ಧರ್ಮಗಳ ಹಿಂದಿರುವ ಕರಾಳ ಹಸ್ತಗಳು

ಸತ್ಯವು ಒಂದೇ ಒಂದು ಇರಲು ಸಾಧ್ಯ. ಆದರೆ, ನಂಬಿಕೆಗಳು ಹಲವು ಇರುತ್ತವೆ. ಆದುದರಿಂದಲೇ, ಪ್ರತಿ ವಿಚಾರದಲ್ಲೂ, ಆ ಒಂದೇ ಒಂದು ಆಗಿರುವ ಸತ್ಯವನ್ನು ಅಥವಾ ಸಾರ್ವತ್ರಿಕವಾಗಿರುವ ಸತ್ಯಗಳನ್ನು ಮಾತ್ರ ಧರ್ಮಗಳು ಹಿಡಿದೆತ್ತಬೇಕು ಎಂದು ಹೇಳುವುದು. ದುರದೃಷ್ಟವಶಾತ್, ಧರ್ಮ, ಪಂಥಗಳು ಸತ್ಯವಲ್ಲದ, ಆ ಹಲವು ಸಂಖ್ಯೆಯಲ್ಲಿರುವ, ಹಾಗೂ ತಮ್ಮೊಳಗೆ ವಿರುದ್ಧವಾಗಿರುವ, ನಂಬಿಕೆಗಳನ್ನು ಸತ್ಯ ಎಂದು ಹೇಳುತ್ತಾ ಹಿಡಿದೆತ್ತಿ ಇದುವರೆಗೂ ಬಂದಿರುವವು! ಈ ಭಯಾನಕ ಅಧರ್ಮ ಯಾಕೆ ಆಯಿತು? ಈ ಧರ್ಮ, ಪಂಥಗಳ ಅಡಿಪಾಯವೇ ಈ ರೀತಿ ತಲೆಕೆಳಗಾಗಿ ಆಗಿಹೋಗಲು ಏನು ಕಾರಣ? ಒಂದು ಸಂತಸದ ವಿಷಯ ಎಂದರೆ, ಈ ಪ್ರಶ್ನೆಗಳಿಗೆಲ್ಲಾ ಇಂದು ಉತ್ತರ ಸಿಕ್ಕಿದೆ ಎಂಬುವುದಾಗಿದೆ. ಈಗ, ಅದನ್ನು ನಿಮಗೆ ಸ್ಪಷ್ಟವಾಗಿ ತಿಳಿಸುವುದಕ್ಕಾಗಿಯೇ ನಾವು ನಿಮ್ಮ ಮುಂದೆ ಬಂದಿರುವುದು ಎಂದು ತಿಳಿಸುವೆವು. ಒಬ್ಬಾತನಿಗೆ ರೋಗವಿದೆ ಎಂಬ ಸತ್ಯವನ್ನು ಅರಿತರೆ ಮಾತ್ರವೇ, ಆ ವ್ಯಕ್ತಿಯ ಜೀವವನ್ನು, ಆ ರೋಗದಿಂದ ಪಾರುಮಾಡಲು ಸಾಧ್ಯ. ಆದುದರಿಂದಲೇ, ಸತ್ಯವು ಎಷ್ಟೇ ಭಯಾನಕವಾದರೂ, ಮಾನವರು ಅದರ ಆಪತ್ತನ್ನು ಅರಿಯುವುದು, ಮಾನವಕುಲದ ಉಳಿವಿಗೆ ಅನಿವಾರ್ಯವಾಗುವುದು ಎಂದು ಹೇಳುವುದು.  

ಪ್ರೀತಿಯ ಸಹೋದರ ಸಹೋದರಿಯರೇ, ನಾವು ಈಗಾಗಲೇ, ಅತ್ಯಂತ ಅಚ್ಚರಿಯ ಹಾಗೂ ಮಾನವರಿಗೆ ಎಲ್ಲರಿಗೂ ಅತ್ಯಂತ ಅಪಾಯಕಾರಿಯಾಗಿರುವ ಸೂಕ್ಷ್ಮದ ಅತಿರಹಸ್ಯ ಸತ್ಯಗಳ ಬಗೆಗಿನ ವಿಚಾರಗಳನ್ನು ತಿಳಿಸಲು ನಿಮ್ಮ ಮುಂದೆ ಬಂದಿರುವುದಾಗಿ ಹೇಳಿಕೊಂಡಿದ್ದೇವೆ. ಆದರೆ ಅದು ಮಾತ್ರವಲ್ಲ, ಜಗತ್ತಿನಲ್ಲಿ ಎಲ್ಲೆಡೆಯೂ ದ್ವೇಷ, ಹಿಂಸೆ, ರಕ್ತಪಾತಗಳಿಗೆ ಮುಖ್ಯ ಕಾರಣವಾಗಿರುವ, ಆದರೆ ಶಾಂತಿಯ ಆಗರಗಳೆಂದು ಸ್ವತಃ ತಮಗೆ ತಾವೇ ಕರೆದುಕೊಳ್ಳುವ, ಈ ಧರ್ಮ, ಪಂಥ, ನಂಬಿಕೆ, ಆಚಾರ, ದೇವರು, ಸೂಕ್ಷ್ಮಲೋಕ, ಸೂಕ್ಷ್ಮಶಕ್ತಿಗಳು, ಇತ್ಯಾದಿಗಳ ಬಗೆಗಿನ, ಇದುವರೆಗೂ ಬಯಲಾಗದ, ಅತಿರಹಸ್ಯ ಸತ್ಯಗಳನ್ನು ತಿಳಿಸುವುದು ಕೂಡಾ ಅದರೊಂದಿಗೆ ಸೇರಿರುವುದು ಎಂದು ಹೇಳಲು ಸಂತಸ ಪಡುತ್ತೇವೆ.     

ಇನ್ನು, ‘ಇದುವರೆಗೂ ಬಯಲಾಗದ’ ಆ ಭಯಾನಕ ಅತಿರಹಸ್ಯ ಸತ್ಯಗಳನ್ನು ಮಾನವ ಕುಲವು ಅರಿಯುವಂತೆ ಮಾಡಿದವರು ಯಾರು, ಮತ್ತು ಅವರು ಅದನ್ನು ಹೇಗೆ ಕಂಡುಕೊಂಡರು, ಎಂದು ನೀವು ಕೇಳಿದರೆ, ಅದಕ್ಕೆ ಉತ್ತರವು, ಸೂಕ್ಷ್ಮದ ಈ ಅತಿರಹಸ್ಯ  