೀತಿಯಲ್ಲಿ ಮಾಡಲು ಪ್ರಯತ್ನ ಪಟ್ಟರೂ, ಅವು ತರ್ಕವೇ ಆಗುವುದಿಲ್ಲ, ಮತ್ತು ಈ ಕಾರಣದಿಂದಲೇ, ಅವುಗಳು ಅವರವರ ಸೃಷ್ಟಿಕರ್ತನನ್ನು ಮಾತ್ರ ಒಪ್ಪುತ್ತವೆ ಅಷ್ಟೆ. ಇನ್ನು, ಅಂಥ ಪೌರಾಣಿಕ ತತ್ವ ಸಿದ್ಧಾಂತಗಳನ್ನು ಹೇಳುವವರಲ್ಲಿ ಒಂದು ಪ್ರಶ್ನೆಯನ್ನು ಹಾಕಿರಿ, ಅದುವೇ ಸೃಷ್ಟಿಕರ್ತನನ್ನು ಕರೆಯುವ ನಿಮ್ಮ ಧರ್ಮದ ದೇವರ ಹಲವು ಹೆಸರಿನೊಂದಿಗೆ ಇನ್ನೊಂದು ಧರ್ಮದ ಸೃಷ್ಟಿಕರ್ತನ ಹೆಸರನ್ನು ಸೇರಿಸೋಣ ಎಂದು ಎಲ್ಲಾ ಧರ್ಮದವರಲ್ಲೂ ಕೇಳಿರಿ. ಆಗ ಗೊತ್ತಾಗುತ್ತದೆ ಅವರ ಆ ನಿಜವಾದ ತತ್ವ ಸಿದ್ಧಾಂತ. ನೋಡಿ, ಕಣ್ಣು ಮುಚ್ಚಿ ನಂಬುವುದರಲ್ಲಿ ಇನ್ನು ತರ್ಕ ಮಾಡಲು ಏನು ಉಳಿದಿರುವುದು ಮತ್ತು ಏನು ಸಿದ್ಧಾಂತ? ಹೀಗಿದೆ ನೋಡಿ, ಸೃಷ್ಟಿಕರ್ತ ದೇವರ ಬಗ್ಗೆ ಇದುವರೆಗಿನ ಚರಿತ್ರೆ. ಈಗ, ತನ್ನ ಸ್ವಂತ ಮಾನವ ಮಕ್ಕಳನ್ನು ತಮ್ಮೊಳಗೆ ದ್ವೇಷಿಸುವಂತೆ, ಹಿಂಸಿಸುವಂತೆ, ರಕ್ತಪಾತ ಮಾಡುವಂತೆ, ತನ್ನ ವಿರುದ್ಧ ಧರ್ಮ, ಪಂಥ, ಆಚಾರ, ನಂಬಿಕೆಗಳ ಹಿನ್ನೆಲೆಯಲ್ಲಿ ಮಾಡಿರುವುದು ಅದು ಆ ಕರುಣಾಮಯಿ ಸೃಷ್ಟಿಕರ್ತನ ಕೈವಾಡ ಆಗಿರಬಹುದೇ ಅಥವಾ ಅಥವಾ ಸ್ವಾರ್ಥ ಲಾಭಯಕ್ಕಾಗಿ, ಮಾನವರನ್ನು ಶಿಲಾಯುಗದಿಂದಲೇ ಶೋಷಿಸುತ್ತಾ ಬರುವ ಆ ಅನ್ಯಗ್ರಹಜೀವಿಗಳ ರಹಸ್ಯ ಯೋಜನೆಗಳ ಕೈವಾಡದ ಆಗಿರಬಹುದೇ ಎಂಬುವುದನ್ನು ನಿಮಗೆ ಸ್ವತಃ ಅಂದಾಜಿಸಬಹುದಾಗಿದೆ.

ಧರ್ಮ, ಪಂಥಗಳಿಗೆ ಅವುಗಳದೇ ಆಗಿರುವ ಹಿನ್ನೆಲೆ ಸಂಸೃತಿಗಳು ಇವೆಯಲ್ಲ, ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಉತ್ತರ: ಜಗತ್ತಿನ ಯಾವುದೇ ದೇಶ, ಧರ್ಮ, ಪಂಥವಾದರೂ, ಅವುಗಳ ಆ ಹಿನ್ನೆಲೆಯ ಸಂಸ್ಕೃತಿಗಳು ಮಾನವೀಯತೆಗೆ ವಿರುದ್ದವಾಗಿದ್ದರೆ ಅವು ಕಾಡು ಸಂಸ್ಕೃತಿಗಳು ಆಗುವವು. ಇನ್ನು, ಅದಲ್ಲವಾದಲ್ಲಿ, ಅವುಗಳ ಬಗ್ಗೆ ಪರಸ್ಪರ ಹೊಡೆದಾಡದೆ ಗೌರವಿಸಿಕೊಳ್ಳಬಹುದು.

