ದೇವರು ಮತ್ತು ಸೈತಾನ

ಬೆಳಕು ಕತ್ತಲೆಯ ಕೆಲಸವನ್ನು ಮಾಡಲಾರದು, ಅದೇ ರೀತಿ ಕತ್ತಲೆಯು ಬೆಳಕಿನ ಕೆಲಸವನ್ನೂ ಮಾಡಲಾರದು, ಹಾಗೆ ಮಾಡುವುದು ಅವುಗಳ ಸ್ವಭಾವವಲ್ಲ. ಅದೇ ರೀತಿಯಲ್ಲಿ, ಸೈತಾನನು ಈ ಜಗತ್ತಿನಲ್ಲಿ ಒಳ್ಳೆಯತನ, ಶಾಂತಿ, ನೈತಿಕತೆಯನ್ನು ಬೆಳೆಸಲು ಎಂದೂ ಮುಂದಾಗಲಾರನು, ಯಾಕೆಂದರೆ ಆತನ ಗುರಿಯು ಈ ಭೂಮಿಯ ಜನರು ಹಿಂಸೆ, ಧ್ವೇಷ, ಅನೈತಿಕತೆಯಲ್ಲಿ ಮುಳುಗಬೇಕೆಂದಾಗಿದೆ. ಈ ಹಿನ್ನೆಲೆಯಲ್ಲಿ, ಯಾವುದು ಜಗತ್ತಿನಲ್ಲಿ ಜೀವನದಲ್ಲಿ ನಿಸ್ವಾರ್ಥ ಪ್ರೀತಿ, ಶಾಂತಿ, ನೈತಿಕತೆಯನ್ನು ಹೆಚ್ಚಿಸುವುದೋ ಅವು ಎಲ್ಲವೂ ದೇವಾಂಶವೆಂದೂ, ಅದಲ್ಲದೆ, ಜಗತ್ತಿನಲ್ಲಿ ಹಿಂಸೆ, ಧ್ವೇಷ, ಮತ್ತು ಅನೈತಿಕತೆ, ಇವುಗಳನ್ನು ಯಾವುದು ಹೆಚ್ಚಿಸುವುದೋ, ಅವು ಎಲ್ಲವೂ ಸೈತಾನನ ಅಂಶವೆಂದೂ ತಿಳಿಯಬೇಕು. ಚುಟುಕಾಗಿ ಹೇಳುವುದಾದರೆ, ಇನ್ನೊಂದು ಧರ್ಮದ ದೇವರಲ್ಲ ಸೈತಾನ, ಬದಲು ತಮ್ಮದೇ ಧರ್ಮದಲ್ಲಿ ದುಷ್ಠ ಸ್ವಭಾವವನ್ನು ಹೊಂದಿದವರು ಸೈತಾನರು ಎಂದು ಸರ್ವ ಧರ್ಮ, ಪಂಥಗಳ ಜನರೂ ಅರಿತುಕೊಳ್ಳಬೇಕಾಗುವುದು.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||