ಎಲ್ಲಾ ಧರ್ಮಗಳೂ ವಾಮಾಚಾರವನ್ನು ನೇರವಾಗಿ ಬಣ್ಣಿಸಿವೆ. ಕೆಲವು ಧರ್ಮಗಳ ಪುರಾಣಗಳಲ್ಲಿ ಮಾಯಾವಿ ರಾಕ್ಷಸರು ಹಲವು ಋಷಿ ಮುನಿಗಳನ್ನು ಕೊಂದ ಕಥೆಗಳಿವೆ, ಅದೇ ರೀತಿ, ದೇವತೆಗಳನ್ನೂ ಸೋಲಿಸಿದ ಕಥೆಗಳಿವೆ. ಇನ್ನೂ ಕೆಲವು ಧರ್ಮಗಳಲ್ಲಿ, ದೇವರ ಆಶ್ರಯದಲ್ಲೇ ಬೆಳೆಯುತ್ತಿದ್ದ ಆ ಮೊದಲ ಮಾನವ ಮತ್ತು ಆತನ ಪತ್ನಿಯನ್ನು ಸೈತಾನನು ಮೋಸಗೊಳಿಸಿದ ಕಥೆಯೂ ಇರುವುದು. ಇತ್ತ, ಕೆಲವು ನಾಸ್ತಿಕ ಧರ್ಮಗಳಲ್ಲೂ ವಾಮಾಚಾರ ಸೇನೆಯೊಂದಿಗೆ ಯುದ್ಧ ಮಾಡಿದ ಪ್ರಸಂಗದ ವಿಚಾರವೂ ಬರುವುದು. ಈ ಎಲ್ಲಾ ಕಾರಣಗಳಿಂದ ಯಾರಿಗೂ “ಆ ಸೃಷ್ಟಿಕರ್ತನ ಮುಂದೆ ಆ ವಾಮಾಚಾರದ ಶಕ್ತಿ ನಡೆಯಲಾರದು” ಎಂಬ ವಾದ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ವಿವರಣೆಗಳು ಆ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವನ್ನು ಎತ್ತಿ ಹಿಡಿಯುವ ಉದಾಹರಣೆಗಳಾಗಿಯೂ ನಮಗೆ ಕಾಣಬಹುದಾಗಿದೆ.