ಕಾಲ ಮತ್ತು ನಂಬಿಕೆ

ಸಾವಿರಾರು ವರುಷಗಳ ಹಿಂದೆ ಒಂದು ಊರಲ್ಲಿ ಒಬ್ಬ ರಾಜ ತನ್ನ ಖಜಾನೆಯನ್ನು ಖಾಲಿ ಮಾಡಿದನಂತೆ. ಆದರೆ ಇದು ಪ್ರಜೆಗಳಿಗೆ ತಿಳಿದರೆ ತನಗೆ ತೊಂದರೆಯಾಗಬಹುದು ಎಂದು ಅದಕ್ಕೆ ಒಂದು ಉಪಾಯ ಹೂಡಿದನಂತೆ. ತನ್ನ ಖಜಾನೆಯಿಂದ ತುಂಬಾ ಚಿನ್ನಾಭರಣವನ್ನು ಒಂದು ದೊಡ್ಡ ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ನಿಧಿಯೆಂದು ಹೊಂಡದಲ್ಲಿ ಹೂತು ಹಾಕಿ ಅದರ ಮೇಲೆ ಒಂದು ಚಿಕ್ಕ ಮಂಟಪ ಕಟ್ಟಿ ಅದರಲ್ಲಿ ಒಂದು ಶಾಸನ ಬರೆದು ಹಾಕಿದನಂತೆ, ‘ಈ ರಾಜ್ಯ ಅತ್ಯಂತ ಕಷ್ಟಕ್ಕೆ ಸಿಲುಕಿದಾಗ ಮಾತ್ರ ಈ ನಿಧಿಯನ್ನು ಹೊರಗೆ ತೆಗೆಯಬೇಕು’ ಎಂದಾಗಿತ್ತು ಆ ಶಾಸನ. ಸಾವಿರಾರು ವರುಷಗಳು ಅದಕ್ಕೆ ನಿಧಿಯೆಂದು ವಿಶೇಷ ಪೂಜೆ ಸಹಿತ ಗೌರವಿಸುತ್ತಾ ಆ ಊರ ಜನರು ಬಂದರು. ಸಾವಿರಾರು ವರುಷಗಳ ನಂತರ ಒಮ್ಮೆ ಆ ಊರಿಗೆ ತುಂಬಾ ಕಷ್ಟಕಾಲ ಎದುರಾಯಿತು. ಆಗ ಆ ಊರ ಜನರು ನಿಧಿಯನ್ನು ತೆಗೆಯಲು ಒತ್ತಾಯಿಸಿದರು. ಅದರಂತೆ ನಿಧಿಯ ಪೆಟ್ಟಿಗೆಯನ್ನು ಹೊರತೆಗೆಯಲಾಯಿತು. ಮತ್ತು ಪೆಟ್ಟಿಗೆಯನ್ನು ತೆರೆಯಲಾಯಿತು. ಆದರೆ ಪೆಟ್ಟಿಗೆಯೊಳಗೆ ಚಿನ್ನವಿರಲಿಲ್ಲ. ಅದರೊಳಗೆ ಇದ್ದುದು ಶಿಲೆಕಲ್ಲುಗಳ ತುಂಡುಗಳಾಗಿದ್ದವು! ಆಗಲೇ ಜನರಿಗೆ ಆ ರಾಜನ ಮೋಸ ತಿಳಿಯುವುದು.

