ಪ್ರಾಚೀನ ವಾಮಾಚಾರದ ರಹಸ್ಯಗಳ ವಿಚಾರವಾಗಿ ಇನ್ನೊಂದು ವಿಚಾರವನ್ನು ಕೂಡಾ ಇಲ್ಲಿ ತಿಳಿದಿರುವುದು ಉತ್ತಮ ಎಂದು ನನಗನಿಸುವುದು. ಮಾನವನ ಜೀವನದ ಬಾಲ್ಯದ ಕಾಲವು, ಅಂದರೆ, ಹನ್ನೆರಡು ವರುಷಗಳೊಳಗಿನ ಕಾಲದಲ್ಲೇ ಎಲ್ಲರೂ ಜಾತೀಯತೆಯನ್ನೂ, ಧರ್ಮಾಂಧತೆಯನ್ನೂ ಪಡೆದಿರುವರು!!!! ಅನಂತರ ಹೆಚ್ಚುವ ಜಾತೀಯತೆ ಮತ್ತು ಧರ್ಮಾಂಧತೆಯು ಅವರೇ ಮಕ್ಕಳಾಗಿರುವಾಗ ಮಾಡಿಟ್ಟ ಆ ಬಾಲ್ಯದ ಜಾತೀಯತೆ ಮತ್ತು ಧರ್ಮಾಂಧತೆಯ ಬೆಳವಣಿಗೆಯ ಮುಂದುವರಿಯುವಿಕೆ ಮಾತ್ರವಾಗಿರುವುದು! ಈ ತಂತ್ರವು ಆ ಪ್ರಾಚೀನ ವಾಮಾಚಾರದ ರಹಸ್ಯ ಯೋಜನೆಗಳಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸುತ್ತಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಆದುದರಿಂದ ಮಕ್ಕಳಾಗಿರುವಾಗ ಅವರಿಗೆ ಜಾತೀಯತೆ ಮತ್ತು ಧರ್ಮಾಂಧತೆಗಳ ವಿಷವನ್ನು ದಯವಿಟ್ಟು ಯಾರೂ ಉಣಿಸದಿರಿ ಎಂದು ಜಗತ್ತಿನ ಎಲ್ಲಾ ಧರ್ಮ, ಪಂಥಗಳ ಮಾನವರಲ್ಲೂ ಕೇಳಿಕೊಳ್ಳುವೆನು.