ಅರಿಯುವಿಕೆಯ ಲಾಭ

ಧರ್ಮಗಳ ಈ ವರೆಗಿನ ಆಧ್ಯಾತ್ಮಿಕ ರೀತಿಗಳಲ್ಲಿ ‘ನಂಬಿಕೆ’ ಮತ್ತು ‘ಅರಿಯುವಿಕೆ’ ಈ ಎರಡು ರೀತಿಗಳೂ ಇವೆ. ಆದರೆ ಮಾನವನು ವ್ಯಕ್ತಿ ದೇವರನ್ನು ನಂಬಿಕೆಯ ರೀತಿಯಲ್ಲಿ ಮತ್ತು ತತ್ವ ದೇವರನ್ನು ಅರಿಯುವ ರೀತಿಯಲ್ಲಿ ಎಂದು ತಿಳಿದು ಕೊಂಡಿದ್ದನು! ಆದರೆ ನಿಜವಾಗಿಯೂ ನಂಬಿಕೆ ಎಂಬುವುದು ದೇವರ ಅಸ್ತಿತ್ವವನ್ನೇ ವಿರೋಧಿಸುವ ರೀತಿ ಮತ್ತು ಅದು ದೇವರನ್ನೇ ಸಂಶಯದಿಂದ ಭಜಿಸುವ ಕೆಳಮಟ್ಟದ ರೀತಿಯಾಗುವುದು ಎಂಬುವುದನ್ನು ಆತನು ಸ್ಪಷ್ಟವಾಗಿ ತಿಳಿದು ಕೊಂಡಿರಲಿಲ್ಲ ಅಷ್ಟೆ! ನಾನು ಮೊದಲೇ ತಿಳಿಸಿರುವಂತೆ ‘ಅರಿಯುವ ರೀತಿ’ಯಲ್ಲಿ ಆ ಸೈತಾನನ ಮೋಸದ, ತಮ್ಮೊಳಗೆ ಹೊಡೆದಾಡಿಸುವ ಆ ಆಟ ನಡೆಯಲಾರದು. ಆದರೆ ‘ನಂಬಿಕೆಯ ರೀತಿ’ಯು ಈ ಜಗತ್ತಿಗೆ ಹಲವು ಭಯಾನಕ ಹಿಂಸೆ ನೋವನ್ನು ತಂದಿದೆ. ಇನ್ನು, ಈ ಮೇಲ್ಮಟ್ಟದ, ದೇವರನ್ನು ಅರಿತು ಭಜಿಸುವ ರೀತಿಯು, ಅದು ಆ ಸೈತಾನನನ್ನು ಓಡಿಸಿ ಆ ದೇವರನ್ನು ಈ ಜಗತ್ತಿನಲ್ಲಿ ಪ್ರತಿಷ್ಠಾಪಿಸುವ ಆ ಒಂದು ದಿವ್ಯ ಮಾರ್ಗವಾಗಿಯೂ ನಮ್ಮ ಮುಂದೆ ಇರುವುದು. ಈ ನಂಬಿಕೆಗಳಿಂದ ಹಲವು ರೀತಿಯ ಅಪಾಯಗಳಿರುವ ಕಾರಣಕ್ಕಾಗಿ ಮಾತ್ರ ನಾನು ಅದನ್ನು ಇಷ್ಟೊಂದು ಒತ್ತಿ ಹೇಳುತ್ತಿರುವುದು ಎಂಬುವುದನ್ನು ಎಲ್ಲರೂ ಪ್ರತ್ಯೇಕವಾಗಿ ನೆನೆಪಿಸಿಕೊಳ್ಳಬೇಕಾಗಿದೆ.

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||