ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳು ಮತ್ತು ಜಗತ್ತಿನ ಇದುವರೆಗಿನ ಆಧ್ಯಾತ್ಮಿಕ ಅನುಭವಗಳು

ಪ್ರಾಚೀನ ವಾಮಾಚಾರವು, ಆ ತನ್ನ ವಾಮಾಚಾರ ವ್ಯವಸ್ಥೆಯ ರಹಸ್ಯ ಕೆಲಸಗಳನ್ನು ಇತರ ವಾಮಾಚಾರ ವ್ಯವಸ್ಥೆ ಮತ್ತು ಮಾನವರಿಂದ ಮರೆಸಲು, ಎಲ್ಲದರ ಮೇಲೂ ತನ್ನ ರಹಸ್ಯ ಪ್ರಭಾವವನ್ನು ಬೀರಿ ಆ ಮರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ ಎಂಬುವುದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.

ಧರ್ಮ, ಪಂಥಗಳು ಎರಡು ರೀತಿಗಳಲ್ಲಿ ಹುಟ್ಟಿಕೊಂಡಿವೆ. ಅವುಗಳಲ್ಲಿ ಒಂದು ‘ದೇವರ ಮಾತುಗಳ’ ಮೂಲಕ ಮತ್ತು ಇನ್ನೊಂದು ‘ಆಧ್ಯಾತ್ಮ ಅನುಭವಗಳ’ ಮೂಲಕವಾಗಿದೆ. ಜಗತ್ತಿನ ಹಲವು ಕಡೆಗಳಲ್ಲಿ ಕಾಣಿಸಿಕೊಂಡ ಹಲವು ಸೃಷ್ಟಿಕರ್ತ ದೇವರ ಮಾತುಗಳು ಬೇರೆ ಬೇರೆಯಾದ ಕಾರಣವೇ ಹಲವು ಧರ್ಮಗಳು ಸೃಷ್ಟಿಯಾಗಿರುವುದು! ಅದೇ ರೀತಿ, ಹಲವು ಬೇರೆ ಬೇರೆ ರೀತಿಯ ಆಧ್ಯಾತ್ಮಿಕ ಅನುಭವವು ಜಗತ್ತಿನ ಬೇರೆ ಬೇರೆ ಜನರಿಗೆ ಆಗಿರುವ ಕಾರಣದಿಂದಾಗಿ ಹಲವು ಧರ್ಮ, ಪಂಥ, ದರ್ಶನಗಳು ಸೃಷ್ಟಿಯಾಗಿರುವುದು.

ಇಲ್ಲಿ, ಸತ್ಯಸಂಧವಾಗಿ ಕೆಲವು ಪ್ರಶ್ನೆಗಳನ್ನು ನಿಮ್ಮಲ್ಲಿ ಕೇಳುವೆನು. ಈ ಎಲ್ಲಾ ಕಡೆಗಳಲ್ಲೂ ಬಂದ ಆ ಸೃಷ್ಟಿಕರ್ತ ದೇವರು ಒಬ್ಬನೇ ಆದಲ್ಲಿ, ತಂದೆಯಾಗಿ, ಆ ರೀತಿ ಬೇರೆ ಬೇರೆ ನಂಬಿಕೆ, ಆಚಾರಗಳನ್ನು ಹೇಳಿ ತನ್ನದೇ ಮಕ್ಕಳನ್ನು ದ್ವೇಷ, ರಕ್ತಪಾತಕ್ಕೆ ಗುರಿಪಡಿಸುವನೇ? ಆ ಒಬ್ಬ ಕರುಣಾಮಯ ಸೃಷ್ಟಿಕರ್ತ ದೇವರು ಎಲ್ಲವನ್ನೂ ತಿಳಿದಿರುವಾಗ, “ತನ್ನದೇ ಮಾತಿನ ಕಾರಣದಿಂದ”, ರಕ್ತಪಾತವಾಗದಂತೆಯಾದರೂ ಮುಂದಾಲೋಚನೆಯನ್ನು ಮಾಡಲಾರನೇ? ಹಾಗಿದ್ದರೆ ಯಾಕೆ ಹೀಗಾಯಿತು?

ಇನ್ನು, ಆಧ್ಯಾತ್ಮ ಅನುಭವಗಳು ಹಲವು ಇವೆ. ತಮ್ಮೊಳಗೆ ವಾದ ಇನ್ನೂ ನಿಂತಿಲ್ಲ. ಹಲವು ಪಂಥಗಳು ಮಾತ್ರವಲ್ಲ, ಹಲವು ಧರ್ಮಗಳನ್ನೇ ಈ ವ್ಯತ್ಯಸ್ಥ ಆಧ್ಯಾತ್ಮಿಕ ಅನುಭವಗಳು ಸೃಷ್ಟಿಸಿವೆ. ಎಲ್ಲವೂ ಹೇಳುವುದು ಒಂದನ್ನೇ, ತಮ್ಮ ದೇವರ ಮಾತುಗಳು ಅಥವಾ ತಮ್ಮ ಆಧ್ಯಾತ್ಮಿಕ ಅನುಭವಗಳು ಮಾತ್ರ ಮೋಕ್ಷ ಎಂದಾಗಿದೆ. ಅದಕ್ಕಾಗಿ ಖಂಡನೆ, ಮಂಡನೆಯನ್ನು ಸಹಸ್ರಾರು ವರುಷಗಳಿಂದ ಮಾಡುತ್ತಾ ಬಂದಿರುವುದನ್ನು ಇಲ್ಲಿ ನೆನಪಿಸಬೇಕು. ಎಲ್ಲವೂ ತಮ್ಮೊಳಗೆ ತಪ್ಪು ಎನ್ನುವಾಗ, “ಒಬ್ಬ ಸೃಷ್ಟಿಕರ್ತ ದೇವರು” ಮತ್ತು “ಒಂದು ರೀತಿಯ ಮೋಕ್ಷ” ಎಂಬುವುದೆಲ್ಲಾ ಸುಳ್ಳಾಗಿಬಿಡುವುದು. ಅಂದರೆ, ತಮ್ಮದೇ ಸತ್ಯ ಎಂದು ಎಲ್ಲರೂ ಒಟ್ಟಿಗೆ ಹಠ ಹಿಡಿಯುವ ರೀತಿಯು, ಸತ್ಯವನ್ನು ಹೇಳುವುದಿಲ್ಲ ಮತ್ತು ಅವುಗಳಲ್ಲಿ ಆ ಆತ್ಯಂತಿಕ ಸತ್ಯವು ಅಡಕವಾಗಿರಲು ಸಾಧ್ಯವಿಲ್ಲ ಎಂದು ಮಾತ್ರ ಅದು ಅರ್ಥ ಕೊಡುವುದು.

ದೇವರೆಡೆಗೆ ಹಲವು ಮಾರ್ಗಗಳಿವೆ ಎಂದು ವಾದಿಸುವ ಬೆರಳೆಣಿಕೆಯ ಜನರು, ಆ ಎಲ್ಲಾ ಮಾರ್ಗಗಳನ್ನು ಯಾಕೆ ಜನರು ಒಪ್ಪದೆ, ತಮ್ಮದು ಮಾತ್ರ ಸರಿಯೆಂದು ಖಂಡನೆ, ಮಂಡನೆ, ದ್ವೇಷ, ರಕ್ತಪಾತವನ್ನು ಇಷ್ಟು ಸಹಸ್ರ ವರುಷಗಳು ಮಾಡಿರುವುದು ಎಂಬುವುದನ್ನು ತಿಳಿಸಬೇಕಾಗಿದೆ. ಮಾತ್ರವಲ್ಲ, ವಾದ ಮಾಡುವವರ ದೇವರ ಹೆಸರುಗಳು ಬೇರೆ ಬೇರೆ, ಮತ್ತು ದೇವರುಗಳು ಹೇಳಿರುವ ಮಾತುಗಳು ಬೇರೆ ಬೇರೆ, ಅಯಾ ದೇವರುಗಳ ಸ್ವರ್ಗಗಳ ವಿವರಣೆಗಳೂ ಬೇರೆ ಬೇರೆಯಾಗಿರುವಾಗ, ಇನ್ನು, ಬೇಕಿದ್ದಲ್ಲಿ, ‘ಹಲವು ದೇವರೆಡೆಗೆ ಹಲವು ಮಾರ್ಗಗಳು’ ಎಂದು ಹೇಳಬಹುದೇ ಹೊರತು ‘ಒಂದೇ ದೇವರೆಡೆಗೆ ಹಲವು ಮಾರ್ಗಗಳು’ ಎಂದು ಹೇಳುವುದಕ್ಕೆ ಸಾಧ್ಯವಾಗಲಾರದು. ಅದೇ ರೀತಿ, ತತ್ವದ ಹಿನ್ನೆಲೆಯಲ್ಲಿ ಹೇಳುವಾಗಲೂ, “ಎಲ್ಲವೂ ಒಂದು” ಎಂದಾಗ, “ಎಲ್ಲವೂ ಎರಡು” ಎಂದು ಹೇಳಿದಾಗ, ಮಾತ್ರವಲ್ಲ, “ಎಲ್ಲವೂ ಬರೇ ಶೂನ್ಯ” ಎಂದೆಲ್ಲಾ ಹಲವು ತರದಲ್ಲಿ ಆ ತತ್ವಗಳ ವಿವರಣೆ ಮತ್ತು ಮೋಕ್ಷವನ್ನು ಬೇರೆ ಬೇರೆಯಾಗಿ ಹೇಳುವಾಗ, ಆ ಹಲವು ಬೇರೆ ಬೇರೆ ಆಧ್ಯಾತ್ಮಿಕ ಅನುಭವದೆಡೆಗೆ ಹಲವು ಬೇರೆ ಬೇರೆ ಮಾರ್ಗಗಳು ಎಂದಷ್ಟೇ ಹೇಳಬಹುದು.