ಸತ್ಯಗಳನ್ನು ಬಯಲು ಮಾಡಿರುವವರು, ಹಲವು ವರುಷಗಳಿಂದ ಮಹಾಜೀವನದಲ್ಲಿ ತೊಡಗಿಸಿಕೊಂಡಿರುವ ಓಂದೇವ ಎಂಬವರಾಗಿರುವರು ಎಂದಾಗಿದೆ. ಇವರು, ಹದಿನೈದು ವರುಷಗಳ ಸುಧೀರ್ಘ ಕಾಲವನ್ನು ಸೂಕ್ಷ್ಮಲೋಕದ ಬೇಹುಗಾರಿಕೆಗೆ ಮಾತ್ರವಾಗಿ ಮುಡಿಪಾಗಿರಿಸಿದರು ಎಂಬುವುದೇ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ವಿಷಯವಾಗಿರುವುದು. ಮಹಾಜೀವನ ಎಂಬ ಆ ಪವಿತ್ರ ಜೀವನ ವಿಧಾನವನ್ನು ಸ್ವೀಕರಿಸುವ ಮೊದಲಲ್ಲಿ, ಅವರು ಸನ್ಯಾಸಿ ಜೀವನವನ್ನು ನಡೆಸುತ್ತಿದ್ದರು, ಆದರೆ, ಆನಂತರದಲ್ಲಿ, ಮೋಕ್ಷದ ಹಾಗೂ ಧ್ಯಾನದ ರೀತಿಯನ್ನು ಬಿಟ್ಟು, ಸೂಕ್ಷ್ಮದ ಬೇಹುಗಾರಿಕೆಗಾಗಿ ಹದಿನೈದು ವರುಷಗಳಷ್ಟು ಧೀರ್ಘಕಾಲವನ್ನು ಅವರು ಯಾಕಾಗಿ ಮುಡಿಪಾಗಿರಿಸಿದ್ದು ಇತ್ಯಾದಿ ವಿಷಯಗಳು ಭಯ ಮತ್ತು ಅಚ್ಚರಿಯನ್ನು ಉಂಟುಮಾಡುವಂತವುಗಳು. ಅವನ್ನೆಲ್ಲಾ ಮುಂದೆ ಹೇಳುತ್ತೇವೆ. ಈಗ, ಓಂದೇವ ಎಂಬವರು, ಒಟ್ಟಲ್ಲಿ ಏನನ್ನು ಹೇಳುವರು ಎಂಬುವುದನ್ನು ಅತ್ಯಂತ ಸಂಕ್ಷಿಪ್ತವಾಗಿ ತಿಳಿಸಲು ಇಲ್ಲಿ ಪ್ರಯತ್ನಿಸುತ್ತೇವೆ.