ನೋಡಿ, ಮೂಲದಲ್ಲಿ ನಾವೆಲ್ಲಾ ಕಾಡು ಜನಾಂಗದವರು ಎಂಬುವುದು ಸ್ಪಷ್ಟ. ಇನ್ನು, ಇಂದಿನ ಕಾಲದ ಮಟ್ಟಿಗೆ ಹೇಳುವುದಾದರೆ, ಅಲ್ಲಿ ಲೆಕ್ಕಕ್ಕೆ ಬರುವುದು ಒಬ್ಬ ವ್ಯಕ್ತಿಯ ಬರೇ ವ್ಯಕ್ತಿತ್ವ ಮಾತ್ರವಾಗಿದೆ. ಅಂದರೆ, ಒಂದು ವ್ಯಕ್ತಿತ್ವವು ಸಮಾಜದ ‘ಉತ್ತಮರಾದ ಜನರನ್ನು’ ದ್ವೇಷಿಸುವುದೋ ಅಥವಾ ಪ್ರೀತಿಸುವುದೋ ಎಂಬುವುದಾಗಿರುವುದು ಅಲ್ಲಿ ಇರುವ ಆ ಒಂದೇ ಒಂದು ಲೆಕ್ಕಾಚಾರ ಎಂದು ಅರ್ಥ. ಒಟ್ಟಲ್ಲಿ, ವ್ಯಕ್ತಿಯಾಗಿದ್ದು, ಕುಟುಂಬದೊಳಗಿದ್ದು, ಜಾತಿಯೊಳಗಿದ್ದು, ಪಂಥದೊಳಗಿದ್ದು, ಧರ್ಮದೊಳಗಿದ್ದು, ಇತ್ಯಾದಿಗಳ ಹಿನ್ನೆಲೆಯೊಳಗಿದ್ದು ಆ ರೀತಿಯಲ್ಲಿ ಆಲೋಚಿಸಿ, ಪ್ರೀತಿಸುವುದೋ ಅಥವಾ ದ್ವೇಷಿಸುವುದೋ ಎಂಬುವುದರ ಬಗ್ಗೆ ಸ್ವತಃ ತನಗೆ ತಾನೇ ತೀರ್ಮಾನಿಸಿಕೊಳ್ಳಬೇಕಾಗಿದೆ. ಆಗ, ಆ ವ್ಯಕ್ತಿಗೆ ಸಿಗುವ ಉತ್ತರವು ‘ಉತ್ತಮರು ಎಲ್ಲೇ ಇದ್ದರೂ ಅವರನ್ನು ಪ್ರೀತಿಸುವುದು’ ಎಂದಾದರೆ, ಆ ವ್ಯಕ್ತಿಯು, ಧರ್ಮ, ದೇವರ ಬಗ್ಗೆ ಮಾತಾಡಲು ಅರ್ಹನು, ಆದರೆ, ಆ ವ್ಯಕ್ತಿಗೆ ಸಿಗುವ ಉತ್ತರವು ಅದಲ್ಲವಾದರೆ, ಆತನು ಅವುಗಳ ಬಗ್ಗೆ ಮಾತನಾಡಲು ಅರ್ಹನಲ್ಲ ಎಂದಾಗುವನು. ಅಂದರೆ, ಆ ವ್ಯಕ್ತಿ, ಶಾರೀರಿಕವಾಗಿ ಅಲ್ಲದಿದ್ದರೂ, ಮಾನಸಿಕವಾಗಿ, ಈಗಲೂ, ಆ ಪ್ರಾಚೀನ ಕಾಡು ಜೀವನದಲ್ಲೇ ಜೀವಿಸುವವನಾಗುವನು ಎಂದು ಅರ್ಥ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯು, ದೇವರು, ಧರ್ಮ ಇತ್ಯಾದಿಗಳು ಏನೆಂದು ಇನ್ನೂ ಅರಿಯದ ಆ ಅಪಾಯಕಾರಿ ವ್ಯಕ್ತಿ ಮಾತ್ರ ಆಗುವನು ಎಂದೂ ಆಗುವುದು. ಪ್ರೀತಿಯೇ ದೇವರು, ಪ್ರೀತಿಯೇ ಧರ್ಮವು, ಪ್ರೀತಿಯೇ ಸಾಂತ್ವನ, ಪ್ರೀತಿಯೇ ಜೀವನ. ಮುಗಿಯಿತು, ಇದರಲ್ಲಿ ಎಲ್ಲವೂ ಅಡಗಿರುವುದು. ಇನ್ನೂ ಹೆಚ್ಚಿನ ವಿವರಣೆಗಳು ಬೇಕಾಗುವುದಿಲ್ಲ.

“ಉತ್ತಮ ಸಂಸ್ಕಾರ ಬೇಕು” ಎಂದು ಜನರು ಹೇಳುವುದನ್ನು ಕೇಳಿರುವೆನು. ಉತ್ತಮ ಸಂಸ್ಕಾರಕ್ಕೂ ಉತ್ತಮ ಸ್ವಭಾವಕ್ಕೂ ವ್ಯತ್ಯಾಸ ಇದೆಯೇ?