ಇನ್ನು, ಈ ಜಗತ್ತಿನ ಒಬ್ಬ ಮನುಷ್ಯ, ಮೊದಲ ಋಷಿ, ಅಥವಾ ಯೋಗಿಯು ಎಲ್ಲಾ ದಾರಿಗಳನ್ನೂ ಒಟ್ಟಾಗಿ ಮೊದಲಲ್ಲೇ ಜನರಿಗೆ ಹೇಳಿ ಕೊಟ್ಟನು ಎಂದರೆ, ಇದುವರೆಗೂ ಇತರ ಎಲ್ಲರಿಗೂ ಬರೇ ಒಂದು ರೀತಿಯಲ್ಲಿ ಮುಂದುವರಿದು ಗುರಿಮುಟ್ಟಲು ಕೂಡಾ ಗುರು ಹಾಗೂ ಗ್ರಂಥಗಳ ಆಶ್ರಯ ಮತ್ತು ಕಡಿಮೆ ಪಕ್ಷ ದಶಕಗಳ ಕಾಲವಾದರೂ ಬೇಕಾಗಿರುವಾಗ, ಆ ಮೊದಲ ಮಾನವ ಋಷಿ, ಅಥವಾ ಯೋಗಿಗೆ ಆತನ ಹಿಂದೆ ಗುರು ಮತ್ತು ಗ್ರಂಥಗಳು ಇಲ್ಲದಿರುವಾಗ ಆ ನೂರಾರು ರೀತಿಗಳನ್ನು ಎಲ್ಲಿಂದ ಪಡೆದನು ಮತ್ತು ಆ ಮಾನವನ ಅಲ್ಪ ಜೀವನ ಕಾಲದಲ್ಲಿ ಎಲ್ಲದರ ಆ ಅನುಭವನ್ನು ಪಡೆಯಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯು ಬರುವುದು, [ಆ ಮೊದಲ ಮಾನವ ಯೋಗಿಯೇ “ದೇವರ ಅವತಾರ” ಎಂದು ಪುನಃ ತಿರುಗಿಸಿ ಯಾರಾದರೂ ಹೇಳಿದರೆ, ಆ ದೇವರು ಯಾಕೆ, ಆತನದೇ ಅನುಭವ, ಮಾತುಗಳ ಹೇಳುವಿಕೆಯ ಕಾರಣದಿಂದ, ಮಾನವನು ವಿಭಜಿಸಲ್ಪಟ್ಟು ತಮ್ಮೊಳಗೆ ರಕ್ತಪಾತ ಮಾಡುವುದನ್ನು ಮೇಲಿಂದ ನಿಲ್ಲಿಸಲು ಅಸಮರ್ಥನಾದನು ಮತ್ತು ತನ್ನ ಇಷ್ಟೆಲ್ಲಾ ‘ಏಕತೆ’ಯ ಹಲವು ಯೋಗಗಳಿಂದ ಜನರನ್ನು ಯಾಕೆ ಒಗ್ಗೂಡಿಸದೆ ವರ್ಣ, ಜಾತಿ, ಭೇದಗಳಲ್ಲಿ ನರಕ ಯಾತನೆ ಅನುಭವಿಸುವಂತೆ ಮಾಡಿದನು, ಎಂಬ ಆ ಹಿಂದೆ ಕೇಳಿರುವ ಪ್ರಶ್ನೆಯೇ ಪುನಃ ಬರುವುದು. ಇನ್ನು, ಒಂದು ದೊಡ್ಡ ಕುಲದ, ಹಲವು ಬೇರೆ ಬೇರೆ ಆಧ್ಯಾತ್ಮಿಕ ವ್ಯಕ್ತಿಗಳ, ಬೇರೆ ಬೇರೆ ಆಧ್ಯಾತ್ಮಿಕ ಅನುಭವಗಳನ್ನು, ಒಟ್ಟಾಗಿ, ನೂರಾರು ವರುಷಗಳ ನಂತರ ಒಂದು ಗ್ರಂಥದೊಳಗೆ ಸೇರಿಸುವಾಗ, ಅದನ್ನು ಆ ಕುಲದ ಅಥವಾ ಪರಂಪರೆಯ ಮುಖ್ಯ ವ್ಯಕ್ತಿಯ ಹೆಸರಲ್ಲಿ ಪ್ರಕಟಮಾಡುವ ಕ್ರಮವೂ ಇದೆ ಎಂಬುವುದನ್ನು ಮರೆಯಬಾರದು.]

ಈಗ, ನಾನು ಬೇಹುಗಾರಿಕೆ ಮಾಡಿ ಕಂಡ ಹಲವು ಸೂಕ್ಷ್ಮದ ಸತ್ಯಗಳಲ್ಲಿ, ಇಲ್ಲಿ, ಒಂದನ್ನು ಹೇಳುವೆನು, ಮತ್ತು ಅದರ ವಿಚಾರವಾಗಿ ವಿಮರ್ಶಿಸಿ ತಿಳಿದುಕೊಳ್ಳೋಣ. ಅದೇನೆಂದರೆ, ನಾವು ಎಲ್ಲರೂ ತಿಳಿದ ಹಾಗಿರುವ ಒಂದೇ ಒಂದು ಆತ್ಮವಲ್ಲ ಮಾನವನಿಗೆ ಇರುವುದು. ನಿಜವಾಗಿಯೂ, ‘ಮಾನವನು, ಆಂಶಿಕ ಆತ್ಮಗಳ ಅಥವಾ ಆಂಶಿಕ ವ್ಯಕ್ತಿತ್ವಗಳ ಒಂದು ಕಟ್ಟು’ ಆಗಿ ಮೊದಲಲ್ಲಿ ಗರ್ಭದೊಳಗೆ ಬಂದು ಸೇರುವನು, ಮತ್ತು ಅದೇ ಕಟ್ಟಿನಲ್ಲಿರುವ ವ್ಯಕ್ತಿತ್ವಗಳ ಅಂಶಗಳು ಆ ಮಗುವಿನ ಮುಂದಿನ ಜೀವಮಾನದಲ್ಲಿ [ಪ್ರಾಚೀನ ವಾಮಾಚಾರ ವ್ಯವಸ್ಥೆಗೆ ಲಾಭವಾಗುವ ನಿಟ್ಟಿನಲ್ಲಿ] ಏನೇನನ್ನು ಮಾಡಬೇಕೋ ಅವನ್ನು ಮಾಡಿ ಮುಗಿಸುವ ಸೂತ್ರದಾರ ನ ಕೆಲಸವನ್ನು ಮಾಡುವುದು. ಇದು ಆ ಪ್ರಾಚೀನ ವಾಮಾಚಾರವು ರಹಸ್ಯವಾಗಿ ಇಟ್ಟುಕೊಂಡಿದ್ದ ಅಚ್ಚರಿಯ ಸತ್ಯವಾಗಿದೆ. ಈ ಸತ್ಯವನ್ನು ಯಾರೂ ಇದುವರೆಗೂ ಹೇಳಿಲ್ಲವಾದ ಕಾರಣ ಅದರ ಬಗ್ಗೆ ಸಂಶಯ ಇರಬಹುದು. ಆದುದರಿಂದ ಅದರ ಬಗ್ಗೆ ವಿಮರ್ಶಾತ್ಮಕವಾಗಿಯೇ ನೋಡೋಣ.

ಮಾನವ ಅನುಭವಗಳಿಗೆ ತಾಳೆ ಹೊಂದುವುದಾದರೆ, ಆ ಮಾತುಗಳಲ್ಲಿ ಸತ್ಯವನ್ನು ನಮಗೆ ಕಾಣಬಹುದು ಎಂಬುವುದು ತರ್ಕದ ಲಕ್ಷಣವಾಗಿದೆ. ನ್ಯಾಯಾಧೀಶರು ಸತ್ಯವನ್ನು ಕಣ್ಣಲ್ಲಿ ಕಾಣುವುದಿಲ್ಲ, ಆದರೆ ಅವರು ನಿಸ್ಪಕ್ಷ ತರ್ಕವನ್ನು ಅನುಸರಿಸುವಲ್ಲಿ ಅದನ್ನು ಕಾಣುವರು. ನಂಬಿಕೆಯು ಸತ್ಯವನ್ನು ಕೊಡಲು ಅಸಮರ್ಥವಾದರೂ, ಸತ್ಯಸಂಧ ತರ್ಕಕ್ಕೆ ಅದನ್ನು ಕಾಣಲು ಸಾಧ್ಯವಾಗುವುದು. ಆದುದರಿಂದ, ಆ ರೀತಿಯ ತರ್ಕವನ್ನು ಇಲ್ಲಿ ನಾವು ಅವಲಂಭಿಸಿ ಸತ್ಯವನ್ನು ಕಾಣಲು ಪ್ರಯತ್ನಿಸೋಣ.

