ಪ್ರಾಚೀನ ವಾಮಾಚಾರದ ರಹಸ್ಯಕ್ಕೆ ಕಾರಣ

ಎಲ್ಲಾ ಧರ್ಮ, ಪಂಥಗಳಲ್ಲೂ ಆ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವಿರುವುದನ್ನು ತಿಳಿಯುವುದಕ್ಕಾಗಿ ಧರ್ಮ ಮತ್ತು ದೇವರುಗಳ ಇದುವರೆಗಿನ ವಿವರಣೆ ಹಾಗೂ ದೃಷ್ಠಿಕೋನವನ್ನು ಮೊದಲು ಸ್ವಲ್ಪ ವಿವರವಾಗಿ ತಿಳಿಯಬೇಕಾಗಿದೆ. ಅದಕ್ಕೂ ಮೊದಲು ಈ ಪ್ರಾಚೀನ ವಾಮಾಚಾರವು ಇದುವರೆಗೂ ಯಾರ ಕಣ್ಣಿಗೂ ಬೀಳದಿರಲು ಕಾರಣವೇನೆಂದು ನೋಡೋಣ.

ಆ ಸೂಕ್ಷ್ಮ ವಲಯದಲ್ಲಿ ಕೇಳಿಸುವ ಮತ್ತು ಕಾಣಿಸುವ ಆ ಶಬ್ಧ ಅಥವಾ ಇತರ ಅನುಭವಗಳ ಆಧಾರದಲ್ಲಿ, ಮತ್ತು ಅವನ್ನು ಅದೇ ರೀತಿ ನಂಬಿ, ಈ ಭೂಮಿಯಲ್ಲಿ ಹಲವು ಧರ್ಮ, ಪಂಥಗಳು ಸೃಷ್ಟಿ ಆಗಿರುವುದು. ಅಂದರೆ, ಜಗತ್ತಿನ ಮೂಲೆ ಮೂಲೆ ಗಳಲ್ಲೂ ಸೂಕ್ಷ್ಮದ ತಮ್ಮ ಅನುಭವಗಳ ಸತ್ಯಾಸತ್ಯತೆಯ ಬಗ್ಗೆ ಒಂದಿಷ್ಟು ಸಂಶಯಿಸದೆ ಮತ್ತು ಪ್ರಶ್ನಿಸದೆ ಎಲ್ಲವನ್ನೂ ಅದೇ ರೀತಿ ಒಪ್ಪಿಕೊಂಡು ಮುಂದುವರಿದು ಬಂದಿರುವುದು ಎಂದು ಅರ್ಥ. ಈ ಕಾರಣದಿಂದಾಗಿಯೇ, ಸೃಷ್ಟಿಕರ್ತ ದೇವರು ಒಬ್ಬನಾದರೂ, ಆ ಒಬ್ಬ ಸೃಷ್ಟಿಕರ್ತನ ಬಗ್ಗೆ ಬೇರೆ ಬೇರೆ ವಿವರಣೆಯನ್ನು ಕೊಟ್ಟಿರುವುದು, ಮತ್ತು ತಮ್ಮೊಳಗೆ ವೈರುಧ್ಯಗಳನ್ನೇ ಹೇಳಿರುವುದು. ಇದರ ಪರಿಣಾಮವಾಗಿ, ಧರ್ಮದ ಮೂಲ ಉದ್ದೇಶವಾದ ಆ ಶಾಂತಿಯ ಸ್ಥಾಪನೆಯು ನೆರವೇರದೆ, ಅದರ ವಿರುದ್ಧ ಭಾವವಾದ, ಧ್ವೇಷ, ರಕ್ತಪಾತ ಇತ್ಯಾದಿ ಭೀಕರ ದುಷ್ಕರ್ಮಗಳು ಈ ಜಗತ್ತಿನಲ್ಲಿ ಮುಂದುವರಿಯುವಂತಾಗಿರುವುದು.

ಇನ್ನು, ನಾನು ಈ ಸೂಕ್ಷ್ಮದ ಸ್ತರಗಳಲ್ಲಿ ಕಾಣಿಸುವ ರೂಪಗಳು, ಮಾತುಗಳನ್ನು ಸಂಶಯಿಸಿ ಅವುಗಳ ಸತ್ಯತೆಯನ್ನು ಕಂಡುಹಿಡಿಯಲು ಪ್ರಯತ್ನಿಸಿದುದರ ಪರಿಣಾಮವಾಗಿ ಮಾತ್ರ ಆ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವನ್ನು ಅರಿಯಲು ಸಾಧ್ಯವಾಗಿರುವುದು ಎಂದು ತಿಳಿಯಬೇಕು. ಹಾಗೆ ಮಾಡುವ ಮೊದಲಲ್ಲಿ ಇದು ಯಾವುದೂ ನನಗೂ ತಿಳಿದಿರಲಿಲ್ಲ. ಅತ್ಯಂತ ಅಪಾಯಕಾರಿಯಾದ ಆ ಸೂಕ್ಷ್ಮದ ಬೇಹುಗಾರಿಕೆಯ ಫಲವಾಗಿ ನನಗೆ ಎಲ್ಲಾ ಜಾತಿ, ಧರ್ಮ, ಪಂಥಗಳೊಳಗೂ ಈ ಪ್ರಾಚೀನ ವಾಮಾಚಾರದ ರಹಸ್ಯ ಕೈವಾಡವಿರುವುದು ನಿಸ್ಸಂಶಯವಾಗಿ ತಿಳಿದುಬಂದಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||