ಉತ್ತರ: ಸಂಸ್ಕೃತಿಯು ಒಂದು ಪ್ರದೇಶದ ಜನತೆಗೆ ಸಾಮಾನ್ಯವಾಗಿರುವ ಆಹಾರ ಪದ್ಧತಿ, ವಸ್ತ್ರ ಧಾರಣೆ, ಜೀವನ ರೀತಿ, ಇತ್ಯಾದಿಗಳನ್ನು ಒಟ್ಟಾಗಿ ಪ್ರತಿಬಿಂಬಿಸುವುದು. ಆದರೆ, ಸಂಸ್ಕಾರ ಎಂಬುವುದು ಒಂದು ಜಾತಿ, ಪಂಥ, ಪರಂಪರೆ, ಧರ್ಮ, ಇತ್ಯಾದಿ ಎಲ್ಲದರ ಆ ವ್ಯತ್ಯಸ್ಥ ನಂಬಿಕೆ, ಆಚಾರಗಳ ಹಿನ್ನೆಲೆಯಲ್ಲಿ ಮನುಷ್ಯ ಸ್ವಭಾವವನ್ನು ನಿರೂಪಿಸುವ ಪ್ರಯತ್ನವಾಗಿದೆ. ಇದರಲ್ಲಿರುವ ತೊಂದರೆ ಎಂದರೆ, ಅವು ಹೃದಯವೈಶಾಲ್ಯತೆ ಇಲ್ಲದ ತರದಲ್ಲಿ ನಂಬಿಕೆ ಆಚಾರಗಳ ಮಿಶ್ರಣಗಳಿಂದ ಮೂಡಿರಬಹುದು, ಅವು, ಜಾತಿ, ಪಂಥ, ಧರ್ಮ, ಎಂದು ಎಲ್ಲದಕ್ಕೂ ಬೇರೆ ಬೇರೆ ಆಗಿರಬಹುದು. ಹೀಗೆ ಅವು ಬೇರೆ ಬೇರೆ ಆಗಿರುವ ಕಾರಣ ತಮ್ಮೊಳಗೆ ದ್ವೇಷಿಸಲ್ಪಡಬಹುದು, ಮತ್ತು ಈ ದ್ವೇಷ ಮುಂದುವರಿದು ಏನೂ ಸಂಭವಿಸಬಹುದು. ಆದರೆ, ಉತ್ತಮ ಸ್ವಭಾವವು, ಜಾತ್ಯಾತೀತವಾಗಿದ್ದು, ಅವು ಮನುಷ್ಯರ ಹೃದಯವೈಶಾಲ್ಯತೆಯ ಹಿನ್ನೆಲೆಯಲ್ಲಿ ಮಾತ್ರ ಹುಟ್ಟಿಬರುವುದರಿಂದ ಅವುಗಳೇ ನಿಜವಾಗಿ ಎಲ್ಲಕ್ಕಿಂತಲೂ ಮಿಗಿಲಾಗಿರುವುದು ಮತ್ತು ಮಾನವರಿಗೆ ಅನಿವಾರ್ಯವಾಗಿ ಬೇಕಾಗಿರುವುದು. ಅದು ಇದ್ದ ಜನರ ಮನ, ಮನೆ, ಸಮಾಜಗಳು ಅತ್ಯುತ್ತಮ ಮತ್ತು ಶಾಂತಿ, ಪ್ರೀತಿಗಳಿಂದ ತುಂಬುವುದು. ಮಹಾಜೀವನವು ಇದೇ ಸೇವೆಯನ್ನು ಮಾಡುವುದು. ಅದು, ಮನ, ಮನೆ, ಸಮಾಜ, ಲೋಕ ಶಾಂತಿಗಳಿಗಾಗಿ, ಉತ್ತಮ ಸ್ವಭಾವವನ್ನು ಹೊಂದಿರುವ ಮನೆ ಮನೆಯ ಮಹಾತ್ಮರನ್ನು ಸೃಷ್ಟಿಸಲು ಪ್ರಯತ್ನಿಸುವುದು ಎಂಬುವುದನ್ನು ತಿಳಿಯಬೇಕು.

ನೀವು, ಸೃಷ್ಟಿಕರ್ತ ದೇವರನ್ನು ಒಪ್ಪುವಿರಾ, ಈಗಿರುವ, ನಂಬಿಕೆ ಹಿನ್ನೆಲೆಯ ಸೃಷ್ಟಿಕರ್ತನಿಗೆ ಮತ್ತು ಸತ್ಯದ ಹಿನ್ನೆಲೆಯ ಸೃಷ್ಟಿಕರ್ತನಿಗಿರುವ ವ್ಯತ್ಯಾಸವೇನು?

