ಎಲ್ಲಾ ಧರ್ಮಗಳಲ್ಲೂ ವಿರೋಧಾಭಾಸಗಳು ಇವೆ. ಅವು ಈ ಪುರಾಣ ಕಥೆಗಳಿಂದ ಹೆಚ್ಚಾಗಿ ಬರುವುದು. ಹೆಚ್ಚಿನ ಮಹಾತ್ಮರೂ ಪುರಾಣ ಭಾಗವನ್ನು ಭಕ್ತಿಗೆ ಪ್ರೇರಣೆಯಾಗಿ ಮಾತ್ರ ಉಪಯೋಗಿಸಬೇಕು ಎಂದೂ ಅಕ್ಷರ ಪ್ರತಿ ಅದರ ಸತ್ಯತೆಯನ್ನು ಗಮನಿಸಬಾರದೆಂದೂ ಹೇಳಿರುವರು. ಆದರೆ ಇಂದೂ ಎಲ್ಲಾ ಪುರಾಣ ಕಥೆಗಳನ್ನು ಸತ್ಯ ಎಂದು ಸಾಧಿಸಲು ಚಡಪಡಿಸುವ ಜನರು[…]
ಧರ್ಮಗಳು ಹಲವು ಇಲ್ಲ
ಹೌದು. ಧರ್ಮವು ಆದಿಯಿಂದಲೇ ಒಂದೇ ಆಗಿ ಇದೆ. ಯಾಕೆಂದರೆ ಅವು ಆ ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿ ಆಗಿವೆ. ಇದನ್ನು ಗಟ್ಟಿಮಾಡಿಕೊಳ್ಳಲು ಒಂದು ಉದಾಹರಣಯನ್ನು ಉಪಯೋಗಿಸೋಣ, ಎಲ್ಲಾದರೂ ದೇವರುಗಳು ಸ್ವಪ್ನದಲ್ಲಿ ಬಂದು ಅಸತ್ಯ, ಧ್ವೇಷ ಕಳ್ಳತನ ನಿಮ್ಮ ಧರ್ಮ ಎಂದರೆ ಯಾರಾದರೂ ಆ ಮಾತನ್ನು ಕೇಳುವರೇ? ಇಲ್ಲ, ಆದುದರಿಂದ[…]
ಧರ್ಮಗಳು ತಮ್ಮ ದೇವರುಗಳನ್ನೇ ವಿರೋಧಿಸುವವು
ಸೃಷ್ಟಿಕರ್ತ ದೇವರು ಇರುವ ಎಲ್ಲಾ ಧರ್ಮಗಳೂ ಮಾನವನಿಗೆ ಆ ಸೃಷ್ಟಿಕರ್ತನು ‘ಮುಕ್ತ ಆಯ್ಕೆ’ ಅಥವಾ ‘ಸ್ವ-ಇಚ್ಛೆ’ಯನ್ನು ಕೊಟ್ಟಿದ್ದಾನೆ ಎಂದಿದೆ. ಅಂದರೆ ಅದರ ಅರ್ಥ, ‘ಒಬ್ಬ ಮಾನವನಿಗೆ, ಈ ಭೂಮಿಯಲ್ಲಿ ತನ್ನ ಇಚ್ಛೆಯಂತೆ ಉತ್ತಮನಾಗಿಯೋ ಅಥವಾ ಕೆಟ್ಟವನಾಗಿಯೋ ಜೀವಿಸಿ, ಮರಣಾನಂತರ ಅದರ ಫಲಕ್ಕನುಸರಿಸಿ ಸ್ವರ್ಗವನ್ನೋ ಅಥವಾ ನರಕವನ್ನೋ ಸೇರಲಿರುವ ಪೂರ್ಣ[…]
ನಿಜವಾದ ದೇವ ನಿಂದನೆ ಮತ್ತು ಧರ್ಮ ನಿಂದನೆ