ಪ್ರಾಚೀನ ವಾಮಾಚಾರವು ಒಂದು ನಿರ್ಧಿಷ್ಟ, ಆದರೆ ಸಹಸ್ರ ಸಂಖ್ಯೆಯ “ಭೂಮಿಯ ಮಾನವ ಜೀವನ ರೀತಿ” ಗಳನ್ನು, ಅತ್ಯಂತ ಪ್ರಾಚೀನ ಕಾಲದಲ್ಲಿಯೇ ತಯಾರು ಮಾಡಿ, ಭೂಮಿಯಲ್ಲಿ ಹುಟ್ಟುವ ಮಕ್ಕಳಿಗೆ, ಕುಲ, ಅಥವಾ ಮನೆತನದ ಹಿನ್ನೆಲೆಯಲ್ಲಿ, ನೂರಾರು ವರುಷಗಳ ವರೆಗೆ, ‘ಒಂದೊಂದು ‘ಜೀವನ ರೀತಿ’ ಒಂದೊಂದು ಮಗುವಿಗೆ’ ಎಂಬ ರೀತಿಯಲ್ಲಿ ಹಂಚುವುದು. ಆ “ಜೀವನ ರೀತಿ” ಎಂಬ ‘ಪೂರ್ವ ನಿಶ್ಚಯಿಸಲ್ಪಟ್ಟ ಆಂಶಿಕ ವ್ಯಕ್ತಿತ್ವಗಳ ಕಟ್ಟನ್ನು’ ಮಗು ಗರ್ಭದಲ್ಲಿರುವಾಗಲೇ ಹಾಕಿಬಿಡುವುದು. ಇವೆಲ್ಲವೂ ಅವುಗಳ ವ್ಯವಸ್ಥೆಯ ಹಿನ್ನೆಲೆಯಲ್ಲಿ ಯಾಂತ್ರಿಕವಾಗಿಯೇ ನಡೆಯುವುದು. ನೂರಾರು ವರುಷದ ನಂತರ, ಈ ಎಲ್ಲಾ ತರದ ‘ಜೀವನ ರೀತಿ’ ಗಳು ಆ ಕುಲದಲ್ಲಿ ಅಥವಾ ಮನೆತನದಲ್ಲಿ ಆಗಿ ಹೋದ ನಂತರ, ಅದು ಅಂದಿನ ಇನ್ನೊಂದು ಮನೆತನ ಅಥವಾ ಕುಲವನ್ನು ಆಧರಿಸಿ ಅದೇ “ಮಾನವನ ಜೀವನ ರೀತಿ”ಗಳನ್ನು ಪುನಃ ಒಂದೊಂದು ಮಗುವಿಗೆ ಹಂಚಿ ಆ ಹಳೇ ರೀತಿಯನ್ನು ಭೂಮಿಯಲ್ಲಿ ಆವರ್ತಿಸುವುದು! ಈ ಆವರ್ತನೆಯು ಬಹಳ ಪ್ರಾಚೀನ, ಮತ್ತು ಮಾನವನಿಗೆ ಆಧ್ಯಾತ್ಮ ತಿಳುವಳಿಕೆ ಬರುವ ಎಷ್ಟೋ ಮೊದಲೇ ಅವೆಲ್ಲಾ ಆರಂಭವಾಗಿತ್ತು. ಇನ್ನು, ಕಾಲಕ್ಕೆ ಅನುಸರಿಸಿ ಅವುಗಳ ಸಂಖ್ಯೆ ಮತ್ತು ಹೊಸ ‘ಜೀವನರೀತಿ’ ಗಳ ಸೃಷ್ಟಿಯು ಆ ವ್ಯವಸ್ಥೆಯೊಳಗೆ ನಡೆದಿರಲೇಬೇಕು ಎಂಬುವುದು ಸಾಮಾನ್ಯ ಬುದ್ಧಿಯಿಂದಲೇ ತಿಳಿದುಕೊಳ್ಳಬಹುದು. ಮಾತ್ರವಲ್ಲ, ಈ ‘ಮಾನವ ಜೀವನರೀತಿ’ ಯನ್ನು ಮನೆತನಕ್ಕೆ ಅಥವಾ ಕುಲಕ್ಕೆ ಜೋಡಿಸಿದ ಹಾಗೆ ‘ಕಾಲಕ್ಕೂ’ ಅವು ಜೋಡಿಸಿವೆ ಎಂಬುವುದನ್ನು ಪ್ರತ್ಯೇಕವಾಗಿ ತಿಳಿಯಬೇಕು. ಈ ಕಾರಣದಿಂದಲೇ ಜ್ಯೊತಿಶ್ಯಾಸ್ತ್ರ ಜಗತ್ತಿನ ನಾನಾ ದೇಶಗಳಲ್ಲಿ ಉದಯವಾಗಲು ಕಾರಣವಾಗಿರುವುದು. ಜ್ಯೋತಿಶಾಸ್ತ್ರದಲ್ಲಿ ಒಂದು ನಿರ್ಧಿಷ್ಟ ಕಾಲದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯವು ಹೆಚ್ಚು ಕಡಿಮೆ ಒಂದೇ ತರ ಇರುವುದು ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಆ ಪ್ರಾಚೀನ ವಾಮಾಚಾರದ ಆವರ್ತನೆಯ “ಜೀವನರೀತಿ” ಗಳು ಇಲ್ಲವಾಗಿರುತ್ತಿದ್ದರೆ, ಜ್ಯೊತಿಶ್ಯಾಸ್ತ್ರವೆಂಬ ಜೀವನ ಆವರ್ತನೆಯನ್ನು ಹೇಳುವ ಆ ಆವರ್ತನಾ ಪಟ್ಟಿ ಇಂದು ಇರುತ್ತಿರಲಿಲ್ಲ. ಆದರೆ, ಈ ಸತ್ಯ ಯಾವುದೂ ತಿಳಿಯದಿರುವಾಗ ಜ್ಯೊತಿಶ್ಯಾಸ್ತ್ರಕ್ಕೆ, ಕೆಲವು ಕಡೆ, ಅದರ ಕಾರಣವಾಗಿ ಕರ್ಮಸಿದ್ಧಾಂತವನ್ನು ಜೋಡಿಸಲಾಯಿತು.

ಇನ್ನು, ಕರ್ಮ ಸಿದ್ಧಾಂತದ ಬಗ್ಗೆ ಹೇಳುವುದಾದರೆ, ಕರ್ಮಸಿದ್ಧಾಂತವನ್ನು ಒಪ್ಪುವ ಧರ್ಮಗಳ ಒಳಗಡೆ ಕೂಡಾ ಒಂದೊಂದು ಧರ್ಮ, ಪಂಥದಲ್ಲಿ ಒಂದೊಂದು ರೀತಿಯಲ್ಲಿ ಅದು ವಿವರಿಸಲ್ಪಟ್ಟಿದೆ ಎಂಬುವುದು ಅಚ್ಚರಿಯಾಗಿದೆ! ಕರ್ಮಸಿದ್ಧಾಂತವು ಎರಡು ಕಡೆ ಮುಖ್ಯವಾಗಿ ಉತ್ತರಿಸಲು ಕಷ್ಟಪಡುವುದು. ಸಂಚಿತ ಕರ್ಮದಲ್ಲಿ “ಸತ್” ಕರ್ಮಗಳು ತುಂಬಿದ್ದರೆ ಮಾತ್ರ ಒಬ್ಬಾತನು ಹುಟ್ಟಿನಲ್ಲೇ ಉತ್ತಮ ಸ್ವಭಾವದವನಾಗುವನು ಎಂದು ಸಿದ್ಧಾಂತವು ಹೇಳುವಾಗ, ಅದು ಆ ವ್ಯಕ್ತಿಯ ಭೂಮಿಯ [ಪ್ರಾರಬ್ಧ] ಜೀವನವು ಹೇಗೆ ನೋಡಿದರೂ ಕೆಲವನ್ನು ಹೊರತು ಮತ್ತೆಲ್ಲಾ ತುಂಬಾ ಸಂತೋಷದಾಯಕವಾಗಿರಲೇ ಬೇಕು ಎಂದು ಸ್ಪಷ್ಟವಾಗಿ ಸೂಚಿಸುವುದು. ಸಾವಿರ ಒಳ್ಳೆಯ ಹಣ್ಣಿನೊಂದಿಗೆ ಹತ್ತು ಕೊಳೆತ ಹಣ್ಣು ಸೇರಿ ಇದ್ದಲ್ಲಿ, ಹೇಗೆ ನಾವು ಒಂದು ಬುಟ್ಟಿಯಲ್ಲಿ ತೆಗೆದರೂ ಆ ಬುಟ್ಟಿಯಲ್ಲಿ ಹೆಚ್ಚೆಂದರೆ ಒಂದೋ ಎರಡೋ ಕೆಟ್ಟ ಹಣ್ಣು ಇರಲು ಸಾಧ್ಯ, ಮತ್ತು ಇದು ಸಂಭವನೀಯತೆಯ ನಿಯಮವಾಗಿದೆ. ಆದರೆ ಸತ್ಯವಂತರಾದ ಜನರು ಈ ಭೂಮಿಯಲ್ಲಿ ದುಷ್ಟರಿಗಿಂತಲೂ ಹೆಚ್ಚು ಕಷ್ಟ ಪಡುವಾಗ, ಯಾಕೆ ಹೆಚ್ಚು ಸಂತೋಷ ಕೊಡಬೇಕಾದ ನಿಯಮವು ಈ ರೀತಿಯಲ್ಲಿ ಅವರಿಗೆ ಕಷ್ಟವನ್ನೇ ಹೆಚ್ಚು ಕೊಟ್ಟಿತು ಎಂಬುವುದಕ್ಕೆ ಉತ್ತರವಿಲ್ಲವಾಗುವುದು! ಇದು ಒಂದು ಪ್ರತ್ಯೇಕ ಘಟನೆಯಾಗಿದ್ದರೆ ಅದನ್ನು ಬಿಟ್ಟು ಬಿಡಬಹುದಿತ್ತು ಆದರೆ “ಸತ್ಯವಂತರಿಗೆ ಕಾಲವಲ್ಲ, ದುಷ್ಟ ಜನರಿಗೆ ಸುಭೀಕ್ಷ ಕಾಲ” ಎಂದು ಮಹಾತ್ಮರು, ಭಕ್ತರು, ದಾಸರು ಇತ್ಯಾದಿ ಜನರು ಬಹಳ ಹಿಂದಿನಿಂದಲೇ ಹೇಳುತ್ತಾ ಬಂದಿರುವುದನ್ನು ನಾವು ಕಾಣುವೆವು! ಅದು ಮಾತ್ರವಲ್ಲದೆ, ಮಗುವಾಗಿರುವಾಗಲೇ ಸಾಯುವ ಆ “ಅಷ್ಟು ಕಡಿಮೆ ಆಯುಷ್ಯದ ಪ್ರಾರಬ್ಧ ಕರ್ಮ” ದ ಕಾರಣವನ್ನೂ ಈ ಕರ್ಮ ಸಿದ್ಧಾಂತಕ್ಕೆ ತಿಳಿಸಲು ಸಾಧ್ಯವಾಗಿಲ್ಲ. ಇನ್ನು, “ದೇವರಿಗೂ ತಲೆಬರಹವನ್ನು ತಪ್ಪಿಸಲು ಸಾಧ್ಯವಿಲ್ಲ” ಎಂಬ ಮಾತು ಇದೆ, ಇವೆಲ್ಲಾ ಆ ಪ್ರಾಚೀನ ವಾಮಾಚಾರದ ಪ್ರಭಾವವನ್ನು ತಪ್ಪಿಸಲು ದೇವರಿಂದಲೂ ಸಾಧ್ಯವಾಗಿಲ್ಲ ಎಂಬುವುದನ್ನು ಮಾತ್ರ ಹೇಳುವುದು. ಇನ್ನು, ಪುರಾಣ ಕಥೆಗಳನ್ನು ನೋಡಿದರೆ ಕೂಡಾ ಅಲ್ಲಿ ದೇವತೆಗಳೂ ಜ್ಯೋತಿಷ್ಯದ ಪ್ರಭಾವಕ್ಕೆ ಸಿಲುಕಿದ ಪುರಾಣ ಕಥೆಗಳು, ಹಾಗೂ ಅವತಾರ ಮಾನವರೆಂದು ಕರೆಯಲ್ಪಡುವ ಪುರುಷ, ಸ್ತ್ರೀಯರು ಸಾಮಾನ್ಯ ಮಾನವರಿಗಿಂತಲೂ ಬಹಳವಾಗಿ ಕಷ್ಟಕ್ಕೆ ಗುರಿಯಾಗಿರುವುದನ್ನೂ ನಾವು ಕಾಣುವೆವು. ಪುರಾಣದಲ್ಲಿ ಅವನ್ನು “ಲೀಲೆ” ಎಂದೆಲ್ಲಾ ಹೇಳಿದರೂ, ಇತ್ತ ಜ್ಯೊತಿಶ್ಯಾಸ್ತ್ರದ ಪ್ರಭಾವಕ್ಕೆ ಗುರಿಯಾದ ದೇವತೆಯ ಪುರಾಣ ಕಥೆ ಅದನ್ನು ‘ಲೀಲೆಯಲ್ಲ ಪ್ರಭಾವ’ ಎಂದು ಸಾರಿ ಹೇಳುತ್ತದೆ ಎಂಬುವುದನ್ನೂ ಮರೆಯಬಾರದು. ಇವೆಲ್ಲಾ ಈ ಪ್ರಾಚೀನ ವಾಮಾಚಾರದ ಕೈವಾಡವನ್ನೇ ಸೂಚಿಸುವುದು ಎಂದು ಹೇಳಬಹುದು. ಮಾತ್ರವಲ್ಲ, “ವಿಧಿ” ಎಂದು ಜನರು ಆಡುತ್ತಾ ಬಂದಿರುವುದು, ಇದೇ ಪ್ರಾಚೀನ ವಾಮಾಚಾರದ, ಮೊದಲೇ ನಿಶ್ಚಯಿಸಲ್ಪಟ್ಟ “ಜೀವನರೀತಿ” ಗಳು ಎಂದೂ ತಿಳಿಯುವುದು. ಅಂದರೆ, ಯಾವುದೇ ಮಾನವ “ಜೀವನರೀತಿಯು” ಒಂದು ನಿಶ್ಚಿತ ರೀತಿಯಲ್ಲಿ ಮಾತ್ರ ಜೀವಿಸಿ, ಅದರಲ್ಲಿ ಬರೆದ ರೀತಿಯಲ್ಲೇ ಕೊನೆಯಾಗಬೇಕೆಂದು ನಿಶ್ಚಯಿಸಲ್ಪಟ್ಟಿದೆ ಎಂದು ಅರ್ಥ. ಇದುವೇ ಆ ಪ್ರಾಚೀನ ವಾಮಾಚಾರವು ಸ್ವಯಂಚಾಲಿತವಾಗಿ ತನ್ನ ಕೆಲಸವನ್ನು ಸುಲಭದಲ್ಲಿ ಮಾಡಲು ಮಾಡಿಟ್ಟ ಆ ‘ಪ್ರಾಚೀನ ವ್ಯವಸ್ಥೆ’ ಆಗಿದೆ.

