ನಾವು ಈ ಜಗತ್ತಿನ ಎಲ್ಲೆಡೆ ಹೋಗಿ ಪರಿಶೀಲಿಸಿದರೂ, ನಮಗೆ ಸಿಗುವ ಒಂದು ಸತ್ಯಾಂಶವೇನೆಂದರೆ ಸಮಾಜದ ಅಥವಾ ಜಗತ್ತಿನ ಉದ್ಧಾರಕ್ಕಾಗಿ, ನೇರವಾಗಿ ಸಂಬಂಧಿಸುವವರು ಮಹಾತ್ಮರು ಮಾತ್ರವಾಗಿರುವರು ಎಂದಾಗಿದೆ! ಎಲ್ಲಾ ಧರ್ಮಗಳಲ್ಲಿ ಸ್ವರ್ಗಕ್ಕೆ ಹೋಗುವ ದಾರಿಯಲ್ಲಿರುವವರು ಇರುವರು. ಅದೇ ರೀತಿ ಮೋಕ್ಷವನ್ನು ಪಡೆಯುವ ದಾರಿಯಲ್ಲಿ ಇರುವವರಿರುವರು. ಪಿತೃ ಲೋಕವನ್ನಾದರೂ ಸೇರಿ ಬಿಡಲು ಪುರೋಹಿತರನ್ನು ಆಶ್ರಯಿಸುವವರಿರುವರು. ಆರೋಗ್ಯವನ್ನು ಉತ್ತಮಗೊಳಿಸುವ ವಿಧಾನಗಳನ್ನು ಅನುಸರಿಸುವವರಿರುವರು. ಅದೇ ರೀತಿ, ತನ್ನ ಕಷ್ಟ ನಿವಾರಣೆಗಾಗಿ ಹಲವು ದೇವರುಗಳನ್ನು ಅಥವಾ ಇತರ ಶಕ್ತಿಗಳನ್ನು ಆಶ್ರಯಿಸುವವರಿರುವರು. ಆದರೆ, ಅಚ್ಚರಿ ಎಂದರೆ ಈ ಮಾನವನಿಗಾಗಿ ಯಾವ ಲಾಭದ ಭಾವವೂ ಇಲ್ಲದೆ ಮುಕ್ತವಾಗಿ ಕಣ್ಣೀರು ಹಾಕುವಲ್ಲಿ ಮತ್ತು ಆತನ ಲೌಕಿಕ ಜೀವನದ ತೊಂದರೆಗಳನ್ನು ನಿವಾರಿಸುವಲ್ಲಿ ಹಾಗೂ ಆತನ ಸ್ವಭಾವ ಶುದ್ಧೀಕರಣದಲ್ಲಿ ನೇರವಾಗಿ ಶ್ರದ್ದೆವಹಿಸುವವರೆಂದರೆ ಮಹಾತ್ಮರು ಮಾತ್ರ ಆಗಿರುವರು! ಆದುದರಿಂದ ಮಾಹಾತ್ಮರುಗಳೇ ಈ ಜಗತ್ತಿನ ನಿಜವಾದ ಬಂಧುಗಳು ಎನ್ನಬಹುದು.