ಬೆಳಕು ಕತ್ತಲೆಯ ಕೆಲಸವನ್ನು ಮಾಡಲಾರದು, ಅದೇ ರೀತಿ ಕತ್ತಲೆಯು ಬೆಳಕಿನ ಕೆಲಸವನ್ನೂ ಮಾಡಲಾರದು, ಹಾಗೆ ಮಾಡುವುದು ಅವುಗಳ ಸ್ವಭಾವವಲ್ಲ. ಅದೇ ರೀತಿಯಲ್ಲಿ, ಸೈತಾನನು ಈ ಜಗತ್ತಿನಲ್ಲಿ ಒಳ್ಳೆಯತನ, ಶಾಂತಿ, ನೈತಿಕತೆಯನ್ನು ಬೆಳೆಸಲು ಎಂದೂ ಮುಂದಾಗಲಾರನು, ಯಾಕೆಂದರೆ ಆತನ ಗುರಿಯು ಈ ಭೂಮಿಯ ಜನರು ಹಿಂಸೆ, ಧ್ವೇಷ, ಅನೈತಿಕತೆಯಲ್ಲಿ ಮುಳುಗಬೇಕೆಂದಾಗಿದೆ.[…]
Category: ಧರ್ಮಗಳ ಹಿಂದಿರುವ ಕರಾಳ ಹಸ್ತಗಳು
ಧರ್ಮದ ವಿವರಣೆ
ಧರ್ಮದಲ್ಲಿ ಮುಖ್ಯವಾಗಿ ಎರಡು ಭಾಗವಿದೆ. ಅದರಲ್ಲಿ ಒಂದು ಮಾನವನು ಉತ್ತಮ ಜೀವನವನ್ನು ಪಡೆಯುವ ಭಾಗ ಮತ್ತು ಇನ್ನೊಂದು ಆಧ್ಯಾತ್ಮಿಕ ಸ್ವರ್ಗ ಅಥವಾ ಮೋಕ್ಷವನ್ನು ಪಡೆಯುವ ಭಾಗವಾಗಿದೆ. ದೇವರಿಲ್ಲದ ಧರ್ಮಗಳೂ ಇರುವ ಕಾರಣ ದೇವರು ಧರ್ಮಕ್ಕೆ ಒಂದು ಅನಿವಾರ್ಯ ಘಟಕವಲ್ಲ ಎಂದು ಅದರಿಂದಲೇ ತಿಳಿದುಕೊಳ್ಳಬಹುದು. ಇನ್ನು, ಮರಣಾನಂತರ ಮೋಕ್ಷವನ್ನು ಪಡೆವ[…]
ಸತ್ಯ ಮತ್ತು ನಂಬಿಕೆಯ ವ್ಯತ್ಯಾಸ
ಯಾವುದು ಇದೆಯೋ ಅದು ಸತ್ಯ. ಯಾವುದು ಬದಲಾವಣೆಗೆ ಒಳಗಾಗುವುದಿಲ್ಲವೋ ಅದು ಸತ್ಯ, ಯಾವುದು ಇದ್ದದ್ದು ಇದ್ದ ಹಾಗೆ ಗೋಚರಿಸುವುದೋ ಅದು ಸತ್ಯ. ಇಲ್ಲದರ ಪುಟಗಟ್ಟಲೆ ವಿವರಣೆಯೂ ಸತ್ಯವಾಗಲಾರದು. ಅದೇ ರೀತಿ ಇದ್ದದ್ದನ್ನು ಬೇರೆ ರೀತಿಯಲ್ಲಿ ವಿವರಿಸುವುದೂ ಸತ್ಯವಾಗಲಾರದು. ತಮ್ಮ ತಮ್ಮ ಅಜ್ಞಾನವೆಂಬ ಬಣ್ಣದ ಗಾಜುಗಳ ಮೂಲಕ ನೋಡಿ ತಮಗೆ[…]
ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಅನುಷ್ಠಾನವೇ ಧರ್ಮ
ನಮಗೆ ಎಲ್ಲರಿಗೂ ಧರ್ಮದ ಉದ್ದೇಶವೇನೆಂದು ತಿಳಿದಿದೆ. ಧರ್ಮದ ಕಾರ್ಯವನ್ನು, ಮುಖ್ಯವಾಗಿ, ಎರಡಾಗಿ ವಿಭಾಗಿಸಬಹುದು. ಅವುಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿವೆ. ಸಾಮಾಜಿಕವಾಗಿ ಧರ್ಮದ ಕೆಲಸವು, ಸಮಾಜದಲ್ಲಿ ಒಳಿತು ಮಾಡುವವರನ್ನು ಪ್ರೋಹ್ಸಾಹಿಸುವುದು ಮತ್ತು ಕಿಡಿಗೇಡಿಗಳನ್ನು ನಿಯಂತ್ರಿಸುವುದು, ಆಧ್ಯಾತ್ಮಿಕವಾಗಿ ಅದರ ಕೆಲಸವು ಸದ್ಗತಿ, ಮೋಕ್ಷ ಮಾರ್ಗಗಳನ್ನು ತಿಳಿಸಿಕೊಡುವುದು ಆಗಿದೆ. ಅಂದರೆ ಎರಡು ಕಡೆಯೂ[…]
ಸಾಮಾಜಿಕ ನ್ಯಾಯವೇ ಧರ್ಮದ ಮೊದಲ ಗುರಿ
ಸಜ್ಜನರನ್ನು ರಕ್ಷಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು ಧರ್ಮ, ಎಂದು ಧರ್ಮ ಗ್ರಂಥಗಳು ಹೇಳುವವು. ಇಲ್ಲಿ ಬಹಳ ಮುಖ್ಯ ವಿಚಾರ ಒಂದನ್ನು ನಾವು ತಿಳಿದಿರಬೇಕಾಗಿದೆ. ಸಜ್ಜನರನ್ನು ರಕ್ಷಿಸುವುದು ಅಥವಾ ಪ್ರೋತ್ಸಾಹಿಸುವುದು ಮತ್ತು ದುಷ್ಟರನ್ನು ಶಿಕ್ಷಿಸುವುದು, ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಯ ಮಾನದಂಡದ ಹಿನ್ನೆಲೆಯಲ್ಲೇ ನಡೆಯುವವು ಎಂದು ತಿಳಿಯಬೇಕಾಗಿದೆ. ಅಂದರೆ,[…]
ಮಹಾತ್ಮರ ರೀತಿ
ನಂಬಿಕೆಯ ಆರಾಧನೆಗಳಲ್ಲಿ ಮತ್ತು ಧಾರ್ಮಿಕ ಅನುಷ್ಠಾನಗಳಲ್ಲಿ ಶ್ರೇಷ್ಠ ರೀತಿಯು ಯಾವುದು ಎಂದು ಕೇಳಿದರೆ, ಸಾಮಾನ್ಯವಾಗಿ ಎಲ್ಲರೂ ಇದಕ್ಕೆ “ನಮ್ಮದು” ಎಂದು ಉತ್ತರ ಕೊಡುವರು. ಹೇಗೆ ಎಂದು ಕೇಳಿದರೆ ಅದಕ್ಕೆ ಎಲ್ಲಾ ಧರ್ಮ, ಪಂಥಗಳ ಜನರೂ “ಅದು ನಮ್ಮ ನಮ್ಮ ನಂಬಿಕೆ” ಎಂದು ಹೇಳುವರು. ಮುಂದಿನ ಪ್ರಶ್ನೆ ನಿಂತು ಹೋಗುವುದು.[…]