ಆ ಪ್ರಾಚೀನ ವಾಮಾಚಾರವು ಗರ್ಭದಲ್ಲಿ ಮಗುವಿಗೆ ಹಾಕುವ ಆ ಆಂಶಿಕ ವ್ಯಕ್ತಿತ್ವಗಳ ಕಟ್ಟಿನಲ್ಲಿರುವ ಮೂಲ ದುಷ್ಟಶಕ್ತಿಗಳ ಮೂಲಕ, ಅನಂತರದಲ್ಲಿ ಮಗು ಬೆಳೆಯುತ್ತಿದ್ದಂತೆ, ಮಗುವಿನ ವ್ಯಕ್ತಿತ್ವದಿಂದ ಅಲ್ಪಾಂಶ ಮನೋಶಕ್ತಿಯನ್ನು[ವ್ಯಕ್ತಿತ್ವ ಶಕ್ತಿಯನ್ನು] ಪ್ರತ್ಯೇಕಿಸಲು ತೊಡಗುವುದು. ಪ್ರತಿಯೊಂದು ವ್ಯಕ್ತಿತ್ವ ಅಂಶವೂ ಅದೇ ಪ್ರಾಯದ, ಮತ್ತು ಆ ಪ್ರಾಚೀನ ವಾಮಾಚಾರಕ್ಕೆ ಬೇಕಾಗಿರುವ, ದುಷ್ಟಶಕ್ತಿಯಾಗಿ ಪರಿವರ್ತಿಸಲ್ಪಡುವುದು. ಅಂದರೆ, ಈ ರೀತಿಯಲ್ಲಿ, ಮಾನವನು ಜೀವಿಸುತ್ತಿರುವಾಗಲೇ, ಆಂಶಿಕವಾಗಿ ತಯಾರಿಸಲ್ಪಟ್ಟ ದುಷ್ಟಶಕ್ತಿಗಳು, ಆ ವ್ಯಕ್ತಿಯ ಸತ್ತ ನಂತರದ ಪ್ರೇತಾತ್ಮಕ್ಕೆ ಸಮ ಎಂಬಂತಿರುವುದು. ಯಾಕೆಂದರೆ, ಅವುಗಳು ಸ್ಥೂಲ ಶರೀರದಿಂದ ಅಗಲೇ ಬೇರ್ಪಟ್ಟು ಆಗಿವೆ, ಆದರೆ, ಅವುಗಳು ಆ ವ್ಯಕ್ತಿ ಸಾಯುವ ತನಕ, ಆತನದೇ ಸೂಕ್ಷ್ಮ ವ್ಯವಸ್ಥೆಯೊಳಗೆ ಇದ್ದು ಆ ಪ್ರಾಚೀನ ವಾಮಾಚಾರಕ್ಕೆ ಸಹಾಯಕವಾಗಿ ಕೆಲಸಮಾಡುತ್ತಿರುವವು. ಹೀಗೆ ಸಾಯುವ ತನಕ ಸಾವಿರಾರು ಆಂಶಿಕ ಶಕ್ತಿಯು ತೆಗೆಯಲ್ಪಟ್ಟು, ಆ ಪ್ರಾಚೀನ ವಾಮಾಚಾರಕ್ಕೆ ಬೇಕಾಗಿರುವ ಆಯಾ ರೀತಿಯ ದುಷ್ಟಶಕ್ತಿಯಾಗಿ ಪರಿವರ್ತಿಸಲ್ಪಡುವುದು. ವ್ಯಕ್ತಿಯು ಸಾಯುವಾಗ, ಎಲ್ಲವೂ ಒಟ್ಟಾಗಿ ಹೊರನಡೆಯುವುದು, ಮತ್ತು ಅವೆಲ್ಲಾ ಒಂದು ವರುಷದೊಳಗೆ ಆ ಪ್ರಾಚೀನ ವಾಮಾಚಾರದ ಜಾಗತಿಕ “ದೊಡ್ಡ ವ್ಯವಸ್ಥೆಯ” ಶಕ್ತಿಗಳಾಗಿ ಸುಲಭದಲ್ಲಿ ಬದಲಾಯಿಸಲ್ಪಟ್ಟು ಸೇರಿಸಲ್ಪಡುವುದು. ಮೊದಲು ಹೇಳಿದಂತೆ, ಹೊಸ ಮಗು ಜನಿಸುವಾಗ, ಆ ಮನೆತನದಲ್ಲಿ ಇನ್ನು ಯಾವ ವ್ಯಕ್ತಿತ್ವವು ಹುಟ್ಟಲು ಬಾಕಿ ಇದೆಯೋ ಆ ಆತ್ಮ[ಆಂಶಿಕ ವ್ಯಕ್ತಿತ್ವ ಪುಂಜ] ಗರ್ಭದಲ್ಲಿ ಬಂದು ಸೇರುವುದು. ಅಂದರೆ, ಈ ಹುಟ್ಟುವಿಕೆಗೂ, ಸತ್ತ ಆತ್ಮಗಳಿಗೂ ಯಾವ ಸಂಬಂಧವೂ ಇಲ್ಲ. ಸತ್ತವರು ಮತ್ತೂ ಮತ್ತೂ ಹುಟ್ಟಿ ಬರುವುದಲ್ಲ, ಸತ್ತವರು, ಸತ್ತ ಒಂದು ವರುಷದೊಳಗೆ, ಆ ಜಾಗತಿಕ ದೊಡ್ಡ ವಾಮಾಚಾರ ವ್ಯವಸ್ಥೆಯಲ್ಲಿ, ಮೂಲ ದುಷ್ಟಶಕ್ತಿಯ ರೂಪದಲ್ಲಿ ಸೇರಿಬಿಡುವರು ಎಂದು ಅರ್ಥ. ಖಂಡಿತವಾಗಿಯೂ ಸತ್ತವರ ವ್ಯಕ್ತಿತ್ವಗಳು ಮಕ್ಕಳ ಶರೀರದಲ್ಲಿಯೂ ಸಂರಕ್ಷಿಸಲ್ಪಡುವ ಕಾರಣ ಆ ಸತ್ತವರ ವ್ಯಕ್ತಿತ್ವಗಳು ಕುಟುಂಬದವರ ಶರೀರದ ಮೂಲಕ ಮೂರು ತಲೆ ಮಾರಿನವರೆಗೆ ಕೊಂಡೊಯ್ಯಲ್ಪಡುವುದು. ಆದರೆ ಸಮಾಜ ನೆನೆಪಿಸುವ ಯಾವುದೇ ವಿಶೇಷ ವ್ಯಕ್ತಿತ್ವಗಳಾದರೆ ಮೇಲೆ ಹೇಳಿರುವ ರೀತಿಯಲ್ಲಿ, ಶರೀರದ ಮೂಲಕ, ಅವು ನಿರಂತರ ತಲೆ ಮಾರಿಂದ ತಲೆ ಮಾರಿಗೆ ಕೊಂಡೊಯ್ಯಲ್ಪಡುವುದು. ನಿಜವಾಗಿಯೂ, ಒಬ್ಬನ ಕುಟುಂಬ ಸದಸ್ಯರ ಎಲ್ಲರ ವ್ಯಕ್ತಿತ್ವಗಳೂ ಆತನ ಶರೀರದಿಂದ ಆಂಶಿಕವಾಗಿ ಬೇರ್ಪಡಿಸಿದ ವ್ಯಕ್ತಿತ್ವದಿಂದಲೇ ತಯಾರಿಸಲ್ಪಟ್ಟು ಅವನ ವ್ಯವಸ್ಥೆಯಲ್ಲಿ ಇರಿಸಲ್ಪಡುವುದು! ಅಂದರೆ, ಮೂಲ ಮನೋಶಕ್ತಿ ಆತನದೇ ಆದರೂ ಮತ್ತೆಲ್ಲ ವ್ಯಕ್ತಿತ್ವ, ರೂಪ, ಸಂಸ್ಕಾರಗಳೆಲ್ಲವೂ ಅಯಾ ಕುಟುಂಬ ಸದಸ್ಯನ ರೀತಿಯಲ್ಲಿ ಇರುವುದು. ಒಟ್ಟಿನಲ್ಲಿ, ಒಬ್ಬಾತನ ಎಲ್ಲಾ ಕುಟುಂಬ ಸದಸ್ಯರು, ಆತನದೇ ಮನೋಶಕ್ತಿಯಿಂದಲೇ ತಯಾರಿಸಲ್ಪಟ್ಟ ಒಂದು ಪೂರ್ತಿ ಕುಟುಂಬವಾಗಿ, ತನ್ನದೇ ದುಷ್ಟಶಕ್ತಿಗಳ ಹೊರತಾಗಿ, ತನ್ನ ವ್ಯವಸ್ಥೆಯೊಳಗೇ ಸೇರಿ ಇರುವುದು ಎಂದು ಅರ್ಥ! ಇವು ಒಬ್ಬನ ವ್ಯವಸ್ಥೆಯಲ್ಲಿ ಆತನು ಸಾಯುವ ತನಕವೂ ಇರುವವು. ಇವುಗಳು ಕೆಲವೊಮ್ಮೆ ಮಾತೃ ದೋಷ, ಪಿತೃ ದೋಷ ಎಂದೆಲ್ಲಾ ರೀತಿಯಲ್ಲಿ ಕಾಣಿಸುವುದೂ ಇದೆ. ಅಚ್ಚರಿ ಎಂದರೆ ತಂದೆ, ತಾಯಂದಿರು ಜೀವಂತವಾಗಿರುವಾಗಲೇ ಇವು ಇರುತ್ತವೆ, ಆದರೆ ಯಾವ ಕಾರಣಕ್ಕೂ ಅವರು ಸಾಯುವ ತನಕ ಯಾರ ‘ಮೈಮೇಲೆ ಬಂದು ಕಾಡದೆ’ ಸುಪ್ತವಾಗಿ ಇರುತ್ತವೆ ಎಂದು ಮಾತ್ರ. ಸತ್ತ ವ್ಯಕ್ತಿಯ ಆತ್ಮವನ್ನು ಉಪಯೋಗಿಸಿ, ಹೆಚ್ಚೆಂದರೆ ಒಂದು ವರುಷದೊಳಗೆ, ಪ್ರಾಚೀನ ವಾಮಾಚಾರಕ್ಕೆ ಅಗತ್ಯವಿದ್ದಲ್ಲಿ, ಕುಟುಂಬದವರನ್ನು ಕಾಡಿಸಲು ಸಾಧ್ಯವಿದೆ, ಆದರೆ ಮತ್ತೆ ಅವು ಪ್ರಾಚೀನ ವಾಮಾಚಾರದ ಜಾಗತಿಕ ವ್ಯವಸ್ಥೆಯಲ್ಲಿ ಲೀನವಾಗುವ ಕಾರಣ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಮೊದಲೇ ಹೇಳಿದ್ದೇನೆ. ಆದರೆ ಹೆಚ್ಚಾಗಿ ಈ ಪ್ರೇತ ಕಾಡುವಿಕೆಯು, ಆತನದೇ ವ್ಯವಸ್ಥೆಯ ಒಳಗೆಯೇ ತಯಾರಿಸಲ್ಪಟ್ಟ ತಂದೆ, ತಾಯಂದಿರ ದುಷ್ಟಶಕ್ತಿಗಳಿಂದಲೇ ನಡೆಸಲ್ಪಡುವುದು. ದುಷ್ಟಶಕ್ತಿ ಮೈಮೇಲೆ ಬರುವುದು ಇತ್ಯಾದಿಗಳಿಂದ ಆ ಪ್ರಾಚೀನ ವಾಮಾಚಾರಕ್ಕೆ ಲಾಭವಿರುವುದಾದರೂ ಅದನ್ನು ಬಹಳ ಕಡಿಮೆ ಸಂಖ್ಯೆಯಲ್ಲೇ ಮಾತ್ರ ಮಾಡುವವು, ಇಲ್ಲವಾದರೆ ಎಲ್ಲರೂ ಪ್ರೇತಾತ್ಮವಿದೆ ಎಂದು ಸ್ಪಷ್ಟವಾಗಿ ತಿಳಿದು ಉತ್ತಮ ಸತ್ಯಸಂಧ ಜೀವನವನ್ನು ಅನುಸರಿಸುವ ಸಾಧ್ಯತೆ ಇರುವುದು. ಇದು ಆ ಪ್ರಾಚೀನ ವಾಮಾಚಾರಕ್ಕೆ ಬೇಕಾಗಿಲ್ಲ. ಇದುವೇ, ನಿರೀಶ್ವರ ವಾದಿಗಳ ಮೈಮೇಲೆ ದೆವ್ವ ಅಥವಾ ದೇವರು ಬರುವುದನ್ನು ನಾವು ಕಾಣದಿರುವುದಕ್ಕೆ ಕಾರಣ. ಜಗತ್ತನ್ನು ಎಂದೆಂದಿಗೂ “ಇದೆ, ಇಲ್ಲ” ಎಂಬ ಗೊಂದಲದಲ್ಲೇ ಮುಂದುವರಿಸುವುದು ಆ ಪ್ರಾಚೀನ ವಾಮಾಚಾರದ ಒಂದು ದೊಡ್ಡ ತಂತ್ರವಾಗಿದೆ.