ಉತ್ತರ: ಸೃಷ್ಟಿಕರ್ತ ದೇವರು ಒಬ್ಬನೆ ಆದಲ್ಲಿ, ಅವನ ಹೆಸರು ಹೇಳಿ ಹಲವು ಧರ್ಮ, ಪಂಥಗಳು ಒಟ್ಟಿಗೆ ಕುಳಿತು ಆತನನ್ನು ಆರಾಧನೆ ಮಾಡಬೇಕಾಗುವುದು. ‘ನಾವು ಬೇರೆ ನೀವು ಬೇರೆ’ ಎಂದು ವಾದ ಮಾಡುವುದು ಎಂದಿಗೂ ಸಾಧ್ಯವಿಲ್ಲ. ತಮ್ಮೊಳಗೆ ವಿರುದ್ಧ ನಂಬಿಕೆ ಆಚಾರಗಳು ಸಾಧ್ಯವಿಲ್ಲ. ಮಾತ್ರವಲ್ಲ, ಪ್ರತಿ ಧರ್ಮದಲ್ಲೂ ಮೋಕ್ಷ, ಸ್ವರ್ಗಗಳು ಆ ಧರ್ಮದಲ್ಲಿ ಮಾತ್ರ ಸಾಧ್ಯ ಇತರ ಧರ್ಮಗಳಲ್ಲಿ ಸಾಧ್ಯವಿಲ್ಲ ಎಂದು ಆಯಾ ಸೃಷ್ಟಿಕರ್ತ ದೇವರು ಹೇಳಿರುವುದು ಎಂದು ಧರ್ಮಗಳು ಹೇಳಿಕೊಳ್ಳುವುದು ಎಂದಿಗೂ ಸಾಧ್ಯವಿಲ್ಲ. ಇನ್ನು, ಆ ಒಬ್ಬನೇ ಸೃಷ್ಟಿಕರ್ತನು ಇದ್ದಲ್ಲಿ ಆತನು ಆತನ ಹೆಸರಲ್ಲಿ ದ್ವೇಷ, ಹಿಂಸೆ, ರಕ್ತಪಾತ ಆಗುವುದನ್ನು ಯಾವ ಕಾಲಕ್ಕೂ ಒಪ್ಪಲಾರನು. ಆತನು ಪರೀಕ್ಷೆ ಮಾಡುವುದು ಎಂದು ಹೇಳುವುದಾದರೂ, ಅಲ್ಲಿಯೂ, ಅದು ಜೀವನದಲ್ಲಿ ಒಬ್ಬಾತನು ಎಷ್ಟು ಸ್ವಾರ್ಥಿಯಾಗಿ ಬದುಕುವನು ಎಂಬಲ್ಲಿ ಮಾತ್ರ ಪರೀಕ್ಷೆ ಮಾಡುವನಷ್ಟೆ ಹೊರತು ತನ್ನ ಹೆಸರಲ್ಲೇ ತನ್ನ ಮಕ್ಕಳನ್ನು ತಮ್ಮೊಳಗೆ ಹೊಡೆಸಿ ಸಾಯಿಸುವ, ಒಬ್ಬ ನೀಚ ಹಿಂಸಾರಸಿಕನ ತರ, ಸ್ವಂತ ಮಕ್ಕಳನ್ನು ವಿಭಜಿಸಿ ಪ್ರಚೋಧಿಸುವ ಕೆಲಸವನ್ನು ಮಾಡಲಾರನು ಖಂಡಿತ. ಯಾಕೆಂದರೆ ಎಲ್ಲಾ ಮಾನವರು ಆತನ ಮಕ್ಕಳು. ಹೀಗಿರುವಾಗ, ಆದಿಯಿಂದಲೇ ಸೃಷ್ಟಿಕರ್ತನ ಹೆಸರಲ್ಲಿ ಯಾಕೆ ಭೀಕರ ದ್ವೇಷ, ಹಿಂಸೆ, ರಕ್ತಪಾತವಾಗುತ್ತಾ ಬಂದಿವೆ? ಹೀಗಿರುವಾಗ, ಇಲ್ಲೆಲ್ಲಾ ಸೃಷ್ಟಿಕರ್ತನ ಅಸ್ತಿತ್ವ ಕಾಣಿಸುವುದಿಲ್ಲ. ಮಾತ್ರವಲ್ಲ, ಸೃಷ್ಟಿಕರ್ತನು, ಆತನ ಧರ್ಮ, ಆತನ ಲೋಕ, ಅಥವಾ ಆತನ ಸ್ವರ್ಗ, ಇತ್ಯಾದಿಗಳನ್ನು ಯಾಕೆ, ಕಾಡಿನಿಂದ ಹಿಡಿದು ನಾಡಿನ ಈ ಕೊನೆಯ ಕಾಲದ ವರೆಗಿನ, ತನ್ನದೇ ಮಕ್ಕಳಿಗೆ ಹೇಳಿಲ್ಲ? ಅವರೆಲ್ಲ ಆತನ ಮಕ್ಕಳಲ್ಲವೆ? ಯಾಕೆ ಅದುವರೆಗೂ ಸೃಷ್ಟಿಕರ್ತನು ಹೊರಗೆ ಬಾರದೆ ಕೂತನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲದ ಕಾರಣ ನಾನು ವ್ಯಯಕ್ತಿಕವಾಗಿ ಸೃಷ್ಟಿಕರ್ತನ ನಿಜ ಅಸ್ತಿತ್ವವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ. ಆದರೆ ನಾನು ಆದರ್ಶ ಸೃಷ್ಟಿಕರ್ತನನ್ನು ಒಪ್ಪುವೆನು. ಆ ಸೃಷ್ಟಿಕರ್ತನು, ಅನ್ಯಗೃಹಜೀವಿಗಳು ಸೃಷ್ಟಿಕರ್ತನ ಹೆಸರಲ್ಲಿ ಮಾಡುತ್ತಾ ಬಂದಿರುವ ಆ ಎಲ್ಲಾ ತರದ ವಂಚನೆಗೆ ವಿರುದ್ಧವಾಗಿರುವ, ಮಾನವರು ಎಲ್ಲರನ್ನು ಪ್ರೀತಿಯಿಂದ ಒಂದಾಗಿಸುವ, ಆ ಪವಿತ್ರ ಸೃಷ್ಟಿಕರ್ತ ದೇವರ ಸಂಕಲ್ಪವಾಗಿದೆ. ಎಲ್ಲಿ ಮಾನವರು ವಿಭಜಿಸಲ್ಪಡುವರೋ ಅಲ್ಲಿ ಈ ಸೃಷ್ಟಿಕರ್ತನು ಇರುವುದಿಲ್ಲ. ಆದರೆ ಆತನು ತನ್ನ ಮಕ್ಕಳಲ್ಲಿ ಬರೇ ಎರಡು ವರ್ಗ ಗಳನ್ನು ಮಾತ್ರ ಇಟ್ಟುಕೊಂಡಿರುವನು. ಅವು, ಉತ್ತಮರು ಮತ್ತು ದುಷ್ಟರು. ಯಾವುದೇ ಬೇಲಿ ಭಾವನೆ ಇಲ್ಲದೆ “ಎಲ್ಲರೂ ಚೆನ್ನಾಗಿ ಬಾಳಲಿ” ಎಂಬ ಭಾವನೆಯಲ್ಲಿ ಜೀವಿಸುವ ಮಾನವರು ಆ ಉತ್ತಮರು ಆಗಿರುವರು. ಈ ಆದರ್ಶ ಸೃಷ್ಟಿಕರ್ತನ ಲೋಕ ಅಥವಾ ಸ್ವರ್ಗವು ಈ ಭೂಮಿಯೆಂಬ ಭೂಸ್ವರ್ಗವಾಗಿರುವುದು. ಈ ಭೂಸ್ವರ್ಗದಲ್ಲಿರುವ ಆನಂದ, ಶಾಂತಿಗಳೆಂದರೆ, ಅವು, ಮನಶ್ಶಾಂತಿ, ಮನೆಶಾಂತಿ, ಲೋಕಶಾಂತಿಗಳಾಗಿವೆ. ಇಲ್ಲಿಯ ಆ ದಿವ್ಯಬೆಳಕು ಎಂದರೆ ಅದು ಸತ್ಯ ಮತ್ತು ಶುದ್ಧಪ್ರೀತಿಗಳ ಆ “ನಾವು ಶ್ರೇಷ್ಠ ಬೇಲಿ” ಎಂಬ ಕುರುಡುತನವನ್ನು ನೀಗುವ ಜ್ಞಾನದ ದಿವ್ಯ ಬೆಳಕಾಗಿರುವುದು. ಈ ಮೇಲಿನ ಹಿನ್ನೆಲೆಯಲ್ಲಿ, ನಾನು ಧರ್ಮಗಳ ಆ ಬೇಲಿಯೊಳಗೆ ಇರುವ ಮತ್ತು ಬೇಲಿಗಳನ್ನು ಪ್ರೋತ್ಸಾಹಿಸುವ ಆ ಹಲವು ಸೃಷ್ಟಿಕರ್ತರುಗಳನ್ನು ಒಪ್ಪುವ ಬದಲು ಆ ಏಕ ಆದರ್ಶ ಸೃಷ್ಟಿಕರ್ತನನ್ನು ಒಪ್ಪುವೆನು ಎಂದು ಉತ್ತರ ಹೇಳುವೆನು. ಈ ಆದರ್ಶ ಸೃಷ್ಟಿಕರ್ತ ಸಂಕಲ್ಪವು ತಮ್ಮ ತಮ್ಮ ಮನಬಂದಂತೆ ನಂಬುವ ಆ ನಂಬಿಕೆಯ ಹಿನ್ನೆಲೆಯ ಸೃಷ್ಟಿಕರ್ತ ಸಂಕಲ್ಪ ಅಲ್ಲ, ಬದಲು, ಸೃಷ್ಟಿಕರ್ತನು