ಸಂಸಾರದ ತ್ಯಾಗವು ಅನಿವಾರ್ಯವಾಗಿರುವುದು ಸನ್ಯಾಸಿಗಳಿಗೆ ಎಂದು ಶಾಸ್ತ್ರವು ಹೇಳುವುದು. ಯಾಕೆಂದರೆ ಆತನು ತನ್ನ ಅಸ್ತಿತ್ವವನ್ನು ಸೂಕ್ಷ್ಮ ಲೋಕದಲ್ಲಿ ಎಂದೆಂದಿಗಾಗಿ ಇಲ್ಲವಾಗಿಸುವ ಪ್ರಯತ್ನದಲ್ಲಿರುವನು, ಅದಕ್ಕಾಗಿ ಆತನು ಎಲ್ಲವನ್ನೂ ತ್ಯಜಿಸಬೇಕಾಗಿದೆ. ಆದರೆ, ಮಹಾತ್ಮರಾಗಬೇಕಾದರೆ, ಜನರು ಸಾಮಾನ್ಯವಾಗಿ ತಪ್ಪಾಗಿ ತಿಳಿದಿರುವಂತೆ, ಸರ್ವವನ್ನೂ ತ್ಯಾಗಮಾಡಬೇಕಾಗಿಲ್ಲ. ಮಹಾತ್ಮನು ಸಂಸಾರದಲ್ಲಿದ್ದೇ ಮನೋ ಪರಿಶುದ್ದಗೊಳಿಸುವ ಹಿನ್ನೆಲೆಯಲ್ಲಿ, ಆ ಶಾಂತಿಯ ಮತ್ತು ಆನಂದದ ವಿಶಾಲ ಮನಸ್ಕತೆಯನ್ನು ಪಡೆಯುವನು. ಆದುದರಿಂದ ಈ ಮಹಾತ್ಮರ ಜೀವನವನ್ನು ಜನಸಾಮಾನ್ಯರಿಗೂ ಸಾಧನೆಯ ಬಲದಿಂದ ಪಡೆದು ಆನಂದಿಸಬಹುದಾಗಿದೆ! ಮಾನವನು ಅನೈತಿಕತೆ ಮತ್ತು ಸುಖದ ಬೆನ್ನೆತ್ತಿ ಮೊದಲಲ್ಲಿ ಹೋಗುವನು, ಹೀಗೆ ಹೋದಲ್ಲಿ, ಮದುವೆಯಾದ ನಂತರ ಸಾಯುವ ತನಕವೂ ಹರಡಿಕೊಂಡಿರುವ ಆ ನಿಜವಾದ ಆತ್ಮೀಯ ದಾಂಪತ್ಯ ಸುಖದಿಂದ ಖಂಡಿತವಾಗಿಯೂ ವಂಚಿತನಾಗುವನು. ಅದನ್ನು ಮರೆಯಲು ವ್ಯಕ್ತಿಯ ವ್ಯಕ್ತಿತ್ವವು ಪುನಃ ಅನೈತಿಕತೆಯಲ್ಲಿ ಪರಸ್ತ್ರೀ ಅಥವಾ ಪರಪುರುಷ ಸಂಬಂಧವನ್ನು ಪಡೆಯಲು ಮುಂದಾಗುವುದು, ಆಗಲೇ, ಆ ವ್ಯಕ್ತಿತ್ವವು ಆ ಪ್ರಾಚೀನ ವಾಮಾಚಾರದ ಕಾಮ ಮತ್ತು ಕ್ರೌರ್ಯದ ಭೂತವಾಗಿ ಬದಲಾಗಿರುವುದು. ಇನ್ನು, ಆ ಭೂತಕ್ಕೆ ಏನು ಜೀವನ? ಇನ್ನೂ ಬದುಕಿದ್ದರೆ, ಮುದಿ ಭೂತಗಳಾಗಿ ತನ್ನ ಹತ್ತಿರದಲ್ಲಿರುವವರಿಗೆ ಭಯಾನಕ ಮಾನಸಿಕ ಯಾತನೆಯನ್ನು