ಈಗ, ನಾನು ಹೇಳಿದ್ದೆಲ್ಲದರ ಮೇಲೆ ಸಂಶಯವು ಇನ್ನೂ ಬಾಕಿ ಉಳಿದಿರಬಹುದು. ಅದಕ್ಕೆ, ಇನ್ನೂ ಆ ಹೇಳಿರುವ ಮಾತುಗಳ ಸತ್ಯತೆಯನ್ನು ಕಾಣುವ ನಿಟ್ಟಿನಲ್ಲಿ ಮತ್ತೊಮ್ಮೆ ವಿಮರ್ಶೆ ಮಾಡಿ ತಿಳಿಯೋಣ.

ಹುಟ್ಟಿನಲ್ಲೂ ಒಂದೇ ಆತ್ಮ, ಸತ್ತ ನಂತರವೂ ಒಂದೇ ಆತ್ಮ ಎಂಬ ಇದುವರೆಗಿನ ಎಲ್ಲಾ ಧರ್ಮಗಳ ನಿಲುವನ್ನು ಒಮ್ಮೆ ನೋಡೋಣ.

ಎಲ್ಲಾ ಧರ್ಮಗಳು, ಮಾನವನ ಸತ್ತ ನಂತರದ ಆತ್ಮದ ಗತಿಯ ಬಗ್ಗೆ ಹೇಳಿರುವುದು ಬೇರೆ ಬೇರೆ ರೀತಿಗಳಲ್ಲಿ! ಅಂದರೆ, ಒಂದು ಧರ್ಮದಲ್ಲಿ ಒಬ್ಬಾತನು ಸತ್ತ ನಂತರ ಆತನ ಆತ್ಮವು, ಆತನನ್ನು ಹೂತುಹಾಕಿದ ಸ್ಥಳದಲ್ಲೆ, ಸಾವಿರಾರು ವರುಷಗಳು, ಇರುವುದೆಂದು ಹೇಳುವುದಾದರೆ, ಇನ್ನು ಇತರ ಧರ್ಮಗಳಲ್ಲಿ ಇತರ ಬೇರೆ ಬೇರೆ ಸ್ಥಳಗಳನ್ನು ಹೇಳುವವು. ಒಂದೇ ಧರ್ಮದ ಒಳಗೂ ಹಲವು ಅಭಿಪ್ರಾಯ ವ್ಯತ್ಯಾಸವನ್ನು ಕಾಣಬಹುದು! ಇನ್ನು, ಕೆಲವು ಧರ್ಮಗಳಲ್ಲಿ ಒಬ್ಬಾತನು ಸತ್ತ ನಂತರ ಭೂಮಿಯಲ್ಲಿ ಇರುವವರಿಂದ ಹೆಚ್ಚು ಶಕ್ತಿಯುತ ಆಚಾರಕ್ರಿಯೆ ಮತ್ತು ಹೆಚ್ಚೆಚ್ಚು ದಾನ ಮಾಡಿಸಿ, ಆ ಸತ್ತ ಆತನು ಎಂಥವನಾಗಿದ್ದರೂ, ಕೆಳಗೆ ಬೀಳದಂತೆ, ಉತ್ತಮ ಪಥ ಅಥವಾ ಲೋಕಕ್ಕೆ ಕೊಂಡು ಹೋಗಿ ನಿಲ್ಲಿಸುವ ವಿಧಾನಗಳೂ ಇವೆ! ಇಲ್ಲಿ, ನಾನು ಕೇಳುವ ಒಂದು ಪ್ರಶ್ನೆಯೆಂದರೆ, ಆ “ಒಂದೇ ಆತ್ಮ” ದ ರೀತಿಯು ಇರುವುದೇ ಆದರೆ, ಅದು ಜಗತ್ತಿನ ಎಲ್ಲಾ ಧರ್ಮಗಳಿಗೂ ಪ್ರಕೃತಿ ದತ್ತವಾಗಿ ಒಂದೇ ರೀತಿಯಲ್ಲಿ ಮಾತ್ರ ಇರಬೇಕು ಎಂದಾಗಿದೆ. ಪ್ರಕೃತಿಯು ಹುಟ್ಟನ್ನು ಎಲ್ಲರಿಗೂ ಜಾತಿ, ಧರ್ಮ, ಬೇಧವಿಲ್ಲದೆ ಒಂದೇ ರೀತಿಯಲ್ಲಿ ಕೊಡುವುದಾದರೆ, ಸತ್ತ ನಂತರದ ಆತ್ಮವನ್ನು ಅದರದೇ ಆದ ಒಂದು ವಿಧಾನದಲ್ಲಿ ಮಾತ್ರ ಕೊಂಡುಹೋಗಬೇಕು. ಮಾನವನು ಈ ಭೂಮಿಯಲ್ಲಿ ಸೃಷ್ಟಿಯಾಗಿ, ಹಲವು ಲಕ್ಷ ವರುಷಗಳು ಕಳೆದ ನಂತರ ಮಾತ್ರವೇ ಧರ್ಮಗಳು ತಲೆ ಎತ್ತಲು ಆರಂಭಿಸಿರುವುದು. ಆಗ ಪ್ರಕೃತಿಯು ಹೆದರಿ, “ಧರ್ಮಗಳು ಬರಲು ಆರಂಭಿಸಿದವು, ಇನ್ನು ಮುಂದೆ ಅಯಾ ಧರ್ಮಗಳ ರೀತಿಯಲ್ಲಿ, ಸತ್ತ ಆತ್ಮಗಳು ಹೋಗಲಿ” ಎಂದು ಒಮ್ಮಿಂದೊಮ್ಮೆಲೇ ತನ್ನ ಆವರೆಗಿನ ನಿಯಮವನ್ನು ಬದಲಾಯಿಸಿಕೊಳ್ಳಲಾರದು ಖಂಡಿತ. ಹಾಗಿರುವಾಗ, ಈ ಎಲ್ಲಾ ಧರ್ಮಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಹೇಳಿರುವುದು ಖಂಡಿತಾ ಸತ್ಯಕ್ಕೆ ಹತ್ತಿರವೂ ಇಲ್ಲ ಎಂಬುವುದು ಸ್ಪಷ್ಟವಾಗುವುದು. ಇದು ಮಾತ್ರವಲ್ಲ, ತಾಯಿಯ ಗರ್ಭದಲ್ಲಿ ಆ ಮಗುವಿಗೆ ಬಂದು ಸೇರುವ ಆ ಆತ್ಮಗಳ ವಿವರಣೆಯನ್ನಾದರೂ ಈ ಜಗತ್ತಿನಲ್ಲಿ ಒಂದೇ ರೀತಿಯಲ್ಲಿ ಹೇಳಿದ್ದಾರಾ ಎಂದು ಕೇಳಿದರೆ, ಅದೂ ಇಲ್ಲ, ಅದನ್ನು ಕೂಡಾ ಬೇರೆ ಬೇರೆ ರೀತಿಗಳಲ್ಲಿ ಹೇಳಿರುವರು!!

ಹೀಗಿರುವಾಗ, ಎಲ್ಲಿ ನಿಂತು ಬೇಹುಗಾರಿಕೆಯಿಂದ ನಾನು ಪಡೆದ ರಹಸ್ಯ ಸತ್ಯಗಳು “ಸುಳ್ಳು” ಎಂದು ಹೇಳುವಿರಿ? ಎಲ್ಲರೂ ಒಂದೇ ರೀತಿಯಲ್ಲಿ ಹೇಳಿದ್ದರೆ ಅಲ್ಲಿ ಸತ್ಯತೆಯು ಸ್ಪಷ್ಟವಾಗುತ್ತಿತ್ತು, ಅದಲ್ಲ ಎಂದರೆ ನಾನು ಹೇಳುವುದು ತಪ್ಪು ಅಥವಾ ಸುಳ್ಳು ಎಂದು ಕಣ್ಣು ಮುಚ್ಚಿ ಮಾತ್ರ ಹೇಳಬೇಕಷ್ಟೆ.

