ಮರಣಾನಂತರ ಏನೂ ಇಲ್ಲ ಎನ್ನುವ ಭೌತಿಕವಾದಿಗಳು ಕೂಡಾ ಒಂದು ರೀತಿಯ ನಂಬಿಕೆಯವರು, ಮತ್ತು ಅವರೂ ಒಂದು ಆಧಾರ ರಹಿತ ನಂಬಿಕೆಯ ಪಂಥವನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅವರನ್ನು ಯಾರೂ ಮತಾಂತರ ಮಾಡುವ ಅಗತ್ಯವಿಲ್ಲ. ಆದರೆ, ಅವರು ಅವರ ಆ ಪಂಥದ ಹೆಸರಲ್ಲಿ ಅನೈತಿಕತೆಯನ್ನು ಜಗತ್ತಿನಲ್ಲಿ ಹೆಚ್ಚಿಸದಿದ್ದರೆ ಸಾಕಾಗುವುದು ಅಷ್ಟೆ. ಸೂಕ್ಷ್ಮ ಜಗತ್ತನ್ನು ನಂಬಿ ರಕ್ತಪಾತ ಮಾಡುವುದಕ್ಕಿಂತ ಅದೇ ಮೇಲು.
ಇನ್ನು, ನಿಜವಾಗಿಯೂ ಸತ್ಯವನ್ನು ತಿಳಿಯಲು ಬಯಸುವ ಭೌತಿಕವಾದಿಗಳಿಗೆ ಕೆಲವು ಸೂಚನೆಯನ್ನು ಕೊಡಬಹುದು ಅಷ್ಟೆ, ಯಾಕೆಂದರೆ ಇವುಗಳು ಸಾರ್ವತ್ರಿಕವಾಗಿ ಸ್ಥೂಲ ಜಗತ್ತಿನಲ್ಲಿ ತೋರಿಸುವಂಥವುಗಳಲ್ಲ. ಆದರೆ ವ್ಯಯಕ್ತಿಕ ಅನುಭವ ಮಾತ್ರವಾಗಿ ಸಿಗುವವುಗಳು. ಆ ಎಲ್ಲಾ ವ್ಯಯಕ್ತಿಕ ಅನುಭವವನ್ನು ಪಡೆದ ವ್ಯಕ್ತಿಗಳನ್ನು, ನ್ಯಾಯಾಲಯದಲ್ಲಿ ಸಾಕ್ಷಿಗಳನ್ನು ತಂದು ನಿಲ್ಲಿಸುವ ತರ, ತಂದು ಅವರ ಮುಂದೆ ನಿಲ್ಲಿಸಬಹುದು. ನ್ಯಾಯಾಲಯದಲ್ಲಿ ಸಾಕ್ಷಿಗಳ ಸಂಖ್ಯೆ ಹೆಚ್ಚು ಹೆಚ್ಚು ಆದಂತೆ ಅದು ಸತ್ಯ ಎಂದು ನ್ಯಾಯಾಧೀಶರಿಗೆ ಹೆಚ್ಚು ಹೆಚ್ಚು ತಿಳಿಯುವುದು, ಅದೇ ರೀತಿ ಇಲ್ಲಿಯೂ ಹೆಚ್ಚು ಹೆಚ್ಚು ನಿಜವಾದ ಸಾಕ್ಷಿಗಳು ಸಿಕ್ಕಿದಲ್ಲಿ ಅದನ್ನು ಸತ್ಯವೆಂದು ತೋರಿಸಿಕೊಡಬಹುದು, ಅಷ್ಟೆ.
- ಸತ್ತ ಆತ್ಮಗಳು ಇವೆ ಮತ್ತು ದೆವ್ವಗಳು ಇವೆ ಎಂಬುವುದಕ್ಕೆ ಹಲವು ಧರ್ಮಗಳು ಮತ್ತು ಅವುಗಳ ಗ್ರಂಥಗಳ ಸಾಕ್ಷ್ಯಗಳಿವೆ.
- ಹಿಂದಿನ ಕಾಲದಿಂದಲೇ ನೋಡಿದಲ್ಲಿ, ಕೋಟಿಗಟ್ಟಲೆ, ಸಾಮಾನ್ಯ ಮಾನವರ ಹಾಗೂ ಮಹಾತ್ಮರ ಅನುಭವವೂ ಸಾಕ್ಷಿಗಳಾಗಿ ಇವೆ. ಇವರಲ್ಲಿ ಸುಳ್ಳನ್ನೇ ಹೇಳದ ಅತ್ಯಂತ ಸತ್ಯ ನಿಷ್ಠರಾದ ಮಹಾತ್ಮರು ಸೇರಿರುವರು ಎಂಬುವುದು ಇನ್ನೊಂದು ಸತ್ಯವಾಗಿದೆ. ಇಂಥ ಸತ್ಯ ನಿಷ್ಠರು ಬರೇ ಸತ್ತ ನಂತರದ ಅಸ್ತಿತ್ವದ ಬಗ್ಗೆ ಮಾತ್ರ ಸುಳ್ಳು ಹೇಳುವರೇ?
- ದೇವರನ್ನೇ ನಂಬದ ಧರ್ಮಗಳೂ, ಸತ್ತ ನಂತರದಲ್ಲಿ ಮನುಷ್ಯನ ಜೀವಾತ್ಮದ ಅಸ್ತಿತ್ವವನ್ನು ಒಪ್ಪುವವು.
- ವೈಜ್ಞಾನಿಕ ರೀತಿಯದ್ದೆಂದೇ ಹೇಳಲ್ಪಡುವ ದರ್ಶನ ಶಾಸ್ತ್ರಗಳೂ ಸೃಷ್ಟಿಕರ್ತ ದೇವರನ್ನು ಒಪ್ಪದಿದ್ದರೂ ಸತ್ತ ನಂತರದ ಆತ್ಮದ ಅಸ್ತಿತ್ವವನ್ನು ಒಪ್ಪುವವು.
ಇಷ್ಟೆಲ್ಲಾ ಕೋಟಿಗಟ್ಟಲೆ ಸಾಕ್ಷ್ಯಾಧಾರಗಳು ಇರುವಾಗ ಮತ್ತು ಅದನ್ನು ಒಂದೇ ರೀತಿಯಲ್ಲಿ ಎತ್ತಿ ತೋರಿಸುವ ಗ್ರಂಥಗಳು ಇರುವಾಗ, ಇತ್ತ, ಆತ್ಮ ಮತ್ತು ದೆವ್ವಗಳು ಇಲ್ಲವೆಂದು ಹೇಳುವವರಿಗೆ, ತಮಗೆ ಸತ್ತ ಆತ್ಮದ ಮತ್ತು ದೆವ್ವಗಳ ಅನುಭವ ಆಗಿಲ್ಲ ಎಂಬ ಒಂದು ವಾದ {ಒಪ್ಪಿಕೊಳ್ಳುವಿಕೆ} ಮಾತ್ರ ಇರುವುದು. ಅಂದರೆ, ಸಾಮಾನ್ಯ ಜನರಿಗೆಲ್ಲರಿಗೂ ದೆವ್ವಗಳ ಅನುಭವವಾಗುವುದಿಲ್ಲ [ಅದು ವ್ಯಯಕ್ತಿಕ] ಎಂದು ಈ ಜಗತ್ತಿನಲ್ಲಿ ಎಲ್ಲರಿಗೂ ತಿಳಿದಿದ್ದರೂ ಇವರು ಮಾತ್ರ ತಮಗೆ ಆ ಅನುಭವ ಆಗಿಲ್ಲವೆಂದು ಆ ಕೊರತೆಯನ್ನು ಮತ್ತೂ ಮತ್ತೂ ಹೇಳುತ್ತಿರುವರು ಎಂದು ಮಾತ್ರ ಅವರ ವಾದದಿಂದ ನಮಗೆ ತಿಳಿದುಬರುವುದು.