ಇದ್ದಲ್ಲಿ, ಆತನು ಇರಲೇಬೇಕಾದ ಆ ಸತ್ಯದ ಹಿನ್ನೆಲೆಯಲ್ಲಿದೆ. ಆಗ, ಜಗತ್ತು, ಸೃಷ್ಟಿಕರ್ತನ ಬಗೆಗೆ ಹೇಳುವ ವಿರುದ್ಧ ನಂಬಿಕೆಗಳು ಎಂಬ ಆ ಅಸತ್ಯದ ಆಸನಗಳಿಂದ ಸೃಷ್ಟಿಕರ್ತನನ್ನು ಎಬ್ಬಿಸಿ, ಆತನನ್ನು ಆ ಒಂದೇ ಆಗಿರುವ ಮತ್ತು ಬಲುದೊಡ್ಡ ಪವಿತ್ರವಾದ ಸತ್ಯದ ಸಿಂಹಾಸನದಲ್ಲಿ ಕೂರಿಸಿದಂತಾಗುವುದು. ಬರೇ ನಂಬಿಕೆ ಆಧಾರದಲ್ಲಿ ಇದೆ ಎಂದು ತಿಳಿದಿರುವ ಆ ಸ್ವರ್ಗದ ಲಾಭಕ್ಕಾಗಿ, ಈ ಭೂಮಿಯನ್ನು ಹಲವು ತರದ ನರಕಯಾತನೆಗೆ ತಳ್ಳುವ ಧರ್ಮ, ಪಂಥಗಳ ಆ ದ್ವೇಷ, ಹಿಂಸೆ, ರಕ್ತಪಾತಗಳು ಆಗ ತಾನಾಗಿ ನಿಂತುಬಿಡುವವು. ಆಗಲೇ, ಎಂದಿಗೂ ನಂದದ, ಆ ಆನಂದದ ಸತ್ಯಯುಗವು ಉದಯಿಸಿ ಬರುವುದು.

ಯಾರಾದರೂ ಒಬ್ಬರು ಹಿಂದೆ ಮಾಡುತ್ತಿದ್ದ ಒಂದು ಆಚಾರ ಮಾಡುವುದನ್ನು ನಿಲ್ಲಿಸಿದರೆ, ಆತನಿಗೆ ಆ ಶಕ್ತಿಯ ಕೋಪದಿಂದಾಗಿ ತೊಂದರೆ ಆಗಬಹುದೇ?

ಉತ್ತರ: ಒಂದು ಧರ್ಮದ ದೊಡ್ಡ ದೇವರನ್ನು ಬಿಟ್ಟು ಮತಾಂತರವಾಗಿ ಇನ್ನೊಂದು ಧರ್ಮಕ್ಕೆ ಹೋದವರು ಲಕ್ಷಗಟ್ಟಲೆ ಜನ ಈ ಭೂಮಿಯಲ್ಲಿ ಆಗಿ ಹೋಗಿರುವರು, ಮತ್ತು ಈಗ ಈ ಭೂಮಿಯಲ್ಲಿ ಜೀವಿಸುತ್ತಿರುವರು ಕೂಡಾ. ಆದರೆ ಯಾವ ಧರ್ಮದಿಂದ ಯಾವ ಇನ್ನೊಂದು ಧರ್ಮಕ್ಕೆ ಮತಾಂತರವಾದರು ಕೂಡಾ ಮತಾಂತರ ಆದ ನಂತರ ಆ ಹಿಂದಿನ ಧರ್ಮದ ದೊಡ್ಡ ದೇವರುಗಳ ಕೋಪದ ಕಾರಣದಿಂದ ತೊಂದರೆಗೆ ಒಳಗಾಗುವುದು ಅಥವಾ ಆ ದೇವರಿಂದ ಕೊಂದು ಹಾಕಲ್ಪಡುವುದು ನಾವು ಕಾಣುವುದಿಲ್ಲ. ಹಾಗಿರುವಾಗ, ಇತರ ಪುಟ್ಟ ಶಕ್ತಿಗಳ ಕೋಪ ನಡೆಯಬಹುದೇ? ಇಲ್ಲ, ಆದರೆ ಅನ್ಯಗ್ರಹಜೀವಿಗಳ ಆ ರಹಸ್ಯ ಪ್ರಾಚೀನ ವಾಮಾಚಾರವು, ಕೆಲವೊಂದು ಪೂರ್ವನಿಶ್ಚಿತ ವ್ಯಕ್ತಿಗಳಿಗೆ ಅಥವಾ ಕುಟುಂಬದ ಸದಸ್ಯರಿಗೆ ಮಾತ್ರ, ಕೆಲವೊಂದು ಶಕ್ತಿಗಳು ಕೋಪವನ್ನು ಬೇಕು ಬೇಕೆಂದೇ ತೋರ್ಪಡಿಸುವಂತೆ ಆ ಶಕ್ತಿಗಳಿಗೆ ಒಳಗಿಂದ ಪ್ರೇರಣೆ ಮಾಡುವವು. ಅಂದರೆ ಸತ್ತ ಆತ್ಮಗಳು, ಆರಾಧನಾ ಶಕ್ತಿಗಳು, ದೇವರುಗಳು, ಇತ್ಯಾದಿಗಳು