ಇನ್ನು, ನಾನು ಕಂಡ ಸತ್ಯಗಳಿಗೆ ಪುಷ್ಟಿ ನೀಡುವ ಮತ್ತೊಂದು ಸತ್ಯವನ್ನು ಮಾನವರ ಅನುಭವದ ಹಿನ್ನೆಲೆಯಲ್ಲೇ ಹೇಳುವೆನು. ಜಗತ್ತಿನ ಎಲ್ಲೆಡೆಯೂ ಭೂಮಿಯಲ್ಲಿ ಜೀವಿಸುವಾಗ ಮಕ್ಕಳನ್ನು ತನ್ನ ಜೀವಕ್ಕಿಂತಲೂ ಪ್ರೀತಿಸುವ ಆ ಅತ್ಯುತ್ತಮ ತಂದೆ, ತಾಯಂದಿರು ಸತ್ತ ನಂತರ ಮಕ್ಕಳನ್ನು ಪಿತೃ ದೋಷ, ಮಾತೃ ದೋಷ ಎಂಬೆಲ್ಲಾ ವಿದದಲ್ಲಿ ಕಾಡುವುದು ಹೇಗೆ ಸಾಧ್ಯವಾಗುವುದು? ಮಾತ್ರವಲ್ಲ, ಅತ್ಯಂತ ಕೆಟ್ಟ ತಂದೆ, ತಾಯಂದಿರು ಮಕ್ಕಳನ್ನು ಸತ್ತ ನಂತರ ಕಾಡದೆ ಇರುವುದನ್ನೂ ನಾವು ಕಾಣುತ್ತೇವೆ! ಇದಕ್ಕಿರುವ ಕಾರಣವನ್ನು “ಒಂದೇ ಆತ್ಮ” ಮತ್ತು “ಆಂಶಿಕವಾಗಿ ಮನೋಶಕ್ತಿಯನ್ನು ಪ್ರತ್ಯೇಕಿಸಿ ದುಷ್ಟಶಕ್ತಿಯನ್ನಾಗಿ ಯಾವುದೂ ಪರಿವರ್ತಿಸುವುದಿಲ್ಲ” ಎನ್ನುವವರು ಹೇಳಬೇಕಾಗಿದೆ. ಆದರೆ, ಎಷ್ಟೇ ಉತ್ತಮ ತಂದೆ ತಾಯಾದರೂ, ಅವರ ವ್ಯಕ್ತಿತ್ವ ಎಲ್ಲವೂ ಜೀವಂತವಾಗಿರುವಾಗಲೇ ದುಷ್ಟಶಕ್ತಿಯಾಗಿ ಪರಿವರ್ತಿಸಲ್ಪಡುವ ಕಾರಣ, ಸತ್ತ ನಂತರ ತಮ್ಮ ಮಕ್ಕಳನ್ನು ಅಥವಾ ತಮ್ಮವರನ್ನು ಕಾಡಲು ಅವುಗಳಿಗೆ ಸಾಧ್ಯವಾಗುವುದು, ಎಂದು ನಾನು ಕಂಡ ಆ ರಹಸ್ಯ ಸತ್ಯವು ತಿಳಿಸುವುದು.

ಇನ್ನೂ ಒಂದು ಅಂಶವನ್ನು ಚರ್ಚಿಸೋಣ. ಕೊಲೆ ಮಾಡಲ್ಪಟ್ಟವನ ಆತ್ಮವು ಕೊಲೆ ಮಾಡಿದವನನ್ನು ಕಾಡುವ ಬದಲು ಆ ಆತ್ಮವು ತನ್ನ ಮನೆಯವರಿಗೇ ಹೋಗಿ ಕಾಡುವುದು ಯಾಕೆ ಎಂಬುವುದಕ್ಕೂ “ಒಂದೇ ಆತ್ಮ” ದವರಿಗೆ ಉತ್ತರ ಇಲ್ಲ. ಪ್ರತಿ ಆಂಶಿಕ ವ್ಯಕ್ತಿತ್ವವನ್ನು ದುಷ್ಟಶಕ್ತಿಯನ್ನಾಗಿ ಆ ಪ್ರಾಚೀನ ವಾಮಾಚಾರವು, ಮಾನವನು ಭೂಮಿಯಲ್ಲಿ ಜೀವಿಸುವ ಕಾಲದಲ್ಲಿ, ಪರಿವರ್ತಿಸುವಾಗ, ಅವು ಪುನಃ ಹಿಂದಕ್ಕೆ ಬಂದು ಆತನದೇ ವ್ಯಕ್ತಿತ್ವಕ್ಕೆ ಸಹಾಯ ಮಾಡದೆ, ಎಂದೆಂದಿಗೂ ಆ ಪ್ರಾಚೀನ ವಾಮಾಚಾರದ್ದೇ ಪರವಾಗಿ ಕೆಲಸ ಮಾಡುವ ಶಕ್ತಿಗಳಾಗುವುದಕ್ಕೆ ಬೇಕಾಗಿ, ಆ ವಾಮಾಚಾರ ವ್ಯವಸ್ಥೆಯು ಒಂದು ವಿಶೇಷ ರೀತಿಯನ್ನು ಅನುಸರಿಸಿರುವುದು. ಆ ರೀತಿಯೇ “ತನಗೆ ತಾನು ಮೊದಲ ಶತ್ರು, ಮತ್ತು ಅನಂತರ ತನ್ನ ಮನೆಯವರಿಗೆ ಶತ್ರು” ಎಂಬ ರೀತಿಯಾಗಿದೆ. ಅಂದರೆ, ಆಂಶಿಕ ದುಷ್ಟಶಕ್ತಿಯನ್ನಾಗಿ ಆ ಪ್ರಾಚೀನ ವಾಮಾಚಾರವು ಪರಿವರ್ತಿಸುವ ಸಮಯದಲ್ಲಿ ಆ ದುಷ್ಟಶಕ್ತಿಯು ‘ಆ ಶರೀರ ಹೊತ್ತ ವ್ಯಕ್ತಿಗೆ ಮೊದಲ ಶತ್ರು’ ಎಂಬ ರೀತಿಯಲ್ಲಿಯೇ ಅದನ್ನು ತಯಾರು ಮಾಡುವುದು, ಮತ್ತು ‘ಅನಂತರದ ಶತ್ರುವಾಗಿ ಆತನ ಮನೆಯವರನ್ನೇ ಇಟ್ಟಿದೆ’. ಒಟ್ಟಲ್ಲಿ, ಪ್ರಾಚೀನ ವಾಮಾಚಾರವನ್ನು ಯಾವ ರೀತಿಯಿಂದಲೂ ಮೋಸ ಮಾಡದೆ ಆ ಹೊಸತಾಗಿ ತಯಾರಿಸಲ್ಪಟ್ಟ ಶಕ್ತಿಗಳು ಎಂದಿಗೂ ಅವುಗಳ ವ್ಯವಸ್ಥೆಗೆ ಬಾಗಿ ಇರುವಂತೆ ಅವು ಈ ರೀತಿಯಲ್ಲಿ ಮಾಡಿಕೊಂಡಿವೆ ಎಂದು ಅರ್ಥ. ಈಗ, ಆ ತನ್ನ ಮನೆಯವರ ಮೇಲಿನ ಆ ಶತ್ರುತ್ವವೇ, ಕೊಲೆ ಮಾಡಿವನನ್ನು ಬಿಟ್ಟು, ತನ್ನ ಮನೆಯವರಿಗೇ ಬಂದು ಆ ಪ್ರೇತಾತ್ಮವು ಕಾಡುವುದಕ್ಕೆ ಕಾರಣವಾಗಿರುವುದು ಎಂದು ತಿಳಿಯಬೇಕು.