ಪ್ರಪಂಚವೇ ದೇವರ ಮನೆಯಾಗಿರುವಾಗ ಮತ್ತು ಸಾರ್ವತ್ರಿಕ ಸತ್ಯ, ಪ್ರೀತಿ, ನೀತಿಗಳೇ ಧರ್ಮವಾಗಿರುವಾಗ, ಇನ್ನು ನಾವು ಯಾವೆಲ್ಲಾ ತರದಲ್ಲಿ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡಲು ಪ್ರಯತ್ನಿಸುತ್ತೇವೆ ಅವೆಲ್ಲ ದೇವ ನಿಂದನೆ ಮತ್ತು ಧರ್ಮ ನಿಂದನೆಯಾಗುವುದು. ಅವುಗಳಲ್ಲಿ, ಧರ್ಮಗಳು, ಪಂಥಗಳು, ಪರಂಪರೆಗಳು, ಜಾತಿಗಳು, ತಮ್ಮ ತಮ್ಮ ಸೃಷ್ಟಿಕರ್ತ ದೇವರುಗಳೇ ಸರಿಯೆಂಬ ವಾದ,[…]
ನಂಬಿಕೆಯ ದೇವರು ಮತ್ತು ಸತ್ಯದ ದೇವರು
ನಾವು ‘ಸತ್ಯವೇ ದೇವರು’ ಎಂದು ಕೇಳಿದ್ದೇವೆ. ಆದರೆ ‘ನನ್ನ ನಂಬಿಕೆಯೇ ದೇವರು’ ಎಂದು, ಎಂದೂ ಕೇಳಿಲ್ಲ. ಸತ್ಯವೇ ದೇವರಾದರೆ ಸೂರ್ಯನಂತೆ ಎಲ್ಲರೂ ಒಪ್ಪುವ ಒಬ್ಬ ಸೃಷ್ಟಿಕರ್ತ ದೇವರು ಅನಿವಾರ್ಯವಾಗುತ್ತಿತ್ತು, ಮತ್ತು ಮಾನವರೆಲ್ಲರೂ ಅವನ ಮಕ್ಕಳಂತೆ ಸಂತೋಷದಿಂದ ಜೀವಿಸುತ್ತಿದ್ದರು. ಆದರೆ ನಿಜ ಸ್ಥಿತಿಯಲ್ಲಿ ಹಾಗಿಲ್ಲ. ಮತ್ತು ‘ನನ್ನ ನಂಬಿಕೆಯೇ ದೇವರು’[…]
ಧೈರ್ಯಗಳಲ್ಲಿ ಹಲವು ರೀತಿಗಳು ಮತ್ತು ಪ್ರಾಚೀನ ವಾಮಾಚಾರ
ಧೈರ್ಯಗಳಲ್ಲಿ ಹಲವು ವಿಧಗಳಿವೆ. ಈಗ, ಮೊದಲು ಭಯವನ್ನು ನೋಡುವುದಾದರೆ, ಸಾಮಾನ್ಯ ಮಾನವರಲ್ಲಿ ಶರೀರಕ್ಕೆ ಬರಬಹುದಾದ ಅಪಾಯ, ರೋಗ ಇತ್ಯಾದಿಗಳ ಕುರಿತಾದ ಭಯ, ಮತ್ತು ತನ್ನ ಸ್ಥಾನ, ಮಾನಗಳಿಗೆ ದಕ್ಕೆ ಆಗುವ ಭಯ, ಇತ್ಯಾದಿಗಳು ಮುಖ್ಯವಾಗಿವೆ. ಈ ತೊಂದರೆಗಳನ್ನು ಎದುರಿಸುವಲ್ಲಿ ಜನರು ತೋರಿಸುವ ಧೈರ್ಯವು ಒಂದು ರೀತಿಯ ಧೈರ್ಯವಾಗಿದೆ. ಇನ್ನು[…]