ನೋಡಿ, “ನಮ್ಮ ದೇವರು ಮತ್ತು ಧರ್ಮವು ಈ ಜಗತ್ತಿನಲ್ಲಿ ಶಾಂತಿಯನ್ನು ಸೃಷ್ಟಿಸಲು ಬೇಕಾಗಿ ಇರುವವುಗಳು” ಎಂದು ಎಲ್ಲಾ ಧರ್ಮಗಳು ಹೇಳಿರುವವು! ಆದರೆ, ಇತ್ತ ಆ ದೇವರುಗಳ ಮತ್ತು ಧರ್ಮಗಳ ಹೆಸರಲ್ಲೇ ಧ್ವೇಷ, ಹಿಂಸೆ, ರಕ್ತಪಾತಗಳು ಆದಿಯಿಂದಲೇ ಆಗುತ್ತಾ ಬಂದಿವೆ ಎಂದು ನಮಗೆ ತಿಳಿದಿದೆ. ಹಾಗಿರುವಾಗ, ವಾಸ್ತವ ಲೋಕದಲ್ಲಿ, ಧರ್ಮ, ಪಂಥಗಳ ಕರ್ಮಗಳು ಈ ರೀತಿ ಭಯಾನಕ ಹಾಗೂ ವಿರುದ್ಧ ದಿಶೆಯಲ್ಲಿ ಸಂಭವಿಸಲು, ಸೂಕ್ಷ್ಮದ ಆ ಒಂದು ಅತಿರಹಸ್ಯ ಕೈವಾಡವು ಕಾರಣ, ಎಂದು ಓಂದೇವ ಅವರು ಹೇಳುವರು! ಆ ಅತಿರಹಸ್ಯದ ಬಗ್ಗೆ ಇದುವರೆಗೂ ಮಾನವಕುಲಕ್ಕೆ ತಿಳಿದಿಲ್ಲ, ಮಾತ್ರವಲ್ಲ, ಅದು ಮಾನವ ಕುಲಕ್ಕೆ ಅತ್ಯಂತ ಅಪಾಯಕಾರಿಯೂ ಆಗಿರುವುದು ಎಂದೂ ಅವರು ತಿಳಿಸಿರುವರು! ಇನ್ನು, ಹದಿನೈದು ವರುಷಗಳು ನಿರಂತರವಾಗಿ ಸೂಕ್ಷ್ಮದ ಬೇಹುಗಾರಿಕೆ ಮಾಡಿ ಅವರು ಕಂಡುಕೊಂಡಿರುವ ಆ ಅತಿರಹಸ್ಯಗಳ ವಿಚಾರವಾಗಿ ನೇರವಾಗಿ ಮತ್ತು ಚುಟುಕಾಗಿ ಹೇಳುವುದಾದರೆ, “ಶಿಲಾಯುಗದಿಂದಲೇ, ಅನ್ಯಗ್ರಹಜೀವಿಗಳಿಂದ ನಿರ್ಮಿಸಲ್ಪಟ್ಟಿರುವ, ಸೂಕ್ಷ್ಮದ ಒಂದು ಅತಿರಹಸ್ಯ ವ್ಯವಸ್ಥೆಯು, ಭೂಮಿಯ ಸರ್ವವನ್ನು ತಮ್ಮ ಸೂಕ್ಷ್ಮದ ಕಾಣದ ಕೈಗಳಿಂದ ನಿಯಂತ್ರಿಸುತ್ತಾ ಬರುತ್ತಿವೆ” ಎಂದು ಹೇಳಬಹುದು! ಅವಲ್ಲಿ, ಪ್ರತಿ ಮಾನವನ ಹುಟ್ಟು, ಜೀವನ, ಹಾಗೂ ಆ ವ್ಯಕ್ತಿಯ ಮರಣ, ಧರ್ಮ, ಪಂಥ, ದೇವರು, ಆಚಾರ, ನಂಬಿಕೆ, ಇತ್ಯಾದಿ ಎಲ್ಲವೂ ಸೇರಿವೆ. ಇದು  ಅದರ ಅತ್ಯಂತ ಮುಖ್ಯವಾಗಿರುವ ಒಂದು ಭಾಗವಾಗಿದೆ, ಆದರೆ, ಅವಲ್ಲಿ, ಭೂಮಿಯ ಎಲ್ಲಾ ಕಡೆಯ ಆ ಹಲವಾರು ವಾಮಾಚಾರ ಪದ್ಧತಿಗಳು ಕೂಡಾ ಸೇರಿರುವವು ಎಂಬುವುದು ಅದರ ಇನ್ನೊಂದು ಭಾಗವಾಗಿರುವುದು. ಓಂದೇವ ಅವರು, ‘ಮಾನವರಿಂದ ಪರಿಹರಿಸಲು ಅಸಾಧ್ಯ’ ಎಂಬ ರೀತಿಯಲ್ಲಿ ಕಾಣಿಸುವ ಈ ಅತಿ ದೊಡ್ಡ ಅಪಾಯಕ್ಕೆ, ಮನುಷ್ಯರಿಂದ ಸಾಧ್ಯವಾಗುವ, ಆ ಏಕೈಕ ಪರಿಹಾರವನ್ನು ಕೂಡಾ ಸೂಚಿಸಿರುವರು, ಆದರೆ ಆ ಏಕೈಕ ಪರಿಹಾರವನ್ನು ತಿಳಿಸುವ ಮೊದಲು ಒಂದು ಮುಖ್ಯ ಅಂಶವನ್ನು ತಿಳಿಯಲೇಬೇಕಾಗಿರುವುದು ಅನಿವಾರ್ಯವಾಗುವುದು. ಆ ಅನಿವಾರ್ಯ ಅಂಶ ಅಥವಾ ಆ ಅತಿರಹಸ್ಯ ಸತ್ಯವು ಏನೆಂದು ಈಗ ನೋಡೋಣ. ‘ಆ ಅನ್ಯಗ್ರಹಜೀವಿಗಳು ದೇವರು, ಧರ್ಮ, ಜಾತಿ, ದೇಶ, ಇತ್ಯಾದಿಗಳ ಮೂಲಕ, ಮಾನವರನ್ನು ವಿಭಜಿಸಿ, ಆ ವಿಭಜನೆಗಳ ಸಹಾಯದಿಂದ ದ್ವೇಷ, ಹಿಂಸೆ, ರಕ್ತಪಾತಗಳನ್ನು ಮಾಡಿಸುತ್ತಾ, ಅವುಗಳ ಸಹಾಯದಿಂದ ಮಾನವರ ಉತ್ತೇಜಿಸಲ್ಪಟ್ಟ ಮನಸ್ಸನ್ನು ಸೃಷ್ಟಿಸುವವು. ಇನ್ನು, ಈ ಮಾನವನ ಉತ್ತೇಜಿಸಲ್ಪಟ್ಟ ಮನಸ್ಸು ಎಂಬ ಅಮೂಲ್ಯ ಇಂಧನವನ್ನು, ಅವುಗಳು, ಅವುಗಳ ಲೋಕಕ್ಕೆ ಕದ್ದೊಯ್ಯುವವು, ಮತ್ತು ಈ ಕೆಲಸವನ್ನು ಅವು ಶಿಲಾಯುಗದಿಂದಲೇ ಮಾಡುತ್ತಾ ಬಂದಿರುವವು ಎಂಬುವುದೇ ಆ ಭಯಾನಕ ಅತಿರಹಸ್ಯ ಸತ್ಯವಾಗಿದೆ! ನೋಡಿ, ಈ ಅತಿರಹಸ್ಯ ಸತ್ಯವನ್ನು ತಿಳಿದಲ್ಲಿ ಮಾತ್ರವೇ ಆ ಏಕೈಕ ಪರಿಹಾರವನ್ನು ಕೂಡಾ ತಿಳಿಸಲು ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ, ಅವುಗಳ ಆ ಮೋಸದ ವ್ಯಾಪಾರಕ್ಕಾಗಿ ಅವು ಮಾಡುವ ಈ ದ್ವೇಷ, ಹಿಂಸೆ, ರಕ್ತಪಾತ, ಮನೆಜಗಳ, ಇತ್ಯಾದಿ ಎಲ್ಲದರಿಂದ ಮಾನವನಿಗೆ ಪಾರಾಗಲು ಇರುವ ಆ ಒಂದೇ ಒಂದು ಪರಿಹಾರವೆಂದರೆ, ಅವುಗಳು ಮಾಡುತ್ತಾ ಬಂದಿರುವ ಮಾನವ ವಿಭಜನೆಗೆ ವಿರುದ್ಧವಾಗಿ, ಜಗತ್ತಿನಲ್ಲಿ ಎಲ್ಲಾ ಮಾನವರ ಆ ಪ್ರೀತಿಯ ಒಗ್ಗಟ್ಟನ್ನು ಸೃಷ್ಟಿಸುವುದು ಆಗಿರುವುದು.  ಈ ಮಾನವರ ಒಗ್ಗಟ್ಟಿನ ವಿಚಾರದ ಬಗ್ಗೆ ಮುಂದುವರಿಸಿ ಓಂದೇವ ಅವರು ಹೇಳುವುದೇನೆಂದರೆ, ಈ ಕಾರಣದಿಂದ, ದೇವರು, ಧರ್ಮ, ಪಂಥ, ಜಾತಿ, ಇತ್ಯಾದಿಗಳ ಒಗ್ಗಟ್ಟು ಕೂಡಾ ಆಗ ಖಂಡಿತವಾಗಿಯೂ ಅನಿವಾರ್ಯವಾಗಿ ಬರುವುದು ಎಂದಾಗಿದೆ.