ಜಗತ್ತು ಈಗಲೂ ಹೇಳುತ್ತಿರುವುದು ಎಲ್ಲವೂ ಅವರವರ ನಂಬಿಕೆಗೆ ಬಿಟ್ಟದು ಎಂದು!! ನಮ್ಮ ನಂಬಿಕೆಗೆ ಬಿಟ್ಟದ್ದು ಎಂದು ಒಂದು ಮಾವಿನ ಹಣ್ಣನ್ನು ನಂಬಿಕೆಯಲ್ಲಿ ಬಾಳೆ ಹಣ್ಣಾಗಿ ಪರಿವರ್ತಿಸಬಹುದೇ? ಸತ್ಯವು ಹಿಂದೆ ಇದ್ದದ್ದು ಮಾತ್ರ ಇಂದೂ ಇರುವುದು ಅಷ್ಟೆ. ನಾವು ಆ ಒಂದು ಸತ್ಯವನ್ನು ನಮ್ಮ ನಂಬಿಕೆಯ ರೀತಿಯಲ್ಲಿ ವಿವರಿಸಿದರೆ ಅದು ನಾವು ಹೇಳಿದಂತೆ ಬದಲಾಗುತ್ತಾ ಬರುವುದೇ? ಇನ್ನು, ಎಲ್ಲವೂ ನಂಬಿಕೆಯಲ್ಲೇ ಬದಲಾಗುವುದು ಎಂದು ಹೇಳುವವರಿದ್ದರೂ ಅವರಿಗೂ ಉತ್ತರವಿದೆ. ಅಂದರೆ ಹಾಗೆ ಹೇಳುವುದಾದರೆ,ಯಾವ ಕೆಟ್ಟವನಿಗೂ ನಂಬಿಕೆಯಲ್ಲೇ ಸ್ವರ್ಗ, ಮೋಕ್ಷ ಎಲ್ಲಾ ಪಡೆಯಬಹುದಲ್ಲಾ ಮತ್ತು ಇತರರಿಗೆ ಅದನ್ನು ಕೊಡಬಹುದಲ್ಲಾ? ಆದರೆ, ಅದಕ್ಕೆ ಮಾತ್ರ ಯಾಕೆ ಪ್ರತ್ಯೇಕ ಹಲವು ಕ್ರಿಯೆಗಳು, ಆಧ್ಯಾತ್ಮಿಕ ಸಾಧನೆಗಳು? ಇಲ್ಲಿ ನಂಬಿಕೆಯವರೇ “ನಂಬಿಕೆಯು ಅಲ್ಲೆಲ್ಲಾ ಕೆಲಸ ಮಾಡುವುದಿಲ್ಲ” ಎಂದು ಹೇಳಬೇಕಾಗುವುದು!

ಜಗತ್ತಿನ ಎಲ್ಲಾ ಧರ್ಮ, ಪಂಥದವರಲ್ಲಿ ನಾನು ಹೇಳುವುದು ಏನೆಂದರೆ ನೀವು ಯಾರು ಬೇಕಾದರೂ, ಯಾವ ಆಚಾರ, ನಂಬಿಕೆಯನ್ನು ಬೇಕಾದರೂ ಇಟ್ಟುಕೊಳ್ಳಿ, ಆದರೆ ಅದು ಜಾತೀ ಶೋಷಣೆ, ಧರ್ಮಾಂಧತೆಗಳ ರೂಪಗಳಲ್ಲಿ ಮಾತ್ರ ಪರಿವರ್ತಿಸಲ್ಪಡಬಾರದು ಎಂದು ಮಾತ್ರವಾಗಿದೆ. ಮುಂದೆ ಸಮಾಜದಲ್ಲಿ ದಾರುಣ ಬದಲಾವಣೆ ಬರುವುದನ್ನು ಕಂಡ ಹಿನ್ನೆಲೆಯಲ್ಲಿ ಮಾತ್ರ ಸೂಕ್ಷ್ಮದಲ್ಲಿ ಬೇಹುಗಾರಿಕೆ ಮಾಡಿ ತಿಳಿದ ರಹಸ್ಯ ಸತ್ಯಗಳನ್ನು ನಿಮ್ಮ ಮುಂದೆ ಇಟ್ಟಿರುವುದು. ಆ ಪ್ರಾಚೀನ ವಾಮಾಚಾರಕ್ಕೆ ಭೂಮಿಯ ಮಾನವರ ವತಿಯಿಂದಲೂ ಮತ್ತೂ ಮತ್ತೂ ‘ಕ್ರೌರ್ಯ-ಸೇವೆ’ ನಡೆಯುತ್ತಿರುವುದನ್ನು ನೋಡುವಾಗ ಅದು ಅತ್ಯಂತ ಶೋಚನೀಯ ಮತ್ತು ಭಯಾನಕವಾಗಿ ಕಾಣಿಸುವುದು.

ಮಾನವನಿಗೆ ಇನ್ನು ಆ ಪ್ರಾಚೀನ ವಾಮಾಚಾರದ ಪ್ರಭಾವದಿಂದ ಹೊರಬರಲು ಇರುವ ಸ್ಥಳ ಎಂದರೆ ಮಾನವನ ‘ಬಾಹ್ಯ ಮನಸ್ಸು’ ಮಾತ್ರವಾಗಿದೆ. ಅಂದರೆ ನಾವು ವ್ಯವಹರಿಸುವ ಮನಸ್ಸು. ಉಳಿದೆಲ್ಲ ಕಡೆಗಳಲ್ಲೂ ಪ್ರಾಚೀನ ವಾಮಾಚಾರವು ತನ್ನ ಆಧಿಪತ್ಯವನ್ನು ಸ್ಥಾಪಿಸಿ ಆಗಿದೆ. ಈ ಕಾರಣದಿಂದಾಗಿ ಮಾತ್ರ ‘ಮಹಾತ್ಮರ ರೀತಿಯಾದ ಆ ವಿಶಾಲ ಮನಸ್ಕತೆ’ ಯನ್ನು ಪರಿಹಾರವಾಗಿ ನಾನು ಹೇಳಿರುವುದು ಎಂದು ತಿಳಿಯಬೇಕು.