ಸಾವಿರಾರು ವರುಷಗಳು ಕಲ್ಲನ್ನು ಚಿನ್ನವೆಂದು ಕೋಟಿ ಕೋಟಿ ಜನರು ನಂಬಿದರೂ ಆ ಕಲ್ಲು ಚಿನ್ನವಾಗಿಲ್ಲ. ಅಂದರೆ, ಸಾವಿರಾರು ವರುಷಗಳ ನಂಬಿಕೆಗಳಿಗೂ, ಇರುವ ಸತ್ಯವನ್ನು ಬದಲಾಯಿಸಲು ಸಾಧ್ಯವಾಗದು ಎಂದು ಇದರಿಂದ ತಿಳಿದುಕೊಳ್ಳಬಹುದು. ಪ್ರಾಚೀನ ಕಾಲದಲ್ಲೇ ಒಂದು ಅಸತ್ಯವು ಸತ್ಯವೆಂದು ನಂಬಿಕೆಯೊಳಗೆ ಸೇರಿಕೊಂಡರೆ, ಈ ನಂಬಿಕೆ ಎಂಬ ಬಲಾಢ್ಯ ಹಡಗು ಅದನ್ನು ಎಂದಿಗೂ ಮತ್ತು ಯಾರಿಗೂ ಸರಿ ಪಡಿಸಲು ಬಿಡದೆ, ಈ ಯುಗಾಂತ್ಯದವರೆಗೂ ಕೊಂಡೊಯ್ಯುವುದು!! ಈ ಕಾರಣದಿಂದಾಗಿ ಮಾತ್ರ ಈ ಜಗತ್ತಲ್ಲಿ ರಕ್ತಪಾತವಾಗುತ್ತಿರುವುದು. ಈ ರೀತಿಯಲ್ಲಿ ನಂಬಿಕೆಗಳು ಇರುವಷ್ಟು ಕಾಲವು ಈ ರಕ್ತಪಾತದ ಅಪಾಯವೂ ಇದ್ದೇ ಇರುವುದು.

ಈ ನಿಷ್ಠೆಯ ನಂಬಿಕೆಯ ಕಾರಣದಿಂದಾಗಿಯೇ ಜಗತ್ತಿನಲ್ಲಿ ಸೂಕ್ಷ್ಮ ಲೋಕದ ರಹಸ್ಯ ವಲಯಗಳಲ್ಲಿನ ಅತಿ ಪ್ರಾಚೀನವಾದ ಆ ವಾಮಾಚಾರದ ಮೋಸವು ಹೊರಬರಲು ಸಾವಿರಗಟ್ಟಲೆ ವರುಷಗಳು ಬೇಕಾಗಿ ಬಂದಿರುವುದು, ಮತ್ತು ಇದು ಒಂದು ದುರಂತವೆಂದೇ ಹೇಳಬೇಕು. ಈ ಪ್ರಾಚೀನ ವಾಮಾಚಾರದ ರಹಸ್ಯಗಳು ಬಹಳ ಹಿಂದೆಯೇ ಬಯಲಾಗಿರುತ್ತಿದ್ದರೆ ಮಾನವನು ತಮ್ಮೊಳಗೆ ಹೊಡೆದಾಡಿ ಸಾಯಲು ಕಾರಣವಾಗುವ ಆ ಕ್ರೌರ್ಯವು ಬೆಳೆದು ಬರುತ್ತಿರಲಿಲ್ಲ. ಅದೇ ರೀತಿ, ನೈತಿಕ ಜೀವನ ಮಾತ್ರ ಜನರು ಬಯಸುತ್ತಿದ್ದರೆಂಬುವುದರಲ್ಲಿ ಸಂಶಯವಿಲ್ಲ. ಆ ಪ್ರಾಚೀನ ವಾಮಾಚಾರದ ಸುಲಭ ಅಸ್ತ್ರವಾದ ನಂಬಿಕೆಯಿಂದ ಜನರನ್ನು ಇಂದೂ ಅವುಗಳು ಆ ರಾಜನಂತೆ ಮೋಸ ಮಾಡುತ್ತಿವೆ. ಇದೇ ಮೋಸವನ್ನು ಮುಂದುವರಿಸುತ್ತಾ ಕೊನೆಯ ಆ ದೊಡ್ಡ ಹಿಂಸಾಕೃತ್ಯಗಳಿಗೂ  ಅವು ಜನರನ್ನು ತಯಾರು ಮಾಡುತ್ತಿವೆ!

ಸತ್ಯವು ಎಂದಿಗೂ ನಮ್ಮನ್ನು ರಕ್ಷಿಸುವುದು. ಆದರೆ ನಂಬಿಕೆಯು, ಸತ್ಯವೆಂಬ ಆ ನಮ್ಮ ರಕ್ಷಕನನ್ನು,  ಎಂದೆಂದಿಗಾಗಿ ನಮ್ಮಿಂದ ದೂರ ಮಾಡುವುದು!

|| ಪರಿವಿಡಿ - ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||