ಸಾವಿರಾರು ವರುಷಗಳಷ್ಟು ಕಾಲ ಧ್ಯಾನ ಮಾಡಿದರೂ, ಸೂಕ್ಷ್ಮದ ಈ ಅತಿರಹಸ್ಯಗಳು ಪತ್ತೆ ಆಗಲಾರವು ಎಂದೂ, ಬದಲು, ಆ ಅತಿರಹಸ್ಯಗಳನ್ನು ಪತ್ತೆಹಚ್ಚಲು ತನಗೆ ಸಾಧ್ಯವಾಗಿರುವುದು, ಧ್ಯಾನದ ದಾರಿಯಿಂದ ಸೂಕ್ಷ್ಮದ ಬೇಹುಗಾರಿಕೆಯ ದಾರಿಗೆ ತಾನು ಬಂದುದರಿಂದ ಮಾತ್ರವೆಂದೂ ಅವರು ಅಗಾಗ್ಗ ನೆನಪಿಸುವರು. ಮೊದಲಲ್ಲಿ, ತಾನು ಮೋಕ್ಷದ ದಾರಿಯಲ್ಲಿ ಇದ್ದ ಕಾಲದಲ್ಲಿ, ತನ್ನ ಧ್ಯಾನದ ದಾರಿಯಲ್ಲಿ ತನಗೆ ಆಗಿರುವ ಆ ಹಲವು ಅನುಭವಗಳನ್ನು ಕಣ್ಣುಮುಚ್ಚಿ ಹಾಗೇ ಒಪ್ಪಿಕೊಳ್ಳದೆ, ತನ್ನ ಧ್ಯಾನದಲ್ಲಿ ಬಂದಿರುವ ಆ ಅನುಭವಗಳನ್ನು ಪ್ರಶ್ನಿಸುವ ದೃಷ್ಠಿಯನ್ನು ಇಟ್ಟುಕೊಂಡಿದ್ದ ಪರಿಣಾಮವಾಗಿ, ಹಾಗೂ ಅದರಿಂದಾಗಿ ಹಲವು ಸಂಶಯಗಳು ಹುಟ್ಟಿದುದರ ಪರಿಣಾಮವಾಗಿ, ಅತ್ಯಂತ ಅಪಾಯಕಾರಿಯಾಗಿರುವ ಸೂಕ್ಷ್ಮದ ಬೇಹುಗಾರಿಕೆಯ ಕಡೆಗೆ ತಾನು ತಿರುಗಿರುವುದಾಗಿ ಅವರು ಹೇಳಿಕೊಂಡಿರುವರು. ಒಟ್ಟಲ್ಲಿ ಹೇಳುವುದಾದರೆ, ಅವರು, ಸೂಕ್ಷ್ಮಲೋಕದ ಹಲವು ಅತಿರಹಸ್ಯಗಳನ್ನು ಹೊರಹಾಕಿರುವುದು ಮಾತ್ರವಲ್ಲ, ಅದರೊಂದಿಗೆ, ಸ್ಪಷ್ಟತೆ ಇಲ್ಲದೆ ಗೊಂದಲವಾಗಿಯೇ ಇಂದೂ ಇರುವ ಆ ಹಲವು ಇತರ ವಿಚಾರಗಳನ್ನು, ಸತ್ಯದ ಹಿನ್ನೆಲೆಯ, ಆ ಚಿಂತನ ಮಂಥನದ ಮೂಲಕ ಜಗತ್ತಿನ ಜನತೆಗೆ ತಿಳಿಸುವ ಪ್ರಯತ್ನವನ್ನು ಕೂಡಾ ಮಾಡಿರುವರು ಎಂದು ಹೇಳಬಹುದು. ಅವರು ತಿಳಿಸಿರುವ ಹಾಗೂ ವಿವರಿಸಿರುವ ಆ ಎಲ್ಲಾ ವಿಚಾರಗಳು ಈಗ ಇದೇ ಜಾಲತಾಣದಲ್ಲಿ ನಿಮಗೆ ಲಭ್ಯವಿದೆ. ಆಸಕ್ತಿ ಇದ್ದವರಿಗೆ, ಅವು, ಅರಿವಿನ ಹೊಸ ಅಧ್ಯಾಯವಾಗಬಹುದು ಎಂಬುವುದರಲ್ಲಿ ಸಂಶಯವಿಲ್ಲ.

ನಿಮಗೆ ಎಲ್ಲಾ ವಿಚಾರಗಳ ಸ್ಪಷ್ಟ ಅರಿವು ಬೇಕೆಂದಲ್ಲಿ ಈ ಕೆಳಗೆ ಸೂಚಿಸಿರುವ ಓದು-ಮಾರ್ಗವನ್ನು ಅನುಸರಿಸಿರಿ.

|| ಪರಿವಿಡಿ – ಧರ್ಮಗಳ ಹಿಂದಿರುವ ಕರಾಳ ಹಸ್ತಗಳು ||

|| ಪ್ರಶ್ನೋತ್ತರಗಳು ||

|| ನೇರ ಪ್ರಶ್ನೆಗಳು ||

|| ಇತರ ವಿಚಾರಗಳು (ಸಂಕ್ಷಿಪ್ತವಾಗಿ) ||

Downloads