ಕೊನೆಯದಾಗಿ ಒಂದು ಪ್ರಶ್ನೆಯೊಂದಿಗೆ ನಾನು ಮಾತನ್ನು ಮುಗಿಸುವೆನು. ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಕೋಟಿಗಟ್ಟಲೆ ದೊಡ್ಡ ದೊಡ್ಡ ಆಧ್ಯಾತ್ಮಿಕ ಜೀವಿಗಳು ಹುಟ್ಟಿ ಸತ್ತಿರುವರು. ಭೂಮಿಯಲ್ಲಿ ಈಗಲೂ ಎಲ್ಲಾ ಧರ್ಮಗಳಲ್ಲೂ ಲಕ್ಷಗಟ್ಟಲೆ ಆಧ್ಯಾತ್ಮಿಕ ವ್ಯಕ್ತಿಗಳು ಇರುವರು. ಭೂಮಿಯಲ್ಲಿ ಇರುವವರು ಮತ್ತು ಸತ್ತ ಮಹಾತ್ಮರೂ ಸೇರಿದರೆ ಎಷ್ಟು ಸಂಖ್ಯೆ ಎಂದು ಎಣಿಸುವುದೇ ಕಷ್ಟ. ಹೀಗಿರುವಾಗ, ಆ ದೊಡ್ಡ ದೊಡ್ಡ ಆಧ್ಯಾತ್ಮಿಕ ಜೀವಿಗಳಿಗೆಲ್ಲಾ ಮೇಲಿಂದ ಕೊನೆಯ ಪಕ್ಷ ಅವರವರ ಧರ್ಮದ ಒಳಗಿನ ಮಾನವರಿಗೆ ಒಳ್ಳೆಯ ಬುದ್ಧಿಯನ್ನು ಕೊಟ್ಟು ಬೆಳೆಸಿ ತರಬಹುದಿತ್ತಲ್ಲಾ? ಆದರೆ ಅದರ ಬದಲು ಕೆಟ್ಟ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಬಂದಿದೆ!! ಒಂದು ಉದಾಹರಣೆ ಹೇಳುವುದಾದರೆ, ಸತ್ತ ನಂತರ, ಎಲ್ಲಾ ಯೋಗಿ, ಮಹಾಯೋಗಿಗಳ ಸಹಾಯದಿಂದ ಮತ್ತು ತನ್ನ ಪ್ರಯತ್ನದಿಂದ ಈ ಭಾರತ ಭೂಮಿಯ ಜನರ ಸ್ವಭಾವವನ್ನು ಅತ್ಯುತ್ತಮವಾಗಿಸುವುದಾಗಿ, ಮಾತ್ರವಲ್ಲ, ಭಾರತದ ನಾರಿಯರನ್ನು ಸೀತಾ ಮಾತೆಯಂತೆ ಪತಿವ್ರತೆಯರನ್ನಾಗಿ ಮಾಡಿಯೇ ಮಾಡುವುದಾಗಿ, ಈ ಭೂಮಿಯಲ್ಲಿ ಜೀವಂತವಾಗಿರುವಾಗ, ಪ್ರತಿಜ್ಞೆ ತೆಗೆದಿರುವ ಮಹಾಯೋಗಿಯನ್ನು ನಮಗೆ ತಿಳಿದಿದೆ. ಆದರೆ, ಇಂದು ನಮ್ಮ ದೇಶದ ಮಾನವರ ಹಾಗೂ ನಾರಿಯರ ಅವಸ್ಥೆ ನೋಡಿದರೆ ಅಯ್ಯೋ ಎನಿಸುವುದು!!! ಪುಟ್ಟ ಕರ್ಣಾಟಕದ ರಾಜಧಾನಿಯಲ್ಲಿ ಮಾತ್ರ ನಲ್ವತ್ತ ಮೂರು ಸಾವಿರ ಮಾತೆಯರು ಪರ ಪುರುಷರೊಂದಿಗೆ ಮುಕ್ತ ಲೈಂಗಿಕ ಕ್ರಿಯೆಗಾಗಿ ಜಾಲತಾಣದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಡಿರುವರು, ಮತ್ತು ಹೆಸರನ್ನು ನೋಂದಾಯಿಸದೆ ಇರುವವರು ಮತ್ತೂ ಹಲವು ಸಾವಿರ ಹೆಚ್ಚು ಇರುವರು ಎಂದರೆ ಆ ಮಾಹಾತ್ಮರು ನಿರ್ವಚಿಸಿರುವ ಆ “ಧರ್ಮ” ಈಗ ಎಲ್ಲಿರುವುದು? ಇವರೇ ಹೀಗಿರುವಾಗ, ಧರ್ಮವು ಅಗತ್ಯವೆಂದು ಹೇಳಿರುವ, ಆ ಕನ್ಯಾದಾನದಕ್ಕೆ ಬೇಕಾದ ಆ ಕನ್ಯೆಯರು ಇನ್ನು ಎಷ್ಟು ಬಾಕಿ ಉಳಿದಿರಬಹುದು? ಒಟ್ಟಲ್ಲಿ, ಮೇಲಿಂದ ಯಾರೂ ರಕ್ಷಿಸುವುದಿಲ್ಲ ಎಂಬುವುದು ಇದರಿಂದ ಸ್ಪಷ್ಟವಾಗುವುದು. ಪ್ರತ್ಯೇಕವಾಗಿ ನಾವು ನೋಡಬೇಕಾದ ವಿಚಾರವೆಂದರೆ, ‘ಧರ್ಮ’ ಎಂಬುವುದು ಮುಖ್ಯವಾಗಿ ಇರುವುದು ಮತ್ತು ಬರುವುದು ಒಂದು ಮುಖ್ಯ ಅಂಶದಿಂದಾಗಿದೆ ಎಂಬುವುದನ್ನು. ಅದುವೇ “ಮದುವೆ.” ಉಳಿದ ಸ್ವರ್ಗ, ಮೋಕ್ಷ, ಇತ್ಯಾದಿಗಳು, ಹಾಗೂ ದೇವರಿಂದ ಆಗುವ ಅನುಗ್ರಹ ಲಾಭ ಇತ್ಯಾದಿಗಳು, ಅಯಾ ಧರ್ಮ, ಪಂಥಗಳ ಬರೇ ಆಯ್ಕೆಗಳಾಗಿವೆ. ಆದರೆ, ಮದುವೆ ಇಲ್ಲದಾದರೆ, ಅಲ್ಲಿ ‘ಧರ್ಮ’ ಇರುವುದಿಲ್ಲ, ಬದಲು ಕಾಡು ಜನಾಂಗ ಮಾತ್ರ ಇರುವುದು. ಜಗತ್ತಲ್ಲಿ ಎಲ್ಲೆಡೆಯೂ, ಎಲ್ಲಾ ಸಮಾಜಗಳೂ, ಈ ರೀತಿ ವ್ಯಭಿಚಾರ ಮಾಡುವುದನ್ನು ಮುಂದುವರಿಸುತ್ತಾ, ವಿವಾಹ ವಿಚ್ಛೇಧನಗಳು ಹೆಚ್ಚಾಗುತ್ತಾ, ಕೊನೆಗೆ ಮದುವೆಯೇ ಇಲ್ಲದ ಸಮಾಜವಾಗಿ ಬಿಡುವುದು. ಅಲ್ಲಿಗೆ ಧರ್ಮದ ಕೊನೆಯ ಆ ಕುಂಟುವ ಕಾಲೂ ಮುರಿದು ಹೋಗುವುದು! ಅಂದರೆ, ಎಲ್ಲಾ ಧರ್ಮಗಳ ಆಯುಷ್ಯವು ಬಹಳ ಹೆಚ್ಚೆಂದರೆ ಕೆಲವು ಶತಮಾನಗಳು ಮಾತ್ರವಾಗಿದೆ. ಇನ್ನು, ವೇಶ್ಯಾ ಸ್ತ್ರೀ, ಪುರುಷರಿಗಾಗಿ ಯಾರೂ ಹೊಸ ಧರ್ಮವನ್ನು ಮುಂದೆ ಸ್ಥಾಪಿಸುವ ಸಾಧ್ಯತೆ ಕಡಿಮೆ ಎಂದು ನನಗನಿಸುವುದು. ನನಗಂತೂ, ಈಗಿರುವ ಆ ಪರಸ್ತ್ರೀ, ಪರಪುರುಷರೊಂದಿಗೆ ಹಾಯಾಗಿ ಜೀವಿಸುವ ಜೀವನವನ್ನು ಕೂಡಾ ಧಾರ್ಮಿಕ ಎಂದು ಹೇಳಲು ಖಂಡಿತ ಸಾಧ್ಯವಾಗುವುದಿಲ್ಲ.

ಒಟ್ಟಿನಲ್ಲಿ, ‘ಧರ್ಮವು ಇರುವುದು ಕೋವಿ, ಬಾಂಬು, ದೊಣ್ಣೆಗಳಲ್ಲಿ ಅಲ್ಲ, ಬದಲು ಸಮಾಜದ ಜನರನ್ನು ಉತ್ತಮ ಸ್ವಭಾವದವರನ್ನಾಗಿ ಮಾಡುವುದರಲ್ಲಿ’ ಎಂಬುವುದನ್ನು ಜಗತ್ತಿನ ಎಲ್ಲಾ ಧರ್ಮಗಳ ಜನರು ಇನ್ನಾದರೂ ತಿಳಿದುಕೊಳ್ಳುವರು ಎಂದು ಆಶಿಸುವೆನು.

ಜನರನ್ನು ಬಲವಂತಗೊಳಿಸುವ ರೀತಿಯನ್ನು ಬಿಟ್ಟು, ಆಸಕ್ತಿ ಇರುವವರನ್ನೆಲ್ಲಾ ಒಗ್ಗೂಡಿಸಿ, ಇದಕ್ಕೆ ಪರಿಹಾರವನ್ನು ಮಾನವರು ಕಂಡಲ್ಲಿ ಮನಶ್ಯಾಂತಿ, ಮನೆಶಾಂತಿ, ಲೋಕಶಾಂತಿಯ ಜೀವನ ಎಂಬ ಆ ಧರ್ಮವು ಉಳಿವುದು, ಪರಿಹಾರವನ್ನು ಕಾಣದಿದ್ದಲ್ಲಿ, ಸ್ವಲ್ಪ ಕಾಲದಲ್ಲಿ, ಯಾವ ರೀತಿಯ ಶಾಂತಿಯೂ ಇಲ್ಲದೆ, ಜಗತ್ತೇ ಆ ಪ್ರಾಚೀನ ವಾಮಾಚಾರದ ಕಾಮ, ಕ್ರೌರ್ಯಗಳ ಪೂರ್ಣ ಹಿಡಿತದೊಳಗೆ ಪ್ರವೇಶಿಸುವುದು. ಇನ್ನು, ಇದಕ್ಕೆ ಇರುವ ಪರಿಹಾರವನ್ನು ಯಾವುದೇ ಧರ್ಮದ ಯಾವುದೇ ಆಚಾರ, ನಂಬಿಕೆಯಿಂದ ಎಂದಿಗೂ ಸಾಧ್ಯವಾಗಲಾರದು ಎಂದು ಜಗತ್ತಿನ ಎಲ್ಲೆಡೆಯ ಇಂದಿನ ಪರಿಸ್ಥಿತಿಯೇ ನಮಗೆ ಸ್ಪಷ್ಟವಾಗಿ ತಿಳಿಸುವುದು.

ಒಬ್ಬನು ರೈಲು ಹಳಿ ಬಿರುಕು ಬಿಟ್ಟಿರುವುದನ್ನು ನೋಡಿದಲ್ಲಿ ಅದನ್ನು ಕೂಡಲೇ ಹತ್ತಿರದ ರೈಲು ನಿಲ್ಧಾಣಕ್ಕೆ ತಿಳಿಸಲೇ ಬೇಕು. ಇಲ್ಲವಾದರೆ, ಮುಂದಾಗುವ ದಾರುಣ ಸಂಭವಕ್ಕೆ ಆತನು ಹೊಣೆಯಾಗುವನು. ಈ ಹಿನ್ನೆಲೆಯಲ್ಲಿ, ನಾನು ಕಂಡ ಆ ಪ್ರಾಚೀನ ವಾಮಾಚಾರದ ರಹಸ್ಯ ಸತ್ಯಗಳನ್ನು ಜಗತ್ತಿನ ಜನತೆಗೆ ತಿಳಿಸುವುದು ನನ್ನ ಪ್ರಥಮ ಕರ್ತವ್ಯವಾಗುವುದು, ಮತ್ತು ನಾನು ಅದನ್ನು ತಪ್ಪದೆ ಜನತೆಗೆ ತಿಳಿಸುವ ಮೂಲಕ ಆ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಇನ್ನು, ಜನತೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಲಿ. ಅದು ಅವರ ‘ತೀರ್ಮಾನ’ ಕ್ಕೆ ಬಿಟ್ಟ ವಿಚಾರವಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||