ನೀಡಿ, ತಾನೂ ಶಾಂತಿಯನ್ನು ಕಾಣದೆ ಕೊನೆಯುಸಿರು ಎಳೆಯುವುದು. ಈ ಭೂಮಿಯಲ್ಲಿ ಎಲ್ಲರೂ ಸ್ವತಂತ್ರರು, ಅದೇ ರೀತಿ, ಎಲ್ಲರಿಗೂ ಅವರವರ ಅಭಿಪ್ರಾಯವಿದೆ, ಜೀವಿಸುವ ಸ್ವಾತಂತ್ರ್ಯವಿದೆ. ಆದರೆ, ಆ ನೈಮಿಷಿಕ ಆರಂಭದ ಅನೈತಿಕ ಸ್ವಾತಂತ್ರ್ಯವು ಅವರ ದಾಂಪತ್ಯ ಜೀವನದಲ್ಲಿ ಮಾನಸಿಕ ಹಿಂಸೆ ಮತ್ತು ಕಣ್ಣೀರನ್ನು ತಂದುಕೊಡಬಾರದು ಎಂಬುವುದು ಮಾತ್ರ ಮಹಾತ್ಮರ ಕಳಕಳಿಯಾಗಿದೆ. ಈ ಪ್ರಾಚೀನ ವಾಮಾಚಾರವು ಈ ಜಗತ್ತಲ್ಲಿ ಬಹಳವಾಗಿ ಮಾನಸಿಕ ರೋಗವನ್ನು ತನ್ನ ಕಾರ್ಯಗಳಿಗಾಗಿ ಉಪಯೋಗಿಸುವವು ಎಂಬುವುದು ಒಂದು ಭಯಾನಕ ಸತ್ಯವಾಗಿದೆ. ಈ ರೋಗದ ನಿರಂತರ ಹೆಚ್ಚಾಗುವಿಕೆಯು ಕೂಡಾ ಮಾನವನು ತನ್ನ ಉತ್ತಮ ತೀರ್ಮಾನಗಳಲ್ಲಿ ನೆಲೆ ನಿಲ್ಲದಂತೆ ಆಗುವುದಕ್ಕೆ ಇನ್ನೊಂದು ಕಾರಣವಾಗಿರುವುದು. ಇಲ್ಲೆಲ್ಲಾ, ಸತ್ಯಚಿಂತನೆ ಮತ್ತು ಜೀವನದ ಬಗ್ಗೆ ಇರುವ ಸ್ಪಷ್ಟ ನಿಲುವುಗಳು ಮುಂದಿನ ಕಣ್ಣೀರಿನ ಜೀವನವು ಆ ವ್ಯಕ್ತಿಗೆ ಬಾರದಂತೆ, ಆತನಿಗೆ ನೆರವಾಗುವುದು ಎಂಬುವುದರಲ್ಲಿ ಸಂಶಯವಿಲ್ಲ. ಈ ಕಾರಣದಿಂದಲೇ, ಸುಲಭದ ಆ ಮಹಾತ್ಮರ ಜೀವನವನ್ನು ಪತಿ, ಪತ್ನಿಯರು ಇಬ್ಬರೂ ಸೇರಿ ಸತ್ಯಸಂಧವಾಗಿ ಅನುಸರಿಸಿದಲ್ಲಿ, ಅವರ ಹಿಂದಿನ ಅನೈತಿಕ ಜೀವನದ ಸುಪ್ತ ಪ್ರಭಾವವು ನಿಂತು ಹೋಗಿ, ಅತ್ಯಂತ ಆತ್ಮೀಯ ದಾಂಪತ್ಯ ಜೀವನವನ್ನು ಪಡೆದು, ಈ ಇಹದ ಜೀವನವನ್ನು ಕೊನೆಯ ತನಕ, ಜಗತ್ತಿಗೆ ಅದ್ಭುತ ಬೆಳಕಾಗುತ್ತಾ, ಆನಂದಿಸಬಹುದು ಎಂದು ಆ ಮಹಾಜೀವನ ರೀತಿಯು ಹೇಳುವುದು.