ಕೋಪಗೊಳ್ಳುವುದು ಎಂದು ಹೇಳುವುದು ಕೂಡಾ ಈ ಅನ್ಯಗ್ರಹಜೀವಿಗಳ, ಆ ರಹಸ್ಯ ಪ್ರಾಚೀನ ವಾಮಾಚಾರ ವ್ಯವಸ್ಥೆಯು ಮಾಡಿಸುವ, ನಿಶ್ಚಯಿಸಿರುವ ಶಕ್ತಿಗಳ ವ್ಯಕ್ತಿತ್ವದ ಒಳಗಿಂದ ಕೊಡಲ್ಪಡುವ ಪ್ರೇರಣೆಯ ರೂಪದ ಕೋಪಗಳು ಮಾತ್ರ ಆಗಿರುವವು ಎಂದು ಅರ್ಥ. ಹೀಗೆ ಮಾಡುವುದರ ಮೂಲಕ, ಕೆಲವು ನಂಬಿಕೆಗಳನ್ನು ಮತ್ತು ಆಚಾರಗಳನ್ನು ಈ ಭೂಮಿಯಲ್ಲಿ ಅವುಗಳಿಗೆ ಮತ್ತೂ ಹೆಚ್ಚಿಸಲು ಸಾಧ್ಯವಾಗುವುದು ಮತ್ತು ಇರುವ ನಂಬಿಕೆ, ಆಚಾರಗಳ ಮೇಲಿನ ಜನರ ನಂಬಿಕೆಯು ಕಳೆದು ಹೋಗದೆ, ತಲೆಮಾರಿನಿಂದ ತಲೆಮಾರಿಗೆ ನಿಲ್ಲದೆ ಮುಂದುವರಿಯುವಂತೆ ಮಾಡಲು ಸಾಧ್ಯವಾಗುವುದು. ಈಗಲು ಕೂಡಾ ಹೊಸ ಹೊಸ ನಂಬಿಕೆ, ಆಚಾರಗಳು ಹುಟ್ಟಿಕೊಳ್ಳುವುದನ್ನು ನಮಗೆ ಕಾಣಬಹುದಾಗಿದೆ. ಇನ್ನೊಂದು ಅತ್ಯುತ್ತಮ ಉದಾಹರಣೆಯನ್ನು ಕೂಡಾ ಗಮನಿಸಿರಿ. ನೋಡಿ, ಅವುಗಳು ಮನಸ್ಸು ಮಾಡಿದರೆ, ಭೂಮಿಯಲ್ಲಿ ಅತ್ಯುತ್ತಮ ಪ್ರೀತಿಯನ್ನು ಮಕ್ಕಳಿಗೆ ಕೊಟ್ಟಿರುವ, ಆ ಅತ್ಯಂತ ಉತ್ತಮ ತಂದೆ ತಾಯಂದಿರು ಕೂಡಾ, ಸತ್ತನಂತರ ಭೂಮಿಯಲ್ಲಿ ಜೀವಿಸುತ್ತಿರುವ ಆ ಪ್ರೀತಿಯ ಮಕ್ಕಳ ವಿರುದ್ಧ ಭೀಕರವಾಗಿ ಕೋಪಗೊಂಡು ತೊಂದರೆ ಕೊಡುವಂತೆ ಮಾಡಬಹುದು. ಅದರಂತೆ ಕೆಲವು ಕಡೆ ನಡೆಯುವುದನ್ನು ಕೂಡಾ ನಾವು ಕಾಣುವೆವು. ನೀವು ಕೇಳಲಿಲ್ಲವೆ, ಸತ್ತನಂತರ ತಂದೆ ಅಥವಾ ತಾಯಿಯ ಪ್ರೇತಗಳು ಸ್ವಂತ ಮಕ್ಕಳನ್ನು ಕಾಡುವ ವಿಷಯವನ್ನು? ಅಚ್ಚರಿ ಎಂದರೆ ಅವರು ಮಕ್ಕಳನ್ನು ಭೂಮಿಯಲ್ಲಿ ಜೀವಿಸುತ್ತಿರುವಾಗ ತುಂಬಾ ಪ್ರೀತಿಸುತ್ತಿದ್ದರು!! ಇನ್ನೊಂದು ರೀತಿಯಲ್ಲಿ ಪಿತೃ ದೋಷ, ಮಾತೃ ದೋಷ ಎಂಬಿತ್ಯಾದಿಗಳನ್ನು ಕೂಡಾ ನೀವು ಕೇಳಿರಬಹುದು. ಹೇಳಿ ಸಹೋದರರೇ. ಈ ಒಂದು ಉದಾಹರಣೆ ಸಾಕು ಸೂಕ್ಷ್ಮದಲ್ಲಿ ಯಾವ ಶಕ್ತಿಗಳು ಕೂಡಾ ಸ್ವ-ನಿಯಂತ್ರಿತ ಅಥವಾ ಸ್ವಂತ ಬುದ್ಧಿಯಿಂದ ಕೆಲಸ ಮಾಡುವುದಿಲ್ಲ ಎಂದು ತಿಳಿದುಕೊಳ್ಳಲು. ನೂರಾರು