ಪ್ರಪಂಚವೇ ದೇವರ ಮನೆಯಾಗಿರುವಾಗ ಮತ್ತು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಗಳೇ ಧರ್ಮವಾಗಿರುವಾಗ, ಇನ್ನು ನಾವು ಯಾವೆಲ್ಲಾ ತರದಲ್ಲಿ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡಲು ಪ್ರಯತ್ನಿಸುತ್ತೇವೆ ಅವೆಲ್ಲ ದೇವ ನಿಂದನೆ ಮತ್ತು ಧರ್ಮ ನಿಂದನೆಯಾಗುವುದು. ಅವುಗಳಲ್ಲಿ, ಧರ್ಮಗಳು, ಪಂಥಗಳು, ಪರಂಪರೆಗಳು, ಜಾತಿಗಳು, ತಮ್ಮ ತಮ್ಮ ಸೃಷ್ಟಿಕರ್ತ ದೇವರುಗಳೇ ಸರಿಯೆಂಬ ವಾದ, ಇತ್ಯಾದಿಗಳೆಲ್ಲವೂ, ದೇವ ಮತ್ತು ಧರ್ಮನಿಂದನೆಗಳಾಗಿ ಸೇರಿಕೊಂಡಿರುವವು!! ಸಾವಿರ ವರುಷ ಇದರ ಕುರಿತು ವಿವೇಕದ ಸಹಾಯ ಪಡೆದು ಧ್ಯಾನ ಮಾಡಿದರೂ ಕೊನೆಯಲ್ಲಿ ಇದೇ ಉತ್ತರ ಬರುವುದು. ಆದರೆ ವಿವೇಕವನ್ನು ಬಿಟ್ಟು, ತೋಳ್ಬಲವನ್ನು ಉಪಯೋಗಿಸಿ ಸತ್ಯವನ್ನು ಪಡೆಯಬಹುದು ಎಂದು ತಿಳಿಯುವಲ್ಲಿ ಮಾತ್ರ ಇದಕ್ಕೆ ಬೇರೆ ಉತ್ತರ ಬರಬಹುದಷ್ಟೆ!!