ಕಡೆ ಅನುಗ್ರಹಕ್ಕಾಗಿ ಹೋದರೂ ಉತ್ತಮರಿಗೆ ಅನುಗ್ರಹ ಆಗದಿರುವುದು ಇದೇ ಕಾರಣದಿಂದಾಗಿ ಆಗಿದೆ. ಮಾತ್ರವಲ್ಲ, ಹಲವು ಸಲ ಭೂಮಿಯ ವಾಮಾಚಾರಿಗಳ ಮೂಲಕ ವಾಮಾಚಾರ ಮಾಡಿಸಿದರೂ ಅವು ಫಲಿಸದೆ ಹೋಗುವ ಕಾರಣವು ಕೂಡ ಇದೇ ಆಗಿರುವುದು. ಒಟ್ಟಲ್ಲಿ, ಯಾರಿಗೆ ಯಾವ ಸಮಯದಲ್ಲಿ ಎನಾಗಬೇಕು ಎಂಬುವುದು ಈ ರಹಸ್ಯ ವಾಮಾಚಾರವು ನಿಶ್ಚಯಿಸುವವು. ಇದೇ ಆ ನಿಜವಾದ ವಿಧಿ ಆಗಿರುವುದು, ಮತ್ತು ಇದರಂತೆ ಅನುಗ್ರಹವು ಫಲಿಸುವುದೋ ಫಲಿಸದಿರುವುದೋ ಆಗುವುದು ಮತ್ತು ಮಾಡಿಸಿರುವ ವಾಮಾಚಾರವು ಫಲಿಸುವುದೋ ಫಲಿಸದಿರುವುದೋ ಆಗುವುದು!! ಮನುಷ್ಯರ ಜೀವನಕ್ಕೆ ಸಂಬಂಧಿಸಿದಂತೆ, ಆಯಾ ಮನುಷ್ಯನ ಹಣೆಬರಹ ಎಂಬ ಅವುಗಳ ಆ ಪೂರ್ವನಿಶ್ಚಿತ ರೀತಿಯಲ್ಲಿ ಮಾತ್ರ ಎಲ್ಲ ಘಟನೆಗಳು ನಡೆಯುವವು ಅಷ್ಟೆ. ವಿಧಿಯನ್ನು ಮೀರಲೆಂದು ಅತ್ಯಂತ ದೊಡ್ಡ ದೇವರ ಭಕ್ತನು ಅತ್ಯಂತ ದೊಡ್ಡ ದೇವರ ಸೇವೆ ಆಚಾರ ಇತ್ಯಾದಿಗಳನ್ನು ಮಾಡಿಯೂ ಪ್ರಯೋಜನ ಆಗದೆ, ತೊಂದರೆಗಳಿಗೆ ಒಳಗಾಗಿರುವುದನ್ನು ಮತ್ತು ಸತ್ತಿರುವುದನ್ನು ನೀವು ಖಂಡಿತವಾಗಿಯೂ ನೋಡಿರಬಹುದು ಅಥವಾ ಕೇಳಿರಬಹುದು. ಎಲ್ಲವೂ ಅವುಗಳ ಇಚ್ಛೆಯಂತೆ ಮಾತ್ರ ನಡೆಯುವ ಕಾರಣ ಹೀಗೆ ಸಂಭವಿಸಿರುವುದು ಎಂಬ ಸತ್ಯವು ಈಗ ನಿಮಗೆ ಸ್ವತಃ ಸ್ಪಷ್ಟವಾಗಬಹುದು. ಅಚ್ಚರಿ ಎಂದರೆ, ಉತ್ತಮ ಮತ್ತು ಅತ್ಯಂತ ದೊಡ್ಡ ಭಕ್ತನಿಗೆ ಅನುಗ್ರಹ ಆಗದಿರುವಾಗ, ಕೆಟ್ಟ ಸ್ವಭಾವದ ಒಬ್ಬ ಸಾಧಾರಣ ಮನುಷ್ಯನ ಪ್ರಾರ್ಥನೆಗೆ ಅನುಗ್ರಹ ಫಲಿಸುವುದು ಆಗಿರುವುದು!! ಇದನ್ನು ಕೂಡಾ ನಾವು ಅಲ್ಲಲ್ಲಿ ಕಾಣುವೆವು. ಈಗ ನಿಮಗೆ ಸಂಪೂರ್ಣವಾಗಿ ಸ್ಪಷ್ಟ ಆಗಿರಬಹುದು ಎಂದು ತಿಳಿಯುವೆನು. ಈಗ, ಮೇಲಿನ ನಿಮ್ಮ ಪ್ರಶ್ನೆಯ ಉತ್ತರವನ್ನು ನೀವೇ, ಈ ಎಲ್ಲಾ ವಾಸ್ತವತೆಯ ಹಿನ್ನೆಲೆಯಲ್ಲಿ, ನಿರ್ಣಯಿಸಬಹುದಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||